ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೂರ್ವ ಶಿಲಾಯುಗ
ಗೋಚರ
ಪೂರ್ವಶಿಲಾಯುಗದ ಮಧ್ಯಕಾಲೀನ ಸಂಸ್ಕೃತಿಯೆಂದು ಯುರೋಪಿನಲ್ಲಿ ಹೆಸರಾಗಿರುವ ಮೌಸ್ಟೀರಿಯನ್ ಸಂಸ್ಕೃತಿಯನ್ನು ಹೋಲುವ ಸಮಕಾಲೀನ ಸಂಸ್ಕೃತಿಯೊಂದು ಡರ್ಬಿಷೈರಿನ ಕ್ರೆಸ್ವಿಲ್ ಕ್ರಾಗ್ಸ್ ಎಂಬಲ್ಲಿ ಕಂಡುಬಂದಿದೆ. ಡೆವಾನ್ಷೈರಿನ ಕೆಂಟ್ಸ್ ಗುಹೆಗಳಲ್ಲಿ ಅಷೂಲಿಯನ್ ಮತ್ತು ಲೆವಾಲ್ವಾ ಸಂಸ್ಕೃತಿಗಳಿಂದ ಪ್ರಭಾವಿತವಾದ ಮೌಸ್ಟೀರಿಯನ್ ಸಂಸ್ಕೃತಿಯ ಅವಶೇಷಗಳು ನಿಯಾಂಡರ್ಥಾಲ್ ಮಾನವನ ಅವಶೇಷಗಳೊಂದಿಗೆ ದೊರೆತಿವೆ.
ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ನೈರುತ್ಯ ಯುರೋಪಿನಲ್ಲಿ ಬಹಳ ಉನ್ನತಮಟ್ಟದ ಕಲೆ, ಮೂಳೆಯ ಮತ್ತು ವಿಲಂಬಿತ ಚಕ್ಕೆ ಕಲ್ಲಿನ ಆಯುಧಗಳ ಉಪಯೋಗದಿಂದ ಕೂಡಿದ್ದ ಸಂಸ್ಕೃತಿ ಬೆಳೆಯಿತು. ಇದರ ಪ್ರತಿಧ್ವನಿ ಇಂಗ್ಲೆಂಡಿನ ಕ್ರೆಸ್ವಿಲ್ ಕ್ರಾಗ್ಸ್ನಲ್ಲಿ ಕಂಡುಬಂದು, ಕ್ರೆಸ್ ವಿಲಿಯನ್ ಸಂಸ್ಕೃತಿಯೆಂದು ಹೆಸರಾಯಿತು (ಕ್ರೆಸ್-ವಿಲಿಯನ್-ಸಂಸ್ಕೃತಿ).