ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಇತಿಹಾಸ
ಗೋಚರ
ಭಾರತದ ಇತಿಹಾಸ
- ಭಾರತದ ಇತಿಹಾಸವನ್ನು ಸ್ಥೂಲವಾಗಿ ಪರಿಚಯಿಸಿಕೊಡುವ ಲೇಖನ. ಪ್ರಸ್ತುತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಿದೆ :
- 1 ಪುರಾತತ್ವ ಮತ್ತು ಪ್ರಾಗಿತಿಹಾಸ
- 2 ಸಿಂಧೂ ನದಿ ನಾಗರಿಕತೆ
- 3 ದೆಹಲಿಯ ಸುಲ್ತಾನರು
- 4 ಮೊಗಲದ ಕಾಲ
- 5 ಬ್ರಿಟಿಷರ ಕಾಲ
- 6 ಸ್ವತಂತ್ರ ಭಾರತ
- 7 ಬೃಹದ್ ಭಾರತ
- 1 ಪುರಾತತ್ವ ಮತ್ತು ಪ್ರಾಗಿತಿಹಾಸ
- ಭಾರತೀಯ ಪುರಾತತ್ವ ಸಂಶೋಧನೆಯಲ್ಲಿ ಪ್ರಾಗಿತಿಹಾಸದ ನೆಲೆಗಳನ್ನು ಶೋಧಿಸಿ, ಅವುಗಳಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ಭಾರತ ಪ್ರಾಗಿತಿಹಾಸದ ಒಂದು ಸ್ಥೂಲ ಚಿತ್ರವನ್ನು ಹಾಗೂ ಮೂರು ಮುಖ್ಯ ಹಂತಗಳನ್ನು ಗುರುತಿಸಿ, ಭಾರತದ ಪ್ರಾಗಿತಿಹಾಸ ಅಧ್ಯಯನಕ್ಕೆ ಬುನಾದಿ ಹಾಕಿದ ಕೀರ್ತಿ ಬ್ರಿಟಿಷ್ ಭೂವಿಜ್ಞಾನಿ ರಾಬರ್ಟ್ ಬ್ರೂಸ್‍ಫುಟ್ ಅವರಿಗೆ ಸಲ್ಲುತ್ತದೆ. ಭಾರತದ ಪುರಾತತ್ವ ಸಂಶೋಧನೆಯ ಇತಿಹಾಸದಲ್ಲಿ 30 ಮೇ 1883 ಒಂದು ಮಹತ್ತ್ವದ ದಿನ. ಆ ದಿನ ಬ್ರೂಸ್‍ಫುಟ್ ಅವರು ತಮಿಳುನಾಡಿನ ಹತ್ತಿರ ಕೊರ್ತಾಲಯದ ನದಿ ಬಯಲಿನಲ್ಲಿಯ ಪಲ್ಲಾವರಮ್ಮಿನಲ್ಲಿ ಶಿಲಾಯುಗ ಮಾನವ ನಿರ್ಮಿತ ಕಲ್ಲಿನ ಆಯುಧಗಳನ್ನು ಶೋಧಿಸಿದರು. ಇವು ಶಿಲಾಯುಗ ಸಂಸ್ಕøತಿಯ ಅವಶೇಷಗಳ ಮೊತ್ತಮೊದಲ ಶೋಧವಿದು. ಈ ಶೋಧನೆಯಿಂದಾಗಿ ಭಾರತದಲ್ಲೂ ಮಾನವನ ಸಾಂಸ್ಕøತಿಕ ಇತಿಹಾಸ ಬಹಳ ಪ್ರಾಚೀನ ಎಂದು ತಿಳಿಯಿತು. ಅಲ್ಲಿಂದ ಸುಮಾರು 1935ರ ತನಕ ಅಪರೂಪವಾಗಿ ಬೇರೆಬೇರೆ ಪ್ರದೇಶಗಳಲ್ಲಿ ಕೆಲವು ಶಿಲಾಯುಧಗಳನ್ನು, ಇಲ್ಲವೇ ಈ ಸಂಸ್ಕøತಿಯ ನೆಲೆಗಳನ್ನು ಗುರುತಿಸಲಾಯಿತು. ಇವುಗಳಲ್ಲಿ ಬ್ರೂಸ್‍ಫುಟ್ ಅವರು ಶೋಧಿಸಿದ ಖ್ಯಾಡ್ ಮತ್ತು ಢಾಣಕ್-ಶಿರೂರು (ಬಿಜಾಪುರ ಜಿಲ್ಲೆ, ಕರ್ನಾಟಕ) ಬಳಿಯ ಮಲಪ್ರಭಾನದಿಯ ಪ್ರದೇಶ ಅತ್ಯಂತ ಮಹತ್ತ್ವದ ಹಳೆಶಿಲಾಯುಗದ ನೆಲೆ.
- ದಕ್ಷಿಣ ಭಾರತದಲ್ಲಿ ಬ್ರೂಸ್‍ಫುಟ್ ಅವರು ಶೋಧಿಸಿದ ನೆಲೆಗಳಲ್ಲಿ ತಮಿಳುನಾಡಿನ ಶವರಾಯ್ ಬೆಟ್ಟಪ್ರದೇಶ, ಕರ್ನಾಟಕದ ತಿರುಮಕೂಡಲು ನರಸೀಪುರ (ಮೈಸೂರು ಜಿಲ್ಲೆ), ಸಂಗನಕಲ್ಲು (ಬಳ್ಳಾರಿ ಜಿಲ್ಲೆ), ಮಸ್ಕಿ (ರಾಯಚೂರು ಜಿಲ್ಲೆ) ಇವು ಬಹಳ ಮುಖ್ಯವಾದವು. ಉಜ್ಜಿ ನಯಮಾಡಿದ, ಹರಿತ ಬಾಯುಳ್ಳ ತ್ರಿಕೋನಾಕೃತಿಯ ಕಲ್ಲಿನ ಕೊಡಲಿಗಳು ಮತ್ತು ಮೃತ್‍ಪಾತ್ರೆ ಚೂರುಗಳು ಈ ನೆಲೆಗಳಲ್ಲಿ ಹೇರಳವಾಗಿ ದೊರೆತವು. ಶವರಾಯ್ ಬೆಟ್ಟಪ್ರದೇಶದಲ್ಲಿ ಕೇವಲ ಕಲ್ಲಿನ ಕೊಡಲಿಗಳು ಮಾತ್ರ ಸಿಕ್ಕಿವೆ. ಈ ನೆಲೆಗಳ ಶಿಲಾಯುಧಗಳು ಮತ್ತು ಇವನ್ನು ಸಿದ್ಧಮಾಡಿದ ತಾಂತ್ರಿಕ ವಿಧಾನಗಳನ್ನು ಅನುಲಕ್ಷಿಸಿದಾಗ ಇವು ಪಲ್ಲಾವರಮ್, ಖ್ಯಾಡ್ ಮೊದಲಾದ ನೆಲೆಗಳಲ್ಲಿಯ ಕಲ್ಲಿನ ಆಯುಧಗಳಿಗಿಂತ ತೀರ ಭಿನ್ನವಾಗಿದ್ದುವು. ಬ್ಯೂಸ್‍ಫುಟ್ ಅವರು ಭಾರತದಲ್ಲಿ ತಾವು ಶೋಧಿಸಿದ ಎಲ್ಲ ನೆಲೆಗಳನ್ನೂ ಅಭ್ಯಸಿಸಿ ಪ್ರಾಗೈತಿಹಾಸಿಕ ಸಂಸ್ಕøತಿಯ ಬೆಳೆವಣಿಗೆಯಲ್ಲಿ ಹಳೆಶಿಲಾಯುಗ, ನೂತನ ಶಿಲಾಯುಗ ಮತ್ತು ಕಬ್ಬಿಣಯುಗ ಎಂಬ ಮೂರು ಪ್ರಮುಖ ಹಂತಗಳನ್ನು ಗುರುತಿಸಿದರು. ಇವಲ್ಲದೆ ಬಂಡೆಯಮೇಲೆ ಕೊರೆದ ಚಿತ್ರಗಳನ್ನು ಕೂಡ ಇವರು ಕುಪ್ಪಗಲ್ಲು (ಬಳ್ಳಾರಿ ಜಿಲ್ಲೆ) ಮೊದಲಾದ ಪ್ರದೇಶಗಳಲ್ಲಿ ಶೋಧಿಸಿದರು. ಈ ಚಿತ್ರಗಳು ಪ್ರಾಗಿತಿಹಾಸ ಮತ್ತು ಇತಿಹಾಸ ಕಾಲದವು. ಮತ್ತೆ ಕೆಲವೆಡೆಯಲ್ಲಿ ರಾಶಿರಾಶಿ ಸಗಣಿಯನ್ನು ಬೆಂಕಿಯಲ್ಲಿ ಸುಟ್ಟಿದ್ದರಿಂದ ಉಂಟಾದ ಕಿಟ್ಟದಂಥ ಬೃಹದಾಕಾರದ ಬೂದಿಗುಡ್ಡೆಗಳನ್ನು ಕುಡತಿನ, ಕುಪ್ಪಗಲ್ಲು ಮೊದಲಾದೆಡೆಗಳಲ್ಲಿ ಶೋಧಿಸಿದರು. ಈ ಬೂದಿಗುಡ್ಡೆಗಳ ಸುತ್ತಮುತ್ತಲೂ ದೊರೆತ ಅವಶೇಷಗಳನ್ನು ಅನುಲಕ್ಷಿಸಿ ಇವು ನೂತನ ಶಿಲಾಯುಗದವೆಂದು ಇವರು ತರ್ಕಿಸಿದ್ದಾರೆ.
- ಇತರ ಶೋಧನೆಗಳು. ಹಳೆ ಮತ್ತು ಹೊಸ ಶಿಲಾಯುಗ ಸಂಸ್ಕøತಿಗಳು; 1867ರಲ್ಲಿ ವಿಂಧ್ಯಪರ್ವತ ಶ್ರೇಣಿಯಲ್ಲಿ ಕಾರ್ಲೈಲ್ ಅವರು ಉತ್ತಮ ಜಾತಿಯ ಕಲ್ಲಿನಲ್ಲಿ ಮಾಡಿದ, ಸುಮಾರು 1 ರಿಂದ 8 ಸೆಂಮೀ ಉದ್ದದ ಉಪಕರಣಗಳನ್ನು ಸಂಗ್ರಹಿಸಿದರು. ಅನಂತರ ಬಿಹಾರ್‍ಪ್ರದೇಶದಲ್ಲಿ ಬೀಚಿಂಗ್, ಡ್ರೈವರ್, ಕಾಕ್‍ಬರ್ನ್, ರಿವೆಕಾರ್ನರ್, ಮಜುಮಾದಾರ್ ಅವರೂ
- ಬಂಗಾಳ ಮತ್ತು ಬೆಂಗಳೂರಿನ ಸಮೀಪ ಜಾಲಹಳ್ಳಿಯಲ್ಲಿ ಕೆ.ಆರ್.ಯು. ಟಾಡ್ ಅವರೂ ತಮಿಳುನಾಡಿನ ತಿನ್ನವೆಲ್ಲಿ ಜಿಲ್ಲೆಯ 'ತೆರಿ' ಪ್ರದೇಶಗಳಲ್ಲಿ ಗೋರ್ಡಾನ್ ಚೈಲ್ಡ್ ಅವರೂ ಇಂಥ ಕಲ್ಲಿನ ಉಪಕರಣಗಳನ್ನು ಒಟ್ಟುಮಾಡಿ ಅಧ್ಯಯನ ನಡೆಸಿದರು.
- 1867-68 ರಲ್ಲಿ ಬೀಚಿಂಗ್ ಮತ್ತು ಲ್ಯುಬಕ್ ಅವರು ಅನುಕ್ರಮವಾಗಿ ಅಸ್ಸಾಮಿನ ಉತ್ತರ ಭಾಗದಲ್ಲಿ ಮತ್ತು ಸಿಂಗ್‍ಭೂಮ್‍ನಲ್ಲಿ (ಬಿಹಾರ) ನೂತನ ಶಿಲಾಯುಗದ ಉಪಕರಣಗಳನ್ನು ಶೋಧಿಸಿದರು. ಅಸ್ಸಾಮ್ ಪ್ರದೇಶದಲ್ಲಿ ಹೊಸ ಶಿಲಾಯುಗದ ಉಪಕರಣಗಳನ್ನು ವಿಪುಲವಾಗಿ ಸಂಗ್ರಹಿಸಲಾಗಿದ್ದು ಅವುಗಳಲ್ಲಿ ಸುಮಾರು 400 ಉಪಕರಣಗಳನ್ನು ಆಕ್ಸ್‍ಫರ್ಡ್‍ನಲ್ಲಿಯ (ಇಂಗ್ಲೆಂಡ್) ಪಿಟ್ ರಿವರ್ಸ್ ಸಂಗ್ರಹಾಲಯದಲ್ಲಿ ಇಡಲಾಗಿದೆ.
- ಭೂವಿಜ್ಞಾನಿ ಸಂಪತ್ ಅಯ್ಯಂಗಾರ್ ಅವರು ತುಮಕೂರಿನ ಬಳಿ ಕಿಬ್ಬನ ಹಳ್ಳಿಯಲ್ಲಿ ಶೋಧಿಸಿದ (1924) ಆದಿ ಹಳೆ ಶಿಲಾಯುಗ ನೆಲೆ ಮಹತ್ತ್ವದ್ದು. ಇದೇ ಸಮಯದಲ್ಲಿ ಕೃಷ್ಣಾನದಿ ಬಯಲು ಪ್ರದೇಶದಲ್ಲಿ (ಆಂಧ್ರ ಪ್ರದೇಶ) ಕಮೀಯಾದೆ ಅವರು ಹಲವಾರು ನೆಲೆಗಳನ್ನು ಶೋಧಿಸಿ ಕಲ್ಲಿನ ಉಪಕರಣಗಳನ್ನು ಸಂಗ್ರಹಿಸಿದ್ದರು. ಅವನ್ನು 1930 ರಲ್ಲಿ ಬರ್ಕಿಟ್ ಅವರು ಅಧ್ಯಯನ ಮಾಡಿ ಅವುಗಳ ಆಕಾರ, ಲಕ್ಷಣಗಳ ಆಧಾರದಮೇಲೆ ಪ್ರಪ್ರಥಮವಾಗಿ ಸೀರಿಸ್ I, II, III, Iಗಿ ಎಂಬ ನಾಲ್ಕು ಶ್ರೇಣಿಗಳಾಗಿ ವಿಂಗಡಿಸಿದರು.
- 20ನೆಯ ಶತಮಾನದ ಮೊದಲನೆಯ ನಾಲ್ಕು ದಶಕಗಳಲ್ಲಿ ಅಲ್ಲೊಂದು ಇಲ್ಲೊಂದು ಹಳೆ ಮತ್ತು ಹೊಸ ಶಿಲಾಯುಗ ನೆಲೆಗಳನ್ನು, ಭಾರತದ ವಿವಿಧ ಪ್ರದೇಶಗಳಲ್ಲಿ ಶೋಧಿಸಲಾಯಿತು. ಒಂದೆರಡು ಕಡೆಗಳಲ್ಲಿ ಇಂಥ ನೆಲೆಗಳ ವೈಜ್ಞಾನಿಕ ಅಧ್ಯಯನ ನಡೆಸಲಾಯಿತು. ಈ ಶೋಧನೆ ಮತ್ತು ಅಧ್ಯಯನಗಳಲ್ಲಿ ಕೆಲವು ಪ್ರಾಗಿತಿಹಾಸ ಸಂಸ್ಕøತಿ ಸಂಶೋಧನೆಯಲ್ಲಿ ಮುಖ್ಯ ಘಟ್ಟಗಳಾಗಿದ್ದು ಗಮನಾರ್ಹವಾಗಿದೆ.
- ಶಿಲಾಯುಗ ಸಂಸ್ಕøತಿಗಳ ಮೊತ್ತಮೊದಲ ವೈಜ್ಞಾನಿಕ ಅಧ್ಯಯನ ನಡೆದದ್ದು 1935 ರಲ್ಲಿ. ಕಾಶ್ಮೀರ, ಜಮ್ಮು ಮತ್ತು ಪೊಟ್ವಾರ್ ಪ್ರದೇಶಗಳಲ್ಲಿ ಅಮೆರಿಕದ ಯೇಲ್ ಮತ್ತು ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯಗಳ ವಿಜ್ಞಾನಿಗಳ ತಂಡ ದತೆರ್ರಾ ಮತ್ತು ಪೇಟರ್‍ಸನ್ ಅವರ ನೇತೃತ್ವದಲ್ಲಿ ವಿಶೇಷವಾಗಿ ಅಧ್ಯಯನ ನಡೆಸಿತು. ಈ ಅಧ್ಯಯನದ ಫಲಿತಾಂಶವನ್ನು ಸ್ಟಡೀಸ್ ಆನ್ ದಿ ಐಸ್ ಏಜ್ ಇನ್ ಇಂಡಿಯಾ ಅಂಡ್ ಅಸೋಸಿಯೇಟೆಡ್ ಹ್ಯೂಮನ್ ಕಲ್ಚರ್ ಎಂಬ ಗ್ರಂಥದಲ್ಲಿ ಪ್ರಕಟಿಸಲಾಯಿತು. ಈ ಅಧ್ಯಯನ ಅನಂತರದ ಶೋಧನೆಗೆ ಒಂದು ಉತ್ತಮ ಮಾದರಿಯಾಯಿತು. ಇದೇ ಸಮಯದಲ್ಲಿ ಈ ತಂಡ ಶ್ರೀನಗರದ ವಾಯುವ್ಯಕ್ಕೆ ಸುಮಾರು 24 ಕಿಮೀ ದೂರದಲ್ಲಿ ಬೂರ್ಜಹಾಮ್‍ನಲ್ಲಿ ನೂತನ ಶಿಲಾಯುಗದ ಒಂದು ನೆಲೆಯನ್ನು ಶೋಧಿಸಿ ಉತ್ಖನನ ನಡೆಸಿತು. ಇದು ಅನಾವರಣಗೊಳಿಸಿದ ಸಂಸ್ಕøತಿ ಸಿಂಧೂನಾಗರಿಕತೆಯದು ಎಂದು ಭಾವಿಸಲಾಗಿತ್ತು. ಅನಂತರ 1960-71ರಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷನ ಇಲಾಖೆ ಮತ್ತೆ ಈ ನೆಲೆಯಲ್ಲಿ ಉತ್ಖನನ ನಡೆಸಿ ಇಲ್ಲಿಯ ಸಂಸ್ಕøತಿ ನೂತನ ಶಿಲಾಯುಗದ್ದೆಂದು ಖಚಿತಪಡಿಸಿತು.
- ಮುಂಬಯಿ ನಗರದ ಖಾಂಡಿವಲಿ ಎಂಬ ಪ್ರದೇಶದಲ್ಲಿ ಟಾಡ್ ಅವರು ಶಿಲಾಯುಗ ಸಂಸ್ಕøತಿಗಳ ನೆಲೆಯನ್ನು ಶೋಧಿಸಿ (1939) ವ್ಶೆಜ್ಞಾನಿಕ ಅಧ್ಯಯನ ನಡೆಸಿದ್ದು ಮಹತ್ತ್ವದ ಸಾಧನೆ. ಶಿಲಾಯುಗದ ಸಂಸ್ಕøತಿಯ ಬೆಳೆವಣಿಗೆಯಲ್ಲಿ ಒಂದು ಮುಖ್ಯ ಹಂತವಾದ ಅಂತ್ಯ ಹಳೆಶಿಲಾಯುಗವನ್ನು (ಅಪ್ಪರ್ ಪೆಲಿಯೋಲಿಥಿಕ್) ಅವರು ಪ್ರಥಮ ಬಾರಿಗೆ ಗುರುತಿಸಿದರು; ಆ ಪ್ರದೇಶದ ಒಂದು ಸಣ್ಣ ನದಿಯ ಕಡಿದಾದ ದಂಡೆಯ ವಿವಿಧ ಪದರುಗಳಿಂದ ಬೇರೆ ಬೇರೆ ಆಕಾರ, ಲಕ್ಷಣಗಳುಳ್ಳ ಶಿಲಾಯುಧಗಳನ್ನು ಸಂಗ್ರಹಿಸಲಾಯಿತು. ಈ ನೆಲೆಯನ್ನು ಅನಂತರ ಮಲ್ಲಿಕ್, ಸೌಂಕಳಿಯಾ, ಸುಬ್ಬರಾವ್ ಮೊದಲಾದ ಪುರಾತತ್ತ್ವಜ್ಞರು ಪರಿಶೀಲಿಸಿದರು. ಆದರೆ ಆಗ ಅವರಿಗೆ ಆದಿ ಹಳೆಶಿಲಾಯುಗದ ಅವಶೇಷಗಳು ಕಂಡುಬರಲಿಲ್ಲ. ಆದ್ದರಿಂದ ಟೌಡ್ ಅವರು ಅಲ್ಲಿ ಗುರುತಿಸಿದ ಆದಿ ಹಳೆ ಶಿಲಾಯುಗದ ಸಂಸ್ಕøತಿ ಕುರುಹುಗಳ ನೆಲೆಯ ಬಗ್ಗೆ ನಿಶ್ಚಿತ ಅಭಿಪ್ರಾಯವಿಲ್ಲ.
- ಹೀಗೆ ಭಾರತದಲ್ಲೆಲ್ಲ ಈ ಹೊತ್ತಿಗೆ ಹಳೆಶಿಲಾಯುಗ ಮತ್ತು ಹೊಸ ಶಿಲಾಯುಗದ ಸಂಸ್ಕøತಿಯ ನೆಲೆಗಳು ಶೋಧನೆಯಾದುವು. ಈ ಅಧ್ಯಯನದಲ್ಲಿ ಮೂರು ಪ್ರಗತಿಪರ ಅಂಶಗಳು ಗಮನಾರ್ಹ. ಅವೆಂದರೆ ಹಳೆ ಶಿಲಾಯುಗ ಸಂಸ್ಕøತಿಯಲ್ಲಿ ನಾಲ್ಕು ಹಂತಗಳನ್ನು ಗುರುತಿಸುವಿಕೆ; ಈ ಸಂಸ್ಕøತಿಯ ವ್ಯಾಪಕ ವ್ಶೆಜ್ಞಾನಿಕ ಅಧ್ಯಯನ ಮತ್ತು ಮಾನವ ಸಂಸ್ಕøತಿಯ ಬೆಳೆವಣಿಗೆಯಲ್ಲಿ ನೂತನ ಶಿಲಾಯುಗದ ಅನುಕ್ರಮ ಹಂತ. ಈ ಮೂರು ಅಂಶಗಳು ಮುಂದೆ ಹೆಚ್ಚಿನ ಸಂಶೋಧನೆಗೆ ದಾರಿಮಾಡಿಕೊಟ್ಟವು.
- ದಕ್ಷಿಣ ಭಾರತದಲ್ಲಿ, ಹಿಂದಿನ ಹೈದರಾಬಾದ್ ಸಂಸ್ಥಾನ 1915 ರಲ್ಲಿ ಪುರಾತತ್ವ ಶಾಖೆಯನ್ನು ಸ್ಥಾಪಿಸಿ, ಪ್ರಾದೇಶಿಕ ಅನ್ವೇಷಣೆ ಮತ್ತು ಉತ್ಖನನಗಳನ್ನು ಕೈಗೊಂಡಿತು. 1930ರ ಸಮಯದ ಲಿಯಾನಾರ್ಡೊಮನ್ ಅವರ ಹೊಸ ಶಿಲಾಯುಗ, ಬೃಹತ್ ಶಿಲಾಯುಗ ಸಂಸ್ಕøತಿ ನೆಲೆಗಳು ಮೊದಲಾದ ಶೋಧನೆಗಳಲ್ಲಿ ರಾಯಚೂರು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೆಬೆನಕಲ್ ಬೆಟ್ಟದಲ್ಲಿಯ ಮೂರು ವರ್ಣಚಿತ್ರ ಗವಿಗಳ ಶೋಧ ಮಹತ್ತ್ವದ್ದು. ಅನಂತರ ಕಾಲದ ಅಧ್ಯಯನದಿಂದ ಇವು ನೂತನ ಶಿಲಾಯುಗದ ಹಾಗೂ ಕಬ್ಬಿಣ ಯುಗದ ಬೃಹತ್ ಶಿಲಾ ಸಂಸ್ಕøತಿಯವೆಂದು ತಿಳಿದುಬಂತು (ಪ್ರಾಗಿತಿಹಾಸದ ವರ್ಣಚಿತ್ರ ಕಲೆಯ ಅಧ್ಯಯನಕ್ಕೆ ತಜ್ಞರು ಇತ್ತೀಚೆಗೆ ಗಮನಕೊಡುತ್ತಿದ್ದಾರೆ). ಇದೇ ಶಾಖೆ ಕರ್ನಾಟಕದಲ್ಲಿ ಮಸ್ಕಿ (ರಾಯಚೂರು ಜಿಲ್ಲೆ) ಮತ್ತು ಕಲ್ಲೂರು (ರಾಯಚೂರು ಸಮೀಪ) ಎಂಬ ನೆಲೆಗಳಲ್ಲಿ ಉತ್ಖನನ ನಡೆಸಿ ಹೊಸ ಶಿಲಾತಾಮ್ರಯುಗದ, ಬೃಹತ್ ಶಿಲಾ ಸಂಸ್ಕøತಿಯ, ಇತಿಹಾಸ ಆರಂಭ ಹಾಗೂ ಮಧ್ಯಯುಗೀನ ಕಾಲದ ಅವಶೇಷಗಳನ್ನು ಸಂಗ್ರಹಿಸಿತು. ಆದರೆ ಉತ್ಖನನದಲ್ಲಿ ಯಾವುದೇ ಒಂದು ವೈಜ್ಞಾನಿಕ ಕ್ರಮವಿಲ್ಲದಿದ್ದುದರಿಂದ ಇವುಗಳ ಅಧ್ಯಯನದಲ್ಲಿ ತೊಡಕುಂಟಾಯಿತು. ಈ ದೃಷ್ಟಿಯಿಂದ ಹಿಂದಿನ ಮೈಸೂರು ಸಂಸ್ಥಾನ 1885 ರಲ್ಲಿ ಸ್ಥಾಪಿಸಿದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ (1929-47) ಎಂ.ಎಚ್. ಕೃಷ್ಣ ಅವರ ಬ್ರಹ್ಮಗಿರಿ (ಚಿತ್ರದುರ್ಗ ಜಿಲ್ಲೆ) ಉತ್ಖನನ ವೈಜ್ಞಾನಿಕವಾಗಿದ್ದು, ಈ ನೆಲೆಯಲ್ಲಿ ವಿವಿಧ ಸಾಂಸ್ಕøತಿಕ ಪದರಗಳನ್ನು ಗುರುತಿಸಲು ಸಾಧ್ಯವಾಯಿತು. ಉತ್ಖನನದ ಗುಂಡಿಗಳಲ್ಲಿ ಅತ್ಯಂತ ಕೆಳಗಿನ ಪದರಗಳಲ್ಲಿ ಕಲ್ಲಿನ ಸಣ್ಣ ಸಣ್ಣ ಉಪಕರಣಗಳು, ಬೂದುವರ್ಣದ ಮೃತ್‍ಪಾತ್ರೆ ಚೂರುಗಳು, ಉಜ್ಜಿದ ಕೊಡಲಿಗಳು ದೊರೆತವು. ಇವುಗಳ ಮೇಲಿನ ಪದರಗಳಲ್ಲಿ ಕಪ್ಪು-ಕೆಂಪುವರ್ಣದ ಮೃತ್‍ಪಾತ್ರೆ ಚೂರುಗಳು, ಕಬ್ಬಿಣ ಉಪಕರಣದ ಚೂರುಗಳು ಮೊದಲಾದವೂ ಮತ್ತು ಮೇಲಿನ ಪದರಗಳಲ್ಲಿ ಬಿಳಿ ವರ್ಣದಲ್ಲಿ ರೇಖಾ ಚಿತ್ರವುಳ್ಳ ಮೃತ್‍ಪಾತ್ರೆ ಚೂರುಗಳೂ ದೊರೆತವು. ಆದ್ದರಿಂದ ಇವನ್ನು ಅನುಕ್ರಮವಾಗಿ ಮೈಕ್ರೋಲಿಥಿಕ್, ನೂತನ ಶಿಲಾಯುಗ, ಕಬ್ಬಿಣಯುಗ, ಇಸಿಲ (ಮೌರ್ಯ ಚಕ್ರವರ್ತಿ ಅಶೋಕನ ಶಾಸನದಲ್ಲಿ ಉಲ್ಲೇಖಿಸಿದ) ಮತ್ತು ಚಾಳುಕ್ಯ-ಹೊಯ್ಸಳ ಸಂಸ್ಕøತಿಗಳೆಂದು ಗುರುತಿಸಲಾಯಿತು. ಹೀಗೆ ಉತ್ಖನನದಲ್ಲಿ ಪದರಶಾಸ್ತ್ರವನ್ನು ಅನುಸರಿಸಿ ಒಂದು ನೆಲೆಯಲ್ಲಿ ವಿವಿಧ ಸಂಸ್ಕøತಿಗಳ ಇರುವಿಕೆ, ಬೆಳೆವಣಿಗೆ ಮತ್ತು ಅವುಗಳ ಕಾಲಾನುಕ್ರಮವನ್ನು ಗುರುತಿಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ. ಮೈಕ್ರೋಲಿಥಿಕ್ ಸಂಸ್ಕøತಿ ಇತಿಹಾಸ ಆರಂಭ ಕಾಲಕ್ಕೂ, ಹಿಂದೆ ಯಾವ ಹಂತದ್ದು ಮತ್ತು ಆ ಹಂತದಿಂದ ಕ್ರಮೇಣ ಇತಿಹಾಸ ಆರಂಭ ಕಾಲದ ನಾಗರಿಕ ಜೀನವ ಕ್ರಮ ಹೇಗೆ ಬೆಳೆಯಿತೆಂಬ ಕುತೂಹಲಕಾರಿ ವಿಷಯಗಳನ್ನು ಸ್ಥೂಲವಾಗಿ ತಿಳಿಯಲು ಈ ಉತ್ಖನನದಲ್ಲಿ ಪುರಾವೆಗಳು ದೊರೆತವು. ಮೈಕ್ರೊಲಿಥಿಕ್ ಸಂಸ್ಕøತಿಯ ಪದರಗಳಲ್ಲಿ ನೇರಿಳೆ ಬಣ್ಣದ ರೇಖಾಚಿತ್ರವುಳ್ಳ ಕೆಂಪು ಗಡಿಗೆಯ ಚೂರುಗಳೂ ಇದ್ದುವು. 1951 ರಲ್ಲಿ ಜೋರ್ವೆಯಲ್ಲಿಯ (ಮಹಾರಾಷ್ಟ್ರ) ಉತ್ಖನನದಲ್ಲಿ ಇಂಥ ಮೃತ್‍ಪಾತ್ರೆಗಳ ಅವಶೇಷಗಳು ಕಲ್ಲಿನ ಸಣ್ಣ ಉಪಕರಣಗಳೊಡನೆ ಅತ್ಯಂತ ಕೆಳಗಿನ ಪದರಗಳಲ್ಲಿ ಹೇರಳವಾಗಿ ದೊರೆತವು. ನೇವಾಸದಲ್ಲಿಯ 1954-55ರ ಉತ್ಖನನದಲ್ಲಿಯೂ ಈ ಬಗೆಯ ಉಪಕರಣಗಳು ವಿಪುಲವಾಗಿ ದೊರೆತು ಇವು ಗೋದಾವರಿ ಬಯಲಿನಲ್ಲಿ ಶಿಲಾ-ತಾಮ್ರಯುಗದ ಒಂದು ಪ್ರಾದೇಶಿಕ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ ಎಂಬ ಅಂಶ ಸ್ಪಷ್ಟವಾಯಿತು. ಈ ಸಂಸ್ಕøತಿಯ ಕುರುಹುಗಳು ಮೊದಲು ಸಿಕ್ಕಿದ್ದು ಬ್ರಹ್ಮಗಿರಿಯಲ್ಲಿ. ಆದರೆ ದುರದೃಷ್ಟವಶಾತ್ ಬ್ರಹ್ಮಗಿರಿ ಉತ್ಖನನ ವರದಿ ಪ್ರಕಟವಾಗಲಿಲ್ಲ.
- ಭಾರತದ ಪುರಾತತ್ವ ಶೋಧನೆಯಲ್ಲಿ 1944-47 ಮತ್ತೊಂದು ಮಹತ್ತ್ವದ ಘಟ್ಟ. ಕೇಂದ್ರಸರ್ಕಾರದ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಸರ್ ಮಾರ್ಟಿಮರ್ ವೀಲರ್ ಅವರು ಭಾರತದ ಪುರಾತತ್ವ ಸಂಶೋಧನೆಯಲ್ಲಿ ಇಡೀ ದೇಶಕ್ಕೆ ಒಂದು ವ್ಯವಸ್ಥಿತ ಯೋಜನೆಯನ್ನು ರೂಪಿಸಿ. ಅದಕ್ಕನುಸಾರವಾಗಿ ಸಾಂಸ್ಕøತಿಕ ಘಟ್ಟಗಳನ್ನು ಬಿಂಬಿಸುವ ಪ್ರಮುಖ ನೆಲೆಗಳಲ್ಲಿ ವ್ಶೆಜ್ಞಾನಿಕವಾಗಿ ಉತ್ಖನನ ನಡೆಸಿದರು. ಉತ್ತರದಲ್ಲಿ ಸಿಂಧೂ ನಾಗರಿಕತೆಯ ಮುಖ್ಯನೆಲೆಗಳಲ್ಲಿ ಒಂದಾದ ಹರಪ್ಪ, ದಕ್ಷಿಣದಲ್ಲಿ ಕಬ್ಬಿಣ ಯುಗದ ಬೃಹತ್ ಶಿಲಾಸಂಸ್ಕøತಿಯ ಬಗ್ಗೆ ಹೆಚ್ಚು ಉಪಯುಕ್ತ ಮಾಹಿತಿಯನ್ನು ಕೊಡಬಹುದಾದ ಬ್ರಹ್ಮಗಿರಿ (ಚಿತ್ರದುರ್ಗ ಜಿಲ್ಲೆ ಕರ್ನಾಟಕ) ಮತ್ತು ಇತಿಹಾಸ ಆರಂಭಕಾಲದಲ್ಲಿ ರೋಮ್ ದೇಶದೊಡನೆ ವ್ಯಾಪಾರ ಸಂಪರ್ಕವಿದ್ದ ಅರಿಕಮೆಡು (ತಮಿಳುನಾಡು) ಈ ನೆಲೆಗಳಲ್ಲಿಯ ಉತ್ಖನನ ಕ್ರಮ ಹಾಗೂ ಶೋಧಿಸಿದ ಪ್ರಾಚ್ಯವಸ್ತುಗಳ ದೃಷ್ಟಿಯಿಂದ ಮಹತ್ತ್ವವಷ್ಟೇ ಅಲ್ಲ, ನಮ್ಮ ದೇಶದ ಪುರಾತತ್ವ ಸಂಶೋಧನೆಯಲ್ಲಿ ಆಯಾಯ ಪ್ರದೇಶಗಳ ಸಮಸ್ಯೆಗಳಿಗನುಗುಣವಾಗಿ ವ್ಯಾಪಕ ಯೋಜನೆ, ಫಲಿತಾಂಶಗಳ ಸಮನ್ವಯತೆ ಹಾಗೂ ವ್ಶೆಜ್ಞಾನಿಕ ಕ್ರಮಗಳಿಗೆ ಮಾದರಿಯಾದವು. ವಿ ಲರ್ ಅವರ ಉತ್ಖನನದಿಂದ ಇತಿಹಾಸ ಆರಂಭಕಾಲದ (ಆಂಧ್ರ ಕಲ್ಚರ್) ಕಬ್ಬಿಣ ಯುಗದ, ಬೃಹತ್ ಶಿಲಾಯುಗ ಮತ್ತು ಶಿಲಾಯುಗ ಸಂಸ್ಕøತಿಗಳ (ಪಾಲಿಶ್ಡ್ ಸ್ಟೋನ್ ಆಕ್ಸ್ ಕಲ್ಚರ್) ಸ್ಥೂಲ ಹಾಗೂ ವಿಶಿಷ್ಟ ಲಕ್ಷಣಗಳು, ಅನುಕ್ರಮ ಹಾಗೂ ವ್ಯಾಪಕತೆ ತಿಳಿಯಲು ಸಾಧ್ಯವಾಯಿತು; ಇವುಗಳ ಕಾಲಮಾನವನ್ನು ಸ್ಥೂಲವಾಗಿ ಗೊತ್ತುಪಡಿಸಲಾಯಿತು; ವಾಸ್ತವ್ಯದ ನೆಲೆಯ ಸಮೀಪದಲ್ಲಿದ್ದ ಬೃಹತ್ ಶಿಲಾ ಗೋರಿಗಳಿಗೂ ನೆಲೆಯಲ್ಲಿಯ ಕಬ್ಬಿಣ ಯುಗದ ಸಂಸ್ಕøತಿಗೂ ಸಂಬಂಧವನ್ನು ತಿಳಿಸಲಾಯಿತು; ಬೃಹತ್ ಶಿಲಾ ಗೋರಿಗಳನ್ನು ನಿರ್ಮಿಸಿದ ಜನರ ನೆಲೆಯನ್ನು ಪ್ರಥಮ ಬಾರಿಗೆ ಖಚಿತವಾಗಿ ನಿಸ್ಸಂಶಯವಾಗಿ ಗುರುತಿಸಲಾಯಿತು. ಒಟ್ಟಿನಲ್ಲಿ ಈ ಉತ್ಖನನದಿಂದ ಶಿಲಾಯುಗ ಸಂಸ್ಕøತಿಯ ವಿಷಯ, ಮುಖ್ಯ ಲಕ್ಷಣಗಳು ಹಾಗೂ ಆ ಜನರ ಶವ ಸಂಸ್ಕಾರ ಪದ್ಧತಿಯ ಕೆಲವಂಶಗಳು, ಪ್ರಾಗಿತಿಹಾಸ ಕಾಲದಿಂದ ಸಾಂಸ್ಕøತಿಕ ಬೆಳೆವಣಿಗೆಯಲ್ಲಿ ಈ ಸಂಸ್ಕøತಿಯ ಕಾಲಘಟ್ಟ ಮೊದಲಾದ ಮಹತ್ತ್ವದ ವಿಷಯಗಳು ಮೊದಲ ಸಲಕ್ಕೆ ತಿಳಿದು ಬಂದುವು. ಇದೇ ಸಮಯದಲ್ಲಿ ಕರ್ನಾಟಕದ ಸಂಗನಕಲ್ಲು (ಬಳ್ಳಾರಿ ಜಿಲ್ಲೆ) ಎಂಬಲ್ಲಿ 1954ರಲ್ಲಿ ಮಸ್ಕಿಯಲ್ಲಿ (ರಾಯಚೂರು ಜಿಲ್ಲೆ) ನಡೆದ ಉತ್ಖನನಗಳು ಬ್ರಹ್ಮಗಿರಿಯ ಉತ್ಖನನಗಳ ಫಲಿತಾಂಶವನ್ನು ಪುಷ್ಠೀಕರಿಸಿದುವು.
- ಹೊಸ ಶೋಧನೆಗಳು: 1950ರ ಅನಂತರದ ಅವಧಿ ಪುರಾತತ್ವ ಸಂಶೋಧನೆಯಲ್ಲಿ ಒಂದು ಪರ್ವಕಾಲವೆನ್ನಬಹುದು. ಇಲ್ಲಿಂದ ಸುಮಾರು 20-25 ವರ್ಷಗಳ ಕಾಲ ಭಾರತದ ಬಹುಭಾಗಗಳಲ್ಲಿ ಪ್ರಾದೇಶಿಕ ಅನ್ವೇಷಣೆ ಹಾಗೂ ಸಣ್ಣ ಉತ್ಖನನಗಳು ವೈಜ್ಞಾನಿಕವಾಗಿ ಭರದಿಂದ ನಡೆದುವು. ಹೆಚ್ಚು ಕಡಿಮೆ ಎಲ್ಲ ನದಿ ಪ್ರದೇಶಗಳಲ್ಲಿ ಮುಖ್ಯವಾಗಿ ಪ್ರಾಗೈತಿಹಾಸಿಕ ನೆಲೆಗಳನ್ನು ಶೋಧಿಸಲಾಯಿತು. ಅಲ್ಲಿಯ ತನಕ ಶೋಧವಾಗಿದ್ದ ಹಾಗೂ ಹೊಸದಾಗಿ ಶೋಧವಾದ ಸಂಸ್ಕøತಿಗಳ ಮುಖ್ಯ ಲಕ್ಷಣಗಳು, ಜೀವನ ವ್ಯವಸ್ಥೆ, ಪ್ರಾದೇಶಿಕ ಪ್ರಸಾರ, ಸಂಬಂಧ, ಕಾಲ ಮಾನ ಮೊದಲಾದ ಮಹತ್ವದ ವಿಷಯಗಳು ತಿಳಿದುಬಂದುವು. ಪುರಾತತ್ವದ ವ್ಯಾಪಕ ಮತ್ತು ಸೂಕ್ಷ್ಮ ಅಧ್ಯಯನಕ್ಕೆ ಅವಶ್ಯವಾದ ವಿವಿಧ ವಿಜ್ಞಾನಗಳ ತತ್ತ್ವ ಮತ್ತು ಕ್ರಮಗಳ ಸಮತ್ವಯ ಕ್ರಮ ಸುಮಾರು 1975ರಿಂದ ಆರಂಭವಾಗಿ ಮುಂದುವರಿದುಕೊಂಡು ಬರುತ್ತಿದೆ. ಪ್ರಾಗೈತಿಹಾಸಿಕ ಸಂಸ್ಕøತಿಗೆ ವಿವಿಧ ಹಂತಗಳ ಮಧ್ಯದ ಕೊಂಡಿಗಳು, ಪ್ರಾದೇಶಿಕ ವೈವಿಧ್ಯ, ಆಯಾ ಕಾಲದ ಪರಿಸರ ಮತ್ತು ಸಂಸ್ಕøತಿಗಳ ಬೆಳೆವಣಿಗೆಯಲ್ಲಿ ಅದರ ಪಾತ್ರ. ಸಾಮಾಜಿಕ ರಚನೆ ಹಾಗೂ ವರ್ಗ, ಪರಂಪರೆ ಮತ್ತು ಆರ್ಥಿಕಸ್ಥಿತಿ, ಉಪಕರಣಗಳನ್ನು ಮಾಡುತ್ತಿದ್ದ ಕ್ರಮ. ಕಾಲಮಾನ, ಜನವರ್ಗ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರಸಾರ ಮತ್ತು ಸಂಬಂಧ ಮೊದಲಾದ ಮಹತ್ತ್ವದ ವಿಷಯಗಳು ತಕ್ಕಮಟ್ಟಿಗೆ ತಿಳಿದುಬಂದಿವೆ. ಕೊರ್ತಾಲಯರ್ ನದಿ ಬಯಲಿನ ಪಲ್ಲಾವರಮ್, ಅತಿರಂಪಕ್ಕಮ್, ಗುಡಿಯಮ್, (ತಮಿಳುನಾಡು), ಕಾವೇರಿನದಿ ಪ್ರದೇಶದ ತಿರುಮಕೂಡಲು ನರಸೀಪುರ, ತುಂಗಭದ್ರಾ-ಕೃಷ್ಣಾ ಬಯಲಿನ ಹಳ್ಳೂರು, ತೆಕ್ಕಲಕೋಟೆ, ಮಸ್ಕಿ, ಅನಗವಾಡಿ, ಹುಣಸಗಿ, ತೇರದಾಳ, ಕುಪ್ಪಗಲ್ಲು, ಕೊಡೆಕಲ್ಲು (ಕರ್ನಾಟಕ), ಉತನೂರ್ ಪಾಳವಾಯ್, ನಾಗಾರ್ಜುನಕೊಂಡ ರಾಮಾಪುರಮ್, ರೇಣಿಗುಂಟ, ಬೇತಮ್ ಚೆರ್ಲ(ಆಂಧ್ರ ಪ್ರದೇಶ), ಭೀಮಾ-ಗೋದಾವರಿ ಬಹಲಿನ ಪಾಟ್ನೆ, ನೇವಾಸ, ಚಂದೋಳಿ, ಇನಾಮ್‍ಗಾಂಮ್ (ಮಹಾರಾಷ್ಟ್ರ), ನರ್ಮದಾ ಬಯಲಿನ ಮಹದೇವ-ಪಿಪರಿಯ, ಭಿಮ್‍ಬೇಟಕಾ, ಅದಂಗಡ, ನವಡಾಟೋಳಿ, ಮಹೇಶ್ವರಕಯಥಾ (ಮಧ್ಯಪ್ರದೇಶ), ಬೇಲಾನ್ ಬಯಲಿನ ಸರೈನಹಾರ ರೈ, ಲೆಖಾನಿಯಾ ಸಯ್‍ಪಾಯ್ ಬಹನನ್ ಬಾದ್, (ಉತ್ತರ ಪ್ರದೇಶ), ಕುಲಿಯನ ಕುಚೈ (ಒರಿಸ್ಸಾ), ಪಾಂಡುರಾಜಾರ ದಿಬಿ, ಬೀರ್ ಬಾನ್‍ಪುರ್ (ಪಶ್ಚಿಮ ಬಂಗಾಳ), ತಿಲವಾರ (ರಾಜಸ್ಥಾನ), ಲಾಂಫ್‍ನಾಜ್ (ಗುಜರಾತ್), ಬೂರ್ಜಹಾಮ್ ಗುಫಕ್ರಾಲ್ (ಜಮ್ಮು-ಕಾಶ್ಮಿರ) ಮುಂತಾದ ಅನೇಕ ಸ್ಥಳಗಳಲ್ಲಿ ವೈಜ್ಞಾನಿಕ ಕ್ರಮಗಳಿಂದ ಅನ್ವೇಷಣೆ, ಉತ್ಖನನ ಮತ್ತು ಅನ್ವೇಷಣೆ, ಉತ್ಖನನ ಮತ್ತು ಅಧ್ಯಯನಗಳನ್ನು ನಡೆಸಲಾಗಿದೆ. ಈ ಉತ್ಖನನಗಳ ಕೆಲವು ಮುಖ್ಯಾಂಶಗಳು ಗಮನಾರ್ಹವಾಗಿವೆ.
- ಮುಖ್ಯವಾಗಿ ಪೊಟ್ವಾರ್ ಪ್ರದೇಶದಲ್ಲಿ ಯೇಲ್-ಕೇಂಬ್ರಿಜ್ ವಿಶ್ವವಿದ್ಯಾಲಯಗಳ ತಂಡ ನಡೆಸಿದ ಅಧ್ಯಯನದ ಕೆಲವು ಅಂಶಗಳು ಗಿಲ್, ಗನ್‍ಸರ್, ಸಹ್ನಿ ಮತ್ತು ಖಾನ್ ಮೊದಲಾದ ವಿದ್ವಾಂಸರ ಸಂಶೋಧನೆಗಳಿಂದ ಸರಿಯಲ್ಲವೆಂದು ತಿಳಿದುಬಂದಿದೆ. ಇತ್ತೀಚೆಗೆ ಭೂವಿಜ್ಞಾನ ಮತ್ತು ಪ್ರಾಕ್ತನತಜ್ಞರು ಈ ಪ್ರದೇಶದ ಪ್ರಾಚೀನ ವಾಯುಗುಣ ಮತ್ತು ಪರಿಸರದ ವೈಪರೀತ್ಯಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತಿದ್ದಾರೆ. ಈ ಅಧ್ಯಯನದಿಂದ ಇಲ್ಲಿಯ ಶಿಲಾಯುಗ ಮಾನವನ ಸಂಸ್ಕøತಿ ಮತ್ತು ಅದರ ಬೆಳೆವಣಿಗೆಯಲ್ಲಿ ಬಗ್ಗೆ ಹೆಚ್ಚಿನ ಕುತೂಹಲಕಾರಿ ವಿಷಯಗಳು ತಿಳಿಯುವ ಸಾಧ್ಯತೆ ಇದೆ.
- ಆದಿ ಹಳೆಶಿಲಾಯುಗ ನೆಲೆಗಳು, ನದಿ ಪ್ರವಾಹದಿಂದ ಸ್ಥಳಾಂತರಿಸಲ್ಪಟ್ಟ ಉಪಕರಣಗಳುಳ್ಳ ಎರಡನೆಯ ನೆಲೆಗಳೇ ಹೊರತು ಮೂಲ ನೆಲೆಗಳಲ್ಲ. ಆದ್ದರಿಂದ ಈ ಮಾನವನ ಜೀವನ ಕ್ರಮ, ರೀತಿ ನೀತಿಗಳನ್ನು ತಿಳಿಯಲು ಇವು ಅನುಕೂಲವಾಗಿಲ್ಲ, ಉಪಕರಣಗಳನ್ನು ಮಾಡಲು ಉಪಯೋಗಿಸಿದ ವಿವಿಧ ಕಲ್ಲುಗಳು, ಇವುಗಳ ವೈಶಿಷ್ಟ್ಯ, ಉಪಕರಣಗಳನ್ನು ಯಾವ ಯಾವ ವಿಧಾನಗಳಿಂದ ರೂಪಿಸಲಾಯಿತು, ಅವುಗಳ ಆಕಾರ ವೈವಿಧ್ಯ, ಭಾರತದ ಒಳಗಿನ ಹಾಗೂ ಹೊರಗಿನ (ಅಂದರೆ ದಕ್ಷಿಣ ಪೂರ್ವ ಆಫ್ರಿಕ, ಪಶ್ಚಿಮ ಯೂರೋಪ್‍ಗಳಲ್ಲಿಯ) ಆದಿ ಹಳೆಶಿಲಾಯುಗ ಉಪಕರಣಗಳಿಗೆ ಹೋಲಿಕೆ ವ್ಯತ್ಯಾಸ, ಇವುಗಳಿದ್ದ ನೆಲೆಗಳು ಭೂವಿಜ್ಞಾನ ಅಧ್ಯಯನದಿಂದ ಊಹಿಸಲ್ಪಟ್ಟ ಆಗಿನ ವಾಯುಗುಣ ಮತ್ತು ಪರಿಸರ ಮೊದಲಾದ ವಿಷಯಗಳ ಬಗ್ಗೆ ಮಾತ್ರ ತಕ್ಕಮಟ್ಟಿಗೆ ಕೆಲವು ಅಂಶಗಳು ಗೊತ್ತಾಗಿವೆ. ಪೂರ್ವ ಆಫ್ರಿಕದ ಓಲ್ಡು ವಾಯ್ ಕಣಿವೆ, ಪಶ್ಚಿಮ ಜರ್ಮನಿಯ ನಿಯಾಂಡರ್ತಲ್, ಚೀನದ ಪೀಕಿಂಗ್, ಜಾವಾದ ಸೊಲೊ ನದಿ ಪ್ರದೇಶ ಮೊದಲಾದ ಸ್ಥಳಗಳಲ್ಲಿ ಶೋಧವಾದಂತೆ ಭಾರತದ ನೆಲೆಗಳಲ್ಲಿ ಆದಿ ಹಳೆಶಿಲಾಯುಗ ಮಾನವನ ಹಾಗೂ ಪ್ರಾಣಿ ಅಸ್ಥಿ ಅವಶೇಷಗಳ ಪಳೆಯುಳಿಕೆಗಳು ದೊರೆತಿಲ್ಲ. ಈ ಮಾನವನ ಮೂಲ ನೆಲೆಗಳ ಮತ್ತು ಪಳೆಯುಳಿಕೆಗಳ ಶೋಧನೆಗೆ ತೀವ್ರ ವೈಜ್ಞಾನಿಕ ಪ್ರಯತ್ನ ನಡೆದಿದೆ. 1982 ಡಿಸೆಂಬರ್ ತಿಂಗಳಿನಲ್ಲಿ ಆಕಸ್ಮಿಕವಾಗಿ ನರ್ಮದಾನದಿ ದಂಡೆಯ ನರಸಿಂಗಪುರದಲ್ಲಿ (ಮಧ್ಯಪ್ರದೇಶ) ಮಾನವನ ತಲೆ ಬುರುಡೆಯ ಪಳೆಯುಳಿಕೆಯ ಶೋಧವಾಯಿತು. ಇದರ ಅಧ್ಯಯನದಿಂದ ಸದ್ಯಕ್ಕೆ ಇದು ಆದಿ ಹಳೆ ಶಿಲಾಯುಗ ಮಾನವನದೆಂದೂ ನಿಯಾಂಡರ್ತಲ್ ಮಾನವನನ್ನು ತಕ್ಕಮಟ್ಟಿಗೆ ಹೋಲುವುದೆಂದೂ ಕಂಡುಬಂದಿದೆ.
- ಅಪರೂಪವಾಗಿ ಆದಿ ಹಳೆಶಿಲಾಯುಗದ ಕೆಲವೇ ಮೂಲ ನೆಲೆಗಳು ಶೋಧವಾಗಿವೆ. ಇವುಗಳಲ್ಲಿ ಹುಣಸಗಿ (ಗುಲ್ಬರ್ಗ ಜಿಲ್ಲೆ, ಕರ್ನಾಟಕ) ಚಿರ್ಕಿ-ನೇವಾಸ (ಮಹಾರಾಷ್ಟ್ರ)-ಇವು ಮಹತ್ತ್ವದವು. ಹುಣಸಗಿಯಲ್ಲಿ ತಾತ್ಕಾಲಿಕ ವಾಸಕ್ಕೆ ಅಡ್ಡಮರೆ ಮಾಡಿಕೊಂಡಿದ್ದರ ಗುರುತು. ಅಲ್ಲಿಯೇ ತನ್ನ ದೈನಂದಿನ ಜೀವನಕ್ಕೆ ಬೇಕಾದ ಕಲ್ಲಿನ ಉಪಕರಣಗಳನ್ನು ಮಾಡಲು ಉಪಯೋಗಿಸಿದ ಅಡಿಗಲ್ಲು ಮೊದಲಾದವು ಉತ್ಖನನದಲ್ಲಿ ಶೋಧವಾಗಿವೆ. ಇವಲ್ಲದೆ ಬಲುದೂರದಿಂದ ಬುದ್ಧಿಪೂರ್ವಕವಾಗಿ ತಂದ ಕೆಮ್ಮಣ್ಣು ಗಟ್ಟಿಗಳೂ ದೊರಕಿವೆ. ಇವು ಬಣ್ಣಹಾಕುವುದಕ್ಕೆ, ಇಲ್ಲವೆ ಬರೆಯುವುದಕ್ಕೆ ಉಪಯೋಗಿಸಿದ್ದಿರಬೇಕು. ಉತ್ಖನನದಲ್ಲಿ ದೊರೆತ ಪ್ರಾಚೀನ ಪುಷ್ಟರೇಣುಗಳ ಅಧ್ಯಯನದಿಂದ ಇಲ್ಲಿಯ ಸಸ್ಯಸಂಪತ್ತು ಸದ್ಯ ಈ ಪ್ರದೇಶದಲ್ಲಿ ಕಂಡುಬರುವಷ್ಟು ಅಥವಾ ಇನ್ನೂ ಸಮೃದ್ಧವಾಗಿ ಆ ಕಾಲದಲ್ಲಿರಬೇಕೆಂದು ತರ್ಕಿಸಲಾಗಿದೆ.
- ಘಟಪ್ರಭಾ ನದಿ ಬಯಲಿನ ಅನಗವಾಡಿ (ಬಿಜಾಪುರ ಜಿಲ್ಲೆ, ಕರ್ನಾಟಕ) ಎಂಬಲ್ಲಿಯ ಉತ್ಖನನ ಗುಂಡಿಯ ಕೆಳಗಿನ ಪದರಗಳಲ್ಲಿ ಆದಿ ಹಳೆಶಿಲಾಯುಗದ ನಸುಗೆಂಪು ಮರಳುಕಲ್ಲಿನ ಉಪಕರಣಗಳೂ ಮೇಲಿನ ಪದರಗಳಲ್ಲಿ ಇಂಥ ಉಪಕರಣಗಳ ಜೊತೆಗೆ ಮಧ್ಯ ಹಳೆಶಿಲಾಯುಗದ ನಸುಗೆಂಪು ಮರಳುಕಲ್ಲಿನ ಸಣ್ಣ ಉಪಕರಣಗಳೂ ದೊರತಿವೆ. ಆದಿ ಹಳೆಶಿಲಾಯುಗ ಘಟ್ಟದಿಂದ ಕ್ರಮೇಣ ಮಧ್ಯ ಹಳೆಶಿಲಾಯುಗ ಘಟ್ಟಕ್ಕೆ ನಡೆದ ಸಾಂಸ್ಕøತಿಕ ಬೆಳೆವಣಿಗೆಯನ್ನು ಈ ಶೋಧನೆ ಸೂಚಿಸುತ್ತದೆ. ನರ್ಮದಾನದಿ ಬಯಲಿನ ಮೇಲಿನ ಮಹಾದೇವ ಪಿಪರಿಯಾದಲ್ಲೂ ಇದೇ ರೀತಿಯ ಸಾಂಸ್ಕøತಿಕ ಬೆಳೆವಣಿಗೆಯ ಅಂಶ ಕಂಡುಬಂದಿದೆ. ಇದರಂತೆಯೇ ಮಧ್ಯ ಹಳೆ ಶಿಲಾಯುಗದ ಘಟ್ಟದಿಂದ ಅಂತ್ಯ ಹಳೆ ಶಿಲಾಯುಗ ಘಟ್ಟದ ಸಾಂಸ್ಕøತಿಕ ಬೆಳೆವಣಿಗೆಯ ಅಂಶ ತಪತಿ ನದಿ ಬಯಲಿನ ಪಾಟ್ನೆಯಲ್ಲಿಯ ಉತ್ಖನನದಿಂದ ತಿಳಿದಿದೆ. ಹೀಗೆ ಪ್ರಾಯಶಃ ವಾಯುಗುಣ ವೈಪರೀತ್ಯದ ಪರಿಣಾಮವಾಗಿ ಪ್ರಾಣಿ ಹಾಗೂ ಸಸ್ಯವರ್ಗಗಳಲ್ಲಿ ತೀರ ಬದಲಾವಣೆಯಾದ್ದರಿಂದ ಮಾನವ ಬದಲಾದ ಪರಿಸರಕ್ಕೆ ಅನುಗುಣವಾಗಿ ತನ್ನ ಜೀವನಕ್ರಮವನ್ನು ಹೊಂದಿಸಿಕೊಳ್ಳುವುದಕ್ಕೆ. ಆಹಾರ ಸಂಪಾದನೆಗೆ, ವಸತಿ ಅನುಕೂಲಕ್ಕೆ ತಕ್ಕ ಉಪಕರಣಗಳನ್ನು ಮಾಡಿಕೊಳ್ಳಬೇಕಾಯಿತು. ಆದಿ-ಮಧ್ಯ-ಅಂತ್ಯ ಹಳೆಶಿಲಾಯುಗ ಘಟ್ಟಗಳು ಈ ರೀತಿ ಮಾನವನ ಜೀವನ ಕ್ರಮದ ಬೆಳೆವಣಿಗೆಯ ಮುಖ್ಯ ಘಟ್ಟಗಳಾಗಿದ್ದು, ಇತ್ತೀಚಿನ ಶೋಧನೆಗಳು ಈ ಘಟ್ಟಗಳ ಮಧ್ಯದ ಕೊಂಡಿಗಳನ್ನು ಒದಗಿಸಿವೆ. ಈಗ ಈ ಬಗ್ಗೆ ಹೆಚ್ಚು ಅಧ್ಯಯನ ನಡೆಯುತ್ತಿದೆ.
- ಅಂತ್ಯ ಹಳೆ ಶಿಲಾಯುಗ: ಪಶ್ಚಿಮ ಯೂರೋಪಿನ ಪ್ರಾಗೈತಿಹಾಸದಲ್ಲಿದ್ದಂತೆ ಭಾರತದಲ್ಲಿಯೂ ಅಂತ್ಯ ಹಳೆ ಶಿಲಾಯುಗದ ಒಂದು ಘಟ್ಟ ಇತ್ತೆ ಎಂಬ ಪ್ರಶ್ನೆ ಕೆಲಕಾಲ ವಿದ್ವಾಂಸರನ್ನು ಕಾಡಿದ್ದುಂಟು. ಏಕೆಂದರೆ ಈ ಘಟ್ಟದ ಸ್ಪಷ್ಟ ನೆಲೆಗಳು ತೀರ ವಿರಳವಾಗಿದ್ದುವು. ಆದರೆ ಈಚಿನ ಶೋಧನೆಗಳಿಂದ, ಭಾರತದ ವಿವಿಧ ಭಾಗಗಳಲ್ಲಿ ಹಲವಾರು ನೆಲೆಗಳು ಪತ್ತೆಯಾಗಿ, ಈ ಘಟ್ಟದ ಸ್ಥೂಲ ಚಿತ್ರ ತಿಳಿದು ಬಂದಿದೆ. ಈ ದಿಸೆಯಲ್ಲಿ ಬೇತಮ್‍ಚೆರ್ಲದಲ್ಲಿರುವ ಗುಹೆಯೊಂದರಲ್ಲಿ ಮಾಡಿದ ಉತ್ಖನನ ಮಹತ್ತ್ವದ್ದು. ಇಲ್ಲಿ ಕಲ್ಲಿನ ಉಪಕರಣಗಳ ಜೊತೆಗೆ ವಿವಿಧ ಜಾತಿಯ ಜಿಂಕೆ, ಖಡ್ಗಮೃಗ, ಕುರು ಮೊದಲಾದ ಪ್ರಾಣಿಗಳ ಆಸ್ಥಿ ಅವಶೇಷಗಳು ದೊರೆತಿವೆ. ಇದರಿಂದ ಆ ಕಾಲದಲ್ಲಿ ತಂಪಾದ ವಾಯುಗುಣ, ಸಮೃದ್ಧ ಸಸ್ಯವರ್ಗ ಇದ್ದಿರಬೇಕೆಂಬ ಊಹೆ ಆ ಗುಹೆಯಿಂದ ಸಂಗ್ರಹಿಸಲಾದ ಮಣ್ಣಿನ ರಾಸಾಯನಿಕ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ, ಅಲ್ಲದೆ, ಇಷ್ಟು ಪ್ರಾಚೀನ ಸಾಂಸ್ಕøತಿಕ ಘಟ್ಟದಲ್ಲಿ ಕುರಿಯ ಆಸ್ಥಿ ಅವಶೇಷಗಳು ಮೊದಲ ಬಾರಿಗೆ ದೊರೆತಿರುವುದು ಇಲ್ಲಿಯೇ. ಕಲ್ಲಿನ ಉಪಕರಣಗಳ ಜೊತೆಗೆ ಪ್ರಾಣಿಗಳ ಅಸ್ಥಿ ಉಪಕರಣಗಳೂ ದೊರೆತಿವೆ ಈ ಪ್ರದೇಶದ ಗುಹೆಗಳಲ್ಲಿ ಕೆಮ್ಮಣ್ಣಿನ ವರ್ಣ ಚಿತ್ರಗಳೂ ಇವೆ. ಇವುಗಳಲ್ಲಿ ಕೆಲವು ಇಲ್ಲಿಯ ಅಂತ್ಯ ಹಳೆ ಶಿಲಾಯುಗದ ಹಂತದ ಜನರಿಂದ ರಚಿಸಲ್ಪಟ್ಟಿರಬಹುದೆಂದು ತರ್ಕಿಸಲಾಗಿದೆ.
- ಸೂಕ್ಷ್ಮ ಶಿಲಾಯುಗ: ಈ ಸಾಂಸ್ಕøತಿಕ ಹಂತದ ಕೆಲವು ಮುಖ್ಯಾಂಶಗಳು ತಮಿಳುನಾಡಿನ ತೆರಿ (ತಿರುನೇಲ್‍ಬೆಲಿ ಪ್ರದೇಶ) ಹಾಗೂ ಕೇರಳ-ಕರ್ನಾಟಕ ಸಮುದ್ರ ತೀರ ಪ್ರದೇಶದಲ್ಲಿಯ ನೆಲೆಗಳ ಅಧ್ಯಯನದಿಂದಲೂ ಬೀರ್‍ಭಾನ್‍ಪುರ (ಪಶ್ಚಿಮ ಬಂಗಾಳ). ಬೆ ಲಾನ್ ನದಿ ಪ್ರದೇಶದಲ್ಲಿ ಲೆಖಾನಿಯಾ ಮತ್ತು ಸರೈನಹಾರ್ ರೈ (ಉತ್ತರ ಪ್ರದೇಶ), ಆದಂಗಡ್ (ಮಧ್ಯ ಪ್ರದೇಶ), ಲಾಂಘನಾಜ್ (ಗುಜರಾತ್) ಹಾಗೂ ಬಾಗೋರ್ ಮತ್ತು ತಿಲವಾರ (ರಾಜಸ್ಥಾನ್) ಗಳಲ್ಲಿಯ ಉತ್ಖನನಗಳಿಂದಲೂ ಬೆಳಕಿಗೆ ಬಂದಿವೆ. ತಮಿಳುನಾಡು-ಕೇರಳ-ಕರ್ನಾಟಕದ ಹಲವು ನೆಲೆಗಳಲ್ಲಿಯ ಕೆಲವು ಉಪಕರಣಗಳು, ಶ್ರೀಲಂಕಾದ ಬೇಲಿ-ಲೇನಾ-ಅತುಲ ಮೊದಲಾದ ನೆಲೆಗಳಲ್ಲಿಯ ಇಂಥ ಸಮಕಾಲೀನ ಸಾಂಸ್ಕøತಿಕ ಘಟ್ಟದ ಉಪಕರಣಗಳನ್ನು ಹೋಲುತ್ತವೆ. ಪ್ರಾಯಶಃ ಈ ಹೋಲಿಕೆ ಈ ಪ್ರದೇಶಗಳ ಜನರ ಪರಸ್ಪರ ಸಂಪರ್ಕವನ್ನೂ ಒಡನಾಟವನ್ನೂ ಸೂಚಿಸುತ್ತದೆಂದು ಭಾವಿಸಲಾಗಿದೆ. ಬೀರ್‍ಭಾನ್‍ಪುರ ಸಂಸ್ಕøತಿಯ ಘಟ್ಟದಲ್ಲಿ ತ್ರಿಕೋಣ, ವಿಷಮ ಚತುರಸ್ರಾಕಾರ (ಟ್ರಿಪೀಸಿಯಮ್) ಮೊದಲಾದ ಜ್ಯಾಮಿತಿ ಆಕೃತಿಯ ಉಪಕರಣಗಳಿವೆ. ಲೆಖಾನಿಯಾ, ಸರೈನಹಾರ್ ರೈ ಎಂಬಲ್ಲಿ ಎರಡು ಹಂತಗಳನ್ನು ಗುರುತಿಸಲಾಗಿದೆ. ಈ ಘಟ್ಟದ ಜನರು ವಾಸಕ್ಕೆ ಕಟ್ಟಿಕೊಂಡಿದ್ದ ದುಂಡನೆಯ ಗುಡಿಸಲುಗಳ, ಕೈಯಿಂದ ಮಾಡಿದ ಮಡಕೆಗಳ, ಆಹಾರಕ್ಕೆ ಉಪಯೋಗಿಸಿದ್ದಿರಬಹುದಾದ ಗೋಧಿಯ ಅವಶೇಷಗಳು ಶೋಧವಾಗಿವೆ. ಜೊತೆಗೆ ಆಹಾರಕ್ಕಾಗಿ ಬೇಟೆಯಾಡಿದ್ದ ಹಲವಾರು ಪ್ರಾಣಿಗಳ ಅಸ್ಥಿ ಅವಶೇಷ ದೊರೆತಿವೆ. ಶವಸಂಸ್ಕಾರ ಪದ್ಧತಿಯ ಗುರುತುಗಳೂ ಇವೆ. ಶವವನ್ನು ಪೂರ್ಣವಾಗಿ ಪೂರ್ವ-ಪಶ್ಚಿಮಾಭಿಮುಖವಾಗಿ ನೆಟ್ಟಗೆ ಗುಂಡಿಯಲ್ಲಿ ಹೂಳವಾಗುತ್ತಿತ್ತು. ಆದರೆ ಶವಸಂಸ್ಕಾರಕ್ಕೆ ಸಂಬಂಧಿಸಿದ ಇತರ ಯಾವುದೇ ವಸ್ತುಗಳು ಲಭ್ಯವಾಗಿಲ್ಲ. ಕೆಲವು ಅಸ್ಥಿಪಂಜರಗಳ ಕಿವಿಗಳಲ್ಲಿ ಪ್ರಾಣಿ ಅಸ್ಥಿಯ ಉಂಗುರಾಕಾರದ ಓಲೆಗಳಿದ್ದುದು ಕಂಡುಬಂದಿದೆ.
- ಲಾಂಘ್‍ನಾಜ್‍ನಲ್ಲಿಯೂ ಈ ರೀತಿ ಮೂರು ಹಂತಗಳನ್ನು ಗುರುತಿಸಲಾಗಿದ್ದು ಮಧ್ಯದ (ಎರಡನೆಯ) ಹಂತದಲ್ಲಿ ಸೂಕ್ಮ ಶಿಲಾಯುಧಗಳೊಡನೆ ಶಿಲಾಯುಗದ ಉಜ್ಜಿ ನಯಮಾಡಿದ ಒಂದು ಕೊಡಲಿ, ಉಂಗುರ, ಕಲ್ಲು ಹಾಗೂ ತಾಮ್ರದ ಚಾಕು ಸಿಕ್ಕಿವೆ. ಪ್ರಾಯಶಃ ಈ ಜನರಿಗೆ ಸಮೀಪದಲ್ಲಿದ್ದ ಕೊನೆಯ ಹಂತದ ಹರಪ್ಪ ಸಂಸ್ಕøತಿಯ ಜನರೊಡನೆ ಸಮಪರ್ಕವಿದ್ದಿರುವ ಸಾಧ್ಯತೆಯನ್ನು ಊಹಿಸಲಾಗಿದೆ. ಇಲ್ಲಿಯ ಒಂದು ಕುಣಿಯಲ್ಲಿ ಮಾತ್ರ (ಹೆಚ್ಚು ಕಡಿಮೆ ಗರ್ಭದಲ್ಲಿಯ ಶಿಶುವಿನಂತೆ) ಶವದ ಕಾಲುಗಳನ್ನು ಮಡಚಿ ಮಂಡಿಯನ್ನು ಹೊಟ್ಟೆಯ ಕಡೆ ಮೇಲಕ್ಕೆತ್ತಿ, ಶವವನ್ನು ಮುಚ್ಚಲಾಗಿತ್ತು. ಉಳಿದವುಗಳಲ್ಲಿ ಇದ್ದ ಅಸ್ಥಿ ಅವಶೇಷಗಳು ಚೆಲ್ಲಾಪಿಲ್ಲಿಯಾಗಿದ್ದುವು. ಇಲ್ಲಿ ದೊರೆತ ಜನರ ಅಸ್ಥಿ ಅವಶೇಷಗಳ ಅಧ್ಯಯನದಿಂದ ಮೆಡಿಟರೇನಿಡ್ ಮತ್ತು ವೆಡ್ಡಿಡ್ ಎಂಬ ಎರಡು ಬಗೆಯ ಜನ ಇಲ್ಲಿದ್ದರೆಂದು ತಿಳಿಯಲಾಗಿದೆ.
- ಕೊಠಾರಿ ನದಿದಂಡೆ ಮೇಲಿರುವ ಬಾಗೋರ್‍ನಲ್ಲಿ ಈ ಘಟ್ಟದ ಸಂಸ್ಕøತಿಯಲ್ಲಿ ಮೂರು ಹಂತಗಳನ್ನು ಗುರುತಿಸಲಾಗಿದೆ. ಪ್ರಾಚೀನ ಹಂತದಲ್ಲಿ ವಾಸಕ್ಕೆ ಕಟ್ಟಿ ಕೊಂಡಿದ್ದ ವರ್ತುಲಾಕಾರದ ಗುಡಿಸಲುಗಳ ನೆಲಕ್ಕೆ ಕಲ್ಲಿನ ಚಕ್ಕೆಗಳನ್ನು ಹಾಸಲಾಗಿತ್ತು. ಗುಡಿಸಲಿನಲ್ಲಿ ವಿಪುಲವಾಗಿ ಪ್ರಾಣಿಗಳ ಎಲುಬುಗಳಿದ್ದು ಅವುಗಳಲ್ಲಿ ಕೆಲವು ಕರಕಲಾಗಿದ್ದವು. ಆಹಾರಕ್ಕಾಗಿ ಮಾಂಸವನ್ನು ಬೆಂಕಿಯಿಂದ ಸುಟ್ಟಿದ್ದರಿಂದ ಎಲುಬು ಹೀಗೆ ಕರಕಲಾಗಿರಬೇಕು. ಮಜ್ಜೆಗಾಗಿ (ಬೋನ್‍ಮ್ಯಾರೊ) ಸೀಳಿದ ಎಲುಬುಗಳೂ ಇಲ್ಲಿ ದೊರೆತಿವೆ. ಸೂಕ್ಷ್ಮ ಶಿಲಾಯುಧಗಳನ್ನೂ ಇಲ್ಲಿ ಸಿದ್ಧಮಾಡಲಾಗುತ್ತಿತ್ತು. ಮನೆಯೊಳಗೆ ಶವವನ್ನು ಹೂಳಲಾಗುತ್ತಿತ್ತು. ಎರಡನೆಯ ಹಂತದಲ್ಲಿ ತಾಮ್ರದ ಉಪಕರಣಗಳು ಮತ್ತು (ಸರಗಳಿಂದ ಚದರಿದ) ಮಣಿಗಳು ದೊರೆತಿವೆ. ಆದ್ದರಿಂದ ಈ ಹಂತದ ಜನ ಶಿಲಾ-ತಾಮ್ರಯುಗ ಸಂಸ್ಕøತಿಗೆ ಸಮಕಾಲೀನವಾಗಿದ್ದು ಸಮೀಪದಲ್ಲಿದ್ದ ಈ ಸಂಸ್ಕøತಿಯ ಜನರೊಡನೆ ಸಂಪರ್ಕವಿಟ್ಟುಕೊಂಡಂತೆ ಕಾಣುತ್ತದೆ. ಇವರು ಕೈಯಿಂದ ರೂಪಿಸಿದ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ಇವುಗಳ ಮೇಲೆ ಹರಿತವಾದ ಉಪಕರಣದ ಮೊನೆಯಿಂದ ಮೂಡಿಸಿದ ರೇಖಾಚಿತ್ರ ಹಾಗೂ ಮಣ್ಣನ್ನು ಮೆತ್ತಿ ರೂಪಿಸಿದ ಚಿತ್ರಗಳು ಇವೆ. ಈ ಹಂತದಲ್ಲಿ ಶವ ಸಂಸ್ಕಾರ ಪದ್ಧತಿ ಹೆಚ್ಚು ಬೆಳೆದಿತ್ತು. ಶವಕುಣಿಗಳಲ್ಲಿ ಶವದ ಜೊತೆಯಲ್ಲಿ ಒಂದೆರಡು ಮಡಕೆ-ಕುಡಿಕೆಗಳು, ಅಸ್ಥಿಯ ಮಣಿಗಳು, ತಾಮ್ರದ ಬಾಣದ ಮೊನೆಗಳು, ತೂತು ಮಾಡಿದ ಮೊನೆಗಳು ದೊರೆತಿವೆ. ಕೊನೆಯ ಹಂತ ಇತಿಹಾಸ ಆರಂಭ ಕಾಲದ್ದು. ಈ ಹಂತದಲ್ಲಿ ಇಣಿಲುಳ್ಳ ಗೂಳಿ, ಆಕಳು, ಎಮ್ಮೆ, ಕುರಿ, ಹೋತ, ಹಂದಿ, ಕರಿಬಾತು, ಮೊಲ, ನರಿ, ಮುಂಗುಸಿ, ಜಿಂಕೆ, ಸಾರಂಗಗಳು; ಆಮೆ, ಮೀನು ಮೊದಲಾದ ಪ್ರಾಣಿಗಳ ಅಸ್ಥಿಗಳನ್ನು ಗುರುತಿಲಾಗಿದೆ.
- ನೂತನ ಹಾಗೂ ಶಿಲಾ-ತಾಮ್ರಯುಗ ಸಂಸ್ಕøತಿ: ಸೂಕ್ಷ್ಮ ಶಿಲಾಯುಗದ ಕೊನೆಯ ಹಂತ ಶಿಲಾ-ತಾಮ್ರಯುಗ ಘಟ್ಟಕ್ಕೆ ಸಮಕಾಲೀನವೆಂದು ಮೇಲೆ ಹೇಳಿದೆಯಷ್ಟೆ. ಸಿಂಧೂ ಬಯಲಿನ ಹಾಗೂ ಅಕ್ಕಪಕ್ಕ ಪ್ರದೇಶಗಳಲ್ಲಿಯ ಹರಪ್ಪ ನಾಗರೀಕತೆ ಈ ಶಿಲಾ-ತಾಮ್ರಯುಗಕ್ಕೆ ಸೇರಿದ್ದು. ಇದಲ್ಲದೆ ಭಾರತದ ಬೇರೆಬೇರೆ ಪ್ರದೇಶಗಳಲ್ಲಿ ಹರಪ್ಪ ಸಂಸ್ಕøತಿಯ ಸಮಕಾಲೀನ ಹಾಗೂ ಅನಂತರದ ಕಾಲದ ಭಿನ್ನ ಭಿನ್ನ ಸಾಂಸ್ಕøತಿಕ ವರ್ಗಗಳಿದ್ದುವು. ಕಾವೇರಿ ನದಿ ಬಯಲು ಪ್ರದೇಶ ಹಾಗೂ ಶವರಾಯ್ ಬೆಟ್ಟಶ್ರೇಣಿ ಪ್ರದೇಶ. ಒರಿಸ್ಸಾ-ಬಂಗಾಳ-ಬಿಹಾರ್-ಅಸ್ಸಾಮ್ ಪ್ರದೇಶ ಮತ್ತು ಶ್ರೀನಗರ ಪ್ರದೇಶದಲ್ಲಿ ವಿವಿಧ ರೀತಿಯ ಶಿಲಾಯುಗದ, ಕೃಷ್ಣಾ ತುಂಗಭದ್ರಾ ಬಯಲಿನಲ್ಲಿ ಹೊಸ ಶಿಲಾ-ತಾಮ್ರಯುಗ ಹಂತದ, ಗೋದಾವರಿ-ತಾಪಿ-ನರ್ಮದಾ ಹಾಗೂ ಮಧ್ಯ ಭಾರತದ ಪ್ರದೇಶಗಳಲ್ಲಿ ಶಿಲಾ-ತಾಮ್ರಯುಗ ಸಂಸ್ಕøತಿಯ ನೂರಾರು ನೆಲೆಗಳು ದೊರಕಿವೆ. ಗಂಗಾ-ಯಮುನಾ ಬಯಲಿನಲ್ಲಿ ಅಲ್ಲಲ್ಲಿ ಅಪೂರ್ವವಾದ ವಿವಿಧ ಬಗೆಯ ತಾಮ್ರ ಉಪಕರಣಗಳ ಸಂಗ್ರಹಗಳು, ಬೆರಳಿನಿಂದ ಉಜ್ಜಿದಾಗ ಕೆಮ್ಮಣಿನ ಬಣ್ಣ ಬಿಡುವ ಕೆಮ್ಮಣ್ಣು ಬಣ್ಣದ ಮಡಕೆ ಅವಶೇಷಗಳುಳ್ಳ ನೆಲೆಗಳು ಶೋಧವಾಗಿವೆ. ಇವುಗಳಲ್ಲಿ ಹಲವಾರು ಮುಖ್ಯ ನೆಲೆಗಳು ಉತ್ಖನನಗೊಂಡಿವೆ.
- ನೂತನ ಶಿಲಾಯುಗ ಸಂಸ್ಕøತಿ: ಶವರಾಯ್ ಬೆಟ್ಟ ಪ್ರದೇಶದಲ್ಲಿ ರಾಬರ್ಟ್ ಬ್ರೂಸ್‍ಫುಟ್ ಅವರ ಕಾಲದಿಂದಲೂ ಉಜ್ಜಿ ನಯಮಾಡಿದ ತ್ರಿಕೋನಾಕಾರದ ನೂರಾರು ಕೊಡಲಿಗಳನ್ನು ಸಂಗ್ರಹಿಸಲಾಗಿದೆ. ಆದರೆ ಇವುಗಳ ಜೊತೆಗೆ ಬೇರೆ ಅವಶೇಷಗಳು ದೊರತಿಲ್ಲ. ಈ ಕೊಡಲಿಗಳು ಗಡಿಗೆ-ಮಡಕೆಗಳನ್ನು ಮಾಡಿದ ಅಥವಾ ಇವುಗಳ ತಯಾರಿಕೆಯ ಪೂರ್ವ ಹಂತದ ಜನರದ್ದೆ ಎಂಬ ಪ್ರಶ್ನೆ ಎದುರಾಗಿದೆ. ಕಾವೇರಿ ನದಿದಂಡೆ ಮೇಲಿನ ತಿರುಮಕೂಡಲು ನರಸೀಪುರದಲ್ಲಿ ನೂತನ ಶಿಲಾಯುಗ ಹಾಗೂ ಅನಂತರ ಕಾಲದ ಜನವರ್ಗಗಳ ವಾಸ್ತವ್ಯದ ನೆಲೆಯಿದೆ. ನೂತನ ಶಿಲಾಯುಗ ಘಟ್ಟದಲ್ಲಿ ಇಂಥ ಕೊಡಲಿಗಳ ಜೊತೆಗೆ ಬೂದು ವರ್ಣದ ಎರಡು ಬಗೆಯ ಮೃತ್ ಪಾತ್ರೆಗಳು ಗಮನಾರ್ಹವಾಗಿವೆ (ಒಂದು, ಒಳಲೆಯಾಕಾರದ ಅರ್ಧಗೋಲಾಕೃತಿಯ ಬಟ್ಟಲು, ಮತ್ತೊಂದು, ತಲೆಯಾನಿಕೆ). ಈ ತಲೆಯಾನಿಕೆ ವಿಶಿಷ್ಟವಾಗಿದ್ದು, ಆಫ್ರಿಕದ ನೈಲ್‍ನದಿಯ ಈಜಿಪ್ಟ್ ನಾಗರಿಕತೆಯ ಟೂಟನ್‍ಖಾಮೆನ್ (ಕ್ರಿ.ಪೂ.14ನೆಯ ಶತಮಾನ) ರಾಜನ ಪಿರಮಿಡ್ಡಿನಲ್ಲಿ ದೊರೆತ ಬಿಳಿ ದಂತ ಹಾಗೂ ಉತ್ತಮ ಜಾತಿ ಕಲ್ಲಿನ ತಲೆಯಾನಿಕೆಗಳಿಗೆ ಅತ್ಯಂತ ಸಮೀಪವಾಗಿ ಹೋಲುತ್ತದೆ. ಇದರಿಂದಾಗಿ ಈ ಕಾಲದಲ್ಲಿ ಇವೆರಡು ಪ್ರದೇಶಗಳಲ್ಲಿ ಪರಸ್ಪರ ಸಾಂಸ್ಕøತಿಕ ಸಂಬಂಧವಿದ್ದಿರಬೇಕೆಂಬ ಊಹೆಗೆ ಅವಕಾಶವಾಗಿದೆ. ಇದನ್ನು ಪುಷ್ಟೀಕರಿಸುವಂಥ ಮತ್ತೊಂದು ಶೋಧನೆ ತುಂಗಭದ್ರಾ ಮೇಲ್ದಂಡನೆಯ ಹಳ್ಳೂರಿನಲ್ಲಿ ಆಗಿದೆ. ಇಲ್ಲಿ ಕಬ್ಬಿಣಯುಗದ ಆದಿಭಾಗದಲ್ಲಿ ದೊರೆತ ಕರಕಲು ರಾಗಿ ಕಾಳಿನ ವಿಶ್ಲೇಷಣೆಯಿಂದ ಈ ರಾಗಿ ತಳಿ ಮೂಲತಃ ಆಫ್ರಿಕದ ಕಾಡುರಾಗಿಯೆಂದೂ ಇದನ್ನು ಅಲ್ಲಿಂದ ತಂದಿರಬಹುದೆಂದೂ ತರ್ಕಿಸಲಾಗಿದೆ. ತಿರುಮಕೂಡಲು ನರಸೀಪುರದ ನೂತನ ಶಿಲಾಯುಗ ಸಂಸ್ಕøತಿಯ ಮತ್ತೆರಡು ಅಂಶಗಳು ಗಮನಾರ್ಹ. ಈ ಸಂಸ್ಕøತಿಯ ಕೊನೆಯ ಭಾಗಕ್ಕೆ ಸೇರಿದ ಒಂದು ಶವಕುಣಿಯಲ್ಲಿ ನೆಟ್ಟಿಗೆ ಮಲಗಿಸಿದ ಅಸ್ಥಿಪಂಜರದ ಕುತ್ತಿಗೆಯ ಬಳಿ ತಲೆಯಾನಿಕೆ ಇತ್ತು. ಇದರಿಂದ ಶವಸಂಸ್ಕಾರದ ಪದ್ಧತಿಯ ಜೊತೆಗೆ ಅಲ್ಲಿಯ ತನಕ ದೊರೆತ ತಲೆಯಾನಿಕೆಯ ಉಪಯೋಗ ತಿಳಿಯಲು ಸಾಧ್ಯವಾಯಿತು.
- ಈ ಸಂಸ್ಕøತಿಯ ಜನರ ವಾಸ್ತವ್ಯದ ಕೊನೆಯ ಭಾಗದ ಸಮಯದಲ್ಲಿ ಕೃಷ್ಣಾ ಬಯಲಿನ ಶಿಲಾ-ತಾಮ್ರಯುಗ ಸಂಸ್ಕøತಿಯ ಒಂದೆರಡು ಅಂಶಗಳು ದುರ್ಬಲವಾಗಿ ಒಳಸೇರಿದಂತೆ ಕಾಣುವುದು. ಈ ಹಂತದಲ್ಲಿ ಶಿಲಾ-ತಾಮ್ರಯುಗ ಸಂಸ್ಕøತಿಯ ವಿಶಿಷ್ಟ ಅಂಶಗಳಾದ 'ಅಂಕುಡೊಂಕು ಏಣಿ ಕೌಶಲದಿಂದ ತೆಗೆದ ಕಪ್ಪು ಜಾಸ್ಪರ್ ನೀಳಚಕ್ಕೆಗಳ, ನೇರಿಳೆ ವರ್ಣದ ರೇಖಾ ಚಿತ್ರವುಳ್ಳ ಹೊಳಪಿನ ಕೆಂಪು ಲೇಪನದ ಮೃತ್ ಪಾತ್ರೆ ಚೂರುಗಳು ದೊರೆತವು. ತರುವಾಯ ಕಬ್ಬಿಣ ಯುಗದ ಬೃಹತ್ ಶಿಲಾಸಂಪ್ರದಾಯದ ಜನರು ಈ ಪ್ರದೇಶದಲ್ಲಿ ಕಾಣಿಸಿಕೊಂಡು ಇಲ್ಲಿಯ ಜನರೊಡನೆ ನೆಲಸಿದರು. ತತ್ಪರಿಣಾಮವಾಗಿ ಸ್ವಲ್ಪ ಸಮಯದಲ್ಲಿ ಕಬ್ಬಿಣ ಉಪಕರಣಗಳ, ಆಯುಧಗಳ ಪರಿಣಾಮಕಾರಿಯಾದ ಬಳಕೆ ಹೆಚ್ಚಾದುದರಿಂದ ಶಿಲಾಯುಧಗಳ ತಯಾರಿಕೆ ಮತ್ತು ಉಪಯೋಗ ಬಿಟ್ಟುಹೋಯಿತು.
- ಶಿಲಾ-ತಾಮ್ರಯುಗ ಸಂಸ್ಕøತಿಗಳು : ನೂತನ ಇಲ್ಲವೆ ಶಿಲಾ-ತಾಮ್ರಯುಗ ಸಂಸ್ಕøತಿಯ ವಿಷಯಗಳು ಕರ್ನಾಟಕ-ಆಂಧ್ರ-ತಮಿಳುನಾಡಿನ ಹಲವಾರು ನೆಲೆಗಳ ಉತ್ಖನನಗಳಿಂದ ಸ್ಪಷ್ಟವಾಗಿದೆ. ಕೃಷ್ಣಾ-ತುಂಗಭದ್ರಾ ಬಯಲಿನ ಸಂಗನಕಲ್ಲು, ತೆಕ್ಕಲಕೋಟೆ ಮತ್ತು ಹಳ್ಳೂರಿನಲ್ಲಿಯ ಉತ್ಖನನಗಳಲ್ಲಿ ಶಿಲಾ-ತಾಮ್ರಯುಗ ಹಂತದಲ್ಲಿದ್ದ ನೂತನ ಶಿಲಾಯುಗ ಸಂಸ್ಕøತಿ ಜನರ ವರ್ತುಳ ಗುಡಿಸಲಿನ ಅವಶೇಷಗಳಿಂದ ಈ ಜನರ ಮನೆಗಳ ಬಗ್ಗೆ ಸ್ವಲ್ಪ ಮಾಹಿತಿ ಲಭ್ಯವಾಗಿದೆ. ಸಂಗನಕಲ್ಲಿನ ಮನೆಯೊಂದರಲ್ಲಿ ನೆಲಕ್ಕೆ ಗ್ರಾನೈಟ್ ಚಕ್ಕೆಕಲ್ಲುಗಳನ್ನು ಜೋಡಿಸಿ ಮೇಲೆ ಮಣ್ಣನ್ನು ಹಾಕಿ ದಮ್ಮಸ್‍ಮಾಡಿ ಗಟ್ಟಿ ಮಾಡಲಾಗಿದೆ. ಸುತ್ತಲೂ ಗೂಟಗಳನ್ನು ನೆಟ್ಟ, ಮಣ್ಣಿನಿಂದ ದಬ್ಬೆ ಇಲ್ಲವೆ ಬಳ್ಳಿಗಳ ತಡಿಕೆಗೋಡೆಗಳನ್ನು ಏರಿಸಿ ಮೇಲೆ ಇಳಿಜಾರು ಮಾಡನ್ನು ಕಟ್ಟಲಾಗಿದೆ. ಹಳ್ಳೂರಿನಲ್ಲಿಯೂ ಇದೇ ರೀತಿಯ ಮನೆಗಳನ್ನು ನಿರ್ಮಿಸಲಾಗಿತ್ತು. ಇಲ್ಲಿಯ ಒಂದು ಮನೆಯಲ್ಲಿ ನೂತನ ಶಿಲಾಯುಗಕ್ಕೆ ಸೇರಿದ ತ್ರಿಕೋನಾಕಾರದ ಕೊಡಲಿ ಮತ್ತು ಸಣ್ಣದೊಂದು ಅಗ್ಗಿಷ್ಟಿಕೆ ಇದ್ದುವು. ಭೀಮಾ-ಗೋದಾವರಿ-ನರ್ಮದಾ ಪ್ರದೇಶದಲ್ಲಿಯ ಇನಾಮ್‍ಗಾಂವ್, ನೇವಾಸ, ಸವಡಾಡಟೋಳಿಯಲ್ಲಿ ಶಿಲಾತಾಮ್ರಯುಗ ಜನರ ವಾಸದ ಮನೆಗಳು ಹಲವಾರು ಸಿಕ್ಕಿವೆ. ವಿಶೇಷವಾಗಿ ಇನಾಮ್‍ಗಾಂವ್‍ನಲ್ಲಿ, ವಿಸ್ತøತ ಉತ್ಖನನದಿಂದ ಮಾಳವ ಹಾಗೂ ಜೋರ್ವೆಯಲ್ಲಿ ಈ ಸಂಸ್ಕøತಿಯ ಮೊದಲ ಮತ್ತು ಕೊನೆಯ ಹಂತಗಳನ್ನು ಗುರುತಿಸಲಾಗಿದೆ. ಮೊದಲನೆಯ ಹಂತದಲ್ಲಿ ಮನೆಗಳು ಸಾಮಾನ್ಯವಾಗಿ ಆಯತಾಕಾರವಾಗಿದ್ದುವು.
- ಕೊನೆಯ ಹಂತದಲ್ಲಿ ಹೆಚ್ಚಾಗಿ ವರ್ತುಲಾಕಾರದಲ್ಲಿದ್ದುವು. ಆಯತಾಕಾರದ ಕೆಲವು ಮನೆಗಳು ಎರಡು ಮೂರು ಕೊಠಡಿ ಹಾಗೂ ಅಂಗಳಗಳಿಂದ ಕೂಡಿದ್ದುವು. ಬಹುಶಃ ಇವು ಆ ಜನರ ಮುಖಂಡನವಿರಬಹುದೆಂದು ತರ್ಕಿಸಲಾಗಿದೆ. ಒಂದು ಮನೆಯಲ್ಲಿ ಮುಚ್ಚಳವಿದ್ದ ಮಣ್ಣಿನ ಪೆಟ್ಟಿಗೆಯಲ್ಲಿ ಮಣ್ಣಿನ ಸುಂದರ ಸ್ತ್ರೀ ಮೂರ್ತಿಯೊಂದು ದೊರೆತಿದೆ. ಪ್ರಾಯಶಃ ಇದು ಮಾತೃಪೂಜೆಯ ಪ್ರತೀಕವಾಗಿರಬಹುದು. ಒಂದರ ಪಕ್ಕದಲ್ಲೊಂದು ಮನೆಗಳನ್ನು ಕಟ್ಟಲಾಗಿದ್ದು ಈ ಹಳ್ಳಿಯ ವಿಸ್ತಾರ, ವಿನ್ಯಾಸ, ಬೆಳೆವಣಿಗೆಯ ಮಟ್ಟಿಗೆ ಸ್ವಾರಸ್ಯಕರವಾಗಿದೆ ತೆಕ್ಕಲಕೋಟಿಯಲ್ಲಿ ಹುರುಳಿ, ಹಳ್ಳೂರಿನಲ್ಲಿ ರಾಗಿ, ಸೋನ್‍ಗಾಂವ್ (ಭೀಮಾನದಿ ಮೇಲ್ದಂಡೆ, ಮಹಾರಾಷ್ಟ್ರ) ಮತ್ತು ಇನಾಮ್‍ಗಾಂವ್‍ನಲ್ಲಿ ಗೋಧಿ ನವ ಡಾಟೋಳಿಯಲ್ಲಿ ಬತ್ತದ ಅವಶೇಷಗಳು ದೊರಕಿವೆ. ಬಹುಶಃ ಈ ಧಾನ್ಯಗಳನ್ನು ಇಲ್ಲಿ ಬೆಳೆಸುತ್ತಿದ್ದಿರಬೇಕು. ಇನಾಮ್‍ಗಾಂವ್‍ನಲ್ಲಿ ಹತ್ತಿರದ ನದಿಯಿಂದ ಈ ಜನ ತಮ್ಮ ಕೃಷಿ ಭೂಮಿಗೆ ನೀರನ್ನು ಕಾಲುವೆ ಮೂಲಕ ಹಾಯಿಸುತ್ತಿದ್ದಿರಬೇಕೆಂಬುದಕ್ಕೆ ಸಾಕ್ಷಿಯಾಗಿ ನದಿಯಿಂದ ಅಗೆದ ಕಾಲುವೆಯ ಗುರುತುಗಳಿವೆ. ಹಳ್ಳಿಯ ಮುಖ್ಯಸ್ಥನದೆಂದು ತರ್ಕಿಸಲಾದ ದೊಡ್ಡ ಮನೆಯ ಮುಂದೆ ವೃತ್ತಾಕಾರದ ಕಟ್ಟೆಗಳಿದ್ದುವು. ಇವು ಬಹುಶಃ ಧಾನ್ಯಗಳನ್ನಿಟ್ಟ ಕಣಜದ ತಳಭಾಗಗಳೆಂದು ತರ್ಕಿಸಲಾಗಿದೆ. ಜನರು ಕಪ್ಪ (ಕಂದಾಯ) ರೂಪದಲ್ಲಿ ಕೊಟ್ಟ ಧಾನ್ಯವನ್ನು ಬಹುಶಃ ಇವುಗಳಲ್ಲಿ ಸಂಗ್ರಹಿಸಲಾಗುತ್ತಿತ್ತು.
- ಕಲ್ಲಿನ ಉಪಕರಣಗಳಲ್ಲಿ ಗಾರೆಗಲ್ಲು (ಕ್ಯಾಲ್ಸಿಡೋಣಿ, ಅಗೇಟ್) ಜಾಸ್ಪರ್ ಮೊದಲಾದ ಕಲ್ಲುಗಳ 'ಅಂಕುಡೊಂಕಿನ ಏಣಿ ಕೌಶಲದಿಂದ ತೆಗೆದ ನೀಳ ಚಕ್ಕೆಗಳು ಮತ್ತು ಸೂಕ್ಮ ಶಿಲಾಯುಧಗಳು ಅಲ್ಲೊಂದು ಇಲ್ಲೊಂದು ದೊರೆತಿವೆ. ತಾಮ್ರ-ಕಂಚಿನ ಚಪ್ಪಟೆ ಕೊಡಲಿ, ಚಾಕು, ಉಳಿ ಮೊದಲಾದವು ಹೆಚ್ಚು ದೊರೆತಿವೆ. ಅಹಾಡ್-ಗಿಳುಂಡ್‍ನಲ್ಲಿ ಕಲ್ಲಿನ ಉಪಕರಣಗಳಿಗೆ ಬದಲಾಗಿ ತಾಮ್ರ-ಕಂಚಿನ ಉಪಕರಣಗಳು ಮಾತ್ರ ಬಳಕೆಯಲ್ಲಿದ್ದುವು. ಆದ್ದರಿಂದ ಇಲ್ಲಿಯ ಸಂಸ್ಕøತಿಯನ್ನು ತಾಮ್ರ (ಇಲ್ಲವೆ ಕಂಚಿನ) ಯುಗ ಸಂಸ್ಕøತಿಯೆಂದು ವರ್ಣಿಸಲಾಗಿದೆ.
- ಮೃತ್ ಪಾತ್ರೆಗಳು ಸಾಮಾನ್ಯವಾಗಿ ಕೆಂಪುವರ್ಣದವಾಗಿದ್ದು ಅವುಗಳ ಮೇಲೆ ಅಪರೂಪವಾಗಿ ನಾಯಿ, ಜಿಂಕೆ, ಹುಲಿ ಮೊದಲಾದ ಪ್ರಾಣಿಗಳ ಹಾಗೂ ಸಸ್ಯಗಳ ರೇಖಾಚಿತ್ರಗಳನ್ನು ನೇರಿಳೆ ಬಣ್ಣದಲ್ಲಿ ಬಿಡಿಸಲಾಗಿದೆ. ಅಹಾಡ್-ಗಿಳುಂಡ್ ಪ್ರದೇಶದಲ್ಲಿ ಕಪ್ಪು-ಕೆಂಪಿನ ದ್ವಿವರ್ಣದ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಇವುಗಳ ಮೇಲೆ ಬಿಳಿವರ್ಣದ ರೇಖಾಚಿತ್ರಗಳಿವೆ.
- ಮೃತ್ ಪಾತ್ರೆಗಳ ಲಕ್ಷಣ, ಆಕಾರ ಇವುಗಳ ಮೇಲಿನ ಚಿತ್ರಗಳು, ಇವುಗಳ ಪ್ರಸಾರ, ಇವು ದೊರೆಯುವ ಪದರಗಳ ಅನುಕ್ರಮ ಹಾಗೂ ಇತರ ವೈಶಿಷ್ಟ್ಯಗಳನ್ನು ಗುರುತಿಸಲಾಗಿದೆ. ಇದನ್ನು ಆಯಾ ಪ್ರದೇಶ ಅಥವಾ ಮೊದಲನೆಯ ಬಾರಿಗೆ ಗುರುತಿಸಿದ ಸ್ಥಳದ ಆಧಾರದ ಮೇಲೆ ಹೆಸರಿಸಲಾಗಿದೆ; ಜೋರ್ವೆ ಸಂಸ್ಕøತಿ (ಭೀಮಾ, ಗೋದಾವರಿ, ತಾಪಿ), ಕಯಥಾ ಸಂಸ್ಕøತಿ (ಮಧ್ಯಪ್ರದೇಶ), ತಾಮ್ರ-ಕಂಚಿನ ಸಂಸ್ಕøತಿ (ರಾಜಸ್ಥಾನ್) ಇತ್ಯಾದಿ.
- ನೇವಾಸ, ಥೈಮಾಬಾದ್, ಇನಾಮ್‍ಗಾಂವ್ ಪ್ರದೇಶಗಳಲ್ಲಿ ಜನವಾಸ್ತವ್ಯದ ನೆಲೆಗಳಲ್ಲಿಯೇ ಅಲ್ಲದೆ ವಾಸದ ಮನೆಗಳಲ್ಲಿಯೂ ಹಲವಾರು ಶವಕುಣಿಗಳು ಶೋಧವಾಗಿವೆ. ಮೊದಮೊದಲು ಉತ್ತರ-ದಕ್ಷಿಣಾಭಿಮುಖವಾಗಿ, ಅನಂತರ ಪೂರ್ವ-ಪಶ್ಚಿಮಾಭಿಮುಖವಾಗಿ ಶವವನ್ನು ಆಹಾರಪಾನೀಯ ಮೃತ್‍ಪಾತ್ರೆಗಳೊಡನೆ ಹೂಳಲಾಗುತ್ತಿತ್ತು. ಅಪರೂಪಕ್ಕೆ ದೊಡ್ಡ ನಾಲ್ಕು ಗುಡಾಣಗಳನ್ನು ಅಡ್ಡವಾಗಿ ಒಂದರ ಪಕ್ಕದಲ್ಲೊಂದು ಜೋಡಿಸಿ, ಅದರೊಳಗೆ ಅಸ್ಥಿಗಳನ್ನು ಕ್ರಮವಾಗಿ ಇರಿಸಲಾಗುತ್ತಿತ್ತು. ಹೀಗೆ ಜೋಡಿಸಿದ ಎರಡು ಅಥವಾ ಮೂರು ಅಸ್ಥಿಪಾತ್ರೆಗಳಲ್ಲಿ ಮಕ್ಕಳ ಅಸ್ಥಿಗಳನ್ನು ಇರಿಸಲಾಗಿದೆ. ಆದರೆ ಬ್ರಹ್ಮಗಿರಿಯಲ್ಲಿ ಹೀಗೆ ಮಾಡದೆ ಅಸ್ಥಿ ಪಾತ್ರೆಯನ್ನು ಯಥಾಸ್ಥಿತಿಯಲ್ಲಿಟ್ಟು ಅದರ ಬಾಯನ್ನು ಮುಚ್ಚಲಾಗಿತ್ತು. ಇನಾಮ್‍ಗಾಂವ್‍ನಲ್ಲಿ ವಿಶಿಷ್ಟ ರೀತಿಯ ಶವಕುಣಿಯನ್ನು ಶೋಧಿಸಲಾಗಿದೆ. ಕೊಠಡಿಗಳಿಂದ ಕೂಡಿದ ಒಂದು ದೊಟ್ಟ ಮನೆಯ ಅಂಗಳದ ನಾಲ್ಕುಕಾಲುಗಳುಳ್ಳ ಚೌಕೋನದ ದಪ್ಪವಾದ (ಗುಡಾಣ) ಮೃತ್ ಪಾತ್ರೆಯಲ್ಲಿ ಪದ್ಮಾಸನದಲ್ಲಿ ಕುಳ್ಳಿರಿಸಿದ, ತಲೆಯನ್ನು ಮುಂದೆ ಬಾಗಿಸಿದ ಅಸ್ಥಿಪಂಜರವಿತ್ತು. ಬಹುಶಃ ಇದು ಆ ಹಳ್ಳಿಯ ಮುಖ್ಯಸ್ಥನದೆಂದು ಭಾವಿಸಲಾಗಿದೆ. ನವಡಾ ಟೋಳಿಯಲ್ಲಿ ಇಂಥ ಶವಕುಣಿಗಳಿಲ್ಲ. ಪ್ರಾಯಶಃ ಈ ಜನರು ಶವಸಂಸ್ಕಾರವನ್ನು ವಾಸಸ್ಥಾನ ಬಿಟ್ಟು ಪ್ರತ್ಯೇಕ ಸ್ಥಳದಲ್ಲಿ ಮಾಡುತ್ತಿದ್ದಿರಬೇಕು; ಇಲ್ಲವೆ ಹೂಳುವ ಬದಲು ಅಗ್ನಿ ಸಂಸ್ಕಾರ ಕ್ರಮವನ್ನು ಅನುಸರಿಸುತ್ತಿದ್ದಿರಬೇಕು. ಅಸ್ಥಿ ಅವಶೇಷಗಳ ಅಧ್ಯಯನದಿಂದ ಪ್ರೊಡಾಅಸ್ಟ್ರಾಲಾಯಿಡ್ ಮತ್ತು ಡ್ರವಿಡಾಯಿಡ್ ಎಂಬ ಎರಡು ಜನವರ್ಗಗಳನ್ನು ಗುರುತಿಸಲಾಗಿದೆ. ಒಟ್ಟಿನಲ್ಲಿ ಇನಾಮ್‍ಗಾಂವ್ ಉತ್ಖನನ ಶಿಲಾ-ತಾಮ್ರಯುಗ ಜನರ ಸಾಮಾಜಿಕ ವ್ಯವಸ್ಥೆ, ಕೃಷಿ, ಉದ್ಯೋಗ, ಧಾರ್ಮಿಕ ಕಟ್ಟಳೆ ಮೊದಲಾದ ಮಹತ್ತ್ವದ ವಿಷಯಗಳ ಮೇಲೆ ವಿಶೇಷ ಮಾಹಿತಿ ಒದಗಿಸಿದೆ.
- ಮಾಳವ, ಕಯಥಾ ಮತ್ತು ಅಹಾಡ್ ಸಂಸ್ಕøತಿಗಳು ಸ್ವಲ್ಪ ಹೆಚ್ಚು ಕಡಿಮೆ ಸಮಕಾಲೀವಾಗಿದ್ದು ಜೋರ್ವೆ ಸಂಸ್ಕøತಿಗಿಂತ ಹಿಂದಿನವು.
- ಪೂರ್ವ ಭಾರತದ ನೂತನ ಶಿಲಾಯುಗ ಸಂಸ್ಕøತಿ: ಬಿಹಾರ್-ಬಂಗಾಳ-ಒರಿಸ್ಸಾ ಪ್ರದೇಶಗಳಲ್ಲಿ ಚಿರಂದ್ (ಬಿಹಾರ್), ಪಾಂಡುರಾಜಾರ್ ದಿಬಿ, ಮಹಿಷದಲ್, ಭರತಪುರಗಳಲ್ಲಿಯ (ಬಂಗಾಲ) ಉತ್ಖನನಗಳಲ್ಲಿ ಶಿಲಾ-ತಾಮ್ರಯುಗ ಸಂಸ್ಕøತಿಯ ಎರಡು ಹಂತಗಳನ್ನು ಗುರುತಿಸಲಾಗಿದೆ. ಚಪ್ಪಟೆ ಕೊಡಲಿ, ಹೆರೆಯುವ ಚಕ್ಕೆ, ಉಳಿ, ಕೊಡತಿ, ಸೂಜಿ ಮೊನೆ, ಬಾಣದ ಮೊನೆ, ಲೆಕ್ಕಣಿಕೆ ಮೊದಲಾದ ವಿವಿಧ ಅಸ್ಥಿ ಉಪಕರಣಗಳು, ತ್ರಿಕೋನಾಕಾರದ ಕಲ್ಲಿನ ಕೊಡಲಿಗಳು; ಬಳೆ, ಕಿವಿಯೋಲೆ, ಪದಕ, ಬಾಚಣಿಗೆ ಮೊದಲಾದ ಅಸ್ಥಿ ಆಭರಣಗಳು; ಸಮಾಂತರ ಅಂಚುಗಳುಳ್ಳ ನೀಳ ಚಕ್ಕೆ ಹಾಗೂ ಸೂಕ್ಷ್ಮ ಶಿಲಾಯುಧಗಳು; ಸುಟ್ಟು ಮಣ್ಣಿನ ಮಣಿಗಳು, ಬಳೆಗಳು, ಗೂಳಿ, ಪಕ್ಷಿ, ನಾಗ ಮೊದಲಾದ ಗೊಂಬೆಗಳು; ಬಹುಮಟ್ಟಿಗೆ ಕೈಯಿಂದ ಇಲ್ಲವೆ ತಿರುಗುಮಣೆ ತಂತ್ರದಿಂದ ಮಾಡಿದ ಕೆಂಪುಬಣ್ಣದ ವಿವಿಧ ಮೃತ್‍ಪಾತ್ರೆಗಳು (ಇಂಥ ಕೆಲವು ಪಾತ್ರೆಗಳ ಮೇಲೆ ಕೆಮ್ಮಣ್ಣಿನ ರೇಖಾ ಚಿತ್ರಗಳಿವೆ); ಗೋಧಿ, ಅಕ್ಕಿ, ಹೆಸರು, ಉದ್ದು ಮೊದಲಾದ ಧಾನ್ಯಗಳು; ಆನೆ, ಘೇಂಡಾಮೃಗ, ಎಮ್ಮೆ, ಗೂಳಿ, ಜಿಂಕೆ ಮೊದಲಾದ ಕಾಡುಪ್ರಾಣಿ ಹಾಗೂ ಸಾಕುಪ್ರಾಣಿಗಳ ಅವಶೇಷಗಳು-ಇವು ಪ್ರಾಚೀನ ಹಂತದಲ್ಲಿ ದೊರೆತಿದ್ದು ಈ ಪ್ರದೇಶದ ಅತ್ಯಂತ ಸುಧಾರಿತ ನೂತನ ಶಿಲಾಯುಗ ಜನಜೀವನದ ಮೇಲೆ ಬೆಳಕು ಚೆಲ್ಲುತ್ತವೆ. ಎರಡನೆಯ ಹಂತದಲ್ಲಿ ಕಪ್ಪು-ಕೆಂಪು ವರ್ಣದ ಮೃತ್ ಪಾತ್ರೆಗಳೂ ತಾಮ್ರ ವಸ್ತುಗಳೂ ಬಳಕೆಯಲ್ಲಿದ್ದು ಇವುಗಳ ಅವಶೇಷಗಳು ದೊರೆತಿವೆ. ಈ ಹಂತದ ಕೊನೆಯಲ್ಲಿ ಕಬ್ಬಿಣ ಬಳಕೆಯಲ್ಲಿದ್ದು ಶಿಲಾ-ತಾಮ್ರಯುಗ ಕೊನೆಗೊಂಡಿತು.
- ಕೆಮ್ಮಣ್ಣು ವರ್ಣ ಮೃತ್‍ಪಾತ್ರೆ ಸಂಸ್ಕøತಿ: ಗಂಗಾ-ಯಮುನಾ ಬಯಲಿನ ಕೆಲವೆಡೆಗಳಲ್ಲಿ ಒಂದು ವಿಶಿಷ್ಟ ತರಹದ ಮೃತ್‍ಪಾತ್ರೆಗಳುಳ್ಳ ನೆಲೆಗಳಿವೆ. ಮೊದಲು ಹಸ್ತಿನಾಪುರದ ಉತ್ಖನನದ ಅತ್ಯಂತ ಪ್ರಾಚೀನ ಪದರಗಳಲ್ಲಿ ಇಂಥ ಪಾತ್ರೆ ಚೂರುಗಳ ಶೋಧವಾಯಿತು. ಬೆರಳುಗಳಿಂದ ಉಜ್ಜಿದಾಗ ಕೆಂಪು ಬಣ್ಣ ಹತ್ತುವುದರಿಂದ ಈ ಮೃತ್‍ಪಾತ್ರೆಗಳನ್ನು ಕೆಮ್ಮಣ್ಣುವರ್ಣ ಮೃತ್ ಪಾತ್ರೆಗಳ ಸಂಸ್ಕøತಿ ಎಂದು ಹೆಸರಿಸಲಾಗಿದೆ. ಅತರಂಜಿಖೇಡ, ಲಾಲ್‍ಕಿಲ್ಲಾ, ಸಾಯ್‍ಪಾಯ್ (ಪೂರ್ವಭಾಗ), ಜಿಂಝಾನ, ಸೀಸ್‍ವಾಲ್, ಮಿಟಾತಾಲ್, ಬಾರಾ (ಪಶ್ಚಿಮ ಭಾಗ) ಮೊದಲಾದೆಡೆಗಳಲ್ಲಿ ಉತ್ಖನನಗಳಲ್ಲಿ ಈ ಸಂಸ್ಕøತಿಯ ಅವಶೇಷಗಳು ಮಣ್ಣಿನ ಪದರಗಳಲ್ಲಿ (ಇವು ಹರಿದು ಬಂದು ಸಂಗ್ರಹವಾದವು) ದೊರೆತಿದೆ. ಆದ್ದರಿಂದ ಇವುಗಳ ಮಲ ನೆಲೆ ಹಾಗೂ ಈ ಸಂಸ್ಕøತಿಯ ಇತರ ವಿಶಿಷ್ಟ ವಿಷಯಗಳು ತಿಳಿದುಬಂದಿಲ್ಲ. ಲಾಲ್‍ಕಿಲ್ಲಾದಲ್ಲಿ ಮಾತ್ರ ಮಡಕೆ ಚೂರು ಮತ್ತು ಒಣ ಇಟ್ಟಿಗೆ ಚೂರುಗಳನ್ನು ಹಾಕಿ ದಮ್ಮಸ್ಸು ಮಾಡಿದ ಮನೆಯ ನೆಲದ ಗುರುತುಗಳು ಸಿಕ್ಕಿವೆ. ಇಲ್ಲಿ ದೊರೆತಿರುವ ಕಪ್ಪುವರ್ಣದ ರೇಖಾಚಿತ್ರ ಇಲ್ಲವೆ ಗೀರಿದ ಚಿತ್ರವುಳ್ಳ ಕೆಂಪುಬಣ್ಣದ ಮೃತ್‍ಪಾತ್ರೆಯೂ ಸ್ವಲ್ಪ ಭಿನ್ನ ರೀತಿಯದು. ಸಾಯ್‍ಪಾಯ್‍ನಲ್ಲಿ ವಿಶಿಷ್ಟ ಬಗೆಯ ತಾಮ್ರದ ಉಪಕರಣಗಳು ದೊರೆತಿವೆ. ಗಂಗಾ-ಯಮುನಾ ನದಿಗಳ ಬಯಲಿನ ಬಿಸೌಲಿ, ಗುಂಗೇರಿಯಾ, ನಸಿರಪುರ ಮೊದಲಾದ ಕೆಲವೆಡೆಗಳಲ್ಲಿ ಅತ್ಯಂತ ವಿಶಿಷ್ಟ ಬಗೆಯ ತಾಮ್ರದ ಉಪಕರಣಗಳ ಸಂಗ್ರಹಗಳು ಆಕಸ್ಮಿಕವಾಗಿ ಆಗಾಗ್ಗೆ ಗೋಚರವಾಗಿವೆ. ಇವುಗಳ ಜೊತೆಗೆ ಬೇರೆ ಸಾಂಸ್ಕøತಿಕ ಅವಶೇಷಗಳು ಮಾತ್ರ ದೊರೆತಿಲ್ಲ. ಆದ್ದರಿಂದ ಇವುಗಳ ಕಾಲಮಾನ, ಸಾಂಸ್ಕøತಿಕ ವಿಷಯಗಳ ಬಗ್ಗೆ ವಿವಾದವಿದೆ. ಈಚಿನ ಬಹದರಾಬಾದ್ ಮತ್ತು ಸಾಯ್‍ಪಾಯ್ ಉತ್ಖನನದಲ್ಲಿ ದೊರೆತ ವಿಶಿಷ್ಟ ತಾಮ್ರದ ಉಪಕರಣಗಳು ಇಂಥ ಸಂಗ್ರಹಗಳಲ್ಲಿಯ ಕೆಲವು ಉಪಕರಣಗಳನ್ನು ತುಂಬ ಹೋಲುತ್ತವೆ. ಆದ್ದರಿಂದ ಈ ಸಂಸ್ಕøತಿಗೂ ತಾಮ್ರ ಉಪಕರಣ ಸಂಗ್ರಹಗಳಿಗೂ ಸಂಬಂಧವಿರಬಹುದೆಂಬ ಸಂಶಯವಿದೆ. ಉಷ್ಣದೀಪ್ತಿ (ಥರ್ಮೊಲೂಮಿನಿಸೆನ್ಸ್) ಎಂಬ ವೈಜ್ಞಾನಿಕ ವಿಧಾನದಿಂದ ಈ ಸಂಸ್ಕøತಿಯ ಕಾಲಮಾನ ಪ್ರಾಯಶಃ ಕ್ರಿ,ಪೂ, 2600-1100 ಎಂದು ತೀರ್ಮಾನಿಸಲಾಗಿದೆ.
- ತಾಮ್ರ ಉಪಕರಣ ಸಂಗ್ರಹಗಳು: ಗಂಗಾ-ಯಮುನಾ ಪ್ರದೇಶದಲ್ಲಿ ಅಲ್ಲಲ್ಲಿ ತಾಮ್ರ ಉಪಕರಣಗಳ ಸಂಗ್ರಹಗಳು ದೊರೆತಿದ್ದು ಸಾಮಾನ್ಯವಾಗಿ ಈ ಸಂಗ್ರಹಗಳಲ್ಲಿ ಕೊಕ್ಕೆಕತ್ತಿ, ದ್ವಿಭುಜ ಚಪ್ಪಟೆ ಕೊಡಲಿ, ಇಬ್ಬಾಯ ಕೊಡಲಿ, ಬಾಗು ಮುಳ್ಳಿನ ಈಟಿ-ಗಾಳ, ಎರಡು ಕವಲಿನ ಹಿಡಿಯಕತ್ತಿ, ಅಸ್ಪಷ್ಟಾಕಾರದ ಮನುಷ್ಯಾಕೃತಿ, ಮನುಷ್ಯಾಕೃತಿ ಮೊದಲಾದ ವಿಶಿಷ್ಟ ಉಪಕರಣಗಳಿವೆ, ಈಚಿನ ಶೋಧನೆಗಳಲ್ಲಿ ಭಗ್ರಪೀರ್‍ನಿಂದ (ಒರಿಸ್ಸಾ ಷರೋಜನ್‍ವರೆಗೂ (ವಾಯುವ್ಯ ಪಾಕಿಸ್ತಾನ) ದಕ್ಷಿಣದಲ್ಲಿ ಕಲ್ಲೂರಿನವರೆಗೂ (ರಾಯಚೂರು ಜಿಲ್ಲೆ) ಅಲ್ಲಲ್ಲಿ ಇಂಥ ಕೆಲವು ಉಪಕರಣಗಳು ಸಿಕ್ಕಿವೆ. ಈ ಉಪಕರಣಗಳು ಆರ್ಯ ಜನಾಂಗ ವಲಸೆ ಬಂದ ಮಾರ್ಗವನ್ನು ಸೂಚಿಸುತ್ತವೆಂದೂ ಬಾಚಿಕೊಡಲಿ ಉಪಕರಣ ಡಾನಾಬ್ ಪ್ರದೇಶದಿಂದ ಕಕೇಷಿಯ ಮಾರ್ಗವಾಗಿ ಈ ದೇಶಕ್ಕೆ ಬಂತೆಂದೂ ಹೀನ್‍ಗೆಲ್ಡರ್ನ್ ಎಂಬ ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಇವೆಲ್ಲ ಹರಪ್ಪ ನಾಗರಿಕತೆ ನಶಿಸಿದ ಅನಂತರ ಉಳಿದ ಜನರು ಅಲ್ಲಲ್ಲಿ ಹೋಗಿ ನೆಲೆಸಿದ ಗುರುತುಗಳೆಂದು ಪಿಗಟ್ ಅವರು ತರ್ಕಿಸಿದ್ದಾರೆ. ಬಿ.ಬಿ.ಲಾಲ್ ಅವರು ಇಂಥ ಉಪಕರಣಗಳನ್ನು ಆಕೃತಿಗಳಿಗನುಸಾರವಾಗಿ ವಿಂಗಡಿಸಿ. ಒಂದೊಂದರ ಪ್ರದೇಶವನ್ನು ಗುರುತಿಸಿದರು. ಬಾಗು ಮೊನೆಗಳ ಈಟಿ-ಗಾಳ, ಮನುಷ್ಯಾಕೃತಿ ಮತ್ತು ಚಪ್ಪಟೆ ಪಟ್ಟಿ ಕೊಡಲಿಗಳು ಗಂಗಾ-ಯಮುನಾ ನದಿಗಳ ಪಶ್ಚಿಮ ಪ್ರದೇಶದಲ್ಲಿ ಕಂಡುಬಂದಿಲ್ಲವೆಂದು ತಿಳಿಯಿತು. ಈ ಬಗೆಯ ಉಪಕರಣಗಳಲ್ಲಿ ವಿಶಿಷ್ಟ ಹಾಗೂ ಮುಖ್ಯವಾದವುಗಳೆಂದರೆ ದ್ವಿಭುಜ ಹಾಗೂ ಪಟ್ಟಿಯ ಚಪ್ಪಟೆ ಕೊಡಲಿ, ಎರಡು ಕವಲಿನ ಹಿಡಿಯ ಕತ್ತಿ, ಇಬ್ಬಾಯ ಕೊಡಲಿ ಹಾಗೂ ಮನುಷ್ಯಾಕೃತಿಗಳು, ಈ ಮನುಷ್ಯಾಕೃತಿಗಳನ್ನು ಹಕ್ಕಿಬೇಟೆಯಾಡುವ ಉಪಕರಣಗಳೆಂದು ತರ್ಕಿಸಲಾಗಿದೆ. ಒಟ್ಟಿನಲ್ಲಿ ಇವುಗಳ ಕಾಲಮಾನ, ಸಾಂಸ್ಕøತಿಕ ಸಂಬಂಧ ಇನ್ನೂ ಬಿಡಿಸಲಾರದ ಒಗಟಾಗಿದೆ.
- ಕಾಶ್ಮೀರ ಪ್ರದೇಶದಲ್ಲಿಯ ನೂತನ ಶಿಲಾಯುಗ ಸಂಸ್ಕøತಿ: ಶ್ರೀನಗರ ಪ್ರದೇಶದಲ್ಲಿ ಜೂರ್ಜಹಾಯ್ ಮತ್ತು ಗುಫಕ್ರಾಲ್‍ನಲ್ಲಿಯ ಉತ್ಖನನಗಳು ಇಲ್ಲಿಯ ನುತನ ಶಿಲಾಯುಗದ ಬಗ್ಗೆ ಹೆಚ್ಚು ಮಾಹಿತಿಗಳನ್ನು ಒದಗಿಸಿವೆ. ಗಟ್ಟಿ ನೆಲದಲ್ಲಿ ಗುಂಡಿಗಳನ್ನು ತೋಡಿ. ಮೇಲೆ ಮಾಡನ್ನು ಏರಿಸಿದ ಗುಂಡಿ ಗೂಡುಗಳಲ್ಲಿ ಜನ ವರ್ಷದಲ್ಲಿ ಕೆಲವು ಕಾಲ ವಾಸಿಸುತ್ತಿದ್ದರು. ಇಂಥ ಗುಂಡಿಗಳು ಆಂಧ್ರ ಪ್ರದೇಶದ ನಾಗಾರ್ಜುನಕೊಂಡ ಮತ್ತು ಇತರ ಒಂದೆರಡು ನೂತನ ಶಿಲಾಯುಗ ನೆಲೆಗಳಲ್ಲಿ ಸಿಕ್ಕಿವೆ. ಮೊದಲನೆಯ ಹಂತದಲ್ಲಿಯ ಗುಂಡಿಗಳು ಚಿಕ್ಕವಾಗಿದ್ದು, ಅವುಗಳಲ್ಲಿ ಕೆಲವು ಸಮಯ ಆಹಾರಕ್ಕೋಸ್ಕರ ಪ್ರಾಣಿ ಮಾಂಸವನ್ನು ಹಾಳಾಗದಂತೆ ಸಂಗ್ರಹಿಸಿಡಲಾಗುತ್ತಿತ್ತು ಎಂಬ ಅಭಿಪ್ರಾಯವೂ ಇದೆ. ಈ ಸಂಸ್ಕøತಿಯ ಅತ್ಯಂತ ಪ್ರಾಚೀನ ಹಂತದಲ್ಲಿ ಮೃತ್‍ಪಾತ್ರೆಗಳ ಬಳಕೆ ಇದ್ದಂತಿಲ್ಲ. ಈ ಹಂತ ಮೃತ್‍ಪಾತ್ರೆಸೃಷ್ಟಿಯ ಪೂರ್ವ ಅಥವಾ ಅದರ ಬಳಕೆಯಿಲ್ಲದ ಹಂತವನ್ನು ಪ್ರತಿನಿಧಿಸುವುದೇ ಎಂಬ ಬಗ್ಗೆ ವಿವಾದವಿದೆ. ಎರಡನೆಯ ಹಂತದಿಂದ ಮೃತ್‍ಪಾತ್ರೆಗಳ ಉಪಯೋಗ ಸ್ಪಷ್ಟವಾಗಿದೆ; ಮೃತ್‍ಪಾತ್ರೆಗಳು ಆಕಾರ ಮತ್ತು ಲಕ್ಷಣಗಳಲ್ಲಿ ವಿಶಿಷ್ಟವಾಗಿವೆ. ತ್ರಿಕೋನಾಕಾರದ ಕೊಡಲಿ ಉದ್ದವಾಗಿದೆ. ಒಂದು ಅಂಚಿನಲ್ಲಿ ಎರಡು ತೂತುಗಳುಳ್ಳ ಆಯತಾಕಾರದ ಚಪ್ಪಟೆ ಉಪಕರಣ ವ್ಯವಸಾಯಕ್ಕೆ ಬಳಸುತ್ತಿದ್ದಿರಬಹುದೆಂದು ಊಹಿಸಲಾಗಿದೆ. ಇವುಗಳ ಜೊತೆಗೆ ಬೇರೆ ಬೇರೆ ಕೆಲಸಗಳಿಗೆ ಉಪಯೊಗಿಸಲಾಗುತ್ತಿದ್ದ ವಿವಿಧ ಬಗೆಯ ಸೂಜಿಮೊನೆ, ಗಾಳ ಮೊದಲಾದ ವಿಶಿಷ್ಟ ರೀತಿಯ ಅಸ್ಥಿಉಪಕರಣಗಳು ದೊರೆತಿವೆ. ಶವ ಸಂಸ್ಕಾರದಲ್ಲೂ ವೈಶಿಷ್ಟ್ಯವನ್ನು ಗುರುತಿಸಬಹುದು. ಕೋಳಿಮೊಟ್ಟೆಯಾಕಾರದ ಗುಂಡಿಯಲ್ಲಿ, ಕಾಲುಗಳನ್ನು ಮೇಲಕ್ಕೆ ಮಡಚಿ ಶವವನ್ನು ಅಡ್ಡ ಮಲಗಿಸಲಾಗುತ್ತಿತ್ತು. ಸಾಮಾನ್ಯವಾಗಿ ಶವದೊಡನೆ ಮತ್ತೇನನ್ನು ಇಡುತ್ತಿರಲಿಲ್ಲ. ಇಂಥ ಒಂದು ಶವದ ತಲೆ ಬುರುಡೆಯಲ್ಲಿ ತೂತುಗಳಿದ್ದುವು. ಈ ತೂತುಗಳು ಪ್ರಾಯಶಃ ನಿರಂತರ ತಲೆನೋವು ಮೊದಲಾದ ಕಾಯಿಲೆಗಳನ್ನು ವಾಸಿಮಾಡುವ ಕ್ರಮವನ್ನು ಸೂಚಿಸಬಹುದೆಂದು ಅಭಿಪ್ರಾಯಪಡಲಾಗಿದೆ. ಇಂಥ ಪದ್ಧತಿ ಪ್ರಾಚೀನ ಈಜಿಪ್ಟಿನಲ್ಲಿಯೂ ಪ್ರಚಲಿತವಿತ್ತು. ಪಳಗಿಸಿ, ಸಾಕಿದ ಕಾಡುನಾಯಿಯನ್ನು ಅಪರೂಪವಾಗಿ ವ್ಯಕ್ತಿಯ ಜೊತೆ ಹೂಳಲಾಗುತ್ತಿತ್ತು. ಮತ್ತೊಂದು ವಿಧದ ಶವಸಂಸ್ಕಾರ ಪದ್ಧತಿಯಲ್ಲಿ, ಒಣಗಿಸುವ ಮೂಲಕ ಉಳಿದ ಶವದ ಅಸ್ಥಿಗಳಿಗೆ ಕೆಮ್ಮಣ್ಣಿನ ಲೇಪ ಮಾಡಿ, ಅವುಗಳನ್ನು ಹೂಳಲಾಗುತ್ತಿತ್ತು. ಈ ಸಾಂಸ್ಕøತಿಕ ಹಂತದ ಕಲ್ಲಿನ ಉಪಕರಣಗಳು, ಮೃತ್‍ಪಾತ್ರೆಗಳ ಆಕಾರ ಮತ್ತು ತಾಂತ್ರಿಕ ಲಕ್ಷಣಗಳು ಹಾಗೂ ಶವ ಸಂಸ್ಕಾರ ಪದ್ಧತಿ ಇವು ಮಧ್ಯ ಏಷ್ಯ ಮತ್ತು ಉತ್ತರ ಚೀನದಲ್ಲಿಯ ಸಮಕಾಲೀನ ನೂತನ ಶಿಲಾಯುಗದ ವಸ್ತುಗಳನ್ನು ಹೋಲುತ್ತದೆ. ಕಾಂಗ್ರಾ ಪ್ರದೇಶದಲ್ಲಿಯ ನೂತನ ಶಿಲಾಯುಗ ವಸ್ತುಗಳು ಹಿಸ್ಸಾರ್‍ನ ನೂತನ ಶಿಲಾಯುಗದ ವಸ್ತುಗಳನ್ನು ಹೋಲುತ್ತವೆ.
- ಕಾಲಮಾನ: ಸಾಮಾನ್ಯವಾಗಿ ಹಳೆ ಶಿಲಾಯುಗ ಸಂಸ್ಕøತಿಗಳ ಕಾಲಮಾನಗಳನ್ನು ಆಯಾ ಸಾಂಸ್ಕøತಿಕ ಅವಶೇಷಗಳು ಇದ್ದ ಪರಿಸರ, ಸಂದರ್ಭ ಹಾಗೂ ಅವುಗಳೊಡನೆ ದೊರೆತ ಪ್ರಾಣಿಗಳ ಪಳೆಯುಳಿಕೆಗಳ ವೈಜ್ಞಾನಿಕ ಅಧ್ಯಯನದಿಂದ ಅಂದಾಜು ಮಾಡಲಾಗುತ್ತದೆ.
- ಮುಖ್ಯವಾಗಿ ಆದಿ ಹಳೆ ಶಿಲಾಯುಗ ಸಂಸ್ಕøತಿಯ ಕಾಲಮಾನ ಇನ್ನೂ ಊಹೆಯೇ ಆಗಿದೆ. ಈ ಸಂಸ್ಕøತಿಯ ಶಿಲಾಯುಧಗಳು ಹೆಚ್ಚಾಗಿ ನದೀ ಪಾತ್ರಗಳಲ್ಲಿ ಸಿಕ್ಕಿದ್ದರಿಂದ ಇವುಗಳ ಮೂಲ ಸ್ಥಾನಗಳು ತಿಳಿದಿಲ್ಲ. ಚಿರ್ಕಿ-ನೇವಾಸ, ಹುಣಸಗಿಯಂಥ ಮೂಲ ನೆಲೆಗಳೂ ತೀರ ಅಪರೂಪ. ಇಂಥ ನೆಲೆಗಳಲ್ಲಿಯೂ ಕಾಲಮಾನವನ್ನು ನಿರ್ಧರಿಸುವಂಥ ಕುರುಹುಗಳು ದೊರೆತಿಲ್ಲ. ಹಿಮಯುಗದಲ್ಲಿ (ಪ್ಲೀಸ್ಟೊಸೀನ್ ಏಜ್) ಶೀತದ ಹಾಗೂ ಸ್ಪಲ್ಪ ಬೆಚ್ಚನೆಯ ಹವಾಗುಣ ಪುನರಾವರ್ತನೆಯಾದ ಸಮಯದಲ್ಲಿ ಉಂಟಾದ ವಿಸ್ತಾರವಾದ ನದಿ ದಂಡೆಗಳ (ರಿವರ್ ಟೆರೇಸಸ್) ಹಾಗೂ ಇಂಥ ದಂಡೆಗಳ ಪದರಗಳಲ್ಲಿ ದೊರೆತ ಶಿಲಾಯುಧಗಳ ಅಧ್ಯಯನದಿಂದ ಆದಿ ಹಳೆ ಶಿಲಾಯುಗ ಸಂಸ್ಕøತಿ 2-5 ಲಕ್ಷ ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯಲ್ಲಿತ್ತೆಂದು ತರ್ಕಿಸಲಾಗಿದೆ. ಪೂರ್ವ ಆಫ್ರಿಕದ ಟಾಂಗನೀಕಾ ಸರೋವರದ ಬಳಿ ಓಲ್ಡುವಾಯ್ ಕಣಿವೆಯಲ್ಲಿ ದೊರೆತ ಆದಿಮಾನವನ ತಲೆ ಬುರುಡೆಯ ಪಳೆಯುಳಿಕೆಗಳು ಹಾಗೂ ಶಿಲಾಯುಧಗಳನ್ನು ಪೊಟಾಸಿಯಮ್-ಆರ್ಗಾನ್ ಎಂಬ ವೈಜ್ಞಾನಿಕ ಕ್ರಮದಿಂದ ಸುಮಾರು 17 1/2 ಲಕ್ಷ ವರ್ಷಗಳಷ್ಟು ಪ್ರಾಚೀನದ್ದೆಂದು ನಿರ್ಧರಿಸಲಾಗಿರುವುದನ್ನು ಪ್ರಾಸಂಗಿಕವಾಗಿ ಇಲ್ಲಿ ಸ್ಮರಿಸಬಹುದು.
- ಮಧ್ಯ ಶಿಲಾಯುಗ, ಅಂತ್ಯ ಶಿಲಾಯುಗ, ಹಳೆ ಶಿಲಾಯುಗ, ಸೂಕ್ಮ ಶಿಲಾಯುಗ ಮತ್ತು ನೂತನ ಶಿಲಾ-ತಾಮ್ರಯುಗ ಸಂಸ್ಕøತಿಗಳ ಕಾಲಮಾನಗಳನ್ನು ಇಂಗಾಲ-14 ಎಂಬ ವೈಜ್ಞಾನಿಕ ವಿಧಾನದಿಂದ ಸ್ಥೂಲವಾಗಿ ಹೀಗೆ ಗೊತ್ತುಪಡಿಸಲಾಗಿದೆ:
- I 1 ಮಧ್ಯ ಹಳೆ ಶಿಲಾಯುಗ ಸಂಸ್ಕøತಿ (ಗುಜರಾತ್-ಮಹಾರಾಷ್ಟ್ರ-ಆಂಧ್ರಪ್ರದೇಶ) ಸು. 17,000-40,000ವರ್ಷ
- 2 2 ಸೂಕ್ಷ್ಮ ಶಿಲಾಯುಗ ಸಂಸ್ಕøತಿ (ಬೇಲಾನ್ ಪ್ರದೇಶ) ಕ್ರಿ.ಪೂ.ಸು. 6,000-5,000
- II 3 ನೂತನ ಶಿಲಾಯುಗ ಸಂಸ್ಕøತಿ (ಶ್ರೀನಗರ ಪ್ರದೇಶ) ಕ್ರಿ.ಪೂ.ಸು. 3,000-1,800
- 4 ತಾಮ್ರಯುಗ ಸಂಸ್ಕøತಿ (ಅಹಾಡ್ ಪ್ರದೇಶ) ಕ್ರಿ.ಪೂ.ಸು. 2,100-1,300
- 5 ಶಿಲಾ-ತಾಮ್ರಯುಗ ಸಂಸ್ಕøತಿ (ನರ್ಮದಾ ಪ್ರದೇಶ) ಕ್ರಿ.ಪೂ.ಸು. 1,700-1,000
- 6 ಶಿಲಾ-ತಾಮ್ರಯುಗ ಸಂಸ್ಕøತಿ (ಕಯಥಾ ಸಂಸ್ಕøತಿ-ಮಧ್ಯ ಪ್ರದೇಶ) ಕ್ರಿ.ಪೂ.ಸು. 2,00-1,800
- 7 ಶಿಲಾ-ತಾಮ್ರಯುಗ ಸಂಸ್ಕøತಿ (ಬಿಹಾರ್-ಬಂಗಾಳ) ಕ್ರಿ.ಪೂ.ಸು. 1,600-1,200
- 8 ಶಿಲಾ-ತಾಮ್ರಯುಗ ಸಂಸ್ಕøತಿ (ಮಹಾರಾಷ್ಟ್ರ) ಕ್ರಿ.ಪೂ.ಸು. 1,600-900
- 9 ನೂತನ ಶಿಲಾಯುಗ ಸಂಸ್ಕøತಿ (ತಾಮ್ರಯುಗ ಹಂತ)
- (ಕೃಷ್ಣಾನದಿ ಪ್ರದೇಶ-ಕರ್ನಾಟಕ ಮತ್ತು ಆಂಧ್ರಪ್ರದೇಶ) ಕ್ರಿ.ಪೂ.ಸು. 2,200-1,000
- ನೂತನ ಶಿಲಾಯುಗ ಸಂಸ್ಕøತಿ (ಕಾವೇರಿ ನದಿ ಪ್ರದೇಶ) ಕ್ರಿ.ಪೂ.ಸು. 1,800-900
- (ಎ.ಎಸ್.ಯು.)
- 2 ಸಿಂಧೂನದಿ ನಾಗರಿಕತೆ
- ಆರ್ಯರಿಗಿಂತ ಪ್ರಾಚೀನವಾಗಿ ಬೇರೊಂದು ನಾಗರಿಕತೆಯ ಸಾಮ್ರಾಜ್ಯ ಸ್ಥಾಪಿಸಿದ ಸಾಹಸೀ ಜನಾಂಗ ಸಿಂಧೂನದಿಕೊಳ್ಳದ ಪ್ರದೇಶದಲ್ಲಿ ಬಲುಕಾಲ ಬಾಳಿತ್ತು ಎಂಬ ಐತಿಹಾಸಿಕ ಸಂಗತಿ 1921ರಲ್ಲಿ ಬೆಳಕಿಗೆ ಬಂದಿತು. ಈ ಪ್ರದೇಶದಲ್ಲಿ ಪ್ರಾಚೀನ ಅವಶೇಷಗಳು ದೊರಕಬಹುದೆಂಬ ಕುತೂಹಲದಿಂದ ಪುರಾತತ್ವ ವಿಭಾಗದ ಅಧಿಕಾರಿಗಳಾದ ದಯಾರಾಮ ಸಾಹನಿ ಮತ್ತು ಆರ್.ಡಿ.ಬ್ಯಾನರ್ಜಿ ಉತ್ಖನನ ನಡೆಸಿದರು. ಬಳಿಕ ಸರ್ ಜಾನ್ ಮಾರ್ಷಲ್ ಈ ಕಾಲಾಮುಂದುವರಿಸಿದ. ಸಿಂಧೂಕೊಳ್ಳದ ಹರಪ್ಪ ಹಾಗೂ ಮೊಹೆಂಜೊದಾರೊಗಳಲ್ಲಿ (ಈಗಿನ ಪಾಕಿಸ್ತಾನ) ಮೊದಲ ಭೂಶೋಧನೆ ನಡೆಯಿತು. ಇವಲ್ಲದೆ ಭಾರತದ ಚನ್ಹುದಾರೊ, ರಂಗಪುರ, ಕಾಲಿಬಂಗನ್, ಲೋಥಲ್ ಮೊದಲಾದ ಅನೇಕ ಸ್ಥಳಗಳಲ್ಲಿ ಭೂಶೋಧನೆ ನಡೆಸಲಾಯಿತು. ಕ್ರಿ.ಪೂ. ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದೆ ಸಿಂಧೂಕೊಳ್ಳದಲ್ಲಿ ಒಂದು ದೊಡ್ಡ ನಾಗರಿಕ ಜನಾಂಗ ಬಾಳಿತ್ತು ಎಂಬ ಸಂಗತಿ ಅನಾವರಣಗೊಂಡಿತು. ಈ ಜನಾಂಗದವರು ಬಲೂಚಿಸ್ತಾನ, ಪಂಜಾಬ್, ಸಿಂಧ್, ಕಾಠೇವಾಡ-ಗುಜರಾತ, ಉತ್ತರ ಪ್ರದೇಶಗಳ ಭಾಗಗಳನ್ನೂ ಸಮಾವೇಶಗೊಂಡ ಸುಮಾರು 1600 ಚಕಿಮೀ ಉದ್ದಗಲದ ಭೂಭಾಗವನ್ನು ವ್ಯಾಪಿಸಿದ್ದರು. ಇವರ ಇರುವಿಕೆ ಕೆಲವು ವಿಷಯಗಳಲ್ಲಿ ಅದುವರೆಗೆ ಪರಿಚಿತವಾಗಿದ್ದ ಈಜಿಪ್ಟ್, ಸುಮೇರಿಯ ಮೊದಲಾದ ಪ್ರಾಚೀನ ನಾಗರಿಕ ಜನಗಳ ಇರುವಿಕೆಗಿಂತ ಭಿನ್ನವಾಗಿದ್ದು ಇದೊಂದು ಪ್ರತ್ಯೇಕ ನಾಗರಿಕತೆ ಎಂದು ಗುರುತಿಸಿ. ಇದನ್ನು ಸಿಂಧೂನದಿ ನಾಗರಿಕತೆ ಎಂದು ಕರೆಯಲಾಗಿದೆ. ಹರಪ್ಪ ನಾಗರಿಕತೆ, ಹರಪ್ಪ ಸಂಸ್ಕøತಿ ಎಂಬ ಬೇರೆ ಹೆಸರುಗಳೂ ಇವೆ. ಈ ನಾಗರಿಕತೆಗೆ ಸೇರಿದ ನಗರಗಳನ್ನು ರಕ್ಷಿಸಲು ಭದ್ರವಾದ ಎತ್ತರದ ಕೋಟೆಯ ಪ್ರಾಕಾರವಿತ್ತು. ಅಲ್ಲಲ್ಲಿ ಕಾವಲುಗಾರರ ಠಾಣ್ಯಗಳಿದ್ದುವು. ನಗರದಲ್ಲಿ ಅಚ್ಚುಕಟ್ಟಾದ ಕೇರಿ, ವಸತಿಗಳನ್ನು ಕ್ರಮಬದ್ಧವಾಗಿ ನಿರ್ಮಿಸಿದ್ದರು. ಮುಖ್ಯ ಬೀದಿಗಳು 274-1136 ಸೆಂಮೀ ಹರವಾಗಿದ್ದು ಉದ್ದಕ್ಕೆ ಪೂರ್ವಪಶ್ಚಿಮ ದಕ್ಷಿಣೋತ್ತರವಾಗಿ ಸರಳರೇಖೆಯಲ್ಲಿ ಒಂದಕ್ಕೊಂದು ಲಂಬ ಕೋಣದಲ್ಲಿ ಸಂಧಿಸುತ್ತಿದ್ದುವು. ಇದರಿಂದ ನಗರವನ್ನು ಅನೇಕ ವಿಭಾಗಗಳಾಗಿ ಬೇರ್ಪಡಿಸಿದಂತೆ ಕಾಣುತ್ತದೆ. ಇವುಗಳಲ್ಲಿ ಉಪಬೀದಿಗಳು ಹಾದು ಹೋಗಿದ್ದು ಇವು 15-396 ಸೆಂಮೀ ಅಗಲವಾಗಿದ್ದುವು. ನಗರದ ರಸ್ತೆಗಳೂ ಓಣಿಗಳೂ ಶುಭ್ರವಾಗಿದ್ದು. ಅಲ್ಲಲ್ಲಿ ಕಸದ ತೊಟ್ಟಿಗಳಿದ್ದುವು. ರಸ್ತೆಗಳಲ್ಲಿ ಕೆಲವು ಕಡೆ ಕಂಡುಬಂದ ಕಂಬಗಳ ಕುರುಹುಗಳು ದೀಪದ ಕಂಬಗಳಾಗಿರಬೇಕೆಂದು ಕೆಲವರು ಊಹಿಸಿದ್ದಾರೆ.
- ಬೀದಿಯ ಪಕ್ಕಕ್ಕೆ ಓರಣವಾದ ಮನೆಗಳ ಸಾಲುಗಳು ಸರಳವೂ ಪ್ರಯೋಜನ್ಮಾತಕವೂ ಆಗಿದ್ದುವು. ಮನೆಗೊಂದು ಅಂಗಳ, ಮೂರು ನಾಲ್ಕು ಕೋಣೆಗಳು, ಒಂದು ಬಾವಿ, ಬಚ್ಚಲು ಮತ್ತು ಚರಂಡಿ ಸೌಕರ್ಯಗಳಿದ್ದುವು. ಸಿರಿವಂತರ ಮನೆಗಳು ಎರಡು ಅಂತಸ್ತಿನವೂ ಹಲವು ಕೋಣೆಗಳುಳ್ಳವು ವಿಶಾಲವಾದವೂ ಆಗಿದ್ದುವು. ಜಾಲಂದರದ ಕಿಟಕಿಗಳು ಮತ್ತು ತೆರೆದ ಅಂಗಳದ ಮೂಲಕ ಮನೆಗೆ ಸಾಕಷ್ಟು ಗಾಳಿ, ಬೆಳಕು ದೊರಕುತ್ತಿತ್ತು. ಮನೆಗೆ ದೃಢವಾದ ನೆಲಗಟ್ಟಿತ್ತು. ಕೊಳಚೆನೀರು ನೆಲದಲ್ಲಿ ಜಿನುಗದಂತೆ ಮಡಕೆಯ ತುಂಡುಗಳಿಂದ ಬೆಸೆಯುತ್ತಿದ್ದರು.
- ಕಟ್ಟಡಗಳಿಗಾಗಿ ಉಪಯೋಗಿಸಿದ ಇಟ್ಟಿಗೆಗಳಲ್ಲಿ ಒಳ್ಳೆಯ ಮಾಟ, ಗಟ್ಟಿತನ, ಬೇರೆಬೇರೆ ಆಕಾರಗಳು ಕಂಡುಬಂದಿವೆ. ಇಟ್ಟಿಗೆಗಳು ದೊಡ್ಡವೂ ದಪ್ಪವೂ ಆಗಿವೆ. ಕೆಲವು ಭಟ್ಟಿಯಲ್ಲಿ ಹಾಕಿಸುಟ್ಟಂಥವು. ಕೆಲವು ಬಿಸಿಲಿಗೆ ಒಣಗಿಸಿದಂಥವು. ಇವುಗಳ ಆಕಾರ ಸಾಮಾನ್ಯವಾಗಿ ಚೌಕು, ಬಾವಿ ಮುಂತಾದವನ್ನು ಕಟ್ಟಲು ಸಪುರ, ದುಂಡನೆಯ ಆಕಾರದ ಇಟ್ಟಿಗೆಗಳನ್ನು ಬಳಸುತ್ತಿದ್ದರು. ಇಟ್ಟಿಗೆಗಳ ಜೋಡಣೆ ಬೆಸೆಯಲು ನುಣ್ಣನೆಯ ಹಸಿಮಣ್ಣು, ಸಿಮೆಂಟಿನಂಥ ಪದಾರ್ಥಗಳನ್ನು ಉಪಯೋಗಿಸಿದ್ದರು. ಗೋಡೆಯನ್ನು ಆಳವಾದ ತಳಹದಿಯ ಮೇಲೆ ದಪ್ಪವಾಗಿ, ಸುಭದ್ರವಾಗಿ, ಕಟ್ಟುತ್ತಿದ್ದರು. ನದಿಯ ನೀರು ಬಂದು ಅಪಾಯವಾಗಬಾರದೆಂದು ಎತ್ತರದ ಬುನಾದಿಯನ್ನು ನಿಲ್ಲಿಸಿ ಮೇಲುಗಡೆ ಮನೆಗಳನ್ನು ಕಟ್ಟಿದ್ದರು.
- ಮನೆಯ ಚರಂಡಿಗಳ ನೀರು ಬೀದಿಯ ಚರಂಡಿಗೆ ಕೂಡುತ್ತಿದ್ದುವು. ಇಂಥ ಹಲವು ಬೀದಿಯ ಚರಂಡಿಗಳು ದೊಡ್ಡ ಚರಂಡಿಗೆ ಸೇರುತ್ತಿದ್ದುವು. ಈ ಚರಂಡಿಗಳನ್ನು ಕಲ್ಲಿನಿಂದ ಅಥವಾ ಇಟ್ಟಿಗೆಯ ಮುಚ್ಚಳಗಳಿಂದ ಮುಚ್ಚುವ ಏರ್ಪಾಡಿತ್ತು. ವಸತಿಯಿಂದ ದೂರದಲ್ಲಿ ನಗರದ ಹೊರಗೆ ಆಳವಾದ ಕಂದಕಗಳಲ್ಲಿ ಕಸ, ಕುಪ್ಪೆ, ಕೊಳಚೆಯನ್ನು ಚೆಲ್ಲಿ ನಗರದ ಸ್ವಚ್ಛತೆ ಕಾಪಾಡುತ್ತಿದ್ದರು. ಚರಂಡಿಗಳನ್ನು ಆಗಾಗ್ಗೆ ಶುದ್ಧಗೊಳಿಸಲು ಅನುಕೂಲವಾದ ಕಮಾನುಗಳಿದ್ದುವು. ಇವುಗಳ ಪಕ್ಕದಲ್ಲಿ ಕಂಡುಬಂದ ಮರಳಿನ ಗುಡ್ಡೆಗಳು ಅವು ಹಾಗೆ ಶುಚಿಗೊಳಿಸಲ್ಪಡುತ್ತಿದ್ದುವೆಂಬುದನ್ನು ಸೂಚಿಸುತ್ತವೆ. ಒಳಚರಂಡಿಯ ಈ ಯೋಜನೆ ಅದ್ವಿತೀಯವಾದುದೂ ಅಂದಿನ ಪ್ರಪಂಚದ ಬೇರೆ ಯಾವ ನಾಗರಿಕ ದೇಶದಲ್ಲಿಯೂ ಕಾಣದಂಥದು ಆಗಿದೆ.
- ಸಾರ್ವಜನಿಕ ಬಾವಿಗಳಂತೆ ಅಲ್ಲಲ್ಲಿ ಸಾರ್ವಜನಿಕ ಸ್ನಾನದ ಮನೆಗಳೂ ಇದ್ದುವು. ಆಗಿನ ಕಾಲದಲ್ಲಿ ತೆರಿಗೆಗಳನ್ನು ಧಾನ್ಯದ ರೂಪದಲ್ಲಿ ವಸೂಲು ಮಾಡಲಾಗುತ್ತಿತ್ತು. ಇವನ್ನು ಸಂಗ್ರಹಿಸಿಡುವುದಕ್ಕಾಗಿ ಧಾನ್ಯದ ಸಂಗ್ರಹಾಲಯವಿತ್ತು. ಇದರ ಉದ್ದ 5150 ಸೆಂಮೀ. ಅಗಲ 4115 ಸೆಂಮೀ. ನೆಲಮಟ್ಟಕ್ಕಿಂತ ಸ್ವಲ್ಪ ಎತ್ತರವಾದ ಜಗುಲಿಯ ಮೇಲೆ ಇದನ್ನು ಕಟ್ಟಲಾಗಿತ್ತು. ಮೊಹೆಂಜೊದಾರೊದಲ್ಲಿಯೂ ಇಂಥ ಕಣಜವೊಂದರ ಅವಶೇಷವನ್ನು ಶೋಧಿಸಲಾಗಿದೆ. (1980). ಇಷ್ಟೆಲ್ಲ ಸಿದ್ಧತೆ, ಸಾಮಗ್ರಿ, ಓರಣ, ದಕ್ಷತೆಯಿಂದ ರಚನೆಯಾದ ಈ ಮಹಾನಗರಗಳ ಆಡಳಿತ ಸಮರ್ಥ ಶಾಸಕರ ಕಥೆಯಲ್ಲಿದ್ದಿರಬಹುದು. ಇಂಥ ನಗರಗಳು ಪ್ರತ್ಯೇಕ ನಗರರಾಜ್ಯಗಳಾಗಿದ್ದುವೊ ಇಲ್ಲವೇ ಒಂದು ಸಾಮ್ರಾಜ್ಯದ ಆಧಿಪತ್ಯದಲ್ಲಿದ್ದವೋ ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟಸಾಧ್ಯ.
- ಕೃಷಿ, ವ್ಯಾಪಾರ, ಉದ್ಯೋಗ ಇವು ಮುಖ್ಯ ಕಸಬುಗಳಾಗಿದ್ದುವು. ಕೃಷಿಗೆ ನೀರಾವರಿ ಸೌಕರ್ಯ ಪಡೆಯಲಾಗಿತ್ತು. ಗೋಧಿ, ಜವೆಗೋಧಿ, ಅಕ್ಕಿ, ಹಾಲು, ಹಣ್ಣುಹಂಪಲು ಇವರ ಆಹಾರಪದಾರ್ಥಗಳಾಗಿದ್ದುವು. ಪಾರಿವಾಳ, ಆಮೆ, ಮೀನು, ಕುರಿ, ಕೋಳಿ ಮುಂತಾದ ಪ್ರಾಣಿಗಳ ಮಾಂಸ ಸೇವಿಸುತ್ತಿದ್ದರು. ಎತ್ತು, ಎಮ್ಮೆ, ಹಸು, ಆಡು, ಕತ್ತೆ, ನಾಯಿ, ನವಿಲು, ಬೆಕ್ಕು ಇವು ಸಾಕುಪ್ರಾಣಿಗಳು. ಎತ್ತರದ ಇಣಿಯ ಪುಷ್ಪವಾದ ವೃಷಭ ಇವರಿಗೆ ಪ್ರಿಯ, ಅತ್ಯಂತ ಆದರಣೀಯ. ಸಿಂಹ, ಹುಲಿ, ಆನೆ, ಕಾಡುಕೋಣ, ಘೇಂಡಾಮೃಗ, ಕರಡಿ, ಮಂಗ, ಮೊಲ ಮೊದಲಾದ ಕಾಡುಮೃಗಗಳ ಪರಿಚಯವಿತ್ತು.
- ಈ ಜನ ವ್ಯವಹಾರಕುಶಲರು, ಅಚ್ಚುಕಟ್ಟುತನ, ರಸಿಕತೆಯಿಂದ ಸುಖಜೀವಿಗಳಾಗಿದ್ದರು. ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನು ಧರಿಸುತ್ತಿದ್ದರು. ಬಿಗಿಯಾಗಿ ಸುತ್ತಿದ ಧೋತರ ಇಲ್ಲವೆ ಸೀರೆಯಂಥ ವಸ್ತ್ರವನ್ನುಟ್ಟು, ಮೇಲೊಂದು ಹಗುರಾದ ಬಟ್ಟೆ ಹೊದೆಯುತ್ತಿದ್ದರು. ಮೊಹೆಂಜೊದಾರೊದಲ್ಲಿ ದೊರೆತ ಪುರುಷಾಕಾರದ ಪ್ರತಿಮೆಯನ್ನಾಧರಿಸಿ ಅವರು ಬಟ್ಟೆಗಳಿಗೆ ಕಸೂತಿ ಹಾಕುತ್ತಿದ್ದರೆಂದೂ ಅಲ್ಲಿ ಕಂಡುಹಿಡಿಯಲಾದ ಬಣ್ಣದ ತೊಟ್ಟಿಗಳಿಗೆ ಬಟ್ಟೆಗಳಿಗೆ ಬಣ್ಣ ಹಾಕುತ್ತಿದ್ದರೆಂದೂ ಊಹಿಸಲಾಗಿದೆ. ಹೆಂಗಸರು ಸೊಗಸುಗಾರ್ತಿಯರು, ಶೃಂಗಾರ ಪ್ರಿಯರು. ವಿಧವಿಧವಾಗಿ ಕೇಶಾಲಂಕಾರ ಮಾಡಿಕೊಳ್ಳುವುದನ್ನು ಅರಿತಿದ್ದರು. ಚಿನ್ನ, ಬೆಳ್ಳಿ, ತಾಮ್ರ ಹಾಗೂ ಕಂಚಿನ ಒಡವೆಗಳನ್ನೂ ಹರಳು, ಮಣಿ, ಸಿಂಪಿನ ಹಾರಗಳನ್ನೂ ಧರಿಸುತ್ತಿದ್ದರು. ಕಡಗ, ಬಳೆ, ಉಂಗುರ ತೊಡುತ್ತಿದ್ದರು. ಕಂಚಿನ ಕನ್ನಡಿ, ದಂತದ ಹಣಿಗೆ. ಕಣ್ಣಿಗೆ ಕಾಡಿಗೆ, ಮುಖಕ್ಕೆ ಬಣ್ಣ ಮುಂತಾದ ಸೌಂದರ್ಯ ಸಾಧನಗಳನ್ನು ಉಪಯೋಗಿಸುತ್ತಿದ್ದರು. ಪುರುಷರೂ ಕೇಶಾಲಂಕಾರಿಗಳಾಗಿದ್ದರು. ಮೇಲ್ದುಟಿಯನ್ನು ಬೋಳಿಸಿ ಸಣ್ಣ ಗಡ್ಡ ಬಿಡುತ್ತಿದ್ದರೆಂದು ಊಹಿಸಲಾಗಿದೆ. ಗಂಡಸರ ವಿವಿಧ ಕ್ಷೌರದ ಕತ್ತಿಗಳು ದೊರೆತಿವೆ.
- ದೋಸೆಯ ಕಾವಲಿ, ಸೌಟು, ಬೋಗುಣಿ, ತಟ್ಟೆ, ಬಟ್ಟಲು, ಪಾನಪಾತ್ರೆ,. ಕುಳಿತುಕೊಳ್ಳಲು ಹಾಗೂ ವಿಶ್ರಮಿಸಲು ಕುರ್ಚಿ, ಮಂಚ, ಕಾಲುಮಣೆಗಳಂಥ ಸಾಧನಗಳಿದ್ದುವು. ಗುಂಡು, ಚೆಂಡು, ಲೆತ್ತ, ಚದುರಂಗಗಳ ಆಟ ಆಡುತ್ತಿದ್ದರು. ಉರುಳುವ ಬಂಡಿ, ಟಗರು, ಮನುಷ್ಯ ಮತ್ತು ಪ್ರಾಣಿಗಳ ಚಲಿಸುವ ಗೊಂಬೆಗಳು ಮಕ್ಕಳನ್ನು ರಮಿಸುವ ಆಟಿಗೆ ವಸ್ತುಗಳಲ್ಲಿ ಕೆಲವು, ಪುರಾತನ ಕಾಲದ ಗಾಲಿಯ ಉಪಯೋಗಕ್ಕೆ ಇಲ್ಲಿಯ ಬಂಡಿಗಳು ಉದಾಹರಣೆಯಾಗಿವೆ.
- ಕೊಡಲಿ, ಕತ್ತಿ, ಚೂರಿ, ಭಲ್ಲೆ, ಭರ್ಜಿ, ಬಾಣ, ಗದೆ, ಕವಣೆ ಮೊದಲಾದ ತಾಮ್ರದ ಮತ್ತು ಕಂಚಿನ ಆಯುಧಗಳನ್ನು ಉಪಯೋಗಿಸುತ್ತಿದ್ದರು. ನಿತ್ಯೋಪಯುಕ್ತವಾದ ಸೂಜಿ, ದಬ್ಬಳ, ಚಾಕು, ಮೀನಗಾಳಗಳೂ ಇಲ್ಲಿ ದೊರೆತಿವೆ. ಎತ್ತಿನ ಬಂಡಿಗಳು ಪ್ರವಾಸದ ಸಾಧನಗಳಾಗಿದ್ದುವು. ಇವು ಇಂದಿನ ಕಾಲದ ಎಕ್ಕಾದಂತೆ ಇದ್ದುವು. ಚಾವಣಿ ಕಟ್ಟಿದ ಬಂಡಿಗಳೂ ಉಪಯೋಗದಲ್ಲಿದ್ದುವು. ತಕ್ಕಡಿಗಳು, ತೂಕಗಳು ವಿವಿಧ ಆಕೃತಿಗಳ ತೂಕದ ಕಲ್ಲುಗಳು ಬಳಕೆಯಲ್ಲಿದ್ದುವು.
- ಇಲ್ಲಿಯ ಜನ ವ್ಯಾಪಾರದಲ್ಲಿ ಮುಂದುವರಿದಿದ್ದರು. ಈ ನಿಮಿತ್ತದಿಂದ ಭಾರತದ ಪೂರ್ವಭಾಗ, ಕಾಶ್ಮೀರ, ಮೈಸೂರು, ನೀಲಗಿರಿ ಈ ಪ್ರದೇಶಗಳೊಂದಿಗೆ ಸಂಬಂಧಗಳು ಏರ್ಪಟ್ಟಿದ್ದವು. ಇಲ್ಲಿ ದೊರೆತ ಚಿನ್ನ ಕರ್ನಾಟಕದ ಕೋಲಾರದ ಪ್ರದೇಶಗಳ ಗಣಿಗಳಿಂದ ದೊರೆತವೆಂದು ಊಹಿಸಲಾಗಿದೆ. ಭಾರತದ ಹೊರಗೆ ಪಶ್ವಿಮದ ನಾಡು, ಸುಮೇರಿಯ, ಈಚಿಪ್ಟ್, ಕ್ರೀಟ್ ಮೊದಲಾದ ದೇಶಗಳೊಂದಿಗೆ ವ್ಯಾಪಾರ ನಡೆಯುತ್ತಿತ್ತು. ಸುಮೇರಿಯನ್‍ರೊಂದಿಗೆ ಸಂಬಂಧ ನಿಕಟವಾಗಿತ್ತು. ಹರಪ್ಪ ಲಿಪಿಯ ಲೇಖನವುಳ್ಳ ಒಂದು ಮುದ್ರಿಕೆ ಸುಮೇರಿಯನ್ ಪ್ರದೇಶದಲ್ಲಿ ದೊರೆತಿದೆ. ಗುಜರಾತದಲ್ಲಿಯ ಲೋಥಲಿನಲ್ಲಿ ನಡೆದ ಭೂಶೋಧನೆ ಅಲ್ಲೊಂದು ಹಡಗು ಕಟ್ಟೆ ಇದ್ದುದನ್ನು ತಿಳಿಸುತ್ತದೆ. ಇದು ಹರಪ್ಪ ಸಂಸ್ಕøತಿಗೆ ಸಂಬಂಧಿಸಿದ್ದಾಗಿದ್ದು ಈ ಜನ ವಿದೇಶೀ ವ್ಯಾಪಾರಗಳಲ್ಲಿ ತೊಡಗಿದ್ದರೆಂದೂ ಇವರಿಗೆ ಸಮುದ್ರಯಾನದ ಹಡಗುಗಳು ಸುಪರಿಚಿತವಾಗಿದ್ದುವೆಂದೂ ಮಾಡಲಾದ ಊಹೆ ಇದರಿಂದ ದೃಢಪಟ್ಟಿದೆ.
- ಶಿಲ್ಪ ಮತ್ತಿತರ ಕಲೆಗಲಲ್ಲಿ ಇವರು ಕುಶಲರಾಗಿದ್ದರು. ಇವರು ರಚಿಸಿದ ಪ್ರಾಣಿಗಳ, ಮನುಷ್ಯರ, ಚಿತ್ರಾಕೃತಿಗಳು, ವಿಗ್ರಹಗಳು, ಆಭರಣಗಳು ರಮ್ಯವಾಗಿವೆ. ನೂಲುವ, ನೇಯುವ, ಬಣ್ಣಹಾಕುವ, ಇಟ್ಟಿಗೆ ಹಾಗೂ ಮಣ್ಣಿನ ಪಾತ್ರೆಗಳನ್ನು ಮಾಡುವ ಮತ್ತು ಕೋಹದ ಪದಾರ್ಥಗಳ ಮೇಲೆ ಚಿತ್ರಗಳನ್ನು ಕೊರೆಯುವ, ಗೊಂಬೆಗಳನ್ನು ತಯಾರಿಸುವ ಕಲಾತ್ಮಕ ಉದ್ಯಮಗಳನ್ನು ಇವರು ಅರಿತಿದ್ದರು.
- ಇವರು ಬಳಸಿದ್ದ ಸುಮಾರು ಎರಡು ಸಾವಿರದಷ್ಟು ಮುದ್ರಿಕೆಗಳು ದೊರಕಿವೆ. ಇವನ್ನು ಸುಣ್ಣದ ಮಣ್ಣು, ಸುಟ್ಟ ಜೇಡಿಮಣ್ಣು, ದಂತ ಈ ಪದಾರ್ಥಗಳಿಂದ ಮಾಡಲಾಗಿದೆ. ಈ ಮುದ್ರಿಕೆಗಳ ಮೆಲೆ ನಾನಾ ಪ್ರಾಣಿಗಳ ಚಿತ್ರ ಹಾಗೂ ಲೇಖನಗಳಿದೆ. ಪ್ರಾಣಿ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣುವ ಆನೆ, ಹುಲಿ, ಚಿಗರೆ, ಎರಡು ಇಣಿಯ ಪುಷ್ಟ ವೃಷಭ, ಒಂದು ಕೋಡಿನ ಕುದುರೆಯಂಥ ಏಕಶೃಂಗಿ ಇವೆ. ಲೇಖನಗಳದ್ದು ಚಿತ್ರಲಿಪಿ. ಇವು ಬಹು ಪುರಾತನ ಲೇಖನಗಳು. ಈ ಬರೆಹಗಳನ್ನು ಪೂರ್ಣ ಓದಿ ಅರ್ಥ ಹೇಳಲು ಈಗ ಹಲವಾರು ಯತ್ನಗಳಾಗಿವೆ. ಆದರೆ ಖಚಿತವಾಗಿ ಅರ್ಥವಿಸುವುದು ಸಾಧ್ಯವಾಗಿಲ್ಲ. ಕೆಲವರು ಇವನ್ನು ಚಿತ್ರಲಿಪಿ ಎಂದೂ ಇನ್ನು ಕೆಲವರು ಇದನ್ನು ವರ್ಣಮಾಲೆ ಎಂದೂ ತೋರಿಸಲು ಯತ್ನಿಸಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ವ್ಯಕ್ತಿಗಳ ಹೆಸರುಗಳಿವೆ ಎಂಬುದೊಂದು ಅಭಿಪ್ರಾಯ.
- ಧರ್ಮ-ಧರ್ಮಭಾವನೆ: ಈ ಜನರ ಧರ್ಮ ಯಾವುದು, ಧಾರ್ಮಿಕ ಭಾವನೆ ಎಂತಹುದು ಎಂಬುದನ್ನು ಖಚಿತವಾಗಿ ಹೇಳಲಿಕ್ಕಾಗದು. ಏಕೆಂದರೆ ಉತ್ಖನನದಲ್ಲಿ ಧರ್ಮಕ್ಕೆ ಮುಖ್ಯ ಆಧಾರವಾದ ದೇವಾಲಯಗಳಾಗಲಿ ದೇವರ ವಿಗ್ರಹಗಳಾಗಲಿ ಪ್ರತ್ಯಕ್ಷವಾಗಿ ಮತ್ತು ಸ್ಪಷ್ಟವಾಗಿ ಎಲ್ಲೂ ದೊರೆತಿಲ್ಲ. ಆದರೆ ಮುದ್ರಿಕೆಗಳ ಮೇಲಿನ ಕೆಲವೊಂದು ಆಕೃತಿಗಳನ್ನು ಮಣ್ಣಿನ, ಕಲ್ಲಿನ, ಚಿಕ್ಕ ದೊಡ್ಡ ಪ್ರತಿಮೆಗಳನ್ನು ಪರೀಕ್ಷಿಸಿದರೆ ಈ ಜನ ಧಾರ್ಮಿಕ ಭಾವನೆಯುಳ್ಳವರಾಗಿದ್ದರು ಎಂಬುದು ಮನವರಿಕೆ ಆಗುತ್ತದೆ.
- ಇಲ್ಲಿ ದೇವಿಯ ಪ್ರತಿಮೆಗಳು ಸಿಕ್ಕಿವೆಯಾದ್ದರಿಂದ ಇವರು ಮಾತೃಪೂಜಕರು ಎನ್ನಬಹುದು. ಅರಳೀಮರದ ಚಿತ್ರಗಳು ದೊರತಿರುವುದರಿಂದ ಅಶ್ವತ್ಥವೃಕ್ಷ ಪೂಜಿಸುತ್ತಿದ್ದರೆಂದು ಊಹಿಸಬಹುದು. ಸತ್ತವರನ್ನು ಹುಗಿಯುತ್ತಿದ್ದರು. ಸುಡುವ ಪದ್ಧತಿಯೂ ಇದ್ದಿರಬೇಕು. ಮುಂದಿನ ಜೀವನದಲ್ಲಿ ಅವರ ಉಪಯೋಗಕ್ಕಾಗಿ ಪಾತ್ರೆ ಆಹಾರ ಪದಾರ್ಥ ಮುಂತಾದ ವಸ್ತುಗಳನ್ನು ಸಮಾಧಿಯಲ್ಲಿ ಇರಿಸುತ್ತಿದ್ದುದು ಕಂಡುಬಂದಿದೆ.
- ಈ ನಾಗರಿಕರು ಯಾವ ಜನವರ್ಗದವರು ಎಂಬ ವಿಷಯವಾಗಿ ಸಂಶೋಧಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಭೌಗೋಳಿಕವಾಗಿ ಇಂದಿನ ಇರಾಕ್ ದೇಶಕ್ಕೆ ಸಂಬಂಧಿಸಿದಂತೆ ಮೆಸೊಪೊಟೇಮಿಯ ಪ್ರದೇಶದಲ್ಲಿ ಸುಮೇರಿಯನ್ ಎಂಬ ಜನವರ್ಗದವರು ಪುರಾತನ ಕಾಲದಲ್ಲಿ ಬಾಳಿದ್ದರು. ಅವರ ಜೀವನರೀತಿಯಲ್ಲಿ ಮತ್ತು ಸಿಂಧೂ ನಾಗರಿಕರ ಜೀವನ ರೀತಿಯಲ್ಲಿ ಕೆಲವು ಸಾಮ್ಯಗಳು ಕಂಡುಬಂದುದರಿಂದ ಅವರು ಸುಮೇರಿಯನರ ಸಂಬಂಧಿಕರು ಎಂದು ಮೊದಲು ಕೆಲವರು ಸೂಚಿಸಿದರು. ಈ ಸಾಮ್ಯ ಅತ್ಯಲ್ಪವಾದ್ದರಿಂದ ಮತ್ತು ಬೇರೆ ಬಲವಾದ ಆಧಾರವಿಲ್ಲದ್ದರಿಂದ ಈ ವಾದವನ್ನು ಈಗ ಕೈಬಿಡಲಾಗಿದೆ. ಕೆಲ ಸಂಶೋಧಕರು ಇವರು ಆರ್ಯರ ಸಂಬಂಧಿಕರು ಎಂಬ ಅಭಿಪ್ರಾಯ ಪ್ರತಿಪಾದಿಸಿದರು. ಇದನ್ನು ಒಪ್ಪಲುಕೂಡ ಹಲವು ಆತಂಕಗಳಿವೆ. ಯಜ್ಞಸಂಸ್ಥೆ ಮತ್ತು ಇಂದ್ರ, ವರುಣ, ಅಗ್ನಿ ಮುಂತಾದ ದೇವರುಗಳಿಗೆ ನೀಡಲಾದ ಪ್ರಾಮುಖ್ಯ ಆರ್ಯಸಂಸ್ಕøತಿಯ ಮುಖ್ಯ ಲಕ್ಷಣಗಳು, ಸಿಂಧೂ ನಾಗರಿಕತೆಯಲ್ಲಿ ಇವುಗಳ ಕುರುಹು ಸ್ಪಷ್ಟವಾಗಿ ದೊರೆತಿಲ್ಲ. ವೇದಕಾಲದ ಆರ್ಯರಲ್ಲಿ ಪ್ರಚುರವಾಗಿಲ್ಲದ ಮೂರ್ತಿಪೂಜೆಗೆ ಸಿಂಧೂ ನಾಗರಿಕತೆಯಲ್ಲಿ ಪ್ರಾಮುಖ್ಯ ಇದ್ದಂತೆ ಮೇಲೆ ವಿವರಿಸಲಾಗಿದೆ. ಶಿವ, ದೇವಿಯರು ಮತ್ತು ಲಿಂಗಪೂಜೆಯಲ್ಲಿ ಸಿಂಧೂ ನಾಗರಿಕರಿಗೆ ಆಸ್ಥೆ ಇದ್ದಂತೆ ತೋರುತ್ತದೆ. ಆರ್ಯರಲ್ಲಿ ಗೋಮಾತೆಗೆ ಹಿರಿಮೆ ಕಂಡುಬಂದರೆ, ಸಿಂಧೂ ನಾಗರಿಕರಲ್ಲಿ ಹೆಚ್ಚಳ ಪಡೆದದ್ದು ವೃಷಭ, ಆರ್ಯರು ಕುದುರೆಗಳನ್ನು ವಿಶೇಷವಾಗಿ ಉಪಯೋಗಿಸುತ್ತಿದ್ದರು. ಸಿಂಧೂ ನಾಗರಿಕರಲ್ಲಿ ಕುದುರೆಯ ಬಳಕೆ ಹೆಚ್ಚಾಗಿ ಕಂಡುಬಂದಿಲ್ಲ. ಇವರು ದ್ರಾವಿಡ ಜನವರ್ಗದವರು ಆಗಿರಬೇಕು ಎಂಬ ಅಭಿಪ್ರಾಯವಿದೆ. ಬಲುಕಾಲದ ಹಿಂದೆ ಯೂರೊಪ್-ಆಫ್ರಿಕ ಖಂಡಗಳ ಮಧ್ಯದ ಭೂಮಧ್ಯ ಸಮುದ್ರದ ಪ್ರದೇಶಗಳಿಂದ ದ್ರಾವಿಡ ಎಂಬ ಜನವರ್ಗ ಪ್ರಯಾಣ ಹೊರಟು ದಕ್ಷಿಣ ಭಾರತಕ್ಕೆ ಬಂದು ಅಲ್ಲಿ ನೆಲಸಿದರು. ಇವರ ಭಾಷೆ, ಸಂಸ್ಕøತಿಗಳು ಆರ್ಯಭಾಷೆ ಸಂಸ್ಕøತಿಗಳಿಂತ ಭಿನ್ನವಾದುದು. ದ್ರಾವಿಡರು ಉತ್ತರಭಾರತದಲ್ಲಿಯೂ ಹರಡಿಕೊಂಡು ಅನಂತರ ಬಂದ ಆರ್ಯರ ಭಾಷೆ, ಸಂಸ್ಕøತಿಯ ಮೇಲೆ ಪ್ರಭಾವ ಬೀರಿದರು. ದ್ರಾವಿಡರು ನಗರ ನಿರ್ಮಾಣದಲ್ಲಿ ಮುಂದುವರಿದವರು. ಶಿವ ಪೂಜೆ, ದೇವಿಮಾತೆಯ ಆರಾಧನೆ ಇವರು ಸ್ಫುಟವಾದ ಲಕ್ಷಣಗಳು. ಇವೆಲ್ಲ ಸಿಂಧೂ ನಾಗರಿಕರಲ್ಲಿ ಪ್ರಕಟವಾಗಿರುವುದರಿಂದ ಅವರು ದ್ರಾವಿಡ ಜನವರ್ಗದವರೇ ಆಗಿರಬೇಕು ಎಂಬವು ಈ ಸಿದ್ಧಾಂತದ ಅಂಶಗಳು. ಆದರೆ ಈ ಅಭಿಪ್ರಾಯ ಸಹ ಸರ್ವಸಮ್ಮತವಲ್ಲ.
- ಸಿಂಧೂ ನಾಗರಿಕತೆಯ ಅವಶೇಷಗಳು ಉತ್ತರಭಾರತದ ಅನೇಕ ಸ್ಥಳಗಳ ವಿಸ್ತಾರ ಪ್ರದೇಶದಲ್ಲಿ ದೊರೆತಿವೆ. ಅವನ್ನು ಪರಿಶೀಲಿಸಿದಾಗ ಈ ನಾಗರಿಕತೆ ದೀರ್ಘಕಾಲ ಪರ್ಯಂತ ಬದುಕಿ ವ್ಯಾಪಕವಾಗಿ ಹರಡಿಕೊಂಡಿತು ಎಂಬ ಸಂಗತಿ ಸ್ಫುಟವಾಗುತ್ತದೆ. ಆದರೆ ಅದು ಮೊದಲು ಹೇಗೆ, ಎಲ್ಲಿ ಹುಟ್ಟಿತು ಎಂದು ಖಚಿತವಾಗಿ ಹೇಳಲು ಆಧಾರಗಳಿಲ್ಲ. ಕೆಲವು ಕುರುಹುಗಳನ್ನು ವೀಕ್ಷಿಸಿ ಅದು ಮೊದಲು ಪಶ್ಚಿಮದಲ್ಲಿ ಇರಾನ್, ಬಲೂಚಿಸ್ತಾನ ಪ್ರದೇಶಗಳಲ್ಲಿ ತಲೆಯೆತ್ತಿ, ಅನಂತರ ರಾಜಸ್ಥಾನದ ಮಾರ್ಗವಾಗಿ ಭಾರತಕ್ಕೆ ಬಂದು ಊರ್ಜಿತವಾಯಿತೆಂದು ಊಹಿಸಲಾಗಿದೆ.
- ಈ ನಾಗರಿಕತೆಯ ಅಳಿವಿಗೆ ಕಾರಣಗಳೂ ಅಸ್ಪಷ್ಟ. ಕುದುರೆ, ರಥಗಳನ್ನು ಹೊಂದಿದ್ದ ಆರ್ಯಜನಾಂಗದ ಸಾಹಸಿಗಳು ಪಶ್ಚಿಮದಿಂದ ವಾಯುವ್ಯ ಕಣಿವೆಯ ಮಾರ್ಗವಾಗಿ ಮಾಡಿದ ರಭಸದ ದಾಳಿಯಲ್ಲಿ ಸಿಂಧೂನಾಗರಿಕರು ಪರಾಜಿತರಾಗಿ, ಅವರ ನಗರಗಳು, ನಾಗರಿಕತೆ ನಾಶ ಹೊಂದಿದುವೆಂಬುದು ಕೆಲವರ ವಾದ, ಆದರೆ ಇದಕ್ಕೆ ಸಮರ್ಪಕ ಆಧಾರಗಳಿಲ್ಲ. ಬಹುಸಂಖ್ಯೆಯ ಈ ನಗರಗಳು ಸಿಂಧೂನದಿಯ ತೀರದಲ್ಲಿ ಕಟ್ಟಲ್ಪಟ್ಟಿದ್ದು, ಅವು ಮೇಲಿಂದ ಮೇಲೆ ನದಿಯ ಮಹಾಪೂರಗಳ ವಿಪತ್ತಿಗೆ ತುತ್ತಾಗಿ ಅಳಿದು ಹೋದುವು ಎಂಬುದು ಇತ್ತೀಚಿನ ಬಹುಮಾನ್ಯ ಅಭಿಪ್ರಾಯ.
- ಈ ನಾಗರಿಕತೆ ಹೆಚ್ಚು ಕಡಿಮೆ ಕ್ರಿ.ಪೂ. 2700 ವರ್ಷಗಳ ಹಿಂದೆ ಉನ್ನತಿ ಪಡೆಯಲು ಪ್ರಾರಂಭವಾಗಿ ಸುಮಾರು ಒಂದು ಸಾವಿರ ವರ್ಷಗಳ ಕಾಲ ಉತ್ಕರ್ಷಸ್ಥಿತಿಯಲ್ಲಿದ್ದು ಕ್ರಿ,ಪೂ. ಸುಮಾರು 1500 ವರ್ಷಗಳ ಹೊತ್ತಿಗೆ ಅವನತಿ ಹೊಂದಿ, ಮುಂದೆ ಅಲ್ಪಾವಕಾಶದಲ್ಲಿ ವಿನಾಶ ಹೊಂದಿತೆಂದು ಹೇಳಬಹುದು. ಇದರ ಅವಸರ್ಪಿಣೀ ಸ್ಥಿತಿಯಲ್ಲಿ ಆರ್ಯರು ಭಾರತದಲ್ಲಿ ಕಾಲಿಟ್ಟು ತಮ್ಮ ನಾಗರಿಕತೆಯ ಪ್ರಭಾವ ಬೀರಲು ಅಣಿಯಾದರು.
- ಆರ್ಯರು: ಆರ್ಯ ಎಂಬ ಪದಕ್ಕೆ ಉಜ್ವಲ ಅಥವಾ ಸುಸಂಸ್ಕøತ ಎಂಬ ಅರ್ಥಗಳಿವೆ. ಇವರು ಉಜ್ಜ್ವಲ ಸಂಸ್ಕøತಿಯುಳ್ಳವರು, ಸುಸಂಸ್ಕøತರು; ಆರ್ಯ ಎಂಬ ಪದ ಸಾಂಸ್ಕøತಿಕ ಮಟ್ಟವನ್ನು ಸೂಚಿಸುವುದೇ ಹೊರತು ಜನಾಂಗವಾಚಕ ಪದವಲ್ಲ ಎಂಬುದು ಕೆಲವು ಪಂಡಿತರ ವಾದ. ಆರ್ಯ ಎಂಬ ಪದ ಮುಖ್ಯವಾಗಿ ಭಾಷೆಗೆ ಮಾತ್ರ ಸಂಬಂಧಿಸಿದ ಪದ, ಇಂಥ ಭಾಷೆ ಆಡುವ ಜನಾಂಗ ಆರ್ಯ ಜನಾಂಗವೆಂದು ಕರೆಯಲ್ಪಡುತ್ತದೆ ಎಂಬುದು ಮ್ಯಾಕ್ಸ್ ಮುಲ್ಲರ್ ಎಂಬ ಜರ್ಮನ್ ವಿದ್ವಾಂಸನ ಅಭಿಪ್ರಾಯ.
- ಆರ್ಯರು ತಾವು ವಾಸಿಸಿದ ಸಪ್ತಸಿಂಧೂ ಪ್ರದೇಶವನ್ನು ದೇವನಿರ್ಮಿತದೇಶವೆಂದು ಕರೆದುಕೊಂಡಿದ್ದಾರೆ. ಭಾರತದಲ್ಲಿಯ ಆರ್ಯಮೂಲದ ಭಾಷೆಗಳಲ್ಲಿ ವೇದಗಳಲ್ಲಿಯ ಸಂಸ್ಕøತವನ್ನು ಹೋಲುವ ಶಬ್ದಸಂಪತ್ತು ಬೇರಾವ ಯೂರೊಪ್ ಅಥವಾ ಏಷ್ಯಭಾಷೆಗಳಿಗಿಂತ ಹೆಚ್ಚಾಗಿ ಇವೆ. ಆರ್ಯರು ಹೊರಗಿನಿಂದ ಬಂದವರಾಗಿದ್ದರೆ. ಸಪ್ತಸಿಂಧುವಿನ ಪಶ್ಚಿಮಕ್ಕಿರುವ ಪ್ರದೇಶಗಳಲ್ಲಿ ಅವರು ವಾಸಿಸುತ್ತಿದ್ದುದರ ಸಂದರ್ಭಗಳು ಸ್ಪಲ್ಪಮಟ್ಟಿಗಾದರೂ ವೇದಗಳಲ್ಲಿ ದೊರಕುತ್ತಿದ್ದುವು. ಆದರೆ ಹಾಗಿಲ್ಲದಿರುವುದು. ಅವರು ಪರದೇಶಗಳಿಂದ ಸಪ್ತಸಿಂಧೂ ಪ್ರದೇಶಕ್ಕೆ ಬಂದು ನೆಲಸಿದರೆಂಬ ವಾದವನ್ನು ಅಲ್ಲಗಳೆಯುತ್ತದೆ.
- ಹರಪ್ಪ ಸಂಸ್ಕøತಿ ಕ್ಷೀಣಿಸಿದ ತರುವಾಯ ಆರ್ಯರು ಭಾರತಕ್ಕೆ ವಲಸೆ ಬಂದರು ಎಂದು ವಾದಿಸುವ ಪಂಡಿತರು ಅವರಿಗೆ ಹುಲಿ, ಆನೆ ಮುಂತಾದ ಮೃಗಗಳ ಪರಿಚಯವಿರಲಿಲ್ಲವೆಂದೂ ಬತ್ತದ ಉಪಯೋಗ ತಿಳಿದಿರಲಿಲ್ಲವೆಂದೂ ವಾದಿಸುತ್ತಾರೆ. ಹಾಗೆಯೇ ಆರ್ಯರಿಗೆ ಬಹಳ ಉಪಯುಕ್ತ ಪ್ರಾಣಿಯಾದ ಕುದುರೆ ಅವರಿಗಿಂತ ಮೊದಲಿನ ಹರಪ್ಪ ಸಂಸ್ಕøತಿಯ ಜನರಿಗೆ ತಿಳಿದಿರಲಿಲ್ಲವೆನ್ನುತ್ತಾರೆ. ಆದರೆ ಆರ್ಯರು ಮೂಲತಃ ಭಾರತೀಯರೆಂದು ವಾದಿಸುವವರು ಈ ವಾದಗಳು ಸಹೇತುವಲ್ಲವೆಂದು ತಳ್ಳಿಹಾಕಿದ್ದಾರೆ. ಇವುಗಳಿಗೆ ಉತ್ತರರೂಪವಾಗಿ ಇವರು ಕ್ರಿ.ಪೂ. 3000ರ ಸುಮಾರಿಗೆ ಪಂಜಾಬ್ ಪ್ರಾಂತ್ಯದಲ್ಲಿಯೇ ಇದ್ದ ಹುಲಿ, ಆನೆ ಮುಂತಾದವು ಋಗ್ವೇದ ರೂಪುಗೊಂಡ ಕ್ರಿ.ಪೂ. 1500 ವೇಳೆಗೆ ಪಂಜಾಬಿನಿಂದ ಕಣ್ಮರೆಯಾಗುವುದು ಅಸಾಧ್ಯ ಎನ್ನುತ್ತಾರೆ. ಹಾಗೆಯೇ ಆಗ ಪಂಜಾಬಿನಲ್ಲಿ ಹೆಚ್ಚಾಗಿ ಗೋಧಿ ಮತ್ತು ಬಾರ್ಲಿಗಳನ್ನು ಬೆಳೆಸುತ್ತಿದ್ದ ಕಾರಣ ಹರಪ್ಪ ಜನರಿಗೂ ಬತ್ತದ ಉಪಯೋಗ ತಿಳಿದಿರಲಿಲ್ಲ. ಅಲ್ಲದೆ ಇತ್ತೀಚೆಗೆ ಲೋಥಾಲ್‍ದಲ್ಲಿ ದೊರೆತ ಕೆಲವು ಮುದ್ರಿಕೆಗಳಲ್ಲಿ ಕುದುರೆಯ ಆಕೃತಿ ಕಂಡುಬಂದಿದೆ ಎಂದು ಕೆಲವು ಪುರಾತತ್ವ ಪಂಡಿತರು ಮಾಡಿರುವ ಊಹೆ ಹರಪ್ಪ ಜನರಿಗೆ ಕುದುರೆಯ ಪರಿಚಯವಿಲ್ಲವೆಂಬ ವಾದವನ್ನು ಬದಿಗೊತ್ತುತ್ತದೆ ಎಂದು ಇವರು ವಾದಿಸಿದ್ದಾರೆ. ಆರ್ಯರ ಮೂಲನಿವಾಸ ಸ್ಥಾನ ಭಾರತವೇ ಹೊರತು ಅವರು ಹೊರಗಿನಿಂದ ಬಂದವರಲ್ಲ ಎಂಬ ವಾದವನ್ನು ಎತ್ತಿ ಹಿಡಿಯಲು ನೀಡಲಾಗಿರುವ ಕಾರಣಗಳಿವು.
- ಭಾಷಾಶಾಸ್ತ್ರದ ಆಧಾರದಿಂದ ಆರ್ಯರು ಪರದೇಶದಿಂದ ಬಹುಶಃ ಇರಾನ್ ಮೂಲಕ ಭಾರತಕ್ಕೆ ಬಂದವರು ಎಂದು ಮಾಡಲಾಗಿರುವ ಊಹೆ ಹೆಚ್ಚು ಸಮರ್ಥನೀಯ. ಸಿಂಧೂ ಸಂಸ್ಕøತಿಯ ನಾಶಕ್ಕೆ ಆರ್ಯರು ಕಾರಣ ಎಂಬುದು ಇತ್ತೀಚೆಗೆ ಮಾಡಲಾಗಿರುವ ಊಹೆ. ಇದಕ್ಕೂ ಮೊದಲೇ ಪ್ರಚಲಿತವಾಗಿದ್ದ ಅವರು ಹೊರಗಿನಿಂದ ಬಂದವರೆಂಬ ವಾದಕ್ಕೂ ಸಿಂಧೂ ಸಂಸ್ಕøತಿಯ ನಾಶಕ್ಕೂ ಈ ಮೂಲಕ ಒಂದು ಸಂಬಂಧ ಮಾತ್ರ ಕಲ್ಪಿಸಲಾಗಿದೆ.
- ಆರ್ಯರನ್ನು ಕುರಿತು ನಮಗೆ ತಿಳಿದುಬಂದಿರುವುದೆಲ್ಲ ಅವರು ರಚಿಸಿದ ವೇದ ಮತ್ತು ತತ್ಸಂಬಂಧವಾದ ಇತರ ಸಾಹಿತ್ಯಗಳಿಂದ ಮಾತ್ರವೇ. ವೇದಗಳು ಹಿಂದೂಗಳಿಗೆ ಅತ್ಯಂತ ಪವಿತ್ರ ಗ್ರಂಥಗಳು. ಇವು ಪ್ರಾಚೀನ ಆರ್ಯರ ಸಾಮಾಜಿಕ. ರಾಜಕೀಯ, ಧಾರ್ಮಿಕ ವಿಷಯ, ಆಚಾರ, ವಿಚಾರ, ನಂಬಿಕೆ ಮತ್ತು ಜೀವನದ ರೀತಿ ನೀತಿಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ಗ್ರಂಥಗಳೆಂದು ಆಧುನಿಕ ವಿದ್ವಾಂಸರು ಇವುಗಳಿಗೆ ಮಾನ್ಯತೆ ನೀಡಿದ್ದಾರೆ. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದಗಳೆಂಬ ನಾಲ್ಕು ವೇದಗಳ ಕಾಲದ ಬಗೆಗೆ ಏನನ್ನೂ ಖಚಿತವಾಗಿ ಹೇಳಲಾಗದು. ಇವು ಯಾವನೇ ಒಬ್ಬ ವ್ಯಕ್ತಿ ನಿಶ್ಚಿತವಾದ ಕಾಲದಲ್ಲಿ ರಚಿಸಿದ ಕೃತಿಗಳಲ್ಲ. ಆದ್ದರಿಂದ ಇವು ದೈವದತ್ತವಾದವು. ಅನಾದಿ, ಅಪೌರುಷೇಯ, ನಿತ್ಯ ಎಂಬುದು ಸಂಪ್ರದಾಯವಾದಿಗಳ ದೃಢ ನಂಬುಗೆ.
- ಹರಪ್ಪ ಸಂಸ್ಕøತಿಯಲ್ಲಿ ಆರ್ಯ ಸಂಸ್ಕøತಿಯ ಕುರುಹುಗಳಿಲ್ಲ. ಆದ್ದರಿಂದ ಆರ್ಯರು, ಹರಪ್ಪ ಸಂಸ್ಕøತಿ ಆಳಿದ ಬಳಿಕ ಭಾರತಕ್ಕೆ ಬಂದರೆಂದು ಕೆಲವು ಪುರಾತತ್ವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ದೃಷ್ಟಿಯಿಂದ ಅತಿ ಪ್ರಾಚೀನವೆನಿಸಿದ ಋಗ್ವೇದದ ರಚನೆ ಕ್ರಿ.ಪೂ. ಸುಮಾರು 1500ರ ವೇಳೆಗೆ ಮುಗಿದಿರಬಹುದು. ಇದು ಆಧುನಿಕ ವಿದ್ವಾಂಸರ ಮತ. ಆದರೆ ಇದು ಸರ್ವಸಮ್ಮತವಾಗಿಲ್ಲ. ಋಗ್ವೇದ (ನೋಡಿ- ಋಗ್ವೇದ) ಬ್ರಾಹ್ಮಣಗಳು ಗದ್ಯರೂಪದಲ್ಲಿದ್ದು ವೇದಗಳಲ್ಲಿ ಬರುವ ಯಜ್ಞಭಾಗಗಳಿಗೆ ವಿವರಣ ಗ್ರಂಥಗಳಾಗಿವೆ. ಆರಣ್ಯಕಗಳು ಬ್ರಾಹ್ಮಣಗಳಿಗೆ ಅನುಬಂಧಗಳಂತಿವೆ. ಇವುಗಳಲ್ಲಿಯ ವಿಷಯಗಳು ಗೋಪ್ಯವಾಗಿರಬೇಕೆಂಬ ದೃಷ್ಟಿಯಿಂದ ಇವನ್ನು ಅರಣ್ಯಗಳಲ್ಲಿಯೇ ಕಲಿಸುತ್ತಿದ್ದ ಕಾರಣ ಇವುಗಳಿಗೆ ಆರಣ್ಯಕಗಳೆಂಬ ಹೆಸರು ಬಂತು. ಉಪನಿಷತ್ತುಗಳು ವೇದ ಸಾಹಿತ್ಯದ ಕಡೆಯ ಪ್ರಬಂಧಗಳು (ನೋಡಿ- ಉಪನಿಷತ್ತುಗಳು) ಇವುಗಳಲ್ಲಿ ಭಾರತೀಯ ತತ್ತ್ವಜ್ಞಾನದ ಸಾರವೇ ಅಡಗಿದೆ. ಆತ್ಮ, ಬ್ರಹ್ಮ ಮುಂತಾದ ಮಹತ್ತ್ವದ ವಿಷಯಗಳ ಜಿಜ್ಞಾಸೆ ಮತ್ತು ವಿವರಣೆಗಳು ಉಪನಿಷತ್ತುಗಳಲ್ಲಿವೆ. ಇವುಗಳ ಶೈಲಿ ಸುಲಭ ಸರಳ.
- ವೇದಾಂಗಗಳು ಹೆಸರೇ ಸೂಚಿಸುವಂತೆ ವೇದಗಳಿಗೆ ಅಂಗಗಳು, ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ ಇವು ಆರು ವೇದಾಂಗಗಳು. ಆಯುರ್ವೇದ, ಧನುರ್ವೇಧ, ಶಿಲ್ಪಶಾಸ್ತ್ರಗಳನ್ನು ಉಪವೇದಗಳೆಂದು ಈಚೆಗೆ ಪರಿಗಣಿಸಲಾಗಿದೆ. ಶ್ರೌತಸೂತ್ರಗಳಂತೆ ಗೃಹ್ಯ ಮತ್ತು ಧರ್ಮಸೂತ್ರಗಳೂ ಇವೆ. ಇವೆಲ್ಲವನ್ನೂ ಒಟ್ಟುಗೂಡಿಸಿ ವೇದ ಅಥವಾ ವೈದಿಕ ಸಾಹಿತ್ಯ ಎಂದು ಕರೆಯಲಾಗಿದೆ. ಆದರೆ ಇವುಗಳ ನಿರ್ಮಾಣಕಾಲ ಹಲವಾರು ಶತಮಾನಗಳಲ್ಲಿ ಮುಂದುವರಿದಿದೆ. ಈ ಸುದೀರ್ಘ ಕಾಲದಲ್ಲಿ ದೇಶದಲ್ಲಿ ಅನೇಕ ಬದಲಾವಣೆಗಳುಂಟಾಗಿದ್ದುವು. ಅತಿ ಪ್ರಾಚೀನವಾದ ಋಗ್ವೇದದ ಕಾಲದಲ್ಲಿ ಆರ್ಯರು ಸಿಂಧೂನದೀ ತೀರದಲ್ಲಿ ವಾಸಿಸುತ್ತಿದ್ದರು. ಆದರೆ ಕ್ರಮೇಣ ಅವರು ದೇಶದ ಇತರ ಭಾಗಗಳಲ್ಲೂ ಹರಡಿಕೊಂಡರು. ಗಂಗಾ-ಯಮುನಾ ನದಿಬಯಲಿನಲ್ಲೂ ಅನಂತರ ವಿಂಧ್ಯ ಪರ್ವತವನ್ನು ದಾಟಿ ದಕ್ಷಿಣಕ್ಕೂ ಇವರ ನಾಗರಿಕತೆ ಹಬ್ಬಿತು. ಪುರಾಣಗಳೂ ಮಹಾಕಾವ್ಯಗಳೆನಿಸಿದ ರಾಮಾಯಣ, ಮಹಾಭಾರತಗಳೂ ಈ ಕಾಲದಲ್ಲಿ ರೂಪುಗೊಳ್ಳಲು ಆರಂಭಿಸಿದುವು.
- ಋಗ್ವೇದದ ಶ್ಲೋಕಗಳಲ್ಲಿ, ಭಾರತದಲ್ಲಿ ಆರ್ಯರು ಮೊದಲು ನೆಲಸಿದ್ದ ಸ್ಥಳಗಳನ್ನು ಕುರಿತು ಕೆಲವು ವಿವರಗಳಿವೆ. ವೇದಗಳಲ್ಲಿ ಹೇಳಲಾಗಿರುವ 31 ನದಿಗಳ ಪೈಕಿ 25 ನದಿಗಳು ಋಗ್ವೇದದಲ್ಲಿ ನಿರ್ದಿಷ್ಟವಾಗಿವೆ. ಸಿಂಧೂನದಿ ಮತ್ತು ಅದರ ಉಪನದಿಗಳಲ್ಲದೆ ಗಂಗಾ, ಯಮುನಾ, ಸರಸ್ವತೀ ಮತ್ತು ಸರಯೂ ನದಿಗಳನ್ನು ಕೂಡ ವೇದದಲ್ಲಿ ಹೆಸರಿಸಲಾಗಿದೆ. ಆದರೆ ಗಂಗಾ-ಯಮುನಾ ನದಿಗಳಿಗಿಂತ ಹೆಚ್ಚಾಗಿ ಸರಸ್ವತೀ ಮತ್ತು ದೃಷದ್ವತೀ ನದಿಗಳು ಋಗ್ವೇದದಲ್ಲಿ ಪ್ರಾಮುಖ್ಯ ಪಡೆದಿವೆ. ಆಫ್‍ಘಾನಿಸ್ತಾನ, ಪಂಜಾಬ್, ಆಗ್ನೇಯ ಸಿಂಧೂ ಪ್ರಾಂತ್ಯದಿಂದ ಕಾಶ್ಮೀರ, ಸಿಂಧು ಮತ್ತು ರಾಜಸ್ಥಾನದ ಹಲವು ಭಾಗ ಮತ್ತು ಈಗಿನ ಔಧ ಸಮೀಪದ ಸರ್ಜು (ಸರಯೂ) ನದಿಯ ವರೆಗಿನ ಪ್ರದೇಶಗಳಲ್ಲಿ ಋಗ್ವೇದ ಕಾಲದ ಆರ್ಯರು ನೆಲಸಿದ್ದರೆಂದು ಹೇಳಬಹುದು. ಋಗ್ವೇದದಲ್ಲಿ ಸಪ್ತಸಿಂಧು ಎಂದು ಕರೆಯಲಾಗಿರುವ ಪ್ರದೇಶ ಪಂಜಾಬಿನ ಐದು ನದಿಗಳಲ್ಲದೆ ಸಿಂಧು ಮತ್ತು ಸರಸ್ವತೀ ನದಿಗಳ ಸುತ್ತಲಿನ ಪ್ರದೇಶಕ್ಕೆ ಅನ್ವಯಿಸುತ್ತದೆಂದು ಸಾಮಾನ್ಯವಾಗಿ ಒಪ್ಪಲಾಗಿದೆ.
- ಆರ್ಯರ ಹಲವಾರು ಕುಲಗಳು ರಾಜನೊಬ್ಬನ ನಾಯಕತ್ವದಲ್ಲಿ ಅಲ್ಲಲ್ಲಿ ನೆಲಸಿದ್ದುವು. ಋಗ್ವೇದದಲ್ಲಿ ಈ ಕುಲಗಳಲ್ಲಿ ಹಲವನ್ನು ಹೆಸರಿಸಲಾಗಿದೆ. ಇವುಗಳಲ್ಲಿ ಭರತ, ಪುರು, ಯದು, ತುರ್ವಶು, ಅನು, ದ್ರುಹ್ಯು ಇಂಥ ಹಲವು ಮುಖ್ಯವಾದವು. ಒಮ್ಮೆ ಪರುಷ್ಣೀ (ಈಗಿನ ರಾವೀ) ನದಿತೀರದಲ್ಲಿ ಭರತ ಕುಲದ ರಾಜ ಸುದಾಸನೊಡನೆ ಹತ್ತು ರಾಜಕುಲಗಳವರೂ ಕೂಡಿ ಯುದ್ಧ ಹೂಡಿದರು. ಇದು ದಾಶರಾಜ್ಞ ಎಂದರೆ ಹತ್ತು ರಾಜರ ಕಾಳಗ ಎಂದು ಋಗ್ವೇದದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಕದನದ ಅಂತ್ಯದಲ್ಲಿ ಭರತರು ಜಯ ಪಡೆದರು. ಭರತಕುಲದಿಂದ ನಮ್ಮ ದೇಶಕ್ಕೆ ಭಾರತವೆಂಬ ಹೆಸರು ಬಂತೆಂಬುದು ಹಲವು ಪಂಡಿತರ ಅಭಿಪ್ರಾಯ.
- ಋಗ್ವೇದದಲ್ಲಿ ದಾಸ ಮತ್ತು ದಸ್ಯುಗಳನ್ನು ವೈರಿಗಳೆಂದು ಗಣಿಸಲಾಗಿದೆ. ಇವರಲ್ಲದೆ ಪಣಿಗಳನ್ನು ಆರ್ಯರ ಶತ್ರುಗಳೆಂದು ವರ್ಣಿಸಲಾಗಿದೆ. ಇವರು ಧನಿಕರು; ಆದರೆ ಸ್ವಾರ್ಥಿಗಳೂ ಕ್ರೂರಿಗಳೂ ಆಗಿದ್ದರು. ದಾಸರು ಕೋಟೆಗಳಿಂದ ಸುತ್ತುವರಿದ ನಗರಗಳಲ್ಲಿ ವಾಸಿಸುತ್ತಿದ್ದರೆಂದೂ ಕಪ್ಪುಬಣ್ಣದವರಾಗಿದ್ದರೆಂದೂ ಬಣ್ಣಿಸಲಾಗಿದೆ. ದಾಸ ಎಂಬ ಪದ ಕಾಲಾನುಕ್ರಮದಲ್ಲಿ ಗುಲಾಮ ಎಂಬ ಅರ್ಥ ಹೊಂದಿತಾದರೂ ಋಗ್ವೇದ ಕಾಲದಲ್ಲಿ ದಾಸವರ್ಗ ಬಹುಶಃ ಯುದ್ಧದಲ್ಲಿ ಸೆರೆಸಿಕ್ಕ ಜನರಿಗೆ ಅನ್ವಯಿಸುತ್ತಿತ್ತೆನ್ನಬಹುದು. ದಾಸರಿಗಿಂತ ಕೀಳೆಂದು ಭಾವಿಸಲ್ಪಟ್ಟವರು ದಸ್ಯುಗಳು. ಇವರನ್ನು ಅಕರ್ಮನ, ಅಬ್ರಹ್ಮನ್, ಅಯಜ್ವನ್, ಅವ್ರತ, ಅನ್ಯವ್ರತ ಎಂದರೆ ಆರ್ಯರಂತೆ ಅಗ್ನಿಯ ಉಪಾಸಕರಾಗಿ ಯಜ್ಞಯಾಗಾದಿ ಕರ್ಮಗಳನ್ನು ಮಾಡದೆ ಇರುವ ಅಧಾರ್ಮಿಕರು ಎಂದು ವರ್ಣಿಸಲಾಗಿದೆ.
- ಈ ಕಾಲದಲ್ಲಿ ಪಿತೃಪ್ರಧಾನ ಕುಟುಂಬ ಪದ್ಧತಿ ರೂಢಿಯಲ್ಲಿತ್ತು. ಹಲವಾರು ಕುಟುಂಬಗಳು ಸೇರಿದ ಸಮೂಹವೇ ಕುಲ. ಆರ್ಯರ ಒಂದೊಂದು ಪಂಗಡದಲ್ಲೂ ಅನೇಕ ಕುಲಗಳಿದ್ದುವು. ಕುಟುಂಬದ ಹಿರಿಯ ಗೃಹಪತಿ. ಈತ ಕುಟುಂಬದ ಒಟ್ಟು ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರ ಪಡೆದಿರುತ್ತಿದ್ದ. ಏಕಪತ್ನೀತ್ವ ಸಾರ್ವತ್ರಿಕ ಪದ್ಧತಿಯಾಗಿತ್ತು. ಬಹುಪತ್ನೀತ್ವ ರೂಢಿಯಲ್ಲಿದ್ದರೂ ಅದು ಕೇವಲ ರಾಜರಲ್ಲಿ ಮಾತ್ರ ಕಂಡುಬರುತ್ತಿತ್ತು. ಪಿತೃಪ್ರಧಾನ ಕುಟುಂಬದಲ್ಲಿಯೂ ಸಮಾಜದಲ್ಲಿಯೂ ಸ್ವತಂತ್ರವ್ಯಕ್ತಿತ್ವ ಹೊಂದಿದ್ದರು. ಅವರಿಗೆ ವಿದ್ಯಾಭ್ಯಾಸದ ಅನುಕೂಲತೆಗಳಿದ್ದುವು. ಋಷಿಗಳಂತೆ ಕೆಲವರು ಜ್ಞಾನಸಂಪನ್ನರೂ ತಪೋನಿಷ್ಠರೂ ತತ್ತ್ವಜ್ಞಾನಿಗಳೂ ಆಗಿದ್ದರು. ಇವರಲ್ಲಿ ವಿಶ್ವವಾರಾ, ಲೋಪಾಮುದ್ರಾ, ಆತ್ರೇಯಿಯಂಥ ಕೆಲವರು ವೇದ-ಮಂತ್ರಗಳ ದ್ರಷ್ಟಾರರೂ ಆಗಿದ್ದರು. ವಿವಾಹಿತ ಸ್ತ್ರೀಯರಿಗೆ ಯಜ್ಞಯಾಗಾದಿಗಳಲ್ಲಿ ಪಾಲ್ಗೊಳ್ಳುವ ಅಧಿಕಾರವಿತ್ತು. ಗೃಹಿಣಿಯಾದವಳು ಪತಿಯ ಅರ್ಧಾಂಗಿ, ಕುಟುಂಬದಲ್ಲಿ ಪತಿಗೆ ಸಮಾನವಾಗಿ ಅರ್ಧಪಾಲುಗಾರಳೆಂಬ ಭಾವನೆ ಆಗಲೇ ರೂಢವಾಗಿತ್ತು.
- ಮರದಿಂದ ಅಥವಾ ಬೊಂಬುಗಳಿಂದ ನಿರ್ಮಿಸಿದ ಮನೆಗಳಲ್ಲಿ ಇವರು ವಾಸಿಸುತ್ತಿದ್ದರು. ಪುರುಷರು ಮತ್ತು ಸ್ತ್ರೀಯರ ಉಡುಗೆ ತೊಡಿಗೆಗಳು ಸರಳವಾಗಿದ್ದುವು. ಹತ್ತಿ, ಉಣ್ಣೆ, ಸೆಣಬು ಮತ್ತು ನಾರುಗಳಿಂದ ನೆಯ್ದ ಅಧಿವಾಸ ಮತ್ತು ನೀವಿಗಳೆಂಬ ಎರಡು ವಸ್ತ್ರಗಳನ್ನು ಉಪಯೋಗಿಸುತ್ತಿದ್ದರು. ಒಂದನ್ನು ಸೊಂಟಕ್ಕೆ ಸುತ್ತಿ ಮತ್ತೊಂದನ್ನು ಹೆಗಲಮೇಲೆ ಹಾಕಿ ಕೊಳ್ಳುತ್ತಿದ್ದರು. ಕೇಶಾಲಂಕಾರದಲ್ಲಿ ಅವರಿಗೆ ಅಭಿರುಚಿ ಇತ್ತು.
- ಪರಸ್ಪರ ಸಂಬಂಧವುಳ್ಳ ಕುಟುಂಬಗಳ ಸಮೂಹ ಗ್ರಾಮ. ಕಾಲಕ್ರಮೇಣ ಈ ಹೆಸರು ಒಂದು ಹಳ್ಳಿಗೆ ಅನ್ವಯಿಸಲ್ಪಟ್ಟಿತು. ಹಲವಾರು ಗ್ರಾಮಗಳು ಕೂಡಿದ ಗುಂಪಿಗೆ ಏಶ್ ಎಂದೂ ಇದಕ್ಕೂ ದೊಡ್ಡ ಸಮುದಾಯಕ್ಕೆ ಜನ ಎಂದೂ ಆ ಕಾಲದಲ್ಲಿ ಕರೆಯುತ್ತಿದ್ದರು.
- ಆಗಿನ ಕಾಲದಲ್ಲಿ ಪ್ರಚಾರದಲ್ಲಿದ್ದ ರಾಜಕೀಯ ವ್ಯವಸ್ಥೆ ರಾಜಪ್ರಭುತ್ವ. ರಾಜನ್ ಪದಕ್ಕೆ ಸಾಮಾನ್ಯವಾಗಿ ಅರಸು ಅಥವಾ ಕುಲದ ಮುಖ್ಯಸ್ಥ ಎಂಬ ಅರ್ಥವಿತ್ತು. ತಮ್ಮೊಳಗೇ ಯೋಗ್ಯನಾದ ಒಬ್ಬನನ್ನು ಅರಸನೆಂದು ಆರಿಸುತ್ತಿದ್ದರು. ರಾಜ ಮುಖ್ಯವಾಗಿ ಕದನಗಳ ನಾಯಕತ್ವ ವಹಿಸುತ್ತಿದ್ದ. ಅತಿ ನಿರಂಕುಶಾಧಿಕಾರಿಯಾಗಿರದೆ ತನ್ನ ಕುಲದ ಆಡಳಿತ ನಡೆಸಿಕೊಂಡು ಸುಸ್ಥಿತಿ ಪಾಲನೆ ಮಾಡುವ ಅಧಿಕಾರಿಯಾಗಿದ್ದ. ಅವನಿಗೆ ನೆರವಾಗಿ ಸಭಾ ಮತ್ತು ಸಮಿತಿ ಎಂಬ ಎರಡು ಸಂಸ್ಥೆಗಳಿದ್ದುವು. ಸಭಾ ಮತ್ತು ಸಮಿತಿಗಳ ಕಾರ್ಯ ಕ್ಷೇತ್ರ ನಿರ್ದಿಷ್ಟವಾಗಿರಲಿಲ್ಲ. ಸಭಾ ಎನ್ನುವ ಪದ ಸಭಾ ಮಂದಿರಕ್ಕೂ ಅನ್ವಯವಾಗುತ್ತಿತ್ತು. ಒಮ್ಮೊಮ್ಮೆ ಪಗಡೆ ಮುಂತಾದ ಆಟಗಳನ್ನಾಡಲು ಸಭಾ ಮಂದಿರಗಳನ್ನು ಉಪಯೋಗಿಸುತ್ತಿದ್ದರು. ಇದನ್ನು ಗಮನಿಸಿದರೆ ಸಭಾ ಎಂಬುದು ಆರಿಸಲ್ಪಟ್ಟ ಕೆಲವೇ ಜನಗಳನ್ನೊಳಗೊಂಡ ಸಂಸ್ಥೆಯಾಗಿದ್ದು ಇದರ ಸದಸ್ಯತ್ವ ಕುಲಶ್ರೇಷ್ಠರಿಗೂ ಸ್ಥಿತಿವಂತರಿಗೂ ಬ್ರಾಹ್ಮಣರಿಗೂ ಸೀಮಿತವಾಗಿತ್ತೆನ್ನಬಹುದು. ಪಂಗಡಗಳಿಗೆ ಸಂಬಂಧಿಸಿದ ರಾಜಕೀಯ ಸಮಸ್ಯೆಗಳ ಮತ್ತು ಇತರ ಕಾರ್ಯಗಳ ಚರ್ಚೆಗೆ ಸಮಿತಿ ಮೀಸಲಾಗಿರುತ್ತಿತ್ತು. ಇದರ ಸದಸ್ಯರ ಸಂಖ್ಯೆ ಸಭೆಯ ಸದಸ್ಯರಿಗಿಂತ ಹೆಚ್ಚಾಗಿದ್ದು ಎಲ್ಲ ಪಂಗಡಗಳಲ್ಲಿಯ ಎಲ್ಲ ಆರ್ಯರೂ ಕುಲಮುಖ್ಯರೂ ಇದರಲ್ಲಿ ಭಾಗವಹಿಸುತ್ತಿದ್ದರು. ಇದನ್ನು ಪ್ರಜಾಜನರ ಹಿತ ಸಾಧನೆಗೆ ಸಹಾಯವಾಗಿ ಬಹುಸಂಖ್ಯೆಯ ಸಾಮಾನ್ಯ ಜನರ ಸಮ್ಮೇಳನ ಎನ್ನಬಹುದು. ಗ್ರಾಮದ ಮುಖ್ಯಸ್ಥ ಗ್ರಾಮಣಿಗೂ ಸಮಿತಿಯ ಸದಸ್ಯತ್ವವಿತ್ತು. ಈ ಎರಡೂ ಸಂಸ್ಥೆಗಳು ರಾಜನ ಸರ್ವಾಧಿಕಾರ ಪರಿಮಿತಿಗೊಳಿಸುತ್ತಿದ್ದುವು. ರಾಜನ ಮತ್ತು ಈ ಸಭಾ ಮತ್ತು ಸಮಿತಿಯ ಸದಸ್ಯರ ನಡುವೆ ಸೌಹಾರ್ದ ಮನೋಭಾವವಿರುತ್ತಿತ್ತು. ಹೀಗಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ಅನ್ಯಾಯ ಪ್ರವರ್ತಕನೂ ಅಧರ್ಮಿಯೂ ಆದ ರಾಜನನ್ನು ಅವನ ಸ್ಥಾನದಿಂದ ಹೊರದೂಡುವ ಅಧಿಕಾರ ಈ ಎರಡೂ ಸಭೆಗಳಿಗೆ ಇದ್ದುವು ಎಂಬುದು ಗಮನಾರ್ಹ.
- ರಾಜನ ಕರ್ತವ್ಯಗಳು ಸ್ಪಷ್ಟವಾಗಿ ನಿರ್ದಿಷ್ಟವಾಗಿರಲಿಲ್ಲ. ಸಾಮಾನ್ಯವಾಗಿ ಪ್ರಜೆಗಳ ರಕ್ಷಣೆ ಅವನ ಮುಖ್ಯ ಕರ್ತವ್ಯ. ಸಭಾ ಮತ್ತು ಸಮಿತಿಗಳಲ್ಲಿ ರೂಪಿಸಲಾದ ಕಾರ್ಯವನ್ನು ಆಚರಣೆಗೆ ತರುವ ಜವಾಬ್ದಾರಿಯೂ ಅವನದು. ಆತನ ಕೆಲಸಕ್ಕೆ ನೇರವಾಗಿ ಪುರೋಹಿತ ಮತ್ತು ಸೇನಾನಿ ಎಂಬ ಅಧಿಕಾರಿಗಳಿದ್ದರು. ಪುರೋಹಿತ ಮತ ಸಂಬಂಧವಾದ ಯಜ್ಞಯಾಗಾದಿ ಕಾರ್ಯಗಳಲ್ಲೂ ಇತರ ಧಾರ್ಮಿಕ ಕಾರ್ಯಗಳಲ್ಲೂ ನ್ಯಾಯನಿರ್ಣಯಗಳನ್ನು ಕೊಡುವುದರಲ್ಲೂ ರಾಜನಿಗೆ ಮಾರ್ಗದರ್ಶಿಯಾಗಿದ್ದ. ಸೇನೆಯ ಮುಖ್ಯಸ್ಥ ಸೇನಾನಿ.
- ಪ್ರಜೆಗಳು ರಾಜನಿಗೆ ವಿಧೇಯರಾಗಿರುತ್ತಿದ್ದರು. ಕುಲದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಗೊಳಿಸಿ ಜನತೆಯ ಹಿತಕ್ಕಾಗಿ ಅಗತ್ಯ ಕಾರ್ಯಕೈಗೊಳ್ಳುವುದು ರಾಜನ ಕರ್ತವ್ಯಗಳಲ್ಲೊಂದು. ಅವನ ಈ ಕಾರ್ಯನಿರ್ವಹಣೆಗಾಗಿ ಪ್ರಜೆಗಳಿಂದ ತೆರಿಗೆ ದೊರೆಯುತ್ತಿತ್ತು. ಇದಲ್ಲದೆ ಸೋತ ಶತ್ರುಗಳಿಂದ ಪಡೆದ ಕಪ್ಪಕಾಣಿಕೆಗಳೂ ಯುದ್ಧದಲ್ಲಿ ದೋಚಿದ ದ್ರವ್ಯವೂ ರಾಜ ಬೊಕ್ಕಸ ಸೇರುತ್ತಿತ್ತು. ರಾಜನವಾಸ ಭವ್ಯವಾದ ಅರಮನೆ. ಆತನ ಅಧಿಕಾರ ಬಹುತೇಕ ಆನುವಂಶಿಕ.
- ಪಶುಪಾಲನೆ, ವ್ಯವಸಾಯ ಮತ್ತು ಬೇಟೆಯಾಡುವುದು ಆರ್ಯರ ಮುಖ್ಯ ಕಸಬುಗಳಾಗಿದ್ದುವು. ಭಾಮಿಯನ್ನು ಸಾಗುವಳಿಗೆ ಯೋಗ್ಯ, ಹುಲ್ಲುಗಾವಲು ಮತ್ತು ಅರಣ್ಯ ಎಂದು ಮೂರು ವಿಧದಲ್ಲಿ ವಿಂಗಡಿಸಿದ್ದರು. ಗೋಧಿ ಮತ್ತು ಬತ್ತದ ಜೊತೆಗೆ ಎಳ್ಳು, ಹೆಸರು ಮುಂತಾದ ಧಾನ್ಯಗಳನ್ನು ಬೆಳೆಸುತ್ತಿದ್ದರು. ನದೀತೀರಗಳಲ್ಲಿಯ ಗ್ರಾಮಗಳಲ್ಲಿದ್ದವರಿಗೆ ಸಾಗುವಳಿಗೆ ನದಿಯ ನೀರೇ ಆಧಾರ. ಆದರೆ ಒಳ ಪ್ರಾಂತ್ಯದಲ್ಲಿದ್ದವರು ಬಾವಿಗಳನ್ನು ತೋಡಿ ಗಡಿಗೆಯ ಏತ ಅಥವಾ ಅರಗಟ್ಟಗಳಿಂದ ತಮ್ಮ ಭೂಮಿಗೆ ನೀರು ಹಾಯಿಸುವ ಏರ್ಪಾಡು ಮಾಡಿಕೊಂಡಿದ್ದರು. ಕುದುರೆ, ಕುರಿ, ನಾಯಿ ಮುಂತಾದ ಪ್ರಾಣಿಗಳನ್ನು ಪಳಗಿಸಿದ್ದರು. ಆನೆ, ಸಿಂಹ ಮೊದಲಾದ ಮೃಗಗಳ ಬೇಟೆಯಾಡುತ್ತಿದ್ದರು.
- ಇವರ ಮುಖ್ಯ ಆಹಾರ ಧಾನ್ಯ, ಗೋಧಿ, ಹಾಲು, ತುಪ್ಪ, ಬೆಣ್ಣೆಗಳನ್ನೂ ಉಪಯೋಗಿಸುತ್ತಿದ್ದರು. ಇವರು ಮಾಂಸಾಹಾರಿಗಳೂ ಆಗಿದ್ದರು. ಸೋಮ ಎಂಬ ಮಾದಕ ಪಾನೀಯವನ್ನೂ ಸುರಾ ಎಂಬ ಮದ್ಯವನ್ನೂ ಸೇವಿಸುತ್ತಿದ್ದರು. ವ್ಯಾಪಾರದಲ್ಲಿ ಇವರು ಹೆಚ್ಚಿನ ಆಸಕ್ತಿ ಹೊಂದಿರಲಿಲ್ಲವೆಂದು ತೋರುತ್ತದೆ. ಜಲ ಮಾರ್ಗಗಳೇ ಆಗ ಹೆಚ್ಚಾಗಿದ್ದು ನಾವೆಯ ಮೂಲಕ ವ್ಯಾಪಾರಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತಿತ್ತು. ಆದರೆ ಗ್ರಾಮ ಮತ್ತು ಸುತ್ತಮುತ್ತ ನಡೆಯುತ್ತಿದ್ದ ವ್ಯಾಪಾರವೇ ಹೆಚ್ಚಾಗಿತ್ತು. ಅಂದಿನ ಕಾಲದಲ್ಲಿ ನಿಷ್ಕಸುವರ್ಣ ಹಿರಣ್ಯ ಎಂಬ ಆಭರಣಗಳಿದ್ದುವು. ಅವನ್ನು ನಾಣ್ಯಗಳಂತೆಯೂ ಬಳಸಲಾಗುತ್ತಿತ್ತು. ಆದರೂ ಹೆಚ್ಚಿನ ವ್ಯಾಪಾರ ವಸ್ತುವಿನಿಮಯದ ಮೂಲಕವೇ ಆಗುತ್ತಿತ್ತು. ಇದಲ್ಲದೆ ಚಮ್ಮಾರ, ಕುಂಬಾರ, ನೇಕಾರ, ಲೋಹಕಾರ, ರಥಕಾರ, ನಾಪಿತ ಮುಂತಾದ ಇತರ ಕಸಬುದಾರರೂ ಇದ್ದರು. ಈ ಕಾಲದ ಆರ್ಯರು ಪ್ರಕೃತಿಪೂಜಕರು. ತಮ್ಮ ಸುತ್ತಲೂ ಕಂಡುಬಂದ ವಿಪುಲವಾದ ಪ್ರಕೃತಿಯೇ ತಮಗೆ ಜೀವನಾಧಾರವಾಗಿದೆಯೆಂಬ ಕಾರಣ, ಸಿಡಿಲು, ಗುಡುಗು, ಮಳೆ-ವಾಯು, ಸೂರ್ಯ-ದೇವರೆಂದು ಸ್ತುತಿಸಿ ಪೂಜಿಸುತ್ತಿದ್ದರು.
- ಋಗ್ವೇದ ಕಾಲದ ಅನಂತರದ ಕಾಲವನ್ನು ಬ್ರಾಹಣಗಳ ಕಾಲ ಅಥವಾ ಪುರಾಣ-ಮಹಾಕಾವ್ಯಗಳ ಕಾಲವೆಂದು ಕರೆಯಲಾಗಿದೆ. ಋಗ್ವೇದ ಕಾಲದಲ್ಲಿ ಹೆಚ್ಚಾಗಿ ಸಪ್ತಸಿಂಧೂ ಪ್ರದೇಶದಲ್ಲಿ ನೆಲೆಸಿದ್ದ ಆರ್ಯರು ಪ್ರಮೇಣ ಗಂಗಾ-ಯಮುನಾ ನದಿಯ ಬಯಲು ಪ್ರದೇಶಗಳನ್ನು ಆಕ್ರಮಿಸತೊಡಗಿದರು. ಈ ಕಾಲಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಯಜುರ್ವೇದವಲ್ಲದೆ ಇತರ ವೇದಗಳಲ್ಲೂ ಬ್ರಾಹಣಗಳೇ ಮೊದಲಾದ ಇತರ ವೇದ ಸಾಹಿತ್ಯಗಳಲ್ಲೂ ಮಹಾಕಾವ್ಯಗಳೆನಿಸಿದ ರಾಮಾಯಣ ಮತ್ತು ಮಹಾಭಾರತಗಳಲ್ಲೂ ಕಂಡುಬರುತ್ತವೆ. ಈ ಸಾಹಿತ್ಯಕೃತಿಗಳು ಅಸ್ತಿತ್ವದಲ್ಲಿ ಬಂದ ನಿರ್ದಿಷ್ಟವಾಗಿ ಹೇಳಲಾಗದು. ಆದರೂ ಕ್ರಿ.ಪೂ. 10ನೆಯ ಶತಮಾನದಿಂದ 7ನೆಯ ಶತಮಾನದ ತನಕ ಹಬ್ಬಿತ್ತೆನ್ನಬಹುದು.
- ಪಂಜಾಬಿನಲ್ಲಿ ನೆಲಸಿದ್ದ ಆರ್ಯರ ಜನಸಂಖ್ಯೆ ಹೆಚ್ಚಾದುದರಿಂದಲೂ ಅಲ್ಲಿಗೆ ವಲಸೆ ಬರುತ್ತಿದ್ದ ಜನರ ಒತ್ತಡದಿಂದಲೂ ಕ್ರಮೇಣ ಆರ್ಯರು ಭಾರತದ ಮಧ್ಯ ಮತ್ತು ಪೂರ್ವ ಭಾಗಗಳತ್ತ ಸರಿದರು. ಅಷ್ಟೇ ಅಲ್ಲದೆ ವಿಂಧ್ಯಪರ್ವತ ದಾಟಿ ದಕ್ಷಿಣಾಪಥದ ಕಡೆಗೂ ಬರಲಾರಂಭಿಸಿದರು. ಈ ಕಾಲಕ್ಕೆ ಸೇರಿದ ಐತರೇಯ ಬ್ರಾಹಣದಲ್ಲಿ ಭಾರತ ದೇಶವನ್ನು ಧ್ರುವ ಮಧ್ಯಮಾ (ಮಧ್ಯದೇಶ), ಉದೀಚಿ (ಉತ್ತರದೇಶ), ಪ್ರಾಚೀ (ಪೂರ್ವದೇಶ), ದಕ್ಷಿಣಾಪಥ ಮತ್ತು ಪ್ರತೀಚಿ (ಪಶ್ಚಿಮ ದೇಶ) ಎಂದು ಐದು ಭಾಗಗಳಾಗಿ ವಿಂಗಡಿಸಲಾಗಿದೆ.
- ರಾಜ್ಯಗಳು: ಋಗ್ವೇದ ಕಾಲದಲ್ಲಿದ್ದ ಕುಲಗಳು ಮತ್ತು ಪಂಗಡಗಳು ಈ ವೇಳೆಗೆ ಕಣ್ಮರೆಯಾಗಿದ್ದುವು ಅಥವಾ ರೂಪ ತಾಳಿದ್ದುವು. ಆಗ ಪ್ರಬಲರಾಗಿದ್ದ ಪುರು, ಅನು, ದಹ್ಯು, ಯದು, ತುರ್ವಸರು ಈ ವೇಳೆಗೆ ತಮ್ಮ ಪ್ರಾಬಲ್ಯ ಕಳೆದುಕೊಂಡಿದ್ದರು. ಪುರುಕಳೂ ಭರತರೂ ಈಗ ಕುರುಗಳೊಡನೆ ಬೆರೆತುಹೋಗಿದ್ದರು. ಕುರು ಮತ್ತು ಪಾಂಚಾಲ ಪ್ರಮುಖ ರಾಜ್ಯಗಳಾಗಿದ್ದುವು. ಕುರುವಂಶದ ಅರಸ ಪರೀಕ್ಷಿತ ; ಅವನ ಮಗ ಅಶ್ವಮೇಧಯಾಗ ಮಾಡಿದ ಜನಮೇಜಯ. ಇವರ ರಾಜ್ಯ ಈಗಿನ ಧಾನೇಶ್ವರ, ದಿಲ್ಲಿ ಮತ್ತು ಗಂಗಾನದಿಯ ಉತ್ತರತೀರದ ಪ್ರದೇಶಗಳನ್ನೊಳಗೊಂಡಿತ್ತು. ಪಾಂಚಾಲತರು ಉತ್ತರ ಪ್ರದೇಶದ ಬರೈಲಿ, ಬದೋನಿ ಮತ್ತು ಫರೂಕಾಬಾದ್ ಜಿಲ್ಲೆಗಳನ್ನು ಆಕ್ರಮಿಸಿದ್ದರು. ಅವಲ್ಲದೆ ಇತರ ಸಣ್ಣ ರಾಜ್ಯಗಳಾದ ಶೃಂಜಯ, ವೀತಹವ್ಯ, ಉಶೀನಾರ, ಶಿಬೆ, ಮತ್ಸ್ಯ ಮುಂತಾದವುಗಳೂ ಈ ಕಾಲದಲ್ಲಿದ್ದುವೆಂದು ತಿಳಿದಿದೆ. ಆರ್ಯರು ಪೂರ್ವಕ್ಕೆ ಸರಿದಂತೆಲ್ಲ ಕ್ರಮೇಣ ಇತರ ರಾಜ್ಯಗಳು ಸ್ಥಾಪಿತವಾದುವು. ಕೋಸಲ ಮತ್ತು ವಿದೇಹ ರಾಜ್ಯಗಳು ಈ ಕಾಲದ ಆರಂಭದಲ್ಲಿ ಪ್ರಮುಖವಾಗಿರಲಿಲ್ಲವಾದರೂ ಕಾಲಕ್ರಮೇಣ ರಾಮಾಯಣ ಮಹಾಕಾವ್ಯದಲ್ಲಿ ಈ ಎರಡು ರಾಜ್ಯಗಳು ಪ್ರಮುಖವಾಗಿವೆ. ಹಾಗೆಯೇ ಕಾಶೀರಾಜ್ಯ, ದಕ್ಷಿಣಬಿಹಾರಿನಲ್ಲಿ ಮಗಧ, ಬಂಗಾಲದಲ್ಲಿ ವಂಗ, ಇವು ಕ್ರಮೇಣ ಪ್ರಾಬಲ್ಯಕ್ಕೆ ಬಂದ ಇತರ ರಾಜ್ಯಗಳು.
- ರಾಜಶಾಸನ: ರಾಜ್ಯ ಕಟ್ಟುವ ಸಂಭ್ರಮದಲ್ಲಿ ಆಯಾಪ್ರದೇಶಗಳಲ್ಲಿ ಮೊದಲೇ ನೆಲಸಿದ್ದ ಅನಾರ್ಯ ಜನರೊಂದಿಗಲ್ಲದೆ, ಪರಸ್ಪರ ಕುಲಗಳ ನಡುವೆಯೂ ಕಲಹಗಳು ಸಹಜವಾದುವು. ಒಬ್ಬೊಬ್ಬ ರಾಜನೂ ತನ್ನ ರಾಜ್ಯ ವಿಸ್ತಾರ ಬಯಸುತ್ತಿದ್ದುದರಿಂದ ರಾಜರು ಸದಾ ಯುದ್ಧ ಸನ್ನದ್ಧರಾಗಿರಬೇಕಾಯಿತು. ಇದು ಅವರ ಅಧಿಕಾರ ಪ್ರಬಲವಾಗಲು ಸಹಾಯಕವಾದ ಅಂಶ. ಅವರ ಈ ಕಾರ್ಯದಲ್ಲಿ ನೆರೆವಾಗಲು ಅಮಾತ್ಯ. ಸುಹೃತ್, ಕೋಶ, ದುರ್ಗ, ಬಲ ಮುಂತಾದ ಅಂಗಗಳು ಅವಶ್ಯವಾದುವು.
- ಪರಕೀಯರ ಆಕ್ರಮಣದಿಂದ ರಕ್ಷಿಸಲು ಮತ್ತು ಶಾಂತಿ ಕಾಲದಲ್ಲಿ ಜನರನ್ನು ಪೋಷಿಸಲು ದಕ್ಷನಾದ ಅರಸನ ಅವಶ್ಯಕತೆ ಇದ್ದು ದಕ್ಷತೆಯ ಆಧಾರದ ಮೇಲೆ ಅಂಥವನೊಬ್ಬನನ್ನು ಚುನಾಯಿಸುವ ಪದ್ಧತಿ ಈ ಕಾಲದ ಆರಂಭದಲ್ಲಿತ್ತು. ಆದರೆ, ಕ್ರಮೇಣ ರಾಜಪ್ರಭುತ್ವ ಬೆಳೆದಂತೆಲ್ಲ ಅದು ಆನುವಂಶಿಕವಾಯಿತು. ರಾಜ್ಯದ ಕ್ಷೇತ್ರ ವಿಸ್ತಾರವಾದಂತೆಲ್ಲ ರಾಜನ ಸ್ಥಾನಮಾನಗಳಲ್ಲಿಯೂ ಬದಲಾವಣೆಗಳಾಗಿ ರಾಜನೆಂಬವವನಿಗಿಂತ ಮಹಾರಾಜನೂ ಅವನಿಗಿಂತ ಮಹಾರಾಜಾಧಿರಾಜನೂ ಹೆಚ್ಚು ಗೌರವಾರ್ಹರೆಂಬ ಭಾವನೆ ಮೂಡಿತು. ಏಕರಾಟಿ ಅಥವಾ ಸಾರ್ವಭೌಮ ಎಲ್ಲರಿಗೂ ಮಿಗಿಲಾದ ಸ್ಥಾನ ಹೊಂದಿದ್ದ. ಅಂಥ ಸಾರ್ವಭೌಮರು ತಮ್ಮ ಪದವಿ ಭದ್ರಗೊಳಿಸಿಕೊಂಡ ಕೂಡಲೇ ರಾಜಸೂಯ, ಅಶ್ವಮೇಧ ಮೊದಲಾದ ಯಾಗಗಳನ್ನು ಮಾಡಿ ತನ್ಮೂಲಕ ಇತರ ರಾಜರು ತಮ್ಮ ಅಧೀನತೆಯನ್ನು ಒಪ್ಪಿ ತಮಗೆ ಕಪ್ಪಕಾಣಿಕೆ ಸಲ್ಲಿಸುವಂತೆ ಮಾಡುತ್ತಿದ್ದರು.
- ರಾಜನ ಆಡಳಿತದ ಮೂಲಸೂತ್ರ ಧರ್ಮ, ಧರ್ಮಕ್ಕಾಗಿ ಮತ್ತು ಧರ್ಮದಿಂದ ಪ್ರಜಾ ಪರಿಪಾಲನೆ ಮಾಡುವುದು ಅವನ ಕರ್ತವ್ಯವಾಗಿತ್ತು. ಅಧಾರ್ಮಿಕ ರಾಜನನ್ನು ಅವನ ಸ್ಥಾನದಿಂದ ಹೊರದೂಡುವ ಹಕ್ಕು ಪ್ರಜೆಗಳಿಗಿತ್ತು. ಧರ್ಮಕ್ಕಾಗಿ ರಾಜ ದಂಡ ಉಪಯೋಗಿಸತೊಡಗಿದ, ದುಷ್ಟ ಶಿಕ್ಷಣೆಗೂ ನ್ಯಾಯರಕ್ಷಣೆಗೂ ದಂಡ ಅತ್ಯವಶ್ಯವೆನಿಸಿತು. ಸಭಾ ಸಮಿತಿಗಳು ಕೇವಲ ಸಲಹಾ ಸಮಿತಿಗಳಾಗಿ ಮಾರ್ಪಟ್ಟು, ರಾಜಕೀಯ ವಿಷಯದಲ್ಲಿ ಅವುಗಳಿಗಿಂತಲೂ ಹೆಚ್ಚಾಗಿ ರಾಜ ಅಧಿಕಾರಿಗಳ ಭಾಗದುಫ ಎಂಬ ಸುಂಕಾಧಿಕಾರಿ, ಸಂಗ್ರಹೀತೃ ಎಂಬ ಅಧಿಕಾರಿ, ಅಕ್ಷವಾಪ, ಕ್ಷತ್ರಿ, ಸೂತ ಮತ್ತು ಸಚಿವ ಮುಂತಾದವರು ರಾಜನಿಂದ ನಿಯಮಿತಗೊಂಡ ಇತರ ಅಧಿಕಾರಿಗಳಾಗಿದ್ದರು. ಇಂಥ ಅಧಿಕಾರಿಗಳನ್ನು ರತ್ನಿಗಳೆಂದು ಕರೆಯಲಾಗಿದೆ. ಪುರೋಹಿತ ಈ ವೇಳೆಗೆ ಬಹಳ ಮುಖ್ಯಸ್ಥಾನ ಪಡೆದಿದ್ದ. ಯಜ್ಞಯಾಗಾದಿಗಳನ್ನು ಮಾಡಿಸಲು ಇವನ ನೆರವು ಅತ್ಯವಶ್ಯವಾಯಿತು. ರಾಜನಿಗೆ ಹಿತ ಸೂಚಿಸುವುದು ಧರ್ಮೋಪದೇಶ ಮಾಡುವುದು ಯಾಜ್ಯಶಾಸನಕ್ಕಾಗಿ ಧರ್ಮಗ್ರಂಥಗಳ ಆಧಾರ ವಿವರಿಸುವುದೂ ಅವನ ಕರ್ತವ್ಯಗಳಾದುವು.
- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಪ್ರಮುಖ ವರ್ಣಗಳನ್ನು ಈ ಕಾಲದಲ್ಲಿ ಸ್ಥಿರಪಟ್ಟುವು. ರಾಜನೂ ಅವನ ಯೋಧರ ಕ್ಷತ್ರಿಯರೆನಿಸಿಕೊಂಡರು. ವೇದಾಧ್ಯೆಯನ ಮತ್ತು ಪೌರೋಹಿತ್ಯಗಳನ್ನು ಮಾಡಿಸುವವರು ಬ್ರಾಹ್ಮಣರೆನಿಸಿಕೊಂಡರು. ಬ್ರಾಹ್ಮಣರನ್ನೂ ಋಷಿಗಳನ್ನೂ ಕಂಡಾಗ ಕ್ಷತ್ರಿಯನೂ ಗೌರವ ಸಲ್ಲಿಸಬೇಕಾದಂಥ ವಿಶಿಷ್ಟಸ್ಥಾನಮಾನ ಬ್ರಾಹ್ಮಣರಿಗಿತ್ತು. ಬೇಸಾಯ, ಕೈಗಾರಿಕೆ ಮತ್ತು ವ್ಯಾಪಾರಗಳಲ್ಲಿ ತೊಡಗಿದ್ದವರು ವೈಶ್ಯರೆನಿಸಿಕೊಂಡರು. ಮೇಲಿನ ಮೂರು ಜಾತಿಗಳವರ ಸೇವೆ ಮಾಡುಕೊಂಡಿರುತ್ತಿದ್ದ ವರ್ಗದವರು ಶೂದ್ರರೆನಿಸಿಕೊಂಡರು. ಬ್ರಾಹ್ಮಣರು, ಕ್ಷತ್ರಿಯರು ಯಾವ ವಿಧವಾದ ತೆರೆಗೆಗಳನ್ನೂ ಕೊಡಬೇಕಾಗಿರಲಿಲ್ಲ. ಅದರ ಭಾರವೆಲ್ಲ ವೈಶ್ಯ ಮತ್ತು ಶೂದ್ರರ ಮೇಲೆ ಬಿತ್ತು.
- ಆರ್ಯಾವರ್ತ ವಿಸ್ತಾರಹೊಂದಿದಾಗ ಸಹಜವಾಗಿಯೇ ಸಂಖ್ಯಾ ದುರ್ಬರಾಗಿದ್ದ ಆರ್ಯರು ಅನಾರ್ಯ ಕನ್ಯೆಯರನ್ನು ಮದುವೆ ಮಾಡಿಕೊಂಡರು. ಅಂತೆಯೇ ಆರ್ಯ ಸ್ತ್ರೀಯರು ಅನಾರ್ಯ ಪುರುಷರನ್ನು ಮದುವೆ ಮಾಡಿಕೊಳ್ಳುವ ಪ್ರಸಂಗಗಳೂ ಬಂದುವು. ಇಂಥ ವಿವಾಹಗಳು ಅನುಲೋಮ ಮತ್ತು ಪ್ರತಿಲೋಮ ವಿವಾಹಗಳೆನಿಸಿಕೊಂಡವು. ಈ ಕಾಲದಲ್ಲಿ ಎಂಥ ವಿಧವಾದ ವಿವಾಹ ಪದ್ಧತಿಗಳು ಆಚರಣೆಯಲ್ಲಿದ್ದುವೆಂಬುದು ಧರ್ಮಸೂತ್ರಗಳಿಂದ ತಿಳಿದುಬಂದಿದೆ. ಬ್ರಹ್ಮ ಮತ್ತು ದೈವ ವಿವಾಹಗಳಲ್ಲಿ ಕನ್ಯಾಪಿತೃ ಸಾಲಂಕೃತ ಕನ್ಯಾದಾನ ಮಾಡುತ್ತಿದ್ದ. ವರದಕ್ಷಿಣೆಯ ಪದ್ಧತಿ ಆ ವೇಳೆಗೆ ಇತ್ತೆಂದು ಇದರಿಂದ ಊಹಿಸಲಾಗಿದೆ. ಆರ್ಷ ಮತ್ತು ಅಸುರ ವಿವಾಹಗಳಲ್ಲಿ ಗಂಡ ಇನ್ನೊಬ್ಬ ಪತ್ನಿಯನ್ನು ಹೊಂದುವ ಅವಕಾಶವಿರಲಿಲ್ಲ. ಪೈಶಾಚ ಮತ್ತು ರಾಕ್ಷಸ ವಿವಾಹಗಳಲ್ಲಿ ವಧುವನ್ನು ಬಲವಂತಪಡಿಸಿ ಅಥವಾ ಯುದ್ಧದಲ್ಲಿ ಗೆದ್ದುಕೊಂಡ ಅನಂತರ ಮದುವೆ ಮಾಡಿಕೊಳ್ಳುತ್ತಿದ್ದ. ಗಾಂಧರ್ವ ವಿವಾಹ ಪದ್ಧತಿಗೆ ದುಷ್ಯಂತ ಮತ್ತು ಶಕುಂತಲೆಯರ ವಿವಾಹ ಉತ್ತಮ ನಿದರ್ಶನ. ಆದರೆ ಕ್ರಮೇಣ ಈ ಪದ್ಧತಿಗಳಿಂದ ವರ್ಣಶುದ್ಧಿ ಕಳೆದುಕೊಳ್ಳುವೆ ಎಂಬ ಶಂಕೆ ಆರ್ಯರಲ್ಲಿ ಮೂಡಿತು. ಮಿಶ್ರ ವಿವಾಹ ತಡೆಗಟ್ಟುವ ಯತ್ನಗಳು ಆರಂಭವಾದುವು. ಆರ್ಯರ ಭಾಷೆ, ಆಚಾರ ವ್ಯವಹಾರಗಳನ್ನು ಅವಲಂಬಿಸಿ ನಡೆಯುತ್ತಿದ್ದ ಅನಾರ್ಯರಿಗೆ ಸಮಾಜದಲ್ಲಿ ಗೌರವ ಸ್ಥಾನವಿತ್ತು. ಹಾಗಿಲ್ಲದಿದ್ದ ಇತರರನ್ನು ಸಮಾಜಬಾಹಿರರಂತೆ ಕಾಣಲಾಗುತ್ತಿತ್ತು, ಜೊತೆಗೆ ಜ್ಞಾನಾರ್ಜನೆ ಹೆಚ್ಚಿದಂತೆಲ್ಲ ಶಿಕ್ಷಣದಲ್ಲಿ ಪ್ರಗತಿಯುಂಟಾಯಿತು. ಒಂದೊಂದು ವೃತ್ತಿಯೂ ಒಂದೊಂದು ವಿದ್ಯೆಯಾಗಿ ಪರಿಣಮಿಸಿ ಅದರಲ್ಲಿ ನೈಪುಣ್ಯ ಪಡೆಯಲು ಕ್ರಮಬದ್ಧ ದೀರ್ಘಕಾಲದ ಶಿಕ್ಷಣ ಅವಶ್ಯವಾಯಿತು. ಸಹಜವಾಗಿಯೇ ಬೇಕಾದಂತೆಲ್ಲ ವೃತ್ತಿಗಳನ್ನು ಬದಲಾಯಿಸುವುದು ಅಸಾಧ್ಯವಾಯಿತು. ವೃತ್ತಿಗಳು ಪ್ರತ್ಯೇಕತೆಯನ್ನು ಹೊಂದಿ, ತಂದೆ ಅವಲಂಬಿಸಿದ ವೃತ್ತಿಯನ್ನೇ ಮಗ ಅವಲಂಬಿಸುವುದರಿಂದ ಅವನಿಗೆ ಅದರಲ್ಲಿ ಶಿಕ್ಷಣ ಹೊಂದಲೂ ಸುಲಭವಾಯಿತು. ಇದರ ಪರಿಣಾಮವಾಗಿ ವೃತ್ತಿಗಳು ಸಹ ವಂಶಪಾರಂಪರ್ಯವಾದುವು. ಈ ವೃತ್ತಿ ಭೇದಗಳು ಬ್ರಾಹ್ಮಣನ, ಕ್ಷತ್ರಿಯ, ವೈಶ್ಯರೆಂಬ ವರ್ಣಗಳು ಸ್ಥಿರವಾಗಲು ಸಹಾಯಕವಾದುವು.
- ಈ ಕಾಲದ ಆರ್ಯರ ಆಹಾರ ಪಾನೀಯ ಆಟಪಾಟ ಉಡುಗೆತೊಡಿಗೆಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಾಣಬರುವುದಿಲ್ಲ. ಮಾನವನ ಜೀವನದಲ್ಲಿ ನಾಲ್ಕು ಪ್ರಮುಖ ಘಟ್ಟಗಳಿರುತ್ತವೆಂಬ ನಂಬಿಕೆ ಈ ಕಾಲಕ್ಕೆ ಕಂಡುಬಂತು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳೇ ಈ ನಾಲ್ಕು ಆಶ್ರಮಗಳು.
- ಆರ್ಥಿಕವಾಗಿ ಆರ್ಯರು ಈಗ ಬಹಳ ಪ್ರಗತಿ ಹೊಂದಿದ್ದರು. ವಿಶಾಲ ನದೀ ಪ್ರದೇಶಗಳಲ್ಲಿ ಹೆಚ್ಚಾಗಿ ಬತ್ತವನ್ನು ಬೆಳೆಸುತ್ತಿದ್ದರು. ವ್ಯವಾಸಾಯಕ್ಕಾಗಿ ನೀರಾವರಿ ಸೌಲಭ್ಯ ಪಡೆದರು. ಕ್ರಮೇಣ ವ್ಯಾಪಾರಕ್ಷೇತ್ರ ವಿಸ್ತರಿಸಿ ಧನಿಕ ವರ್ತಕರು ನಗರಗಳಲ್ಲಿ ವಾಸಿಸುತ್ತಿದ್ದುದನ್ನು ಈಗ ಕಾಣುತ್ತೇವೆ. ಈ ಕಾಲಕ್ಕೆ ಬೆಳ್ಳಿಯ ಉಪಯೋಗ ಹೆಚ್ಚಾಗಿತ್ತು. ಜೊತೆಗೆ ಕಬ್ಬಿಣವನ್ನು ಬಳಸುತ್ತಿದ್ದರು. ಆದರೂ ಈ ಕಾಲಕ್ಕೆ ಬರವಣಿಗೆ ಹೆಚ್ಚು ಪ್ರಚಾರದಲ್ಲಿರದೆ ಗ್ರಂಥಗಳ ಅಧ್ಯಯನ ನಡೆಯುತ್ತಿದ್ದುವು. ಭಾರತದಲ್ಲಿ ನಾಣ್ಯಗಳ ಚಲಾವಣೆ ಆರಂಭವಾದದ್ದು ಕ್ರಿ.ಪೂ.6ನೆಯ ಶತಮಾನದ ವೇಳೆಗೆ ಎಂಬುದು ಹಲವರ ಊಹೆ.
- ಋಗ್ವೇದದ ಅನಂತರದ ಕಾಲದ ವೈಶಿಷ್ಟ್ಯ ಅದರ ಅಮೋಘ ಸಾಹಿತ್ಯ ಸೃಷ್ಟಿ ಮತ್ತು ಧಾರ್ಮಿಕ ಭಾವನೆಗಳು. ಯಜುರ್ವೇದಾದಿ ಇತರ ಮೂರು ವೇದಗಳಲ್ಲದೆ ಬ್ರಾಹ್ಮಣ, ಆರಣ್ಯಕ, ಉಪನಿಷತ್ತು, ಮಹಾಕಾವ್ಯಗಳೆನಿಸಿದ ರಾಮಾಯಣ, ಮಹಾಭಾರತ ಹಾಗೂ ಇತರ ಲೌಕಿಕ ಸಾಹಿತ್ಯ ಕೃತಿಗಳು ಈ ಕಾಲದಲ್ಲಿ ಹುಟ್ಟಿಕೊಂಡುವು. ಋಗ್ವೇದ ಕಾಲದಲ್ಲಿ ಪ್ರಮುಖರಾಗಿದ್ದ ಇಂದ್ರ, ವರುಣ ಮುಂತಾದ ದೇವತೆಗಳ ಸ್ಥಾನಗಳನ್ನು ಕ್ರಮೇಣ ಶಿವ ಮತ್ತು ವಿಷ್ಣು ಆಕ್ರಮಿಸಿದರು. ತ್ರಿಶೂಲಧಾರಿ ಶಿವನ ಕಲ್ಪನೆ ಮೊಹೆಂಜೊದಾರೊ ಕಾಲದಲ್ಲಿ ಇತ್ತೆಂದು ಹೇಳಲಾಗಿದೆ. ಋಗ್ವೇದ ಕಾಲದಲ್ಲಿ ರುದ್ರನಿಗೆ ಪ್ರಮುಖ ಸ್ಥಾನವಿತ್ತು ; ಆದರೆ ಕ್ರಮೇಣ ಶಿವ ಮತ್ತು ವಿಷ್ಣು ಆರಾಧನೆ ಮತ್ತು ಶಕ್ತಿಪೂಜೆ ಆರಂಭವಾದವು. ಆರ್ಯಸಂಸ್ಕøತಿಯಲ್ಲಿ ಬೆರೆತ ಆರ್ಯೇತರರನ್ನು ಒಲಿಸಿಕೊಳ್ಳಲು ಆರ್ಯರು ಮಾಡಿದ ಪ್ರಯತ್ನವಿದು ಎಂಬುದು ಹಲವರ ಅಭಿಪ್ರಾಯ. ಕ್ರಮೇಣ ಈ ದೇವತೆಗಳನ್ನು ಮತ್ತು ಇತರ ದೇವತೆಗಳನ್ನು ಉಪಾಸನೆ ಮಾಡುವ ಪದ್ಧತಿ ಈ ಕಾಲದಲ್ಲಿ ಬೆಳೆದು ಬಂತು. ಪುರಾಣಗಳು ಮತ್ತು ಇತಿಹಾಸಗಳು ಈ ವ್ಯಾಪಕತೆಗೆ ಪೋಷಕವಾದುವು.
- ಕ್ರಿಸ್ತ ಪೂರ್ವದಿಂದ ಕ್ರಿಸ್ತಶಕ 5-6ನೆಯ ಶತಮಾನಗಳ ತನಕದ ಭಾರತ ಇತಿಹಾಸದ ರಚನೆಗೆ ಪುರಾಣಗಳು ಸಹಾಯಕವಾಗಿವೆ. ಇವುಗಳಲ್ಲಿ ಬರುವ ಎಲ್ಲ ಹೇಳಿಕೆಗಳೂ ವಂಶಾವಳಿಗಳೂ ಸರಿಯೆಂದು ಒಪ್ಪಲಾಗದಿದ್ದರೂ ಇತರ ಆಧಾರಗಳೊಡನೆ ಹೋಲಿಸಿದಾಗ ಕೆಲವು ಚಾರಿತ್ರಿಕ ಅಂಶಗಳನ್ನು ಪುರಾಣಗಳಲ್ಲಿ ಕಾಣಬಹುದು. ಭಾಗವತ, ವಿಷ್ಣು, ವಾಯು, ವತ್ಸ್ಯ, ಮಾರ್ಕಂಡೇಯ ಸ್ಕಂದ, ಅಗ್ನಿ ಇವು ಮುಖ್ಯವಾದ ಕೆಲವು ಪುರಾಣಗಳು.
- ರಾಮಾಯಣ, ಮಹಾಭಾರತ ಭಾರತದ ಮಹಾಕಾವ್ಯಗಳು. ಆರ್ಯರ ಭವ್ಯಜೀವನ, ಸಂಸ್ಕøತಿಗಳ ವಿಶ್ವಕೋಶಗಳೆಂದು ಇವನ್ನು ವರ್ಣಿಸಲಾಗಿದೆ. ವಾಲ್ಮೀಕಿಮುನಿ ವಿರಚಿತ ರಾಮಾಯಣ ಅಯೋಧ್ಯೆಯ ಅರಸ ರಾಮನ ಚರಿತ್ರೆಯನ್ನೊಳಗೊಂಡಿದೆ. ಈಗಿರುವ ರಾಮಾಯಣ ಹಿರಿದಾದ ಗ್ರಂಥ. ಆದರೆ ಮೂಲತಃ ಇದು ರಾಜ್ಯಭ್ರಷ್ಟನಾಗಿದ್ದ ರಾಮನನ್ನು ಕುರಿತಾದ ಸಣ್ಣಕತೆ, ಕ್ರಮೇಣ ಇದರ ರೂಪವೇ ಬೇರೆಯಾಗಿ ರಾಮ ದಕ್ಷಿಣಾಪಥದ ಕಡೆಗೆ ಹೋದನೆಂದೂ ಲಂಕಾಧಿಪ ರಾವಣನನ್ನು ಸೋಲಿಸಿದನೆಂದೂ ಹೇಳುವ ಕಥೆಯಾಗಿದೆ. ಮೊದಮೊದಲು ಮೂಡಿ ಬಂದ ಕಥೆಗಳಲ್ಲಿ ರಾಮ ಒಬ್ಬ ಸಾಮಾನ್ಯ ಅರಸ. ಆದರೆ ಆರ್ಯ ಸಂಸ್ಕøತಿ ವಿಂಧ್ಯಪರ್ವತ ದಾಟಿ ದಕ್ಷಿಣಭಾರತದ ಕಡೆಗೂ ವಿಸ್ತರಿಸಿದಾಗ ಇದಕ್ಕೆ ಅಯೋಧ್ಯಾಧಿಪನಾಗಿದ್ದ ರಾಮ ಕಾರಣನೆಂಬ ಭಾವನೆಯನ್ನೊಳಗೊಂಡ ಸಾಹಿತ್ಯ ಮೂಡಿತು. ಈ ಕಾವ್ಯ ಅಂದಿನ ಜನಜೀವನಕ್ಕೆ ಸಂಬಂಧಿಸಿದಂತೆ ಹಲವು ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಐತಿಹಾಸಿಕ ದೃಷ್ಟಿಯಿಂದ ನೋಡಿದಾಗ ಇದರಲ್ಲಿ ನಿರೂಪಿತವಾಗಿರುವ ಘಟನೆಗಳೆಲ್ಲ ವಾಸ್ತವಿಕವಾದವು ಎಂದು ಹೇಳಲಾಗದು. ಆದರೆ ಅಂದಿನ ಜನಜೀವನಕ್ಕೆ ಸಂಬಂಧಿಸಿದಂತೆ ಹಲವು ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಐತಿಹಾಸಿಕ ದೃಷ್ಟಿಯಿಂದ ನೋಡಿದಾಗ ಇದರಲ್ಲಿ ನಿರೂಪಿತವಾಗಿರುವ ಘಟನೆಗಳೆಲ್ಲ ವಾಸ್ತವಿಕವಾದವು ಎಂದು ಹೇಳಲಾಗದು. ಆದರೆ ಅಂದಿನ ಸಂಸ್ಕøತಿಯ ಮೇಲೆ ಈ ಕಾವ್ಯ ಬೆಳಕು ಚೆಲ್ಲುತ್ತದೆ. (ನೋಡಿ- ರಾಮಾಯಣ)
- ರಾಮಾಯಣಕ್ಕಿಂತಲೂ ಗಾತ್ರದಲ್ಲಿ ಹಾಗೂ ವೈವಿಧ್ಯದಲ್ಲಿ ಹಿರಿದಾದುದು ಮಹಾಭಾರತ. ರಾಮಾಯಣದಲ್ಲಿ ಮಾದರಿಯಾದ ಉತ್ತಮ ಜೀವನದ ಚಿತ್ರಣವಿದ್ದರೆ ಮಹಾಭಾರತದಲ್ಲಿ ಮಾನವನಲ್ಲಿ ತುಂಬಿರುವ ಒಳ್ಳೆಯ, ಕೆಟ್ಟ, ಉದಾತ್ತ ಮತ್ತು ನೀಚ ಗುಣಗಳ, ಎಲ್ಲ ವಿಧದ ಸ್ವಭಾವಗಳುಳ್ಳ ಜನರ ಅಗಾಧವಾದ ಮೇಳವನ್ನು ಕಾಣುತ್ತೇವೆ. ಈ ಕಾವ್ಯದ ಮೂಲಭಾಗ ವ್ಯಾಸಮಹರ್ಷಿಗಳಿಂದ ರಚಿತವಾದುದಾದರೂ ಅನೇಕಾನೇಕ ಕಥೆಗಳೂ ಉಪಕಥೆಗಳೂ ಕಾಲಕ್ರಮೇಣ ಇದರಲ್ಲಿ ಸೇರಿಕೊಂಡು ಇದರ ಗಾತ್ರವನ್ನು ಹೆಚ್ಚಿಸಿವೆ. (ನೋಡಿ- ಮಹಾಭಾರತ)
- ಮಹಾಭಾರತದ ಒಂದು ಅಂಗ ಭಗವದ್ಗೀತೆ. ಇದು ಎಲ್ಲ ಉಪನಿಷತ್ತುಗಳಲ್ಲಿಯ ತತ್ತ್ವದ ಸಾರವನ್ನೊಳಗೊಂಡಿದೆ. ಜ್ಞಾನ, ಭಕ್ತಿ ಮತ್ತು ಕರ್ಮ ಎಂಬ ಮೂರು ಮುಕ್ತಿ ಸಾಧನೆಗೆ ಮಾರ್ಗಗಳಿದ್ದರೂ ಒಬ್ಬೊಬ್ಬ ವ್ಯಕ್ತಿಯೂ ವೈಯಕ್ತಿಕ ಗುಣಕ್ಕೆ ಸರಿಹೊಂದುವ ಮಾರ್ಗವನ್ನವಲಂಬಿಸಿ, ಜೀವನದಲ್ಲಿ ಹಲವು ಉದಾತ್ತ ಧ್ಯೇಯಗಳನ್ನಿಟ್ಟುಕೊಂಡು, ನಿಷ್ಕಾಮಕರ್ಮಿಯಾಗಿ ಎಲ್ಲರಿಗೂ ಅನುಕೂಲವಾಗುವಂಥ ಬಾಳನ್ನು ನಡೆಸುವುದು ಧರ್ಮ ಎಂದು ಭಗವದ್ಗೀತೆ ಸಾರುತ್ತದೆ. ಮಹಾಭಾರತದ ಯುದ್ಧ ಆರಂಭವಾಗುವ ಮೊದಲು ರಣರಂಗದಲ್ಲಿ ತನ್ನ ಬಂಧು ಬಳಗವನ್ನೂ ಮಿತ್ರರನ್ನೂ ಕಂಡು ಅವರನ್ನು ವಧಿಸಬೇಕಾದ್ದು ಅನಿವಾರ್ಯ ಎಂಬುದನ್ನು ಮನಗಂಡ ಅರ್ಜುನ ಯುದ್ಧದಿಂದ ವಿರಮಿಸುವುದಾಗಿ ಯೋಚಿಸಿದ ಸಂದರ್ಭದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ತತ್ತ್ವಜ್ಞಾನವೇ ಭಗವದ್ಗೀತೆ. (ನೋಡಿ- ಭಗವದ್ಗೀತೆ)
- ಭಾರತಯುದ್ಧದ ಕಾಲ: ಕರ್ನಾಟಕದ ಐಹೊಳೆಯಲ್ಲಿರುವ ಚಾಳುಕ್ಯ ಇಮ್ಮಡಿ ಪುಲಕೇಶಿಯ ಶಾಸನದಿಂದ ಭಾರತಯುದ್ಧ ಕ್ರಿ.ಪೂ. 3102ರಲ್ಲಿ ನಡೆಯಿತೆಂದು ಸೂಚಿತವಾಗುತ್ತದೆ. ಇದು ಕಲಿಯುಗಾರಂಭದ ವರ್ಷವೆಂದೂ ಹೇಳಿದೆ. ವರಾಹ ಮಿಹಿರ, ಕಲ್ಹಣ ಮುಂತಾದವರ ಹೇಳಿಕೆಯಂತೆ ಕಲಿಯುಗ ಆರಂಭವಾಗಿ 653 ವರ್ಷಗಳ ತರುವಾಯ ಭಾರತದ ಕದನವಾಯಿತು. ಎಂದರೆ ಇದು ಕ್ರಿ. ಪೂ. 2449ರಲ್ಲಿ ನಡೆಯಿತು. ಪುರಾಣಗಳಲ್ಲಿ ಕೊಡಲಾದ ಅರಸರ ವಂಶಾವಳಿಗಳ ಆಧಾರದ ಮೇಲೆ ಕ್ರಿ.ಪೂ. 9500ರಲ್ಲಿ ಈ ಯುದ್ಧವಾಯಿತೆಂದು ಪರ್ಗಿಟರ್ ಲೆಕ್ಕಹಾಕಿದ್ದಾನೆ. ಈ ಯುದ್ಧ ಕ್ರಿ.ಪೂ. 1400ರಲ್ಲಿ ಅಥವಾ ಕ್ರಿ.ಪೂ. 1000ದಲ್ಲಿ ನಡೆಯಿತೆಂಬುದು ಇತರರ ಅಭಿಪ್ರಾಯ. ಕುರುಕ್ಷೇತ್ರದಲ್ಲಿ ನಡೆಯಿತೆನ್ನಲಾದ ಈ ಯುದ್ಧದಲ್ಲಿ ಪಾಲ್ಗೊಂಡ ಸೈನ್ಯಗಳ ಗಾತ್ರ ಮುಂತಾದವನ್ನು ಕೂಲಂಕಷವಾಗಿ ಚರ್ಚಿಸಿ, ಮಹಾಭಾರತಯುದ್ಧ ಕುರುಕ್ಷೇತ್ರದಲ್ಲಿ ನಡೆಯಿತೆಂದು ಹೇಳುವುದು ಅಸಂಬದ್ಧವೆಂದೂ ಅಂಥ ಯುದ್ಧ ಐತಿಹಾಸಿಕ ದೃಷ್ಟಿಯಲ್ಲಿ ನಡೆದೇ ಇರಲಿಲ್ಲವೆಂಬುದೂ ಇತ್ತೀಚೆಗಿನ ಕೆಲ ವಿದ್ವಾಂಸರ ವಾದ. ಕಾವ್ಯದ ದೃಷ್ಟಿಯಲ್ಲಿ ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದವರ ಸಂಖ್ಯೆ ಉತ್ಪ್ರೇಕ್ಷಿಸಿ ಹೇಳಿದಂತಿದೆ. ಆದರೆ ವಸ್ತುತಃ ಇದು ಅಷ್ಟು ದೊಡ್ಡ ಯುದ್ಧವಾಗಿರಲಾರದು.
- ಗಣರಾಜ್ಯಗಳು: ಕ್ರಿ.ಪೂ. ಆರನೆಯ ಶತಮಾನದ ಮತ್ತು ಅನಂತರದ ಒಂದೆರಡು ಶತಮಾನಗಳಲ್ಲಿ ಭಾರತದೊಳಗೆ ಅನೇಕ ರಾಜ್ಯಗಳೂ ಗಣರಾಜ್ಯಗಳೂ ಅಲ್ಪಜನಾಧಿಪಥ್ಯಗಳೂ ಇದ್ದುವೆಂದು ತಿಳಿದುಬರುತ್ತದೆ. ಬೌದ್ಧ ಸಾಹಿತ್ಯದಲ್ಲಿ ಇವನ್ನು ಸೊಲಸ ಮಹಾಜನಪದಗಳೆಂದು (ಷೋಡಶ ಮಹಾಜನಪದ) ಕರೆಯಲಾಗಿದೆ. ಪುರಾಣಗಳಲ್ಲೂ ಈ ಜನಪದಗಳ ಉಲ್ಲೇಖವಿದೆ. ಆದರೆ ಸಾಹಿತ್ಯ ಕೃತಿಗಳಲ್ಲಿ ಉಕ್ತವಾದ ಗಣರಾಜ್ಯಗಳೆಲ್ಲ ಒಂದೇ ತೆರನಾಗಿರದೆ ಬೇರೆ ಬೇರೆಯಾಗಿವೆ. ಪುರಾಣಗಳಲ್ಲಿ ಕಾಂಬೋಜ, ಗಾಂಧಾರ, ಅಂಗ, ಆವಂತಿ, ಪೌರವ, ಐಕ್ಷ್ವಾಕ, ಮೈಥಿಲ, ಶೂರಸೇನ, ಹೈಹಯ, ಕಳಿಂಗ, ಅಶ್ಮಕ, ಪಾಂಚಾಲ, ಕಾಶಿ, ವೀತಿಹೋತ್ರ, ಕೋಸಲ ಮತ್ತು ಮಗಧ ಎಂಬ ಹದಿನಾರು ರಾಜ್ಯಗಳನ್ನು ಉಲ್ಲೇಖಿಸಲಾಗಿದೆ. ಇವು ಆಗ ಇದ್ದು ರಾಜ್ಯಗಳಲ್ಲಿ ಪ್ರಮುಖವು ಪ್ರಬಲವೂ ಆಗಿದ್ದ ರಾಜ್ಯಗಳು. ಬೇರೆ ರಾಜ್ಯಗಳೂ ಇದ್ದುವು. ಬೇರೆ ಬೇರೆ ಕಾಲಗಳಲ್ಲಿ ರಚಿತವಾದ ಗ್ರಂಥಗಳಲ್ಲಿ ಆಯಾ ಕಾಲದ ಪ್ರಬಲ ರಾಜ್ಯಗಳ ಹೆಸರನ್ನು ಸೂಚಿಸಲಾಗಿದೆ. ಜೊತೆಗೆ ಆ ಸಾಹಿತ್ಯದ ಧರ್ಮದೃಷ್ಟಿಯನ್ನನುಸರಿಸಿ ನೋಡಿದಲ್ಲಿ ಅವು ತಮ್ಮ ಧರ್ಮಕ್ಕೆ ಉತ್ತೇಜನ ಕೊಟ್ಟ ರಾಜ್ಯಗಳನ್ನು ಮಾತ್ರ ಹೆಸರಿಸಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಗಣರಾಜ್ಯಗಳಲ್ಲದೆ ಕಪಿಲವಸ್ತುವಿನ ಶಾಕ್ಯರು, ಪಾವಾ ಮತ್ತು ಕುಶಿನಾರದ ಮಲ್ಲರು, ವೈಶಾಲಿಯ ಲಿಚ್ಫವಿಗಳು, ರಾಮಗ್ರಾಮದ ಕೋಲಿಯರು, ಅಲ್ಲಕಪ್ಪದ ಬುಲಿಗಳು. ಪಿಪ್ಪಲಿವನದ ಮೋರಿಯರು ಗೌತಮಬುದ್ಧನ ಕಾಲದಲ್ಲಿದ್ದ ಜನಾಂಗಗಳೆಂದು ಬೌದ್ಧಗ್ರಂಥಗಳಿಂದ ಸೂಚಿತವಾಗುತ್ತದೆ. ವಿದೇಹ ರಾಷ್ಟ್ರದ ದಕ್ಷಿಣಕ್ಕೆ ಮಗಧ ಮತ್ತು ಅಂಗದೇಶಗಳು, ಅವುಗಳ ಪೂರ್ವಕ್ಕೆ ಪ್ರಾಗ್ಜೋತಿಷನಗರ ಮತ್ತು ಕಾಮರೂಪ ದೇಶಗಳು ಇದ್ದುವು. ವಿಂಧ್ಯ ಪರ್ವತದ ಪ್ರದೇಶದಲ್ಲಿ ಸಿಂಧೂ ನದಿಯ ಮುಂದಿಂದ ಆರಂಭಿಸಿ ಪಶ್ಚಿಮದಿಂದ ಪೂರ್ವಕ್ಕೆ ನಾವಿರ, ಅನರ್ತ, ಲಾಟ, ಆವಂತಿ ಮತ್ತು ವತ್ಸ ದೇಶಗಳೂ ಅವುಗಳ ದಕ್ಷಿಣ ಮಧ್ಯದಲ್ಲಿ ಆಶ್ಮಕ, ವಿದರ್ಭ ಮತ್ತು ಮುಳಕರಾಷ್ಟ್ರಗಳೂ ಇದ್ದುವು.
- ಈ ರಾಜ್ಯಗಳಲ್ಲಿ ಮುಖ್ಯವಾದದ್ದು ಪೌರವ ಮನೆತನ. ಇವರು ಆಳಿದ ಪ್ರದೇಶವನ್ನು ಕುರುದೇಶವೆಂದು ಬೌದ್ಧಗ್ರಂಥಗಳಲ್ಲಿ ಕರೆಯಲಾಗಿದೆ. ಮಹಾಭಾರತ ಯುದ್ಧದ ಅನಂತರ ಇಲ್ಲಿ ಆಳಿದ ಮೊದಲನೆಯ ಅರಸು ಪರೀಕ್ಷಿತ. ಇವನ ರಾಜ್ಯ ಸರಸ್ವತೀ ನದಿಯಿಂದ ಗಂಗೆಯವರೆಗೆ ಹಬ್ಬಿದ್ದು, ಥಾನೇಶ್ವರ ದೆಹಲಿ ಮುಂತಾದ ನಗರಗಳನ್ನೂ ಗಂಗಾನದಿಯ ಉತ್ತರದ ಬಯಲನ್ನೂ ಒಳಗೊಂಡಿತ್ತು. ರಾಜಧಾನಿ ಹಸ್ತಿನಾಪುರ. ಶ್ರೀಕೃಷ್ಣ ಮರಣಾನಂತರ ಪರೀಕ್ಷಿತನ ಆಳ್ವಿಕೆಯೊಡನೆ ಕಲಿಯಗ ಆರಂಭವಾಯಿತೆಂಬ ಪ್ರತೀತಿಯಿದೆ. ಗಾಂಧಾರದೇಶದ ತಕ್ಷಶಿಲೆಯಲ್ಲಿ ಆಳುತ್ತಿದ್ದ ನಾಗವಂಶದ ತಕ್ಷಕಮಹಾರಾಜ ಹಸ್ತಿನಾಪುರದ ಮೇಲೆ ನುಗ್ಗಿ ಪರೀಕ್ಷಿತನನ್ನು ಕೊಂದ. ಅನಂತರ ಆಳಿದ ಜನಮೇಜಯ ತನ್ನ ಸೇಡು ತೀರಿಸಿಕೊಳ್ಳಲು ತಕ್ಷಶಿಲೆ ಮುತ್ತಿದ. ಜನಮೇಜಯನ ಅನಂತರದ ನಾಲ್ಕು ತಲೆಮಾರಿನ ಬಳಿಕ ಆಳಿದ ನಿಚಕ್ಷುವಿನ ಕಾಲದಲ್ಲಿ ಜಲಪ್ರಳಯವುಂಟಾಗಿ ಹಸ್ತಿನಾಪುರ ಕೊಚ್ಚಿಹೋಯಿತು. ಅದರ ಪರಿಣಾಮವಾಗಿ ಇಲ್ಲಿಯ ಜನ ವತ್ಸಭೂಮಿಗೆ ವಲಸೆಹೋದರು. ಕೌಶಾಂಬಿ ಅವರ ರಾಜಧಾನಿಯಾಯಿತು. ಇಲ್ಲಿ ಆಳಿದ ಅರಸರಲ್ಲಿ ಭಾಸಕವಿಯ ಸ್ವಪ್ನವಾಸದ ದತ್ತದ ನಾಯಕ ಉದಯನ ಪ್ರಮುಖನಾದವ. ಆವಂತಿಯ ಅರಸ ಚಂಡಪ್ರದ್ಯೋತಮಹಾಸೇನನೂ ಮಗಧರಾಜ್ಯದ ಅಜಾತಶತ್ರುವೂ ಈತನ ಸಮಕಾಲೀನರು.
- ಕೋಸಲ: ಈಗಿನ ಔಧ (ಅಯೋಧ್ಯಾ) ಜಿಲ್ಲೆಯನ್ನೊಳಗೊಂಡಿದ್ದ ರಾಜ್ಯ. ಮೊದಲು ಅಯೋಧ್ಯಾ, ಸಾಕೇತ, ಶ್ರಾವಸ್ತಿ (ಈಗ ತಪತೀ ನದಿ ದಂಡೆಯಲ್ಲಿರುವ ಸಾಹೇತ್‍ಮಾಹೇತ್) ಕ್ರಮವಾಗಿ ಇದರ ರಾಜಧಾನಿಗಳಾಗಿದ್ದುವು. ಈ ರಾಜ್ಯದ ಮೊದಲನೆಯ ದೊರೆ ಇಕ್ಷ್ವಾಕು. ಕಾಶಿಯ ಬ್ರಹ್ಮದತ್ತ ಕೋಸಲವನ್ನು ಒಮ್ಮೆ ಗೆದ್ದುಕೊಂಡನಾದರೂ ಅಂತಿಮವಾಗಿ ಕೋಸಲದ ಅರಸ ಮಹಾಕೋಸಲ ವಿಜಯಿಯಾಗಿ ಕಾಶಿಯನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದ. ಈತನ ಮಗ ಪ್ರಸೇನಜಿತ್, ಮಗಳು ಕೋಸಲದೇವಿ. ಈಕೆಯನ್ನು ಮಗಧ ರಾಜ್ಯದ ಬಿಂಬಿಸಾರನಿಗೆ ಕೊಟ್ಟಾಗ ಕಾಶಿ ಅವನಿಗೆ ಬಳುವಳಿಯಾಗಿ ಬಂತು.
- ಮಗಧದ ಪೂರ್ವಕ್ಕೆ ಅಂಗದೇಶ, ಅದರ ರಾಜಧಾನಿ ಚಂಪಾನಗರ (ಈಗಿನ ಭಾಗಲ್‍ಪುರ). ಇಲ್ಲಿಯ ಅರಸ ಬ್ರಹ್ಮದತ್ತ ಮಗಧದೇಶದ ಭಟ್ಟಿಯನನ್ನು ಸೋಲಿಸಿದ. ಇದರ ಸೇಡು ತೀರಿಸಿಕೊಳ್ಳಲು ಭಟ್ಟಿಯ ಮಗ ಬಿಂಬಿಸಾರ ಬ್ರಹ್ಮದತ್ತನನ್ನು ಸೋಲಿಸಿದ್ದನಲ್ಲದೆ ಅಂಗದೇಶವನ್ನು ತನ್ನ ರಾಜ್ಯಕ್ಕೆ ಸೇರಿಸಿ ಕೊಂಡು ತನ್ನ ಮಗ ಅಜಾತಶತ್ರುವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡು ತನ್ನ ಮಗ ಅಜಾತಾತ್ರುವನ್ನು ಆ ಪ್ರಾಂತ್ಯದ ಅಧಿಕಾರಿಯಾಗಿ ನೇಮಿಸಿದ. ಗಂಗಾತೀರದಲ್ಲಿದ್ದ ರೇವುಪಟ್ಟಣಗಳ ಮೇಲೆ ಅಧಿಕಾರ ಹೊಂದಿದ್ದ ಅಂಗದೇಶ ತನ್ಮೂಲಕ ವಿದೇಶೀವ್ಯಾಪಾರದಲ್ಲಿ ಬಹಳ ಮುಂದುವರಿದಿದ್ದ ಸಂಪದ್ಭರಿತ ಸಾಜ್ಯ. ಇಲ್ಲಿಂದ ವ್ಯಾಪಾರಿಗಳು ಸುವರ್ಣ ಭೂಮಿಗೆ (ದಕ್ಷಿಣ ಅನ್ನಮ್, ಕೋಚಿನ್-ಚೀನ) ಹೋಗಿ ನೆಲಸಿ, ತಮ್ಮದೇಶದ ರಾಜಧಾನಿಯಾದ ಚಂಪಾನಗರ ಹೆಸರನ್ನು ಅಲ್ಲಿಯ ತಮ್ಮ ನೆಲೆಗೆ ಇಟ್ಟುಕೊಂಡಿದ್ದರು.
- ಜನಕಮಹಾರಾಜ ವಿದೇಹದ ಅರಸರಲ್ಲಿ ಪ್ರಮುಖ. ಅರಸನೆಂಬುದಕ್ಕಿಂತಲೂ ಬ್ರಹ್ಮಜ್ಞಾನಿಯೂ ವೇದಾಂಗಿಯೂ ಆಗಿ ವಿದ್ಯೆ, ಕಲೆ, ಸಂಸ್ಕøತಿಗಳ ಪೋಷಕನೆಂಬ ಖ್ಯಾತಿಗೆ ಪಾತ್ರನಾದವ. ಈತ ಕುದುರೆ ಶದ ನಿಚಕ್ಷುವಿನ ಸಮಕಾಲೀನ. ಉತ್ತರ ಬಿಹಾರದ ತಿರ್ಹತ್ ಜಿಲ್ಲೆಯನ್ನೊಳಗೊಂಡಿದ್ದ ವಿದೇಹದ ರಾಜಧಾನಿ ಮಿಥಿಲಾ. ಇದು ಈಗ ನೇಪಾಲದ ಸರಹದ್ದಿನಲ್ಲಿರುವ ಜನಕಪುರ. ಬುದ್ಧನ ಕಾಲದಲ್ಲಿ ವೈಶಾಲಿಯ ಲಿಚ್ಫವಿಯೊಡಗೂಡಿ ವಿದೇಹ ಗಣರಾಜ್ಯವಾಗಿ ವ್ರಿಜ್ಜಿ ಎಂಬ ಹೆಸರಿನಿಂದ ಖ್ಯಾತಿಪಡೆದಿತ್ತು.
- ಆವಂತಿ: (ಈಗಿನ ಮಧ್ಯಮಾಲವ) ನಿಮಾರ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳನ್ನೊಳಗೊಂಡಿತ್ತು. ಇದರ ರಾಜಧಾನಿ ಉಜ್ಜಯಿನಿ. ರಾಜಕೀಯ ಮತ್ತು ಜೈನಗ್ರಂಥಗಳಲ್ಲಿ ಮಾತ್ರ ಆವಂತೀದೇಶ ವಿಂಧ್ಯಪರ್ವತದಿಂದ ಇಬ್ಭಾಗವಾಗಿತ್ತೆಂದೂ ಉತ್ತರಭಾಗಕ್ಕೆ ಉಜ್ಜಯಿನಿ ಮತ್ತು ದಕ್ಷಿಣ ಆವಂತಿಗೆ ನರ್ಮದಾ ನದೀತಟದ ಮಾಹಿಷ್ಮತೀನಗರ ರಾಜಧಾನಿಗಳಾಗಿದ್ದುವೆಂದೂ ಹೇಳಲಾಗಿದೆ. ಚಂಡಪ್ರದ್ಯೋತಮಹಾಸೇನ ಆವಂತೀ ದೇಶದ ಪ್ರಮುಖ ದೊರೆ. ಇವನನ್ನು ಕ್ರೂರಿ, ನಯವರ್ಜಿತ ಎಂದು ವರ್ಣಿಸಲಾಗಿದೆ. ವಾಸವದತ್ತೆ ಇವನ ಮಗಳು. ವತ್ಸದೇಶದ ಉದಯನ ಇವಳನ್ನು ವರೆಸಿದ. ಉದಯನ ಬಳಿಕ ವತ್ಸದೇಶದಲ್ಲಿ ಸಮರ್ಥನಾದ ಅರಸನಿಲ್ಲದ ಕಾರಣ ಚಂಡಪ್ರದ್ಯೋತ ವತ್ಸದೇಶವನ್ನು ಆವಂತಿಗೆ ಸೇರಿಸಿಕೊಂಡ. ಈ ಅರಸ ತಕ್ಷಶಿಲೆಯ ಪುಕ್ಕುಸಾತಿ (ಪುಷ್ಕರಸಾರಿ) ಯೊಡನೆಯೂ ಕದನಮಾಡಿದ, ಬಹಳ ಪ್ರಬಲನಾದ ಚಂಡಪ್ರದ್ಯೋತ ತನ್ನ ಸಮಕಾಲೀನ ಅರಸರಲ್ಲಿ ಭಯ ಉಂಟುಮಾಡಿದ್ದ. ಇವನ ದಾಳಿಗೆ ಹೆದರಿ ಮಗಧ ದೇಶದ ಕಜಾರ್ತತ್ರು ತನ್ನ ರಾಜಧಾನಿ ತಾಜಗೃಹದ ಸುತ್ತಲೂ ಬಲವಾದ ಕೋಟೆ ಕಟ್ಟಿಸಿದ. ಈ ಕಾಲದ ಇತರ ಮುಖ್ಯ ರಾಜ್ಯಗಳೆದರೆ ಆಹಿಚ್ಫತ್ರ ರಾಜಧಾನಿಯಾಗಿದ್ದ ಪಾಂಚಾಲದೇಶ ಮತ್ತು ಮಧುರೆ ರಾಜಧಾನಿಯಾಗಿದ್ದ ಶೂರಸೇನರಾಜ್ಯ. ಆದರೆ ಈ ಎಲ್ಲ ರಾಜ್ಯಗಳಿಗಿಂತಲೂ ಪ್ರಮುಖವಾದದ್ದೂ ಕ್ರಮೇಣ ಈ ಎಲ್ಲ ರಾಜ್ಯಗಳನ್ನು ಸೋಲಿಸಿ ಸಾಮ್ರಾಜ್ಯವೊಂದನ್ನು ಸ್ಥಾಪಿಸಿದ್ದು ಮಗಧ ರಾಜ್ಯ.
- ಮಗಧ ರಾಜ್ಯ: ಮೂಲತಃ ಈಗಿನ ಬಿಹಾರ ರಾಜ್ಯದ ಗಯಾ ಮತ್ತು ಪಾಟ್ನ ಜಿಲ್ಲೆಗಳನ್ನೊಳಗೊಂಡಿತ್ತು. ಮಹಾಭಾರತ ಯುದ್ಧದ ಪೂರ್ವದಲ್ಲಿ ಬಾರ್ಹದ್ರಥವೆಂಬ ವಂಶ ಇಲ್ಲಿ ಆಳಿತೆಂದು ಹೇಳಲಾಗಿದೆ. ಈ ವಂಶದ ಪ್ರಮುಖ ದೊರೆ ಜರಾಸಂಧ. ಇವನ ತಂದೆ ಬೃಹದ್ರಥ ಈ ವಂಶದ ಮೊದಲ ಅರಸ. ಜರಾಸಂಧನ ಮಗ ಸಹದೇವ ಮಹಾಭಾರತದ ಯುದ್ಧದಲ್ಲಿ ಮಡಿದ. ಇವನ ಮಗ ಸೋಮಾಧಿ. ಇವರ ಮೊದಲ ರಾಜಧಾನಿ ಗಿರಿವ್ರಜ. ಇದರ ಸುತ್ತಲೂ ರಾಜಗೃಹ (ಪಾಟ್ನ ಜಿಲ್ಲೆಯ ರಾಜಗೀರ್) ಬೆಳೆಯಿತು.
- ಬಾರ್ಹದ್ರಥ ವಂಶದ ಅರಸರು ಕ್ರಿ.ಪೂ.6ನೆಯ ಶತಮಾನದ ತನಕ ಆಳಿದರು. ಈ ವಂಶದ ಕೊನೆಯ ಅರಸ ರಿಪುಂಜಯ. ಇವನ ಬಳಿಕ ಮಗಧದಲ್ಲಿ ಹರ್ಯಂಕ ಕುಲಕ್ಕೆ ಸೇರಿದ ಬಿಂಬಿಸಾರ ಪಟ್ಟಕ್ಕೆ ಬಂದ. ಬಿಂಬಿಸಾರನ ತಂದೆ ಭಟ್ಟಿಯ. ಈತ ರಿಪುಂಜಯನ ಮಂತ್ರಿಯಾಗಿದ್ದು ಅವನನ್ನು ಕೊಂದು ತಾನೇ ರಾಜ್ಯವಾಳ ತೊಡಗಿದ. ಬಿಂಬಿಸಾರ ಹದಿನೈದು ವರ್ಷದವನಾಗಿದ್ದಾಗ ಭಟ್ಟಿಯ ಇವನನ್ನು ಪಟ್ಟಕ್ಕೇರಿಸಿದ. ಬಿಂಬಿಸಾರ ಆಳತೊಡಗಿದಂದಿನಿಂದ ಮುಂದಿನ ಮೂರು ಶತಮಾನಗಳ ಭಾರತದ ಇತಿಹಾಸ ಮಗಧರಾಜ್ಯದ ವಿಸ್ತರಣೆಯ ಕಥೆ. ಆ ಕಾಲದಲ್ಲಿ ಕ್ರಮೇಣ ಮಗಧರಾಜ್ಯ ತನ್ನ ಪ್ರಾಬಲ್ಯ ಬೆಳೆಸಿಕೊಂಡು ವಿಶಾಲ ಸಾಮ್ರಾಜ್ಯವಾಗಿ ಮೆರೆಯಿತು.
- ಬಿಂಬಸಾರ: ಕ್ರಿ.ಪೂ.ಸು.545-44ರಲ್ಲಿ ಪಟ್ಟಕ್ಕೆ ಬಂದ. ಸೇನಾಪತಿಯಾಗಿದ್ದುದರಿಂದ ಇವನಿಗೆ ಶ್ರೇಣಿಕ ಎಂಬ ಬಿರುದಿತ್ತು. ತನ್ನ ರಾಜ್ಯವನ್ನು ವಿಸ್ತರಿಸಬಯಸಿದ ಈತ ಯುದ್ಧನೀತಿಗಿಂತಲೂ ಹೆಚ್ಚಾಗಿ ವಿವಾಹ ಸಂಬಂಧಗಳ ಮೂಲಕ ತನ್ನ ಸಮಕಾಲೀನರ ಪ್ರೀತಿಗೊಳಗಾಗಿ ಸ್ಥಾನ ಭದ್ರಪಡಿಸಿಕೊಂಡ. ಈತ ಮಾಡಿದ ಒಂದೇ ಯುದ್ಧ ಅಂಗರಾಜ್ಯದ ವಿರುದ್ಧ. ಆ ರಾಜ್ಯದ ಅರಸ ಬ್ರಹ್ಮದತ್ತ ಬಿಂಬಿಸಾರನ ತಂದೆಯನ್ನು ಸೋಲಿಸಿದ್ದನೆಂಬ ಕಾರಣದಿಂದ ಅದರ ಸೇಡನ್ನು ಸ್ವಾಧೀನಪಡಿಸಿಕೊಂಡ. ಅಂದಿನಿಂದ ಆ ದೇಶ ಮಗಧದ ಒಂದು ಭಾಗವಾಯಿತು. ಬಿಂಬಿಸಾರ ಕೋಸಲಾಪತಿ ಮಹಾಕೋಸಲನ ಮಗಳು ಕೋಸಲದೇವಿಯನ್ನು ವರಿಸಿ ಕಾಶಿಯನ್ನು ಬಳುವಳಿಯಾಗಿ ಪಡೆದ. ಇದರಿಂದ ಬಿಂಬಿಸಾರನಿಗೆ ಒಂದು ಲಕ್ಷ ವಾರ್ಷಿಕ ವರಮಾನ ಬರುತ್ತಿತ್ತು. ಇದಲ್ಲದೆ ವೈಶಾಲೀ ನಗರದ ಲಿಚ್ಫವಿ ಕುಲದ ಮುಖ್ಯನಾದ ಚೇತಕನ ಮಗಳು ಚೆಲ್ಲನಾದೇವಿ, ಪಂಜಾಬಿನ ಮದ್ರದೇಶದ ರಾಜಕುಮಾರಿ ಕ್ಷೇಮಾ ಮತ್ತು ವೈದೇಹಿ-ವಾಸವಿ ಎಂಬುವರು ಇವನ ಇತರ ಪತ್ನಿಯರು. ಇವರಲ್ಲಿ ವೈದೇಹಿ-ವಾಸವಿ ಎಂಬುವಳೇ ಚೆಲ್ಲನಾದೇವಿಯೆಂದೂ ಕೆಲವು ವಿದ್ವಾಂಸರ ಅಭೀಪ್ರಾಯ. ದುಷ್ಟನೂ ಬಲಾಢ್ಯನೂ ಆದ ಅವಂತಿಯ ಚಂದಪ್ರದ್ಯೋತಮಹಾಸೇನನ ವಿರುದ್ಧವಾಗಿ ಗಾಂಧಾರ ದೇಶದ ಅರಸ ಪುಕ್ಕುಸಾತಿ (ಪುಷ್ಟರಸಾರಿ) ಇವನ ಸಹಾಯ ಬಯಸಿ ತನ್ನ ರಾಜದೂತರನ್ನು ಕಳುಹಿಸಿದಾಗ ಅವರನ್ನು ಬಿಂಬಿಸಾರ ಗೌರವದಿಂದ ಕಂಡನಾದರೂ ಆವಂತಿಯ ಅರಸನೊಡನೆ ದ್ವೇಷ ಬೆಳೆಸಲಿಚ್ಛಿಸದೆ ತಟಸ್ಥನೀತಿ ಅವಲಂಬಿಸಿದ ಇದಕ್ಕನುಗುಣವಾಗಿ ಪ್ರದ್ಯೋತ ಕಾಮಿಣಿ ರೋಗದಿಂದ ನರಳುತ್ತಿದ್ದಾಗ ತನ್ನ ಆಸ್ಥಾನದ ವೈದ್ಯ ಜೀವಕನನ್ನು ಉಜ್ಜಯಿನಿಗೆ ಚಿಕಿತ್ಸೆಮಾಡಲು ಕಳುಹಿಸಿದ. ಬಿಂಬಿಸಾರ ಗೌತಮಬುದ್ಧನ ಸಮಕಾಲೀನನಾಗಿದ್ದು ಅವನಿಗೆ ಆಶ್ರಯವಿತ್ತಿದ್ದ. ಬುದ್ಧ ಸಂಘಕ್ಕೆ ಕರಂದ ವೇಣುವನವನ್ನು ದಾನವಾಗಿತ್ತು. ಬುದ್ಧ ಸಂನ್ಯಾಸಿಗಳಿಂದ ಪ್ರಯಾಣ ಶುಲ್ಕ ಪಡೆಯಬಾರದೆಂದು ಆಜ್ಞೆಮಾಡಿದ. ಆದರೆ ಇವನು ಇತರ ಧರ್ಮಗಳನ್ನೂ ಸಮಭಾವದಿಂದ ಕಾಣುತ್ತಿದ್ದ. ಸುಮಾರು ಅರ್ಧ ಶತಮಾನ ಆಳಿದ ಬಳಿಕ ಬಿಂಬಿಸಾರ ಮೃತನಾದ (ಕ್ರಿ.ಪೂ.439) ಅನಂತರ ಮಗ ಅಜಾತ ಶತ್ರು ಪಟ್ಟಕ್ಕೆ ಬಂದ. ಬಹುಕಾಲರಾಜ್ಯವಾಳಿದ ತಂದೆಯನ್ನು ಕೊಂದು ತಾನು ರಾಜ್ಯವನ್ನು ಲಪಟಾಯಿಸಿದನೆಂದು ಇವನನ್ನು ದೂಷಿಸಲಾಗಿದೆ. ಬಹುಶಃ ತಂದೆಯ ಸೌಮ್ಯನೀತಿ ಇವನಿಗೆ ಹಿಡಿಸದೆ ಸಾಮ್ರಾಜ್ಯ ವಿಸ್ತರಣೆಯ ಆತುರದಲ್ಲಿ ಸಹನೆ ಕಳೆದುಕೊಂಡ ಈತ ತಂದೆಯ ಸಾವಿಗೆ ಕಾರಣನಾಗಿರಬಹುದು. ಪತಿಯ ಸಾವನ್ನು ಸೈರಿಸಲಾಗದ ಕೋಸಲದೇವಿ ಬೇಗ ಅಸುನೀಗಿದಳು. ಇದರಿಂದ ಮನನೊಂದ ಆಕೆಯ ಸೋದರನಾದ ಪ್ರಸೇನಜಿತ ತನ್ನ ತಂದೆ ಬಿಂಬಿಸಾರನಿಗೆ ಬಳುವಳಿಯಾಗಿತ್ತಿದ್ದ ಕಾಶಿಯನ್ನು ಹಿಂದಕ್ಕೆ ಪಡೆದುಕೊಂಡ. ಇದರಿಂದ ಕುಪಿತನಾದ ಆಜಾತಶತ್ರು ಇವನ ಮೇಲೆ ದಂಡೆತ್ತಿ ಹೋದ. ಆಗ ಮಗಧ ಮತ್ತು ಕೋಸಲ ರಾಜ್ಯಗಳ ನಡುವೆ ದೀಘ ಯುದ್ಧ ಸಂಭವಿಸಿತು. ಮೊದಮೊದಲು ಯಶಸ್ಸು ಪ್ರಸೇನಜಿತನಿಗೆ ಪ್ರಾಪ್ತವಾಯಿತು. ಅವನು ಒಮ್ಮೆ ಅಜಾತಶತ್ರುವನ್ನು ಕೈಸೆರೆಹಿಡಿದನಾದರೂ ಜೀವದಾನಮಾಡಿ ಅವನನ್ನು ಸೆರೆಯಿಂದ ಮುಕ್ತ ಮಾಡಿದ. ಕೊನೆಗೆ ಅಜಾತಶತ್ರುವಿನ ಬಲ ಹೆಚ್ಚಿತು. ಪ್ರಸೇನಜಿತ ತನ್ನ ಮಗಳಾದ ವಜಿರಾಳನ್ನು ಅಜಾತಶತ್ರುವಿಗೆ ಮದುವೆಮಾಡಿ ಕೊಟ್ಟನಲ್ಲದೆ ಅವರ ನಡುವಿನ ಯುದ್ಧಕ್ಕೆ ಕಾರಣವಾಗಿದ್ದ ಕಾಶಿಯನ್ನು ಅಳಿಯನಿಗೆ ಮತ್ತೆ ಉಡುಗೊರೆಯಾಗಿತ್ತು. ಇದಾದ ಬಳಿಕ ಅಜಾತಶತ್ರು ನಡೆಸಿದ ಮತ್ತೊಂದು ಕದನ ಲಿಚ್ಫವಿ ಗಣರಾಜ್ಯದ ವಿರುದ್ಧವಾಗಿತ್ತು. ರಾಜ್ಯ ವಿಸ್ತಾರದ ಮಹತ್ತ್ವಾಕಾಂಕ್ಷೆ ಈ ಯುದ್ಧದ ಕಾರಣ. ಲಿಚ್ಫವಿ ಗಣರಾಜ್ಯಗಳು ಒಗ್ಗಟ್ಟಿನಿಂದ ಇರುವವರೆಗೂ ಅಜಾತಶತ್ರು ಅವರನ್ನು ಸೋಲಿಸುವುದು ಸಾಧ್ಯವೇ ಇರಲಿಲ್ಲ. ಗೌತಮಬುದ್ಧನೂ ಲಿಚ್ಫವಿ ಜನರಿಗೆ ಒಗ್ಗಟ್ಟಿನ ಬಲವನ್ನು ಒತ್ತಿ ಹೇಳಿದ್ದ. ಆದ್ದರಿಂದ ಅಜಾತಶತ್ರು ಉಪಲಾಪನ ಮತ್ತು ಮಿತ್ರಭೇದ ಎಂಬ ಉಪಾಯಗಳನ್ನು ಅವಲಂಬಿಸಿ ಅವರಲ್ಲಿ ಅನೈಕ್ಯ ಉಂಟುಮಾಡಿದ. ಸ್ವತಃ ತನ್ನ ಸೈನ್ಯವನ್ನು ಬಲಗೊಳಿಸಿ, ಪಾಟಲಿ ಗ್ರಾಮದ ಸುತ್ತಲೂ ಅಭೇದ್ಯ ಕೋಟೆ ಕಟ್ಟಿಸಿದ. ಗಂಗಾತೀರದ ಮೇಲಿನ ಈ ಗ್ರಾಮದೇ ಮುಂದೆ ಪಾಟಲಿ ಪುತ್ರವೆಂಬ ಹೆಸರಿನಿಂದ ರಾಜಧಾನಿಯಾಗಿ ಮೆರೆಯಿತು. ಕ್ರಿ.ಪೂ. 484ರಲ್ಲಿ ಆರಂಭವಾದ ಈ ಕದನ ಹದಿನೈದು ವರ್ಷ ಪರ್ಯಂತ ಮುಂದುವರಿದು ಕೊನೆಯಲ್ಲಿ ಅಜಾತಶತ್ರು ಜಯಶಾಲಿಯಾದ.
- ಈ ವಿಜಯದಿಂದ ಲಿಚ್ಫವಿ ಮುಂತಾದ ಸ್ವತಂತ್ರ ಗಣರಾಜ್ಯಗಳು ಮಗಧ ರಾಜ್ಯಕ್ಕೆ ಸೇರಿ ಆ ರಾಜ್ಯ ಆವಂತಿಯೊಡನೆ ರಾಜಕೀಯ ಪರಮಾಧಿಪತ್ಯಕ್ಕಾಗಿ ಸ್ಪರ್ಧಿಸಲು ಅಣಿಗೊಂಡಿತು. ಅಜಾತಶತ್ರು ಕ್ರಿ. ಪೂ. 493ರಿಂದ 461ರ ತನಕ ರಾಜ್ಯವಾಳಿದ. ಈತ ತಂದೆಯಂತೆ ತನ್ನ ರಾಜ್ಯದಲ್ಲಿ ಮತಬೋಧನೆ ಮಾಡುತ್ತಿದ್ದ ಮಹಾವೀರ ಬುದ್ಧರನ್ನು ಆಧರಿಸಿದ. ಆದರೆ ಪಿತೃವಧೆ ಪಾತಕದಿಂದ ಕಲಂಕಿತನಾದ ಈತನಿಗೂ ಬುದ್ಧನಿಗೂ ವಿರಸವಿತ್ತು. ಅನಂತರ ಪಶ್ಚಾತ್ತಾಪ ಪಟ್ಟು ಬುದ್ಧನಿಗೆ ಶರಣುಹೋಗಿ ಆತನ ಉಪದೇಶದಿಂದ ಶಾಂತಿ ಹೊಂದಿ ಆಸ್ಥೆಯಿಂದ ಬೌದ್ಧಮತ ಪುರಸ್ಕರಿಸಿದ. ರಾಜಧಾನಿಯ ಸುತ್ತಲೂ ಬೌದ್ಧ ಭಿಕ್ಷುಗಳಿಗಾಗಿ ವಿಹಾರಗಳನ್ನೂ ಹೊಸ ಚೈತ್ಯಾಲಯಗಳನ್ನೂ ಕಟ್ಟಿಸಿದ. ಮಹಾವೀರ, ಬುದ್ಧರು ಈತನ ಹೊಸ ಆಳ್ವಿಕೆಯ ಕಾಲದಲ್ಲಿ ನಿರ್ವಾಣ ಹೊಂದಿದರು. ಬುದ್ಧನ ನಿಧನಾನಂತರ ಅವನು ಬೋಧಿಸಿದ ಮತತತ್ತ್ವ, ಸಾಹಿತ್ಯಗಳನ್ನು ಸಂಗ್ರಹಿಸಿ ಅವಕ್ಕೆ ವ್ಯವಸ್ಥಿತ ಸ್ವರೂಪ ಕೊಡಲು ರಾಜಗೃಹದಲ್ಲಿ ಮೊದಲಬಾರಿಗೆ ಬೌದ್ಧ ಮಹಾಸಮ್ಮೇಳನ ನಡೆಯಿಸಿ ಅದರ ಸತಲ ಭಾರವನ್ನು ಹೊತ್ತುಕೊಂಡ. ಈ ಸಾಧನೆಯಿಂದ ಬೌದ್ಧಮತ ಚರಿತ್ರೆಯಲ್ಲಿ ಅಜಾತಶತ್ರುವಿನ ಹೆಸರು ಚಿರಸ್ಥಾಯಿಯಾಗಿದೆ. ಈತನ ಉತ್ತರಾಧಿಕಾರಿಗಳು ಸಾಮಾನ್ಯವಾಗಿ ದುರ್ಬಲರೂ ಕರ್ತೃತ್ವ ಹೀನರೂ ಆಗಿದ್ದರೂ. ಅವರ ಕಾಲದಲ್ಲಿ ಮಗಧ ಸಾಮ್ರಾಜ್ಯ ಹೇಗೋ ಮುಂದುವರಿಯಿತು. ಅದರಲ್ಲಿ ಸಮರ್ಥನಾದವ ಹರ್ಯಂಕ ವಂಶದ ಶಿಶುನಾಗ. ಈತ ಅವಂತಿಯನ್ನು ಆಕ್ರಮಿಸಿ ಮಗಧ ಸಾಮ್ರಾಜ್ಯದಲ್ಲಿ ಸೇರ್ಪಡೆ ಮಾಡಿದ. ಈತನ ಮಗ ಕಾಲಾಶೋಕ ಅಥವಾ ಕಾಕವಣ. ಈತ ಪಾಟಲೀಪುತ್ರವನ್ನು ತನ್ನ ಸ್ಥಿರರಾಜಧಾನಿಯಾಗಿ ಮಾಡಿಕೊಂಡ. ವೈಶಾಲಿಯಲ್ಲಿ ಎರಡನೆಯ ಬೌದ್ಧ ಮಹಾಸಮ್ಮೇಳನ ನಡೆಯಿಸಿದ. ಹರ್ಯಂಕವಂಶದ ಆಳ್ವಿಕೆ ಮುಕ್ತಾಯವಾದದ್ದು ಕ್ರಿ. ಪೂ. ಸು. 364ರಲ್ಲಿ.
- ಹರ್ಯಂಕ ವಂಶದ ಅರಸರನ್ನು ಕುತಂತ್ರದಿಂದ ಧ್ವಂಸಮಾಡಿ ಮಗಧ ಸಿಂಹಾಸನ ಆಕ್ರಮಿಸಿ ನಂದವಂಶದ ಮಹಾಪದ್ಮ ಶೂರ, ಸಾಹಸಿ, ಮಹತ್ತ್ವಾಕಾಂಕ್ಷಿ. ತನ್ನ ಭುಜಬಲದಿಂದ ಕ್ಷತ್ರಿಯರಾಸರ ಮೇಲೆ ದಾಳಿಮಾಡಿ, ಅವರ ರಾಜ್ಯಗಳನ್ನು ಕಸಿದುಕೊಂಡು. ಕಲಿಂಗ (ಒಡಿಸ್ಸಾ) ಪ್ರಾಂತ್ಯ ಜಯಿಸಿದ. ಈ ವಿಜಯಗಳಿಂದ ಈತನ ಸಾಮ್ರಾಜ್ಯ ಉತ್ತರ ಭಾರತ ವ್ಯಾಪಿಸಿ, ದಕ್ಷಿಣದಲ್ಲಿ ಗೋದಾವರಿಯವರೆಗೆ ಹಬ್ಬಿತು. ಈತನ ಪ್ರಭಾವ ಕರ್ನಾಟಕದಲ್ಲಿಯೂ ಕಾಣಿಸಿ ಕೊಂಡಿತು.
- ಮಹಾಪದ್ಮನ ತರುವಾಯ ಅನುಕ್ರಮವಾಗಿ ಆತನ ಎಂಟು ಜನ ಮಕ್ಕಳು ರಾಜ್ಯಭಾರ ಮಾಡಿದರು. ಇವರಲ್ಲಿ ಎಂಟನೆಯವ ಧನನಂದ. ಈತನ ಸೇನಾಬಲ ಅಪಾರವಾಗಿತ್ತು. ಈತನಿಗೆ ಧನಸಂಗ್ರಹದ ಲೋಭ ಹೆಚ್ಚು. ನಾನಾ ಉಪಾಯಗಳಿಂದ ಕರಗಳನ್ನು ಹೆಚ್ಚಿಸಿದ. ಜನರನ್ನು ಪೀಡಿಸಿ ಅಪಾರ ದ್ರವ್ಯ ಸಂಗ್ರಹಿಸಿ ಗುಪ್ತ ಸ್ಥಳದಲ್ಲಿ ಅವನ್ನು ಅಡಗಿಸಿಟ್ಟ. ಈ ಕೃತ್ಯಗಳಿಂದ ಈತ ಬಹಳ ಅಪ್ರಿಯನಾದ. ಈತನನ್ನು ಪ್ರಜೆಗಳು ಶಪಿಸತೊಡಗಿದರು. ಈ ಸುಸಂಧಿಯನ್ನು ಉಪಯೋಗಿಸಿಕೊಂಡು ನಂದರ ಆಳ್ವಿಕೆ ಕಿತ್ತುಹಾಕಲು ಮುಂದೆ ಬಂದವ ಮೌರ್ಯ ಕುಲದ ಚಂದ್ರಗುಪ್ತ (ನೋಡಿ- ಚಂದ್ರಗುಪ್ತ-ಮೌರ್ಯ). ಚಾಣಾಕ್ಯನೆಂಬ ಚಾಣಾಕ್ಷ ಮಂತ್ರಿಯ ಸಹಾಯದಿಂದ ನಂದವಂಶವನ್ನು ನಿರ್ಮೂಲಮಾಡಿ ಮಗಧಸಾಮ್ರಾಜ್ಯದ ಅಧಿಪತಿಯಾದ. ನಂದರ ಆಳ್ವಿಕೆ ಕಾಲ ಕ್ರಿ. ಪೂ. ಸು. 364-324. ಅವರ ಆಳ್ವಿಕೆ ಜನರಿಗೆ ಪೀಡಕವಾಗಿದ್ದರೂ ಮಗಧ ಸಾಮ್ರಾಜ್ಯವನ್ನು ಹಿಂದೆಂದೂ ಇಲ್ಲದಷ್ಟು ವಿಸ್ತಾರಗೊಳಿಸಿದ ಗೌರವ ಅವರಿಗೆ ಸಲ್ಲುತ್ತದೆ. ಈ ಗೌರವವನ್ನು ಉಜ್ಜ್ವಲೋಜ್ವಲಗೊಳಿಸಿದ ಕೀರ್ತಿ ಮೌರ್ಯವಂಶದ ಚಕ್ರವರ್ತಿಗಳದು.
- ಪರ್ಷಿಯ ಮತ್ತು ಗ್ರೀಕ್ ದಂಡಯಾತ್ರೆಗಳು: ಕ್ರಿ. ಪೂ. 6ನೆಯ ಶತಮಾನದಲ್ಲಿ ಜೈನ ಮತ್ತು ಬೌದ್ಧ ಮತಗಳು ಹುಟ್ಟಿ ದೇಶದಲ್ಲಿ ಧಾರ್ಮಿಕ ಕ್ರಾಂತಿಯುಂಟು ಮಾಡಿದ ಕಾಲದಲ್ಲಿ ಮಗಧ ದೇಶ ದಕ್ಷರಾದ ರಾಜರ ಪ್ರಯತ್ನಗಳಿಂದ ತನ್ನ ಸುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಸಾಮ್ರಾಜ್ಯವಾಗತೊಡಗಿದಾಗ ಭಾರತದ ವಾಯವ್ಯ ಸರಹದ್ದಿನಲ್ಲಿ ವಿದೇಶೀಯರ ಆಕ್ರಮಣವೂ ಆರಂಭವಾಯಿತು. ಅಂದು ಸಿಂಧೂನದಿಯೇ ಭಾರತದ ವಾಯುವ್ಯದ ಗಡಿ.
- ಪರ್ಷಿಯನ್ನರ ದಾಳಿಗಳು: ಪರ್ಷಿಯ ದೇಶದ ಆಕೆಮಿನೀಡ್ ಸಾಮ್ರಾಜ್ಯ ಸ್ಥಾಪಕ ಸೈರಸ್ (ಕ್ರಿ. ಪೂ. 558-530) ತನ್ನ ರಾಜ್ಯ ವಿಸ್ತರಿಸಿ ಈಗಿನ ಆಫ್‍ಘಾನಿಸ್ತಾನ ಮತ್ತು ಸಿಂಧ್‍ಪ್ರಾಂತ್ಯವನ್ನು ಆಕ್ರಮಿಸಲು ಯೋಚಿಸುತ್ತಿದ್ದ. ಆ ವೇಳೆಗಾಗಲೇ ಗಾಂಧಾರ ಮೊದಲಾದ ಭಾರತದ ವಾಯವ್ಯದ ರಾಜ್ಯಗಳೊಡನೆ ವ್ಯಾಪಾರ ಸಂಬಂಧಗಳು ಬೆಳೆದು ಬಂದಿದ್ದುವು. ತನ್ಮೂಲಕ ತನ್ನ ಸಾಮ್ರಾಜ್ಯದ ಮೂಡಲಲ್ಲಿಯ ಭರತ ವಿಪುಲೈಶ್ವರ್ಯಯುಕ್ತವಾದುದ್ದೆಂದು ಅವನಿಗೆ ತಿಳಿದಿತ್ತು. ಸೈರಸ್ ಸಿಂಧೂನದಿಯವರೆಗೆ ತನ್ನ ರಾಜ್ಯ ವಿಸ್ತರಿಸಿದುದು ಸಂದೇಹಾಸ್ಪದ. ಕಾಬೂಲ್ ಮತ್ತು ಪೇಶಾವರದ ವರೆಗೆ ಅವನು ತನ್ನ ಸೈನ್ಯ ತಂದಿದ್ದಿರಬಹುದು. ಆದರೆ ಕ್ರಿ. ಪೂ. 522ರಿಂದ 486ರ ತನಕ ಅವನ ಅನಂತರ ಆಳಿದ ಕ್ಯಾಂಬೈಸಿಸನ ಮಗ ದಾರಾ ಮಾತ್ರ ಸಿಂಧೂ ದೇಶವನ್ನು (ಉತ್ತರ ಪಂಜಾಬ ಪ್ರಾಂತ್ಯ) ಆಕ್ರಮಿಸಿದನೆಂಬುದು ಅವನ ಶಾಸನಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಅವನ ಸಾಮ್ರಾಜ್ಯಕ್ಕೆ ಸೇರಿದ 23 ಪ್ರಾಂತ್ಯಗಳನ್ನು ಶಾಸನದಲ್ಲಿ ಹೆಸರಿಸಲಾಗಿದೆ. ಅವುಗಳಲ್ಲಿ ಗದಾರ ಒಂದು. ಇದು ಬಹುಶಃ ಪೇಶಾವರದ ಸುತ್ತಲಿನ ಅಂದಿನ ಗಾಂಧಾರ ಆಗಿರಬಹುದು. ತದನಂತರದ ಪರ್ಷಿಯ ಮತ್ತು ನಕ್ಷ ಇರುಸ್ತುಮ ಶಾಸನಗಳಲ್ಲಿ ಮಾತ್ರ ಹಿಂದು-ಹಿಂದೂ ಅವನ ಸಾಮ್ರಾಜ್ಯದ ಒಂದು ಪ್ರಾಂತ್ಯವಾಗಿತ್ತೆಂದು ಹೇಳಿದೆ. ಇದು ಸಿಂಧೂನದಿಯ ಪ್ರದೇಶದ ಉತ್ತರ ಪಂಜಾಬನ್ನೊಳಗೊಂಡ ಭಾಗ. ಈ ಅರಸ ಭಾರತ ಸಿಂಧೂನದೀ ಪ್ರಾಂತ್ಯ ಕುರಿತಂತೆ ವಿವರಗಳನ್ನು ತಿಳಿದುಕೊಳ್ಳಲು ತನ್ನ ನೌಕಾಧಿಕಾರಿಗಳಲ್ಲೊಬ್ಬನಾದ ಸ್ಕೈಲಾಕ್ಷ್ಸ ಎಂಬಾತನನ್ನು ಮೊದಲು ಕಳುಹಿಸಿಕೊಟ್ಟ. ಅನಂತರ ಸ್ವತಃ ಆ ಪ್ರಾಂತ್ಯ ಸ್ವಾಧೀನಪಡಿಸಿಕೊಂಡು ತನ್ನ ಸಾಮ್ರಾಜ್ಯದ ಇಪ್ಪತ್ತನೆಯ ಸತ್ರಾಪಿ ಪ್ರಾಂತ್ಯವಾಗಿ ಮಾಡಿಕೊಂಡ. ಅಂದು ಅಲ್ಲಿ ಲಭ್ಯವಿದ್ದ, ಒಂದು ಕೋಟಿ ರೂಪಾಯಿಗಳಿಗೂ ಮಿಕ್ಕಿದ ಬೆಲೆಯ ಚಿನ್ನದ ಪುಡಿ ಪರ್ಷಿಯ ದೇಶದ ಬೊಕ್ಕಸ ತುಂಬಿಸಿತು.
- ಇದರ ಪರಿಣಾಮವಾಗಿ ಎರಡೂ ದೇಶಗಳ ನಡುವಣ ವ್ಯಾಪಾರ ಸಂಬಂಧಗಳು ಹೆಚ್ಚಿದುವಲ್ಲದೆ, ಧನುರ್ವಿದ್ಯೆಯಲ್ಲಿ ಅದ್ವಿತೀಯರೆನಿಸಿದ್ದ ಭಾರತೀಯ ಬಿಲ್ಲುಗಾರರು ಪರ್ಷಿಯದ ಸೇನೆಯ ಪ್ರಮುಖ ಅಂಗಗಳಲ್ಲೊಂದಾದರು ಕೂಡ. ಖರೋಷ್ಠಿಲಿಪಿ (ನೋಡಿ- ಖರೋಷ್ಠೀ) ಭಾರತಕ್ಕೆ ಇರಾನಿಗಳ ಕೊಡುಗೆ ಎಂದು ಹಲವರ ಮತ.
- ದಾರಾನ ತರುವಾಯ ಕ್ರಿ. ಪೂ. 486-465ರ ತವಕ ಆಳಿದ ಕ್ಷಯಾರ್ಷನ ಕಾಲದಲ್ಲಿ ಈ ಪರಿಸ್ಥಿತಿ ಹಾಗೆಯೇ ಮುಂದುವರಿದಿದ್ದು ಕ್ರಮೇಣ ಪರ್ಷಿಯನ್ನರ ಪ್ರಭಾವ ಕುಗ್ಗಿ ಕೊನೆಗೆ ಗುಗೆಮಾಲಾ ಕದನದಲ್ಲಿ (ಕ್ರಿ. ಪೂ. 330)ಅವರು ಮ್ಯಾಸಿಡೋನಿಯನ್ನರಿಂದ ಸೋಲಿಸಲ್ಪಟ್ಟರು. ಹೀಗೆ ಪರ್ಷಿಯನ್ನರು ಭಾರತದ ವಾಯವ್ಯದ ಒಂದು ಅತಿ ಚಿಕ್ಕ ಭಾಗವನ್ನು ಸ್ವಲ್ಪಕಾಲ ಮಾತ್ರ ತಮ್ಮ ಅಧೀನಕ್ಕೊಳಪಡಿಸಿಕೊಂಡಿದ್ದರು. ಆದರೆ ಅಷ್ಟರಿಂದ ಅವರು ಭಾರತದಲ್ಲ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ್ದರೆಂದು ಹೇಳಲಿಕ್ಕಾಗದು.
- ಅಲೆಗ್ಝಾಂಡರನ ದಂಡಯಾತ್ರೆ: ಗ್ರೀಸಿನ ಉತ್ತರಕಿರುವ ಮ್ಯಾಸಿಡೋನಿಯ ರಾಜ್ಯದ ಅಲೆಗ್ಝಾಂಡರ್ (ಕ್ರಿ. ಪೂ. 356-323) ಅಂದು ಅತಿ ಬಲಶಾಲಿಯಾದ ಅರಸ. ಗ್ರೀಸ್‍ದೇಶವೆಲ್ಲ ಇವನ ವಶವಾಗಿತ್ತು. ಪೃಥ್ವಿಯನ್ನೇ ಜಯಿಸಬೇಕೆಂಬ ಉತ್ಕಟೇಚ್ಫೆ ಆತನದು. ಗ್ರೀಸ್ ದೇಶವನ್ನು ಜಯಿಸಿದ ಅನಂತರ ಅಲೆಗ್ಝಾಂಡರ್ ಪರ್ಷಿತದ ಮುಮ್ಮಡಿ ದಾರಾನ ಮೇಲೆ ಬಿದ್ದು ಗುಗೆಮಾಲಾ ಕದನದಲ್ಲಿ ಅವನನ್ನು ಸೋಲಿಸಿದ. ಪರ್ಷಿಯ ಈಗ ತನ್ನ ಅಧೀನಕ್ಕೊಳಪಟ್ಟುದರಿಂದ ಅದರ ಒಂದು ಭಾಗವಾಗಿದ್ದ ಸಿಂಧ್ ಪ್ರಾಂತ್ಯವೂ ಸಹಜವಾಗಿಯೇ ತನಗೆ ಸೇರತಕ್ಕದೆಂದು ಅದನ್ನು ವಶಪಡಿಸಿಕೊಳ್ಳಲುದ್ಯುಕ್ತನಾದ.
- ಭಾರತದ ವಾಯವ್ಯದಲ್ಲಿಯ ಸಮಕಾಲೀನ ರಾಜಕೀಯ ಪರಿಸ್ಥಿತಿಯೂ ಅಲೆಗ್ಝಾಂಡರನಿಗೆ ಅನುಕೂಲವಾಗಿತ್ತು. ಕುನಾರ್, ಪಂಚ್‍ಕೋರಾ ಮತ್ತು ಸ್ವಾಟ್ ನದಿಗಳ ಕಣಿವೆಗಳಲ್ಲಿ ಕ್ರಮವಾಗಿ ಅಸ್ಪೇಷಿಯನ್, ಗೌರಿ ಮತ್ತು ಅಶ್ವ ಕಾಯನರು ಪ್ರಬಲರಾಗಿದ್ದರು. ಸಿಂಧೂನದಿಯ ಪಶ್ಚಿಮದ ನೀಸಾ ರಾಜ್ಯದಲ್ಲಿ ವಲಸೆ ಬಂದ ಗ್ರೀಕ್ ಜನಾಂಗದವರೇ ಹೆಚ್ಚಾಗಿದ್ದರು. ಗಾಂಧಾರ ದೇಶ ಇಬ್ಭಾಗವಾಗಿ ಸಿಂಧೂವಿನ ಪಶ್ಚಿಮಕ್ಕೆ ಪೇಶಾವರಿನ ಬಳಿ ಪುಷ್ಕಲಾವತಿ ಮತ್ತು ರಾವಲ್ಪಿಂಡಿಯ ಬಳಿ ತಕ್ಷಶಿಲೆ ಇವೆರಡೂ ರಾಜಧಾನಿಗಳಲ್ಲಿ ಇಬ್ಬರು ಅರಸರು ಆಳುತ್ತಿದ್ದರು. ತಕ್ಷಶಿಲೆಯ ಅರಸ ಅಂಭಿ ಪ್ರಮುಖನಾಗಿದ್ದ. ಝೇಲಮ್ ಮತ್ತು ರಾವಿ ನದಿಗಳ ಮಧ್ಯೆ ಪೌರವ ಎಂಬ ಹೆಸರುಳ್ಳ ಇಬ್ಬರು ಸೋದರರೂ ತಕ್ಷಶಿಲೆಯ ಮೇಲ್ಭಾಗದಲ್ಲಿ ಅದಕ್ಕೆ ಹೊಂದಿದಂತಿದ್ದ ಪರ್ವತ ಪ್ರದೇಶದಲ್ಲಿ ಅಭಿಸಾರನೆಂಬಾತನೂ ಆಳುತ್ತಿದ್ದರು. ಹಿರಿಯ ಪೌರವ ಈಗಿನ ಪಾಕಿಸ್ತಾನದಲ್ಲಿಯ ಗುಜರಾತ್ ಮತ್ತು ರಾವಿ ನದಿಗಳ ನಡುವಣ ಭಾಗದಲ್ಲೂ ಆಳುತ್ತಿದ್ದರು. ಇವರಿಬ್ಬರನ್ನೂ ನಿಸ್ಸತ್ತ್ವಗೊಳಿಸಲು ಅಂಭಿ ಹೊಂಚು ಹಾಕುತ್ತಿದ್ದ. ಇವರಲ್ಲದೆ ಧೀರರೂ ಸ್ವಾತಂತ್ರ್ಯಪ್ರಿಯರೂ ಆದ ಸಣ್ಣ ಕುಲಗಳಿಗೆ ಸೇರಿದ ಜನ ಆಗ ಅಲ್ಲಿ ನೆಲೆಸಿದ್ದು ಪರಸ್ಪರ ಕದನಗಳಲ್ಲಿ ತೊಡಗಿದ್ದರು. ಅವರಲ್ಲಿ ಸಂಗಲ ಎಂಬ ನಗರವನ್ನು ರಾಜಧಾನಿಯಾಗಿ ಹೊಂದಿದ್ದ ಕಠರೆಂಬವರೂ ಝಾಂಗ ಎಂಬ ಜಿಲ್ಲೆಯಲ್ಲಿದ್ದ ಶಿಬಿಗಳೂ ಮಾಲವ, ಕ್ಷುದ್ರಕ, ಮೂಷಿಕ ಮುಂತಾದವರೂ ಪ್ರಮುಖರು.
- ಅಲೆಗ್ಝಾಂಡರ್ ದಂಡಯಾತ್ರೆ ಹೊರಡುವ ಮುನ್ನ ಕ್ರಿ.ಪೂ.327ರಲ್ಲಿ ಈಗಿನ ಕಂದಹಾರದಲ್ಲೂ ಹಿಂದೂಕುಷ್ ಪರ್ವತದ ಬುಡದಲ್ಲಿಯ ಈಗಿನ ಜಾರಿಖಾರದಲ್ಲೂ ಅಲೆಗ್ಝಾಂಡ್ರಿಯ ಎಂಬ ಹೊಸ ನಗರಗಳನ್ನು ಕಟ್ಟಿಸಿದ. ಹಿಂದೂಕುಷ್ ಪರ್ವತ ಇಳಿದು ಅಲ್ಲಿ ತನ್ನ ಸೈನ್ಯವನ್ನು ಇಬ್ಭಾಗ ಮಾಡಿ ಒಂದಕ್ಕೆ ಹೆಫಾಸ್ಟಿಯನ್ ಮತ್ತು ಪೆರ್ಡಿಕಸ್ ಎಂಬ ದಳಪತಿಗಳನ್ನು ನಾಯಕರನ್ನಾಗಿ ನಿಯಮಿಸಿದ. ಅವರು ತಮ್ಮ ಸೈನ್ಯದೊಡನೆ ನೇರವಾಗಿ ಸಿಂಧೂನದಿ ತೀರಕ್ಕೆ ಪ್ರಯಾಣ ಕೈಗೊಂಡರು. ಮಾರ್ಗದಲ್ಲಿ ಪುಷ್ಕಲಾವತಿಯ (ಈಗಿನ ಚಾರ್‍ಸದ್ದಾ) ಅರಸ ಅಷ್ಟಕನನ್ನು ಅವರು ಎದುರಿಸಬೇಕಾಯಿತು. ಮೂವತ್ತು ದಿನಗಳ ಸತತ ಪ್ರಯತ್ನದ ಬಳಿಕ ಅಷ್ಟಕ ರಾಜನ ಕೋಟೆ ಇವರ ವಶವಾಯಿತು. ಕದನದಲ್ಲಿ ಮಡಿದ ಆ ಅರಸನ ಸ್ಥಾನದಲ್ಲಿ ಸಂಜಯನೆಂಬವನನ್ನು ಸ್ಥಾಪಿಸಿದ ಈ ದಳಪತಿಗಳು ಸಿಂಧೂನದಿಗೆ ಪ್ರಯಾಣಮಾಡಿ ಉದಬಾಣ್ಡ ಎಂಡೆಬೆತಲ್ಲಿ ಆ ನದಿಯನ್ನು ದಾಟಲು ಎಲ್ಲ ಸಿದ್ಧತೆಗಳನ್ನೂ ಮಾಡುತ್ತಿದ್ದರು.
- ಸೈನ್ಯದ ಇನ್ನೊಂದು ಭಾಗದ ನಾಯಕತ್ವವನ್ನು ಅಲೆಗ್ಝಾಂಡರ್ ತಾನೇ ವಹಿಸಿ ಮೊದಲು ಕುನಾರ್, ಪಂಚಕೊರಾ ಮತ್ತು ಸ್ವಾಟ್ ನದೀತೀರ ಪ್ರದೇಶಗಳಲ್ಲಿದ್ದ ಅರಸರನ್ನು ಸೋಲಿಸಿದ. ಕಾಬೂಲ್ ಮತ್ತು ಸಿಂಧೂ ನದಿಗಳ ಸಂಗಮದ ಬಳಿ ಇದ್ದ ವರಣ ಎಂಬ ಗಿರಿದುರ್ಗ ಸಹ ಇವನ ವಶವಾಯಿತು. ಈ ಸಂದರ್ಭಗಳಲ್ಲೆಲ್ಲ ಇವನು ಬಹಳ ಬಿರುಸಾಗಿ ಹೋರಾಡಿದ ಬಳಿಕವೇ ಜಯಶೀಲನಾದನೆಂಬುದು ಗಮನಾರ್ಹ.
- ಉದಭಾಣ್ಡದಲ್ಲಿ ಅಲೆಗ್ಝಾಂಡರ ಒಂದು ತಿಂಗಳಕಾಲ ವಿಶ್ರಮಿಸಿಕೊಂಡ. ಸಿಂಧೂ ನದಿಯನ್ನು ದಾಟಿದ ಇವನನ್ನು ಅಂಭಿ ಭೇಟಿಯಾಗಿ ಅವನಿಗೆ ಶರಣಾಗತನಾದ. ರಾಜಧಾನಿ ತಕ್ಷಶಿಲೆಯ ಅಭಿಸಾರನೇ ಮೊದಲಾದ ಇತರ ಅರಸರೂ ಬಂದು ಅವನಿಗೆ ಶರಣಾದರು. ಪೌರವ ಮಾತ್ರ ತಾನು ಅವನನ್ನು ರಣರಂಗದಲ್ಲಿಯೇ ಭೇಟಿಯಾಗುವುದಾಗಿ ಹೇಳಿ ಕಳುಹಿಸಿದ.
- ಈ ವಿರೋಧಭಾವದಿಂದಾಗಿ ಪೌರವನಿಗೂ ಅಲೆಗ್ಝಾಂಡರನಿಗೂ ಹೋರಾಟ ಅನಿವಾರ್ಯವಾಯಿತು. ಇಬ್ಬರೂ ಅಗಾಧವಾದ ಸೈನ್ಯ ಸಜ್ಜುಗೊಳಿಸಿದ್ದರು. ಅಲೆಗ್ಝಾಂಡರನಿಗೆ ಶರಣಾಗಿದ್ದ ಅಂಭಿ ಮತ್ತು ಇತರ ಅರಸರು ತಮ್ಮ ಸೈನ್ಯವನ್ನು ಅವನ ಸಹಾಯಕ್ಕೆ ಒಪ್ಪಿಸಿದರು. ಪೌರವನೂ ಸಹ ದೊಡ್ಡ ಸೈನ್ಯದೊಂದಿಗೆ ಝೆ ಲಮ್ ನದೀ ತೀರಕ್ಕೆ ಬಂದು. ಮರುದಿನ ಬೆಳಗಿನಿಂದ ಅಲೆಗ್ಝಾಂಡರ್ ಮತ್ತು ಪೌರವರ ಕದನ ಆರಂಭವಾಯಿತು. ಹಿಂದಿನ ದಿನದ ಮಳೆಯ ಪರಿಣಾಮವಾಗಿ ಯುದ್ಧಭೂಮಿಯೆಲ್ಲ ಕೆಸರಾಗಿತ್ತು. ಅದರ ಪರಿಣಾಮವಾಗಿ ಅಂದು ಪೌರವನ ಸೈನಿಕರು ತಮ್ಮ ಬಿಲ್ಲುಗಳನ್ನು ನೆಲದಲ್ಲಿ ದೃಢವಾಗಿ ಊರಲಾರದೇ ಹೋದರು. ರಥಿಕರದೂ ಅದೇ ಸ್ಥಿತಿಯಾಗಿತ್ತು. ರಥದ ಗಾಲಿಗಳು ಕೆಸರಿನಲ್ಲಿ ಸಿಕ್ಕಿ ಶೀಘ್ರಚಲನೆ ಕಳೆದುಕೊಂಡಿದ್ದವು. ಅಲೆಗ್ಝಾಂಡರ್ ಅಶ್ವಗಳನ್ನೇ ಉಪಯೋಗಿಸುತ್ತಿದ್ದುದರಿಂದ ಅವನ ಅಶ್ವರೋಹೀದಳ ಪರಿಸ್ಥಿತಿಯ ಲಾಭ ಪಡೆಯಿತು. ಆರಂಭದಿಂದಲೂ ನಡೆದ ಅನಿರೀಕ್ಷಿತ ಘಟನೆಗಳಿಂದ ಪೌರವ ಕೊನೆಗೆ ಸೋಲನ್ನೊಪ್ಪಲೇಬೇಕಾಯಿತು. ಕೊನೆಯತನಕವೂ ವೀರಾವೇಶದಿಂದ ಹೋರಾಡಿದ ಪೌರವನನ್ನು ಗ್ರೀಕರು ಸೆರೆಹಿಡಿದು ಅಲೆಗ್ಝಾಂಡರನ ಮುಂದೆ ನಿಲ್ಲಿಸಿದರು. ಅವನ ರಾಜ್ಯವನ್ನು ಅವನಿಗೇ ಒಪ್ಪಿಸಿದ್ದಲ್ಲದೆ. ಅದಕ್ಕೆ ತಾನು ಗೆದ್ದ ಇತರ ರಾಜ್ಯಗಳ ಕೆಲವು ಪ್ರದೇಶಗಳನ್ನೂ ಕೂಡಿಸಿಕೊಟ್ಟ. ಪೌರವನೊಡನೆ ಅವನು ಕಾದಿದ ಕದನ ಅವನ ಶೌರ್ಯಕ್ಕೆ ಆಹ್ವಾನವಾಗಿತ್ತು. ಇದರ ನೆನಪಿಗಾಗಿ ಅಲೆಗ್ಝಾಂಡರ್ ಬೆಳ್ಳಿಯ ನಾಣ್ಯಗಳನ್ನು ಅಚ್ಚು ಹಾಕಿಸಿದ. ಈ ಕದನದ ಅನಂತರ ಪೌರವನ ಸಹಾಯ ಪಡೆದು ತನ್ನ ದಂಡಯಾತ್ರೆ ಮುಂದುವರೆಸಿ ಕೆಲವು ಗಣರಾಜ್ಯಗಳನ್ನು ಸ್ವಾಧೀನ ಪಡಿಸಿಕೊಂಡ. ಅಶ್ವಕರಾಜ್ಯದಲ್ಲಿದ್ದ ಶಶಿಗುಪ್ತ ಕಂದಹಾರದಲ್ಲಿ ಪ್ರಜೆಗಳು ದಂಗೆಯೆದ್ದರಿಂದ ತಿಳಿಸಿ ಅದನ್ನು ಹತ್ತಿಕ್ಕಲು ಸಹಾಯ ಯಾಚಿಸಿದ. ಚೀನಾಬ್ ನದಿಯನ್ನು ದಾಟಿ ಇಮ್ಮಡಿ ಪೌರವನ ರಾಜ್ಯವನ್ನು ಆಕ್ರಮಿಸಿ ರಾವಿ ನದಿಯನ್ನು ದಾಟಿದಾಗ ಕಠರೆಂಬ ರಣಪ್ರಿಯ ಜನಾಂಗದವರು ಅಲೆಗ್ಝಾಂಡರನನ್ನು ಎದುರಿಸಿದರು. ಅಲ್ಪಸಂಖ್ಯಾತರಾಗಿದ್ದರೂ ಅವರು ಯುದ್ಧದಲ್ಲಿ ತೋರಿದ ನೈಪುಣ್ಯ ಗ್ರೀಕ್ ಸೈನಿಕರನ್ನು ಹೆದರಿಸಿತು. ಅತಿ ಸಾಹಸದಿಂದ ಕಠರನ್ನು ಸೋಲಿಸಿ ಸಂಗಲ ಎಂಬ ಅವರ ದುರ್ಗವನ್ನು ವಶಪಡಿಸಿಕೊಳ್ಳಲಾಯಿತು.
- ಭಾರತದ ಫಲವತ್ತಾದ ಗಂಗಾನದೀಬಯಲಿನ ಮತ್ತು ಮಗಧರಾಜ್ಯದ ಅತುಲೈಶ್ವರ್ಯದ ವಿವರಗಳನ್ನು ಅರಿತಿದ್ದ ಅಲೆಗ್ಝಾಂಡರ್ ಬಿಯಾಸ್ ನದಿಯನ್ನು ದಾಟಿ ಮುನ್ನಡೆಯಬೇಕೆಂಬ ಆಸೆಯುಳ್ಳವನಾಗಿದ್ದ. ಆದರೆ ದೂರದ ಊರುಗಳಿಂದ ಬಂದಿದ್ದ ಬಹಳವಾಗಿ ದಣಿದಿದ್ದ ಆತನ ಸೈನಿಕರು ಇನ್ನೂ ಮುಂದೆ ಹೋದಲ್ಲಿ ತಾವು ಅನುಭವಿಸಬಹುದಾದ ಸಾವುನೋವುಗಳಿಗೆ ಹೆದರಿ ಹಿಂತಿರುಗಲೇಬೇಕೆಂದೂ ಹಟತೊಟ್ಟರು. ಅವರನ್ನು ಮನವೊಲಿಸಲು ಅವನು ಮಾಡಿದ ಯತ್ನಗಳೆಲ್ಲ ನಿಷ್ಫಲವಾಗಿ, ಕೊನೆಗೆ ತನ್ನ ದಿಗ್ವಿಜಯವನ್ನು ನಿಲ್ಲಿಸಿ ಹಿಂತಿರುಗಿದ. ಹೋಗುವಾಗ ತಾನು ಗೆದ್ದುಕೊಂಡಿದ್ದ ಝೇಲಮ್ ಮತ್ತು ಬಿಯಾಸ ನದಿಗಳ ನಡುವಣ ಪ್ರದೇಶವನ್ನೂ ಇತರ ಕೆಲವು ಗಣರಾಜ್ಯಗಳನ್ನೂ ಪೌರವನಿಗೂ ಝೇಲಮ್‍ದ ಪಶ್ಚಿಮಭಾಗವನ್ನು ಅಂಭಿಗೂ ಕಾಶ್ಮೀರ ಪ್ರದೇಶ ಮತ್ತು ಉರಸ (ಈಗಿನ ಹಜಾರಾ ಜಿಲ್ಲೆ) ಭಾಗಗಳನ್ನು ಅಭಿಸಾರನಿಗೂ ರಾಜ್ಯವಾಳಲು ಹಂಚಿಕೊಟ್ಟು ತಾನು ಬೇರೆ ಮಾರ್ಗದ ಮೂಲಕ ಹಿಂತಿರುಗಿದ. ಆಗಲೂ ಅವನನ್ನೂ ಮಾಲವರೂ ಕ್ಷುದ್ರಕರೂ ಕದನದಲ್ಲಿ ಎದುರಿಸಿದರು. ಪತ್ತಲವೆಂಬ ಪಟ್ಟಣ ಆಕ್ರಮಿಸಲು ಅವನು ಬಹಳ ಹೆಣಗಬೇಕಾಯಿತು. ಅಲ್ಲಿಯ ಬ್ರಾಹ್ಮಣ ನಿವಾಸಿ ವೀರಾವೇಶದಿಂದ ಹೋರಾಡಿದರು. ಅಲೆಗ್ಝಾಂಡರ್ ಕದನದಲ್ಲಿ ಗಾಯಗೊಂಡು ಮೂರ್ಛೆಹೋದ. ಅವನ ಸೈನಿಕರೂ ಹತಾಶರಾಗಿದ್ದರು. ಆದರೆ ಎಚ್ಚರಗೊಂಡ ಅಲೆಗ್ಝಾಂಡರ್ ಹೇಗೋ ವಿಜಯಸಾಧಿಸಿ ಮುನ್ನಡೆದ. ತನ್ನ ಸೈನ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಒಂದು ಭಾಗ ಮೊದಲು ಬಂದ ಮಾರ್ಗವಾಗಿ. ಮತ್ತೊಂದು ಸಮುದ್ರಮಾರ್ಗವಾಗಿ ಹಿಂದಿರುಗುವ ವ್ಯವಸ್ಥೆಮಾಡಿ, ತನ್ನ ಅಧೀನಕ್ಕೆ ಬಂದಿದ್ದ ಭಾರತದ ಪ್ರದೇಶಗಳಲ್ಲಿ ಆಡಳಿತದ ಏರ್ಪಾಡುಗಳನ್ನು ಸ್ಥಿರಗೊಳಿಸಿ, ಸೈನ್ಯದ ಮೂರನೆಯ ಭಾಗಕ್ಕೆ ತಾನೇ ನಾಯಕತ್ವವಹಿಸಿ ಬಾರಾಮುಲ್ ಕಣಿವೆಯ ಮೂಲಕ ಹಿಂತಿರುಗಿದ.
- ಮೌರ್ಯ ಸಾಮ್ರಾಜ್ಯ: ಅಲೆಗ್ಝಾಂಡರ್ ಭಾರತದ ವಾಯವ್ಯಭಾಗದಲ್ಲಿ ದಾಳಿಮಾಡಿದಾಗ, ಉತ್ತರ ಭಾರತದ ಮಧ್ಯದಲ್ಲಿ, ಮಗಧ ಸಾಮ್ರಾಜ್ಯ ಆಳುತ್ತಿದ್ದ ನಂದವಂಶದ ಧನನಂದ ಪ್ರಜೆಗಳ ವಿಶ್ವಾಸವನ್ನು ಕಳೆದುಕೊಂಡಿದ್ದ. ಅಲೆಗ್ಝಾಂಡರ ಹಿಂತಿರುಗದ ಕೂಡಲೆ ಭಾರತದಲ್ಲಿ ಅವನಿಂದ ಪರಾಜಿತರಾಗಿ ರಾಜ್ಯಗಳನ್ನು ಕಳೆದುಕೊಂಡಿದ್ದ ಅರಸರು ಪುನಃ ಸ್ವತಂತ್ರರಾಗಿ ಅವನು ಭಾರತದಲ್ಲಿ ಏರ್ಪಡಿಸಿದ್ದ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದರು. ತಕ್ಷಶಿಲೆಯಲ್ಲಿ ಪ್ರಜೆಗಳು ದಂಗೆ ಎದ್ದು ಫಿಲಿಪ್ ಎಂಬ ಕ್ಷತ್ರಪನನ್ನು ಕೊಂದರು. ಯವನ ಶಿಬಿರಗಳೆಲ್ಲ ಭಾರತೀಯರು ವಶವಾದವು. ಭಾರತದಿಂದ ಇನ್ನೂ ದೂರಹೋಗುವ ಮೊದಲೇ ಅಲೆಗ್ಝಾಂಡರನಿಗೆ ಈ ವಿಷಯ ತಿಳಿದರೂ ಆತ ನಿಸ್ಸಹಾಯಕನಾಗಿದ್ದ. ಮುಂದೆ ಎರಡು ವರ್ಷಗಳೊಳಗಾಗಿತೇ ಅವನು ಮರಣಹೊಂದಿದ. ಆಗ ಅವನ ಸೇನಾನಿಗಳೂ ಪ್ರಾಂತ್ಯಾಧಿಕಾರಿಗಳೂ ತಮ್ಮ ತಮ್ಮಲ್ಲಿ ಅಧಿಕಾರಕ್ಕಾಗಿ ಕಾದಾಡಿದರು. ಹಿಂದೂದೇಶದಲ್ಲಿದ್ದ ಯವನ ಕ್ಷತ್ರಪರಲ್ಲಿಯೂ ಅಂತಃಕಲಹಗಳು ಬೆಳೆದು ಕೊನೆಗೆ ಪ್ರಜೆಗಳು ದಂಗೆ ಎದ್ದಾಗ ಅವರು ಭಾರತ ಬಿಟ್ಟು ಓಡಿದರು. ಅಂದು ಭಾರತದ ವಾಯುವ್ಯದಲ್ಲಿ ತಲೆದೋರಿದ ವಿಪ್ಲವಕ್ಕೆ ಸಂದ್ರಕೊಟ್ಟಸ್ ಎಂಬಾತ ನಾಯಕನಾಗಿದ್ದನೆಂದು ಜಸ್ಟಿನ್ ಎಂಬ ಇತಿಹಾಸಕಾರ ಬರೆದಿದ್ದಾನೆ. ಈ ಸಂದ್ರಕೊಟ್ಟಸನೇ ಮೌರ್ಯ ಸಾಮ್ರಾಜ್ಯ ಸಂಸ್ಥಾಪಕ ಚಂದ್ರಗುಪ್ತ.
- ಚಂದ್ರಗುಪ್ತಮೌರ್ಯನ ಜೀವನದ ಬಗೆಗೆ ಹಲವಾರು ಕಥೆಗಳು ಹುಟ್ಟಿಕೊಂಡಿವೆ. ಆದರೆ ಇವುಗಳಾವುದಕ್ಕೂ ಚಾರಿತ್ರಿಕ ಆಧಾರಗಳಿಲ್ಲ. ಚಂದ್ರಗುಪ್ತನ ಬಾಲ್ಯದ ಬಗೆಗೆ ನಮಗೆ ಏನೂ ತಿಳಿಯದೆಂದೇ ಹೇಳಬೇಕು. ಮೊತ್ತಮೊದಲ ಬಾರಿಗೆ ಇವನ್ನು ದೃಷ್ಟಿಗೆ ಬೀಳುವುದು ಕ್ರಿ. ಪೂ. ಸು. 326-25ರಲ್ಲಿ. ನಂದರ ವಿರೋಧಿಯಾಗಿದ್ದ ಈತ ಅವರ ಆಳ್ವಿಕೆ ಕೊನೆಗಾಣಿಸಲು ಅಲೆಗ್ಝಾಂಡರನ ಸಹಾಯ ಬಯಸಿದ. ಇನ್ನೂ ಅಲ್ಪದಯಸ್ಕನೆಂಬ ಕಾರಣದಿಂದ ಇವನ ಸಲಹೆಯನ್ನು ಅಲೆಗ್ಝಾಂಡರ್ ಅಲ್ಲಗಳೆದ. ಅನಂತರ ಪಂಚನದ ಪ್ರಾಂತ್ಯದಲ್ಲಿ ಈತ ಅಲೆದಾಡುತ್ತಿದ್ದಾಗ ವಿಷ್ಣುಶರ್ಮ ಎಂಬ ಬ್ರಾಹ್ಮಣನ ಪರಿಚಯವಾಯಿತು. ಈತನೇ ಚಾಣಕ್ಯ ಅಥವಾ ಕೌಟಿಲ್ಯನೆಂದು ಪ್ರಸಿದ್ಧವಾದ (ನೋಡಿ- ಕೌಟಿಲ್ಯ) ಕಾರಣಾಂತರದಿಂದ ನಂದರಾಜರ ಮೇಲೆ ಕೋಪಗೊಂಡ, ಅವರ ನಿರ್ಮೂಲನಕ್ಕೆ ಹಟತೊಟ್ಟ ವಿಷ್ಣುಶರ್ಮ ತಕ್ಷಶಿಲೆಯ ವಿದ್ಯಾಪೀಠದಲ್ಲಿ ನೂರ ಆರು ಶಿಷ್ಯರೊಂದಿಗಿದ್ದನೆಂದೂ ಚಂದ್ರಗುಪ್ತನಿಗೆ ಚಾಣಕ್ಯನ ತಂತ್ರಾಕ್ತಿಯೂ ಪರ್ವತನೆಂದ ಅರಸನ ಸೈನ್ಯ ಬಲವೂ ದೊರಕಿದುವೆಂದು ವಿಶಾಖದತ್ತನ ಮುದ್ರಾರಾಕ್ಷನ ನಾಟಕದಲ್ಲಿ ಹೇಳಿದೆ.
- ಚಂದ್ರಗುಪ್ತ ಕ್ಷತ್ರಿಯ ಕುಲಗಳ ಒಲವನ್ನು ಗಳಿಸಿಕೊಂಡು ಪ್ರಜಾಪೋಷಕನಾಗಿದ್ದ ಮಗಧ ರಾಜ್ಯದ ನಂದನ ಮೇಲೆ ದಂಡೆತ್ತಿಹೋದ. ಆಗ ದೇಶದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದ್ದು ಚಂದ್ರಗುಪ್ತ ಪ್ರಜಾನುರಾಗದಿಂದ ನಾಯಕತ್ವ ವಹಿಸಿದ. ನಂದರನ್ನು ನಾಶಪಡಿಸಿ ಸಿಂಧೂನದಿಯಿಂದ ಬಂಗಾಲ ಉಪಸಾಗರದವರೆಗೆ ಹಬ್ಬಿದ್ದ ವಿಶಾಲ ಮಗಧ ಸಾಮ್ರಾಜ್ಯದ ಅಧಿಪತಿಯಾದ. ಅತಿ ಶೀಘ್ರದಲ್ಲಿಯೇ ದಕ್ಷ ಆಡಳಿತದಿಂದ ತನ್ನ ಸ್ಥಾನವನ್ನೂ ಬಲವನ್ನೂ ದೃಢಪಡಿಸಿಕೊಂಡ. ಹೀಗೆ ಕ್ರಿ. ಪೂ. 322ರಲ್ಲಿ ಮೌರ್ಯ ಸಾಮ್ರಾಜ್ಯ ಹುಟ್ಟಿತು.
- ಅಲೆಗ್ಝಾಂಡರನ ಮರಣದ ಬಳಿಕ ಅವನ ಸೇನಾನಿಗಳಲ್ಲೊಬ್ಬನಾದ ಸೆಲ್ಯೂಕಸ್ ಮೆಸಪೊಟೇಮಿಯಾದ ಬ್ಯಾಬಿಲೋನ್ ನಗರವನ್ನು ತನ್ನ ಸ್ವಾಧೀನಕ್ಕೆ ತಂದುಕೊಂಡು ಅಲ್ಲಿಂದ ಪೂರ್ವದೇಶಗಳ ಮೇಲೆ ದಂಡೆತ್ತಿ ಬ್ಯಾಕ್ಟ್ರಿಯ ದೇಶವನ್ನು ವಶಪಡಿಸಿಕೊಂಡು ಹಿಂದೂಸ್ಥಾನಕ್ಕೆ ಬಂದ. ಈ ಚಕ್ರವರ್ತಿಯ ಬಲವನ್ನು ಎದುರಿಸಲಾಗದ ಸೆಲ್ಯೂಕಸ್ ಭಾರತದ ಗಡಿ ದಾಟಲು ಅಸಮರ್ಥನಾಗಿ ಸಂಪೂರ್ಣ ಸೋಲನ್ನೊಪ್ಪಿದ. ಬಲಶಾಲಿಯಾದ ಚಂದ್ರಗುಪ್ತನ ದ್ವೇಷಕ್ಕೆ ಬದಲು ಸ್ನೇಹವೇ ಒಳಿತೆಂದು ಭಾವಿಸಿದ ಯವನನು, ಯವನ ಕ್ಷತ್ರಪರಿಗೆ ಸೇರಿದ್ದ ಈಗಿನ ಆಫ್‍ಘಾನಿಸ್ತಾನ ಮತ್ತು ಬಲೂಚಿಸ್ತಾನಗಳನ್ನು ಚಂದ್ರಗುಪ್ತನಿಗೆ ಕೊಟ್ಟು ಅವನಿಂದ ಧನ, ಕನಕ, ವಸ್ತು ವಾಹನಗಳನ್ನು 500 ಆನೆಗಳನ್ನು ಪಡೆದ. ಈ ಸಂದರ್ಭದಲ್ಲಿ ತನ್ನ ಮಗಳನ್ನು ಸಹ ಚಂದ್ರಗುಪ್ತನಿಗೆ ಮದುವೆಮಾಡಿ ಕೊಟ್ಟನೆಂದೂ ಈಕೆಯ ಹೊಟ್ಟೆಯಲ್ಲಿ ಬಿಂದುಸಾರನೆಂಬ ಮಗ ಹುಟ್ಟಿದನೆಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದರ ಸತ್ಯಾಸತ್ಯತೆಗಳು ಇನ್ನೂ ಸ್ಪಷ್ಟಗತವಾಗಿಲ್ಲ.
- ಹೊಸದಾಗಿ ಬೆಳೆದ ಈ ಸ್ನೇಹದ ಸ್ಥಿರತೆಗಾಗಿ ಸೆಲ್ಯೂಕಸ್ ತನ್ನ ರಾಯಭಾರಿಯಾಗಿ ಮೆಗಾಸ್ತನೀಸ್‍ನನ್ನು ಪಾಟಲೀಪುತ್ರಕ್ಕೆ ಕಳಿಸಿದ. ಈತ ಆಗಿಂದಾಗ್ಗೆ ಪಾಟಲೀಪುತ್ರಕ್ಕೆ ಬಂದು ಹೋಗತೊಡಗಿ ಪ್ರಯಾಣ ಮಾರ್ಗದಲ್ಲಿದ್ದ ಪುಷ್ಕಲಾವತಿ, ತಕ್ಷಶಿಲೆ, ಹಸ್ತಿನಾಪುರ, ಕನ್ಯಾಕುಬ್ಜ, ಪ್ರಯಾಗ, ಕಾಶಿ ಮುಂತಾದ ನಗರಗಳನ್ನು ಸಂದರ್ಶಿಸಿ ಭಾರತೀಯರ ನಡೆನುಡಿ, ಆಚಾರ, ವ್ಯವಹಾರ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಕುರಿತು ತನಗೆ ತೋಚಿದಂತೆ ಬರೆದಿಟ್ಟ ಇಂಡಿಕ ಎಂಬ ಹೆಸರಿನ ಈ ಗ್ರಂಥ ಪೂರ್ತಿಯಾಗಿ ಲಭಿಸಿಲ್ಲ. ಈತ ಇಲ್ಲಿಯ ಜನರ ಜೀವನದ ಬಗ್ಗೆ ತನ್ನದೇ ಆದ ವಿಚಿತ್ರ ಅರ್ಥವನ್ನು ಕೊಟ್ಟಿದ್ದಾನೆ. ಅನೇಕ ಕಡೆಗಳಲ್ಲಿ ಈತ ನೀಡಿದ ವಿವರಗಳೂ ಉತ್ಪ್ರೇಕ್ಷೆಯಿಂದ ಕೂಡಿದೆ.
- ಕೌಟಿಲ್ಯನ ಅರ್ಥಶಾಸ್ತ್ರದಿಂದಲೂ ಚಂದ್ರಗುಪ್ತ ಮೌರ್ಯನ ಕಾಲದ ಸ್ಥಿತಿಗತಿಗಳು ತಿಳಿದು ಬರುತ್ತವೆ. ಅರ್ಥಶಾಸ್ತ್ರವನ್ನು ಕೌಟಿಲ್ಯನೇ ಬರೆದನೆಂಬುದರ ಬಗೆಗೂ ಅದರ ಕಾಲದ ಬಗೆಗೂ ಭಿನ್ನಾಭಿಪ್ರಾಯಗಳಿವೆಯಾದರೂ ಚಂದ್ರಗುಪ್ತನ ಮಂತ್ರಿ ಚಾಣಕ್ಯನೇ ಇವನೆಂದೂ ಆ ಕಾಲದಲ್ಲಿಯೇ ಈ ಗ್ರಂಥ ಬರೆದನೆಂದೂ ಸಾಮಾನ್ಯವಾಗಿ ಗ್ರಹಿಸಲಾಗಿದೆ. 1905ರಲ್ಲಿ ಮೈಸೂರಿನ ಪ್ರಾಚ್ಯಗ್ರಂಥಾಲಯದ ಮುಖ್ಯಾಧಿಕಾರಿಗಳಾಗಿದ್ದ ಶಾಮಶಾಸ್ತ್ರಿಗಳು ಇದನ್ನು ಮೊದಲು ಬೆಳಕಿಗೆ ತಂದುದಲ್ಲದೆ ಆಂಗ್ಲಭಾಷೆಗೆ ಅನುವಾದಿಸಿದರು ಕೂಡ. ಅಂದಿನಿಂದ ಅರ್ಥಶಾಸ್ತ್ರದ ಪ್ರಾಮುಖ್ಯ ಹೆಚ್ಚಿತು. ಇದು ರಾಜನೀತಿಗೆ ಸಂಬಂಧಿಸಿದ ಪರಿಪೂರ್ಣ ಗ್ರಂಥ. ಮೆಗಾಸ್ತನಿಸನ ಇಂಡಿಕ ಮತ್ತು ಕೌಟಿಲ್ಯನ ಅರ್ಥಶಾಸ್ತ್ರಗಳು ಮೌರ್ಯರ ಇತಿಹಾಸಕ್ಕೆ ಮುಖ್ಯ ಸಾಹಿತ್ಯಾಧಾರಗಳು.
- ಕ್ರಿ. ಪೂ. 322ರಿಂದ 24 ವರ್ಷಗಳ ಕಾಲ ಎಂದರೆ 298ರ ತನಕ ಮಗಧ ಸಾಮ್ರಾಜ್ಯವನ್ನು ಆಳಿದ ಚಂದ್ರಗುಪ್ತ ಮೌರ್ಯನದು ಶಾಂತಿ ಸುಭಿಕ್ಷೆಗಳ ಕಾಲ. ಸೌರಾಷ್ಟ್ರದಂಥ ದೂರದ ಪ್ರಾಂತ್ಯಗಳ ಜನರ ಯೋಗಕ್ಷೇಮದ ಬಗೆಗೂ ಅವನು ಕಾತುರನಾಗಿದ್ದ. ಗಿರಿನಾರ್ (ಜುನಾಗಢ) ಶಾಸನದಲ್ಲಿ ಅಲ್ಲಿಯ ಸುದರ್ಶನ ಎಂಬ ಕೆರೆಯನ್ನು ಆ ಪ್ರಾಂತ್ಯದ ಅಧಿಕಾರಿಯಾಗಿದ್ದ ವೈಶ್ಯ ಪುಷ್ಯಗುಪ್ತ ಅಲ್ಲಿಯ ಜನರಿಗೆ ನೀರಾವರಿ ಸೌಕರ್ಯಗಳಿಗಾಗಿ ಕಟ್ಟಿಸಿದನೆಂದು ಹೇಳಿದೆ. ಹೀಗೆ ದಕ್ಷರಾದ ಅಧಿಕಾರಿಗಳ ಸಹಾಯದಿಂದ ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಸುಭದ್ರ ಆಡಳಿತ ನಡೆಸುತ್ತಿದ್ದ ಅರಸನ ಆಡಳಿತ ವ್ಯವಸ್ಥೆ ಅನಂತರದ ಶತಮಾನಗಳಲ್ಲಿ ಆಳಿದ ಇತರರಿಗೂ ಒಂದು ನಿದರ್ಶನವಾಯಿತು. ಕಾಲು ಶತಮಾನದ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಜೈನ ಗುರು ಭದ್ರಬಾಹುವಿನ ಬೋಧನೆಯ ಪ್ರಭಾವಕ್ಕೆ ಒಳಗಾದ ಚಂದ್ರಗುಪ್ತ ಜೈನಮತಾವಲಂಬಿಯಾಗಿ ಗುರು ಭದ್ರ ಬಾಹು ಮತ್ತು ಇತರ ಶಿಷ್ಯರೊಡನೆ ದಕ್ಷಿಣ ದೇಶಕ್ಕೆ ಬಂದು ಕರ್ನಾಟಕದ ಶ್ರವಣಬೆಳಗೊಳದಲ್ಲಿ ನೆಲಸಿ ಅಲ್ಲಿಯೇ ಸಲ್ಲೇಖನವ್ರತದಿಂದ ದೇಹತ್ಯಾಗ ಮಾಡಿದನೆಂಬುದು ಜೈನ ಐತಿಹ್ಯ. ಇದೇ ಬಗೆಯ ಐತಿಹ್ಯ 12ನೆಯ ಶತಮಾನದ ಕನ್ನಡ ಶಾಸನಗಳಲ್ಲಿಯೂ ಕಾಣಸಿಗುತ್ತದೆ. ಆದರೆ ಕ್ಷಾಮಭೀತಿಗಾಗಿ ಅರಸ ಸಿಂಹಾಸನ ತ್ಯಾಗಮಾಡುವುದು ಅಸಹಜವೆಂದೂ ಭದ್ರಬಾಹುವಿನೊಡನೆ ಕರ್ನಾಟಕಕ್ಕೆ ಬಂದಿರಬಹುದಾದ ಚಂದ್ರಗುಪ್ತ ಅಶೋಕನ ಮೊಮ್ಮಗನಾದ ಸಂಪ್ರತಿ ಚಂದ್ರಗುಪ್ತನೇ ಹೊರತು ಮೌರ್ಯ ಸಾಮ್ರಾಜ್ಯ ಸ್ಥಾಪಕ ಚಂದ್ರಗುಪ್ತನಲ್ಲವೆಂಬುದೂ ಹಲವರ ವಾದ.
- ಬಿಂದುಸಾರ: ಚಂದ್ರಗುಪ್ತನ ಅನಂತರ ಅವನ ಮಗ ಬಿಂದುಸಾರ ಪಟ್ಟಕ್ಕೆಬಂದ. ಈತ ತಂದೆಯಿಂದ ಬಂದ ರಾಜ್ಯವನ್ನು ನಿರ್ವಿಘ್ನವಾಗಿ ಪಾಲಿಸಿ 25ವರ್ಷಗಳ ಕಾಲ (ಕ್ರಿ.ಪೂ.298-273) ಆಳಿದ. ಡೈಮಾಕಸ್ ಎಂಬ ಸೆಲ್ಯೂಕಸನ ರಾಯಭಾರಿಯೂ ಈಜಿಪ್ತಿನಿಂದ ಡಯೋನಿಸಸ್ ಎಂಬುವನೂ ರಾಜಧಾನಿಗೆ ಬಂದಿದ್ದರು. ಈತ ಕ್ರಿ. ಪೂ. 247ರಲ್ಲಿ ಗತಿಸಿದ.
- ಅಶೋಕ: ಬಿಂದುಸಾರ ಇಪ್ಪತ್ತೈದು ವರ್ಷ ರಾಜ್ಯಪಾಲಿಸಿದ ಬಳಿಕ ಅವನ ಮಗ ಅಶೋಕ ಪಟ್ಟಕ್ಕೆ ಬಂದನೆಂದು ದೀಪವಂಶ ಮತ್ತು ಮಹಾವಂಶಗಳಲ್ಲಿ ಹೇಳಿದ. ಬೌದ್ಧಮತಾವಲಂಬಿಯಾಗುವುದಕ್ಕೆ ಮೊದಲು ಈತನಲ್ಲಿದ್ದ ಕ್ರೌರ್ಯ ಮುಂತಾದ ದುರ್ಗುಣಗಳು ಬೌದ್ಧಮತವನ್ನವಲಂಬಿಸಿದ ಬಳಿಕ ಮಾಯವಾಗಿ ಸದ್ಗುಣಿಯಾದನೆಂದು ಸೂಚಿಸಿ, ಇದು ಆ ಮತದ ಶ್ರೇಷ್ಠತೆಯ ಪರಿಣಾಮವೆಂದು ತೋರಿಸಲು ಹೆಣೆಯಲಾದ ಕಥೆಗಳಾಗಿವೆ.
- ಉತ್ತರ ಆಫ್‍ಘಾನಿಸ್ತಾನದಿಂದ ದಕ್ಷಿಣದ ಚಿತ್ರದುರ್ಗ ಬಳ್ಳಾರಿ ಜಿಲ್ಲೆಗಳವರೆಗಿನ ವಿಸ್ತಾರ ಪ್ರದೇಶದಲ್ಲಿ ಅನೇಕ ಕಡೆ ಇವನ ಶಾಸನಗಳು ದೊರೆತಿವೆ. ಇವು ಈತನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಅರಿಯಲು ಸಹಾಯಕವಾಗಿವೆ. ಅಶೋಕ ಕಲಿಂಗ ದೇಶದೊಡನೆ ಯುದ್ಧಮಾಡಿದುದು ಅವನ ಜೀವನದ ಒಂದು ಪ್ರಮುಖ ಘಟ್ಟ. ಅನಂತರವೇ ಅವನು ಶಾಸನಗಳನ್ನು ಕೊರೆಯಿಸಿದ. ಆಗಿನ ಕಾಲದ ರಾಜಧರ್ಮಕ್ಕೆ ಸಹಜವಾಗಿಯೇ ಕಳಿಂಗ ದೇಶದ ಮೇಲೆ ದಂಡೆತ್ತಿಹೋದ. ಆದರೆ ಆಗ ನಡೆದ ಹತ್ಯಾಕಾಂಡ ನೋಡಲಾಗದೆ ತನ್ನನ್ನು ತಾನೇ ದೂಷಿಸಿಕೊಂಡು ಪಶ್ಚಾತ್ತಾಪ ಪಟ್ಟ. ಕಲಿಂಗ ಯುದ್ಧದ ಅನಂತರ ಅವನ ಧರ್ಮಪಾಲನೆ, ಧರ್ಮಕಾಮನೆ ಮತ್ತು ಧರ್ಮ ಪ್ರಸಾರಗಳು ತೀವ್ರವಾದವೆಂದು ಅವನೇ ಹೇಳಿಕೊಂಡಿರುವುದನ್ನು ಗಮನಿಸಿದಾಗ ಅವನು ಮೊದಲಿನಿಂದಲೂ ಧಾರ್ಮಿಕ ಪ್ರವೃತ್ತಿಯವನಾಗಿದ್ದನೆಂದೂ ಕಲಿಂಗಯುದ್ಧದ ಭೀಕರ ಪರಿಣಾಮ ಹಿಂಸಾಮಾರ್ಗವನ್ನು ಪೂರ್ಣವಾಗಿ ತ್ಯಜಿಸುವ ನಿರ್ಧಾರಕ್ಕೆ ಬರಲು ಅವನಿಗೆ ಸಹಾಯಕವಾಯಿತೆಂದೂ ಹೇಳಬಹುದು.
- ಅಶೋಕ ತನ್ನ ಆಳ್ವಿಕೆಯ ಹನ್ನೆರಡನೆಯ ವರ್ಷದಿಂದ ಶಾಸನಗಳನ್ನು ಬಂಡೆಗಳ ಮೇಲೂ ಸ್ತಂಭಗಳ ಮೇಲೂ ಗವಿಗಳ ಒಳಗೂ ಬರೆಯಿಸಲು ಆರಂಭಿಸಿದ. ಇವನ ಶಾಸನಗಳನ್ನು ಶಿಲಾ ಶಾಸನಗಳು, ಲಘುಶಿಲಾಶಾಸನಗಳು, ಸ್ತಂಭಶಾಸನಗಳು ಮತ್ತು ಗವಿಶಾಸನಗಳು ಎಂದು ಸಾಮಾನ್ಯವಾಗಿ ವಿಂಗಡಿಸಲಾಗಿದೆ. ಇವು ಕಲ್ಲಿನಲ್ಲಿ ಕೊರೆಯಿಸಿದ ಅವನ ಆತ್ಮಕಥನ. ಇವು ಅವನಲ್ಲಿ ಉಂಟಾದ ಮಾನಸಿಕ ಪರಿವರ್ತನೆಯಿಂದಾರಂಭಿಸಿ ಅವನ ಧರ್ಮದ ಬಗೆಗಿನ ವಿವೇಚನೆ, ಧರ್ಮಪ್ರಚಾರಕ್ಕಾಗಿ ಕೈಕೊಂಡಕಾರ್ಯ, ಅವುಗಳಿಗನುಗುಣವಾಗಿ ಆಡಳಿತ ಪದ್ಧತಿಯಲ್ಲಿ ಮಾಡಿದ ಸುಧಾರಣೆ ಮುಂತಾದವುಗಳನ್ನು ಕುರಿತು ಹೇಳುತ್ತವೆ. ಇವುಗಳ ಭಾಷೆ ಪ್ರಾಕೃತ ಮತ್ತು ಪಾಲೀ. ಅಶೋಕನೇ ಸ್ವತಃ ಜನರಿಗೆ ಮನಮುಟ್ಟುವಂತೆ ಧರ್ಮಬೋಧನೆ ಮಾಡಿರುವುದು ಈ ಶಾಸನಗಳ ವೈಶಿಷ್ಟ್ಯ.
- ನಮಗೆ ದೊರೆತಿರುವ ಅಶೋಕ ಶಾಸನಗಳು ಅವನ ಸಾಮ್ರಾಜ್ಯದ ವಿಸ್ತಾರವನ್ನು ಗುರುತಿಸಲು ಸಹಾಯಕವಾಗಿವೆ. ದಕ್ಷಿಣದಲ್ಲಿ ಚೋಳ, ಪಾಂಡ್ಯ, ಚೇರ ದೇಶಗಳೂ ಪಶ್ಚಿಮದಲ್ಲಿ ಸತಿಯಪುತ್ರ ಎಂದರೆ ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಪ್ರದೇಶವೂ ಅವನ ಸಾಮ್ರಾಜ್ಯದ ಹೊರಗಿದ್ದುವು. ಉತ್ತರಭಾರತದ ಎಲ್ಲ ಪ್ರದೇಶಗಳಲ್ಲದೆ ವಾಯವ್ಯದಲ್ಲಿ ಅವನ ಸಾಮ್ರಾಜ್ಯ ಆಫ್‍ಘಾನಿಸ್ತಾನವನ್ನೂ ಒಳಗೊಂಡಿತ್ತು ಎಂದು ಇತ್ತೀಚೆಗೆ ಕಂದಹಾರದಲ್ಲಿ ದೊರೆತ ಅವನ ಶಾಸನದ ಆಧಾರದಿಂದ ಹೇಳಬಹುದು. ಪೂರ್ವ ಪಶ್ಚಿಮಗಳಲ್ಲಿ ಕ್ರಮವಾಗಿ ಬಂಗಾಲ ಉಪಸಾಗರ ಮತ್ತು ಅರಬ್ಬೀ ಸಮುದ್ರಗಳೇ ಅವನ ಸಾಮ್ರಾಜ್ಯದ ಮೇರೆಗಳಾಗಿದ್ದುವು.
- ಅಶೋಕ ಸುಮಾರು 40 ವರ್ಷ ಕಾಲ ರಾಜ್ಯವಾಳಿ ಬಹುಶಃ ಕ್ರಿ. ಪೂ. 232ರಲ್ಲಿ ಮರಣ ಹೊಂದಿದ. ಇಷ್ಟು ಹಿರಿದಾದ, ಕೀರ್ತಿವೆತ್ತ ಮೌರ್ಯ ಸಾಮ್ರಾಜ್ಯ ಈತನ ಮರಣಾನಂತರ ಐವತ್ತು ವರ್ಷಗಳೊಳಗೇ ಪತನವಾಯಿತು. ಪುರಾಣಗಳಲ್ಲಿಯ ಹೇಳಿಕೆಗಳಂತೆ ಮೌರ್ಯವಂಶದ ಅರಸರು 137 ವರ್ಷಗಳ ಕಾಲ ಆಳಿದರು. ಅದರಲ್ಲಿ ಮೊದಲನೆಯ ಮೂವರು ಆಳಿದ್ದು 85 ವರ್ಷ.
- ಅಶೋಕನ ಬೌದ್ಧಪಕ್ಷಪಾತದಿಂದಾಗಿ ಬ್ರಾಹ್ಮಣವರ್ಗದವರಲ್ಲಿ ಅಸಂತೋಷವುಂಟಾಗಿ ಇದರ ಪ್ರತಿಕ್ರಿಯೆಯಾಗಿಯೇ ಶುಂಗವಂಶದ ಪುಷ್ಯಮಿತ್ರ ಮೌರ್ಯ ಸಾಮ್ರಾಜ್ಯದ ಮೇಲೆ ಧಾಳಿಮಾಡಿದ. ಅಶೋಕನ ಅಹಿಂಸೆಯ ಅತಿರೇಕದಿಂದ ಆಡಳಿತದಲ್ಲಿ ಶೈಥಿಲ್ಯ ಉಂಟಾಗಿ, ಕ್ಷಾತ್ರವೃತ್ತಿ ಕಡಿಮೆಯಾಗಿ, ಸೈನಿಕಬಲ ತಗ್ಗಿ, ರಾಷ್ಟ್ರ ಬಲುಗುಂದಿತು, ಎಂಬುದು ಹರಪ್ರಸಾದಶಾಸ್ತ್ರಿಗಳ ಅಭಿಪ್ರಾಯ. ಇಂಥ ಆರೋಪಗಳಿಗೆ ಅಶೋಕನ ಶಾಸನಗಳಲ್ಲಿ ಅಲ್ಪವಾದರೂ ಪುಷ್ಟಿ ದೊರೆಯುವುದಿಲ್ಲವಷ್ಟೇ ಅಲ್ಲ ಇವುಗಳಲ್ಲಿ ಹುರುಳಿಲ್ಲ ಎಂಬುದು ಕೂಡ ಸ್ಪಷ್ಟ. ಅಶೋಕ ಬೌದ್ಧಮತವನ್ನವಲಂಬಿಸಿದುದೇನೋ ನಿಜ; ಆದರೆ ಮತದ ಪಕ್ಷಪಾತದಿಂದಾಗಿ, ಬ್ರಾಹ್ಮಣಮತವನ್ನಾಗಲಿ, ಇತರ ಮತಗಳನ್ನಾಗಲಿ ಕಡೆಗಣಿಸಲಿಲ್ಲ. ಪ್ರಾಣಿಹಿಂಸೆ ಕೂಡದು ಎಂದಾಗ ಯಜ್ಞಮಾಡುವುದನ್ನೇ ನಿಲ್ಲಿಸಿದ ಎಂದರ್ಥವಾಗುವುದಿಲ್ಲ. ಮೇಲಾಗಿ ವೈದಿಕ ಮತದವರನ್ನು ಗೌರವಿಸುವುದು ಅವನ ಧರ್ಮದ ಒಂದು ಅಂಗವೇ ಆಗಿತ್ತು. ಅಶೋಕನ ಅಹಿಂಸೆಯಿಂದಾಗಿ ರಾಷ್ಟ್ರ ಬಲಹೀನವಾಯಿತು ಎಂಬುದರಲ್ಲಿಯಂತೂ ಅರ್ಥವೇ ಇಲ್ಲ. ಕಳಿಂಗದ ಯುದ್ಧಕಾಂಡ ಅವನ ಮನಸ್ಸಿನ ಮೇಲೆ ಪರಿಣಾಮ ಬೀರಿದರೂ ಅಂದಿನಿಂದ ಸಂಪೂರ್ಣ ಶಸ್ತ್ರ ಸಂನ್ಯಾಸವನ್ನು ಕೈಕೊಂಡು ಯಾರು ಏನು ಮಾಡಿದರೂ ಅವರನ್ನು ಶಿಕ್ಷಿಸುವುದಿಲ್ಲ ಎಂಬ ನಿರ್ಣಯ ಕೈಕೊಳ್ಳಲಿಲ್ಲ. ಇದಕ್ಕೆ ಬದಲಾಗಿ ಜನ ತನ್ನ ಧರ್ಮ ವಿಜಯದ ದಯಾಪರ ನೀತಿಯನ್ನು ಅಪಾರ್ಥಮಾಡಿಕೊಳ್ಳದಿರಲಿ ಎಂದು ಸೂಚಿಸಿದ್ದಾನೆ. ಜನರ ಅಪರಾಧಗಳನ್ನು ಅವು ಕ್ಷಮ್ಯವಾದಷ್ಟು ಮಟ್ಟಿಗೆ ಮಾತ್ರ ಕ್ಷಮಿಸುತ್ತೇನೆ ಎಂದು ಹೇಳಿ ತಪ್ಪಿತಸ್ಥರನ್ನು ಶಿಕ್ಷಿಸುವ ಶಕ್ತಿ ತನಗಿದೆ. ಅವರು ತಮ್ಮ ತಪ್ಪುಗಳಿಗಾಗಿ ನಾಚಿ ನಡೆಯಲಿ ಇಲ್ಲವಾದರೆ ಕೊಲ್ಲಬೇಕಾದೀತೆಂದು ಸ್ಪಷ್ಟವಾಗಿ ಹೇಳಿದ್ದಾನೆ. ಅಶೋಕನಿಗೆ ಪ್ರಾಣಿಹಿಂಸೆ ಹಿಡಿಸದಿದ್ದರೂ ಯಾವ ಪ್ರಾಣಿಯನ್ನೂ ಕೊಲ್ಲಕೂಡದು ಎಂಬ ಸುಗ್ರೀವಾಜ್ಞೆಯನ್ನು ಹೊರಡಿಸಲಿಲ್ಲ. ರೂಢಿಯಿಂದ ಬಂದ ಪದ್ಧತಿಯನ್ನು ಒಡನೆಯೇ ಕಿತ್ತುಹಾಕುವುದು ಸುಲಭವಲ್ಲ ಎಂಬುದನ್ನು ಆತ ಅರಿತಿದ್ದ. ಸ್ವತಃ ತನ್ನ ಅರಮನೆಯಲ್ಲಿಯೇ ಆಹಾರಕ್ಕಾಗಿ ಪ್ರಾಣಿವಧೆಯನ್ನು ಕ್ರಮೇಣ ಕಡಿಮೆ ಮಾಡುತ್ತ ಬಂದ. ಅಶೋಕ ಅಹಿಂಸಾವಾದಿಯಾಗಿದ್ದರೂ ಮರಣದಂಡನೆಯನ್ನು ತೆಗೆದುಹಾಕುವುದು ದೇಶದ ಹಿತದೃಷ್ಟಿಯಿಂದ ಅವ್ಯವಹಾರ್ಯವಾದೀತು ಎಂಬುದನ್ನು ಮನಗಂಡು ಅದನ್ನು ಹಾಗೆಯೇ ಇರಗೊಟ್ಟ. ಆತನ ಅನಂತರ ಮೌರ್ಯ ಸಾಮ್ರಾಜ್ಯ ಬಲುಕಾಲ ಬಾಳಲಿಲ್ಲವೆಂಬುದು ನಿಜವೇ. ಅನಂತರ ಬಂದ ಅರಸರು ಅವನಷ್ಟು ಬಲಶಾಲಿಗಳೂ ದೂರದರ್ಶಿಗಳೂ ಆಗಿರಲಿಕ್ಕಿಲ್ಲ. ಇದರ ಅವಕಾಶ ಪಡೆದು ಪರಕೀಯರು ಧಾಳಿಮಾಡಲು ಹವಣಿಸಿರಬೇಕು.
- ಅಶೋಕನ ಅನಂತರ ಅವನ ಸಾಮ್ರಾಜ್ಯದಲ್ಲಿ ಅಂತಃಕಲಹಗಳೂ ವೈಮನಸ್ಸುಗಳೂ ತಲೆದೋರಿ ಪುನಃ ಸಾಮ್ರಾಜ್ಯಕ್ಕೆ ಸೇರಿದ್ದ ಭಾಗಗಳು ಬೇರೆಯಾದುವು. ಅವನ ಅನಂತರ ಆಳಿದವರ ಬಗೆಗೆ ಖಚಿತ ವಿವರಗಳು ಸಿಗುವುದಿಲ್ಲ. ಪುರಾಣಗಳಲ್ಲಿ ಕುಣಾಲ, ಬಂಧುಪಾಲಿತ, ಇಂದ್ರಪಾಲಿತ, ದಶೋನ, ದಶರಥ, ಸಂಪ್ರತಿ, ಶಾಲೀ ಶುಕ, ದೇವವರ್ಮ, ಶತಧನ್ವನ್, ಬೃಹದ್ರಥ ಎಂಬವರ ಹೆಸರುಗಳಿವೆ. ಇದರಲ್ಲಿ ದಶರಥ ನಾಗಾರ್ಜುನ ಬೆಟ್ಟಗಳಲ್ಲಿ ಆಜೀವಿಕರ ವಾಸಕ್ಕಾಗಿ ಗುಹೆಗಳನ್ನು ದತ್ತಿಯಾಗಿ ಬಿಟ್ಟುಕೊಟ್ಟ ಮೂರು ಶಾಸನಗಳ ಮೂಲಕ ಪರಿಚಿತನಾಗಿದ್ದಾನೆ. ಇವನು ಅಶೋಕನ ಮೊಮ್ಮಗ, ಇವನಂತೆಯೇ ಸಂಪ್ರತಿ ಸಹ ಅಶೋಕನ ಇನ್ನೊಬ್ಬ ಮೊಮ್ಮಗ, ಕುಣಾಲನ ಮಗ. ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ಜಲೌಕನೆಂಬ ಅಶೋಕನ ಮೊಮ್ಮಗನನ್ನು ಹೆಸರಿಸಿದ್ದಾನೆ. ಅಶೋಕನ ಮರಣಾನಂತರ ಅವನ ರಾಜ್ಯವನ್ನು ಎರಡು ಭಾಗ ಮಾಡಲಾಯಿತೆಂದೂ ಆ ಸಮಯದಲ್ಲಿ ಬಂದ ಬ್ಯಾಕ್ಟ್ರಿಯ ದೇಶದ ಗ್ರೀಕ್ ಆಕ್ರಮಣಕಾರರು ವಾಯವ್ಯ ಪ್ರಾಂತ್ಯ ಮುತ್ತಿದರೆಂದೂ ಅಷ್ಟರಲ್ಲಿ ದಕ್ಷಿಣಾಪಥದಲ್ಲಿ ಪ್ರಬಲರಾಗುತ್ತಿದ್ದ ಆಂಧ್ರರು ಮೌರ್ಯ ಸಾಮ್ರಾಜ್ಯದ ಮೇಲೆ ಧಾಳಿಮಾಡಿದರೆಂದೂ ಹಲವರು ಊಹಿಸಿದ್ದಾರೆ.
- ಶುಂಗಮನೆತನ : ಮೌರ್ಯವಂಶ ಕೊನೆಯ ಅರಸ ಬೃಹದ್ಗಂಥ. ಈತನ ಸೇನಾನಿ ಪುಷ್ಯಮಿತ್ರ ಅರಸನನ್ನು ಸೇನೆಯ ಪರೀಕ್ಷೆಗೆಂದು ಆಹ್ವಾನಿಸಿ ಸೇನೆಯ ಸಮ್ಮುಖದಲ್ಲಿ ಕೊಂದ (ಕ್ರಿ. ಪೂ. 184). ಅವನು ಈ ರಾಜ್ಯ ಕ್ರಾಂತಿಯನ್ನು ಬಹಳ ವ್ಯವಸ್ಥಿತ ರೀತಿಯಲ್ಲಿ ಮೊದಲೇ ಯೋಜಿಸಿದ್ದ ಎಂಬುದನ್ನು ಇದು ಸೂಚಿಸುತ್ತದೆ. ಈ ಕಾಲದ ಇತಿಹಾಸವನ್ನು ಪುನಾರಚಿಸಲು ನಮಗೆ ಸಾಹಿತ್ಯಿಕ ಆಧಾರಗಳೇ ಹೆಚ್ಚು. ಗಾರ್ಗಿಸಂಹಿತೆ, ಪತಂಜಲಿಯ ಮಹಾಭಾಷ್ಯ, ಕಾಳಿದಾಸನ ಮಾಳವಿಕಾಗ್ನಿಮಿತ್ರ, ಬಾಣನ ಹರ್ಷಚರಿತ ಮತ್ತು ದಿವ್ಯಾವದಾನಗಳು ಮುಖ್ಯವಾದ ಸಾಹಿತ್ಯಕ ಆಧಾರಗಳು.
- ದಿವ್ಯಾವದಾನದಲ್ಲಿ ಪುಷ್ಯಮಿತ್ರ ಮೌರ್ಯಸಂತತಿಯವನೆಂದಿದ್ದರೆ ಕಾಳಿದಾಸ ಇವನು ಕಾಶ್ಯಪಗೋತ್ರದ ಬೈಂಬಿಕ ವಂಶದವನೆಂದಿದ್ದಾನೆ. ಇವನ ವಂಶಜರ ಹೆಸರು ಮಿತ್ರ ಎಂದು ಕೊನೆಗೊಳ್ಳುವುದರಿಂದ ಇವರು ಇರಾನ್ ದೇಶದವರೆಂದೂ ಮಿತ್ರ ಎಂದರೆ ಸೂರ್ಯನ ಆರಾಧಕರೆಂದೂ ಒಬ್ಬ ಇತಿಹಾಸಕಾರ ಊಹಿಸಿದ್ದಾನೆ. ಈ ಬಗೆಗೆ ಹೆಚ್ಚಿನ ಆಧಾರಗಳಿಲ್ಲ. ಪುರಾಣಗಳಲ್ಲಿ ಈತ ಶುಂಗವಂಶಕ್ಕೆ ಸೇರಿದವನೆಂದೂ ಭಾರದ್ವಾಜ ಗೋತ್ರೋದ್ಭವನೆಂದೂ ಹೇಳಿರುವುದನ್ನು ಒಪ್ಪಬಹುದಾಗಿದೆ. ಈ ವೇಳೆಗಾಗಲೇ ಮೌರ್ಯಸಾಮ್ರಾಜ್ಯದ ಮಧ್ಯಭಾಗ, ಪಾಟಲೀಪುತ್ರದ ಸುತ್ತಲಿನ ಪ್ರದೇಶಗಳು ಮಾತ್ರ ಪುಷ್ಯಮಿತ್ರನ ಆಳ್ವಿಕೆಗೆ ಒಳಪಟ್ಟುವು. ರಾಜಧಾನಿಯಾಗಿದ್ದ ಪಾಟಲೀಪುತ್ರ, ಅಯೋಧ್ಯ, ವಿದಿಶಾ ಇವು ಈ ರಾಜ್ಯದ ಪ್ರಮುಖ ಪಟ್ಟಣಗಳು. ಪುಷ್ಯಮಿತ್ರನ ಮಗ ಅಗ್ನಿಮಿತ್ರ ವಿದಿಶಾ ನಗರದ ಗೋಪ್ತಾ ಎಂದರೆ ರಾಜಪ್ರತಿನಿಧಿಯಾಗಿದ್ದನೆಂದು ಕಾಳಿದಾಸ ಹೇಳಿದ್ದಾನೆ.
- ಬೃಹದ್ರಥನ ಸಚಿವನಿಗೂ ಸೇನಾನಿಗೂ, ನಡುವೆ ವೈಮನಸ್ಯವಿದ್ದುದರಿಂದ ರಾಜ್ಯಕ್ರಾಂತಿಯಾದಾಗ ಆ ಸಚಿವ ಬಂಧಿತನಾದ. ಸಚಿವನ ಮೈದುನ ಯಜ್ಞಸೇನ ಆಗ ವಿದರ್ಭದ ಅರಸನಾಗಿದ್ದ. ಈತನ ಭ್ರಾತೃಸಂಬಂಧಿಯಾಗಿದ್ದ ಮಾಧವ ಸೇನ ಅಗ್ನಿಮಿತ್ರನ ಸ್ನೇಹಿತನಾಗಿದ್ದ. ಮಾಧವಸೇನ ವಿದಿಶಾನಗರಕ್ಕೆ ಹೊರಟಿದ್ದ ಸಮಯದಲ್ಲಿ ವಿದರ್ಭದ ಗಡಿಯಲ್ಲಿದ್ದ ಅಧಿಕಾರಿಗಳು (ಅಂತಪಾಲರು) ಆತನನ್ನು ಬಂಧಿಸಿದಾಗ ಅವನನ್ನು ಬಿಡುಗಡೆ ಮಾಡಬೇಕೆಂದು ಅಗ್ನಿಮಿತ್ರ ಯಜ್ಞಸೇನನಿಗೆ ಆದೇಶವಿತ್ತ. ಆದರೆ ಅದಕ್ಕೆ ಬದಲು ತನ್ನ ಭಾವನಾದ ಸಚಿವನನ್ನು ಬಿಡುಗಡೆ ಮಾಡಬೇಕೆಂಬ ಷರತ್ತು ಹಾಕಿದ. ಕೋಪಗೊಂಡ ಅಗ್ನಿಮಿತ್ರ ತನ್ನ ಮೈದುನ ವೀರಸೇನನನ್ನು ಸೈನ್ಯ ಸಮೇತ ವಿದರ್ಭದ ಮೇಲೆ ದಂಡೆತ್ತಿ ಹೋಗಲು ಅಜ್ಞಾಪಿಸಿದ. ಕೊನೆಗೆ ಪುಷ್ಯಮಿತ್ರನ ಅಧೀನಕ್ಕೊಳಪಟ್ಟ ವಿದರ್ಭ ಇಬ್ಭಾಗವಾಗಿ ಯಜ್ಞಸೇನ, ಮಾಧವಸೇನರು ಕ್ರಮವಾಗಿ ಈ ಎರಡೂ ಭಾಗಗಳ ಅಧಿಪತಿಗಳಾದರು. ಇವು ಕಾಳಿದಾಸನ ಮಾಲವಿಕಾಗ್ನಿಮಿತ್ರದಿಂದ ನಮಗೆ ತಿಳಿದುಬರುವ ಸಂಗತಿಗಳು.
- ಪುಷ್ಯಮಿತ್ರನ ಕಾಲದಲ್ಲಿ ಯವನರು ಮತ್ತೊಮ್ಮೆ ಭಾರತಕ್ಕೆ ದಂಡೆತ್ತಿ ಬಂದರೆಂದು ಪತಂಜಲಿಯ ಮಹಾಭಾಷ್ಯದಿಂದ ತಿಳಿದುಬರುತ್ತದೆ. ಪುಷ್ಯಮಿತ್ರ ಇನ್ನೂ ಸೇನಾನಿಯಾಗಿದ್ದಾಗಲೇ ಸಾಕೇತ (ಆಯೋಧ್ಯಾ) ಮತ್ತು ಚಿತ್ತೋರ್ ನಗರದ ಸುತ್ತಲಿನ ಮಾಧ್ಯಮಿಕಾ ದೇಶಗಳನ್ನು ಯವನರು ಮುತ್ತಿದರೆಂದೂ ಅವನು ರಾಜ್ಯವಾಳತೊಡಗಿದ ಮೇಲೂ ಮತ್ತೊಮ್ಮೆ ಯವನರನ್ನು ಎದುರಿಸಬೇಕಾಗಿ ಬಂತೆಂದೂ ಮಹಾಭಾಷ್ಯ ಮತ್ತು ಗಾರ್ಗಿಸಂಹಿತೆಯ ಯುಗ ಪುರಾಣದಲ್ಲಿ ಉಕ್ತವಾಗಿರುವ ಹೇಳಿಕೆಗಳನ್ನು ಅರ್ಥವಿಸಲಾಗಿದೆ. ಅಗ್ನಿಮಿತ್ರನ ಮಗ ವಸುಮಿತ್ರ (ಅಥವಾ ಸುಮಿತ್ರ) ಬ್ಯಾಕ್ಟ್ರಿಯಕ್ಕೆ ಸೇರಿದ್ದ ಯವನರನ್ನು ಸಿಂಧೂನದಿ ತೀರದ ಮೇಲೆ ಎದುರಿಸಿದನೆಂದು ಮಾಲವಿಕಾಗ್ನಿಮಿತ್ರದ ಆಧಾರದ ಮೇಲೆ ಊಹಿಸಲಾಗಿದೆ.
- ಪುಷ್ಯಮಿತ್ರ ಎರಡುಬಾರಿ ಅಶ್ವಮೇಧಯಾಗ ಮಾಡಿದನೆಂದು ಹೇಳಲಾಗಿದೆ. ಇದು ಬಹುಶಃ ಅಂದು ದೇಶಕ್ಕೆ ಯವನರಿಂದ ಒದಗಿದ್ದ ಕುತ್ತನ್ನು ಅವನು ಪಾರು ಮಾಡಿದನೆಂಬುದನ್ನು ಸೂಚಿಸಬಹುದು. 26 ವರ್ಷಗಳ ತನಕ ಆಳಿದ ಬಳಿಕ ಪುಷ್ಯಮಿತ್ರ ಕ್ರಿ. ಪೂ. 148(151)ರಲ್ಲಿ ಮೃತನಾದ. ಈತನ ಆಳ್ವಿಕೆಯ ಕಾಲದಲ್ಲಿಯೇ ಇವನಿಗೆ ಸಹಾಯಕನಾಗಿದ್ದ ಅಗ್ನಿಮಿತ್ರ ಅನಂತರ ಪಟ್ಟಕ್ಕೆ ಬಂದು ಎಂಟು ವರ್ಷಗಳ ಕಾಲ ಕ್ರಿ. ಪೂ. 140(143)ರ ತನಕ ಆಳಿದ. ಅಗ್ನಿಮಿತ್ರನ ಬಳಿಕ ಸುಜ್ಯೇಷ್ಠ, ಸುಮಿತ್ರ, ವಜ್ರಮಿತ್ರ, ಭಾಗವತ ಮತ್ತು ದೇವಭೂತಿ ಎಂಬ ಐವರು ಅರಸರು ಒಟ್ಟು 68 ವರ್ಷಗಳ ಕಾಲ ಆಳಿದರು. ಶುಂಗರ ಆಳ್ವಿಕೆ ಮಗಧ ರಾಜ್ಯದ ಇತಿಹಾಸದಲ್ಲಿ ಮಹತ್ತ್ವ ಗಳಿಸಿದೆ. ಇವರಿಂದಾಗಿ ದೇಶಕ್ಕೆ ಯವನರಿಂದ ಒದಗಿದ್ದ ಆಪತ್ತು ದೂರವಾಯಿತು. ಕ್ಷೀಣಿಸಿದ್ದ ಮಗಧರಾಜ್ಯ ಇನ್ನೂ ಒಂದು ಶತಮಾನ ಕಾಲ ಅಸ್ತಿತ್ವದಲ್ಲಿರಲು ಸಾಧ್ಯವಾಯಿತು.
- ಕಣ್ವ ಮನೆತನ : ವಸುದೇವ ಈ ಮನೆತನದ ಮೊದಲ ಅರಸ. ಪುರಾಣಗಳಲ್ಲಿ ಇವನನ್ನೂ ಇವನ ವಂಶಜರನ್ನೂ ಶುಂಗಭೃತ್ಯರೆಂದು ವರ್ಣಿಸಲಾಗಿದೆ. ವಸುದೇವನ ಕಾಲಕ್ಕೆ ಯವನರ ದಾಳಿಯಿಂದಾಗಿ ಮಗಧ ರಾಜ್ಯದ ಬಲ ಮತ್ತಷ್ಟು ಕುಗ್ಗಿತು. ವಸುದೇವ ಅವನ ಸಂತತಿಯ ಇತರ ಮೂವರಾದ ಭೂಮಿಮಿತ್ರ, ನಾರಾಯಣ ಮತ್ತು ಸುಶರ್ಮ ಇವರು 45 ವರ್ಷಗಳ ಕಾಲ ಕ್ರಿ.ಪೂ. 27(30)ರ ತನಕ ರಾಜ್ಯವಾಳಿದರು. ಕೊನೆಯ ಅರಸ ಸುಶರ್ಮನನ್ನು ಆಂಧ್ರ ಕುಲದ ಸಿಮುಕ ಸೋಲಿಸಿ ರಾಜ್ಯದಿಂದ ಹೊಡೆದೋಡಿಸಿದ. ಆದರೆ ಬರಿದಾದ ಮಗಧರಾಜ್ಯದ ಸಿಂಹಾಸನವನ್ನು ಸಿಮುಕ ಏರಲೇ ಇಲ್ಲ. ಮುಂದೆ ಮೂರು ಶತಮಾನಗಳು ಸಣ್ಣ ಪುಟ್ಟ ರಾಜರಿಂದ ಆಳಲ್ಪಟ್ಟು ಮಗಧ ರಾಜ್ಯ ಕ್ರಮೇಣ ತನ್ನ ಕೀರ್ತಿಯನ್ನು ಕಳೆದುಕೊಂಡಿತು.
- ಕಲಿಂಗದ ಖಾರವೇಲ : ಅಶೋಕ ಕಲಿಂಗ ದೇಶವನ್ನು ಜಯಿಸಿದುದು ನಮಗೆ ತಿಳಿದಿದೆ. ಅಶೋಕನಿಗೂ ಮೊದಲು ಕಲಿಂಗವನ್ನು ಜಯಿಸಲು ನಂದರಾಜ ಪ್ರಯತ್ನಿಸಿದಂತೆ ಕಾಣುತ್ತದೆ. ಆದರೆ ಅಶೋಕನ ತರುವಾಯ ಮೌರ್ಯ ಸಾಮ್ರಾಜ್ಯ ಕ್ಷೀಣಿಸಿದಾಗ ಸ್ವತಂತ್ರವಾದ ಪ್ರಾಂತ್ಯಗಳಲ್ಲಿ ಕಲಿಂಗವೂ ಒಂದು. ಅದು ಸ್ವತಂತ್ರವಾದ ಬಗೆಯಾಗಲಿ ಅನಂತರದ ಅದರ ಗತಿಯ ಬಗೆಗಾಗಲೀ ನಮಗೇನೂ ತಿಳಿಯದು. ಆದರೆ ಭುವನೇಶ್ವರದ ಸಮೀಪ ಉದಯಗಿರಿ ಬೆಟ್ಟಗಳಲ್ಲಿಯ ಮಂಚಪುರಿ (ಹಾಥಿಗುಂಫಾ) ಎಂಬ ಗುಹೆಯಲ್ಲಿ ಕಾಣಿಸಿಕೊಂಡ ಕ್ರಿ. ಪೂ. 1ನೆಯ ಶತಮಾನಕ್ಕೆ ಸೇರಿದುದೆನ್ನಬಹುದಾದ ಶಾಸನದಿಂದ ಕಲಿಂಗದ ಬಗ್ಗೆ ಸ್ವಲ್ಪ ವಿಷಯಗಳು ತಿಳಿದು ಬಂದಿವೆ. ಈ ಶಾಸನ ಚೇದಿ ಕುಲಕ್ಕೆ ಸೇರಿದ ಮಹಾರಾಜ ಮಹಾಮೇಘವಾಹನನ ಸಂತತಿಯವನಾದ ಖಾರವೇಲನೆಂಬ ಅರಸ ಉದಯಗಿರಿ ಬೆಟ್ಟದ ಗುಹೆಯಲ್ಲಿ ಜೈನ ಋಷಿಗಳ ವಾಸಕ್ಕಾಗಿ ವೈಭವೋಪೇತವಾದ ಒಂದು ಮಂದಿರ ಕಟ್ಟಿಸಿದ ಸಂಗತಿಯನ್ನು ನಿರೂಪಿಸಲು ಹುಟ್ಟಿದ ರಾಜಶಾಸನ. ಇದರಲ್ಲಿ ಪ್ರಾಸಂಗಿಕವಾಗಿ ಆ ಅರಸನ ಜೀವನಕ್ಕೆ ಸಂಬಂಧಿಸಿದ ಅನೇಕ ವಿವರಗಳಿವೆ.
- ಚೇದಿಗಳು ಭಾರತದ ಪ್ರಾಚೀನ ಬುಡಕಟ್ಟೊಂದಕ್ಕೆ ಸೇರಿದವರು. ಇವರು ಕ್ರಿ. ಪೂ. 6ನೆಯ ಶತಮಾನದಲ್ಲಿ ಯಮುನಾ ನದಿಯ ಸಮೀಪದಲ್ಲಿ ಕುರು ಮತ್ತು ವತ್ಸಭೂಮಿಗಳ ನಡುವಣ ದೇಶದಲ್ಲಿ ನೆಲಸಿದ್ದರು. ಬಹಳ ಕಾಲದ ಬಳಿಕ ಇವರಲ್ಲಿಯ ಒಂದು ಗುಂಪು ಕಲಿಂಗ ದೇಶಕ್ಕೆ ವಲಸೆ ಹೋಗಿ ಅಲ್ಲಿ ರಾಜ್ಯವಾಳ ತೊಡಗಿದಂತೆ ಕಾಣುತ್ತದೆ. ಮಹಾಮೇಘವಾಹನ ಅಲ್ಲಿಯ ಅರಸರ ಮೂಲ ಪುರುಷ. ಈ ರಾಜವಂಶದ ಮೂರನೆಯ ಅರಸ ಖಾರವೇಲ. ಈತ ಜೀವನದ ಮೊದಲ ಹದಿನೈದು ವರ್ಷಗಳಲ್ಲಿ ರಾಜಕುಮಾರರಿಗೆ ಉಚಿತವಾದ ರೀತಿಯಲ್ಲಿ ಸುಖವೈಭವಗಳಿಂದ ಆಟಪಾಠಗಳಲ್ಲಿ ಕಳೆದ. ಅರ್ಥಶಾಸ್ತ್ರದಲ್ಲೂ ಲೌಕಿಕ ಧರ್ಮಗಳಿಗೆ ಸಂಬಂಧಿಸಿದಂತೆ ನ್ಯಾಯಶಾಸ್ತ್ರದಲ್ಲೂ ಪರಿಣಿತನಾಗಿ ಹದಿನಾರನೆಯ ವರ್ಷದಲ್ಲಿ ಯುವರಾಜ ಪದವಿ ಪಡೆದ. ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಾಭಿಷಿಕ್ತನಾಗಿ ಕಲಿಂಗದೇಶದ ಮಹಾರಾಜನಾದ. ಲಲಾಕ ವಂಶದ ಹಸ್ತಿಸಿಂಹನ ಮರಿಮಗನ ಮಗಳು ಇವನ ಪಟ್ಟದರಸಿ.
- ದಿಗ್ವಿಜಯ ಯಾತ್ರೆಗೆ ಮುನ್ನ ಚಂಡಮಾರುತದ ಹೊಡೆತದಿಂದ ಭಿನ್ನವಾಗಿದ್ದ ರಾಜಧಾನಿ ಕಲಿಂಗನಗರದ ಕೋಟೆಯ ಮಹಾದ್ವಾರಗಳನ್ನೂ ಆಳುವೇರಿಗಳನ್ನೂ ಭದ್ರಪಡಿಸಿದ. ಎರಡನೆಯ ವರ್ಷದಲ್ಲಿ, ತನ್ನ ರಾಜ್ಯದ ಪಶ್ಚಿಮದಲ್ಲಿ ಆಳುತ್ತಿದ್ದ ಸಾತಕರ್ಣಿಯನ್ನು ಲೆಕ್ಕಿಸದೆ, ಕೃಷ್ಣಾನದಿಯ ತೀರದಲ್ಲಿಯ ರಿಷಿಕ (ಅಥವಾ ಮೂಷಿಕ) ನಗರವನ್ನು ಮುತ್ತಿ ಸೂರೆಮಾಡಿದ. ನಾಲ್ಕನೆಯ ವರ್ಷದಲ್ಲಿ, ಅಹಮದ್‍ನಗರ ಮತ್ತು ಪೂರ್ವ ಖಾನ್‍ದೇಶಗಳಲ್ಲಿ ಆಳುತ್ತಿದ್ದ ರಾಷ್ಟ್ರಿಕ ಮತ್ತು ಭೋಜಕರನ್ನು ಸೋಲಿಸಿದ. ಐದನೆಯ ವರ್ಷದಲ್ಲಿ, ಮೂರುನೂರು ವರ್ಷಗಳಿಗೂ ಹಿಂದೆ ನಂದರಾಜ ತೋಡಿಸಿದ್ದ ಕಾಲುವೆಯನ್ನು ತನಸುಲಿಯಾದಿಂದ ರಾಜಧಾನಿಯವರೆಗೂ ಮುಂದುವರಿಸಿ ಅಲ್ಲಿ ನೀರಿಗೆ ಕೊರತೆ ಬಾರದಂತೆ ಮಾಡಿದ. ಪ್ರಜೆಗಳ ಹಿತಕ್ಕಾಗಿ ತೆರಿಗೆಯ ಭಾರ ಕಡಿಮೆ ಮಾಡಿದ.
- ತನ್ನ ಆಳ್ವಿಕೆಯ ಎಂಟು, ಹತ್ತು ಮತ್ತು ಹನ್ನೆರಡನೆಯ ವರ್ಷಗಳಲ್ಲಿ ಉತ್ತರ ದೇಶಕ್ಕೆ ದಂಡೆತ್ತಿ ಗಂಗಾನದಿಯ ಬಯಲಲ್ಲಿದ್ದ ಅರಸರನ್ನು ಸೋಲಿಸಿದ. ಮಗಧ ರಾಜ್ಯದಲ್ಲಿ ಆಳುತ್ತಿದ್ದ ಅರಸ ಇವನಿಗೆ ಶರಣಾದ. ಅಂಗ ಮತ್ತು ಮಗಧ ರಾಜ್ಯಗಳಲ್ಲಿಯ ಅಪಾರ ಸಂಪತ್ತನ್ನು ಸೂರೆಮಾಡಿದ. ಪೂರ್ವತೀರದಲ್ಲಿ ಮಚಲೀಪಟ್ಟಣದ ಬಳಿ ಆಳುತ್ತಿದ್ದ ಅರಸನನ್ನೂ ದಕ್ಷಿಣದಲ್ಲಿ ಪಾಂಡ್ಯವಂಶದ ಅರಸನನ್ನೂ ಸೋಲಿಸಿ ಅವರಿಂದ ಕಪ್ಪ ಪಡೆದ. ಈ ಅರಸರು ಯಾರು ಎಂಬುದು ನಮಗೆ ಖಚಿತವಾಗಿ ತಿಳಿದು ಬಂದಿಲ್ಲ. ಖಾರವೇಲನ ಬಗೆಗೆ ನಮಗೆ ಗೊತ್ತಿರುವ ವಿವರಗಳಿವು: ಜೈನ ಧರ್ಮವನ್ನವಲಂಬಿಸಿದ್ದ ಈತ ಜಿನಮುನಿಗಳ ವಸತಿಗಾಗಿ ಉದಯಗಿರಿ ಬೆಟ್ಟಗಳಲ್ಲಿ ಭವ್ಯ ಮಂದಿರ ಕಟ್ಟಿಸಿದನೆಂದು ಹೇಳುವುದು ಈ ಶಾಸನದ ಉದ್ದೇಶ. ಶಾಸನದಲ್ಲಿ ಖಾರವೇಲನ ಹಿರಿಮೆ ಕುರಿತು ಮೇಲಿನ ಹೇಳಿಕೆಗಳಲ್ಲಿ ಸ್ವಲ್ಪಮಟ್ಟಿಗೆ ಉತ್ಪ್ರೇಕ್ಷೆ ಇರಬಹುದಾದರೂ ಮೌರ್ಯಕಾಲದ ಅನಂತರ ದೇಶದ ಈ ಭಾಗದ ಇತಿಹಾಸದ ಬಗೆಗೆ ಏನೂ ತಿಳಿಯದ ಸಂದರ್ಭದಲ್ಲಿ ಈ ಶಾಸನ ಅಂದಿನ ಕಾಲದಲ್ಲಿ ಆಳಿದ ಈ ಅರಸನನ್ನು ಬೆಳಕಿಗೆ ತಂದಿದೆ. ಶಾಸನದ ಕಾಲದ ಬಗ್ಗೆ ವಿವಾದಗಳಿವೆ. ಆದರೂ ಇದು ಕ್ರಿ. ಪೂ. 1ನೆಯ ಶತಮಾನದಲ್ಲಿ ಹುಟ್ಟಿರಬಹುದೆಂದೂ ಖಾರವೇಲ ಆಗ ಆಳುತ್ತಿದ್ದನೆಂದೂ ಸಾಮಾನ್ಯವಾಗಿ ಒಪ್ಪಲಾಗಿದೆ. ಅಂದಿನ ರಾಜಕೀಯ ಪರಿಸ್ಥಿತಿಯ ಬಗೆಗೂ ಈ ಶಾಸನ ಮಾಹಿತಿ ನೀಡುವುದು. ಪ್ರಜೆಗಳ ಸೌಖ್ಯಕ್ಕಾಗಿ ದುಡಿದ ಅರಸ ಪ್ರಜಾನುರಾಗಿಯಾಗಿದ್ದನೆಂಬುದೂ ಅಂದು ಭಾರತದಲ್ಲಿ ಅನೈಕ್ಯ ಇದ್ದು ಸಣ್ಣಪುಟ್ಟ ರಾಜ್ಯಗಳಿದ್ದುವೆಂದೂ ಯವನರು ಆಕ್ರಮಣಕಾರರಾಗಿ ದೇಶಕ್ಕೆ ಬಂದಿದ್ದರೆಂದೂ ಈ ಶಾಸನದಿಂದ ತಿಳಿದುಬರುತ್ತದೆ. ಭಾರತದ ಆ ಕಾಲದ ಇತಿಹಾಸದಲ್ಲಿ ಉಲ್ಕೆಯಂತೆ ಕಾಣಿಸಿಕೊಂಡ ಖಾರವೇಲನ ಅನಂತರ ಗತಿಯಾಗಲೀ ಕಲಿಂಗ ದೇಶದ ಇತಿಹಾಸವಾಗಲೀ ಗೊತ್ತಿಲ್ಲ.
- ಯವನರು : ಸೆಲ್ಯೂಕಸ್‍ನ ಅಧೀನಕ್ಕೆ ಬಂದ ಬ್ಯಾಕ್ಟ್ರಿಯ ಮತ್ತು ಪಾರ್ಥಿಯಗಳಲ್ಲಿ ಬಹಳ ಹಿಂದಿನಿಂದಲೂ ಗ್ರೀಕರು ವಲಸೆಬಂದು ವಾಸಿಸುತ್ತಿದ್ದರು. ಖುರಾಸಾನ್ ಮತ್ತು ಕ್ಯಾಸ್ಪಿಯನ್ ಸಮುದ್ರದ ಆಗ್ನೇಯ ಭಾಗಗಳನ್ನೊಳಗೊಂಡ ಪ್ರದೇಶ ಪಾರ್ಥಿಯ ಸೆಲ್ಯುಸಿಡ್ ಸಾಮ್ರಾಜ್ಯಕ್ಕೆ ಹೊಂದಿದಂತಿತ್ತು. ಇದಕ್ಕೆ ಪೂರ್ವದಲ್ಲಿ ಹಿಂದೂಕುಷ್ ಪರ್ವತದ ಹೊರಗೆ, ಉತ್ತರ ಆಫ್‍ಘಾನಿಸ್ತಾನದಲ್ಲಿಯ ಬಾಲ್ಕ್ ಸುತ್ತಲಿನ ಪ್ರದೇಶ ಬ್ಯಾಕ್ಟ್ರಿಯ. ಸೆಲ್ಯೂಕಸ್‍ನ ಅನಂತರ ಆಳಿದ ಮೊದಲನೆಯ ಅಂತಿಯೋಕನ ಕಾಲದಲ್ಲಿಯೇ ಈ ಎರಡು ಪ್ರಾಂತ್ಯಗಳಲ್ಲಿ ಅಶಾಂತಿಯ ಚಿಹ್ನೆಗಳು ತೋರಿದುವು. ಎರಡನೆಯ ಅಂತಿಯೋಕ (ಕ್ರಿ. ಪೂ. 261-46) ರಾಜ್ಯವಾಳತೊಡಗಿದಾಗ ಕ್ರಿ. ಪೂ. ಸುಮಾರು 250ರಲ್ಲಿ ಈ ಎರಡೂ ಪ್ರಾಂತ್ಯಗಳು ದಂಗೆಯೆದ್ದು ಸ್ವಾತಂತ್ರ್ಯ ಘೋಷಣೆ ಮಾಡಿದುವು. ಸೆಲ್ಯೂಸಿಡ್‍ನ ಇತರ ಅರಸರು ಇವನ್ನು ಸದೆಬಡೆಯಲು ಮಾಡಿದ ಯಾವ ಪ್ರಯತ್ನಗಳೂ ಫಲಿಸಲಿಲ್ಲ.
- ಡಿಯೋಡೋಟಸ್ ಎಂಬಾತ ಬ್ಯಾಕ್ಟ್ರಿಯದ ಸ್ವಾತಂತ್ರ್ಯದ ಮೂಲಪುರುಷ. ಇವನ ಅನಂತರ ಬಂದ ಎರಡನೆಯ ಡಿಯೋಡೋಟಸ್ ನೆರೆಯ ರಾಜ್ಯವಾದ ಪಾರ್ಥಿಯದೊಡನೆ ಸ್ನೇಹದಿಂದಿದ್ದು ತನ್ಮೂಲಕ ಸೆಲ್ಯೂಸಿಡ್ ಅರಸನ ಬಲವನ್ನು ಹಿಮ್ಮೆಟ್ಟಿ ತನ್ನ ರಾಜ್ಯವನ್ನೂ ಬಲಪಡಿಸಿಕೊಂಡ. ಆದರೆ ಕ್ರಿ. ಪೂ. ಸುಮಾರು 230ರಲ್ಲಿ ಇವನ ಸಂಬಂಧಿಯಾದ ಯೂಧಿಡಿಮಸ್ ಇವನನ್ನು ಹೊರದೂಡಿ ತಾನೇ ಅರಸನಾದ. ಇವನ ಮಗ ದಿಮಿತ ಆಗ ದಂಡೆತ್ತಿ ಬಂದಿದ್ದ ಸೆಲ್ಯೂಸಿಡ್‍ನ ಅಂತಿಯೋಕವನ್ನು ನಯದಿಂದ ಹಿಂದೂಡಿದ. ತಮ್ಮ ರಾಜ್ಯದಲ್ಲಿ ಭದ್ರತೆಯುಂಟಾದ ಬಳಿಕ ಇವರು ಪೂರ್ವದೇಶವಾದ ಭಾರತದ ವಾಯವ್ಯ ಗಡಿಪ್ರದೇಶಗಳನ್ನು ಕ್ರಮವಾಗಿ ಆಕ್ರಮಿಸತೊಡಗಿದರು. ಮೌರ್ಯಸಾಮ್ರಾಜ್ಯದ ಪತನಾನಂತರ ಸಡಿಲಗೊಂಡಿದ್ದ ಭಾರತದ ರಾಜಕೀಯ ಪರಿಸ್ಥಿತಿಗಳೂ ಇದಕ್ಕೆ ಪೂರಕವಾಗಿದ್ದುವು. ಪುಷ್ಯಮಿತ್ರ ಯವನರನ್ನು ಹೊಡೆದೋಡಿಸಲು ಪ್ರಯತ್ನಿಸಿದನೆಂದು ಹೇಳಿದ್ದೇವೆ. ದಿಮಿತ ಭಾರತದ ವಾಯವ್ಯ ಭಾಗ ಮತ್ತು ಆಫ್‍ಘಾನಿಸ್ತಾನಗಳಲ್ಲಿ ಕಾರ್ಯಾಚರಣೆಯಲ್ಲಿದ್ದಾಗ ಬ್ಯಾಕ್ಟ್ರಿಯ ದೇಶವನ್ನು ಯೂಕ್ರಟೈಡಿಸ್ ಎಂಬಾತ ಆಕ್ರಮಿಸಿದ. ತನ್ನ ಮೂಲಪ್ರದೇಶವನ್ನು ಕಳೆದುಕೊಂಡು ದಿಮಿತ ಭಾರತದಲ್ಲಿ ತನ್ನ ಸ್ವಾಧೀನಕ್ಕೆ ಬಂದ ಪ್ರಾಂತ್ಯಗಳನ್ನೇ ಬಲಪಡಿಸಿ ಅಲ್ಲಿಯೇ ಇರಬೇಕಾಯಿತು. ಈ ವೇಳೆಗೆ ಪಾರ್ಥಿಯದಲ್ಲಿ ಆಳುತ್ತಿದ್ದ ಮಿತ್ರಡೇಟಸ್ (ಕ್ರಿ. ಪೂ. 171-136) ಬ್ಯಾಕ್ಟ್ರಿಯವನ್ನು ಮುತ್ತಿ ಅರಿಯ (ಹೆರಾಟ) ಮತ್ತು ಅರಕೋಸಿಯ (ಕಾಂದಹಾರ) ಪ್ರದೇಶಗಳನ್ನು ಆಕ್ರಮಿಸಿದ. ಅಲ್ಲಿಂದ ಬ್ಯಾಕ್ಟ್ರಿಯದ ಗ್ರೀಕರು ಪೂರ್ವಕ್ಕೆ ಸರಿದು ಭಾರತದ ಗಡಿ ಸೀಮೆಗಳಲ್ಲಿ ನೆಲಸಿ, ಕ್ರಮೇಣ ಭಾರತಕ್ಕೆ ಬಂದರು. ಭಾರತದಲ್ಲಿಯ ಅನಿಶ್ಚಿತ ರಾಜಕೀಯ ಪರಿಸ್ಥಿತಿ ಅವರು ಅಲ್ಲಿ ನೆಲಸಿ ರಾಜ್ಯವಾಳಲು ಸಹಾಯಕವಾಯಿತು. ಬ್ಯಾಕ್ಟ್ರಿಯದ ಯೂಕ್ರಟೈಡಸ್ ಮತ್ತು ದಿಮಿತನ ವಂಶಜರಾದ 30 ಅರಸರು ಭಾರತದ ವಾಯವ್ಯದಲ್ಲಿ ಮತ್ತು ಆಫ್‍ಘಾನಿಸ್ತಾನದಲ್ಲಿ ಸುಮಾರು ಎರಡು ಶತಮಾನಗಳ ತನಕ ಆಳಿದರು. ಇವರ ಬಗೆಗೆ ನಮಗೆ ತಿಳಿದಿರುವುದೆಲ್ಲ ಇವರು ಅಚ್ಚುಹಾಕಿಸಿದ ನಾಣ್ಯಗಳಿಂದ ಮಾತ್ರ. ಈ ಗೊಂದಲಮಯ ಪರಿಸ್ಥಿತಿಯನ್ನು ಕುರಿತು ಪುರಾಣಗಳೂ ಪ್ರಸ್ತಾಪಿಸಿವೆ. ಹೆಂಗಸರನ್ನೂ ಮಕ್ಕಳನ್ನೂ ಕೊಲ್ಲುವುದು, ಪರಸ್ಪರ ಜಗಳಗಳಲ್ಲಿ ತೊಡಗುವುದು ಮುಂತಾದ ಹೇಯಕೃತ್ಯಗಳಲ್ಲಿ ಆಸಕ್ತರಾದ ಯುವನರು ಆ ಕಾಲದಲ್ಲಿದ್ದವರೆಂದು ಪುರಾಣಗಳಲ್ಲಿ ಹೇಳಿದೆ. ಗ್ರೀಕ್ ಅರಸರಲ್ಲಿ ಪ್ರಮುಖನಾದವಗಳಿಂದ (ಮಿನಾಂಡರ್). ಈತ ಕುತೂಹಲದಿಂದ ಕೇಳಿದ ಎಲ್ಲ ಸಂಶಯಗಳಿಗೂ ಬೌದ್ಧಸಂನ್ಯಾಸಿ ನಾಗಸೇನ ಉತ್ತರನೀಡಿ ಕೊನೆಗೆ ಇವನನ್ನು ಬೌದ್ಧಮತಕ್ಕೆ ಸೇರಿಸಿದನೆಂದು ಮಿಳಿಂದಪನ್ ಎಂಬ ಗ್ರಂಥದಿಂದ ತಿಳಿದಿದೆ. ಈ ಅರಸ ಕೊನೆಗೆ ರಾಜ್ಯ ತ್ಯಜಿಸಿ ಸಂನ್ಯಾಸಿಯಾದನಂತೆ. ಇವನ ಕಾಲದ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಬುದ್ಧನ ಪರಿನಿರ್ವಾಣದ 500ವರ್ಷಗಳ ಅನಂತರದ ಕಾಲದಲ್ಲಿ ಇವನು ಇದ್ದನೆಂದು ಮಿಳಿಂದಪನೊಹದಲ್ಲಿ ಹೇಳಿದೆ. ಬಹುಶಃ ಈತ ಕ್ರಿ. ಪೂ. 115ರಿಂದ 90ರ ತನಕ ಆಳಿರಬೇಕು. ಕಾಠೇವಾಡ, ರಾಜಪೂತಾನ, ಸಿಂಧ್, ಪಂಜಾಬ್, ವಾಯವ್ಯ ಗಡಿ ಪ್ರಾಂತ್ಯಗಳು ಮತ್ತು ಆಫ್‍ಘಾನಿಸ್ತಾನ ಹಾಗೂ ಉತ್ತರಪ್ರದೇಶದ ಕೆಲವು ಭಾಗಗಳನ್ನೊಳಗೊಂಡ ವಿಸ್ತಾರ ಪ್ರದೇಶ ಇವನ ಆಳ್ವಿಕೆಗೆ ಒಳಪಟ್ಟಿತ್ತು. ಇವನಂತೆ ಭಾರತದ ಗ್ರೀಕರಲ್ಲಿ ಅಮರನಾಗಿ ಉಳಿದಿರುವ ಇನ್ನೊಬ್ಬ ಅರಸ ಮಹಾರಾಜ ಅಂತಿಲಿಕಿತ.
- ಕ್ರಿ.ಪೂ. ಒಂದನೆಯ ಶತಮಾನದ ಅಂತ್ಯದಲ್ಲಿ ಗ್ರೀಕರು ಗಾಂಧಾರ, ಆಫ್‍ಘಾನಿಸ್ತಾನ ಮುಂತಾದ ಪ್ರದೇಶಗಳನ್ನು ಕಳೆದುಕೊಂಡು ಕೊನೆಗೆ ಕಾಠೇವಾಡ ಮತ್ತು ಮೇವಾಡ ಪ್ರದೇಶಗಲ್ಲಿ ಸಣ್ಣಪುಟ್ಟ ಮಾಂಡಲಿಕರಾಗಿ ಅಧಿಕಾರ ಚಲಾಯಿಸುತ್ತಿದ್ದರು. ಇವರ ಆಳ್ವಿಕೆಯ ಪ್ರದೇಶಗಳನ್ನು ಮೊದಲು ಪಾರ್ಥಿಯನ್ನರೂ ಅನಂತರ ಶಕರೂ ಆಕ್ರಮಿಸಿಕೊಂಡರು.
- ಶಕರು : ಇವರು ಕ್ರಿ. ಪೂ. 2ನೆಯ ಶತಮಾನದಲ್ಲಿ ಪರ್ಷಿಯ ದೇಶಕ್ಕೆ ಸೇರಿದ ಡ್ರಾಂಗಿಯಾನದಲ್ಲಿ ವಾಸಿಸುತ್ತಿದ್ದರು. ಇದನ್ನು ಶಕಸ್ತಾನ ಅಥವಾ ಈಗಿನ ಸೈಸ್ತಾನ ಎಂದು ಕರೆಯಲಾಗಿತ್ತು. ಕ್ರಮೇಣ ಪೂರ್ವದಲ್ಲಿದ್ದ ಜನಾಂಗದವರ ಒತ್ತರಿಕೆಯ ಪರಿಣಾಮವಾಗಿ ಇವರು ಹಿಂದೂಕುಷ್ ಪರ್ವತದ ದಕ್ಷಿಣಕ್ಕೆ ಸರಿದು ಬ್ಯಾಕ್ಟ್ರಿಯವನ್ನು ಸುಲಭವಾಗಿ ಆಕ್ರಮಿಸಿಕೊಂಡರು. ಆದರೆ ಪೂರ್ವ ಇರಾಣದಲ್ಲಿದ್ದ ಪಾರ್ಥಿಯನ್ನರಿಗೂ ಇವರಿಗೂ ಉಂಟಾದ ಕದನಗಳು ಇವರ ಮುನ್ನಡೆಗೆ ಅಡ್ಡಿ ಒಡ್ಡಿದುವು. ಕ್ರಮೇಣ ಇವರು ಪಾರ್ಥಿಯನರೊಡನೆ ರಕ್ತಸಂಬಂಧ ಬೆಳೆಸಿದರು. ಅನಂತರ ಇವರ ಒಂದುಗುಂಪು ಭಾರತಕ್ಕೆ ಬಂದು ಕಿಪಿನ ಅಥವಾ ಕಪಿಶವನ್ನು ಆಕ್ರಮಿಸಿತು. ಟಾಲೆಮಿಯ ಭೂಗೋಳ ಮತ್ತು ಅದಕ್ಕೂ ಹಿಂದಿನ ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ ಎಂಬ ಗ್ರಂಥಗಳ ಮೂಲಕ ಇವರು ಮೊದಲು ಸಿಂಧೂ ನದಿಯ ಬಯಲಿನಲ್ಲೂ ಅನಂತರ ಅಭೀರ ಹಾಗೂ ಸೌರಾಷ್ಟ್ರಗಳಲ್ಲಿಯೂ ನೆಲಸಿದ್ದರೆಂದು ಊಹಿಸಬಹುದು. ಇವರಲ್ಲಿ ಮುಖ್ಯನಾದವ ವನಾನ, ಇವನೂ ಇವನ ಅನಂತರದ ಅರಸರೂ ಕ್ರಿ. ಪೂ. 1ನೆಯ ಶತಮಾನದಲ್ಲಿ ಆಳಿದರು. ಆ ಶತಮಾನದ ಅಂತ್ಯಭಾಗದಲ್ಲಿ ಭಾರತದ ಆಗ್ನೇಯ ಭಾಗದಲ್ಲಿ ಮೊಲುಸ್ ಎಂಬ ಇನ್ನೊಬ್ಬ ಅರಸ ಆಳುತ್ತಿದ್ದಂತೆ ತಿಳಿದಿದೆ. ಶಕರನ್ನು ಅಧಿಕಾರದಿಂದ ಹೊರದೂಡಿದರ ಪಾರ್ಥಿಯನರ ಗುಡುವ್ಹರ ಅಥವಾ ಗೊಂಡೊಡಫೆರ್ನೆಸ. ಈತ ವನಾನದ ವಂಶಸ್ಥ ಇಮ್ಮಡಿ ಆಯನನ್ನು ಸೋಲಿಸಿದ. ಆತನ ಅಧೀನದಲ್ಲಿದ್ದ ಪ್ರಾಂತ್ಯಾಧಿಕಾರಿಗಳು ಅವನ ಸಾರ್ವಭೌಮತ್ವ ನಿರಾಕರಿಸಿ ಸ್ವತಂತ್ರರಾಗಿ ಆಳಲು ಇದು ಸಹಾಯಕವಾಯಿತು. ಆಫ್‍ಘಾನಿಸ್ತಾನದಲ್ಲಿ ಈ ವೇಳೆಗೆ ನೆಲಸಿದ್ದ ಕುಷಾಣರು ಗಾಂಧಾರದಿಂದ ಪಾರ್ಥಿಯನರನ್ನು ಹೊರಗಟ್ಟಿದರೆಂದು ಹೇಳಲಾಗಿದೆ. ಆದರೂ ಶಕರು ಭಾರತ ಬಿಟ್ಟು ಹೋಗಲಿಲ್ಲ. ಕುಷಾಣರಿಂದ ರಾಜ್ಯ ಕಳೆದುಕೊಂಡ ಇವರು ಅಲ್ಲಲ್ಲಿಯೇ ಮಾಂಡಲೀಕರಾಗಿ ಸಣ್ಣಸಣ್ಣ ಅಧಿಕಾರದಲ್ಲಿದ್ದು ಕ್ರಿ. ಶ. 4ನೆಯ ಶತಮಾನದಲ್ಲಿ ಗುಪ್ತವಂಶದ ಇಮ್ಮಡಿ ಚಂದ್ರಗುಪ್ತನ ಕಾಲದಲ್ಲಿ ತಮ್ಮ ಹಿಂದಿನ ಅಧಿಕಾರಗಳನ್ನು ಕಳೆದುಕೊಂಡು ಓಡಿಹೋಗಬೇಕಾಯಿತು.
- ಕುಷಾಣರು : ಯೂ ಚಿ ಜನಾಂಗದವರು ಹಿಯಾಂಗ ನು ಜನರಿಂದ ಸೋಲಿಸಲ್ಪಟ್ಟು ಶಕರು ವಾಸಿಸುತ್ತಿದ್ದ ಡ್ರಾಂಗಿಯಾನ ಅಥವಾ ಶಕಸ್ತಾನಕ್ಕೆ ಬಂದರು. ಈ ಜನಾಂಗದ ಒಂದು ಸಣ್ಣ ಗುಂಪು ಟಿಬೆಟ್ ಕಡೆಗೆ ಸರಿಯಿತು. ಹಿಂದೂಕುಶ್ ಪರ್ವತದ ದಕ್ಷಿಣಕ್ಕೆ ಸೇರಿದ ಇನ್ನೊಂದು ದೊಡ್ಡ ಗುಂಪಿಗೆ ಸೇರಿದವರು ಕುಷಾಣರು ಕ್ರಮೇಣ ಇವರು ಶಕರನ್ನು ಬ್ಯಾಕ್ಟ್ರಿಯದಿಂದ ಓಡಿಸಿ ಅಲ್ಲಿ ನೆಲಸಿದರು. ಹೀಗೆ ನೆಲಸಿದ ಜನಾಂಗ ಅಲ್ಲಿ ಐದು ಪಂಗಡಗಳಾಗಿ ಒಡೆಯಿತು. ಅವುಗಳಲ್ಲಿ ಒಂದನ್ನು ಕುಷಾಣ ಎಂದು ಕರೆಯಲಾಗಿದೆ. ಕ್ರಿ. ಶ. 65ನೆಯ ವರ್ಷದ ವೇಳೆಗಾಗಲೇ ಇವರು ಗಾಂಧಾರದಲ್ಲಿದ್ದ ಪಾರ್ಥಿಯನರನ್ನು ಸೋಲಿಸಿದರು. ಇಮ್ಮಡಿ ಅಯನ ಪರವಾಗಿ ಇವರು ಗಾಂಧಾರವನ್ನೂ ಗುಡುವ್ಹರನ ವಂಶಸ್ಥರಿಂದ ಕಿತ್ತುಕೊಂಡರು. ಆದರೆ ಕೆಲಕಾಲಾನಂತರ ತಾವೇ ಅದರ ಅಧಿಪತಿಗಳೆಂದು ಘೋಷಿಸಿಕೊಂಡರು. ಹೀಗೆ ಅಧಿಕಾರಕ್ಕೆ ಬಂದ ಕುಜುಲ ಕಢವ್ಹೀಸ್ ಕ್ರಿ. ಶ. 15ರಿಂದ 65ರ ತನಕ ಕಾಬೂಲೆ, ಕಾಂದಹಾರ್, ಕಾಫಿರಿಸ್ತಾನ್ ಮತ್ತು ಇತರ ದೇಶಗಳನ್ನು ಆಳಿದ. ಈತ ಬೌದ್ಧಮತದ ಅನುಯಾಯಿ. ತಕ್ಷಶಿಲೆಯ ಶಾಸನ ಇವನನ್ನು ಮಹಾರಾಜ ರಾಜಾಧಿರಾಜ ದೇವಪುತ್ರ ಎಂದು ವರ್ಣಿಸಿದೆ. ಇವನ ಮಗ ವೀಮ ಕಢವ್ಹೀಸ 65ರಿಂದ 75ರ ತನಕ ಆಳಿದ. ಈತನ ಆಳ್ವಿಕೆ ಕ್ರಮೇಣ ಭಾರತದ ಪಂಜಾಬ ಪ್ರಾಂತ್ಯಕ್ಕೂ ಹರಡಿತು. ತಾಮ್ರ ಮತ್ತು ಕಂಚಿನ ನಾಣ್ಯಗಳಲ್ಲದೆ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನೂ ಈತ ಅಚ್ಚುಹಾಕಿಸಿದ. ಶಿವನ ಚಿತ್ರವಿರುವ ನಾಣ್ಯಗಳಲ್ಲಿ ರಾಜಾಧಿರಾಜನೆಂದೂ ಸರ್ವಲೋಕ ಈಶ್ವರ ಮಹೇಶ್ವರನೆಂದೂ ವರ್ಣಿಸಲಾಗಿದೆ. ಕ್ರಿ. ಶ. 78ರಿಂದ ಆರಂಭವಾಗುವ ಶಕಸಂವತ್ಸರವನ್ನು ಸ್ಥಾಪಿಸಿದವನಿವನೆಂಬುದು ಹಲವರ ಊಹೆ. ಕುಜಲಕರ ಕಢವ್ಹೀಸನೆಂಬವನ ನಾಣ್ಯಗಳು ದೊರೆತಿವೆ. ಈತ ವೀಮಕಢವ್ಹೀಸನ ಉತ್ತರಾಧಿಕಾರಿಯೆಂದು ಹಲವರು ಊಹಿಸಿದ್ದಾರೆ.
- ಕುಷಾಣವಂಶದ ಅರಸರಲ್ಲಿ ಅತಿ ಪ್ರಖ್ಯಾತನಾದ ಕನಿಷ್ಕನಿಗೂ ಇವರಿಗೂ ಸಂಬಂಧವಿದ್ದಂತೆ ತೋರುವುದಿಲ್ಲ. ಆತ ಆ ವಂಶದ ಮತ್ತೊಂದು ಶಾಖೆಗೆ ಸೇರಿದವ. ಮೌರ್ಯರ ಅನಂತರ ಛಿದ್ರಗೊಂಡ ಉತ್ತರ ಭಾರತದ ಹೆಚ್ಚಿನ ಭಾಗಗಳನ್ನು ಮತ್ತೊಮ್ಮೆ ಒಟ್ಟುಗೂಡಿಸಿದ ಕೀರ್ತಿ ಕನಿಷ್ಕನದು. ಇವನ ಶಾಸನಗಳು ಉತ್ತರ ಭಾರತದ ಅಲಹಾಬಾದ್ ಬಳಿಯ ಕೋಸವಿನ್ ಎಂಬಲ್ಲೂ ಸಾರನಾಥ, ಮಧುರಾ ಮತ್ತು ಸಿಂಧ್ ಪ್ರಾಂತ್ಯದಲ್ಲೂ ಬಹಾವಲಪುರದ ಸಮೀಪದಲ್ಲಿರುವ ಸುಇ ವಿಹಾರದಲ್ಲೂ ದೊರೆತಿವೆ. ರಾವಲ್ಪಿಂಡಿಯ ಸಮೀಪದಲ್ಲಿ ಮಾಣಿಕಿಯಾಲ ಮತ್ತು ಉಂಡೆನಜೇಡ ಎಂಬಲ್ಲೂ ಇವೆ. ಪೂರ್ವದಲ್ಲಿ ಬಿಹಾರದಿಂದ ಆರಂಭಿಸಿ ಉತ್ತರಾಪಥ-ಮಧ್ಯದೇಶ ಅಪರಾಂತವನ್ನೊಳಗೊಂಡು ಪಶ್ಚಿಮದ ಖೋತಾನ್ ವರೆಗಿನ ಪ್ರದೇಶ ಮತ್ತು ದಕ್ಷಿಣದಲ್ಲಿ ಕೊಂಕಣದ ಭಾಗಗಳೂ ಇವನ ಆಳ್ವಿಕೆಗೆ ಒಳಪಟ್ಟಿದ್ದುವು. ಹಲವಾರು ವರ್ಷಗಳ ವಿಜಯಯಾತ್ರೆಯ ಫಲವಾಗಿ ಅವು ಈ ಭಾಗಗಳನ್ನು ಗೆದ್ದುಕೊಂಡ. ಈತ ಒಮ್ಮೆ ಮಾತ್ರ ಚೀನದ ದಂಡನಾಯಕ ಪಾರ್ನ ಚೊನ ವಿರುದ್ಧ ಸೋತು ಆ ದೇಶದ ಚಕ್ರವರ್ತಿ ಹೊಟಿಗೆ ಕಪ್ಪ ಸಲ್ಲಿಸಬೇಕಾಯಿತು ಶಕವರ್ಷ ಆರಂಭವಾದುದು ಕನಿಷ್ಕನ ಕಾಲದಲ್ಲಿಯೇ ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. ಇವನು ಆರಂಭಿಸಿದ ಈ ಕಾಲಗಣನೆಯನ್ನು ಅನಂತರ ಆಳಿದ ಅರಸರು ಮುಂದುವರಿಸಿಕೊಂಡು ಹೋದರು. ಈತ ತನ್ನ ರಾಜ್ಯದಲ್ಲಿ ವಿದ್ವಾಂಸರಿಗೆ ಪಂಡಿತರಿಗೆ ಆಶ್ರಯಕೊಟ್ಟ. ಪಾಟಲೀಪುತ್ರದಿಂದ ಅಶ್ವಘೋಷನನ್ನು ಬಲಾತ್ಕಾರವಾಗಿ ಕರೆತಂದು ಗೌರವಿಸಿದ. ತತ್ತ್ವಶಾಸ್ತ್ರಜ್ಞ ಘನವಿದ್ವಾಂಸ ವಸುಮಿತ್ರನೂ ಈತನ ಆಸ್ಥಾನದಲ್ಲಿದ್ದ. ಇದಲ್ಲದೆ ಅವನ ಆಸ್ಥಾನದಲ್ಲಿ ಅಗೆಸಿಲ್ಲಾಸನೆಂಬ ಗ್ರೀಕ್ ಶಿಲ್ಪಿಯೂ ಇದ್ದ.
- ಬೌದ್ಧ ಮತಾನುಯಾಯಿಯಾಗಿದ್ದರೂ ಈತ ಪರಮತ ಸಹಿಷ್ಣು. ನಾಣ್ಯಗಳ ಮೇಲೆ ಶಾಕ್ಯಮುನಿ ಬುದ್ಧನದಲ್ಲದೆ ಇತರ ಮತಗಳಿಗೆ ಸಂಬಂಧಿಸಿದ ದೇವ ದೇವತೆಗಳ, ಶಿವ, ವಾಯು, ಅಗ್ನಿ, ಪರ್ಷಿಯದ ಮಿಹಿರ, ಸುಮೇರಿಯಾದ ಮಾತೃದೇವತೆ ನಾನಾ (ನಯನಾದೇವಿ), ಯುದ್ಧದೇವತೆ ಆರ್ಲಂಗ್ನೋ, ಗ್ರೀಕರ ಸೂರ್ಯದೇವತೆ ಹೆಲಿಯೋಸ್ ಮುಂತಾದವರ ಚಿತ್ರಗಳನ್ನು ಕಾಣಬಹುದು. ಈತ ಸುಮಾರು 78ರಿಂದ 102ರ ತನಕ ಆಳಿದ. ಇವನ ಅನಂತರ ಇವನ ಸಹೋದರನೋ ಮಗನೋ ಆಗಿದ್ದ ವಾಸಿಷ್ಕ ನಾಲ್ಕು ವರ್ಷ ಕಾಲ ಆಳಿದ. ವಾಸಿಷ್ಕ ಕನಿಷ್ಕನ ಜೊತೆಯಲ್ಲಿ ಕೆಲಕಾಲ ಆಳಿದನೆಂದೂ ಹೇಳಲಾಗಿದೆ. ಕನಿಷ್ಕನ ಮರಣಾನಂತರ ವಾಸಿಷ್ಕ ಹುವಿಷ್ಕನೊಡನೆಯೂ ಅನಂತರ ಹುವಿಷ್ಕ ವಾಸಿಷ್ಕನ ಮಗ ಕನಿಷ್ಕನೊಡನೆಯೂ ಕ್ರಮವಾಗಿ ಆಳಿದರು. ಹುವಿಷ್ಕ 106ರಿಂದ 138ರ ತನಕವೂ ಇಮ್ಮಡಿ ಕನಿಷ್ಕ 145ರ ತನಕವೂ ಆಳಿದರು. ಅನಂತರ ಪಟ್ಟಕ್ಕೆ ಬಂದವ ವಾಸುದೇವ. ಈತ 176ರ ತನಕವೂ ಆಳಿದಂತೆ ತೋರುತ್ತದೆ. ಈತನಾಗಲೀ ಈತನ ಅನಂತರ ಆಳಿದ ಇತರ ಅರಸರಾಗಲೀ ಮೊದಲನೆಯ ಕನಿಷ್ಕನಷ್ಟು ಸಮರ್ಥರಾಗಿರಲಿಲ್ಲ. ತತ್ಫಲವಾಗಿ ಭಾರತದಲ್ಲಿ ಕುಷಾಣರ ಆಳ್ವಿಕೆ ಕೊನೆಗೊಂಡಿತು. ಆದರೆ ಶಕರಂತೆಯೇ ಈ ವಂಶಕ್ಕೆ ಸೇರಿದವರೂ ಮುಂದೆ ಕ್ರಿ. ಶ. 4ನೆಯ ಶತಮಾನದ ತನಕ ಅಲ್ಲಲ್ಲಿ ಸಣ್ಣಪುಟ್ಟ ಅಧಿಕಾರಗಳಲ್ಲಿ ಮುಂದುವರಿಯುತ್ತಿದ್ದು ಮರೆಯಾದರು.
- ಕ್ಷತ್ರಪರು : ಕ್ರಿಸ್ತ ಶಕಾರಂಭದ ಪೂರ್ವದ ಮತ್ತು ಅನಂತರದ ಒಂದೆರಡು ಶತಮಾನಗಳಲ್ಲಿ ಭಾರತದಲ್ಲಿ ಅನೇಕ ಗಣರಾಜ್ಯಗಳೂ ಜನಪದಗಳೂ ಅರಸುಮನೆತನಗಳೂ ಹುಟ್ಟಿಕೊಂಡವು. ಕುಷಾಣರು ಭಾರತದ ಭಾಗಗಳನ್ನು ಆಕ್ರಮಿಸುವ ಮುನ್ನ ಅವರ ರಾಜ್ಯದ ಆ ಪ್ರದೇಶದಲ್ಲಿ ಅರ್ಜುನಾಯನ, ಮಾಳವ, ಯೌಧೇಯ ಮುಂತಾದ ಜನಪದಗಳಿದ್ದುವು. ಕನಿಷ್ಕನ ಅನಂತರ ಕುಷಾಣರ ಪ್ರಾಬಲ್ಯ ಕುಗ್ಗಿದಾಗ ಇವರೆಲ್ಲ ಮತ್ತೆ ತಲೆ ಎತ್ತಿದರು. ಜೊತೆಗೆ ಆಹಿಚ್ಛತ್ರ, ಅಯೋಧ್ಯ, ಕೌಶಾಂಬಿ, ಮಥುರಾ ಮುಂತಾದ ಕಡೆಗಳಲ್ಲೂ ಅರಸುಮನೆತನಗಳು ಹುಟ್ಟಿಕೊಂಡವು. 4ನೆಯ ಶತಮಾನದಲ್ಲಿ ಗುಪ್ತರು ಇವರ ಬಲವನ್ನು ನಾಶಮಾಡಿದರು.
- ಅರ್ಜುನಾಯನರು ರಾಜಸ್ಥಾನದ ಭರತಪುರ ಮತ್ತು ಆಳ್ವಾರ ಜಿಲ್ಲೆಗಳ ಸುತ್ತಲೂ ಇದ್ದರು. ಇವರ ನಾಣ್ಯಗಳ ಮೇಲೆ ಕ್ರಿ. ಪೂ. 1ನೆಯ ಶತಮಾನಕ್ಕೆ ಸೇರಿದ ಬ್ರಾಹ್ಮೀಲಿಪಿಯ ಆಲೇಖ್ಯಗಳಿವೆ. ಮಾಳವರು ಮೊದಲು ಕ್ರಿ. ಪೂ. 4ನೆಯ ಶತಮಾನದಲ್ಲಿ ಪಂಜಾಬದ ರಾವಿ ಮತ್ತು ಚೀನಾಬ್ ನದಿಗಳ ಸಂಗಮಸ್ಥಾನದಲ್ಲಿದ್ದರು. ಕ್ರಮೇಣ ಇವರು ರಾಜಸ್ಥಾನದ ಕಡೆಗೆ ವಲಸೆ ಬಂದರು. ಜಯಪುರದ ಬಳಿಯ ಈಗಿನ ನಗರ ಇವರ ಕೇಂದ್ರವಾಗಿತ್ತು. ಯೌಧೇಯರು ಹೆಸರೇ ಸೂಚಿಸುವಂತೆ ಯುದ್ಧಾಸಕ್ತರು. ಇವರು ಅರ್ಜುನಾಯನರ ನೆರೆಯಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಪ್ರಾಂತ್ಯಗಳ ಡೆಹರಾಡೂನ್, ಮುಲ್ತಾನ ರೋಹತಕ್ ಮುಂತಾದ ಭಾಗಗಳಲ್ಲಿದ್ದರು. ಆಹಿಚ್ಪಿತ್ರ ಉತ್ತರ ಪಾಂಚಾಲ ದೇಶದ ರಾಜಧಾನಿ. ಕ್ರಿ. ಪೂ. 1ನೆಯ ಶತಮಾನದ ಅನಂತರ ಇಲ್ಲಿ ಮಿತ್ರ ಎಂಬ ನಾಮಾಂಕಿತವಾದ ಅರಸರು ಆಳುತ್ತಿದ್ದುದು ಅವರ ನಾಣ್ಯಗಳಿಂದ ತಿಳಿದು ಬಂದಿದೆ. ಕೌಶಾಂಬಿ ಅಲಹಾಬಾದ್ ಬಳಿಯ ಕೋಸಲ. ಬ್ರಿಹತೆಸ್ವಾತಿಮಿತ್ರನೆಂಬ (ಬ್ರಹಸ್ಪತಿ-ಮಿತ್ರ) ಅರಸನ ನಾಣ್ಯಗಳಿಂದ ಅವನು ಕ್ರಿ. ಪೂ. 1ನೆಯ ಶತಮಾನದಲ್ಲಿ ಆ ಪ್ರದೇಶದಲ್ಲಿ ಆಳುತ್ತಿದ್ದನೆಂದು ಊಹಿಸಲಾಗಿದೆ. ಸರಯೂ ನದೀತೀರದಲ್ಲಿ ಕೋಸಲದ ರಾಜಧಾನಿ ಅಯೋಧ್ಯ (ಈಗಿನ ಔಧ್) ಇತ್ತು. ಈ ಎಲ್ಲ ಭಾಗಗಳು ಮೊದಲನೆಯ ಕನಿಷ್ಕನ ಅಧೀನದಲ್ಲಿದ್ದು ಅನಂತರ ಆಳಿದ ಅವನ ಸಂತತಿಯವರ ಕಾಲದಲ್ಲಿ ಪುನಃ ಸ್ವತಂತ್ರರಾಜ್ಯಗಳಾಗಿ ತಲೆ ಎತ್ತಿದುವು. ಕುಷಾಣರು ಭಾರತದಲ್ಲಿಯ ಶಕರ ರಾಜ್ಯ ಆಕ್ರಮಿಸಿದಾಗ ಅವರು ಮಾಂಡಲೀಕರಾಗಿ ಮುಂದುವರಿದರು. ಸಿಂಧ್, ಸೌರಾಷ್ಟ್ರ ಮತ್ತು ರಾಜಸ್ಥಾನದ ಭಾಗಗಲ್ಲಿ ಶಕರು ಸಣ್ಣ ಅಧಿಕಾರಗಳನ್ನು ಹೊಂದಿದ್ದರು. ಇವರಲ್ಲಿ ಮಂಬಾರಸ್ ಎಂಬವ ಕ್ರಿ. ಶ. ಮೊದಲನೆಯ ಶತಮಾನದಲ್ಲಿ ದ್ವಾರಕ, ಬ್ರೋಚ್, ಲಾಟ, ಆಭೀರ ಮತ್ತು ಸೌರಾಷ್ಟ್ರಗಳ ಮೇಲೆ ಕ್ರಮೇಣ ತನ್ನ ಒಡೆತನ ಸ್ಥಾಪಿಸಿದ. ಕನಿಷ್ಕ ರಾಜ್ಯ ವಿಸ್ತರಣೆಯಲ್ಲಿ ತೊಡಗಿದಾಗ ಮಂಬಾರಸನನ್ನು ಸೋಲಿಸಿ ಅಲ್ಲಿ ತನ್ನ ಅಧಿಕಾರಿಗಳನ್ನು ಕ್ಷತ್ರಪರನ್ನಾಗಿ ನೇಮಿಸಿದ. ಕ್ಷತ್ರಪ ಎಂದರೆ ಪ್ರಾಂತ್ಯಾಧಿಕಾರಿ ಎಂದು ಅರ್ಥ. ಪರ್ಷಿಯನ್ನರು ಸತ್ರಪರೆಂಬ ಅಧಿಕಾರಿಗಳನ್ನು ಪ್ರಾಂತ್ಯಗಳಲ್ಲಿ ನೇಮಿಸುತ್ತಿದ್ದರು. ಈ ಅಧಿಕಾರಿಗಳನ್ನು ಅನಂತರ ಯವನರು, ಪಾರ್ಥಿಯನರು, ತಾವು ಸ್ವಾಧೀನಪಡಿಸಿಕೊಂಡ ಭಾರತದ ಪ್ರಾಂತ್ಯಗಳಲ್ಲಿ ನೇಮಿಸಿದರು. ಹೀಗೆ ಅಸ್ತಿತ್ವಕ್ಕೆ ಬಂದ ಕ್ಷತ್ರಪರು ತಮ್ಮ ಪ್ರಾಂತ್ಯದ ಅಧಿಕಾರದಲ್ಲಿ ಸ್ವಾತಂತ್ರ್ಯ ಪಡೆದಿದ್ದರು. ಅರಸ ಬಲಹೀನನಾಗಿದ್ದಾಗ ತಾವು ಅಧಿಕಾರ ನಡೆಸುತ್ತಿದ್ದ ಪ್ರಾಂತ್ಯಗಳನ್ನು ಕ್ರಮೇಣ ತಮ್ಮದಾಗಿಯೇ ಮಾಡಿಕೊಂಡು ಅಲ್ಲಿ ಸ್ವತಂತ್ರವಾಗಿ ಆಳಲು ಈ ಪದ್ಧತಿ ಅನುಕೂಲವಾಯಿತು. ಹೀಗೆ ಮೊದಲನೆಯ ಕನಿಷ್ಕನ ಕಾಲದಲ್ಲಿ ಕ್ಷತ್ರಪರಾಗಿದ್ದ ಎರಡು ಮನೆತನಗಳವರು ಅವನ ಮರಣಾನಂತರ ಸ್ವತಂತ್ರರಾಗಿ ಪಶ್ಚಿಮ ಭಾರತದ ಭಾಗಗಳಲ್ಲಿ ಆಳತೊಡಗಿದರು. ಇವರೇ ಕ್ಷಹರಾತ ಮತ್ತು ಕಾರ್ದಮಕ ಕುಲಗಳಿಗೆ ಸೇರಿದ ಕ್ಷತ್ರಪವಂಶದವರು.
- ಕ್ಷಹರಾತ ಕುಲಕ್ಕೆ ಸೇರಿದವರಾದ ಭೂಮಕ ಮತ್ತು ನಹಪಾಣರೆಂಬ ಇಬ್ಬರನ್ನು ಕುರಿತು ನಮಗೆ ಕೆಲವು ವಿವರಗಳು ತಿಳಿದಿದೆ. ಭೂಮಕ ಕುಷಾಣರ ಅಧೀನದಲ್ಲಿದ್ದವ. ಇವನ ತಾಮ್ರದ ನಾಣ್ಯಗಳು ಗುಜರಾತ, ಕಾಠೇವಾಡ ಮತ್ತು ಮಾಳವಗಳಲ್ಲಿ ದೊರೆತಿವೆ. ಈತ ಈ ಭಾಗಗಳ ಅಧಿಕಾರಿಯಾಗಿದ್ದನೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇವನ ನಾಣ್ಯಗಳಲ್ಲಿ ಕ್ಷಹರಾತನ ಕ್ಷತ್ರಪ ಭೂಮಕ ಎಂಬ ಆಲೇಖ್ಯವಿದೆ. ಇವನ ಅನಂತರ ನಹಪಾಣ ಅಧಿಕಾರಕ್ಕೆ ಬಂದ. ಇವರಿಬ್ಬರ ನಡುವಣ ಸಂಬಂಧವೆಂಥದೆಂಬುದು ತಿಳಿಯದು. ನಹಪಾಣನ ಬೆಳ್ಳಿ, ತಾಮ್ರದ ನಾಣ್ಯಗಳಲ್ಲದೆ ನಾಸಿಕ್, ಕಾರ್ಲೆ, ಜುನ್ನಾರಗಳಲ್ಲಿ ದೊರೆತ ಇವನ ಹಲವಾರು ಶಿಲಾಶಾಸನಗಳಿಂದ ರಾಜಸ್ಥಾನದ ಅಜಮೀರದಿಂದ ಮಹಾರಾಷ್ಟ್ರದ ನಾಸಿಕದವರೆಗಿನ ಪ್ರದೇಶ ಇವನ ಅಧೀನದಲ್ಲಿತ್ತೆನ್ನಬಹುದು. ಇವನ ಶಾಸನಗಳಲ್ಲಿ ಸೂಚಿತವಾಗಿರುವ ವರ್ಷಗಳು ಶಕ ಕಾಲಗಣನೆಗೆ ಸೇರಿದವೆಂದು ಊಹಿಸಿದಲ್ಲಿ ಇವನು ಸುಮಾರು 119ರ ವೇಳೆಗೆ ಅಧಿಕಾರಕ್ಕೆ ಬಂದಿದ್ದನೆಂದೂ 125ರ ತನಕ ಆಳಿದನೆಂದೂ ಶಾಸನಗಳಿಂದ ಸ್ಪಷ್ಟವಾಗುತ್ತದೆ. ಈತನ ಅಳಿಯ ಋಷಭದತ್ತ ರಾಜ್ಯದ ದಕ್ಷಿಣಕ್ಕಿದ್ದ ಗೋವರ್ಧನ (ನಾಸಿಕ), ಮಾಮಾಳ, (ಪುಣೆ) ಪ್ರಾಂತ್ಯಗಳನ್ನಾಳುತ್ತಿದ್ದ. ನಹಪಾಣನನ್ನು ಸಾತವಾಹನ, ಗೌತಮೀಪುತ್ರ ಸಾತಕರ್ಣಿ ಸಂಪೂರ್ಣವಾಗಿ ಸೋಲಿಸಿದ. ಕದನದಲ್ಲಿ ನಹಪಾಣ ಮೃತ್ಯುವನ್ನಪ್ಪಿದ. ಅವನೊಂದಿಗೆ ಕ್ಷಹರಾತ ಕುಲ ನಾಶವಾಯಿತು.
- ಕ್ಷಹರಾತರ ಸ್ಥಾನಕ್ಕೆ ಕಾರ್ದಮಕ ವಂಶದವರು ಬಂದರು. ಬ್ಯಾಕ್ಟ್ರಿಯ ದೇಶದಲ್ಲಿಯ ಕರ್ದಮ ಎಂಬ ನದಿಯ ಹೆಸರಿನಿಂದ ಕಾರ್ದಮಕ ಎಂಬ ವಂಶದ ಹೆಸರು ಬಂದಿದೆ ಎಂದು ಹಲವಾರು ವಿದ್ವಾಂಸರ ಊಹೆ. ಇವರಲ್ಲಿ ಮೊದಲನೆಯವ ಚಷ್ಟನ. ಈತನ ತಂದೆ ಜಾಮೋತಿಕ ಕುಷಾಣರ ಅಧೀನದಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಆಳುತ್ತಿದ್ದ. ಈತನನ್ನು ನಹಪಾಣನ ಮರಣಾನಂತರ ಕ್ಷಹರಾತರು ಆಳುತ್ತಿದ್ದ ಪ್ರಾಂತ್ಯಗಳ ಮಂಡಲಾಧಿಕಾರಿಗಳಾಗಿ ನೇಮಿಸಲಾಯಿತು. ಸಾತವಾಹನರು ನಹಪಾಣನಿಂದ ಕಸಿದುಕೊಂಡಿದ್ದ ಭಾಗಗಳನ್ನು ಪುನಃ ವಶಪಡಿಸಿಕೊಳ್ಳುವ ಉದ್ದೇಶ ಈ ನೇಮಕದಲ್ಲಿ ಅಡಗಿತ್ತು. ಆವಂತಿಯ ರಾಜಧಾನಿ ಒಜೆನೆಯಲ್ಲಿ (ಉಜ್ಜಯಿನಿ) ಆಳುತ್ತಿದ್ದನೆಂದು ಹೇಳುವ ಟೆಯಾಸ್ಟನಿಸ್ ಎಂಬವನೇ ಚಷ್ಟನ ಎನ್ನಲಾಗಿದೆ. ಮೊದಲ ಕ್ಷತ್ರಪನೆಂದು ಕರೆಸಿಕೊಳ್ಳುತ್ತಿದ್ದ ಈತ ತನ್ನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಮಹಾಕ್ಷತ್ರಪನಾದ. ಮಹಾಕ್ಷತ್ರಪ ಚಷ್ಟನನ ಮಗ ಜಯದಾಮ ತಂದೆಯೊಡನೆ ಕ್ಷತ್ರಪನಾಗಿ ಆಳತೊಡಗಿದನಾದರೂ ಆತ ಅಲ್ಪಾಯುವಾಗಿದ್ದು ಕಿರಿಯ ವಯಸ್ಸಿನಲ್ಲಿಯೇ ಮರಣ ಹೊಂದಿದ. ಅನಂತರ ಆ ಸ್ಥಾನಕ್ಕೆ ಅವನ ಮಗ ರುದ್ರದಾಮನನ್ನು ಕ್ಷತ್ರಪನೆಂದು ಚಷ್ಟನ ನೇಮಿಸಿಕೊಂಡ. ಕಛ್‍ಪ್ರಾಂತ್ಯದ ಅಂದೌದಲ್ಲಿ ದೊರೆತ 130-131ನೆಯ ವರ್ಷದ ಚಷ್ಟನನ ಶಾಸನದಿಂದ ನಹಪಾಣದ ಪ್ರಾಂತ್ಯಗಳನ್ನು ಆಕ್ರಮಿಸಿದ್ದ ಸಾತವಾಹನರ ವಿಸ್ತøತ ರಾಜ್ಯದ ಗಡಿಯಲ್ಲಿಯೇ ಕರ್ದಮಕವಂಶದ ಚಷ್ಟನನ ರಾಜ್ಯವೂ ಬಲಗೊಳ್ಳುತ್ತಿತ್ತೆಂದು ತಿಳಿದುಬರುತ್ತದೆ. ಬಹುಶಃ 130-131ರ ಅನಂತರದ ಕೆಲವು ವರ್ಷಗಳಲ್ಲಿ ಚಷ್ಟನನ ಮೊಮ್ಮಗ ರುದ್ರದಾಮ ಪಟ್ಟಕ್ಕೆ ಬಂದನೆಂದು ತೋರುತ್ತದೆ. ಅಜ್ಜನ ಮರಣಾನಂತರ ಈತ ಮಹಾಕ್ಷತ್ರಪನಾದ.
- ಕಾಠೇವಾಡದ ಬಳಿಯ ಜುನಾಗಡ (ಪಿರಿನಾರ್) ಬೆಟ್ಟದ ಬಳಿ ದೊರೆತಿರುವ ರುದ್ರದಾಮನ ಶಾಸನ ಬಹಳ ಪ್ರಸಿದ್ಧವಾದದ್ದು. ಸುದರ್ಶನ ಸರೋವರವನ್ನು ಕುರಿತ ಈ ಶಾಸನದಲ್ಲಿ ಪ್ರಾಸಂಗಿಕವಾಗಿ ಇವನಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಲಾಗಿದೆ. ಈತ ಶಬ್ದಾರ್ಥ (ವ್ಯಾಕರಣ), ಗಾಂಧರ್ವ, ನ್ಯಾಯ ಮುಂತಾದ ಶಾಸ್ತ್ರಗಳಲ್ಲಿ ಪರಿಣಿತನೆಂದೂ ಸಮರ ವಿದ್ಯೆಯಲ್ಲಿಯೂ ಅಷ್ಟೇ ಶಕ್ತನೆಂದೂ ವರ್ಣಿಸಿದೆ. ಯೌಧೇಯರನ್ನು ಸೋಲಿಸಿ, ದಕ್ಷಿಣಾಪಥಪತಿ ಎನಿಸಿದ ಸಾತಕರ್ಣಿಯನ್ನು ಸಹ ಎರಡು ಬಾರಿ ಕದನದಲ್ಲಿ ಸೋಲಿಸಿದನೆಂದೂ ಆದರೆ ಆತನೊಡನೆ ಬೆಳೆಸಿದ್ದ ಬಾಂಧವ್ಯದ ಕಾರಣದಿಂದಲೇ ಆತನನ್ನು ನಾಶಗೊಳಿಸಲಿಲ್ಲವೆಂದೂ ಈ ಶಾಸನ ಹೇಳುತ್ತದೆ. ಅಲ್ಲದೆ ರುದ್ರದಾಮನ ಆಕರ (ಪೂರ್ವ ಮಾಲವ), ಅವಂತಿ (ಪಶ್ಚಿಮ ಮಾಲವ), ಅನೂಪ (ನರ್ಮದಾ ನದೀತೀರದಲ್ಲಿ ಮಾಂಧಾತಾದ ಸುತ್ತಲಿನ ಪ್ರದೇಶ), ಅಪರಾಂತ (ಉತ್ತರ ಕೊಂಕಣ), ನಿಷಾದ (ಪಶ್ಚಿಮ ವಿಂಧ್ಯ, ಅರಾವಲೀ ಬೆಟ್ಟದ ಪ್ರದೇಶ) ಗಳನ್ನೆಲ್ಲ ತನ್ನ ಅಧೀನದಲ್ಲಿಟ್ಟುಕೊಂಡು ಆಳುತ್ತಿದ್ದನೆಂದೂ ಹೇಳುತ್ತದೆ. ಇದರಿಂದ ನಹಪಾಣನನ್ನು ಸೋಲಿಸಿದ ಗೌತಮೀಪುತ್ರ ಸಾತಕರ್ಣಿಯನ್ನು ರುದ್ರದಾಮನು ಸೋಲಿಸಿ, ನಹಪಾಣನಿಗೆ ಸೇರಿದ ಪ್ರದೇಶಗಳನ್ನು ಸಾತಕರ್ಣಿಯಿಂದ ಪುನಃ ಗೆದ್ದುಕೊಂಡನೆಂದು ತಿಳಿಯುತ್ತದೆ. ಈ ಸಾತಕರ್ಣಿ ಗೌತಮೀಪುತ್ರ ಸಾತಕರ್ಣಿಯಲ್ಲವೆಂದು ಹಲವರು ಅಭಿಪ್ರಾಯಪಟ್ಟಿರುವರಾದರೂ ಅದು ಸಾಧಾರಣವಲ್ಲ. ರುದ್ರದಾಮನ ಮಗಳನ್ನು ಗೌತಮೀಪುತ್ರ ಸಾತಕರ್ಣಿಯ ಮಗ ವಾಸಿಷ್ಠೀಪುತ್ರ ಪುಳುಮಾವಿ ಮದುವೆಯಾಗಿದ್ದನೆಂದು ಕನ್ಹೇರಿಯಲ್ಲಿಯ ಶಾಸನದ ಆಧಾರದಿಂದ ಊಹಿಸಲಾಗಿದೆ. ಈ ಶಾಸನದ ಕಾಲ 151-52. ಈ ವೇಳೆಗೆ ರುದ್ರದಾಮನ ಮಹಾಕ್ಷತ್ರಪನಾಗಿದ್ದ. ಬಹುಶಃ ಚಷ್ಟನ 140ರ ತನಕ ಆಳಿದ್ದು ಅನಂತರ ರುದ್ರದಾಮನ ಮಹಾಕ್ಷತ್ರಪನಾದ. ರುದ್ರದಾಮನ ಇಬ್ಬರು ಮಕ್ಕಳು ದಾಮಜದಶ್ರೀ ಮತ್ತು ರುದ್ರಸಿಂಹ. ರುದ್ರಸಿಂಹನ ಮಗ ರುದ್ರಸೇನ 199ರಿಂದ 223ರ ತನಕ ಆಳಿದ. ಆದರೆ ರುದ್ರದಾಮನ ಅನಂತರ ಪುನಃ ಪ್ರಬಲನಾದ ಯಜ್ಞಶ್ರೀ ಸಾತಕರ್ಣಿ ಈ ಅರಸರು ಆಳುತ್ತಿದ್ದ ರಾಜ್ಯದ ದಕ್ಷಿಣ ಭಾಗಗಳನ್ನು ಕಸಿದುಕೊಂಡ. ಉತ್ತರದಲ್ಲಿ ಮಾಳವರೂ ಆಭೀರರೂ ಕ್ರಮೇಣ ಬಲಯುತರಾಗಿ ಮಹಾಕ್ಷತ್ರಪರ ಬಲವನ್ನು ಕುಗ್ಗಿಸಿದರು. ಕೊನೆಗೆ 4ನೆಯ ಶತಮಾನದಲ್ಲಿ ಗುಪ್ತವಂಶದ ಇಮ್ಮಡಿ ಚಂದ್ರಗುಪ್ತ ಇವರನ್ನು ಸಂಪೂರ್ಣವಾಗಿ ಸೋಲಿಸಿ ಓಡಿಸಿದ.
- ಸಾತವಾಹನರು : ಇವರು ಯಾರು ಮತ್ತು ಇವರ ಮೂಲ ಯಾವುದು ಎಂಬ ಪ್ರಶ್ನೆಗಳಿಗೆ ನಿಶ್ಚಿತ ಉತ್ತರ ಹೇಳುವುದು ಕಠಿಣ. ಈ ಪ್ರಶ್ನೆ ಇನ್ನೂ ಚರ್ಚಾಸ್ಪದವಾಗಿಯೇ ಇದೆ. ವಿಂಧ್ಯ ಪರ್ವತದ ದಕ್ಷಿಣಕ್ಕೆ ಈಗಿನ ಮಹಾರಾಷ್ಟ್ರ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳನ್ನೊಳಗೊಂಡ ದಕ್ಷಿಣಾಪಥದ ಮೊದಲ ಅರಸುಮನೆತನವಿದು. ಇವರು ಮೂಲತಃ ಕೃಷ್ಣಾ-ಗೋದಾವರಿ ನದಿಗಳ ಮಧ್ಯದಲ್ಲಿಯ ತೆಲುಗು ಪ್ರದೇಶದಲ್ಲಿದ್ದ ಆಂಧ್ರರೆಂದೂ ಬಹಳ ಪುರಾತನ ಕಾಲದಿಂದಲೂ ಇವರು ಇಲ್ಲಿಯೇ ನೆಲಸಿದ್ದರೆಂದೂ ಕೃಷ್ಣಾನದೀತೀರದಲ್ಲಿ ಶ್ರೀಕಾಕುಲಮ್ ಇವರ ಮುಖ್ಯಪಟ್ಟಣವಾಗಿತ್ತೆಂದೂ ಅನಂತರ ಇವರು ಪೂರ್ವದಿಂದ ಪಶ್ಚಿಮಕ್ಕೆ ತಮ್ಮ ರಾಜ್ಯ ವಿಸ್ತರಿಸಿಕೊಂಡರೆಂದೂ ಕೆಲವು ಇತಿಹಾಸಕಾರರ ಅಭಿಪ್ರಾಯ. ಆದರೆ ಇದಕ್ಕೆ ಪ್ರಬಲ ಆಧಾರಗಳಾವುವೂ ಇಲ್ಲ. ಈ ವಂಶಕ್ಕೆ ಸೇರಿದ ಮೊದಲ ಅರಸರುಗಳ ಶಾಸನಗಳೂ ನಾಣ್ಯಗಳೂ ಪಶ್ಚಿಮ ಡೆಕ್ಕನದಲ್ಲಿ ನಾಸಿಕ, ನಾನಾಘಾಟ ಮುಂತಾದ ಕಡೆಗಳಲ್ಲಿ ದೊರೆತಿವೆಯೇ ಹೊರತು ಈಗಿನ ಆಂಧ್ರಪ್ರದೇಶದ ಪೂರ್ವಭಾಗದಲ್ಲಿ ಅಲ್ಲ. ಕ್ರಿ. ಪೂ. 1ನೆಯ ಶತಮಾನಕ್ಕೆ ಸೇರಿದ ಕಲಿಂಗದ ಖಾರವೇಲನ ಹಾಥಿಗುಂಫಾ ಶಾನದಲ್ಲಿಯೂ ಅವನು ತನ್ನ ರಾಜ್ಯದ ಪಶ್ಚಿಮದಲ್ಲಿ ಆಳುತ್ತಿದ್ದ ಸಾತಕರ್ಣಿಯನ್ನು ಲೆಕ್ಕಿಸದೆ ದಂಡೆತ್ತಿಹೋದುದಾಗಿ ಹೇಳಿರುವುದನ್ನು ಗಮನಿಸಿದರೆ ಸಾತವಾಹನರಾಜ್ಯ ಈಗಿನ ಆಂಧ್ರಪ್ರದೇಶದಲ್ಲಿ ಆಗ ಇರಲಿಲ್ಲವೆಂದು ತೋರುತ್ತದೆ. ಕ್ರಿ. ಪೂ. 2ನೆಯ ಶತಮಾನದಲ್ಲಿ ವಾಸಿಷ್ಠೀ, ಪುತ್ರ ಪುಳುಮಾವಿಯ ಆಳ್ವಿಕೆ ಆರಂಭವಾಗುವ ತನಕವೂ ಸಾತವಾಹನರು ಆಂಧ್ರದಲ್ಲಿದ್ದರೆಂಬುದಕ್ಕೆ ಆಧಾರಗಳಿಲ್ಲ. ಇವನೇ ತನ್ನ ರಾಜ್ಯದ ಪೂರ್ವಭಾಗವನ್ನು ವಿಸ್ತರಿಸಿ ಕ್ರಮೇಣ ಆಂಧ್ರಪ್ರದೇಶವನ್ನು ವಶಪಡಿಸಿಕೊಂಡ ಮೊದಲ ಅರಸು. ಪುರಾಣಗಳು ರೂಪುಗೊಂಡ 3-4ನೆಯ ಶತಮಾನಗಳ ವೇಳೆಗೆ ಸಾತವಾಹನರು ತಮ್ಮ ರಾಜ್ಯದ ಪಶ್ಚಿಮ ಪ್ರಾಂತ್ಯಗಳನ್ನು ಕಳೆದುಕೊಂಡು ಆಂಧ್ರಪ್ರದೇಶದ ಕೃಷ್ಣಾ ಗೋದಾವರಿ ಪ್ರದೇಶಗಳಲ್ಲಿ ಪ್ರಬಲರಾಗಿದ್ದ ಕಾರಣ ಪುರಾಣಗಳಲ್ಲಿ ಇವರನ್ನು ಆಂಧ್ರರೆಂದೂ ಕರೆಯಲಾಗಿದೆ ಎಂಬುದು ಸಮಂಜಸವಾದ ಊಹೆ. ಪಶ್ಚಿಮ ಡೆಕ್ಕನ್ ಭಾಗದಲ್ಲಿ ಮೊದಲು ಅಧಿಕಾರಾರೂಢರಾದ ಇವರು ಪ್ರತಿಷ್ಠಾನವನ್ನು ಈಗಿನ ಪೈಠಣ ಮೊದಲ ರಾಜಧಾನಿಯಾಗಿ ಹೊಂದಿದ್ದು ಕ್ರಮೇಣ ಪಶ್ಚಿಮದಿಂದ ಪೂರ್ವದ ಕಡೆಗೆ ತಮ್ಮ ರಾಜ್ಯ ವಿಸ್ತರಿಸಿಕೊಂಡರು. ಸಾತವಾಹನ ಕುಲಕ್ಕೆ ಸೇರಿದ ಅರಸನನ್ನು ಕುರಿತು ನಮಗೆ ಲಭ್ಯವಾಗಿರುವ ವಿವರಗಳಲ್ಲೂ ಬಹಳ ವ್ಯತ್ಯಾಸಗಳಿವೆ. ಕೆಲವು ಪುರಾಣಗಳಲ್ಲಿ ಈ ಆಂಧ್ರರು 300 ವರ್ಷಗಳ ಕಾಲ ಆಳಿದರೆಂದು ಹೇಳಿದರೆ, ಇನ್ನು ಕೆಲವೆಡೆ ಇವರ ಆಳ್ವಿಕೆಯ ಕಾಲ 460 ವರ್ಷಗಳು ಎಂದಿದೆ. ಅಂತೆಯೇ ಈ ಮನೆತನದಲ್ಲಿ 17ರಿಂದ 30ರ ವರೆಗೂ ಅರಸರು ಆಳಿದರೆಂದು ಪುರಾಣಗಳಲ್ಲಿ ಭಿನ್ನ ಭಿನ್ನ ಸಂಖ್ಯೆಗಳನ್ನು ಸೂಚಿಸಲಾಗಿದೆ. ಅವರ ಹೆಸರುಗಳಲ್ಲಿಯೂ ಆಳ್ವಿಕೆಯ ಕ್ರಮದಲ್ಲಿಯೂ ವ್ಯತ್ಯಾಸಗಳಿವೆ. ಆದರೂ ಇಲ್ಲಿಯ ತನಕ ದೊರೆತಿರುವ ಇವರ ಶಾಸನಗಳ ಆಧಾರದ ಮೇಲೆ ಸಾತವಾಹನ ಕುಲದ ಅರಸರ ಇತಿಹಾಸ ರಚಿಸಲಾಗಿದೆ.
- ಈ ವಂಶದ ಮೊದಲ ಅರಸ ಸೀಮುಕ. ಈತ ಬಹುಶಃ ಕ್ರಿ. ಪೂ. 30ನೆಯ ವರ್ಷದಲ್ಲಿ ಕಣ್ವಮನೆತನದ ಕೊನೆ ಅರಸನನ್ನು ಉಚ್ಚಾಟಿಸಿ ಆಳಲಾರಂಭಿಸಿದ. ಈತ ಸುಮಾರು 23 ವರ್ಷಗಳ ಕಾಲ ಆಳಿವ. ಈತನಿಗೆ ಸಾತವಾಹನ ಎಂಬ ಬಿರುದು ಇದ್ದು ಆ ಹೆಸರು ಇವನ ವಂಶಕ್ಕೆ ಅನ್ವಯಿಸಲ್ಪಟ್ಟಿರಬೇಕು. ಆದರೆ ಇತ್ತೀಚೆಗೆ ಈ ಕಾಲ ನಿರ್ಣಯವನ್ನು ಭಿನ್ನವಾಗಿ ಕೆಲವರು ರೂಪಿಸಿದ್ದಾರೆ. ಅದರಂತೆ ಅಶೋಕಮೌರ್ಯನ ಬಳಿಕ ತಲೆ ಎತ್ತಿದ ರಾಜಕೀಯ ಪರಿಸ್ಥಿತಿಗಳ ಪ್ರಯೋಜನ ಪಡೆದ ಸಾತವಾಹನ ಸೀಮುಕ ಕ್ರಿ. ಪೂ. 228ರಿಂದಲೇ ಸ್ವತಂತ್ರವಾಗಿ ಆಳತೊಡಗಿದನೆಂದು ಅಂದಿನಿಂದ ಆ ಮನೆತನದ 30 ಅರಸರು ಕ್ರಿ. ಶ. 224ರ ತನಕ ಆಳಿದರೆಂದು ಪ್ರತಿಪಾದಿಸಿದ್ದಾರೆ.
- ಸೀಮುಕನ ಅನಂತರ ಅವನ ತಮ್ಮ ಕನ್ನರ ಅಥವಾ ಕೃಷ್ಣ ತದನಂತರ ಅವನ ಮಗ ಒಂದನೆಯ ಸಾತಕರ್ಣಿಯೂ ಕ್ರಮವಾಗಿ 18 ವರ್ಷಗಳ ಕಾಲ ಆಳಿದರು. ಈ ಮೂವರ ಆಳ್ವಿಕೆಯ ಕಾಲ 51 ವರ್ಷಗಳೆಂದು ಇತ್ತೀಚೆಗೆ ಕೆಲವರು ಸೂಚಿಸಿದ್ದಾರೆ. ಸಾತಕರ್ಣಿ ರಥಿಕ ಮತ್ತು ಭೋಜ ವಂಶಕ್ಕೆ ಸೇರಿದ ತನ್ನ ಸೇನಾನಿಗಳ ಸಹಾಯದಿಂದ ರಾಜ್ಯ ವಿಸ್ತರಿಸಿದ. ಈತ ಒಂದು ರಾಜಸೂಯ, ಎರಡು ಅಶ್ವಮೇಧ ಯಜ್ಞಗಳನ್ನೂ ಉಳಿದ ವೈದಿಕ ಯಾಗಾದಿಗಳನ್ನೂ ಮಾಡಿದ. ಡೆಕನ್ನಿನ ಮೇಲ್ಭಾಗ ಮತ್ತು ಪಶ್ಚಿಮ ಹಾಗೂ ಮಧ್ಯ ಪ್ರದೇಶಗಳು ಇವನ ಸ್ವಾಧೀನವಾಗಿದ್ದುವು. ಸಾತಕರ್ಣಿಯ ಅನಂತರ ಸಾತವಾಹನರ ಬಲ ಕುಗ್ಗಿತು. ಉತ್ತರ ಮಹಾರಾಷ್ಟ್ರ, ಕೊಂಕಣ, ಕಾಠೇವಾಡ, ಮಾಳವಾ ಮುಂತಾದ ಕಡೆಗಳಲ್ಲಿ ಶಕರ ಪ್ರಾಬಲ್ಯ ಹೆಚ್ಚಿದ್ದೇ ಇದಕ್ಕೆ ಮುಖ್ಯಕಾರಣ. ಸಾತವಾಹನರು ಪುನಃ ಪ್ರವರ್ಧಮಾನರಾದದ್ದು ಗೌತಮೀಪುತ್ರ ಸಾತಕರ್ಣಿಯ ಕಾಲದಲ್ಲಿಯೇ. ಕ್ಷಹರಾತ ಕುಲದ ನಹಪಾಣನನ್ನು ಯುದ್ಧದಲ್ಲಿ ಕೊಂದು ಅವನ ರಾಜ್ಯದ ಅನೇಕ ಭಾಗಗಳನ್ನು ಗೌತಮೀಪುತ್ರ ಕಸಿದುಕೊಂಡ. ಇವನ ಈ ವಿಜಯಗಳ ಪರಿಣಾಮವಾಗಿ ಋಷಿಕ, ಆಶ್ಮಕ, ಮೂಲಕ ಸುರಾಷ್ಟ್ರ, ಕುಕುರ, ಅಪರಾಂತ, ಅನೂಪ, ವಿದರ್ಭ, ಅಕರ ಮತ್ತು ಅದಂತ ದೇಶಗಳೆಲ್ಲ ಇವನ ಆಳ್ವಿಕೆಗೆ ಒಳಪಟ್ಟವು. 124-125ರಲ್ಲಿ ನಹಪಾಣನನ್ನು ಸೋಲಿಸಿದ ಅನಂತರ ಇವನ ರಾಜ್ಯ ಇಡೀ ದಕ್ಷಿಣ ಭಾರತವನ್ನೊಳಗೊಂಡಿದ್ದು ಮೂರು ಕಡೆಗಳಲ್ಲೂ ಸಮುದ್ರಗಳಿಂದಾವೃತವಾಗಿದ್ದವೆಂದು ನಾಸಿಕರ ಶಾಸನ ತಿಳಿಸುತ್ತದೆಯಾದರೂ ಇದು ಸ್ವಲ್ಪಮಟ್ಟಿಗೆ ಉತ್ಪ್ರೇಕ್ಷೆಯಿಂದ ಕೂಡಿದೆ. ಆದರೂ ಗೌತಮೀಪುತ್ರ ಸಾತಕರ್ಣಿಯ ಆಳ್ವಿಕೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತ್ವಪೂರ್ಣ ಅಧ್ಯಾಯ. ಸಾಧಾರಣವಾಗಿ ರೂಢಿಯಲ್ಲಿರುವ ಶಾಲಿವಾಹನ ಶಕ ಎಂಬ ಕಾಲಗಣನೆ ಕುಷಾಣರ ಕನಿಷ್ಕನಿಂದ ಆರಂಭವಾಯಿತು. ಆದರೂ ಈ ಸಾತವಾಹನ-ಸಾಲಿವಾಹನ ಕುಲದ ಗೌತಮೀಪುತ್ರನ ಆಳ್ವಿಕೆ ಪ್ರಜೆಗಳ ಮೆಚ್ಚುಗೆಗೆ ಪಾತ್ರವಾಗಿ ಹಲವು ಶತಮಾನಗಳ ಅನಂತರ ಈ ಕಾಲಗಣನೆಯನ್ನು ಇವನ ಹೆಸರಿಗೆ ಹೊಂದಿಸುವ ಸಂಪ್ರದಾಯವೇ ರೂಢಿಗೆ ಬಂದಂತೆ ತೋರುತ್ತದೆ. ಸುಮಾರು ಕಾಲು ಶತಮಾನದ ತನಕ ಆಳಿದ ಈತ ತನ್ನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಅನಿರೀಕ್ಷಿತವಾಗಿ ಕಾರ್ದಮಕ ಕುಲದ ಮಹಾಕ್ಷತ್ರಪ ರುದ್ರದಾಮನ ಕೈಯಲ್ಲಿ ಸೋಲನ್ನು ಅನುಭವಿಸಿದ. ತತ್ಫಲವಾಗಿ ರಾಜ್ಯದ ಉತ್ತರಭಾಗಗಳು ಇವನ ಕೈಬಿಟ್ಟವು.
- ಗೌತಮೀಪುತ್ರ ಸಾತಕರ್ಣಿಯ ಮಗ ಮೂರನೆಯ ವಾಸಿಷ್ಠೀಪುತ್ರ ಪುಳುಮಾವಿ. ಈತ ಸುಮಾರು 130ರಿಂದ 160ರ ತನಕ ಆಳಿದ. ಇವನ ಕಾಲದಲ್ಲಿ ಸಾತವಾಹನರ ರಾಜ್ಯ ಪೂರ್ವದಲ್ಲಿ ಕೃಷ್ಣಾನದಿಯ ಮುಖಜಭೂಮಿಯ ಕಡೆಗೆ ಹಬ್ಬಿತು. ದಕ್ಷಿಣದಲ್ಲಿ ಕರ್ನಾಟಕದ ಬಳ್ಳಾರಿಯ ಸುತ್ತಲಿನ ಭಾಗಗಳೂ ಸಾತವಾಹನರ ಅಧೀನಕ್ಕೆ ಬಂದು ಸುಮಾರು 175ರಿಂದ 205ರ ತನಕ ಆಳಿದ ಯಜ್ಞಸಾತಕರ್ಣಿಯೇ ಈ ವಂಶದ ಪ್ರಮುಖರಲ್ಲಿ ಕೊನೆಯ ಅರಸ. ಇವನ ಅನಂತರ ಸಾತವಾಹನ ರಾಜ್ಯ ಆ ವಂಶದ ಬೇರೆ ಬೇರೆ ಶಾಖೆಗಳಿಗೆ ಸೇರಿದ ಅರಸರಲ್ಲಿ ಹಂಚಿ ಹೋಯಿತು. ಇಂಥ ಒಂದು ಶಾಖೆಗೆ ಸೇರಿದ ಕುಂತಲ ಸಾತಕರ್ಣಿ ಮತ್ತು ಹಾಲ ಎಂಬವರು ಕರ್ನಾಟಕದ ಭಾಗಗಳಲ್ಲಿಯೂ ಆಳಿದರು. ಇವರಲ್ಲಿ ಹಾಲ ಮಹಾರಾಷ್ಟ್ರೀ ಪ್ರಾಕೃತ ಭಾಷೆಯ ಗಾಥಾಸಪ್ತಶತೀ ಎಂಬ ಗ್ರಂಥದ ಕರ್ತೃವಾಗಿ ಸಾಹಿತ್ಯ ಕ್ಷೇತ್ರದಲ್ಲೂ ಕೀರ್ತಿ ಪಡೆದ.
- ಗುಪ್ತರು : ಇವರ ಕಾಲವನ್ನು ಭಾರತೇತಿಹಾಸದ ಸುವರ್ಣಯುಗವೆಂದು ವರ್ಣಿಸಲಾಗಿದೆ. ಈ ಕಾಲಕ್ಕೆ ಸಂಬಂಧಿಸಿದ ಅನೇಕ ಶಾಸನಗಳೂ ನಾಣ್ಯಗಳೂ ಸಾಹಿತ್ಯಕ ಆಧಾರಗಳೂ ದೊರೆತಿರುವುದರಿಂದ 4ನೆಯ ಶತಮಾನದಿಂದ ಭಾರತ ಇತಿಹಾಸದ ಅನೇಕ ವಿವರಗಳು ನಮಗೆ ತಿಳಿದಿವೆ. ಈ ವಂಶಕ್ಕೆ ಸೇರಿದ ಮೊದಲನೆಯ ಚಂದ್ರಗುಪ್ತನಿಗೂ ಹಿಂದಿನ ಅರಸರ ವಿಷಯ ನಮಗೆ ಹೆಚ್ಚಿಗೆ ತಿಳಿದಿಲ್ಲ. ಮೊದಲನೆಯ ಚಂದ್ರಗುಪ್ತನ ಅಜ್ಜ ಮಹಾರಾಜ ಶ್ರೀಗುಪ್ತ, ತಂದೆ ಮಹಾರಾಜ ಘಟೋತ್ಕಚ. ಇವರಿಬ್ಬರೂ ಕೇವಲ ಮಹಾರಾಜ ಎಂಬ ಬಿರುದನ್ನು ಮಾತ್ರ ಹೊಂದಿದ್ದರು. ಆದರೆ ಶಾಸನಗಳಲ್ಲಿ ಘಟೋತ್ಕಚನ ಮಗನನ್ನು ಮಹಾರಾಜಾಧಿರಾಜ ಚಂದ್ರಗುಪ್ತನೆಂದು ವರ್ಣಿಸಲಾಗಿದೆ. ಬಹುಶಃ ಇದು ಚಂದ್ರಗುಪ್ತ ತನ್ನ ಪೂರ್ವಿಕರಿಗಿಂತ ಹೆಚ್ಚಿನ ಪ್ರಾಬಲ್ಯ ಹೊಂದಿದ್ದನೆಂಬುದನ್ನು ಸೂಚಿಸುತ್ತದೆ. ಗುಪ್ತರು ಆಳುತ್ತಿದ್ದಿರಬಹುದಾದ ಪ್ರದೇಶಕ್ಕೆ ಹೊಂದಿದಂತಿದ್ದು ಲಿಚ್ಛವಿಯರ ಆಳ್ವಿಕೆಗೆ ಒಳಪಟ್ಟಿದ್ದ ಬಿಹಾರ ಪ್ರಾಂತ್ಯದ ಉತ್ತರಕ್ಕೆ ವೈಶಾಲಿ ಮತ್ತು ನೇಪಾಲಗಳ ನಡುವಣ ಪ್ರದೇಶ ಉತ್ತರಾಧಿಕಾರಿಗಳಿಲ್ಲದ ಕಾರಣ ಇವನ ಸ್ವಾಧೀನಕ್ಕೆ ಬಂತು. ಇದರ ಪರಿಣಾಮವಾಗಿ ರಾಜ್ಯ ವಿಸ್ತಾರಗೊಂಡು ಪ್ರಾಬಲ್ಯ ಹೆಚ್ಚಾಯಿತು. ಇವನ ತಂದೆ ಮಹಾರಾಜನೆನಿಸಿಕೊಂಡಿದ್ದರೆ ಇವನು ಮಹಾರಾಜಾಧಿರಾಜನೆಂದು ಬಿರುದಾಂಕಿತನಾದ.
- ಚಂದ್ರಗುಪ್ತ ಆಳ್ವಿಕೆಗೆ ಬಂದ ವರ್ಷದಿಂದ (320) ಗುಪ್ತರ ಹೆಸರಿನಲ್ಲಿ ಒಂದು ಶಕೆಯನ್ನು ಗಣನೆಗೆ ತರಲಾಯಿತು. ಈ ಗುಪ್ತ ಶಕೆ ಸಮುದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದ ಗಣಿಸಲಾಯಿತೆಂದು ಹಲವರ ಅಭಿಪ್ರಾಯ. ಆದರೆ ಇದು ಚಂದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದ ಆರಂಭವಾಯಿತೆಂಬುದನ್ನು ಸಾಮಾನ್ಯವಾಗಿ ಒಪ್ಪಲಾಗಿದೆ. ಚಂದ್ರಗುಪ್ತನ ಆಳ್ವಿಕೆಯ ಕೊನೆಯ ಕಾಲದಲ್ಲಿ ಸಮರ್ಥ ಉತ್ತರಾಧಿಕಾರಿಯನ್ನು ಆಯುವ ಸಮಸ್ಯೆ ಅವನಿಗೆ ಎದುರಾಯಿತು. ಸಮುದ್ರಗುಪ್ತನನ್ನೇ ತನ್ನ ಅನಂತರದ ರಾಜನೆಂದು ಈತ ಆಸ್ಥಾನಿಕರ ಸಮ್ಮುಖದಲ್ಲಿ ಘೋಷಿಸಿದ. ಆಯ್ಕೆ ಹೆಚ್ಚಿನ ಸಾಮಂತರಿಗೆ ಸಂತೃಪ್ತಿ ಉಂಟುಮಾಡಿದರೂ ಕೆಲವರು ಮಾತ್ರ ಇದರಿಂದ ಅಸೂಯೆಗೊಂಡರು. ಇವರಲ್ಲಿ ಅಚ್ಯುತ ಮತ್ತು ನಾಗಸೇನ ಎಂಬ ಇಬ್ಬರೂ ಕೋಟ ಕುಲದ ಒಬ್ಬ ಸಾಮಂತನೂ ಪ್ರಮುಖರು. ಆದರೆ ಅಧಿಕಾರಕ್ಕೆ ಬಂದೊಡನೆ ಸಮುದ್ರಗುಪ್ತ ಇವರೆಲ್ಲರನ್ನೂ ಸೋಲಿಸಿದ್ದ. ಅನಂತರ ಉತ್ತರದ ದಿಗ್ವಿಜಯ ಯಾತ್ರೆ ಕೈಗೊಂಡ. ಕವಿ ಹರಿಷೇಣ ಅಲಹಾಬಾದ್ ಶಾಸನದಲ್ಲಿ ಸಮುದ್ರಗುಪ್ತನ ದಿಗ್ವಿಜಯಕ್ಕೆ ಸಂಬಂಧಿಸಿದ ಅನೇಕ ವಿವರಣೆ ನೀಡಿದ್ದಾನೆ. ಅದರಂತೆ ಅವನು ಆರ್ಯಾವರ್ತದ ರುದ್ರದೇವ, ಮತಿಲ, ನಾಗದತ್ತ, ಚಂದ್ರವರ್ಮ, ಗಣಪತಿನಾಗ, ನಾಗಸೇನ ಅಚ್ಯುತ, ನಂದಿ ಮತ್ತು ಬಲವರ್ಮ ಎಂಬ ಅರಸರನ್ನು ಸೋಲಿಸಿ ಅವರ ರಾಜ್ಯ ಸ್ವಾಧೀನಪಡಿಸಿಕೊಂಡ. ಇದರ ಪರಿಣಾಮವಾಗಿ ಉತ್ತರಪ್ರದೇಶ ಮಧ್ಯಭಾರತ ಮತ್ತು ಪೂರ್ವದಲ್ಲಿ ಬಂಗಾಲ ಬಿಹಾರ ಮುಂತಾದ ಪ್ರದೇಶಗಳನ್ನೊಳಗೊಂಡ ಉತ್ತರ ಭಾರತದ ವಿಸ್ತಾರ ಪ್ರದೇಶದ ಸಾಮ್ರಾಟನಾದ. ಅನಂತರ ದಕ್ಷಿಣಾಪಥದ ಕಡೆಗೆ ದಿಗ್ವಿಜಯಕ್ಕಾಗಿ ಹೊರಟು ಹಾದಿಯಲ್ಲಿದ್ದ ಎಲ್ಲ ಆಟವಿಕ ರಾಜರನ್ನು ತನ್ನ ಅಧೀನರಾಗಿ ಮಾಡಿಕೊಂಡ. ಬಹುಶಃ ವಿಂಧ್ಯಪರ್ವತದ ಪೂರ್ವಕ್ಕೆ ಬಾಘೇಲಖಂಡ, ರೇವಾ ಮತ್ತು ಛೋಟಾನಾಗಪುರಗಳನ್ನೊಳಗೊಂಡ ಅಡವಿ ಪ್ರದೇಶದಲ್ಲಿ ಈ ರಾಜರು ಆಳುತ್ತಿದ್ದು ಬಹಳ ಕಿರುಕುಳ ಉಂಟುಮಾಡುತ್ತಿದ್ದಿರಬೇಕು.
- ದಕ್ಷಿಣಾಪಥದ ಅರಸರ ವಿಷಯದಲ್ಲಿ ಗ್ರಹಣ, ಮೋಕ್ಷ ಮತ್ತು ಅನುಗ್ರಹದ ನೀತಿಯನ್ನು ಈತ ಅನುಸರಿಸಿದ. ಇವರು ಹನ್ನೆರಡು ಮಂದಿ ಅರಸರು : ಕೋಸಲದ ಮಹೇಂದ್ರ, ಮಹಾಕಾಂತಾರದ ವ್ಯಾಘ್ರರಾಜ. ಕೌರಾಲದ ಮಂಟರಾಜ, ಪಿಷ್ಠಪುರದ ಮಹೇಂದ್ರ, ಗಿರಿಕೊಟ್ಟೂರಿನ ಸ್ವಾಮಿದತ್ತ, ಏರಂಡಪಲ್ಲಿಯ ದಮನ, ಕಾಂಚಿಯ ವಿಷ್ಣುಗೋಪ, ಅವಮುಕ್ತದ ನೀಲರಾಜ, ವೆಂಗಿಯ ಹಸ್ತಿವರ್ಮ, ಪಾಲಕ್ಕದ ಉಗ್ರಸೇನ, ದೇವರಾಷ್ಟ್ರದ ಕುಬೇರ, ಮತ್ತು ಕೌಸ್ಥಲಪುರದ ಧನಂಜಯ, ಈ ರಾಜ್ಯಗಳ ಪೈಕಿ ಮಹಾಕಾಂತಾರ, ಅವಮುಕ್ತ, ಮತ್ತು ಕುಸ್ತಲಪುರ ಯಾವುವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಲ್ಲಿ ಸೂಚಿಸಿರುವ ರಾಜ್ಯಗಳೆಲ್ಲ ಪೂರ್ವ ತೀರದಲ್ಲಿಯೇ ಇದ್ದುವು ಎಂದು ಭಾವಿಸುವುದಾದರೆ ಸಮುದ್ರಗುಪ್ತ ಕೇವಲ ಪೂರ್ವತೀರದ ತುದಿಯವರೆಗೂ ಬಂದು ಅದೇ ಮಾರ್ಗವಾಗಿ ಹಿಂದಿರುಗಿದನೆಂದು ಹೇಳಬೇಕಾಗುತ್ತದೆ. ಆದರೆ ಇನ್ನೂ ಇತರರು ಸೂಚಿಸಿರುವಂತೆ ಈ ರಾಜ್ಯಗಳಲ್ಲಿ ಕೆಲವು ಕೇರಳ ಮತ್ತು ಈಗಿನ ಮಹಾರಾಷ್ಟ್ರಗಳಲ್ಲಿಯೂ ಇದ್ದುವು ಎನ್ನುವ ಪಕ್ಷದಲ್ಲಿ ಈತ ಪೂರ್ವತೀರದ ರಾಜ್ಯಗಳಿಂದಾರಂಭಿಸಿ ದಕ್ಷಿಣ ತುದಿಯಲ್ಲಿದ್ದ ಚೇರರ ರಾಜ್ಯದಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಿರೀಕರಿಸಿ ಪಶ್ಚಿಮಕ್ಕೆ ತಿರುಗಿ ಮಹಾರಾಷ್ಟ್ರದ ಮೂಲಕ ತನ್ನ ರಾಜಧಾನಿಗೆ ಹಿಂತಿರುಗಿದನೆಂದು ಊಹಿಸಬೇಕಾಗುತ್ತದೆ. ಈ ದಿಗ್ವಿಜಯದ ಸರಹದ್ದಿನಲ್ಲಿದ್ದ ಸಮತಟ, ಡವಾಕ, ಕಾಮ ರೂಪ, ನೇಪಾಲ, ಮತ್ತು ಕರ್ತೃಪುರದ ಅರಸರು ಸಮುದ್ರಗುಪ್ತನಿಗೆ ಶರಣಾದರೆಂದು ಶಾಸನ ಹೇಳುತ್ತದೆ. ಡವಾಕ ಮತ್ತು ಕರ್ತೃಪುರಗಳನ್ನು ಬಿಟ್ಟು ಉಳಿದ ಪ್ರದೇಶಗಳು ಈಗಿನ ಬಂಗಾಲ, ಅಸ್ಸಾಮಿನ ಉತ್ತರಭಾಗ ಮತ್ತು ನೇಪಾಲ ಪ್ರದೇಶಗಳನ್ನೊಳಗೊಂಡಿದ್ದುವು, ಇವಲ್ಲದೇ ಮಾಲವ, ಅರ್ಜುನಾಯನ, ಯೌಧೇಯ, ಮದ್ರಕ, ಅಭೀರ, ಪಾರ್ಜುನ, ಸನಕಾನೀಕ, ಕಾಕ ಮತ್ತು ಖರಪಲಿಕ ಎಂಬ ಜನಾಂಗಗಳ ಅಧಿಪತಿಗಳು ಸಹ ತಮ್ಮ ವಿಧೇಯತೆಯನ್ನು ಸೂಚಿಸಿದರು. ಪಶ್ಚಿಮದಲ್ಲಿ ಪಂಜಾಬ್ ಮತ್ತು ಪೂರ್ವದಲ್ಲಿ ಬಂಗಾಳದವರೆಗೂ ಹಿಮಾಲಯದಿಂದ ವಿಂಧ್ಯಪರ್ವತದ ವರೆಗೂ ಸ್ಥೂಲವಾಗಿ ಸಕಲ ಉತ್ತರಾಪಥ ಸಮುದ್ರಗುಪ್ತನ ನೇರ ಆಡಳಿತಕ್ಕೆ ಒಳಪಟ್ಟಿತ್ತೆಂದು ತಿಳಿದುಬರುತ್ತದೆ.
- ಅಲಹಾಬಾದ್ ಶಾಸನದಲ್ಲಿ ಸಮುದ್ರಗುಪ್ತ ಅಶ್ವಮೇಧ ಯಾಗ ಮಾಡಿದ ಬಗ್ಗೆ ಉಲ್ಲೇಖವಿಲ್ಲ. ಈತನ ಕೀರ್ತಿ ಪ್ರಪಂಚದಲ್ಲೆಲ್ಲ ವ್ಯಾಪಿಸಿ ಸ್ವರ್ಗಕ್ಕೂ ಏರಿತು ಎಂದು ಸೂಚಿಸುವ ಶಾಸನ ಪದ್ಯದ ಆಧಾರದಿಂದ ಈ ಶಾಸನ ಸಮುದ್ರಗುಪ್ತನ ಮರಣಾನಂತರ ಅಸ್ತಿತ್ವಕ್ಕೆ ಬಂತೆಂದು ಒಂದು ಕಾಲದಲ್ಲಿ ಊಹಿಸಲಾಗಿತ್ತು. ಆದರೆ ಅದು ಸರಿಯಲ್ಲವೆಂದು ಈಗ ಸ್ಥಿರಪಟ್ಟಿದೆ. ಅಶ್ವಮೇಧಯಾಗ ಮಾಡಿದ ಕುರುಹಾಗಿ ಈತ ನಾಣ್ಯವನ್ನು ಅಚ್ಚುಹಾಕಿಸಿದ. ಬಹಳ ದಿನಗಳಿಂದ ನಿಂತು ಹೋಗಿದ್ದ ಈ ಯಜ್ಞಯಾಗಾದಿಗಳನ್ನು ಪುನರಾಂಭಿಸಿದ ಕೀರ್ತಿ ಇವನಿಗೂ ಇವನ ಅನಂತರದವರಿಗೂ ಸಲ್ಲುತ್ತದೆ. ಈತ ಸುಮಾರು 35-40 ವರ್ಷಗಳ ಕಾಲ ಆಳಿದ.
- ಸಮುದ್ರಗುಪ್ತನ ಅನಂತರ ಅವನ ಹಿರಿಯ ಮಗ ರಾಮಗುಪ್ತ ಒಂದೆರಡು ವರ್ಷ ಆಳಿದ ಬಳಿಕ ಪಟ್ಟಕ್ಕೆ ಬಂದವ ಇಮ್ಮಡಿ ಚಂದ್ರಗುಪ್ತ. ಈತ ಸುಮಾರು 35 ವರ್ಷಗಳಷ್ಟು ಕಾಲ ಆಳಿದ (380-415). ತಂದೆಯಂತೆಯೇ ಇವನೂ ಕದನಗಳಲ್ಲಿ ಚತುರ. ಗುಜರಾತ್ ಮತ್ತು ಕಾಠೇವಾಡದಲ್ಲಿ ಶಕ ಅರಸನನ್ನು ಸೋಲಿಸಿ ಅವರ ರಾಜ್ಯ ವಶಪಡಿಸಿಕೊಳ್ಳುವುದರ ಸಲುವಾಗಿ ಇತರ ಹಿಂದೂ ಅರಸುಮನೆತನಗಳೊಡನೆ ರಕ್ತ ಸಂಬಂಧ ಬೆಳೆಸಿದ. ಇವನ ಪತ್ನಿ ನಾಗವಂಶಕ್ಕೆ ಸೇರಿದ ಕುಬೇರ ನಾಗಗಳು. ಕರ್ನಾಟಕದಲ್ಲಿಯ ಕದಂಬ ವಂಶದ ಕಾಕುತ್ಥ್ಸವರ್ಮ ತನ್ನ ಹೆಣ್ಣು ಮಕ್ಕಳನ್ನು ಗುಪ್ತರಿಗೂ ಇತರ ಅರಸರಿಗೂ ಮದುವೆ ಮಾಡಿಕೊಟ್ಟುದಾಗಿ ಅವನ ಒಂದು ಶಾಸನದಲ್ಲಿ ಹೇಳಿದೆ. ಬಹುಶಃ ಈ ರಾಜಕುಮಾರಿ ಇಮ್ಮಡಿ ಚಂದ್ರಗುಪ್ತನನ್ನೋ ಅವನ ಮಗನನ್ನೋ ಮದುವೆಯಾಗಿರಬೇಕು. ಹೀಗೆ ಬಾಂಧವ್ಯಗಳ ಮೂಲಕ ಸ್ನೇಹ ಬಲ ವರ್ಧಿಸಿಕೊಂಡ ಚಂದ್ರಗುಪ್ತ ಶಕರ ಮೇಲೆ ದಂಡೆತ್ತಿಹೋಗಿ ಮಾಳವ, ಗುಜರಾತ್, ಕಾಠೇವಾಡ ಪ್ರದೇಶಗಳನ್ನು ಸ್ವಾಧೀನಕ್ಕೆ ಪಡೆದ. ಸಮುದ್ರಗುಪ್ತ ಹಾಕಿದ ಭದ್ರ ಅಡಿಪಾಯದ ಮೇಲೆ ಭವ್ಯ ಕಟ್ಟಡ ಕಟ್ಟಿದವ ಇಮ್ಮಡಿ ಚಂದ್ರಗುಪ್ತ. ಇವನ ಕಾಲದಲ್ಲಿ ರಾಜಧಾನಿಯಾಗಿದ್ದ ಪಾಟಲೀಪುತ್ರದ ಜೊತೆಗೆ ಉಜ್ಜಯಿನಿಯೂ ಅಷ್ಟೇ ಪ್ರಾಮುಖ್ಯ ಪಡೆಯಿತು. ಈ ಚಂದ್ರಗುಪ್ತನೇ ಪೌರಾಣಿಕ ಖ್ಯಾತಿಯನ್ನು ಪಡೆದ ಉಜ್ಜಯಿನಿಯ ಅರಸನಾದ ವಿಕ್ರಮಾದಿತ್ಯನೆಂದು ಹೇಳಲಾಗಿದೆ. ಈತನ ಶಾಸನಗಳಲ್ಲಿ ಅಧಿಕ ಭಾಗ ದೊರೆತಿರುವುದು ಮಾಳವದೇಶದಲ್ಲಿ. ಬಹುಶಃ ಉಜ್ಜಯಿನಿಯಲ್ಲಿಯೇ ಈ ಅರಸ ಹೆಚ್ಚುಕಾಲ ವಾಸಿಸಿರಬಹುದು. ಅಯೋಧ್ಯೆ ಇವನ ಮತ್ತೊಂದು ನೆಲೆವೀಡು. ಶಕರನ್ನು ಹಿಮ್ಮೆಟ್ಟಿಸಿ ಶಕಾರಿ ಎಂಬ ಅನ್ವರ್ಥಕನಾಮವನ್ನು ಪಡೆದ ಇಮ್ಮಡಿ ಚಂದ್ರಗುಪ್ತನ ರಾಜ್ಯದಲ್ಲಿ ಶಾಂತಿ, ಸುಭಿಕ್ಷೆ ನೆಲಸಿದ್ದುವು. ಈತ ಪಂಡಿತರಿಗೂ ಕವಿಗಳಿಗೂ ಕಲಾಕಾರರಿಗೂ ಆಶ್ರಯದಾತನಾಗಿದ್ದ.
- ಇವನ ಬಳಿಕ ಪಟ್ಟಮಹಿಷಿ ಧ್ರುವದೇವಿಯ ಮಗ ಕುಮಾರಗುಪ್ತ ಪಟ್ಟಕ್ಕೆ ಬಂದ. ನಲ್ವತ್ತು ವರ್ಷಗಳ ಕಾಲ (ಸುಮಾರು 455ರ ತನಕ) ರಾಜ್ಯವಾಳಿದ. ಇವನದು ಶಾಂತಿ ಸುಭಿಕ್ಷೆಗಳ ಕಾಲ. ಪೂರ್ವಜರಿಂದ ಪಡೆದ ವಿಸ್ತಾರ ರಾಜ್ಯವನ್ನು ದಕ್ಷತೆಯಿಂದ ಕಾಪಾಡಿಕೊಂಡು ಬಂದ. ಮಹೇಂದ್ರಾದಿತ್ಯನೆಂಬ ಬಿರುದು ಹೊಂದಿದ್ದ ಈತ ಅಶ್ವಮೇಧಯಾಗ ಮಾಡಿದ. ಸ್ವಾಮಿ ಕಾರ್ತಿಕೇಯನ ಚಿತ್ರವುಳ್ಳ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ. ಬೆಳ್ಳಿಯ ನಾಣ್ಯಗಳ ಮೇಲೆ ಗರುಡನ ಚಿತ್ರಕ್ಕೆ ಬದಲು ನವಿಲಿನ ಚಿತ್ರ ಅಚ್ಚು ಹಾಕಿಸಿದ. ಆದರೆ ಇವನ ರಾಜ್ಯಭಾರದ ಕೊನೆಯ ವರ್ಷಗಳಲ್ಲಿ ರಾಜ್ಯಕ್ಕೆ ಶತ್ರುಬಾಧೆಯಿಂದ ಗಂಡಾಂತರವೊದಗಿತು. ಆ ಶತ್ರುಗಳು ಯಾರೆಂಬುದರ ಬಗ್ಗೆ ವಿವಾದಗಳಿವೆ. ಅವರು ಯಾರೇ ಆಗಿರಲಿ ಅವರಿಂದ ರಾಜ್ಯಕ್ಕೆ ತೀವ್ರ ಹಾನಿಯುಂಟಾಯಿತು. ಆದರೂ ಇಂಥ ಸಂದರ್ಭದಲ್ಲಿ ರಾಜಕುಮಾರ ಸ್ಕಂದಗುಪ್ತ ಶತ್ರುಗಳನ್ನು ಧೈರ್ಯದಿಂದ ಎದುರಿಸಿ ಹಿಮ್ಮೆಟ್ಟಿಸಿದ. ಈತ ಶತ್ರುಗಳನ್ನೋಡಿಸುತ್ತಿದ್ದಾಗಲೇ ಕುಮಾರಗುಪ್ತ ಮರಣ ಹೊಂದಿದ. ಕುಮಾರಗುಪ್ತನ ಅನಂತರ ಸ್ಕಂದಗುಪ್ತ ಪಟ್ಟಕ್ಕೆ ಬಂದ (455-56). ಅನಾಗರಿಕರಾದ ಹೂಣರೊಡನೆ ಸೆಣಸಾಡಬೇಕಾಗಿ ಬಂದದ್ದು ಇವನ ದುರದೃಷ್ಟ. ಬಿಳಿಯ ಹೂಣರು ಅಥವಾ ಎಥಲೈಟ್ಸ್ ಎನಿಸಿದ ಈ ಜನ 5ನೆಯ ಶತಮಾನದ ಮಧ್ಯಭಾಗದಲ್ಲಿ ಆಕ್ಸಸ್‍ಕೊಳ್ಳದಿಂದ ಇಳಿದು ಪರ್ಷಿಯ ಮತ್ತು ಹಿಂದೂಸ್ಥಾನಗಳ ಮೇಲೆ ದಾಳಿ ಮಾಡಿ, ಗಾಂಧಾರವನ್ನು ಆಕ್ರಮಿಸಿದರು. ಅಲ್ಲಿಂದ ಪೂರ್ವಾಭಿಮುಖವಾಗಿ ಮುಂದುವರಿದು ಗುಪ್ತಸಾಮ್ರಾಜ್ಯದ ಮೇಲೆರಗಿದರು. ಸ್ಕಂದಗುಪ್ತ ಧೈರ್ಯದಿಂದ ಶತ್ರುಗಳನ್ನು ಸದೆಬಡಿದು ರಾಜ್ಯ ರಕ್ಷಿಸಿದ. ಈತನ ಆಳ್ವಿಕೆಯ ಕಾಲ ಗುಪ್ತರ ಇತಿಹಾಸದಲ್ಲಿ ಒಂದು ಪ್ರಮುಖ ಮಜಲು. ಇವನ ರಾಜ್ಯ ಅರಬ್ಬೀಸಮುದ್ರದಿಂದ ಬಂಗಾಳಕೊಲ್ಲಿಯ ವರೆಗಿನ ಇಡಿಯ ಉತ್ತರಾ ಪಥವನ್ನೊಳಗೊಂಡಿತ್ತು. ಮೊದಲನೆಯ ಚಂದ್ರಗುಪ್ತ ರಾಜ್ಯವಾಳತೊಡಗಿದಂದಿನಿಂದ 150 ವರ್ಷಗಳಿಗೂ ಹೆಚ್ಚಿನ ಕಾಲ ಗುಪ್ತರು ಭಾರತವನ್ನು ಭದ್ರವಾಗಿ ಕಾಪಾಡಿಕೊಂಡರು. ಸ್ಕಂದಗುಪ್ತನ ತರುವಾಯ ಆಳಿದ ಗುಪ್ತವಂಶದ ಅರಸರ ವಿಷಯ ನಮಗೆ ವಿಶೇಷವಾಗಿ ತಿಳಿದಿಲ್ಲ. ಸ್ಕಂದಗುಪ್ತನ ಬಳಿಕ ಅವನ ಮಲಸಹೋದರ ಅನಂತಾದೇವಿ ಮಗನಾದ ಪುರುಗುಪ್ತ ಕೆಲಕಾಲ ರಾಜ್ಯವಾಳಿದ.
- ಕ್ರಿ. ಶ. 472ರಲ್ಲಿ ಪಟ್ಟಕ್ಕೆ ಬಂದ ಬುಧಗುಪ್ತ ಇಪ್ಪತ್ತು ವರ್ಷಗಳ ಕಾಲ ರಾಜ್ಯವಾಳಿದ. ಹೊರನೋಟಕ್ಕೆ ಸುಭದ್ರವಾಗಿದ್ದಂತೆ ಕಂಡು ಬಂದರೂ ಸಾಮ್ರಾಜ್ಯದಲ್ಲಿ ಒಳಗಿಂದೊಳಗೇ ಬಿರುಕುಗಳುಂಟಾಗಿದ್ದುವು. ಗುಜರಾತಿ ಕಾಠೇವಾಡದಲ್ಲಿ ವಲ್ಲಭೀನಗರವನ್ನು ರಾಜಧಾನಿಯಾಗಿ ಹೊಂದಿದ್ದ ಮೈತ್ರಕ ವಂಶದ ಅರಸರು, ಬುಂದೇಲಖಂಡದ ಬಳಿ ಪರಿವ್ರಾಜಕ ವಂಶದ ಹಸ್ತಿನ್ ಎಂಬಾತ, ಸಮೀಪದಲ್ಲಿ ಪಾಂಡುವಂಶದ ಉದಯನ, ಮಾಹಿಪತಿಯ ಮಹಾರಾಜ ಸುಬಂಧು ಇವರೆಲ್ಲ ಸ್ವತಂತ್ರ ರಾಜ್ಯಗಳನ್ನು ಸ್ಥಾಪಿಸುವ ಹವಣಿಕೆಯಲ್ಲಿದ್ದರು. ಅರಸರಲ್ಲಿಯ ಪರಸ್ಪರ ವೈಷಮ್ಯಗಳಲ್ಲದೆ ಮತ್ತೊಮ್ಮೆ ಪರಕೀಯರ ದಾಳಿಗೆ ಈ ಸಾಮ್ರಾಜ್ಯ ತುತ್ತಾಯಿತು. ಇದು ಗುಪ್ತರಾಜ್ಯದ ಅವನತಿಗೆ ಒಂದು ಕಾರಣ. ವಾಕಾಟಕ ವಂಶದ ನರೇಂದ್ರ ಸೇನನೆಂಬವ ಕೋಸಲ ಮತ್ತು ಮಾಳವ ದೇಶಗಳನ್ನು ಈ ವೇಳೆಗೆ ತನ್ನ ಅಧೀನದೊಳಗೆ ತಂದುಕೊಂಡಿದ್ದ. ಇವು ಗುಪ್ತಸಾಮ್ರಾಜ್ಯದ ಭಾಗಗಳಾಗಿದ್ದು ಬಹುಶಃ ನರೇಂದ್ರಸೇನ ಇವನ್ನು ಬಲಪ್ರಯೋಗ ಮಾಡಿಯೇ ಪಡೆದಿರಬೇಕು.
- ಬುಧಗುಪ್ತನ ಅನಂತರ ಅವನ ಸಹೋದರ ನರಸಿಂಹಗುಪ್ತನೂ ಅವನ ತರುವಾಯ ಅವನ ಮಗ ಮುಮ್ಮಡಿ ಕುಮಾರಗುಪ್ತ (ವಿಕ್ರಮಾದಿತ್ಯ) ಮತ್ತು ಮೊಮ್ಮಗ ವಿಷ್ಣುಗುಪ್ತನೂ (ಚಂದ್ರಾದಿತ್ಯ) ಕ್ರಮವಾಗಿ 500ರಿಂದ 570ರ ತನಕ ಆಳಿದರು. ಆದರೆ 507ನೆಯ ವರ್ಷದ ಒಂದು ಶಾಸನದಲ್ಲಿ ವೈನ್ಯಗುಪ್ತನೆಂಬ ಅರಸನೂ 510ನೆಯ ವರ್ಷದ ಶಾಸನದಲ್ಲಿ ಭಾನುಗುಪ್ತನೆಂಬ ಇನ್ನೊಬ್ಬ ಅರಸನೂ ಹೆಸರಿಸಲ್ಪಟ್ಟಿದ್ದಾರೆ. ಇವರಿಬ್ಬರ ನಡುವಣ ಸಂಬಂಧವಾಗಲೀ ಇವರ ಮತ್ತು ನರಸಿಂಹಗುಪ್ತನ ನಡುವಣ ಸಂಬಂಧವಾಗಲೀ ತಿಳಿಯದು. ಬಹುಶಃ ಬುಧಗುಪ್ತನ ಅನಂತರ ಗುಪ್ತಮನೆತನದಲ್ಲಿ ಅಂತಃಕಲಹಗಳೇರ್ಪಟ್ಟು ಈ ಮೂವರೂ ತಾವು ಅಧಿಕಾರದಲ್ಲಿದ್ದ ಪ್ರದೇಶಗಳಲ್ಲಿಯೇ ಸ್ವತಂತ್ರವಾಗಿ ಕೆಲಕಾಲ ಆಳಿದಂತೆ ತೋರುತ್ತದೆ. ಇವರಲ್ಲಿ ಭಾನುಗುಪ್ತ ತನ್ನ ಸಾಮಂತ ಗೋಪರಾಜನೊಡಗೂಡಿ ಏರನ್‍ದಲ್ಲಿ ನಡೆದ ಕದನದಲ್ಲಿ ಹೋರಾಡಿದನೆಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಬಹುಶಃ ಇವರಿಬ್ಬರೂ ಆಗ ದಾಳಿಮಾಡಿದ್ದ ಹೂಣರ ನಾಯಕ ತೋರಮಾನನೊಡನೆ ಹೋರಾಡಿರಬೇಕು. ಬಾಲಾದಿತ್ಯನೆಂಬ ಬಿರುದನ್ನು ಪಡೆದಿದ್ದ ನರಸಿಂಹಗುಪ್ತ ಸಹ ಹೂಣವಂಶದಲ್ಲಿ ಮಿಹಿರಗುಲನೊಡನೆ ಕಾದಿ ಮೊದಲು ಪರಾಜಿತನಾದರೂ ಅನಂತರ ಅವನನ್ನು ಪರಾಭವಗೊಳಿಸಿದ. ನರಸಿಂಹಗುಪ್ತನೇ ಗುಪ್ತವಂಶದ ಕೊನೆಯ ಅರಸ. ಅನಂತರ ಇವನ ಮಗ ಮುಮ್ಮಡಿ ಕುಮಾರಗುಪ್ತನೂ ಮೊಮ್ಮಗನಾದ ವಿಷ್ಣುಗುಪ್ತನೂ 535-570ರ ತನಕ ಕ್ರಮವಾಗಿ ಆಳಿದರು. ಈ ವೇಳೆಗಾಗಲೇ ಹೂಣರ ಧಾಳಿಯಿಂದಲೂ ಪರಸ್ಪರ ಅಂತಃಕಲಹಗಳಿಂದಲೂ ಜರ್ಜರಿತವಾಗಿದ್ದ ಗುಪ್ತಸಾಮ್ರಾಜ್ಯ ಸುಮಾರು 570ರ ವೇಳೆಗೆ ಅಸ್ತಂಗತವಾಯಿತು.
- ಗುಪ್ತರ ಅನಂತರದ ಭಾರತ ಹೂಣರು : ಆರನೆಯ ಶತಮಾನದ ಆರಂಭದ ವೇಳೆಗೆ (580) ಹೂಣರ ನಾಯಕ ತೋರಮಾನ ಪಶ್ಚಿಮ ಭಾರತದ ಅನೇಕ ಪ್ರದೇಶದ ಸಾಗರ ಜಿಲ್ಲೆಯ ಏರನ್ ಮುಂತಾದ ಭಾಗಗಳನ್ನೂ ಆಕ್ರಮಿಸಿದ. ಉತ್ತರ ಪ್ರದೇಶ, ರಾಜಪುಟಾನ, ಪಂಜಾಬ್ ಹಾಗೂ ಕಾಶ್ಮೀರದ ಕೆಲವು ಭಾಗಗಳನ್ನಾದರೂ ಒಳಗೊಂಡ ರಾಜ್ಯವನ್ನು ಈತ ಆಳುತ್ತಿದ್ದನೆಂದು ಊಹಿಸಬಹುದು. ತೋರಮಾನನ ಮಗ ಮಿಹಿರಗುಲ ಸುಮಾರು 515ರಲ್ಲಿ ತನ್ನ ತಂದೆಯ ರಾಜ್ಯಕ್ಕೆ ಉತ್ತರಾಧಿಕಾರಿಯಾಗಿ ಬಂದ. ಸಾಕಲ ಅಥವಾ ಈಗಿನ ಸಿಯಾಲ್‍ಕೋಟ್ ಇವನ ರಾಜಧಾನಿ. ಈತ ಕ್ರೂರಿ ಮತ್ತು ಛಲವಾದಿ. ಪ್ರಜೆಗಳನ್ನು ಬಹಳವಾಗಿ ಹಿಂಸಿಸಿದನೆಂದು ಚೀನೀ ಯಾತ್ರಿಕ ಹ್ಯೂಯೆನ್‍ತ್ಸಾಂಗ್ ಹೇಳಿದ್ದಾನೆ. ಮಿಹಿರಗುಲ ಉತ್ತರಭಾರತದ ಅನೇಕ ಭಾಗಗಳನ್ನು ತನ್ನ ಅಧೀನಪಡಿಸಿಕೊಂಡಿದ್ದನೆಂದು ತಿಳಿದುಬರುತ್ತದೆ. ಗ್ವಾಲಿಯರ್ ಪ್ರದೇಶದ ಪೂರ್ವಕ್ಕೂ ಇವನ ರಾಜ್ಯ ಹಬ್ಬಿತ್ತೆಂದು ಊಹಿಸಲಾಗಿದೆ. ಆದರೂ ಈ ಯಶಸ್ಸು ಬಹಳ ಕಾಲ ಉಳಿಯಲಿಲ್ಲ. ಗುಪ್ತವಂಶದ ನರಸಿಂಹಗುಪ್ತ ಬಾಲಾದಿತ್ಯ ಮತ್ತು ಮಾಲವ ದೇಶದ ರಾಜನಾಗಿದ್ದ ಯಶೋಧರ್ಮ ಇವರಿಬ್ಬರೂ ಮಿಹಿರಗುಲನನ್ನು ಕೊನೆಗೂ ಸೋಲಿಸಿದರೆಂದು ತಿಳಿದಿದೆ. ಈ ಸೋಲಿನ ಪರಿಣಾಮವಾಗಿ ಹೂಣರು ತಮ್ಮ ಎಲ್ಲ ಪ್ರಾಬಲ್ಯವನ್ನೂ ಕಳೆದುಕೊಂಡರು. 563-67ರ ನಡುವೆ ಪರ್ಷಿಯನರೂ ತುರ್ಕರೂ ಆಕ್ಸಸ್‍ಕೊಳ್ಳದಲ್ಲಿದ್ದ ಹೂಣರನ್ನು ಸೋಲಿಸಿ ಸದೆಬಡೆದದ್ದು ಹೂಣರ ಅವನತಿಗೆ ಪ್ರಮುಖ ಕಾರಣ. ಮಿಹಿರಗುಲ ಬೌದ್ಧಮತ ದ್ವೇಷಿಯಾಗಿದ್ದ. ಹೀಗಾಗಿ ಬೌದ್ಧ ಮತಾನುಯಾಯಿಗಳು ಇವನ ಕೋಪಕ್ಕೆ ಪಾತ್ರರಾದರು.
- ಬುಧಗುಪ್ತನ ಅನಂತರ ಗುಪ್ತಸಾಮ್ರಾಜ್ಯದ ಭಾಗಗಳಾಗಿದ್ದು ಸ್ವಾತಂತ್ರ್ಯ ಘೋಷಣೆ ಮಾಡಿದ ಪ್ರಾಂತ್ಯಗಳಲ್ಲಿ ಮಾಳವ ಸಹ ಒಂದು. ಆರನೆಯ ಶತಮಾನದ ಆರಂಭದ ವೇಳೆಗೆ ಈ ಪ್ರಾಂತ್ಯ ಔಲಿಕರ ವಂಶಕ್ಕೆ ಸೇರಿದ ಯಶೋಧರ್ಮನ ಆಳ್ವಿಕೆಗೊಳಪಟ್ಟಿತ್ತು. ಗುಪ್ತರಿಗೇ ಆಗಲಿ ಹೂಣರಿಗೇ ಆಗಲಿ ಶರಣಾಗದ ರಾಜ್ಯಗಳು ಇವನ ಸ್ವಾಧೀನವಾದುವೆಂದು ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದ ಮಹೇಂದ್ರ ಪರ್ವತದ (ಈಗಿನ ಒರಿಸ್ಸ ರಾಜ್ಯದ ಗಂಜಾಮ್ ಜಿಲ್ಲೆಯ ಪ್ರದೇಶ) ವರೆಗೂ ಪೂರ್ವದಲ್ಲಿ ಬ್ರಹ್ಮಪುತ್ರಾ ನದಿಯಿಂದ ಪಶ್ಚಿಮದ ಸಮುದ್ರದ ವರೆಗೂ ಈತನ ರಾಜ್ಯ ವಿಸ್ತರಿಸಿತ್ತೆಂಬ ಹೇಳಿಕೆ ಉತ್ಪ್ರೇಕ್ಷೆಯಾದರೂ ಇವನು ಮಿಹಿರಗುಲನನ್ನು ಸೋಲಿಸಿ ಮಾಲವ ದೇಶವನ್ನು ಹೂಣರ ಆಧಿಪತ್ಯದಿಂದ ಮುಕ್ತ ಮಾಡಿದನೆಂಬುದು ಮಾತ್ರ ನಿಜ. ಈ ವಿಜಯವೇ ಇವನ ಖ್ಯಾತಿಗೆ ಕಾರಣವಾಯಿತು. ಈತ ಸುಮಾರು 530ರಿಂದ 540ರ ತನಕ ಆಳಿದ.
- ಮೌಖರಿಗಳು : ಇದು ಒಂದು ಕುಲದ ಹೆಸರು. ಕ್ರಿ. ಶ. 3-4ನೆಯ ಶತಮಾನಗಳಲ್ಲಿ ಈ ಕುಲದ ಕೆಲವರು ರಾಜಪುಟಾನದ ಭಾಗಗಳಲ್ಲಿ ಆಳುತ್ತಿದ್ದರು. ಗಯಾ ಜಿಲ್ಲೆಯ ಬರಾಬರ ಗುಡ್ಡಗಳಲ್ಲಿ ದೊರೆತ ಶಾಸನಗಳಿಂದ ಗುಪ್ತವಂಶದ ಅರಸರ ಮಾಂಡಲಿಕರಾಗಿದ್ದವರು ಈ ಕುಲದ ಯಜ್ಞವರ್ಮ ; ಮಗ ಶಾರ್ದೂಲವರ್ಮ ಮತ್ತು ಆತನ ಮಗ ಅನಂತವರ್ಮರ ಹೆಸರುಗಳು ಲಭ್ಯವಾಗಿವೆ. ಇವರು ಗಯಾ ಜಿಲ್ಲೆಯ ಸುತ್ತಲಿನ ಭಾಗಗಳಲ್ಲಿ ಅಧಿಕಾರದಲ್ಲಿದ್ದರು. ಇದೇ ಕುಲದ ಇನ್ನೊಂದು ಮನೆತನದ ಆರು ಜನ ಅರಸರು ಈಗಿನ ಉತ್ತರ ಪ್ರದೇಶದಲ್ಲಿ ಆಳಿದರೆಂದು ತಿಳಿದಿದೆ. ಇವರಲ್ಲಿ ನಾಲ್ಕನೆಯವನಾದ ಈಶಾನವರ್ಮ ಗುಪ್ತರ ಪ್ರಾಬಲ್ಯ ಕ್ಷೀಣಿಸಿದಾಗ ಸ್ವತಂತ್ರನಾಗಿ ಆಂಧ್ರರನ್ನೂ ಗೌಡರನ್ನೂ ಸೋಲಿಸಿದ. ಗುಪ್ತ ಸಾಮ್ರಾಜ್ಯದ ಅವನತಿಯ ಕಾಲದಲ್ಲಿ ಪ್ರಾಬಲ್ಯ ಬೆಳಸಿಕೊಂಡ ಗುಪ್ತವಂಶಕ್ಕೆ ಸೇರಿದ ಇನ್ನೊಂದು ಬಳ್ಳಿಯ ಅರಸರು ಗುಪ್ತರು ಅಥವಾ ಮಗಧದ ಗುಪ್ತರು ಎಂದು ಕರೆಯಲ್ಪಟ್ಟಿದ್ದಾರೆ. ಈ ಮನೆತನದ ಕುಮಾರಗುಪ್ತ ಮತ್ತು ದಾಮೋದರ ಗುಪ್ತರು ಈಶಾನವರ್ಮ ಮೌಖರಿಯನ್ನು ಸೋಲಿಸಿದರೆಂದು ತಿಳಿದುಬಂದಿದೆ. ದಾಮೋದರಗುಪ್ತನ ಮಗ ಮಹಾಸೇನಗುಪ್ತ ಬ್ರಹ್ಮಪುತ್ರಾ ನದಿಯವರೆಗೂ ತನ್ನ ಸೈನ್ಯವನ್ನೊಯ್ದು ಕಾಮರೂಪ (ಅಸ್ಸಾಮ್) ದೇಶದ ಅರಸ ಸುಸ್ಥಿತವರ್ಮನನ್ನು ಸೋಲಿಸಿ ತನ್ನ ರಾಜ್ಯವನ್ನು ಮಾಲವದಿಂದ ಕಾಮರೂಪದ ವರೆಗೆ ವಿಸ್ತರಿಸಿದನಾದರೂ ಅವರ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ವಲಭೀ ದೇಶದ ಮೊದಲನೆಯ ಶೀಲಾದಿತ್ಯನೂ ಕಲಚುರಿವಂಶದ ಶಂಕರಗಣನೂ ಇವನನ್ನು ಸೋಲಿಸಿ ಮಾಲವ, ಉಜ್ಜಯಿನಿ ಮುಂತಾದ ಪ್ರದೇಶಗಳನ್ನು ಕಸಿದುಕೊಂಡರು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡ, ಮಹಾಸೇನಗುಪ್ತನ ಸಾಮಂತನಾಗಿದ್ದ ಶಶಾಂಕ ಗೌಡದೇಶವನ್ನು ಆಕ್ರಮಿಸಿ ಸ್ವಾತಂತ್ರ್ಯ ಘೋಷಣೆ ಮಾಡಿದ. ಇವನ ಇಬ್ಬರು ಮಕ್ಕಳಾದ ಕುಮಾರಗುಪ್ತ ಮತ್ತು ಮಾಧವ ಗುಪ್ತರು ಸ್ಥಾಣೇಶ್ವರದ ಪ್ರಭಾಕರವರ್ಧನನ ಆಸರೆಪಡೆದರು.
- ವಂಗ-ಗೌಡ : ಪೂರ್ವ ಮತ್ತು ದಕ್ಷಿಣ ಬಂಗಾಲಗಳು ಕೂಡಿದಂತಿರುವ ಪ್ರದೇಶದಲ್ಲಿ ಗುಪ್ತರ ತರುವಾಯ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದರಾಜ್ಯವನ್ನು ವಂಗ ಎಂದು ಕರೆಯಲಾಗಿದೆ. ಪೂರ್ವ ಬಂಗಾಲಕ್ಕೆ ಸಮತಟ ಎಂಬ ಹೆಸರೂ ಇತ್ತು. ಈ ರಾಜ್ಯದ ಗೋಪಚಂದ್ರ, ಧರ್ಮಾದಿತ್ಯ ಮತ್ತು ಸಮಾಚಾರದೇವ ಅರಸರ ಹೆಸರುಗಳು ತಾಮ್ರ ಶಾಸನಗಳಿಂದ ತಿಳಿದಿವೆ. ಮಹಾರಾಜಾಧಿರಾಜ ಬಿರುದಾಂಕಿತರಾದ ಇವರಲ್ಲಿ ಗೋಪಚಂದ್ರ 507ರಲ್ಲಿ ವೈನ್ಯಗುಪ್ತನ ತರುವಾಯ ವಂಗದೇಶದಲ್ಲಿ ಸ್ವತಂತ್ರವಾಗಿ ಆಳತೊಡಗಿದ. ಹದಿನೆಂಟು ವರ್ಷಗಳ ಇವನ ಆಳ್ವಿಕೆಯ ಅನಂತರ ಧರ್ಮಾದಿತ್ಯ ಮತ್ತು ಸಮಾಚಾರದೇವರು ಅಧಿಕಾರಕ್ಕೆ ಬಂದರು. ಆದರೆ ಇವರ ವಿಷಯ ಹೆಚ್ಚಿಗೆ ತಿಳಿದಿಲ್ಲ. ಉತ್ತರ ಮತ್ತು ಪಶ್ಚಿಮ ಬಂಗಾಲದ ಭಾಗಗಳು ಸೇರಿದಂಥ ಗೌಡ ಎಂಬ ಭಾಗ ಮಗಧದ ಗುಪ್ತರ ಅಧೀನದಲ್ಲಿ ಮಹಾಸೇನ ಗುಪ್ತನ ಆಳ್ವಿಕೆಯವರೆವಿಗೂ ಇದ್ದಿತು. ಅವನ ಕಾಲದಲ್ಲಿ ರಾಜಕೀಯ ಅಭದ್ರತೆ ಉಂಟಾದುದರ ಪರಿಣಾಮವಾಗಿ ಗೌಡದೇಶದಲ್ಲಿ ಶಶಾಂಕ ಆಳತೊಡಗಿದ. ಈತ ಬಹುಶಃ ಮಹಾಸೇನಗುಪ್ತನ ಅಧೀನದಲ್ಲಿದ್ದ ಸಾಮಂತರಲ್ಲೊಬ್ಬನಾಗಿದ್ದ. ದಂಡಭುಕ್ತ, ಉತ್ಕಲ ಮತ್ತು ಕೊಂಗೋಡ ಪ್ರದೇಶದಲ್ಲಿ (ಅಂದರೆ ಈಗಿನ ಮಿಡ್ನಾಪುರ ಉತ್ತರ ಮತ್ತು ದಕ್ಷಿಣ ಒರಿಸ್ಸಗಳನ್ನೊಳಗೊಂಡಿದ್ದ ಪ್ರದೇಶ) ಆಳುತ್ತಿದ್ದ ಮಾಂಡಲೀಕರು ಶಶಾಂಕನ ಅಧೀನರಾಗಿದ್ದರು. ಗೌಡದೇಶವನ್ನು ಮಗಧದ ಗುಪ್ತರಿಂದ ಕಸಿದುಕೊಂಡು ಶಶಾಂಕ ಮಹೇಂದ್ರಗಿರಿಯನ್ನೊಳಗೊಂಡ ಈಗಿನ ಗಂಜಾಮ್ ಜಿಲ್ಲೆಯವರೆಗಿನ ವಿಸ್ತಾರ ಪ್ರದೇಶದವರೆಗೂ ತನ್ನ ರಾಜ್ಯ ವಿಸ್ತರಿಸಿದ. ಬಹುಶಃ ವಂಗದೇಶಕೂಡ ಇವನ ಸ್ವಾಧೀನಕ್ಕೆ ಬಂದಿರಬೇಕು. ಮೌಖರಿಗಳ ಮತ್ತು ಪುಷ್ಪಭೂತಿಗಳ ವಿರುದ್ಧ ನಡೆಸಿದ ಧಾಳಿಯಲ್ಲಿ ಮೌಖರಿಯ ಗ್ರಹವರ್ಮನನ್ನು ಯುದ್ಧದಲ್ಲಿ ಸೋಲಿಸಿ ಕೊಂದ. ಆತನ ಪತ್ನಿ ರಾಜ್ಯಶ್ರೀಯಳನ್ನು ಸೆರೆಹಿಡಿಯಲಾಯಿತು. ಆಕೆಯ ಸೋದರ ಪ್ರಭಾಕರವರ್ಧನನ ಮಗ ಸ್ಥಾಣೇಶ್ವರದ ರಾಜ್ಯವರ್ಧನ ಯುದ್ಧಸನ್ನದ್ಧನಾಗಿ ಸಹಾಯಕ್ಕೆಂದು ಧಾವಿಸಿ ಬಂದ. ಆದರೆ ಶಶಾಂಕ ಯುದ್ಧದಲ್ಲಿ ಅವನನ್ನು ಕೊಂದ. ರಾಜ್ಯವರ್ಧನನ ತಮ್ಮ ಹರ್ಷವರ್ಧನ ಶಶಾಂಕನನ್ನು ಅಟ್ಟಿಸಿಕೊಂಡು ಉತ್ತರ ಬಂಗಾಲದವರೆಗೂ ಹೋದನೆಂದು ಮಂಜುಶ್ರೀ ಮೂಲಕಲ್ಪ ಎಂಬ ಬೌದ್ಧಗ್ರಂಥದಿಂದ ತಿಳಿದಿದೆ. ಆದರೆ ಈತ ಬಹುಶಃ 637-38ರ ತನಕವೂ ಮಗಧಾಧಿಪತಿಯಾಗಿ ಜೀವಿಸಿದ್ದ.
- ವಲಭಿಯ ಮೈತ್ರಕರು : ಗುಪ್ತಸಾಮ್ರಾಜ್ಯದ ಅನಂತರದ ಅರಸುಮನೆತನಗಳಲ್ಲಿ ಹೆಚ್ಚು ಕಾಲ ಆಳಿದ ಮನೆತನವಿದು. ಈ ಮನೆತನದ ಮೊದಲಿಗ ಸೇನಾಪತಿ ಭಟಾರ್ಕ. ಈತ ಗುಪ್ತರ ಅಧೀನದಲ್ಲಿ ಕಾಠೇವಾಡದ ಪ್ರಾಂತ್ಯಾಧಿಕಾರಿಯಾಗಿದ್ದ. ಇವನು ಮತ್ತು ಇವನ ಮಗ ಧರಸೇನ ಇವರಿಬ್ಬರೂ ಸೇನಾಪತಿಗಳೆಂದೇ ಕರೆಯಲ್ಪಟ್ಟಿದ್ದಾರೆ. ಭಟಾರ್ಕನ ಕಾಲ 465-75 ಎಂದು ಊಹಿಸಬಹುದು. ನಾಲ್ಕು ತಲೆಮಾರುಗಳ ಬಳಿಕ ಅಧಿಕಾರಕ್ಕೆ ಬಂದ ಗುಹಸೇನ ತನ್ನ ಶಾಸನಗಳಲ್ಲಿ ಮಾಂಡಲಿಕತ್ವವನ್ನು ಸೂಚಿಸುವ ಪದಗಳನ್ನು ಉಪಯೋಗಿಸಿಲ್ಲ. ಆದ್ದರಿಂದ ಈತನೂ ಅನಂತರದ ಇತರರೂ ಗುಪ್ತರ ಅಧೀನವನ್ನು ಸೂಚಿಸದೆ ಸ್ವತಂತ್ರ ಅರಸರೆಂದು ಘೋಷಿಸಿಕೊಂಡರೆಂದು ಹೇಳಬಹುದು. ಇವರ ಮೊಮ್ಮಗ ಮೊದಲನೆಯ ಶೀಲಾದಿತ್ಯನ ಕಾಲದ ಅನಂತರದ ಶಾಸನಗಳಲ್ಲಿ ಇವರ ವಂಶಾವಳಿಯನ್ನು ಗುರುಸೇನನಿಂದ ಆರಂಭಿಸಿ ಹೇಳಲಾಗಿದೆ. ಇವನ ತಂದೆ ಇಮ್ಮಡಿ ಧರಸೇನನನ್ನು ಶಾಸನದಲ್ಲಿ ಮಹಾರಾಜನೆಂದು ಕರೆದಿದೆ. ಇವನ ಕಾಲದಲ್ಲಿ ಮೈತ್ರಕರು ತಮ್ಮ ರಾಜ್ಯ ವಿಸ್ತರಿಸಿಕೊಂಡರು.
- ವಾಕಾಟಕರು : ಮಧ್ಯಭಾರತದಲ್ಲಿ ಗುಪ್ತವಂಶದ ಅರಸರ ಸಮಕಾಲೀನರಾಗಿ ಸುಮಾರು ಎರಡು ಶತಮಾನಗಳ ಕಾಲ ಈ ಮನೆತನದ ಅರಸರು ಆಳಿದರು. ಈ ವಂಶದ ಮೂಲಪುರುಷ ವಿಂಧ್ಯಶಕ್ತಿ. ಇವನ ಮಗ ಮೊದಲನೆಯ ಪ್ರವರಸೇನ. ಈತ ಅನೇಕ ಯಜ್ಞಗಳನ್ನೂ ನಾಲ್ಕು ಬಾರಿ ಅಶ್ವಮೇಧಯಾಗವನ್ನೂ ಮಾಡಿದನೆಂದು ಹೇಳಿದೆ. ಈತನ ವಿಸ್ತಾರವಾದ ರಾಜ್ಯದ ಪ್ರಾಂತ್ಯಗಳಿಗೆ ಇವನ ಮಕ್ಕಳು ಪ್ರಾಂತ್ಯಾಧಿಪತಿಗಳಾಗಿ ನೇಮಕಗೊಂಡಿದ್ದು ಇವನ ಮರಣಾನಂತರ ಆ ಯುವರಾಜರು ಆಯ ಪ್ರಾಂತ್ಯಗಳಲ್ಲಿ ಸ್ವತಂತ್ರವಾಗಿ ಆಳತೊಡಗಿದರು. ಈತನ ಅನಂತರ ವಾಕಾಟಕ ವಂಶದ ಎರಡು ಶಾಖೆಗಳು ಬೇರೆ ಬೇರೆ ಕಡೆಗಳಲ್ಲಿ ಆಳುತ್ತಿದ್ದುದು ಕಂಡು ಬಂದಿದೆ.
- ರುದ್ರಸೇನ ಮೂಲ ವಂಶಕ್ಕೆ ಸೇರಿದವ. ಈತನ ತಾಯಿ ಭಾರಶಿವನಾಗ ಎಂಬ ವಂಶಕ್ಕೆ ಸೇರಿದ ಭವನಾಗನೆಂಬ ಅರಸನ ಮಗಳು ; ಗೌತಮೀ ಪುತ್ರನ ಪತ್ನಿ. ರುದ್ರಸೇನನ ಮೊಮ್ಮಗನೂ ಪೃಥ್ವಿಸೇನನ ಮಗನೂ ಆದ ಇಮ್ಮಡಿ ರುದ್ರಸೇನ (390-400) ಗುಪ್ತವಂಶದ ಇಮ್ಮಡಿ ಚಂದ್ರಗುಪ್ತನ ಮಗಳು ಪ್ರಭಾವತಿಯನ್ನು ಮದುವೆಯಾದ. ಇದರಿಂದ ವಾಕಾಟಕರು ಗುಪ್ತರ ಅಧೀನದಲ್ಲಿ ಅವರ ಮಿತ್ರರಂತೆ ಆಳಬೇಕಾಯಿತು. ಇಲ್ಲಿಯತನಕವೂ ಶೈವರಾಗಿದ್ದ ಇವರು ಗುಪ್ತರ ಪ್ರಭಾವಕ್ಕೊಳಗಾಗಿ ವಿಷ್ಣು ಭಕ್ತರಾದರು. ರುದ್ರಸೇನನ ಬಳಿಕ ಇವನ ಮೂವರು ಮಕ್ಕಳಾದ ದಿವಾಕರಸೇನ ದಾಮೋದರಸೇನ, ಮತ್ತು ಪ್ರವರಸೇನ ಅಲ್ಪವಯಸ್ಕರಾಗಿದ್ದ ಕಾರಣ ರಾಣಿ ಪ್ರಭಾವತಿ ರಾಜ್ಯಾಡಳಿತದ ಹೊಣೆಯನ್ನು 13 ವರ್ಷಗಳ ಕಾಲ ಹೊತ್ತಳು. ತಂದೆ ಚಂದ್ರಗುಪ್ತ ಇವಳಿಗೆ ಬೆಂಬಲವಾಗಿ ನಿಂತ.
- ಇಮ್ಮಡಿ ಪ್ರವರಸೇನನ ಶಾಸನಗಳು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಂದವಾರಾ ಸಿವಾಸಿ, ಬೇತುಲ್, ವಾರ್ಧಾ, ನಾಗಪುರ, ಅಮರಾವತಿ ಮುಂತಾದ ಜಿಲ್ಲೆಗಳಲ್ಲಿ ದೊರೆತಿವೆ. ಇವನ ಮಗ ಮಹಾರಾಜ ನರೇಂದ್ರಸೇನ ಕುಂತಲಾಧಿಪನ ಮಗಳು ಅಜ್ಝಿತಭಟ್ಟಾರಿಕಳನ್ನು ಮದುವೆಯಾದ. ಈ ಕುಂತಲಾಧಿಪತಿ ಕರ್ನಾಟಕದಲ್ಲಿ ಆಳಿದ ಕದಂಬವಂಶದ ಅರಸ ಕಾಕುತ್ಸ್ಥವರ್ಮನಾಗಿರಬಹುದೆಂದು ಊಹಿಸಲಾಗಿದೆ. ನರೇಂದ್ರಸೇನನ ಮಗ ಇಮ್ಮಡಿ ಪೃಥ್ವಿಸೇನ ಈ ಮನೆತನದ ಕೊನೆಯ ಅರಸ. ಈತ ಸುಮಾರು ಐದನೆಯ ಶತಮಾನದ ಮಧ್ಯಭಾಗದಲ್ಲಿ ಆಳಿದ. ಇವನ ಅನಂತರದ ವಾಕಾಟಕರ ಇತಿಹಾಸ ಲಭ್ಯವಿಲ್ಲ.
- ಕಲಚುರಿಗಳು : ಸುಮಾರು 5ನೆಯ ಶತಮಾನದ ಅಂತ್ಯಭಾಗದಲ್ಲಿ ಅಸ್ತಿತ್ವಕ್ಕೆ ಬಂದ ಈ ಮನೆತನ ಆರನೆಯ ಶತಮಾನದ ಮಧ್ಯಭಾಗದತನಕವೂ ಪ್ರಾಬಲ್ಯಕ್ಕೆ ಬಂದಿರಲಿಲ್ಲ. ಈ ವೇಳೆಗೆ ಇವರು ಉತ್ತರ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳನ್ನು ಆಳುತ್ತಿದ್ದರು. ಸುಮಾರು 601ರಲ್ಲಿ ಬಾದಾಮಿ ಚಾಲುಕ್ಯರ ಮಂಗಲೇಶ ಕಲಚುರಿ ಬುದ್ಧರಾಜನನ್ನು ಯುದ್ಧದಲ್ಲಿ ಸೋಲಿಸಿದ. ಇದೇ ಸಮಯದಲ್ಲಿ ಗುಜರಾತಿನಲ್ಲಿ ಗೂರ್ಜರರು, ಮಾಲವದಲ್ಲಿ ಮೈತ್ರಕರು ಇವರ ಶತ್ರುಗಳಾಗಿದ್ದು ತೊಂದರೆ ಕೊಡುತ್ತಿದ್ದ ಕಾರಣ ಇವರು ಪೂರ್ವಾಭಿಮುಖವಾಗಿ ಸರಿದು ಕೊನೆಗೆ ಈಗಿನ ಮಧ್ಯಪ್ರದೇಶದ ಜಬ್ಬಲಪುರ ಜಿಲ್ಲೆಯ ಸುತ್ತಲಿನ ಪ್ರದೇಶಗಳಲ್ಲಿ ನೆಲಸಿ ರಾಜ್ಯವನ್ನು ಬಲಪಡಿಸಿ ವಿಸ್ತರಿಸಿಕೊಂಡರು. ಬುದ್ಧರಾಜನ ತಂದೆ ಶಂಕರಗಣ, ಇವನ ಕಾಲದಲ್ಲಿ ಮಾಲವ, ಗುಜರಾತ್ ಪ್ರದೇಶಗಳು ಇವರ ಅಧೀನದಲ್ಲಿದ್ದುವು. ಸುಮಾರು 595ರ ವೇಳೆಗೆ ಬುದ್ಧರಾಜ ಅಧಿಕಾರಕ್ಕೆ ಬಂದ. ಈತ ವಿದಿಷಾವನ್ನು ರಾಜಧಾನಿಯಾಗಿ ಒಳಗೊಂಡಿದ್ದ ಪೂರ್ವ ಮಾಲವ ದೇಶವನ್ನು ಮಗಧದ ದೇವಗುಪ್ತನಿಂದ ಕಸಿದುಕೊಂಡನೆಂದು ತೋರುತ್ತದೆ. ಆದರೆ ಬುದ್ಧರಾಜ ಮಂಗಲೇಶನಿಂದ ಪರಾಜಿತನಾದ. (ನೋಡಿ- ಕಳಚುರಿಗಳು)
- ಇತರ ಅರಸರು : ಮೇಲೆ ಉಲ್ಲೇಖಿಸಿದ ಅರಸುಮನೆತನಗಳಲ್ಲದೆ ಮಧ್ಯಭಾರತದ ಹಾಗೂ ದಕ್ಖನ್ ಪ್ರದೇಶಗಳಲ್ಲಿ ಮಾನಪುರವನ್ನು ರಾಜಧಾನಿಯಾಗಿ ಹೊಂದಿದ್ದ ರಾಷ್ಟ್ರಕೂಟ ಮನೆತನದ ನಾಲ್ಕು ತಲೆಮಾರಿನವರ ಹೆಸರುಗಳು ಲಭ್ಯವಾಗಿವೆ. ಮಾನಾಂಕ, ಆತನ ಮಗ ದೇವರಾಜ ಅನಂತರ ಭವಿಷ್ಯ, ಅವನ ಮಗ ಅಭಿಮನ್ಯು, ಮಾನಪುರ ಎಂಬುದು ಸಾತಾರ ಜಿಲ್ಲೆಯ ಮಾನ್ ಆಗಿರಬಹುದೆಂದು ಹೇಳಲಾಗಿದೆ. ದೇವರಾಜನಿಗೆ ಅವಿಧೇಯ ಎಂಬ ಇನ್ನೊಬ್ಬ ಮಗನಿದ್ದನೆಂದು ಇತ್ತೀಚೆಗೆ ದೊರೆತ ಅವನ ಶಾಸನದಿಂದ ತಿಳಿದು ಬಂದಿದೆ. ಬಾದಾಮಿಯ ಚಾಲುಕ್ಯರು ಅಧಿಕಾರಕ್ಕೆ ಬರುವ ಮೊದಲೇ ರಾಷ್ಟ್ರಕೂಟರು ತಮ್ಮ ಪ್ರಾಬಲ್ಯ ಕಳೆದುಕೊಂಡಿದ್ದರು. ಇದೇ ಮನೆತನದ ಇನ್ನೊಂದು ಶಾಖೆಯ ಅರಸರು ಬೀರಾರ ಸುತ್ತಲಿನ ಪ್ರದೇಶದಲ್ಲಿ ಆಳುತ್ತಿದ್ದರು. ಅಮರಾವತಿ ಜಿಲ್ಲೆಯ ಎಲಿಚಪುರ (ಅಚಲಪುರ) ಇವರ ರಾಜಧಾನಿ. ದುರ್ಗರಾಜ, ಅವನ ಮಗ ಗೋವಿಂದರಾಜ, ಅವನ ಮಗ ಸ್ವಾಮಿಕರಾಜ. ಅನಂತರ ನನ್ನ ರಾಜ ಎಂಬ ನಾಲ್ವರು ಅರಸರು ಪರಿಚಿತರಾಗಿದ್ದಾರೆ. ನನ್ನರಾಜ 690ರಿಂದ 735ರ ತನಕ ಆಳಿದನೆಂದು ಹೇಳಲಾಗಿದೆ. ಆಂಧ್ರಪ್ರದೇಶದಲ್ಲಿ ಆನಂದ, ಶಾಲಂಕಾಯನ, ವಿಷ್ಣುಕುಂಡಿ ಮುಂತಾದ ಸಣ್ಣ ಪುಟ್ಟ ಮನೆತನಗಳಿಗೆ ಸೇರಿದ ಅರಸರು ಅಲ್ಲಲ್ಲಿ ಆಳುತ್ತಿದ್ದರು. ಆದರೆ ಅವರ ವಿಷಯ ನಮಗೆ ಹೆಚ್ಚಾಗಿ ತಿಳಿಯದು.
- ಹರ್ಷವರ್ಧನ : ಪೂರ್ವದ ಸಟ್ಲೆಜ್ ನದಿಯಿಂದಾರಂಭಿಸಿ ಗಂಗಾನದಿಯ ಮೇಲ್ಮುಖದ ವರೆಗೂ ಹಬ್ಬಿದ ಪ್ರದೇಶದಲ್ಲಿ ಆಳುತ್ತಿದ್ದ ವರ್ಧನ ಸಂತತಿಗೆ ಸೇರಿದ ಅರಸ. ಈ ಮನೆತನದ ಮೂಲಪುರುಷ ಪುಷ್ಪಭೂತಿ. ಈತ ಬಹುಶಃ ಸಮುದ್ರಗುಪ್ತನ ಸಮಕಾಲೀನ. ಇವರ ಅನಂತರ ಇವನ ಸಂತತಿಯ ಕೆಲವರು ಆಳಿದರೆಂದೂ ಬಳಿಕ ಪಟ್ಟಕ್ಕೆ ಬಂದ ಪ್ರಭಾಕರವರ್ಧನ ಹೂಣರನ್ನು ಸಿಂಧೂ ಪ್ರದೇಶದ ಅರಸನನ್ನೂ ಗೂರ್ಜರ, ಗಾಂಧಾರ, ಲಾಟ, ಮಾಳವದ ಅರಸರನ್ನೂ ಸೋಲಿಸಿದನೆಂದು ಬಾಣ ತಿಳಿಸಿದ್ದಾನೆ. ವಾಸ್ತವಿಕವಾಗಿ ಹೂಣರ ವಿರುದ್ಧ ದಂಡೆತ್ತಿ ಹೋದವ ರಾಜ್ಯವರ್ಧನ. ಆದರೆ ಆತ ಇನ್ನೂ ಯುವರಾಜನಾಗಿದ್ದ ಕಾರಣ, ಈ ವಿಜಯದ ಕೀರ್ತಿ ಪ್ರಭಾಕರವರ್ಧನನಿಗೆ ಸಲ್ಲುತ್ತದೆ. ಇವರನ್ನು ಸೋಲಿಸಲೆಂದು ರಾಜ್ಯವರ್ಧನ ತಂದೆಯ ಪರವಾಗಿ ಆ ದೇಶಗಳಿಗೆ ದಂಡೆತ್ತಿ ಹೋಗಿದ್ದ ಸಮಯದಲ್ಲಿಯೇ ದುರದೃಷ್ಟವಶಾತ್ ಪ್ರಭಾಕರವರ್ಧನ ಮರಣಹೊಂದಿದ. ಅದೇ ದಿನವೇ ಮಾಲವದೇಶದ ದೊರೆ ದೇವಗುಪ್ತ ಕನೋಜದಲ್ಲಿ ಭಾವ ಗೃಹವರ್ಮನನ್ನು ಕೊಂದು ಆ ರಾಜ್ಯವನ್ನು ಆಕ್ರಮಿಸಿದ. ರಾಜ್ಯವರ್ಧನ ಹಿರಿದಾದ ಸೇನೆಯೊಡನೆ ಮಾಲವ ದೇಶವನ್ನು ಮುತ್ತಿ ಆ ಅರಸನನ್ನು ಸೋಲಿಸಿದ. ಆದರೆ ಗೌಡ ದೇಶದ ಅರಸ ಶಶಾಂಕ ಮೋಸದಿಂದ ರಾಜ್ಯವರ್ಧನನನ್ನು ಕೊಂದ. ಅನಂತರ ಸ್ಥಾಣೇಶ್ವರದಲ್ಲಿ ಹರ್ಷವರ್ಧನ 606ರಲ್ಲಿ ಅಧಿಪತಿಯಾಗಿ ರಾಜ್ಯಶ್ರೀಯ ಸಹಾಯಕ್ಕೆ ಹೋದ. ಆಕೆಯನ್ನು ಹುಡುಕಿದ ಬಳಿಕ ಹರ್ಷವರ್ಧನ ಕನೋಜದ ಮೇಲಿನ ತನ್ನ ಯಾತ್ರೆ ಮುಂದುವರಿಸಿದ. ಕನೋಜ ರಾಜ್ಯ ಹರ್ಷನ ಅಧೀನಕ್ಕೊಳಪಟ್ಟಿತು. ಮುಂದೆ ಕನೋಜನ್ನೇ ರಾಜಧಾನಿಯಾಗಿ ಮಾಡಿಕೊಂಡು ತನ್ನ ದಂಡಯಾತ್ರೆಯನ್ನು ಮುಂದುವರಿಸಿ ಉತ್ತರ ಭಾರತದ ಹಲವಾರು ಅರಸರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದ. ಮಾಲವ, ಗೂರ್ಜರ, ಸಿಂಧು, ಮಗಧ, ಗೌಡ, ಓಡ್ರ ಮತ್ತು ಕೊಂಗೋಡದ ಅರಸರು ಇವನೊಡನೆ ಕಾದಬೇಕಾಯಿತೆಂಬುದು ತಿಳಿದಿದೆ. ಆದರೆ ಶಶಾಂಕ ಜೀವಿಸಿದ್ದ ತನಕವೂ ಹರ್ಷನಿಗೆ ಅವನನ್ನು ಸೋಲಿಸಲಾಗಲಿಲ್ಲ. ಅವನ ಮರಣಾನಂತರವೇ ಮಗಧರಾಜ್ಯ ಇವನ ಕೈವಶವಾಯಿತು. ಅಲ್ಲಿಂದ ಕೊಂಗೋಡದ (ಒರಿಸ್ಸ) ವರೆಗೂ ಇವನ ಸೈನ್ಯ ಮುಂದುವರಿಯಿತು. ಬಂಗಾಲದ ಸಮತಟ, ತಾಮ್ರಲಿಪಿ ಕರ್ಣ, ಸುವರ್ಣ ಮುಂತಾದ ಭಾಗಗಳು ಸಹ ಇವನ ಸ್ವಾಧೀನಕ್ಕೆ ಬಂದುವು. ನೇಪಾಲದ ವರೆಗೂ ದಂಡೆತ್ತಿಹೋಗಿ ಅಲ್ಲಿಯ ಅರಸನನ್ನು ಸೋಲಿಸಿದನೆಂದೂ ಆತ ಹರ್ಷನ ಸಾಮಂತನಾಗಿ ಆಳತೊಡಗಿದನೆಂದೂ ಊಹಿಸಲಾಗಿದೆ. ಹರ್ಷ ಪಾಲ್ಗೊಂಡ ಯುದ್ಧಗಳಲ್ಲೆಲ್ಲ ತೀವ್ರತರವಾದದ್ದು ಕರ್ನಾಟಕದ ಅರಸ ಬಾದಾಮಿಯ ಚಾಲುಕ್ಯವಂಶದ ಇಮ್ಮಡಿ ಪುಲಕೇಶಿಯೊಡನೆ ನಡೆಸಿದ ಕದನ. ಕರ್ನಾಟಕದ ಸಿಂಹದ ಮುಂದೆ ಉತ್ತರಾಪಥದ ಮದಿಸಿದಾನೆಯ ಆಟ ಸಾಗಲಿಲ್ಲ. ಯುದ್ಧದಲ್ಲಿ ಅಸಹಾಯನಾಗಿ ಹತವಾಗಿ ಬೀಳುತ್ತಿದ್ದ ತನ್ನ ಗಜದಳವನ್ನು ಕಂಡು ಭಯದಿಂದ ಉತ್ತರಾಪಥೇಶ್ವರ ಕಂಗೆಟ್ಟ. ಸಕಲೋತ್ತರಾಪಥೇಶ್ವರನೆನಿಸಿಕೊಂಡರೂ ಉತ್ತರ ಹಿಂದೂಸ್ಥಾನವೆಲ್ಲ ಈತನ ಅಧೀನದಲ್ಲಿರಲಿಲ್ಲ. ಮಾಳವ, ಗಾಂಧಾರಗಳು ಹರ್ಷನ ರಾಜ್ಯಕ್ಕೆ ಬರುವ ವೇಳೆಗೆ ಸ್ವತಂತ್ರವಾಗಿದ್ದುವು. ಗೂರ್ಜರರು ಹರ್ಷನಿಂದ ಸೋಲಿಸಲ್ಪಟ್ಟು ವಲಭಿರಾಜನಿಗೆ ಆಶ್ರಯಕೊಟ್ಟು, ಲಾಟರನ್ನು ಗೆದ್ದು ಅನಂತರ ಇಮ್ಮಡಿ ಪುಲಕೇಶಿಯ ಅಧೀನರಾದರು. ಈ ಪ್ರಾಂತ್ಯಗಳನ್ನು ಬಿಟ್ಟು ಉತ್ತರಭಾರತದ ಉಳಿದ ಪ್ರಾಂತ್ಯಗಳು, ಒರಿಸ್ಸದ ಸ್ವಲ್ಪ ಭಾಗ, ಕೊಂಗೋಡ ಈಗಿನ ಗಂಜಾಮ್ ಜಿಲ್ಲೆಯ ಸುತ್ತಲಿನ ಪ್ರದೇಶ ಸಹ ಇವನ ನೇರ ಆಳ್ವಿಕೆಗೆ ಒಳಪಟ್ಟಿತೆನ್ನಬಹುದು. ಇವನನ್ನು ಇತಿಹಾಸಕಾರರು ಉತ್ತರ ಭಾರತದ ಹಿಂದೂ ಸಾಮ್ರಾಜ್ಯದ ಕೊನೆಯ ಸ್ಥಾಪಕನೆಂದಿದ್ದಾರೆ. ಆದರೆ ಇದು ಅಷ್ಟು ಸಮಂಜಸ ಹೇಳಿಕೆಯಲ್ಲ. ಇವನ ರಾಜ್ಯಕ್ಕಿಂತ ಹೆಚ್ಚು ವಿಸ್ತಾರ, ದೃಢ ಮತ್ತು ಪ್ರಬಲವಾದ ಪ್ರತಿಹಾರರ ರಾಜ್ಯದಂಥವು ಉತ್ತರ ಭಾರತದಲ್ಲಿ ಅನಂತರವೂ ಅಸ್ತಿತ್ವಕ್ಕೆ ಬಂದುವು. ಕರ್ನಾಟಕದ ಇಮ್ಮಡಿ ಪುಲಕೀಶಿಯ ಕೈಯಲ್ಲಿ ಸೋಲನ್ನನುಭವಿಸಿದ, ಗೌಡ ಶಶಾಂಕನನ್ನು ಸೋಲಿಸಲಾಗದ ಹರ್ಷ ಅತಿ ಚತುರನಾದ ಸೇನಾನಿಯೂ ಆಗಿರಲಿಲ್ಲ. ಆದರೆ ಅತಿ ಕ್ಲಿಷ್ಟ ಪರಿಸ್ಥಿತಿಯಲ್ಲಿ ಎದೆಗುಂದದೆ ಪಿತ್ರಾರ್ಜಿತ ರಾಜ್ಯ ಕಾಪಾಡಿ, ವಿಸ್ತರಿಸಿ, ಅದನ್ನು ದಕ್ಷರೀತಿಯಲ್ಲಿ ಆಳಿದ ಕೀರ್ತಿ ಅವನಿಗೆ ಸಲ್ಲಬೇಕು. ಹರ್ಷವರ್ಧನ ಹಾಗೂ ಹ್ಯೂಯಾನ್‍ತ್ಸಾಂಗ್ ಇವರ ನಡುವಣ ಪ್ರೀತಿ ಸೌಹಾರ್ದಗಳು ಚೀನದೊಡನೆ ಭಾರತ ಹೆಚ್ಚು ಸಂಪರ್ಕ ಹೊಂದುವುದಕ್ಕೆ ನೆರವಾದುವು.
- ಯಶೋವರ್ಮ : ಹರ್ಷನ ಮರಣದ ಬಳಿಕ ಸುಮಾರು ಅರ್ಧ ಶತಮಾನಕಾಲ ಕನೋಜನಗರದ ಇತಿಹಾಸ ತಿಳಿಯದು. ಎಂಟನೆಯ ಶತಮಾನದ ಆರಂಭದಲ್ಲಿ ಈ ನಗರ ಯಶೋವರ್ಮನ ಸ್ವಾಧೀನದಲ್ಲಿತ್ತು. ಈತ ಗೌಡ ರಾಜನನ್ನು ಸೋಲಿಸಿ ಬಂಗಾಲವನ್ನು ಸಹ ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ದಕ್ಷಿಣದಲ್ಲಿ ಬಾದಾಮಿ ಚಾಲುಕ್ಯರ ಅರಸ ವಿನಯಾದಿತ್ಯನೊಡನೆ ಹೋರಾಡಿದನೆಂದೂ ಪಶ್ಚಿಮದಲ್ಲಿ ಪಾರಸಿಕರನ್ನು ಸೋಲಿಸಿದನೆಂದು ಹೇಳಲಾಗಿದೆ. ಪಾರಸಿಕರು ಆಗ ಸಿಂಧ್ ಪ್ರಾಂತ್ಯವನ್ನು ಆಕ್ರಮಿಸಿದ್ದ ಅರಬ್ಬರಾಗಿದ್ದು ಕನೋಜದ ವಿರುದ್ಧ ಒಂದು ಸೇನೆಯನ್ನು ರವಾನಿಸಬಹುದೆಂದು ತಿಳಿದಿದೆ. ಅರಬರನ್ನು ಸೋಲಿಸುವುದರಲ್ಲಿ ಕಾಶ್ಮೀರದ ಲಲಿತಾದಿತ್ಯ ಯಶೋವರ್ಮನಿಗೆ ನೆರವು ನೀಡಿದ. ಆದರೆ ಇವರಿಬ್ಬರ ನಡುವೆಯೇ ವಿರಸವೇರ್ಪಟ್ಟು ಕೊನೆಗೆ ಯಶೋವರ್ಮ ಲಲಿತಾದಿತ್ಯನಿಂದ ಸೋಲಿಸಲ್ಪಟ್ಟ. ಸುಮಾರು 690ರಿಂದ 740ರ ತನಕವೂ ಆಳಿದ.
- ಲಲಿತಾದಿತ್ಯ ಮುಕ್ತಾಪೀಡ : ಕಾಶ್ಮೀರದಲ್ಲಿ ಕಾರ್ಕೋಟ ಅಥವಾ ನಾಗವಂಶದ ದುರ್ಲಭವರ್ಧನ ಪಟ್ಟಕ್ಕೆ ಬಂದ (627). ಇವನೂ ಇವನ ಮಗ ದುರ್ಲಭನೂ ಕ್ರಮವಾಗಿ 36 ಹಾಗೂ 50 ವರ್ಷಗಳ ಕಾಲ ಆಳಿದರು. ಅನಂತರ ಚಂದ್ರಾಪೀಡ ಸಿಂಹಾಸನಾರೂಢನಾದ. ಇವನ ಕಾಲದಲ್ಲಿ ಮಹಮ್ಮದ್ ಬಿನ್ ಕಾಸಿಮ್ ಎಂಬ ಅರಬನು ಕಾಶ್ಮೀರವನ್ನು ಮುತ್ತಿದನಾದರೂ ಅವನಿಗೆ ಯಾವ ಯಶಸ್ಸೂ ದೊರೆಯಲಿಲ್ಲ. ದಯಾಶೀಲನೂ ನ್ಯಾಯಪರನೂ ಆದ ಚಂದ್ರಾಪೀಡನನ್ನು ಇವನ ಸೋದರ ತಾರಾಪೀಡ ಮೋಸದಿಂದ ಕೊಲ್ಲಿಸಿ, ನಾಲ್ಕು ವರ್ಷಗಳ ಕಾಲ ರಾಜ್ಯವಾಳಿ ಸತ್ತ. ಅನಂತರ ಇವನ ತಮ್ಮ ಲಲಿತಾದಿತ್ಯ ಮುಕ್ತಾಪೀಡ ಪಟ್ಟಕ್ಕೆ ಬಂದ (724). ಆಳ್ವಿಕೆಯ ಹೆಚ್ಚು ಭಾಗವನ್ನು ಈತ ರಣರಂಗದಲ್ಲೇ ಕಳೆದ. ಟಿಬೆಟ್ ದೇಶದ ಅರಸ ಭಾರತದ ಮೇಲೆ ದಂಡೆತ್ತಿ ಬಂದಾಗ ಯಶೋವರ್ಮನ ಸಹಾಯದಿಂದ ಲಲಿತಾದಿತ್ಯ ಆತನನ್ನು ಸೋಲಿಸಿದ. ಅಲ್ಲದೆ ರಾಜ್ಯದ ಉತ್ತರ ಮತ್ತು ವಾಯವ್ಯದಲ್ಲಿಯ ದರ್ದ್, ಕಾಂಬೋಜ ಮತ್ತು ತುರ್ಕಿ ಜನರನ್ನೆಲ್ಲ ಸೋಲಿಸಿದ. ಇವನು ಯಶೋವರ್ಮನನ್ನು ಸೋಲಿಸಿದಾಗ ತಾತ್ತ್ವಿಕವಾಗಿ ಯಶೋವರ್ಮನ ರಾಜ್ಯದ ಸಾರ್ವಭೌಮತ್ವವೆಲ್ಲ ಇವನದಾದರೂ ಈ ತಾತ್ತ್ವಿಕ ವಿಜಯವನ್ನು ವಾಸ್ತವಿಕಗೊಳಿಸಲು ದಿಗ್ವಿಜಯ ಯಾತ್ರೆ ಕೈಗೊಂಡ. ಇವನ ಕಾಲದಲ್ಲಿ ಕಾಶ್ಮೀರ ರಾಜ್ಯ ಬಹಳ ವಿಸ್ತರಿಸಿ, ಗುಪ್ತರ ಅನಂತರ ಉತ್ತರ ಭಾರತದಲ್ಲಿ ಒಂದು ಪ್ರಬಲ ರಾಜ್ಯವೆನಿಸಿತು. ಇವನ ಅನಂತರ ಬಂದ ಯಾವ ಅರಸರು ಇವನಿಗೆ ಸರಿಸಾಟಿ ಎನಿಸಲಿಲ್ಲವಾದ್ದರಿಂದ ಕಾಶ್ಮೀರದ ಪ್ರಾಬಲ್ಯ ಕುಂದಿತು.
- ನೇಪಾಲ : ನೇಪಾಲದಲ್ಲಿ 623ರಲ್ಲಿ ಅಂಶುವರ್ಮ ಮರಣಹೊಂದಿದ ಬಳಿಕ ಅನಿಶ್ಚಿತ ಪರಿಸ್ಥಿತಿ ಉಂಟಾಯಿತು. ಇದನ್ನು ಉಪಯೋಗಿಸಿ ಲಿಚ್ಛವಿ ಮನೆತನದ ಅರಸರು ನೇಪಾಲವನ್ನು ತಮ್ಮ ಅಧೀನಕ್ಕೆ ತಂದುಕೊಂಡರೆಂದೂ ಇವರ ಸಾಮಂತರಾಗಿಯೇ ಅಂಶವರ್ಮನ ಅನಂತರ ಜಿಷ್ಣುಗುಪ್ತ ಮತ್ತು ವಿಷ್ಣುಗುಪ್ತರು ಆಳಿದರೆಂದೂ ಹೇಳಲಾಗಿದೆ. ಆದರೆ 647ರ ಸುಮಾರಿಗೆ ಲಿಚ್ಛವಿಯ ನಾಗೇಂದ್ರದೇವ ನೇಪಾಲದ ಅರಸನಾಗಿದ್ದ. ಮತ್ಸ್ಯೇಂದ್ರನಾಥನೆಂಬ ಸಂತನ ಶಿಷ್ಯನಾದ ಈ ಅರಸ ಆ ಗುರುವಿನ ಹೆಸರಿನಲ್ಲಿ ಪ್ರಸಿದ್ಧವಾದ ಪಂಥದ ಪೋಷಕನಾದ. ನರೇಂದ್ರದೇವ 787ರಲ್ಲಿ ಮರಣಹೊಂದಿದ. ಇವನ ಬಳಿಕ ಕ್ರಮವಾಗಿ ಶಿವದೇವ ಹಾಗೂ ಜಯದೇವರು ಆಳಿದರು. ಇವರು ಮೌಖರಿ ವಂಶದ ಭೋಗವರ್ಮ ಮತ್ತು ಆದಿತ್ಯಸೇನನೊಡನೆ ಸಂಬಂಧ ಬೆಳೆಸಿದ್ದರು. ಅಂಗ, ಕಾಮರೂಪ, ಕಾಂಚೀ, ಸೌರಾಷ್ಟ್ರದೇಶಗಳ ಆಧಿಪತ್ಯವನ್ನು ಜಯದೇವ ಪಡೆದಿದ್ದನೆಂದು ಪಶುಪತಿ ದೇವಾಲಯದಲ್ಲಿಯ ಶಾಸನದ ಪದ್ಯವೊಂದು ಸೂಚಿಸುತ್ತದೆಯಾದರೂ ಈ ಪದ್ಯದ ಅರ್ಥವನ್ನು ಕುರಿತು ಭಿನ್ನಾಭಿಪ್ರಾಯಗಳಿವೆ. ಈ ಕಾಲದ ಶಾಸನಗಳಿಂದ ನೇಪಾಲ ಅಂದು ಸಹ ಹಿಂದೂ ಸಂಸ್ಕøತಿಯನ್ನು ಅವಲಂಬಿಸಿದ್ದು ಬ್ರಾಹ್ಮಣ, ಬೌದ್ಧ ಮತಗಳ ಪ್ರಭಾವ ಅಲ್ಲಿಯ ಜನರ ಆಚಾರ ವ್ಯವಹಾರಗಳಲ್ಲಿ ಕಂಡುಬರುತ್ತಿತ್ತು. ರಾಜಕೀಯವಾಗಿ ಸಾಮಾಜಿಕವಾಗಿ ಭಾರತದೊಡನೆ ನೇಪಾಲದ ಸಂಬಂಧ ತುಂಬ ಸೌಹಾರ್ದಯುತವೂ ವೈಶಿಷ್ಟ್ಯಪೂರ್ಣವೂ ಆಗಿತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ.
- ವಲಭೀ : ಚಕ್ರವರ್ತಿ ಮುಂತಾದ ದೊಡ್ಡ ಬಿರುದುಗಳನ್ನು ಧರಿಸಿದ್ದ ಮೈತ್ರಕ ವಂಶದ ನಾಲ್ಕನೆಯ ಧರಸೇನ ಪಟ್ಟಕ್ಕೆ ಬಂದ (644). ಇವನ ಸಮಕಾಲೀನ ಹರ್ಷವರ್ಧನ ಈತನನ್ನು ಯುದ್ಧದಲ್ಲಿ ಎದುರಿಸಿದಾಗ ಈತ ಗೂರ್ಜರ ಅರಸ ದದ್ದನ ಆಶ್ರಯ ಪಡೆದ. 648ರ ತಾಮ್ರಶಾಸನದಿಂದ ಇವನು ಗೂರ್ಜರಿಗೆ ಸೇರಿದ ಪ್ರದೇಶವನ್ನು ಆ ವೇಳೆಗೆ ಆಕ್ರಮಿಸಿರಬಹುದೆಂದು ಊಹಿಸಲಾಗಿದೆ. ಒಮ್ಮೆ ಹರ್ಷನ ವಿರುದ್ಧ ಇವನನ್ನು ರಕ್ಷಿಸಿದ ಗೂರ್ಜರರ ವಿರುದ್ಧವಾಗಿಯೇ ಈತ ಸೆಣಸಿದುದು ಕೃತಘ್ನತೆಗೆ ಸಾಕ್ಷಿ. ಆದರೆ ಈತನ ಈ ವಿಜಯ ಬಹಳ ಕಾಲದ್ದಾಗಿರಲಿಲ್ಲ. ಕೆಲವೇ ವರ್ಷಗಳ ಬಳಿಕ ಭರುಕಚ್ಛ ಪುನಃ ಗೂರ್ಜರರ ವಶವಾಯಿತು. ಧರಸೇನ ಆಳಿದುದು ಹತ್ತು ವರ್ಷಗಳು ಮಾತ್ರ. ರಾವಣವಧವೆಂಬ ಕಾವ್ಯದ ಕರ್ತೃ ಭಟ್ಟಿ ಈತನ ಆಸ್ಥಾನ ಕವಿಯಾಗಿದ್ದ.
- ಇವನ ಬಳಿಕ ವಲಭಿಯಲ್ಲಿ ಅನಿಶ್ಚಿತ ಪರಿಸ್ಥಿತಿ ಉಂಟಾಯಿತು. 662ರಿಂದ 684ರ ತನಕ ಆಳಿದ ಮೂರನೆಯ ಶೀಲಾದಿತ್ಯ ಗೂರ್ಜರರ ರಾಜ್ಯ ಗೆದ್ದುಕೊಂಡನಾದರೂ ಇವನ ವಿಜಯ ಕ್ಷಣಿಕವಾದುದಾಗಿತ್ತು. ಬಾದಾಮಿಯ ಚಾಲುಕ್ಯರು ಹರ್ಷ ಮತ್ತು ವಜ್ರಟರೆಂಬ ಉತ್ತರದ ಇಬ್ಬರು ಅರಸರನ್ನು ಸೋಲಿಸಿದರೆಂದು ರಾಷ್ಟ್ರಕೂಟರ ಮತ್ತು ಚಾಲುಕ್ಯರ ಶಾಸನಗಳಲ್ಲಿ ಹೇಳಿದೆ. ಇವರಿಬ್ಬರಲ್ಲಿ ವಜ್ರಟ ಅಥವಾ ವಜ್ಜಡ ಎಂಬಾತ ವಲಭಿಯ ಮೂರನೆಯ ಶೀಲಾದಿತ್ಯನಾಗಿದ್ದಿರಬೇಕೆಂದು ಊಹಿಸಲಾಗಿದೆ. ಬಹುಶಃ ಚಾಲುಕ್ಯರು ತಮ್ಮ ಅಧೀನರಾಗಿದ್ದ ಗೂರ್ಜರರ ನೆರವಿಗೆ ಬಂದಿರಬೇಕು.
- ಐದನೆಯ ಶೀಲಾದಿತ್ಯನ ಆಳ್ವಿಕೆಯ ಕಾಲದಲ್ಲಿ ಅರಬ್ಬರು ವಲಭಿಯನ್ನು ಮುತ್ತಿದರು. ಗೂರ್ಜರ ಅರಸ ಜಯಭಟ ವಲಭೀನಗರದಲ್ಲಿ ಪ್ರಜೆಗಳನ್ನು ಅತಿಯಾಗಿ ಹಿಂಸಿಸುತ್ತಿದ್ದ. ಈತ ತಜ್ಜಿಕರನ್ನು (ಅರಬ್ಬರು) ಸೋಲಿಸಿದನೆಂದು ಹೇಳಿದೆ. 766-67ರಲ್ಲಿ ಆಳುತ್ತಿದ್ದ ಏಳನೆಯ ಶೀಲಾದಿತ್ಯ ಈ ವಂಶದ ಕೊನೆಯ ಅರಸ. ಅನಂತರ ವಲಭೀನಗರ ನಾಶವಾಯಿತು. 770ರಲ್ಲಿ ರಿಂಕನೆಂಬ ವಲಭಿಯ ಧನಿಕ ನಾಗರಿಕನೊಬ್ಬ ಅರಸನೊಡನೆ ಜಗಳವಾಡಿ ಸಿಂಧ್‍ನಲ್ಲಿ ಆಗ ಆಳುತ್ತಿದ್ದ ಅರಬರಿಗೆ ಶರಣಾದನೆಂದೂ ಅವನ ಸಹಾಯದಿಂದ ಅರಬರು ನೌಕಾದಳದೊಡನೆ ವಲಭೀನಗರವನ್ನು ಮುತ್ತಿ, ಅರಸನನ್ನು ಕೊಂದು, ನಗರವನ್ನು ನಾಶಪಡಿಸಿದರೆಂದೂ ಆಲ್ಬೆರೂನಿ ಹೇಳಿದ್ದಾನೆ.
- ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ವಲಭೀನಗರದಲ್ಲಿ ಸುಮಾರು 5ನೆಯ ಶತಮಾನದಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯ ಹೀನಯಾನದ ಅಧ್ಯಯನ ಕೇಂದ್ರವಾಗಿತ್ತು. ಇವು ಹ್ಯೂಯೆನ್ ತ್ಸಾಂಗನ ಕಾಲದಲ್ಲಿ ನಲಂದಾ ವಿಶ್ವವಿದ್ಯಾಲಯಕ್ಕೆ ಸರಿಸಮವಾಗಿತ್ತು. ಇಲ್ಲಿ 6000 ವಿದ್ಯಾರ್ಥಿಗಳಿದ್ದರು.
- ಕಾಮರೂಪ : ಇಂದಿನ ಅಸ್ಸಾಮಿನ ಬ್ರಹ್ಮಪುತ್ರಾ ನದಿ ಕೊಳ್ಳದ ಸುತ್ತಲಿನ ವಿಸ್ತಾರ ಪ್ರದೇಶ. 350ರಿಂದ 650ರ ತನಕ, ಮೂರು ಶತಮಾನಗಳ ಕಾಲ ಒಂದು ಅರಸು ಮನೆತನ ಇಲ್ಲಿ ಆಳಿತ್ತು. ಈ ವಂಶದ ಮೂಲ ಪುರುಷ ನರಕಾಸುರನೆಂದೂ ಅನಂತರ ಇವನ ಮಗ ಭಗದತ್ತ ಮತ್ತು ಇತರರು 3000 ವರ್ಷಗಳಷ್ಟು ಕಾಲ ಆಳಿದ ಬಳಿಕ ಪುಷ್ಯವರ್ಮ ಪಟ್ಟಕ್ಕೆ ಬಂದನೆಂದೂ 7ನೆಯ ಶತಮಾನದಲ್ಲಿ ಪ್ರಚಲಿತವಿದ್ದ ಸಾಂಪ್ರದಾಯಿಕ ಕತೆಗಳಲ್ಲಿ ಹೇಳಿದೆ ; ಪುಷ್ಯವರ್ಮನಿಗೂ ಹಿಂದಿನ ಅರಸರು ಐತಿಹಾಸಿಕ ವ್ಯಕ್ತಿಗಳೆಂಬುದರ ಬಗೆಗೆ ಸಂದೇಹವಿದೆ, ಈತನೇ ಕಾಮರೂಪದ ಇತಿಹಾಸದಲ್ಲಿ ಮೊದಲ ಅರಸನೆಂದೂ ಹೇಳಬಹುದು. ಶಾಸನಗಳಿಂದಲೂ ಸಾಹಿತ್ಯಾಧಾರಗಳಿಂದಲೂ ಪುಷ್ಯವರ್ಮ ಮತ್ತು ಇವನ ಅನಂತರದ ಹನ್ನೊಂದು ಅರಸರ ಹೆಸರುಗಳು ನಮಗೆ ತಿಳಿದಿವೆ. ಈ ಮನೆತನದ ಹದಿಮೂರನೆಯ ಅರಸ ಭಾಸ್ಕರವರ್ಮ. ಈತನ ತಂದೆ ಸುಸ್ಥಿರವರ್ಮ ; ಅಣ್ಣ ಸುಪ್ರತಿಷ್ಠಿತವರ್ಮ.
- ಪುಷ್ಯವರ್ಮ ಗುಪ್ತರ ಮಾಂಡಲಿಕನಾಗಿದ್ದಂತೆ ತೋರುತ್ತದೆ. ಇವನ ಮಗ ಸಮುದ್ರವರ್ಮ. ಸೊಸೆ ದತ್ತದೇವಿ. ಈ ಹೆಸರುಗಳು ಗುಪ್ತ ಅರಸರ ಮತ್ತು ರಾಣಿಯರ ಹೆಸರುಗಳನ್ನು ಹೋಲುತ್ತವೆ. ಇವರ ರಾಜ್ಯದಲ್ಲಿ ಗುಪ್ತರ ಶಕೆ ರೂಢಿಯಲ್ಲಿತ್ತು. ಆರನೆಯ ಶತಮಾನದ ಆರಂಭದಲ್ಲಿ ಇವರು ಸ್ವತಂತ್ರರಾದಂತೆ ತೋರುತ್ತದೆ. ಈ ಮನೆತನದ ಏಳನೆಯ ಅರಸ ನಾರಾಯಣವರ್ಮ ಎರಡು ಅಶ್ವಮೇಧಯಾಗಗಳನ್ನು ಮಾಡಿದ್ದನಂತೆ. ನಾರಾಯಣವರ್ಮನ ಅನಂತರ ಬಂದ ಭೂತಿವರ್ಮ ಡವಾಕವನ್ನೂ ಸಿಲ್ಹೆಟಿ ಜಿಲ್ಲೆಯನ್ನೊಳಗೊಂಡ ಇತರ ಪ್ರದೇಶಗಳನ್ನೂ ತನ್ನ ರಾಜ್ಯಕ್ಕೆ ಸೇರಿಸಿದ. ಈ ಅರಸನ ಮೊಮ್ಮಗ ಸ್ಥಿತವರ್ಮ ಎರಡು ಅಶ್ವಮೇಧಯಾಗಗಳನ್ನು ಮಾಡಿದ. ಇವನ ಮೊಮ್ಮಗ ಸುಪ್ರತಿಷ್ಠಿತವರ್ಮನನ್ನೂ ಇವನ ಸೋದರ ಭಾಸ್ಕರವರ್ಮನನ್ನೂ ಗೌಡದೇಶದ ಅರಸ ಸೋಲಿಸಿದ. ಈ ಅರಸ ಶಶಾಂಕನೆಂದು ಹಲವರು ಮಹಾಸೇನಗುಪ್ತನೆಂದು ಇತರರೂ ಅಭಿಪ್ರಾಯ ಪಟ್ಟಿದ್ದಾರೆ.
- ಭಾಸ್ಕರವರ್ಮ ಹರ್ಷವರ್ಧನರು ಶಶಾಂಕನ ವಿರುದ್ಧ ಪರಸ್ಪರ ನೆರವಿಗೆ ಬರುವ ಒಪ್ಪಂದ ಮಾಡಿಕೊಂಡರು. ಶಶಾಂಕನ ಮರಣದ ಅನಂತರ ಬಂಗಾಲದ ಬಹುಭಾಗ ಭಾಸ್ಕರವರ್ಮನ ಸ್ವಾಧೀನಕ್ಕೆ ಬಂತು. ಹ್ಯೂಯೆನ್‍ತ್ಸಾಂಗನ ಬರೆವಣಿಗೆಗಳಿಂದ ನಮಗೆ ಈತನ ಕುರಿತಾದ ಅನೇಕ ವಿಷಯಗಳು ತಿಳಿದಿವೆ. ಇವು ಸ್ವಲ್ಪ ಮಟ್ಟಿಗೆ ಉತ್ಪ್ರೇಕ್ಷೆಯಿಂದ ಕೂಡಿದ್ದರೂ ಇವುಗಳಿಂದ ಇವನ ಹಾಗೂ ಹರ್ಷವರ್ಧನನ ನಡುವಣ ಸಂಬಂಧ ಸೌಹಾರ್ದಯುತವಾಗಿದ್ದಿತೆಂಬ ಅಂಶ ಮಾತ್ರ ಸ್ಪಷ್ಟವಾಗುತ್ತದೆ. ಹ್ಯೂಯೆನ್‍ತ್ಸಾಂಗ್ ನಾಲಂದದಲ್ಲಿದ್ದಾಗ ಆತನನ್ನು ತನ್ನ ರಾಜಧಾನಿಗೆ ಕಳುಹಿಸಬೇಕೆಂದು ಆ ಕೇಂದ್ರದ ಅಧ್ಯಕ್ಷ ಶೀಲಭದ್ರನನ್ನು ಭಾಸ್ಕರವರ್ಮ ಕೇಳಿದ. ಆದರೆ ಶೀಲಭದ್ರ ಆ ಕೋರಿಕೆಯನ್ನು ಮನ್ನಿಸಲಿಲ್ಲ. ಕುಪಿತನಾದ ಭಾಸ್ಕರವರ್ಮ ನಾಲಂದವನ್ನು ನೆಲಸಮಮಾಡುವುದಾಗಿ ಹೇಳಿ ಕಳುಹಿಸಿದ. ಈ ಹೆದರಿಕೆಯ ಪರಿಣಾಮವಾಗಿ ಹ್ಯೂಯೆನ್‍ತ್ಸಾಂಗ್ ಕಾಮರೂಪದಲ್ಲಿ ಒಂದು ತಿಂಗಳ ಕಾಲ ನೆಲಸಿದ್ದ. ಆ ಸಮಯದಲ್ಲಿಯೇ ಹರ್ಷವರ್ಧನ ಹ್ಯೂಯೆನ್‍ತ್ಸಾಂಗನನ್ನು ತನ್ನಲ್ಲಿಗೆ ಕಳುಹಿಸಬೇಕೆಂದು ಭಾಸ್ಕರವರ್ಮನನ್ನು ಕೋರಿದ. ತಲೆಯನ್ನಾದರೂ ಕೊಟ್ಟೇನು, ಚೀನಿ ಭಿಕ್ಷುವನ್ನು ಕಳುಹಿಸಲಾರೆ ಎಂದ ಭಾಸ್ಕರನ ಮಾತಿಗೆ ತಲೆಯನ್ನೇ ಕಳುಹಿಸು ಎಂದನಂತೆ ಹರ್ಷ. ಹೆದರುವ ಸರದಿ ಈಸಲ ಭಾಸ್ಕರವರ್ಮನದಾಗಿತ್ತು. ಹರ್ಷನೊಡನೆ ವಿರಸವನ್ನು ಬಯಸದೆ ಹ್ಯೂಯೆನ್‍ತ್ಸಾಂಗನನ್ನು ಸ್ವತಃ ಹರ್ಷ ಇಳಿದಿದ್ದ ಕಜಂಗಲದ ನೆಲವೀಡಿಗೆ ಒಯ್ದ. ಹರ್ಷ ಪ್ರಯಾಗದಲ್ಲಿ ನಡೆಸಿದ ಬೌದ್ಧ ಸಭೆಯಲ್ಲಿ ಇವನು ಭಾಗವಹಿಸಿದ್ದ ಹಾಗೂ ಕನೋಜದಲ್ಲಿ ನಡೆದ ಮೇಳದಲ್ಲಿಯೂ ಹಾಜರಿದ್ದ. ಆದರೆ ಇದರಿಂದ ಭಾಸ್ಕರವರ್ಮ ಹರ್ಷನ ಮಾಂಡಲಿಕನಾಗಿದ್ದನೆಂದು ಊಹಿಸಲಾಗದು. ತನಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದವನೊಡನೆ ಮಿತ್ರತ್ವಲೇಸೆಂದು ಭಾವಿಸಿ ಹರ್ಷನನ್ನು ಗೌರವದಿಂದ ಕಾಣುತ್ತಿದ್ದನಷ್ಟೆ.
- ಹರ್ಷನ ಮರಣದ ಬಳಿಕ ಕನೋಜದಲ್ಲಿ ಉಂಟಾದ ರಾಜಕೀಯ ವಿಪ್ಲವದಲ್ಲಿ ಭಾಸ್ಕರವರ್ಮನ ಪಾತ್ರ ವಿಶಿಷ್ಟವಾದದ್ದಾಗಿತ್ತು ಎನ್ನಲಾಗಿದೆ. ಟಿಬೆಟ್ಟಿನ ಅರಸ ದಂಡೆತ್ತಿ ಬಂದಾಗ ಅಸ್ಸಾಮ್ ಅವನ ಅಧೀನಕ್ಕೆ ಬಂತೆಂದೂ ಕಾಮರೂಪದಲ್ಲಿ ಪುಷ್ಯವರ್ಮನಿಂದ ಆರಂಭವಾದ ಅರಸುಮನೆತನದ ಆಳ್ವಿಕೆ ಭಾಸ್ಕರವರ್ಮನೊಂದಿಗೆ ಮುಕ್ತಾಯವಾಯಿತೆಂದೂ ಊಹಿಸಲಾಗಿದೆ. ಭಾಸ್ಕರವರ್ಮನ ಬಳಿಕ ಕಾಮರೂಪ ಶೌಲಸ್ತಂಭನೆಂಬ ಮ್ಲೇಚ್ಛನೊಬ್ಬನ ಆಳ್ವಿಕೆಗೆ ಒಳಪಟ್ಟಿತು. ಆದರೆ ಅವನ ಕಾಲದ ಅನಂತರದ ಕಾಮರೂಪದ ಇತಿಹಾಸ ನಮಗೆ ಹೆಚ್ಚಿಗೆ ತಿಳಿದಿಲ್ಲ.
- ಬಂಗಾಲ: ಬಂಗಾಲದಲ್ಲಿ ಶಶಾಂಕನ ಕಾಲದಲ್ಲಿದ್ದ ರಾಜಕೀಯ ಸ್ಥಿರತೆ ಅನಂತರ ಉಳಿಯಲಿಲ್ಲ. ಹ್ಯೂಯೆನ್‍ತ್ಸಾಂಗ್ 638ರಲ್ಲಿ ಬಂಗಾಲದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿ ಕಜಂಗಲ, ಪುಂಡ್ರವರ್ಧನ, ಕರ್ಣಸುವರ್ಣ, ತಾಮ್ರಲಿಪಿ ಮತ್ತು ಸಮತಟವೆಂಬ ಐದು ರಾಜ್ಯಗಳಿದ್ದುವೆಂದಿದ್ದಾನೆ. ಹರ್ಷವರ್ಧನ ಮತ್ತು ಭಾಸ್ಕರವರ್ಮ ಬಂಗಾಲದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿದ್ದರು. ಗೌಡದಲ್ಲಿ (ಪಶ್ಚಿಮ ಬಂಗಾಲ) ಭಾಸ್ಕರವರ್ಮನ ಬಳಿಕ ಜಯನಾಗನೆಂಬ ಅರಸ ಕೆಲಕಾಲ ಆಳಿದ. ವಂಗ ಅಥವಾ ಪೂರ್ವ ಬಂಗಾಲದಲ್ಲಿ ಬ್ರಾಹ್ಮಣ ಅರಸರು ಆಳಿದರೆಂಬುದು ಹ್ಯೂಯೆನ್‍ತ್ಸಾಂಗನ ಹೇಳಿಕೆ. 8ನೆಯ ಶತಮಾನದ ಆರಂಭದಲ್ಲಿ ಬಂಗಾಲ ಪರಕೀಯರ ದಾಳಿಗೆ ತುತ್ತಾಯಿತು. ಸುಮಾರು 725-35ರಲ್ಲಿ ಯಶೋವರ್ಮ ಪೂರ್ವ ಮತ್ತು ಪಶ್ಚಿಮ ಬಂಗಾಲಗಳನ್ನು ಗೆದ್ದುಕೊಂಡ. ಸಮತಟದಲ್ಲಿ ರಾತ ವಂಶದ ಕೆಲವು ಅರಸರು ಆಳುತ್ತಿದ್ದರೆನ್ನಲು ಶಾಸನಾಧಾರಗಳಿವೆ. ತಾರಾನಾಥನೆಂಬ ಟಿಬೆಟ್ ದೇಶದ ಲೇಖಕ ಪೂರ್ವಬಂಗಾಲದಲ್ಲಿ 8ನೆಯ ಶತಮಾನದ ಆದಿ ಭಾಗದಲ್ಲಿ ಚಂದ್ರವಂಶದ ಅರಸರು ಆಳಿದರೆಂದು ಹೇಳಿದ್ದಾನೆ. ಇವೆಲ್ಲವೂ ಅಂದಿನ ರಾಜಕೀಯ ಅನಿಶ್ಚಿತತೆಯನ್ನು ಸೂಚಿಸುತ್ತವೆ. (ನೋಡಿ- ಬಂಗಾಲ)
- ಪಾಲ ಮನೆತನ: 8ನೆಯ ಶತಮಾನದ ಮಧ್ಯೆಭಾಗದಲ್ಲಿ ಗೊಂದಲಮಯ ಪರಿಸ್ಥಿತಿಗೆ ತಮ್ಮಲ್ಲಿಯ ಅನೈಕ್ಯವೇ ಕಾರಣವೆಂದು ಅರಿತು ಎಲ್ಲ ಸಾಮಂತರು, ನಾಯಕರು ತಮ್ಮ ತಮ್ಮ ಸ್ವಇಚ್ಛೆಯಿಂದಲೇ ಬಿಟ್ಟುಕೊಟ್ಟು ಸರ್ವರಿಗೂ ಸಮ್ಮತವಾದ ನಾಯಕನೊಬ್ಬನನ್ನು ಆಯ್ದು ಅವನ ನೇತೃತ್ವದಲ್ಲಿ ಸಮರ್ಥ ರಾಜ್ಯವನ್ನು ಕಟ್ಟಲು ತೀರ್ಮಾನಿಸಿದರು. ಇಡೀ ಭಾರತದ ಇತಿಹಾಸದಲ್ಲಿಯೇ ಇಂಥ ತೀರ್ಮಾನ ಅಪರೂಪದ್ದು. ಇವರೆಲ್ಲ ಕೂಡಿ ಆರಿಸಿದ ನಾಯಕನ ಹೆಸರು ಗೋಪಾಲ. ಈತ ಬಹುಶಃ ಅಂದಿನ ನಾಯಕ ಪ್ರಮುಖರಲ್ಲಿ ಒಬ್ಬನಾಗಿದ್ದಿರಬಹುದು. ಇವನಿಂದ ಆರಂಭವಾದ ಬಂಗಾಲದ ಅರಸು ಮನೆತನ ಪಾಲ ಎಂಬ ಹೆಸರಿನಿಂದ ಖ್ಯಾತಿ ಪಡೆಯಿತು. ಗೋಪಾಲನೂ ಆತನ ವಂಶಸ್ಥರೂ ಬೌದ್ಧ ಮತಾವಲಂಬಿಗಳು. ಈತ ಸುಮಾರು 750-70ರ ತನಕ ಆಳಿದ. ಬಂಗಾಲ ಪ್ರದೇಶವೆಲ್ಲ ಈತನ ಆಳ್ವಿಕೆಗೆ ಒಳಪಟ್ಟಿತ್ತು. ಇವನ ಮಗ ಧರ್ಮಪಾಲ. 770ರಲ್ಲಿ ಪಟ್ಟಕ್ಕೆ ಬಂದಾಗ ಮಾಳವ ರಾಜಪುಟಾನದಲ್ಲಿ ಆಳುತ್ತಿದ್ದ ಪ್ರತೀಹಾರರು ತಮ್ಮ ರಾಜ್ಯವನ್ನು ಪೂರ್ವಾಭಿಮುಖವಾಗಿ ವಿಸ್ತರಿಸ ತೊಡಗಿದ್ದರು. ಕರ್ನಾಟಕದ ರಾಷ್ಟ್ರಕೂಟರು ಉತ್ತರದ ಕಡೆ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲಾರಂಭಿಸಿದರು. ಇವರಿಬ್ಬರ ಜೊತೆಗೆ ಮೂರನೆಯವನಾಗಿ ಧರ್ಮಪಾಲ ಈ ತ್ರಿಕೋನ ಸ್ಪರ್ಧೆಯಲ್ಲಿ ಪಾಲ್ಗೊಂಡ. ಗಂಗಾನದಿಯ ಬಯಲಿನಲ್ಲಿ ಪ್ರತೀಹಾರ ವತ್ಸರಾಜನನ್ನೆದುರಿಸಿದ ಧರ್ಮಪಾಲ ಸೋಲನ್ನು ಅನುಭವಿಸಿದ. ಆದರೆ ರಾಷ್ಟ್ರಕೂಟ ಧ್ರುವ ವತ್ಸರಾಜನನ್ನು ಸೋಲಿನ್ನು ಆತನನ್ನು ರಾಜಪುಟಾನಕ್ಕೆ ಹಿಮ್ಮೆಟ್ಟಿಸಿದ. ಇತ್ತ ಧರ್ಮಪಾಲ ಸಹ ಇನ್ನೊಮ್ಮೆ ರಾಷ್ಟ್ರಕೂಟರಿಂದ ಸೋಲಿಸಲ್ಪಟ್ಟ. ಆದರೆ ಧ್ರುವ ಸ್ವದೇಶಕ್ಕೆ ಹಿಂತಿರುಗಿದ ಕೂಡಲೆ ಧರ್ಮಪಾಲ ತಾನು ಕಳೆದುಕೊಂಡ ಪ್ರದೇಶಗಳನ್ನಲ್ಲದೆ ಆ ವೇಳೆಗೆ ವತ್ಸರಾಜ ಗೆದ್ದುಕೊಂಡಿದ್ದ ರಾಜ್ಯಗಳನ್ನೂ ಗೆದ್ದು ವಶಪಡಿಸಿಕೊಂಡ. ಈ ಸಮಯದಲ್ಲಿ ಕನೋಜ್ ಭಾರತದಲ್ಲಿ ಪ್ರಖ್ಯಾತಿ ಹೊಂದಿದ್ದು ಅಲ್ಲಿ ಆಯುಧವೆಂಬ ಹೆಸರಿನಿಂದ ಅಂತ್ಯವಾಗುವ ಅರಸರು ಆಳುತ್ತಿದ್ದಂತೆ ತೋರುತ್ತದೆ. ಇವರಲ್ಲಿ ಒಬ್ಬನಾದ ಇಂದ್ರಾಯುಧನನ್ನು ಪ್ರತೀಹಾರ ವಂಶದ ವತ್ಸರಾಜ ಸೋಲಿಸಿ ಆತನು ತನ್ನ ಮಾಂಡಲಿಕನಾಗಿ ಕನೋಜಿನಲ್ಲಿ ಆಳುತ್ತಿರುವಂತೆ ಮಾಡಿದ್ದ. ಆದರೆ ಧರ್ಮಪಾಲ ಇಂದ್ರಾಯುಧನನ್ನು ಸೋಲಿಸಿ ಅವನ ದಾಯಾದಿಯಾಗಿದ್ದ ಚಕ್ರಾಯುಧನೆಂಬಾತನನ್ನು ಕನೋಜದ ಸಿಂಹಾಸನದ ಮೇಲೆ ಕನೋಜದ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಧರ್ಮಪಾಲ, ಭೋಜ, ಮತ್ಸ್ಯ, ಕುರು, ಯಮ, ಯವನ, ಆವಂತಿ. ಗಾಂಧಾರ ಮತ್ತು ಕೇರಳ ದೇಶಗಳೇ ಅರಸರನ್ನು ಸೋಲಿಸಿ ಅವರನ್ನು ತನ್ನ ಸಾಮಂತರನ್ನಾಗಿ ಮಾಡಿಕೊಂಡನೆಂದು ಸಮಕಾಲೀನ ಶಾಸನಗಳಲ್ಲಿ ಹೇಳಿದೆ. ಬಂಗಾಲ ಬಿಹಾರಗಳಲ್ಲದೆ ಈಗಿನ ಉತ್ತರ ಪ್ರದೇಶವನ್ನೊಳಗೊಂಡಂತೆ ಕನೋಜದ ರಾಜ್ಯಗಳು ಇವನ ನೇರ ಆಳ್ವಿಕೆಗೆ ಒಳ ಪಟ್ಟು ಪಶ್ಚಿಮದ ಇತರ ದೇಶಗಳು. ಇವನ ಸಾರ್ವಭೌಮತ್ವವನ್ನೊಪ್ಪಿದುವು. ಆದರೆ ಎರಡನೆಯ ನಾಗಭಟ್ಟ ಪಟ್ಟಕ್ಕೆ ಬಂದಬಳಿಕ ರಾಜ್ಯ ವಿಸ್ತರಣಾಕಾಂಕ್ಷಿಯಾಗಿ ಕನೋಜಿನವರೆಗೂ ನುಗ್ಗಿ ಚಕ್ರಾಯುಧನನ್ನು ಸೋಲಿಸಿ ಅಲ್ಲಿ ಪುನಃ ಇಂದ್ರಾಯುಧನನ್ನು ಸ್ಥಾಪಿಸಿದ. ಮೊಂಘೀರ ಬಳಿ ಧರ್ಮಪಾಲನನ್ನು ಎದುರಿಸಿ ಅವನನ್ನು ಸೋಲಿಸಿದ. ಇಷ್ಟರಲ್ಲಿ ಪುನಃ ರಾಷ್ಟ್ರಕೂಟ ಮೂರನೆಯ ಗೋವಿಂದ ಉತ್ತರಕ್ಕೆ ದಂಡೆತ್ತಿದ್ದಾಗ ಧರ್ಮಪಾಲ ಮತ್ತು ಚಕ್ರಾಯುಧರು ಅವನ ಸಹಾಯ ಬೇಡಿ ತನ್ಮೂಲಕ ನಾಗಭಟನನ್ನು ಸಂಪೂರ್ಣವಾಗಿ ಸೋಲಿಸಿದರು. ಹೀಗೆ ಕದನಗಳಲ್ಲಿ ಹೋರಾಡಿ, ರಾಜ್ಯವನ್ನು ವಿಸ್ತರಿಸಿ ಬಂಗಾಲದಲ್ಲಿ ಸುಸ್ಥಿತಿಯನ್ನು ಏರ್ಪಡಿಸಿದ ಕೀರ್ತಿ ಧರ್ಮಪಾಲನಿಗೆ ಸಲ್ಲುತ್ತದೆ. ಶಾಂತಿ ಸುಭಿಕ್ಷೆಗಳನ್ನು ನೆಲೆಗೊಳಿಸಿದ ಈತ ವಿಕ್ರಮಶೀಲ ವಿಶ್ವವಿದ್ಯಾಲಯದ ಸಂಸ್ಥಾಪಕನೂ ಆಗಿದ್ದ. ನರೇಂದ್ರದ ಸೋಮಪುರಿಯಲ್ಲಿ ಬಿಹಾರದ ಒದಂತ ಪುರಿಯಲ್ಲಿ, ಬೌದ್ಧ ವಿಹಾರ ಕಟ್ಟಿಸಿದ. ಈತನ ಹೆಂಡತಿ ರಾಷ್ಟ್ರಕೂಟ ಮನೆತನದ ಪರಬಲನ ಮಗಳು ರಣ್ಣಾ ದೇವಿ. ಮಗ ದೇವಸಾಲ. ಈತ 810ರಲ್ಲಿ ಪಟ್ಟಕ್ಕೆ ಬಂದ. ಈತನ ಕಾಲದಲ್ಲಿ ಪ್ರಾಗ್ಜೋತಿಷ (ಅಸ್ಸಾವರ್), ಉತ್ಕಲ (ಒರಿಸ್ಸ), ರಾಜ್ಯಗಳ ಅರಸರು ಇವನ ಅಧೀನರಾದರು. ಉತ್ತರಾಪಥದಲ್ಲಿ ಹಿಮಾಲಯದ ತಪ್ಪಲಿನಲ್ಲಿದ್ದ ಹೂಣರನ್ನು ಸೋಲಿಸಿ ಅಲ್ಲಿಂದ ಪಶ್ಚಿಮಕ್ಕೆ ವಾಯವ್ಯ ಸರಹದ್ದಿಗೆ ಸಮೀಪದಲ್ಲಿಯ ಕಾಂಬೋಜದೇಶವನ್ನು ಆಕ್ರಮಿಸಿದ. ಗೂರ್ಜರರನ್ನೂ ಇವನು ಸೋಲಿಸಿದನೆಂದು ಹೇಳಲಾಗಿದೆ. ಪ್ರತೀಹಾರ ಎರಡನೆಯ ನಾಗಭಟ, ರಾಮಭದ್ರ ಹಾಗೂ ಭೋಜರು ಒಬ್ಬರ ಅನಂತರ ಒಬ್ಬರು ದೇವಪಾಲನನ್ನು ಎದುರಿಸಿ ಸೋತರು. ಉತ್ತರ ಭಾರತದಲ್ಲಿ ಈತ ಪಿತ್ರಾರ್ಜಿತವಾದ ರಾಜ್ಯವನ್ನು ಭದ್ರಗೊಳಿಸಿ ವಿಸ್ತರಿಸಿದ. ನಲ್ವತ್ತು ವರ್ಷಗಳ ಕಾಲ ಆಳಿ ಬೌದ್ಧಮತದ ಪ್ರಚಾರಕ್ಕಾಗಿ ದುಡಿದ. ಇವನ ಕೀರ್ತಿ ಸಮುದ್ರಗಳನ್ನು ದಾಟಿ ಬೃಹದ್ಭಾರತದಲ್ಲೆಲ್ಲ ಹಬ್ಬಿತು. ಖ್ಯಾತಿವೆತ್ತ ಶೈಲೇಂದ್ರ ವಂಶದ ಅರಸ ಜಾಲಿಪುತ್ರದೇವ ದೇವಪಾಲನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿ ನಾಲಂದ ವಿಶ್ವವಿದ್ಯಾಲಯಕ್ಕೆ ದತ್ತಿಯಾಗಿ ಬಿಡಲು ಅವನಿಂದ ಐದು ಗ್ರಾಮಗಳನ್ನು ಪಡೆದ. ಇವನ ಬಳಿಕ ಮಗ ವಿಗ್ರಹಪಾಲ ಪಟ್ಟಕ್ಕೆ ಬಂದ. ಮೂರು ನಾಲ್ಕು ವರ್ಷಗಳ ತನಕ ಆಳಿದ ಈತ ಅಧಿಕಾರ ತ್ಯಜಿಸಿ ಸಂನ್ಯಾಸ ಸ್ವೀಕರಿಸಿದ. ಇವನ ಮಗ ನಾರಾಯಣಪಾಲ ಐವತ್ತುವರ್ಷಗಳಿಗೂ ಹೆಚ್ಚುಕಾಲ ಆಳಿದ. ಆದರೆ ಇವನ ಕಾಲದಲ್ಲಿ ರಾಜ್ಯದಲ್ಲಿ ಶಿಥಿಲತೆ ಉಂಟಾಯಿತು. ಸ್ವಧರ್ಮನಿರತರಾಗಿದ್ದ ಈ ನಿರುಪದ್ರವಿಗಳು ರಾಜ್ಯವಾಳಲು ಅರ್ಹರಾಗಿರಲಿಲ್ಲ. 860ರ ಅನಂತರ ಇವರನ್ನು ರಾಷ್ಟ್ರಕೂಟರು ಸೋಲಿಸಿದರು. ಪ್ರತೀಹಾರರು ಸೇಡು ತೀರಿಸಿಕೊಂಡರು. ಮಗಧ ಮತ್ತು ಉತ್ತರ ಬಂಗಾಲಗಳು ಪ್ರತೀಹಾರರು ಸೇಡು ತೀರಿಸಿಕೊಂಡರು. ಮಗಧ ಮತ್ತು ಉತ್ತರ ಬಂಗಾಲಗಳು ಪ್ರತೀಹಾರ ಮಹೇಂದ್ರಪಾಲನ ಕೈಸೇರಿದುವು. ಈ ಶ್ಶೆಥಿಲ್ಯದ ಪ್ರಯೋಜನ ಪಡೆದ ಸಾಮಂತ ಅರಸರು ಸ್ವತಂತ್ರರಾದರು. ಅಂಥವರಲ್ಲಿ ಒರಿಸ್ಸದಲ್ಲಿ ತಲೆ ಎತ್ತಿದ ಶೈಲೋದ್ಭವ ವಂಶದ ಅರಸರು ಪ್ರಮುಖರು. ನಾರಾಯಣಪಾಲನ ಅನಂತರ ಕ್ರಮವಾಗಿ ರಾಜ್ಯಪಾಲ, ಎರಡನೆಯ ಗೋಪಾಲ ಮತ್ತು ಎರಡನೆಯ ವಿಗ್ರಹ ಪಾಲರು ಒಟ್ಟು 80 ವರ್ಷಗಳ ಕಾಲ ಆಳಿದರು. ಅನಂತರ ಪಾಲರ ರಾಜ್ಯ ನಶಿಸಿ ಹೋಯಿತು. ಇವರು ಆಳುತ್ತಿದ್ದ ಅಳಿದುಳಿದ ಪ್ರದೇಶಗಳನ್ನು ಆಗ ತಲೆ ಎತ್ತಿದ್ದ ಚಂದೇಲ ಮತ್ತು ಕಲಚುರಿವಂಶಗಳ ಅರಸರು ಕಬಳಿಸಿದರು. ಆದರೆ ಸುಮಾರು 988ರಲ್ಲಿ ಆಳಲಾರಂಭಿಸಿದ ಮಹೀಪಾಲ ಧೈರ್ಯ, ಪರಾಕ್ರಮಗಳಿಂದ ಪಾಲರ ರಾಜ್ಯ ಉದ್ಧರಿಸಿದ. ಪಾಲರಾಜ್ಯದ ಪುನಃಪ್ರತಿಷ್ಠಾಪಕನೆನಿಸಿದ ಈತ ಆ ರಾಜ್ಯಕ್ಕೆ ಹೊಸ ಹುರುಪು ತಂದುಕೊಟ್ಟ. ಈತ ಅಧಿಕಾರಕ್ಕೆ ಬಂದಾಗ ಪಾಲರ ರಾಜ್ಯ ದಕ್ಷಿಣ ಬಿಹಾರದ ಮಗಧಕ್ಕೆ ಮಾತ್ರ ಸೀಮಿತಗೊಂಡಿತ್ತು. ಆಳ್ವಿಕೆಯ ಮೂರು ಹಾಗೂ ಒಂಬತ್ತನೆಯ ವರ್ಷಗಳೊಳಗಾಗಿ ಪೂರ್ವ ಮತ್ತು ಉತ್ತರ ಬಂಗಾಲವನ್ನು ಈತ ಸ್ವಾಧೀನ ಪಡಿಸಿಕೊಂಡನೆಂದು ತಿಳಿದುಬರುತ್ತದೆ. 1026ರ ವೇಳೆಗೆ ಇವನ ರಾಜ್ಯ ವಾರಾಣಸಿಯವರೆಗೂ ವಿಸ್ತರಿಸಿತ್ತೆಂಬುದು ಸ್ಪಷ್ಟವಾಗತ್ತದೆ. ದಕ್ಷಿಣ ಭಾರತದ ಚೋಳವಂಶದ ರಾಜೇಂದ್ರಚೋಳ ಮಹೀಪಾಲನನ್ನು ಸೋಲಿಸಿದ. ಆದರೆ ರಾಜೇಂದ್ರಚೋಳನ ದಂಡಯಾತ್ರೆ ಉತ್ತರ ಭಾರತದ ರಾಜಕೀಯದ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಕಲಚುರಿ ಗಾಂಗೇಯದೇವ ಹಾಗೂ ಬಂಗಾಲದ ಚಂದ್ರವಂಶದ ಗೋವಿಂದಚಂದ್ರ ಮಹೀಪಾಲನ ಪ್ರಬಲ ಶತ್ರುಗಳಾಗಿದ್ದು, 1036ರೊಳಗೆ ಗಾಂಗೇಯ ವಾರಾಣಸಿಯನ್ನು ಪುನಃ ಕಸಿದುಕೊಂಡ. ಮಹೀಪಾಲ 988ರಿಂದ 1038ರ ತನಕ 50 ವರ್ಷಗಳ ಕಾಲ ಆಳಿದ. ಇವನ ಕಾಲದಲ್ಲಿ ಪಾಲರಾಜ್ಯದ ಕೀರ್ತಿ ಪುನಃ ಏರಿತು. ನಾಲಂದ ಸಾರಾನಾಥ ಮುಂತಾದ ಕಡೆಗಳಲ್ಲಿ ಹಲವಾರು ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಕಟ್ಟಿಸಿದ. ಜೀರ್ಣೋದ್ಧಾರ ಕಾರ್ಯಗಳಿಗೆ ಸಾಕಷ್ಟು ಸಹಾಯ ಪ್ರೋತ್ಸಾಹ ನೀಡಿದ. ಬಂಗಾಲದಲ್ಲಿ ಅನೇಕ ಕೆರೆಗಳನ್ನು ತೋಡಿಸಿ ಹೆಚ್ಚಿನ ನೀರಾವರಿ ಸೌಲಭ್ಯವನ್ನು ರೈತರಿಗೆ ಒದಗಿಸಲಾಯಿತು. ಆರ್ಥಿಕಾಭಿವೃದ್ಧಿಯ ಪರಿಣಾಮವಾಗಿ ಅನೇಕ ನಗರಗಳು ಅಸ್ತಿತ್ವಕ್ಕೆ ಬಂದುವು.
- ಇವನ ಅನಂತರ ಮಗ ನಯಪಾಲ ಪಟ್ಟಕ್ಕೆ ಬಂದ (1038). ಕಲಚುರಿ ಗಾಂಗೇಯನ ಮಗ ಕರ್ಣ ಮಗಧರಾಜ್ಯದ ಉದ್ದಂಡಪುರವನ್ನು ಆಕ್ರಮಿಸುವ ಯತ್ನದಲ್ಲಿ ನಯಪಾಲನೊಡನೆ ಕಾದು ಸೋತ. ಇವರ ನಡುವಣ ವೈಷಮ್ಯ ನೀಗಲು ವಿಕ್ರಮಶಿಲ ವಿಶ್ವವಿದ್ಯಾಲಯದ ದೀಪಂಕರ ಶ್ರೀಜ್ಞಾನನೆಂಬ (ಅತೀಶ) ಸಂನ್ಯಾಸಿ ನಡೆಸಿದ ಯತ್ನದ ಫಲವಾಗಿ ಇವರ ನಡುವೆ ಕದನ ವಿರಾಮ ವೇರ್ಪಟ್ಟಿತು. ನಯಪಾಲನ ಅನಂತರ ಗೌಡ ಮತ್ತು ಮಗಧ ದೇಶಗಳನ್ನು ಅವನ ಮಗ ಮೂರನೆಯ ವಿಗ್ರಹಪಾಲ ಆಳತೊಡಗಿದ (1055). ಮತ್ತೊಮ್ಮೆ ಕಲಚುರಿ ಕರ್ಣನೊಡನೆ ಕದನ ಆರಂಭವಾಗಿ ಕರ್ಣನ ಮಗಳಾದ ಯೌವನ ಶ್ರೀಯನ್ನು ವಿಗ್ರಹಪಾಲ ಮದುವೆಯಾಗುವುದರಲ್ಲಿ ಕೊನೆಗೊಂಡಿತು. ಕರ್ನಾಟಕದ ಚಾಲುಕ್ಯ ಯುವರಾಜ ಆರನೆಯ ವಿಕ್ರಮಾದಿತ್ಯ ಉತ್ತರ ಭಾರತದ ಗೌಡದೇಶದ ಮೇಲೆ ದಂಡೆತ್ತಿ ಬಂದು ಈ ಅರಸನನ್ನು ಸೋಲಿಸಿದ. ಈತ 1070ರಲ್ಲಿ ಮರಣ ಹೊಂದಿದ.
- ನಯಪಾಲನಿಗೆ ಎರಡನೆಯ ಮಹೀಪಾಲ, ಶೂರಪಾಲ ಮತ್ತು ರಾಮಪಾಲರೆಂಬ ಮೂವರು ಮಕ್ಕಳಿದ್ದರು. ಇಮ್ಮಡಿ ಮಹೀಪಾಲನ ಆಳ್ವಿಕೆಯ ಕಾಲದಲ್ಲಿ ಸಾಮಂತರು ದಂಗೆಯೆದ್ದರು. ಈತ ತನ್ನ ಸಹೋದರರನ್ನು ಶಂಕಿಸಿ ಸೆರೆಯಲ್ಲಿಟ್ಟು ಹಿಂಸಿಸಿದ. ಕೊನೆಗೆ ಈತನನ್ನು ದಿವ್ಯನೆಂಬ ಅಧಿಕಾರಿ ಕೊಂದು ವರೇಂದ್ರಿಯನ್ನು (ಉತ್ತರ ಬಂಗಾಲ) ಸ್ವತಂತ್ರವಾಗಿ ಆಳತೊಡಗಿದ. ಪಾಲರ ರಾಜ್ಯ ಈಗ ಉತ್ತರ ಹಾಗೂ ಮಧ್ಯ ಬಿಹಾರಕ್ಕೆ ಸೀಮಿತಗೊಂಡಿತ್ತು. ಈ ಕಾಲದ ಬಂಗಾಲದ ಇತಿಹಾಸ ನಮಗೆ ಸಂಧ್ಯಾಕರನಂದಿಯ ರಾಮಚರಿತವೆಂಬ ಗ್ರಂಥದಿಂದ ತಿಳಿದುಬಂದಿದೆ. ಇದು ರಾಮಪಾಲನಿಗೆ ಸಂಬಂಧಿಸಿದ ಚರಿತ್ರೆ ಗ್ರಂಥ. ವರೇಂದ್ರಿಯಲ್ಲಿ ದಿವ್ಯನ ಅನಂತರ ಅವನ ವಂಶಸ್ಥರು ಆಳತೊಡಗಿದ್ದರು. ಆ ಮನೆತನದ ಭೀಮನ ಕಾಲದಲ್ಲಿ ಪರಮಾರವಂಶದ ಲಕ್ಷ್ಮಿದೇವ ವರೇಂದ್ರಿಯನ್ನು ಮುತ್ತಿದಾಗ ಮಹೀಪಾಲನ ಸೋದರ ರಾಮಪಾಲ ತನ್ನ ಅಳಿದುಳಿದ ಹದಿನಾಲ್ಕು ಜನ ಸಾಮಂತರನ್ನೊಟ್ಟುಗೂಡಿಸಿ ತಾನು ವರೇಂದ್ರಿಯ ಮೇಲೆ ಏರಿಹೋದ. ಜಯ ಇವನದಾಯಿತು. ಇದರ ಅನಂತರ ಇವನು ತನ್ನ ರಾಜ್ಯ ವಿಸ್ತರಿಸಲು ಅನೇಕ ದಂಡಯಾತ್ರೆ ಕೈಗೊಂಡ. ಇದರ ಪರಿಣಾಮವಾಗಿ ಪಾಲರ ರಾಜ್ಯ ಪುನಃ ಬಂಗಾಲದ ಅಧಿಕ ಭಾಗಗಳನ್ನು ಒಳಗೊಂಡಿತಲ್ಲದೆ ಅಸ್ಸಾಮ್ ಹಾಗೂ ಬಿಹಾರಗಳಲ್ಲಿಯೂ ಹಬ್ಬಿತು.
- ರಾಮಪಾಲ ಸತ್ತಬಳಿಕ (1120) ರಾಜ್ಯವಾಳಿದ ಅರಸರು ಶಕ್ತಿಹೀನರಾಗಿದ್ದರು. ಕುಮಾರಪಾಲನ ಕಾಲದಲ್ಲಿ ಮಿಥಿಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕರ್ನಾಟಕ ವಂಶದ ನಾನ್ಯದೇವ, ಪೂರ್ವಗಂಗ ಮನೆತನದ ಅನಂತವರ್ಮ ಚೋಡಗಂಗ, ಸೇನಮನೆತನದ ವಿಜಯಸೇನ ಮುಂತಾದ ಪ್ರಬಲ ವಿರೋಧಿಗಳು ಪಾಲರಾಜ್ಯವನ್ನು ಮುತ್ತಿದರು. ಕುಮಾರಪಾಲನ ಬಳಿಕ 1125ರಿಂದ 1144ರ ತನಕ ಅವನ ಮಗ ಮೂರನೆಯ ಗೋಪಾಲ ಅನಂತರ, ರಾಮಪಾಲನ ಇನ್ನೊಬ್ಬ ಮಗ ಮದನಪಾಲ ಆಳಿದರು. ಮದನಪಾಲನ ಕಾಲದಲ್ಲಿ ಶತ್ರುಗಳ ಕಾಟ ಮಿತಿಮೀರಿ ಅವರನ್ನು ಸದೆಬಡೆಯಲು ಇವನಿಂದಾಗಲಿಲ್ಲ. ಬಂಗಾಲವನ್ನು ಸೇನರು ಆಕ್ರಮಿಸಿದರು. ಈತ ಅಂಗದೇಶಕ್ಕೆ ಹೋಗಿ ಅಲ್ಲಿ 1161ರ ತನಕವೂ ಕಾಂತಿಹೀನನಾಗಿ ಸಣ್ಣ ಪ್ರಾಂತ್ಯವನ್ನಾಳುತ್ತಿದ್ದ. ಇವನೊಂದಿಗೆ ಪಾಲವಂಶದ ಅರಸು ಮನೆತನ ಅಸ್ತಂಗತವಾಯಿತು.
- ದಕ್ಷಿಣ ಭಾರತ: ದಕ್ಷಿಣ ಭಾರತವೆಂದರೆ ವಿಂಧ್ಯಪರ್ವತದ ದಕ್ಷಿಣದ ಪ್ರದೇಶವೆಂದು ಭಾವಿಸಿದರೂ ಸಾಮಾನ್ಯವಾಗಿ ಈ ಮಾತನ್ನು ಭಾರತದ ದಕ್ಷಿಣಕ್ಕಿರುವ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಿಗೆ ಅನ್ವಯಿಸಲಾಗುತ್ತದೆ. ಈ ಪ್ರದೇಶ ದೀರ್ಘಕಾಲ ಪರಕೀಯರ ದಾಳಿಗಳಿಗೆ ಸಿಲುಕದೆ ಸ್ವತಂತ್ರವಾಗಿದ್ದ ಕಾರಣ ಇಲ್ಲಿ ಭಾರತೀಯ ಸಂಸ್ಕøತಿ ತನ್ನ ಮೂಲಸ್ವರೂಪ ಉಳಿಸಿಕೊಂಡು ಬಂದಿದೆ. ಇಲ್ಲಿಯ ದೇವಾಲಯವೇ ಮುಂತಾದ ಸಂಸ್ಥೆಗಳು ವಿಶೇಷವಾಗಿ ಸುಸ್ಥಿತಿಯಲ್ಲಿದ್ದು ಇಲ್ಲಿ ದೊರೆತಿರುವ ಸಹಸ್ರಾರು ಶಾಸನಗಳು, ಇತಿಹಾಸ ಪುನಾರಚನೆಗೆ ಅವಶ್ಯ ಆಧಾರಗಳನ್ನೊದಗಿಸಿವೆ. ಅಗಸ್ತ್ಯ ಋಷಿ ಹಿಮವತ್ ಪ್ರದೇಶದಿಂದ ವಿಂಧ್ಯವನ್ನು ದಾಟಿ ದಕ್ಷಿಣಕ್ಕೆ ಬಂದು ನೆಲಸಿದ. ಆತನೇ ತಮಿಳು ಭಾಷೆಯ ಪ್ರವರ್ತಕ ಎಂಬುದು ಸಾಂಪ್ರದಾಯಿಕ ಕತೆ. ಇಂಥದೊಂದು ಕತೆ ಪರಶುರಾಮನಿಗೂ ಕೇರಳಕ್ಕೂ ಸಂಬಂಧ ಕಲ್ಪಿಸಿದೆ. ಆದರೆ ಕ್ರಿ.ಪೂ. 660ಕ್ಕೂ ಮೊದಲಿನ ಉತ್ತರಭಾರತದ ಸಾಹಿತ್ಯದಲ್ಲಿ ದಕ್ಷಿಣ ಭಾರತದ ಪ್ರಸ್ತಾಪವಿಲ್ಲ. ಪಾಣಿನಿಯ ವ್ಯಾಕರಣದಲ್ಲಿ ಕಲಿಂಗ ಮತ್ತು ಗೋದಾವರೀ ಸಮೀಪ ಆಶ್ಮಕ ದೇಶಗಳ ಉಲ್ಲೇಖವಿದೆ. ಪಾಂಡ್ಯ ಚೋಳ ಹಾಗೂ ಕೇರಳ ದೇಶಗಳನ್ನು ಕಾತ್ಯಾಯನ ಪ್ರಸ್ತಾಪಿಸಿದ್ದಾನೆ. ಆಂಧ್ರಪ್ರದೇಶ ಹಾಗೂ ಕರ್ನಾಟಕದ ಉತ್ತರ ಭಾಗಗಳನ್ನು ಅಶೋಕ ತನ್ನದಾಗಿಸಿಕೊಂಡಿದ್ದನೆನ್ನಲು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ಧಾಪುರ, ಜಟಿಂಗರಾಮೇಶ್ವರಗಳಲ್ಲಿ, ಬಳ್ಳಾರಿಜಿಲ್ಲೆಯ ನಿಟ್ಟೂಯ ಮತ್ತು ಉದೆಗೊಳ, ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಕೊಪ್ಪಗಳಲ್ಲಿ ಲಭಿಸಿರುವ ಆತನ ಶಾಸನಗಳೇ ಸಾಕ್ಷಿ. ಆದರೆ ಆತನ ಕಾಲದಲ್ಲಿ ದಕ್ಷಿಣ ಭಾರತದ ರಾಜಕೀಯ ಪರಿಸ್ಥಿತಿ ಹೇಗಿತ್ತೆಂದು ಹೇಳುವುದು ಕಷ್ಟ.
- ತಮಿಳುನಾಡಿಗೆ ಸಂಬಂಧಿಸಿದಂತೆ ಶಂಗ (ಸಂಘ) ಸಾಹಿತ್ಯವನ್ನಾಧರಿಸಿ ಹಲವಾರು ಐತಿಹಾಸಿಕ ವಿವರಗಳನ್ನು ನೀಡಲಾಗಿದೆ. ಶಂಗಮ್ ಎಂಬುದು ದಕ್ಷಿಣ ಮಧುರೆಯಲ್ಲಿ ರಾಜಾಶ್ರಯ ಪಡೆದಿದ್ದ ಕವಿಗಳ ಸಂಘ. ಒಂದೊಂದರ ನಡುವೆಯೂ ದೀರ್ಘಕಾಲದ ಅಂತರವಿದ್ದು ಇಂಥ ಮೂರು ಸಂಘಗಳು ಆಗಿಹೋದುವು. ಇವುಗಳ ಒಟ್ಟು ಪ್ರಮಾಣ 6990 ವರ್ಷಗಳು, 8598 ಕವಿಗಳು. 197 ಪಾಂಡ್ಯ ಅರಸರ ಆಶ್ರಯದಲ್ಲಿದ್ದರು ಎಂಬುದು ಸಾಂಪ್ರದಾಯಿಕ ನಂಬುಗೆ. ಮೇಲ್ನೋಟಕ್ಕೆ ಇದು ಉತ್ಪ್ರೇಕ್ಷೆಯಂತೆ ಕಂಡರೂ ಚಾರಿತ್ರಿಕ ಅಂಶಗಳೊಡನೆ ಐತಿಹ್ಯಗಳೂ ಕತೆಗಳೂ ಸಮಾವೇಶವಾಗಿರುವುದು ಸ್ಪಷ್ಟ.
- ಈ ಕಾಲದಲ್ಲಿ ಆಳಿದ ಅರಸರು ಚೇರ, ಚೋಳ, ಪಾಂಡ್ಯವಂಶಗಳಿಗೆ ಸೇರಿದವರು. ಚೀರವಂಶದ ನೆಡುನ್‍ಚೇರನ್ ರಾಜಧಾನಿ ಮರಂದೈಯಿಂದ ಆಳುತ್ತಿದ್ದು ಹಿಮಾಲಯದವರೆಗೂ ರಾಜ್ಯ ವಿಸ್ತರಿಸಿ ಇಮಯ ವರಂಬನ್ ಎಂಬ ಬಿರುದು ಧರಿಸಿದ್ದನಂತೆ. ಶಂಗಮ್ ಕವಿ ಪರನಾರ್‍ನ ಹೊಗಳಿಕೆಗೆ ಪಾತ್ರನಾದ ಇನ್ನೊಬ್ಬ ಅರಸ ಆದನ್ ಎಂಬಾತನ ಮಗ ಶೆನ್‍ಗುಟ್ಟುವನ್. ಈತ ಪ್ರಬಲ ನೌಕಾ ಪಡೆ ಹೊಂದಿದ್ದ. ಶಿಲಪ್ಪದಿಕಾರಮ್ ಗ್ರಂಥದ ನಾಯಕಿಯಾದ ಕನ್ನಗಿ ಓರ್ವ ಆದರ್ಶಸತಿ ಎನಿಸಿ ಆಕೆಯ ಹೆಸರಿನಲ್ಲಿ ಸ್ತ್ರೀದೇವತೆಯನ್ನು ಪೂಜಿಸುವ ಪತಿನೀ ಎಂಬ ಪಂಥ ಕೇರಳದಲ್ಲಿ ಆರಂಭವಾಯಿತು. ಆಯ್ ಮತ್ತು ಪಾರಿ ಸಮಕಾಲೀನ ಕಿರಿಯ ಪ್ರಾಂತ್ಯಾಧಿಕಾರಿಗಳು. ಆಯ್ ಪೊದಿಯಲ್ ಬೆಟ್ಟದ ಸುತ್ತಲಿನ ಭಾಗದ ನಾಯಕ ಪಾರಿಯ. ಇವನದು ಪಾಂಡ್ಯನಾಡಿನ ಪರನ್ ಮಲೈ ಎಂಬ ಪ್ರದೇಶ. ಧರ್ಮಪುರಿಯ ಸುತ್ತಲಲ್ಲಿ ಅಡಿಗೈಮಾನ್ ಎಂಬಾತ ಆಳುತ್ತಿದ್ದ. ಖ್ಯಾತ ಕವಿಯಿತ್ರಿ ಅವ್ವೈಯಾರಳ ಆಶ್ರಯದಾತನೀತ. ಕ್ರಿ.ಶ. ಎರಡನೆಯ ಶತಮಾನದ ಮಧ್ಯಭಾಗದಲ್ಲಿ ಇವರು ಆಳಿದರೆನ್ನಬಹುದು.
- ನೆಡುಂಜಳಿಯನ್: ಸುಮಾರು 210. ಪಾಂಡ್ಯದೊರೆ. ಕಿರಿವಯಸ್ಸಿನ ಈತನನ್ನು ಹೊರದೂಡಲು ಯತ್ನಿಸಿದ ಶತ್ರುಗಳನ್ನು ಈತ ತಲೈಯಾಲಂಗಾನಮ್ ಕದನದಲ್ಲಿ ಸೋಲಿಸಿ ಮಿಳಿಲೈ ಮತ್ತು ಮುತ್ತೂರು ವಿಭಾಗಗಳನ್ನು ವಶಪಡಿಸಿಕೊಂಡ.
- ಕರಿಕಾಲ ಚೋಳನಿಗೆ ಸುಮಾರು 190ರ ಬೆಂಕಿಯ ಅನಾಹುತದಲ್ಲಿ ಕಾಲುಸುಟ್ಟು ಕರಿಕಾಲನೆಂಬ ಹೆಸರು ಬಂತು. ಅನಂತರದ ಕಾಲದಲ್ಲಿ ಇದಕ್ಕೆ ವಿಶೇಷ ಅರ್ಥಗಳನ್ನು ಕಲ್ಪಿಸಲಾಗಿದೆ. ಆರಂಭದಲ್ಲಿ ತೊಂದರೆ ಎದುರಿಸಬೇಕಾಗಿ ಬಂದ ಈತ ಕ್ರಮೇಣ ತನ್ನ ಬಲ ಹೆಚ್ಚಿಸಿಕೊಂಡು ತಂಜಾವೂರಿನ ಸಮೀಪದ ವೆಣ್ಣಿ ಎಂಬಲ್ಲಿ ನಡೆದ ಕದನದಲ್ಲಿ ಶತ್ರುಗಳನ್ನು ಸೋಲಿಸಿದ. ವಾಹೈಪ್ಪಳ¾ಂದಲೈಯಲ್ಲಿ ಇನ್ನೊಂದು ಕದನಹೂಡಿ ಒಂಬತ್ತು ಜನ ಸಾಮಂತ ಶತ್ರುಗಳನ್ನು ಸದೆಬಡಿದ. ಪರಿಣಾಮವಾಗಿ ತಮಿಳುನಾಡಿನ ಅರಸರ ಸಾರ್ವಭೌಮನೆನಿಸಿದ. ಕಾವೇರಿ ಪಟ್ಟಣ ಸಂಪದ್ಭರಿತವಾಗಿ, ಒಳನಾಡಿನ ಮತ್ತು ಹೊರನಾಡಿನ ವ್ಯಾಪಾರ ವೃದ್ಧಿ ಹೊಂದಿ ಜನ ಸುಖಶಾಂತಿಗಳಿಂದ ಜೀವಿಸಿದರು. ಕರಿಕಾಲನ ಖ್ಯಾತಿ ಹೆಚ್ಚಿ ಆತನ ಸುತ್ತಲೂ ಹಲವಾರು ಕಥೆಗಳನ್ನು ಹೆಣೆಯಲಾಯಿತು. ಶಂಗಮ್ ಸಾಹಿತ್ಯದಿಂದ ಅಂದಿನ ತಮಿಳು ಸಮಾಜದ ಹಲವಾರು ವಿವರಗಳು ತಿಳಿದುಬರುತ್ತವೆ.
- ಐತಿಹಾಸಿಕವಾಗಿ ದಖನ್ ಪ್ರದೇಶದಲ್ಲಿ ಮೌರ್ಯರ ಉತ್ತರಾಧಿಕಾರಿಗಳಾಗಿ ಸಾತವಾಹನರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಭಾಗಗಳಲ್ಲಿ ಆಳಿದರು. ಯಜ್ಞಶ್ರೀ ಸಾತಕರ್ಣಿಯ ಅನಂತರ ಇವರ ರಾಜ್ಯವಂಶ ಬೇರೆ ಬೇರೆ ಶಾಖೆಗಳಿಗೆ ಸೇರಿದ ಅರಸರಲ್ಲಿ ಹಂಚಿಹೋಯಿತು. ಕುಂತಲ ಸಾತಕರ್ಣಿ ಮತ್ತು ಹಾಲ ಎಂಬಿಬ್ಬರು ಕರ್ನಾಟಕ ಶಾಖೆಗೆ ಸೇರಿದವರಾಗಿದ್ದು ಕರ್ನಾಟಕದ ಭಾಗಗಳಲ್ಲಿ ಆಳಿದರು. ವೈದಿಕ ಮತಾವಂಲಬಿಗಳಾಗಿದ್ದ ಇವರು ಸಂಪ್ರದಾಯಗಳಿಗೆ ಪ್ರೋತ್ಸಾಹ ನೀಡಿದರಾದರೂ ಪರಮತ ಸಹಿಷ್ಣುಗಳಾಗಿ ಎಲ್ಲ ಬಗೆಯ ಸಾಹಿತ್ಯ ಕಲೆಗಳಿಗೆ ಇಂಬುಕೊಟ್ಟರು. ಬೃಹತ್ಕಥೆಯ ಗುಣಾಢ್ಯ ಈ ಕಾಲದವ. ಈ ಕಾಲದಲ್ಲಿ ವಾಣಿಜ್ಯ ಅಭಿವೃದ್ಧಿ ಹೊಂದಿ ವೃತ್ತಿಪರ ಸಂಘಗಳು ವಣಿಕ ಸಂಘಗಳೂ ನಾಡಿನ ಪುರೋಭಿವೃದ್ಧಿಗೆ ನೆರವಾದುವು. ಉಜ್ಜಯಿನಿ, ವಿದಿಶಾ, ಪ್ರತಿಷ್ಠಾನ, ತಗರಪುರ, ಕರಹಾಡ, ಬನವಾಸಿ, ಧನ್ಯಕಟಕ ಮುಂತಾದ ನಗರಗಳು ಬೆಳದುವು. ನಾಸಿಕ್, ಕಾರ್ತಿ, ಕನ್ನೇರಿಗಳಲ್ಲಿ ಗುಹಾಂತರ್ಗತ ದೇವಾಲಯಗಳು ಅಸ್ತಿತ್ವಕ್ಕೆ ಬಂದುವು.
- ಸಾತವಾಹನರ ಉತ್ತರಾಧಿಕಾರಿಗಳಾಗಿ ಈಗಿನ ಆಂಧ್ರಪ್ರದೇಶದಲ್ಲಿ ಇಕ್ಷ್ವಾಕು ಮನೆತನದ ಅರಸರು ಕೆಲಕಾಲ ಆಳಿದರು. ಜಗ್ಗಯ್ಯಪೇಟ, ನಾಗಾರ್ಜುನಕೊಂಡ ಮುಂತಾದೆಡೆಗಳಲ್ಲಿ ಇವರ ಶಾಸನಗಳು ಕಂಡುಬಂದಿದ್ದು ಇವರನ್ನು ಕುರಿತ ವಿವರಗಳು ತಿಳಿದಿವೆ. ಮೂಲಪುರುಷನಾದ ವಾಸಿಷ್ಠೀಪುತ್ರ ಚಾಂತಮೂಲ ಅಗ್ನಿಷ್ಟೋಮಾದಿ ಯಜ್ಞಗಳನ್ನು ಮಾಡಿದ. ಈತನ ಮಗ ವೀರಪುರಿಸದಾತ ಬೌದ್ಧ ಧರ್ಮಾವಲಂಬಿಯಾಗಿದ್ದು ನಾಗಾರ್ಜುನಕೊಂಡದಲ್ಲಿ ದೊಡ್ಡ ಸ್ತೂಪಕಟ್ಟಿಸಿದ.
