ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣತಂತ್ರ(ಪತ್ರಿಕೆ)

ವಿಕಿಸೋರ್ಸ್ದಿಂದ

ಗಣತಂತ್ರ : ನೌಗಾಂಗಿನಿಂದ ಪ್ರಕಟವಾಗುವ ಅಸ್ಸಾಮಿ ವಾರಪತ್ರಿಕೆ. 1962ರಲ್ಲಿ ಪ್ರಾರಂಭವಾಯಿತು. ಸಂಪಾದಕ ಪುರ್ಣಚಂದ್ರ ಶರ್ಮಾ. ಎನ್.ಸಿ.ಶರ್ಮಾ ಮತ್ತು ಇತರರು ಮಾಲೀಕರು. ಗಣತಂತ್ರ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತದೆ. ಜಿತೇಂದ್ರ ಶರ್ಮಾ ಪ್ರಕಾಶಕ. ಸುದ್ದಿ ಮತ್ತು ಪ್ರಚಲಿತ ವಿಚಾರಗಳನ್ನು ಪ್ರಕಟಿಸುತ್ತಿರುವ ಈ ಪತ್ರಿಕೆಯ ಪ್ರಸಾರ 12,948 (1969). ಬಿಡಿ ಪ್ರತಿಯ ಬೆಲೆ 25 ಪೈಸೆ.