ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಾಣಿಗಳ ಪ್ರಣಯ

ವಿಕಿಸೋರ್ಸ್ದಿಂದ

ಪ್ರಾಣಿಗಳ ಪ್ರಣಯ

ಪ್ರಕೃತಿ ಒಂದು ಚಿತ್ರಕಾರ. ಇಲ್ಲಿಯ ನೋಟಗಳಿಗೆ ಬಗೆಬಗೆಯ ರೂಪಗಳನ್ನು ಕಲ್ಪಿಸಬಹುದು. ಸೃಷ್ಟಿ-ಸ್ಥಿತಿ-ಲಯದ ವ್ಯಾಪಾರಗಳು ಪ್ರಕೃತಿಯಲ್ಲಿ ನಿರಂತರವಾಗಿ ಜರುಗುತ್ತಿರುತ್ತವೆ. ಇವೇ ಒಲವು - ನಲಿವು ಮತ್ತು ಕ್ರೌರ್ಯದ ಪ್ರತಿರೂಪಗಳು. ಅಂದರೆ ಪ್ರೇಮ - ಲಾವಣ್ಯ ಮತ್ತು ಕಾಮಗಳ ಜನನಿಯೇ ಪ್ರಕೃತಿ. ತೈತ್ತಿರೀಯ ಉಪನಿಷತ್ತಿನಲ್ಲಿ `ಏಕಾಕೀ ನ ರಮತೆ ಎನ್ನಲಾಗಿದೆ. ಗಂಡು - ಹೆಣ್ಣು, ಅವುಗಳ ನಿಲಿವಿನ ಆಕರ್ಷಣೆಯೇ ಸೃಷ್ಟಿತತ್ವ. ಅಂತೆಯೇ `ಶೃಂಗಾರಮಿರದ ಬಾಳೆಂತು ಮೆಚ್ಚುಕುಂ? ಒಂದರಿಂದಾದ ಎರಡು ಮತ್ತೆ ಒಂದಾದಾಗ ಲೈಂಗಿಕ ತೃಷೆ ಆರುತ್ತದೆ. ಕೀಟ-ವಿಹಗ ಮತ್ತು ಮೃಗಗಳಲ್ಲಿ ಈ ಕಾಮರಂಗ ಬಹುರೂಪಿಯಾಗಿ ಚಿತ್ರಿತವಾಗಿವೆ. ಜಲ, ನೆಲ-ಆಕಾಶಗಳಲ್ಲಿ ನಡೆಯುವ ಕೋಟಿಗಟ್ಟಲೆ ನಾಟಕಗಳನ್ನು ವಿವರಿಸಲು ಅಸಾಧ್ಯ. ಆದರೂ ಅದಕ್ಕಿದೆ ತನ್ನದೇ ಆದ ಅವತಾರ. ದೈಹಿಕ ವರ್ತನೆ ಮತ್ತು ಅವುಗಳ ಆಂತರಿಕ ಪ್ರತಿಕ್ರಿಯೆ ಸಾವಿರಾರು ವರ್ಷಗಳಿಂದ ಪ್ರಾಣಿಗಳಲ್ಲಿ ನಡೆಯುತ್ತಿದ್ದರೂ ಈಗ ಇವಕ್ಕೆ ವೈಜ್ಞಾನಿಕವಾಗಿ ವಿಶೇಷ ಅರ್ಥಗಳನ್ನು ಕಲ್ಪಿಸಬಹುದಾಗಿದೆ. ಮಾನವ ತನ್ನ ಸುತ್ತಲಿನ ಪರಿಸರದಲ್ಲಿ ನಡೆಯುವ ಕುತೂಹಲಗಳನ್ನು ಗಮನಿಸುತ್ತಾ ಬಂದಿರುವುದಕ್ಕೆ ಶಿಲ್ಪ ಕಲೆಯಲ್ಲಿ ಮೂಡಿರುವ ದೃಶ್ಯಗಳು ಮತ್ತು ಸಾಹಿತ್ಯದಲ್ಲಿ ಅವನ್ನು ಬಳಸಿರುವುದೇ ಸಾಕ್ಷಿ. ಮಕ್ಕಳಿಗಾಗಿ ಬರೆದ ಈಸೋಪನ ನೀತಿಕತೆಗಳಲ್ಲಿ ಹಾಗೂ ಪಂಚತಂತ್ರದಲ್ಲಿ ಪ್ರಾಣಿಗಳ ವಿಶೇಷ ಗುಣಗಳನ್ನು ಚಿತ್ರಿಸಲಾಗಿದೆ. ಕರ್ನಾಟಕದ ಜನತೆಗೆ ಚಿರಪರಿಚಿತವಾಗಿರುವ ಗೋವಿನ ಹಾಡಿನಲ್ಲಿ ಈ ಮೂರು ರೂಪಗಳನ್ನೂ ಕಾಣಬಹುದು. ಗೋವುಗಳ ನಲಿವನ್ನು `ಕೊರಳ ಘಂಟೆ ಢಣಿರು ಢಣಿರನೆ, ಪರಿದು ಲಂಘಿಸಿ ಚಿಮ್ಮಿ ನೆಗೆಯುತ ಎಂದು ವರ್ಣಿಸಲಾದರೆ, ತಾಯ ಮಮತೆಯನ್ನು `ತಮ್ಮ ತಾಯನು ಕಂಡು ಕರುಗಳು, ಅಮ್ಮಾ ಎಂದು ಕೂಗಿ ನಲಿಯುತ ಹಾಗೂ `ಪುಣ್ಯಕೋಟಿ ಎಂಬ ಗೋವು ತನ್ನ ಕಂದನ ನೆನೆದುಕೊಂಡು ಮುನ್ನ ಹಾಲನು ಕೊಡುವೆನೆನುತಾ ಕಂದನ ಕಡೆಗೆ ಧಾವಿಸುವ ಚಿತ್ರಣದ ಮೂಲಕ ನೀಡಲಾಗುತ್ತದೆ. ತಬ್ಬಲಿಯಾಗುವ ಕರು `ಆರ ಮೊಲೆಯನು ಕುಡಿಯಲಮ್ಮ ಆರ ಸೆರಿ ಬದುಕಲಮ್ಮ ಎನ್ನುವಾಗ ಮಮತೆಯ ನೆರಳಿನ ಅವಶ್ಯಕತೆ ಪ್ರತಿ ಜೀವಿಗೂ ಇದೆ ಎಂಬುದು ವ್ಯಕ್ತವಾಗುತ್ತದೆ. ಮತ್ತೊಂದೆಡೆ ಕ್ರೌರ್ಯವನ್ನು `ಸಿಡಿದು ರೋಷದಿ ಮೊರೆಯುತಾ ಹುಲಿ, ಘುಡು ಘುಡಿಸಿ ಬೋರಿಡುತ ಛಂಗನೆ ಎಂದು ಚಿತ್ರಿಸಲಾಗಿದ್ದು ಅಂತ್ಯದಲ್ಲಿ `ನಿನ್ನ ಕೊಂದು ನಾನೇನ ಪಡೆವೆನು, ಎನ್ನುತ್ತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು ಎಂದಾಗ ಎಂಥ ಕ್ರೌರ್ಯ ಜಂತುವೂ ಮೃದು ಹೃದಯಿ ಮಾನವನ್ನು ಹೊರತುಪಡಿಸಿ. ಈ ಹಿನ್ನೆಲೆಯಲ್ಲಿ ನಿಸರ್ಗವನ್ನು ವೀಕ್ಷಿಸಿದಾಗ. `ನವಿಲಿಗೆ ಚಿತ್ರ ಪತ್ರವನಾರು ಬರೆದವರು? ಪವಳದ ಲತೆಗೆ ಕೆಂಪಿಟ್ಟವರಾರು? ಅರಗಿಣಿಗೆ ಹಸಿರು ಬಳಿದವರಾರು? ಎಂಬ ನೂರಾರು ಪ್ರಶ್ನೆಗಳು ಎಂತಹ ಅರಸಿಕರಿಗೂ ಏಳುತ್ತದೆ. ಅಂತೆಯೇ ಜಗತ್ತಿನೆಲ್ಲಾ ಜೀವಿಗಳು ತೆರೆದ ಪುಸ್ತಕದಂತೆ, ಇಲ್ಲ ಜೀವಂತ ಚಿತ್ರಣದಂತೆ ಕುತೂಹಲಕಾರಿ ವೈಚಿತ್ರ್ಯಗಳನ್ನು ಪ್ರತಿಬಿಂಬಿಸುವ ಕನ್ನಡಿ. ಜೀವಶಾಸ್ತ್ರಜ್ಞ, ಮನಃಶಾಸ್ತ್ರಜ್ಞ, ಸಮಾಜ ಶಾಸ್ತ್ರಜ್ಞರನ್ನೇ ಅಲ್ಲದೆ ಯಾವುದೇ ಕುತೂಹಲಿ ಛಾಯಾಗ್ರಾಹಕನನ್ನೂ, ಪ್ರೇಕ್ಷಕನನ್ನೂ ಕೈಚಾಚಿ ಕರೆವ ಪ್ರದರ್ಶನಗಳು ಲೆಕ್ಕವಿಲ್ಲದಷ್ಟು. `ಒಲವು ಎಂದರೆ ಸಂತೋಷ. ಮೆಚ್ಚುಗೆ, ಪ್ರೀತಿ ಇತ್ಯಾದಿ. ಜೀವನದ ಅಂತಿಮಗುರಿ ಸಂತಾನೋತ್ಪತ್ತಿ. ಇದಕ್ಕಾಗಿಯೇ ಜೀವಿ ಉದರ ಪೋಷಣೆಗೂ. ಶತ್ರುಗಳಿಂದ ಪಾರಾಗಲೂ ಚಿತ್ರವಿಚಿತ್ರ ವೇಷಗಳನ್ನು ಧರಿಸುತ್ತವೆ. ಗುರಿ ಸಾಧಿಸುವ ದಿಸೆಯಲ್ಲಿ ಸೌಂದರ್ಯ ಪ್ರಜ್ಞೆ ವಿವಿಧ ಭಂಗಿಗಳಲ್ಲಿ ಗೋಚರಿಸುತ್ತವೆ. ಗಂಡು-ಹೆಣ್ಣು ಆಕರ್ಷಿತವಾಗಿ ಮಯಮರೆಸುವಂತಹ ಪ್ರಾಕೃತಿಕ ಶಕ್ತಿಯೇ ಸೌಂದರ್ಯ. ಪರಸ್ಪರ ಆಕರ್ಷಣೆಯೇ ಪ್ರಣಯ, ಅದೇ ಶೃಂಗಾರ. ಶೃಂಗಾರ ಕೇಳಿ - ಹಕ್ಕಿಯ ಉಲಿ, ಮಿಡತೆಯ ಭಾಷೆ, ಮಿಣುಕು ಹುಳುವಿನ ಬೆಳಕು ಅಥವಾ ಅನೇಕ ರಾಸಾಯನಿಕ ಸೂಚನೆಗಳಿಂದ ವಿದಿತವಾಗಬಹುದು. ಈ ಎಲ್ಲಾ ಬಗೆಗೂ ಅವು ತಮ್ಮ ದೃಶ್ಯ, ಶ್ರವ್ಯ, ಘ್ರಾಣೇಂದ್ರಿಯಗಳನ್ನು ಬಳಸಿಕೊಳ್ಳುವುವು. ಪ್ರಾಣಿಗಳ ಪ್ರಣಯ ಲೋಕದಲ್ಲಿ ನಲಿವಿನಾಟವಿದ್ದರೆ, ಕೆಲವು ಒಲವು ತೋರಿ ಆಕರ್ಷಿಸಿಕೊಳ್ಳುವುವು. ಮತ್ತೆ ಕೆಲವಲ್ಲಿ ಕ್ರೌರ್ಯವೂ ಎದ್ದು ಕಾಣುವುದು. ಇವೆಲ್ಲಕ್ಕೂ ಚೋದಕ ಪ್ರಚೋದನೆಯೇ ಕಾರಣವೆಂದು ಅನೇಕ ನಿದರ್ಶನಗಳಲ್ಲಿ ಸಾಬೀತಾಗಿದೆ. ಹಕ್ಕಿ ಮತ್ತು ಸ್ತನಿಗಳಲ್ಲಿ ಇಂತಹ ಚರ್ಯೆಗಳು ಹೆಚ್ಚು ಡಾಂಭಿಕವಾಗಿ ಕಂಡು ಬಂದಿದ್ದರೂ ಇತರೇ ಕಶೇರುಕಗಳಲ್ಲಿ ಹಾಗೂ ಇನ್ನೂ ಕೆಳವರ್ಗದ ಪ್ರಾಣಿಗಳಲ್ಲಿ ಹಾಗೂ ಇನ್ನೂ ಕೆಳವರ್ಗದ ಪ್ರಾಣಿಗಳಲ್ಲಿ ಅದರಲ್ಲೂ ಕೀಟ ಮತ್ತು ಜೇಡಗಳಲ್ಲಿಯೂ ಗುರುತಿಸಲಾಗಿದೆ. ಕೆಲವೇ ಉದಾಹರಣೆಗಳಿಂದಲೇ ನಿಗೂಢತೆಯ ಪರಿಚಯವಾಗುವುದಲ್ಲದೆ ಕಚಗುಳಿಯಿತ್ತು ಮತ್ತಷ್ಟು ಅರಿಯುವ ಸಾಹಸಕ್ಕೆ ಯಾರನ್ನೂ ಒಯ್ಯಬಲ್ಲದು.

ರೇಷಿಮೆಯ ಚೆಂಡಿನ ಉಡುಗೊರೆ ಗುಂಡು ಎಂಪಿಡಿಡ್ ನೊಣ (ಇmಠಿiಜiಜ ಜಿಟಥಿ, ಊiಟಚಿಡಿಚಿ sಚಿಡಿಣoಡಿ) ತನ್ನ ಪ್ರೇಯಸಿಗೆ ದೊಡ್ಡ ರೇಷಿಮೆಯ ಚೆಂಡನ್ನು ಖುದ್ದಾಗಿ ತಾನೇ ತಯಾರಿಸಿ ಬಳುವಳಿ ನೀಡಲು ಸಜ್ಜಾಗುತ್ತದೆ. ಹೀಗೆ ಅನೇಕ ಗಂಡುಗಳು ವಧು ನಿರೀಕ್ಷಣೆಯಲ್ಲಿದ್ದರೆ ಹೆಣ್ಣು ವರಪರೀಕ್ಷೆ ನಡೆಸಿ ತನ್ನ ಇನಿಯನನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಗಂಡು ತಾನು ತಂದ ಬಳುವಳಿ ನೀಡಿ ಹೆಣ್ಣನ್ನು ಮಧುಚಂದ್ರಕ್ಕೆ ಒಯ್ಯುತ್ತದೆ. ಏಕಪತ್ನೀವ್ರತಸ್ಥರು, ಬಹುಪತ್ನಿತ್ವ, ಬಹುಪತಿತ್ವ ಋತುಮಾನಕ್ಕನುಗುಣವಾದ ಸಂತಾನೋತ್ಪತ್ತಿ, ಅನೇಕ ರಾಣಿಗಳನ್ನೊಳಗೊಂಡ ಅಂತಃಪುರ ರಚನೆ, ಪಟ್ಟದರಾಣಿ ಮತ್ತು ಯುವರಾಣಿಯರನ್ನೊಳಗೊಂಡ ರಾಜ್ಯ -ಹೀಗೆ ಒಂದೇ, ಎರಡೇ ಸಕಲ ವಿಧದ ನಡವಳಿಕೆಗಳು ಪ್ರಕೃತಿಯಲ್ಲಿ ಸಹಜ. ಏಕಪತ್ನೀವ್ರತಸ್ಥರು ದಾಂಪತ್ಯ ಜೀವನವನ್ನು ಮುಪ್ಪಿನವರೆಗೂ ನಡೆಸಿ, ಒಂದು ವೇಳೆ ಜೊತೆಯವರು ಸಾವನ್ನಪ್ಪಿದರೆ ಮತ್ತೊಂದು ಕೊರಗಿ ಸಾಯುತ್ತದೆ. ಹಕ್ಕಿಗಳಲ್ಲಿ ಪ್ರಣಯಿಯ ಆಕರ್ಷಣೆಗೆ ಧರಿಸುವ ವೇಷ ವಿಚಿತ್ರದ್ದು. ಆಸ್ಟ್ರೇಲಿಯಾ ಮತ್ತು ನ್ಯೂಗಿನಿಗಳಲ್ಲಿ ಕಾಣಬರುವ ಒಂದು ಜಾತಿಯ ಕುಂಜಪಕ್ಷಿ (sಚಿಣiಟಿ boತಿeಡಿ) ಯ ಸೌಂದರ್ಯೋಪಾಸನೆ ಮೆಚ್ಚತಕ್ಕದ್ದು. ಅಂದವಾದ ವಿಹಾರ ಕುಂಜವನ್ನು ನಿರ್ಮಿಸಿ ಅಲಂಕಾರ ಪ್ರಿಯನಾದ ಈ ಹಕ್ಕಿ ನೀಲಿ ಬಣ್ಣದ ವಸ್ತುಗಳನ್ನು ಸುತ್ತಮುತ್ತಲಿನಿಂದ ಆಯ್ದುಃಕದ್ದು ತಂದು ಶೃಂಗರಿಸಿ ಪ್ರಣಯಿಗೆ ಸುಸ್ವಾಗತ ನೀಡುತ್ತದೆ. ಆಯ್ದ ವಸ್ತುಗಳು ಜೀರುಂಡೆಯ ರೆಕ್ಕೆ, ಬೆಂಕಿ ಪೆಟ್ಟಿಗೆ, ಕಾರಿನ ಕೀಲಿಕೈ, ಬಟ್ಟೆ ಕ್ಲಿಪ್‍ಗಳು ಯಾವುದೇ ಆಗಬಹುದು. ನವಿಲು ಕೊಕ್ಕರೆ, ಆಸ್ಟ್ರಿಚ್‍ಗಳು ತಮ್ಮ ತೋರ್ಕೆಯ ಗರಿಗಳನ್ನು ಜಂಭದಿಂದ ಪ್ರದರ್ಶಿಸಿ ನರ್ತಿಸುವುದು ಒಲವಿನ ಮತ್ತು ನಲಿವಿನ ದ್ಯೋತಕವೇ. ಹಕ್ಕಿಗಳು ಮತ್ತು ಜಿಂಕೆಗಳು ಋತುಮಾನಕ್ಕೆ ತಕ್ಕಂತೆ ಸಂತಾನಾಭಿವೃದ್ಧಿಯ ಕಾರ್ಯ ಕೈಗೊಳ್ಳುತ್ತವೆ. ರಂಗನ ತಿಟ್ಟಿನಲ್ಲಿ ಸಾಮಾನ್ಯವಾಗಿ ಕಾಣಬರುವ ಎಗ್ರೆಟ್ (ಬೆಳ್ಳಕ್ಕಿ) ಗುಚ್ಛಗಳನ್ನು ಅಲಂಕಾರಿಕವಾಗಿ ಬೆಳೆಸಿಕೊಂಡು ಪ್ರಣಯಿಯನ್ನು ಆಕರ್ಷಿಸಿದರೆ ಜಿಂಕೆಗಳು ಕೊಂಬನ್ನು ವೆಲ್ವಟ್‍ನಿಂದ ಅಲಂಕರಿಸಿಕೊಳ್ಳುತ್ತವೆ. ಮಲೆನಾಡ ಕಾಡುಗಳಲ್ಲಿ ವಾಸಿಸುವ ಬೃಹತ್ ಕೊಕ್ಕಿನ ಮಲೆಹಕ್ಕಿ ಆದರ್ಶ ಗಂಡಿನ ವರ್ತನೆ ತೋರುವ ಆಸಕ್ತಿ ಕೆರಳಿಸುವ ಪಕ್ಷಿ. ಇದು ಮೊಟ್ಟೆಗಳನ್ನು ತನ್ನ ಸಂಗಾತಿಯೊಂದಿಗೆ ಪೊಟರೆಯಲ್ಲಿ ಬಂಧಿಸಿ ಒಂದು ಸಣ್ಣ ತೂತಿನ ಮೂಲಕ ತಾಯಿ ಮತ್ತು ಮಕ್ಕಳಿಗೆ ಆಹಾರ ಒದಗಿಸಿ ಆದರ್ಶ ಪ್ರೇಮಿಯಂತೆ ಕುಟುಂಬವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಬಾರಿಂಗ್‍ಟನ್ ಒಬ್ಬ ನ್ಯಾಯಾಧೀಶ. ಈತ ಚರಿತ್ರಕಾರ ಹಾಗೂ ಪತ್ರಕರ್ತ. ಜೀವಶಾಸ್ತ್ರದಲ್ಲಿಯೂ ಈತನಿಗೆ ಆಸಕ್ತಿ ಇತ್ತು. `ಟುವ್ವಿ, ಟುವ್ವಿ, ಟುವ್ವಿ ಎಂದು ಟುವ್ವಿ ಹಕ್ಕಿ ಹಾಡಿತು. ಅದರ ಕೂಗು ಬಂದು ಎನ್ನ ಎದೆಯ ಗೂಡು ತಾಕಿತು ಎಂದಂತೆ. ಲಿನೆಟ್ ಎಂಬ ಹಾಡು ಹಕ್ಕಿಯ ಕೂಗು ಬಾರಿಂಗ್‍ಟನ್ ಅನ್ನು ಆಕರ್ಷಿಸಿತು. ಆತ ಈ ಹಾಡು ಹಕ್ಕಿಯ ಮರಿಗಳನ್ನು ಅಭ್ಯಸಿಸಿ ಹಕ್ಕಿಗಳ ಧ್ವನಿಗೆ ತಕ್ಕಂತೆ ಸ್ವರ ಸಂಕೇತಗಳನ್ನು ಬಳಸಿದ. ಆದರೆ ಇದರ ತಿಳಿವಳಿಕೆ ವೈಜ್ಞಾನಿಕವಾಗಿ ದೊರೆತದದು 1950 ರಿಂದೀಚೆಗೆ. ಟೇಪ್ ರೆಕಾರ್ಡ್‍ಗಳನ್ನು ಬಳಸಿ ಚಿಲಿ-ಪಿಲಿಯ ಉಲಿಯನ್ನು ವಿಶ್ಲೇಷಿಸಲಾಯಿತು. ಹಕ್ಕಿಗಳು ಉಲಿಯುವುದು ಹಲವು ಕಾರಣಕ್ಕಾದರೂ ಕೇಳುಗನಿಗಂತೂ ಆಹ್ಲಾದಕರ. ಸಿಂಗಪುರದಲ್ಲಿ ಭಾನುವಾರದ ಬೆಳಗಿನ ಹೊತ್ತು ಪಕ್ಷಿಪ್ರಿಯರು ತಮ್ಮ ಪಂಜರದ ಹಾಡು ಹಕ್ಕಿಗಳನ್ನು ಕೆಲವು ರಸ್ತೆಗಳಲ್ಲಿ ಗೊತ್ತಾದ ರೊಸ್ಟೋರಾಂಟಗಳ ಬಳಿ ಸಂಗೀತ ಕೂಟಕ್ಕಾಗಿಯೇ ತಂದು ನಲಿಯುತ್ತಾರೆ. ನಲಿವು ನಮಗೋ ಇಲ್ಲ ಪಂಜರದ ಪಕ್ಷಿಗಳಿಗೋ ಅದು ನಿಮ್ಮ ಊಹೆಗೆ ಬಿಟ್ಟದ್ದು. ಹುಟ್ಟಿಸಿದ ದೇವರು ಹುಲ್ಲು ಮೇಯಿಸನೇ? ಜೀವನ ನಿರ್ವಹಣೆಗೆ ಎಲ್ಲಾ ಜೀವಿಗಳೂ ತಮ್ಮದೇ ರೀತಿಯಲ್ಲಿ ಬೆಳೆಯುತ್ತವೆ. ಅನೇಕ ಪ್ರಾಣಿಗಳ ತಾಯಿ ತನ್ನ ಪ್ರತಿನಿಧಿಯನ್ನು ಸೃಷ್ಟಿಸಿ ತನ್ನ ಅಸ್ತಿತ್ವದ ಕುರುಹನ್ನು ಜೀವಜಗತ್ತಿನಲ್ಲಿ ಬಿತ್ತಿದಾಗ ಅದರ ಸಂರಕ್ಷಣೆಯ ಭಾರವನ್ನೂ ಹೊರುತ್ತದೆ. ಮಾತಾ-ಪಿತೃಗಳು ಸಮನಾಗಿ ಹೊಣೆ ಹೊರುವ ಉದಾಹರಣೆಗಳು ಕೆಲವಲ್ಲಿದ್ದರೆ ತಾಯ್ತನ ಹೆಣ್ಣಿಗೆ ಒಂದು ವರದಾನ ಎಂದು ಭಾವಿಸುವುವು ಮತ್ತೆ ಕೆಲವು. ಕೆಲವು ಪ್ರಬೇಧಗಳಲ್ಲಿ ಹೆಣ್ಣು ಮೊಟ್ಟೆ ಅಥವಾ ಮರಿ ಹಾಕುವುದೇ ತನ್ನ ಕರ್ತವ್ಯವೆಂದು ಕುಡಿಗಳನ್ನು ಲಕ್ಷಿಸದೇ ಹೋಗುವುವು. ವಿಶೇಷ ಪ್ರಸಂಗಗಳಲ್ಲಿ ಗಂಡು ಪಿತೃತ್ವವನ್ನು ತೋರುವುದು ಮತ್ತೊಂದು ಉದಾತ್ತ ಗುಣ. ದೈತ್ಯ ಜಲತಿಗಣೆ (gಚಿiಟಿಣ ತಿಚಿಣeಡಿ bug) ಗಳಲ್ಲಿ ಗಂಡು ಮೊಟ್ಟೆಗಳನ್ನು ಬೆನ್ನ ಮೇಲೆ ಹೊತ್ತು ಮರಿ ಮಾಡುತ್ತವೆ. ಸಮುದ್ರ ಕುದುರೆ (seಚಿ hoಡಿse) ಎಂಬ ಮೀನುಗಳಲ್ಲಿ ಗಂಡು ಗರ್ಭ ಧರಿಸುವುವು. ಇವಕ್ಕೆ ಇದಕ್ಕಾಗಿಯೇ ವಿಶೇಷ ಸಂಚಿಗಳಿದ್ದು (bಡಿoಚಿಜ ಠಿouಛಿh) ಮೊಟ್ಟೆಒಡೆದು ಮರಿಯಾಗುವ ತನಕ ಅಕ್ಕರೆಯಿಂದ ಸಲಹುವುವು. ಏರಿಯಸ್ ಜಿಲ್ಲಾ (ಂಡಿius ರಿeಟಟಚಿ) ಎಂಬ ಗಂಡು ಮೀನು ತನ್ನ ಬಾಯೊಳಗೇ ಮೊಟ್ಟೆಗಳನ್ನಿಟ್ಟು ಕೊಂಡು ಅವು ಮರಿಯಾಗಿ ಸ್ವತಂತ್ರ ಜೀವನ ನಡೆಸುವವರೆಗು ಉಪವಾಸವಿದ್ದು ಸಂರಕ್ಷಿಸುವುವು. ಒಲವಿನ ಚಿತ್ರಣ ಹಕ್ಕಿಗಳಲ್ಲಿ ಎರಡು ಬಗೆಯವು. ಗೂಡಿನಲ್ಲಿ ರಕ್ಷಿತರು (ಟಿesಣ huggeಡಿs) ಮತ್ತು ಗೂಡಿನಿಂದ ಅಲಕ್ಷಿತರು (ಟಿesಣ ಜಿಟeeಡಿs). ಮೊದಲಿನ ಗುಂಪಿನಲ್ಲಿ ಮರಿಗಳು ಗೂಡಿಗೆ ಅಂಟಿಕೊಂಡು. ಕಣ್ಣೂ ಬಿಡದೆ ರೆಕ್ಕೆ, ಪುಕ್ಕ ನಿಧಾನವಾಗಿ ಬೆಳೆಸಿಕೊಂಡು ಓಡಾಡುವ ಚೈತನ್ಯ ತಾಯಿ/ತಂದೆಯ ಅಕ್ಕರೆಯಿಂದ ಪಡೆಯುವವು. ಎರಡನೆಯ ಗುಂಪಿನವು ಓಡಾಡುವ ಚೈತನ್ಯ ಹೊಂದಿದ್ದು ತಾಯಿಯ ಹಿಂದೆಯೇ ಅಡ್ಡಾಡಿ ಜೀವನ ಕ್ರಮದ ಪಾಠವನ್ನು ಕಲಿಯುವಂತಹವು. ಕಾಂಗರೂ, ಬಾವುಲಿ, ಕೋತಿ, ವಾನರ ಮುಂತಾದ ಸ್ತನಿಗಳಲ್ಲಿ ಮರಿಗಳು ಸ್ವಪ್ರೇರಣೆಯಿಲ್ಲದೇ ತಾಯಿಯ ಒಡಲಿಗೇ ಅಂಟಿ ಬಾಳುವಂತಹವು. ಸ್ತನಿಗಳಲ್ಲಿ ಹಾಲುಣಿಸುವುದಕ್ಕಾಗಿಯೇ ಮೊಲೆಗಳಿದ್ದರೆ ಇತರ ಜೀವಿಗಳಲ್ಲಿ ವಿವಿಧ ರೀತಿಯ ಗುಟುಕು ನೀಡುವ ಹಾಗೂ ಘನ ಆಹಾರ ನೀಡುವ ಚರ್ಯೆಗಳನ್ನು ಕಾಣಬಹುದು. ಮೆಕ್ಸಿಕೋ ಸಿಟಿಯಲ್ಲಿ ದೊರೆತ ಮಣ್ಣಿನ ಅವಶೇಷಗಳಲ್ಲಿ ಮೂರು ಸಾವಿರ ವರ್ಷಗಳ ಹಿಂದಿನ ಬಾಯಿಂದ ಬಾಯಿಗೆ ಉಣಿಸುತ್ತಿರುವ ಒಲವಿನ ಚಿತ್ರಗಳು ದೊರೆತಿವೆ. ಕೂಟದೂಟ ಆಫ್ರಿಕಾದ ವೃತ್ತ ಜೇಡ (ಖouಟಿಜ Sಠಿiಜeಡಿ, ಂಛಿhಚಿeಡಿಚಿಟಿeಚಿ ಆisಠಿಚಿಡಿಚಿಣಚಿ) ಮತ್ತು ಸೆಲ್ಯುಲಾರ್ ಜೇಡ (ಂgeಟeಟಿಚಿ ಅoಟಿsoಛಿiಚಿಣe) ಕುರುಚಲು ಗಿಡಗಳ ಮೇಲೆ ಸಾಂಘಿಕ (ಛಿommuಟಿಚಿಟ) ಬಲೆಗಳನ್ನು ಹೆಣೆಯುತ್ತವೆ. ಎಲ್ಲವೂ ಒಟ್ಟಿಗೆ ಕೂಡಿ ಮಿಡತೆಯಂತಹ ದೊಡ್ಡ ಪ್ರಾಣಿಯ ಬೇಟೆಯಾಡಿ ಬಲೆಗೆ ಬೀಳಿಸಿಕೊಳ್ಳುತ್ತವೆ. ನಂತರ ಔತಣಕೂಟ ನಡೆಯುತ್ತದೆ. ಇವುಗಳ ಬಾಯಿ ಅತಿ ಚಿಕ್ಕದು. ಘನ ಪದಾರ್ಥವನ್ನು ಆಹಾರವಾಗಿ ಸೇವಿಸಲಾರವು. ಜೀರ್ಣರಸವನ್ನು ಆಹಾರದ ಮೇಲೆ ಸ್ರವಿಸಿ ರಾಸಾಯನಿಕ ಕ್ರಿಯೆಯಿಂದ ದ್ರವರೂಪಕ್ಕೆ ಪರಿವರ್ತಿಸಿ ಅರೆ ಜೀರ್ಣಗೊಂಡ ಆಹಾರವನ್ನು ಸಂತಸದಿಂದ ಹೀರುತ್ತದೆ. ಯುರೋಪಿನ ಹಲವೆಡೆ ಕಾಣಬರುವ ಹಣಿಗೆ ಕಾಲಿನ ಜೇಡ (ಛಿomb ಈooಣeಜ ಖಿheಡಿiಜiಚಿಟಿ sಠಿeಛಿies) ಗಳಲ್ಲಿ ತಾಯಿ ಜೇಡ ಮಕ್ಕಳಿಗೆ ಬಾಯಿತುತ್ತು ನೀಡುವುದು ಸುಮಾರು ಮೂವತ್ತು ಮರಗಳುಳ್ಳ ತಾಯಿ ಒಂದು ದೊಡ್ಡ ನೊಣದ ಬೇಟೆಯಾಡಿ ಎಲ್ಲಾ ಮಕ್ಕಳಿಗೂ ಸಮನಾಗಿ ಉಣಿಸುತ್ತದೆ. ಕೆಲವೊಂದು ವೇಳೆ ಬೇಟೆಯಾಡಿದ ನೊಣದ ಶರೀರದಲ್ಲಿ ಹಲವಾರು ತೂತುಗಳನ್ನು ಕೊರೆದು ಇನ್ನೂ ಬಲಿಯದ ದವಡೆಯುಳ್ಳ ಮರಿಗಳು ಅದರಿಂದ ಆಹಾರ ಹೀರುವುದಕ್ಕೆ ಅನುವು ಮಾಡಿಕೊಡುತ್ತದೆ. ತೀರ ಎಳೆಯ ಮರಿಗಳಿಗೆ ತಾನೇ ಉಣಿಸುತ್ತದೆ. ಹೊಟ್ಟೆಯಲ್ಲಿ ಜೀರ್ಣಗೊಂಡ ಆಹಾರವನ್ನು ಹೊರಕ್ಕೆ ಕಕ್ಕಿಸಿ ಹನಿಹನಿಯಾಗಿ ಸಾಲುಗಟ್ಟಿ ಬರುವ ಮರಿಗಳಿಗೆಲ್ಲಾ ನೀಡುತ್ತದೆ. ಕಣಜಗಳು (ಜiggeಡಿ ತಿಚಿsಠಿ, sಠಿheಛಿoiಜeಚಿ; ಠಿoಣಣeಡಿ ತಿಚಿsಠಿ, ಇumeಟಿiಟಿಚಿe) ತಮ್ಮ ಗೂಡುಗಳಲ್ಲಿ ಮುಂಗಡವಾಗಿಯೇ ಆಹಾರ ಸಂಗ್ರಹಿಸಿ ನಂತರ ಮೊಟ್ಟೆಗಳನ್ನಿಟ್ಟು ತಾಯ ಮಮತೆ ತೋರುತ್ತವೆ. ಮರಿಗಳಿಗೆ ಉಣಿಸುವ ಚರ್ಯೆ ಪಕ್ಷಿ ಮತ್ತು ಸ್ತನಿಗಳಲ್ಲಿ ಸರ್ವೇ ಸಾಮಾನ್ಯ. ಹಕ್ಕಿಗಳಲ್ಲಿ ಗುಟುಕು ನೀಡುವುದು ಒಂದು ಸಹಜ ಕ್ರಿಯೆ ನಾಯಿ, ಬೇಟೆನಾಯಿ, ತೋಳ, ಕೋತಿ, ವಾನರಗಳಲ್ಲಿ ಒಲವಿನ ಛಾಯೆಗಳು ಎದ್ದು ಕಾಣುವಂತಹದು. ಇಲಿ, ಅಳಿಲು