- ಆಭೀರರು ಸಾತವಾಹನ ರಾಜ್ಯದ ವಾಯವ್ಯ ಭಾಗದ ನಾಸಿಕದ ಸುತ್ತಲೂ 67 ವರ್ಷಗಳ ಕಾಲ ಆಳಿದರು. ಮಾಢರೀಪುತ ಈಶ್ವರಸೇನ ಇವರಲ್ಲಿ ಮೊದಲಿಗ. ಇನ್ನೊಬ್ಬಾತ ವಸುಷೇಣ, ಮಹಾರಾಷ್ಟ್ರ ಮತ್ತು ಕುಂತಲಗಳಲ್ಲಿ ಪ್ರಬಲರಾಗಿದ್ದ ಚುಟುಕುಲದ ಅರಸರ ಕೆಲವು ನಾಣ್ಯಗಳೂ ಶಾಸನಗಳೂ ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ದೊರೆತಿವೆ. ಇವರ ಉತ್ತರಾಧಿಕಾರಿಗಳಾಗಿ ಆಂಧ್ರದಲ್ಲಿ ಬೃಹತ್ವಲಾಯನ, ಶಾಲಂಕಾಯನ ಹಾಗೂ ವಿಷ್ಣುಕುಂಡಿ ಮನೆತನಗಳು ಅಧಿಕಾರದಲ್ಲಿದ್ದುವು. ವಾಕಾಟಕರ ಅಧೀನರಾಗಿದ್ದ ವಿಷ್ಣುಕುಂಡಿಗಳು ಅನಂತರ 5ನೆಯ ಶತಮಾನಾರಂಭದಲ್ಲಿ ಸ್ವತಂತ್ರರಾಗಿ ಆಳಿದರು, ಇಂದ್ರವರ್ಮನ ಮಗ ಮಾಧವವರ್ಮ, ಗೋವಿಂದವರ್ಮ, ಇಮ್ಮಡಿ ಮಾಧವವರ್ಮ ಇವರಲ್ಲಿ ಪ್ರಮುಖರು. ಇವರ ಕಾಲದಲ್ಲಿ ರಾಜ್ಯ ಗೋದಾವರಿ ಕೃಷ್ಣಾನದಿಪ್ರದೇಶವನ್ನು ಆಕ್ರಮಿಸಿತ್ತು. ಆರನೆಯ ಶತಮಾನದ ಅಂತ್ಯದ ತನಕವೂ ಪ್ರಬಲರಾಗಿದ್ದ ಇವರು ಏಳನೆಯ ಶತಮಾನದ ಆರಂಭದಲ್ಲಿ ಬಾದಾಮಿ ಚಾಲುಕ್ಯರಿಗೆ ರಾಜ್ಯ ಒಪ್ಪಿಸಬೇಕಾಯಿತು.
- ತಮಿಳುನಾಡಿನ ಕಾಂಚೀಪುರದ ಸುತ್ತಲಿನ ಭಾಗಗಳಲ್ಲಿ 4ನೆಯ ಶತಮಾನದಿಂದ ಸುಮಾರು 500 ವರ್ಷಗಳ ಅಧಿಕಾರ ಚಲಾಯಿಸಿದವರು ಸಾತವಾಹನರ ಸಾಮಂತರಾಗಿದ್ದ ಪಲ್ಲದರು, ಇವರು ಮೂಲತಃ ವಿದೇಶೀಯರೆಂಬ ಅಥವಾ ಉತ್ತರದಿಂದ ದಕ್ಷಿಣಕ್ಕೆ ಬಂದವರೆಂಬ ಅಭಿಪ್ರಾಯಗಳಿದ್ದರೂ ಅವು ಮಾನ್ಯವಲ್ಲ. ಇವರ ಆರಂಭದ ಶಾಸನಗಳು ಪ್ರಾಕೃತ ಭಾಷೆಯಲ್ಲಿದ್ದು ಅನಂತರ ಸಂಸ್ಕøತ ಶಾಸನಗಳು ಕಾಣಿಸಿಕೊಂಡಿವೆ. ಆದರೆ ಅವುಗಳಲ್ಲಿರುವ ಹೆಸರುಗಳಲ್ಲಿ ಹೊಂದಾಣಿಕೆಗಳಿಲ್ಲ. ಕಾಂಚಿಯ ಅರಸ ವಿಷ್ಣುಗೋಪನನ್ನು, ಸಮುದ್ರಗುಪ್ತ ಸೋಲಿಸಿದ. ಪ್ರಾಕೃತ ಶಾಸನಗಳ ಪಲ್ಲವರಲ್ಲಿ ಮೊದಲಿಗ ಶಿವಸ್ಕಂದವರ್ಮ ಈತನ ಕಾಲ ಕ್ರಿ.ಶ.ಸು. 4ನೆಯ ಶತಮಾನದ ಆದಿಭಾಗ. ಸಂಸ್ಕøತ ಶಾಸನಗಳಲ್ಲಿ ಮೊದಲ ಹೆಸರು ಕುಮಾರ ವಿಷ್ಣುವಿನದು, 3ನೆಯ ಕುಮಾರವಿಷ್ಣುವಿನ ಕಾಲದಲ್ಲಿ ಕಳಭ್ರ ಎಂಬವರು ದಕ್ಷಿಣ ಭಾರತದ ರಾಜಕೀಯ ಸಾಮಾಜಿಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದರು. ಪಲ್ಲವರ ಚರಿತ್ರೆಯ ಸ್ಪಷ್ಟ ಚಿತ್ರ ಮೂಡುವುದು 6ನೆಯ ಶತಮಾನದ ಅಂತ್ಯದಿಂದ. ಪಾಕೃತ ಶಾಸನಗಳ ಪಲ್ಲನ ಶಿವಸ್ಕಂದವರ್ಮ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸುತ್ತಲಿನ ಪ್ರದೇಶದಲ್ಲಿ ಆಳುತ್ತಿದ್ದ. ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ ಕದಂಬವಂಶದ ಬ್ರಾಹ್ಮಣರು ನೆಲಸಿದ್ದು ಅವರ ಪೈಕಿ ಒಬ್ಬಾತನಾದ ಮಯೂರಶರ್ಮ ತನ್ನ ಅಜ್ಜ ವೀರಶರ್ಮನೊಂದಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕಾಂಚೀಪುರಕ್ಕೆ ತೆರಳಿದ. ಅಲ್ಲಿ ಅಶ್ವಸಂಸ್ಥೆಗೆ ಸಂಬಂಧಿಸಿದ ಕಲಹದಲ್ಲಿ ಅವಮಾನಿತನಾದ. ಬ್ರಾಹ್ಮಣ್ಯತ್ಯಜಿಸಿ, ಕ್ಷಾತ್ರವೃತ್ತಿ ಹಿಡಿದು ಸೈನ್ಯ ಕೂಡಿಸಿ ಪಲ್ಲವರನ್ನೂ ಅವರ ಸಾಮಂತರನ್ನೂ ಸೋಲಿಸಿದ. ಸ್ವಬಾಹುಬಲದಿಂದ ಪಶ್ಚಿಮ ಸಮುದ್ರದಿಂದ ಪ್ರೇಹಾರದ ವರೆಗಿನ (ಮಲಪ್ರಭಾ ನದಿ) ಪ್ರದೇಶವನ್ನು ತನ್ನದಾಗಿ ಮಾಡಿಕೊಂಡು ಸ್ವತಂತ್ರವಾದ ರಾಜವಂಶಕ್ಕೆ ಬುನಾದಿ ಹಾಕಿದ. ಬನವಾಸಿ ಈತನ ರಾಜಧಾನಿ. ಸುಮಾರು 300ರಲ್ಲಿ ಕದಂಬರಾಜ್ಯ ಆರಂಭವಾಯಿತೆನ್ನಬಹುದು. ಇದು ಕರ್ನಾಟಕದ ಮೊದಲ ಅರಸು ಮನೆತನ. ಇವನಿಗೂ ಇವನ ಉತ್ತರಾಧಿಕಾರಿಗಳಿಗೂ ಅನುವಂಶಿಕವಾಗಿ ಎಂಬಂತೆ ಪಲ್ಲವರೊಡನೆ ವೈರ ಮುಂದುವರಿಯಿತು. ಇವರಲ್ಲಿ ಕಾಕುತ್ಥ್ಸವರ್ಮ, ಮೃಗೇಶವರ್ಮ, ರವಿವರ್ಮ ಹಾಗೂ ಇಮ್ಮಡಿ ಕೃಷ್ಣವರ್ಮರು ಪ್ರಮುಖರು. ಕಾಕುತ್ಥ್ಸವರ್ಮನ ಬಳಿಕ ಅವನ ಇಬ್ಬರು ಸಹೋದರರಾದ ಶಾಂತಿವರ್ಮ, ಕೃಷ್ಣವರ್ಮರು ರಾಜ್ಯವನ್ನು ಹಂಚಿಕೊಂಡರು. ಬಳ್ಳಾರಿ ಜಿಲ್ಲೆಯ ಉಚ್ಚಂಗಿ ಕೃಷ್ಣವರ್ಮನ ರಾಜಧಾನಿಯಾಯಿತು. ಆದರೆ ಒಂದು ಶತಮಾನದ ಬಳಿಕ ಸುಮಾರು 530ರ ವೇಳೆಗೆ ಇಮ್ಮಡಿ ಕೃಷ್ಣವರ್ಮ ಎರಡು ಭಾಗಗಳನ್ನೂ ಒಟ್ಟು ಗೂಡಿಸಿದನಾದರೂ ಅನಂತರ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ ಬಹುಶಃ ಸಾಮಂತನಾಗಿದ್ದ ಚಾಲುಕ್ಯ ವಂಶವ ಮೊದಲನೆಯ ಪುಲಕೇಶಿ ಪ್ರಬಲನಾಗಿ ಕದಂಬರನ್ನು ಸೋಲಿಸಿ ಚಾಲುಕ್ಯ ರಾಜ್ಯ ಸ್ಥಾಪಿಸಿದ.
- ಕದಂಬರ ಸಮಕಾಲಿನವಾಗಿ ಕರ್ನಾಟಕದಲ್ಲಿ ಕಾವೇರಿಯ ಪರಿಸರದಲ್ಲಿ ಆಳಿದ ಇನ್ನೊಂದು ಮನೆತನ ಗಂಗರದು. ಕದಂಬರು ಪ್ರಾಬಲ್ಯಕ್ಕೆ ಬಂದಾಗ ಅವರ ಏಳಿಗೆಗೆ ತಡೆಯೊಡ್ಡಲೆನ್ನುವಂತೆ ಪಲ್ಲವರು ಗಂಗನ ನೆರವಿಗೆ ಬಂದರು. ಗಂಗರ ಮೂಲ ಕುರಿತಂತೆ ಶಾಸನಗಳಲ್ಲಿ ಹಲವಾರು ಸಾಂಪ್ರದಾಯಿಕ ಕತೆಗಳು ಹುಟ್ಟಿಕೊಂಡಿವೆ. ಮನೆತನದ ಮೊದಲಿಗರು ಅಯೋಧ್ಯೆಯಿಂದಲೋ ಆಹಿಚ್ಛತ್ರದಿಂದಲೋ ಬಂದು ಈಗಿನ ನಂದಿದುರ್ಗ, ಕೋಲಾರಗಳನ್ನು ನೆಲೆವೀಡುಗಳಾಗಿ ಮಾಡಿಕೊಂಡರೆಂದು ಹೇಳಲಾಗಿದೆ. ಹೇಗಿದ್ದರೂ ಈ ಮನೆತನದ ಮೂಲ ಪುರುಷ ಈತನ ಮಗ ಮಾಧವ ಸುಮಾರು 350ರಿಂದ ಆಳತೊಡಗಿದ. ಆ ವೇಳೆಗಾಗಲೇ ಕದಂಬ ಮಯೂರವರ್ಮ ಸ್ವತಂತ್ರವಾಗಿ ಆಳುತ್ತಿದ್ದ. ಸುಮಾರು 675 ವರ್ಷಗಳ ಕಾಲ (999ರ ತನಕ) ಆಳಿದ ಇವರು ಆರಂಭದಲ್ಲಿ ಕದಂಬರ ಸಮಕಾಲೀನರಾಗಿ ಸ್ವತಂತ್ರರಾಗಿ ಆಳಿದರು. ಆ ಬಳಿಕ ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಲುಕ್ಯ ಅರಸುಗಳ ಸಾಮಂತಿಗೆ ಒಪ್ಪಿಕೊಂಡಿರಬೇಕಾಯಿತು. ಹೀಗಾಗಿ ಇದೊಂದು ಪ್ರಮುಖ ಸಾಮಂತಮನೆತನವಾಗಿತ್ತು. ಅವನೀತ (ಸುಮಾರು 469-529), ದುರ್ವಿನೀತ (529-79), ಶ್ರೀಪುರುಷ (725-88) ಇಮ್ಮಡಿ ಬೂತುಗ (936-61) ಮುಂತಾದವರು ಇವರಲ್ಲಿ ಪ್ರಮುಖರು. ಇಮ್ಮಡಿ ಬೂತುಗನ ಮಗ ಮಾರ ಸಿಂಹನ ಕಾಲದಲ್ಲಿ ಆತನ ಮಂತ್ರಿ ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರಮೂರ್ತಿ ಪ್ರತಿಷ್ಠಾಪಿಸಿದ.
- ಕದಂಬರಾಜ್ಯವನ್ನು ವಶಪಡಿಸಿಕೊಂಡ ಚಾಲುಕ್ಯ ಪುಲಕೇಶಿ ಬಾದಾಮಿಕೋಟೆಯನ್ನು ಕಟ್ಟಿಸಿ ವಾಜಪೇಯ ಮುಂತಾದ ಯಜ್ಞಗಳನ್ನು ಮಾಡಿ ಚಾಲುಕ್ಯ ಮನೆತನದ ಆಳ್ವಿಕೆಗೆ ಬುನಾದಿಗೈದ. ಈತನ ಮಗ ಕೀರ್ತಿವರ್ಮ ರಾಜ್ಯವನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಿದರೂ ಅಲ್ವಾಯಷಿಯಾಗಿ ರಾಜ್ಯವನ್ನು ಮಗನ ಪರವಾಗಿ ಕಾಪಾಡಿಕೊಂಡಿರಲು ಸೋದರ ಮಂಗಲೇಶನಿಗೆ ಒಪ್ಪಿಸಿ ಮಡಿದ. ಅನಂತರ ಮಂಗಲೇಶ ರಾಜ್ಯವನ್ನು ತನ್ನ ಬಳಿಕ ತನ್ನ ಸಂತತಿಯವರಿಗೆ ಕೊಡಲು ಸಿದ್ಧನಾದಾಗ ಕೀರ್ತಿವರ್ಮನ ಮಗ ಇಮ್ಮಡಿ ಪುಲಕೇಶಿ ಚಿಕ್ಕಪ್ಪನ ವಿರುದ್ಧ ಕದನ ಹೂಡಿ ಆತನನ್ನು ರಣರಂಗದಲ್ಲಿ ಕೊಂದು ರಾಜ್ಯ ಪಡೆಯಬೇಕಾಯಿತು. ಈತ ದಿಗ್ವಿಜಯಯಾತ್ರೆ ಕೈಗೊಂಡು ನಾಲ್ಕು ದಿಕ್ಕುಗಳಲ್ಲಿ ರಾಜ್ಯ ವಿಸ್ತರಿಸಿದ. ಉತ್ತರದಲ್ಲಿ ಕನೊಜಿನ ಹರ್ಷವರ್ಧನನ್ನು ಸೋಲಿಸಿದ. ಪೂರ್ವದಲ್ಲಿ ಆಂಧ್ರರನ್ನು ಸೋಲಿಸಿ ವೇಂಗಿಯನ್ನು ಆಕ್ರಮಿಸಿ, ತನ್ನ ಸೋದರ ವಿಷ್ಣುವರ್ಧನನನ್ನು ಅಲ್ಲಿ ಅಧಿಕಾರದಲ್ಲಿ ನೆಲೆಗೊಳಿಸಿ ದಕ್ಷಿಣದಲ್ಲಿ ಪಲ್ಲವರ ರಾಜಧಾನಿಯಾದ ಕಾಂಚೀಪುರವನ್ನು ಮುತ್ತಿ ಮಹೇಂದ್ರವರ್ಮನನ್ನು ಸೋಲಿಸಿದ. ಇದರಿಂದ ರಾಜ್ಯ ಬಹಳವಾಗಿ ವಿಸ್ತರಿಸಿತು. ಆದರೆ ಸೇಡಿನ ಮನೋಭಾವದಿಂದ ಪಲ್ಲವ ನರಸಿಂಹವರ್ಮ ಇವನ ರಾಜ್ಯವನ್ನು ಅನಿರೀಕ್ಷಿತವಾಗಿ ಮುತ್ತಿ ಈತನನ್ನು ಸೋಲಿಸಿ ಕೊಂದ. ಬಾದಾಮಿ ಹದಿಮೂರು ವರ್ಷಗಳ ಕಾಲ (642-55) ಪಲ್ಲವರ ವಶದಲ್ಲಿತ್ತೆಂದು ತೋರುತ್ತದೆ. 655ರ ಸುಮಾರಿಗೆ ಪುಲಕೇಶಿಯ ಮಗ ವಿಕ್ರಮಾದಿತ್ಯ ಶ್ರಮಪಟ್ಟು ಪಲ್ಲವರನ್ನು ಹ್ರೆರಾಟಗಳಿಗೆ ನಾಂದಿಯಾದುವು. ಪುಲಕೇಶಿಯ ಮಕ್ಕಳು ರಾಜ್ಯ ಮರಳಿ ಪಡೆಯಲು ಯತ್ನಿಸಿದರಾದರೂ ಅವರಲ್ಲಿ ಯಶಸ್ವಿಯಾದವ ಮೊದಲನೆಯ ವಿಕ್ರಮಾದಿತ್ಯ. ಈತನ ಮರಿಮಗ ಎರಡನೆಯ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ಕಾಂಚೀಪುರ ಆಕ್ರಮಿಸಿದನಾದರೂ ಕೊಳ್ಳೆ ಸುಲಿಗೆಗಳಲ್ಲಿ ಆಸಕ್ತನಾಗದೆ, ಆ ರಾಜಧಾನಿಯಲ್ಲಿ ದೇವಾಲಯವೊಂದರ ವೈಭವವನ್ನು ಕಂಡು ಮೆಚ್ಚಿ ಸ್ವತಃ ತಾನೇ ಮತ್ತಪ್ಪು ದಾನಗಳನ್ನು ನೀಡಿದ. ಈತನ ಮಗ ಇಮ್ಮಡಿ ಕೀರ್ತಿವರ್ಮನ ಆಳ್ವಿಕೆಯಲ್ಲಿ ಸಾಮಂತನಾಗಿದ್ದ ರಾಷ್ಟ್ರಕೂಟ ಮನೆತನದ ದಂತಿದುರ್ಗ ಮತ್ತು ಆ ಬಳಿಕ ಆತನ ಚಿಕ್ಕಪ್ಪ ಕೃಷ್ಣ ಒಬ್ಬರಾದ ಮೇಲೊಬ್ಬರು ಕೀರ್ತಿವರ್ಮನನ್ನು ಸೋಲಿಸಿ ಚಾಲುಕ್ಯ ರಾಜ್ಯದ ಅಳಿವಿಗೆ ಕಾರಣರಾದರು. ಈ ಅರಸರ ಆಳ್ವಿಕೆಯ 250 ವರ್ಷಗಳ ಕಾಲದಲ್ಲಿ ಕರ್ನಾಟಕ ತನ್ನದೇ ಆದ ಸಂಸ್ಕøತಿಯನ್ನು ರೂಪಿಸಿಕೊಂಡಿತು. ಈ ನಾಡಿನ ಸೈನಿಕರು ಶೌರ್ಯ ಸಾಹಸಗಳಿಗೆ ಹೆಸರುವಾಸಿಯಾಗಿ ಈ ಸ್ಯೆನ್ಯವನ್ನು ಕರ್ನಾಟಕ ಬಲವೆಂದು ಸಮಕಾಲೀನರು ಗುರುತಿಸುವಂತಾಯಿತು. ಧರ್ಮ ಸಮನ್ವಯ ಇವರು ಅನುಸರಿಸಿದ ನೀತಿ ವಾಸ್ತು ಶೈಲಿಯಲ್ಲಿಯೂ ಉತ್ತರ ದಕ್ಷಿಣ ಶೈಲಿಗಳೆಂದು ಗುರುತಿಸಲಾದ ನಾಗರ ಮತ್ತು ದ್ರಾವಿಡ ಶೈಲಿಗಳನ್ನು ಸಮನ್ವಯಗೊಳಿಸಿ ತಮ್ಮದೇ ಆದ ಕರ್ನಾಟಕ ಶೈಲಿಯನ್ನು ನಾಡಿನ ರೂವಾರಿಗಳು ರೂಪಿಸಿದರು. ಸಂಸ್ಕøತ ಕನ್ನಡ ಸಾಹಿತ್ಯಗಳಿಗೆ ಇವರು ಪೋಷಣೆ ನೀಡಿದರು. ರಾಣಿ ವಿಜಯ ಮಹಾದೇವಿ ಕರ್ನಾಟಕ ಸರಸ್ವತಿ ಎಂದು ಬಿರುದಾಂಕಿತಳಾಗಿದ ಸಂಸ್ಕøತ ಕಮಯಿತ್ರಿ. ಐಹೊಳೆ ಶಾಸನದ ಕವಿ ರವಿಕೀರ್ತಿ ತನ್ನನ್ನು ಕಾಳಿದಾಸ, ಭಾರವಿಯರಿಗೆ ಹೋಲಿಸಿಕೊಂಡಿದ್ದಾನೆ. ತಮಿಳುನಾಡಿನಲ್ಲಿ ಚಾಲುಕ್ಯರ ಸಮಕಾಲೀನರಾಗಿ ಆಳಿದವರೂ ಪಲ್ಲವರೇ. 6ನೆಯ ಶತಮಾನದ ಅಂತ್ಯಭಾಗದಿಂದ ಪಲ್ಲವರ ಇತಿಹಾಸ ಇವರ ಶಿಲಾಶಾಸನಗಳ ಹಾಗೂ ಇತರ ಆಧಾರಗಳ ಮೂಲಕ ಹೆಚ್ಚು ಸ್ಪಷ್ಟವಾಗುತ್ತದೆ. ತಮಿಳುನಾಡಿನ ರಾಜಕೀಯ ಸಾಮಾಜಿಕ ಜೀವನಗಳ ಏರುಪೇರುಗಳಿಗೆ ಕಾರಣರಾಗಿದ್ದ ಕಳಭ್ರರನ್ನು ಈ ಮನೆತನದ ಸಿಂಹವಿಷ್ಣು ಸೋಲಿಸಿ ಹೊರದೂಡಿದ. ಇವನ ಮಗ ಮೊದಲನೆಯ ಮಹೇಂದ್ರವರ್ಮ ಬಹುಮುಖ ಪ್ರತಿಭಾಶಾಲಿ. ದಕ್ಷ ಸೇನಾನಿಯಾಗಿ ರಾಜ್ಯವಿಸ್ತರಣೆಗೆ ಕಾರಣನಾದ. ಈತ ಸತಃ ಕವಿ, ಸಂಗೀತಜ್ಞ. ಇವನನ್ನು ವಿಚಿತ್ರಚಿತ್ತನೆಂದು ವರ್ಣಿಸಲಾಗಿದೆ. ಮತ್ತವಿಲಾಸಪ್ರಹಸನವೆಂಬ ನಾಟಕದ ಕರ್ತೃ. ಇಮ್ಮಡಿ ಪುಲಕೇಶಿ ಈತನನ್ನು ಸೋಲಿಸಿದ. ಬಹುಶಃ ಆ ಸೋಲು ಇವನ ಮರಣಕ್ಕೆ ಕಾರಣವಾಯಿತೆನ್ನಬಹುದು. ಈತನ ಮಗ ನರಸಿಂಹವರ್ಮನೂ ಸೇಡು ತೀರಿಸಲು ಬಾದಾಮಿಯ ಮೇಲೆ ದಂಡೆತ್ತಿದ. ಇದೊಂದು ಅನಿರೀಕ್ಷಿತ ದಾಳಿ. ಪುಲಕೇಶಿ ಸೋತ. ಬಾದಾಮಿ ಪಲ್ಲವರ ವಶವಾಯಿತು. ಸಿಂಹಳದ ಅರಸ ಮಾನವರ್ಮ ಇವನಿಗೆ ನೆರವು ನೀಡಿದ್ದನಾದ ಕಾರಣ ತನ್ನ ನೌಕಾಪಡೆಯನ್ನು ಸಿಂಹಳಕ್ಕೆ ಕಳುಹಿಸಿ ಮಾನವರ್ಮನಿಗೆ ರಾಜ್ಯ ದಕ್ಕಿಸಿಕೊಟ್ಟ. ಬಾದಾಮಿಯ ಗುಹಾಲಯಗಳು ಈತ ತನ್ನ ರಾಜ್ಯದಲ್ಲಿ ಗುಹಾಲಯಗಳನ್ನು ನಿರ್ಮಿಸಲು ಪ್ರೇರಿಸಿದುವು. ಪಲ್ಲವ ಮತ್ತು ಚಾಲುಕ್ಯರ ನಡುವಣ ಸ್ವರ್ಧೆಗಳು ಮುಂದುವರಿದುವು. ಪಲ್ಲವರ ದಂಡನಾಯಕ ಪರಂಜ್ಯೋತಿ ತಿರುತ್ತೊಂಡರ್ ಬಾದಾಮಿಯನ್ನು ಮತ್ತೊಮ್ಮೆ ಸೂರೆಗೊಂಡನೆಂದು ಹೇಳಿದೆ. ಇಮ್ಮಡಿ ನರಸಿಂಹವರ್ಮನ ಕಾಲದಲ್ಲಿ (700-28) ಘರ್ಷಣೆಗಳು ಕಡಿಮೆಯಾಗಿ ರಾಜ್ಯದಲ್ಲಿ ಶಾಂತಿ ಏರ್ಪಟ್ಟು ಕಲೆ ಸಾಹಿತ್ಯಗಳಿಗೆ ಇಂಬು ದೊರೆಯಿತು. ಕಾಂಚಿಯ ಕೈಲಾಸನಾಥ, ವೈಕುಂಠನಾಥ ಆಲಯಗಳು ಅಸ್ತಿತ್ವಕ್ಕೆ ಬಂದುವು. ಅನಂತರ ಪಟ್ಟಕ್ಕೆ ಬಂದ ಇಮ್ಮಡಿ ಪರಮೇಶ್ವರವರ್ಮನನ್ನು ಇಮ್ಮಡಿ ವಿಕ್ರಮಾದಿತ್ಯ ವಿಳಂದೆ ಕದನದಲ್ಲಿ ಕೊಂದ. ಉತ್ತರಾಧಿಕಾರಿಗಳಿಲ್ಲದೆ ಘಟಿಕಾಸ್ಥಾನದ ಮಹಾಜನರು ಆ ಮನೆತನದ ದೂರ ಸಂಬಂಧಿಯಾದ ಇಮ್ಮಡಿ ನಂದಿವರ್ಮನನ್ನು ಅರಸನೆಂದು ಆಯ್ಕೆ ಮಾಡಿದರು. ಈತ ಪಾಂಡ್ಯರ ರಾಜಸಿಂಹನನ್ನು ಸೋಲಿಸಿ ಇತರ ಸಾಮಂತರ ದಂಗೆಗಳನ್ನಡಗಿಸಿದ. ಆದರೆ ಇಮ್ಮಡಿ ವಿಕ್ರಮಾದಿತ್ಯ ಇಮ್ಮಡಿ ಕೀರ್ತಿವರ್ಮರು ಈತನ ಮೇಲೆರಗಿದರು. ಚಾಲುಕ್ಯರ ಅನಂತರ ಕರ್ನಾಟಕದಲ್ಲಿ ಆಳಿದ ರಾಷ್ಟ್ರಕೂಟರು ಪಲ್ಲವರೊಡನೆ ಕಾದಿದರು. ಅವರ ಸಾರ್ವಭೌಮತ್ವವನ್ನೊಪ್ಪದ ಗಂಗರು ಪಲ್ಲವರ ನೆರವಿಗೆ ಬಂದರು. ನಂದಿವರ್ಮನನ್ನು ಧ್ರುವ ಸೋಲಿಸಿದ. ಈತನ ಮಗ ದಂತಿವರ್ಮ ರಾಷ್ಟ್ರಕೂಟ ಸ್ತಂಭ ಎಂಬಾತನ ಸಹಾಯಕ್ಕೆ ಬಂದ. ಮುಮ್ಮಡಿ ಗೋವಿಂದನನ್ನೆದುರಿಸಿ ಸೋತ. ಪಾಂಡ್ಯರ ವರಗುಣನಿಂದಲೂ ಸೋಲನ್ನನುಭವಿಸಿದ. ಅನಂತರ ಪಟ್ಟಕ್ಕೆ ಬಂದ ಮುಮ್ಮಡಿ ನಂದಿವರ್ಮ ಆಳಿದ ಯಶಸ್ಸನ್ನು ಪುನಃ ಪಡೆಯಲು ಯತ್ನಿಸಿ ರಾಷ್ಟ್ರಕೂಟ ಅಮೋಘವರ್ಷನ ಮಗಳು ಶಂಖಾಳನ್ನು ಲಗ್ನವಾಗಿ ಪಾಂಡ್ಯಶ್ರೀ ಮಾರನನ್ನು ಸೋಲಿಸಿದ. ಆದರೆ ಇದು ಕ್ಷಣಿಕ ಯಶಸ್ಸಾಗಿತ್ತು. ಪಾಂಡ್ಯನ ಕೈ ಅನಂತರ ಮೇಲಾಗಿ ನಂದಿವರ್ಮ ಸೋತ. ಈತನ ಮಗ ನೃಪತುಂಗವರ್ಮನೂ ಇಂತಗುದೇ ಸಂದಿಗ್ಧಗಳಿಗೆ ಸಿಲುಕಿದ್ದ. ಆದರೆ ಅಂತಿಮವಾಗಿ ಆಗತಾನೇ ತಲೆ ಎತ್ತುತ್ತಿದ್ದ ಚೋಳ ಆದಿತ್ಯ ನೃಪತುಂಗನನ್ನೂ ಆತನ ತಮ್ಮ ಅಪರಾಜಿತನನ್ನೂ ಸೋಲಿಸಿ ಪಲ್ಲವರ ರಾಜ್ಯವಾಗಿದ್ದ ತೊಂಡೈಮಂಡಲವನ್ನು ವಶಪಡಿಸಿಕೊಂಡ. ಇದರೊಂದಿಗೆ ಪಲ್ಲವರ ಆಳ್ವಿಕೆ ಕೊನೆಗೊಂಡಿತು. ಸಾಹಿತ್ಯ ಕಲೆಗಳಿಗೆ ಪಲ್ಲವರು ನೀಡಿದ ಪ್ರೋತ್ಸಾಹದ ಪರಿಣಾಮವಾಗಿ ಮಹಾಬಲಿಪುರ, ಕಾಂಚೀಪುರ, ತಿರುಚಿನಾಪಲ್ಲಿ, ಮಂಡಗಪಟ್ಟು ಮುಂತಾದ ಕಡೆ ಗುಹಾಲಯಗಳೂ ಅನ್ಯತ್ರ ಇವರ ಶಿಲಾಲಯಗಳೂ ತಲೆ ಎತ್ತಿದುವು. ಪಲ್ಲವರು ವಾಸ್ತುಶಿಲ್ಪದ ಒಂದು ವಿಶಿಷ್ಟಶೈಲಿಯ ಜನಕರಾಗಿದ್ದರು. ಅಪ್ಪರ್, ತಿರುಜ್ಞಾನ ಸಂಬಂಧರ್ ಮುಂತಾದ ಶೈವಸಂತರೂ ತಿರುಮಳಿಶೈ, ತಿರುಮಂಗೈ ಆಳ್ವಾರರೂ ಈ ಕಾಲಕ್ಕೆ ಸೇರಿದವರು.
- ತಮಿಳುನಾಡಿನ ಮಧುರೆ ಸುತ್ತಲಿನ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಪಾಂಡ್ಯರದು ಪ್ರಾಚೀನ ಮನೆತನ. ಶಂಗಮ್ ಸಾಹಿತ್ಯದಲ್ಲಿ ಉಲ್ಲೇಖತರಾದ ಇವರು ಮೌರ್ಯ ಸಾಮ್ರಾಜ್ಯದ ನೆರೆಯಲ್ಲಿದ್ದವರೆಂದು ಅಶೋಕನ ಶಾಸನದಲ್ಲಿ ಉಕ್ತವಾಗಿದೆ. ಆರನೆಯ ಶತಮಾನದಲ್ಲಿ ಕಳಭ್ರರನ್ನು ಹೊರದೂಡುವುದರಲ್ಲಿ ಪಲ್ಲವರ ಸಮಕಾಲೀನನಾದ ಕಡುಂಗೋನನ ಪಾತ್ರ ವಿಶಿಷ್ಟವಾದುದು. ಈತನ ಮಗ ಮಾರವರ್ಮ ಅವನಿಚೂಳಾಮಣಿ. ಅರಿಕೇಸರಿ ಮಾರವರ್ಮ (620-45) ಚಾಲುಕ್ಯ ವಿಕ್ರಮಾದಿತ್ಯನ ನೆರವಿನಿಂದ ಚೇರ ಮತ್ತು ಪಲ್ಲವರೊಡನೆ ಕಾದು ರಾಜ್ಯ ವಿಸ್ತರಿಸಿದ. ಇವನ ಮಗ ರಣಧೀರ ಕೊಚಡೈಯಕೊಂಗು ದೇಶವನ್ನಾಕ್ರಮಿಸಿದ. ಮಾರವರ್ಮ ರಾಜಸಿಂಹನನ್ನು ಇಮ್ಮಡಿ ವಿಕ್ರಮಾದಿತ್ಯನ ಸಹಾಯ ಪಡೆಯ ಪಲ್ಲವ ನಂದಿವರ್ಮನನ್ನು ಹಲವಾರು ಕದನಗಳಲ್ಲಿ ಸೋಲಿಸಿದ. ಅನಂತರ ಚಾಲುಕ್ಯ ಇಮ್ಮಡಿ ಕೀರ್ತಿವರ್ಮನ ಸೋಲಿಗೂ ಕಾರಣನಾದ. ಮಾರವರ್ಮನ ಮಗ ಪರಾಂತಕ ನೆಡುಂಜಳಿಯನ್ (ವರಗುಣ-765. 15) ಹೆಸರಾಂತ ಅರಸ. ಈತನ ಕಾಲದಲ್ಲಿ ರಾಜ್ಯ ತಂಜಾವೂರು, ಸೇಲಮ್ ಮತ್ತು ಕೊಯಮತ್ತೂರು ಜಿಲ್ಲೆಗಳವರೆಗೆ ಹಬ್ಬಿತು. ಆದರೆ ಇಮ್ಮಡಿ ವರಗುಣ ಪಲ್ಲವ ನೃಪತುಂಗನ ಅಧೀನನಾಗಿ ಆಳಬೇಕಾಯಿತು. ಅಂತಿಮವಾಗಿ ಪಾಂಡ್ಯರ ರಾಜ್ಯ ಚೋಳ ಪರಾಂತಕನ ಕಾಲದಲ್ಲಿ ಆತನ ಕೈಸೇರಿತು. ಆ ಬಳಿಕ ಪುನಃ 12ನೆಯ ಶತಮಾನದ ತನಕ ಪಾಂಡ್ಯರು ಅಸ್ತಿತ್ವ ಕಳೆದುಕೊಂಡಿದ್ದರು.
- ರಾಷ್ಟ್ರಕೂಟರು ಬಾದಾಮಿಯ ಚಾಲಕ್ಕ ರಾಜ್ಯವನ್ನು ತಮ್ಮದಾಗಿ ಮಾಡಿಕೊಂಡು ಎರಡು ಶತಮಾನಗಳಿಗೂ ಹೆಚ್ಚು ಕಾಲ ಕರ್ನಾಟಕದಲ್ಲಿ ಆಳಿದರು. ದಂತಿದುರ್ಗನ ಅಪೇಕ್ಷೆಯಂತೆ ಆತನ ಚಿಕ್ಕಪ್ಪ ಕೃಷ್ಣ ಚಾಲುಕ್ಯ ರಾಜ್ಯಕ್ಕೆ ಅಧಿಪತಿಯಾದ. ಚಾಲುಕ್ಯರ ಸಾಮಂತರಾಗಿದ್ದ ತಲಕಾಡಿನ ಗಂಗ ಶ್ರೀಪುರುಷ ಇವರ ಸಾರ್ವಭೌಮತ್ವವನ್ನೊಪ್ಪದೆ ಹೋರಾಟಕ್ಕಿಳಿದನಾದರೂ ಅಂತಿಮವಾಗಿ ಸೋತು ಶರಣಾದ. ಅನಂತರ ಯುವರಾಜ ಇಮ್ಮಡಿ ಗೋವಿಂದ ವೇಂಗಿಯಲ್ಲಿ ಪೂರ್ವ ಚಾಲುಕ್ಯ ವಿಷ್ಣುವರ್ಧನನನ್ನೂ ಸೋಲಿಸಿದ. ಕೃಷ್ಣ ಎಲ್ಲೋರಾದಲ್ಲಿ ಸುಂದರ ಶಿವಾಲಯ ಕಟ್ಟಿಸಿದ. 780ರಲ್ಲಿ ಪಟ್ಟಕ್ಕೆ ಬಂದ ಧ್ರುವ ಹಾಗೂ ಆತನ ಮಗ ಮುಮ್ಮಡಿ ಗೋವಿಂದರೂ ಉತ್ತರ ಭಾರತದ ರಾಜಕೀಯದಲ್ಲಿ ಪ್ರವೇಶ ಮಾಡಿ ಪ್ರತೀಹಾರರನ್ನೂ ಪಾಲರನ್ನೂ ಸೋಲಿಸಿದರು. ಅದರೆ ಕನೋಜಿನಲ್ಲಿ ಸ್ಥಿರವಾಗಿ ನೆಲಸುವ ಉದ್ದೇಶ ಮಾತ್ರ ಅವರದಾಗಿರಲಿಲ್ಲ. ನರ್ಮದೆಯ ದಕ್ಷಿಣಕ್ಕೆ ಸೀಮಿತವಾಗಿದ್ದ ಅವರ ಖ್ಯಾತಿ ಗಂಗಾ, ಯಮುನೆಗಳ ವರೆಗೂ ಹಬ್ಬಿತು. ದಕ್ಷಿಣದಲ್ಲಿ ಪಲ್ಲವ ಗಂಗರ ವಿರುದ್ಧವೂ ಹೋರಾಡಿ ಯಶಸ್ಸು ಸಂಪಾದಿಸಿದ ಧ್ರುವಗೋವಿಂದರು ರಾಜ್ಯವನ್ನು ಬಲುಮಟ್ಟಿಗೆ ವಿಸ್ತರಿಸಿದರು. ಗೋವಿಂದನ ಮಗ ಅಮೋಘವರ್ಷ ನೃಪತುಂಗ ಅಧಿಕಾರಕ್ಕೆ ಬಂದಾಗ ಇನ್ನೂ 14 ವರ್ಷದ ಹಸುಳೆ. ಗುಜರಾತಿನಲ್ಲಿ ಆ ವೇಳೆಗೆ ನೆಲಸಿದ್ದ ರಾಷ್ಟ್ರಕೂಟ ಮನೆತನದ ಶಾಖೆಗೆ ಸೇರಿದ್ದ ಸೋದರ ಸಂಬಂಧಿಯಾದ ಕರ್ಕ ಸುವರ್ಣವರ್ಷ ಈತನ ರಕ್ಷಣೆ ಮಾಡಿದ. ವೇಂಗಿಯ ಗುಣಗ ವಿಜಯಾದಿತ್ಯನ ಸಹಾಯದಿಂದ ಗಂಗರ ಎರೆಯಂಗನನ್ನು ಹತ್ತಿಕ್ಕಿ ತನ್ನ ಮಗಳಾದ ಚಂದ್ರೋ ಬಲಬ್ಬೆಯನ್ನು ಅಮೋಘವರ್ಷನಿಗೆ ಮದುವೆ ಮಾಡಿಕೊಟ್ಟ. ಶಾಂತಿಪ್ರಿಯ ಅಮೋಘವರ್ಷ ಉತ್ತರದ ರಾಜಕೀಯದಲ್ಲಿ ಆಸಕ್ತಿವಹಿಸಲಿಲ್ಲ. ಸ್ವತಃ ಕವಿ ವಿದ್ವಾಂಸನಾಗಿದ್ದ ಈತ ಕನ್ನಡದ ಮೊದಲ ಕೃತಿ ಎನಿಸಿರುವ ಕವಿರಾಜಮಾರ್ಗದ ಕರ್ತೃವೆನ್ನಲಾಗಿದ್ದ ಈತ ಕನ್ನಡದ ಮೊದಲ ಕೃತಿ ಎನಿಸಿರುವ ಕವಿರಾಮಾರ್ಗದ ಕರ್ತೃವೆನ್ನಲಾಗಿದೆ. ಪ್ರಶ್ನೋತ್ತರಮಾಲಾ ಈತನ ಇನ್ನೊಂದು ಕೃತಿ. ಆನಹಿತಕ್ಕಾಗಿ ಶ್ರಮಿಸಿದ್ದ ಈತ ಒಂದು ಸಂದರ್ಭದಲ್ಲಿ ಆ ಉದ್ದೇಶದಿಂದ ಕೊಲ್ಹಾಪುರದ ಮಹಾಲಕ್ಷ್ಮಿಗೆ ತನ್ನ ಬೆರಳನ್ನೇ ಬಲಿದಾನ ಮಾಡಿದ. ಗುಲ್ವರ್ಗ ಜಿಲ್ಲೆಯ ಮಳಕೇಡವನ್ನು (ಮಾನ್ಯಖೇಟ) ರಾಜಧಾನಿಯಾಗಿ ಆರಿಸಿಕೊಂಡು ಅದನ್ನು ಸುಂದರಗೊಳಿಸಿದ. ಮೂರನೆಯ ಇಂದ್ರ (914-29) ಉತ್ತರಭಾರತದ ದಂಡಯಾತ್ರೆ ಯೋಜಿಸಿ ಕನೋಜನ್ನು ಮುತ್ತಿ ಪ್ರತಿಹಾರ ಮಹೀಪಾಲನನ್ನು ಸೋಲಿಸಿದ. ಇವರಲ್ಲಿ ವೇಮುಲವಾಡದ ಚಾಲುಕ್ಯ ಇಮ್ಮಡಿ ನರಸಿಂಹ ಈತನಿಗೆ ಬೆನ್ನೆಲುಬಾಗಿದ್ದ. ಕವಿ ಪಂಪರ ಭಾರತದಲ್ಲಿ ಈ ಘಟನೆಯ ವರ್ಣನೆ ಇದೆ. ಕಲಚುರಿ ಮನೆತನದ ಅಮ್ಮಣದೇವನ ಮಗಳನ್ನು ಇಂದ್ರ ಮದುವೆಯಾಗಿದ್ದ. ರಾಷ್ಟ್ರಕೂಟರಲ್ಲಿ ಪ್ರಖ್ಯಾತನಾದ ಇನ್ನೊಬ್ಬ ಅರಸ ಮುಮ್ಮಡಿ ಕೃಷ್ಣ (939-67). ಈತ ಪಟ್ಟಕ್ಕೆ ಬಂದಾಗ ತಮಿಳುನಾಡಿನಲ್ಲಿ ಚೋಳರ ಪ್ರಭಾವ ಹೆಚ್ಚಾಗುತ್ತಿತ್ತು. ಪರಾಂತಕ ತನ್ನ ಚಿಕ್ಕಪ್ಪ ನಾಲ್ಕನೆಯ ಗೋವಿಂದನಿಗೆ ತನ್ನ ತಂದೆಯ ವಿರುದ್ಧ ನೆರವು ನೀಡಿದ್ದುದೊಂದು ಹಗೆತನಕ್ಕೆ ಕಾರಣವಾಗಿತ್ತು. ಗಂಗರ ಬೂತುಗನ ಸಹಾಯದಿಂದ ಪರಾಂತಕನ ವಿರುದ್ಧ ದಂಡೆತ್ತಿ ಅರಕೋಣಮ್ ಸಮೀಪದ ತಕ್ಕೋ ಎಂಬಲ್ಲಿ ಆತನ ಮಗ ರಾಜಾದಿತ್ಯನನ್ನು ಕೊಂದು ಕಾಂಚಿಯಿಂದ ತಂಜಾವೂರಿನವರೆಗಿನ ವಿಸ್ತಾರ ಪ್ರದೇಶವನ್ನು ಆ ಬಳಿಕ ವಶಪಡಿಸಿಕೊಂಡ. ಉತ್ತರದಲ್ಲಿ ಚಂದೇಲರಿಗೆ ಸೇರಿದ್ದ ಚಿತ್ರಕೂಟ ಕಾರಂಜರ್ ಕೋಟೆಗಳನ್ನು ಗೆದ್ದುಕೊಂಡ. ಬೂತುಗನ ಮಗ ಗಂಗರ ಇಮ್ಮಡಿ ಮಾರಸಿಂಹ ಇದರಲ್ಲಿ ವಿಶಿಷ್ಟ ಪಾತ್ರವಹಿಸಿದ. ಕೃಷ್ಣನ ಆಳ್ವಿಕೆಯ ಕಾಲ ರಾಷ್ಟ್ರಕೂಟ ಬಲಪ್ರದರ್ಶನದ ಕಾಲ. ಆದರೆ ಈ ಪ್ರಭಾವ ದೀರ್ಘ ಕಾಲ ಉಳಿಯಲಿಲ್ಲ. ಈತನ ಆಳ್ವಿಕೆ ಮುಗಿದಾಗ ಸುತ್ತಲಿನ ಶತ್ರುಗಳು ರಾಜ್ಯದ ಮೇಲೆ ಬಿದ್ದರು ಈತನ ಉತ್ತರಾಧಿಕಾರಿಗಳು ಇವನಷ್ಟು ಶಕ್ತಿಯುತರಾಗಿರಲಿಲ್ಲ. ಅಂತಿಮವಾಗಿ ಕೃಷ್ಣನ ಸಾಮಂತನಾಗಿದ್ದ ಚಾಲುಕ್ಯ ಇಮ್ಮಡಿ ತೈಲಪ ದಂಗೆ ಎದ್ದು ರಾಜ್ಯವನ್ನು ಆಕ್ರಮಿಸಿ ಚಾಲುಕ್ಯ ರಾಜ್ಯ ಪುನಃಪ್ರತಿಷ್ಠಾಪಕ ನೆನಿಸಿಕೊಂಡ (977).
- ಚೋಳರ ಬಗೆಗೆ ಅತಿಪ್ರಾಚೀನ ಉಲ್ಲೇಖ ಅಶೋಕನ ಶಾಸನದಲ್ಲಿದೆ. ಕರಕಾಲ ಚೋಳನ ಪ್ರಸ್ತಾಪ ಈಗಾಗಲೇ ಮಾಡಲಾಗಿದೆ. ಈತ ಚೇರ, ಪಾಂಡ್ಯರನ್ನು ಸೋಲಿಸಿ ಕಾವೇರಿಯ ಸುತ್ತಲಿನ ಪ್ರದೇಶದಲ್ಲಿ ಆಳುತ್ತಿದ್ದ. ಸಮಗ್ರ ಭಾರತವನ್ನು ಗೆದ್ದವನೆಂದು ಇವನ ಬಗ್ಗೆ ಹೇಳಿರುವ ಮಾತುಗಳು ಉತ್ಪ್ರೇಕ್ಷೆ. ಐತಿಹಾಸಿಕವಾಗಿ ಪುನಃ ಚೋಳ ಕಾಣಿಸಿಕೊಳ್ಳುವುದು 9ನೆಯ ಶತಮಾನದ ಮಧ್ಯ ಭಾಗದಿಂದ. ವಿಜಯಾಲಯ ಪಲ್ಲವರ ಅಧೀನದಲ್ಲಿದ್ದು ಕ್ರಮೇಣ ತಂಜಾವೂರನ್ನು ಆಕ್ರಮಿಸಿದ. ಈತನ ಮಗ ಆದಿತ್ಯನೂ ಪಲ್ಲದ ಸಾಮಂತನಾಗಿದ್ದುಕೊಂಡೆ ಪಾಂಡ್ಯರ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡ. ಮುಂದ ಪಲ್ಲವರ ವಿರುದ್ಧವೇ ಕಾದು ಅಪರಾಜಿತನನ್ನು ಪರಾಜಯಗೊಳಿಸಿ ತೊಂಡೈಮಂಡಲಮ್ ಪ್ರದೇಶ ಗೆದ್ದುಕೊಂಡು. ಚೋಳ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದವನೀತನೆ (871-907) ಈತನ ಮಗ ಪರಾಂತಕ ಪಾಂಡ್ಯ, ಬಾಣ, ಮೈದುಂಬ ಮನೆತನಗಳ ಅರಸರನ್ನು ಸೋಲಿಸಿದ. ಆದರೆ ರಾಷ್ಟ್ರಕೂಟ ಮುಮ್ಮಡಿಕೃಷ್ಣನಿಂದ ಸೋಲನ್ನನುಭವಿಸಿದ. ತೊಂಡೈಮಂಡಲ ಇವನ ಕೈಯಿಂದ ಜಾರಿತು. ಆದರೆ ಮುಂದಿನ ಕೆಲವು ವರ್ಷಗಳಲ್ಲಿ ರಾಷ್ಟ್ರಕೂಟ ಬಲ ಕುಗ್ಗಿತು. ಆ ಪ್ರದೇಶವನ್ನು ಇಮ್ಮಡಿ ಪರಾಂತಕ ಮತ್ತು ಚೋಳರು ಪುನಃ ವಶಪಡಿಸಿಕೊಂಡರು. ಇಮ್ಮಡಿ ಪರಾಂತಕನ ಮಗ ರಾಜ ರಾಜ್ಯ. 985ರಲ್ಲಿ ಪಟ್ಟಕ್ಕೆ ಬಂದ. ಇವನ ಕಾಲದಿಂದ ಚೋಳರ ಹಿರಿಮೆ ಹೆಚ್ಚಿತು. (ನೋಡಿ- ಚೋಳ)
- (ಜಿ.ಬಿ.ಆರ್.)
- 3. ದೆಹಲಿಯ ಸುಲ್ತಾನರು
- ಭಾರತ_ಅರಬ್ ದೇಶಗಳ ಸಂಬಂಧ ಏಳನೆಯ ಶತಮಾನದಿಂದಲೇ ಆರಂಭವಾಗಿತ್ತು. ಅರಬರ ಸೈನ್ಯದ ತುಕಡಿಗಳು ಬ್ರೋಚ್, ಸಿಂಧ್ ಪ್ರಾಂತ್ಯಗಳಿಗೆ ಬರತೊಡಗಿದುವು. ಆಫ್‍ಘಾನಿಸ್ತಾನದ ಜರಾಂಜ್ ಮತ್ತು ಬಲೂಚಿಸ್ತಾನದ ಮಕ್ರಾನ್ ಪ್ರಾಂತ್ಯವನ್ನು ಆಕ್ರಮಿಸಿದಾಗ ಇವನನ್ನು ಅಲ್ಲಿಯ ಅರಸ ದಾಹಿರ್ ಎದುರಿಸಿ ಸತ್ತ. ಮುಲ್ತಾನ ಮತ್ತು ಕೆಳಗಣ ಸಿಂಧೂಕಣಿವೆಯ ಪ್ರದೇಶ ಅರಬರ ವಶವಾದುವು. ಕ್ರಮೇಣ ಈಗಿನ ಗುಜರಾತ್ ಮತ್ತು ರಾಜಸ್ಥಾನ ಅವರ ಆಕ್ರಮಣಕ್ಕೆ ತುತ್ತಾದುವು. ಚೀನಾಬ್ ನದಿಯಿಂದ ಹಿಂದೂಕುಶ್ ವರೆಗೆ ಹಬ್ಬಿದ ಹಿಂದೂ ಷಾಹಿ ರಾಜ್ಯ ಕ್ಷೀಣವಾಗುತ್ತಿತ್ತು. ಜಯಪಾಲ ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಪ್ರಸಿದ್ಧ ದೊರೆ. ಕಾಶ್ಮೀರದಲ್ಲಿ ಕ್ಷೇಮಗುಪ್ತನ ರಾಣಿದಿಡಾ ರಾಜ್ಯವಾಳುತ್ತಿದ್ದಳು. ಕನೋಜದಲ್ಲಿ ಪ್ರತಿಹಾರರ ವರ್ಚಸ್ಸು ಕಡಿಮೆಯಾಗಿತ್ತು. ಈ ವಂಶದ ಕೊನೆಯ ಅರಸ ರಾಜ್ಯಪಾಲ ಅಬಲನಾಗಿದ್ದ.
- ಸಮನಿದ್ ಅರಸರ ಗುಲಾಮನಾಗಿದ್ದ ಅಲ್ತಿಗಿಸ್ ಘಜ್ನಿಯಲ್ಲಿ ಸ್ವತಂತ್ರ ರಾಜ್ಯ ಸ್ಥಾಪಿಸಿ ಕಾಬೂಲನ್ನು ಸೇರಿಸಿಕೊಂಡಿದ್ದ. 963ರಲ್ಲಿ ಈತ ನಿಧನ ಹೊಂದಿದ. ಇವನ ಅಳಿಯ ಸಬಕ್ತಿಗಿನ್ ಉತ್ತರಾಧಿಕಾರಿಯಾಗಿ (977) ಷಾಹಿಯ ದೊರೆ ಜಯಪಾಲನನ್ನು ಹಿಂದಕ್ಕೆ ಸರಿಸಿದ. 997ರಲ್ಲಿ ಈತನ ಮಗ ಮಹಮದ್ ಘಜ್ನಿ ಅಧಿಕಾರಕ್ಕೆ ಬಂದು ಹಿಂದೂ ಅರಸರ ಮೇಲೆ ಹದಿನೇಳು ಬಾರಿ ದಂಡೆತ್ತಿ ಬಂದ. ಜಯಪಾಲನ ಸಂತತಿಯವರು ಇವರನ್ನು ಎದುರಿಸುತ್ತಲೇ ಇದ್ದರು. ಈ ಮನೆತನದ ಭೀಮ ಮರಣ ಹೊಂದಿದಾಗ (1026) ಈ ಸಂತತಿ ಅಂತ್ಯಗೊಂಡಿತು. ಅನಂತರದ 150 ವರ್ಷಗಳಲ್ಲಿ ಪರಕೀಯರ ಆಕ್ರಮಣ ಇಲ್ಲದಿದ್ದರೂ ಆಂತರಿಕ ಕಲಹಗಳಿಂದ ಹಿಂದೂರಾಜ್ಯಗಳು ಬಲಗುಂದಿದುವು. ಗುಜರಾತಿನಲ್ಲಿ ಚಾಲುಕ್ಯರು (ಸೋಲಂಕಿ) ಮತ್ತು ಮಾಳವದಲ್ಲಿ ಪರಮಾರರು ಪ್ರಬಲರಾಗಿದ್ದರು. ಚಾಲುಕ್ಯ ಭೀಮ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ನಿರತನಾಗಿದ್ದರೆ, ಅನಂತರ ಬಂದ ವಸ್ತುಪಾಲ, ತೇಜಪಾಲರು ನಿರ್ಮಾಣ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಮಾಳವದಲ್ಲಿ ಪರಮಾರ ಮುಂಜ ಹೆಸರಾಂತ ಅರಸ. ಈತನ ಅನಂತರ ಬಂದವ ಭೋಜ. ಇವರಿಬ್ಬರೂ ಸ್ವತಃ ಪಂಡಿತರೂ ಪಂಡಿತರಿಗೆ ಆಶ್ರಯದಾತರೂ ಆಗಿದ್ದರು. ಭೋಜನದು ಬಹುಮುಖ ಪ್ರತಿಭೆ. ಕಾವ್ಯಮೀಮಾಂಸೆ, ರಾಜನೀತಿ, ಅಲಂಕಾರ ಶಾಸ್ತ್ರ ಇತ್ಯಾದಿಗಳಲ್ಲಿ ಪರಿಣತ. ಮುಂಜ ಕರ್ನಾಟಕದಲ್ಲಿ ಚಾಲುಕ್ಯ ಇಮ್ಮಡಿ ತೈಲಪನನ್ನು ಹಲವಾರು ಬಾರಿ ಕದನಗಳಲ್ಲಿ ಎದುರಿಸಿ, ಅಂತಿಮವಾಗಿ ಪರಾಜಿತನಾಗಿ ಅಸುನೀಗಿದ. ಭೋಜ ಚಾಲುಕ್ಯ ಜಯಸಿಂಹನ ವಿರುದ್ಧ ದಂಡೆತ್ತಿ ಕೆಲಕಾಲ ಮೀರಚ್ ಸುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡ. ಆದರೆ ಮುಂದೆ ಆತ ಅವನ್ನು ಬಿಟ್ಟುಕೊಡಬೇಕಾಯಿತು. ತ್ರಿಪುರದಲ್ಲಿ ಕಲಚುರಿವಂಶದ ಗಾಂಗೇಯ ಮತ್ತು ಲಕ್ಷ್ಮಣರಾಜರು ಪ್ರಬಲರಾಗಿದ್ದರಾದರೂ ಕ್ರಮೇಣ ದುರ್ಬಲರಾದರು.
- 1175ರಲ್ಲಿ ಘೋರಿಮಹಮದ್ ಮೊದಲ ದಂಡಯಾತ್ರೆ ಕೈಗೊಂಡ. ಈತ ಗುಜರಾತಿನಲ್ಲಿ ಪರಾಭವಗೊಂಡನಾದರೂ (1178) ಘಜನಿಯ ಖುಸ್ರುಮಲಿಕ್‍ನನ್ನು ಲಾಹೋರಿನಲ್ಲಿ ಸೆರೆಹಿಡಿದಿದ್ದ. 1179ರಲ್ಲಿ ಉಚ್ ದುರ್ಗವನ್ನೂ ಪೇಷಾವರನನ್ನೂ ಲಾಹೋರನ್ನೂ ವಶಪಡಿಸಿಕೊಂಡ.
- ಈ ಕಾಲದಲ್ಲಿ ಬುಂದೇಲಖಂಡ ಚಂದೇಲರ, ಕನೋಜ ಗಾಹಡಪಾಲರ, ದೆಹಲಿ ಮತ್ತು ಅಜ್ಮೀರಗಳು ಚೌಹಾಣರ ಆಳ್ವಿಕೆಗೊಳಪಟ್ಟಿದ್ದುವು. ಕನೋಜದ ಜಯಚಂದ್ರನಿಗೂ ಅಜ್ಮೀರದ ಪೃಥ್ವಿರಾಜ್ ಚೌಹಾಣನಿಗೂ ಇದ್ದ ವೈಮನಸ್ಯದ ಕಾರಣವಾಗಿ ದೇಶದಲ್ಲಿ ರಾಜಕೀಯ ಅಭದ್ರ ಸ್ಥಿತಿ ಇತ್ತು.
- 1191ರಲ್ಲಿ ಘೋರಿಮಹಮದ್ ಪಂಜಾಬಿನಿಂದ ಮುನ್ನುಗ್ಗಿ ಥಾನೇಶ್ವರದ ಸಮೀಪದ ತರೈನ್ ಬಯಲಿನಲ್ಲಿ ಪೃಥ್ವೀರಾಜನೊಡನೆ ಹೋರಾಡಿ ಸೋತ. 1192ರಲ್ಲಿ ಪುನಃ ಅದೇ ಸ್ಥಳದಲ್ಲಿ ಅವನನ್ನು ಎದುರಿಸಿಕೊಂದ. ಈ ನಿರ್ಣಾಯಕ ಯುದ್ಧದಿಂದ ಉತ್ತರ ಭಾರತ ಪರಕೀಯರ ಆಕ್ರಮಣಕ್ಕೆ ತುತ್ತಾಯಿತು. ಘೋರಿಯ ಪ್ರತಿನಿಧಿ ಐಬಕ್ ಎಂಬಾತ ಬುಲಂದ ಶಹರ್, ಮೀರತ್ ಮತ್ತು ದೆಹಲಿಗಳನ್ನು ಆಕ್ರಮಿಸಿದ. ಕನೋಜದ ಜಯಚಂದ್ರನನ್ನು ಚಂದವರ್ ರಣಾಂಗಣದಲ್ಲಿ ಮಹಮದ್ ಸೋಲಿಸಿದ (1194). 1195-96ರಲ್ಲಿ ಗ್ವಾಲಿಯರ್ ಕೋಟೆಗಳನ್ನು ವಶಪಡಿಸಿಕೊಂಡ. ಐಬಕ್ ರಾಜಸ್ಥಾನ ಮತ್ತು ಅಜಮೀರ್‍ಗಳಲ್ಲಿ ಆಗಾಗ ಎದ್ದ ದಂಗೆಗಳನ್ನು ಅಡಗಿಸಿ ಬುಂದೇಲ್‍ಖಂಡವನ್ನು ಗೆದ್ದುಕೊಂಡ. ಘೋರಿ ಮಹಮದನ ಇನ್ನೊಬ್ಬ ಅಧಿಕಾರಿ ಇಖ್ತಿಯಾರ್-ಉದ್-ದೀನ್ ಮಹಮದ್ ಬಿಹಾರ ಮತ್ತು ಬಂಗಾಲದ ಕೆಲವು ಭಾಗಗಳನ್ನು ಆಕ್ರಮಿಸಿದ. ಹೀಗೆ 13ನೆಯ ಶತಮಾನದ ಪ್ರಾರಂಭದಲ್ಲಿ ಪಶ್ಚಿಮದಲ್ಲಿ ಸಿಂಧೂನದಿಯಿಂದ ಪೂರ್ವದಲ್ಲಿ ಗಂಗಾನದಿಯ ವರೆಗಿನ ಬಹುಭಾಗ ಮುಸಲ್ಮಾನರ ಆಡಳಿತಕ್ಕೆ ಒಳಪಟ್ಟವು.
- ಕುತ್ಬುದೀನ್ ಐಬಕ್ (1206-10): ತುರ್ಕಿಸ್ತಾನದಲ್ಲಿ ಹುಟ್ಟಿ ಖಾಜಿಯೊಬ್ಬನಿಗೆ ಬಾಲ್ಯದಲ್ಲಿ ಮಾರಲ್ಪಟ್ಟು, ಘೋರಿಮಹಮದನ ಗುಲಾಮನಾಗಿ, ತನ್ನ ಕರ್ತೃತ್ವ ಶಕ್ತಿಯಿಂದ ಘಜ್ನಿಯಲ್ಲಿ ಒಡೆಯನ ಮನಸ್ಸನ್ನು ಗೆದ್ದು, ತರೈನ್ನ ಎರಡನೆಯ ಯುದ್ಧದ ತರುವಾಯ ಭಾರತದಲ್ಲಿ ಗೆದ್ದ ಪ್ರದೇಶಗಳ ಮೇಲ್ವಿಚಾರಕನೆಂದು ನೇಮಿಸಲ್ಪಟ್ಟ. ಚೆಹಲಿಯ ಸಮೀಪದ ಇಂದ್ರಪ್ರಸ್ಥವನ್ನು ಕೇಂದ್ರವಾಗಿ ಮಾಡಿಕೊಂಡು ಅದೇ ಅರ್ಷ ಅಜಮೀರ್ ಮತ್ತು ಮೀರತ್‍ಗಳಲ್ಲಿ ಎದ್ದದಂಗೆಗಳನ್ನು ಅಡಗಿಸಿ, ದೆಹಲಿಯನ್ನು ಗೆದ್ದು, ಕನೋಜದ ಜಯಚಂದ್ರನನ್ನು ಗೆಲ್ಲಲು ತನ್ನೊಡೆಯನಿಗೆ ನೆರವಾದ. 1195ರಲ್ಲಿ ಆಲಿಘಡವನ್ನು ಗೆದ್ದ. ರಣಥಂಬೋರದ ಕೋಟೆ ವಶಪಡಿಸಿಕೊಂಡು, 1197-98ರಲ್ಲಿ ಬದಾನ್, ಚಂದವರ ಮತ್ತು ಕನೋಜಗಳನ್ನು ಆಕ್ರಮಿಸಿದ. ಬುಂದೇಲ್ ಖಂಡದ ಚಂದೇಲರ ರಾಜನನ್ನು ಸೋಲಿಸಿ (1202-03) ಕಾಲಿಂಜರ್, ಮಹೋಬ ಮತ್ತು ಖಜುರಾಹೋಗಳನ್ನು ವಶಪಡಿಸಿಕೊಂಡ. ಘೋರಿಮಹಮದನ ಮರಣದ ತರುವಾಯ ಭಾರತದ ಪ್ರದೇಶಗಳಿಗೆ ಉತ್ತರಾಧಿಕಾರಿಯಾಗಿ ಐಬಕ್ ದೆಹಲಿಯ ಸಿಂಹಾಸನ ಏರಿ (1206) ಗುಲಾಮೀ ಮನೆತನದ ಆಳ್ವಿಕೆಯ ಪ್ರಾರಂಭಕ್ಕೆ ಕಾರಣನಾದ. ಈತನ ವಂಶಸ್ಥರನ್ನು ಗುಲಾಮೀ ಸಂತತಿಯವರೆಂದು ಕರೆಯಲಾಗಿದ್ದರೂ ವಾಸ್ತವಿಕವಾಗಿ ಐಬಕ್ ಇಲ್ತಮಿಷ್ ಮತ್ತು ಬಲ್ಬನ್ ಮಾತ್ರ ಆರಂಭದಲ್ಲಿ ಗುಲಾಮರಾಗಿದ್ದರು. ಅವರು ಅಧಿಕಾರಕ್ಕೆ ಬರುವ ವೇಳೆಗೆ ಗುಲಾಮಗಿರಿಯಿಂದ ಮುಕ್ತರಾಗಿ ಬಿಡುಗಡೆ ಪತ್ರಗಳನ್ನು ಪಡೆದಿದ್ದರು. 1206ರಲ್ಲಿ `ಮಲ್ಲಿಕ್ ಬಿರುದು ಪಡೆದು ಸ್ಥಾನ ಭದ್ರಪಡಿಸಿಕೊಳ್ಳಲು ಮಗಳನ್ನು ಅಲ್ತಮಷ್ನಿಗೂ ಸಹೋದರಿಯನ್ನು ನಾಸಿರ್-ಉದ್-ದೀನ್‍ನಿಗೂ ವಿವಾಹ ಮಾಡಿಕೊಟ್ಟು, ತಾನು ತಾಜುದ್ದೀನ್ ಯಲ್ದಜನ ಮಗಳನ್ನು ವರಿಸಿದ. ಘಜ್ನಿಯಲ್ಲಿ ತನ್ನೊಡೆಯನ ಉತ್ತರಾಧಿಕಾರಿಯಾದ ಘಿಯಾಸುದ್ದೀನ್ ಮಹಮದ್‍ನಿಂದ ಸುಲ್ತಾನ್ ಎಂಬ ಪದವಿ ಪಡೆದ. ಘಜ್ನಿಯನ್ನು ಯಲ್ದಜನಿಂದ ರಕ್ಷಿಸಲು ಅಸಮರ್ಥನಾದರೂ ದೆಹಲಿಯಲ್ಲಿ ತನ್ನ ಆಳ್ವಿಕೆ ನೆಲೆಗೊಳಿಸಿದ. ಬಂಗಾಲದಲ್ಲಿ ಮಹಮದ್‍ಶೆರಾನ್‍ನನ್ನು ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ. ಲಾಹೋರಿನಲ್ಲಿ ಪೋಲೋ ಆಟ ಆಡುವಾಗ ಕುದುರೆಯಿಂದ ಬಿದ್ದು ಮರಣಹೊಂದಿದ (1210). ಈತನಿಗೆ ತನ್ನ ರಾಜ್ಯದಲ್ಲಿ ಸುಭದ್ರ ಆಡಳಿತವನ್ನು ಮಾತ್ರ ನೆಲೆಗೊಳೆಸಲಾಗಲಿಲ್ಲ. ಲಾಹೋರಿನ ಅಮೀರರು ಮತ್ತು ಮಲ್ಲಿಕರು ಆರಾಮಬಕ್ಷ್ ಎಂಬಾತನನ್ನು ಆರಾಮ್‍ಷಾ ಎಂದು ಹೆಸರಿಸಿ ಉತ್ತರಾಧಿಕಾರಿಯಾಗಿ ಆರಿಸಿದರು. ಆದರೆ ದೆಹಲಿಯ ಪ್ರಮುಖರು ಇದನ್ನೊಪ್ಪದೆ ಬದಾನ್ ಪ್ರಾಂತ್ಯಾಧಿಕಾರಿಯಾಗಿದ್ದ ಇಲ್ತಮಿಷ್‍ನನ್ನು ಆಯ್ದುಕೊಂಡರು. ಆತ ಆರಾಮ್‍ಷಾನನ್ನು ಸೋಲಿಸಿ ಸುಲ್ತಾನನಾದ (1210). ಮಧ್ಯ ಏಷ್ಯದ ಅಲ್ಪಾರಿ ಜನಾಂಗಕ್ಕೆ ಸೇರಿದ ಈತನನ್ನು ಖಾಸಾ ಸಹೋದರರೇ ಅಸೂಯೆಯಿಂದ ವ್ಯಾಪಾರಿಯೊಬ್ಬನಿಗೆ ಮಾರಿದರು. ಕಷ್ಟನಷ್ಟಗಳನ್ನು ಎದುರಿಸಿ ಉನ್ನತಿಗೆ ಬಂದ ಈತ ಐಬಕ್ನ ಠಾಣ್ಯ ಸೇರಿ ಗ್ವಾಲಿಯರ್ ಕೋಟೆಯ ರಕ್ಷಕನಾಗಿ ಬುಲಂದಹರಿನ ಮತ್ತು ಬದೌನ್ ಪ್ರಾಂತ್ಯದ ಗವರ್ನರನಾಗಿ ಸೇವೆ ಸಲ್ಲಿಸಿದ. ಯಲ್ದಜ್‍ನನ್ನು ತರೈನ್ ಯುದ್ದದಲ್ಲಿ ಸೋಲಿಸಿ, ಅವನಿಂದ ಬರಬಹುದಾದ ತೊಂದರೆಯನ್ನು ನಿವಾರಿಸಿಕೊಂಡ. 1217ರಲ್ಲಿ ಲಾಹೋರನ್ನೂ 1226ರಲ್ಲಿ ರಣಥಂಬೋರ ಕೋಟೆಯನ್ನೂ 1227ರಲ್ಲಿ ಸಿವಾಲಕ್ ಪ್ರಾಂತ್ಯದ ಮಂದವಾರವನ್ನೂ 1228ರಲ್ಲಿ ಸಿಂಧ್ ಪ್ರಾಂತ್ಯವನ್ನೂ ವಶಪಡಿಸಿಕೊಂಡ. ಬಂಗಾಲದಲ್ಲಿ ಭಕ್ತಿಯಾರ್ ಖಲ್ಜಿದಂಗೆ ಎದ್ದಿದ್ದು ಆತನ ಮಗ ಇಖ್ತಿಯಾರ್-ಉದ್-ದೀನ್ ಮಹಮದ್ ಬಿಹಾರ ಪ್ರಾಂತ್ಯವನ್ನೂ ಪಶ್ಚಿಮ ಬಂಗಾಲದ ಒಂದು ಪ್ರಾಂತ್ಯವನ್ನೂ ಗೆದ್ದುಕೊಂಡಿದ್ದ. ಆತನ ತರುವಾಯ ಕುತ್ಬುದ್ದೀನ್‍ನಿಂದ ಪ್ರಾಂತ್ಯಾಧಿಕಾರಿಯಾಗಿ ನೇಮಿತನಾಗಿದ್ದ. ಅಲಿಮರ್ದನ ಸ್ವಾತಂತ್ರ್ಯ ಘೋಷಿಸಿ ಸುಲ್ತಾ-ಉದ್-ದೀನ್ ಎಂಬ ಹೆಸರಿನಲ್ಲಿ ಆಳತೊಡಗಿದ. ಖಲ್ಜೀಮಲ್ಲಿಕರು ಅವನ ನೆರವಿಗಿದ್ದರು. ಅವರನ್ನು ಈಗ ಇಲ್ತಮಿಷ್ ಸೋಲಿಸಿ ಶರಣಾಗತರಾಗುವಂತೆ ಮಾಡಿದ (1230-31). ಜಾನಿಯನ್ನು, ಲಖನೌತಿಯ ಪ್ರಾಂತ್ಯಾಧಿಕಾರಿಯಾಗಿ ಅಲ್ಲಾ-ಉದ್-ದೀನ್ ನೇಮಿಸಿದ. 1234ರಲ್ಲಿ ಮಾಳ್ವದ ಬಿಸ್ಲಾದುರ್ಗವನ್ನೂ ಉಜ್ಜಯನಿ ನಗರವನ್ನೂ ವಶಪಡಿಸಿಕೊಂಡ. ಬಿನಿಯನ್ ನಗರದ ಮೇಲೆ ಧಾಳಿ ಮಾಡಿದಾಗ ಈತ ಮರಣ ಹೊಂದಿದ (1236). ಈತನ ಕಾಲದಲ್ಲಿ ಮಂಗೋಲರ ಚಂಗೆಸ್‍ಖಾನ್ (ತೆಮುಜಿನ್ ಎಂಬುದು ಮೂಲ ಹೆಸರು) 1221ರಲ್ಲಿ ಸಿಂಧೂ ನದೀ ತೀರದಲ್ಲಿ ಮೊದಲು ಕಾಣಿಸಿಕೊಂಡ. ಖ್ವಾರಜಮ್ ರಾಜ್ಯದ ಕೊನೆಯ ಷಹ ಜಲಾಲುದ್ದೀನ್ ಮಂಗ್ಬರ್ನಿಯ ಮೇಲೆ ಧಾಳಿ ಮಾಡಿದಾಗ ಆತ ಪಂಜಾಬಿಗೆ ಧಾವಿಸಿ ಅಲ್ಲಿ ಇಲ್ತಮಿಷನ ಆಶ್ರಯ ಬೇಡಿದ. ಇಲ್ತಮಿಷ್ ಆತನಿಗೆ ಆಶ್ರಯ ನೀಡಲಿಲ್ಲ. ಒಂದು ವಿಧದಲ್ಲಿ ಇದರಿಂದ ಆತ ಭಾರತವನ್ನು ಮಂಗೋಲರ ಕ್ರೂರ ಆಕ್ರಮಣದಿಂದ ರಕ್ಷಿಸಿದಂತಾಯಿತು. ಖಲೀಫನಿಂದ ಇಲ್ತಮಿಷ್ ಸುಲ್ತಾನ್-ಇ-ಆಜûಮ್ ಎಂಬ ಬಿರುದು ಪಡೆದು ತಾನು ಖಲೀಫನ ತವನಿಧಿಯೆಂದು ನಾಣ್ಯಗಳ ಮೇಲೆ ಟಂಕಿಸಿದ. ಕಲೆ ಸಾಹಿತ್ಯಗಳಿಗೆ ಪೋಷಣೆ ನೀಡಿದ ಈತನ ಹೆಸರು ಕುತುಬ್ ಮಿನಾರದಿಂದಾಗಿ ಅಜರಾಮರವಾಗಿದೆ. ಈತನ ಗೌರವಕ್ಕೆ ಪಾತ್ರನಾಗಿದ್ದ ಮತ್ತು ಬಾಗ್ದಾದ್ ಸಮೀಪದಲ್ಲಿ ವಾಸವಾಗಿದ್ದ ಖ್ವಾಜಾ ಕುತ್ಬುದ್ದೀನ್ ಭಾರತಕ್ಕೆ ಬಂದುದರ ಸ್ಮರಣಾರ್ಥ ಈ ಗೋಪುರವನ್ನು ಕಟ್ಟಿಸಲಾಯಿತು. ಇಲ್ತಮಿಷನ ಹಿರಿಯಮಗ ನಾಸಿರುದ್ದೀನ್ ಮಹಮೂದ್ ಬಂಗಾಲದಲ್ಲಿ ಆಳುತ್ತಿದ್ದಾಗ ಕಾಲವಾದ (1279). ಇತರ ಗಂಡು ಮಕ್ಕಳು ಅಯೋಗ್ಯರಲ್ಲರೆಂಬ ಕಾರಣದಿಂದ ಮಗಳು ರಜಿಯಾಳನ್ನು ಉತ್ತರಾಧಿಕಾರಿಯಾಗಿ ಇಲ್ತಮಿಷ್ ನೇಮಿಸಿದ. ಆದರೆ ಅವಳ ಅಯೋಗ್ಯ ಸಹೋದರ ರುಕ್ನುದ್ದೀನನನ್ನು ಸಂಪ್ರದಾಯವಾದಿಗಳು ಸಿಂಹಾಸನದ ಮೇಲೆ ಕೂರಿಸಿದರು. ರಾಜ್ಯದ ಸ್ಥಿತಿ ಹದಗೆಟ್ಟಿತು. ಬದೌನ್, ಮುಲ್ತಾನ್, ಲಾಹೋರ್, ರhೂಂಸಿ ಮತ್ತು ಬಂಗಾಲದಲ್ಲಿ ಕೇಂದ್ರ ಸಕಾರವನ್ನು ನಿರ್ಲಕ್ಷಿಸಲಾಯಿತು. ರೋಸಿದ ದೆಹಲಿಯ ಕುಲೀನರು ರಜಿಯಾಳನ್ನು ಸಿಂಹಾಸನಕ್ಕೇರಿಸಿದರು. ತೀಕ್ಷ್ಣಮತಿ ಹಾಗೂ ದಕ್ಷತೆಗಳಿಂದ ಆಕೆ ತನ್ನ ವಿರುದ್ಧ ದಂಗೆ ಎದ್ದವರನ್ನು ಸೋಲಿಸಿದಳು. ಅವರಲ್ಲಿ ವಜೀರನಾಗಿದ್ದ ಮಹಮದ್ ಜುನಾದಿ ಪ್ರಮುಖ. ಅಂತಿಮವಾಗಿ ಲಖ್ನೌತಿಯಿಂದ ದೇಬುಲ್, ದಮ್ರಿಲಗಳವರೆವಿಗೆ ಎಲ್ಲ ಮಲ್ಲಿಕರೂ ಅಮೀರರೂ ಆಕೆಯ ಅಧಿಕಾರವನ್ನು ಅಂಗೀಕರಿಸಿದರು. ಅಬಿಸ್ಷೀನಿಯದ ಜಲಾಲುದ್ದೀನ್ ಯಾಖೂಬ್ ಎಂಬ ಗುಲಾಮನಿಗೆ ಆಕೆ ತೋರಿದ ವಿಶೇಷ ಅನುಗ್ರಹ ಸಂಪ್ರದಾಯವಾದಿಗಳ ಅಸಂತುಷ್ಟಿಗೆ ಕಾರಣವಾಗಿ ಅವರು ದಂಗೆ ಎದ್ದರು. ಸರ್‍ಹಿಂದ್ ಪ್ರಾಂತ್ಯದ ಇಖ್ತಿಯಾರ್-ಉದ್-ದೀನ್ ಅಲ್ತೂನಿಯ ಇವರಲ್ಲಿ ಮೊದಲಿಗ. ಈತನನ್ನು ಎದುರಿಸಲು ರಾಣಿ ಸ್ವತಃ ಸೈನ್ಯದೊಡನೆ ಹೊರಟಳು. ಆದರೆ ದಂಗೆ ಎದ್ದ ಜನ ಯಾಖೂಬನನ್ನು ಕೊಲೆಮಾಡಿ ರಾಣಿಯನ್ನು ಸೆರೆ ಹಿಡಿದರು. ಅವಳ ಸಹೋದರ ಮುಯಿಜ್-ಉದ್-ದೀನ್ ಬಹ ರಾಮ್‍ನನ್ನು ರಾಜನೆಂದು ಘೋಷಿಸಲಾಯಿತು. ಇಷ್ಟರಲ್ಲಿ ಆಕೆ ಆಲ್ತೂನಿಯನನ್ನೇ ಮದುವೆಯಾಗಿ ದೆಹಲಿಗೆ ಬಂದಳಾದರೂ ಬಹರಾಮ್ ಆಕೆಯನ್ನು ಸೋಲಿಸಿ ಇಬ್ಬರನ್ನೂ ಕೊಂದ. ಆಕೆಯ ಉತ್ತರಾಧಿಕಾರಿಗಳಾದ ಬಹರಾಮ್ ಮತ್ತು ಆಲ್ಲಾ ಉದ್ದೀನ್ ಮಸೂದ್ ಅಸಮರ್ಥರಾದ್ದರಿಂದ ಅಶಾಂತಿ ಬೆಳೆಯಿತು. 1241ರಲ್ಲಿ ಮಂಗೋಲರು ಪಂಜಾಬನ್ನು ಪ್ರವೇಶಿಸಿ ಲಾಹೋರನ್ನು ಹಿಡಿದರು. 1245ರಲ್ಲಿ ಉಚ್‍ವರೆಗೂ ಬಂದರು. ಇಂಥ ಅಸ್ತವ್ಯಸ್ತ ಪರಿಸ್ಥಿತಿಗಳನ್ನು. ಸುಧಾರಿಸಲು ಶ್ರೀಮಂತವರ್ಗದವರು ಇಲ್ತಮಿಷನ ಕಿರಿಯಮಗ ನಾಸಿರುದ್ದೀನನಿಗೆ ಪಟ್ಟ ಕಟ್ಟಿದರು (1246). ಈತ ದಯಾಪರ, ಧಾರ್ಮಿಕ ಪ್ರವೃತ್ತಿಯುಳ್ಳವ. ಉತ್ತಮ ಲಿಪಿಕಾರನಾಗಿದ್ದು ಖುರಾನನ್ನು ಪ್ರತಿಮಾಡಿದ. ಪಂಡಿತಗೋಷ್ಠಿಗಳಲ್ಲಿ ವಿಶೇಷ ಆಸಕ್ತಿ ತಳೆದ. ಈತನಿಗೆ ಘಿಯಾಸುದ್ದೀನ್ ಬಲ್ಬನ್ ಎಂಬ ನಿಷ್ಠಾವಂತ ದಕ್ಷಮಂತ್ರಿ ಇದ್ದ. ಸುಲ್ತಾನನ ಎಲ್ಲ ಅಧಿಕಾರಗಳನ್ನೂ ಇವನೇ ವಹಿಸಿಕೊಂಡಿದ್ದ. ಪುತ್ರಸಂತಾನವಿಲ್ಲದೆ ನಾಸಿರುದ್ದೀನ್ ಕಾಲವಾದಾಗ ಬಲ್ಬನ್ನನೇ ಸುಲ್ತಾನನ ಉತ್ತರಾಧಿಕಾರಿಯಾದ (1266).
- ಈತ ತುರ್ಕಿಸ್ತಾನದ ಅಲ್ಬೇರಿ ಜನಾಂಗಕ್ಕೆ ಸೇರಿದವ. ಮಂಗೋಲರು ಸೆರೆಹಿಡಿದು ಖ್ವಾಜಾ ಜಮಾಲುದ್ದೀನನಿಗೆ ಇವನನ್ನು ಮಾರಿದರು. ಈತ 1232ರಲ್ಲಿ ಇಲ್ತಮಿಷನ ನಲ್ವತ್ತುಮಂದಿ ಗುಲಾಮರ ಗುಂಪಿಗೆ ಸೇರಿದ. ಆರಂಭದಲ್ಲಿ ಆತನ ಖಾಸಾ ನೌಕರನಾಗಿ ಸ್ವಸಾಮಥ್ರ್ಯದಿಂದ ಉನ್ನತ ಪದವಿಗಳಿಗೇರಿ 1249ರಲ್ಲಿ ಸುಲ್ತಾನನ ಮಗಳನ್ನು ವರಿಸಿದ. ಇಲ್ತಮಿಷನ ತರುವಾಯದ ಮೂರು ದಶಕಗಳಲ್ಲಿ ರಾಜ್ಯದಲ್ಲಿ ಅವ್ಯವಸ್ಥೆ ತಲೆದೋರಿತ್ತು. ಪ್ರಭುತ್ವದಲ್ಲಿ ಜನರಿಗೆ ಭೀತಿಯೇ ಇರಲಿಲ್ಲ. ಇವನ್ನು ಸರಿಪಡಿಸುವಲ್ಲಿ ಮೊದಲ ಹೆಜ್ಜೆಯಾಗಿ ಸೈನ್ಯವನ್ನು ಬಲಗೊಳಿಸಿ ಅಶ್ವದಳ ಕಾಲ್ದಳಗಳನ್ನು ಪುನವ್ರ್ಯವಸ್ಥೆಗೊಳಿಸಿದ. ಮೇವಾಡದ ಹಾಗೂ ಇತರ ದರೋಡೆಕಾರರ ತಂಡಗಳು ದೆಹಲಿಯನ್ನು ಆಕ್ರಮಿಸಿ ಜನರಲ್ಲಿ ಭೀತಿ ಮೂಡಿಸಿದ್ದುವು. ಅಂಥವರನ್ನು ದೆಹಲಿಯ ಕಾಡುಗಳಿಂದ ಓಡಿಸಿ ಗೋಪಾಲಗಿರಿಯಲ್ಲಿ ಕೋಟೆ ಕಟ್ಟಿಸಿದ. ದೋಅಬ್‍ನಲ್ಲಿ ಡಕಾಯಿತರ ಧಾಳಿಗಳನ್ನು ತಡೆದ. ಜೂಡ್ ಪರ್ವತ ಪ್ರದೇಶಗಳ ಗುಡ್ಡಗಾಡು ಬಣಗಳನ್ನು ಹತ್ತಿಕ್ಕಿ ಕಾಥೆರ್‍ದಲ್ಲಿಯ (ಈಗಿನ ರೋಹಿಲ್ ಖಂಡ್) ಮಂಗೋಲರ ಆಕ್ರಮಣವನ್ನು ಹಿಮ್ಮೆಟ್ಟಿಸಿ ಲಾಹೋರಿನ ಕೋಟೆಯನ್ನು ಭದ್ರಪಡಿಸಿದ (1271). 1279ರಲ್ಲಿ ಮಂಗೋಲರು ಸತ್ಲಜ್ ನದಿಯನ್ನು ದಾಟಿದರು. ಆದರೆ ಸುಲ್ತಾನನ ಹಿರಿಯಮಗ ಮಹಮ್ಮದನನ್ನು ಮುಲ್ತಾನದ ಪ್ರಾಂತ್ಯಾಧಿಕಾರಿಯಾಗಿ, ಎರಡನೆಯ ಬುಘ್ರಾಖಾನನನ್ನು ಸಾಮಾನ್ ಮತ್ತು ಸುನಾಮ್‍ಗಳ ಆಡಳಿತಾಧಿಕಾರಿಯಾಗಿ ನೇಮಿಸಿದ. ಇವರಿಬ್ಬರ ಸೈನ್ಯಗಳೂ ದೆಹಲಿಯಿಂದ ಬಂದ ಮಲಿಕ್ ಮುಬಾರಕ್ ಬೆಕ್ತರನ ಸೈನ್ಯವೂ ಮಂಗೋಲರ ದ್ವಿತೀಯ ದಾಳಿಯನ್ನು ಎದುರಿಸಿ ಅವರನ್ನು ಹಿಂದಕ್ಕಟ್ಟಿದುವು (1279). ಬಂಗಾಲದಲ್ಲಿ ಅಧಿಕಾರಿಯಾಗಿದ್ದ ತುಘ್ರಿಲ್ ಖಾನ್ ದೆಹಲಿಯ ಅರಾಜಕತೆಯನ್ನು ಅನುಲಕ್ಷಿಸಿ 1279 ಮತ್ತು 80ರಲ್ಲಿ ದಂಗೆ ಎದ್ದ. ಮೊದಲ ವರ್ಷ ಸುಲ್ತಾನನ ದಂಡನಾಯಕ ಅಲ್ತಗೀನ್ ಉರುಫ್ ಅಮೀರ್‍ಖಾನ್ ಅವನ ವಿರುದ್ಧ ಸೈನ್ಯಾಚರಣೆ ಮಾಡಿದರೂ ಸೋತು ಹಿಂದಿರುಗಿದ. ಮಲಿಕ್ ತರ್ಘೀ ಎಂಬಾತನೂ ಮರುವರ್ಷ ಸೋತಾಗ ಬಲ್ಬನ್ ಕೆರಳಿ ಸ್ವತಃ ಸೈನ್ಯನಾಯಕತ್ವ ವಹಿಸಿ ಬಂಗಾಲಕ್ಕೆ ಧಾವಿಸಿದ. ಹೆದರಿದ ತುರ್ಘಿಲ್ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ ಬಲ್ಬನನ ಅನುಯಾಯಿಗಳಿಂದ ಹತನಾದ. ತನ್ನ ಮಗ ಬುಘ್ರಾಖಾನನನ್ನು ಬಂಗಾಲದ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿ ಬಲ್ಬನ್ ಹಿಂದಿರುಗಿದ. ಅನಂತರದ ವರ್ಷಗಳಲ್ಲಿ ಬಲ್ಬನ್ನನ ಬಲ ಕುಗ್ಗಿತು. ಮಂಗೋಲರು ತಮರನ ನಾಯಕತ್ವದಲ್ಲಿ ಪಂಜಾಬಿಗೆ ನುಗ್ಗಿದಾಗ ಹಿರಿಯ ಮಗ ಮಹಮ್ಮದ್ ಅವನನ್ನೆದುರಿಸಿ ಸಾವಿಗೀಡಾದ. ಈ ಚಿಂತೆಯಲ್ಲಿ ಸುಲ್ತಾನ್ ಮರಣ ಹೊಂದಿದ (1287). ಈತ ರಾಜ್ಯಾಡಳಿತದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತಂದು ಸಾಮ್ರಾಜ್ಯದ ಘನತೆ ಗೌರವಗಳನ್ನು ಹೆಚ್ಚಿಸಿದ್ದ; ಪರ್ಷಿಯದ ಅರಸರ ಆಸ್ಥಾನ ಪದ್ಧತಿಗಳನ್ನು ಜಾರಿಗೆ ತಂದಿದ್ದ. ಸಾಮ್ರಾಜ್ಯ ಛಿüದ್ರವಾಗದಂತೆ ಅದನ್ನು ಕಾಪಾಡಿದ್ದ. ಆದರೆ ಪ್ರಜಾಹಿತಕ್ಕಾಗಿ ಆಡಳಿತ ವ್ಯವಸ್ಥೆಯನ್ನು ನವೀಕರಿಸುವ ಕಾರ್ಯವನ್ನು ಮಾತ್ರ ಮಾಡಲಿಲ್ಲ. ಖ್ಯಾತಕವಿ ಅಮೀರ್ ಖುಸ್ರು ಈತನ ಸಮಕಾಲೀನ.
- ಈತನ ತರುವಾಯ ಬಂದವರು ವಿಷಯಲಂಪಟರೂ ಅಧಕ್ಷರೂ ಆಗಿದ್ದರು. ಇದರಿಂದ ಪುನಃ ಅವ್ಯವಸ್ಥೆ ತಲೆ ಎತ್ತಿತು. ಅಂತಃಕಲಹಗಳ ಪರಿಣಾಮವಾಗಿ ಕೈಖುಬಾದ ಕೊಲ್ಲಲ್ಪಟ್ಟಾಗ ಖಲ್ಚಿ ಪಕ್ಷದವರು ಜಲಾಲ್-ಉದ್-ದೀನ್ ಫಿರೋಜ್ ಎಂಬವನ ನಾಯಕತ್ವದಲ್ಲಿ ಪ್ರಬಲರಾಗಿ ಆತನನ್ನು ಸುಲ್ತಾನ ಪದವಿಗೇರಿಸಿದರು (1290). ದೆಹಲಿಯಲ್ಲಿ ತುರ್ಕಿ ಪಕ್ಷದವರು ಖಲ್ಜೀ ಪಕ್ಷದ ಇವನನ್ನು ಮಾನ್ಯ ಮಾಡಲಿಲ್ಲವಾದ ಕಾರಣ ಆರಂಭದಲ್ಲಿ ಜಲಾಲುದ್ದೀನ್ ಕಿಲೋಬಿಯನ್ನೇ ರಾಜಧಾನಿಯಾಗಿ ಮಾಡಿಕೊಂಡ. ಆ ವೇಳೆಗಾಗಲೇ ಇವನಿಗೆ 70ವರ್ಷ ಮೀರಿತ್ತು. ಈತ ದಯಾಪರನಾಗಿದ್ದು ಉದಾರ ನೀತಿಗಳಿಂದ ವಿರೋಧಿಗಳನ್ನು ಗೆದ್ದ. ಬಲ್ಬನ್ನನ ಸೋದರಳಿಯ ಮಲಿಕ್ ಛಜ್ಜೂ, ಕಾರಾದಲ್ಲಿ ದಂಗೆ ಎದ್ದರೂ ಜಲಾಲುದ್ದೀನ್ ಅವನನ್ನು ಕ್ಷಮಿಸಿದ. ಆದರೆ ಈತನ ಸದ್ಗುಣಗಳು ಆಸ್ಥಾನಿಕರ ವಿಶ್ವಾಸಗಳಿಸುವಲ್ಲಿ ವಿಫಲವಾದುವು. ಆಕ್ರಮಣ ನೀತಿಯನ್ನು ಸಹಿಸದ ಈತ ರಣಥಂಬೋರ್ ಕೋಟೆಯನ್ನು ಮುತ್ತಿದರೂ ಅಲ್ಲಿ ಮುಸಲ್ಮಾನರ ಜೀವಹಾನಿಯಾದೀತೆಂದು ಭಾವಿಸಿ ಹಿಂತಿರುಗಿದ. ಆದರೆ 1292ರಲ್ಲಿ ಒಂದೂವರೆ ಲಕ್ಷ ಮಂಗೋಲರನ್ನು ಸೋಲಿಸಿ ಅವರು ಭಾರತದಿಂದ ಕಾಲ್ತೆಗೆಯಲು ಅನುಮತಿ ನೀಡಿದ. ಅವರಲ್ಲಿ ಅನೇಕರು ಇಸ್ಲಾಮ್ ಧರ್ಮ ಸ್ವೀಕರಿಸಿದಾಗ ದೆಹಲಿಯ ಬಳಿ ವಾಸಿಸಲು ಅನುಮತಿ ನೀಡಿದ. ಹೊಸ ಮುಸಲ್ಮಾನರು ಎಂದು ಕರೆಯಲಾದ ಅವರು ಮುಂದೆ ದೆಹಲಿ ಸರ್ಕಾರಕ್ಕೆ ನಾನಾ ವಿಧದ ಕಿರುಕುಳ ಕೊಟ್ಟರು. ಸೋದರಳಿಯ ಅಲಾಉದ್ದೀನ್ ಇವನನ್ನು ಕೊಂದು ಸಿಂಹಾಸನವೇರಿದ (1296).
- ಜಲಾಲುದ್ದೀನನ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದ ಅಲಾಉದ್ದೀನ್ ಅಲಹಾಬಾದ್ ಜಿಲ್ಲೆಯ ಕಾರಾ ಪ್ರಾಂತ್ಯಾಧಿಕಾರಿಯಾಗಿದ್ದಾಗ ದೆಹಲಿ ಸಿಂಹಾಸನದ ಉತ್ತರಾಧಿಕಾರಿಯಾಗುವ ಕನಸು ಕಾಣತೊಡಗಿದ. ಸಾಂಸಾರಿಕ ನೆಮ್ಮದಿಯಿಂದ ವಂಚಿತನಾಗಿದ್ದ ಈತ ಅಧಿಕಾರದ ಮೂಲಕ ಪ್ರಭಾವಶಾಲಿಯಾಗ ಬಯಸಿದ. ಮಾಳವದ ವಿರುದ್ಧ ಹೋದ ದಂಡಯಾತ್ರೆಯ (1292) ಬಳಿಕ ಔಧ್ ಪ್ರಾಂತ್ಯ ಸಹ ಇವನ ಅಧೀನಕ್ಕೊಳಪಟ್ಟಿತು. ಬಿಸ್ಲಾದಿಂದ ದಕ್ಖನ್‍ಗೆ ನುಗ್ಗಿ ಸೇವುಣ ರಾಮಚಂದ್ರನನ್ನು ದೇವಗಿರಿಯಲ್ಲಿ ಸೋಲಿಸಿದ ಸಂದರ್ಭದಲ್ಲಿ ದಕ್ಷಿಣ ಭಾರತದ ಅಪಾರ ಸಂಪತ್ತು ಇವನನ್ನು ಆಕರ್ಷಿಸಿತು. ಅಲ್ಲಿ ಕಪ್ಪವಾಗಿ ಪಡೆದ ಸಂಪತ್ತನ್ನು ತಾನೇ ಇಟ್ಟುಕೊಂಡ. ದೆಹಲಿಯ ಆಸ್ಥಾನಿಕರಲ್ಲಿ ಪ್ರಮುಖನಾದ ಅಹಮ್ಮದ್‍ಛಾಪ್ ಸುಲ್ತಾನನನ್ನು ಈತನ ವಿಷಯದಲ್ಲಿ ಜಾಗರೂಕನಾಗಿರುವಂತೆ ಎಚ್ಚರಿಸಿದ. ಆದರೆ ಈತ ಅಳಿಯನಿಂದ ವ್ಯಾಮೋಹಿತನಾಗಿದ್ದು, ಆತನ ಆಹ್ವಾನ ಸ್ವೀಕರಿಸಿ ಕಾರಾಕ್ಕೆ ತೆರಳಿದ. ದೋಣಿಯಲ್ಲೇ ಈತನ ಕೊಲೆಯಾಯಿತು (1296, ಜುಲೈ). ಅಲಾಉದ್ದೀನನ ಹಿಂಬಾಲಕರು ಅವನನ್ನು ಸುಲ್ತಾನನೆಂದು ಘೋಷಿಸಿದರೂ ದೆಹಲಿಗೆ ಹಿಂತಿರುಗಿ ಅರಮನೆಯೊಳಗಿನ ಮತ್ತು ಹೊರಗಿನ ಶತ್ರುಗಳನ್ನು ನಿವಾರಿಸಿಕೊಳ್ಳುವ ತನಕವೂ ಅವನ ಸ್ಥಾನ ಭದ್ರವಾಗಿರಲಿಲ್ಲ. ತನ್ನ ಸಂಪತ್ತನ್ನು ಅನುಯಾಯಿಗಳಿಗೆ ಹಂಚಿ ಅವರ ಒಲವನ್ನು ಪಡೆದ. 1296 ಅಕ್ಟೋಬರಿನಲ್ಲಿ ಪಟ್ಟಾಭಿಷಿಕ್ತನಾದ. ಜಫರ್‍ಖಾನ್ ಈತನ ಮಂತ್ರಿಯೂ ವೀರಯೋಧನೂ ಆಗಿದ್ದು ರುಸ್ತುಮ್ ಎನಿಸಿಕೊಂಡಿದ್ದ. ಈತನ ಧೈರ್ಯ ಸಾಹಸಗಳಿಂದ 1296, 1297 ಮತ್ತು 1299ರಲ್ಲಿ ಮೇಲಿಂದ ಮೇಲೆ ದಾಳಿ ಮಾಡಿದ ಮಂಗೋಲರು ತೀವ್ರ ಸೋಲನ್ನು ಅನುಭವಿಸಿ ಹಿಂದೆ ಸರಿದರು. ಅವರ ನಾಯಕ ಸಾಲ್ದಿ ಸೆರೆಸಿಕ್ಕ. ಕುತ್ಲುಬ್ ಖ್ವಾಜಾನ ನೇತೃತ್ವದಲ್ಲಿ ಬಂದಿದ್ದ ಮಂಗೋಲರ ಸೈನ್ಯ 1299ರ ಕದನದಲ್ಲಿ ಹಿಂದಕ್ಕೆ ಸರಿದರೂ ಸ್ವತಃ ಜಫರ್‍ಖಾನನೇ ವೀರಮರಣ ಅಪ್ಪಿದ. 1307-08ರಲ್ಲಿ ಇಖ್ಬಾಲ್‍ಮಂಡನ ನೇತೃತ್ವದಲ್ಲಿ ಸಿಂಧೂನದಿ ದಾಟಿ ಮಂಗೋಲರು ಮುನ್ನುಗ್ಗಿದರೂ ಹಿಮ್ಮಟ್ಟಿಸಲ್ಪಟ್ಟರು. ಈ ದಾಳಿಗಳಿಂದ ರಾಜ್ಯವನ್ನು ರಕ್ಷಿಸಲು ಸುಲ್ತಾನ ವಾಯವ್ಯಗಡಿಯಲ್ಲಿ ಕೋಟೆಗಳ ದುರಸ್ತಿ ಮತ್ತು ಹೊಸಕೋಟೆಗಳ ನಿರ್ಮಾಣ ಕಾರ್ಯ ಕೈಗೊಂಡ. ದೆಹಲಿಯಲ್ಲಿ ಈತನ ವಿರುದ್ಧ ದಂಗೆ ಎದ್ದಿದ್ದ ಹೊಸ ಮುಸಲ್ಮಾನರನ್ನು ಸೇವೆಯಿಂದ ಕಿತ್ತು, ಕೊನೆಗೆ ಅವರ ಸಾಮೂಹಿಕ ಕೊಲೆಗೆ ಆಜ್ಞೆ ಹೊರಡಿಸಿದ.
- ಆರಂಭದ ಈ ವಿಜಯಗಳು ಆಲಾಉದ್ದೀನನ ಸೀಮಿತವನ್ನು ಕೆಡಿಸಿದುವು. ಗುಜರಾತಿನಲ್ಲಿ ಬಘೇಲಾ ರಜಪೂತ ಅರಸ ಎರಡನೆಯ ಕರ್ಣದೇವ ಆಳುತ್ತಿದ್ದ. ಈ ಹಿಂದೂ ರಾಜ್ಯದ ಮೇಲೆ ದಂಡೆತ್ತಲು ಅಲಾಉದ್ದೀನ್ ತನ್ನ ಸಹೋದರ ಉಲುಘ್‍ಖಾನ್ ಮತ್ತು ವಜೀರ್‍ನಜರತ್‍ಖಾನರನ್ನು ಕಳುಹಿಸಿದ (1297). ಕರ್ಣ ದೇವ ತನ್ನ ಮಗಳಾದ ದೇವಲಾದೇವಿಯೊಡನೆ ದೇವಗಿರಿಯಲ್ಲಿ ಆಶ್ರಯ ಪಡೆದ. ಆತನ ರಾಣಿ ಕಮಲಾದೇವಿ ಮಾತ್ರ ಸೆರೆಯಾಳಾಗಿ ಮುಂದೆ ಸುಲ್ತಾನನ ಸತಿಯಾದಳು. ಸಂಪತ್ತಿನ ಸೂರೆಯಾಯಿತು. ಈ ಸಂದರ್ಭದಲ್ಲಿ ಅಲ್ಲಾಉದ್ದೀನನಿಗೆ ಮಲ್ಲಿಕ್ ಕಾಫರ್ ಎಂಬ ನಪುಂಸಕ ನೌಕರ ಕಾಣಿಕೆಯಾಗಿ ಸಿಕ್ಕಿದ.
- 1299ರಲ್ಲಿ ರಣಥಂಬೋರ್ ಕೋಟೆಯ ಆಕ್ರಮಣದ ಯುದ್ಧದಲ್ಲಿ ಉಲುಫ್ ಮತ್ತು ನಜರತ್‍ಖಾನ್‍ರು ಸೋತಾಗ ಸ್ವತಃ ಸುಲ್ತಾನನೇ ಸೈನ್ಯದ ನಾಯಕತ್ವ ವಹಿಸಿ, ಒಂದು ವರ್ಷಕಾಲ ದೀರ್ಘ ಮುತ್ತಿಗೆ ಹಾಕಿ ಅದನ್ನು ವಶಡಿಸಿಕೊಂಡ. ಈ ಸಂದರ್ಭದಲ್ಲಿ ಸುಲ್ತಾನನ ವಿರುದ್ಧ ಸಂಚು ಹೂಡಿದ್ದ ಹಲವಾರು ಸೇನಾನಿಗಳು ಅವನ ಕೋಪಕ್ಕೆ ತುತ್ತಾದರು. ಹಮ್ಮೀರದೇವ ಅಸುನೀಗಿದ. ಮುಂದಿನ ಗುರಿ ಮೇವಾಡದ ಕೋಟೆ. ಇಲ್ಲಿಯೂ ರಜಪೂತರು ಪ್ರಬಲ ವಿರೋಧ ಒಡ್ಡಿದರು. ರಾಣಾ ರತ್ನಸಿಂಹನ ಮಡದಿ ಪದ್ಮಿನಿ ಈ ದಂಡಯಾತ್ರೆಗೆ ಕಾರಣ ಎಂಬುದೊಂದು ಪರಂಪರಾ ಗತ ಆದರೆ ಮತ್ತು ರಜಪೂತ ಸ್ತ್ರೀಯರು ಅಗ್ನಿಪ್ರವೇಶಿಸಿದರು. ಚಿತ್ತೂರಿನ ಹೆಸರನ್ನು ಖಜ್ರಾಬಾದ್ ಎಂದು ಬದಲಾಯಿಸಲಾಯಿತು. ಮಗ ಖಿಜ್ರಾಖಾನನಿಗೆ ಅಲ್ಲಿಯ ಆಡಳಿತ ವಹಿಸಲಾಯಿತು. ಆದರೆ ರಜಪೂತರ ಪ್ರತಿಭಟನೆ ತೀವ್ರವಾಗಿದ್ದು 1311ರ ವೇಳೆಗೆ ಖಿಜ್ರಾಖಾನ್ ದೆಹಲಿಗೆ ಹಿಂತಿರುಗಬೇಕಾಯಿತು. ಜಾಲೋರ್ ರಾಜ್ಯದ ಮಾಲದೇವ ಆಡಳಿತ ವಹಿಸಿದನಾದರೂ ಅಂತಿಮವಾಗಿ ಚಿತ್ತೂರು ರಜಪೂತರ ವಶವಾಗಿ ಮತ್ತೊಮ್ಮೆ ಮೇವಾಡದ ರಾಜಧಾನಿಯಾಯಿತು.
- 1305ರಲ್ಲಿ ಸುಲ್ತಾನನ ಸೈನ್ಯ ಮಾಳವದ ಮಹಲತದೇವನನ್ನು ಸೋಲಿಸಿತು. ದರ್ಬಾರ್ ಭಕ್ಷಿಯಾದ ಐನ್-ಉಲ್-ಮುಲ್ಕ್ ಪ್ರಾಂತ್ಯಾಧಿಕಾರಿಯಾದ. ಉಜ್ಜಯಿನಿ, ಮಾಂಡ್, ಧಾರಾ ಮತ್ತು ಚಾಂಧೇರಿ ಸಹ ಸುಲ್ತಾನನ ವಶವಾದುವು. ದೇವತರಿಯ ರಾಮಚಂದ್ರದೇವ ಮೂರು ವರ್ಷಗಳಿಂದ ಕಪ್ಪ ಸಲ್ಲಿಸಿರಲಿಲ್ಲವೆಂಬ ಮತ್ತು ಕರ್ಣದೇವನಿಗೆ ಆಶ್ರಯ ನೀಡಿದನೆಂಬ ಕಾರಣಗಳಿಂದ ಸುಲ್ತಾನ್ ಮಲಿಕ್ ಕಾಫರನನ್ನು ದೇವತರಿಗೆ ಕಳುಹಿಸಿದ (1307). ಆತನ ಸೈನ್ಯ ದೇವಗಿರಿಯನ್ನು ಸೂರೆ ಮಾಡಿತು. ರಾಮಚಂದ್ರದೇವನನ್ನು ದೆಹಲಿಗೆ ಒಯ್ಯಲಾಯಿತು. ಆರು ತಿಂಗಳ ಬಳಿಕ ಆತ ಸಾಮಂತನಾಗಿ ಕಪ್ಪಕಾಣಿಕೆ ಸಲ್ಲಿಸುವ ಒಡಂಬಡಿಕೆಗೆ ಒಳಪಟ್ಟು ಹಿಂತಿರುಗಿದ. ಕರ್ಣದೇವನ ಮಗಳಾದ ದೇವಲ ದೇವಿಯನ್ನು ಸೆರೆಹಿಡಿದು ದೆಹಲಿಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ಸುಲ್ತಾನನ ಹಿರಿಯಮಗ ಖಜ್ರಾಖಾನನನ್ನು ವರಿಸಬೇಕಾಯಿತು.
- 1303ರಲ್ಲಿ ಒಮ್ಮೆ ಕಾಕತೀಯ ಪ್ರತಾಪರುದ್ರನ ವಿರುದ್ಧ ವರಂಗಲ್ಲಿಗೆ ಹೋಗಿದ್ದ ಸೈನ್ಯ ಬರಿಗೈಯಲ್ಲಿ ಹಿಂತಿರುಗಿತ್ತು. ಆದರೆ ಈ ರಾಮಚಂದ್ರನ ಸೋಲು ಸುಲ್ತಾನನನ್ನು ಉತ್ತೇಜಿಸಿ ಆತ ಕಾಫರನನ್ನು ವರಂಗಲ್ಲಿನ ವಿರುದ್ದ ಕಳಿಸಿದ. ಪ್ರತಾಪ ರುದ್ರ ಸೋತು ಸೆರೆಯಾಳಾಗಿ ದೆಹಲಿಗೆ ಕರೆದೊಯ್ಯಲ್ಪಟ್ಟ. ನೂರು ಆನೆಗಳು, ಏಳುಸಾವಿರ ಕುದುರೆಗಳು, ಸಾವಿರ ಒಂಟೆಗಳ ಮೇಲೆ ಹೇರಿದ ಅಪಾರ ಧನಕನಕಗಳು ಕಾಫರನಿಗೆ ದಕ್ಕಿದುವು. ಅಲ್ಲಿಂದ ಮುಂದೆ ಕಾಫರನೂ ಸೇನಾನಿ ಖ್ವಾಜಾಹಾಜಿಯೂ ಹೊಯ್ಸಳ ವೀರಬಲ್ಲಾಳನ ವಿರುದ್ಧ ಬಂಡೆದ್ದು ಅವನನ್ನು ಸೋಲಿಸಿ ರಾಜಧಾನಿ ದೋರಸಮುದ್ರವನ್ನು ದೋಚಿದರು. ಬಲ್ಲಾಳ ಸುಲ್ತಾನನ ಸಾಮಂತಿಕೆಯನ್ನು ಒಪ್ಪಿ ಮಗನನ್ನು ದೆಹಲಿಗೆ ಕಳುಹಿಸಬೇಕಾಯಿತು. 1311ರಲ್ಲಿ ಪಾಂಡ್ಯರನ್ನು ಸೋಲಿಸಿ, ಮಧುರೆಯನ್ನು ಸೂರೆಗೊಂಡು, ಅಪಾರ ಸಂಪತ್ತನ್ನು ದೋಚಿದ. ಕಾಫರ್ ರಾಮೇಶ್ವರದ ವರೆಗೂ ಹೋದನೆಂದು ಅಮೀರ್ ಖುಸ್ರು ಹೇಳಿದ್ದಾನೆ. ದೇವಗಿರಿಯ ಶಂಕರ ಸ್ವಾತಂತ್ರ್ಯ ಘೋಷಿಸಿದ್ದರಿಂದ 1312ರಲ್ಲಿ ಪುನಃ ದಕ್ಷಿಣಕ್ಕೆ ಬಂದು, ಕಾಫರ್ ಶಂಕರದೇವನನ್ನು ಯುದ್ಧದಲ್ಲಿ ಕೊಂದ.
- 1313ರ ವೇಳೆಗೆ ಸಮಗ್ರ ಉತ್ತರ ಭಾರತ ಅಲಾಉದ್ದೀನನ ಅಧೀನಕ್ಕೆ ಬಂದು ದಕ್ಷಿಣ ಭಾರತದ ರಾಜ್ಯಗಳು ಈತನ ಅಧಿಕಾರದ ಪರಾಕಾಷ್ಠೆ. ಆದರೆ ಸ್ವಚ್ಛಂದ ಜೀವನ ಈತನ ಆರೋಗ್ಯ ಕೆಡಿಸಿತ್ತು. ಮಲ್ಲಿಕ್‍ಕಾಫರ್‍ನನ್ನು ವಜೀರನ ಪದವಿಗೇರಿಸಿ, ತನ್ಮೂಲಕ ಮೊದಲಿನಿಂದಲೂ ಇದ್ದ ಸಮರ್ಥ ಅಧಿಕಾರಿಗಳ ವಿಶ್ವಾಸ ಕಳೆದುಕೊಂಡ. ಸುಲ್ತಾನನ ಆಡಳಿತ ಶಿಥಿಲಗೊಂಡಿತು. ವಜೀರ ಅರಮನೆಯ ಅಂತಃಕಲಹಗಳಿಗೆ ಕಾರಣನಾದ. ಸುಲ್ತಾನ ಅನಾರೋಗ್ಯದಿಂದ ಅಸುನೀಗಿದ (1316). ಸುಲ್ತಾನನ ಹಿರಿಯಮಗ ಖಿಜ್ರಾಖಾನನನ್ನು ಬದಿಗೊತ್ತಿದ ಕಾಫರ್ ಕಿರಿಯನಾದ ಐದಾರು ವರ್ಷಗಳ ಷಿಹಾಬುದ್ದೀನನನ್ನು ಪಟ್ಟಕ್ಕೆ ತಂದು ತಾನು ರಾಜಪ್ರತಿನಿಧಿಯಾಗಿ ಆಳುವ ಕುಂತಂತ್ರ ಹೂಡಿದ. ಆದರೆ ವಜೀರನ ಈ ಕ್ರಮಗಳಿಂದ ರೋಸಿದ ಕುಲೀನ ಆಸ್ಥಾನಿಕರು ಅವನನ್ನು ಕೊಂದರು. ಸೆರೆಯಲ್ಲಿದ್ದ ಮೂರನೆಯ ಮಗ ಮುಬಾರಕನನ್ನು ರಾಜಪ್ರತಿನಿಧಿಯಾಗಿ ನೇಮಿಸಿದರು. ಆದರೆ ಕೆಲವೇ ದಿನಗಳಲ್ಲಿ ಆತ ಸುಲ್ತಾನನೆನಿಸಿದ್ದ ಕಿರಿಯನನ್ನು ಬದಿಗೊತ್ತಿ ಕುತ್ಬುದ್ದೀನ್ ಮುಬಾರಕ್‍ಷಹ ಎಂಬ ಹೆಸರಿನಿಂದ ಸಿಂಹಾಸನ ಏರಿದ. ಈತ ವಿಷಯ ಲಂಪಟ. ಅಧಿಕಾರವನ್ನು ಖುಸ್ರೂಖಾನ್ ಎಂಬ ಮಂತ್ರಿಗೆ ಒಪ್ಪಿಸಿದ. ಗುಜರಾತಿನಲ್ಲಿ ಕಾಣಿಸಿಕೊಂಡ ದಂಗೆಯನ್ನು ಆತನ ಮಾವ ಜಾಫರ್‍ಖಾನ್ ಅಡಗಿಸಿದ. ದೇವಗಿರಿಯ ಬಂಡಾಯವನ್ನು ದಮನಗೊಳಿಸಲು ಸ್ವತಃ ಸುಲ್ತಾನನೇ ಅಲ್ಲಿಗೆ ಹೋದ. ಸೇವುಣರು ಸಂಪೂರ್ಣವಾಗಿ ಸೋತು ದೇವಗಿರಿ ರಾಜ್ಯ ಇವನ ವಶವಾಯಿತು. ಮಲ್ಲಿಕ್ ಯಾಕ್ಲಕೀಖಾನ್ ಅಲ್ಲಿಯ ಪ್ರಾಂತ್ಯಾಧಿಕಾರಿಯಾಗಿ ನೇಮಕಗೊಂಡ. ದೆಹಲಿಗೆ ಹಿಂತಿರುಗಿದ ಬಳಿಕ 1320ರಲ್ಲಿ ಖುಸ್ರೂಖಾನನ ಒಳಸಂಚಿಗೆ ಬಲಿಯಾದ. ಆದರೆ ಖುಸ್ರೂಖಾನನೆ ಗಡಿನಾಡಿನ ರಕ್ಷಕನಾಗಿದ್ದ ಘಾಜೀ ಮಲ್ಲಿಕನಿಂದ ಸೋಲಿಸಲ್ಪಟ್ಟು ಅಸುನೀಗಿದ. ಇದು ಕೆಲವೇ ತಿಂಗಳುಗಳ ಬಳಿಕ 1320ರ ಸೆಪ್ಟೆಂಬರಿನಲ್ಲಿ ನಡೆದ ಘಟನೆ. ಘಾಜೀ ಮಲ್ಲಿಕನೊಡನೆ ದೆಹಲಿಯಲ್ಲಿ ತುಘಲಕ್ ಸಂತತಿಯವರ ಆಳ್ವಿಕೆ ಆರಂಭವಾಯಿತು.
- ಅಲಾಉದ್ದೀನನ ವಿಜಯಗಳು ಆತನನ್ನು ಉನ್ಮಾದಗೊಳಿಸಿದುವು. ಈ ತನಕವೂ ದೆಹಲಿಯ ಸುಲ್ತಾನ ಧಾರ್ಮಿಕ ಮುಖಂಡರಾದ ಉಲೆಮರ ನೆರವಿನಿಂದ ಅಧಿಕಾರ ಪಡೆದವನಾಗಿರಬೇಕೆಂದು ಭಾವಿಸಲಾಗಿತ್ತು. ಇದರಿಂದ ಉಲೆಮರ ಪ್ರಭಾವ ಅಪಾರವಾಗಿತ್ತು. ಆದರೆ ಅಲಾಉದ್ದೀನ್ ಮೊದಲಬಾರಿಗೆ ಅದನ್ನು ಉಲ್ಲಂಘಿಸಿದ. ತಾನು ಕೈಗೊಂಡ ತೀರ್ಮಾನ ರಾಜ್ಯ ಹಿತಕ್ಕಾಗಿಯೇ. ಅವಿಧೇಯರನ್ನೂ ದಂಗೆಕೋರರನ್ನೂ ತಹಬಂದಿಗೆ ತರುವುದು ಮುಖ್ಯವೇ ಹೊರತು ಅದಕ್ಕಾಗಿತಾನು ನೀಡಿದ ಶಿಕ್ಷೆಯ, ಹಿಡಿದ ಮಾರ್ಗಗಳ ನ್ಯಾಯಾನ್ಯಾಯಗಳ ವಿಷಯ ತನಗೆ ತಿಳಿಯದು ಎಂಬುದು ಅವನ ಖಚಿತ ಅಭಿಪ್ರಾಯವಾಗಿತ್ತು. ಈ ವಾದದ ಮುನ್ನೆಲೆಯಲ್ಲಿ ರಾಜ ಕೇವಲ ರಾಜಕೀಯ ಮುಖಂಡನಷ್ಟೇ ಅಲ್ಲದೆ, ಧಾರ್ಮಿಕ ವಿಷಯಗಳಲ್ಲೂ ಅವನಿಗೆ ಮೇಲೊಬ್ಬ ಧರ್ಮಾಧಿಕಾರಿ ಇರುವನೆಂಬ ವಾದವನ್ನು ಅಲ್ಲಗಳೆದಿದ್ದನೆಂಬುದನ್ನು ಗಮನಿಸಬೇಕು. ವಿರೋಧಿಗಳನ್ನು ಸದೆಬಡಿಯಲು ಪ್ರಜೆಗಳ ಆಸ್ತಿಪಾಸ್ತಿ ಒಡೆತನದ ಹಕ್ಕನ್ನು ನಿಷೇಧಿಸಿದ. ಗೂಢಚಾರದಳದ ಮೂಲಕ ವಿಷಯ ಸಂಗ್ರಹಣೆ ಮಾಡಿ ತನ್ನ ವಿರುದ್ಧ ವರ್ತಿಸಿ ದವರನ್ನು ಹತೋಟೆಗೆ ತಂದ. ಮಾದಕ ಪಾನೀಯಗಳ ಸೇವನೆ, ಜೂಜು ಮುಂತಾದ ಅನೈತಿಕ ವ್ಯವಹಾರಗಳನ್ನು ನಿಷೇಧಿಸಿದ. ಬಲಿಷ್ಠ ಸೈನ್ಯ ಕಟ್ಟಿದ. ಜನರ ಜೀವನ ಸುಗಮವಾಗಿರಲು ಮಾರುಕಟ್ಟೆಯಲ್ಲಿ ನಿಯಂತ್ರಣಗಳನ್ನು ವಿಧಿಸಿ ಧಾನ್ಯಗಳು ಮತ್ತು ಜೀವನಾವಶ್ಯಕ ವಸ್ತುಗಳು ಸುಲಭ ಬೆಲೆಗೆ ದೊರಕುವ ಏರ್ಪಾಡು ಮಾಡಿದ.
- ಸಾಹಿತ್ಯ, ವಾಸ್ತುಶಿಲ್ಪಗಳಲ್ಲಿ ಆಸಕ್ತಿ ಇತ್ತು. ಅಮೀರ್ ಖುಸ್ರು, ಹಸನ್ ಮುಂತಾದ ಕವಿಗಳಿಗೆ ಆಶ್ರಯದಾತನಾಗಿದ್ದ. ಅನೇಕ ಭಗ್ನ ಮಸೀದಿಗಳನ್ನು ಉಜ್ಜೀವನಗೊಳಿಸಿದ. ವರ್ತುಲಾಕಾರದ ಅಲಾಯ್ ಕೋಟೆ (ಷೆರ್‍ಷಾಸಿರಿ) ಕಟ್ಟಿಸಿದ. ಅಧಿಕಾರಕ್ಕೆ ಬಂದ ಕೂಡಲೇ ಪ್ರಜೆಗಳ ಮೇಲಿನ ಕರಭಾರ ತಗ್ಗಿಸಿ ಆಡಳಿತದಲ್ಲಿ ಜನಾನುರಾಗಿ ಸುಧಾರಣೆಗಳನ್ನು ಕೈಗೊಂಡು ನಂಬುಗೆಗೆ ಪಾತ್ರರಾದ ಪ್ರಾಂತ್ಯಾಧಿಕಾರಿಗಳನ್ನು ನೇಮಿಸಿ, ಕಾಲುವೆಗಳನ್ನೂ ಕೆರೆಗಳನ್ನೂ ಕಟ್ಟಿಸುವ ಮೂಲಕ ಬೇಸಾಯಕ್ಕೆ ಪ್ರೋತ್ಸಾಹ ನೀಡಿ ಜನರ ಬಾಳು ಹಸನಾಗುವಂತೆ ಮಾಡಿದ. ಕಪ್ಪಕೊಡದಿದ್ದ ವಾರಂಗಲ್ಲಿನ ಕಾಕತೀಯ ಪ್ರತಾಪರುದ್ರನ ವಿರುದ್ಧ 1322ರಲ್ಲಿ ಹಿರಿಯಮಗ ಔನಾಖಾನನ ನೇತೃತ್ವದಲ್ಲಿ ಸೈನ್ಯ ಕಳುಹಿಸಿದ. ಆದರೆ ಅಂತ ಕಲಹ ಹಾಗೂ ಸೈನ್ಯದಲ್ಲಿ ಹರಡಿದ ಕಾಯಿಲೆ ಇವುಗಳಿಂದ ಸೈನ್ಯ ತತ್ತರಿಸಿ ಹಿಮ್ಮೆಟ್ಟ ಬೇಕಾಯಿತು. ಆದರೆ ಇನ್ನೊಮ್ಮೆ ನಾಲ್ಕು ತಿಂಗಳ ಬಳಿಕ ದಾಳಿ ಮಾಡಿದ ಜೌನಾಖಾನ್ ಕಾಕತೀಯರನ್ನು ಸೋಲಿಸಿ ರಾಜ್ಯವನ್ನು ಸ್ವಾಧೀನ ಮಾಡಿಕೊಂಡ. ವಾರಂಗಲ್ ಈಗ ಸುಲ್ತಾನಪುರ ಎನಿಸಿತು. ಬಂಗಾಲದಲ್ಲಿ ಆಳುತ್ತಿದ್ದ ಸುಲ್ತಾನನ ಮಕ್ಕಳಲ್ಲಿ ಇದೇ ಸಮಯಕ್ಕೆ ಸ್ವರ್ಧೆಗಳೇರ್ಪಟ್ಟುವು. ದೆಹಲಿಯ ಸುಲ್ತಾನ ಈ ಪರಿಸ್ಥಿತಿಯನ್ನು ಬಳಸಿಕೊಂಡು ಬಂಗಾಲದ ವಿರುದ್ಧ ಧಾವಿಸಿದ. ಅಲ್ಲಿಯ ರಾಜಕುಮಾರನನ್ನು ಸೋಲಿಸಿ ನಾಸಿರುದ್ದೀನನನ್ನು ಸಾಮಂತನಾಗಿ ನೇಮಿಸಿ ಹಿಂತಿರುಗಿದ. ಆದರೆ ಹಿಂತಿರುಗುವಾಗ ದೆಹಲಿ ಸಮೀಪದ ಅಫ್‍ಘನ್ ಪುರದಲ್ಲಿ ಪಿತೂರಿಗೆ ಬಲಿಯಾಗಿ ಸತ್ತ (1325). ರಾಜಕುಮಾರ ಔನಾಖಾನ್ ನಿರ್ಮಿಸಿದ ಮರದ ರಚನೆಯೊಂದು ಸುಲ್ತಾನನ ಮೇಲೆ ಕುಸಿಯುವಂತೆ ರೂಪಿಸಲಾಗಿತು ಎಂದು ಇಬನ್ ಬತೂತ ಹೇಳಿದ್ದಾನೆ. ಅದು ಸಿಡಿಲಿನ ಹೊಡೆತಕ್ಕೆ ಕುಸಿಯಿತು ಎಂಬ ಬರ್ನಿಯ ವಾದಕ್ಕೆ ಹೆಚ್ಚಿನ ಆಧಾರಗಳಿಲ್ಲ. ಜೌನಾಖಾನನ ಕುತಂತ್ರವೇ ಸುಲ್ತಾನನ ಸಾವಿಗೆ ಕಾರಣ ಎನ್ನಲಾಗಿದೆ.
- ಮಹಮದ್ (ಷಹ) ತುಘಲಕ್ ಎಂಬ ಹೆಸರಿನಿಂದ ಜೌನಾಖಾನ್ ಅಧಿಕಾರಕ್ಕೆ ಬಂದ (1325). ದೆಹಲಿಯ ಸುಲ್ತಾನರ ಪೈಕಿ ಈತ ಚರ್ಚಾಸ್ಪದ ವ್ಯಕ್ತಿ ಈತನ ಸೋದರಳಿಯ ಬಹಾಉದ್ದೀನ್ ಗುರ್ಷಾಷ್ಟ ಗುಲ್ಬರ್ಗ ಸಮೀಪದ ಸಾಗರದಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ. ದಂಗೆ ಎದ್ದಾಗ ಈತನನ್ನು ದೇವಗಿರಿಯಲ್ಲಿ ಸೋಲಿಸಿ ಅಟ್ಟಿಸಿಕೊಂಡು ಹೋಗಲಾಯಿತು. ಮೊದಲು ಕಂಪಿಲಿಯಲ್ಲಿ, ಅನಂತರ ದೋರಸಮುದ್ರದಲ್ಲಿ ಇವನು ಆಶ್ರಯ ಪಡೆದ. ಕಂಪಿಲಿಯಲ್ಲಿ ಕುಮಾರರಾಮ ಮಹಮ್ಮದನನ್ನು ಎದುರಿಸಿ ತೀವ್ರವಾಗಿ ಹೋರಾಡಿ ವೀರಮರಣ ಅಪ್ಪಿದ ಹೆದರಿದ ಹೊಯ್ಸಳ ಬಲ್ಲಾಳ ದಂಗೆಕೋರರನ್ನು ಸುಲ್ತಾನನಿಗೆ ಒಪ್ಪಿಸಿದ. ಈ ದಂಡಯಾತ್ರೆಯ ಪರಿಣಾಮವಾಗಿ ಹೊಯ್ಸಳರು ಮತ್ತು ಪಾಂಡ್ಯರು ಮಹಮ್ಮದನ ಸಾಮಂತಿಕೆ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಸುಲ್ತಾನ ತೋರಿದ ಕ್ರೌರ್ಯ ಆತನ ಸ್ವಭಾವಕ್ಕೆ ಅನುಗುಣವಾಗಿತ್ತು. ಬೊಕ್ಕಸ ತುಂಬಲು ಗಂಗಾ ಯಮುನಾ ದೋಅಬ್ ಪ್ರದೇಶದಲ್ಲಿ ತೆರಿಗೆಯನ್ನು ಮೂರು ನಾಲ್ಕರಷ್ಟು ಏರಿಸಿ ಪ್ರಜೆಗಳನ್ನು ಹಿಂಸಿಸಿದ. ದಂಗೆಗಳು ಹೆಚ್ಚಿದುವು (1326-27). ಬಹುಶಃ ಈಗ ವಿಸ್ತøತವಾದ ರಾಜ್ಯಕ್ಕೆ ಮಧ್ಯದಲ್ಲಿರುವ ದೇವಗಿರಿ (ದೌಲತಾಬಾದ್) ರಾಜಧಾನಿಯಾಗುವುದು ಹೆಚ್ಚು ಉಪಯುಕ್ತವೆಂದು ಭಾವಿಸಿದುದರಿಂದಲೋ ಏನೋ ರಾಜಧಾನಿಯನ್ನು ಅಲ್ಲಿಗೆ ಬದಲಿಸಿದ. ಆದರೆ ದೆಹಲಿಯ ಎಲ್ಲ ಪ್ರಜೆಗಳೂ ದೇವಗಿರಿ ಹೋಗಬೇಕೆಂದು ನೀಡಿದ ಆಜ್ಞೆ ವಿಲಕ್ಷಣ, ಅರ್ಥಶೂನ್ಯ ಆಗಿದ್ದು ಅದರಿಂದ ಜನ ಬಹಳ ಕಷ್ಟಗಳನ್ನೆದುರಿಸಬೇಕಾಯಿತು. ಅವರ ಸೌಕರ್ಯಕ್ಕೆಂದು ಉತ್ತಮ ರಸ್ತೆಗಳನ್ನು ನಿರ್ಮಿಸಿ ಅಲ್ಲಲ್ಲಿ ಅರವಟ್ಟಿಗೆ, ಅನ್ನ ಶಾಲೆಗಳನ್ನು ಏರ್ಪಡಿಸಿದ್ದರೂ ಪ್ರಜೆಗಳಿಗೆ ಬಹಳ ಹಿಂಸೆಯಾಯಿತು. ಈ ವೈಪರೀತ್ಯದ ಪರಮಾವಧಿ ಎಂದರೆ ಸುಲ್ತಾನ ಮತ್ತೊಮ್ಮೆ ದೆಹಲಿಯನ್ನೇ ರಾಜಧಾನಿಯಾಗಿಸಲು ತೀರ್ಮಾನಿಸಿ ಪ್ರಜೆಗಳು ಹಿಂತಿರುಗಬೇಕೆಂದು ಬಲಾತ್ಕರಿಸಿದುದು. ಇದರಿಂದ ಸಾವಿರಾರು ಜನ ಸಾವಿಗೀಡಾದರು (ಧರ್ಮಶ್ರೀ) ದೆಹಲಿಯ ಮೇಲೆ ದಂಡೆತ್ತಿ ಬಂದಾಗ ಅವನಿಗೆ ಅಪಾರ ಹಣ ನೀಡಿ ಅವನನ್ನು ಹಿಂದೆ ಕಳಿಸಲಾಯಿತೆಂದು ಪ್ರಸಿದ್ಧ ಇತಿಹಾಸಕಾರ ಫೆರಿಸ್ತ ಹೇಳಿದ್ದಾನೆ. 1327-28ರಲ್ಲಿ ಸಿಂಧ್, ಮುಲ್ತಾನ್ ಪ್ರಾಂತ್ಯಗಳನ್ನು ಆಳುತ್ತಿದ್ದ ಖಿಸ್ಲುಖಾನ್ ದಂಗೆ ಎದ್ದ. ಅವನ ಹುಟ್ಟಡಗಿಸಲು ದಕ್ಖನಿನಿಂದ ಅಪಾರ ಸೈನ್ಯದೊಡನೆ ಬಂದ ಮಹಮ್ಮದ್ ಅವನನ್ನು ಸೋಲಿಸಿ, ಕೊಂದು ಅವನ ರುಂಡವನ್ನು ದೆಹಲಿಯ ದ್ವಾರದಲ್ಲಿ ತೂಗು ಹಾಕಿದ. ಪುಣೆ ಸಮೀಪದ ಕೊಂಡಾನೆಯನ್ನು (ಸಿಂಹಘಡ) 7-8 ತಿಂಗಳುಗಳ ಕಾಲ ಮುತ್ತಿ ಅದನ್ನು ವಶಪಡಿಸಿಕೊಂಡ. ರಾಜವೂತರ ರಾಣಾ ಹಮ್ಮೀರ ಮಾತ್ರ ಮೇವಾಡದ ಸುತ್ತಲಿನ ರಜಪೂತರ ಪ್ರದೇಶಗಳ ಮೇಲೆ ಒಡೆತನ ಸಾಧಿಸಿ ಮಹಾರಾಣಾ ಎನಿಸಿಕೂಂಡು. ಅಜಮೀರ್, ರಣಥಂಬೋರ್‍ಗಳು ಆತನ ಅಧೀನಕ್ಕೆ ಬಂದುವು. ಸುಲ್ತಾನ ಬಹುಶಃ ರಾಜಸ್ಥಾನದಲ್ಲಿ ತನ್ನ ಒಡೆತನವನ್ನು ಸಾಧಿಸದೆ ಅವರನ್ನು ತಮ್ಮ ಪಾಡಿಗೆ ಬಿಟ್ಟನೆಂದು ತೋರುತ್ತದೆ. ಚೀನ ಪರ್ಷಿಯಗಳಲ್ಲಿ ಆಗ ಚಲಾವಣೆಯಲ್ಲಿದ್ದ ಕಾಗದದ ಹಣವನ್ನು (ನೋಟು) ಗಮನದಲ್ಲಿರಿಸಿ ಸುಲ್ತಾನ ತನ್ನ ರಾಜ್ಯದಲ್ಲೂ ತಾಮ್ರ ಅಥವಾ ಹಿತ್ತಾಳೆಯ ನಾಣ್ಯಗಳನ್ನು ಬೆಳ್ಳಿಯ ನಾಣ್ಯಗಳಿಗೆ ಸಮಸಮವಾಗಿ ಚಲಾವಣೆಗೆ ತಂದ. ಯುಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದ ಕಾರಣ ಎಲ್ಲೆಲ್ಲೂ ಖೋಟಾ ನಾಣ್ಯಗಳು ಚಲಾವಣೆಗೆ ಬಂದವು. ಇವುಗಳ ಮುಖಬೆಲೆಯಷ್ಟು ಚಿನ್ನ ಬೆಳ್ಳಿಗಳನ್ನು ಸುಲ್ತಾನ ಬೊಕ್ಕಸದಿಂದ ಕೊಡಿಸಿದ. ಇದರಿಂದಾಗಿ ಖಜಾನೆ ಬರಿದಾಗ ಆರ್ಥಿಕಸ್ಥಿತಿ ಹದಗೆಟ್ಟಿತು. ಖುರಾಸಾನ್, ಇರಾಕ್ ದೇಶಗಳನ್ನು ಗೆದ್ದುಕೊಳ್ಳುವ ಯೋಚನೆ ಬಂದಾಗ. ಅದಕ್ಕಾಗಿ ಬರ್ನಿಯ ಹೇಳಿಕೆಯಂತೆ 3,70,000 ಸೈನ್ಯ ಬಲವನ್ನು ಒಟ್ಟುಗೂಡಿಸಿದ. ಆದರೆ ಈ ಆಲೋಚನೆಯನ್ನು ಕೈಬಿಟ್ಟು ಹಿಮಾಲಯ ಪರ್ವತದ ತಪ್ಪಲಿನ ಕರತಿಲವನ್ನು (ಕೂರ್ಮಾಚಲ?) ಗೆದ್ದುಕೊಳ್ಳಲು ಸೈನ್ಯ ಕಳಿಸಿದ. ಮಳೆಗಾಲ ಆರಂಭವಾಗಿ ಸೈನ್ಯದಲ್ಲಿ ಕಾಯಿಲೆ ಹಬ್ಬಿ ಸೈನ್ಯ ಹಿಂತಿರುಗಿತು. ತಪ್ಪಲಿನ ಪೃದೇಶವನ್ನು ಬೇಸಾಯಕ್ಕೆ ಅಳವಡಿಸಲು ಸುಲ್ತಾನನ ಅನುಮತಿ ಅವಶ್ಯವಿದ್ದ ಕಾರಣ ಅಲ್ಲಿಯ ಪ್ರಜೆಗಳು ಸುಲ್ತಾನನ ಸಾರ್ವಭೌಮತ್ವವನ್ನು ಒಪ್ಪಬೇಕಾಯಿತು.
- ಇವೆಲ್ಲದರ ಪರಿಣಾಮವಾಗಿ ರಾಜ್ಯದಲ್ಲೆಲ್ಲ ಕಂಗೆಟ್ಟ ಅಧಿಕಾರಿಗಳು ಪ್ರಜೆಗಳು ದಂಗೆ ಎದ್ದರು. ದಕ್ಷಿಣದ ಮಧುರೆಯ ಸುತ್ತಲಿನ ಮಾಬರ್‍ನ ಕೊತ್ವಾಲನಾದ ಸೈಯ್ಯದ್ ಅಹಸಿನ್ಸಹ ಸ್ವಾತಂತ್ರ ಘೋಷಿಸಿದ. ಅವನ ವಿರುದ್ದ ಕಳುಹಿಸಿದ ಸೈನ್ಯ ಕೂಡ ಅವನನ್ನು ಕೂಡಿಕೊಂಡಿತು (1334-35). ಸ್ವತಃ ಸುಲ್ತಾನನೇ ಆಗ ಸೈನ್ಯಾಚರಣೆ ಕೈಗೊಂಡ. ದೌಲತಾಬಾದಿನಲ್ಲಿ ಅಪಾರ ತೆರಿಗೆಗಳನ್ನು ವಸೂಲು ಮಾಡಿ ಜನರನ್ನು ಬೇರೆ ವಿಧಗಳಲ್ಲೂ ಸುಲಿದ. ವಾರಂಗಲ್ಲಿನಲ್ಲಿದ್ದಾಗ ಕಾಲರಾಬೇನೆ ಬಂದುದರಿಂದ ದೆಹಲಿಗೆ ಹಿಂತಿರುಗಿದ. ಕೃಷ್ಣಾ ತುಂಗಭದ್ರಗಳ ನಡುವಣ ತೆಲಂಗಾಣ ಪ್ರದೇಶದಲ್ಲಿ ಈ ವೇಳೆಗಾಗಲೇ ಮಹಮ್ಮದೀಯರ ದಾಳಿಗಳಿಂದ ಬೇಸತ್ತ ಹಿಂದೂಗಳು ಒಟ್ಟುಗೂಡಿ ಸ್ವತಂತ್ರರಾಗಲು ಹವಣಿಸುತ್ತಿದ್ದರು. ಪಾಕನಾಡಿನ ಮುಸುನೂರಿಗೆ ಸೇರಿದ ಪೋಲಯನಾಯಕ ಚಳವಳಿಯ ನೇತಾರನಾದ. ಈತನ ಸೋದರನ ಮಗ ಕಾಪಯನಾಯಕ, ಹೊಯ್ಸಳ ಮೂರನೆಯ ಬಲ್ಲಾಳ ಮುಂತಾದವರು ಒಟ್ಟುಗೂಡಿ ದಂಗೆ ಎದ್ದರು. ಮಾಬರಿನಲ್ಲಿ ಸುಲ್ತಾನನನ್ನು ಹೊರದೂಡಿ ತೊಂಡೈಮಂಡಲಮ್ ಪ್ರದೇಶವನ್ನು ಶಂಬುವರಾಯ ಮನೆತನದ ವೆನ್ರುಮಾನ್‍ಕೊಂಡಾನ್ ಎಂಬವನ ನಾಯಕತ್ವದಲ್ಲಿ ಇಡಲಾಯಿತು. ಕಂಚೀಪುರ ಇವನ ಅಧಿಕಾರಸ್ಥಾನ. ಕಂಪಿಲಿಯಲ್ಲಿ ನೇಮಕಗೊಂಡಿದ್ದ ಮಲಿಕ್ ಮಹಮದನನ್ನು ಚಾಲುಕ್ಯ ಸೋಮದೇವ ಸೋಲಿಸಿದ. ಪ್ರಜೆಗಳು ದಂಗೆ ಎದ್ದರು. ದೆಹಲಿಯಲ್ಲಿ ಸೆರೆಯಾಗಳುಗಳಾಗಿದ್ದ ಹರಿಹರ ಬುಕ್ಕ ಎಂಬಿಬ್ಬರು ಸೋದರರನ್ನು ಸುಲ್ತಾನ ಕಂಪಿಲಿಗೆ ಅಧಿಕಾರಿಗಳಾಗಿ ನಿಯೋಜಿಸಿ ಕಳುಹಿಸಿದ. ಅವರು ವಿದ್ಯಾರಣ್ಯರ ಪ್ರಭಾವಕ್ಕೊಳಗಾಗಿ ಹರಿಹರ ಬುಕ್ಕ ಎಂಬಿಬ್ಬರು ಸೋದರರನ್ನು ಸುಲ್ತಾನ ಕಂಪಿಲಿಗೆ ಅಧಿಕಾರಿಗಳಾಗಿ ನಿಯೋಚಿಸಿ ಕಳುಹಿಸಿದ. ಅವರು ವಿದ್ಯಾರಣ್ಯರ ಪ್ರಭಾವಕ್ಕೊಳಗಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದರೆಂದು ಹೇಳಿದೆ. ಇದು ಸಂದೇಹಾಸ್ಪದ. 1347ರಲ್ಲಿ ದೇವಗಿರಿಯಲ್ಲೂ ಬಂಡಾಯ ಕಾಣಿಸಿಕೊಂಡಿತು. ಇದರ ಪರಿಣಾಮ ಬಹಮನೀರಾಜ್ಯದ ಉದಯ.
- ಈಜಿಪ್ಟಿನ ಅಬ್ಬಾಸಿದ್ ಖಲೀಫನಿಂದ ಅಧಿಕಾರ ಲಾಂಛನ ಪಡೆದರೆ ಈ ದಂಗೆಗಳು ಅಡಗಬಹುದೆಂಬ ಸುಲ್ತಾನನ ಹಂಚಿಕೆ ಫಲಿಸಲಿಲ್ಲ. ಗುಜರಾತಿನಲ್ಲಿ ದಂಗೆಗಳನ್ನು ಅಡಗಿಸಲು ಹೋಗಿ ದಂಗೆಕೋರ ತಘಿಯನ್ನು ನಾಲ್ಕಾರು ಕದನಗಳಲ್ಲಿ ಗೋಲಿಸಿ ಬೆನ್ನಟ್ಟಿದ. ಆತ ಸಂಧ್ನ ತಟ್ಟಾದಲ್ಲಿ ತಲೆಮರೆಸಿಕೊಂಡ. ಸುಲ್ತಾನ ಅಲ್ಲಿಗೂ ಸೈನ್ಯಸಮೇತ ತೆರಳಿದ. ಆದರೆ ಮಾರ್ಗದಲ್ಲಿಯೇ ಅಸ್ವಸ್ಥತೆಯಿಂದ ತಟ್ಟಾ ಸಮೀಪದಲ್ಲಿ ಅಸುನೀಗಿದ (1351 ಮಾರ್ಚ್ 10). ಹಲವು ವಿರೋಧಾಭಾಸಗಳಿಂದ ಕೂಡಿದ ಇವನದು ಇತಿಹಾಸದಲ್ಲಿ ವರ್ಣಮಯ ವ್ಯಕ್ತಿತ್ವ.
- ಮಹಮ್ಮದ್ ತುಘಲಕನ ಅನಿರೀಕ್ಷಿತ ಮರಣ ರಾಜಧಾನಿಯಲ್ಲಿ ಕೋಲಾಹಲ ಉಂಟುಮಾಡಿತು. ಖ್ವಾಜಾ-ಇ-ಜಹಾನ್ ಬಾಲಕನೊಬ್ಬನನ್ನು ಸುಲ್ಲಾನನ ಮಗನೆಂದು ಪಟ್ಟಕ್ಕೇರಿಸಿದ. ಆದರೆ ಅಂತಿಮವಾಗಿ ಘಿಯಾಸುದ್ದೀನನ ಸೋದರರಜಬನ ಮಗ ಫಿರೋಜ್‍ಷಾ ಸಿಂಹಾಸನವೇರಿದ (1351). ಇವನು ಸಿಂಧ್‍ನಲ್ಲಿ ದಂಗೆ ಅಡಗಿಸಿದ. ಬಂಗಾಲದಲ್ಲಿ ಸ್ವತಂತ್ರನಾಗಿದ್ದ ಹಾಜಿ ಇಲಿಯಾಸ್ ದೆಹಲಿಯ ಮೇಲೆ ದಂಡೆತ್ತಲು ಯತ್ನಿಸಿದ (1353). ಆದರೆ ಫಿರೋಜ್ 70,000 ಸೈನ್ಯ ಬಲದೊಂದಿಗೆ ಬಂಗಾಲವನ್ನು ಮುತ್ತಿದಾಗ, ಇಲಿಯಾಸ್ ಎಗ್ದಾಲ ಕೋಟಿಯಲ್ಲಿ ಅಡಗಿ ಕುಳಿತ. ಮುಸಲ್ಮಾನರ ರಕ್ತಪಾತವನ್ನು ಇಚ್ಛಿಸದ ಫಿರೋಜ್ ಅವನ ಮೇಲೆ ತಕ್ಕ ಕ್ರಮ ಕೈಗೊಳ್ಳದೆ ಹಿಂತಿರುಗಿದ. ಇಲಿಯಾಸ್‍ನ ಉತ್ತರಾಧಿಕಾರಿ ಸಿಕಂದರ್ ಷಹನ ವಿರುದ್ಧ ದಂಡೆತ್ತಿ ಹೋದರೂ (1359) ಎಗ್ದಾಲ ಕೋಟಿಯಲ್ಲಿ ವಶಪಡಿಸಿಕೊಳ್ಳಲಾಗಲಿಲ್ಲ. ಹಿಂತಿರುಗುವಾಗ ಜಾಜ್ ನಗರದ (ಒರಿಸ್ಸ) ವಿರುದ್ಧ ಸಾಗಿದ. ಅಲ್ಲಿಯ ರಾಯ ವಾರ್ಷಿಕವಾಗಿ ಆನೆಗಳನ್ನು ಕಪ್ಪ ಕೊಡಲು ಒಪ್ಪಿದ. 1361-62ರಲ್ಲಿ ನಗರಕೋಟದ ರಾಯ ಶರಣಾದ. ಅಲ್ಲಿಯ ಜ್ವಾಲಾಮುಖಿ ದೇವಸ್ಥಾನದಲ್ಲಿದ್ದ ಸುಮಾರು 300 ಸಂಸ್ಕøತ ಗ್ರಂಥಗಳನ್ನು ಆಸ್ಥಾನ ಕವಿ ಖಾಲಿದ್ಖಾನಿ ಕಾವ್ಯರೂಪದಲ್ಲಿ ಪರ್ಷಿಯನ್ ಭಾಷೆಗೆ ಅನುವಾದಿಸಿದ. ಇದು ದಲಾಯಿಲ್-ಇ-ಫಿರೂಜ್ ಷಾಹಿ ಎಂದು ಹೆಸರಾಗಿದೆ. ಅದೇ ವರ್ಷ ಸಿಂಧ್ ಪ್ರಾಂತ್ಯ ಮುತ್ತಿದ. ಆದರೆ ಸಾಂಕ್ರಾಮಿಕ ರೋಗಕ್ಕೆ ಸೈನ್ಯದ ಬಲುಪಾಲು ತುತ್ತಾಯಿತು. ಹೊಸಬರ ಸೇರ್ಪಡೆಗೆಂದು ಗುಜರಾತಿಗೆ ಬರುವಾಗ ದಾರಿತಪ್ಪಿ ರಣ್ ಆಫ್ ಕಛ್‍ನಲ್ಲಿ ಆರು ತಿಂಗಳು ಬಳಲಿದ. ಅವನ ಮಂತ್ರಿ ಖನ್-ಎ-ಜಹಾನ್ ಮಕ್ಬೂಲ್ ಕಳುಹಿಸಿದ ಸೇನೆ ಸುಲ್ತಾನನನ್ನು ಕೊನೆಗೆ ಹುಡುಕಿ, ಅವನೊಡನೆ ಸಿಂಧ್ ಪ್ರಾಂತ್ಯ ಮುತ್ತಿತು. ಸಿಂಧೀಯರು ಅಪಾರ ಕಪ್ಪ ಕಾಣಿಕೆ ಕೊಡುವಂತೆ ಮಾಡಿತು. ಸಿಂಧ್ ದೊರೆ ಬಾಬನಿ ಶರಣಾದ. ದಕ್ಷಿಣ ರಾಜ್ಯಗಳನ್ನು ಪುನಃ ಗಳಿಸುವ ಪ್ರಯತ್ನ ಮಾತ್ರ ಈತ ಮಾಡಲಿಲ್ಲ.
- ಫಿರೋಜ್ ಧರ್ಮ ದುರಭಿಮಾನಿಯಾಗಿ ಹಿಂದೂಗಳನ್ನು ಪೀಡಿಸಿದ. ಜಹಗೀರು ಪದ್ಧತಿ ಊರ್ಜಿತಗೊಳಿಸಿ ಹೆಚ್ಚಿನ ವೇತನ ಭತ್ಯಗಳನ್ನು ನೀಡುವುದರ ಮೂಲಕ ಸರ್ಕಾರವನ್ನು ಶಿಥಿಲಗೊಳಿಸಿದ. ಧರ್ಮಬಾಹಿರ ಕರಗಳನ್ನು ರದ್ದುಪಡಿಸಿ ಕುರಾನಿನನ್ವಯ ಕರಗಳನ್ನು ಹೇರಿದ. ಉದ್ಯಾನಗಳನ್ನು ರೂಪಿಸಿದ. ಇವನು 1388ರಲ್ಲಿ ಮರಣ ಹೊಂದಿದ. ಇವನ ಜೀವಿತದ ಅವಧಿಯಲ್ಲಿಯೇ ಅಂತಃಕಲಹ ಪ್ರಾರಂಭವಾಯಿತು. ಇವನ ಹಿರಿಯಮಗ ಮಹಮ್ಮದ್‍ಖಾನ್ ಅಸಮರ್ಥ, ಸುಖಲೋಲುಪ. ಅಲ್ಪಾಯುಷಿಯಾಗಿ ಸತ್ತ. ಇನ್ನೊಬ್ಬ ಮಗ ಫತ್‍ಖಾನ್ನ ಮಗ ತುಫಲಕ್‍ಖಾನನನ್ನು ಸಿಂಹಾಸನಕ್ಕೆ ವಾರಸುದಾರನೆಂದು ಫಿರೋಜ್ ನಿಯಮಿಸಿದ.
- ಆದರೆ ಆತನ ಇತರ ಉತ್ತರಾಧಿಕಾರಿಗಳಾದ ಅಬುಬಕರ್ (1389-90), ನಾಸಿರ್-ಉದ್-ದೀನ್ ಮಹಮ್ಮದ್ (1390-94). ಹುಮಾಯೂನ್ (1394), ನಾಸಿರ್-ಉದ್-ದೀನ್ ಮಹಮದ್ ಷಾ (1394-99) ದುರ್ಬಲರಾಗಿದ್ದರು. ಇಂಥ ಸಮಯದಲ್ಲಿ ಇತಿಹಾಸದಲ್ಲಿಯೇ ಅತಿಭಯಂಕರ ಎನಿಸಿದ ಸೇನಾನಿ ತೈಮೂರ್ 1398 ಏಪ್ರಿಲ್‍ನಲ್ಲಿ ಸಿಂಧು, ಝೇಲಮ್, ರಾವಿಗಳನ್ನು ದಾಟಿ ಹಾದಿಯುದ್ದಕ್ಕೂ ಹತ್ಯಾಕಾಂಡಗಳನ್ನು ನಡೆಸಿ, ಸುಲಿಗೆ ಮಾಡಿ ಡಿಸೆಂಬರ್ ಮೊದಲ ವಾರದಲ್ಲಿ ದೆಹಲಿಯ ಹೊರವಲಯ ತಲಪಿ 100.000 ಸೆರೆಯಾಳುಗಳನ್ನು ಕೊಂದು ಜನರನ್ನು ನಡುಗಿಸಿ ಎದುರಿಸಿದ. ಸುಲ್ತಾನ್ ಮಹಮೂದ್ ಮತ್ತು ಮಲ್ಲೂ ಇಕ್ಬಾಲ್‍ರನ್ನು ಸೋಲಿಸಿ ಮರುದಿನ ದೆಹಲಿ ಪ್ರವೇಶಿಸಿ ಹದಿನೈದು ದಿನಗಳು ರಾಜಧಾನಿಯಲ್ಲಿ ಕೊಲೆ ಸುಲಿಗೆಗಳಲ್ಲಿ ನಿರತನಾದ. ಫಿರೋಜಾಬಾದ್ ಮೂಲಕ 1399 ಜನವರಿ ಒಂದರಂದು ಹಿಂತಿರುಗುವಾಗ ಮೀರತ್, ಕಾಂಗ್ರ ಮತ್ತು ಜಮ್ಮುಗಳನ್ನು ಕೊಳ್ಳೆ ಹೊಡೆದ. ಮಾರ್ಚ್ 19ರಂದು ಸಿಂಧು ನದಿ ದಾಟಿ ಹಿಂತಿರುಗಿದ. ಸುಲ್ತಾನ್ ಮಹಮೂದ್ ಪುನಃ ದೆಹಲಿಗೆ ಬಂದು. 1413ರಲ್ಲಿ ಕಾಲವಾದ. ಇಲ್ಲಿಗೆ ತುಘಲಕ್ ವಂಶದ ಆಡಳಿತ ಕೊನೆಗೊಂಡಿತು.
- ಸಯ್ಯದ್ ಮತ್ತು ಲೋದಿಗಳು: ತೈಮೂರನ ಪ್ರತಿನಿಧಿಯಾಗಿ ಮುಲ್ತಾನದ ಪ್ರಾಂತ್ಯಾಧಿಕಾರಿಯಾಗಿದ್ದ ಸಯ್ಯದ್ ವಂಶದ ಕಿಜರ್ಖಾನ್ ದೆಹಲಿಯಲ್ಲಿ ಕುಲೀನರು ರಾಜನಾಗಿ ಆಯ್ಕೆ ಮಾಡಿದ್ದ ದೌಲತ್‍ಖಾನ್ ಲೋದಿಯನ್ನು ಹೊರದೂಡಿ ಸ್ವತಃ ಸುಲ್ತಾನನೆಂದು ಕರೆದುಕೊಂಡು ಏಳು ವರ್ಷಗಳ ಕಾಲ ಆಳಿದ. ಈತನ ಆಳ್ವಿಕೆಯ ಕಾಲದಲ್ಲಿ ದೆಹಲಿ ರಾಜ್ಯ ವಿಸ್ತಾರದಲ್ಲಿ ಬಹಳ ಕುಗ್ಗಿತ್ತು. ಇವನ ಮಗ ಮುಬಾರಕ್ ಷಹನ (1421-34) ಆಳ್ವಿಕೆಯ ಕಾಲ ಸಹ ಘಟನಾಶೂನ್ಯ. ಯಾಹಿಯಾ ಬಿನ್ ಅಹಮದ್ ಸರ್ ಹಿಂದಿಯು ಈತನ ಕಾಲದಲ್ಲಿ ತಾರಿಖ್-ಎ-ಮುಬಾರಕ್ ಷಾಹಿ ಗ್ರಂಥ ರಚಿಸಿದ. 1434ರಲ್ಲಿ ವಜೀರ್‍ನಾದ ಸರ್ವರ್-ಉದ್-ಮುಲ್ಕ್‍ನ ಪಿತೂರಿಗೆ ಬಲಿಯಾದ. ಅನಂತರದ ದೊರೆ ಕಿಜರ್ಖಾನನ ಮೊಮ್ಮೆಗ ಮಹಮ್ಮದ್ ಷಹ ಕೂಡ ಅಸಮರ್ಥ (1434-45). ಮಾಳವದ ಮಹಮ್ಮವ್ ಷಹ ಖಲ್ಜಿ ದೆಹಲಿಗೆ ದಂಡೆತ್ತಿದಾಗ ಸುಲ್ಲಾನನ ನೆರವಿಗೆ ಬಂದ ಲಾಹೋರ್-ಸರ್ ಹಿಂದ್‍ಗಳ ಪ್ರಾಂತ್ಯಾಧಿಕಾರಿ ಬಹಲೂಲ್ ಲೋದಿ ಪ್ರಬಲನಾದ. 1445ರಲ್ಲಿ ಪಟ್ಟಕ್ಕೆ ಬಂದ ಅಲಾ-ಉದ್-ದೀನ್ ಆರಂಷಹ 1451ರಲ್ಲಿ ಲೋದಿಗೆ ಸಿಂಹಾಸನವನ್ನು ಬಿಟ್ಟು ತಾನು ಬದ್ವಾನಿನಲ್ಲಿ ವಾಸಿಸತೊಡಗಿದ.
- ಆಘ್‍ಘನರ ಲೋದಿ ಬುಡಕಟ್ಟಿಗೆ ಸೇರಿದ ಬಹಲೂಲ್ ಕ್ರಿಯಾಶೀಲನೂ ಯುದ್ಧ ಚತುರನೂ ಆಗಿದ್ದ. ಈತ ಮೇವಾಡ, ಸಂಬಲ್, ಕೋಯಿಲ್ ಮೈನ್‍ಪುರಿ, ರೇವಾರಿ, ಎಟಾವಗಳಲ್ಲಿ ಸ್ವತಂತ್ರರಾಗಿದ್ದ ನಾಯಕರು ತನ್ನ ಸಾರ್ವಭೌಮತ್ವ ಒಪ್ಪಿಕೊಳ್ಳುವಂತೆ ಮಾಡಿದ. ಜಾನಪುರವನ್ನು ವಶಪಡಿಸಿಕೊಂಡ ದೊಡ್ಡ ಮಗ ಬಾರ್ಬಕ್ ಷಹನನ್ನು ಪ್ರತಿನಿಧಿಯಾಗಿ ನೇಮಿಸಿದ. ಆದರೆ ಇವನ ಮರಣದ ಬಳಿಕ (1489) ಎರಡನೆಯಮಗ ನಿಜಾಮ್‍ಖಾನ್ ಸಿಕಂದರ್ ಷಹ ಎಂಬ ಬಿರುದಿನೊಂದಿಗೆ ಪಟ್ಟವೇರಿದ. ಇವನ ಆಡಳಿತ ಸುಧಾರಣೆಗೆ ತೊಡಗೆ ಅವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದ. ಬಂಗಾಲದ ಗಡಿಯವರೆಗೂ ಅಧಿಕಾರ ಸ್ಧಾಪಿಸಿದ. ಬಂಗಾಲದ ಅಲಾ-ಉದ್-ದೀನ್ ಹುಸೇನ್ ಷಹನೊಡನೆ ಪರಸ್ಪರ ಆಕ್ರಮಣ ಮಾಡದಂಥ ಒಪ್ಪಂದ ಮಾಡಿಕೊಂಡ. ಬಡಬಗ್ಗರಿಗೆ ಅನುಕಂಪ ತೋರಿದ. ವಿದ್ವಾಂಸರನ್ನು ಗೌರವಿಸಿದ; ನಿಷ್ಪಕ್ಷಪಾತ ನ್ಯಾಯ ತೀರ್ಮಾನಕ್ಕೆ ಹೆಸರಾದ. ಲೋದಿ ಅರಸರಲ್ಲಿ ಈತ ಶ್ರೇಷ್ಠದೊರೆ. ಇವನ ಮರಣದ ಬಳಿಕ (1517) ಮಗ ಇಬ್ರಾಹಿಮ್ ಲೋದಿ ಪಟ್ಟವೇರಿದ. ತಮ್ಮ ಜಲಾಲ್‍ಖಾನ್ ಶ್ರೀಮಂತರ ಒಂದು ತಂಡದ ಬೆಂಬಲದಿಂದ ಇವನನ್ನು ಎದುರಿಸಿದ. ಆದರೆ ಸೋತು ಸತ್ತ. ಇಬ್ರಾಹಿಮ್ ಶ್ರೀಮಂತರ ವಿರೋಧ ಕಟ್ಟಿಕೊಂಡ. ಕೆರಳಿದ ಅವರು ಅಲ್ಲಲ್ಲಿ ದಂಗೆ ಎದ್ದರಲ್ಲದೆ ಚಿಕ್ಕಪ್ಪ ಆಲಂಖಾನ್ ಮತ್ತು ಲಾಹೋರಿನ ದೌಲತ್‍ಖಾನ್ ಬಾಬರನನ್ನು ದೆಹಲಿಗೆ ಆಮಂತ್ರಿಸಿದರು. 1526ರಲ್ಲಿ ಬಾಬರ್ ಮೊದಲನೆಯ ಪಾಣಿಪಟ್ ಕದನದಲ್ಲಿ (ನೋಡಿ- ಪಾಣಿಪಟ್-ಕದನಗಳು) ಇಬ್ರಾಹಿಮ್‍ನನ್ನು ಕೊಂದು ಮೊಗಲ್ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ.
- ಬಂಗಾಲ: ಘಿಯಾಸುದ್-ದೀನ್ ತುಘಲಕ್ ಬಂಗಾಲದ ಬಹದ್ದೂರ್ ಷಹನನ್ನು ಸೋಲಿಸಿ ಲಕ್ನೋತಿ, ಶತಗಾಂವ್ ಮತ್ತು ಸೋನಾರ್ಗಾಂವ್ಗಳೆಂಬ ಮೂರು ಆಡಳಿತ ವಿಭಾಗಗಳನ್ನು ನಿರ್ಮಿಸಿದ. ಆದರೆ ಮಹಮ್ಮದ್ ತುಘಲಕನ ಆಡಳಿತದಲ್ಲಿ ಬಹುದ್ದೂರ್ ಷಹ ದಂಗೆ ಎದ್ದು ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಅಚ್ಚು ಹಾಕಿಸಿದ. ಆದರೆ ಮತ್ತೆ ಪರಾಜಿತನಾದ. ಅಲಾ-ಉದ್-ದೀನ್ ಆಲಿಷಾ (1339-45) ಉತ್ತರಬಂಗಾಲದ ರಾಜಧಾನಿಯನ್ನು ಲಕ್ನೋತಿಯಿಂದ ಪಾಂಡುವಾಕ್ಕೆ ಸ್ಧಳಾಂತರಿಸಿದ. ಷಂಸ-ಉದ್-ದಿನ್ ಇಲಿಯಾಸ್ ಷಹ (1345-58) ಬಂಗಾಲವನ್ನು ಪುನಃ ಒಂದುಗೂಡಿಸಿ, ಒರಿಸ್ಸ, ತಿರ್ಹತ್‍ಗಳಿಂದ ಕಪ್ಪಕಾಣಿಕೆ ಪಡೆದು, ನೇಪಾಲದ ಮೇಲೆ ಯುದ್ಧಸಾರಿ ಕಾಠ್ಮಂಡುವಿನಿಂದ ಸಂಪತ್ತನ್ನು ಸೂರೆಗೊಂಡ. ಫಿರೊಜ್ ತುಘಲಕ್ ಇವನ ಮೇಲೆ ಯುದ್ಧ ಸಾರಿದರೂ ಪ್ರಯೋಜನ ಪಡೆಯಲಿಲ್ಲ. ಇವನ ಉತ್ತರಾಧಿಕಾರಿ ಸಿಕಂದರ್‍ಷಹ (1358-93) ವೈಭವಯುತ ಆಳ್ವಿಕೆ ನಡೆಸಿದ. ಘಿಯಾಸ್-ಉದ್-ದೀನ್ ಆಜಮ್ (1393-1410) ಸುಶಕ್ಷಿತ ಸಮರ್ಥ ಸುಲ್ತಾನ. ಕವಿ ಹಾಫಿಜನ ಬಾತ್ಮೀದಾರನಾಗಿದ್ದ. ಚೀನದೊಡನೆ ಸಾಂಸ್ಕøತಿಕ ಸಂಬಂಧ ಬೆಳೆಸಿದ. ತನ್ನ ರಾಯಭಾರಿಗಳನ್ನು ಮಿಂಗ್ ಸಂತತಿಯ ಯುಂಗ್ಲೋನ ಆಸ್ಥಾನಕ್ಕೆ ಕಳುಹಿಸಿದ. 1411ರಲ್ಲಿ ಸಹಿಪುದ್-ದೀನ್-ಹಂಜಾಷಹ ಪಟ್ಟವೇರಿದ. ಉತ್ತರ ಬಂಗಾಲದ ಜಮೀನ್ದಾರ ರಾಜಾಗಣೇಶ ಹಂಜಾಷಹ ಪಟ್ಟವೇರಿದ. ಉತ್ತರ ಬಂಗಾಲದ ಜಮೀನ್ದಾರ ರಾಜಾಗಣೇಶ ಹಂಜಾಷಹ ಆಸ್ಥಾನದಲ್ಲಿದ್ದು ಆ ವೇಳೆಗೆ ಆ ಸಂತತಿಯ ಪ್ರಾಬಲ್ಯ ಇಳಿಮುಖವಾದುದನ್ನು ಅರಿತು ಅದರ ಪ್ರಯೋಜನ ಪಡೆದು ತಾನೇ ರಾಜನಾದ (1415). ಗಣೇಶನ ವಿರೋಧಿ ನೂರ್ ಕುತುಬ್ ಆಲಮ್ ಜೌನ್‍ಪುರದ ಅರಸ ಇಬ್ರಾಹಿಮ್ ಷರ್ಕಿಯ ನೆರವು ಯಾಚಿಸಿದ. ಮಿಥಿಲೆಯ ರಾಜ ಶಿವಸಿಂಹ ಷರ್ಕಿಯ ಸೈನ್ಯ ತಡೆದು ವಿಫಲನಾದ. ಯುದ್ಧದಲ್ಲಿ ಗಣೇಶನೂ ಸೋತ. ಇವನ ಮಗ ಜಯಸೇನ ಮುಸಲ್ಮಾನನಾಗಿ ಜಲಾಲುದ್ದೀನ್ ಎಂಬ ನಾಮಧೇಯದಿಂದ ಆಳಿದ (1415-31). ಈ ಮಧ್ಯ ರಾಜಾಗಣೇಶ ಇಬ್ರಾಹಿಮ್ ಹಿಂತಿರುಗಿದ ಕೂಡಲೇ ಮತ್ತೆ ಬಂಗಾಲದಲ್ಲಿ ಆಳತೊಡಗಿದ. ಮಗನನ್ನು ಪುನಃ ಹಿಂದೂಧರ್ಮಕ್ಕೆ ಮತಾಂತರಗೊಳಿಸುವ ಇವನ ಯತ್ನವನ್ನು ಸಮಾಜ ಒಪ್ಪಲಿಲ್ಲ. 1459ರಲ್ಲಿ ಪಟ್ಟಕ್ಕೆ ಬಂದ ರುಕ್ನುದ್ದೀನ್ ಬಾರ್ಬಕ್ ಷಹ ಹೆಚ್ಚಿನ ಸಂಖ್ಯೆಯಲ್ಲಿ ಗುಲಾಮರಿಗೆ ಪದವಿಗಳನ್ನು ನೀಡಿದ. 1474ರಲ್ಲಿ ಇವನ ಮಗ ಷಂಸುದ್ದೀನ್ ಯೂಸುಫ್‍ಷಹ ತಂದೆಯ ನೀತಿಯನ್ನೇ ಮುಂದುವರಿಸಿದ. ಅನಂತರ ಕುಲೀನರಿಂದ ಅಧಿಕಾರಕ್ಕೆ ತರಲ್ಪಟ್ಟ ಜಲಾಲುದ್ದೀನ್ ಫತಷಹ ಅಬಿಸೀನಿಯದ ಗುಲಾಮರ ಪ್ರಾಬಲ್ಯ ತಗ್ಗಿಸಲು ಯತ್ನಿಸಿ ಅಸುನೀಗಿದ. 1493ರಲ್ಲಿ ಮತ್ತೊಮ್ಮೆ ಶ್ರೀಮಂತರಿಂದ ಆಯ್ಕೆಗೊಳ್ಳಲ್ಪಟ್ಟ ಅಲಾಉದ್ದೀನ ಹುಸೇನ್ ಷಹ ಹೊಸ ಸಂತತಿಯೊಂದರ ಮೂಲಪುರುಷನಾಗಿ ತನ್ನ ರಾಜಧಾನಿಯನ್ನು ಎಕ್ದಲಕ್ಕೆ ವರ್ಗಾಯಿಸಿದ. ಸಂತ ಚೈತನ್ಯನ ಸಮಕಾಲೀನನಾಗಿದ್ದ ಈತ ಒಬ್ಬ ಜ್ಞಾನಿ. ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿಗೆ ತಂದ. ಈತನ ಮಗ ನಸರತ್‍ಷಹ ತಿರ್ಹತ್‍ನ ಕಂಸನಾರಾಯಣನನ್ನು ಕೊಂದು ಅಲ್ಲಿ ತನ್ನ ಸಂಬಂಧಿಕರನ್ನು ಅಧಿಕಾರಿಗಳಾಗಿ ನೇಮಿಸಿದ. ಬಾಬರನ ವಿರುದ್ಧ ಗೋಗ್ರಾದ ಬಳಿ ಕದನ ಹೂಡಿ ಸೋತ. ಗೌರ್‍ನಲ್ಲಿ ಬಡಾಸೋನಾ ಮಸೀದಿಯನ್ನೂ ಖದಂರಸೂಲ್‍ಗಳನ್ನೂ (ಪ್ರವಾದಿಯ ಪಾದ) ನಿರ್ಮಿಸಿದ ಈತ ಮಹಾಭಾರತವನ್ನು ಬಂಗಾಲಿ ಭಾಷೆಯಲ್ಲಿ ಬರೆಸಿದ. ಕೊನೆಯಷಹ ಘಿಯಾಸುದ್ದೀನನ್ನು ಷೇರ್‍ಖಾನ್‍ಸೂರ್ ಹೊರದೂಡಿದ.
- ಜೌನಪುರ: ಮಹಮದ್ ತುಘಲಕನ ನೆನಪಿಗೆ ಫಿರೋಜ್ ತುಘಲಕ್ ಕಟ್ಟಿಸಿದ ಈ ಪಟ್ಟಣ ತೈಮೂರನ ದಾಳಿಯ ಅನಂತರ ಖ್ವಾಜಾಜಹಾನನ ಸ್ವತಂತ್ರ ಆಡಳಿತಕ್ಕೆ ಒಳಪಟ್ಟಿತು. ಇವನ ದತ್ತುಮಗ ಖ್ವಾಜಾಜಹಾನನ ಸ್ವತಂತ್ರ ಆಡಳಿತಕ್ಕೆ ಒಳಪಟ್ಟಿತು. ಇವನ ದತ್ತುಮಗ ಮುಬಾರಕ್‍ಷಹ (1309-1402), ಇಬ್ರಾಹಿಮ್ ಷಹ (1402-36) ಅನಂತರ ಕ್ರಮವಾಗಿ ಆಳಿದರು. ಇಬ್ರಾಹಿಮ್ ಸಮರ್ಥ ದೊರೆ. ವಿದ್ಯೆ ಮತ್ತು ವಾಸ್ತುಶಿಲ್ಪಗಳಿಗೆ ಪ್ರೋತ್ಸಾಹ ನೀಡಿದ. ಜೌನಪುರ ಶಿಕ್ಷಣ ಕೇಂದ್ರವಾಯಿತು. ಪ್ರಸಿದ್ಧ ರತಾಲ ಮಸೀದಿಯನ್ನು ಕಟ್ಟಿಸಿದ (1408). ಇವನ ಮೊಮ್ಮಗ ಭೀಖನ್ ಮಹಮದ್ ಷಹ (1457-58) ಮತ್ತು ಹುಸೇನ್ ಷಹ ಅನಂತರ ಪಟ್ಟಕ್ಕೆ ಬಂದರು. ಇಬ್ಬರೂ ಬಹಲೂಲ್ ಲೋದಿಯೊಡನೆ ಕಾದಾಡಿದರು. ಅಂತಿಮವಾಗಿ ಬಹಲೂಲ್ ಈ ಪ್ರಾಂತ್ಯವನ್ನು ದೆಹಲಿಗೆ ಸೇರಿಸಿಕೊಂಡ.
- ಮಾಳವ: ಅಲಾಉದೀನ್ ಖಲ್ಜಿ ಈ ಪ್ರಾಂತ್ಯವನ್ನು ಗೆದ್ದುಕೊಂಡ ಬಳಿಕ (1305) ಒಂದು ಶತಮಾನ ಕಾಲ ದೆಹಲಿಯ ಸುಲ್ತಾನರ ಅಧೀನದಲ್ಲಿತ್ತು. 1401ರಲ್ಲಿ ಪ್ರಾಂತ್ಯಾಧಿಕಾರಿಯಾದ ದಿಲಾವರ್ ಖಾನ್ ಬಲುಮಟ್ಟಿಗೆ ಸ್ವತಂತ್ರನಾಗಿದ್ದ. ಈತನ ಮಗ ಆಲ್ಛಾಖಾನ್, ಹೂಷಾಂಗಷಹ ಎಂಬ ಬಿರುದಿನಿಂದ ಪಟ್ಟವೇರಿ ಒರಿಸ್ಸದ ಮೇಲೆ ದಾಳಿಮಾಡಿ 75 ಆನೆಗಳನ್ನು ಪಡೆದು ಹಿಂತಿರುಗಿದ. ಬಹಮನೀ ರಾಜ್ಯಕ್ಕೆ ಸೇರಿದ್ದ ಕೇರ್ಲಾವನ್ನು ಆಕ್ರಮಿಸಿದುದರ ಪರಿಣಾಮವಾಗಿ ಅಹಮದ್ ಷಹ ಬಹಮನಿಯೊಡನೆ ಹೋರಾಡಿ ಸೋತ. ಗುಜರಾತ್, ದೆಹಲಿ, ಜೌನಪುರಗಳ ಸುಲ್ತಾನರೊಡನೆಯೂ ಕಾದಿದ. ಇವನು ಮರಣ ಹೊಂದಿದಾಗ (1435) ಮಗ ಘಜ್ನೀಖಾನನ್ನು ಮಹಮದ್‍ಷಹ ಎಂಬ ಬಿರುದಿನಿಂದ ಪಟ್ಟಕ್ಕೇರಿಸಲಾಯಿತು. ಆದರೆ ಆತ ಅಸಮರ್ಥ, ಮಂತ್ರಿಯಾದ ಮಹ್ಮೂದ್‍ಖಿಲ್ಜಿ ಮಹಮದ್ ಷಹನನ್ನು ಹೊರದೂಡಿ ಹೊಸ ಸಂತತಿಯನ್ನು ಆರಂಭಿಸಿದ (1436).
- ದೆಹಲಿಯ ಸುಲ್ತಾನ ಮಹಮದ್ ಷಹ, ಗುಜರಾತಿನ ಮೊದಲನೆಯ ಅಹಮದ್ ಷಹ, ಬಹಮನಿಯ ಮೂರನೆಯ ಮಹಮದ್ ಷಹರೊಡನೆ ಕಾದಿದ. ಖಲ್ಜಿ ಚಿತೋರಿನ ರಾಣಾಕುಂಭನನ್ನು ಸೋಲಿಸಿದುದಾಗಿ ಹೇಳಿಕೊಂಡಿದ್ದಾನೆ. ಈತನ ಮಗ ನಿಷ್ಠಾವಂತ ಮಹಮದೀಯ. ಇವನ ಇಬ್ಬರು ಮಕ್ಕಳು ಉತ್ತರಾಧಿಕಾರತ್ವಕ್ಕಾಗಿ ಕಚ್ಚಾಡಿದರು. ಹಿರಿಯ ಅಬ್ದುಲ್‍ಖಾದಿರ್ ಅಂತಿಮವಾಗಿ ಪಟ್ಟಕ್ಕೆ ಬಂದ (1500). ಈತನ ಮಗ ಮಹ್ಮೂದ್ (1510) ಚಂದೇರಿಯ ಮೇದಿನಿರಾಯನೆಂಬ ರಜಪೂತನನ್ನು ಮಂತ್ರಿಯಾಗಿ ನೇಮಿಸಿಕೊಂಡ. ಶ್ರೀಮಂತರ ಈಷ್ರ್ಯೆ ಮತ್ತು ಗುಜರಾತ್ ಸುಲ್ತಾನನ ನೆರವು ಇವನ ಪದಚ್ಯುತಿಗೆ ಹಾದಿ ಮಾಡಿದವು. ರಾಣಾ ಸಂಗ ಮೇದಿನಿರಾಯನಿಗೆ ಬೆಂಬಲವಿತ್ತು ಮಾಳವದ ಸುಲ್ತಾನನ್ನು ಸೋಲಿಸಿದ. ಇದರಿಂದ ಮೇವಾಡ-ಮಾಳವಗಳ ನಡುವೆ ಕಲಹ ಆರಂಭವಾಯಿತು. ಈ ಅವ್ಯವಸ್ಥೆಯ ನಡುವೆ ಗುಜರಾತಿನ ಬಹದೂರ್‍ಷಹ ಮಾಳವದ ಮೇಲೆ ದಂಡೆತ್ತಿ ಮಾಂಡುವನ್ನು ವಶಪಡಿಸಿಕೊಂಡ (1531). ಷೇರ್‍ಷಹ ತನ್ನ ಅಧೀನಕ್ಕೆ ತಂದುಕೊಂಡ ಬಳಿಕ (1542) ಮಾಳವವು ಮೊಗಲರ ಕೈಸೇರಿತು (1561-62). ವ್ಯಾಪಾರಕೇಂದ್ರವಾಗಿ ಸಂಪತ್ಸಮೈದ್ದಿಗಳಿಗೆ ಹೆಸರಾಗಿದ್ದ ಗುಜರಾತನ್ನು 1297ರಲ್ಲಿ 1297ರಲ್ಲಿ ಅಲಾಉದ್ದೀನ್ ವಶಪಡಿಸಿಕೊಂಡ ಮೇಲೆ 1391ರಲ್ಲಿ ಜಫರ್‍ಖಾನ್ ಸ್ವತಂತ್ರವಾಗುವ ತನಕವೂ ಈ ರಾಜ್ಯ ದೆಹಲಿಯ ವಶದಲ್ಲಿತ್ತು. ತಾತಾರ್ಖಾನ್ ತಂದೆಯ ವಿರುದ್ಧ ಬಂಡೆದ್ದು (1403) ಸಿಂಹಾಸನ ಆಕ್ರಮಿಸಿ ಚಿಕ್ಕಪ್ಪ ಷಂಸ್‍ಖಾನ್ನಿಂದ ಕೊಲ್ಲಲ್ಪಟ್ಟ ಜಫರ್‍ಖಾನ್ ಪುನಃ ಸಿಂಹಾಸನಕ್ಕೆ ಬಂದ. 1411ರಲ್ಲಿ ಅವನ ಮೊಮ್ಮಗ ಅಹಮದ್ ಷಹ ಪಟ್ಟವೇರಿ ಸ್ವತಂತ್ರರಾಜ್ಯ ಸ್ಥಾಪಕನೆಂದು ಹೆಸರಾದ. ಮಾಳ್ವ ರಾಜಪುತಾನಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದ. ಪೌರಾಡಳಿತದ ಕಡೆ ಗಮನ ನೀಡಿದ. ಅಹಮದಾಬಾದ್ ನಗರವನ್ನು ನಿರ್ಮಿಸಿ ಸುಂದರಗೊಳಿಸಿದ. ಅದು ರಾಜಧಾನಿಯಾಯಿತು. ಇವನ ಮಗ ಮಹಮದ್ ಷಹನ (1442-51) ಬಳಿಕ ಸೋದರರಾದ ಕುತ್ಬುದೀನ್ ಅಹಮದ್ ಮತ್ತು ದಾವೂದರು ಪಟ್ಟವೇರಿದರು. ಅವರ ಕಲಹಗಳ ಪರಿಣಾಮವಾಗಿ ಅನಿಶ್ಚಿತ ಪರಿಸ್ಥಿತಿಗಳುಂಟಾದುವು. ಇವರಲ್ಲಿ ಮಹಮದ್ ಬೇಗ್ರಾ ಅತ್ಯಂತ ಶ್ರೇಷ್ಠ ದೊರೆ. ವೀರಯೋಧನಾಗಿ ಸುತ್ತಲಿನವರೆಲ್ಲರೊಡನೆ ಕಾದು ರಾಜ್ಯವನ್ನು ಬಲುಮಟ್ಟಿಗೆ ವಿಸ್ತರಿಸಿದ. ಈ ವೇಳೆಗೆ ಪೋರ್ಚುಗೀಸರು ತೀರಪ್ರದೇಶಗಳಲ್ಲಿ ಪ್ರಭಾವಶಾಲಿಗಳಾಗಿದ್ದರು. ಮುಜಾಫರನ ಮಗ ಬಹದೂರ್ (1526) ಮಾಳವ ಮೇವಾಡಗಳ ವಿರುದ್ಧ ದಂಡೆತ್ತಿದ. ಅದರ ಅಂತಿಮವಾಗಿ ತನ್ನ ರಾಜ್ಯವನ್ನೇ ಕಳೆದುಕೊಂಡ. ಪೋರ್ಚುಗೀಸರು ಇವನನ್ನು ಮೋಸದಿಂದ ಕೊಂದ ಬಳಿಕ ಅರಾಜಕತೆ ಅನಾಯಕತ್ವಗಳಿಂದ ಗುಜರಾತ್ ಸ್ವತಂತ್ರ ಅಸ್ತಿತ್ವ ಕಳೆದುಕೊಂಡಿತು.
- ಕಾಶ್ಮೀರ: ಕಾಶ್ಮೀರದ ಹಿಂದೂರಾಜನ ಸೇವೆಗೆ ಷಾ ಮಿರ್ಜಾ ಸೇರಿ (1315), 1339ರಲ್ಲಿ ಷಂಸ್-ಉದ್-ದೀನ್‍ಸ ಷಾ ಎಂಬ ಬಿರುದಿನಿಂದ ಸಿಂಹಾಸನ ಆಕ್ರಮಿಸಿದ. ಇವನ ಮೂರು ಮಕ್ಕಳು 64 ವರ್ಷ ರಾಜ್ಯವಾಳಿದರು. ಅನಂತರ ಸಿಕಂದರ್ (1394-1416) ಪಟ್ಟಕ್ಕೆ ಬಂದ. ಇವನ ಮಗ ಅಲಿಷಾ ಜೈನುಉಲ್ ಅಬಿದೀನ್ (1420-70) ಎಂಬ ಬಿರುದಿನಿಂದ ಪಟ್ಟಕ್ಕೆ ಬಂದು ಜನಪ್ರಿಯ ರಾಜನಾದ. ಇವನನ್ನು ಕಾಶ್ಮೀರದ ಅಕ್ಬರ್ ಎಂದು ಕರೆಯಲಾಗಿದೆ. ಇವನ ಅನಂತರ ಅರಾಜಕತೆ ಹಬ್ಬಿತು. ಹುಮಾಯೂನನ ಸಂಬಂಧಿ ಮಿರ್ಜಾ ಹೈದರ್ ಕಾಶ್ಮೀರವನ್ನು ಆಕ್ರಮಿಸಿದ (1540).
- ಖಾನ್‍ದೇಶ: ತಪತಿನದಿ ಕೊಳ್ಳದಲ್ಲಿದ್ದ ಇದು ಮಹಮದ್ ತುಘುಲಕನ ಆಳ್ವಿಕೆಗೆ ಒಳಪಟ್ಟಿತ್ತು. ಫಿರೋಜ್ ನೇಮಿಸಿದ ಮಲಿಕ್‍ರಾಜಾ ಫರೂಕ್ ಸ್ವತಂತ್ರನಾದ. ಹಿಂದು ಮುಸ್ಲಿಮರನ್ನು ಏಕತಾಭಾವದಿಂದ ನೋಡಿದ. ಇವನ ಅನಂತರ ಮಲಿಕ್ ನಸೀರ್ (1399-1438), ಮೊದಲನೆಯ ಆದಿಲ್‍ಖಾನ್ (1438-41), ಮೊದಲನೆಯ ಮುಬಾರಕ್‍ಖಾನ್ (1441-57), ಎರಡನೆಯ ಆದಿಲ್‍ಖಾನ್ (1457-1501) ಇವರು ಪಟ್ಟಕ್ಕೆ ಬಂದರು. ಎರಡನೆಯ ಆದಿಲ್‍ಖಾನ್ ಗೊಂಡ್ವಾನದವರೆಗೂ ರಾಜ್ಯ ವಿಸ್ತರಿಸಿದ. ಅನಂತರ ಇವನ ಸಹೋದರ ದಾವೂದ್ (1501-04) ಘಜ್ನಿಖಾನ್ (1508) ಪಟ್ಟಕ್ಕೆ ಬಂದರು. ಅನಂತರ ಗುಜರಾತ್ ಮತ್ತು ಅಹಮದ್ ನಗರಗಳ ಬೆಂಬಲಗಳಿಂದ ಹೋರಾಡುವ ಎರಡು ಗುಂಪುಗಳು ಅಧಿಕಾರಕ್ಕೆ ಕಚ್ಚಾಡತೊಡಗಿದುವು. 1601ರಲ್ಲಿ ಖಾನ್‍ದೇಶ ಮೊಗಲರ ವಶವಾಯಿತು.
- ಒರಿಸ್ಸ: ಗಂಗಾ ನದಿಯ ಮುಖಜಭೂಮಿಯಿಂದ ಗೋದಾವರಿ ಮುಖಜದವರೆಗಿನ ಈ ರಾಜ್ಯವನ್ನು ಅನಂತವರ್ಮ ಚೋಡಗಂಗ (1076-1148) ಆಳಿದ. ಇವನ ಶಾಂತಿಪಾಲಕ ಮತ್ತು ಸಾಹಿತ್ಯಪೋಷಕ. ಇವನ ಉತ್ತರಾಧಿಕಾರಿಗಳಲ್ಲಿ ಮೊದಲನೆಯ ನರಸಿಂಹ (1238-64) ಸಮರ್ಥ ದೊರೆ. ಇವನ ಕೋಣಾರ್ಕದ ಸೂರ್ಯದೇವಾಲಯ ನಿರ್ಮಿಸಿದ. ಅನಂತರ ಆಳಿದ ಸೂರ್ಯವಂಶದ ಕಪಿಲೇಂದ್ರ (1434-70) ಇನ್ನೊಬ್ಬ ಶ್ರೇಷ್ಠ ದೊರೆ. ಉದಯಗಿರಿ ಮತ್ತು ಕಂಚೀಪುರಗಳನ್ನು ವಶಪಡಿಸಿಕೊಂಡ. ಪುರುಷೋತ್ತಮನ (1470-97) ಕಾಲದಲ್ಲಿ ರಾಜ್ಯದ ಅನೇಕ ಭಾಗಗಳನ್ನು ವಿಜಯನಗರ ಮತ್ತು ಬಹಮನಿಗಳು ವಶಪಡಿಸಿಕೊಂಡವು. ಚೈತನ್ಯನ ಸಮಕಾಲೀನ ಪ್ರತಾಪರುದ್ರ (1497-1540) ವಿಜಯನಗರದ ಕೃಷ್ಣ ದೇವರಾಯನಿಂದ ಸೋಲಿಸಲ್ಪಟ್ಟ.
- ಮೇವಾಡ: ಮೂವತ್ತೆರಡು ದುರ್ಗಗಳನ್ನು ಕಟ್ಟಿಸಿದ ರಾಣಾಕುಂಭವಿದ್ವಾಂಸನೂ ಸಂಗೀತಜ್ಞನೂ ಆಗಿದ್ದ. 1469ರಲ್ಲಿ ಇವನ ಮಗನೇ ಇವನನ್ನು ಕೊಂದ. ಮೇವಾಡದ ಸಿಂಹಾಸನವೇರಿದ ರಾಣಾಸಂಗ (1509) ನೂರು ಸಂಗ್ರಾಮಗಳಲ್ಲಿ ಕಾದಾಡಿದ ದೊರೆ.
- (ಜಿ.ಬಿ.ಆರ್.; ಎಲ್.ಜಿ.ಬಿ.)
- ದಕ್ಷಿಣ ಭಾರತ: 11ನೆಯ ಶತಮಾನದ ಆರಂಭದಿಂದ ದಕ್ಷಿಣಭಾರತದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾದುವು. ಕ್ರಿ.ಶ. 976ರಲ್ಲಿ ಚಾಲುಕ್ಯವಂಶದ ತೈಲಪ ರಾಷ್ಟ್ರಕೂಟ ರಾಜ್ಯದ ಉತ್ತರಾಧಿಕಾರಿಯಾಗಿ ಹಿಂದೊಮ್ಮೆ ತನ್ನ ವಂಶಸ್ಥರಿಗೆ ಸೇರಿದ್ದ ರಾಜ್ಯವನ್ನು ಪುನ: ಪ್ರತಿಷ್ಠಾಪಿಸಿದ ಕೀರ್ತಿಗೆ ಪಾತ್ರನಾದ. ತಮಿಳುನಾಡಿನಲ್ಲಿ ರಾಜ ರಾಜನೆಂಬ ಹೆಸರಿನಿಂದ ಅರುಮೊಳಿವರ್ಮ ಪಟ್ಟಕ್ಕೆ ಬಂದಾಗ (985) ಚೋಳರು ಮತ್ತೊಮ್ಮೆ ಪ್ರಬಲರಾದರು. ವೆಂಗಿಯಲ್ಲಿ ಪೂರ್ವ ಚಾಲುಕ್ಯರು ಆಳುತ್ತಿದ್ದರೂ ಆ ಪ್ರದೇಶ ಬಹಳ ಫಲವತ್ತಾದುದಾಗಿದ್ದು ಅದರ ಆಕ್ರಮಣಕ್ಕಾಗಿ ಚೋಳರೂ ಕಲ್ಯಾಣದ ಚಾಲುಕ್ಯರೂ ನಿರಂತರವಾಗಿ ಶ್ರಮಿಸಿದರು. ವಿಶೇಷವಾಗಿ ಚೋಳರು ತುಂಗಭದ್ರೆ ಹಾಗೂ ಕೃಷ್ಣಾ ನದಿಯ ಪ್ರದೇಶಗಳನ್ನಾಕ್ರಮಿಸಲು ಒಂದು ಕಡೆ ಪೂರ್ವ ಚಾಲುಕ್ಯರೊಡನೆ ಸತತವಾಗಿ ಕದನ ಹೂಡಿದರು. ಇದು ಸುಮಾರು ಒಂದು ಶತಮಾನ ಕಾಲ ನಡೆಯಿತು.
- ಕಲ್ಯಾಣದ ಚಾಲುಕ್ಯರು: ಚಾಲುಕ್ಯ ಇಮ್ಮಡಿತೈಲಪ ರಾಷ್ಟ್ರಕೂಟರನ್ನು ಸೋಲಿಸಿ ಮಾನ್ಯಖೇಟವನ್ನು ವಶಪಡಿಸಿಕೊಂಡ ನಂತರ ಗಂಗರ ಮಾರಸಿಂಹ. ಪಾಂಚಾಲದೇವ ಗೋವಿಂದ ಮುಂತಾದ ವಿರೋಧಿಗಳನ್ನೆದುರಿಸಬೇಕಾಯಿತು. ಅನಂತರ ಮಾಳವದ ಪರಮಾರ ವಂಶದ ಮುಂಜ ಈತನ ಮೇಲೆ ಧಾಳಿಮಾಡಿ 16 ಬಾರಿ ಈತನನ್ನು ಸೋಲಿಸಿದನೆಂದು ಮೇರುತುಂಗ ತನ್ನ ಪ್ರಬಂಧ ಚಿಂತಾಮಣಿಯಲ್ಲಿ ಹೇಳಿದ್ದಾನೆ. ಆದರೆ ಅಂತಿಮವಾಗಿ ಗೆದ್ದವ ತೈಲಪನೇ. ಮುಂಜ ಸೋತು ಸೆರೆಸಿಕ್ಕು ಅಸುನೀಗಿದ. ತೈಲಪ ಆರಂಭಿಸಿದ ಚೋಳರ ವಿರುದ್ಧದ ಕದನಗಳನ್ನು ಅವನ ಮಗ ಇರಿವಬೆಡಂಗ ಸತ್ಯಾಶ್ರಯ ಮುಂದುವರಿಸಿದ. ರಾಜರಾಜ, ರಾಜೇಂದ್ರಜೋಳರು ನೊಳಂಬವಾಡಿ ಪ್ರಾಂತ್ಯ ಮತ್ತು ಪ್ರಾಬಲ್ಯ ಉಳಿಸಿಕೊಂಡರು. ಸತ್ಯಾಶ್ರಯ ಕೊಂಕಣದ ಶಿಲಾಹಾರ ಮನೆತನದ ಅಪರಾದಿತ್ಯನನ್ನು ಗುಜರಾತಿನ ಚಾಳುಕ್ಯ ಮೂಲರಾಜನನ್ನೂ ಸೋಲಿಸಿದ. ಕವಿ ರನ್ನನಿಗೆ ಆಶ್ರಯ ನೀಡಿದ. 1016ರಲ್ಲಿ ಪಟ್ಟಕ್ಕೆ ಬಂದ ಜಯಸಿಂಹ ಸತ್ಯಾಶ್ರಯನ ಸೋದರ ದಶವರ್ಮನ ಕಿರಿಯಮಗ. ಈತನ ಪತ್ನಿ ಸುಗ್ಗಲದೇವಿ ದೇವರದಾಸಿಮಯ್ಯನ ಶಿಷ್ಯೆ ಎಂದು ಸಾಹಿತ್ಯ ಕೃತಿಗಳು ಸೂಚಿಸಿವೆ. ಪರಮಾರ ಭೋಜ, ಕಲಚುರಿ ಗಾಂಗೇಯ ಮತ್ತು ಚೋಳರಾಜೇಂದ್ರರು ಒಟ್ಟುಗೂಡಿ ಚಾಲುಕ್ಯರ ವಿರುದ್ಧ ದಂಡೆತ್ತಿದಾಗ ಗೋದಾವರೀ ತೀರದಲ್ಲಿ ನಡೆದ ಕದನದಲ್ಲಿ ಜಯಸಿಂಹ ಅವರನ್ನು ಸೋಲಿಸಿದ. ಈ ಸಂದರ್ಭದಲ್ಲಿ ರಾಜೇಂದ್ರ ಮಾನ್ಯಖೇಟವನ್ನೂ ಸುಟ್ಟಂತೆ ತೋರುತ್ತದೆ. ವೆಂಗಿಯಲ್ಲಿ ಸೋದರರ ಕಲಹಗಳಲ್ಲಿ ಚಾಲುಕ್ಯರೂ ಚೋಳರೂ ತಲೆಹಾಕಿದ ಪರಿಣಾಮವಾಗಿ ಇವರಿಬ್ಬರ ನಡುವೆ ಆ ಪ್ರದೇಶದಲ್ಲಿ ಕದನಗಳಾದವು. ಚೋಳರು ಗೆಲುವನ್ನು ಸಾಧಿಸಿದುದಾಗಿ ಹೇಳಿಕೊಂಡರೂ ವಾಸ್ತವಿಕವಾಗಿ ಇಬ್ಬರೂ ಸಮಬಲರಾಗಿದ್ದು ಯಾರಿಗೂ ಗೆಲವು ಸಿದ್ಧಿಸಲಿಲ್ಲ.
- ಜಯಸಿಂಹನ ಮಗ ಮೊದಲನೆಯ ಸೋಮೇಶ್ವರ (1946-68) ಕಲ್ಯಾಣವನ್ನು ರಾಜಧಾನಿಯಾಗಿ ಆರಿಸಿ ಅದನ್ನು ಸುಂದರಗೊಳಿಸಿದ, ಚೋಳರ ಮೊದಲನೆಯ ರಾಜೇಂದ್ರ, ಆತನ ಮೂವರು ಮಕ್ಕಳು. ರಾಜಾಧಿರಾಜ, ಇಮ್ಮಡಿ ರಾಜೇಂದ್ರ ಹಾಗೂ ವೀರರಾಜೇಂದ್ರರು ಈತನ ಸಮಕಾಲೀನರು, ಇವರ ವಿರುದ್ಧ ನಿರಂತರವಾಗಿ ಯುದ್ಧ ಹೂಡಿದ ಸೋಮೇಶ್ವರನಿಗೆ, ಸೋಲು ಗೆಲವು ಸಮವಾಗಿದ್ದುವು. ಕೊಳ್ಳಿಪಾಕ, ಕಂಪಿಲಿ ಮುಂತಾದ ರಾಜಧಾನಿ ಪಟ್ಟಣಗಳನ್ನು ಚೋಳರು ಆಕ್ರಮಿಸಿ ಕೊಳ್ಳೆಹೊಡೆದು ಸುಟ್ಟರು. ಆದರೆ ಚೋಳರು ರಾಜಾಧಿರಾಜ ಕೊಪ್ಪಮ್ (ಈಗಿನ ಕೊಪ್ಪಳ) ಕದನದಲ್ಲಿ ಸತ್ತ. ರಣರಂಗದಲ್ಲಿಯೇ ಪಟ್ಟಾಭಿಷಿಕ್ತನಾದ ಇಮ್ಮಡಿ ರಾಜೇಂದ್ರ ಕದನ ಮುಂದುವರಿಸಿದ. ದೇಂಗಿಯ ಆಕ್ರಮಣಕ್ಕಾಗಿಯೇ ಈ ಪ್ರಟಿಪಕ್ಷಗಳು ವೇಂಗಿ ಪ್ರದೇಶದಲ್ಲಿ ಪರಸ್ಪರ ಎದುರಾಗಿ ಹೋರಾಡಿದುವು. ಸೋಮೇಶ್ವರ ಈ ಮಧ್ಯ ಪರಮಾರ ಭೋಜನನ್ನು ಸೋಲಿಸಿ (1051) ಮಾಂಡವವನ್ನು ಆಕ್ರಮಿಸಿ ಧಾರಾನಗರವನ್ನು ಸುಟ್ಟ. ಭೋಜನ ಅನಂತರ ಪರಮಾರ ರಾಜ್ಯದಲ್ಲಿ ಅಂತಃಕಲಹಗಳೇರ್ಪಟ್ಟು ಚೋಳ, ಚಾಲುಕ್ಯರು ಆ ರಾಜಕೀಯದಲ್ಲೂ ತಲೆಹಾಕಿದರು. ಸೋಮೇಶ್ವರ ಸೋಲಿಸಿದ ಇತರ ಅರಸರಲ್ಲಿ ಕಲುಚುರಿ ಕರ್ಣ, ಕೊಂಕಣ ಮತ್ತು ಕರಹಾಡ ಪ್ರಾಂತ್ಯಗಳ ಶಿಲಾಹಾರ ಮುಮ್ಮಣಿ ಮತ್ತು ಮಾರಸಿಂಹ, ಸೇವುಣರ ಮುಮ್ಮಡಿ ಭಿಲ್ಲಮ ಮುಂತಾದವರು ಪ್ರಮುಖರು. ಸೋಮೇಶ್ವರನಿಗೆ ಕ್ರಮವಾಗಿ ಎರಡನೆಯ ಸೋಮೇಶ್ವರ ಎರಡನೆಯ ವಿಕ್ರಮಾದಿತ್ಯ ಮತ್ತು ಜಯಸಿಂಹ ಎಂಬ ಮೂವರು ಮಕ್ಕಳಿದ್ದು ಅವರಲ್ಲಿ ವಿಕ್ರಮಾದಿತ್ಯ ಯುವರಾಜನಾಗಿ ತಂದೆಯ ಕದನಗಳಲ್ಲಿ ಭಾಗವಹಿಸಿ ಹೆಸರುಗಳಿಸಿದ್ದ. ಸೋಮೇಶ್ವರ ತೀವ್ರ ಕಾಯಿಲೆಗೆ ತುತ್ತಾಗಿ ಅಂತಿಮವಾಗಿ ತುಂಗಭದ್ರೆಯಲ್ಲಿ ಅಸುನೀಗಿದಾಗ (1068) ಇಮ್ಮಡಿ ಸೋಮೇಶ್ವರ ಪಟ್ಟಕ್ಕೆ ಬಂದ. ಆಗ ದೂರದ ಮಾಳವದ ರಾಜಕೀಯದಲ್ಲಿ ನಿರತನಾಗಿದ್ದ ವಿಕ್ರಮಾದಿತ್ಯ ರಾಜಧಾನಿಗೆ ಹಿಂತಿರುಗಿದರೂ ಹಿರಿಯ ಸೋದರನಿಗೆ ನಿಷ್ಠೆ ಸೂಚಿಸಿದ. ಸ್ವತಃ ಅಶಕ್ತನಾಗಿದ್ದ ಎರಡನೆಯ ಸೋಮೇಶ್ವರ ಮಾತ್ರ ಅವನನ್ನು ನಂಬದೆ ರಾಜಧಾನಿಯಿಂದ ದೂರ ಬನವಾಸಿ ಪ್ರಾಂತ್ಯಕ್ಕೆ ಕಳುಹಿಸಿದ. ಸ್ವತಃ ಮಾಳವದೇಶಕ್ಕೆ ಹೋದ. ಕಲಚುರಿ ಕರ್ಣ ಮತ್ತು ಚಾಲುಕ್ಯಕರ್ಣರೂ ಇವನೊಡನೆ ಸೇರಿದರಾದರೂ ಪರಮಾರ ಉದಯಾದಿತ್ಯ ಇವರನ್ನು ಸೋಲಿಸಿದ. ವೇಂಗಿ ಪ್ರದೇಶದಲ್ಲಿಯೂ ಇವನ ಪರಭಾವ ಕುಗ್ಗಿ ದೇಂಗಿಮಂಡಲ ಚೋಳರ ವಶವಾಗುವ ಪರಿಸ್ಧಿತಿಯಲ್ಲಿ ವಿಕ್ರಮಾದಿತ್ಯ ಅನಿವಾರ್ಯವಾಗಿ ಅಣ್ಣನ ವಿರುದ್ಧ ದಂಗೆ ಎದ್ದು, ಆತನನ್ನು ಸೋಲಿಸಿ ರಾಜ್ಯವಶಪಡಿಸಿಕೊಂಡ.
- ಪಟ್ಟಾಭಿಷಿಕ್ತನಾದಾಗ ತನ್ನ ಹೆಸರಿನಲ್ಲಿ ಚಾಲುಕ್ಯ ವಿಕ್ರಮ ಎಂಬ ಶಕೆಯೊಂದನ್ನು ಆರಂಭಿಸಿದ (1097). ಈತನ ಐವತ್ತು ವರ್ಷಗಳ ಆಳ್ವಿಕೆ ಶಾಂತಿ ಸುಭಿಕ್ಷೆಗಳ ಕಾಲ. ವೇಂಗಿಯಲ್ಲಿ ಹೋರಾಡಿ ಆ ರಾಜ್ಯದ ಅರ್ಧದಷ್ಟನ್ನು ತನ್ನ ಸ್ವಾಧೀನಕ್ಕೆ ತಂದುಕೊಂಡ. ವೇಂಗಿಯಲ್ಲಿ ಹೋರಾಡಿ ಆ ರಾಜ್ಯದ ಅರ್ಧದಷ್ಟನ್ನು ತನ್ನ ಸ್ವಾಧೀನಕ್ಕೆ ತಂದುಕೊಂಡ. ವೇಂಗಿಯ ರಾಜಕುಮಾರನೊಡನೆ ಮೇಲಿಂದ ಮೇಲೆ ಚೋಳರು ರಕ್ತ ಸಂಬಂಧ ಬೆಳೆಸಿದರು. ಕೊನೆಗೆ ವೀರರಾಜೇಂದ್ರನ ಅನಂತರ ವೇಂಗಿಯ ಇಮ್ಮಡಿ ರಾಜೇಂದ್ರ ಗಂಡು ಸಂತತಿಯಿಲ್ಲದ ಚೋಳ ರಾಜ್ಯಕ್ಕೂ ಅಧಿಪತಿಯಾಗಿ ಕುಲೋತ್ತುಂಗನೆಂಬ ಬಿರುದನ್ನು ಧರಿಸಿದ (1076). ಅಂದಿನಿಂದ ಚಾಲುಕ್ಯ ಚೋಳರ ನಡುವಣ ಕಲಹಗಳು ಒಂದು ನೆಲೆಗೆ ಬಂದುವು. ಕುಲೋತ್ತುಂಗ ಪಟ್ಟಕ್ಕೆ ಬರುವುದನ್ನು ವಿಕ್ರಮಾದಿತ್ಯ ತಡೆಯ ಬಯಸಿದ್ಧನಾದರೂ ಇನ್ನೂ ಯುವರಾಜನಾಗಿದ್ದ ಕಾರಣ ಸೋದರನಾದ ಸೋಮೇಶ್ವರನ ಉದಾಸೀನತೆಯನ್ನು ಸಹಿಸಬೇಕಾಗಿತ್ತು. ಆತನ ವಿರುದ್ಧ ಅಂತಿಮವಾಗಿ ದಂಗೆ ಏಳಲು ಇದೊಂದು ಕಾರಣ. ವಿಕ್ರಮಾದಿತ್ಯನ ಕಿರಿಯ ಸೋದರ ನಾಲ್ವಡಿ ಜಯಸಿಂಹ ಈತನಿಗೆ ಬೆಂಬಲಿಗನಾಗಿದ್ದ. ಆದರೆ ಈತ ಪಟ್ಟಕ್ಕೆ ಬಂದನಂತರ ಬನವಾಸಿ ಪ್ರಾಂತ್ಯದಲ್ಲಿ ಮಂಡಲೇಶ್ವರನಾಗಿದ್ದ ಜಯಸಿಂಹ ದುಡುಕಿ ದಂಗೆ ಎದ್ದಸೋತ ವಿಕ್ರಮಾದಿತ್ಯ ಅವನನ್ನು ಕ್ಷಮಿಸಿ ವೇಂಗಿಯ ಪ್ರದೇಶದಲ್ಲಿ ಪ್ರಾಂತ್ಯಾಧಿಪತಿಯಾಗಿ ನೇಮಿಸಿದ. ಆತ 1082ರ ತನಕವೂ ಅಧಿಕಾರದಲ್ಲಿದ್ದ. ವಿಕ್ರಮಾದಿತ್ಯನ ವಿಧೇಯ ಸಾಮಂತರಲ್ಲಿ ಹೊಯ್ಸಳ ವಂಶದ ವಿನಯಾದಿತ್ಯ ಎರೆಯಂಗರೂ ಸೇರಿದ್ದರು. ಆದರೆ ಅವರ ಅನಂತರ ಎರೆಯಂಗನ ಮಕ್ಕಳಾದ ಬಲ್ಲಾಳ, ವಿಷ್ಣುವರ್ಧನರು ವಿಕ್ರಮಾದಿತ್ಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಸ್ವತಂತ್ರವಾಗಿ ಆಳಲು ಹವಣಿಸಿದರು. ವಿಕ್ರಮಾದಿತ್ಯನ ನೆಚ್ಚಿನ ದಂಡನಾಯಕಲ್ಲೊಬ್ಬನಾದ ಪರಮಾರ ವಂಶದ ಜಗದ್ದೇವನನ್ನು ಸೋಲಿಸಿದುದು ಅವರಿಗೆ ಧೈರ್ಯ ತಂದಿತ್ತು. ಆದರೆ ಅಂತಿಮವಾಗಿ ಸಿಂದವಂಶದ ಆಚುಗಿ ಮತ್ತು ಪೆರ್ಮಾಡಿಗಳೊಡನೆ ವಿಕ್ರಮಾದಿತ್ಯನೇ ಹೊಯ್ಸಳರ ವಿರುದ್ಧ ಸಾಗಿ ಅವರನ್ನು ಹಲವಾರು ಕದನಗಳಲ್ಲಿ ಸೋಲಿಸಿದ. ಇದರ ಪರಿಣಾಮ ಹೊಯ್ಸಳರು ಇನ್ನೂ ಕೆಲವು ವರ್ಷ ಸಾಮಂತ ಪದವಿಯಲ್ಲಿ ಮುಂದುವರಿಯಬೇಕಾಯಿತು. ಉತ್ತರದಲ್ಲಿ ಮಾಳವರ ರಾಜಕೀಯದಲ್ಲಿ ತಲೆಹಾಕಿ ಜಗದ್ದೇವನ ಪರವಾಗಿ ಉದಯಾದಿತ್ಯನ ವಿರುದ್ಧ ಕಾದು ಆತನನ್ನು ಕದನವೊಂದರಲ್ಲಿ ಕೊಂದ. ಆತನ ಇನ್ನಿಬ್ಬರು ಮಕ್ಕಳಾದ ಲಕ್ಷ್ಮದೇವ ಮತ್ತು ನರವರ್ಮರು ಜಗದ್ದೇವನ ಪ್ರತಿಸ್ಪರ್ಧಿಗಳಾದರು. ಈ ವೇಳೆಗೆ ಜಗದ್ದೇವನ ಬಗೆಗೆ ಅಪಾರ ವಾತ್ಸಲ್ಯ ಹೊಂದಿದ್ದ ವಿಕ್ರಮಾದಿತ್ಯ ಕೊನೆಗೊಮ್ಮೆ ಆತನನ್ನು ತನ್ನ ರಾಜ್ಯಕ್ಕೆ ಕರೆತಂದು ಅಲ್ಲಿ ಅವನಿಗೆ ಯುಕ್ತ ಅಧಿಕಾರ ನೀಡಿದ. ಆತ ತಾನು ನಿರೀಕ್ಷಿಸಿದಷ್ಟು ಸಮರ್ಥನಾಗಿರದಿದ್ದರು ಬಹುಶಃ ಇದಕ್ಕೊಂದು ಕಾರಣವಾಗಿರಬಹುದು. ವಿಕ್ರಮಾದಿತ್ಯನ ಆಸ್ಥಾನದಲ್ಲಿ ಹಲವಾರು ಕವಿಗಳೂ ಪಂಡಿತರೂ ಆಶ್ರಯ ಪಡೆದಿದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದರು. ಇವರಲ್ಲಿ ವಿಕ್ರಮಾಂಕದೇವ ಚರಿತ ಕಾವ್ಯವನ್ನು ಬರೆದ ಬಿಲ್ಹಣ ಮಿತಾಕ್ಷರ ಎಂಬ ಧರ್ಮಶಾಸ್ತ್ರದ ಕರ್ತೃ ವಿಜ್ಞಾನೇಶ್ವರ ಪ್ರಮುಖರು. ರಾಣಿಚಂದಲೆ ಕಲಾರಾಧಕಳಾಗಿದ್ದಳು. ಶಾಸನಗಳು ಶಿಲಾಹಾರವಂಶದ ರಾಜಕುಮಾರಿಯಾಗಿದ್ದ ಆಕೆಯನ್ನು ನೃತ್ಯವಿಧ್ಯಾಧರಿ. ಅಭಿನವ ಸರಸ್ವತಿ. ಅಭಿನವ ಶಾರದೆ ಎಂದೆಲ್ಲ ವರ್ಣಿಸಿವೆ.
- ವಿಕ್ರಮಾದಿತ್ಯನ ಅನಂತರ ಆತನ ಮಗ ಭೂಲೋಕ ಮಲ್ಲನೆನಿಸಿದ ಮೂರನೆಯ ಸೋಮೇಶ್ವರ ಪಟ್ಟಕ್ಕೆ ಬಂದ. ಆದರೆ ರಾಜ್ಯಾಡಳಿತಕ್ಕಿಂತಲೂ ಜ್ಞಾನಾರ್ಜನೆಯಲ್ಲಿ ಇವನಿಗೆ ಆಸಕ್ತಿ. ಆರಂಭದಲ್ಲಿ ವಿಕ್ರಮಾಂಕಾಭ್ಯುದಯ ಎಂಬ ಚಿಂತಾಮಣಿ ಎಂಬ ವಿಶ್ವಕೋಶದಂಥ ಸಂಸ್ಕøತ ಗ್ರಂಥ ರಚಿಸಿದ. ಈತನಿಗೆ ಸರ್ವಜ್ಞ ಚಕ್ರವರ್ತಿ ಎಂಬ ಬಿರುದಿತ್ತು. ಆದರೆ ರಾಜಕೀಯವಾಗಿ ಇದು ಚಾಲುಕ್ಯ ಮನೆತನದ ಇಳಿಮುಖದ ಕಾಲ. ಈತನೂ ಅನಂತರದ ಅರಸರೂ ಹಿರಿದಾದ ರಾಜ್ಯವನ್ನು ಕಾಪಾಡಿಕೊಳ್ಳುವಲ್ಲಿ ಅಸಮರ್ಥರಾದರು; ಹೊಯ್ಸಳ. ಸೇವುಣ, ಕಾಕತೀಯ ಮುಂತಾದ ಸಾಮಂತರು ದಂಗೆ ಎದ್ದರು. ಕಲಚುರಿಗಳು ಅವರಲ್ಲಿ ಪ್ರಮುಖರು. ಮಧ್ಯಪ್ರದೇಶದ ಕಲಚುರಿಮನೆತನಕ್ಕೆ ಸೇರಿದ ಇವರು ಕ್ರಮೇಣ ಬಿಜಾಪುರದ ಸುತ್ತಲಿನ ಭಾಗದಲ್ಲಿ ಪ್ರಬಲರಾಗಿ ಚಾಲುಕ್ಯ ಅರಸರ ಸ್ನೇಹಗಳಿಸಿ ಅವರೂಡನೆ ಬಾಂಧವ್ಯ ಬೆಳೆಸಿದರು. ಇವರಲ್ಲಿ ಬಿಜ್ಜಲ ಅತ್ಯಂತ ಪ್ರಮುಖ. ತನ್ನ ಸಂಬಂಧಿಕರೇ ಆದ ಚಾಲುಕ್ಯ ರಾಜಕುಮಾರರಿಗಿಂತ ತಾನೇ ಹೆಚ್ಚು ಸಮರ್ಥನೆಂಬ ನಂಬಿಕೆಯಿಂದ ರಾಜ್ಯಕ್ರಾಂತಿಯ ದಿಶೆಯಲ್ಲಿ ಹೆಜ್ಜೆ ಇಟ್ಟ. ಕೊನೆಗೊಮ್ಮೆ ಮುಮ್ಮಡಿ ತೈಲಪನನ್ನು ಕೊಂದು ರಾಜ್ಯ ಸ್ವಾಧೀನಪಡಿಸಿಕೊಂಡ. ಚಕ್ರವರ್ತಿ ಎನಿಸಿಕೊಂಡರೂ ಆ ಪದವಿ ಮುಳ್ಳಿನಹಾಸಿಗೆ ಎಂಬುದನ್ನು ಶೀಘ್ರವೇ ಅರಿತ. ಐದಾರು ವರ್ಷಗಳಲ್ಲಿ ಬೇಸತ್ತು ಅಧಿಕಾರಕ್ಕಾಗಿ ಕಾದಾಡುತ್ತಿದ್ದ ಸೋದರರ, ಮಕ್ಕಳ ಒಳಜಗಳಗಳನ್ನು ತಡೆಯಲಾಗದೆ ನಿವೃತ್ತನಾದ (1169). ಇವನ ಮಕ್ಕಳೂ ಇತರರೂ ಪರಸ್ಪರ ಕಾದಾಡಿದರು. ಅರಾಜಕತೆ ತಲೆ ಎತ್ತಿತು. ಬೇಸತ್ತ ಜನ ದಂಗೆ ಎದ್ದರು. ಇದೇ ವೇಳೆಗೆ ಸಮಾಜದಲ್ಲಿ ಪರಂಪರಾಗತವಾಗಿ ಬಂದಿದ್ದ ಜಾತಿ ಕುಲವ್ಯವಸ್ಧೆಗಳನ್ನು ಆಳರಸರು ಮುಂದುವರಿಸಿಕೊಂಡು ಬಂದುದರಿಂದ ಸಮಾಜದಲ್ಲಿ ಭೇದಭಾವಗಳು ತೀವ್ರವಾಗಿ ಬಸವಣ್ಣನಂಥ ಮಹಾತ್ಮರು ಇದರ ವಿರುದ್ಧ ಸಮರವನ್ನೇ ಸಾರಿದಾಗ ಸಾಮಾನ್ಯ ಜನತೆ ಎಚ್ಚೆತ್ತು ವರ್ಣಾಶ್ರಮ ಧರ್ಮಗಳ ವಿರುದ್ಧ ಬಂಡಾಯ ಹೂಡಿದರು. ವೀರಶೈವಧರ್ಮ ಈ ಘಟ್ಟದಲ್ಲಿ ಜನಪ್ರಿಯವಾಗಿ, ಪ್ರಬಲವಾಗಿ, ಬಿಜ್ಜಲ-ಬಸವರ ನಡುವ ಘರ್ಷಣೆಗಳುಂಟಾದವು. ಕಲಚುರಿಗಳೂ ಕೇವಲ 20 ವರ್ಷಗಳ ಆಳ್ವಿಕೆಯ ಅನಂತರ ಕಣ್ಮರೆಯಾದರು. ನಾಲ್ವಡಿ ಸೋಮೇಶ್ವರ ಪುನಃ ಚಾಲುಕ್ಯರಾಜ್ಯ ಪ್ರತಿಷ್ಠಾಪಿಸಲು ಯತ್ನಿಸಿದನಾದರೂ ಸಮಕಾಲೀನ ಸಾಮಾಜಿಕ, ರಾಜಕೀಯ ಆಂದೋಲನಗಳನ್ನು ತಡೆಗಟ್ಟುವುದು ಸಾಧ್ಯವಾಗಲಿಲ್ಲ. ಇದರಿಂದ ಚಾಲುಕ್ಯರಾಜ್ಯ ಅಳಿಯಿತು.
- ಸೇವುಣ-ಹೊಯ್ಸಳ: ವಿಕ್ರಮಾದಿತ್ಯನ ಕಾಲದಿಂದಲೇ ಬುಸುಗುಟ್ಟುತ್ತಿದ್ದ ಸೇವುಣ-ಹೊಯ್ಸಳ ಸಾಮಂತರು ಈ ಅರಾಜಕತೆಯ ಪ್ರಯೋಜನ ಪಡೆದು ಸ್ವತಂತ್ರರಾದರು. ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ಶಿಂದಿಸೇರ-ಸಿನ್ನರ್‍ವನ್ನು ಕೇಂದ್ರವಾಗಿ ಪಡೆದಿದ್ದ ಸೇವುಣರು 9ನೆಯ ಶತಮಾನದ ಮಧ್ಯಭಾಗದಲ್ಲಿ ಸೇವುಣ ಚಂದ್ರನ ಕಾಲದಲ್ಲಿ ಬೆಳಕಿಗೆ ಬಂದರು. ಆತನಿಂದಲೇ ಈ ವಂಶಕ್ಕೆ ಸೇವುಣ ಎಂಬ ಹೆಸರುಬಂತು. 11ನೆಯ ಶತಮಾನದ ಎರಡನೆಯ ದಶಕದಿಂದ ಆಳತೊಡಗಿದ ಮುಮ್ಮಡಿ ಭಿಲ್ಲಮ ಚಾಲುಕ್ಯರ ವಿರುದ್ಧ ಸೆಣಸಬೇಕಾಯಿತು. ಮೊದಲನೆಯ ಸೋಮೇಶ್ವರ ಈತನ ಸ್ನೇಹ ಬಯಸಿ ತನ್ನ ಸೋದರಿ ಅವ್ವಲ ದೇವಿಯನ್ನು ಈತನಿಗೆ ಮದುವೆ ಮಾಡಿಕೊಟ್ಟ. ಬಳಿಕ ಭಿಲ್ಲಮ ಸೋಮೇಶ್ವರನ ಕದನಗಳಲ್ಲಿ ನೆರವಾದ. 1068ರಲ್ಲಿ ಅಧಿಕಾರಕ್ಕೆ ಬಂದ ಸೇವುನಚಂದ್ರ ವಿಕ್ರಮಾದಿತ್ಯನ ಪರವಾಗಿ ಇಮ್ಮಡಿ ಸೋಮೇಶ್ವರನ ಸಾಮಂತನಾದ ಚಿದ್ದಣ ಚೋಳನೊಡನೆ ಯುದ್ಧ ಮಾಡಿದ. ಕಲಚುರಿಗಳ ಕಾಲದಲ್ಲಿ ಸೇವುಣ ಮಲ್ಲುಗಿ ಬಿಜ್ಜಲನನ್ನು ಎದುರಿಸಿದ. ಕಾಕತೀಯ ರುದ್ರದೇವನ ವಿರುದ್ಧವೂ ಹೋರಾಡಿದ. ಇವನ ಕಿರಿಯ ಮಗ ಐದನೆಯ ಭಿಲ್ಲಮ ಕಲಚುರಿ ಮಲ್ಲುಗಿ ಹಾಗೂ ಚುಲುಕ್ಯ ನಾಲ್ವಡಿ ಸೋಮೇಶ್ವರರೊಡನೆ ಸೆಣಸಿದ. ಕೊನೆಗೆ ಹೊಯ್ಸಳ ಇಮ್ಮಡಿ ಬಲ್ಲಾಳನ್ನು ಸೊರಟೂರು ಕದನದಲ್ಲಿ ಎದುರಿಸಿ ಸೋತ. 1199ರಲ್ಲಿ ಪಟ್ಟಕ್ಕೆ ಬಂದ ಇಮ್ಮಡಿ ಸಿಂಘಣ ಹೊಯ್ಸಳ ಬಲ್ಲಾಳನ್ನು ಚಾಲುಕ್ಯ ರಾಜ್ಯದಿಂದ ಹೊರದೂಡಿದ. ಮಾಳವ ದೇಶದ ಪರಮಾರವಂಶದ ಅರ್ಜುನವರ್ಮನನ್ನು ಸೋಲಿಸಿದರೂ ಅನಂತರ ಅವನಿಂದಲೇ ಪರಾಭವಗೊಂಡು ಕದಂಬ, ಶಿಲಾಹಾರ ವಂಶಸ್ಥರನ್ನೂ ಎದುರಿಸಿದ. ಚೋಳರಾಜ್ಯದಲ್ಲಿಯ ರಾಜಕೀಯ ಇಮ್ಮಡಿ ಬಲ್ಲಾಳ ತುಂಗಭದ್ರೆಯ ಉತ್ತರದ ಪ್ರದೇಶಗಳಿಂದ ಕಾಲ್ತೆಗೆಯುವಂತೆ ಮಾಡಿತು. ಸೇವುಣ ಸಿಂಗಣನಿಗೆ ಇದರಿಂದ ಆ ಪರದೇಶಗಳಿಂದ ಕಾಲ್ತಗೆಯುವಂತೆ ಮಾಡಿತು. ಸೇವುಣ ಸಿಂಘಣನಿಗೆ ಇದರಿಂದ ಆ ಪ್ರದೇಶದ ಮೇಲಿನ ಒಡೆತನ ಸುಗಮವಾಯಿತು. ಗುಜರಾತಿನ ಚಾಲುಕ್ಯ ಇಮ್ಮಡಿ ಭೀಮನೊಂದಿಗೂ ಈತ ಕಾದಿದ. ಸುಮಾರು 50 ವರ್ಷಗಳ ಕಾಲ (1199-1247) ಆಳಿದ ಇವನ ಕಾಲದಲ್ಲಿ ರಾಜ್ಯ ಉತ್ತರದ ನರ್ಮದೆಯಿಂದ ದಕ್ಷಿಣದ ತುಂಗಭದ್ರೆಯ ವರೆಗೂ ಹಬ್ಬಿತ್ತು. ಪೂರ್ವದಲ್ಲಿ ಆಂಧ್ರ ಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳು ಈ ರಾಜ್ಯದ ಮೇರೆಗಳಾಗಿದ್ದುವು.
- ಸಿಂಘಣನ ಮೊಮ್ಮಗ ಮಹಾದೇವ (1261-71) ಕಾಕತೀಯ ರುದ್ರಾಂಬಳ ವಿರುದ್ಧ ದಂಡೆತ್ತಿ ವರಂಗಲ್‍ಕೋಟೆ ಮುತ್ತಿದ. ಅದರೆ ಆಕೆ ಕಲಿತನದಿಂದ ಕಾದಿ ಇವನನ್ನು ಸೋಲಿಸಿದಳಲ್ಲದೆ ಕಪ್ಪವಾಗಿ ಒಂದು ಕೋಟಿ ಸುವರ್ಣ ನಾಣ್ಯಗಳನ್ನೂ ಪಡೆದಳು. ಈತ ದಕ್ಷಿಣದಲ್ಲಿ ಹೊಯ್ಸಳರ ವಿರುದ್ಧ ಹೂಡಿದ ಕದನಗಳಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಲಭಿಸಿತು. ರಾಮಚಂದ್ರ (1271-1312) ಈ ವಂಶದ ಕೊನೆಯ ಖ್ಯಾತ ಅರಸ. ದೋರಸಮುದ್ರದ ಸಮೀಪದ ಬೆಳವಾಡಿಯ ವರೆಗೂ ಇವನ ಸೈನ್ಯ ಹೊಯ್ಸಳರ ವಿರುದ್ಧ ಸಾಗಿತ್ತಾದರೂ ಅಂತಿಮವಾಗಿ ಇವನ ದಂಡಾಧಿಕಾರಿಗಳು ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಕುಮ್ಮಟದ ಕೋಟೆಯನ್ನು ಮೂರು ಬಾರಿ ಮುತ್ತಿ 1287ರಲ್ಲಿ ಅಲ್ಲಿಯ ಸಾಮಂತ ಮುಮ್ಮಡಿ ಸಿಂಗಯನಾಯಕ ತಲೆಬಾಗುವಂತೆ ಮಾಡಲಾಯಿತು. ಕಾಕತೀಯರ ಸಾಮಂತ ಅಂಬದೇವನಿಗೆ ನೆರವು ನೀಡಿದನೆಂಬ ಕಾರಣದಿಂದ ಪ್ರತಾಪರುದ್ರ ರಾಮಚಂದ್ರನ ರಾಜ್ಯದ ಮೇಲೆ ದಾಳಿಮಾಡಿದ. ರಾಯಚೂರು ಅವನ ವಶವಾಯಿತು. ಇದೇ ಸಮಯದಲ್ಲಿ ಉತ್ತರದ ಖಲ್ಜಿ ಮನೆತನದ ಅಲಾಉದ್ದೀನ ದೇವಗಿರಿಯನ್ನು ಮುತ್ತಿದ. ಸೇವುಣ ಸೈನ್ಯ ಆಗ ಬೇರೆಡೆಯಲ್ಲಿ ಕಾರ್ಯಪ್ರವೃತ್ತವಾಗಿತ್ತು. ದೇವಗಿರಿಯನ್ನು ಕೊಳ್ಳೆಹೊಡೆದು ಹಿಂತಿರುಗಿದ ಸುಲ್ತಾನನ ಮೇಲೆ ರಾಮಚಂದ್ರನ ಮಗ ಮುಮ್ಮಡಿ ಸಿಂಘಣ ಸೈನ್ಯಾಚರಣೆ ನಡೆಸಿ ಸೋತ. ಅಲಾಉದ್ದೀನ್ ಸೇವುಣನನ್ನು ಅವಮಾನಗೊಳಿಸಿ ಮತ್ತಷ್ಟು ಕಪ್ಪಕಾಣಿಕೆ ಪಡೆದು ಎಲಿಬ್ಪುರ ಪ್ರಾಂತ್ಯವನ್ನು ವಶಪಡಿಸಿಕೊಂಡು ಅಲ್ಲಿ ಮಹಮದೀಯರ ಸೈನ್ಯ ನೆಲೆಗೊಳಿಸಿದ. ಸುಲ್ತಾನ ಹಿಂತಿರುಗಿದ ಕೂಡಲೆ ರಾಮಚಂದ್ರ ಹೊಯ್ಸಳರ ವಿರುದ್ಧದ ಹಗೆತನವನ್ನು ಮುಂದುವರಿಸಿ ಕಾದಿದ. ಈ ದಂಡಯಾತ್ರೆಯ ಲಾಭಗಳ ರುಚಿಕಂಡ ಅಲಾಉದ್ದೀನ್ ತನ್ನ ಸೇನಾನಿ ಮಲ್ಲಿಕ್ ಕಾಫರನನ್ನು ಮತ್ತೊಮ್ಮೆ ದಕ್ಷಿಣಕ್ಕೆ ಕಳಿಸಿದ (1307). ರಾಮಚಂದ್ರನನ್ನು ಸೋಲಿಸಿದ ಮಹಮದೀಯರ ಸೈನ್ಯ ಅವನ ನೆರವಿನಿಂದ ವರಂಗಲ್ಲಿನ ಮೇಲೂ ದಂಡೆತ್ತಿತ್ತು. ಮರುವರ್ಷ (1311) ದೇವಗಿರಿಗೆ ಬಂದು ಅಲ್ಲಿಂದ ಹೊಯ್ಸಳರ ವಿರುದ್ಧ ಸಾಗಿ ದೋರಸಮುದ್ರವನ್ನಾಕ್ರಮಿಸಿ ಅಪಾರ ಸಂಪತ್ತನ್ನು ಸಾಗಿಸಿದ. 1312ರಲ್ಲಿ ಪಟ್ಟಕ್ಕೆ ಬಂದ ಮುಮ್ಮಡಿ ಸಿಂಗಣ ಉದ್ಧಟತನದಿಂದ ಅಲಾಉದ್ದೀನನಿಗೆ ಕಪ್ಪಕೊಡುವುದನ್ನು ನಿಲ್ಲಿಸಿದ. ಇದರ ಪರಿಣಾಮವಾಗಿ ಅಲಾಉದ್ದೀನನ ಮಗ ಮುಬಾರಕ್ ದಕ್ಷಿಣಕ್ಕೆ ಬಂದು ದೇವಗಿರಿಯನ್ನು ಸುತ್ತಲಿನ ಪ್ರದೇಶಗಳನ್ನೂ ವಶಪಡಿಸಿಕೊಂಡು ಮಹಮದೀಯ ಪ್ರಾಂತ್ಯಾಧಿಕಾರಿಯನ್ನು ನೇಮಿಸಿದ. ಇದರೊಂದಿಗೆ ಸೇವುಣರಾಜ್ಯ ಅಳಿಯಿತು.
- ಚಾಲುಕ್ಯರಾಜ್ಯ ಕಣ್ಮರೆಯಾದಾಗ ಕರ್ನಾಟಕ ಇಬ್ಛಾಗವಾಗಿ ತುಂಗಭದ್ರೆಯ ಕೆಳಗಿನ ಪ್ರದೇಶ ಹೊಯ್ಸಳರ ವಶವಾಯಿತು. ಐತಿಹಾಸಿಕವಾಗಿ ಈ ವಂಶದ ಮೊದಲ ಅರಸ ನೃಪಕಾಮ. ಚಿಕ್ಕಮಗಳೂರಿನ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ತಲೆ ಎತ್ತಿದ ಈತ ಚೋಳರ ದಂಡನಾಯದ ಅಪ್ರಮೇಯನನ್ನು ಸೋಲಿಸಿದ (1006). ನೃಪಕಾಮನ ಮಗ ವಿನಯಾದಿತ್ಯ (1045-98) ಚಾಲುಕ್ಯ ಸೋಮೇಶ್ವರ ಸಾಮಂತನಾದ. ವಿಕ್ರಮಾದಿತ್ಯನಿಗೂ ಸಹಾಯಕನಾದ. ವಿನಯಾದಿತ್ಯನ ಮಗ ಎರೆಯಂಗ ತಂದೆಯೊಡನೆ ಕದನಗಳಲ್ಲಿ ಪಾಲ್ಗೊಂಡು ವಿಶೇಷ ಪಾತ್ರ ವಹಿಸಿದ. ಎರೆಯಂಗನ ಮೂವರು ಮಕ್ಕಳಲ್ಲಿ ಬಲ್ಲಾಳ, ವಿಷ್ಣುವರ್ಧನರು ವಿಕ್ರಮಾದಿತ್ಯನ ಆಳ್ವಿಕೆಯ ಕೊನೆಯ ದಶಕಗಳಲ್ಲಿ ಸ್ವತಂತ್ರರಾಗಲು ಹವಣಿಸಿ ವಿಫಲರಾದರು. 1108ರಲ್ಲಿ ಪಟ್ಟಕ್ಕೆ ಬಂದ ವಿಷ್ಣುವರ್ಧನ ರಾಜ್ಯದ ದಕ್ಷಿಣದಲ್ಲಿದ್ದ ಚೋಳರನ್ನು ಕರ್ನಾಟಕದಿಂದ ಹೊರದೂಡಲು ಶ್ರಮಿಸಿ ಯಶಸ್ವಿಯಾದ. ತಲಕಾಡಿನ ಅಡಿಗೈಮಾನನನ್ನು ಸೋಲಿಸಿದ. ಕೋಲಾರ, ನರಗಳಿಗಳನ್ನೂ ನೀಲಗಿರಿ, ಸೇಲಮ್, ಕೊಯಮತ್ತೂರುಗಳನ್ನೂ ಒಳಗೊಂಡ ಕೊಂಗು ದೇಶವೂ ಇವನ ವಶವಾದವು. ಆದರೆ ಸ್ವತಂತ್ರನಾಗುವ ಕನಸು ನನಸಾಗಲಿಲ್ಲ. ಈತನ ಪತ್ನಿ ಶಾಂತಲೆ ಖ್ಯಾತ ಕಲಾವಿದೆ. ಜಿನಧರ್ಮ ಪರಾಯಣೆ, ಅನ್ಯಮತಸಹಿಷ್ಣು, ಬೇಲೂರಿನ ವಿಜಯನಾರಾಯಣ ದೇವಾಲಯ ಇವಳ ಪ್ರೋತ್ಸಾಹದಿಂದ ಅಸ್ತಿತ್ವಕ್ಕೆ ಬಂದ ತಂದೆಯನ್ನು ಹೊರದೂಡಿ ಅಧಿಕಾರ ವಹಿಸಿದ (1173). ಈತ ಸೇವುಣ ಭಿಲ್ಲಮನನ್ನು ಸೊರಟೂರು ಕದನದಲ್ಲಿ ಸೋಲಿಸಿದ. ದಕ್ಷಿಣದಲ್ಲಿ ಸೇವುಣರ ವಿರುದ್ಧ ಸೆಣಸುತ್ತಿದ್ದಾಗ ಚೋಳರ ರಾಜರಾಜನನ್ನು ಕಾಡವಕೋಪ್ಪೆರುಂಜಿಂಗ ಸೆರೆಯಲ್ಲಿಟ್ಟ. ಮತ್ತೊಮ್ಮೆ ರಾಜ್ಯದಲ್ಲಿ ಸ್ಧಾಪಿಸಿದ. ಉತ್ತರದಲ್ಲಿ ಸೇವುಣರ ವಿರುದ್ಧ ಸೆಣಸುತ್ತಿದ್ದಾಗ ಚೋಳರ ರಾಜರಾಜನನ್ನು ಕಾಡವಕೋಪ್ಪೆರುಂಜಿಂಗ ಸೆರೆಯಲ್ಲಿಟ್ಟ. ಮತ್ತೊಮ್ಮೆ ಅಲ್ಲಿಗೆ ಧಾವಿಸಿ ರಾಜರಾಜನನ್ನು ಬಿಡಿಸಿ ಅಧಿಕಾರದಲ್ಲಿ ಸ್ಥಾಪಿಸಿದುದು ನರಸಿಂಹನ ಸಾಧನೆಗಳಲ್ಲೊಂದು. ಈತನ ಮಗ ಸೋಮೇಶ್ವರ ಚೋಳರಾಜಕುಮಾರಿಯ ಮಗ. ಎಂತಲೇ ಬಾಲ್ಯವನ್ನೆಲ್ಲ ಚೋಳರಾಜ್ಯದಲ್ಲೇ ಕಳೆದ. ಅರಸನಾದ ಮೇಲೆ ಕಣ್ಣಾನೂರನ್ನು ರಾಜಧಾನಿಯಾಗಿ ಮಾಡಿಕೊಂಡ. ಚೋಳರ ಮುಮ್ಮಡಿ ರಾಜೇಂದ್ರ ಹೊಯ್ಸಳರನ್ನು ಕಡೆಗಣಿಸಿ ಪಾಂಡ್ಯರ ಮೇಲೆ ದಂಡೆತ್ತಿದಾಗ ಸೋಮೇಶ್ವರ ಪಾಂಡ್ಯರಿಗೆ ನೆರವಿತ್ತ. ಕಾಕತೀಯರ ದಳಪತಿ ಕಂಚೀಪುರವನ್ನು ಮುತ್ತಿದಾಗ ರಾಜೇಂದ್ರ ಪುನ: ಸೋಮೇಶ್ವರನ ಸಹಾಯ ಯಾಚಿಸಬೇಕಾಯಿತು. ಸೋಮೇಶ್ವರ ತನ್ನ ರಾಜ್ಯವನ್ನು ಇಬ್ಭಾಗಮಾಡಿ ನರಸಿಂಹ, ಸೋಮನಾಥರಲ್ಲಿ ಹಂಚಿದ. ಆದರೆ ಆ ಸಹೋದರರು ಪರಸ್ಪರ ಕಾದಿದರು. ಜಟಾವರ್ಮ ಸುಂದರಪಾಂಡ್ಯ ಸೋಮೇಶ್ವರ, ರಾಮನಾಥರನ್ನು ಸೋಲಿಸಿ ಕಣ್ಣಾನೂರನ್ನು ವಶಪಡಿಸಿಕೊಂಡ. ರಾಮನಾಥ ಹೊಯ್ಸಳ ರಾಜ್ಯಕ್ಕೆ ಹಿಂತಿರುಗಬೇಕಾಯಿತು. ಕಷ್ಟಾರ್ಜಿತ ರಾಜ್ಯವನ್ನೂ ನರಸಿಂಹ ಉಳಿಸಿಕೊಂಡ. ಈತನ ಮಗ ಮುಮ್ಮಡಿ ಬಲ್ಲಾಳ ಪಟ್ಟಕ್ಕೆ ಬಂದ (1291). ಈತ ಈ ಮನೆತನದ ಕೂನೆಯ ಅರಸ. ಈ ವೇಳೆಗೆ ಮಹಮ್ಮದೀಯರು ದಕ್ಷಿಣ ಭಾರತದಮೇಲೆ ದಾಳಿಗಳನ್ನಾರಂಭಿಸಿದ್ದರು. ಮಲಿಕ್‍ಕಾಫರ್ ದೋರಸಮುದ್ರವನ್ನು ಮುತ್ತಿ, ಸುಲಿದು ದಕ್ಷಿಣದಲ್ಲಿ ಮಧುರೆಯನ್ನು ಆಕ್ರಮಿಸಿ ಸಂಪತ್ತನ್ನು ಸೂರೆಮಾಡಿದ (1311). ಆದರೆ ಇದೊಂದು ಕುತ್ತೆಂದು ಭಾವಿಸದೆ ಬಲ್ಲಾಳ ಪುನಃ ಚೋಳಪಾಂಡ್ಯರ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ. ತಿರುವಣ್ಣಾಮಲೈ ಹಾಗೂ ಸುತ್ತಲಿನ ಕೆಲವು ಭಾಗಗಳನ್ನು ಗೆದ್ದುಕೊಂಡ. ಸೇವುಣ ರಾಮಚಂದ್ರನ ಮರಣಾನಂತರ ಕಂಪಿಲೆಯ ಸಿಂಗೆಯ ತನ್ನ ಸಣ್ಣ ಪಾಳೆಯವನ್ನು ವಿಸ್ತರಿಸಿದ. ಆಗ ಬಲ್ಲಾಳ ಆತನನ್ನು ತಡೆಯಲೆತ್ನಿಸಿದನಾದರೂ ಯಶಸ್ವಿಯಾಗಲಿಲ್ಲ. ಮಹಮ್ಮದ್ ತುಘಲಕ್ ದೋರಸಮುದ್ರವನ್ನು ವಶಪಡಿಸಿಕೊಳ್ಳಲು ಸೈನ್ಯ ಕಳುಹಿಸಿದ (1327). ಯುವರಾಜನಾಗಿದ್ದಾಗಲೇ ಕಾಕತೀಯ ರಾಜ್ಯವನ್ನು ಈತ ಆಕ್ರಮಿಸಿದ್ದ. ಬಲ್ಲಾಳ ತಿರುವಣ್ಣಾಮಲೈಯಲ್ಲಿ ಆಶ್ರಯ ಪಡೆದ. ಮಹಮ್ಮದೀಯ ಸೈನ್ಯ ಮಧುರೆಯನ್ನು ಆಕ್ರಮಿಸಿ ಅಲ್ಲಿ ತಮ್ಮ ಪ್ರಾಂತ್ಯಾಧಿಕಾರಿಯನ್ನು ನೇಮಿಸಿತು. ಗುಲ್ಬರ್ಗದ ಸುತ್ತಲಿನ ಪ್ರದೇಶದ ಪ್ರಾಂತ್ಯಾಧಿಕಾರಿಯಾಗಿದ್ದ ಬಹುದ್ದೀನ್ ದೆಹಲಿಯ ವಿರುದ್ಧ ದಂಗೆ ಎದ್ದಾಗ ಸುಲ್ತಾನ ಸ್ವತಃ ದಕ್ಷಿಣಕ್ಕೆ ಬಂದ. ಕಂಪಿಲೆಯಲ್ಲೂ, ಆ ಬಳಿಕ ದೋರಸಮುದ್ರದಲ್ಲೂ ದಂಗೆಕೋರ ಅವಿತುಕೊಂಡ. ಇವನನ್ನು ರಕ್ಷಿಸಲು ಯತ್ನಿಸಿದ ಕಂಪಿಲದೇವ ಕದನದಲ್ಲಿ ಮಡಿದ. ಆದರೆ ದೋರಸಮುದ್ರಕ್ಕೆ ಬಹುದ್ದೀನನನ್ನು ಸಾಗಹಾಕಿದ್ದ. ಈಗ ಬಲ್ಲಾಳನ ವಿರುದ್ಧ ಸೈನ್ಯ ಸಾಗಿತು. ಬಲ್ಲಾಳ ದಂಗೆಕೋರರನ್ನು ಅವರಿಗೆ ಒಪ್ಪಿಸುವ ಮೂಲಕ ತನ್ನನ್ನು ರಕ್ಷಿಸಿಕೊಂಡ. ಈ ಪರಿಸ್ಥಿತಿಗಳಲ್ಲಿ ದಕ್ಷಿಣೆಯ ಹೊಣೆಗಾರಿಕೆಯನ್ನು ತನ್ನ ಅಧಿಕಾರಿಗಳಾಗಿದ್ದ ಸಂಗಮನ ಮಕ್ಕಳಾದ ಹರೆಹರಾದಿ ಸೋದರರಿಗೆ ತನ್ನ ಅಧಿಕಾರಿಗಳಾಗಿದ್ದ ಸಂಗಮನ ಮಕ್ಕಳಾದ ಹರಿಹರಾದಿ ಸೋದರರಿಗೆ ಒಪ್ಪಿಸಿದ. ಇವರು ವಿಜಯನಗರ ರಾಜ್ಯ ಸ್ಥಾಪಿಸಿದಾಗ ಬಲ್ಲಾಳ ನೆರವಾಗಿ ನಿಂತ. ಮುಮ್ಮಡಿ ಬಲ್ಲಾಳನೊಂದಿಗೆ ಹೊಯ್ಸಳಮನೆತನದ ಆಳ್ವಿಕೆ ಅಂತ್ಯಗೊಂಡಿತು.
- ಚೋಳ: 985ರಲ್ಲಿ ಪಟ್ಟಕ್ಕೆ ಬಂದು ಸುಮಾರು 30 ವರ್ಷಗಳ ಕಾಲ ಆಳಿದ ಚೋಳವಂಶದ ರಾಜರಾಜ ರಾಜ್ಯವನ್ನು ವಿಸ್ತರಿಸಿ ಅದರ ಪ್ರಖ್ಯಾತಿಗೆ ಬಲುಮಟ್ಟಿಗೆ ಕಾರಣನಾದ. ಪಾಂಡ್ಯ ಮತ್ತು ಕೇರಳ ಅರಸರನ್ನು ಕಾಂದವಾರ್, ವಿಳಿನಮ್ ಕದನಗಳಲ್ಲಿ ಸೋಲಿಸಿ ನೌಕಾಪಡೆಯೊಂದಿಗೆ ಸಿಂಹಳವನ್ನು ಮತ್ತಿ ಅನುರಾಧ ಪುರವನ್ನು ಹಾಳುಗೆಡವಿ ಚೋಳರ ಪ್ರಾಂತ್ಯಕ್ಕೆ ಪೊಲೊನ್ನರುವವನ್ನು ರಾಜಧಾನಿಯಾಗಿ ಮಾಡಿಕೊಂಡ. ಕಾವೇರಿಯ ದಕ್ಷಿಣದ ಗಂಗವಾಡಿ, ತಡಿಗೈಪಾಡಿ, ನೊಳಂಬವಾಡಿಗಳನ್ನು ತನ್ನದಾಗಿಸಿಕೊಂಡ. 992ರಲ್ಲಿ ಚಾಲುಕ್ಯ ಸತ್ಯಾಶ್ರಯ ಈತನನ್ನು ಸೋಲಿಸಿದ. ಮಾಲ್ಡೀವ್ ದ್ವೀಪಗಳನ್ನು ಆಳ್ವಿಕೆಯ ಅಂತಿಮ ವರ್ಷಗಳಲ್ಲಿ ಗೆದ್ದುಕೊಂಡ. ಈತನ ಮಗ ರಾಜೇಂದ್ರ ತಂದೆಯ ಆಶಯಗಳನ್ನು ಈಡೇರಿಸಲೆಂಬಂತೆ ಸಿಂಹಳದ್ವೀಪವನ್ನು ವಶಪಡಿಸಿಕೊಂಡ. ಐದನೆಯ ಮಯಿಂದನ ಮಗ ಕಸ್ಸಪ ಇವನನ್ನು ವಿರೋಧಿಸಿ ಸಿಂಹಳದ ದಕ್ಷಿಣಭಾಗವಾದ ರೋಹಣವನ್ನು ಆಕ್ರಮಿಸಿ ವಿಕ್ರಮಬಾಹುವೆಂಬ ಹೆಸರಿನಿಂದ ಆಳಿದ. ರಾಜೇಂದ್ರ ಶ್ರೀವಿಜಯದ ಮೇಲೆ ನೌಕಾದಾಳಿಮಾಡಿ ಕಡಾರವನ್ನು ವಶಪಡಿಸಿಕೊಂಡು ಸಂಗ್ರಾಮ ವಿಜಯೋತ್ತುಂಗನ ಮಗನನ್ನು ಸೆರೆಯಲ್ಲಿಟ್ಟ. ಚಾಲುಕ್ಯ ಜಯಸಿಂಹ, ಸೋಮೇಶ್ವರರ ವಿರುದ್ಧ ಹಲವಾರು ಕದನಗಳನ್ನು ಹೂಡಿದನಾದರೂ ಯಾವುದರಲ್ಲೂ ಯಾರಿಗೂ ಯಶಸ್ಸು ಲಭಿಸಲಿಲ್ಲ. 1018ರಿಂದಲೇ ಯುವರಾಜನಾಗಿದ್ದ ರಾಜಾಧಿರಾಜ 1044ರಲ್ಲಿ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿ, ದನ್ನಾಡ ಕೊಳ್ಳಿಪಾಕೆಗಳಲ್ಲಿ ಸೋಮೇಶ್ವರನನ್ನು ಎದುರಿಸಿದ. ಆದರೆ ಕೊಪ್ಪಮ್ ಕದನದಲ್ಲಿ ಅಸುನೀಗಿದ. ಈತನ ಮಗ ಎರಡನೆಯ ರಾಜೇಂದ್ರ ರಣರಂಗದಲ್ಲಿಯೇ ಪಟ್ಟಾಭಿಷಿಕ್ತನಾಗಿ ಚಾಲುಕ್ಯ ಸೈನ್ಯ ಎದುರಿಸಿ ಸುರಕ್ಷಿತವಾಗಿ ಹಿಂತಿರುಗಿದ. ತಂದೆ ತಾತಂದಿರಂತೆಯೇ ವೇಂಗಿಯ ರಾಜಕೀಯದಲ್ಲಿ ತಲೆಹಾಕಿ ಅಲ್ಲಿಗೆ ಧಾವಿಸಿದ ಚಾಲುಕ್ಯರ ಸೇನಾನಿಗಳನ್ನು ಸೋಲಿಸಿದ. ಮತ್ತೊಮ್ಮೆ ಸೋಮೇಶ್ವರನನ್ನು ನಾಲ್ಕಾರು ಕದನಗಳಲ್ಲಿ ಎದುರಿಸಿದನಾದರೂ ಫಲಿತಾಂಶ ಶೂನ್ಯ. ವೀರರಾಜೇಂದ್ರ ಚಾಲುಕ್ಯ ವಿಕ್ರಮಾದಿತ್ಯನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟ. ಅವನೊಂದಿಗೆ ಸ್ನೇಹದಿಂದಿರಲು ಯೋಚಿಸಿದ. ಆದರೆ 1069ರಲ್ಲಿ ಆತ ಮರಣ ಹೊಂದಿದಾಗ ಚೋಳರಾಜ್ಯದಲ್ಲಿ ಅಂತಃಕಲಹಗಳೇರ್ಪಟ್ಟವು. ವೇಂಗಿಯ ಪೂರ್ವ ಚಾಲುಕ್ಯ ವಂಶದ ಎರಡನೆಯ ರಾಜೇಂದ್ರ ಚೋಳ ಇಮ್ಮಡಿ ರಾಜೇಂದ್ರನ ಅಳಿಯನಾಗಿದ್ದು ಚೋಳ ರಾಜ್ಯದ ಮೇಲಿನ ತನ್ನ ಹಕ್ಕನ್ನು ಸಾಧಿಸಿದ. ವೀರರಾಜೇಂದ್ರನ ಮಗ ಅಧಿರಾಜೇಂದ್ರ ಕೊಲ್ಲಲ್ಪಟ್ಟ. ರಾಜ್ಯ ರಾಜೇಂದ್ರನ ವಶವಾಗಿ ಆತ ಕುಲೋತ್ತುಂಗನೆಂಬ ಹೆಸರಿನಿಂದ ಚಾಲುಕ್ಯ ಚೋಳ ರಾಜ್ಯಗಳ ಅರಸನಾದ. ವೇಂಗಿಗೆ ರಾಜೇಂದ್ರ ಕಳುಹಿಸಿದ ಪ್ರಾಂತ್ಯಾಧಿಕಾರಿಗಳ ದೌರ್ಬಲ್ಯ ಉದಾಸೀನತೆಗಳ ಪ್ರಯೋಜನ ಪಡೆದು ವಿಕ್ರಮಾದಿತ್ಯ ಆ ರಾಜ್ಯದ ಅರ್ಧದಷ್ಟು ಭಾಗವನ್ನು ತನ್ನದಾಗಿಸಿಕೊಂಡ. ಹೇಗೂ ಸುಮಾರು 50 ವರ್ಷಗಳ ಕಾಲ ಕಲ್ಯಾಣದ ಚಾಲುಕ್ಯ ಹಾಗೂ ಚೋಳರ ನಡುವೆ ಶಾಂತಿ ಏರ್ಪಟ್ಟಿತು. ಶ್ರೀಲಂಕ ಈತನ ಕಾಲದಲ್ಲಿ ಚೋಳರ ಕೈತಪ್ಪಿದರೂ ಕಂಭೂಜ, ಇಂಡೊದೀನ ಹಾಗೂ ಪಾಗನ್ ದೇಶಗಳೊಡನೆ ಉತ್ತಮ ಬಾಂಧವ್ಯವಿತ್ತು. ಈ ಪರಿಸ್ಥಿತಿ ಬಲುಮಟ್ಟಿಗೆ ಮುಮ್ಮಡಿ ಕುಲೋತ್ತುಂಗನ ಕಾಲದತನಕವೂ ಮುಂದುವರಿದಿತ್ತು. ಇಮ್ಮಡಿ ಕುಲೋತ್ತುಂಗ ಚಿದಂಬರ ದೇವಾಲಯ ಜೀರ್ಣೋದ್ಧಾರಗೊಳಿಸಿದಾಗ ಅಲ್ಲಿದ್ದ ಗೋವಿಂದರಾಜ ವಿಗ್ರಹವನ್ನು ಸಮುದ್ರಕ್ಕೆಸೆದ. ಅದನ್ನು ರಾಮಾನುಜರು ರಕ್ಷಿಸಿ, ಪುನಃ ಸ್ವಸ್ಥಾನದಲ್ಲಿ ಪ್ರಸ್ತಾಪಿಸಿದ. ಇಮ್ಮಡಿ ರಾಜಾಧಿರಾಜ ಪಾಂಡ್ಯ ರಾಜ್ಯದಲ್ಲಿಯ ಅಂತಃಕಲಹಗಳಲ್ಲಿ ಪ್ರವೇಶಿಸಿದನಾದರೂ ಅದರಿಂದ ಆತನ ರಾಜ್ಯಕ್ಕೆ ಮುಂದೆ ಕುತ್ತೊದಗಿತು. ಪರಾಕ್ರಮ ಸಿಂಹಳದ ಪರಾಕ್ರಮಬಾಹು ಚೋಳರೊಂದಿಗೆ ಕಾದಿದ. ಅಂತಿಮವಾಗಿ ಸೋತು ಚೋಳ ಸೇನಾನಿ ಪಲ್ಲವರಾಯ ಸಿಂಹಳ ಮುತ್ತಿದಾಗ ಕುಲಶೇಖರಪಾಂಡ್ಯನ ಆಳ್ವಿಕೆಯನ್ನು ಆತ ಮಾನ್ಯ ಮಾಡಬೇಕಾಯಿತು. ಆದರೆ ಈ ಸಂದರ್ಭದಲ್ಲಿ ಕುಲಶೇಖರ ಸಿಂಹಳದ ದೊರೆಯನ್ನು ಸೇರಿ ಚೋಳರ ವಿರುದ್ಧವೇ ದಂಗೆ ಎದ್ದ. ಈ ಬಾರಿ ವೀರಪಾಂಡ್ಯನ ಹಕ್ಕನ್ನು ಚೋಳರು ಎತ್ತಿಹಿಡಿದರು. ಕುಲಶೇಖರ ತಲೆಮರೆಸಿ ಓಡಬೇಕಾಯಿತು. ಈ ವಂಶದ ಹೆಸರಾಂತ ಕೊನೆಯ ಅರಸ ಮುಮ್ಮಡಿ ಕುಲೋತ್ತುಂಗ. ಈತನೂ ಪಾಂಡ್ಯರ ರಾಜಕೀಯದಲ್ಲಿ ತಲೆಹಾಕಿ ವೀರಪಾಂಡ್ಯ ತನ್ನ ಸಾರ್ವಭೌಮತ್ವ ಒಪ್ಪುವಂತೆ ಮಾಡಿದ. ಆದರೆ ಈತನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಈತ ಹೊಯ್ಸಳರ ನೆರವು ಪಡೆಯಬೇಕಾಯಿತು. ಸುಂದರಪಾಂಡ್ಯ ಕುಲೋತ್ತುಂಗನನ್ನು ಮಾರವಮ ರಾಜಧಾನಿಯಿಂದ ಹೊರದೂಡಿದ. ಚೋಳನ ನೆರವಿಗೆ ಹೊಯ್ಸಳ ಇಮ್ಮಡಿ ಬಲ್ಲಾಳನ ಮಗ ನರಸಿಂಹ ಧಾವಿಸಿದಾಗ ಪಾಂಡ್ಯ ಚೋಳ ರಾಜಧಾನಿಯಿಂದ ಕಾಲ್ತೆಗೆದ. 1218ರಲ್ಲಿ ಪಟ್ಟಕ್ಕೆ ಬಂದ ಮುಮ್ಮಡಿ ರಾಜರಾಜ ದುರ್ಬಲ ದೊರೆ. ಪಾಂಡ್ಯರು ಚೋಳನನ್ನು ಸೋಲಿಸಿದಾಗ ಕಾಡವರ ಕೋಪ್ಪೆರುಂಜಿಂಗ ಆತನನ್ನು ಸೆರೆಯಲ್ಲಿಟ್ಟ. ಪುನಃ ಹೊಯ್ಸಳರು ಸಹಾಯಕ್ಕೆ ಬಂದರು. ಆದರೆ ಚೋಳರು ನಿಷ್ಠಾವಂತರಾಗಿರದ ಕಾರಣ ಮುಂದಿನ ಕೆಲವರ್ಷಗಳಲ್ಲಿ ಹೊಯ್ಸಳ - ಚೋಳರ ಬಾಂಧವ್ಯ ಕೆಟ್ಟು ಅವರು ಪರಸ್ಪರ ವೈರಿಗಳಾದರು. ಹೊಯ್ಸಳ ರಾಮನಾಥ ಕೊನೆಗೊಮ್ಮೆ ಮುಮ್ಮಡಿ ರಾಜೇಂದ್ರನೊಡಗೂಡಿ ಪಾಂಡ್ಯ ಕುಲಶೇಖರನೊಡನೆ ಕಾದಿದ (1279). ಆಗ ಬಹುಶಃ ಮೂರನೆಯ ರಾಜೇಂದ್ರ ಮಡಿದ. ಅನಂತರ ಚೋಳರಾಜ್ಯ ಕುಲಶೇಖರನಿಗೆ ಸೇರಿ ಚೋಳರು ಇತಿಹಾಸದಿಂದ ಕಣ್ಮರೆಯಾದರು.
- ಪಾಂಡ್ಯರು: ಮೌರ್ಯರ ಕಾಲದಲ್ಲೇ ತಮಿಳುನಾಡಿನಲ್ಲಿ ಆಳುತ್ತಿದ್ದ ಪಾಂಡ್ಯರು 13ನೆಯ ಶತಮಾನದಲ್ಲಿ ಮತ್ತೊಮ್ಮ ಕಾಣಿಸಿಕೊಂಡರೂ ಅವರು ಪ್ರಸಿದ್ಧಿಗೆ ಬಂದುದು 14ನೆಯ ಶತಮಾನದಲ್ಲಿ. ಚೋಳಕುಲೋತ್ತುಂಗ ಅವರನ್ನು ಇತಿಮಿತಿಯೊಳಗಿಟ್ಟಿದ್ದ. ಮುಮ್ಮಡಿ ಕುಲೋತ್ತುಂಗ ಅವರೊಳಗಿನ ಅಂತಃಕಲಹಗಳ ಪ್ರಯೋಜನ ಪಡೆದು ಅವರನ್ನು ಸೋಲಿಸಿದ್ದ. ಆದರೆ ಜಟಾವರ್ಮ ಕುಲಶೇಖರನ ಸೋದರ ಮಾರವರ್ಮ ಸುಂದರಪಾಂಡ್ಯ (1216-38) ಪಾಂಡ್ಯರ ಎರಡನೆಯ ಸಾಮ್ರಾಜ್ಯದ ಬುನಾದಿ ಹಾಕಿದ. ಈತ ಚೋಳರ ರಾಜಧಾನಿ ಪಟ್ಟಣಗಳಾದ ಉರೆಯ್ಯಾರು, ತಂಜಾವೂರುಗಳನ್ನು ಮುತ್ತಿ ಸುಟ್ಟುಹಾಕಿದ. ಜೋಳರು ಹೊಯ್ಸಳರ ನೆರವಿನಿಂದ ಈತನನ್ನು ತಡೆಗಟ್ಟಿದರು. ಮುಮ್ಮಡಿ ರಾಜರಾಜ ರಾಜ್ಯವನ್ನು ಹಿಂತಿರುಗಿ ಪಡೆದ. ಆದರೆ ಕಪ್ಪ ಕೊಡಲು ನಿರಾಕರಿಸಿ ಮತ್ತೊಮ್ಮೆ ಕೇಡು ತಂದುಕೊಂಡ. ಮಾರವರ್ಮ ಅವನನ್ನು ಸೋಲಿಸಿದ. ಆತನ ಸಾಮಂತ ಕೋಪ್ಪೆರುಂಜಿಂಗ ಅವನನ್ನು ಬಂಧಿಸಿದ. ಮತ್ತೊಮ್ಮೆ ಹೊಯ್ಸಳರ ಸಹಾಯದಿಂದ ರಾಜರಾಜ ಬಿಡುಗಡೆ ಹೊಂದಿದ. ಇಮ್ಮಡಿ ಮಾರವರ್ಮ ದುರ್ಬಲನಾಗಿದ್ದು ಮೂರನೆಯ ಚೋಳರಾಜರಾಜನ ಸಾರ್ವಭೌಮತ್ವವನ್ನೊಪ್ಪಿದ. ಈ ಮನೆತನದ ಖ್ಯಾತ ಅರಸ ಜಟಾವರ್ಮ ಸುಂದರಪಾಂಡ್ಯ (1251-68). ಈತ ಚೋಳನನ್ನು ಸಾಮಂತ ಪದವಿಗೆ ಇಳಿಸಿದ. ಶೇಂದಮಂಗಲಮ್ನಲ್ಲಿ ಅಧಿಕಾರಲ್ಲಿದ್ದ ಕೋಪ್ಪೆರುಂಜಿಂಗನನ್ನು ಸೋಲಿಸಿ ಆತನನ್ನು ಸಾಮಂತನಾಗಿಸಿಕೊಂಡ. ಸಿಂಹಳದ ಉತ್ತರಭಾಗ ವಶಪಡಿಸಿಕೊಂಡ. ತೆಲುಗು ಚೋಳವಂಶದ ಗಂಡಗೋಪಾಲನನ್ನು ಸೋಲಿಸಿ ಕಂಚಿಯನ್ನು ಆಕ್ರಮಿಸಿದ. ನೆಲ್ಲೂರಿನವರೆಗೂ ಸಾಗಿ ಕಾಕತೀಯ ಗಣಪತಿಯನ್ನು ಅಡಗಿಸಿ ಅಲ್ಲಿ ವೀರಾಭಿಷೇಕ ಮಾಡಿಕೊಂಡ. ಕೊಂಗು ದೇಶವನ್ನು ಆಕ್ರಮಿಸಿದ. ಹೊಯ್ಸಳ ಸೋಮೇಶ್ವರನನ್ನು ರಣರಂಗದಲ್ಲಿ ಕೊಂದ. ಶ್ರೀರಂಗದ ದೇವಾಲಯಕ್ಕೆ 18 ಲಕ್ಷ ಸುವರ್ಣ ದಾನಮಾಡಿದ. ಅನಂತರ ಆಳಿದ ಪಾಂಡ್ಯರಲ್ಲಿ ಹೆಸರಾದವ ಮಾರವರ್ಮ ಕುಲಶೇಖರ. ಈತನ ಕಾಲದಲ್ಲಿ ಮಾರ್ಕೊ ಪೋಲೊ ಪಾಂಡ್ಯರಾಜ್ಯಕ್ಕೆ ಭೇಟಿ ನೀಡಿದ್ದ. ಈ ಅರಸನಿಗೆ ಪಟ್ಟದ ವಾಣಿಯಲ್ಲಿ ಜಟಾವರ್ಮ ಸುಂದರ ಪಾಂಡ್ಯನೂ ಅನೈತಿಕ ಸಂಬಂಧದಲ್ಲಿ ಜಟಾವರ್ಮ ವೀರಪಾಂಡ್ಯನೂ ಜನಿಸಿದರು. ಅರಸ ವೀರಪಾಂಡ್ಯನನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದು ಒಳಜಗಳಗಳಿಗೆ ಕಾರಣವಾಯಿತು. ಸುಂದರಪಾಂಡ್ಯ ಅಲಾಉದ್ದೀನನ ನೆರವು ಬೇಡಿದ. ಮಲಿಕ್‍ಕಾಫರನ ದಂಡಯಾತ್ರೆ ರಾಜ್ಯದ ಬಲ ಕುಗ್ಗಿಸಿತು. ಕೇರಳದ ರವಿವರ್ಮ ಕುಲಶೇಖರ ಇಬ್ಬರು ಸೋದರರನ್ನೂ ಸೋಲಿಸಿದ. ಅನಂತರ ಕಾಕತೀಯ ಪ್ರತಾಪರುದ್ರ ದಕ್ಷಿಣಕ್ಕೆ ದಂಡೆತ್ತಿಬಂದ. ಮಹಮದ್ ತಫಲಕ್ ಇಲ್ಲಿಗೆ ಬಂದು ಪಾಂಡ್ಯ ಅರಸರನ್ನು ಪ್ರತಿನಿಧಿಯನ್ನು ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ (1323). ಆದರೂ ಪಾಂಡ್ಯ ಅರಸು ಮಕ್ಕಳು ಅಲ್ಲಲ್ಲಿ 1400ರ ತನಕವೂ ಅಳುತ್ತಲೇ ಇದ್ದು ಅನಂತರ ಕಣ್ಮರೆಯಾದರು.
- ವರೆಂಗಲ್ಲಿನ ಕಾಕತೀಯರು: ದೂರ್ಜಯ ಕುಲದ ಚತುರ್ಥವಂಶಕ್ಕೆ ಸೇರಿದ ಇವರು ಮೂಲತಃ ಬೆಳಗಾವಿ ಸಮೀಪದ ಕಾಕತೀಗ್ರಾಮಕ್ಕೆ ಸೇರಿದವರೆಂದು ಈಗ ತೋರಿಸಲಾಗಿದೆ. ಕಾಕುತೀಪುರವರಾಧೀಶ್ವರರೆಂದು ಕರೆದುಕೊಂಡಿರುವ ಇವರು ಆಂಧ್ರ ಅಥವಾ ತೆಲುಂಗೇಶದ ಅರಸರೆಂದೂ ಹೇಳಿಕೊಂಡಿದ್ದಾರೆ. 11ನೆಯ ಶತಮಾನದಲ್ಲಿ ಈ ಮನೆತನದ ಬೇತ, ಕೊರೆವಿದೇಶದ ಮಾಂಡಲೀಕನಾಗಿ ಕಾಣಿಸಿಕೊಳ್ಳುತ್ತಾನೆ. ಇದು ಈಗಿನ ನಲ್ಗೊಂಡ ಜಿಲ್ಲೆಯ ಸುತ್ತಲಿನ ಪ್ರದೇಶ. ಈತನ ಮಗ ಮಹಾಮಂಡಲೇಶ್ವರನೆನಸಿದ ಪ್ರೋಲ. ಒಂದನೆಯ ಚಾಲುಕ್ಯ ಸೋಮೇಶ್ವರನ ಸಾಮಂತನಾಗಿ ಆತನ ಕದನದಲ್ಲಿ ಪಾಲ್ಗೊಂಡು ವರಂಗಲ್ ಜಿಲ್ಲೆಯ ಹನುಮಕೊಂಡ ವಿಷಯದ ಅಧಿಪತ್ಯ ಪಡೆದ. ಈತನ ಮಗ ಇಮ್ಮಡಿ ಬೇತಮ ಆರನೆಯ ವಿಕ್ರಮಾದಿತ್ಯನ ನೆಚ್ಚಿನ ದಂಡನಾಕನಾಗಿ ಸಬ್ಬಿಸಾಯಿರ (ಕರೀಮ್‍ನಗರ ಜಿಲ್ಲೆಯ) ಪ್ರಾಂತ್ಯಗಳಿಸಿಕೊಂಡ. ತಂದೆಯ ಉತ್ತಾಧಿಕಾರಿಯಾದ (1115) ಇಮ್ಮಡಿ ಪ್ರೋಲ ವಿಕ್ರಮಾದಿತ್ಯನ ಅನಂತರ ರಾಜಕೀಯ ಅನಿಶ್ಚಿತ ಪರಿಸ್ಥಿತಿಯ ಪ್ರಯೋಜನ ಪಡೆದು ಚಾಲುಕ್ಯರ ವಿರುದ್ಧ ದಂಗೆ ಎದ್ದು ಸುತ್ತಲಿನ ಇತರ ಸಾಮಂತರನ್ನು ಸೋಲಿಸಿ ಸ್ವತಂತ್ರ ಕಾಕತೀಯ ರಾಜ್ಯಕ್ಕೆ ಬುನಾದಿ ಹಾಕಿದ. ಈತನ ಹಿರಿಯ ಮಗ ರುದ್ರ ರಾಜ್ಯದೊಳಗೆ ಕಾಣಿಸಿಕೊಂಡ ಬಂಡಾಯವನ್ನು ಅಡಗಿಸಿದ (1158). ಕಲಚುರಿ ಸೋವಿದೇವ ಚೋಳರನ್ನು ಸೋಲಿಸಿದಾಗ ವೆಲನಾಡಿನ ಸಾಮಂತರಿಗಿದ್ದ ನೆರವು ಕ್ಷೀಣಿಸಿ, ಕರ್ನೂಲು ಜಲ್ಲೆಯ ಪ್ರದೇಶವೂ ರುದ್ರನ ಕಾಲದಲ್ಲಿ ಹನುಮಕೊಂಡ. ಪಿಲ್ಲಲವಾರ್ರಿ, ಮಂಥೆನೆಗಳಲ್ಲಿ ಉತ್ತಮ ದೇವಾಲಯಗಳು ಅಸ್ತಿತ್ವಕ್ಕೆ ಬಂದವು. ಆತ ಸ್ಚತಃ ಸಾಹಿತಿಯಾಗಿದ್ದು ನೀತಿಸಾರವೆಂಬ ಸಂಸ್ಕøತ ಗ್ರಂಥ ರಚಿಸಿದ. ಅನಂತರ ಆಳಿದ ಮಹಾದೇವನಿಗೆ ರಾಜಕೀಯಕ್ಕಿಂತಲೂ ಆಧ್ಯಾತ್ಮಿಕ ಜೀವನದಲ್ಲಿ ವಿಶೇಷ ಒಲವಿತ್ತು. ಆತ ಧ್ರುವೇಶ್ವರನೆಂಬ ಶೈವ ಗುರುವಿನ ಪ್ರಭಾವಕ್ಕೊಳಗಾಗಿದ್ದ. ಸೇವುಣ ಜೈತುಗಿ ಈಗ ಕಾಕತೀಯರ ವಿರುದ್ಧ ಸೈನ್ಯಾಚರಣೆ ನಡೆಸಿ ಅವರನ್ನು ಸೋಲಿಸಿದ. ಕದನದಲ್ಲಿ ಮಹಾದೇವ ಸೋತು ಗಣಪತಿ ಸೆರೆ ಸಿಕ್ಕ. ಆದರೆ ಅನಂತರ ಗಣಪತಿಯ ಆಳ್ವಿಕೆಯ ಕಾಲದಲ್ಲಿ ಹೊಯ್ಸಳರು ಹಾಗೂ ಪಾಂಡ್ಯರೊಡನೆ ಯುದ್ಧಗಳಾದವು. ವೆಲನಾಡು ಚೋಳರ ರಾಜ್ಯವನ್ನು ತನ್ನದಾಗಿಸಿಕೊಂಡ ಗಣಪತಿ ಕಲಿಂಗದ ಪೂರ್ವಗಂಗ ಮನೆತನದ ಅನಂಗಭೀಮನಿಂದ ಗೋದಾವರಿ ಜಲ್ಲೆಯನ್ನು ಕಸಿದುಕೊಂಡು ರಾಜ್ಯ ವಿಸ್ತರಿಸಿದ. ಮನುಮಗಂಡಗೋಪಾಲನಿಂದ ನೆಲ್ಲೂರನ್ನು ಗೆದ್ದಾಗ ಇವನ ರಾಜ್ಯ ವಿಸ್ತರಿಸಿದ. ಮನುಮಗಂಡಗೋಪಾಲನಿಂದ ನಲ್ಲೂರನ್ನು ಗೆದ್ದಾಗ ಇವನ ರಾಜ್ಯ ತಮಿಳುನಾಡಿನ ಕಂಚೀಪುರದವರೆವಿಗೂ ಹಬ್ಬಿತು. ಹೊಯ್ಸಳರೊಡನೆ ಹನುಮಕೊಂಡದಿಂದ ಏಕಶಿಲಾನಗರಿಗೆ (ವರಂಗಲ್) ಬದಲಾಯಿಸಿದ ಗಣಪತಿ ಜಟವರ್ಮ ಸುಂದರಪಾಂಡ್ಯನಿಂದ ಕಂಚೀಪುರದಲ್ಲಿ ಸೋಲು ಅನುಭವಿಸಬೇಕಾಯಿತು. ರುದ್ರಾಂಬಾ, ಗಣಪಾಂಬಾ ಈತನ ಇಬ್ಬರು ಹೆಣ್ಣು ಮಕ್ಕಳು. ಹಿರಿಯಳೇ ರುದ್ರದೇವನೆಂಬ ಹೆಸರಿನಲ್ಲಿ ಸಿಂಹಾಸನವನ್ನೇರಿದಳು. ಆಕೆಯ ಪತಿ ಚಾಲುಕ್ಯವಂಶದ ವೀರಭದ್ರ ಸ್ತ್ರೀಯೊಬ್ಬಳು ಸಿಂಹಾಸನಾ ರೂಢಲಾದುದೇ ಒಂದು ಅಪರೂಪದ ವಿಷಯ. ಇದು ಹಲವರಲ್ಲಿ ಅಸಮಧಾನವನ್ನು ಕೆರಳಿಸಿತು. ಸೇವುಣ ಸಿಂಘಣನ ಮಗ ಸಾರಂಗಪಾಣಿಗೆ ಆಶ್ರಯವಿತ್ತಳೆಂಬ ಕಾರಣದಿಂದ ಮಹಾದೇವ ದಂಡೆತ್ತಿ ರುದ್ರಾಂಬಳನ್ನು ಸೋಲಿಸಿದ. ಸಾಮಂತ ಅಂಬದೇವ ದಂಗೆಯೆದ್ದು ಸ್ವತಂತ್ರವಾಗಿ ಮನುಮಗಂಡ ಗೋಪಾಲನನ್ನು ಪುನಃ ನೆಲ್ಲೂರಿನ ಅಧಿಪತಿಯಾಗಿ ಸ್ಥಾಪಿಸಿದ. ಪಲ್ಲವ ವಂಶದ ಕೊಪ್ಟೆರುಂಜಿಂಗ ಸಹ ಕಾಕತೀಯರನ್ನು ಸೋಲಿಸಿ ಕಂಚಿಯನ್ನು ಗೆದ್ದುಕೊಂಡ. ರುದ್ರಾಂಬಳ ಮೊಮ್ಮಗನೂ ಮುಮ್ಮಡಾಂಬಳ ಮಗನೂ ಆದ ಪ್ರತಾಪರುದ್ರ 1200ರಿಂದಲೇ ಯುವರಾಜನಾಗಿದ್ದು ಅನಂತರ ಪಟ್ಟಕ್ಕೆ ಬಂದ. ರುದ್ರಾಂಬ ಕಳೆದುಕೊಂಡಿದ್ದ ಪ್ರದೇಶಗಳನ್ನು ಪುನಃ ಗೆದ್ದುಕೊಳ್ಳಲು ಯತ್ನಿಸಿದ ಅಂಬದೇವನನ್ನು ಹೊರದೂಡಿ ಅವನ ರಾಜ್ಯ ಕಸಿದುಕೊಂಡ. ಆ ವೇಳೆಗೆ ಅಲಾಉದ್ದೀನ್ ದಕ್ಷಿಣಕ್ಕೆ ದಂಡೆತ್ತಿ ವತಂಗಲ್ಲನ್ನು ಮುತ್ತಿದ (1309-01). ಪ್ರತಾಪರುದ್ರ ಅಪಾರ ಕಪ್ಪಕಾಣಿಕೆ ಸಲ್ಲಿಸಿ ಸೈನ್ಯ ಹಿಂಜರಿಯುವಂತೆ ಮಾಡಿದ. ಅನಂತರ ವಿಜಯಗಂಡಗೋಪಾಲನನ್ನು ಸೋಲಿಸಿ ನೆಲ್ಲೂರನ್ನು ವಶಪಡಿಸಿಕೊಂಡ. ರಾಜ್ಯ ಈಗ ಗೋದಾವರಿಯಿಂದ ನೆಲ್ಲೂರಿನವರೆಗೂ ಹಬ್ಬಿತ್ತು. ಅದರೆ ಮಹಮದ್ ತುಘಲಕ್ ಪ್ರತಾಪರುದ್ರನನ್ನು ಸೋಲಿಸಿ ತೆಲಂಗಾಣವನ್ನೆಲ್ಲ ಗೆದ್ದುಕೊಂಡ (1322). ಈ ಪ್ರತಾಪರುದ್ರನನ್ನು ಸೆರೆಹಿಡಿದು ಒಯ್ದ. ದೆಹಲಿಯ ಹಾದಿಯಲ್ಲಿ ಆತ ಅಸು ನೀಗೆದನೆಂದು ಹೇಳಲಾಗಿದ್ದರೂ 1326ನೆಯ ವರ್ಷದ ಆತನ ಶಾಸನ ಗುಂಟೂರು ಜಿಲ್ಲೆಯಲ್ಲಿ ದೊರೆತಿದೆ. ಕಾಕತೀಯರಿಗೆ ಇದು ತೀವ್ರ ಪೆಟ್ಟು. ಇದರಿಂದ ಚೇತರಿಸಿಕೊಳ್ಳಲಾಗದೆ ಕಾಕತೀಯರು ಇತಿಹಾಸದಿಂದ ಮರೆಯಾದರು.
- ವಿಜಯನಗರ ಸಾಮ್ರಾಜ್ಯ: ಸಮಗ್ರ ದಕ್ಷಿಣ ಭಾರತವನ್ನು ಏಕಚಕ್ರಾಧಿಪತ್ಯಕ್ಕೊಳಪಡಿಸಿ ಸಾಮ್ರಾಜ್ಯ ಕಟ್ಟಿ ಹಿಂದೂಧರ್ಮ, ಸಂಸ್ಕøತಿಗಳ ರಕ್ಷಣೆ ಹಾಗೂ ಪೋಷಣೆಗೆ ಮುಖ್ಯ ಕಾರಣರು ಹರಿಹರ ಮತ್ತು ಬುಕ್ಕ ಸಹೋದರರು. ಇವರಿಗೆ ವಿದ್ಯಾರಣ್ಯರೆಂಬ ಖಚಿತವಾಗಿ ಗುರುತಿಸುವುದೂ ಸಾಧ್ಯವಾಗಿಲ್ಲ. 1336ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾಯಿತು. ಈ ಸೋದರರು ಶೃಂಗೇರಿಗೆ ತೆರಳಿ ಅಲ್ಲಿ ವಿದ್ಯಾತೀರ್ಥರಿಗೆ ಗೌರವ ಸಲ್ಲಿಸಿದರು(1346). ಹರಿಹರ ಎರಡು ದಶಕಗಳಕಾಲ ಆಳಿ ರಾಜ್ಯದಲ್ಲಿ ಉತ್ತಮ ಆಡಳಿತ ರೂಪಿಸಿದ. ಸೋದರರನ್ನು ಬೇರೆ ಬೇರೆ ಪ್ರಾಂತ್ಯಾಧಿಪತಿಯಾಗಿ ನೇಮಿಸಿದ. ಬುಕ್ಕ ಯುವರಾಜನಾಗಿ ಕೇಂದ್ರವೆನಿಸಿದ ದೋರಸಮುದ್ರದಲ್ಲಿಯೇ ಉಳಿದ. ದಕ್ಷಿಣದಲ್ಲಿ ಶಂಬುವರಾಯ ಮನೆತನ ಮತ್ತು ಮಧುರೆಯ ಸುಲ್ತಾನರ ಹೊರತಾಗಿ ಉಳಿದವರೆಲ್ಲ ಇವನ ಸಾರ್ವಭೌಮತ್ವವನ್ನೊಪ್ಪಿದರು. 1347ರಲ್ಲಿ ಈತ ಆಳುತ್ತಿದ್ದಂತೆಯೇ ಗುಲ್ಬರ್ಗದಲ್ಲಿ ಬಹುಮನೀ ರಾಜ್ಯ ಸ್ಥಾಪಿತವಾಯಿತು. ಇವೆರಡೂ ರಾಜ್ಯಗಳಿಗೂ ಅನಂತರ ಸುಮಾರು 200 ವರ್ಷಗಳ ಕಾಲ ಸತತವಾಗಿ ಹೋರಾಟಗಳಾದವು. ಕೃಷ್ಣಾನದಿಯ ಸುತ್ತಲಿನ ಫಲವತ್ತಾದ ಪ್ರದೇಶದ ಆಕ್ರಮಣದಿಂದ ರಾಜ್ಯದ ಸಂಪತ್ತು ಹೆಚ್ಚಾಗುವುದೆಂಬ ಕಾರಣದಿಂದ ಇವರಿಬ್ಬರೂ ಹೋರಾಡಿದರು. ಆದರೆ ಧರ್ಮಕ್ಕೆ ಚ್ಯುತಿ ಬಂದಿದೆ ಎಂಬುದೂ ಇವರ ನಡುವಣ ಹೋರಾಟಗಳಿಗೊಂದು ನೆಪವಾಯಿತು. 1356ರಲ್ಲಿ ಅಧಿಕಾರಕ್ಕೆ ಬಂದ ಮೊದಲನೆಯ ಬುಕ್ಕ ರಾಜಗಂಭೀರ ರಾಜನಾರಾಯಣ ಶಂಬುವರಾಯನನ್ನು ಸೋಲಿಸಿ ಉತ್ತರ ಆರ್ಕಾಡು ಜಿಲ್ಲೆಯ ಪಡೈವೀಡನ್ನು ಗೆದ್ದುಕೊಂಡ. ಆದರೆ ಅನಂತರ ಶತ್ರುವನ್ನು ಸೆರೆಯಿಂದ ಮುಕ್ತಗೊಳಿಸಿ ಆತ ವಿಧೇಯ ಸಾಮಂತನಾಗಿರುವಂತೆ ಮಾಡಿದ. ಮಧುರೆಯ ಸುಲ್ತಾನನನ್ನು ಎದುರಿಸಿಕೊಂದ. 1366ರಲ್ಲಿ ದಂಡನಾಯಕ ಮಾಧವ (ಚೌಂಡಮಾಧವ) ಗೋವೆಯನ್ನು ಮುತ್ತಿ ವಶಪಡಿಸಿಕೊಂಡ. ಅನಂತರದ ಒಂದು ಶತಮಾನಕಾಲವೂ (1470) ಇದು ವಿಜಯನಗರ ಅರಸರ ಸ್ವಾಧೀನದಲ್ಲಿತ್ತು. ಸಾಮಾಜಿಕ, ಧಾರ್ಮಿಕ ಸ್ತರಗಳಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿದ ಖ್ಯಾತಿ ಬುಕ್ಕನದು. ಜೈನರಿಗೂ ಶ್ರೀ ವೈಷ್ಣವರಿಗೂ ಏರ್ಪಟ್ಟು ವೈಷಮ್ಯವನ್ನು ಪರಮತ ಸಹಿಷ್ಣುತೆಯ ಆಧಾರದ ಮೇಲೆ ತೀರ್ಮಾನಿಸಿ, ಬಹುಸಂಖ್ಯಾತರು ಅಲ್ಪಸಂಖ್ಯಾತರ ಸ್ಥಾನಮಾನಗಳನ್ನು ಗೌರವಿಸಬೇಕೆಂಬ ತೀರ್ಪು ನೀಡಿದ. ಈತನ ಮಗ ಇಮ್ಮಡಿ ಹರಿಹರ ಕೊಂಕಣ ತಮಿಳುನಾಡುಗಳಲ್ಲಿ ಕಾಣಿಸಿಕೊಂಡ ದಂಗೆಗಳನ್ನಡಗಿಸಿ ಶ್ರೀಲಂಕೆಯವರೆಗೂ ಸಾಗಿ ಅಲ್ಲಿಯ ಅರಸ ಐದನೆಯ ಭುವನೈಕ ಬಾಹುವಿನಿಂದ ಕಪ್ಪಕಾಣಿಕೆಗಳನ್ನು ಪಡೆದ. ಚೇವರಾಯ (1406-22) ಆಂಧ್ರದಲ್ಲಿ ರಾಜಮಹೇಂದ್ರದಲ್ಲಿಯ ರೆಡ್ಡಿಗಳ ರಾಜ್ಯದ ಪಕ್ಷವಹಿಸಿ ವೆಲಮರ ವಿರುದ್ಧ ಕಾದಿದ. ಬಹುಮನಿಯ ಫಿರೋಜಷಹ ಸ್ವರ್ಣಕಾರನೊಬ್ಬನ ಮಗಳ ವಿಷಯದಲ್ಲಿ ಆಸಕ್ತಿವಹಿಸಿ ದೇವರಾಯನ ಮೇಲೆ ದಾಳಿಮಾಡಿ ಸೋಲಿಸಿದನೆಂಬ ಇತಿಹಾಸಕಾರ ಫೆರಿಸ್ತನ ಹೇಳಿಕೆ ನಿರಾಧಾರ. ಆದರೆ ಅವರ ಮಧ್ಯೆ ಕಾದಾಟಗಳು ಮುಂದುವರಿದೇ ಇದ್ದುವೆಂಬುದು ವಾಸ್ತವಿಕ. ಇಮ್ಮಡಿ ದೇವರಾಯ (1424-46) ಮೂರು ಬಾರಿ ಬಹುಮನಿಗಳೊಡನೆ ಕಾದಿದ. ವೇಮರಮೇಲೆ ದಂಡೆತ್ತಿದ್ದ ಗಜಪತಿ ಭಾನುದೇವ ಮತ್ತು ವೆಲಮರನ್ನು ಸೋಲಿಸಿ ಕೊಂಡವೀಡು ಪ್ರದೇಶ ಗೆದ್ದುಕೊಂಡ. ಈತನ ಸೇನಾನಿ ಲಕ್ಕಣ್ಣ ದಂಡನಾಯಕ ಸಿಂಹಳದ ಮೇಲೆ ನೌಕಾ ದಾಳಿಮಾಡಿ ಅವರಿಂದ ಬರಬೇಕಿದ್ದ ಕಪ್ಪ ವಸೂಲಿಮಾಡಿದ. ಈ ಕಾಲದಲ್ಲಿ ಇಟಲಿಯಿಂದ ನಿಕೊಲೊ ಕೊಂಟಿ ಮತ್ತು ಪರ್ಷಿಯದಿಂದ ಅಬ್ದುಲ್ ರಜಾಕ್ ವಿಜಯನಗರಕ್ಕೆ ಭೇಟಿ ಇತ್ತು. ರಾಜಧಾನಿ ಮತ್ತು ಅಲ್ಲಿಯ ಸಂಪತ್ತು. ಪ್ರಜೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಇಮ್ಮಡಿ ದೇವರಾಯನ ಅನಂತರ ಆಳಿದವರು ಅಸಮರ್ಥರಾಗಿ ಅಂತಃಕಲಹಗಳು ಕಾಣಿಸಿಕೊಂಡದ್ದರಿಂದ ವಿರೂಪಾಕ್ಷನ ಮಂತ್ರಿವರ್ಗದ ಸಾಳುವ ಮನೆತನದ ನರಸಿಂಹ ರಾಜ್ಯದ ಸೂತ್ರಗಳನ್ನು ಸ್ವತಃ ವಹಿಸಿಕೊಂಡ (1475). ಇವನಿಂದ ಸಾಳುವ ಮನೆತನದ ಆಳ್ವಿಕೆ ಆರಂಭವಾಯಿತು. ಆರು ವರ್ಷಗಳ ಕಾಲ ಆಳಿದ ಈತ ಆಂತರಿಕ ದಂಗೆಗಳನ್ನು ಅಡಗಿಸಿದ. ಆದರೂ ಉಮ್ಮತ್ತೂರಿನ ಪಾಳೆಯಗಾರರಂಥವರು ಇನ್ನೂ ಕಂಟಕರಾಗಿಯೇ ಇದ್ದರು. ಗಜಪತಿ ವಂಶದ ಪುರುಷೋತ್ತಮ ಗಂಟೂರಿನವರೆಗಿನ ಆಂಧ್ರದ ತೀರಪ್ರದೇಶ ಗೆದ್ದುಕೊಂಡುದಲ್ಲದೆ ಉದಯಗಿರಿಯನ್ನೂ ಮುತ್ತಿ ಆ ಕೋಟೆ ವಶಪಡಿಸಿಕೊಂಡ, 1503ರಲ್ಲಿ ಈತ ಮಡಿದ. ತನ್ನ ಇಬ್ಬರು ಮಕ್ಕಳನ್ನು ತುಳುವ ಮನೆತನದ ನರಸನಾಯಕನ ರಕ್ಷಣೆಗೆ ಬಿಟ್ಟಿದ್ದ. ಆತ ಮೊದಲು ಹಿರಿಮಗ ತಿಮ್ಮನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ. ಆತ ಕೊಲ್ಲಲ್ಪಟ್ಟ ಬಳಿಕ ಇನ್ನೊಬ್ಬ ಮಗ ಎರಡನೆಯ ನರಸಿಂಹನನ್ನು ಅಧಿಕಾರಕ್ಕೆ ತಂದ. ಆದರೆ ನರಸಿಂಹ ನರನಾಯಕನ ಅಧೀನದಲ್ಲಿರಲು ಒಪ್ಪಲಿಲ್ಲ. ಘರ್ಷಣೆ ಆರಂಭವಾಗಿ ನರಸನಾಯಕ ಪನುಗೊಂಡೆಯಲ್ಲಿ ನರಸಿಂಹನನ್ನು ಸೆರೆಯಲ್ಲಿಟ್ಟು, ತಾನೇ ಅರಸನಂತೆ ಆಳತೊಡಗಿದ. ಇವನಿಂದ ಮೂರನೆಯ ತುಳುವ ಮನೆತನದ ಆಳ್ವಿಕೆ ಆರಂಭವಾಯಿತು. 1505ರಲ್ಲಿ ಇಮ್ಮಡಿ ನರಸಿಂಹನನ್ನು ಕೊಲ್ಲಿಸಿದ. ಈತ ಬಹಮನಿಯ ಯೂಸುಫ್ ಆದಿಲ್‍ಖಾನನ್ನು ಸೋಲಿಸಿದ. ಫೋರ್ಚುಗೀಸರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ಅವರಿಂದ ಕುದುರೆಗಳನ್ನು ಖರೀದಿಸಿ ತನ್ನ ಸೈನ್ಯ ಬಲಪಡಿಸಿಕೊಂಡ. ಅನಂತರ ಆಳಿದ ಅರಸ ಭಾರತದ ಇತಿಹಾಸದಲ್ಲಿಯೇ ಹೆಸರುವಾಸಿಯಾದ ಕೃಷ್ಣದೇವರಾಯ (ನೋಡಿ- ಕೃಷ್ಣದೇವರಾಯ). ಈತ ಕೇವಲ 20 ವರ್ಷಗಳ ಕಾಲ (1509-29) ಆಳಿದರೂ ರಾಜ್ಯದ ಕೀರ್ತಿ ಭಾರತದ ಮೂಲೆಮೂಲೆಗೂ ಹಬ್ಬುವಂತೆ ಮಾಡಿದ. ಈತ ಸೋಲಿಸಿದವರಲ್ಲಿ ಪ್ರಮುಖ ಉಮ್ಮತ್ತೂರಿನ ಪಾಳೆಯಗಾರ. ಪ್ರಜೆಗಳು ಕರಭಾರದಿಂದ ತೊಂದರೆಗೀಡಾಗಿ ಅಸಮಾಧಾನದಿಂದಿದ್ದರು. ಅವರ ಪ್ರೀತಿವಿಶ್ವಾಸಗಳಿಸಲು ಮದುವೆ ಸುಂಕ ಮುಂತಾದ ಅನಿಷ್ಟ ತೆರಿಗೆಗಳನ್ನು ತೆಗೆದುಹಾಕಿದ. ಪೋರ್ಚುಗೀಸರೊಡನೆ ಸ್ನೇಹ ಮುಂದುವರಿಸಿ ಅವರು ಭಟ್ಟಳದಲ್ಲಿ ಕೋಠಿ ಕಟ್ಟಿಕೊಳ್ಳಲು ಅನುಮತಿ ನೀಡಿದ ಒರಿಸ್ಸದ ಗಜಪತಿಗಳು ಪ್ರಬಲರಾಗಿ ಅಂದಿನ ಪರಿಸ್ಥಿತಿಗಳಲ್ಲಿ ನೆರೆಯ ಹಿಂದೂರಾಜ್ಯದೊಡನೆ ಸ್ನೇಹದಿಂದಿರದೆ ಶತ್ರುಭಾವ ತೋರಿಸಿದ ಕಾರಣ. ಅವರ ಸೊಕ್ಕನ್ನು ಅಡಗಿಸಲೆಂಬಂತೆ ಅವರ ವಿರುದ್ಧ ದಂಡಯಾತ್ರೆಯೊಂದನ್ನು ಯೋಚಿಸಿದ, ಕ್ರಮವಾಗಿ ಉದಯಗಿರಿ, ವಿಜಯವಾಡ, ಕೊಂಡಪಲ್ಲಿ ಮುಂತಾದ ಕೋಟೆಗಳನ್ನು ಗೆದ್ದುಕೊಂಡು ಅಂತಿಮವಾಗಿ ಅವರ ರಾಜಧಾನಿ ಕಟಕವನ್ನು ಮುತ್ತಿ ಪ್ರತಾಪರುದ್ರನನ್ನು ಸೋಲಿಸಿದ. ಆತ ಶರಣಾಗತನಾದಾಗ ಅವನಿಂದ ಗೆದ್ದುಕೊಂಡ ಪ್ರದೇಶಗಳನ್ನು ಹಿಂತಿರುಗಿಸಿ ಅವನ ಮಗಳು ಜಗನ್ಮೋಹಿನಿಯನ್ನು ಲಗ್ನವಾದ. ಗೋಲ್ಕೊಂಡದ ಕುಲಿಕುತುಬ್ ಷಾನನ್ನು ಸುಲ್ತಾನ ಸೋಲಿಸಿದ. ಅನಂತರ ಬಿಜಾಪುರದ ಸುಲ್ತಾನ ಇಸ್ಮಾಯಿಲನನ್ನೂ ಸೋಲಿಸಿ ರಾಯಚೂರು ಕೋಟೆ ಪಡೆದುಕೊಂಡ. ಗುಲ್ಬರ್ಗದ ವಿರುದ್ಧ ಮೂರು ಬಾರಿ ದಂಡೆತ್ತಿ ಮುದುಗಲ್ಲನ್ನು ವಶಪಡಿಸಿಕೊಂಡು ಇಮ್ಮಡಿ ಮಹಮ್ಮೂದನ ಮೂವರು ಮಕ್ಕಳಲ್ಲಿ ಒಬ್ಬರನ್ನು ಅಧಿಕಾರದಲ್ಲಿ ನಿಯೋಜಿಸಿ ಇನ್ನಿಬ್ಬರನ್ನು ತನ್ನ ರಾಜಧಾನಿಗೆ ಕರೆತಂದು ಅವರನ್ನು ಗೌರವಾದರಗಳಿಂದ ಕಂಡ. ಆದರೆ ಬಾಳಿನ ಅಂತಿಮ ವರ್ಷಗಳಲ್ಲಿ ತನ್ನ ಪ್ರಧಾನಿಯಾಗಿದ್ದ ಸಾಳುವ ತಿಮ್ಮರಸನ ಮಗ ತಿಮ್ಮ ದಂಡನಾಯಕನ ವಿರುದ್ಧ ಕೇಳಿ ಬಂದ ದೂರುಗಳನ್ನು ಪರಿಶೀಲಿಸದೆ ಆತನನ್ನು ಶಿಕ್ಷಿಸಿದ. ಆದರೆ ತಾನೆ ದುಡುಕಿದೆನೆಂಬ ಭಾವನೆ ಅವನಲ್ಲುಂಟಾಯಿತು. ಇದು ಅರಸನ ನೆಮ್ಮದಿಯನ್ನು ಕಲಕಿತು. ಈತ ತೀರಿಕೊಂಡಾಗ (1529) ಈತನಿಗೆ ಕೇವಲ 42ವರ್ಷ ವಯಸ್ಸಾಗಿತ್ತು. ಹಲವಾರು ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿ ಅಪಾರ ಸಂಪತ್ತನ್ನು ದಾನಮಾಡಿ, ಕಲೆಸಾಹಿತ್ಯಗಳಿಗೆ ಪ್ರೋತ್ಸಾಹ ನೀಡಿದ ಈತನ ಆಸ್ಥಾನದಲ್ಲಿ ದಿಗ್ಗಜಗಳೆನಿಸಿದ ಕವಿಗಳಿದ್ದರು. ಇವನ ಆಸ್ಥಾನದಲ್ಲಿ ಇವನನ್ನು ಕಂಡು, ಇವನ ವ್ಯಕ್ತಿತ್ವದ ವರ್ಣನೆಯನ್ನು ಪೇ ಕೊಟ್ಟಿದ್ದಾನೆ. ಆತನ ವರದಿಗಳಿಂದ ಸಾಮ್ರಾಜ್ಯದ ವೈಭವ ಮತ್ತು ಸಾಮ್ರಾಜ್ಯದ ಸಾಮಥ್ರ್ಯಗಳ ಅರಿವಾಗುತ್ತದೆ.
- ಈತನ ಮರಣ ಆಂತರಿಕ ಕಲಹಕ್ಕೆ ಎಡೆಮಾಡಿತು. ಅಂತಿಮವಾಗಿ ಅಚ್ಯುತ ದೇವರಾಯ ಪಟ್ಟಕ್ಕೆ ಬಂದ. 1542ರ ತನಕ ಆಳಿದ ಈತನ ಕಾಲದಲ್ಲಿ ಬಿರುಕುಗಳೂ ಕಾಣಿಸಿಕೊಂಡುವು. ಕೆಲವು ದಂಗೆಕೋರರನ್ನು ಈತ ಸೋಲಿಸಿದರೂ ಈತನ ಸೋದರ ರಂಗನ ಮಗ ಸದಾಶಿವನ ಹಕ್ಕನ್ನು ಎತ್ತಿಹಿಡಿದ ಕೃಷ್ಣದೇವರಾಯನ ಅಳಿಯ ರಾಮರಾಯ ಈತನಿಗೆ ಕಂಟಕನಾಗಿದ್ದ. ಈತ ಆನಂದ ನಿಧಿ ಎಂಬ ದತ್ತಿಯನ್ನು ಸ್ಥಾಪಿಸಿ ಅದರಿಂದ ಹಲವಾರು ಯಜ್ಞಯಾಗಾದಿಗಳನ್ನು ಮಾಡಿ, ಬಹುಮಾನಗಳನ್ನು ನೀಡಲು ಸಹ ಏರ್ಪಾಡು ಮಾಡಿದ. ಈತನ ಮರಣಾನಂತರ ಮತ್ತೊಮ್ಮೆ ಸಿಂಹಾಸನಕ್ಕಾಗಿ ಕಚ್ಚಾಟಗಳಿಗೆ ಅಂತಿಮವಾಗಿ ಸದಾಶಿವರಾಯ ಪಟ್ಟಕ್ಕೆ ಬಂದ. ಆದರೆ ಈತ ಹೆಸರಿಗೆ ಮಾತ್ರ ಅರಸನಾಗಿದ್ದ. ರಾಮರಾಯನೇ ಸರ್ವಾಧಿಕಾರಿಹಾಗಿ ವರ್ತಿಸಿದ. ಸದಾಶಿವನನ್ನು ಸೆರೆಯಲ್ಲಿಟ್ಟು (1550)ರಾಜ್ಯ ಸೂತ್ರಗಳನ್ನೆಲ್ಲ ತನ್ನದಾಗಿ ಮಾಡಿಕೊಂಡ. ಉತ್ತಮ ಸೇನಾನಿಯಾಗಿ, ಸೋದರರಾಗಿ ತಿರುಮಲ ಮತ್ತು ವೆಂಕಟಾದ್ರಿಗಳ ನೆರವಿನಿಂದ ನೆರೆಯ ಅರಸರ ವಿರುದ್ಧ ಕಾದು ಅವರ ದ್ವೇಷಕ್ಕೆ ಪಾತ್ರನಾದ. ಐದು ಭಾಗಗಳಾಗಿದ್ದ ಬಹುಮನಿರಾಜ್ಯದ ಸುಲ್ತಾನರಲ್ಲಿ ಕುಟಿಲನೀತಿಯಿಂದ ಕಲಹಗಳುಂಟು ಮಾಡಿದ. ರಾಜ್ಯವಿಸ್ತರಿಸಿದ. ಆದರೆ ಇವನ ಕುಟಿಲತೆಯೇ ಅಂತಿಮವಾಗಿ ಇವನಿಗೆ ಮುಳುವಾಯಿತು. ಸುಲ್ತಾನರೆಲ್ಲರೂ ಕೊನೆಗೊಮ್ಮೆ ಎಚ್ಚೆತ್ತು ಒಂದಾಗಿ ಇವನೊಡನೆ ಕಾದಲು ಸಿದ್ಧರಾದರು. ಘೋರವಾದ ತಾಳಿ ಕೋಟೆ (ರಕ್ಕಸ ತಂಗಡಿ) ಕದನದಲ್ಲಿ (1565) ರಾಮ ರಾಯ ಸೋತು ಅಸುನೀಗಿದ ಇವನ ಸೋದರರು ರಣರಂಗದಿಂದ ಹಿಮ್ಮೆಟ್ಟಿ ರಾಜಧಾನಿ ಹಂಪೆಯಲ್ಲಿ ತನಗೆ ಸಾಧ್ಯವಾದಷ್ಟು ಸಂಪತ್ತು ಶೇಖರಿಸಿಕೊಂಡು ಪೆನುಗೊಂಡೆಗೆ ಧಾವಿಸಿದರು. ಹಂಪೆ ದಾಳೀಕಾರರ, ಕಳ್ಳರ ಪಾಲಾಗಿ ಹಾಳಾಯಿತು. ವಿಜಯನಗರ ಸಾಮ್ರಾಜ್ಯ ಅಳಿಯಿತು.
- ಬಹುಮನಿ: ಮಹಮದ್ ತುಘಲಕನ ವಿರುದ್ಧ ದಂಗೆ ಎದ್ದವರಲ್ಲಿ ದೌಲತಾಬಾದಿನ ಅಮೀರ್ ಹಸನ್ ಸಹ ಒಬ್ಬ. 1347ರಲ್ಲಿ ಸ್ವತಂತ್ರ ಅರಸನೆಂದು ಘೋಷಿಸಿಕೊಂಡ ಈತ ಅಲ್ಲಾಉದ್ದೀನ್ ಹಸನ್ ಬಹಮನ್ ಷಹ ಎಂಬ ಹೆಸರಿನಿಂದ ಗುಲ್ಬರ್ಗದಲ್ಲಿ ಆಳ್ವಿಕೆ ಆರಂಭಿಸಿದ ಗೋವ. ದಭೋಲ್‍ಗಳನ್ನೊಳಗೊಂಡಂತೆ ಪೂರ್ವದಲ್ಲಿ ಭೋಂಗೀರ್ ಹಾಗೂ ಉತ್ತರ ದಕ್ಷಿಣಗಳಲ್ಲೂ ಕ್ರಮವಾಗಿ ಪೈನ್ ಗಂಗ ಹಾಗೂ ಕೃಷ್ಣಾನದಿಗಳ ವರೆಗೂ ರಾಜ್ಯವಿಸ್ತರಿಸಿ ಗುಲ್ಬರ್ಗ, ದೌಲತಾಬಾದ್, ಬೀದರ್ ಬೀರಾರಗಳೆಂಬ ನಾಲ್ಕು ತರಫ್ (ಪ್ರಾಂತ್ಯ)ಗಳನ್ನಾಗಿ ವಿಂಗಡಿಸಿದ. 1358ರಲ್ಲಿ ಪಟ್ಟಕ್ಕೆ ಬಂದ ಮುಹಮ್ಮದ್ ಷಹ ವಿಜಯನಗರದೊಡನೆ ಕದನಗಳನ್ನಾರಂಭಿಸಿದ. ಅನಂತರದ ವರ್ಷಗಳಲ್ಲಿ ಇವು ನಿರಂತರವಾಗಿ ಮುಂದುವರಿದವು. ಗುಲ್ಬರ್ಗದ ಜುಮ್ಮ ಮಸೀದಿ ಈತ ಮುಗಿಸಿದ ಕಟ್ಟಡ (1367). 1442ರಿಂದ ಆಳಿದ ಅಹಮದ್ ವಿಜಯನಗರದ ಮೇಲೆ ದಂಡೆತ್ತಿ ಕೊಲೆ. ಸುಲಿಗೆಗಳಿಂದ ಪ್ರಜೆಗಳನ್ನು ಹಿಂಸೆಗೊಳಪಡಿಸಿದ. ವರಂಗಲ್ಲನ್ನು ಗೆದ್ದುಕೊಂಡ (1442). ಈತನ ಕಾಲದಲ್ಲಿ ರಾಜಧಾನಿಯನ್ನು ಬೀದರಿಗೆ ಬದಲಾಯಿಸಲಾಯಿತು. ಮೂರು ವರ್ಷ ಮಾತ್ರ ಆಳಿದ ಹುಮಾಯೂನ್ ಕ್ರೂರಿಯಾಗಿದ್ದ. ಪ್ರಜೆಗಳಿಗೆ ಅತೀವ ಕಿರುಕುಳ ನೀಡಿದ. ಮೂರನೆಯ ಮಹಮದ್ (1463-82) ಕಿರಿಯ ವಯಸ್ಕನಾಗಿದ್ದು ರಾಜಪ್ರತಿನಿಧಿಗಳು ಈತನ ಪರವಾಗಿ ಆಳಿದರು. ಅವರಲ್ಲಿ ಹೆಸರಾದವ ಮಹಮೂದ್ ಗವಾನ್, ಪರ್ಷಿಯದ ಶ್ರೀಮಂತ ಮನೆತನಕ್ಕೆ ಸೇರಿದ ಈತ 1447ರಲ್ಲಿ ಬೀದರ್‍ಗೆ ಬಂದು ಎರಡನೆಯ ಅಲಾಉದ್ದೀನನಲ್ಲಿ ಕೆಲಸಕ್ಕೆ ಸೇರಿದ. ದಕ್ಷತೆಯಿಂದ ಮೇಲೇರಿದ ಈತ ಅರಸನಿಗೆ ರಾಜನೀತಿಯ ಪಾಠಗಳನ್ನು ಕಲಿಸಿದ. ಶತ್ರುಗಳನ್ನು ನಿವಾರಿಸಿ ಗೋವೆಯನ್ನು ವಿಜಯನಗರದಿಂದ ಗೆದ್ದುಕೊಂಡ (1472). ಆಡಳಿತದಲ್ಲಿ ವಿಶೇಷವಾಗಿ ಆರ್ಥಿಕ, ನ್ಯಾಯ ಹಾಗೂ ವಿದ್ಯಾವಿಭಾಗಗಳಲ್ಲಿ ಸುಧಾರಣೆಗಳನ್ನು ಮಾಡಿದ. ಪ್ರಾಂತ್ಯಾಧಿಕಾರಿಗಳ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರ ಸರ್ಕಾರದ ಹಿಡಿತ ಬಿಗಿಗೊಳಿಸಿದ. ಸ್ವತಃ ವಿದ್ವಾಂಸನಾಗಿದ್ದ ಈತ ಪಂಡಿತರಿಗೆ ಆಶ್ರಯದಾತನಾಗಿದ್ದ. ಬೀದರ್‍ನಲ್ಲಿ ಮದರಾಸವನ್ನು ಆರಂಭಿಸಿ ತಾನೂ ಪಾಠ ಹೇಳುತ್ತಿದ್ದ. ಇವನ ಉತ್ಕರ್ಷವನ್ನು ಸಹಿಸದ ಕೆಲವರು ಆಸ್ಥಾನಿಕರು ಮೋಸದಿಂದ ದೇಶದ್ರೋಹದ ಆಪಾದನೆ ಹೊರಿಸಿ ಮಹಮದ್ ಶ್ರೀಮಂತರ, ಸಾಮಂತರ ಅಂತಃಕಲಹಗಳನ್ನು ಹತ್ತಿಕ್ಕಲಾರದೆ ಹೋದ. ಹೂಸೂಫ್ ಆದಿಲ್ ಖಾನ್ ಬಿಜಾಪುರದಲ್ಲಿ ಸ್ವತಂತ್ರನಾದ. ನಿಜವಾದ ಅಧಿಕಾರ ಕಾಸಿಂಬರೀದನವಾಯಿತು. 1518ರಲ್ಲಿ ಮಹಮೂದ್ ಗತಿಸಿದ. ಆತನ ನಾಲ್ವರು ಮಕ್ಕಳು ಕೆಲವು ಕಾಲ ಹೆಸರಿನ ಮಟ್ಟಿಗೆ ಸುಲ್ತಾನರಾದರು. 1527ರಲ್ಲಿ ಅಂತಿಮವಾಗಿ ಬಹುಮನಿ ರಾಜ್ಯ ಛಿದ್ರವಾಯಿತು. (ನೋಡಿ- ಬಹಮನೀ-ರಾಜ್ಯ)
- 4 ಮೊಗಲರ ಕಾಲ
- ಭಾರತದ ಇತಿಹಾಸದಲ್ಲಿ ಮೊಗಲರ ಆಳ್ವಿಕೆಯ ಕಾಲ ಒಂದು ಪ್ರಮುಖ ಘಟ್ಟ. ಅವರು ಆಳಿದ ಸುಮಾರು ಮೂರು ಶತಮಾನಗಳಲ್ಲಿ ಮೊದಲೆರಡು ಶತಮಾನಗಳು ಸಾಮ್ರಾಜ್ಯದ ದೈಭವೋಪೇತ ದಿನಗಳಾಗಿದ್ದುವು. ಅರಸೊತ್ತಿಗೆ ಅಧಿಕಾರದಲ್ಲಿ ವಿಜೃಂಭಿಸಿತು. ಜನಸಾಮಾನ್ಯರು ಬಲುಮಟ್ಟಿಗೆ ನಿರ್ಲಕ್ಷಿಸಲ್ಪಟ್ಟು ಅವರ ಬಾಳು ದುಸ್ಸಹನೀಯವಾಗಿತ್ತು. ಒಂದುಕಡೆ ಕೆಲವರಿಗೆ ಸೀಮಿತವಾದ ಶ್ರೀಮಂತಿಗೆ, ಇನ್ನೊಂದು ಕಡೆ ದಾರಿದ್ರ್ಯ. ಆದರೂ ಸಾಹಿತ್ಯ ಕಲೆ ಇತ್ಯಾದಿಗಳಿಗೆ ಅರಸರು ನೀಡಿದ ಅಮಿತ ಪ್ರೋತ್ಸಾಹ ರಾಜಕೀಯವಾಗಿ ಹಾಗೂ ಕಲೆಯ ದೃಷ್ಟಿಯಿಂದ ಭಾರತದ ಖ್ಯಾತಿ ಹಬ್ಬಲು ಕಾರಣವಾಯಿತು.
- ಮೊಗಲ್ ಸಾಮ್ರಾಜ್ಯದ ಮೊದಲ ದೊರೆ ಜಾಹಿರುದ್ದೀನ್ ಮಹಮದ್ ಬಾಬರ್. ತಾಯಿಯ ಕಡೆಯಿಂದ ತೈಮೂರನ, ತಂದೆಯ ಕಡೆ ಚೆಂಗೀಜ್‍ಖಾನನ ವಂಶಕ್ಕೆ ಈತ ಸೇರಿದವ. ಮಂಗೋಲ ಸಂತತಿಯವನಾಗಿ ಮೊಗಲನೆಂದೇ ಇವನು ಪ್ರಸಿದ್ಧನಾಗಿದ್ದಾನೆ. ಇವನಿಗೂ ಹಿಂದಿನ ಮಂಗೋಲರನ್ನು ಈ ಹೆಸರಿನಿಂದ ಕರೆದಿರಲಿಲ್ಲ. ತಂದೆಯ ಸಾವಿನ ಅನಂತರ 1494ರ ವೇಳೆಗೆ ಫರ್ಗನಾದ ರಾಜನೆನಿಸಿದ ಈತ ತನ್ನ ಚಿಕ್ಕಪ್ಪಂದಿರಾದ ಅಹಮದ್ ಮಿರ್ಜಾ ಮತ್ತು ಮಹಮದ್ ಖಾನರ ದಾಳಿಯನ್ನು ಎದುರಿನಿಂದ ಅವರನ್ನು ಹಿಮ್ಮೆಟ್ಟಿಸಿದ. ಸಮರ್ಕಂಡದಲ್ಲಿ ಮಿರ್ಜಾನ ಮರಣಾನಂತರ ಅಧಿಕಾರಕ್ಕಾಗಿ ಉಂಟಾದ ಕಲಹಗಳ ಪ್ರಯೋಜನ ಪಡೆದು ಸಮರ್ಕಂಡನ್ನು ಗೆದ್ದುಕೊಳ್ಳಲು ಯತ್ನಿಸಿ ಎರಡನೆಯ ಬಾರಿ ಸಫಲನಾದ (1497). ಆದರೆ ಫರ್ಗನಾಗೆ ಹಿಂತಿರುಗುವ ವೇಳೆಗೆ ಅದೂ ಇವನ ಕೈಬಿಟ್ಟಿತ್ತು. ಅಲೆಮಾರಿ ಜೀವನ ಆರಂಭವಾಯಿತು. ತಾಷ್‍ಕೆಂಟ್‍ಗೆ ಬಂದು ಅಲ್ಲಿ ಇಬ್ಬರು ಸೋದರಮಾವಂದಿರ ನೆರವು ಪಡೆದ. ಆದರೆ 1530ರಲ್ಲಿ ಅವರಿಬ್ಬರೂ ಸೋತುಬಾಬರ್ ಹಿಂದುಕುಷ್‍ಗೆ ಸರಿಯಬೇಕಾಯಿತು. ಷಬಾನಿಖಾನನ ಹಿಡಿತದಿಂದ ತಪ್ಪಿಸಿಕೊಂಡಿದ್ದ ಖುಸ್ರಾವ್‍ಖಾನನ ನೇತೃತ್ವದ ಮೊಗಲ್ ಸೈನ್ಯ ಬಹುಶಃ ಇವನಿಗೆ ನೆರವು ನೀಡಿದ ಕಾರಣ ಕಾಬೂಲನ್ನು ಗೆದ್ದುಕೊಂಡ (1504). ಮಧ್ಯ ಏಷ್ಯದ ತನ್ನ ಮೂಲ ರಾಜ್ಯ ವಶಪಡಿಸಿಕೊಳ್ಳುವ ಪ್ರಬಲ ಆಸೆ ಇದ್ದರೂ ಕಾಬೂಲಿನ ಒಡೆತನ ಇವನಲ್ಲಿ ಭಾರತದ ಮೇಲಿನ ಪ್ರಭುತ್ವಕ್ಕೆ ಪ್ರೇರಣೆ ನೀಡಿರು. ಆದರೂ ಷೈಬಾನಿಯನ್ನು ಸೋಲಿಸಲು ಇವನು ಮಾಡುತ್ತಿದ್ದ ಯತ್ನಗಳೆಲ್ಲ ವಿಫಲವಾಗುತ್ತಿದ್ದುವು ಷೈಬಾನಿಯನನು ಇರಾನಿನ ಅರಸ ಸೋಲಿಸಿ ಕೊಂದಾಗ (1510) ಬಾಬರನ ಪ್ರಬಲ ಪ್ರತಿಸ್ಪರ್ಧಿಯೊಬ್ಬನ ನಿವಾರಣೆಯಾಯಿತು. ಪರ್ಷಿಯನ್ನರ ನೆರವಿನಿಂದ ಬುಖಾರ್, ಸಮರ್‍ಕಂಡಗಳನ್ನು ಆಕ್ರಮಿಸಿದರೂ ಅಂತಃಕಲಹಗಳ ಪರಿಣಾಮವಾಗಿ ದಂತೆಗಳುಂಟಾಗಿ ಬಾಬರ್ ಪನಃ ಎಲ್ಲವನ್ನೂ ಕಳೆದುಕೊಂಡು ಕಾಬೂಲಿಗೆ ಹಿಂತಿರುಗಬೇಕಾಯಿತು.
