ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೀಲಕಂಠ ಬಸವರಾಜ

ವಿಕಿಸೋರ್ಸ್ದಿಂದ

ನೀಲಕಂಠ ಬಸವರಾಜ ಸು. 14ನೇ ಶತಮಾನ. ಬಸವರಾಜೀಯವೆಂಬ ಸಂಸ್ಕøತ ಆಯುರ್ವೇದಶಾಸ್ತ್ರದ ಕರ್ತೃ. ತಂದೆ ನಮಶ್ಶಿವಾಯ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕೊಟ್ಟೂರು ಗ್ರಾಮದಲ್ಲಿ. ನಿಡುಮಾಮಡಿ ಬಗೆಯ ಸತ್ಸಂಪ್ರದಾಯಕ್ಕೆ ಸೇರಿದ ರಾಮದೇಶಿಕ ಈತನ ಶಿಷ್ಯ. ತನ್ನ ಕೃತಿಯಲ್ಲಿ ಕಷ್ಟವಾದ ಭಾಗಗಳಿಗೆ ತೆಲುಗಿನಲ್ಲಿ ವ್ಯಾಖ್ಯಾನ ಮಾಡಿದ್ದಾನೆ. ಇದರ ಮೊದಲ ಮೂರು ಅಧ್ಯಾಯಗಳಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಅನುಸರಿಸಬೇಕಾದ ಮಾರ್ಗ ವಿಧಾನಗಳನ್ನು ಸೂಚಿಸಿದ್ದಾನೆ. ಉಳಿದ ಇಪ್ಪತ್ತು ಅಧ್ಯಾಯಗಳಲ್ಲಿ ನಾನಾ ಕಾಯಿಲೆಗಳ ಪರೀಕ್ಷೆ ಹಾಗೂ ನಿವಾರಣಾ ಕ್ರಮಗಳನ್ನೂ ಕೊನೆಯ ಅಧ್ಯಾಯದಲ್ಲಿ ರಸೌಷಧಿಗಳ ತಯಾರಿಕಾ ವಿಧಾನವನ್ನೂ ಹೇಳಲಾಗಿದೆ. ಈಗಲೂ ಈ ಗ್ರಂಥ ಆಂಧ್ರಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. (ಕೆ.ವಿ.ಎಸ್.ಎ.)