ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣೇಶ್, ಎಂ.ಪಿ

ವಿಕಿಸೋರ್ಸ್ದಿಂದ

ಗಣೇಶ್, ಎಂ.ಪಿ. : 1946-. ಒಲಂಪಿಕ್್ಸನಲ್ಲಿ ಭಾಗವಹಿಸಿದ ಪ್ರಸಿದ್ಧ ಹಾಕಿ ಆಟಗಾರ. 1946 ಜುಲೈ 8ರಂದು ಮಡಿಕೇರಿಯಲ್ಲಿ ಜನಿಸಿದರು. ಪ್ರಾರಂಭದ ದಿನಗಳಲ್ಲಿ ಫುಟ್ಬಾಲ್ ಆಟವನ್ನು ಆಡುತ್ತಿದ್ದ ಇವರು 1964ರಲ್ಲಿ ಸೈನ್ಯಕ್ಕೆ ಸೇರಿದ ಅನಂತರ ಹಾಕಿ ಆಟವನ್ನು ಮೈಗೂಡಿಸಿಕೊಂಡರು. ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ನಲ್ಲಿ ಸರ್ವಿಸಸ್ ತಂಡದ ಆಟಗಾರರಾಗಿ 1968-73ರ ತನಕ ಮುಂಬಯಿಯನ್ನು ಪ್ರತಿನಿದಿsಸಿದರು. ಆಟದ ಶೈಲಿ ಹಾಗೂ ಸಾಧನೆಯಿಂದಾಗಿ 1970ರಲ್ಲಿ ಭಾರತ ಹಾಕಿ ತಂಡದ ಆಟಗಾರರಾಗಿ ಆಯ್ಕೆಗೊಂಡರು. ಇವರು ಏಷ್ಯನ್ ಕ್ರೀಡೆಗಳಲ್ಲಿ ಎರಡು ಬಾರಿ ಭಾರತವನ್ನು ಪ್ರತಿನಿದಿsಸಿದರು. 1970ರಲ್ಲಿ ಬಾಂಕಾಕ್, 1974ರಲ್ಲಿ ತೆಹರಾನ್ ಈ ಎರಡೂ ಸಂದರ್ಭಗಳಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಸೋತು ಬೆಳ್ಳಿಯ ಪದಕದೊಂದಿಗೆ ಹಿಂದಿರುಗಿತು. 1969-74ರ ತನಕ ಹಲವಾರು ಪ್ರದರ್ಶನ ಹಾಗೂ ಟೆಸ್್ಟ ಪಂದ್ಯಾಟಗಳನ್ನು ಆಡಿದ ಇವರು 1971ರಲ್ಲಿ ಬಾರ್ಸಿಲೋನದಲ್ಲಿ ನಡೆದ ಮೊದಲನೆಯ ವಿಶ್ವಕಪ್ ಪಂದ್ಯಾಟದಲ್ಲಿ ಆಟಗಾರರಾಗಿ ಭಾಗವಹಿಸಿ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟರು. 1972ರ ವಿಶ್ವಕಪ್ ಪಂದ್ಯಾಟದಲ್ಲಿ ಮತ್ತೊಮ್ಮೆ ಭಾರತ ಬೆಳ್ಳಿಯ ಪದಕ ಪಡೆಯಲು ನೆರವಾದರು. ಇವರು 1972ರ ಮ್ಯೂನಿಚ್ ಒಲಂಪಿಕ್್ಸನಲ್ಲಿ ಭಾರತ ತಂಡದ ಆಟಗಾರರಾಗಿದ್ದರು. ಭಾರತಕ್ಕೆ ಆಗ ಕಂಚಿನ ಪದಕ ದೊರಕಿತು. ಇಷ್ಟಲ್ಲದೆ 1972ರ ವಿಶ್ವ 11ರ ತಂಡದಲ್ಲಿ ಇವರು ಸ್ಥಾನ ಗಳಿಸಿದ್ದರು. 1970-74ರ ತನಕ ಏಷ್ಯ 11ರ ತಂಡದ ಆಟಗಾರರಾಗಿದ್ದರು. ಗಣೇಶ್ ಒಬ್ಬ ಒಳ್ಳೆಯ ತರಬೇತುದಾರರು. 1974-77ರಲ್ಲಿ ಇವರು ಇಟಲಿಯ ತಂಡವೊಂದಕ್ಕೆ ತರಬೇತುದಾರರಾಗಿ ಸೇವೆ ಸಲ್ಲಿಸಿದರು. ಇವರು 1980ರ ಮಾಸ್ಕೋ ಒಲಂಪಿಕ್ ತಂಡದ ಹಾಕಿ ತರಬೇತುದಾರರಾಗಿದ್ದರು. ಆಗ ಭಾರತಕ್ಕೆ ಚಿನ್ನದ ಪದಕ ದೊರಕಿತು. ಭಾರತದ ಕಿರಿಯರ ತಂಡಕ್ಕೆ ಇವರು 1981-85ರಲ್ಲಿ ರಾಷ್ಟ್ರೀಯ ತರಬೇತುದಾರರಾಗಿದ್ದರು. ಕರ್ನಾಟಕ ಸರ್ಕಾರ 1981ರಲ್ಲಿ ಇವರನ್ನು ಕ್ರೀಡೆಯ ಬೆಳೆವಣಿಗೆಗಾಗಿ ವಿಶೇಷ ಅದಿsಕಾರಿಯಾಗಿ ನೇಮಿಸಿತು. ಅನಂತರ 1986ರಲ್ಲಿ ಭಾರತೀಯ ಕ್ರೀಡಾ ಪ್ರಾದಿsಕಾರದ ಉಪನಿರ್ದೇಶಕರಾಗಿ, ಪ್ರಾಂತೀಯ ನಿರ್ದೇಶಕರಾಗಿ (1991), ದೈಹಿಕ ಶಿಕ್ಷಣದ ಕಾರ್ಯನಿರ್ವಾಹಕ ನಿರ್ದೇಶಕರಾಗಿ (1996) ಜವಾಬ್ದಾರಿಯನ್ನು ಹೊತ್ತು ಕೆಲಸ ನಿರ್ವಹಿಸಿದರು. ಅನಂತರ ದೆಹಲಿಯ ಭಾರತೀಯ ಕ್ರೀಡಾಪ್ರಾದಿsಕಾರದಲ್ಲಿ ಕಾರ್ಯ ನಿರ್ವಹಿಸಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿಯನ್ನೂ ಅಳಗಪ್ಪ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನೂ ಪಡೆದಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ ಹಲವು ಪ್ರಶಸ್ತಿಗಳು ಮತ್ತು ಭಾರತ ಸರ್ಕಾರದ ಅರ್ಜುನ ಪ್ರಶಸ್ತಿಯೂ (1973) ಲಬಿsಸಿವೆ.