- ದೆಹಲಿಯಲ್ಲಿ ಲೋದಿ ಮನೆತನದ ಇಬ್ರಾಹಿಮ್, ಆಫ್‍ಘನ್ ಸರದಾರರ, ರಜಪುತರ, ಪಂಜಾಬ್, ಔನಪುರಗಳ ನವಾಬರ ದಂತೆಗಳನ್ನು ಎದುರಿಸಿ ಸೋತಿದ್ದ. ಮೇವಾಡದ ರಾಣಾ ಸಂಗ್ರಾಮಸಿಂಹ ಬಹಳ ಪ್ರಬಲನಾಗಿ ದೆಹಲಿಯನ್ನು ಆಕ್ರಮಿಸುವ ಹವಣಿಕೆಯಲ್ಲಿದ್ದ. ಒರಿಸ್ಸದ ಅರಸನ್ನು ವಿಜಯನಗರದ ಕೃಷ್ಣದೇವರಾಯ ಸೋಲಿಸಿದ್ದ. ದಕ್ಷಿಣದಲ್ಲಿ ಮಹಮದೀಯರ ಪರಿಸ್ಥಿತಿ ಕಳವಳಕರವಾಗಿತ್ತು. 1519ರಿಂದ 26ರ ತನಕದ ಏಳು ವರ್ಷಗಳಲ್ಲಿ ಐದುಬಾರಿ ಹಿಂದೂ ಸ್ಥಾನದ ಮೇಲೆ ದಂಡೆತ್ತಿದುದಾಗಿ ಬಾಬರ್ ತಾನೇ ಹೇಳಿಕೊಂಡಿದ್ದಾನೆ. ಕಾಂದಹಾರವನ್ನು ಸ್ವಾಧೀನಮಾಡಿಕೊಳ್ಳದೆ ಕಾಬೂಲಿನಿಂದ ನೇರವಾಗಿ ಪಂಜಾಬ್ ಸರಿಯುವುದು ಸಲ್ಲದೆಂಬುದನ್ನರಿತ ಬಾಬರ 1522ರಲ್ಲಿ ಆ ಪ್ರದೇಶವನ್ನೂ ಕೋಟೆಯನ್ನೂ ವಶಪಡಿಸಿಕೊಂಡ. ಇಬ್ರಾಹಿಮನ ವಿರುದ್ಧನಾಗಿ ಅಲಮ್ ಖಾನ್ ಹಾಗೂ ಬಹಲೂಲ್ ಲೋದಿಗಳು ಬಾಬರನಿಗೆ ಆಹ್ವಾನನೀಡಿದರು. ಪಂಜಾಬನ್ನು ಸಂಪೂರ್ಣ ಸ್ವತಂತ್ರವಾಗಿ ತನ್ನದಾಗಿಸಿಕೊಳ್ಳಬೇಕೆಂಬ ಬಹಲೂಲನ ಆಸೆ ನೆರವೇರಲಿಲ್ಲ. 1525ರ ನವೆಂಬರಿನಲ್ಲಿ ಕೊನೆಯ ಬಾರಿ ಹಿಂದೂಸ್ಥಾನದ ಕಡೆ ಗಮನ ಹರಿಸಿದ ಬಾಬರನ ಸೈನ್ಯ ಸಿಂಧೂನದಿ ದಾಟಿದಾಗ ಕೇವಲ 12,000 ಬಲ ಪಡೆದಿದ್ದ. ಸಿಯಾಲ್ ಕೋಟ್, ಲಾಹೋರ್‍ಗಳು ವಶವಾದವು. ಪರಸ್ಪರ ಸ್ಪರ್ಧೆಗಳಲ್ಲಿ ತೊಡಗಿದ್ದ ಸುಲ್ತಾನರು ಶರಣಾದರು. ಬಾಬರನ ಸೈನ್ಯ ಪಾಣಿಪತ್ತದವರೆಗೂ ಬಂತು. ಅಂತಿಮ ಹೋರಾಟ ನಡೆದುದು ಇಲ್ಲಿ. ಬಾಬರನ ಸೈನ್ಯದ ಸಂಖ್ಯೆ 24000ಕ್ಕೆ ಏರಿದ್ದರೆ ಲೋದಿಯ ಬಳಿ 100-000 ಲಕ್ಷ ಕಾಲಾಳುಗಳೂ ಹುರಿದುಂಬಿಸಿ ಸ್ವತಃ ರಣರಂಗದಲ್ಲಿ ಹೋರಾಡಿ ಗೆದ್ದ (1526 ಏಪ್ರಿಲ್ 21). ದೆಹಲಿ ಆತನ ವಶವಾಯಿತು. ಆದರೂ ಸುತ್ತಲಿನ ಆಫ್‍ಘನರು ಮತ್ತು ಹಿಂದೂ ಅರಸರು ಇವನಿಗೆ ವಿರೋಧಿಗಳಾಗಿಯೇ ಇದ್ದರು. ಯುವರಾಜ ಹುಮಾಯೂನ್ ಜಾನ್ಪುರ, ಘಾಜೀಪುರ, ಕಾಲ್ಪೀಗಳನ್ನು ಗೆದ್ದುಕೊಂಡ. ಇವರಿಗೆ ತೀವ್ರವಾದ ವಿರೋಧಿ ರಾಣಾ ಸಂಗ್ರಾಮಸಿಂಹ. ರಜಪೂತರು ಕೆಚ್ಚಿನಿಂದ ಹೋರಾಡಿಸುವದರ ಫಲವಾಗಿ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಹಿಮ್ಮೆಟ್ಟಿ ಬೇಕಾಗಿ ಬಂದ ಬಾಬರ್ ಖನುವಾ ಎಂಬಲ್ಲಿ ನಡೆದ ಕದನದಲ್ಲಿ (1527 ಮಾರ್ಚ್ 15)ರಜಪೂತರನ್ನು ಸೋಲಿಸಿ ರಾಣಾ ಸಂಗ್ರಾಮನನ್ನು ರಣರಂಗದಿಂದ ಪಲಾಯನ ಮಾಡಿಸುವುದರಲ್ಲಿ ಯಶ್ವಸಿಯಾದ. ಇದೊಂದು ನಿರ್ಣಾಯಕ ಯುದ್ಧ. ಖನುವಾದ ಕದನ ಪಾಣಿಪತ್ತ ಕದನದ ಉದ್ದೇಶ ಪೂರೈಸಿತು. ಅನಂತರ ಮೇವಾಡವನ್ನು ಆಕ್ರಮಿಸಿ ಮಾಳವದ ಮೇದಿನೀರಾಯನನ್ನು, ಕನೋಜನ್ನು ವಶಪಡಿಸಿಕೊಂಡ. 1529 ಮೇ ತಿಂಗಳಲ್ಲಿ ಗೋಗ್ರದಲ್ಲಿ ಆಫ್‍ಘನ್ ನಾಯಕರನ್ನು ಸೋಲಿಸಿ, ಬಂಗಾಲದ ಸುಲ್ತಾನ ನಜರತ್ ಷಹನನ್ನು ಸೋಲಿಸಿದ. ಇದು ಬಾಬರ್ ಹೂಡಿದ ಅಂತಿಮ ಕದನ. ಹುಮಾಯೂನ್ ಸಮರ್ಕಂಡವನನು ಗೆದ್ದುಕೊಳ್ಳಬೇಕೆಂಬುದು ಇವನ ಇಚ್ಛೆಯಾಗಿತ್ತಾದರೂ ಆತ ಬರಿಗೈಲಿ ಹಿಂತಿರುಗಿದುದು ಇವನಿಗೆ ನಿರಾಶೆಯುಂಟುಮಾಡಿತು. ಹುಮಾಯಾನ್ ತೀವ್ರತರದ ಕಾಯಿಲೆಗೆ ತುತ್ತಾದಾಗ ಆತನ ಶುಶ್ರೂಷೆ ಮಾಡಿ ಆತನ ಕಾಯಿಲೆಯನ್ನು ತನ್ನಲ್ಲಿಗೆ ಆಹ್ವಾನಿಸಿಕೊಂಡು ಬಾಬರ್ ಅಸುನೀಗಿದ (1530 ಡಿಸೆಂಬರ್). ಬಾಳಿನುದ್ದಕ್ಕೂ ಹೋರಾಡಿತ್ತಲೇ ಬಂದ ಬಾಬರನ ಹಿಂದೂಸ್ಥಾನ ಆಳುವ ಕನಸು ನನಸಾದುದೊಂದು ಸಾಧನೆ. ರಾಜ್ಯದ ಬಹುಭಾಗ ಜಮಿನ್ದಾರರ, ಅಮೀರರ ಆಡಳಿತಕ್ಕೊಳಪಟ್ಟಿದ್ದು ಹೆಸರಿಗೆ ಮಾತ್ರ ಸಾರ್ವಭೌಮನೆನಿಸಿದ್ದ ಅನುಯಾಯಿಯಾಗಿದ್ದ ಈತ ರಣರಂಗದಲ್ಲಿ ಕ್ರೂರಿ. ತುರ್ಕಿ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ. ತನ್ನ ನೆನೆಪಿನ ವರದಿ ತೂಜುಕ್ ಇ ಬಾಬರಿಯನ್ನು ಬರೆದಿದ್ದಾನೆ. ಬಹುಮದೀಯನ್ಯಾಯವನ್ನು ಕುರಿತಂತೆ ಮುಬಯ್ಸಿನ್ ಎಂಬ ಗ್ರಂಥ ರಚಿಸಿದ್ದ.
- ಮೊಗ¯ ಅರಸರಲ್ಲಿ ಹುಮಾಯೂನ್ ದುರದೃಷ್ಟಶಾಲಿ. ಇವನ ಸೋದರರೂ ಇತರ ವಂಶಸ್ಥರೂ ಸಿಂಹಾಸನಕ್ಕೆ ಪ್ರತಿಸ್ಪರ್ಧಿಗಳಾಗಿದ್ದರು. 1530ರಿಂದ 10 ವರ್ಷಗಳ ಕಾಲ ಅವರೊಡನೆ ಸೆಣಸಬೇಕಾಯಿತು. ಆಧಿಕಾರಕ್ಕೆ ಬಂದ ಕೂಡಲೆ ಪ್ರೀತಿಯಿಂದ ಕಾಬೂಲ್ ಕಾಂದಹಾರಗಳ ಆಡಳಿತವನ್ನು ಕಾಮರಾನನಿಗೂ ಸಂಬಲ್ ಪ್ರಾಂತ್ಯವನ್ನು ಅಸ್ಕರೀಗೂ ಆಳ್ವಾರನ್ನು ಕಿರಿಯ ಸೋದರ ಹಿಂದಾಲವಿಗೂ ವಹಿಸಿದ. ಗುಜರಾತಿನ ಸುಲ್ತಾನ ಬಹದೂರ್ ಷಹ ಇವನಿಗೆ ಮೇಲಿಂದ ಮೇಲೆ ಕಿರುಕುಳಕೊಟ್ಟ. ಬಹಳ ಶ್ರಮದಿಂದ ಅವನನ್ನು ಸೋಲಿಸಿ ಚಂಪಾನೇರ್ ಕೋಟೆಯನ್ನೂ ತನ್ಮೂಲಕ ಗುಜರಾತಿನ ಬಹುಭಾಗವನ್ನೂ ಸೆರೆಹಿಡಿಯದೆ ಬಿಟ್ಟ. ಹುಮಾಯೂನ್ ಗುಜರಾತಿನಿಂದ ಕಾಲ್ತೆಗೆದ ಕೂಡಲೆ ಬಹದೂರನ ಅನುಯಾಯಿಗಳು ದಂಗೆ ಎದ್ದರು. ಅಂತಿಮವಾಗಿ ಗುಜರಾತ್ ಪುನಃ ಸ್ವತಂತ್ರವಾಯಿತು. ಬಿಹಾರದಲ್ಲಿ ಷೇರ್‍ಖಾನ್ ಆಫ್‍ಘನರ ಅಡೆತಡೆಯಿಲ್ಲದೆ ಪ್ರಬಲನಾಗಿ ಬಂಗಾಲದ ಸುಲ್ತಾನನ್ನು ಸೋಲಿಸಿ ಚುನಾರದಿಂದ ಸೂರಜಘಡದರೆಗಿನ ವಿಸ್ತಾರ ಪ್ರದೇಶದ ಒಡೆಯನಾದ. ಹುಮಾಯೂನ್ ಇದನ್ನು ತಡೆಯಲು ಯಾವ ಯತ್ನಗಳನ್ನೂ ಮಾಡಲಿಲ್ಲ. 1537ರಲ್ಲಿ ಇನ್ನೊಮ್ಮೆ ಷೇರ್‍ಖಾನ್ ಬಂಗಾಲವನ್ನು ಮುತ್ತಿದಾಗ ಹುಮಾಯೂನ್ ಅವನ ವಿರುದ್ಧ ದಂಡೆತ್ತಿದ್ದ. ಚುನಾರ್‍ಕೋಟೆ ವಶವಾದಾಗ ಅಲ್ಲಿಂದ ಮುನ್ನುಗ್ಗದೆ ವಿಜಯೋತ್ಸವಗಳಲ್ಲೇ ಈತ ಲೀನನಾದ, ಶತ್ರುಗಳನ್ನು ಸೋಲಿಸುವ ಬದಲು ಅವರೊಡನೆ ಒಪ್ಪಂದಗಳನ್ನು ಮಾಡಿಕೊಳ್ಳುವುದರಲ್ಲಿ ಈತನಿಗೆ ವಿಶೇಷ ಆಸಕ್ತಿ. ಅಂತಿಮವಾಗಿ ಬಂಗಾಲವನ್ನು ಹುಮಾಯೂನ್ ಆಕ್ರಮಿಸಿದಾಗ ಷೇರ್‍ಖಾನ್ ತಪ್ಪಿಸಿಕೊಂಡಿದ್ದ. ಗೌರ್‍ನಲ್ಲಿ ಮತ್ತೊಮ್ಮೆ ಆಫೀಮು ಸೇವನೆಯಲ್ಲಿ ಕಾಲಕಳೆದ. ಹುಮಾಯೂನ್ ಎಚ್ಚೆತ್ತಾಗ ಷೇರ್‍ಖಾನ್ ಕನೋಜ, ಚುನಾರ್, ಜೌನ್ಪುರಗಳನ್ನು ಹಿಡಿದೆಟ್ಟ. ಬಂಗಾಲದಲ್ಲಿ ಒಂದು ವಿಧದಲ್ಲಿ ಬಂದಿಯಾದ ಹುಮಾಯೂನನ ನೆರವಿಗೆ ಅವನ ಯಾವ ಸೋದರರು ಬರಲಿಲ್ಲ. ದೆಹಲಿಗೆ ಹಿಂತಿರುಗಲು ನಿರ್ಧರಿಸಿದ ಹಮಾಯುನ್ ಹಾದಿಯುದ್ದಕ್ಕೂ ಷೇರ್‍ಖಾನ್‍ನ ಆತನ ಅನುಯಾಯಿಗಳ ವಿರೋಧವನ್ನೆದುರಿಸಬೇಕಾಯಿತು. ಷೇರ್‍ಖಾನ್ ಬಂಗಾಲಕ್ಕೆ ಹಿಂತಿರುಗಿ ಅದನ್ನು ಪುನಃ ಪಡೆದುಕೊಂಡ. ಹುಮಾಯೂನ್ ಕರ್ತವ್ಯನಿರತನಾಗದೆ ಸೋದರರನ್ನು ಕ್ಷಮಿಸಿ ಅನಿಶ್ಚಿತತೆಯಿಂದ ಆಗ್ರದಲ್ಲಿ ಕಾಲವ್ಯಯ ಮಾಡಿದ. ಷೇರ್‍ಖಾನ್ ಮತ್ತೊಮ್ಮೆ ಬಂಗಾಲದಿಂದ ನುಗ್ಗಿ ಇವನನ್ನು ಸೋಲಿಸಿದ. ಆಗ್ರದಿಂದ ತಪ್ಪಿಸಿಕೊಂಡ ಹುಮಾಯೂನನ್ನು ಕಿರಿಯ ಸೋದರರು ಕಡೆಗಣಿಸಿದರು. ನೆರವಿಗಾಗಿ ಸುಮಾರು ಐದು ವರ್ಷಗಳ ಕಾಲ ಊರಿಂದೂರಿಗೆ ಅಲೆದ. ಕೊನೆಗೆ ಪರ್ಷಿಯದ ಸುಲ್ತಾನನ ಸ್ನೇಹ ಬಯಸಿದ. ಅವನಿಂದ ಅವಮಾನಿತನಾದರೂ ಅವನ ಸೈನ್ಯದ ನೆರವಿನಿಂದ ಕಾಂದಹಾರವನ್ನು ಗೆದ್ದುಕೊಂಡ. ಇದು ಇವನಿಗೆ ಇನ್ನೊಮ್ಮೆ ಸ್ಥಾನಮಾನ ನೀಡಿತು. 1545ರಲ್ಲಿ ಕಾಬೂಲನ್ನು ಗೆದ್ದುಕೊಂಡರೂ ಸೋದರ ಕಾಮ್ರಾನ್ ಇವನಿಗೆ ಸತತವಾಗಿ ತೊಂದರೆಕೊಟ್ಟ. ಹುಮಾಯೂನನ ಬೆಂಬಲಕ್ಕೆ ಸ್ಥಿರವಾಗಿ ನಿಂತವರಲ್ಲಿ ಪ್ರಮುಖ ಬೈರಾಮ್‍ಖಾನ್, 1553ರಲ್ಲಿ ಕಾಮ್ರಾನ್‍ನನ್ನು ಸೋಲಿಸಿ ಕಣ್ಣುಕೀಳಿಸಿ ಮೆಕ್ಕಯಾತ್ರೆಗೆ ಕಳುಹಿಸುವವರೆವಿಗೂ ಹುಮಾಯೂನ್ ಅಸ್ಥಿರನಾಗಿಯೇ ಇದ್ದನೆನ್ನಬೇಕು. ಈ ವೇಳೆಗೆ ದೆಹಲಿಯನ್ನು ವಶಪಡಿಸಿಕೊಂಡಿದ್ದ. ಷೇರ್‍ಷಹಸೂರ್ ಅಸುನೀಗಿದ (1545). ಹುಮಾಯೂನ್ ದೆಹಲಿಗೆ ದೆಂಡೆತ್ತಿದಾಗ ಸಿಕಂದರ್ ಷ ಆಳುತ್ತಿದ್ದ. ಬೈರಾಮ್‍ಖಾನನ ನೆರವಿನಿಂದ ಸಿಕಂದರನನ್ನು ಸರ್‍ಹಿಂದ್‍ನ ಕದನದಲ್ಲಿ ಸೋಲಿಸಿದ. ದೆಹಲಿ ಮತ್ತೊಮ್ಮೆ ಮೊಗಲರ ಕೈ ಸೇರಿತು. ಆದರೆ ಸಂಜೆಯ ಪ್ರಾರ್ಥನೆಯ ಕರೆಗೆ ಧಾವಿಸಿ ಬರುವಾಗ ಗ್ರಂಥಾಲಯದ ಮೆಟ್ಟಲುಗಳಿಂದ ಉರಳಿದ ಹುಮಾಯೂನ್ ಎಂಟುದಿನಗಳ ಅನಂತರ 1556 ಜನವರಿ 26ರಂದು ನಿಧನನಾದ. ಬಾಳಿನುದ್ದಕ್ಕೂ ದುರದೃಷ್ಟ ಶಾಲಿಯಾಗಿದ್ದ ಈತ ಉದಾರಿ. ಕೆಲವೊಮ್ಮ ಕ್ರೌರ್ಯಪ್ರದರ್ಶನ ಮಾಡಿದರೂ ಸಾಮಾನ್ಯವಾಗಿ ಮೆದುಮನಸ್ಸು. ಎಂತಲೇ ಅವಿಧೇಯ ಸೋದರರನ್ನು ಹತ್ತಿಕ್ಕುವ ಅವಕಾಶಗಳು ಬಂದಾಗಲೆಲ್ಲ ಕ್ಷಮಿಸಿ ಬಿಡುತ್ತಿದ್ದ. ನಿಧಾನಿಯಾದ ಕಾರಣ ದೊರೆತ ಅವಕಾಶವನ್ನು ಒಡನೆ ಉಪಯೋಗಿಸಿಕೊಳ್ಳಲಿಲ್ಲ.
- ಸೂರ್ ಮನೆತನದ ಷೇರ್‍ಖಾನ್ 1540ರಲ್ಲಿ ದೆಹಲಿಯ ಸುಲ್ತಾನನಾಗಿ ಕೇವಲ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಇವನ ಕಾರ್ಯದಕ್ಷತೆ, ಆಡಳಿತ ವೈಖರಿಗಳು ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ಇವನಿಗೆ ಪ್ರತಿಷ್ಠಿತ ಸ್ಥಾನ ದೋರಿಕಿಸಿ ಕೊಟ್ಟಿವೆ. ಇವನ ಮೂಲಹೆಸರು ಫರೀದ್ ಆಫ್‍ಘನ್, ಇವನ ತಾತ ಇಬ್ರಾಹಿಮ್ ಸುಲ್ತಾನ್ ಬಹಲೂಲ್ ಲೋದಿಯ ಕಾಲದಲ್ಲಿ ವ್ಯಾಪಾರಕ್ಕೆಂದು ಭಾರತಕ್ಕೆ ಬಂದನಾದರೂ ಹೆಚ್ಚೇನೂ ಯಶಸ್ಸು ಲಭಿಸದೆ 40 ಕುದರೆಗಳ ಸರದಾರನಾಗಿ ಕೆಲವು ಗ್ರಾಮಗಳನ್ನು ಜಹಗೀರಾಗಿ ಪಡೆದ. ಇವನ ಮಗ ಹಸನನ ಮೊದಲ ಪತ್ನಿಯಲ್ಲಿ ಜನಿಸಿದ ಫರೀದ್ (ಸುಮಾರು 1486) ತಂದೆಯನಿರ್ಲಕ್ಷ್ಯ ಮತ್ತು ಮಲತಾಯಿಯ ಅನಾದರಣೆಯ ಕಾರಣವಾಗಿ ಇವನು ಸಸರಾಮಿನಿಂದ ಜೌನ್ಪುರಕ್ಕೆ ತೆರಳಬೇಕಾಯಿತು. ಈ ನಗರ ಮಹಮದೀಯ ಸಂಸ್ಕøತಿಯ ಕೇಂದ್ರವಾಗಿತ್ತು. ಇಲ್ಲಿಯ ಮದರಸದಲ್ಲಿ ಅರಾಬಿಕ್, ಪರ್ಷಿಯನ್ ಭಾಷೆಗಳನ್ನೂ ಬಹುಶಃ ಹಿಂದಿ ಭಾಷೆ ಮತ್ತು ಗಣಿತವನ್ನೂ ಇವನು ಕಲಿತ. ಈ ವೇಳೆಗೆ ಸಸರಾಮ್ ಮತ್ತು ಖವಾಸ್ಸ್‍ಪುರತಾಂಡ ಪ್ರಾಂತ್ಯಗಳ ಅಧಿಕಾರಿಯಾಗಿ ಹಸನ್ ನೇಮಿತನಾಗಿ, ತನ್ನಮಗನನ್ನೂ ತನ್ನ ಪ್ರತಿನಿಧಿಯಾಗಿ ಅವುಗಳ ಆಡಳಿತ ನಿರ್ವಹಿಸಲು ಬರಮಾಡಿಕೊಂಡ. ಇಲ್ಲಿ ದಕ್ಷತೆಯಿಂದ ಆಡಳಿತ ನಡೆಸಿದ ಫರೀದ್ ಮತ್ತೊಮ್ಮೆ ಮಲತಾಯಿಯ ಅವಕೃಪೆಗೊಳಗಾಗಿ ಕೆಲಸ ತ್ಯಜಿಸಿ ಆಗ್ರಕ್ಕೆ ತೆರಳಿದ. ದೌಲತ್‍ಖಾನನ ನೆರವಿನಿಂದ ತಂದೆಯ ಮರಣಾನಂತರ ಸಸಾರಾಮ್‍ನ ಆಡಳಿತದ ಹೊಣೆಗಾರಿಕೆಯನ್ನು ಪಡೆದರೂ ಮಲಸೋದರನ ಕಾಟ ನಿವಾರಿಸಲು ದಕ್ಷಿಣ ಬಿಹಾರದಲ್ಲಿ ಸುಲ್ತಾನ್ ಮಹಮ್ಮದ್ ಎಂಬ ಬಿರುದಿನಿಂದ ಸ್ವತಂತ್ರವಾಗಿ ಆಳತೊಡಗಿದ್ದ ಬಿಹಾರ್‍ಖಾನ್ ಲೋಹಾನಿಯಲ್ಲಿ ಕೆಲಸಕ್ಕೆ ಸೇರಿದ. ಸ್ವಸಾಮಥ್ರ್ಯದಿಂದ ದಕ್ಷಿಣಬಿಹಾರದ ಉಪಪ್ರಾಂತ್ಯಾಧಿಕಾರಿಯಾದ (ವಕೀಲ). ಈತ ಸುಲ್ತಾನನ ಕಿರಿಯ ಮಗ ಜಲಾಲ್ ಖಾನನ ಅತಲಿಕ್‍ನಾಗಿಯೂ (ವಿದ್ಯಾಗುರು) ಕಾರ್ಯನಿರ್ವಹಿಸಿದ. ಮಲತಾಯಿ ಮತ್ತು ಸೋದರರು ಇವನ ಜಹಗೀರನ ಹಕ್ಕು ರದ್ದಾಗಿಸುವಲ್ಲಿ ಯಶಸ್ವಿಯಾದರು. ಈತ ಪುನಃ ಸಸಾರಮ್ ತ್ಯಜಿಸಿ ಬಾಬರನ ಬಳಿಸಾಗಿ ಅವನ ನೆರವಿನಿಂದ ತನ್ನ ಜಾಗೀರನ್ನು ಪಡೆದ. ಸುಲ್ತಾನ್ ಮಹಮ್ಮದ್ ಗತಿಸಿದಾಗ ಬಾಬರನ ಮಧ್ಯಪ್ರವೇಶದಿಂದ ಕಿರಿಯನಾದ ಜಲಾಲ್ ಅಧಿಕಾರದಲ್ಲಿ ನಿಯೋಜಿತನಾಗಿ ತಾಯಿ ದೂದು ಪ್ರತಿನಿಧಿಯಾದಳು. ಆದರೆ ಫರೀದನನ್ನು ಆಗ ನಾಇಬ್ ಆಗಿ (ಉಪಪ್ರಾಂತ್ಯಾಧಿಕಾರಿ) ನೇಮಿಸಲಾಯಿತು. (1529). ಬೇಟೆಯ ಸಮಯದಲ್ಲಿ ಒಮ್ಮೆ ಒಬ್ಬಂಟಿಗನಾಗಿ ಹುಲಿಯೊಂದನ್ನು ಕೊಂದನೆಂದು ಈತನಿಗೆ ಷೇರ್‍ಖಾನ್ ಎಂದು ಸುಲ್ತಾನ ಮಹಮ್ಮದ್ ಬಿರುದು ನೀಡಿದ್ದ. ಈ ಸ್ವತಂತ್ರವಾಗಿ ಅಧಿಕಾರವನ್ನೆಲ್ಲ ತನ್ನದಾಗಿಸಿಕೊಳ್ಳಲು ಹವಣಿಸಿದ. ದೂದು ಸತ್ತಾಗ (1530) ಅಧಿಕಾರದ ಪೂರ್ಣಹೊಣೆಗಾರಿಕೆ ಇವನದಾಯಿತು.
- ವಿಸ್ತರಿಸುತ್ತಿದ್ದ ಇವನ ಅಧಿಕಾರವನ್ನು ತಡೆಯಲು ಲೋಹಾನಿಗಳು ಬಂಗಾಲದ ಸುಲ್ತಾನನ್ನು ಪ್ರಚೋದಿಸಿದರು. ಆದರೆ ಸೂರಜಗಡದ ಕದನದಲ್ಲಿ ಷೇರ್‍ಖಾನ್ ಗೆದ್ದ (1534). ಜೌಸಾದಲ್ಲಿ (1539) ಹುಮಾಯೂನನನ್ನು ಸೋಲಿಸಿ ಬಂಗಾಲದವನ್ನು ವಶಪಡಿಸಿಕೊಂಡ. ಅನಂತರ ಮತ್ತೊಮ್ಮೆ (1540) ಗಂಗಾ (ಅಥವಾ ಬಿಲ್ಗ್ರಾಮ್) ಕದನದಲ್ಲಿ ಹುಮಾಯೂನನ ಸೈನ್ಯವನ್ನು ಚೆಲ್ಲಾಪಿಲ್ಲಿಯಾಗಿ ಚದರಿಸಿದ. ಇದರಿಂದ ಹುಮಾಯುನ್ ಪಲಾಯನ ಹೇಳಬೇಕಾಯಿತು. ಈಗ ದೆಹಲಿಯ ಸುಲ್ತಾನನೆಂದು ಘೋಷಿಸಿಕೊಂಡ ಷೇರ್‍ಷಹ ಕ್ರಮೇಣ ಬಿಹಾರ, ಬಂಗಾಲ, ಮಾಲವ, ಭೋಪಾಲ, ಮಾರವಾಡಗಳನ್ನೂ ಒಂದೊಂದಾಗಿ ವಶಪಡಿಸಿಕೊಂಡ. ಆದರೆ ಬುಂದೇಲ್ ಖಂಡದ ಆಕ್ರಮಣದ ಸಮಯದಲ್ಲಿ ಕೌಲಿಂಜರ್ ಕೋಟೆ ಮುತ್ತಿದ್ದಾಗ ಉಂಟಾದ ಆಸ್ಫೋಟದಲ್ಲಿ ಸಿಲುಕಿಕೊಂಡ. ಈತ 1545 ಮೇ 222 ರಂದು ಗತಿಸಿದ. ಇಷ್ಟೆಲ್ಲ ಕದನಗಳ ನಡುವೆಯೂ ತನ್ನ ರಾಜ್ಯದ ಆಡಳಿತ ಸುವ್ಯಸ್ಥಿತಗೊಳಿಸಿದ ಖ್ಯಾತಿ ಇವನದು. ರಾಜ್ಯವನ್ನು ಸರ್ಕಾರಗಳೆಂಬ ಪ್ರಾಂತ್ಯಗಳಾಗಿ ವಿಂಗಡಿಸಿ ಒಂದೊಂದಕ್ಕೂ ಒಬ್ಬೊಬ್ಬ ಷೇಖ್‍ದಾರ್, ಮುನ್ಸೀಫ್ ಮತ್ತು ಖಾಜಿಗಳನ್ನು ನೇಮಿಸಿದ. ಒಂದೊಂದು ಸರ್ಕಾರ ಹಲವು ಘರ್ಗನಾಗಳನ್ನೊಳಗೊಂಡಿದ್ದು ಅವುಗಳಿಗೂ ಒಬ್ಬೊಬ್ಬ ಶಿಕ್‍ಕಾರ್, ಅಮೀನ್ ಹಾಗೂ ಪೋತ್‍ದಾರರನ್ನು (ಖಜಾಂಚಿ) ನೇಮಿಸಿದ. ಈ ಘರ್ಗನಾ ಮತ್ತು ಪ್ರಾಂತ್ಯಗಳ ಅಧಿಕಾರಿಗಳು ಆಗಾಗ ವರ್ಗಾಯಿಸಲ್ಪಡುತ್ತಿದ್ದರು. ಭೂಕಂದಾಯ ಪದ್ಧತಿ ವ್ಯವಸ್ಥಿತಗೊಳಿಸಲು ಭೂಮಿಯನ್ನು ಅಳೆಸುವ ಕಾರ್ಯ ಆರಂಭಿಸಿ ಯಶಸ್ವಿಯಾಗಿ ಮುಗಿಸಿದ. ಭೂಕಂದಾಯವನ್ನು ಭೂಮಿಯ ಫಲವಂತಿಕೆಯ ಹಾಗೂ ಫಸಲಿನ ಆಧಾರದ ಮೇಲೆ ನಿಗದಿಗೊಳಿಸುವ ಪದ್ಧತಿ ಅವಲಂಬಿಸಿದ. ರೈತನೊಡನೆ ಆ ಸಂಬಂಧದಲ್ಲಿ ಕಬೂಲಿಯತ್ತ ಪಡೆದು ಅವನಿಗೆ ಪಟ್ಟಾ ಕೊಡುವ ವ್ಯವಸ್ಥೆ ಮಾಡಿದ. ಈಜಿಯಾ, ಝಕತ್ ಹಾಗೂ ಇತರ ತೆರಿಗೆಗಳು ಆರ್ಥಿಕ ಸಂಪನ್ಮೂಲಗಳಾದವು. ನಾಣ್ಯಪದ್ಧತಿಯಲ್ಲಿ ಯುಕ್ತ ಬದಲಾವಣೆ ತಂದು ಬೇರೆ ಬೇರೆ ಲೋಹಗಳ ನಾಣ್ಯಗಳ ಪ್ರಮಾಣಗಳನ್ನು ನಿರ್ಧರಿಸಿದ. ಪೊಲೀಸ್ ಇಲಾಖೆ ಹಾಗೂ ಅಂಚೆ ವ್ಯವಸ್ಥೆಗಳತ್ತ ಗಮನಹರಿಸಿ ಆವಶ್ಯಕ ಸುಧಾರಣೆಗಳನ್ನು ಮಾಡಿದ. ರಾಜಮÁರ್ಗಗಳನ್ನು ನಿರ್ಮಿಸಿ ಸೈನ್ಯದ ಶೀಘ್ರಗತಿ ವಾರ್ತೆಗಳ ತ್ವರಿತ ವಿನಿಮಯ ಮತ್ತು ಪ್ರಜೆಗಳ ಪ್ರಯಾಣ ಇವುಗಳಿಗೆ ಸೌಕರ್ಯಗಳನ್ನೇರ್ಪಡಿಸಿದ ವಿಫಲನಾದ. 1554ರಲ್ಲಿ ಜಲಾಲನ ಅಪ್ರಾಪ್ತವಯಸ್ಸಿನ ಮಗ ಫಿರೋಜ್ ಅಧಿಕಾರಕ್ಕೆ ಬಂದನಾದರೂ ಆತನ ಸೋದರ ಮಾವ ಮುಬಾರಿಜ್ ಖಾನ್ ಅವನನ್ನು ಕೊಂದು ಸ್ವತಃ ಮಹಮ್ಮದ್ ಆದಿಲ್ ಷಹನೆಂದು ಕರೆದುಕೊಂಡು ಪಟ್ಟಕ್ಕೆ ಬಂದ. ಆದರೆ ಈತನ ಅದಕ್ಷತೆಯ ಪರಿಣಾಮವಾಗಿ ರಾಜ್ಯವ್ಯವಸ್ಥೆ ಕುಸಿಯಿತು. ಹುಮಾಯಾನ್ ಮತ್ತೊಮ್ಮೆ ಭಾರತಕ್ಕೆ ಹಿಂತಿರುಗುವ ಸನ್ನಾಹದಲ್ಲಿದ್ದು 1556ರ ಜನವರಿಯಲ್ಲಿ ಮರಣ ಹೊಂದಿದ. ಮಗ ಅಕ್ಬರ್ ತಂದೆಯ ಅಧಿಕಾರಕ್ಕೆ ಬಂದ. ಆದಿಲ್‍ಷಹನ ನೆಚ್ಚಿನ ಆಧಿಕಾರಿ ಹೇಮು ಅಕ್ಬರನನ್ನು ಎದುರಿಸಿದ. ಈತ ಬಹಳ ದಕ್ಷನಾಗಿದ್ದ. ಕ್ರಮೇಣ ಆದಿಲ್ ಷಹನನ್ನು ಸರಿಸಿ ರಾಜಾವಿಕ್ರಮಾದಿತ್ಯನೆಂಬ ಹೆಸರಿನಿಂದ ತಾನೇ ಆಳಲು ಹವಣಿಸಿದ್ದ. ಆದರೆ 1556ರಲ್ಲಿ ನಡೆದ ಪಾಣಿಪತ್ತ ಕದನದಲ್ಲಿ ಈತ ಸೋತು ಕೊಲ್ಲಲ್ಪಟ್ಟ.
- ಈ ಘಟನೆಗಳ ಪರಿಣಾಮವಾಗಿ ಅಕ್ಬರ್ ಅಧಿಕಾರಕ್ಕೆ ಬರುವುದು ಸಾಧ್ಯವಾಯಿತು. ಸಿಂಹಾಸನ ಏರಿದಾಗ ಈತನಿಗೆ ಕೇವಲ 13 ವರ್ಷ. ಆದ್ದರಿಂದ ಪ್ರತಿನಿಧಿಯಾಗಿ ಬೈರಾಮ್‍ಖಾನ್ ನಾಲ್ಕು ವರ್ಷ ಆಡಳಿತ ನಿರ್ವಹಿಸಿದ. ಆಡಳಿತದಲ್ಲಿ ಕಟ್ಟುನಿಟ್ಟಾಗಿದ್ದರೂ ಈತ ಸರ್ಮಾಧಿಕಾರಿಯಂತೆ ವರ್ತಿಸುತ್ತಿದ್ದ. ಅಧಿಕಾರದಾಹ, ಮುಂಗೋಪ, ಕಟು ನಡುವಳಿಕೆಗಳು ಇವನಿಗೆ ವಿರೋಧಿಗಳನ್ನು ಸೃಷ್ಟಿಸಿತು. ವಯಸ್ಸಿಗೆ ಬರುತ್ತಿದ್ದ ಅಕ್ಬರ್ ಸಹ ಈತನ ಅತಿಯಾದ ಹಸ್ತಕ್ಷೇಪವನ್ನು ಸಹಿಸಲಿಲ್ಲ. ರಾಜಮಾತೆ ಹಮೀದಾಬೇಗಮ್, ಅಕ್ಬರನ ಬಾಲ್ಯದಲ್ಲಿ ರಕ್ಷಣೆ ನೀಡಿದ ದಾದಿ ಮಾಹಮ್ ಅನಗ ಹಾಗೂ ಇತರರು ಬೈರಾಮ್‍ಖಾನನ ವಿರೋಧಿಗಳಾಗಿದ್ದು ಅವನನ್ನು ಅಧಿಕಾರದಿಂದ ಹೊರದೂಡುವಲ್ಲಿ ವಿಶೇಷ ಪಾತ್ರವಹಿಸಿದರು. ಸ್ಥಾನಭ್ರಷ್ಟ ಬೈರಾಮ್‍ಖಾನ್ ಮೆಕ್ಕಾಗ ಯಾತ್ರೆ ಹೊರಟಿದ್ದಾಗ ಪಾಟ್ನದಲ್ಲಿ ಕೊಲ್ಲಲ್ಪಟ್ಟ. ಆತ್ಗಖಾನ ನೂತನ ಪ್ರಧಾನಿಯಾಗಿ ನೇಮಕಗೊಂಡ ಇದು ಮಾಹಮ್ ಅನಗ ಹಾಗೂ ಇತರರಿಗೆ ಅಸಮಾಧಾನ ಉಂಟುಮಾಡಿತು. ಆದರೆ ರಾಜಕೀಯ ಸೂತ್ರಗಳನ್ನು ಸ್ವತಃ ತನ್ನ ಅಧೀನದಲ್ಲಿಟ್ಟು ಕೊಳ್ಳಬೇಕೆಂದು ತೀರ್ಮಾನಿಸಿದ್ದ ಅಕ್ಬರ ಮುಂದಿನ ಒಂದೆರಡು ವರ್ಷಗಳಲ್ಲಿ ಕಾನ್ ಜಮಾನ್ ಮುಂತಾದವರಲ್ಲಿ ಶಿಕ್ಷಿಸಿದ. ಕೆಲವರು ಮರಣಕ್ಕೆ ಈಡಾದರು. ಇದರಿಂದ ಅಂತಃಪುರ ರಾಜಕೀಯಕ್ಕೆ ತೆರೆಬಿತ್ತು.
- ಅನಂತರ ರಾಜ್ಯವಿಸ್ತರಿಸುವ ಮತ್ತು ಸಮಗ್ರ ಭಾರತ ಆಳುವ ಉದ್ದೇಶದಿಂದ ಅಕ್ಬರ್ ಹಲವಾರು ದಂಡಯಾತ್ರೆಗಳನ್ನು ಕೈಗೊಂಡ, ವಲಯದಲ್ಲಿ ಆಳುತ್ತಿದ್ದ ಸಂಗೀತಜ್ಞ ಬಾಜ್ ಬಹದೂರ್ ಅತಿಶ್ರಮದಿಂದ ಅಕ್ಬರನನ್ನು ತಡೆದು ಅಂತಿಮವಾಗಿ ಸೋರು ಚಿತ್ತೂರಿಗೆ ಓಡಿಹೋದ. ಅಜ್ಮೀರಿನ ಖ್ವಜಾ ಮುಯಿನುದ್ದೀನ್ ಚಿಷ್ಟಿಯ ಸಮಾಧಿಗೆ ಗೌರವ ಸಲ್ಲಿಸಲು ಹೋಗಿ ಹಿಂತಿರುಗುವಾಗ (1552) ಅಂಬೇರಿನ ರಾಜಾ ಬಿಹಾರಿಮಲ್ಲನ ಮಗಳನ್ನು ಅಕ್ಬರ್ ಲಗ್ನವಾದ ಬಿಹಾರಿಮಲ್ಲನ ಉತ್ತಾರಾಧಿಕಾರಿಯೂ ರಾಜಾ ಭಗವಾನ್ ಕಾಸನ ದತ್ತುಪುತ್ರನೂ ಆದ ಮಾನ್ ಸಿಂಹನನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡ. 1564ರಲ್ಲಿ ಅಸಫ್‍ಖಾನ್ ಗೊಂಡ್ವಾನ ರಾಜ್ಯದ ಮೇಲೆ ದಾಳಿಮಾಡಿ ಅಲ್ಲಿ ಆಳುತ್ತಿದ್ದ ಚಂದೇಲ್ ವಂಶದ ರಾಣೀದುರ್ಗಾವತಿಯನ್ನು ಸೋಲಿಸಿದ. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಸೋದರಿ ಕಮಲಾವತಿಯನ್ನು ಅಕ್ಬರನ ಅಂತಃಪುರಕ್ಕೆ ಕಳುಹಿಸಲಾಯಿತು. 1562ರ ಸುಮಾರಿಗೆ ಉಜ್ಬೆಗ್ ಪಂಗಡಕ್ಕೆ ಸೇರಿದ ಕಾನ್, ಜಮಾನ್, ಬಹದೂರ್‍ಖಾನ್, ಇಸ್ಕಂದರ್ ಷಹ ಮುಂತಾದವರು ಅಕ್ಬರನ ಉದಾರ ಧಾರ್ಮಿಕ ನೀತಿ ವಿರೋಧಿಸಿ ದಂಗೆ ಎದ್ದರು. ಅವರ ಬಲವನ್ನು 1567ರಲ್ಲಿ ಸಂಪೂರ್ಣವಾಗಿ ಅಡಗಿಸಿದ. ಅದೇ ವರ್ಷ ಮೇವಾಡ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಚಿತ್ತೂರು ಕೋಟೆ ಮುತ್ತಿದ. ಆದರೆ ಜೈಮಲ್ಲನೂ ಕೈಲ್ವಾದ ಪಟ್ಟಾ ಸಹ ತೀವ್ರವಾಗಿ ಹೋರಾಡಿದರು. 1567ರ ಅಕ್ಟೋಬರಿನಲ್ಲಿ ಆರಂಭವಾದ ಮುತ್ತಿಗೆ ಐದು ತಿಂಗಳುಗಳ ಅನಂತರ ಯಶಸ್ವಿಯಾಯಿತು. ಆದರೆ ಸಹಸ್ರಾರು ಸಂಖ್ಯೆಯಲ್ಲಿ ರಜಪೂತರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು. ಈ ಇಬ್ಬರು ನಾಯಕರ ಪ್ರತಿಮೆಗಳನ್ನು ಅಕ್ಬರ ಆಗ್ರದ ಕೋಟೆಯಲ್ಲಿ ಸ್ಥಾಪಿಸಿದ. 1569ರಲ್ಲಿ ರಣಥಂಬೋರ್ ಕೋಟೆ, 1520ರಲ್ಲಿ ಜೋಧಪುರ, ಬಿಕಾನೀರ್, ಜೈಸಲ್ಮೇರಗಳು ಅವನ ವಶವಾದವು. ಕೆಲವೂ ಹಿಂದೂ ನಾಯಕರು ಆತನೊಂದಿಗೆ ರಕ್ತ ಸಂಬಂಧ ಬೆಳೆಸಿದರು. 1572-73ರಲಿ ಗುಜರಾತಿನ ವಿರುದ್ಧ ಕಾರ್ಯಾಚರಣೆ ಮಾಡಿ ಅಹಮದಾಬಾದ್, ಸೂರತ್, ಪಾಟ್ನ ಮುಂತಾದ ನಗರಗಳನ್ನು ವಶಪಡಿಸಿಕೊಂಡು ಗುಜರಾತ್ ಪ್ರಾಂತ್ಯಕ್ಕೆ ಅಧಿಕಾರಿಯೊಬ್ಬನನ್ನು ನೇಮಿಸಿದ. ಬಂಗಾಲದಲ್ಲಿ ಸುಲೇಮಾನ್ ಅಕ್ಬರನ ಹೆಸರಿನಲ್ಲಿ ರಾಜ್ಯ ಆಳುತ್ತಿದ್ದು ಆತನ ಅನಂತರ ಅಧಿಕಾರಕ್ಕೆ ಬಂದ ಕಿರಿಯ ಮಗ ದಾಊದ್ ಸ್ವತಂತ್ರನಾಗಲು ಹವಣಿಸಿದಾಗ ಮೊಗಲರ ಸೈನ್ಯವನ್ನು ಎದುರಿಸಬೇಕಾಯಿತು. ಪಾಟ್ನ ಕೋಟೆಯಲ್ಲಿ ಅಡಗಿದ್ದ ದಾಊದನನ್ನು ಹೊರದೂಡಿ ಬಂಗಾಲವನ್ನು ವಶಪಡಿಸಿಕೊಳ್ಳಲಾಯಿತು. ಅಕ್ಬರ್ ಎದುರಿಸಿದ ಪ್ರಬಲವಿರೋಧಿಗಳಲ್ಲಿ ಮೇವಾಡದ ರಾಣಾಸಿಂಗ್ರಮಸಿಂಹದ ಮೊಮ್ಮಗ ರಾಣಾ ಪ್ರತಾಪಸಿಂಹ ಪ್ರಮುಖ ಉದಯಪುರ, ಕುಂಭಲ್‍ಗಢ, ಗೋಗುಂದಗಳ ಸ್ವಾಮಿತ್ತ ಪಡೆದಿದ್ದ ಈತನನ್ನು ಅಡಗಿಸಲು ಚಕ್ರವರ್ತಿ ಬಹಳ ಶ್ರಮಿಸಬೇಕಾಯಿತು. ಹಳದೀಘಾಟ್ ಕನದದಲ್ಲಿ ಆತ ಸೋತರೂ ತಪ್ಪಿಸಿಕೊಂಡು (1572) ಗೆರಿಲ್ಲ ಕದನಗಳನ್ನು ಹೂಡಿ ಮೊಗಲರ ಸೈನ್ಯವನ್ನು ದಣಿಸಿ ತನ್ನ ಪ್ರಾಂತ್ಯವನ್ನು ಬಲುಮಟ್ಟಿಗೆ ಪುನಃ ವಶಪಡಿಸಿಕೊಂಡ. ಪ್ರತಾಪಸಿಂಹ 1597ರಲ್ಲಿ ಅಸುನೀಗಿದ. ಈತನ ಉತ್ತರಾಧಿಕಾರಿ ಅಮರಸಿಂಹನನ್ನು ಮಾನಸಿಂಹ 1600ರಲ್ಲಿ ಸೋಲಿಸಿದನಾದರೂ ಆ ವಿಜಯವನ್ನು ರೂಢಿಸಿಕೊಳ್ಳಲಾಗಲಿಲ್ಲ.
- ಈ ಮಧ್ಯೆ ಅಕ್ಬರ್ ಪಾಲಿಸಿದ ಹೊಸ ಧಾರ್ಮಿಕ ನೀತಿ ಮಹಮದೀಯರು ಅವನನ್ನು ಪಾಷಂಡಿ ಎಂದು ಪರಿಗಣಿಸುವಂತೆ ಮಾಡಿತು. ಅದರ ಪರಿಣಾಮ ಕಾಬೂಲ್, ಗುಜರಾತ್ ಬಂಗಾಲಗಳಲ್ಲಿ ಅಕ್ಬರನ ವಿರುದ್ಧ ದಂಗೆಗಳೆದ್ದುವು. ಇವನ್ನು ಸಂಪೂರ್ಣವಾಗಿ ಅಡಗಿಸಲು ಅಕ್ಬರನಿಗೆ ಕೆಲವು ವರ್ಷಗಳೇ ಹಿಡಿದವು. ಆದರೆ ಇದರಿಂದ ಇದರಿಂದ ಕಾಬೂಲ್, ಬಲೂಚಿಸ್ತಾನ, ಕಾಂದಹಾರಗಳು ಇವನ ರಾಜ್ಯದಲ್ಲಿ ಸೇರಿದವು. ಸ್ವತಂತ್ರವಾಗಿದ್ದ ಸಿಂಧ್ ಒರಿಸ್ಸ ಪ್ರಾಂತ್ಯಗಳೂ ಸಹ ಇವನ ಅಧೀನಕ್ಕೆ ಬಂದುವು. 1585ರಲ್ಲಿ ಆರಂಭವಾದ ಕಾಶ್ಮೀರದ ಮೇಲಿನ ದಾಳಿಗಳು 1589ರಲ್ಲಿ ಅಂತ್ಯಗೊಂಡವು. 1585ರಲ್ಲಿಯೇ ಅಕ್ಬರ್ ದಕ್ಬನ್ ಪ್ರದೇಶದ ಮೇಲೂ ಕಣ್ಣುಹಾಯಿಸಿದ. ಅಹಮದ್‍ನಗರದ ಮುರ್ತಜ ನಿಜಾಮಷಹನ ವಿರುದ್ಧ ಮೊದಲು ದಂಡೆತ್ತಿದ. ಯಶಸ್ಸು ದೊರಕಲಿಲ್ಲ. ಮುರ್ತಜ ಸೋದರ ಬುರ್ಹಾನ್ ಅಕ್ಬರನ ಆಶ್ರಯದಲ್ಲಿದ್ದು ಅವನ ಅಪ್ಪಣೆ ಪಡೆದು ಅಹಮದ್‍ನಗರದ ಸುಲ್ತಾನನಾದ (1591). ಆದರೆ ಸ್ವತಂತ್ರನೆಂದು ಘೋಷಿಸಿಕೊಂಡ. ಅಹಮದ್‍ನಗರವನ್ನು ಅಂತಿಮವಾಗಿ ಗೆದ್ದುಕೊಳ್ಳುವ ಮೊದಲು ಅಕ್ಬರ ಚಾಂದಸುಲ್ತಾನಳನ್ನು (ಬೀಬಿ) ಸೋಲಿಸಬೇಕಾಯಿತು. ಇರದ ಜೊತೆಯಲ್ಲಿ ಖಾನ್ ದೇಶ, ಬೀರಾರಗಳು ಅಕ್ಬರನ ಪಾಲಾದವು. ಬಿಜಾಪುರ, ಬೀದರ್, ಗೊಲ್ಕೊಂಡಗಳನ್ನು ಗೆದ್ದುಕೊಳ್ಳುವ ಮೊದಲೇ ರಾಜಕುಮಾರ ರಾಜಧಾನಿಯಲ್ಲಿ ದಂಗೆ ಎದ್ದು ಅಕ್ಬರ್ ದಖ್ಖನ್‍ನಿಂದ ಕಾಲ್ತೆಗೆಯಬೇಕಾಯಿತು. ಸಲೀಮನನ್ನು ಸರಿಯಾದ ದಾರಿಗೆ ತರಲುಹೋದ ಅಕ್ಬರನ ಪ್ರಧಾನಿ ಅಬುಲ್ ಫಜಲ್ ಕೊಲ್ಲಲ್ಪಟ್ಟ (1602). ಈ ವೇಳೆಗಾಗಲೇ ಚಕ್ರವರ್ತಿಯ ಆತ್ಮೀಯರಾದ ಬೀರಬಲ್, ಭಗವಾನ್‍ದಾಸ್, ತೋದರಮಲ್, ಷೇಕ್‍ಮುಬಾರಕ್, ಆಸ್ಥಾನಕವಿ ಫೈಜಿ ಮುಂತಾದವರು ದಿವಂಗತರಾಗಿದ್ದರು. ಇದರಿಂದ ಅಕ್ಬರನಿಗೆ ದೊಡ್ಡ ಮಾನಸಿಕ ಆಘಾತವಾಯಿತು. ಪತ್ನಿ ಸಲೀಮಾ ಸುಲ್ತಾನಳು ಅಲಹಾಬಾದಿಗೆ ತೆರಳಿ ಸಲೀಮನನ್ನು ಸಮಾಧಾನಪಡಿಸಿ ಚಕ್ರವರ್ತಿಯ ಸಮೀಪಕ್ಕೆ ತಂದಳು. ಅಕ್ಬರ್ ಮಗನನ್ನು ಕ್ಷಮಿಸಿದ. 1605ರಲ್ಲಿ ಅಕ್ಬರ್ ಮರಣಹೊಂದಿದ.
- ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಇತಿಹಾಸದಲ್ಲಿಯೇ ಅಕ್ಬರನಿಗೆ ವಿಶಿಷ್ಟ ಸ್ಥಾನವಿದೆ. ದಕ್ಷತೆಯಲ್ಲಿ, ಚಿಂತೆಯಲ್ಲಿ, ಆಡಳಿತದಲ್ಲಿ, ಕಲಾಭಿರುಚಿಗಳಲ್ಲಿ ಸಮಕಾಲೀನ ಅರಸರೆಲ್ಲರನ್ನೂ ಮೀರಿಸಿದ ವ್ಯಕ್ತಿತ್ವ ಇವನದು. ದಕ್ಷನೇನಾನಿ, ಆಡಳಿತಗಾರ ಹಿತಮಿತ ಭಾಷಿ, ಸಾಮಾನ್ಯವಾಗಿ ಉದಾರಿಯಾದರೂ ಕೆಲವೊಮ್ಮೆ ಇವನು ಕ್ರೂರಿಯೂ ಆಗಿದ್ದ ನಿದರ್ಶನಗಳು ಇವೆ. ಪ್ರಜೆಗಳನ್ನು ತನ್ನ ಮಕ್ಕಳಂತೆ ಕಂಡ. ಈತ ದೈವಭಕ್ತ. ವಿಶ್ವಭ್ರಾತೃತ್ವ. ಸರ್ಮಧರ್ಮ ಸಹಿಷ್ಣುತೆಗಳಲ್ಲಿ ವಿಶೇಷವಾದ ನಂಬುಗೆ ಇಟ್ಟಿದ್ದ ಈತ ದಿನ್-ಎ-ಇಲಾಹಿ ಎಂಬ ಹೊಸ ಧಾರ್ಮಿಕ ಪಂಥವನ್ನೇ ಆರಂಭಿಸಿದ. ಇದರಿಂದ ಸಮಾನ ಧರ್ಮೀಯರ ಟೀಕೆಗೆ ಗುರಿಯಾದ, ತೋದರಮಲ್ಲ, ಬೀರಬಲ್ ಮುಂತಾದವರ ಸಹಕಾರದಿಂದ ಷೇರ್ ಷಹ ಅನುಸರಿಸಿದ್ದ ಆಡಳಿತ ಪದ್ಧತಿಯನ್ನು ಸುವ್ಯವಸ್ಥಿತಗೊಳಿಸಿದ. ಚಿತ್ರಕಲೆ, ವಾಸ್ತುಶಿಲ್ಪಗಳಲ್ಲಿ ಮೊಗಲರ ಶೈಲಿ ಎಂಬುದೊಂದು ಈಗ ಕಾಣಿಸಿಕೊಂಡಿತು. ಆಗ್ರದ ಕೋಟೆ, ದೆಹಲಿ ದ್ವಾರ, ಫತೇಪುರ ಸಿಕ್ರಿಯಲ್ಲಿ ನಿರ್ಮಿಸಿದ ಹೊಸ ರಾಜಧಾನಿ ಮೊಗಲ್ ವಾಸ್ತುಶಿಲ್ಪಕ್ಕೂ ರಜಮ್‍ನಾಮಾ ರಾಮಾಯಣ, ಅಕ್ಬರ್‍ನಾಮಾ ಇತ್ಯಾದಿ ಹಸ್ತಪ್ರತಿಗಳಲ್ಲಿ ಬರೆಸಲ್ಪಟ್ಟ ವರ್ಣಚಿತ್ರಗಳು ಚಿತ್ರಕಲೆಗೂ ಸಾಕ್ಷಿಗಳಾಗಿವೆ.
- ಸಲೀಮ್ 1569ರಲಿ ಜನಿಸಿದ. 15ನೆಯ ವರ್ಷದಲ್ಲಿಯೇ ರಾಜಾಭಗವಾನ್ ದಾಸನ ಮಗಳು ಮಾನ್‍ಬಾಯಿಯನನ್ನು ಲಗ್ನವಾಗಿದ್ದ. 20 ವರ್ಷಗಳ ದಾಂಪತ್ಯದ ಅನಂತರ ಆಕೆ ಅಸುನೀಗಿದಳು (1604). ಮರುವರ್ಷ ಪಟ್ಟಕ್ಕೆ ಬಂದ ಈತ ಜಹಾಂಗೀರ್ ಎಂಬ ಹೆಸರು ಧರಿಸಿದ. ನೂರುದ್ದೀನ್ ಎಂಬುದು ಇವನ ಬಿರುದು. ಅಧಿಕಾರಕ್ಕೆ ಬಂದ ಹೊಸದಲ್ಲಿಯೇ ಆಗ್ರದ ಕೋಟೆಯ ಮೇಲಿನ ಒಂದು ಕೊನೆಯಿಂದ ಯುಮುನಾ ನದೀ ತೀರದ ಕಲ್ಲುಕಂಬವೊಂದಕ್ಕೆ ಚಿನ್ನದ ಸರಪಳಿಯೊಂದನ್ನು ಕಟ್ಟಿಸಿದ. ಈ ಸರಪಳಿಯಲ್ಲಿ ಕಿರುಗಂಟೆಗಳನ್ನು ಜೋಡಿಸಲಾಗಿತ್ತು. ನ್ಯಾಯಪೇಕ್ಷಿಗಳಾಗಿದ್ದ ಪ್ರಜೆಗಳು ಅದನ್ನು ಎಳೆಯುವುದರ ಮೂಲಕ ತನ್ನ ಗಮನ ಸೆಳೆಯುವಂತೆ ಮಾಡಿದ್ದ. ಇವನ ನ್ಯಾಯಪರಿಪಾಲನಾ ಮನೋಭಾವಕ್ಕೆ ಇದು ಸಾಕ್ಷಿ. ಸಾಮ್ರಾಜ್ಯದ ಉತ್ತಮ ಆಡಳಿತಕ್ಕೆಂದು 123 ಸೂತ್ರಗಳನ್ನು ಪ್ರಕಟಿಸಿದ. ಕೆಲವು ಜಹಗೀರದಾರರು ರೈತರ ಮೇಲೆ ಹೇರಿದ್ದ ನದೀಶುಲ್ಕ ಮುಂತಾದವನ್ನು ಮನ್ನಾಮಾಡುವುದು, ರಸ್ತೆಗಳಲ್ಲಿ ಕಳ್ಳಕಾಕರ ಭಯನಿವಾರಣೆಗಾಗಿ ಅಲ್ಲಲ್ಲಿ ಸೌಕರ್ಯಗಳನ್ನು ಸ್ಥಾಪಿಸಿ ಅಲ್ಲಿ ಜನವಸತಿ ಕಲ್ಪಿಸುವುದು, ಅನಾಥರು ಮರಣಹೊಂದಿದಾಗ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳದೆ ಮಸೀದಿ, ಧರ್ಮಛತ್ರ ಮುಂತಾದವನ್ನು ಕಟ್ಟಿಸಲು ವಿನಿಯೋಗಿಸುವುದು, ಯಾರೇ ಆಗಲಿ ರೈತರ ಜಮೀನುಗಳನ್ನು ಕಸಿದುಕೊಳ್ಳುವುದನ್ನು ತಡೆಯುವುದು, ಆಸ್ಪತ್ರೆಗಳನ್ನು ಕಟ್ಟಿಸಿ ವೈದ್ಯರನ್ನು ನೇಮಿಸುವುದು ಮುಂತಾದವು ಈ ಸೂತ್ರಗಳಲ್ಲಿ ಸೇರಿದ್ದುವು. ಸ್ವತಃ ಪಾನಾಸಕ್ತನಾಗಿದ್ದರೂ ನಿಷೇಧಿಸಿದ್ದೊಂದು ಕುತೂಹಲಕರ ಅಂಶ.
- ಅಧಿಕಾರಕ್ಕೆ ಬಂದ ಮರುವರ್ಷವೇ ಮಗ ಖುಸ್ರಾವ್ ಇವನ ವಿರುದ್ಧ ದಂಗೆ ಎದ್ದ. ಅವನನ್ನು ಸೋಲಿಸಿ ಶಿಕ್ಷಿಸಲಾಯಿತಾದರೂ ಆ ಸಂದರ್ಭದಲ್ಲಿ ಆತನಿಗೆ ನೆರವು ನೀಡಿದ್ದನೆಂಬ ಕಾರಣದಿಂದ ಸಿಕ್ಖರ ಐದನೆಯ ಗುರು ಅರ್ಜುನಸಿಂಗ್‍ನನ್ನು ಕೊಲ್ಲಿಸಿದ. ಇದು ಮುಂದೆ ಸಿಕ್ಖರ ಹಾಗೂ ಮಹಮದೀಯರ ನಡುವಣ ಭೀಕರ ಘರ್ಷಣೆಗಳಿಗೆ ಎಡೆಮಾಡಿತು. ಮೇವಾಡದ ರಾಣಾ ಅಮರಸಿಂಹ ವಿರುದ್ಧ ದಂಡೆತ್ತಿ ಆತನನ್ನು ಸೋಲಿಸಿ (1609) ಚಿತ್ತೂರನ್ನೊಳಗೊಂಡಂತೆ ಆ ರಾಜ್ಯವನ್ನು ಆತನಿಗೆ ಹಿಂತಿರುಗಿಸಿದ. ಆತ ಜಹಾಂಗೀರನ ಸಾರ್ವಭೌಮತ್ವವನ್ನೊಪ್ಪಿಕೊಂಡ. ಪುನಃ ಸ್ವತಂತ್ರವಾಗಿದ್ದ ಅಹಮದ್‍ನಗರವನ್ನೂ ವಶಪಡಿಸಿಕೊಳ್ಳಲು ಸೈನ್ಯ ಕಳುಹಿಸಿದರೂ (1608)ಅಲ್ಲಿಯ ಪ್ರಧಾನಿ ಮಲಿಕ್ ಅಂಬರ್ ಜೀವಿಸಿರುವವರೆಗೂ ಈ ಯೋಜನೆ ಕೈ ಗೊಡಲಿಲ್ಲ. 1926ರಲ್ಲಿ ಆತ ದಿವಂಗತನಾದ. ಆ ಬಳಿಕ ಅಹಮದ್ ನಗರವೂ ಸ್ವಲ್ಪ ಮೊದಲು ಬಿಜಾಪುರವೂ ಸಾಮ್ರಾಟನ ವಶವಾದವು. 1620ರಲ್ಲಿ ಕಾಂಗ್ರಾಕೋಟೆಯನ್ನು ಗೆದ್ದುಕೊಂಡ. ಬಂಗಾಲದಲ್ಲಿ ಆಫ್‍ಘಾನರ ಉಸ್ಮಾನ್ ಖಾನ್ ದಂಗೆ ಎದ್ದ. (1599). ಆದರೆ 1612ರಲ್ಲಿ ಅದನ್ನಡಗಿಸಲಾಯಿತು. ಪೋರ್ಚುಗೀಸರೊಡನೆ ಆರಂಭದಲ್ಲಿ ಉತ್ತಮ ಬಾಂಧವ್ಯ ಪಡೆದಿದ್ದ ಅರಸ ಜೆಸೂಟರನ್ನು ಗೌರವಾದರಗಳಿಂದ ಕಂಡ. ಇದು ಆತ ಕ್ರೈಸ್ತಧರ್ಮವನ್ನವಲಂಬಿಸಬಹುದೆಂಬ ಸಂಶಯವನ್ನುಂಟುಮಾಡಿತ್ತು. ಸರ್ ತಾಮಸ್‍ರೋ ಇವನ ಆಸ್ಥಾನಕ್ಕೆ ಬಂದ ಜೆಸೂಟ್ ಪಾದ್ರಿಗಳಲ್ಲಿ ಪ್ರಮುಖ. ಪರ್ಷಿಯನ್ನರೊಡನೆ ಮಿತ್ರತ್ವದಿಂದಿದ್ದ. ಕಾಂದಹಾರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಆರಂಭದಲ್ಲಿ ಪರ್ಷಿಯನ್ನರು ಪ್ರಯತ್ನ ಪಟ್ಟರಾದರೂ ಅನಂತರ ಆ ಯತ್ನಗಳನ್ನು ಬಿಟ್ಟುಕೊಟ್ಟರು. ಅಕ್ಬರನ ಧಾರ್ಮಿಕ ನೀತಿ ಉಲೆಮಾಗಳಲ್ಲಿ ಸಂದೇಹಗಳನ್ನು ಮೂಡಿಸಿತ್ತು. ಸಂಪ್ರದಾಯವಾದಿಗಳಾದ ಅವರು ಜಹಾಂಗೀರ ಷಾರಿಯತ್ತನ್ನು ಎತ್ತಿಹಿಡಿಯಬೇಕೆಂದು ಮನವಿಮಾಡಿಕೊಂಡರು. ಅದರೆ ಜಹಾಂಗೀರ್ ಬಲವಂತವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದುವುದನ್ನು ನಿಷೇಧಿಸಿದುದಲ್ಲದೆ ಜಿóಜಿóಯಾ ತೆರಿಗೆಯನ್ನು ಮತ್ತೊಮ್ಮೆ ಹೇರಬೇಕೆಂದು ಮಾಡಲಾದ ಸಲಹೆಯನ್ನು ಸಹ ತಿರಸ್ಕರಿಸಿದ. ಇವನ ಕಾಲದಲ್ಲಿ ಹಲವಾರು ದೇವಾಲಯ ಮತ್ತು ಕ್ರೈಸ್ತ ಮಂದಿರಗಳು ನಿರ್ಮಾಣಗೊಂಡುವು. ಜಹಾಂಗೀರನ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪ್ರಭಾವಬೀರಿದವಳು ರಾಣಿ ನೂರ್‍ಜಹಾನ್. ಮೆಹರುನ್ನಿಸಾ ಎಂಬ ಹೆಸರಿನ ಆಕೆ ಪತಿಯಾಗಿದ್ದ ಷೇರ್ ಆಫ್‍ಘಾನ್ ಕೊಲ್ಲಲ್ಪಟ್ಟ ನಂತರ ರಾಜಧಾನಿಯ ಅಂತಃಪುರ ಸೇರಿದಳು. ಜಹಾಂಗೀರ್ ಅನಂತರ ಆಕೆಯನ್ನು ಮದುವೆಯಾದ. ಕ್ರಮೇಣ ರಾಜ್ಯದ ಆಡಳಿತದಲ್ಲಿ ಅವಳು ಹಸ್ತಕ್ಷೇಪ ಮಾಡತೊಡಗಿದಳು. ನಾಣ್ಯಗಳೂ ಅವಳ ಹೆಸರಿನಲ್ಲಿ ಅಚ್ಚಾಗತೊಡಗಿದುವು. ಫರ್ಮಾನುಗಳಲ್ಲಿ ಆಕೆಯ ಹೆಸರೂ ಸೇರತೊಡಗಿತು. ಜಹಾಂಗೀರನ ಮಕ್ಕಳಲ್ಲಿ ಖುಸ್ರಾವ್ ಮೊದಲೇ ದಂಗೆ ಎದ್ದಿದ್ದ. ಅನಂತರ ಖುರ್ರಮ್ ಅವನನ್ನು ಅನುಸರಿಸಿದ. ನೂರ್‍ಜಹಾನ್ ಆತನನ್ನು ವಿರೋಧಿಸಿದ್ದಳು. ಜಹಾಂಗೀರ್ ಮರಣಹೊಂದಿದಾಗ (1626) ಈತ ದಖ್ಖನ್‍ನಲ್ಲಿದ್ದ. ಈತ ನೂರ್‍ಜಹಾನ್ ಈತನ ಸೋದರ ಷಹರಿಯರ್‍ನನ್ನು ಪಟ್ಟಕ್ಕೆ ತರಲು ಯತ್ನಿಸಿದಳು. ಈತ ಆಗ ಲಾಹೋರಿನಲ್ಲಿದ್ದ. ಅಸಫ್ ಖಾನ್ ಖುಸ್ರಾವನ ಮಗನನ್ನು ಉತ್ತರಾಧಿಕಾರಿಯೆಂದು ಫೋಷಿಸಿದ. ಅಂತಃಕಲಹಗಳಾರಂಭವಾದುವು. ಅಂತಿಮವಾಗಿ ಖುರ್ರಮ್ ಷಹಜಹಾನ್ ಎಂಬ ಹೆಸರಿನಿಂದ ಸಿಂಹಾಸನವೇರಿದ (1628).
- ಈತನ ಅಧಿಕಾರಗ್ರಹಣ ರಕ್ತಸಿಕ್ತವಾಗಿತ್ತು. ತನ್ನ ಸೋದರನನ್ನೂ ಸೋದರ ಸಂಬಂಧಿಗಳನ್ನೂ ಕೊಲ್ಲಿಸಿದ. ಆಳ್ವಿಕೆಯ ಮೊದಲ ವರ್ಷದಲ್ಲಿಯೇ ಬುಂದೇಲರು ದಂಗೆ ಎದ್ದರು. ಈ ಮೊದಲು ಮುಂದೇಲರ ನಾಯಕ ರಾಜಾಬಿರಸಿಂಹದೇವ ಅಬುಲ್ ಫಜಲ್‍ನನ್ನು ಕೊಂದು ಜಹಾಂಗೀರನ ವಿಶ್ವಾಸಕ್ಕೆ ಪಾತ್ರನಾಗಿದ್ದ. ಈಗ ಆತನನ್ನು ಅಡಗಿಸಲು ಯುವರಾಜ ಔರಂಗಜೇಬ್ 20,000 ಸೈನ್ಯ ಬಲದಿಂದ ಅವನ ವಿರುದ್ಧ ಧಾವಿಸಬೇಕಾಯಿತು. ದಖ್ಖನಿನಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ ಖಾನ್‍ಜಹಾನ್ ಕೇಂದ್ರದೊಂದಿಗೆ ಸೆಣಸಿದ. ಚಕ್ರವರ್ತಿಯೇ ಆತನನ್ನು ಸೋಲಿಸಬೇಕಾಯಿತು. ಸ್ವತಃ ತಾನೇ ಅರಸನ ವಿರುದ್ಧ ಬಂಡಾಯವೆದ್ದು ಬಂಗಾಲದಲ್ಲಿದ್ದಾಗ ಪೋರ್ಚುಗೀಸರು ತನಗೆ ನೆರವು ನೀಡದಿದ್ದುದು ಷಹಜಹಾನ ಅವರ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯಕಾರಣ. ಖಾಸಿಮ್ ಖಾನನ ನೇತೃತ್ವದಲ್ಲಿಯ ಸೈನ್ಯ ಅವರನ್ನು ಹುಗ್ಲಿ ನದೀತೀರದಲ್ಲಿ ಸೋಲಿಸಿತು. 10,000 ಪೋರ್ಚುಗ್ರೀಸ್ ಸೈನಿಕರು ಮರಣವನ್ನಪ್ಪಿದರು. 14,400 ಭಾರತೀಯರನ್ನು ಬಿಡುಗಡೆ ಮಾಡಲಾಯಿತು. ಝಾರಖಂಡ ಪಲಮೌನ ರಾಜಾ ಪ್ರತಾಪ. ಗಢವಾಲರ ನಾಯಕರು ಮುಂತಾದವರು ಷಹಜಹಾನನ ವಿರುದ್ಧ ದಂಗೆ ಎದ್ದವರಲ್ಲಿ ಪ್ರಮುಖರು. ಕಾಂದಹಾರವನ್ನು ಗೆದ್ದುಕೊಳ್ಳಲು ಇಚ್ಛಿಸಿದ ಷಹಜಹಾನ್ ಪರ್ಷಿಯದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ. 1638ರಲ್ಲಿ ಕಾಂದಹಾರದ ಪ್ರಾಂತ್ಯಾಧಿಪತಿಯಾಗಿದ್ದ ಆಲಿಮರ್ದಾನ್ ಪರ್ಷಿಯದ ಷಹನ ವಿರುದ್ಧ ದಂಗೆ ಎದ್ದಾಗ ಕುಟಿಲತೆಯಿಂದ ಆ ಪ್ರಾಂತ್ಯವನ್ನು ಷಹಜಹಾನ್ ವಶಪಡಿಸಿಕೊಂಡ. ಆದರೆ ಪುನಃ ಗೆದ್ದುಕೊಂಡ (1649). ಆ ವರ್ಷ ಹಾಗೂ 1652-53ರಲ್ಲಿ ಷಹಜಹಾನ್ ಕಳುಹಿಸಿದ್ದ ಸೈನ್ಯಗಳು ಆ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವುದರಲ್ಲಿ ವಿಫಲವಾದುವು. ತನ್ನ ಪೂರ್ವಜರ ನೆಲೆಯಾಗಿದ್ದ ಕಾಬೂಲ್, ಬುಖಾರಾ, ಬಾಲ್ಖೆಗಳನ್ನು ಗೆದ್ದುಕೊಳ್ಳುವ ಆಸೆ ಮೊಗಲ್ ಚಕ್ರವರ್ತಿಗಿದ್ದಿತಾದರೂ ಆತನ ಯತ್ನಗಳಾವುವೂ ಫಲಿಸಲಿಲ್ಲ. ದಕ್ಖನ್‍ನಲ್ಲಿ ಬಿಜಾಪುರ ಗೋಲ್ಕೊಂಡಗಳನ್ನು ಗೆದ್ದುಕೊಳ್ಳಲು ಸ್ವತಃ ತಾನೇ ಹೋದುದಲ್ಲದೆ ಮಗ ಔರಂಗeóÉೀಬನನ್ನೂ ಕಳುಹಿಸಿದ. ಆತ ಮುಂದೆ ಆ ಪ್ರಾಂತ್ಯದ ಅಧಿಪತಿಯಾಗಿ ಕೆಲವು ವರ್ಷ ಅಲ್ಲಿ ಆಳಿ ಆಡಳಿತ ಸುಧಾರಣೆಗಳನ್ನು ಮಾಡಿದ. ಈ ಸಂದರ್ಭದಲ್ಲಿ ಆಗತಾನೇ ಪ್ರಬಲರಾಗುತ್ತಿದ್ದ ಮರಾಠರನ್ನೂ ಈತ ಎದುರಿಸಬೇಕಾಯಿತು. ಬಿಜಾಪುರದಲ್ಲಿ ಷಹಜಿಗೆ ಯಾವ ಹುದ್ದೆಯನ್ನೂ ಕೊಡಕೂಡದೆಂದು ಷಹಜಹಾನ್ ಕರಾರನ್ನೇ ಹಾಕಿದ್ದ. ಇವನು ಕ್ರಮೇಣ ಹೆಚ್ಚು ಸಂಪ್ರದಾಯವಾದಿಯೂ ಸ್ವಧರ್ಮನಿಷ್ಠನೂ ಆದ. ಅರಮನೆಯಲ್ಲಿ ಮಹಮದೀಯ ಹಬ್ಬಗಳನ್ನು ಹೆಚ್ಚು ಉತ್ಸಾಹದಿಂದ ಆಚರಿಸಲು ವ್ಯವಸ್ಥೆ ಮಾಡಿದ. ಯಾತ್ರಾರ್ಥಿಗಳು ತೆರಿಗೆಯನ್ನು ಕೆಲಕಾಲದ ಮಟ್ಟಿಗೆ ಹೇರಿದ್ದ. ಇವನ ಆಳ್ವಿಕೆಯ ಕೆಲವು ವರ್ಷಗಳಲ್ಲಿ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಗೇರಿತ್ತು. ತಂದೆಯಂತೆ ಐಷಾರಾಮವಾಗಿರದೆ ರಾಜ್ಯದ ಆಡಳಿತಕ್ಕಾಗಿ ವಿಶೇಷವಾಗಿ ಶ್ರಮಿಸುತ್ತಿದ್ದನೆನ್ನಲು ಸಮಕಾಲೀನ ಪರ್ಷಿಯನ್ ವರದಿಗಳೇ ಆಧಾರ. ಚಂಡಯಾತ್ರೆಗಳಲ್ಲಿ ಅನೇಕ ಬಾರಿ ಸ್ವತಃ ನಾಯಕತ್ವವಹಿಸುತ್ತಿದ್ದ. ನ್ಯಾಯ ಪರಿಪಾಲನೆ ತ್ವರಿತವಾಗಿತ್ತು. ಮನ್ಸಬ್ದಾರಿ ಪದ್ಧತಿಯ ಕೆಲವು ಲೋಪದೋಷಗಳನ್ನು ನಿವಾರಿಸಿದ. ವೈಭವದ ಪ್ರದರ್ಶನಗಳಲ್ಲಿ ವಿಶೇಷ ಆಸಕ್ತಿಯಿದ್ದ ಕಾರಣ ನವಿಲಿನ ಸಿಂಹಾಸನ, ತಾಜ್‍ಮಹಲ್, ಆಗ್ರದ ಕೋಟೆಗಳ ಕಲೆ, ವಾಸ್ತುಶಿಲ್ಪಗಳು ಅದಕ್ಕೆ ತಕ್ಕಂತೆ ಭವ್ಯವಾಗಿ ರೂಪುಗೊಂಡುವು. ಸಾಹಿತಿಗಳ, ಕವಿಗಳ, ದಾರ್ಶನಿಕರ ಆಶ್ರಯದಾತನಾಗಿದ್ದ. ಚಿತ್ರಕಲೆಗೆ ವಿಶೇಷ ಪ್ರೋತ್ಸಾಹನೀಡಿದ. ಭಾರತೀಯಸಂಗೀತ ಇವನಿಗೆ ಪ್ರಿಯವಾಗಿತ್ತು. ತಾನ್‍ಸೇನನ ಅಳಿಯ ಲಾಲ್‍ಖಾನ್, ಮಹಾಕವಿರಾಯ ಎನಿಸಿದ ಜಗನ್ನಾಥ, ಸುಖಸೇನ, ಸೂರಸೇನರು ಇವನ ಆಸ್ಥಾನಕ್ಕೆ ಕಳೆಯನ್ನು ತುಂಬಿದರು. ಮೊಗಲ್ ಶೈಲಿಯ ವಾಸ್ತುಶಿಲ್ಪದ ಭವ್ಯತೆ ಇವನ ಕಾಲದಲ್ಲಿ ತುದಿಮುಟ್ಟಿತ್ತು. ಇವನ ರಾಜಧಾನಿಗಳಲ್ಲಿ ಅತಿಸುಂದರವಾದ ಅರಮನೆಗಳು ನಿರ್ಮಾಣಗೊಂಡುವು. ಕೆಂಪುಮರಳುಗಲ್ಲಿನ ಬಳಕೆ ಕಟ್ಟಡಗಳ ಸೌಂದರ್ಯ ಮತ್ತು ಲಾಲಿತ್ಯಗಳನ್ನು ಹೆಚ್ಚಿಸಿದುವು. ಆದರೆ ಇವನ ತನ್ನ ಬಾಳಿನಲ್ಲಿ ಅಪಾರ ನೋವು ಅನುಭವಿಸಿದ. ಮಕ್ಕಳಾದ ದಾರಾ, ಷ್ರಜಾ, ಮುರಾದ ಹಾಗೂ ಔರಂಗಜೇಬ ಇವರುಗಳಲ್ಲಿ ಸಿಂಹಾಸನಕ್ಕಾಗಿ ಕದನಗಳಾದುವು. 1658ರಲ್ಲಿ ಔರಂಗಜೇಬ ಈತನನ್ನು ಆಗ್ರದ ಸೆರೆಮನೆಗೆ ತಳ್ಳಿದ. ಆ ವೇಳೆಗೆ ತನ್ನ ಇತರ ಮಕ್ಕಳೂ ಮೊಮ್ಮಗ ಸುಲೇಮಾನ್ ಷುಕೋ ಸಹ ಔರಂಗಜೇಬಿನಿಂದ ಕೊಲ್ಲಲ್ಪಟ್ಟರೆಂಬ ದಾರುಣ ವಾರ್ತೆಗಳನ್ನೂ ಕೇಳಬೇಕಾಯಿತು. ಸೆರೆಮನೆಯಲ್ಲೆ ಷಹಜಹಾನ್ ಅಸುನೀಗಿದ(1666).
- ಅಬುಲ್ ಮುಝಫರ್ ಮುಹಿಯುದ್ದೀನ್ ಮಹಮ್ಮದ್ ಔರಂಗ್eóÉೀಬ್ ಅಲಂಗೀರ್ ಪಾದಷಹ ಘಾಜೀ ಎಂಬ ದೀರ್ಘ ಹೆಸರಿನಿಂದ ಜುಲೈ 1658ರಲ್ಲಿ ಸಿಂಹಾಸನವನ್ನೇರಿದ ಚಕ್ರವರ್ತಿ 1659 ಜೂನಿನಲ್ಲಿ ಎರಡನೆಯ ಬಾರಿ ಪಟ್ಟಾಭಿಷೇಕ ಮಾಡಿಸಿಕೊಂಡ. 50 ವರ್ಷಗಳ ಈತನ ಆಳ್ವಿಕೆಯ ಮೊದಲ 25 ವರ್ಷಗಳನ್ನು ಉತ್ತರ ಭಾರತದಲ್ಲಿಯೂ ಉಳಿದ ವರ್ಷಗಳನ್ನು ದಕ್ಖನಿನಲ್ಲಿಯೂ ಕಳೆದ. 1661ರಿಂದ ಆರು ವರ್ಷಗಳ ಕಾಲ ವಾಣಿಜ್ಯ ಸಂಬಂಧಗಳನ್ನು ಪಡೆದಿದ್ದ ಹೊರದೇಶದ ಅರಸರು ಈತನ ಆಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದರು. ಪರ್ಷಿಯದ ಸಫವಿ, ಮೆಕ್ಕದ, ಬಾಲ್ಖ್, ಬಖಾರ, ಕಾಷ್ಗರ್‍ಗಳ ದೊರೆಗಳು, ಅಭಿಸಿನಿಯದ ಕ್ರೈಸ್ತದೊರೆ ಮುಂತಾದವರು ಇವರಲ್ಲಿ ಪ್ರಮುಖರು. ಪರ್ಷಿಯದ ಎರಡನೆಯ ಷಹ ಅಬ್ಬಾಸ್ ಷಿಯಾ ಪಂಗಡಕ್ಕೆ ಸೇರಿದವನಾಗಿದ್ದು ಸುನ್ನಿ ಪಂಗಡದ ಮೊಗಲ್ ಚಕ್ರವರ್ತಿಯ ಬಗೆಗೆ ಹೆಚ್ಚೇನೂ ಗೌರವ ಹೊಂದಿರಲಿಲ್ಲ. ಮೇಲ್ನೋಟಕ್ಕೆ ಸ್ನೇಹದಿಂದಿದ್ದರೂ ಅವರ ನಡುವೆ ಘರ್ಷಣೆಯ ಭಯ ಇದ್ದೇ ಇತ್ತು. ಅಬ್ಬಾಸ್ ಮರಣ ಹೊಂದಿದ ಬಳಿಕ (1667) ಆತನ ಉತ್ತರಾಧಿಕಾರಿಗಳು ಸಮರ್ಥರಾಗಿರದ ಕಾರಣ ಪರ್ಷಿಯದ ದಾಳಿಯ ಭಯ ಇಲ್ಲವಾಯಿತು. ಆಳ್ವಿಕೆಯ ಆರಂಭದ ದಶಕಗಳಲ್ಲಿ ನವನಗರ. ಬುಂದೆ ಲಖಂಡ, ಬಿಕನೀರ್ ಮುಂತಾದೆಡೆಗಳಲ್ಲಿ ಕಾಣಿಸಿಕೊಂಡ ದಂಗೆಗಳನ್ನು ಔರಂಗeóÉೀಬ್ ಅಡಗಿಸಿದ. 1661ರಲ್ಲಿ ಬಿಹಾರದ ಪ್ರಾಂತ್ಯಾಧಿಕಾರಿಯಾಗಿದ್ದ ದಾಊದ್ ದಕ್ಷಿಣ ಬಿಹಾರದ ಪಲಮಾವುವನ್ನು ಗೆದ್ದು ತನ್ನ ಪ್ರಾಂತ್ಯಕ್ಕೆ ಸೇರಿಸಿಕೊಂಡ. ಬಂಗಾಲದ ಅಧಿಕಾರಿಯಾಗಿದ್ದ ಮೀರ್‍ಜುಮ್ಲಾ ಕಾಮರೂಪದ ಅಹೋಮ್‍ಗಳ ವಿರುದ್ಧ 300ಕ್ಕೂ ಮೀರಿದ ನೌಕಾಪಡೆಯೊಡನೆ ದಂಡೆತ್ತಿ-(1661). ರಾಜಧಾನಿ ಗಢಗಾವನ್ನು ಆಕ್ರಮಿಸಿದರೂ ಮೊಗಲರ ಸೈನ್ಯ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿತು. ಅಹೋಮಿನ ಅರಸ ಜಯಧ್ವಜ ಅಂತಿಮವಾಗಿ ರಾಜ್ಯದ ಹಲವಾರು ಭಾಗಗಳನ್ನು ಮೊಗಲರಿಗೆ ಒಪ್ಪಿಸಿ ಬಂಗಾರ ಬೆಳ್ಳಿಗಳನ್ನೊಳಗೊಂಡ ಹೆಚ್ಚು ಪ್ರಮಾಣದ ಯುದ್ಧ ಪರಿಹಾರ ಧನವನ್ನು ಸಹ ಕೊಟ್ಟ. ಆದರೆ ಈ ದಂಡಯಾತ್ರೆಯಿಂದ ತುಂಬ ದೈಹಿಕಶ್ರಮ ಮತ್ತು ಮಾನಸಿಕ ಒತ್ತಡಗಳಿಗೆ ತುತ್ತಾಗಿದ್ದ ಮೀರ್ ಜುಮ್ಲ 1663ರಲ್ಲಿ ಸತ್ತ. ಅನಂತರ 1667ರಿಂದ ಚಕ್ರಧ್ವಜ ತನ್ನ ಬಲವನ್ನು ಒಟ್ಟುಗೂಡಿಸಿಕೊಂಡು ಮೊಗಲರೊಡನೆ ಕಾದಿದ. ಅಂತಿಮವಾಗಿ ಕಾಮರೂಪವೂ ಮೊಗಲರ ಕೈಬಿಟ್ಟಿತು (1981). ಮೊಗಲರ ಸೇನಾನಿ ಷಾಯಿಸ್ತಖಾನ್ ಚಿಟ್ಟಗಾಂಗನ್ನು ವಶಪಡಿಸಿಕೊಂಡ (1666). ಚಿಟ್ಟಗಾಂಗ್ ಆ ಬಳಿಕ ಇಸ್ಲಾಮಾಬಾದ್ ಆಯಿತು. ಆಗ್ನೇಯದ ಗಡಿಯಲ್ಲಿ ಆಫ್‍ಘನ್ನರ ವಿರುದ್ಧ ಆಗಿಂದಾಗ 1672ರಿಂದ ಸುಮಾರು 1698ರ ತನಕ ಮೊಗಲರು ಹೋರಾಡಿದರು. ಸ್ವತಃ ಔರಂಗeóÉೀಬನೇ ಕೆಲವೊಮ್ಮೆ ಇದರಲ್ಲಿ ಭಾಗವಹಿಸಿದ. ಕೇವಲ ಬಲ ಪ್ರದರ್ಶನದಿಂದಲ್ಲದೇ ಶತ್ರುವರ್ಗದಲ್ಲಿಯೇ ಅಂತಃಕಲಹಗಳನ್ನೇರ್ಪಡಿಸುವ ಕುಟಿಲನೀತಿಯಿಂದಲೂ ಈ ಪ್ರದೇಶ ಸಾಮ್ರಾಟನ ವಶವಾದರೂ ಇದರ ಪರಿಣಾಮವಾಗಿ ಸ್ವಾತಂತ್ರಪ್ರಿಯರಾಗಿದ್ದ ಅಫ್‍ಘನರು ಔರಂಗeóÉೀಬ್‍ನ ಮರಾಠರ ವಿರುದ್ಧ ಎತ್ತಿದ ದಂಡಯಾತ್ರೆಗಳಲ್ಲಿ ಭಾಗವಹಿಸದೆ ಅನಾಸಕ್ತರಾಗಿ ಉಳಿದರು. ಔರಂಗeóÉೀಬ ಸಂಪ್ರದಾಯಬದ್ಧ ಧರ್ಮನೀತಿ ಕ್ರಮೇಣ ಆತನ ಸಾಮ್ರಾಜ್ಯದ ಅವನತಿಗೆ ಎಡೆಮಾಡಿತು. ಷೇಕ್ ಅಹಮದ್ ಸರ್ ಹಿಂದಿ (1563-1624) ಭಾರತದ ಇಸ್ಲಾಮ್ ಧರ್ಮದಲ್ಲಿ ಆಚರಣೆಗೆ ತಂದ ಸುಧಾರಣೆಗಳು ಇವನನ್ನು ಕಿರಿಯ ವಯಸ್ಸಿನಿಂದಲೇ ಆಕರ್ಷಿಸಿದ್ದುವು. ಆತನ ಮಗ ಖ್ವಜಾ ಮುಹಮ್ಮದ್ ಮಾಸೂಮ್ ಮತ್ತು ಮೊಮ್ಮಗ ಮುಹಮ್ಮದ್ ಸೈಫುದ್ದೀನ್‍ರ ಒಡನಾಟ ಈತನ ಧಾರ್ಮಿಕ ಹಾಗೂ ತತ್‍ಪರಿಣಾಮವಾದ ರಾಜಕೀಯ ನೀತಿಗಳ ಮೇಲೆ ವಿಶೇಷ ಪ್ರಭಾವ ಬೀರಿತು. ಸ್ವಂತವಾದ ಯಾವುದೇ ಅಭಿಪ್ರಾಯವೂ ಇರಲಿಲ್ಲ. ಆದರೆ ಕಟ್ಟಾ ಸುನ್ನಿಪಂಗಡವಾದಿಯಾಗಿ ರಾಜ್ಯವನ್ನು ಕುರಾನಿನ ನಿಯಮಾನುಸಾರ ಆಳುವುದು, ಆದುದರಿಂದ ಮಹಮದೀಯರೆಲ್ಲರ ವಿರುದ್ಧ ಜಿಹಾದನ್ನು ಹೂಡಿ ರಾಜ್ಯವನ್ನು ದಾರುಲ್ ಇಸ್ಲಾಮ್ (ಮಹಮದೀಯರ ರಾಜ್ಯ) ಆಗಿ ಪರಿವರ್ತಿಸುವುದು ತನ್ನ ಆದ್ಯಕರ್ತವ್ಯವೆಂದು ಭಾವಿಸಿದ. ಅಕ್ಬರನ ಉದಾರ ನೀತಿಯನ್ನು ಕೈಬಿಟ್ಟು ಮಹಮದೀಯರಲ್ಲದೆ ತನ್ನ ಪ್ರಜೆಗಳಿಗೆ ಕಿರುಕುಳಕೊಡತೊಡಗಿದ. ಅಧಾರ್ಮಿಕ ಎಂಬ ಕಾರಣದಿಂದ ದಿನಂಪ್ರತಿ ಪ್ರಜೆಗಳಿಗೆ ದರ್ಶನ ಕೊಡುವ (ಝರೋಕ ದರ್ಶನ) ಪದ್ಧತಿಯನ್ನು ಕೈಬಿಟ್ಟ. ಜೂಜು, ಸುರಾಪಾನ, ವ್ಯಭಿಚಾರಗಳನ್ನು ನಿಷೇಧಿಸಿದ. ಸಂಗೀತಕ್ಕೆ ಮಂಗಳ ಹಾಡಿ ಆಸ್ಥಾನದಲ್ಲಿ ಅದಕ್ಕೆ ಸ್ಥಾನವಿಲ್ಲದಂತೆ ಮಾಡಿದ. ಹುಟ್ಟುಹಬ್ಬ ಇತ್ಯಾದಿಗಳ ಆಚರಣೆಯನ್ನು ನಿಲ್ಲಿಸಿದ. ದೇವಾಲಯಗಳ ನಿರ್ಮಾಣವಂತಿರಲಿ, ಜೀರ್ಣೋದ್ಧಾರಕ್ಕೂ ಅನುಮತಿ ನೀಡಲಿಲ್ಲ. ಬದಲಾಗಿ ದೇವಾಲಯಗಳನ್ನು ಕೆಡಹುವಂತೆ ಆಜ್ಞೆ ಮಾಡಿದ. 1679ರಿಂದ ಜಿಜಿಯಾ ಹೇರಿದ. ಹಿಂದುಗಳಿಗೆ ಕಿರುಕುಳ ನೀಡಿ ಅವರು ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದುವುದನ್ನು ನೋಡಿ ಸಂತೋಷಪಟ್ಟ. ಹಿಂದೂ ವರ್ತಕರ ಮೇಲೆ ಸುಂಕ ಹೆಚ್ಚಿಸಿದ. ಕಚೇರಿಗಳಲ್ಲಿಯ ಹಿಂದೂಗಳನ್ನು ಕೆಲಸದಿಂದ ತೆಗೆದ. ಇವುಗಳೆಲ್ಲವುಗಳ ಪರಿಣಾಮ ಪ್ರಜೆಗಳೇ ಇವನ ವಿರೋಧಿಗಳಾದರು. ಎಲ್ಲೆಲ್ಲೂ ದಂಗೆಗಳು ಕಾಣಿಸಿಕೊಂಡವು. ಮಥುರಾದಲ್ಲಿ ಜಾಟರು, ನರ್ನೌಲ್ (1669) ಮೇವಾತ್ ಜಿಲ್ಲೆಗಳಲ್ಲಿ ಸತ್ನಾವಿಗಳು (1672) ಹೀಗೆ ದಂಗೆ ಎದ್ದವರಲ್ಲಿ ಮೊದಲಿಗರು. ಸಿಕ್ಖರ ಗುರುದ್ವಾರಗಳನ್ನು ಕೆಡವಲು ಆಜ್ಞೆ ನೀಡಿದಾಗ ಅವರ ಗುರು ತೇಜ್ ಬಹದೂರ್ ವಿರೋಧಿಸಿದ. ಅವನನ್ನು ದೆಹಲಿಗೆ ಒಯ್ದು ಕೊಲ್ಲಲಾಯಿತು. ಆತನ ಮಗ ಗೋವಿಂದಸಿಂಗ್ ಸೇಡು ತೀರಿಸಲು ನಿರ್ಧರಿಸಿದ. ಸಿಕ್ಖರನ್ನೆಲ್ಲ ಒಟ್ಟೂಗೂಡಿಸುವ ಕಾರ್ಯ ಆರಂಭವಾಯಿತು. ಅವನ ಅನುಯಾಯಿಗಳು ಖಾಲ್ಸಗಳಾದರು. ಆನಂದಪುರದ ಗುರುದ್ವಾರ ಮೊಗಲರ ಧಾಳಿಗಳಿಗೆ ಈಡಾಯಿತು. ಅವನ ನಾಲ್ವರು ಮಕ್ಕಳೂ ಹತರಾದರು. ಈತ ದಕ್ಖನ್ನಿಗೆ ಹೋಗಿದ್ದು ಔರಂಗeóÉೀಬನ ಮರಣಾನಂತರ ಹಿಂತಿರುಗಿ ಪುನಃ ಬಹದ್ದೂರ್ ಷಹನೊಡನೆ ದಕ್ಷಿಣಕ್ಕೆ ಬಂದಾಗ ಗೋದಾವರಿ ತೀರದ ನಾಂದೆರಿನಲ್ಲಿ ಅಸುನೀಗಿದ (1708). ದಕ್ಖನಿನಲ್ಲಿ ಔರಂಗeóÉೀಬ್ ತೀವ್ರವಾಗಿ ಎದುರಿಸಬೇಕಾಗಿ ಬಂದ ಇನ್ನೊಬ್ಬ ವಿರೋಧಿ ಮರಾಠರ ಶಿವಾಜಿ. ಈತ ಜೀವಿಸಿದ್ದತನಕವೂ (1680) ಔರಂಗeóÉೀಬ್ ಹೆಚ್ಚಿನ ಯಶಸ್ಸು ಗಳಿಸಲಾಗಲಿಲ್ಲ. ಅಕ್ಬರ ಅಂತಿಮವಾಗಿ ದುರ್ಗಾದಾಸನ ನೆರವಿನಿಂದ ಪರ್ಷಿಯಕ್ಕೆ ತಪ್ಪಿಸಿಕೊಂಡು ಓಡಿಹೋದ (1688). ತೀವ್ರ ಪ್ರಯತ್ನಗಳ ಬಳಿಕ ಬಿಜಾಪುರ, ಗೋಲ್ಕೊಂಡಗಳು ಮೊಗಲರ ವಶವಾದುವು. ಬಿಜಾಪುರದ ಸಿಕಂದರ್ ಷಹನನ್ನೂ ದೌಲತೌಬಾದ್ ಕೋಟೆಯಲ್ಲಿ ಸೆರೆಯಲ್ಲಿಟ್ಟ. ಅಲ್ಲಿಂದ ಒಯ್ಯುವಾಗ ದಾರಿಯಲ್ಲಿ ಆತ ಮೃತಪಟ್ಟ (1700). ಗೋಲ್ಕೊಂಡದ ಅಬ್ದುಲ್ ಹಸನ್ ಸಹ ದೌಲತೌಬದ್‍ನಲ್ಲಿ ವಾರ್ಷಿಕ ರೂ 50.000 ನಿವೃತ್ತಿವೇತನ ಪಡೆದು ಸೆರೆಯಲ್ಲಿರಬೇಕಾಯಿತು. ಆ ಬಳಿಕ ಸಾಗರ, ಅದೋನಿ, ಕರ್ನೂಲು, ರಾಯಚೂರು, ಬೆಳಗಾಂವಿ, ಬಂಕಾಪುರ, ಸಿರಾ, ಬೆಂಗಳೂರು, ವಾಂಡಿವಾಷ್, ಕಾಂಚಿ ಪುರಂಗಳು ಸಹ ಮೊಗಲರ ವಶವಾದುವು. ಆದರೆ ಮರಾಠರನ್ನು ಅಡಗಿಸುವುದರಲ್ಲಿ ಔರಂಗ ಜೇಬ್ ಮಾಡಿದ ಯತ್ನಗಳೆಲ್ಲ ಬಹುಕಾಲ ವಿಫಲವಾದುವು. ಕೊನೆಗೊಮ್ಮೆ ಷಂಬಾಜಿ ಹಾಗೂ ಆತನ ಕವಿಕಲಶರನ್ನು ಸೆರೆಹಿಡಿದು ಕೊಲ್ಲಿಸಿದ (1689). ದಕ್ಖನ್ನಿನಲ್ಲಿ ಬಹುಕಾಲ ಕಳೆದ ಔರಂಗeóÉೀಬ್ ಅಂತಿಮವಾಗಿ ಅನಾರೋಗ್ಯಕ್ಕೆ ತುತ್ತಾಗಿ ಅಹಮ್ಮದ್‍ನಗರದಲ್ಲಿ ಸಾವನ್ನಪ್ಪಿದ (1707). ಮರಾಠರನ್ನು ದಕ್ಷಿಣದ ಇತರರನ್ನೂ ಸೋಲಿಸಲು ಬಲಕ್ಕಿಂತ ಹೆಚ್ಚಾಗಿ ಕುಟಿಲನೀತಿಯನ್ನೇ ಈತ ಅನುಸರಿಸಿದ. ವಿಸ್ತಾರವಾದ ಸಾಮ್ರಾಜ್ಯಕ್ಕೆ ಅಧಿಪತಿಯಾಗಿದ್ದ ಈತ ಧೀರಸೇನಾನಿ, ದಕ್ಷ ಆಡಳಿತಗಾರ. ಅಪಾರ ನೆನಪಿನ ಶಕ್ತಿ ಪಡೆದಿದ್ದ. ಅರೇಬಿಕ್, ಪರ್ಷಿಯನ್‍ಗಳಲ್ಲಿ ಪಾಂಡಿತ್ಯಗಳಿಸಿದ್ದು, ಅಂತಿಮ ದಿನಗಳ ತನಕವೂ ಬಿಡುವು ದೊರೆತಾಗಲೆಲ್ಲ ಗ್ರಂಥಗಳ ಪಠಣದಲ್ಲಿ ಆಸಕ್ತಿವಹಿಸಿದ್ದ. ಸಮಕಾಲಿನರಲ್ಲಿದ್ದ ಕುಡಿತ ಮುಂತಾದ ದುಷ್ಟ ಚಟಗಳಾವುವೂ ಈತನಲ್ಲಿರಲಿಲ್ಲ. ಧರ್ಮನಿಷ್ಠನಾಗಿದ್ದರೂ ಅಂಧಶ್ರದ್ಧೆಯಿಂದ ಕಟುವಾದ ಧಾರ್ಮಿಕನೀತಿ ಅವಲಂಬಿಸಿ ಪ್ರಜೆಗಳ ದ್ವೇಷ ಸಂಪಾದಿಸಿದ. ಸುನ್ನಿ ಪಂಗಡಕ್ಕೆ ಸೇರಿದ್ದ ಕಾರಣ ಷಿಯಾ ಹಾಗೂ ಇತರ ಪಂಗಡಗಳವರನ್ನು ಸಹಿಸುತ್ತಿರಲಿಲ್ಲ. ಅಂತಿಮ ದಿನಗಳಲ್ಲಿ ತಾನು ಸಾಧಿಸಿದುದಕ್ಕಿಂತಲೂ ಕಳೆದು ಕೊಂಡುದೇ ಬಹಳ ಎಂಬ ಭಾವನೆ ಈತನಿಗೆ ಮೂಡಿತ್ತು. ನಿರಂತರ ಯುದ್ಧಗಳಿಂದ ರಾಜ್ಯದಲ್ಲಿ ಎಲ್ಲೆಲ್ಲೂ ಅಶಾಂತಿ ಅನಾರೋಗ್ಯಗಳು ತಾಂಡವವಾಡಿ ಬೊಕ್ಕಸಬರಿದಾಗಿ, ಪ್ರಜೆಗಳು ತುಂಬ ಸಾವುನೋವುಗಳನ್ನೆದುರಿಸಬೇಕಾಯಿತು. ಮೊಗಲ್ ಸಾಮ್ರಾಜ್ಯದ ಅವನತಿ ಔರಂಗeóÉೀಬನ ಜೀವನದ ಅಂತಿಮ ವರ್ಷಗಳಲ್ಲಿಯೇ ಆರಂಭವಾಯಿತು. ಇದಕ್ಕೆ ಕಾರಣ ಅವನ ದಕ್ಖನ್ ನೀತಿ ಎಂಬುದು ಉತ್ಪ್ರೇಕ್ಷೆಯಲ್ಲ.
- ಮೊಗಲರ ಸಮಕಾಲೀನರಾಗಿ ದಕ್ಖನ್‍ನಲ್ಲಿ ಮರಾಠರೂ ದಕ್ಷಿಣ ಭಾರತದಲ್ಲಿ ವಿಜಯನಗರದ ಅರಸರೂ ಆಳುತ್ತಿದ್ದರು. ಅಹಮದ್‍ನಗರ, ಬಿಜಾಪುರ ಹಾಗೂ ಗೋಲ್ಕೊಂಡದ ಸುಲ್ತಾನರೊಡನೆ ಮೊಗಲರು ಸೆಣಸಬೇಕಾಯಿತು. ಸೇವುಣರ ಪತನಾನಂತರ ಅಲ್ಲಿ ಸಣ್ಣ ಅಧಿಕಾರಗಳಲ್ಲಿದ್ದ ದೇವತರಿಯ (ದೌಲತಾಬಾದ್) ಯಾದವರು, ವೇರೂಳದ ಭೋಸ್ಲೆ ಹಾಗೂ ಫಲ್ತುನ್‍ದ ನಿಂಬಾಲ್ಕರರು ಶಿವಾಜಿಯ ಏಳಿಗೆಗೆ ಕಾರಣರಾದರು. ಶಿವಾಜಿ ತಂದೆ ಶಹಜಿ ಅಹಮದ್ ನಗರದ ನಿಜಾಮ್ ಷಹನ ಅಧಿಕಾರಿಯಾಗಿದ್ದ. ಶಹಜಹಾನ್ ಅಹಮದ ನಗರವನ್ನು ವಶಪಡಿಸಿಕೊಂಡಾಗ ಆತ ಬಿಜಾಪುರದ ಆದಿಲ್‍ಷಹನಲ್ಲಿ ಕೆಲಸಕ್ಕೆ ಸೇರಿದ. ಇನ್ನೆಂದೂ ಮಹಾರಾಷ್ಟ್ರದಲ್ಲಿ ವಾಸಿಸುವುದಿಲ್ಲವೆಂಬ ಕರಾರಿಗೆ ಒಪ್ಪಿದ್ದ. ಆಗ ತನಗೆ ದೊರೆತಿದ್ದ ಪುಣೆಯ ಜಹಗೀರನ್ನು ಪತ್ನಿ ಜೀಜಾಬಾಯಿಯ ವಶಪಡಿಸಿದ. ದಾದಾಜಿ ಕೊಂಡದೇವ ಬಾಲಕನಾಗಿದ್ದ ಶಿವಾಜಿಯ ರಕ್ಷಕನಾದ. ಶಿವಾಜಿಯ ವ್ಯಕ್ತಿತ್ವವನ್ನು ರೂಪಿಸಲು ಅವನ ತಾಯಿ, ಗುರುಗಳು ಬಲುಮಟ್ಟಿಗೆ ಕಾರಣ. ಸಂತ ತುಕಾರಾಮನ ಉಪದೇಶಗಳೂ ಅವನ ಮೇಲೆ ಪ್ರಭಾವ ಬೀರಿದ್ದುವು. ಪುಣೆಯ ಪಶ್ಚಿಮದ ಘಟ್ಟಗಳಲ್ಲಿ ಮಾವಳಿಗಳು ಅವನ ಬೆಂಬಲಿಗರಾದರು. ಗೊರಿಲ್ಲ ಕದನದಲ್ಲಿ ಅವರು ನೈಪುಣ್ಯ ಸಂಪಾದಿಸಿದ್ದರು. ಕ್ರಮೇಣ ಸ್ವಾತಂತ್ರ್ಯಾ ಪೇಕ್ಷಿಗಳಾಗಿ ಹಿಂದುಗಳಲ್ಲದ ಶತ್ರುಗಳಿಂದ ನಾಡನ್ನು ಮುಕ್ತಗೊಳಿಸುವ ಮನೋಭಾವ ಬೆಳೆಸಿಕೊಂಡರು. ಈತನ ಚಟುವಟಿಕೆಗಳನ್ನು ಗಮನಿಸಿದ ಆದಿಲ್‍ಷಹ ಅದನ್ನು ನಿವಾರಿಸಲು ಷಹಜಿಗೆ ಸೂಚಿಸಿದ. ಅದು ಫಲಿಸಲಿಲ್ಲ. ಸುಲ್ತಾನನ ಬಳಿ ಚರ್ಚಿಸಲು ಶಿವಾಜಿ ಬಿಜಾಪುರಕ್ಕೆ ಹೋಗಿ ಬಂದ. ಅವ್ಯವಸ್ಥಿತ ಗುಡ್ಡ ಗಾಡು ಪ್ರದೇಶವನ್ನು ಸುವ್ಯವಸ್ಥಿತಗೊಳಿಸುವುದು ತನ್ನ ಉದ್ದೇಶವೆಂದು ಸುಲ್ತಾನನಿಗೆ ತಿಳಿಸಿದನಾದರೂ ಹಿಂತಿರುಗಿದ ಬಳಿಕ ಕ್ರಮೇಣ ತನ್ನ ಅನುಯಾಯಿಗಳಾದ ಕನ್ಹೋಜಿ ಮುಂತಾದವರ ನೆರವಿನಿಂದ ಪುಣೆಯ ಪಶ್ಚಿಮಕ್ಕಿದ್ದ ಸಿಂಹಘಡ ಮೊದಲಾದ ಕೋಟಿಗಳನ್ನು ಗೆದ್ದುಕೊಂಡ. 1646ರಲ್ಲಿ ಬಿಜಾಪುರದ ಸುಲ್ತಾನ ಪಾಶ್ರ್ವವಾಯುವಿನಿಂದ ಹಾಸಿಗೆ ಹಿಡಿದಿದ್ದು ಈತನಿಗೆ ಹೆಚ್ಚು ಅವಕಾಶ ಕಲ್ಪಿಸಿತು. ಆದರೂ 1648ರಲ್ಲಿ ದಕ್ಷಿಣದ ಜೀಜಿಯಲ್ಲಿ ಕದನನಿರತವಾಗಿದ್ದ ಸುಲ್ತಾನನ ಸೈನ್ಯದ ನಾಯಕ ಮಸ್ತಫ್‍ಖಾನ್ ಅಲ್ಲಿಯೇ ತನ್ನ ಅಧೀನದಲ್ಲಿದ್ದ ಷಹಜಿಯನ್ನು ಸೆರೆಹಿಡಿದು ಬಿಜಾಪುರಕ್ಕೆ ಕರೆದೊಯ್ದು ಅವನಿಗೆ ಪ್ರಾಣಭೀತಿಯುಂಟುಮಾಡಿದಾಗ, ತಂದೆಯ ಕೋರಿಕೆಯನ್ನು ಮನ್ನಿಸಿ ಶಿವಾಜಿ ಸಿಂಹಘಡವನ್ನು ಬಿಟ್ಟುಕೊಟ್ಟ. 1657ರ ವೇಳೆಗೆ ಸ್ವರಾಜ್ಯದ ಮೊದಲ ಹಂತದಲ್ಲಿ ಪುಣೆ, ಸತಾರಾ ಜಿಲ್ಲೆಗಳ ಪ್ರದೇಶದಲ್ಲಿ ಸಣ್ಣ ರಾಜ್ಯಸ್ಥಾಪಿಸಿ ಅಲ್ಲಿ ಪ್ರತಾಪಘಡವೆಂಬ ಕೋಟೆ ಕಟ್ಟಿಸಿದ. 1656ರಲ್ಲಿ ಮಹಮದ್ ಆದಿಲ್‍ಷಹ ಅಸುನೀಗಿದ. ಆತನ ರಾಣಿ ಅಫಜಲ್ ಖಾನನನ್ನು ಶಿವಾಜಿಯ ವಿರುದ್ಧ ಸೇನೆಯೊಡನೆ ಕಳುಹಿಸಿದಳು. ಎರಡೂ ಪಕ್ಷಗಳ ಪ್ರತಿನಿಧಿಗಳು ಒಪ್ಪಿದಂತೆ ಈ ಇಬ್ಬರೂ ಪರಸ್ವರ ಪ್ರತಾಪಘಡದ ಕೋಟೆಯ ಕೆಳಗಡೆ ಭೇಟಿಮಾಡಿದಾಗ ಖಾನನ ಯೋಚನೆಯನ್ನು ಊಹಿಸಿದ್ದ ಶಿವಾಜಿ ಅವನನ್ನೇ ಕೊಂದ. ಪನ್ಹಾಳದ ಕೋಟೆ ಶಿವಾಜಿಗೆ ದಕ್ಕಿತು. ಉತ್ತರದಲ್ಲಿ ಷಹಜಹಾನ್ ತೀರಿಕೊಂಡಿದ್ದು ಔರಂಗಜೇಬ್ ಪಟ್ಟಕ್ಕೆ ಬಂದಿದ್ದ. ಆತ ಷಯಿಸ್ತಾಖಾನನನ್ನು ಶಿವಾಜಿ ವಿರುದ್ಧ ಕಳುಹಿಸಿದ. ಆತನ ಬಲದ ಮುಂದೆ ಶಿವಾಜಿ ಹೋರಾಡಲಾಗದೆ, ಒಂದು ರಾತ್ರಿ ಆತನ ಬೀಡನ್ನು ಮುತ್ತಿ ಅನೇಕರನ್ನು ಕೊಂದ. ಹೆದರಿದ ಮೊಗಲ್ ಸೈನ್ಯ ಹಿಂದಕ್ಕೆ ಸರಿಯಿತು. ಸೂರತ್ ಸ್ವಾಧೀನವಾಯಿತು. ಔರಂಗಜೇಬ ಈ ಬಾರಿ ರಾಜಾ ಜಯಸಿಂಹನನ್ನು ಬಿಟ್ಟುಕೊಟ್ಟನಲ್ಲದೆ ಸ್ವತಃ ಜಯಸಿಂಹದ ಆದೇಶದಂತೆ ಚಕ್ರವರ್ತಿಯನ್ನು ಕಾಣಲು ಹೋದ. ಈ ಸಂದರ್ಭದಲ್ಲಿ ಅವರ ನಡುವೆ ಪುರಂದರ ಒಪ್ಪಂದವಾಯಿತು. ಆದರೆ ಆಗ್ರದಲ್ಲಿ ಇವನನ್ನು ಬಂಧಿಸಿ ಸೆರೆಯಲ್ಲಿಡಲಾಯಿತು. ಕುಟಿಲೋಪಾಯದಿಂದ ಅಲ್ಲಿಂದ ತಪ್ಪಿಸಿಕೊಂಡು ಬಂದ ಬಳಿಕ ಔರಂಗಜೇಬ್ ಇವನಿಗೆ ರಾಜಾ ಎಂಬ ಬಿರುದನ್ನಿತ್ತು ಮಹಾರಾಷ್ಟ್ರದ ಸ್ವತಂತ್ರ ಅರಸನೆಂದು ಮನ್ನಣೆ ನೀಡಿದ. 1669ರಲ್ಲಿ ಔರಂಗಜೇಬನ ನೀತಿಯ ಪರಿಣಾಮವಾಗಿ ಕಾಶಿವಿಶ್ವನಾಥನ ಹಾಗೂ ಇತರ ದೇವಾಲಯಗಳನ್ನು ಹಾಳುಗೆಡಹುವ ಕಾರ್ಯ ಆರಂಭವಾದಾಗ ಶಿವಾಜಿ ಮತ್ತೆ ಕಾರ್ಯೋನ್ಮುಖನಾಗಿ ಸಿಂಹಘಡ ಹಾಗೂ ಇತರ ಕೋಟೆಗಳನ್ನು ವಶಪಡಿಸಿಕೊಂಡ. 1674 ಜೂನಿನಲ್ಲಿ ಈತನ ಪಟ್ಟಾಭಿಷೇಕ ವಿಜೃಂಭಣೆಯಿಂದ ಜರುಗಿತು. ಹಿಂದೂಧರ್ಮದ ಉತ್ಥಾನಕ್ಕಾಗಿ ಪರಕೀಯರ ವಿರುದ್ಧ ಯುದ್ಧ ಹೂಡಿದ. ಜಂಜೀರದ ಸಿದ್ಧಗಳು, ಪೋರ್ಚುಗೀಸರು ಈತನ ವಿರೋಧಿಗಳಾದರು. ಗೋಲ್ಕೊಂಡದಲ್ಲಿ ಅಬ್ದುಲ್ಲ ಕುತುಬ್‍ಷಹನಿಗೆ ಅಕ್ಕನ್ನ ಮದನ್ನ ಎಂಬ ಹಿಂದು ಪ್ರಧಾನಿಗಳಿದ್ದು, ಅವರ ಸಲಹೆಯಂತೆ ಆತ ಶಿವಾಜಿಯ ದಕ್ಷಿಣದ ದಂಡಯಾತ್ರೆಗೆ ನೆರವು ನೀಡಲು ಒಪ್ಪಿದ. ತಂಜಾವೂರಿನಲ್ಲಿ ಶಿವಾಜಿಯ ಮಲಸಹೋದರ ಬಿಜಾಪುರದ ಸುಲ್ತಾನನ ಸಾಮಂತನಾಗಿ ಫೋಷಿಸಿಕೊಂಡು ಶಿವಾಜಿಯನ್ನೇ ವಿರೋಧಿಸಿದ. ಶಿವಾಜಿ ಜಿಂಜಿ, ವೆಲ್ಲೂರು, ಪಾಂಡಿಚೇರಿ, ತಿರುವಲಪಾಡಿಗಳ ಮೂಲಕ ತಂಜಾವೂರಿನವರೆಗೂ ಹೋದ. ವಾಲಿಗಂಡಪುರಮ್ ಕದನದಲ್ಲಿ ಏಕೋಜಿಸೋತ. ಆದರೆ ಇದಾದ ಕೆಲವೇ ಕಾಲದ ಬಳಿಕ ಶಿವಾಜಿ ಸಾವನ್ನಪ್ಪಿದ ಕಾರಣ ಈ ದಂಡಯಾತ್ರೆಯ ಉದ್ದೇಶ ಸಫಲವಾಗಲಿಲ್ಲ. ಅಪಾರ ಸಂಪತ್ತು ಕೊಳ್ಳೆ ಹೊಡೆದದ್ದಷ್ಟೇ ಲಾಭವಾಗಿತ್ತು. ಶಿವಾಜಿಯ ಹಿರಿಯಮಗ ಷಂಬಾಜಿ ಮೂರ್ಖನಂತೆ ಮೊಗಲರ ದಿಲೀರ್‍ಖಾನನನ್ನು ಸೇರಿಕೊಂಡ. ಇಬ್ಬರೂ ಸೇರಿ ಸತಾರ ಸಮೀಪದ ಭೂಪಾಲಘಡವನ್ನು ಗೆದ್ದುಕೊಂಡು ಬಿಜಾಪುರವನ್ನು ಮುತ್ತಿದರು. ಆದರೆ ಮರಾಠರ ನೆರವಿನಿಂದ ಬಿಜಾಪುರ ಅವರಿಗೆ ದಕ್ಕಲಿಲ್ಲ. ಷಂಬಾಜಿ ಆ ಬಳಿಕ ದಿಲೀರ್‍ಖಾನನನ್ನು ತ್ಯಜಿಸಿ ತಂದೆಯ ಬಳಿ ಬಂದರೂ ಆತನ ನಡವಳಿಕೆ ಉತ್ತಮಗೊಳ್ಳಲಿಲ್ಲ. 1680 ಏಪ್ರಿಲ್‍ನಲ್ಲಿ ಶಿವಾಜಿ ಮರಣಹೊಂದಿದ.
- ಶಿವಾಜಿಯ ಅನಂತರ ಅಂತಃಕಲಹಗಳಾದುವು. ಕೊನೆಗೆ ಷಂಬಾಜಿ ಅಧಿಕಾರ ವಹಿಸಿದ. ಒಂಬತ್ತು ವರ್ಷಗಳ ಆಳ್ವಿಕೆಯಲ್ಲಿ (1680-89) ಈತ ಸಿದ್ಧಿಗಳೊಡನೆ, ಪೋರ್ಚುಗೀಸರೊಡನೆ ಕಾದಿದ. ಔರಂಗeóÉೀಬನ ಮಗ ಅಕ್ಬರನಿಗೆ ಆಶ್ರಯ ನೀಡಿ ಆತ ಸಾಮ್ರಾಟದ ವಿರುದ್ಧ ಯುದ್ಧ ಹೂಡಲು ನೆರವಾಗುವುದಾಗಿ ಆಶ್ವಾಸನೆ ನೀಡಿದನಾದರೂ ಕಾರ್ಯೋನ್ಮುಖನಾಗಲಿಲ್ಲ. ಕೆಲವು ವರ್ಷಗಳೇ ಕಾದಿದ್ದು ಅನಂತರ ಅಕ್ಬರ್ ಪರ್ಷಿಯಕ್ಕೆ ತಲೆಮರೆಸಿ ಹೋಗಬೇಕಾಯಿತು. ಷಂಬಾಜಿ ಸುತ್ತಲಿನ ಪ್ರದೇಶಗಳ ಕೊಳ್ಳೆ ಹೊಡೆಯುವುದರಲ್ಲಿ ಹೆಚ್ಚು ಆಸಕ್ತಿ ತೋರಿಸಿದ. ಇದರಿಂದ ರಾಜ್ಯ ಶಿಥಿಲಗೊಂಡಿತು. ಹಲವಾರು ಪ್ರದೇಶಗಳು ಕೈ ಬಿಟ್ಟವು. ಮೊಗಲರು ಇವನನ್ನು ಸಂಗಮೇಶ್ವರದಲ್ಲಿ ಸೆರೆಹಿಡಿದು, ಕ್ರೂರವಾಗಿ ಹಿಂಸಿಸಿ ಕೊಂದರು. (1687). ಈತ ವಿಶೇಷವಾಗಿ ಭೋಗವಿಲಾಸಗಳಲ್ಲಿ ನಿರತನಾಗಿ ಸ್ವಸಾಮಥ್ರ್ಯ ಕಳೆದುಕೊಂಡಿದ್ದ.
- ಷಂಬಾಜಿ ಸೆರೆಮನೆಯಲ್ಲಿಟ್ಟಿದ್ದ ಮಲಸೋದರ ರಾಜಾರಾಮನನ್ನು ಮಂತ್ರಿಗಳು ಅಧಿಕಾರಕ್ಕೆ ತಂದರು. ನಾಡಿನ ಸ್ವಾತಂತ್ರ್ಯಕ್ಕಾಗಿ ಮೊಗಲರ ವಿರುದ್ಧ ಹೋರಾಟಗಳು ಮುಂದುವರಿದುವು. ರಾಜಾರಾಮ ರಾಯಘಡದಿಂದ ಹೊರಟು ಪ್ರತಾಪಘಡ, ಪನ್ಹಾಳಗಳ ಮೂಲಕ ದಕ್ಷಿಣದ ಜಿಂಜಿ ತಲುಪಿದ. ಗೋರಿಲ್ಲ ಕದನಗಳ ಮೂಲಕ ಮೊಗಲರ ಸೈನ್ಯವನ್ನು ದಂಗುಗೊಳಿಸಿದ. ಆದರೂ ಅವರು ಇವನನ್ನು ಬೆನ್ನಟ್ಟಿ ಜಿಂಜಿಯನ್ನು ಮುತ್ತಿದರು. ಆದರೆ ಆ ವೇಳೆಗೆ ಆ ಕೋಟೆ ತ್ಯಜಿಸಿ ಸತಾರ್‍ಗೆ ಹಿಂತಿರುಗಿದ. ಅಲ್ಲಿಂದಲೂ ತಪ್ಪಿಸಿಕೊಂಡು ಅಹಮದ್‍ನಗರಕ್ಕೆ ಹೋಗುವ ಹಾದಿಯಲ್ಲಿ ಸಿಂಹಘಡದಲ್ಲಿ ಸತ್ತ (1700). ಮೋಲೊಂದರಂತೆ ಕೋಟೆಗಳನ್ನು ಕಸಿಯುತ್ರ ಬಂದನಾದರೂ ಮರಾಠರ ಕದನ ಕುಶಲತೆ ಅವನನ್ನು ಹಣ್ಣುಮಾಡಿತ್ತು.
- ಈ ಕಾಲಾವಧಿಯಲ್ಲಿ ದಕ್ಷಿಣಭಾರತದಲ್ಲಿ ಅಚ್ಯುತರಾಯ ವಿಜಯನಗರದ ಅರಸನಾಗಿದ್ದು, ಅಂತಃಕಲಹಗಳ ಪರಿಣಾಮವಾಗಿ ಸಾಮ್ರಾಜ್ಯದ ಅವನತಿ ಆರಂಭವಾಗಿತ್ತೆನ್ನಬೇಕು. ಸಾಳುವ ನರಸಿಂಹ ದಂಡನಾಯಕ ಅಚ್ಯುತರಾಯನ ಸಿಂಹಾಸನಾರೋಹಣಕ್ಕೆ ಶ್ರಮಿಸಿದನಾದರೂ ಆ ಬಳಿಕ ಅಚ್ಯುತರಾಯ ಅಳಿಯ ರಾಮರಾಯನನ್ನು ಅಧಿಕಾರದಲ್ಲಿಟ್ಟುಕೊಂಡದ್ದು ಆತನಿಗೆ ಸಹನವಾಗಲಿಲ್ಲ. ಉಮ್ಮತ್ತೂರು, ತಿರುವದಿಗಳಪಾಳೆಯಗಾರರೊಡಗೂಡಿ ದಂಗೆ ಎದ್ದ. ಅರಸ ಆತನನ್ನು ಅಡಗಿಸಿದ. ಇಷ್ಟರಲ್ಲಿ ಅಳಿಯ ರಾಮರಾಯ ಆದಿಲ್‍ಷಹ ನಿವೃತ್ತಿಗೊಳಿಸಿದ್ದ 3000 ಮಹಮದೀಯ ಸೈನಿಕರನ್ನು ತನ್ನ ಪಡೆಗೆ ಸೇರಿಸಿಕೊಂಡು ಅಚ್ಯುತರಾಯನನ್ನು ಸೆರೆಗೆ ತಳ್ಳಿದ. ಮತ್ತೆ ರಾಜ್ಯದೊಳಗೆ ಪರಸ್ಪರ ಜಗಳಗಳಾರಂಭವಾದುವು. ಇಬ್ರಾಹಿಮ್ ಆದಿಲ್‍ಷಹ ಮಧ್ಯ ಪ್ರವೇಶಿಸಿ ಅಚ್ಯುತರಾಯ ರಾಮರಾಯರ ನಡುವೆ ಒಂದು ಒಪ್ಪಂದವೇರ್ಪಡಿಸಿದ.
- ಅಚ್ಯುತರಾಯ ಗತಿಸಿದಾಗ (1542) ಮಗ ವೆಂಕಟರಾಯ ಅಧಿಕಾರಕ್ಕೆ ಬಂದು ಆತನನ್ನು ಪೋಷಕ ಪ್ರತಿನಿಧಿಯಾಗಿ ಸಲಕರಾಜು ಚಿನ ತಿರಮಲ ಪ್ರಬಲನಾದ. ಆತನನ್ನು ತಡೆಯಲು ರಾಜಮಾತೆ ವರಣಾಂಬಿಕೆ ಆದಿಲ್‍ಷಹನನ್ನು ಪ್ರಾರ್ಥಿಸಿದಳು. ಆ ಸಂದರ್ಭದಲ್ಲಿ ಸದಾಶಿವನನ್ನು ಬಿಡಿಸಿ, ಚಿನತಿರುಮಲನನ್ನು ತುಂಗಭದ್ರ ಕದನದಲ್ಲಿ ಕೊಂದು ಸದಾಶಿವನನ್ನು ಪಟ್ಟಕೇರಿಸಿದ. ಹೆಸರಿಗಷ್ಟೇ ಸದಾಶಿವ ಅರಸು. ಅಧಿಕಾರ ಸೂತ್ರಗಳಲ್ಲಿ ರಾಮರಾಯನವೇ ಆಗಿದ್ದುವು. ಆದರೆ ಒಂದು ದಶಕದ ಅನಂತರ (1553) ರಾಮರಾಯನೂ ಸದಾಶಿವನೊಡನೆ ಅರಸನೆಂದು ಫೋಷಿಸಿಕೊಂಡು ಆಡಳಿತದಲ್ಲಿ ಬದಲಾವಣೆಗಳನ್ನು ಮಾಡಿ ಪ್ರಮುಖ ಹುದ್ದೆಗಳಿಗೆ ಮಹಮದೀಯರನ್ನು ನೇಮಿಸಿದ. ಮೊದಲ ಬಾರಿಗೆ ರಾಜ್ಯವನ್ನು ಮತ್ತಷ್ಟು ವಿಸ್ತರಿಸುವ ದೃಷ್ಟಿಯಿಂದ ದಂಡಯಾತ್ರೆ ಕೈಗೊಂಡ. ಸೋದರರಾದ ಚಿನ್ನತಿಮ್ಮ ಮತ್ತು ವೆಂಕಣರು ದಕ್ಷಿಣಕ್ಕೆ ಹೋಗಿ ತೊಂಡೈಮಂಡಲವನ್ನು ವಶಪಡಿಸಿಕೊಂಡರು. ಚಿನ್ನತಿಮ್ಮ ಕನ್ಯಾಕುಮಾರಿಯವರೆಗೂ ಸಾಗಿ ಅಲ್ಲಿ ವಿಜಯಸ್ತಂಭವನ್ನು ನೆಟ್ಟ. ಪೋರ್ಚುಗೀಸರೊಡನೆ ಮೊದಲು ಸ್ನೇಹದಿಂದಿದ್ದರೂ ಅವರ ಅನೈತಿಕ ಚಟುವಟಿಕೆಗಳಿಂದ ಅವರ ಬೆನ್ನು ಮುರಿಯುವ ನಿರ್ಧಾರ ಕೈಗೊಂಡ. ಪೂರ್ವತೀರದಲ್ಲಿ ಸಾನ್‍ಥೊಮ್ ಹಾಗೂ ಪಶ್ಚಿಮದಲ್ಲಿ ಗೋವಗಳನ್ನು ಮುತ್ತಲಾಯಿತು. ರಾಮರಾಯ ಪೂರ್ವತೀರದಲ್ಲಿ ಅವರನ್ನು ಅಡಗಿಸಿ, ಸಂಪತ್ತನ್ನು ಸೂರೆಗೊಂಡು ತಾತ್ಕಾಲಿಕವಾಗಿಯಾದರೂ ಅವರು ವ್ಯಾಪಾರದಲ್ಲಷ್ಟೇ ನಿರತರಾಗುವಂತೆ ಮಾಡಿದ. ವಿಠಲ ಗೋದೆಗೆ ಹೋಗಿ ಪಂಜಿಮ್ ನಗರ ಗೆದ್ದುಕೊಂಡು ಅವರಿಂದ ಅಪಾರ ಕಪ್ಪಕಾಣಿಕೆಗಳನ್ನು ವಸೂಲುಮಾಡಿದ. ಆದರೆ ರಾಮರಾಯ ಬಹಮನಿ ಸುಲ್ತಾನರ ರಾಜಕೀಯದಲ್ಲಿ ಪ್ರವೇಶಿಸಿ, ಕುಟಿಲತೆಯಿಂದ ಅವರ ನಡುವೆ ಈಷ್ರ್ಯಾಸೂಯೆಗಳನ್ನುಂಟು ಮಾಡಿ ಬಿಜಾಪುರ, ಅಹಮದ್‍ನಗರ, ಬೀದರ್ ಮತ್ತು ಗೋಲ್ಕೊಂಡ ಸುಲ್ತಾನರೊಡನೆ ಕಾದಿದ. ಕೊನೆಗೊಮ್ಮೆ ಅವರು ಎಚ್ಚತ್ತು, ತಮ್ಮನ್ನು ಕಾಪಾಡಿಕೊಳ್ಳಲು ತಾವು ಒಟ್ಟಾಗಬೇಕೆಂದು ನಿರ್ಧರಿಸಿ ಹಿಂದೂ ಸಾಮ್ರಾಜ್ಯದ ವಿರುದ್ಧ ಧರ್ಮಯುದ್ಧ ಸಾರಿದರು. ಇದರ ಪರಿಣಾಮ 1585 ರಲ್ಲಿ ನಡೆದ ರಕ್ಕಸತಂಗಡಿ ಕದನ. ಈ ಕದನದ ವಿವರಗಳು ತಿಳಿದುವಂದಿಲ್ಲವಾದರೂ ಇದರ ಅಂತಿಮ ಪರಿಣಾಮ ಮಾತ್ರ ಭೀಕರವಾಗಿತ್ತು. ರಾಮರಾಯ ಸೋತು ಕೊಲ್ಲಲ್ಪಟ್ಟ. ಸೈನ್ಯ ಚಲ್ಲಾಪಿಲ್ಲಿಯಾಗಿ ಚದರಿತು. ಸೋದರರಾದ ತಿರುಮಲ, ವೆಂಕಟರು ಹಂಪೆಗೆ ಧಾವಿಸಿ, ಸಾಗಿಸಬಹುದಾದಷ್ಟು ಸಂಪತ್ತನ್ನು ಪೆನುಗೊಂಡೆಗೆ ಸಾಗಿಸಿದರು. ಹಂಪೆ ಶತ್ರುಗಳ ವಶವಾಗಿ ಸುಲಿಗೆ, ಕೊಲೆಗಳು ತಾಂಡವವಾಡಿದುವು. ಹಂಪೆ ಪಾಳು ಬಿತ್ತು.
- ಕೋಲಾಹಲ ಪರಿಸ್ಥಿತಿಗಳ ಪ್ರಯೋಜನ ಪಡೆದು ಮಧುರೆ, ಜಿಂಜಿ ತಂಜಾವೂರುಗಳಲ್ಲಿ ಅಲ್ಲಿಯ ಅಮರನಾಯಕರು ಸ್ವತಂತ್ರ ಪಾಳೆಯಪಟ್ಟುಗಳನ್ನು ಆರಂಭಿಸಿದರು. ಪೆನುಗೊಂಡೆಯಲ್ಲೂ ರಾಮರಾಯರ ಮಕ್ಕಳು ಪ್ರಭುತ್ವಕ್ಕಾಗಿ ದಂಗೆ ಎದ್ದರು: ಬಿಜಾಪುರ ಸುಲ್ತಾನ ಇದರಲ್ಲಿ ತಲೆಹಾಕಿದ. ಆದೋನಿ ಅವನ ವಶವಾಯಿತು. ಆದರೂ ತಿರಮಲ ಪೆನುಗೊಂಡೆಯ ದಕ್ಷಿಣದ ಭಾಗಗಳನ್ನು ರಕ್ಷಿಸಿಕೊಂಡ. ಸ್ವತಂತ್ರರಾಗಿದ್ದ ನಾಯಕರಿಗೆ ಮನ್ನಣೆ ನೀಡಿ ಅಳಿದುಳಿದ ಸಾಮ್ರಾಜ್ಯದ ಸ್ಥಿರತೆಗೆ ಶ್ರಮಿಸಿದ. ಮಕ್ಕಳಾದ ಶ್ರೀರಂಗ, ರಾಮ ಮತ್ತು ವೆಂಕಟಪತಿಗಳು ಕ್ರಮವಾಗಿ ಪೆನುಗೊಂಡೆಯಿಂದ ತೆಲುಗು ಪ್ರಾಂತ್ಯಗಳು, ಶ್ರೀರಂಗಪಟ್ಟಣದಿಂದ ಕರ್ನಾಟಕದ ಹಾಗೂ ಚಂದ್ರಗಿರಿಯಿಂದ ತಮಿಳು ಪ್ರಾಂತ್ಯಗಳು ಅಧಿಕಾರಿಗಳಾದರು. ಅನಂತರದ ಅರಷ ಶ್ರೀರಂಗ (1572-85) ಬಿಜಾಪುರ, ಗೋಲ್ಕೊಂಡ ಸುಲ್ತಾನರ ದಾಳಿಗಳನ್ನೆದುರಿಸಬೇಕಾಯಿತು. ಆಂಧ್ರದ ತೀರಪ್ರದೇಶ ಹಾಗೂ ಉತ್ತರ ಕರ್ನಾಟಕದ ಭಾಗಗಳು ಅವನ ಕೈಬಿಟ್ಟವು. ಇಮ್ಮಡಿ ವೆಂಕಟ (1986-1614) ಹೀಗೆ ಕಳೆದುಕೊಂಡಿದ್ದ ಪ್ರದೇಶಗಳಲ್ಲಿ ಬಹಳಷ್ಟನ್ನು ಪುನಃ ಗೆದ್ದುಕೊಂಡ. ಹಲವಾರು ಸಾಮಂತರು ಪಾಳೆಯಗಾರರು ಇವನಿಂದ ಸೋಲಿಸಲ್ಪಟ್ಟರು. ಇವನ ಬಳಿಕ ಮತ್ತೊಮ್ಮೆ ಅಧಿಕಾರಕ್ಕಾಗಿ ಕಚ್ಚಾಟ, ಅನಿಶ್ಚಿತ ಪರಿಸ್ಥಿತಿಗಳುಂಟಾದುವು. ಮುಮ್ಮಡಿ ಶ್ರೀರಂಗ (1642-49) ನಂದುತ್ತಿದ್ದ ದೀಪ ಹಚ್ಚಲು ಯತ್ನಿಸಿದ. ಆದರೆ ದಕ್ಷಿಣದ ನಾಯಕರು ಇವನನ್ನು ವಿರೋಧಿಸಿ ಸುಲ್ತಾನರಿಗೆ ಸಹಾಯ ಮಾಡಿದರು. ಹೇಗೋ ಹಲವಾರು ವರ್ಷ ಅವರೊಡನೆಲ್ಲ ಹೋರಾಡಿದ ಈತನ ಸ್ಥೈರ್ಯ ಶ್ಲಾಘನೀಯ. ವಾಸ್ತವವಾಗಿ ಈತ ತನ್ನದಾದ ಎಲ್ಲವನ್ನೂ ಕಳೆದುಕೊಂಡು ರಾಜ್ಯವಿಲ್ಲದ ರಾಜನಾದ. ಕೊನೆಗೊಮ್ಮೆ ಇಕ್ಕೇರಿ, ಮೈಸೂರುಗಳಲ್ಲಿ ಆಶ್ರಯ ಪಡೆದ. ಇವರೊಂದಿಗೆ ವಿಜಯನಗರ ಕಣ್ಮರೆಯಾಯಿತು.
- 1490ರಲ್ಲಿ ಬಹಮನೀರಾಜ್ಯ ಐವರು ಸುಲ್ತಾನರ ನಾಯಕತ್ವಗಳಲ್ಲಿ ಒಡೆಯಿತು. ಅಹಮದ್ ನಗರದಲ್ಲಿ ನಿಜಾಮ್ ಷಾಹಿಗಳು ಬೀರಾರಿನಲ್ಲಿ ಇಮಾದ್ ಷಾಹಿಗಳು, ಗೋಲ್ಕೊಂಡದಲ್ಲಿ ಕುತುಬ್ ಷಾಹಿಗಳು, ಬಿಜಾಪುರದಲ್ಲಿ ಆದಿಲ್ ಷಾಹಿಗಳು, ಬಿದುರಿನಲ್ಲಿ ಬರೀದ್ ಷಾಹಿಗಳು ಸ್ವತಂತ್ರವಾಗಿ ಆಳತೊಡಗಿದರು. ಅನಂತರದ ಶತಮಾನದಲ್ಲಿ ಅವರು ಪರಸ್ವರ ಕದನಗಳಲ್ಲಿ ಮುಂದುವರಿಸಿದರು. ರಕ್ಕಸತಂಗಡಿ ಕದನದಲ್ಲಷ್ಟೆ ಇವರು ಒಟ್ಟಾಗಿದ್ದರು. ಅನಂತರ ಬೀರಾರನ್ನು ನಿಜಾಮ್ ಷಹ ವಶಪಡಿಸಿಕೊಂಡ (1574). ಮೊದಲನೆಯ ಅಲಿ ಅದಿಲ್ ಷಹನ ಪತ್ನಿ ಚಾಂದ್ ಸುಲ್ತಾನಾ ಅಹಮದ್ ನಗರದ ಬಹದೂರ್‍ಷಹನ ಪರವಾಗಿ ರಾಜಪ್ರತಿನಿಧಿಯಾಗಿ ಅಧಿಕಾರವಹಿಸಿ ಅಹಮದ್‍ನಗರದ ಬಹದೂರ್‍ಷಹನ ಪರವಾಗಿ ರಾಜಪ್ರತಿನಿಧಿಯಾಗಿ ಅಧಿಕಾರವಹಿಸಿ ಅಹಮದ್‍ನಗರ ಮೊಗಲರ ವಶವಾಗದಿರಲು ಶ್ರಮಿಸಿದಳು. ಅದರೆ 1600ರಲ್ಲಿ ಆಕೆ ಕೊಲ್ಲಲ್ಪಟ್ಟಳು. ಅಹಮದ್‍ನಗರ ಮೊಗಲರದಾಯಿತು. ಆದರೂ ಪ್ರಭಾವಶಾಲಿ ಶ್ರೀಮಂತನಾದ ಮಲಿಕ್ ಅಂಬರ್ ರಾಜ್ಯದ ಬಹುಭಾಗಕ್ಕೆ ಅಧಿಕಾರಿಯಾಗಿ ಸ್ವತಂತ್ರನಾಗಿ ಆಳಿದ. ಮುರ್ತಜಾ ನಿಜಾಮ್ ಷಹನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ. ಆರಂಭದಲ್ಲಿ ಪರೇಂದ್ರ ಅನಂತರ ಜುನ್ನತ್ ಇವನ ರಾಜಧಾನಿಯಾಯಿತು. ಈತ ಸಾಯುವ ತನಕವೂ (1626) ನಿರಂತರವಾಗಿ ಮೊಗಲರೊಡನೆ ಕಾದು ಅಹಮದ್‍ನಗರವನ್ನು ಸ್ವತಂತ್ರಗೊಳಿಸಿ ರಕ್ಷಿಸಿದ. ಜಹಾಂಗೀರ್, ಇವನ ಮಗ ಷಹಜಾನ್ ಹಾಗೂ ಇವನ ಸೇನಾನಿಗಳ ಶ್ರಮಗಳಾವುವೂ ಯಶಸ್ವಿಯಾಗಲಿಲ್ಲ. ಆದರೆ 1633ರ ವೇಳೆಗೆ ಷಹಜಹಾನ್ ಅಹಮದ್‍ನಗರವನ್ನು ಅಂತಿಮವಾಗಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಬೀರಾರಿನ ಇಮಾದ್‍ಷಾಹಿಗಳು ಒಂದು ಶತಮಾನ ಕಾಲವೂ ಸ್ವತಂತ್ರವಾಗಿರಲಿಲ್ಲ. ಅಹಮದ್‍ನಗರದೊಡನೆ ನಿರಂತರ ಹೋರಾಟಗಳಲ್ಲಿ ಮೂವರು ಸುಲ್ತಾನರು ಜೀವತೆಯ್ದರು. ಆದರೆ 1574ರಲ್ಲಿ ಅಹಮದ್‍ನಗರದಲ್ಲಿ ಅವರ ರಾಜ್ಯ ವಿಲೀನಗೊಂಡಿತು. ಬಹಮನಿಯ ಮೂರನೆಯ ಮಹಮೂದ್ ಷಹ ತನ್ನ ಪ್ರಧಾನಿ ಖಾಸಿಮ್ ಬರೀದ ಮತ್ತು ಅವನ ಮಗ ಅಮೀರ್ ಬರೀದನ ಕೈಗೊಂಬೆಯಾಗಿದ್ದ. 1518ರಲ್ಲಿ ಆತ ಮಡಿದ. ಅನಂತರ ಬಂದ ನಾಲ್ವರು ಬಹಮನಿ ಅರಸರೂ ಅಸಮರ್ಥರಾಗಿದ್ದರು. ಕೊನೆಯವನಾದ ಕಲಿಮುಲ್ಲಾ ಬರೀದನಿಂದ ಅಧಿಕಾರ ಹಿಂದಕ್ಕೆ ಪಡೆಯಲು ಬಾಬರನ ನೆರವನ್ನಪೇಕ್ಷಿಸಿದ. ಅದು ಫಲಿಸದೆ ಹೋಯಿತು. 1528ರಲ್ಲಿ ಬರೀದ ಬೀದರಿನ ಸುಲ್ತಾನನಾದ. ಈತ ಸುನ್ನಿ ಪಂಗಡಕ್ಕೆ ಸೇರಿದ್ದು ಷಿಯಾ ಪಂಗಡದ ಬಿಜಾಪುರದ ಸುಲ್ತಾನನೊಡನೆ ಕದನಗಳನ್ನು ಹೂಡಿದ. ಈತನ ಮಗ ಅಲಿ ಷಹ ಎಂಬ ಬಿರುದನ್ನು ಧರಿಸಿದ. ಈತ ಹೆಚ್ಚು ಸುಸಂಸ್ಕøತ. ಬೀದರಿನ ರಂಗೀನ್ ಮಹಲ್ ಇವನ ಕಲಾಭಿರುಚಿಗೆ ಸಾಕ್ಷಿ. ಅನಂತರ ಬಂದವರೆಲ್ಲರೂ ಅಸಮರ್ಥರಾಗಿದ್ದರು. ಮೂರನೆಯ ಅಮಿರ್ ಬರೀದ್ ಕೊನೆಯ ಸುಲ್ತಾನ. ಈತನ ಕಾಲದಲ್ಲಿ ಬೀದರ್ ಬಿಜಾಪುರದ ಸುಲ್ತಾನನ ವಶವಾಯಿತು. ಗೋಲ್ಕೊಂಡದ ಕುತುಬ್ ಷಾಹಿ ಮನೆತನದ ಮೂಲಪುರುಷ ಖುಲೀ ಕುತುಬ್ ಉಲ್ ಮುಲ್ಕ್. ಈತ ಆಂಧ್ರದ ತೆಲಂಗಾಣಾದಲ್ಲಿಯ ಹಲವಾರು ಕೋಟೆಗಳನ್ನು ಗೆದ್ದುಕೊಂಡು ರಾಜ್ಯ ವಿಸ್ತರಿಸಿದ. ಗೋಲ್ಕೊಂಡದ ಜಮೀಮಸೀದಿ ಇವನ ಕೊಡುಗೆ. ಇವನ ಎರಡನೆಯ ಮಗ ಜಂಷೀದ್ ಇವನನ್ನು ಕೊಲೆಮಾಡಿ ಪಟ್ಟಕ್ಕೆ ಬಂದ (1543). ಈತ ರಾಜನೀತಿಜ್ಞ. ಗೋಲ್ಕೊಂಡಕ್ಕೆ ಪ್ರಾಮುಖ್ಯ ಬಂದುದು ಇವನಿಂದಲೇ. ಇವನ ನೆರವನ್ನು ಇತರ ಸುಲ್ತಾನರು ಬಯಸುವಷ್ಟು ಪ್ರಬಲನಾದ. 1550ರಲ್ಲಿ ಈತನ ತಮ್ಮ ಇಬ್ರಾಹಿಮ್ ಸಿಂಹಾಸನವನ್ನೇರಿದ. ಅದಕ್ಕೆ ಮೊದಲು ಸುಮಾರು ಏಳು ವರ್ಷಗಳು ಈತ ವಿಜಯನಗರದ ಆಶ್ರಯದಲ್ಲಿದ್ದ. ತಾಳೀಕೋಟೆ ಕದನದ ಬಳಿಕ ಅಹೋಬಲಮಿನ ನರಸಿಂಹ ದೇವಾಲಯವನ್ನು ಹಾಳುಗೆಡವಿ ಉದಯಗಿರಿ, ಪೆನುಕೊಂಡ, ಕೊಂಡವೀಡುಗಳನ್ನು ಗೆದ್ದುಕೊಂಡ. ಈತನ ಕಾಲದಲ್ಲಿ ವಾಣಿಜ್ಯ ಅಭಿವೃದ್ಧಿಹೊಂದಿತು. ಚೂರದ ತುರ್ಕಿಸ್ತಾನ, ಅರೇಬಿಯ, ಪರ್ಷಿಯಗಳಿಂದ ವರ್ತಕರು ಇಲ್ಲಿಗೆ ವ್ಯಾಪಾರವಹಿವಾಟುಗಳಿಗಾಗಿ ಬರುತ್ತಿದ್ದರು. ಗೋಲ್ಕೊಂಡ ನಗರವನ್ನು ಸುಂದರಗೊಳಿಸಿ ಹುಸೇನ್ ಸಾಗರಗಳಲ್ಲಿ ಕೆರೆಗಳನ್ನು ತೋಡಿಸಿ ಮೂಸಿ ನದಿಯ ಮೇಲೆ ಸೇತುವೆ ಕಟ್ಟಿಸಿದ. ಉರ್ದುಭಾಷೆಯಲ್ಲದೆ ತೆಲುಗು ಭಾಷೆಗೂ ಪ್ರೋತ್ಸಾಹ ನೀಡಿದ. ಮಹಮ್ಮದ್ ಖುಲೀ ಸಹ ಉತ್ತಮ ಆಡಳಿತಗಾರ, ಸೇನಾನಿ. ವಿಜಯನಗರದ ಇಮ್ಮಡಿ ವೆಂಕಟನೊಡನೆ ಕಾದಿದ. ಈತನ ಆಸ್ಥಾನಕ್ಕೆ ಪರ್ಷಿಯದ ಷಹ ಆಬ್ಬಾಸ್ ರಾಯಭಾರಿಯನ್ನು ಕಳುಹಿಸಿದ. ಹೈದರಾಬಾದ್ ನಗರವನ್ನು ನೆಲೆಗೊಳಿಸಿ ಅಲ್ಲಿ ಉತ್ತಮ ಕಟ್ಟಡಗಳನ್ನು ಕಟ್ಟಿಸಿದ. ಅನಂತರ ಆಳಿದ ಕುತುಬ್ ಷಾಹಿಗಳು ರಾಜ್ಯ ಶೈಥಿಲ್ಯಕ್ಕೆ ಎಡೆ ಮಾಡಿಕೊಟ್ಟರು. ಅಬ್ದುಲನ (1626-72) ಪ್ರಧಾನಿ ಮೀರ್‍ಜಮ್ಲ ಪರ್ಷಿಯದಿಂದ ಬಂದು ವಜ್ರ ವ್ಯಾಪಾರಿಯಾಗಿ ಹೆಸರುವಾಸಿಯಾಗಿ ಅಪಾರಸಂಪತ್ತನ್ನು ಗಳಿಸಿ ಹಿಂದೂ ದೇವಾಲಯಗಳನ್ನು ಸೂರೆಗೊಂಡ. ಔರಂಗಜೇಬ ದಕ್ಖನಿಗೆ ಬಂದಾಗ ಇವನನ್ನು ತನ್ನ ಪರವಾಗಿ ಮಾಡಿಕೊಳ್ಳಲು ಯತ್ನಿಸಿದ. ಅಬ್ದುಲನ ಅಳಿಯ ಅಬುಹಸನ್ ಆಳತೊಡಗಿದಾಗ ಮಾದನ್ನ ಅಕ್ಕನ್ನ ಎಂಬಿಬ್ಬರು ಹಿಂದುಗಳು ಕ್ರಮವಾಗಿ ಅವನ ಪ್ರಧಾನಿ ಮತ್ತು ಸೇನಾನಿಗಳಾಗಿದ್ದರು. ಆದರೆ 1686ರಲ್ಲಿ ಇವರು ಕೊಲ್ಲಲ್ಪಟ್ಟರು. ಔರಂಗeóÉೀಬ್ ಹೈದರಾಬಾದನ್ನು ಆಕ್ರಮಿಸಿ ಗೋಲ್ಕೊಂಡದ ಕೋಟೆಯನ್ನು ಮುತ್ತಿದ. ಎಂಟು ತಿಂಗಳುಗಳ ಬಳಿಕ, ಕುಟಿಲತೆಯಿಂದ ಕೋಟೆಯನ್ನು ಪ್ರವೇಶಿಸಿ ಅಬುಲ್‍ಹಸನ್‍ನನ್ನು ಸೆರೆಹಿಡಿದು ರಾಜ್ಯವನ್ನು ವಿಲೀನಗೊಳಿಸಿದ. ಐವರು ಸುಲ್ತಾನರಲ್ಲಿ ಬಹಳ ಖ್ಯಾತಿವೆತ್ತವರು ಬಿಜಾಪುರ ಆದಿಲ್‍ಷಾಹಿಗಳು. ಯೂಸುಫ್ ಆದಿಲ್‍ಖಾನ್ ಇದರ ಮೊದಲ ಷಾಹಿ. ಇಸ್ಮಾಯಿಲ್ (1510-34) ಕೃಷ್ಣದೇವರಾಯನಿಗೆ ರಾಯಚೂರು ಕೋಟೆಯನ್ನು ಬಿಟ್ಟುಕೊಟ್ಟರೂ ಆ ಅರಸ ಗತಿಸಿದ ಬಳಿಕ ಅದನ್ನು ಪುನಃ ಗೆದ್ದುಕೊಂಡ. ಅಚ್ಯುತ ಮತ್ತು ರಾಮರಾಯರ ಕಲಹಗಳಲ್ಲಿ ಪ್ರವೇಶಿಸಿದ ಇಬ್ರಾಹಿಮ್ (1535-57) ವಿಜಯನಗರವನ್ನು ಮುತ್ತಿ ಸಂಪತ್ತು ಸೂರೆಗೊಂಡ. ಪೋರ್ಚುಗೀಸರೊಡನೆ ಹೋರಾಡಿದನಾದರೂ ಕೊನೆಗೆ ಅವರೊಂದಿಗೆ ಶಾಂತಿ ಒಪ್ಪಂದಮಾಡಿಕೊಂಡ. ಇಬ್ರಾಹಿಮ್ ರಾಜ್ಯದಲ್ಲಿ ಸುನ್ನಿ ಧರ್ಮವನ್ನು ರಾಜಧರ್ಮವಾಗಿ ಪೋಷಿಸಿದ್ದ. ಆದರೆ ಅಲಿ ಆದಿಲ್ ಷಹ (1557-80) ಪುನಃ ಷಿಯ ಪಂಗಡಕ್ಕೆ ಮಾನ್ಯತೆ ನೀಡಿದ. ಅಳಿಯ ರಾಮರಾಯನಿಗೆ ಆಪ್ತನೆನಿಸಿಕೊಂಡಿದ್ದ ಈತ ಅಂತಿಮವಾಗಿ ಇತರ ಷಾಹಿಗಳೊಡಗೂಡಿ ತಾಳೀಕೋಟೆ ಕದನದಲ್ಲಿ ಪಾಲ್ಗೊಂಡ. ಪನುಗೊಂಡೆ ಕೋಟೆಯನ್ನು ಮುತ್ತಿದಾಗ ಶ್ರೀರಂಗನು ಚನ್ನಪ್ಪನಾಯಕ ಹಾಗೂ ಇತರರ ನೆರವಿನಿಂದ ಇವನನ್ನು ಹೊರದೂಡಿದ. ಇಮ್ಮಡಿ ಇಬ್ರಾಹಿಮ್‍ನ ಕಾಲದಲ್ಲಿ (1580-1627) ಅಂತಃಕಲಹಗಳಿಂದ ರಾಜ್ಯದಸ್ಥಿತಿ ಹದಗೆಟ್ಟಿತು. ಆದರೆ ಈ ಸಂದರ್ಭದಲ್ಲಿ ಆತನ ಪತ್ನಿ ಚಾಂದ್‍ಸುಲ್ತಾನಾ ಗರ್ಮನಾರ್ಹ ಪಾತ್ರವಹಿಸಿ ಪರಿಸ್ಥಿತಿ ಹತೋಟಿಗೆ ತರಲು ಶ್ರಮಿಸಿದಳು. ಇಬ್ರಾಹಿಮ್ ಸ್ವತಃ ಆಳತೊಡಗಿದಾಗ ಮಲ್ಲಿಕ್ ಅಂಬರನೊಡಗೂಡಿ ಮೊಗಲರು ಈ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದನ್ನು ತಡೆದ. ಬೀದರ್ ಬಿಜಾಪುರಕ್ಕೆ ಸೇರಿತು. ಇವನ ಕಾಲದಲ್ಲಿ ಮಹಮ್ಮದ್ ಕಾಸಿಮ್ ಫಿರಿಸ್ತಾ ತನ್ನ ತಾರೀಕ್ ಇ ಫಿರಿಸ್ತಾ ಗ್ರಂಥ ರಚಿಸಿದ. ಮುಹಮ್ಮದ್ ಆಳತೊಡಗಿದಾಗ ಷಹಜಹಾನ್ ಬಿಜಾಪುರ, ಗೋಲ್ಕೊಂಡಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿದ. ಮುಹಮ್ಮದ್ ಅವನನ್ನು ಎದುರಿಸಿದ. ಅಂತಿಮವಾಗಿ ಅವರಲ್ಲಿ ಒಪ್ಪಂದವಾಗಿ ಮೊಗಲರಿಗೆ ವಾರ್ಷಿಕ ಕಪ್ಪಕೊಡಲು ಮುಹಮ್ಮದ್ ಒಪ್ಪಿದ. ಅನಂತರ ದಕ್ಷಿಣದಲ್ಲಿ ಇಕ್ಕೇರಿ, ಬಸವಪಟ್ಟಣ ತರೀಕೆರೆ ಮುಂತಾದ ಪಾಳೆಯಪಟ್ಟುಗಳ ಮೇಲೆ ದಂಡೆತ್ತಿ ರಾಜ್ಯ ವಿಸ್ತರಿಸಿದ. ಶಿವಾಜಿಯೊಡನೆ ಕಾದಿದ. ಗೋಲ್‍ಗುಂಬಜ್ ಈತನ ಕೊಡುಗೆ. ಇಮ್ಮಡಿ ಅಲಿ (1656-72) ಮೊಗಲರು ಹಾಗೂ ಮರಾಠರ ವಿರುದ್ಧ ಕಾದಬೇಕಾಯಿತು. ಔರಂಗeóÉೀಬನಿಗೆ ವಾರ್ಷಿಕ ಪೊಗದಿ ಕೊಡಲು ಒಪ್ಪಿದುದಲ್ಲದೆ ಬೀದರ್, ಕಲ್ಯಾಣಿ ಮುಂತಾದ ಕೋಟೆಗಳನ್ನು ಬಿಟ್ಟುಕೊಡಬೇಕಾಯಿತು. ದಕ್ಷಿಣದ ಇಕ್ಕೇರಿ, ತಂಜಾವೂರು, ಮಧುರೆಗಳ ನಾಯಕರು ಸಹ ದಂಗೆ ಎದ್ದರು. ಇವನ ಆಸ್ಥಾನದಲ್ಲಿ ಹೆಸರಾಂತ ಉರ್ದು ಕವಿಗಳಿದ್ದರು. ಸಿಕಂದರ್ (1672-86) ಈ ಮನೆತನದ ಕೊನೆಯ ಷಹ. ಆಂತರಿಕ ಕಲಹಗಳಿಂದ ರಾಜ್ಯದ ಬೊಕ್ಕಸ ಬರಿದಾಗಿತ್ತು. ಆರ್ಥಿಕಸ್ಥಿತಿ ಹದಗೆಟ್ಟಿತು. ಔರಂಗಜೇóಬ್ ಈ ರಾಜ್ಯವನ್ನು ವಶಪಡಿಸಿಕೊಳ್ಳಲು ಸನ್ನಾಹ ನಡೆಸಿದ್ದ. ಮೊದಲು ಯುವರಾಜ ಅಜಮ್‍ನನ್ನು ಕಳುಹಿಸಿ, ಅನಂತರ ಸ್ವತಃ ಸೇನಾನಾಯಕತ್ವವಹಿಸಿ ಬಿಜಾಪುರ ಸೈನ್ಯವನ್ನು ಸದೆಬಡಿದ. ಸಕಂದರ ಹತಾಶನಾಗಿ ರಾಜ್ಯ ಒಪ್ಪಿಸಿದ (1686). ವಾರ್ಷಿಕವೇತನ ಕೊಡುವುದಾಗಿ ಒಪ್ಪಿದರೂ ಅವನನ್ನು ಕಾರಾಗೃಹದಲ್ಲಿ ಬಂಧಿಸಲಾಯಿತು. ಯಾತನಾಮಯವಾಗಿ ಜೈಲುವಾಸ ಅನುಭವಿಸಿ ಮರಣಹೊಂದಿದ (1700). ಅವನೊಂದಿಗೆ ಬಿಜಾಪುರ ರಾಜ್ಯ ಅಸ್ತಂಗತವಾಯಿತು.
- (ಜಿ.ಬಿ.ಆರ್.)
- 5 ಬ್ರಿಟಿಷರ ಕಾಲ
- ಮೊಗಲ್ ಸಾಮ್ರಾಜ್ಯದ ಅನಂತರ ಭಾರತದ ಅಧಿರಾಜತ್ವಕ್ಕೆ ಉತ್ತರಾಧಿಕಾರಿಗಳಾಗಿ 18ನೆಯ ಶತಮಾನದಲ್ಲಿ ಇಡೀ ದೇಶದ ಮೇಲೆ ಪರಾಧಿಕಾರ ಹೊಂದಲು ಯತ್ನಿಸಿ ತಕ್ಕಮಟ್ಟಿಗೆ ಯಶಸ್ಸುಕಂಡ ಮರಾಠಾ ಒಕ್ಕೂಟದ ಕೇಂದ್ರವಾಗಿದ್ದ ಪೇಶ್ವೆಯ ಅಧಿಕಾರ 1818ರಲ್ಲಿ ಕೊನೆಗೊಂಡಿತು. ಬ್ರಿಟಿಷರೇ ಅಧಿಪತಿಗಳೆಂಬುದು ಖಚಿತವಾಯಿತು. ಎರಡನೆಯ ಪೇಶ್ವೆ ಬಾಜಿ ರಾವ್ ಪದಚ್ಯುತನಾದಾಗ ಕ್ಲೈವ್ ಬ್ರಿಟಿಷ್ ಸಾಮ್ರಾಜ್ಯದ ಬೀಜ ಬಿತ್ತಿದ, ಶತ್ರು ಶಕ್ತಿಗಳಿಂದ ಆಗಬಹುದಾದ ಅಪಾಯದಿಂದ ವಾರನ್ ಹೇಸ್ಟಿಂಗ್ಸ್ ಅದನ್ನು ರಕ್ಷಿಸಿದ, ವೆಲ್ಲೆಸ್ಲಿ ಮೊಳೆತ ಗಿಡವನ್ನು ಪೋಷಿಸಿ ಬೆಳೆಸಿದ. ಹೇಸ್ಟಿಂಗ್ಸ್ ಫಲವನ್ನು ಗ್ರಹಿಸಿದ ಎಂಬುದಾಗಿ ಹೇಸ್ಟಿಂಗ್ಸನ ಸಾಧನೆಯನ್ನು ಬಣ್ಣಿಸಲಾಗಿದೆ. ಇಲ್ಲಿಂದ ಆರಂಭಿಸಿ 1857-58ರ ತನಕ ಭಾರತದ ಇತಿಹಾಸ ಬ್ರಿಟಿಷರ ಆಳ್ವಿಕೆ ದೃಢವಾಗಿ ಬೇರುಬಿಟ್ಟ ಅವಧಿಯ ಹಂತ.