ಮತ್ತು ಗಾಲಪೋಗ ದ್ವೀಪಗಳಲ್ಲಿ ಕಾಣಬರುವ ಸಮುದ್ರ ಸಿಂಹ (zಚಿಟಚಿಠಿhus ಛಿಚಿಟiಜಿoಡಿಟಿiಚಿಟಿus) ಮುಂತಾದವು ತಮ್ಮ ಮರಿಗಳಿಗೆ ಆಹಾರವನ್ನು ಬಾಯಿಂದ ನೀಡುವುವು. ವಾನರಗಳಲ್ಲಿ ಚಿಪಾಂಜಿ, ಗೊರಿಲ್ಲಾ ಒರಂಗುಟಾಂಗ, ಇದೇ ರೀತಿ ಬಾಯಿಂದ ಉಣಿಸುವುವು. ಮರಿಗಳು ತಾಯಿಯಿಂದ ಬೇಡಿ ತಿನ್ನುವುದನ್ನೂ ಕಾಣ ಬಹುದು. ಹೇನು ಹೆಕ್ಕುವುದು, ತಲೆ ಬಾಚುವುದು, ಲಾಲಿಸುವುದು ಇಂತಹ ಒಡನಾಟಗಳೂ ತೃಪ್ತಿಯ ಸಂಕೇತಗಳಾಗಿ ಕಾಣಬಹುದು. ಬೇಟೆನಾಯಿಗಳಲ್ಲಿ ನಿಷ್ಠ ಸಂಸಾರದ ಚಿತ್ರಣ ಕಾಣಬಹುದು. ಹಲವಾರು ಹಿರಿಯ ನಾಯಿಗಳು ಮರಿಗಳೊಂದಿಗೆ ಗುಂಪುಗೂಡಿ ಬದುಕುವುವು ಮರಿಗಳು ತೀರ ಎಳೆಯವಾಗಿದ್ದರೆ ಹೆಣ್ಣು ನಾಯಿಗಳು ಅವುಗಳ ರಕ್ಷಣೆಯ ಭಾರ ಹೊತ್ತರೆ, ಗಂಡುಗಳು ಆಹಾರದ ಬೇಟೆಗಾಗಿ ಹೊರಡುವುವು. ದೊಡ್ಡ ಗಾತ್ರದ ಬೇಟೆಯನ್ನು ಎಳೆದು ತಂದು ಎಲ್ಲಾ ಕಿರಯರಿಗೂ ಉಣಿಸಿದ ನಂತರ ಹಿರಿಯವು ಉಣ್ಣುವುವು. ಎಳೆಯವು ಹಸಿವಿನಿಂದ ಮತ್ತಷ್ಟು ಬೇಡಿದರೆ ತಿಂದ ಮಾಂಸವನ್ನೇ ಹಿರಿಯವು ಕಕ್ಕಿ ತಿನ್ನಿಸುವುವು. ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಪ್ರಯೋಗಗಳಿಂದ ಹ್ಯಾರಿ ಹಾರ್ಲೋ ಎಂಬ ಮನಃಶಾಸ್ತ್ರಜ್ಞ ಮಮತೆಯ ಮಡಿಲಿಂದ ವಂಚಿತವಾದ ಮರಿಗಳ ವರ್ತನೆ ಅಭ್ಯಸಿಸಿದ. ಈ ಪ್ರಯೋಗಗಳಲ್ಲಿ ಒಂದು ಬೋನಿನಲ್ಲಿ ಹಾಲಿನ ಬಾಟಲು ಹಿಡಿದ ತಂತಿಕೋತಿ ಮತ್ತು ಮೆತ್ತನೆಯ ಬಟ್ಟೆಯಿಂದ ತಯಾರಿಸಿದ ಗೊಂಬೆ ಕೋತಿಗಳನಿಟ್ಟು ರೀಸಸ್ ಕೋತಿ ಮರಿಯೊಂದನ್ನು ಇದರಲ್ಲಿ ಬಿಡಲಾಯಿತು. ಹಚ್ಚಗೆ ಬೆಚ್ಚಗಿದ್ದ ತಾಯಿಯ ಸ್ವರೂಪವೇ ಮರಿಕೋತಿಗೆ ರಕರಷಣಾದಾಯಕವಾಗಿದ್ದು ಹಾಲುಣಿಸುವ ತಂತಿಕೋತಿಯಿಂದ ಆಕರ್ಷಿತವಾಗಲಿಲ್ಲ. ಇದರಿಮದ ಆಹಾರಕ್ಕಿಂತ ತಾಯಿ ರಕ್ಷಣಾ ಒಡಲೇ ಒಲವಿನ ಚಿಹ್ನೆ ಎಂದು ಕಂಡುಬಂತು. ಬರೀ ತಂತಿ ಸ್ವರೂಪದ ಕೋತಿಯನ್ನು ಇಟ್ಟ ಬೋನಿನಲ್ಲಿ ಮರಿಕೋತಿ ಭಯಭೀತವಾಗಿ ಮೂಲೆ ಹಿಡಿದು ಕೂತದ್ದು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡಿದಂತಾಯಿತು. ಒಲವಿನ ದವಡೆಯಿಂದ ವಂಚಿತವಾದ ಮರಿಕೋತಿಯನ್ನು ಪುನಃ ಸಾಮಾನ್ಯ ರೀತಿಯಲ್ಲಿ ಬೆಳೆದ ಕೋತಿಗಳ ಗುಂಪಿಗೆ ಸೇರಿಸಿದಾಗ ಅವು ನೇರವಾಗಿ ಗುಂಪಿನ ನಾಯಕನೊಂದಿಗೆ ಹೋರಾಟ ನಡೆಸಿ ಯದ್ವಾ ತದ್ವಾ ನಡಾವಳಿ ತೋರಿ ತನ್ನನ್ನೇ ಆಹುತಿ ತೆಗೆದುಕೊಂಡ ಘಟನೆ ಒಲವು ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯಕ ಎಂಬುದನ್ನ ತೋರಿಸಿಕೊಟ್ಟಿದೆ. ಮತ್ತೊಂದು ಪ್ರಯೋಗದಲ್ಲಿ ತಾಯಿಯ ಒಡಲಿನಲ್ಲೇ ಬೆಳೆದ ಮರಿಯನ್ನು, ತಮ್ಮ ಒಡನಾಡಿಗಳೊಂದಿಗೆ ನಲಿದು ಬೆಳೆದ ಮರಿಗಳೊಂದಿಗೆ ಹೋಲಿಸಿದಾಗ, ಒಡನಾಡಿಗಳ ಸಹವಾಸದ ಮರಿಗಳು ಹಿತಕರವಾಗಿ ವರ್ತಿಸುವುದು ಗಮನಿಸಲಾಯಿತು. ಇದರಿಂದ ಒಲವೊಂದೇ ಬೆಳವಣಿಗೆಗೆ ಸಾಲದು; ನಲಿವೂ ಅತ್ಯವಶ್ಯಕ ಎಂಬುದು ಕಂಡುಬಂತು. ಇಂತಹ ವರ್ತನೆಗಳು ಮಾನವನ ವರ್ತನೆಗಳಿಗಿಂತ ಭಿನ್ನ ಎನ್ನಿಸಲಾರದು. ಗೊರಿಲ್ಲಾಗಳಲ್ಲಿ ನಲಿವಿನ ಪ್ರದರ್ಶನಗಳು ಇನ್ನೂ ಕುತೂಹಲಕಾರಿ. ಗೊರಿಲ್ಲಾ ಮಹಿಳೆ ಎಂದೇ ಗುರುತಿಸಬಹುದಾದ ಡಾ. ಡಯಾನ ಫಾಸೆ ಮಧ್ಯ ಆಫ್ರಿಕಾದ ಕಾಡಿನಲ್ಲಿ ಮೌಂಟೆನ್ ಗೊರಿಲ್ಲಾಗಳೊಡನೆ ಹಲವು ವರ್ಷಗಳು ಅವುಗಳೊಂದಿಗೇ ಬೆರೆತು ಎಲ್ಲಾ ಚರ್ಯೆಗಳನ್ನೂ ಗಮನಿಸಿದಳು. ಮರಿ ಗೊರಿಲ್ಲಾಗಳು ಬೆಳಗಿನ ಎಳೆ ಬಿಸಿಲಿಗೆ ಅಥವಾ ಮಧ್ಯಾಹ್ನದ ವಿಶ್ರಾಂತಿಯ ನಂತರ ಜಾರುವುದು, ನೆಗೆಯುವುದು, ಜೋಕಾಲಿಯಾಡುವುದು, ತಾಯಿಯ ಎದೆಯ ಮೇಲೆ ಹತ್ತಿ ಜಾರಾಡುವುದು ಮುಂತಾದ ಮಂಗಚೇಷ್ಟೆಗಳಲ್ಲಿ ನಲಿಯುತ್ತವೆ. ಗೊರಿಲ್ಲಾ ಕುಟುಂಬದಲ್ಲಿ ಬತ್ತಿದ ಸ್ತನ, ಸೋತ ಕೈಕಾಲು ಹಾಗೂ ನೆರೆತ ಕೂದಲಿನ ಸುಮಾರು 50 ವರ್ಷದ ಕೋಕೋ ಎಂಬ ಮಂದಿ ಹೆಣ್ಣು, ಐದು ಗಂಡುಗಳಿದ್ದ ಆ ಕುಟುಂಬದಲ್ಲಿ ತಲೆಬಾಚುವುದು ಮತ್ತು ಇತರ ತುಂಟಾಟಗಳಲ್ಲಿ ಹುಮ್ಮಸ್ಸಿನಿಂದ ಬೆರೆಯುತ್ತಿದ್ದುದನ್ನು ಡಯಾನ ಗುರುತಿಸಿದಳು. ಅದು ತನ್ನೊಂದಿಗೂ ಸ್ನೇಹ ಬೆಳೆಸಿಕೊಂಡು ಸರಸವಾಡುತ್ತಿದ್ದುದನ್ನು ವರ್ಣರಂಜಿತವಾಗಿ ವಿವರಿಸಿದ್ದಾಳೆ. ಎಂದರೆ ಒಲವಿನಾಟಕ್ಕೆ-ಹುಣಿಸೆ ಹಣ್ಣಾದರೆ ಹುಳಿ ಮುಪ್ಪೇ? ಸಾಕುಪ್ರಾಣಿಗಳು ತಮ್ಮ ಯಜಮಾನನೊಂದಿಗೆ ನಲಿದಾಡುವುದು, ಬೆಕ್ಕು-ಇಲಿಯೊಡನೆ ನಡೆಸುವ ಚೆಲ್ಲಾಟ, ಸರ್ಕಸ್ಸಿನ ಪ್ರಾಣಿಗಳು ಪ್ರೇಕ್ಷಕರನ್ನು ತಮ್ಮ ಆಟಗಳಿಂದ ನಲಿಸುವುದು ಮುಂತಾದವು ಮನೆರಂಜನೆಗಾಗಿಯೇ ನಡೆಯುವ ಕಾರ್ಯಕ್ರಮಗಳು ಜಗತ್ತಿನಾದ್ಯಂತ ನಡೆದು ಬರುತ್ತಿದೆ. ವಿಶೇಷವಾಗಿ ಹೆಸರಿಸುವಂತಹವು-ಅಮೆರಿಕಾದ ಡಾಲ್ಫಿನ್ ಲ್ಯಾಂಡ್, ಸಿಂಗಪುರದ ಪಕ್ಷಿ ಮತ್ತು ಚಿಂಪಾಂಜಿಯ ಪ್ರದರ್ಶನ, ಥೈಲ್ಯಾಂಡಿನ ಆನೆಗಳ ಪ್ರದರ್ಶನ ಇತ್ಯಾದಿ. ಕೆಲವು ವರ್ಷಗಳ ಹಿಂದೆ ಕಲ್ಕತ್ತ ಪ್ರಾಣಿ ಸಂಗ್ರಹಾಲಯದಲ್ಲಿ ಚಿಂಪಾಂಜಿಗಳ ಟೀ-ಪಾರ್ಟಿಗಳ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ಈಗ ಇದನ್ನು ನಿಲ್ಲಿಸಲಾಗಿದೆ. ಎಂದರೆ ತರಬೇತಿ ನೀಡಿ ಪ್ರಾಣಿಗಳನ್ನು ನಾಗರೀಕತೆಯ ಹಾದಿಗೆ ತರಬಹುದು. ಆನೆಗಳಲ್ಲಿ ನವಜಾತ ಮರಿಯ ಆಗಮನ ಹರ್ಷದಾಯಕ. ತಾಯಿಯೇ ಅಲ್ಲದೆ ಗುಂಪಿನ ಇತರ ಹೆಣ್ಣುಗಳೂ ಮರಿಗೆ ಹಾಲುಣಿಸಲು ಸಿದ್ಧಗೊಳ್ಳುವುವು. ಅಂದರೆ ಗುಂಪಿನಲ್ಲಿ ಎಳೆಗರುವಿನ ಇರುವಿಕೆಯೇ ಸ್ತನ ಪ್ರಚೋದನೆಗೆ ಪ್ರೇರಣೆ. ತಾಯ್ತನದ ಮಮತೆಯೇ ಅಲ್ಲದೆ ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮಂದಿರ ಒಲವೂ ಎಳೆಯರಿಗೆ ಲಭ್ಯ. ಅಲೆಮಾರಿ ಆನೆಗಳು ರಾತ್ರಿ ವಿಶ್ರಾಂತಿ ಪಡೆಯುವಾಗಲೂ ಗುಂಪಿನ ಕೆಲವು ಹೆಣ್ಣುಗಳು ಎಚ್ಚರಿಕೆಯಿಂದ ಕಾವಲು ಕಾಯುವುವು. ಆನೆಗಳ ಮತ್ತೊಂದು ನಲಿದಾಟ ಜಲಕ್ರೀಡೆ. ಸೊಂಡಿಲಿನಿಂದ ನೀರನ್ನು ಸಿಂಪಡಿಸಿಕೊಂಡು ಆಡುವ ಆಟ ಯಾವ ಜಲಕನ್ಯೆಯರಿಗೂ ಕಡಿಮೆಯದ್ದಲ್ಲ. ನೀರಾಟದ ನಂತರ ಟಾಲ್ಕಂ ಪೌಡರ್ ಬಳಸುವಂತೆ ಮಣ್ಣನ್ನು ಮೈಮೇಲೆ ಸಿಂಪಡಿಸಿಕೊಳ್ಳುತ್ತವೆ. ಈ ಚರ್ಯೆ ನೋಡುವವರಿಗೆ ನಲಿದಾಟದಂತೆ ಕಂಡರೂ ಅವು ಕೀಟ ಮತ್ತು ಸೂರ್ಯ ರಶ್ಮಿಯಿಂದ ಕಾಪಾಡಿಕೊಳ್ಳುವ ಸಲುವಾಗಿ ನಡೆಸುವ ಕಾರ್ಯ ಇದು. ಅಂಟಾರ್ಟಿಕದ ಪೆಂಗ್ವಿನ್‍ಗಳು ಮರಿಗಳನ್ನು ದಡದಲ್ಲಿ ಬಿಟ್ಟು ಆಹಾರ ಸಂಗ್ರಹಣೆಗೆ ಹೋದರೆ, ಮರಿಗಳೆಲ್ಲವನ್ನೂ ಗುಂಪುಗೂಡಿಸಿ ಕೆಲವು ಯುವ ಪೆಂಗ್ವಿನ್‍ಗಳು ಬಾಲವಾಡಿಗಳನ್ನು ನಡೆಸುತ್ತವೆ. ಗುಂಪಿನ ಮರಿಗಳೆಲ್ಲವೂ ಒಂದೇ ತೆರನಾಗಿದ್ದರೂ, ಅವುಗಳ ಒಲವಿನ ಕೂಗು ತಾಯಂದಿರನ್ನು ಅವುಗಳ ಬಳಿಗೇ ಒಯ್ಯುತ್ತವೆ. ಕೆನ್ಯಾ ಅರಣ್ಯಗಳಲ್ಲಿ ಕಾಣಬರುವ ಕುಳ್ಳ ಮುಂಗಸಿ (ಜತಿಚಿಡಿಜಿ moಟಿgoose, heಟogಚಿಟe ಠಿಚಿಡಿvuಟಚಿ) ಗುಂಪಿನಲ್ಲಿ ಯಾವ ಸದಸ್ಯನಿಗಾದರೂ ಗಾಯವಾಗಿದ್ದಲ್ಲಿ ಅಥವಾ ಬದುಕು ಅಸ್ತವ್ಯಸ್ತವಗಿದ್ದಲ್ಲಿ, ಅವುಗಳಿಗೆ ಪೂರ್ಣ ವಾಸಿಯಾಗುವವರೆಗೆ ಇಲ್ಲ ಸಾವನ್ನಪ್ಪುವವರೆಗೂ ಅವುಗಳೊಡನಿದ್ದು ಸಾಂತ್ವನ ನೀಡುತ್ತವೆ. ಆಹಾರ, ವಾಸಸ್ಥಳ, ಜೊತೆಗಾರ್ತಿ ಮುಂತಾದ ಎಲ್ಲಾ ಹಕ್ಕುಗಳಿಗೂ ನಿರಂತರ ಹೋರಾಟ ಈ ಜೀವಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಈ ಹಕ್ಕೂಗಳನ್ನು ತಮ್ಮದಾಗಿಸಿ ಕೊಳ್ಳಲು ಅವು ಹಂಚಿಕೆ, ಸುಲಿಗೆ, ಕಳ್ಳತನ, ಕೊಲೆ ಮಾಡುವುದಕ್ಕೂ ಹೇಸುವುದಿಲ್ಲ. ಇವೆಲ್ಲಾ ಕ್ರೌರ್ಯವೂ ತಮ್ಮ ಉಳಿವಿಗಾಗಿ ನಡೆಸುವ ವಿಚಿತ್ರ ವರ್ತನೆಗಳು. ಪುರಾಣ ಕತೆಗಳಲ್ಲಿ ಕ್ರೌರ್ಯಕ್ಕೇ ಹೆಸರಾದ ಕೆಲವು ಪ್ರಾಣಿಗಳ ಉಲ್ಲೇಖ ಸಿಗುತ್ತದೆ. ಚೀನಾದ ಪುರಾಣ ಕಥೆಗಳಲ್ಲಿ ಬೆಂಕಿಯುಗುಳುವ ಡ್ರ್ಯಾಗನ್ ಎಂಬುದು ಒಂದು ಕಾಲ್ಪನಿಕ ಜೀವಿ. ಭಾಗವತದಲ್ಲಿ ಬರುವ ಕಾಳಿಂಗ ಸರ್ಪವೂ ಅಂತಹದೊಂದು. ಇತ್ತೀಚಿಗೆ ಹೆಸರು ಮಾಡಿದ `ಜುರಾಸಿಕ್ ಪಾರ್ಕ್ ಚಿತ್ರದಲ್ಲಿ ಪೆಡಂಭೂತಗಳನ್ನು ಖಳನಾಯಕನಂತೆ ಚಿತ್ರಿಸಲಾಗಿದೆ. ಕೆಲವು ವಿಚಿತ್ರ ಕ್ರೂರ ರೂಪಿಗಳ ಉದಾಹರಣೆ ಇಲ್ಲಿ ಸಮಂಜಸ. ಚಿರಪರಿಚಿತ ಹನುಮಾನ್ ಲಂಗೂರ ಕೋತಿಗಳು ಹಿಂಡು ಹಿಂಡಾಗಿ ವಾಸಿಸುವುವು. ಒಂದು ಹಿಂಡಿನಲ್ಲಿ ಸಾಧಾರಣವಾಗಿ ಒಂದು ಬಲಿಷ್ಠ ಗಂಡು ನಾಯಕತ್ವ ಹೊಂದಿ ಅನೇಕ ಹೆಣ್ಣು ಮತ್ತು ಮರಿಗಳೊಡನೆ ಜೀವಿಸುವುವು. ಕೆಲವು ವೇಳೆ ಮತ್ತೊಂದು ಗುಂಪಿನ ಗಂಡು, ನಾಯಕನೊಂದಿಗೆ ಸೆಣಸಾಡಿ ಅದನ್ನು ಗುಂಪಿನಿಂದ ಓಡಿಸಿ ತಾನು ನಾಯಕತ್ವ ಪಡೆಯುವುದು. ಪರರಿಯಾದ ಗಂಡಿನ ಮರಿಗಳನ್ನು ಹೆಣ್ಣು ಅಕ್ಕರೆಯಿಮದ ಕಂಡರೆ ಹೊಸ ನಾಯಕ ಸಹಿಸಲಾರ. ಆ ಮರಿಗಳನ್ನು ಹಿಂಸಿಸಿ ಕೊಲ್ಲುವುದು; ಕುಡಿಗಳನ್ನು ಕಳೆದುಕೊಂಡ ಹೆಣ್ಣು ಪರಿತಪಿಸುತ್ತಿದ್ದರೆ ಹೆಣ್ಣನ್ನು ತನ್ನೆಡೆಗೆ ಆಕರ್ಷಿಸಿಕೊಳ್ಳುವುದು. ಡಾ. ಸಾರಾ ಹೃಡಿ ಬ್ಲಾಫರ್, ಲಂಗೂರ ಕೋತಿಗಳ ಈ ವರ್ತನೆಗಳನ್ನು ಅಭ್ಯಸಿಸುತ್ತಾ, ಹಾಲೂಡಿಸುವ ಹೆಣ್ಣು ಲೈಂಗಿಕ ಪ್ರಚೋದನೆಗೆ ಒಳಗಾಗದೇ ಇರುವ ಸಂಭವವಿರುವುದರಿಂದ ಈ ಕ್ರೌರ್ಯ ವಿಧಾನವನ್ನು ಗಂಡು ಬಳಸುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಈ ಹೊಸ ನಾಯಕ ತನ್ನ ಮರಿಗಳನ್ನು ನಿರ್ಲಕ್ಷಿಸಿದರೂ ಅವಕ್ಕೆ ಯಾವ ಬಗೆಯ ಹಾನಿಯನ್ನೂ ಮಾಡುವುದಿಲ್ಲವೆಂದೂ ತಿಳಿದುಬಂದಿದೆ. ಕಾಡೆಮ್ಮೆಗಳಲ್ಲಿ `ಮಿಸ್ ಯುನಿವರ್ಸ್‍ಗಳ ಆಯ್ಕೆಗಾಗಿ ಕಾದಾಟ ಬಲು ಬಿರುಸಿನಿಂದ ಜರುಗುತ್ತದೆ. `ಅತಿ ವಿನಯಂ ಧೂರ್ತ ಲಕ್ಷಣಂ - ಆಯ್ಕೆಗಾಗಿ ಕಾದಾಟ ಬಲು ಬಿರುಸಿನಿಂದ ಜರುಗುತ್ತದೆ. `ಅತಿ ವಿನಯಂ ಧೂರ್ತ ಲಕ್ಷಣಂ- ಪ್ರಾರ್ಥನಾ ಕೀಟ (Pಡಿಚಿಥಿiಟಿg/Pಡಿeಥಿiಟಿg ಒಚಿಟಿಣis) ಇವು ತಮ್ಮ ಮುಂಗಾಲುಗಳನ್ನು ಪ್ರಾರ್ಥನೆಯ ಭಂಗಿಯಲ್ಲಿ ಜೋಡಿಸಿಕೊಂಡು ವಂಚಿಸುತ್ತದೆ. ಅಂತೆಯೇ ಇವನ್ನು `ಸುಲಿಗೆ ಕೀಟ ಎಂದೂ ಹೆಸರಿಸಬಹುದು. ಹೆಣ್ಣು ಹೊಟ್ಟೆ ಬಾಕ. ಗಂಡು ಸಂಭೋಗದ ಸಂಭ್ರಮಕ್ಕೆ ಹಾತೊರೆದರೆ ಅದರ ತಲೆಯನ್ನೇ ಕಡಿದು. ನಂತರ ಸಂಭೋಗಿಸಿ, ಆತ್ಮಾರ್ಪಣೆಯಲ್ಲಿಯೇ ಅಂತ್ಯಗೊಳಿಸುತ್ತದೆ ಕ್ರೂರ ಪ್ರೇಯಸಿ. ಕೆಲವು ಪ್ರಬೇಧಗಳ ಫೈರ್ ಫ್ಲೈಗಳು ಅನುಕರಣೆಯಿಂದ ಮರುಳು ಮಾಡುವುವು. ಫೋಟಿನಸ್ ಠಿhoಣiಟಿus ತನ್ನ ಪ್ರಣಯಿಗಾಗಿ ವಿಶೇಷ ರೀತಿಯ ಬೆಳಕಿನ ಸಂಕೇತಗಳನ್ನು ನೀಡುತ್ತವೆ. ಈ ಸಂಕೇತಗಳಿಗೆ ಫೋಟುರಿಸ್ ಠಿhoಣiಡಿus ಎಂಬ ಮತ್ತೊಂದು ಜಾತಿಯ ಹೆಣ್ಣು ಸ್ಪಂದಿಸುತ್ತದೆ. ಬೆಸ್ತು ಬಿದ್ದ ಫೋಟಿನಸ್ ಗಂಡು ಹೆಣ್ಣಿನ ಆಕರ್ಷಣೆಯತ್ತ ಸುಳಿಯತ್ತಿದ್ದರೆ ಹೊಂಚುತ್ತಿದ್ದ ಮೋಸಗಾರ್ತಿ ಅದನ್ನು ಕಬಳಿಸುತ್ತದೆ. ರೋವ್ ಭ್ರಮರ (ಂಣemeಟes Pubiಛಿoಟಟis) ತನ್ನ ಮೊಟ್ಟೆಯನ್ನು ಇರುವೆ ಗೂಡಿನಲ್ಲಿಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಯ ಹೊಟ್ಟೆಯ ತುದಿಯಲ್ಲಿ ವಿಶೇಷ ಗ್ರಂಥಿಗಳಿದ್ದು ಅವು ಸ್ರವಿಸುವ ಫೀರಮೋನ್ (ಸ್ರಾವಕ)ಗಳು ಇರುವೆಗಳನ್ನು ಉತ್ತೇಜಿಸಿ ಆಹಾರ ನೀಡಲು ಪ್ರೇರೇಪಿಸುತ್ತದೆ. ಇಂತಹ ಸುಲಿಗೆಯೇ ಅಲ್ಲದೆ ಇರುವೆಗಳ ಮೊಟ್ಟೆ ಮತ್ತು ಮರಿಗಳನ್ನೂ ಭಕ್ಷಿಸಿ ಬೆರಳು ತೋರುವ ಇರುವೆಗಳ ಹಸ್ತವನ್ನೇ ನುಂಗುತ್ತವೆ ದುಷ್ಟ ಭ್ರಮರಗಳು. ಗೆದ್ದಲು ಹುಳುಗಳು ಸಂಘ ಜೀವಿಗಳು. ಇವುಗಳಲ್ಲಿ ಉದ್ದ ಮೂಗಿನ ಸೈನಿಕ ಗೆದ್ದಲು ರಾಸಾಯನಿಕ ಬಾಂಬ್‍ಗಳನ್ನು ಸ್ವರಕ್ಷಣೆಗೆ ಬಳಸಿಕೊಳ್ಳುತ್ತವೆ. ಶತ್ರು ಆಕ್ರಮಿಸಿದಾಗ ತನ್ನ ಟ್ಯಾಂಕ್‍ನಲ್ಲಿ ತುಂಬಿಕೊಂಡ ವಿಷ ವಸ್ತುವನ್ನು ಚುಚ್ಚಿ, ತೂತನ್ನು ಮೇಣದಿಂದ ಮುಚ್ಚುತ್ತದೆ. ಇದರಿಂದ ದೇಹದಲ್ಲೇ ಬಾಧೆಪಡುತ್ತಾ ಜೀವರಸ ಹೆಪ್ಪುಗಟ್ಟಿ ಸಾವನ್ನಪ್ಪುತ್ತದೆ. ಒಲ್ಲದ ರಾಣಿಯನ್ನೂ ಹೀಗೆ ಬಾಧಿಸುವ ನಿದರ್ಶನಗಳೂ ಇವೆ. ಸಿಕ್ಲಿಡ್ ಪಂಗಡಕ್ಕೆ ಸೇರಿದ ಮೀನುಗಳು ಸ್ವಾಭಾವಿಕವಾಗಿ ಜೀವನ ಸಂಗಾತಿಯನ್ನು ಜೊತೆಗೂಡಿದ ನಂತರ ಜೀವನವಿಡೀ ಜೊತೆಯಾಗಿಯೇ ಇರಬಯಸುತ್ತವೆ. ಕೆಲವೊಂದು ಬಾರಿ ಗಂಡ-ಹೆಂಡಿರ ನಡುವೆ ಜಗಳ - ಕದನಗಳೂ ನಡೆಯುತ್ತವೆ. ಸ್ವಂತ ಮರಿಗಳನ್ನೇ ಕಬಳಿಸುತ್ತವೆ. ಕತ್ತಿ ಬಾಲದ ಮೀನು (sತಿoಡಿಜ ಣಚಿiಟ) ಹೆಚ್ಚು ಚಟುವಟಿಕೆಯ ಉಗ್ರ ರೂಪಿಗಳು. ಇವು ಸಣ್ಣ ಮೀನುಗಳನ್ನು ಬೆದರಿಸಿ ಅಟ್ಟಿಸಿಕೊಂಡು ಹೋಗಿ ಕೊಲ್ಲಲೂ ಬಹುದು. ಒಂದರ ಚೆಲ್ಲಟ ಮತ್ತೊಂದಕ್ಕೆ ಪ್ರಾಣ ಸಂಕಟ. ಸಯಾಂನ ಜಗಳಗಂಟಿ ಮೀನು (siಚಿmese ಜಿighಣeಡಿ ಜಿish, ಃeಟಣಚಿ sಠಿಟeಟಿಜeಟಿs) ದುಷ್ಟ ಸ್ವಭಾವದವು ಎರಡು ಗಂಡುಗಳು ಕೂಡಿದಾಗ ಒಂದರೊಡನೊಂದು ಜಗಳವಾಡ, ಒಂದು ಅಥವಾ ಎರಡೂ ಸಾಯುತ್ತವೆ. ಪರಪುಟ್ಟ ಎಂದೇ ಹೆಸರು ಗಳಿಸಿರುವ ಕೋಗಿಲೆಯ ಕಂಠ ಇಂಪಿನದು. ಆದರೆ ಅದೊಂದು ಠಕ್ಕ ಹಕ್ಕಿ. ತನ್ನದೇ ಆದ ಗೂಡು ಕಟ್ಟದ ಸೋಮಾರಿ. ಬೇರೆ ಹಕ್ಕಿಗಳ ಗೂಡುಗಳಲ್ಲಿ. ಆ ಗೂಡಿನ ಹಕ್ಕಿ ಹೊರಹೋದ ಸಮಯ ಹೊಂಚುಹಾಕಿ ತನ್ನ ಮೊಟ್ಟೆಗಳನ್ನು ಇಡುತ್ತದೆ. ಗೂಡಿನ ವಾರಸುದಾರ ತನ್ನದೇ ಮೊಟ್ಟೆಯಂತೆ ಇವಕ್ಕೂ ಕಾವು ಕೊಡುತ್ತದೆ. ವಿಚಿತ್ರವೆಂದರೆ ಕೋಗಿಲೆಯ ಮೊಟ್ಟೆ ಸ್ವಂತ ಮೊಟ್ಟೆಗಿಂತ ಮೊದಲೇ ಒಡೆಯುತ್ತದೆ. ಹೊರಬಂದ ಕೋಗಿಲೆಯ ಮರಿ ತನ್ನ ಮುಂದಿನ ಪ್ರತಿಸ್ಪರ್ಧಿ ಕಣ್ಣು ತೆರೆಯುವ ಮುನ್ನವೇ ಗೂಡಿನಿಮದ ತಳ್ಳಿ ಸಾಕು ತಾಯಿಯ ಮಮತೆ ಪಡೆಯುತ್ತದೆ. ಇವು ಸ್ವಂತ ಮರಿಗಳಿಗಿಂತ ಹೆಚ್ಚು ಚಟುವಟಿಕೆ ಮತ್ತು ಶಬ್ದ ಮಾಡುತ್ತಾ ತಂದ ಆಹಾರವನ್ನೆಲ್ಲಾ ಕಬಳಿಸುತ್ತದೆ. ಉಂಡ ಮನೆಗೇ ಎರಡು ಬಗೆಯುವ ಇವು ತಮ್ಮ ಕಂಠದಿಂದ ಜಗತ್ಪ್ರಸಿದ್ಧವಾಗಿವೆ. ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ವಿಸ್ಮಯಗಳೆಡೆಗೆ ನಾವು ಗಮನ ಹರಿಸುವುದಿಲ್ಲ. ಜೀವ ಜಗತ್ತಿನಲ್ಲಿ ಎಂತಹ ಅಮೂಲ್ಯ ಆಶ್ಚರ್ಯಗಳಿವೆ ಎಂದು ತಿಳಿಯಲು ತೆರೆದ ಕಣ್ಣು ಮತ್ತು ಕಿವಿಗಳ ಅಗತ್ಯವಿದೆ. ಪ್ರಕೃತಿಯ ವೇದಿಕೆಯ ಮೇಲೆ ನಡೆಯುವ ನಾಟಕಗಳಿಗೆ ಬಣ್ನ ಕಟ್ಟಿ ವಿವರಿಸುವ ಕಲೆ ಒಳ್ಳೆಯ ಸಾಹಿತ್ಯವಾಗಬಲ್ಲುದು. ನೋಡಿ ಆನಂದಿಸಿದಾಗ ಮನೋರಂಜನೆಯಾಗಬಲ್ಲದು. ವೈಚಿತ್ರ್ಯಗಳನ್ನು ಕ್ಯಾಮರಾದಿಂದ ಸೆರೆ ಹಿಡಿದಾಗ ಹವ್ಯಾಸವಾಗ ಬಹುದು. ಕೂಲಂಕಷವಾಗಿ ಏಕೆ? ಹೇಗೆ? ಎಂದು ವಿವರಣೆ ನೀಡಿದಾಗ ಅದೊಂದು ವೈಜ್ಞಾನಿಕ ಸತ್ಯವಾಗುವುದು. (ಎನ್.ಎಸ್.ಲೀಲಾ)