ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಕುಂಭ

ವಿಕಿಸೋರ್ಸ್ದಿಂದ

ನಿಕುಂಭ ಕುಂಭಕರ್ಣನ ಮಗ. ಮಾಯಾವಿ. ತಾಯಿ ವೃತ್ರಜ್ವಾಲೆ; ಅಣ್ಣ ಕುಂಭ. ರಾಮಲಕ್ಷ್ಮಣರು ಇಂದ್ರಜಿತುವಿನ ಸರ್ಪಾಸ್ತ್ರದಿಂದ ವಿಮೋಚನೆ ಪಡೆದ ಮೇಲೆ ಯುದ್ಧಕ್ಕೆ ಬಂದ ಈತನನ್ನು ಹನುಮಂತ ವಧಿಸಿದ. ಈತನ ಅಣ್ಣ ಕುಂಭ ಸುಗ್ರೀವನಿಂದ ಹತನಾದ. ಯುದ್ಧಕ್ಕೆ ಮೊದಲು ರಾವಣ ಒಡ್ಡೋಲಗವನ್ನು ಕೂಡಿಸಿದ್ದಾಗ ಈತ ರಾಮನಿಗೆ ಸೀತೆಯನ್ನು ಹಿಂತಿರುಗಿಸಕೂಡದೆಂದು ಬೋಧಿಸಿ ಯುದ್ಧ ಮಾಡಲೇಬೇಕೆಂದು ಆಗ್ರಹ ಮಾಡಿದ. ಈ ವೃತ್ತಾಂತ ರಾಮಾಯಣದಲ್ಲಿದೆ.


ಪ್ರಹ್ಲಾದದ ಮಗನ ಹೆಸರೂ ನಿಕುಂಭ. ಈತನಿಗೆ ವಿರೋಚನ ಮತ್ತು ಕುಂಭರೆಂಬ ಸಹೋದರರೂ ವಿರೋಚನೆಯೆಂಬ ಸಹೋದರಿಯೂ ಇದ್ದರೆಂದೂ ಸುಂದೋಪಸುಂದರು ಈತನ ಮಕ್ಕಳೆಂದೂ ಭಾರತದಿಂದ ತಿಳಿದು ಬರುತ್ತದೆ.


ಶಿವನ ಪ್ರಮಥ ಗಣಗಳಲ್ಲಿ ಒಬ್ಬನ ಹೆಸರೂ ನಿಕುಂಭ.

*