- ಈ ಅವಧಿಯಲ್ಲಿ ಆಗಿಹೋದ ಗವರ್ನರ್ ಜನರಲ್‍ಗಳ ಆಡಳಿತದ ಸಿಂಹಾವಲೋಕನವನ್ನಿಲ್ಲಿ ಮಾಡಲಾಗಿದೆ. 1813 ಅಕ್ಟೋಬರ್ 4 ರಿಂದ 1823 ಜನವರಿ ತಿಂಗಳ ತನಕ ಲಾರ್ಡ್ ಹೇಸ್ಟಿಂಗ್ಸ್ ಇದ್ದ. ನೇಪಾಲದ ವಿರುದ್ಧ ಯುದ್ಧ ಹೂಡಿ (1810) ಆ ದೇಶದಿಂದ ಗಡವಾಲ್ ಮತ್ತು ಕುಮಾಂಉ ಪ್ರದೇಶಗಳನ್ನು ಗೆದ್ದು ನೇಪಾಲ ಬ್ರಿಟಿಷರ ಜೊತೆ ಸ್ನೇಹದಿಂದಿರುವಂತೆ ಮಾಡಿದ. ಇದೇ ಕಾಲಕ್ಕೆ ಬ್ರಿಟಿಷರು ಸಿಕ್ಕಿಮ್ ಜೊತೆಗೂ ಪ್ರತ್ಯೇಕ ಒಪ್ಪಂದ ಮಾಡಿಕೊಂಡರು. ಇದಕ್ಕೂ ಮೊದಲು ಸಿಕ್ಕಿಮಿನಲ್ಲೂ ನೇಪಾಲೀ ಸೈನ್ಯವಿತ್ತು. ಪಿಂಡಾರಿಗಳ ವಿರುದ್ಧ ಕಾರ್ಯಚರಣೆ ಮಾಡಿ ಅವರ ಹುಟ್ಟಡಗಿಸಿದ್ದೂ ಇವನದೇ ಸಾಧನೆ (1817-18). ಇದೇ ಕಾಲಕ್ಕೆ ಪಿಂಡಾರಿಗಳ ಜೊತೆ ಸೇರಿ ಶಾಂತಿ ಕದಡುತ್ತಿದ್ದ ಕೋಹಿಲರನ್ನೂ ಹತೋಟಿಗೆ ತಂದು ಅವರ ನಾಯಕ ಅಮೀರ್ ಖಾನನನ್ನು ಟೊಂಕ್‍ನ ಆಶ್ರಿತ ನವಾಬನಾಗಿ ಮಾಡಲಾಯಿತು. ಹೀಗೆ ಭಾರತದಲ್ಲಿ ಸಾರ್ವತ್ರಿಕ ಶಾಂತಿಯನ್ನು ಕದಡುತ್ತಿದ್ದ ಈ ಎರಡು ಭಾರೀ ತಂಡಗಳನ್ನು ನಿರ್ನಾಮ ಮಾಡಿ ಶಾಂತಿ ಸ್ಥಾಪಿಸಿದ್ದು ಹೇಸ್ಟಿಂಗ್ಸನ ಗಣ್ಯ ಸಾಧನೆ. ಈತ ಕೋಟಾ (1817). ಉದಯಪುರ. ಬಂಡಿ, ಪ್ರತಾಪಗಡ, ಬನ್ಸ್‍ವಾರ, ಡುಂಗರಪುರ ಮತ್ತು ಜೈಸಾಲ್ಮರ್(1818) ಹಾಗೂ ಸಿರೋಹಿ ಮುಂತಾದ ರಜಪೂತ ರಾಜರ ಜೊತೆ ಮಾತುಕತೆ ನಡೆಸಿ ಇವರೆಲ್ಲರೂ ಬ್ರಿಟಿಷ್ ಅಧಿಪತ್ಯ ಒಪ್ಪಿಕೊಳ್ಳುವಂತೆ ಮಾಡಿದ. ಭೋಪಾಲಿನ ನವಾಬ ರಕ್ಷಣಾ ಒಪ್ಪಂದ ಮಾಡಿಕೊಂಡ. ಮಾಳವ ಮತ್ತು ಬುಂದೇಲಖಂಡ ಪ್ರದೇಶಗಳು ಬ್ರಿಟಿಷರ ಅಧಿರಾಜತ್ವವನ್ನು ಒಪ್ಪಿಕೊಂಡವು. ಹೀಗೆ ವಿಶಾಲ ಪ್ರದೇಶಗಳನ್ನು ಆಡಳಿತಯಂತ್ರ ಪುನಸ್ಸಂಘಟಿಸುವ ಕಾರ್ಯವನ್ನೂ ಈತ ಬಲಚುರುಕಾಗಿ ಕೈಗೊಂಡ. ಹೈದರಾಬಾದ್ ಆಸ್ಥಾನಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ನಿಜಾಮನಿಗೆ ಸಾಲ ನೀಡಿದ್ದ ಬ್ರಿಟಿಷ್ ಕಂಪನಿಯ ಪರ ಪಕ್ಷಪಾತ ಮಾಡಿದನೆಂಗ ಆಪಾದನೆಗೆ ಒಳಪಟ್ಟಿದರಿಂದ ಈತ ರಾಜೀನಾಮೆ ನೀಡಿ (1821) ಭಾರತ ತ್ಯಜಿಸಿದ (1823).ಇವನ ಕೌನ್ಸಿಲಿನ ಸದಸ್ಯರಲ್ಲೊಬ್ಬನಾಗಿದ್ದ ಆ್ಯಡಮ್ ಹಂಗಾಮಿ ಗವರ್ನರ್ ಜನರಲ್ಲಾಗಿ ಅಧಿಕಾರ ವಹಿಸಿಕೊಂಡ. ಮುಂದೆ ಆಗಸ್ಟ್ 1ರಂದು ಲಾರ್ಡ್ ಆ್ಯಮ್ ಹಸ್ರ್ಟ್ ಅಧಿಕಾರರೂಢನಾದ.
- ಆ್ಯಮ್ ಹಸ್ರ್ಟನ ಕಾಲದಲ್ಲಿ ಮೊದಲನೆಯ ಆಂಗ್ಲೊ ಬರ್ಮಿಸ್ ಯುದ್ಧ (1824-26) ನಡೆದು ಬರ್ಮ ಅದರಲ್ಲಿ ಪರಾಭವಗೊಂಡು ಬ್ರಿಟಿಷರಿಗೆ ಬರ್ಮೀಕರಾವಳಿ ಬಿಟ್ಟುಕೊಟ್ಟು ಬ್ರಿಟಿಷರ ಅಧಿರಾಜತ್ವವನ್ನು ಮಾನ್ಯ ಮಾಡಿತು. ಆದರೆ ಈ ಯುದ್ಧ ತೀರ ದುಬಾರಿ ಆಗಿತ್ತು. ಬರ್ಮದ ಅರಸ ಕಾಚಾರ ಮತ್ತು ಮಣಿಪುರದ ಅರಸರ ಮೇಲಿದ್ದ ತನ್ನ ಅಧಿಕಾರ ಬಿಟ್ಟುಕೊಡಲು ಒಪ್ಪಿದ. ಮಲಯ ಪರ್ಯಾಯ ದ್ವೀಪ ಕೆಲವು ಪ್ರದೇಶಗಳನ್ನೂ ಆ್ಯಮ್‍ಹಸ್ರ್ಟನ ಕಾಲದಲ್ಲಿ ಬ್ರಿಟಿಷರು ಗೆದ್ದರು. ಈತ ನಿವೃತ್ತನಾದ ಬಳಿಕ (1828) ಬಟರ್‍ವರ್ತ್ ಬೆಲಿ ಹಂಗಾಮಿ ಗರ್ವನರ್ ಜನರಲ್‍ನಾದ. ಅನಂತರ ಜುಲೈ 4ರಂದು ಲಾರ್ಡ್ ವಿಲಿಯಮ್ ಕ್ಯಾವೆಂಡಿಶ್ ಬೆಂಟಿಂಕ್ ಅಧಿಕಾರ ಸ್ವೀಕರಿಸಿದ. 1835ರ ಆರಂಭದ ತನಕ ಅಧಿಕಾರದಲ್ಲಿದ್ದ ಈ ಗಣ್ಯ ಗವರ್ನರ್ ಜನರಲ್‍ನ ಕಾಲದಲ್ಲಿ ಮೈಸೂರಿನ ಆಡಳಿತವನ್ನು ಸರ್ಕಾರವೇ ನಿರ್ವಹಿಸುತ್ತಿತ್ತು (1831); ಕಾಚಾರ್ (1830) ಮತ್ತು ಕೊಡಗು 1834) ಅರಸೊತ್ತಿಗೆಗಳನ್ನು ಕೊನೆಗಾಣಿಸಲಾಯಿತು. ಇವು ವಿಸ್ತರಣವಾದಿ ಕ್ರಮಗಳು. ಉದಾರವಾದಿಯಾದ ಬೆಂಟಿಂಕ್ ಸತೀಸಹಗಮನ ನಿಷೇಧ (1829), ಠಕ್ಕರೆಂಬ ಡಕಾಯಿತರ ತಂಡಗಳನ್ನು ನಾಮಶೇಷಗೊಳಿಸಲು ಕಾರ್ಯಚರಣೆ, ಪಾಶ್ಚಾತ್ಯ ಶಿಕ್ಷಣವನ್ನು ಜನಪ್ರಿಯಗೊಳಿಸಲು ಸರ್ಕಾರೀ ಅನುದಾನ ಪಾವತಿ (1835). ಡೆಪ್ಯುಟಿ ಕಲೆಕ್ಟರ್ ಹಾಗೂ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಸ್ಥಾನಗಳಿಗೆ ಭಾರತೀಯರ ನೇಮಕ ಮುಂತಾದ ಜನಹಿತ ಕಾರ್ಯಮಾಡಿದ. ಆಡಳಿತದಲ್ಲಿ ಅಪಾರ ಮಿತವ್ಯಯ ಸಾಧಿಸಿದ. 1833ರಲ್ಲಿ ಕೊನೆಗೊಳ್ಳಲಿದ್ದ ಕಂಪನಿಯ ಚಾರ್ಟರನ್ನು ಪಾರ್ಲಿಮೆಂಟ್ 1833ರಲ್ಲಿ ನವೀಕರಿಸಿದ ಅನಂತರ, 1835ರಲ್ಲಿ ಆಗ್ರಾದ ಸುತ್ತಲ ಪ್ರದೇಶವನ್ನೊಳಗೊಂಡ ವಾಯವ್ಯ ಪ್ರಾಂತ್ಯವೆಂಬ ನಾಲ್ಕನೆಯ ಹೊಸ ಪ್ರೆಸಿಡೆನ್ಸಿಯನ್ನು ಸ್ಥಾಪಿಸಲಾಯಿತು. ರಣಜಿತ್ ಸಿಂಗನ ಜೊತೆ ಚಿರಮೈತ್ರಿಯ ಒಪ್ಪಂದ ಮಾಡಿಕೊಂಡ (1831). ಎಚ್ಚರಿಕೆ, ಪ್ರಾಮಾಣಿಕತೆ ಮತ್ತು ಔದಾರ್ಯಗಳಿಂದ ಬೆಂಟಿಂಗ್ ಆಡಳಿತ ನಡೆಸಿದ ಎಂದು ಲಾರ್ಡ್ ಮೆಕಾಲೆ ಅವನನ್ನು ಪ್ರಶಂಸಿಸಿದ್ದಾನೆ.
- ಬೆಂಟಿಂಕ್ ಭಾರತ ತ್ಯಜಿಸಿದಾಗ (20-3-1835 ಒಂದು ವರ್ಷ ಪರ್ಯಂತ ಸರ್ ಚಾಲ್ರ್ಸ್ ಮೆಟಕಾಫ್ ಹಂಗಾಮಿ ಗವರ್ನರ್ ಜನರಲ್‍ನಾಗಿ ಕಾರ್ಯನಿರ್ವಹಿಸಿದ. ಈತ ಮಂಜೂರು ಮಾಡಿದ ಪತ್ರಿಕಾ ಕಾನೂನು (1835) ಪತ್ರಿಕೆಗಳ ಮೇಲೆ ಹೇರಿದ್ದ ಅನೇಕ ಇತಿಮಿತಿಗಳನ್ನು ಸಡಿಲಿಸಿ ಪತ್ರಿಕಾಸ್ವಾತಂತ್ರ್ಯಕ್ಕೆ ಹಾದಿ ಮಾಡಿಕೊಟ್ಟಿತು.
- ಮೊದಲನೆಯ ಆಫ್ಘನ್ ಯುದ್ಧದ (1839-42) ಹುಚ್ಚು ಸಾಹಸಕ್ಕಾಗಿ ಕುಖ್ಯಾತನಾದವ ಲಾರ್ಡ್ ಆಕ್ಲಂಡ್. ಈತ 1836 ಮಾರ್ಚ್ 5ರೆಂದು ಅಧಿಕಾರ ವಹಿಸಿಕೊಂಡ ಪೇಶ್ವೆಯ ಪತನಾನಂತರ ಶಿವಾಜಿಯು ಉತ್ತರಾಧಿಕಾರಿಯಾಗಿ ಮಾನ್ಯತೆ ಪಡೆದ ಸತಾರದ ಅರಸು ಮನೆತನದ ಪ್ರತಾಪ್ ಸಿಂಗ್ ಭೋಸ್ಲೆಯನ್ನು ಪದಚ್ಯುತಿಗೊಳಿಸಿ (1839) ಅವನ ಸೋದರ ಅಪ್ಪಾಸಾಹೇಬನಿಗೆ ಅಧಿಕಾರ ನೀಡಿದ.
- ಮೊದಲನೆಯ ಆಫ್ಘನ್ ಯುದ್ಧ ನಡೆಯುತ್ತಿದ್ದಾಗಲೇ ನೇಮಕಗೊಂಡ ಲಾರ್ಡ್ ಎಲೆನ್‍ಬರೋ ಅಧಿಕಾರ ವಹಿಸಿಕೊಂಡು (28-2-1842) ಆ ಯುದ್ಧವನ್ನು ಕೊನೆಗಾಣಿಸಿದನಲ್ಲದೆ ಸಿಂಧನ್ನೂ ಗೆದ್ದುಕೊಂಡು (1843). ಭಾರತದಲ್ಲಿ ಗುಲಾಮೀ ಪದ್ಧತಿಯನ್ನು ಕೊನೆಗಾಣಿಸಿದ್ದು ಇವನ ಇನ್ನೊಂದು ಸಾಧನೆ. ಈತ ಕಂಪನಿಯ ಡೈರೆಕ್ಟರುಗಳ ಮರ್ಜಿಗೆ ವಿರುದ್ಧವಾಗಿ ನಡೆದುಕೊಂಡ. ಇದರಿಂದ ಇವನನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಯಿತು (1844). ಅನಂತರ ಲಾರ್ಡ್ ಹಾರ್ಡಿಂಜ್ ಗವರ್ನರ್ ಜನರಲ್‍ನಾಗಿ ನೇಮಕಗೊಂಡ. ಈತನ ಕಾಲದಲ್ಲಿ ಮೊದಲನೆಯ ಆಂಗ್ಲೋ-ಸಿಖ್ ಯುದ್ಧ ನಡೆಯಿತು (1845-46), ಈತ ಸ್ವತಃ ಈ ಯುದ್ಧಗಳಲ್ಲಿ ಪಾಲುಗೊಂಡಿದ್ದ, ವಿದ್ಯಾಂವಂತ ಭಾರತೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ ನೀಡಿವ ಇವನ ಕ್ರಮದಿಂದಾಗಿ ಆಂಗ್ಲ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿತು. 1848 ಜನವರಿಯಲ್ಲಿ ಗವರ್ನರ್ ಜನರಲ್‍ನಾಗಿ ಬಂದ ಅರ್ಲ್ ಆಫ್ ಡಾಲ್‍ಹೌಸಿ ದತ್ತು ಪುತ್ರನಿಗೆ ಪಟ್ಟಕ್ಕೆ ಹಕ್ಕಿಲ್ಲವೆಂಬ ದೌರ್ಜನ್ಯದ ನಿಯಮ (ಡಾಕ್ಟ್ರಿನ್ ಆಫ್ ಲ್ಯಾಪ್ಸ್) ಜಾರಿಗೆ ತಂದು ಆಶ್ರಿತ ಸಂಸ್ಥಾನಗಳಾದ ಸತಾರಾ (1848), ಸಂಬಲ್‍ಪುರು (1849), ಝಾನ್ಸಿ ಮತ್ತು ನಾಗಪುರಗಳನ್ನು (1853) ಬ್ರಿಟಿಷ್ ಪ್ರಾಂತ್ಯಗಳಿಗೆ ಸೇರಿಸಿಕೊಂಡ. ಇದಲ್ಲದೆ ಎರಡನೆಯ ಆಂಗ್ಲೊ-ಸಿಖ್ ಯುದ್ಧ ಹೂಡಿ (1848-49) ಪಂಜಾಬನ್ನೂ ವಶಪಡಿಸಿಕೊಂಡ. ಅಲ್ಲದೆ ಎರಡನೆಯ ಬರ್ಮ ಯುದ್ಧದಲ್ಲಿ (1852) ಸ್ವತಃ ಪಾಲುಗೊಂಡು ಬರ್ಮದ ಕೆಳಭಾಗಗಳನ್ನೆಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಇದೇ ರೀತಿ ಸಿಕ್ಕಿಮ್ ಜೊತೆ ನಡೆದ ಯುದ್ಧದಲ್ಲಿ ಆ ದೇಶದ ಕೆಲ ಭಾಗಗಳನ್ನು ವಶಪಡಿಸಿಕೊಳ್ಳಲಾಯಿತು. ಅಯೋಧ್ಯೆಯ (ಅವಧ್) ನವಾಬ ದುರಾಡಳಿತ ನಡೆಸಿದ್ದಾನೆಂದು ಆರೋಪಿಸಿ ಅವನ ರಾಜ್ಯವನ್ನೂ ಬ್ರಿಟಿಷ್ ವಾಯವ್ಯ ಪ್ರಾಂತ್ಯಕ್ಕೆ (ಈಗಿನ ಉತ್ತರ ಪ್ರದೇಶ) ಸೇರಿಸಲಾಯಿತು (1856). ಹೈದರಾಬಾದಿನ ನಿಜಾಮನಿಗೆ ಸೇರಿದ ಬಿಹಾರನ್ನು ಬ್ರಿಟಿಷ್ ಪ್ರಾಂತ್ಯಗಳಿಗೆ ಸೇರಿಸಿಕೊಳ್ಳಲಾಯಿತು. ಹಿಂದೆ ಇನ್ನಾವ ಗವರ್ನರ್ ಜನರಲ್‍ನನ್ನೂ ಸೇರಿಸಿದ್ದಕ್ಕಿಂತ ಹೆಚ್ಚು ಪ್ರದೇಶ ಡಾಲ್‍ಹೌಸಿಯ ಕಾಲಕ್ಕೆ ಬ್ರಿಟಿಷರ ವಶವಾಯಿತು. (ಮುಂಬೈ-ಠಾಣಾಗಳ ನಡುವೆ ಭಾರತದ ಮೊದಲ ರೈಲುಮಾರ್ಗ ಇವನ ಕಾಲದಲ್ಲಿ ಹಾಕಲ್ಪಟ್ಟಿತು (1853). ಕಲ್ಕತ್ತ-ಆಗ್ರಾ ನಗರಗಳ ನಡುವೆ ತಂತಿ ಸಂಪರ್ಕವೂ ಅದೇ ವರ್ಷ ಏರ್ಪಟ್ಟಿತು. ಸರ್ಕಾರೀ ನೌಕರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕ್ರಮ ಕೂಡ ಇವನ ಕಾಲದಲ್ಲಿ ಜಾರಿಗೆ ಬಂತು. ಅನೇಕ ಒಳನಾಡ ಕಾಲುವೆಗಳನ್ನು ಕಡಿಸಿದ ಹಾಗೂ ವೂಡ್ಸ್‍ಡಿಸ್‍ಪ್ಯಾಚ್ ಎಂದು ಪ್ರಸಿದ್ಧವಾದ ವರದಿಗೆ ಅನುಗುಣವಾಗಿ ಶಿಕ್ಷಣ ನೀತಿ ರೂಪಿಸಿದ. ಭಾರತದ ಆಧುನೀಕರಣ ಮತ್ತು ಆರ್ಥಿಕ ಪ್ರಗತಿಗಳಿಗೆ ಇವನ ಕಾಲದಲ್ಲಿ ಭದ್ರ ತಳಹದಿ ಬಿತ್ತು.
- ಬಂಗಾಲಕ್ಕೆ ಒಬ್ಬ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರನನ್ನು ಇವನ ಕಾಲದಲ್ಲಿ ನೇಮಿಸಿದ್ದರಿಂದ ಅಲ್ಲಿಯ ಸಮಸ್ಯೆಗಳ ಭಾರ ಗವರ್ನರ್ ಜನರಲನಿಗೆ ಇಲ್ಲದಂತೆ ಆಯಿತು. ರಾಜಧಾನಿಯನ್ನು ಕಲ್ಕತ್ತದಲ್ಲೇ ಮುಂದುವರಿಸಿದರೂ ಆಡಳಿತ ಕೇಂದ್ರ ಬಲುಮಟ್ಟಿಗೆ ಸಿಮ್ಲಾದಲ್ಲಿ ನೆಲೆಗೊಳ್ಳುವಂತೆ ಈತ ಕ್ರಮ ಕೈಗೊಂಡ. ಅರ್ಲ್ ಕ್ಯಾನಿಂಗ್ ಗವರ್ನರ್ ಜನರಲನಾಗಿ ಅಧಿಕಾರ ವಹಿಸಿಕೊಂಡ (1856) ಒಂದು ವರ್ಷದಲ್ಲೇ ಆತ ಸಿಪಾಯಿದಂಗೆಯೆಂದು ಕರೆಯಲಾದ ಭಾರಿ ಬಂಡಾಯವನ್ನು ಎದುರಿಸಬೇಕಾಯಿತು. ಆಧುನಿಕ ಭಾರತದ ಇತಿಹಾಸದಲ್ಲಿ ಹೊಸತೊಂದು ಅಧ್ಯಾಯ ಆರಂಭವಾಗಲು ಕಾರಣವಾದ ಪ್ರಕರಣವಿದು.
- 1857ರ ಬಂಡಾಯದ ಅನಂತರ ಭಾರತ ಈಸ್ಟ್ ಇಂಡಿಯ ಕಂಪನಿಯ ಆಡಳಿತದಿಂದ ತಪ್ಪಿ ಬ್ರಿಟಿಷ್ ಅರಸೊತ್ತಿಗೆಯ ವಶಕ್ಕೆ ಬಂದಾಗ ಆದ ಸುಧಾರಣೆಗಳಂತೆ ಭಾರತದ ಗವರ್ನರ್ ಜನರಲನನ್ನು ವೈಸ್‍ರಾಯ್ (ರಾಜಪ್ರತಿನಿಧಿ) ಎಂದು ನೇಮಕ ಮಾಡಲಾಯಿತು (ನವೆಂಬರ್ 1858). ಕ್ಯಾನಿಂಗನೇ ಈ ಅಧಿಕಾರದಲ್ಲಿ 1862ರ ಮಾರ್ಚ್ ತನಕ ಮುಂದುವರಿದ. ಡಾಲ್‍ಹೌಸಿ ಜಾರಿಗೆ ತಂದ ದತ್ತು ಪುತ್ರರ ಅಧಿಕಾರಹರಣದ ಕ್ರಮವನ್ನು 1859ರಲ್ಲಿ ವಾಪಸು ತೆಗೆದುಕೊಳ್ಳಲಾಯಿತು. 1860ರಲ್ಲಿ ಭಾರತೀಯ ದಂಡ ಸಂಹಿತೆ (ಪೀನಲ್ ಕೋಡ್) ಜಾರಿಗೆ ಬಂತು. ಇದು ಸಾಮಾಜಿಕ ಸಮತೆಯ ದೆಸೆಯಲ್ಲಿ ಇಟ್ಟ ಒಂದು ಮಹತ್ತ್ವದ ಕ್ರಮ. ವೈಸ್‍ರಾಯ್ ಸಲಹಾ ಮಂಡಳಿಯಲ್ಲಿ ಅಧಿಕಾರೇತರರ ನೇಮಕ ಮತ್ತು ಪ್ರತಿ ಸದಸ್ಯನೂ ಕೆಲವೊಂದು ಆಡಳಿತದ ಇಲಾಖೆಯನ್ನು ನಿರ್ವಹಿಸುವ ಕ್ರಮ ಜಾರಿಗೆ ಮುಖ್ಯ ಸುಧಾರಣೆಗಳು.
- 1862 ಮಾರ್ಚ್‍ನಿಂದ 1863 ನವೆಂಬರ್ ತನಕ ಅರ್ಲ್ ಆಫ್ ಎಲ್ಜಿನ್ (ಕಿಂಕರ್ ಡೈನ್1) ವೈಸ್‍ರಾಯ್ ಆಗಿದ್ದ. ಈತ 20-11-1863ರಂದು ತೀರಿಕೊಂಡ. ಮುಂದೆ ಬಂದ ಇಬ್ಬರೂ ಹಂಗಾಮಿ ಅಧಿಕಾರಿಗಳು, ನವೆಂಬರ್‍ನಿಂದ ಡಿಸೆಂಬರ್ ತನಕ ಸರ್ ರಾಬರ್ಟ್ ನೇಪಿಯರ್, ಡಿಸೆಂಬರಿನಿಂದ 1864 ಅಧಿಕಾರ ವಹಿಸಿಕೊಂಡ. ಈತ ಭಾರತದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದು ಪಂಜಾಬಿನ ಆಕ್ರಮಣ ಮತ್ತು ಅಲ್ಲಿಯ ಆಡಳಿತಗಳಲ್ಲಿ ಗಣ್ಯ ಪಾತ್ರ ವಹಿಸಿದ್ದ. ವೈಸ್‍ರಾಯನಾಗಿ ನೇಮಕಗೊಳ್ಳುವ ಮುನ್ನ ವೈಸ್‍ರಾಯಿಯ ಸಲಹಾ ಮಂಡಳಿಯ ಸದಸ್ಯನಾಗಿದ್ದ. 1864ರಲ್ಲಿ ಭೂತಾನಿನ ಜೊತೆ ಯುದ್ಧ ಹೂಡಿ ಅದರ ವಶದಲ್ಲಿದ್ದ ಕೆಲವು ಪ್ರದೇಶಗಳನ್ನು ಅಸ್ಸಾಮ್ ಮತ್ತು ಬಂಗಾಲ ಪ್ರಾಂತ್ಯಗಳ ಜೊತೆ ವಿಲೀನಿಸಿದ. ಪಂಜಾಬ್ ಟೆನನ್ಸಿ ಆ್ಯಕ್ಟ್ (1868) ಮತ್ತು ಅವಧ್ ರೆಂಟ್ ಬಿಲ್ ಎಂಬ ರೈತರ ಹಿತರಕ್ಷಣೆಯ ಕಾನೂನುಗಳನ್ನು ಮಂಜೂರು ಮಾಡಿದ್ದು ಇವನ ಮುಖ್ಯ ವಹಿಸಿಕೊಟ್ಟು ನಿವೃತ್ತನಾದ. ಒಳಾಡಳಿತದಲ್ಲಿ ತೀರ ಅಸ್ಥೆ ವಹಿಸಿದ್ದ ಮೇಯೋ ಪ್ರಾಂತ್ಯಗಳ ವೆಚ್ಚಕ್ಕೆ ಸಂಬಂಧಿಸಿದ ಪ್ರತ್ಯೇಕಗಳಿಗೇ ವಹಿಸಿಕೊಟ್ಟ (1870). ಜೈಲು. ಕಾಗದಪತ್ರಗಳ ನೋಂದಣಿ, ಪೊಲೀಸ್, ಶಿಕ್ಷಣ, ವೈದ್ಯಕೀಯ ಸೇವೆ, ಮುದ್ರಣ, ರಸ್ತೆಗಳು ಇತ್ಯಾದಿ. ಇದರಿಂದ ಪ್ರಾಂತ್ಯಗಳು ತಮ್ಮ ಮುಂಗಡ ಪತ್ರವನ್ನು ಸ್ವತಂತ್ರವಾಗಿ ತಯಾರಿಸಲು ಸಾಧ್ಯವಾಯಿತು. ಕೇಂದ್ರ ನೀಡಿದ ಅನುದಾನಕ್ಕಿಂತ ಹೆಚ್ಚಾದ ವೆಚ್ಚವನ್ನು ಪ್ರಾಂತ್ಯಗಳೇ ಸ್ಥಳೀಯ ತೆರಿಗೆಗಳ ಮೂಲಕ ಭರಿಸಿಕೊಳ್ಳುವ ಅಧಿಕಾರ ಪ್ರಾಪ್ತವಾಯಿತು. ಮೇಯೋ 8-2-1872ರಂದು ಅಂಡಮಾನ್ ದ್ವೀಪಕ್ಕೆ ಪ್ರವಾಸ ಹೋದಾಗ ವಹಾಬಿ ಕೈದಿಯೊಬ್ಬ ಇವನನ್ನು ಇರಿದು ಕೊಂದ, ಮುಂದೆ ಸರ್ ಜಾನ್ ಸ್ಟ್ರಾಚಿ (ಫೆಬ್ರವರಿ) ಮತ್ತು ಲಾರ್ಡ್ ನೇಪಿಯರ್ ಅನುಕ್ರಮವಾಗಿ ಹಂಗಾಮಿ ಅಧಿಕಾರ ನಿರ್ವಹಿಸಿದರು. ಅರ್ಲ್ ಆಫ್‍ನಾರ್ತ್‍ಬ್ರೂಕ್ ವೈಸ್‍ರಾಯ್ ಆಗಿ ಅಧಿಕಾರ ವಹಿಸಿಕೊಂಡಿದ್ದು 1872ರ ಮೇ ತಿಂಗಳಿನಲ್ಲಿ. ಇಂಗ್ಲೆಂಡಿನಿಂದ ಆಯಾತವಾಗುತ್ತಿದ್ದ ಹತ್ತಿ ಬಟ್ಟಿಯಮೇಲೆ ಈತ ಆಯಾತ ಸುಂಕ ಹೇರಿದ ಬಗ್ಗೆ ಇಂಗ್ಲೆಂಡ್ ಸರ್ಕಾರ ವಿರೋಧ ಸೂಚಿಸಿತು. ಅಲ್ಲದೆ ರಷ್ಯದ ವಿಸ್ತರಣವಾದದಿಂದಾಗಿ ಆಫ್‍ಘಾನಿಸ್ತಾನ ರಷ್ಯದ ವಶವಾಗುವ ಭೀತಿ ಇದ್ದಾಗ, ಆಫ್ಘಾನಿಸ್ತಾನದ ಅಮೀರ ಬ್ರಿಟಿಷರ ಜೊತೆ ಒಪ್ಪಂದ ಬಯಸಿದ. ಇದಕ್ಕೆ ಲಾರ್ಡ್ ಬ್ರೂಕ್ ಬೆಂಬಲ ಸೂಚಿಸಿದಾಗ ಬ್ರಿಟಿಷ್ ಸರ್ಕಾರ ಈ ನೀತಿಯನ್ನು ವಿರೋಧಿಸಿತು. ಇದರಿಂದ ಈತ ಆಫ್ಘಾನಿಸ್ತಾನದ ಬಗ್ಗೆ ತಟಸ್ಥ ನಿಲವು ತಳೆಯಬೇಕಾಯಿತು. ಆದರೆ ಮುಂದೆ, ಪ್ರಧಾನಿಯಾದ ಸ್ಯಾಲಿಸ್ಟರಿ ಆಫ್ಘಾನಿಸ್ತಾನದಲ್ಲಿ ರೆಸಿಡೆಂಟನನ್ನು ನೇಮಿಸಬೇಕೆಂದು ಹೇಳಿ ಒಮ್ಮೆಲೇ ನೀತಿ ಬದಲಾಯಿಸಲು ಮುಂದಾದ. ಈ ಕಾರಣಗಳಿಂದ ಅಸಮಾಧಾನಗೊಂಡ ನಾರ್ತ್‍ಬ್ರೂಕ್ ರಾಜೀನಾಮೆ ಕೊಟ್ಟ. ಮುಂದಿನ ವೈಸ್‍ರಾಯ್ ಅರ್ಲ್ ಆಫ್ ಲಿಟ್ಟನ್ (ಏಪ್ರಿಲ್ 1876). ಕ್ಷಾಮದ ಹಾವಳಿಯಿಂದಾಗಿ ಈತನ ಆರಂಭದ ವರ್ಷಗಳು ತೊಡಕಿನವಾಗಿದ್ದುವು. ಆಗ ಸುಮಾರು 50 ಲಕ್ಷಜನ ಸತ್ತರು. ಇಂಥ ಪರಿಸ್ಥಿತಿಯಲ್ಲೂ ಈತ ದೆಹಲಿಯಲ್ಲಿ ಭಾರಿ ದರ್ಬಾರೊಂದನ್ನು ನಡೆಸಿದ (1877). ವಿಕ್ಟೋರಿಯ ರಾಣಿ ಭಾರತದ ಚಕ್ರವರ್ತಿನಿಯೆಂದು ಘೋಷಿಸಿಕೊಂಡುದರ ಪ್ರಕಟಣೆಯೇ ಈ ದರ್ಬಾರಿನ ಉದ್ದೇಶ. ಮುಂದೆ ಕ್ಷಾಮ ಮೀಮಾಂಸಾ ಆಯೋಗ (ಫ್ಯಾಮಿನ್ ಕಮಿಶನ್) ನೇಮಿಸಿ ಕ್ಷಾಮ ಸಂಹಿತೆಯನ್ನು (ಫ್ಯಾಮಿನ್ ಕೋಡ್) ರಚಿಸಿದ. ಪತ್ರಿಕೆಗಳನ್ನು ನಿಯಂತ್ರಿಸುವ ಪ್ರತಿಗಾಮಿ ಕಾನೂನನ್ನು 1878ರಲ್ಲಿ ಜಾರಿ ಮಾಡಿದ. ಇವನ ಇನ್ನೊಂದು ಘಾತಕ ಕ್ರಮ ಎರಡನೆಯ ಅಫ್ಘನ್ ಯುದ್ಧ (1878-80). ಇಂಗ್ಲೆಂಡಿನಲ್ಲಿ ಗ್ಲ್ಯಾಡ್‍ಸ್ಟನ್ ಪ್ರಧಾನಿಯಾದಾಗ ಹಿಂದಣ ಆಫ್ಟನ್ ನೀತಿ ಬದಲಾಯಿತು. ಇದರಿಂದ ಲಿಟ್ಟನ್ ರಾಜೀನಾಮೆ ನೀಡಿದ. ಮುಂದೆ ಮಾರ್ಕಿಸ್ ಆಫ್ ರಿಪನ್ ಅಧಿಕಾರ ವಹಿಸಿಕೊಂಡ (1880).
- ರಿಷನ್ ಆಫ್ಘಾನಿಸ್ತಾನ ಕುರಿತಂತೆ ಅನುನಯದ ನೀತಿ ಅನುಸರಿಸಿದ್ದರಿಂದ ಮುಂದೆ 40 ವರ್ಷ ಆ ದೇಶದ ಜೊತೆ ಭಾರತದ ಸಂಬಂಧ ಉತ್ತಮವಾಗಿ ಉಳಿಯಿತು. ಮೈಸೂರು ಸಂಸ್ಥಾನವನ್ನು ಅಲ್ಲಿಯ ರಾಜವಂಶಕ್ಕೆ ಮರಳಿ ನೀಡಲಾಯಿತು (1881). ಲಿಟ್ಟನ್ ಜಾರಿಗೆ ತಂದ ಪ್ರತಿಕಾ ನಿಯಂತ್ರಣ ಕಾನೂನನ್ನು ಈತ ರದ್ದುಪಡಿಸಿದ. ಸ್ಥಳೀಯ ಸರ್ಕಾರವನ್ನು ಪ್ರಾತಿನಿಧಿಕವಾಗಿ ಮಾಡುವ ಕ್ರಮ ಕೈಕೊಂಡ (1882). ಇದಲ್ಲದೆ ಭಾರತೀಯ ನ್ಯಾಯಾಧೀಶರಿಗೆ ಐರೋಪ್ಯ ಅಪರಾಧಿಗಳ ವಿಚಾರಣೆ ನಡೆಸುವ ಅಧಿಕಾರ ನೀಡುವ ಇಲ್ಬರ್ಟ್ ಬಿಲ್‍ನ್ನು ಮುಂದಿಟ್ಟ. ಐರೋಪ್ಯರು ಈ ಮಸೂದೆಯ ವಿರುದ್ಧ ಹೂಡಿದ ತೀವ್ರ ಚಳವಳಿಯಿಂದಾಗಿ ಉದಾರವಾದಿಯಾದ ಈತ ರಾಜೀನಾಮೆ ನೀಡಿದಾಗ (1884) ಅರ್ಲ್ ಆಫ್ ಡಫರಿನ್ ಅಧಿಕಾರ ವಹಿಸಿಕೊಂಡ.
- ಡಫರಿನ್‍ನ ಕಾಲದಲ್ಲಿ ಮೂರನೆಯ ಬರ್ಮ ಯುದ್ಧವಾಗಿ (1885-86) ಆ ದೇಶವಿಡೀ ಬ್ರಿಟಷರ ವಶವಾಯಿತು. ಆಫ್ಘಾನಿಸ್ತಾನಕ್ಕೆ ಸಂಬಂಧಿಸಿ ರಷ್ಯದ ಜೊತೆ ಯುದ್ಧ ಹೂಡುವ ಪ್ರಸಂಗ ಬಂದಿತ್ತಾದರೂ ಆಫ್ಘಾನಿಸ್ತಾನದ ಅಮೀರ್ ಅಬ್ದುಲ್ ರಹಮಾನನ ಸಾವಧಾನದ ನೀತಿಯಿಂದಾಗಿ ಯುದ್ಧ ತಪ್ಪಿ ರಷ್ಯ ಮತ್ತು ಆಫ್ಘಾನಿಸ್ತಾನಗಳ ನಡುವಣ ಗಡಿಯನ್ನು ಆಂಗ್ಲೋರಷಿಯನ್ ಜಂಟಿ ಮಂಡಳಿಯೊಂದು ಗುರುತಿಸಿತು. ಇವನ ಕಾಲದಲ್ಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೊಂಡಿತು (1885). ಭಾರತದ ರಾಪ್ಟ್ರೀಯ ಮಾಕ್ರ್ವಿಸ್ ಆಫ್ ಲ್ಯಾನ್ಸ್‍ಡೌನ್ ಡಿಸೆಂಬರ್ 1888ರಲ್ಲಿ ವೈಸ್‍ರಾಯ್‍ನಾಗಿ ಅಧಿಕಾರ ಸ್ವೀಕರಿಸಿದ. ರಾಜಕೀಯವಾಗಿ ಮಣಿಪುರದಲ್ಲಿ ನಡೆದ ಬಂಡಾಯದ ವಿನಾ ಇನ್ನಾವ ಮಹತ್ತ್ವದ ಘಟನೆಯೂ ಇವನ ಕಾಲದಲ್ಲಿ ನಡೆಯಲಿಲ್ಲ. ತಿಕೇಂದ್ರಜಿತ್ ಎಂಬ ಮಣಿಪುರದ ಸೇನಾನಿಯ ಜನಪ್ರಿಯತೆ ಹಾಗೂ ಸಾಮಥ್ರ್ಯಗಳೇ ಅಲ್ಲಿ ಬ್ರಿಟಿಷರ ಹಸ್ತಕ್ಷೇಪಕ್ಕೆ ಕಾರಣವಾಗಿ ಮುಂದೆ ಅಲ್ಲಿಯ ಅರಸ ಸೂರ್ಯಚಂದ್ರನ ಪದಚ್ಯುತಿಯಾಗಿ ಚುರಚಂದ್ ಎಂಬ ಐದು ವರ್ಷದ ಬಾಲಕನನ್ನು ಅರಸನಾಗಿಯೂ (1891) ಆಡಳಿತಕ್ಕಾಗಿ ಬ್ರಿಟಿಷ್ ಪ್ರತಿನಿಧಿಯನ್ನು ಪೊಲಿಟಕಲ್ ಎಜಂಟ್‍ನಾಗಿಯೂ ನೇಮಿಸಲಾಯಿತು. ಬ್ರಿಟಿಷ್ ಸರ್ಕಾರ ರಾಜ್ಯದ ಆಂತರಿಕ ವ್ಯವಹಾರಗಳಲ್ಲಿ ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡಿದ್ದರಿಂದ ಉಂಟಾದ ಬಂಡಾಯಕ್ಕಾಗಿ ಅಲ್ಲಿಯ ಪ್ರಜೆಗಳ ಮೇಲೆ ದಂಡವನ್ನೂ ಹೇರಲಾಯಿತು. 1892ರ ಭಾರತೀಯ ಸಲಹಾಮಂಡಳಿಯ ಕಾನೂನಿನಂತೆ ಕೇಂದ್ರ ಸರ್ಕಾರದಲ್ಲಿ ಕೆಲವು ಮಹತ್ವದ ಬದಲಾವಣೆಗಳಾದವು. ಅರ್ಲ್ ಆಫ್ ಎಲ್ವಿನ್ (ಕಿಂಕರ್‍ಡೈನ್ II) ವೈಸ್‍ರಾಯ್ ಆದ (ಜನವರಿ 1894) (ಇವನು ಹಿಂದೆ ಇದ್ದ ಇದೇ ಹೆಸರಿನ ವೈಸ್‍ರಾಯಿಯ ಮಗ). ವಾಯುವ್ಯ ಭಾರತದಲ್ಲಿ ಬ್ರಿಟಿಷ್ ಸೇನಾ ಕೇಂದ್ರಗಳನ್ನು ಸ್ಥಾಪಿಸಿದ್ದರ ವಿರುದ್ಧ ಆ ಭಾಗದ ವಜೀರಿ, ಸ್ವಾತಿ ಬುಡಕಟ್ಟಗಳೂ (1897) ಮುಂದೆ ಆಫ್ರೀದಿಗಳೂ ಬಂಡೆದ್ದು ಖೈಬರ್ ಕಣಿವೆಯನ್ನೇ ಮುಚ್ಚಿದರು. ಇವರ ವಿರುದ್ಧ ಭಾರೀ ವೆಚ್ಚದ ಸೇನಾ ಕಾರ್ಯಾಚರಣೆ ನಡೆಸಬೇಕಾಯಿತು.
- ಜನವರಿ 1899ರಲ್ಲಿ ಅಧಿಕಾರ ವಹಿಸಿಕೊಂಡ ಲಾರ್ಡ್ ಕಜರ್ûನ್ ಸಮರ್ಥ ಹಾಗೂ ವಿಚಕ್ಷಣನಾದ ಅಧಿಕಾರಿ. ಬಂಗಾಲದ ವಿಭಜನೆಗೆ ಇವನು ಕೈಕೊಂಡ ನಿರ್ಣಯ ಮಾತ್ರ ಘಾತಕವಾದುದಾಗಿತ್ತು. ವಾಯುವ್ಯ ಗಡಿಪ್ರದೇಶದ ಗೊಂದಲ ಕೊನೆಗೊಳಿಸಲು ಇವನು ಅನುನಯದ ನೀತಿ ಅನುಸರಿಸಿದ. 1900ರಲ್ಲಿ ವಾಯುವ್ಯ ಗಡಿಪ್ರಾಂತ್ಯವನ್ನು ಸ್ಥಾಪಿಸಿದ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯನ್ನು ಹೊಸದಾಗಿ ಸ್ಥಾಪಿಸಿದ್ದು. ಭಾರತೀಯ ಪುರಾತತ್ವ ಇಲಾಖೆಯನ್ನು ಪುನಸ್ಸಂಘಟಿಸಿದ್ದು ಹಾಗೂ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ವಿಶೇಷ ಕ್ರಮ ಕೈಗೊಂಡಿದ್ದು ಇವನ ಉಲ್ಲೇಖನೀಯ ಸಾಧನೆಗಳು. ಟಿಬೆಟಿನ ವಿರುದ್ಧ ಇವನು ಕಳುಹಿಸಿದ ದಂಡಯಾತ್ರೆ ಲ್ಹಾಸಾದವರೆಗೂ ಸಾಗಿತು. ಕಲ್ಕತ್ತ ನಗರಸಭೆ ಹಾಗೂ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇವನು ತಂದ ಬದಲಾವಣೆಗಳು ಹಾಗೂ ವಂಗಭಂಗ ನಿರ್ಣಯದಿಂದಾಗಿ ಭಾರತದಲ್ಲಿ ಭಾರೀ ಚಳವಳಿ ನಡೆಯಲು ಹಾದಿಯಾಯಿತು. ಇದೇ ಸ್ವದೇಶೀ ಚಳವಳಿ. ಐದು ವರ್ಷದ ಅವಧಿ ಮುಗಿದ ಬಳಿಕ ಪುನರ್ನೇಮಕ ಹೊಂದಿದ ಕಜರ್ûನ್ ಭಾರತದ ಮಹಾ ಸೇನಾನಿ ಲಾರ್ಡ್ ಕಿಚನರ್ ಜೊತೆಯಲ್ಲಿ ತನಗಾದ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡಿದ (1905).
- 1905 ನವೆಂಬರಿನಲ್ಲಿ ಅರ್ಲ್ ಆಫ್ ಮಿಂಟೊ ಭಾರತದ ವೈಸ್‍ರಾಯನಾದ ಬಂಗಾಲದ ವಿಭಜನೆಯಿಂದಾಗಿ ಉಗ್ರವಾಗಿ ನಡೆಯುತ್ತಿದ್ದ ಚಳವಳಿಯ ಜೊತೆ ತಾನು ಅಧಿಕಾರ ವಹಿಸಿಕೊಂಡ ಎರಡೇ ವಾರಗಳಲ್ಲಿ ಇಂಗ್ಲೆಂಡಿನಲ್ಲಿ ಲಿಬರಲ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದುದರಿಂದ ಉಂಟಾದ ಪರಿಸ್ಥಿತಿಯನ್ನೂ ಈತ ಎದುರಿಸಬೇಕಾಯಿತು. ಇದೇ ಕಾಲದಲ್ಲಿ ಭಾರತದಲ್ಲಿ ಉಗ್ರಗಾಮಿ ಪಕ್ಷ ಉದಯಿಸಿತಲ್ಲದೆ ಭೂಗತ ಕ್ರಾಂತಿಕಾರಿಗಳ ಹಿಂಸಾತ್ಮಕ ಚಟುವಟಿಕೆಗಳೂ ಕಾಣಿಸಿಕೊಂಡವು. ಒಂದೆಡೆ ಅನುನಯದ ನೀತಿ. ಇನ್ನೊಂದೆಡೆ ಉಗ್ರ ದಬ್ಬಾಳಿಕೆಯ ಕ್ರಮ ಇವು ಇವನ ಧೋರಣೆಯಾಯಿತು. ಸ್ವಾತಂತ್ರ್ಯಹರಣಕ್ಕೆ ಕಾರಣವಾದ ಅನೇಕ ಅನಾಗರಿಕ ನಿಯಮಗಳನ್ನು ಇವನು ಜಾರಿಗೆ ತಂದ. ಆದರೆ 1909ರ ಮಿಂಟೊ-ಮಾರ್ಲೆ ವೈಧಾನಿಕ ಸುಧಾರಣೆಗಳು ಮತ್ತು ವೈಸರಾಯಿಯ ಸಲಹಾ ಮಂಡಳಿಗೆ ಒಬ್ಬ ಭಾರತೀಯನನ್ನು ನೇಮಿಸಿದ ಕ್ರಮ ಇವನ ಕಾಲದ ಉಲ್ಲೇಖನೀಯ ಸಾಧನೆಗಳು. ಮಿಂಟೋ ಆಗ ನಡೆದ ಅನೇಕ ಉಗ್ರ ಚಳವಳಿಗಳನ್ನು ಹತ್ತಿಕ್ಕಿ ಶಾಂತಿಯನ್ನು ಪ್ರಸ್ತಾವಿಸಿದರೂ ಅದು ಶ್ಮಶಾನ ಶಾಂತಿಯಂತೆ ಇತ್ತು. ಲಾರ್ಡ್ ಕಿಚನರ್‍ನನ್ನು ಮುಂದಿನ ವೈಸ್‍ರಾಯ್‍ನಾಗಿ ನೇಮಿಸಬೇಕೆಂಬ ಸೂಚನೆ ಬಂದಾಗ ಸೇನಾನಿಯಾಗಿದ್ದು ಉಗ್ರನೀತಿಯವನೆಂದು ಖ್ಯಾತನಾದ ಆತನ ನೇಮಕಕ್ಕೆ ಸ್ವತಃ ಮಿಂಟೋ ವಿರೋಧ ಸೂಚಿಸಿದ. ನವೆಂಬರ್ 1910ರಲ್ಲಿ ಸರ್ ಚಾಲ್ರ್ಸ್ ಹಾರ್ಡಿಂಜ್ ವೈಸ್‍ರಾಯನಾಗಿ ಅಧಿಕಾರ ಸ್ವೀಕರಿಸಿದ. ಸಮರ್ಥ ಆಡಳಿತಗಾರನಾದ ಈತ ಉದಾರವಾದಿಯೂ ಆಗಿದ್ದು ವಂಗಭಂಗವನ್ನು ರದ್ದುಪಡಿಸಿ ಬಂಗಾಲವನ್ನು ಲೆಫ್ಟಿನೆಂಟ್ ಗವರ್ನರನ ಆಡಳಿತದಿಂದ ತಪ್ಪಿಸಿ ಒಬ್ಬ ಗವರ್ನರನ ಆಡಳಿತಕ್ಕೆ ಒಳಪಡಿಸಿದನಲ್ಲದೆ ಬಿಹಾರ್ ಮತ್ತು ಒರಿಸ್ಸಗಳನ್ನು ಒಟ್ಟಾಗಿಸಿ ಒಬ್ಬ ಲೆಫ್ಟಿನೆಂಟ್ ಗವರ್ನರನ ಆಡಳಿತಕ್ಕೆ ಒಳಪಡಿಸಿದ. (ವಂಗಭಂಗಕ್ಕೆ ಮೊದಲು ಬಂಗಾಲ, ಬಿಹಾರ, ಒರಿಸ್ಸಗಳು ಏಕಪ್ರಾಂತ್ಯವಾಗಿದ್ದು ವಿಭಜನೆಯ ಕಾಲಕ್ಕೆ ಪೂರ್ವ ಬಂಗಾಲ ಮತ್ತು ಅಸ್ಸಾಮ್‍ಗಳು ಒಂದೇ ಪ್ರಾಂತ್ಯಕ್ಕೆ ಸೇರಿದ್ದುವು). ದೇಶದ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ಬಂದು ನಡೆಸಿದ ದರ್ಬಾರಿನ ಕಾಲಕ್ಕೆ ಘೋಷಿಸಲಾಯಿತು (11-12-1911). ಆದರೆ ಮಿಂಟೋನ ದಬ್ಬಾಳಿಕೆ ಕ್ರಮಗಳನ್ನು ಹಾರ್ಡಿಂಜ್ ಮುಂದುವರಿಸಿದ. ಆಮೇಲೆ ಹೇಳಿದ ಸುಧಾರಣೆಗಳಿಂದ ಸ್ವಾಂತಂತ್ರ್ಯ ಬಳುವಳಿಯ ಬಿಸಿ ಆರಬಹುದೆಂದು ಅವನು ಭಾವಿಸಿದ್ದರೆ ಹಾಗಾಗದೇ ಅದು ಮುಂದುವರಿದು 1912 ಡಿಸೆಂಬರ್‍ನಲ್ಲಿ ಈತ ಕ್ರಾಂತಿಕಾರಿಗಳ ಬಾಂಬ್‍ದಾಳಿಗೆ ಗುರಿಯಾಗಿ ಪಾರಾದ. ಮುಂದೆ ಹೋಮ್ ರೂಲ್ ಚಳವಳಿ ಹಾಗೂ ಕ್ರಾಂತಿಕಾರಿಗಳ ಚಟುವಟಿಕೆಗಳೂ ಹೆಚ್ಚಿದುವು. 1914ರಲ್ಲಿ ಆರಂಭವಾದ ಒಂದನೆಯ ಮಹಾಯುದ್ಧದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ರಕ್ಷಣೆಗೆ ಭಾರತೀಯ ಸೈನಿಕರು ಪ್ರಪಂಚದ ವಿವಿಧ ರಣರಂಗಗಳಲ್ಲಿ ಹೋರಾಡಿ ಪ್ರಾಣತ್ಯಾಗ ಮಾಡುತ್ತಿದ್ದರು. ಭಾರತದ ಸಂಪತ್ತೂ ವ್ಯಯವಾಗುತ್ತಿತ್ತು. ಇವೆಲ್ಲ ಬ್ರಿಟಿಷ್ ಸಾಮ್ರಾಜ್ಯ ಶಾಹಿಯನ್ನು ಬಲಪಡಿಸಲು ನಡೆಯುತ್ತಿರುವ ಮಿತಿಯಿಲ್ಲದ ಶೋಷಣೆಯೆಂಬ ಅರವಿನಿಂದಾಗಿ ಬ್ರಿಟಿಷ್ ವಿರೋಧಿ ಚಟುವಟಿಕೆಗಳನ್ನು ನಿರ್ವಹಿಸುವ ಭಾರ ಭಾರತ ಸರ್ಕಾರದ್ದೇ ಆಗಿದ್ದು ಅಲ್ಲಿ ಅದ ಅವ್ಯವಸ್ಥೆಗಳಿಂದಾಗಿ ಭಾರತ ಸರ್ಕಾರಕ್ಕೆ ಯುದ್ಧದ ಚಲನೆಯಲ್ಲಿ ಇದ್ದ ಅಧಿಕಾರವೂ ತಪ್ಪಿ ಯುದ್ಧಕ್ಕೆ ಬೇಕಾಗುವ ಜನ, ಧನ, ಸರಂಜಾಮುಗಳನ್ನು ಒದಗಿಸುವುದೆಂದೇ ಭಾರತ ಸರ್ಕಾರದ ಜವಾಬ್ದಾರಿಯಾಯಿತು. ಹಾರ್ಡಿಂಜ್‍ನ ಅಧಿಕಾರಾವಧಿ ನವೆಂಬರ್ 1915ಕ್ಕೆ ಮುಗಿದರೂ 1916 ಮಾರ್ಚ್ ಕೊನೆಯ ತನಕವೂ ಅಧಿಕಾರದಲ್ಲಿ ಮುಂದುವರಿದ. ಟರ್ಕಿಯ ಕಲೀಫನ ವಿರುದ್ಧ ನಡೆದ ಯುದ್ಧದಿಂದಾಗಿ ಮುಸಲ್ಮಾನರಲ್ಲಿ ಉಂಟಾದ ಅಸಮಾಧಾನ, ಪಂಜಾಬ್ ಮತ್ತು ಬಂಗಾಲದಲ್ಲಿ ಹೆಚ್ಚಿನ ಕ್ರಾಂತಿಕಾರೀ ಚಟುವಟಿಕೆ, ಸೇನೆಯಲ್ಲಿ ಕಾಣಿಸಿಕೊಂಡ ಬಂಡಾಯಗಳು, ಜರ್ಮನರು ಪ್ರಚೋದಿಸಿದ ಬುಡಮೇಲು ಕ್ರಮಗಳು ಇವೆಲ್ಲವುಗಳಿಂದ ಹಾರ್ಡೆಂಜ್ ತೀರ ಕಷ್ಟದಿಂದ ಆಡಳಿತ ನಿರ್ವಹಿಸಬೇಕಾಯಿತು. ಅಲಿಸೋದರರನ್ನು ಇವನು ಮಧ್ಯೆ ಪ್ರಾಂತ್ಯದ ಹಿಂದೂಗ್ರಾಮವೊಂದರಲ್ಲಿ ದಿಗ್ಬಂಧನದಲ್ಲಿಟ್ಟ. ಅಮೆರಿಕದಿಂದ ಮರಳಿದ್ದ ಸುಮಾರು 700 ಪಂಜಾಬಿ ಸಿಕ್ಕರು ಗದರ್ ಪಕ್ಷದ ಜೊತೆ ಸಂಬಂಧ ಹೊಂದಿದ್ದು ಆ ಪ್ರಾಂತ್ಯದಲ್ಲಿ ಬಂಡಾಯಕ್ಕೆ ಕಾರಣರಾದರು. ಇವರ ಪೈಕಿ 300 ಜನರನ್ನು ಬಂಧಿಸಲು ಈತ ಆಜ್ಞಾಪಿಸಿದ. ಆಂತರಿಕ ಭದ್ರತೆಗಾಗಿ ಉಗ್ರ ಕಾನೂನೊಂದನ್ನು ಭಾರತೀಯ ಶಾಸನಸಭೆಯಲ್ಲಿ ಒಮ್ಮತದಿಂದ ಜಾರಿ ಮಾಡಿಕೊಂಡ. ಇಷ್ಟಿದ್ದರೂ ಈತ ಉದಾರವಾದಿ ಅಧಿಕಾರಿ. ರಾಜಕೀಯ ಕಾರಣಗಳಿಗಾಗಿ ಹೂಡಿದ ಅನೇಕ ಮೊಕದ್ದಮೆಗಳನ್ನು ಹಿಂತೆಗೆದುದು ಹಾಗೂ ಲಾಹೋರ್ ಒಳಸಂಚು ಖಟ್ಲೆಯಲ್ಲಿ ಶಿಕ್ಷಗೊಳಗಾದವರ ಶಿಕ್ಷೆಯ ಅವಧಿಯನ್ನು ಮೊಟಕು ಮಾಡಿದ್ದೇ ಇದಕ್ಕೆ ಉದಾಹರಣೆ. ದಕ್ಷಿಣ ಆಫ್ರಿಕದಲ್ಲಿ ಭಾರತೀಯರನ್ನು ನಡೆಸಿಕೊಳ್ಳುವ ವಿಧಾನದ ಬಗ್ಗೆ ಈತ ಖಂಡನೆ ಸೂಚಿಸಿ ಅಲ್ಲಿ ಭಾರತೀಯರು ನಡೆಸುತ್ತಿದ್ದ ಚಳವಳಿಯ ಬಗ್ಗೆ ಸಹಾನುಭೂತಿ ಪ್ರಕಟಿಸಿದ. ಇವನ ಈ ಕ್ರಮದಿಂದಾಗಿ ದಕ್ಷಿಣ ಆಫ್ರಿಕದ ಬಿಳಿಯರ ಸರ್ಕಾರವೇ ಅಸಮಾಧಾನ ಸೂಚಿಸಿ ಆತನನ್ನು ಹಿಂದೆ ಕರೆಸಬೇಕೆಂದು ಅಗ್ರಹ ಪಡಿಸಿತು. ಇದಲ್ಲದೆ ಬ್ರಿಟಿಷರ ವಸಾಹತುಗಳಾದ ಮಾರಿಷಸ್, ನಿಯಾನಾ, ಜಮೆಕಾ, ತ್ರಿನಿದಾಡ್, ಫೀಜಿ ಮುಂತಾದ ಕಡೆ ಕಬ್ಬಿನ ತೋಟಗಳಲ್ಲಿ ದುಡಿಯಲು ಸಾಗಿಸಿದ್ದ ಭಾರತೀಯ ಮೂಲದ ಕರಾರುಬದ್ಧ ಕಾರ್ಮಿಕರ ಕಷ್ಟಸಂಕಷ್ಟ ಮತ್ತು ದೈನ್ಯ ಸ್ಥಿತಿಯಿಂದಾಗಿ ನೊಂದ ಹಾರ್ಡಿಂಜ್ ಈ ಕರಾರುಬದ್ಧ ಕೂಲಿ ವಿಧಾನವನ್ನೇ ರದ್ದು ಪಡಿಸಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿ ಸರ್ಕಾದಿಂದ ರದ್ದತಿಯ ಪರವಾಗಿ ಆಶ್ವಾಸನೆಯನ್ನೂ ಪಡೆದ. ಲ್ಯಾಂಕ್ ಶಯರಿನ ಗಿರಣಿಗಳ ಹಿತ ಗಮನಿಸಿ ಭಾರತದಲ್ಲಿ ಹತ್ತಿಯ ಮೇಲೆ ಹೇರಿದ್ದ ಎಕ್ಸೈಜ್ ಸುಂಕ ರದ್ದುಪಡಿಸಬೇಕೆಂದೂ ಈತ ಸತತ ಆಗ್ರಹ ಪಡಿಸಿದ. ಈ ಬಗ್ಗೆ ಲಂಡನಿನಿಂದ ಆಶ್ವಾಸನೆಯನ್ನೂ ಪಡೆದ.
- ಇವನ ಉತ್ತರಾಧಿಕಾರಿಯಾಗಿ ಬಂದ ಲಾರ್ಡ್ ಚೇಮ್ಸ್‍ಫರ್ಡ್ (1916 ಏಫ್ರಿಲ್) ಎಂಬಾತ ಮಾಂಟೆಗೂ ಚೇಮ್ಸ್ ಫರ್ಡ್ ಸುಧಾರಣೆಗಳಿಂದ (1919) ಆ ಮೊದಲೇ ಖ್ಯಾತನಾಗಿದ್ದರೂ ರೌಲತ್ ಆ್ಯಕ್ಟ್ ಮತ್ತು ಜಲಿಯನ್‍ವಾಲ ಬಾಗ್ ದುರಂತಗಳಿಂದ ಅಷ್ಟೇ ಕುಖ್ಯಾತನೂ ಆದ. ಇವನ ಕಾಲದಲ್ಲಿ ಟಳಕ್ ಮತ್ತು ಬೆಸೆಂಟರು ಹೋಮ್‍ರೂಲ್‍ಲೀಗ್‍ಗಳನ್ನು ಸ್ಥಾಪಿಸಿದರು. ಗಾಂಧೀಜಿ ಸತ್ಯಾಗ್ರಹಾಸ್ತ್ರ ಬಳಸಲು ಮುಂದಾಗಿ ರಾಷ್ಟ್ರೀಯ ಚಳವಳಿಯ ನಾಯಕತ್ವ ವಹಿಸಿದ್ದು, ಖಿಲಾಫತ್‍ರನ್ನು ಸೇನಾಧಿಕಾರಿಗಳಾಗಿ ನೇಮಿಸಲು ನಿರ್ಣಯಿಸಿದ್ದು, ಭಾರತೀಯರೊಬ್ಬರನ್ನು ಬ್ರಿಟಿಷ್ ಪ್ರಾಂತ್ಯವೊಂದಕ್ಕೆ ಗವರ್ನರ್ ಆಗಿ ನೇಮಿಸಿದ್ದು (ಸರ್. ಎಸ್. ಪಿ, ಸಿಂಹ) ಇವನ ಕೆಲವು ಮುಖ್ಯ ಕ್ರಮಗಳು. ಕರ್ವೆಯವರ ಯತ್ನದಿಂದಾಗಿ ಪುಣೆಯಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು (1916). ಕಲ್ಕತ್ತ ವಿಶ್ವವಿದ್ಯಾಲಯದ ಸುಧಾರಣೆಯನ್ನು ಗುರಿಯಾಗಿಟ್ಟುಕೊಂಡು ಸ್ಥಾಪಿಸಿದ ಸ್ಯಾಡ್ಲರ್ ಸಮಿತಿಯ (1917) ವರದಿಯಂತೆ ದೇಶದ ಶಿಕ್ಷಣ ಕ್ರಮಗಳಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೊಳಿಸಲಾಯಿತು. ಈತ ಸಮರ್ಥ ಆಡಳಿತಗಾರನಲ್ಲ. ತನ್ನ ಇಬ್ಬಗೆಯ ನೀತಿಯಿಂದ ಕುಖ್ಯಾತಿ ಗಳಿಸಿದ. ಜಲಿಯನ್‍ವಾಲಾಬಾಗ್ ದುರಂತದ ಬಗ್ಗೆ ವಿಚಾರಣೆ ನಡೆಸಲು ಹಂಟರ್ ಸಮಿತಿ ನಿಯಮಿಸುತ್ತಿದ್ದಂತೆ. ಅಲ್ಲಿಯ ಅಪರಾಧಗಳಿಗೆ ಕಾರಣರಾದ ಅಧಿಕಾರಿಗಳನ್ನು ಪಾರುಮಾಡುವ ಉದ್ದೇಶದಿಂದ ಇಂಡೆಮ್ನಿಟಿ ಆ್ಯಕ್ಟನ್ನು ಮಂಜೂರು ಮಾಡಿಸಿಕೊಂಡ.
- ಇವನ ಉತ್ತರಾಧಿಕಾರಿ ಅರ್ಲ್ ಆಫ್ ರೀಡಿಂಗ್ (ಏಪ್ರಿಲ್ 1921) ಉದಾರವಾದಿ ನೀತಿ ಅನುಸರಿಸಿದ. 1910ರ ಪತ್ರಿಕಾ ಪ್ರತಿಬಂಧ ಮಸೂದೆ ಹಾಗೂ ರೌಲೆಟ್ ಆ್ಯಕ್ಟ್‍ಗಳನ್ನು ಹಿಂತೆಗೆದುಕೊಂಡ. ಭಾರತದಲ್ಲಿಯ ಬಿಳಿಯರ ತೀವ್ರ ವಿರೋಧಕ್ಕೆ ಕಾರಣವಾದ ಇಲ್ಬರ್ಟ್ ಮಸೂದೆ ಸೂತ್ರವನ್ನು ಕಾರ್ಯಚರಣೆಗೆ ತರಲು ಕ್ರಿಮಿನಲ್ ಲಾ ಎಮೆಂಡ್‍ಮಂಟ್ ಆ್ಯಕ್ಟ್ ಜಾರಿ ಮಾಡಿದ. ಹಾರ್ಡಿಂಜನ ಯತ್ನದ ಹಿನ್ನೆಲೆಯಲ್ಲಿ ಹತ್ತಿ ಮೇಲಿನ ಎಕ್ಸೈಜ್ ಸುಂಕ ಕಿತ್ತೊಗೆದ. ಸರ್ಕಾರಿ ನೌಕರಿಗೆ ಭರ್ತಿಮಾಡಲು ಭಾರತೀಯರನ್ನೂ ಐರೋಪ್ಯರನ್ನೂ ಸಮಾನರೆಂದು ಪರಿಗಣಿಸಬೇಕೆಂದು ನಿರ್ಣಯವಾಗಿ ಲಂಡನ್ ಮತ್ತು ದೆಹಲಿಗಳಲ್ಲಿ ಈ ಬಗ್ಗೆ ಏಕಕಾಲಕ್ಕೆ ಪರೀಕ್ಷೆ ನಡೆಸುವ ಕ್ರಮ ಜಾರಿಗೆ ಬಂತು (1923). ಸೇನೆಯಲ್ಲೂ ಭಾರತೀಯ ಅಧಿಕಾರಿಗಳನ್ನು ನಿಯಮಿಸುವ ಕ್ರಮಕ್ಕೆ ಚಾಲನೆ ದೊರಕಿತು. ಕರನಿಕಾರಣೆಯ ಬಗ್ಗೆ ಭಾರತಕ್ಕೆ ಸ್ವಾಯತ್ತತೆ ನೀಡಿ ತನ್ನ ಆರ್ಥಿಕ ವ್ಯವಸ್ಥೆಯ ಹಿತ ಗಮನಿಸಿ ಸುಂಕ ಹೇರುವ ಕ್ರಮ ಜಾರಿಗೆ ತರಲು ಹಾಗೂ ತನ್ನದೇ ಟ್ಯಾರಿಫ್ ಬೋರ್ಡ್ ಸ್ಥಾಪಿಸಲು ಅವಕಾಶ ನೀಡಲಾಯಿತು (1923). ಆದರೆ ಸಾಮ್ರಾಜ್ಯದ ಹಿತ ರಕ್ಷಿಸುವ ವಿಚಾರದಲ್ಲಿ ಇವನ್ನು ತೀರ ಉತ್ಸುಕನಾಗಿದ್ದ. ಅಸಹಕಾರ ಚಳವಳಿಯ ದಮನಕ್ಕೆ ಎಲ್ಲ ಕ್ರಮಗಳನ್ನೂ ಕೈಕೊಂಡ. ಗಾಂಧೀಜಿಯನ್ನು ಬಂಧಿಸಲಾಯಿತು. ಸರ್ ಜಾನ್ ಸೈಮನ್ ತಳೆದ ಪ್ರತಿಗಾಮೀ ನಿಲವುಗಳಿಗೂ ಇವನೇ ಕಾರಣನೆಂದು ಹೇಳಲಾಗಿದೆ.
- ಸರ್ ಚಾಲ್ರ್ಸ್‍ವೂಡ್‍ರ ಮೊಮ್ಮಗ ಲಾರ್ಡ್ ಇರ್ವಿನ್ ವೈಸ್‍ರಾಯನಾಗಿ ಅಧಿಕಾರ ವಹಿಸಿಕೊಂಡ ಅನಂತರ (ಏಪ್ರಿಲ್ 1926) ತೀರ ಬಿರುಗಾಳಿಯ ದಿನಗಳನ್ನು ಕಾಣಬೇಕಾಯಿತು. ಸೈಮನ್ ಕಮಿಶನ್ನಿನ ವಿರುದ್ಧ ಉಗ್ರ ಪ್ರತಿಭಟನೆ, ಲಾಹೋರ್ ಕಾಂಗ್ರೆಸ್ಸಿನಿಂದ ಪೂರ್ಣ ಸ್ವರಾಜ್ಯ ಬೇಡಿಕೆ, ಕಾನೂನುಭಂಗ ಚಳವಳಿ (1930-31), ಗಾಂಧೀಜಿಯವರನ್ನು ಚಕ್ರಗೋಷ್ಠಿಗೆ ಬರಲು ಮನವೊಲಿಸಿಕೊಂಡ ಒಪ್ಪಂದ ಇವೇ ಈತನ ಕಾಲದ ಮುಖ್ಯ ರಾಜಕೀಯ ಘಟನೆಗಳು. ಗಾಂಧೀ-ಇರ್ವಿನ್ ಒಪ್ಪಂದವಾದ ಕೆಲವೇ ದಿನಗಳಲ್ಲಿ ಈತನ ಉತ್ತರಾಧಿಕಾರಿಯಾಗಿ ಮಾಕ್ರ್ವಿಸ್ ಆಫ್ ವೆಲ್ಲಿಂಗ್ಟನ್ ಅಧಿಕಾರ ವಹಿಸಿಕೊಂಡ (17-4-1931). ಗಾಂಧೀ ಇರ್ವಿನ್ ಒಪ್ಪಂದವನ್ನು ಒಪ್ಪದ ಈತ ಚಕ್ರಗೋಷ್ಠಿಯಿಂದ ಮರಳಿದ ಗಾಂಧೀಜಿಯನ್ನು ಬಂಧಿಸಿ (1932) ಮತ್ತೆ ದಬ್ಬಾಳಿಕೆ ಆರಂಭಿಸಿ ಕಾನೂನು ಭಂಗ ಚಳವಳಿ ಹತ್ತಿಕ್ಕಲು ಕ್ರಮ ಕೈಗೊಂಡ. ರಾಮ್ಸೇ ಮ್ಯಾಕ್ಡೊನಾಲ್ಡರು ಇದೇ ಕಾಲಕ್ಕೆ ಜಾತೀಯ ಪ್ರಾತಿನಿಧ್ಯದ ನಿರ್ಣಯ ಪ್ರಕಟಿಸಲು (ಆಗಸ್ಟ್ 1932) ಜೈಲಿನಲ್ಲಿದ್ದ ಗಾಂಧೀಜಿ ಅಸ್ಪøಶ್ಯ ಹಿಂದುಗಳಿಗೆ ಪ್ರತ್ಯೇಕ ಮತದಾರ ಸಂಘಗಳಿರುವುದನ್ನು ಪ್ರತಿಭಟಿಸಿ ಉಪವಾಸ ಕೈಗೊಂಡರು. ಇದರಿಂದ ಗಾಂಧೀಜಿ ಮತ್ತು ಅಂಬೇಡ್ಕರರ ನಡುವೆ ಪುಣೆ ಒಪ್ಪಂದವಾಗಿ ಅಸ್ಪಶ್ಯರಿಗೆ ಪ್ರತ್ಯೇಕ ಮತದಾರ ಸಂಘಗಳಿರುವುದರ ಬದಲಿಗೆ ಸಾಮಾನ್ಯ ಮತದಾರ ಸಂಘಗಳಲ್ಲೇ ಸ್ಥಾನಗಳನ್ನು ಕಾದಿಡುವ ಪದ್ಧತಿಗೆ ಮಾನ್ಯತೆ ದೊರೆಯಿತು. ಮುಂದೆ 1935 ಆಗಸ್ಟ್‍ನಲ್ಲಿ ಫೆಡರಲ್ ಆ್ಯಕ್ಟ್ ಎಂದು ಪರಿಚಿತವಾದ ಸಂವಿಧಾನ ಸುಧಾರಣಾ ಕಾನೂನನ್ನು ಬ್ರಿಟಿಷ್ ಸಂಸತ್ತು ಮಂಜೂರು ಮಾಡಿತು.
- ಮಾಕ್ರ್ವಿಸ್ಟ್ ಆಫ್ ಲಿನ್‍ಲಿತ್‍ಗೊ ವಿಲ್ಲಿಂಗ್‍ಡನ್‍ನ ಉತ್ತರಾಧಿಕಾರಿಯಾಗಿ ಬಂದು (ಏಪ್ರಿಲ್ 1936) 1935ರ ಕಾನೂನಿನಂತೆ ಚುನಾವಣೆಗೆ ಸ್ಪರ್ಧಿಸಿ ಬಹುಪಾಲು ಮಾಡಲು ಮನವೊಲಿಸುವಲ್ಲಿ ಯಶಸ್ವಿಯಾದ. ಆದರೆ ಎರಡನೆಯ ಮಹಾಯುದ್ಧ ಆರಂಭವಾದಾಗ ಪ್ರಾಂತ್ಯಗಳಲ್ಲಿಯ ಮಂತ್ರಿ ಮಂಡಲಗಳು ರಾಜೀನಾಮೆ ನೀಡಿ ಬ್ರಿಟಿಷ್‍ರೊಡನೆ ಅಸಹಕಾರ ಸೂಚಿಸುವ ಪರಿಸ್ಥಿತಿ ಬಂತು. ಯುದ್ಧಾನಂತರ ಭಾರತಕ್ಕೆ ಬ್ರಿಟಿಷ್ ಸಾಮ್ರಾಜ್ಯದಲ್ಲಿಯ ಆಂತರಿಕ ಸ್ವಾಯತ್ತಸ್ಥಾನಮಾನ (ಡೊಮಿನಿಯನ್ ಸ್ಟೇಟಸ್) ನೀಡುವುದು ತಮ್ಮ ಗುರಿಯೆಂಬ ಲಿನ್‍ಲಿತ್‍ಗೊನ ಹೇಳಿಕೆಯಿಂದ (17-10-1939) ಕಾಂಗ್ರೆಸ್ಸಿಗೆ ಸಮಾಧಾನವಾಗಲಿಲ್ಲ. 1940 ಅಕ್ಟೋಬರಿನಲ್ಲಿ ಯುದ್ಧ ವಿರೋಧೀ ವೈಯಕ್ತಿಕ ಸತ್ಯಾಗ್ರಹ ಮುಂದೆ ಪೂರ್ವರಂಗದಲ್ಲಿ ಬ್ರಿಟನ್ ಪರಾಭವ, ಬರ್ಮ ಪತನ ಚಳವಳಿ ಮುಂತಾದವುಗಳಿಂದ ದೇಶದಲ್ಲಿ ಆಡಳಿತವೇ ಕುಸಿವ ಸ್ಥಿತಿ ಉಂಟಾಯಿತು. ಬಂಗಾಲದಲ್ಲಿ ಉಗ್ರ ಕ್ಷಾಮ ಕಾಣಿಸಿತು (1943). ಈ ವೇಳೆಗೆ ಮುಸ್ಲಿಮ್ ಲೀಗ್ ಭಾರತದ ವಿಭಜನೆಯಾಗಬೇಕೆಂಬ ಬೇಡಿಕೆ ಮುಂದಿಟ್ಟಿತ್ತು (21-8-1940). ಲಾರ್ಡ್ ವೇವೆಲ್ ವೈಸ್‍ರಾಯಾಗಿ ನೇಮಕಗೊಂಡಾಗ (1943 ಅಕ್ಟೋಬರ್) ಆ ಬಗ್ಗೆ ದೇಶದಲ್ಲಿ ಅಸಮಾಧಾನವಿತ್ತು. ಏಕೆಂದರೆ ಈತ ಸೇನಾನಿ, ರಾಜನೀತಿಜ್ಞನಲ್ಲ. ಆದರೆ ಬಂಗಾಲದ ಕ್ಷಾಮ ಪರಿಹರಿಸಲು ತೀವ್ರ ಕ್ರಮ ಕೈಗೊಂಡ, ಯುದ್ಧ ಮುಗಿದ ಬಳಿಕ ಸ್ವಾತಂತ್ರ್ಯ ನೀಡುವ ಪ್ರಶ್ನೆ ಬಂದಾಗ ಉಂಟಾದ ಬಿಕ್ಕಟ್ಟನ್ನು ಎದುರಿಸುವ ಚಾಕಚಕ್ಯ ಇವನಲ್ಲಿರಲಿಲ್ಲ ಕಾಂಗ್ರಸ್ ಮತ್ತು ಮುಸ್ಲಿಮ್‍ಲಿಂಗ್ ನಾಯಕರನ್ನು ಆಮಂತ್ರಿಸಿ ಸಿಮ್ಲಾದಲ್ಲಿ 1945 ಜೂನ್-ಜುಲೈ ಅವಧಿಯಲ್ಲಿ ಚರ್ಚೆ ನಡೆಸಿದರೂ ಉಭಯಸಮ್ಮತ ಸೂತ್ರ ಕಾಣಿಸಲಿಲ್ಲ. ಇದೇ ಕಾಲಕ್ಕೆ ಸುಭಾಷರು ಸಂಘಟಿಸಿದ್ದ ಐ.ಎನ್.ಎ. ನಾಯಕರ ವಿಚಾರಣೆ ನಡೆಸುವ ಕ್ರಮವನ್ನು ಇವನು ಕೈಗೊಂಡದ್ದರಿಂದ ದೇಶದ ರಾಜಕೀಯ ಸ್ಥಿತಿ ವಿಕೋಪಕ್ಕೆ ಹೋಯಿತು. ಇದೇ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಹಡಗು ಪಡೆಯ ಭಾರತೀಯ ಸೈನಿಕರು ಬಂಡೆದ್ದರು (1945). ಬ್ರಿಟಷರು ಹೆಚ್ಚು ಕಾಲ ಭಾರತದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲವೆಂಬ ಸಂಗತಿ ಇಂಗ್ಲೆಂಡಿನಲ್ಲಿ ಅಧಿಕಾರಕ್ಕೆ ಬಂದಿದ್ದ ಲೇಬರ್ ಪಕ್ಷದ ಸರ್ಕಾರಕ್ಕೆ ಮನವರಿಕೆಯಾಯಿತು. ಇದರ ಹಿಂದೆಯೇ ಮಾರ್ಚ್-ಏಪ್ರಿಲಿನಲ್ಲಿ ಕ್ಯಾಬಿನೆಂಟ್ ಮಿಶನ್ ಭಾರತಕ್ಕೆ ಬಂದು ನಾಯಕರ ಜೊತೆ ಅಧಿಕಾರ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸಿತು. ಪಾಕಿಸ್ತಾನ ಬೇಡಿಕೆಯನ್ನು ಒತ್ತಾಯಿಸಿ ಮುಸ್ಲಿಮ್‍ಲಿಂಗ್ ನೇರ ಕ್ರಮಕ್ಕೆ ಕರೆಕೊಟ್ಟಾಗ ಕಲ್ಕತ್ತಾದಲ್ಲಿ ನಡೆದ ಹತ್ಯಾಕಾಂಡದ ಕಾಲಕ್ಕೆ (1946 ಆ ಗಸ್ಟ್) ವೇವೆಲ್ ಕೈಲಾಗದವನಂತೆ ವರ್ತಿಸಿದ.
- ಈ ವೇಳೆಗಾಗಲೇ ಘಟನಾಸಮಿತಿಯ ಚುನಾವಣೆಗಳು ಮುಗಿದು (ಜುಲೈ 1946) ಆಗಸ್ಟ್ 6ಕ್ಕೆ ನಡುಗಾಲ ಸರ್ಕಾರ ರಚನೆಗೆ ಜವಾಹರಲಾಲ್ ನೆಹರೂರನ್ನು ವೇವೆಲ್ ಆಮಂತ್ರಿಸಿದನಾದರೂ ಮುಸ್ಲಿಮ್ ಲೀಗಿನ ಪ್ರತಿನಿಧಿಗಳೂ ನಡುಗಾಲ ಮಂತ್ರಿಮಂಡಲ ಸೇರುವಂತೆ ಮಾಡಿಬಿಕ್ಕಟ್ಟನ್ನು ತಂದಿಟ್ಟು ಅನೇಕ ಗೊಂದಲಗಳಿಗೆ ಹಾದಿ ಮಾಡಿದ.
- ಪರಿಸ್ಥಿತಿ ಎದುರಿಸಲು ಇವನಿಗೆ ಪರಿಣತಿ ಇಲ್ಲವೆಂದು ಲೇಬರ್ ಸರ್ಕಾರಕ್ಕೆ ಮನವರಿಕೆಯಾದಾಗ ಇವನನ್ನು ಹಿಂದಕ್ಕೆ ಕರೆಸಿತು (24-3-1947), ಲಾರ್ಡ್ ಮೌಂಟ್‍ಬ್ಯಾಟನ್‍ನನ್ನು ವೈಸ್‍ರಾಯಿಯಾಗಿ ನೇಮಿಸಲಾಯಿತು. ಈತ ಚಾಕಚಕ್ಯದಿಂದ ಹಾಗೂ ಶೀಘ್ರ ನಿರ್ಧಾರಗಳಿಂದ ಅಧಿಕಾರ ಹಸ್ತಾಂತರಕ್ಕೆ ಬೇಕಾಗುವ ವಾತಾವರಣ ಕಲ್ಪಿಸಿದ. ಭಾರತ ಮತ್ತು ಪಾಕಿಸ್ತಾನಗಳು ಉದಯಿಸಲು ದಾರಿ ಮಾಡಿಕೊಟ್ಟ. ಸ್ವತಂತ್ರ ಭಾರತ ಗವರ್ನರ್ ಜನರಲ್ ಆಗಿ 1948 ಜೂನ್ ತನಕ ಈತ ಅಧಿಕಾರದಲ್ಲಿ ಮುಂದುವರಿದ. (ನೋಡಿ- ಭಾರತದ-ಸ್ವಾತಂತ್ರ್ಯ-ಸಂಗ್ರಾಮ)
- (ಎಸ್.ಎನ್.ಕೆ.ಎ.)
- ಸ್ವತಂತ್ರ ಭಾರತ ಭಾರತದ ಇತಿಹಾಸದಲ್ಲಿ 1947 ಮಹತ್ತ್ವದ ವರ್ಷ. ದೀರ್ಘ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಬಿಡುಗಡೆ ಹೊಂದಿದ್ದು ಆ ವರ್ಷ. ಅದರೊಂದಿಗೆ ದೇಶದ ವಿಭಜನೆಯೂ ಆದದ್ದು ಆ ವರ್ಷ. ಹಿಂದಿನ ಭಾರತದ ನೆಲದಿಂದ ಪಾಕಿಸ್ತಾನವನ್ನು ಪ್ರತ್ಯೇಕ ದೇಶವಾಗಿ ಕೊರೆದದ್ದು ಆ ವರ್ಷ.
- 1947ರ ಈ ಮಹತ್ತ್ವದ ಘಟನೆಗೆ ಹಿನ್ನೆಲೆಯಾಗಿ ಕೆಲವು ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಬೇಕು. 1944ರಲ್ಲಿ ಯೂರೊಪ್ ರಂಗದಲ್ಲಿ ಯುದ್ಧ ಕೊನೆಗೊಂಡಾಗ ಭಾರತ ಸರ್ಕಾರ ಬಲಿಷ್ಠವೆಂದೇ ತೋರುತ್ತಿತು. ವೇವೆಲ್ ವೈಸ್‍ರಾಯಿಯಾಗಿ ಆಡಳಿತ ಸ್ಥಿರತೆ ಸಾಧಿಸಿದ್ದಂತೆ ಕಾಣುತ್ತಿತ್ತು. ಜಪಾನಿನ ಎದುರಿನಲ್ಲಿ ಬ್ರಿಟನ್ ವಿಜಯಗಳಿಸತೊಡಗಿತ್ತು. ಬರ್ಮದಲ್ಲಿ ಮಿತ್ರ ಪಡೆಗಳು ಮುನ್ನಡೆ ಸಾಧಿಸಿದ್ದುವು. ಭಾರತದಲ್ಲಿ ಸೈನ್ಯ ಎಲ್ಲೆಲ್ಲೂ ಪಸರಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂಬ ಚಳವಳಿ ಘೋಷಿಸಿದ (1942) ನಾಯಕದಲ್ಲಿ ಹಲವರು ಸ್ಥಾನಬದ್ಧತೆಯಲ್ಲಿದ್ದರು. ಎಲ್ಲವೂ ನೆಟ್ಟಗಿದೆಯೆಂಬ ಭ್ರಮೆಯುಂಟಾಗಿತ್ತು. ಆದರೆ ಈ ಪರಿಸ್ಥಿತಿ ತಾತ್ಕಾಲಿಕ. ಭಾರತದ ಸ್ವಾತಂತ್ರ್ಯ ಚಳವಳಿ ಮೇಲುನೋಟಕ್ಕೆ ಸ್ತಬ್ಧವಾಗಿತ್ತೆನಿಸಿದರೂ ಆಂತರಿಕವಾಗಿ ಅಸಮಾಧಾನ ಹೊಗೆಯಾಡುತ್ತಿತ್ತು. ಕ್ರಿಪ್ಸ್ ಕೊಡುಗೆಯನ್ನು ಕಾಂಗ್ರೆಸ್ ತಿರಸ್ಕರಿಸಿದ್ದರಿಂದ ಬ್ರಿಟಿಷರು ಅದನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಆದಾಗ್ಯೂ ಭಾರತಕ್ಕೆ ಸ್ವಾಧಿಕಾರ ನೀಡುವ ಪ್ರಶ್ನೆ ಸತ್ತು ಹೋಗಿರಲಿಲ್ಲ. ಪೂರ್ವರಂಗದಲ್ಲೂ ಯುದ್ಧ ಮುಗಿದೊಡನೆ ಈ ಪ್ರಶ್ನೆ ಮತ್ತೆ ಬೃಹತ್ತಾಗಿ ಮುಂದೆ ನಿಲ್ಲುವುದೆಂಬುದನ್ನು ಬ್ರಿಟಿಷರು ಅರಿತಿದ್ದರು.
- ಜಪಾನಿನೊಂದಿಗಿನ ಯುದ್ಧ ಇನ್ನೂ ಒಂದು ವರ್ಷವಾದರೂ ಮುಂದುವರಿದೀತೆಂದು 1945ರಲ್ಲಿ ಮೊದಲು ಭಾವಿಸಲಾಗಿತ್ತು. ಬ್ರಿಟನ್ನಿನಲ್ಲಿ ಸಂಮಿಶ್ರ ಸರ್ಕಾರ ಕೊನೆಗೊಂಡು ಚುನಾವಣೆ ನಡೆಯುವ ನಿರೀಕ್ಷೆಯಿತ್ತು. ಅಷ್ಟರಲ್ಲಿ ಭಾರತದ ರಾಜಕೀಯ ಭವಿಷ್ಯ ಇತ್ಯರ್ಥವಾಗಬೇಕಾಗಿದ್ದುದು ಸ್ಪಷ್ಟ.
- ಕಾಂಗ್ರೆಸ್ ನಾಯಕರನ್ನು ಬಿಡುಗಡೆ ಮಾಡಲಾಯಿತು. ಅವರೊಂದಿಗೆ ಹಾಗೂ ಮುಸ್ಲಿಮ್ ಲೀಗಿನ ನಾಯಕರೊಂದಿಗೆ ಸಿಮ್ಲಾದಲ್ಲಿ ಸಂಧಾನಗಳು ನಡೆದುವು. ಆದರೆ ಲೀಗನ್ನು ಮುಸ್ಲಿಮರ ಏಕೈಕ ಪ್ರಾತಿನಿಧಿಕ ಸಂಸ್ಥೆಯೆಂಬುದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿಯೂ ಆಡಳಿತ ಮಂಡಲಿಯಲ್ಲಿ ಸ್ಥಾನ ವಿತರಣೆ ವಿಚಾರವಾಗಿ ಭಿನ್ನಭಿಪ್ರಾಯ ಉಂಟಾದ್ದರಿಂದಾಗಿಯೂ ಸಂಧಾನಗಳು ಫಲಿಸಲಿಲ್ಲ.
- ಅಷ್ಟರಲ್ಲಿ ಹಲವಾರು ಅನಿರೀಕ್ಷಿತ ಘಟನೆಗಳು ಸಂಭವಿಸಿದುವು. ಬ್ರಿಟನ್ನಿನ ಚುನಾವಣೆಗಳಲ್ಲಿ ಲೇಬರ್ ಪಕ್ಷ ಜಯಗಳಿಸಿ ಸರ್ಕಾರ ರಚಿಸಿತು. ಹಿರೋಷಿಮ ನಾಗಸಾಕಿ ನಗರಗಳ ಮೇಲೆ ಅಮೆರಿಕ ಪರಮಾಣು ಬಾಂಬ್ ಹಾಕಿದಾಗ ಜಮಾನ್ ಸ್ಥೈರ್ಯಗುಂದಿ ಮಿತ್ರ ಪಡೆಗಳಿಗೆ ಶರಣಾಯಿತು. ಜಪಾನಿನೊಂದಿಗಿನ ಯುದ್ಧ ಹಠಾತ್ತನೆ ಅಂತ್ಯಗೊಂಡಿತು. 1946 ಫೆಬ್ರುವರಿಯಲ್ಲಿ ನೌಕಾಪಡೆಯಲ್ಲಿ ಸಂಭವಿಸಿದ ಬಂಡಾಯ ಬ್ರಿಟಿಷರ ಕಣ್ತೆರೆಯಿಸಿತು. ಭಾರತವನ್ನು ಇನ್ನು ಹೆಚ್ಚು ಕಾಲ ಹಿಡಿದಿಡುವುದು ಸಾಧ್ಯವಾಗದೆಂಬುದು ಅವರಿಗೆ ಮನವರಿಕೆಯಾಯಿತು. ನೌಕಾ ಬಂಡಾಯದಿಂದ ಕಾಂಗ್ರೆಸ್ಸಿಗೂ ಅಂಜಿಕೆಯಾಗದಿರಲಿಲ್ಲ. ಇಂಥ ಪ್ರವೃತ್ತಿಗಳು ಬಲವಾದರೆ ದೇಶದಲ್ಲಿ ಅನಾಯಕತ್ವ ಉಂಟಾಗಬಹುದಾದ್ದರಿಂದ ಆದಷ್ಟು ಶೀಘ್ರವಾಗಿ ಇವನ್ನು ಹತ್ತಿಕ್ಕಬೇಕೆಂಬುದು ಅದರ ಅಭಿಪ್ರಾಯ. ಬಂಡಾಯವನ್ನು ಕಾಂಗ್ರೆಸ್ ಸಮರ್ಥಿಸಲಿಲ್ಲವಾದ್ದರಿಂದ ಅದರ ನಾಯಕರಿಗೂ ಅಸಮಧಾನವಾದ್ದು ಸಹಜ. ಮುಸ್ಲಿಮರ ಪ್ರತಿನಿಧಿಯೆಂದು ಹೇಳಿಕೊಳ್ಳುತ್ತಿದ್ದ ಮುಸ್ಲಿಮ್ ಲೀಗ್ ಭಾರತಕ್ಕೆ ಬ್ರಿಟನ್ ಅಖಂಡ ಸ್ವಾತಂತ್ರ್ಯ ನೀಡುವುದನ್ನು ಮೊದಲಿಂದಲೂ ವಿರೋಧಿಸುತ್ತಿತ್ತು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವಿಲ್ಲದ ಯಾವುದೇ ಪರಿಹಾರವನ್ನು ಕಾಂಗ್ರೆಸ್ ಒಪ್ಪುತ್ತಿರಲಿಲ್ಲ. ಆದರೆ ಭಾರತವಿಭಜನೆ ಅದಕ್ಕೆ ಸಂಪೂರ್ಣ ಅಸಮ್ಮತ. ಕಾಂಗ್ರೆಸಿಗೆ ಒಪ್ಪಿಗೆಯಾಗುವ ಯಾವುದೇ ಒಡಂಬಡಿಕೆಗೆ ಮುಸ್ಲಿಮ್ ಲೀಗ್ ವಿರೋಧ.
- ಬ್ರಿಟಿಷರು ಯಾವುದೇ ತೀರ್ಮಾನಕ್ಕೆ ಬಂದು ಅದನ್ನು ಭಾರತದ ಮೇಲೆ ಹೊರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಯಥಾಸ್ಥಿತಿಯನ್ನು ಮುಂದುವರಿಸುವಂತೆಯೂ ಇರಲಿಲ್ಲ. ಏಕೆಂದರೆ ಹಠಾತ್ತಾಗಿ ಜಪಾನ್ ಶರಣಾಗಿ ಯುದ್ಧ ಥಟ್ಟನೆ ಕೊನೆಗೊಂಡದ್ದರಿಂದ ಯುದ್ಧಕಾಲದ ಸಾಮೂಹಿಕ ಹಾಗೂ ಕಡ್ಡಾಯದ ಸೇನಾ ಜಮಾವಣೆಯನ್ನು ಬ್ರಿಟನ್ ವಿಸರ್ಜಿಸಬೇಕಾಗಿ ಬಂತು. ಭಾರತವನ್ನು ಹಿಡಿದಿಡುವ ಶಕ್ತಿ ಭಾರತದಲ್ಲಿದ್ದ ಬ್ರಿಟಷ್ ಸರ್ಕಾರಕ್ಕೆ ಬಲುಮಟ್ಟಿಗೆ ಕಡಿಮೆಯಾಗಿತ್ತು. ಭಾರತಕ್ಕೆ ಆದಷ್ಟು ಜಾಗ್ರತೆ ಅಧಿಕಾರ ವರ್ಗಾಯಿಸಬೇಕು, ತಾನು ದೀರ್ಘಕಾಲ ಅಲ್ಲಿ ಮುಂದುವರಿಯುವುದು ತರವಲ್ಲ ಎಂಬುದು ಬ್ರಿಟನ್ನಿನ ಹೊಸ ಸರ್ಕಾರ ತಳೆದಿದ್ದ ಅಭಿಪ್ರಾಯ.
- ಪೆಥಿಕ್ ಲಾರೆನ್ಸ್ ನೊಯೋಗ: ಪೆಥಿಕ್ ಲಾರೆನ್ಸ್‍ರ ಅಧ್ಯಕ್ಷತೆಯಲ್ಲಿ ಬ್ರಿಟನ್ ಇನ್ನೊಂದು ನೊಯೋಗವನ್ನು ಭಾರತಕ್ಕೆ ಕಳಿಸಿತು (ಏಪ್ರಿಲ್ 1946). ಹಿಂದೂಗಳ ದಬ್ಬಾಳಿಕೆಗೆ ಮುಸ್ಲಿಮರು ಒಳಗಾಗುವರೆಂಬ ಲೀಗಿನ ಅಂಜಿಕೆಯನ್ನು ಕೊನೆಗಾಣಿಸುವ ರೀತಿಯಲ್ಲಿ ಅಖಂಡ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬುದು ನಿಯೋಗದ ಗುರಿಯಾಗಿತ್ತು. ಆದರೆ ಈ ಬಗ್ಗೆ ಒಡಂಬಡಿಕೆಯಾಗಲಿಲ್ಲ ಭಾರತ ವಿಭಜನೆಗೆ ಎಡೆಮಾಡುವ ಯಾವ ಸೂತ್ರವೂ ಕಾಂಗ್ರೆಸ್ಸಿಗೆ ಒಪ್ಪಿಗೆಯಿರಲಿಲ್ಲ. ಜಿನ್ನಾರಿಗೆ ಜನಬೆಂಬಲವೇನೂ ಇಲ್ಲವೆಂಬುದು ಕಾಂಗ್ರೆಸಿನ ನಂಬಿಕೆಯಾಗಿತ್ತು. ಮುಸ್ಲಿಮ್ ಆಶೋತ್ತರಗಳನ್ನು ಪೂರೈಸದ ಯಾವ ಸಂಧಾನವೂ ಜಿನ್ನಾರಿಗೆ ಬೇಕಿರಲಿಲ್ಲ. ಅಖಂಡ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಯಾವುದೇ ಪ್ರಯತ್ನಕ್ಕೆ ತಡೆ ಒಡ್ಡುವುದರ ಮೂಲಕವೇ ತಮ್ಮ ಗುರಿ ಸಾಧಿಸಿಕೊಳ್ಳಬಹುದೆಂಬುದು ಜಿನ್ನಾರ ಲೆಕ್ಕಾಚಾರವಾಗಿತ್ತು.
- ಪೆಥಿಕ್ ಲಾರೆನ್ನ್ ನಿಯೋಗ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿತು: ಎರಡು ಸ್ತರಗಳಲ್ಲಿ ಅಧಿಕಾರವಿರುವ ಒಕ್ಕೂಟದ ರಚನೆ ಅದರ ಸಲಹೆ. ಬ್ರಿಟಿಷ್ ಭಾರತದ ಪ್ರಾಂತ್ಯಗಳದು ಮೊದಲನೆಯ ಸ್ತರ. ಭಾರತೀಯ ಸಂಸ್ಥಾನಗಳು ಸಂಧಾನದ ಮೂಲಕ ಇವಕ್ಕೆ ಸೇರಿಕೊಳ್ಳಬಹುದಿತ್ತು. ವಿವಿಧ ಪ್ರಾಂತ್ಯಗಳು ತಮ್ಮ ಅಧೀನದಲ್ಲಿ ಇತರ ಭಾಗಗಳೊಂದಿಗೆ ಕೂಡಿ ಒಕ್ಕೂಟ ರಚಿಸಿಕೊಳ್ಳಬಹುದಿತ್ತು. ಈ ಪ್ರಾದೇಶಿಕ ಒಕ್ಕೂಟಗಳಲ್ಲಿ ಪ್ರಾಂತ್ಯಗಳ ಯಾವ ಯಾವ ಅಧಿಕಾರಿಗಳು ನಿಹಿತಗೊಳ್ಳತಕ್ಕದ್ದೆಂಬುದನ್ನು ಆಯಾ ಒಕ್ಕೂಟಗಳಲ್ಲಿ ಪ್ರಾಂತ್ಯಗಳ ಯಾವ ಯಾವ ಅಧಿಕಾರಗಳು ನಿಹಿತಗೊಳ್ಳತಕ್ಕದ್ದೆಂಬುದನ್ನು ಆಯಾ ಒಕ್ಕೂಟವೇ ತೀರ್ಮಾನಿಸಿಕೊಳ್ಳಬೇಕಿತ್ತು. ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಕೇಂದ್ರ ಸರ್ಕಾರಕ್ಕೆ ಸೇರಿರತಕ್ಕದ್ದು. ಕೇಂದ್ರ ಒಕ್ಕೂಟದಲ್ಲಿ ಸೇರುವ ಪ್ರಾದೇಶಿಕ ಘಟಕಗಳಿಗೆ ವಿಶೇಷ ಅಧಿಕಾರ ನೀಡಿ, ಕೇಂದ್ರದ ಅಧಿಕಾರವನ್ನು ಬಹಳವಾಗಿ ತಗ್ಗಿಸುವುದರಿಂದ ಹಿಂದೂ ದಬ್ಬಾಳಿಕೆಯ ಅಪಾಯ ಇರುವುದಿಲ್ಲವೆಂದೂ ಅಖಂಡ ಭಾರತದ ಸಮಗ್ರತೆಯನ್ನು ಉಳಿಸಿಕೊಳ್ಳಬಹುದೆಂದೂ ನಿಯೋಗಭಾವಿಸಿತ್ತು. ಈ ವ್ಯವಸ್ಥೆ ಜಾರಿಗೆ ಬರುವ ತನಕ-ನಡುಗಾಲದಲ್ಲಿ-ಪ್ರಾತಿನಿಧಿಕ ಸರ್ಕಾರ ಸ್ಥಾಪಿಸಿಬೇಕೆಂದೂ ಆಯೋಗ ಸೂಚಿಸಿತು. ಭಾರತಕ್ಕೆ ಸಂವಿಧಾನ ರಚಿಸಲು ಒಂದು ಸಭೆ ರಚಿಸುವುದು ನಡುಗಾಲ ಸರ್ಕಾರದ ಹೊಣೆ.
- ನಡುಗಾಲ ಸರ್ಕಾರದ ಸಂಪುಟದಲ್ಲಿ ಸ್ಥಾನ ವಿತರಣೆಯ ವಿಚಾರ ಭಿನ್ನಾಭಿಪ್ರಾಯ ಹಣಿಕಿತು. ಕಾಂಗ್ರೆಸ್ ಇಡೀ ಭಾರತವನ್ನು ಪ್ರತಿನಿಧಿಸುವುದರಿಂದ ಮುಸ್ಲಿಮ್ ಮಂತ್ರಿಯೊಬ್ಬರನ್ನು ನೇಮಿಸುವ ಅಧಿಕಾರ ತನಗೆ ಬೇಕೆಂದಿತು. ಎಲ್ಲ ಮುಸ್ಲಿಮರ ನೇಮಕಾಧಿಕಾರವೂ ತನ್ನದೇ ಎಂದಿತು ಮುಸ್ಲಿಮ್ ಲೀಗ್.
- ಈ ಸೂತ್ರ ಕಾಂಗ್ರೆಸಿಗಾಗಲಿ ಲೀಗಿಗಾಗಲಿ ಒಪ್ಪಿಗೆಯಾಗಲಿಲ್ಲವಾದ್ದರಿಂದ ವಿಫಲಗೊಂಡಿತು. ಸ್ವಾತಂತ್ರ್ಯ ನೀಡದಂತೆ ತಡೆ ಒಡ್ಡುವ ಮೂಲಕವೇ ಪಾಕಿಸ್ತಾನವನ್ನು ಗಿಟ್ಟಿಸಿಕೊಳ್ಳಬಹುದೆಂಬುದು ಜಿನ್ನಾರ ಎಣಿಕೆ. ಬ್ರಿಟಿಷರು ಭಾರತವನ್ನು ಬಿಟ್ಟು ಹೊರಡುವುದರಿಂದ ಮತ್ತು ಇದು ಆದಷ್ಟು ಬೇಗ ಸಾಧಿತವಾಗಬೇಕಾದ್ದರಿಂದ ಅಸಹಕಾರದ ಮೂಲಕ ಗೆಲುವು ಸಾಧಿಸಬೇಕೆಂಬುದು ಅವರ ಹವಣಿಕೆ.
- ಕೊನೆಗೂ ಜಿನ್ನಾ ತಮ್ಮ ಗುರಿ ಸಾಧಿಸಿದರು. ಇದು ಕಾಂಗ್ರೆಸಿನ ಅಖಂಡ ಭಾರತದ ಪರಿಕಲ್ಪನೆಗೆ ಭಾರಿ ಪೆಟ್ಟಾಯಿತಾದರೂ, ಪೆಥಿಕ್-ಲಾರೆನ್ಸ್ ನಿಯೋಗದ ಸೂತ್ರ ವಿಫಲಗೊಂಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಆ ಸೂತ್ರಕ್ಕೆ ಒಪ್ಪಿಗೆ ದೊರೆಕಿದ್ದರೆ ಪ್ರಾದೇಶಿಕ ಪ್ರಾಬಲ್ಯದ, ದುರ್ಬಲ ಕೇಂದ್ರದ, ಹೆಸರಿಗೆ ಅಖಂಡನೆಂದು ಎನಿಸಿಕೊಂಡ, ಸ್ವತಂತ್ರ ಭಾರತದ ಉದಯವಾಗುತ್ತಿತ್ತು. ಕೋಮುವಾರು ಒತ್ತಡಗಳೂ ಘರ್ಷಣೆಗಳೂ ಅಧಿಕವಾಗಿ, ಭಾರತ ಸಾಧಿಸಿರುವ ಆರ್ಥಿಕ ಅಭಿವೃದ್ಧಿ ಸಾಧ್ಯವಾಗದೆ ಹೋಗುತ್ತಿತ್ತು. ಭಾರತದ ವಿವಿಧ ಪ್ರಬಲ ಘಟಕಗಳ ನಡುವೆ ಸ್ಪರ್ಧೆ, ಘರ್ಷಣೆ ಉಂಟಾಗಿ ದೇಶ ಹಲವು ಸ್ವತಂತ್ರ ತುಂಡುಗಳಾಗಿ ಒಡೆದುಬಿಡುತ್ತಿತು.
- ಭಾರತದ ವಿಭಜನೆ: ಪೆಥಿಕ್-ಲಾರೆನ್ಸ್ ನಿಯೋಗದ ಪ್ರಯತ್ನ ವಿಫಲಗೊಂಡ ಮೇಲೆ ಭಾರತದಲ್ಲಿ ಭೀಕರ ಹಿಂದೂ ಮುಸ್ಲಿಮ್ ಹಿಂಸಾಚಾರ ಸಂಭವಿಸಿತು. ಪರಸ್ಪರ ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಬೆಳೆಯಿತು. ಆಗಸ್ಟ್ 16ರಂದು ನೇರ ಕಾರ್ಯಾಚಾರಣೆ ನಡೆಸುವುದಾಗಿ ಜಿನ್ನಾ ಘೋಷಿಸಿದರು. ಕಲ್ಕತ್ತದಲ್ಲಿ ಕೊಲೆಗಳು ಸಂಭವಿಸಿದುವು. ಇಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಸತ್ತರು. ಇದಕ್ಕೆ ಪ್ರತೀಕಾರವಾಗಿ ಬಿಹಾರದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ಕೊಲೆಯಾಯಿತು. ಪೂರ್ವ ಬಂಗಾಲ, ಸಂಯುಕ್ತ ಪ್ರಾಂತ್ಯಗಳಿಗೂ ಗಲಭೆ ಹಬ್ಬಿತು.
- ಈ ಘಟನೆಗಳಿಂದ ಕಾಂಗ್ರೆಸ್ ಗಂಭೀರವಾಯಿತು. ಸೆಪ್ಟೆಂಬರಿನಲ್ಲಿ ಅಧಿಕಾರ ಸ್ವೀಕರಿಸಿತು. ಮುಸ್ಲಿಮ್ ಲೀಗೂ ಕೇಂದ್ರ ಸರ್ಕಾರವನ್ನು ಸೇರಿತು. ಆದರೆ ಅವರ ಪ್ರವೇತ ಸಹಕಾರೋದ್ದೇಶದಿಂದ ಅಲ್ಲ. ಅಡ್ಡಿಪಡಿಸುವ ಸಲುವಾಗಿ. ಕೊನೆಗೆ ಬ್ರಿಟಿಷ್ ಸರ್ಕಾರ 1948 ಜೂನ್ ಒಳಗಾಗಿ ಸಂಪೂರ್ಣ ಅಧಿಕಾರವನ್ನು ಭಾರತೀಯರಿಗೆ ವರ್ಗಾಯಿಸುವುದಾಗಿ ಘೋಷಿಸಿತು. ಪಂಜಾಬಿನಲ್ಲಿ ಕೋಮುವಾರು ಗಲಭೆಗಳು ಉಲ್ಬಣಿಸಿದವು. ಭಾರತದ ವಿಭಜನೆ ಅನಿವಾರ್ಯವೆಂದು ಕಾಂಗ್ರೆಸಿಗೆ ಮನವರಿಕೆಯಾಯಿತು. ಮಹಾತ್ಮಗಾಂಧೀಯವರಿಗೆ ಇದು ಸರಿಯೆನಿಸಲಿಲ್ಲ. ನೂತನ ವೈಸ್‍ರಾಯಿಯಾಗಿ ಬಂದ ಮೌಂಟ್‍ಬ್ಯಾಂಟನ್ 1947 ಆಗಸ್ಟ್ 14ರಂದು ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿದರು. ಭಾರತದ ವಿಭಜನೆ ಆಗಬೇಕೆಂದು ತೀರ್ಮಾನವಾದ ಮೇಲೆ ಮೌಂಟ್‍ಬ್ಯಾಟನ್ ಮಿಂಚಿನ ವೇಗದಿಂದ ಮುಂದುವರಿದರು. ಗಡಿ ಆಯೋಗದ ನಿರ್ಣಯದಂತೆ ಭಾರತ ಪಾಕಿಸ್ತಾನಗಳ ಸೀಮಾ ನಿರ್ಧರಣೆ ಆಯಿತು. ಬಂಗಾಲ, ಪಂಜಾಬ್ ಪ್ರಾಂತ್ಯಗಳನ್ನು ಒಡೆಯಲಾಯಿತು. ಪೂರ್ವ ಬಂಗಾಲವೂ ಪಶ್ಚಿಮ ಪಂಜಾಬೂ ಪಾಕಿಸ್ತಾನಕ್ಕೆ ಸೇರಿದುವು. ಆಗಸ್ಟ 14ರ ಮಧ್ಯ ರಾತ್ರಿಯಾದೊಡನೆ ವಿಭಜಿತ ಭಾರತ ಸ್ವತಂತ್ರವಾಯಿತು. ಮೌಂಟ್‍ಬ್ಯಾಟನ್ ಸ್ವತಂತ್ರಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕಗೊಂಡರು. ಜವಾಹರ್‍ಲಾಲ್ ನೆಹರೂ ಪ್ರಧಾನಮಂತ್ರಿ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು.
- ಸ್ವತಂತ್ರಭಾರತ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪಂಜಾಬ್ ಬಂಗಾಲಗಳಲ್ಲಿ ನಡೆದ ಸಾಮೂಹಿಕ ಕೊಲೆಗಳ ಹಿಂದೆಯೇ ಪೂರ್ವ-ಪಶ್ಚಿಮ ಪಾಕಿಸ್ತಾನಗಳಿಂದ ನಿರಾಶ್ರಿತರು ಅಧಿಕ ಸಂಖ್ಯೆಯಲ್ಲಿ ಭಾರತಕ್ಕೆ ಬರತೊಡಗಿದರು. ಕೋಮುವಾರು ಗಲಭೆಗಳಲ್ಲಿ ಸತ್ತವರ ಸಂಖ್ಯೆ ಖಚಿತವಾಗಿ ಗೊತ್ತಾಗಿಲ್ಲ. ಸುಮಾರು 5 ಲಕ್ಷ ಜನ ಸತ್ತರೆಂಬುದು ಒಂದು ಅಂದಾಜು. ಸುಮಾರು 69 ಲಕ್ಷ ಮಂದಿ ನಿರಾಶ್ರಿತರು ಭಾರತಕ್ಕೆ ಬಂದರು. ಪಶ್ಚಿಮ ಪಾಕಿಸ್ತಾನದಿಂದ ಬಂದ ನಿರಾಶ್ರಿತರು ದೆಹಲಿಯಲ್ಲಿ ತುಂಬಿದರು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದೊಂದು ಬೃಹತ್ ಸಮಸ್ಯೆಯಾಯಿತು. ದೆಹಲಿಯಲ್ಲಿ ತುಂಬಿದ ನಿರಾಶ್ರಿತರಿಂದಾಗಿ ಪ್ರತೀಕಾರದ ಮನೋಭಾವ ಬೆಳೆಯಿತು. ಭಾರತ-ಪಾಕಿಸ್ತಾನಗಳ ನಡುವೆ ಇದ್ದ ಕಾಶ್ಮೀರ ಯಾವ ದೇಶಕ್ಕೆ ಸೇರಬೇಕೆಂಬ ಬಗ್ಗೆ ವಿವಾದ ಎದ್ದುದ್ದರ ಫಲವಾಗಿ ಇವೆರಡೂ ದೇಶಗಳ ನಡುವೆ ಸೌಮನಸ್ಯ ನಷ್ಟವಾಗಿತ್ತು. ಭಾರತದಲ್ಲಿಯ ಪಾಕಿಸ್ತಾನಿ ಆಸ್ತಿಗಳಿಗಾಗಿ ಆ ದೇಶಕ್ಕೆ ಕೊಡಬೇಕಾಗಿದ್ದ ಹಣವನ್ನು ಭಾರತ ಸರ್ಕಾರ ತಡೆಹಿಡಿದಿದ್ದರಿಂದ ವಿರಸ ಪರಿಸ್ಥಿತಿ ಇನ್ನೂ ಬೆಳೆಯಿತು. ಪಾಕಿಸ್ತಾನಕ್ಕೆ ಆ ಹಣವನ್ನು ಕೊಟ್ಟು ಸಾಮರಸ್ಯ ಉಂಟುಮಾಡಬೇಕು, ದೆಹಲಿಯ ಮಸೀದಿಗಳಲ್ಲಿ ನೆಲಸಿದ್ದ ನಿರಾಶ್ರಿತರು ಅವನ್ನು ತೆರವು ಮಾಡಬೇಕು ಎಂದು ಮಹಾತ್ಮಗಾಂಧಿ ಉಪವಾಸ ಕೈಗೊಂಡರು. ಇವೆರಡಕ್ಕೂ ಸರ್ಕಾರ ಒಪ್ಪಿಕೊಂಡಾಗ ಉಪವಾಸ ಮುಕ್ತಾಯಗೊಂಡಿತು. ಇದನ್ನೊಪ್ಪದ ಕೆಲವರು ಗಾಂಧಿಯ ಕೊಲೆಗೆ ಸಂಚುಹೂಡಿದರು. 1948 ಜನವರಿ 30ರಂದು ದೆಹಲಿಯ ಪ್ರಾರ್ಥನಾ ಸಭೆಯೊಂದರಲ್ಲಿ ಗಾಂಧಿ ಕೊಲೆಗೆ ಈಡಾದರು.
- ಗಾಂಧಿಯ ಕೊಲೆಯಿಂದ ಥಟ್ಟನೆ ಹಿಂಸಾಚಾರ ಕೊನೆಗೊಂಡಿತು. ನೆಹರೂ ಕೈ ಬಲವಾಯಿತು. ನೆಹರೂ ಸಮಾಜವಾದಿ ಧೋರಣೆ ಉಳ್ಳವರು; ಉಪಪ್ರಾಧಾನಿ ಸರ್ದಾರ್ ವಲ್ಲಬಾಯಿ ಪಟೇಲ್ ವಾಸ್ತವತಾವಾದಿ; ಕಾಂಗ್ರೆಸ್ ಪಕ್ಷದ ಮೇಲೆ ಅವರ ಹಿಡಿತ. ಆದರೆ ಗಾಂಧಿಯವರ ಕೊಲೆಯ ಅಪವಾದದ ನೆರಳು ಅವರ ವರೆಗೂ ಚಾಚಿತ್ತು. ಕೊಲೆಯನ್ನು ತಡೆಯಲು ಅವರೇನೂ ಮಾಡಲಿಲ್ಲವೆಂದು ಆಪಾದಿಸಲಾಗಿತ್ತು.
- ಆದರೆ ಸರ್ದಾರ್ ಪಟೇಲ್ ಭಾರತದ ಸಂಘಟನೆಗೆ ಬಲುಮಟ್ಟಿಗೆ ಕಾರಣರಾದರು. ಬ್ರಿಟಿಷರು ಭಾರತವನ್ನು ಬಿಟ್ಟು ಕೊಟ್ಟಾಗ ದೇಶದಲ್ಲಿದ್ದ 360ಕ್ಕೂ ಹೆಚ್ಚು ದೇಶೀಯ ಸಂಸ್ಥಾನಾಧೀಶರು ಸ್ವತಂತ್ರರಾದರು. ಭಾರತ ಅಥವಾ ಪಾಕಿಸ್ತಾನದಲ್ಲಿ ತಂತಮ್ಮ ರಾಜ್ಯಗಳನ್ನು ವಿಲೀನಗೊಳಿಸುವ ಇಲ್ಲವೇ ಸ್ವತಂತ್ರರಾಗಿ ಮುಂದುವರಿಯುವ ತೀರ್ಮಾನ ಮಾಡುವುದು ಅವರಿಗೆ ಸೇರಿತ್ತು. ಭಾರತದ ಎಲ್ಲೆಯೊಳಗಿದ್ದ ಬಹುತೇಕ ಸಂಸ್ಥಾನಗಳು ಭಾರತದಲ್ಲಿ ವಿಲೀನಗೊಳ್ಳಲು ತೀರ್ಮಾನಿಸಿದುವು. ಭಾರತ-ಪಾಕ್ ಗಡಿಯ ನೆರೆಯ ಒಂದು ಸಂಸ್ಥಾನ ಜುನಾಗಢ. ಈ ಸಂಸ್ಥಾನವನ್ನು ಆಳುತ್ತಿದ್ದ ನವಾಬರು ಇದನ್ನು ಪಾಕಿಸ್ತಾನಕ್ಕೆ ಸೇರಿಸಲು ನಿರ್ಣಯಿಸಿದರು. ಆದರೆ ಕೆಲವೇ ವಾರಗಳಲ್ಲಿ ಭಾರತಸೇನೆ ಅದನ್ನು ಆಕ್ರಮಿಸಿತು. ಹಿಂದೂ ಬಹುಸಂಖ್ಯಾತರ ಸಂಸ್ಥಾನ ಹೈದರಾಬಾದ್. ಆದರೆ ಅದರ ನಿಜಾಮ ಭಾರತಕ್ಕೆ ಸೇರುವ ವಿಚಾರದಲ್ಲಿ ಡೋಲಾಯಮಾನವಾಗಿದ್ದ. ತೀವ್ರಗಾಮಿ ರಜಕಾರರು ಪ್ರಬಲರಾಗಿ ಅಧಿಕಾರಗ್ರಹಣದ ಯತ್ನಮಾಡಿದಾಗ ಭಾರತ ಸರ್ಕಾರ ಪೋಲಿಸ್ ಕಾರ್ಯಾಚರಣೆ ನಡೆಸಿತು. ಹೈದರಾಬಾದ್ ಭಾರತಕ್ಕೆ ಸೇರಿತು (1948). ಕಾಶ್ಮೀರದ ದೊರೆ ಹಿಂದುವಾಗಿದ್ದ. ಭಾರತಕ್ಕೆ ಸೇರುವ ವಿಚಾರದಲ್ಲಿ ಸಂದಿಗ್ಧಸ್ಥಿತಿ ಇದ್ದಾಗ ಪಾಕಿಸ್ತಾನಿ ಆಕ್ರಮಣಕಾರರು ಕಾಶ್ಮೀರಕ್ಕೆ ನುಗ್ಗಿದರು. ದೊರೆ ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದಾಗ, ಆ ರಾಜ್ಯದ ರಕ್ಷಣೆಗಾಗಿ ಭಾರತದ ಸೇನೆ ಧಾವಿಸಿತು. ಭಾರತ-ಪಾಕಿಸ್ತಾನಗಳ ನಡುವೆ ಯುದ್ಧ ನಡೆಯಿತು. ಪಾಕ್ ಆಕ್ರಮಿಸಿಕೊಂಡ ಬಹುತೇಕ ಭಾಗಗಳು ವಿಮೋಚನೆಗೊಂಡವು. ವಿಶ್ವಸಂಸ್ಥೆಯ ಕರೆಯನ್ನು ಮನ್ನಿಸಿ 1948ರಲ್ಲಿ ಪ್ರಧಾನಿ ನೆಹರೂ ಕದನವಿರಾಮಕ್ಕೆ ಒಪ್ಪಿದರು. ಚತುರೋಪಾಯಗಳಿಂದ ಭಾರತದ ದೇಶೀಯ ಸಂಸ್ಥಾನಗಳು ಭಾರತಕ್ಕೆ ಸೇರುವಂತೆ ಸಾಧಿಸಿದವರು ಸರ್ದಾರ್ ಪಟೇಲ್.
- ಸ್ವತಂತ್ರ ಭಾರತದ ಇನ್ನೊಂದು ಸಾಧನೆಯೆಂದರೆ ಅದಕ್ಕೊಂದು ಸಂವಿಧಾನದ ರಚನೆ. 1950ರಲ್ಲಿ ಭಾರತದ ಹೊಸ ಸಂವಿಧಾನ ಜಾರಿಗೆ ಬಂತು. ಸಂವಿಧಾನ ರಚನಾಸಭೆ 1935ರ ಭಾರತ ಸರ್ಕಾರದ ಅಧಿನಿಯಮದ ಸ್ವರೂಪವನ್ನು ಬಲು ಮಟ್ಟಿಗೆ ಉಳಿಸಿಕೊಂಡು ಸಂಸದೀಯ ಪ್ರಜಾಪ್ರಭುತ್ವವನ್ನು ಸ್ವೀಕರಿಸಿತು. ಭಾರತ ಒಕ್ಕೂಟ ಸಂಘೀಯ ಸ್ವರೂಪದ್ದಾಗಿದ್ದರೂ ಕೇಂದ್ರ ಸರ್ಕಾರ ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿತು. ರಕ್ಷಣೆ, ವಿದೇಶಾಂಗ ವ್ಯವಹಾರ, ರೈಲ್ವೆ, ಬಂದರುಗಳು, ಹಣಚಲಾವಣೆ-ಎಲ್ಲವೂ ಕೇಂದ್ರಕ್ಕೆ ಸೇರಿದ ಅಧಿಕಾರಗಳು, ಒಕ್ಕೂಟದ ಸರ್ವೋಚ್ಚನ್ಯಾಯಾಲಯದ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಾಯಿತು.
- ಅಮೆರಿಕನ್ ಸಂವಿಧಾನದ ರೀತಿಯಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನದಲ್ಲಿ ವ್ಯಾಖ್ಯಿಸಲಾಯಿತು. ಅಲ್ಲದೆ ಪ್ರಭುತ್ವ ಸಾಧಿಸಬೇಕಾದ ನೀತಿಗಳ ನಿರ್ದೇಶವನ್ನೂ ಲಿಖಿಸಲಾಯಿತು. ಇದು ಸ್ವತಂತ್ರ ಈರೀ ಗಣರಾಜ್ಯದ ಮಾದರಿ. ಅಸ್ಪøಶ್ಯತೆಯ ರದ್ದು ಇನ್ನೊಂದು ಸಾಧನೆ. ಭಾರತ ಗಣರಾಜ್ಯವಾಗಿಯೂ ಕಾಮನ್‍ವೆಲ್ತ್ ಕೂಟದಲ್ಲಿ ಉಳಿಯಲು ತೀರ್ಮಾನಿಸಿತು. ಹೀಗಾಗಿ ಹಳೆಯ ಬ್ರಿಟಿಷ್ ಮುಂದುವರಿಯಿತು. ಇದೊಂದು ವಿಶಿಷ್ಟ ಪ್ರಯೋಗ.
- 1950-64; ಭಾರತದ ದೀರ್ಘ ಇತಿಹಾಸದ ಒಂದು ಅಧ್ಯಾಯ 1950ರ ವೇಳೆಗೆ ಮುಗಿದು ಇನ್ನೊಂದು ಆರಂಭವಾಯಿತು. ಭಾರತ ಒಡೆದರೂ ಸ್ವಾತಂತ್ರ್ಯ ಗಳಿಸಿಕೊಂಡು, ವಿಚ್ಛಿದ್ರಕಾರಕ ಶಕ್ತಿಗಳನ್ನೆಲ್ಲ ಬಹುತೇಕ ಅಡಗಿಸಿ, ತಕ್ಕಮಟ್ಟಿನ ಸಂಘಟನೆ ಸಾಧಿಸಿತ್ತು. ಪಾಕಿಸ್ತಾನದ ಭಾಗವನ್ನು ಭಾರತದಿಂದ ಹರಿದು ಕೊಟ್ಟರೂ ಕಾಂಗ್ರೆಸ್ ತನ್ನ ಕಾರ್ಯಕ್ರಮವನ್ನು ಪೂರೈಸಿತ್ತು. ಭವಿಷ್ಯಕ್ಕೊಂದು ಹೊಸ ರೇಖಾಲೇಖ ಬದ್ಧವಾಗಿತ್ತು.
- 1950 ಜನವರಿ 26ರಂದು ಭಾರತ ಗಣರಾಜ್ಯವಾಗಿ ಘೋಷಿಕೊಂಡ ಮೇಲೆ ಜಾರಿಗೆ ಬಂದ ಹೊಸ ಸಂವಿಧಾನದ ಪ್ರಕಾರ ಇಪ್ಪತ್ತೊಂದು ವರ್ಷ ವಯಸ್ಸನ್ನು ಮೀರಿದ ಎಲ್ಲ ಪ್ರಜೆಗಳಿಗೂ-ಗಂಡು ಹೆಣ್ಣು ಮೇಲು ಕೀಳು ಜಾತಿ ವರ್ಗಗಳೆಂಬ ಭೇದವಿಲ್ಲದೆ-ಮಾತಾಧಿಕಾರ ಬಂತು. ಇದೊಂದು ಮಹಾಸಾಧನೆ, ಅಂತೆಯೇ ಹೊಣೆ ಕೂಡ. ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವದ (ಜನಸಂಖ್ಯೆಯ ದೃಷ್ಟಿಯಿಂದ) ಮೊದಲನೆಯ ಮಹಾಚುನಾವಣೆ ಹೇಗಾದೀತೆಂಬುದು ಕುತೂಹಲ; ಅಂತೆಯೆ ಆತಂಕಕಾರಿ ಕೂಡ. 1950 ಡಿಸೆಂಬರಿನಲ್ಲಿ ಸರ್ದಾರ್ ಪಟೇಲ್ ಗತಿಸಿದರು. ಆಗ ನೆಹರುವೇ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಬೇರೆ ಯಾರಿಂದಲೂ ಸ್ಪರ್ಧೆ ಎದುರಿಸಬೇಕಾಗಿಲ್ಲದ ಅನುಕೂಲತೆ ಪಡೆದರು. ಸಮಾಜವಾದ, ಪ್ರಜಾಪ್ರಭುತ್ವ, ಅಂತರಾಷ್ಟ್ರೀಯ ದೃಷ್ಟಿ, ಆಲಿಪ್ತ ನೀತಿ, ಆಧುನೀಕರಣ ಇವೆಲ್ಲದರ ಪ್ರತೀಕವಾಗಿದ್ದರು. ಏನು ಮಾಡಬೇಕು ಎಂಬ ಬಗ್ಗೆ ನಿಚ್ಚಳ ಭಾವನೆಗಳಿಂದ ಕೂಡಿದ್ದು ಅವನ್ನು ಜಾರಿಗೆ ತರಲು ಅಗತ್ಯವಾದ ಅವಕಾಶಗಳಿದ್ದ ನೆಹರೂ ನಿರಂಕುಶ ನೀತಿ ಅನುಸರಿಸಲಿಲ್ಲ. ಕಾಂಗ್ರೆಸ್ಸಿನಲ್ಲಿ ಅವರಿಗೆ ಎದುರಾಡುವವರು ಯಾರೂ ಇಲ್ಲದಿದ್ದರೂ ಕಾಂಗ್ರೆಸ್ ಬಿಟ್ಟರೆ ಬೇರೆ ಯಾವ ಪಕ್ವವೂ ಆಡಳಿತ ವಹಿಸುವಷ್ಟು ಪ್ರಭಾವಶಾಲಿ ಆಗಿಲ್ಲದಿದ್ದರೂ ನೆಹರೂ, ಆಗಿಂದಾಗ್ಗೆ ಅಧಿಕಾರಕ್ಕೆ ರಾಜೀನಾಮೆ ನೀಡುವ ಮಾತಾಡುತ್ತ, ಬೇಡವೆಂಬವರ ಒತ್ತಾಯಕ್ಕೆ ಮಣಿದು ಮುಂದುವರಿಯುತ್ತಿದ್ದರು. ಆ ಮೂಲಕ ತಮ್ಮ ಭಾವನೆಗಳನ್ನು ಕಾರ್ಯಗತ ಮಾಡುವ ವಿಶಿಷ್ಟ ವಿಧಾನ ಅವರದಾಗಿತ್ತು.
- 1951ರಲ್ಲಿ ನಡೆದ ಮಹಾಚುನಾವಣೆ ಒಂದು ಮಹತ್ತ್ವದ ಸಾಧನೆ. ನಿರಾಶಾವಾದಿಗಳ ಅಂಜಿಕೆಗಳೆಲ್ಲ ಸುಳ್ಳಾಗಿದ್ದವು. ಬಹುತೇಕ ನಿರಕ್ಷರರಾಗಿದ್ದ ಮತದಾರರು ವ್ಯವಸ್ಥಿತವಾಗಿ ಮತನೀಡಿದರು. ಸಂವಿಧಾನ ರಚನಾಸಭೆಯ ಅಧ್ಯಕ್ಷಕರಾಗಿದ್ದು ತಾತ್ಕಾಲಿಕ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದರು ಭಾರತದ ಪ್ರಥಮ ಚುನಾಯಿತ ರಾಷ್ಟ್ರಪತಿಯಾದರು. ಆದರೆ ರಾಷ್ಟ್ರಪತಿಯ ಆಯ್ಕೆ ಪರೋಕ್ಷ. ನೇರ ಚುನಾವಣೆ ಲೋಕಸಭಾ ಸದಸ್ಯರದು, ಬಹುಮತ ಪಕ್ಷವಾಗಿ ಗೆದ್ದು ಬಂದ ಕಾಂಗ್ರೆಸ್ಸಿನ ನಾಯಕರಾಗಿ ಜವಾಹರಲಾಲ್ ನೆಹರೂ ಆಯ್ಕೆಯಾಗಿ ಪ್ರಧಾನಿಯಾದರು.
- ಪ್ರಜಾಪ್ರಭುತ್ವದ ಹೊಸ ಪ್ರಯೋಗದೊಂದಿಗೇ-ಅದಕ್ಕೂ ಸ್ವಲ್ಪ ಪೂರ್ವದಲ್ಲೇ-ಜಾರಿಗೆ ಬಂದ ಕಾರ್ಯಕ್ರಮವೆಂದರೆ ಅಭಿವೃದ್ಧಿ ಯೋಜನೆ. 1951-56ರ ಪ್ರಥಮ ಪಂಚವಾರ್ಷಿಕ ಯೋಜನೆ ಭಾರತದ ಕೃಷಿಯನ್ನು ಬಲಪಡಿಸಿ, ಯುದ್ಧ ಜರ್ಜರಿತವಾದ ಕೈಗಾರಿಕೆಯನ್ನು ಪುನಃಶ್ಚೇತನಗೊಳಿಸುವ ಉದ್ದೇಶವುಳ್ಳದ್ದಾಗಿತ್ತು. ಬೃಹತ್ ನೀರಾವರಿ ಹಾಗೂ ವಿದ್ಯುತ್ ಪರಿಯೋಜನೆಗಳು ಕಾರ್ಯ ರೂಪುಗೊಂಡವು. ಮೂರು ಹೊಸ ಉಕ್ಕು ಆಸ್ತಿವಾರ ನಿರ್ಮಾಣ ಮಾಡುವತ್ತ ಯೋಜನೆ ಗಮನಹರಿಸಿತು. 1956ರಲ್ಲಿ ಆರಂಭವಾದ ಎರಡನೆಯ ಯೋಜನೆ ಬೃಹದ್ಗಾತ್ರ ಕೈಗಾರಿಕೀಕರಣಕ್ಕೆ ಒತ್ತುಕೊಟ್ಟತು. ಅನಂತರ ಮೂರನೆಯ ಯೋಜನೆ. ಅಭಿವೃದ್ಧಿಯೊಂದಿಗೇ ಸಮಸ್ಯೆಗಳೂ ಮುಂದುವರಿದುವು. ದಾರಿದ್ರ್ಯವನ್ನು ಕಡಿಮೆಮಾಡಿ ಜನಸಂಖ್ಯಾ ಸ್ಫೋಟವನ್ನು ತಡೆಯುವುದು ಹೇಗೆಂಬುದು ಸಮಸ್ಯೆಯಾಗಿಯೇ ಉಳಿದಿತ್ತು.
- ಸಾಮಾಜಿಕ ಕಾರ್ಯಕ್ರಮಗಳೂ ಮಹತ್ತ್ವಪೂರ್ಣವಾದವು. ನೆಹರೂ ಅವರ ವ್ಯಕ್ತಿ ಪರಿಕಲ್ಪನೆ ಪಾಶ್ಚಾತ್ಯ ಉದಾರವಾದಿ ದೃಷ್ಟಿಯದು. ಭಾರತದ ಜನತೆಗೆ ಪಾಶ್ಚಾತ್ಯ ಮಾದರಿಯ ನ್ಯಾಯಿಕ ಹಕ್ಕುಗಳನ್ನು ದೊರಕಿಸುವುದು ಅವರ ಇಚ್ಛೆ. ಪ್ರಚಲಿತ ಸಾಮಾಜಿಕ ವ್ಯವಸ್ಥೆಯನ್ನು ಅವರು ಬದಲಿಸಬಯಸಿದರು. ಗಾಂಧಿ ಆರಂಭಿಸಿದ ಅಸ್ಪೈಶ್ಯತಾ ನಿವಾರಣಾ ಕಾರ್ಯಕ್ರಮ ಮುಂದುವರಿಯಿತು. ನೆಹರೂ ಮನಧರ್ಮಶಾಸ್ತ್ರಾಧಾರಿತ ಹಿಂದೂ ವ್ಯಕ್ತಿಗತ ಕಾನೂನನ್ನು ಬದಲಿಸಲು ವಿಧೇಯಕ ತಂದರು. ಹಿಂದೂ ಸಂಹಿತೆಯ ವಿಧೇಯಕ ಇದು. ಆದರೆ ಕಾಂಗ್ರೆಸ್ಸಿನೊಳಗೇ ಇದ್ದ ಸಂಪ್ರದಾಯವಾದಿಗಳ ವಿರೋಧದಿಂದ ಈ ಕೆಲಸ ನಿಧಾನವಾಯಿತು. ಹಿಂದೂ ಉತ್ತರಾಧಿಕಾರ ಅಧಿನಿಯಮ ಮತ್ತು ಹಿಂದೂ ವಿವಾಹ ಅಧಿನಿಯಮ ಜಾರಿಗೆ ಬರಲು ಐದಾರು ವರ್ಷಗಳೇ ಬೇಕಾದುವು.
- ಆಧುನೀಕರಣದಲ್ಲಿ ಶಿಕ್ಷಣ ಇನ್ನೊಂದು ಮುಖ್ಯ ಅಂಶ. ಮೇಲಣಸ್ತರಗಳಲ್ಲಿ ನೆಹರೂ ಸಾಕಷ್ಟು ಯಶಸ್ಸು ಗಳಿಸಿದರಾದರೂ ಪ್ರಾಥಮಿಕ ಹಾಗೂ ದ್ವಿತೀಯಕ ಸ್ತರಗಳಲ್ಲಿ ಶಿಕ್ಷಣ ಪ್ರಸಾರವಾಗಲಿಲ್ಲ. ಶೇಕಡ ಸುಮಾರು 70ರಷ್ಟು ಜನ ಅನಕ್ಷರಸ್ಥರಾಗಿಯೇ ಉಳಿದರು.
- ವಿದೇಶಾಂಗ ವ್ಯವಹಾರದಲ್ಲಿ ನೆಹರೂ ನಿಸ್ಸೀಮರಾಗಿದ್ದರು. ವಿವಿಧ ದೇಶಗಳ ರಾಜಕೀಯ ವ್ಯವಸ್ಥೆಗಳು ಏನೇ ಇರಲಿ. ಅವು ಪರಸ್ಪರ ಸೌಹಾರ್ದದಿಂದ ಇರಬಹುದೆಂಬುದನ್ನು ಒತ್ತಿ ಹೇಳುವ ಪಂಚಸೂತ್ರ ಒಂದು ಮಹಾ ಪ್ರಯೋಗ ನೆರೆಯ ಚೀನದೊಂದಿಗೆ ನೆಹರೂ ಸರ್ಕಾರ ಸ್ನೇಹ ಸಾಧಿಸಿತು. ಅಲಿಪ್ತ ನೀತಿ. ಅಭಿವೃದ್ಧಿಶೀಲ ದೇಶಗಳ ಸಂಘಟನೆ, ವಸಾಹತುಶಾಹಿಯ ವಿರುದ್ಧ ಹೋರಾಟ ಇವುಗಳಿಂದಾಗಿ ನೆಹರೂ ಹೆಸರು ಅಂತಾರಾಷ್ಟ್ರೀಯ ಇತಿಹಾಸದಲ್ಲಿ ಚಿರಕಾಲ ಉಳಿಯುತ್ತದೆ. ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಭಾರತಕ್ಕೊಂದು ವಿಶಿಷ್ಟಸ್ಥಾನ ನಿರ್ಮಿಸಿದವರು ನೆಹರೂ.
- ಭಾರತದ ವ್ಯವಸ್ಥೆಯನ್ನು ಆಧುನೀಕರಿಸುವತ್ತ ನೆಹರೂ ಇನ್ನೂ ಅನೇಕ ಕ್ರಮಗಳನ್ನು ಕೈಗೊಂಡರು. ಜೀವವಿಮಾ ಕಂಪನಿಗಳ ರಾಷ್ಟ್ರೀಕರಣ ಹಾಗೂ ಜೀವವಿಮಾ ನಿಗಮದ ಸ್ಥಾಪನೆ, ಅಳತೆ ತೂಕಗಳಲ್ಲಿ ಮೆಟ್ರಿಕ್ ಪದ್ಧತಿಯನ್ನೂ ಹಣಕಾಸು ಲೆಕ್ಕಾಚಾರದಲ್ಲಿ ದಶಮಾಂಶ ಪದ್ಧತಿಯನ್ನು ಜಾರಿಗೆ ತಂದದ್ದು ಕೆಲವು ಮುಖ್ಯಕ್ರಮಗಳು.
- ಭಾರತದಲ್ಲಿದ್ಧ ಪೋರ್ಚುಗೀಸ್ ವಸಾಹತುಗಳನ್ನು (ಗೋವಾ, ದಮನ್, ಡಯೂ) ಸೇನಾ ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡದ್ದು, ಸ್ವತಂತ್ರ ಕಾಶ್ಮೀರದ ಕನಸು ಕಾಣುತ್ತಿದ್ದ ಕಾಶ್ಮೀರದ ಮುಖ್ಯಮಂತ್ರಿ ಷೇಖ್ ಅಬ್ದುಲ್ಲಾ ಪದಚ್ಯುತಿ, ಭಾಷಾನುಗುಣವಾಗಿ ರಾಜ್ಯಗಳ ಪುನರ್ವಿಂಗಡಣೆ-ಇವು ನೆಹರೂ ಆಡಳಿತ ಕಾಲದ ಕೆಲವು ಮುಖ್ಯ ರಾಜಕೀಯ ಘಟನೆಗಳು. ಭಾರತದ, ವಿವಿಧ ಭಾಗಗಳಲ್ಲಿ ಭಾಷಾನುಗುಣ ರಾಜ್ಯ ರಚನೆಗಾಗಿ ನಡೆಯುತ್ತಿದ್ದ ಚಳವಳಿಯನ್ನು ನೆಹರೂ ಹತ್ತಿಕ್ಕಲಾರದೇ ಹೋದರು. ಕಾಂಗ್ರೆಸ್ ಸ್ವಾತಂತ್ರ್ಯಪೂರ್ವಕಾಲದಲ್ಲಿ ಭಾಷಾನುಗುಣ ಪ್ರಾಂತ್ಯ ರಚನೆಯನ್ನು ಪ್ರತಿಪಾದಿಸುತ್ತಿತ್ತಾದರೂ ನೆಹರೂ ಒಂದಕ್ಕಿಂತ ಹೆಚ್ಚು ಭಾಷೆಗಳಿರುವ ಸಂಮಿಶ್ರ ರಾಜ್ಯಗಳನ್ನು ಎತ್ತಿಹಿಡಿದರು. ಅದರೆ ಜನರ ಆಶೋತ್ತರಗಳನ್ನು ಹತ್ತಿಕ್ಕಲಾದರೆ ಅವರು ಮಣಿಯಬೇಕಾಯಿತು. 1956ರಲ್ಲಿ ಭಾಷಾನುಗುಣ ರಾಜ್ಯಗಳ ರಚನೆಯಾಯಿತು. ಆದರೆ ಹಳೆಯ ಬೊಂಬಾಯಿ ರಾಜ್ಯವನ್ನು ನೆಹರೂ ಹಾಗೆಯೇ ಉಳಿಸಿದರು. ಮಹಾರಾಷ್ಟ್ರ-ಗುಜರಾತುಗಳು ಬೇರೆ ಬೇರೆಯಾಗಬೇಕೆಂಬ ಚಳವಳಿ ಪ್ರಬಲವಾದಾಗ 1960ರಲ್ಲಿ ಬೊಂಬಾಯಿ ರಾಜ್ಯವನ್ನು ಒಡೆಯಬೇಕಾಯಿತು. ಇದೇ ಪ್ರವೃತ್ತಿ ಮುಂದುವರಿದು, ಮುಂದೆ ಇಂದಿರಾಗಾಂಧಿಯವರು ಆಡಳಿತ ಕಾಲದಲ್ಲಿ ಪಂಜಾಬನ್ನು ಒಡೆದು ಪಂಜಾಬ್, ಹರಿಯಾಣ ರಾಜ್ಯಗಳನ್ನು ನಿರ್ಮಿಸಬೇಕಾಯಿತು.
- ಚೀನೀ ಸಂಬಂಧ ಹದಗಟ್ಟಿದ್ದು ನೆಹರೂ ಅನುಭವಿಸಿದ ಮಹಾ ಆಘಾತ, ಚೀನಾ ಟಬೆಟ್ಟನ್ನು ಆಕ್ರಮಿಸಿಕೊಂಡಾಗ ಅಲ್ಲಿದ್ದ ಬೌದ್ಧ ಗುರು ದಲಾಯಿಲಾಮಾ ಭಾರತಕ್ಕೆ ಬಂದರು. ಅವರು ಚೀನಿಯರೊಂದಿಗೆ ಹೊಂದಿ ಕೊಂಡಿರಬೇಕೆಂಬುದು ನೆಹರೂ ಆಶಯವಾಗಿದ್ದರೂ ಲಾಮಾ ಭಾರತಕ್ಕೆ ಬಂದಾಗ ಅವರನ್ನು ಸ್ವಾಗತಿಸಬೇಕಾಯಿತು. ಇದು ಚೀನೀ ಅಸಂತೃಪ್ತಿಗೆ ಕಾರಣವಾಯಿತು. ಭಾರತ-ಚೀನಾಗಳ ನಡುವಣ ಗಡಿಯ ಬಗ್ಗೆ ವಿರಸಮೂಡಿತು. ಬ್ರಿಟಿಷ್ ಸಾಮ್ರಾಜ್ಯ ಕಾಲದ ಮೆಕ್-ಮಹೋನ್ ಗಡಿಯನ್ನು ಚೀನಾ ಪುರಸ್ಕರಿಸಲಿಲ್ಲ. ಕೊನೆಗೆ 1962 ಸೆಪ್ಟೆಂಬರ್ 19ರಂದು ಚೀನಾ ಭಾರತದ ಗಡಿಯ ಆಕ್ರಮಣ ನಡೆಸಿತು. ಭಾರತದ ಸೇನೆಗಳು ಹಿನ್ನಡೆಯಬೇಕಾಯಿತು. ಈ ಪರಭವವನ್ನು ಸುಲಭವಾಗಿ ಮರೆಯುವಂತಿರಲಿಲ್ಲ. ಚೀನೀಯರೊಂದಿಗಿನ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ (1986).
- ನೆಹರೂ ಕನಸಾದ ಪಂಚಶೀಲ ಇದರಿಂದ ಭಗ್ನವಾಯಿತು. ಭಾರತದಲ್ಲೇ ಬಲುಮಟ್ಟಿಗೆ ಅಸಂತೃಪ್ತಿ ಬೆಳೆಯಿತು. ಸರ್ಕಾರದಲ್ಲಿ ಪುರೋಗಾಮಿ ಹಾಗೂ ಪ್ರತಿಗಾಮೀ ಶಕ್ತಿಗಳ ಮುಖಾಮುಖಿ ನಡೆಯಿತು. ಹಳೆಯ ಕಾಂಗ್ರೆಸ್ಸನ್ನು ವಿಸರ್ಜಿಸದೆ, ನಾನಾ ದೃಷ್ಟಿಕೋನಗಳ ಪಕ್ಷವಾಗಿ ಅದನ್ನು ಮುಂದುವರಿಸಿದ್ದರಿಂದ ಅದರಲ್ಲಿ ಏಕಮುಖತೆ ಎಂದೂ ಸಾಧ್ಯವಾಗಿರಲಿಲ್ಲ. ಕಾಂಗ್ರೆಸಿನೊಳಗಿನ ಕೆಲವರು ಆಗಾಗ್ಗೆ ಅದರಿಂದ ಹೊರಬಿದ್ದು ಬೇರೆ ಬೇರೆ ಪಕ್ಷಗಳನ್ನು ಕಟ್ಟಿದರು. ರಾಜಾಜಿಯ ಸ್ವತಂತ್ರಪಕ್ಷ ಇಂಥದೊಂದು. ಹೀಗಿದ್ದರೂ ಕಾಂಗ್ರೆಸ್ ಚುನಾವಣೆಗಳಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲಿ ಅಧಿಕಾರ ಮುಂದುವರಿಸಿತ್ತು. ಜವಾಹರಲಾಲ್ ನೆಹರೂ 1964 ಮೇ 27ರಂದು ತೀರಿಕೊಂಡಾಗ ಇನ್ನೊಂದು ಅಧ್ಯಾಯ ಮುಗಿಯಿತೆನ್ನಬೇಕು.
- 1964-77: ನೆಹರೂ ತೀರಿಕೊಂಡಾಗ ಲಾಲ್ ಬಹಾದೂರ್‍ಶಾಸ್ತ್ರಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಪ್ರಧಾನಮಂತ್ರಿಯಾದರು. ನೆಹರೂ ಸಾವಿನೊಂದಿಗೆ ಭಾರತದಲ್ಲಿ ಅಸ್ಥಿರತೆ ಉಂಟಾದೀತೆಂಬ ಅಂಜಿಕೆ ಸುಳ್ಳಾಯಿತು. ಲಾಲ್‍ಬಹಾದೂರ್ ಶಾಸ್ತ್ರಿಯ ಆಯ್ಕೆಯನ್ನು ಸುಗಮಗೊಳಿಸುವುದು ಸಾಧ್ಯವಾದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಪ್ರಬಲ ಗುಂಪಿನಿಂದ. ಮುಂದೆ ಸಿಂಡಿಕೇಟ್ ಎಂದು ಪ್ರಸಿದ್ಧವಾದ ಈ ಹಿರಿಯ ಗುಂಪಿನಿಂದ ಶಾಸ್ತ್ರಿಯವರಾಗಿದ್ದ ಪ್ರಬಲ ಪ್ರತಿಸ್ಪರ್ಧಿ ಮುರಾರ್ಜಿ ದೇಸಾಯಿಯವರು ಆಕಾಂಕ್ಷೆ ಫಲಿಸಲಿಲ್ಲ. ಲಾಲ್ ಬಹಾದೂರ್ ಶಾಸ್ತ್ರಿ ಪ್ರಮಾಣಿಕ ವ್ಯಕ್ತಿಯೆಂದೂ ನಿಷ್ಠಾವಂತ ಕಾಂಗ್ರೆಸಿಗರೆಂದೂ ಹೆಸರುಗಳಿಸಿದ್ದವರು. ಸ್ಪರ್ಧೆಗಿಂತ ಸರ್ವಸಮ್ಮತಿಯಲ್ಲಿ ಲಾಲ್‍ಬಹಾದೂರ್ ಶಾಸ್ತ್ರಿಯವರಿಗೆ ಹೆಚ್ಚಿನ ನಂಬಿಕೆಯಿತ್ತು. ಕಾಶ್ಮೀರದಿಂದಾಗಿ ಪಾಕಿಸ್ತಾನದೊಂದಿಗಿನ ವಿರಸ ಶಾಸ್ತ್ರಿಯವರ ಕಾಲದಲ್ಲಿಯೂ ತೀವ್ರವಾಗಿಯೇ ಇತ್ತು.
- ಲಾಲ್‍ಬಹಾದೂರ್‍ಶಾಸ್ತ್ರಿಯವರ ಆಡಳಿತದ ಅವಧಿ ಬಹಳ ಕಿರಿದು, ಆ ಕಾಲದ ಎರಡು ಮುಖ್ಯ ಘಟನೆಗಳೆಂದರೆ ಹಿಂದೀ ಭಾಷೆಯನ್ನು ಬಲವಂತವಾಗಿ ಹೇರುವುದರ ವಿರುದ್ಧ ಹಿಂದಿಯೇತರ ರಾಜ್ಯಗಳಲ್ಲಿ ಪ್ರತಿಭಟನೆ ಹಾಗೂ ಭಾರತ-ಪಾಕಿಸ್ತಾನ. ಯುದ್ಧ ಹಿಂದಿಯೊಂದನ್ನೇ ಭಾರತದ ಅಧಿಕೃತಭಾಷೆಯಾಗಿ ಮಾಡಿ ಇಂಗ್ಲಿಷನ್ನು ಸಹಭಾಷೆಯ ಸ್ಥಾನದಿಂದ ಕದಲಿಸುವ ಯತ್ನ 1965 ಜನವರಿಯಲ್ಲಿ ನಡೆದಾಗ ತೀವ್ರ ಗಲಭೆಗಳಾದುವು. ಭಾರತದ ಏಕತೆಗೆ ಭಂಗ ಬರುವ ಅಪಾಯ ಉಂಟಾಯಿತು. ಭಾಷೆಯ ಬಗ್ಗೆ ಒತ್ತಾಯ, ಆತುರ ಸಲ್ಲವೆಂಬುದು ಮನವರಿಕೆಯಾಯಿತು. ಕಛ್ ರಣಪ್ರದೇಶದ ಮೇಲೆ ಪಾಕ್ ಸೇನೆ ಆಕ್ರಮಣ ನಡೆಸಿತು. ಪಾಕಿಸ್ತಾನಿಗಳು ಕಾಶ್ಮೀರದೊಳಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದು ಸಮತೋಲವನ್ನು ನಾಶಗೊಳಿಸಿದಾಗ ಯುದ್ಧ ಮಸೆಯಿತು. ಭಾರತದ ಸೇನೆಯ ಸಾಮಥ್ರ್ಯ ಪ್ರಕಟವಾಗಿ ಚೀನೀ ಗಡಿ ಆಕ್ರಮಣದ ನೋವು ಸ್ವಲ್ಪ ಮರೆಯಾಯಿತು. ರಷ್ಯದ ಮಧ್ಯಸ್ಥಿಕೆಯಿಂದ ತಷ್ಕೆಂಟಿನಲ್ಲಿ ಪಾಕಿಸ್ತಾನದೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದದ ಬಗ್ಗೆ ಏಕಾಭಿಪ್ರಾಯವಿಲ್ಲ. ಲಾಲ್‍ಬಹಾದೂರ್ ಶಾಸ್ತ್ರಿ ತಷ್ಕೆಂಟಿನಲ್ಲೇ ಹೃದಯಾಘಾತದಿಂದ ತೀರಿಕೊಂಡರು (11 ಜನವರಿ 1966).
- ಮತ್ತೆ ಪ್ರಧಾನಿ ಯಾರಾಗಬೇಕೆಂಬುದು ಪ್ರಶ್ನೆಯಾಯಿತು. ಕಾಂಗ್ರೆಸಿನ ಸಿಂಡಿಕೇಟ್ ಮತ್ತೆ ತನ್ನ ಕೌಶಲ ಪ್ರದರ್ಶಿಸಿತು. ಮುರಾರ್ಜಿದೇಸಾಯಿ ಪುನಃ ತಮ್ಮ ಹಕ್ಕು ಸ್ಥಾಪಿಸಲು ಯತ್ನಿಸಿದರು. ಆದರೆ ಸಿಂಡಿಕೇಟ್ ನೆಹರೂ ಪುತ್ರಿಯಾದ ಇಂದಿರಾಗಾಂಧಿಗೆ ಬೆಂಬಲ ನೀಡಿತು. ಇಂದಿರಾಗಾಂಧಿ ಪ್ರಧಾನಿಯಾದರು (ಜನವರಿ 19). ನೆಹರೂ ವಂಶದಲ್ಲಿ ಅಧಿಕಾರ ಮುಂದುವರಿದಂತಾಯಿತು.
- 1967ರಲ್ಲಿ ನಡೆದ ಮಹಾ ಚುನಾವಣೆಗಳಲ್ಲಿ ಕಾಂಗ್ರೆಸಿನ ಬಹುಮತ ಬಲು ಮಟ್ಟಿಗೆ ತಗ್ಗಿತು. ಎಂಟು ರಾಜ್ಯಗಳಲ್ಲಿ ಕಾಂಗ್ರೆಸಿನ ಅಧಿಕಾರ ಹೋಯಿತು. ಕೇಂದ್ರದಲ್ಲಿ ವಿರೋಧಪಕ್ಷಗಳು ಸಂಯುಕ್ತ ವಿರೋಧ ಪ್ರಕಟಿಸಲಾರದೆ ಹೋದವು. ಆದರೆ ರಾಜ್ಯಗಳಲ್ಲಿ ಪರ್ಯಾಯ ಪಕ್ಷಗಳ ಆಡಳಿತ ಪ್ರವೃತ್ತಿ ಮೊದಲಾಯಿತು. ಮದರಾಸಿನಲ್ಲಿ (ತಮಿಳುನಾಡು) ದ್ರಾವಿಡ ಮುನ್ನೇಟ್ರ ಕಜಗಮ್ ಅಧಿಕಾರ ಗಳಿಸಿತು. ಕೆಲವು ರಾಜ್ಯಗಳಲ್ಲಿ ಎಡಪಕ್ಷಗಳೂ ಮತ್ತು ಕೆಲವು ರಾಜ್ಯಗಳಲ್ಲಿ ಬಲ ಪಕ್ಷಗಳೂ ಪ್ರಭಾವ ಬೆಳೆಸಿಕೊಂಡುವು.
- ಮತ್ತೆ ಕೇಂದ್ರದಲ್ಲಿ ಇಂದಿರಾಗಾಂಧಿಯೇ ಪ್ರಧಾನಿಯಾದರು. ಮುರಾರ್ಜಿ ನೇರವಾಗಿ ಸ್ಪರ್ಧಿಸಿ ಸೋತರು. ಅವರು ಉಪಪ್ರಧಾನಿಯಾದರು. ಸರ್ಕಾರ ಹಾಗೂ ಪಕ್ಷಗಳ ನಡುವಣ ಅಂತರ ಬೆಳೆಯುತ್ತಿತ್ತು. ಇಂದಿರಾಗಾಂಧಿಗೆ ಮುಕ್ತ ಹಸ್ತ ದೊರಕಿರಲಿಲ್ಲ. ಆದರೆ ಅವರ ಪ್ರಭಾವ ಕ್ರಮೇಣ ಬೆಳೆಯುತ್ತಿತ್ತು.
- 1969ರಲ್ಲಿ ಸಂಸ್ಥೆ ಹಾಗೂ ಸರ್ಕಾರದ ನಡುವೆ ವಿರಸ ತೀವ್ರವಾಯಿತು. ಇಂದಿರಾಗಾಂಧಿಯ ಇಚ್ಛೆಗೆ ವಿರುದ್ಧವಾಗಿ ಕಾಂಗ್ರೆಸ್ ಸಮಿತಿ ಸಂಜೀವರೆಡ್ಡಿಯವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲಿಸಿತು. ರಾಷ್ಟ್ರಪತಿ ಜಾಕಿರ್ ಹುಸೇನ್ ತೀರಿಕೊಂಡಿದ್ದರಿಂದ (ಮೇ 3) ಆ ಸ್ಥಾನ ತೆರವಾಗಿತ್ತು. ಉಪರಾಷ್ಟ್ರಪತಿ ವಿ.ವಿ. ಗಿರಿಯವರನ್ನು ಇಂದಿರಾಗಾಂಧಿ ಬೆಂಬಲಿಸಿದರು. ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿ ಮುರಾರ್ಜಿ ದೇಸಾಯಿಯವರನ್ನು ಹಣಕಾಸು ಮಂತ್ರಿ ಸ್ಥಾನದಿಂದ ವಜಾಮಾಡಿದರು. ಮುರಾರ್ಜಿ ಸಂಪುಟಕ್ಕೆ ರಾಜೀನಾಮೆ ನೀಡಿದರು. ಗಿರಿಯವರು ಆಯ್ಕೆಗೊಂಡರು. ಕಾಂಗ್ರೆಸ್ ಬಿರುಕು ದೊಡ್ಡದಾಯಿತು. ಅದು ಒಡೆದಾಗ ಸಂಸದೀಯ ಪಕ್ಷದ ಮೂರನೆಯ ಎರಡರಷ್ಟು ಸದ್ಯಸರು ಇಂದಿರಾಗಾಂಧಿಯವರನ್ನು ಬೆಂಬಲಿಸಿದರು. ಆದರೆ ಅವರಿಗೆ ಬಹುಮತ ಇರಲಿಲ್ಲ. ಕಮ್ಯುನಿಸ್ಟ್ ಪಕ್ಷದ ಬೆಂಬಲದಿಂದ ಅವರು ಅಧಿಕಾರದಲ್ಲಿ ಉಳಿದರು.
- ಆಡಳಿತ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್-ಇವೆರಡರ ನಡುವಣ ತಾತ್ತ್ವಿಕ ಭಿನ್ನಾಭಿಪ್ರಾಯಗಳೇನೆಂಬ ಬಗ್ಗೆ ಖಚಿತವಾಗಿ ನುಡಿಯುವುದು ಸಾಧ್ಯವಿಲ್ಲ. ಆಡಳಿತ ಕಾಂಗ್ರೆಸ್ ನೆಹರೂ ಅವರ ಸುಧಾರಣಾ ನೀತಿ ಹಾಗೂ ಕ್ರಮಬದ್ಧ ಸಮಾಜವಾದವನ್ನು ಪ್ರತಿಪಾದಿಸುವುದೆಂದೂ ಸಂಸ್ಥಾ ಕಾಂಗ್ರೆಸ್ ಪ್ರತಿಗಾಮಿಯೆಂದು ಹೇಳಲಾಗುತ್ತಿತ್ತು. ಈ ನಿಲವುಗಳ ಪರಿಸ್ಥಿತಿಯ ಒತ್ತಡದಿಂದ ತಳೆಯಲಾದವೇ ಅಥವಾ ನಿಜವಾದ ನಂಬಿಕೆಗಳಿಂದ ಕೂಡಿದವೇ ಎಂಬುದನ್ನು ಹೇಳುವುದು ಸದ್ಯಕ್ಕೆ ಅಸಾಧ್ಯ.
- ಮುಂದಿನ ದಿನಗಳು ಮಹತ್ವಪೂರ್ಣವಾದವು ಬ್ಯಾಂಕ್ ರಾಷ್ಟ್ರೀಕರಣದೊಂದಿಗೆ ಹಿಂದಿನ ಮಹಾರಾಜರುಗಳ ರಾಜಧಾನಿ ರದ್ದಾಯಿತು. ಪಾಕಿಸ್ತಾನದ ಎರಡೂ ಭಾಗಗಳ ನಡುವೆ (ಪೂರ್ವ ಹಾಗೂ ಪಶ್ಷಿಮ ಪಾಕಿಸ್ತಾನ) ವಿರಸ ಬೆಳೆಯುತ್ತಿತ್ತು. ಪಶ್ಚಿಮ ಪಾಕಿಸ್ತಾನ ಸರ್ಕಾರ ಪೂರ್ವ ಪಾಕಿಸ್ತಾನದ ಮೇಲೆ (ಈಗಿನ ಬಾಂಗ್ಲಾದೇಶದ) ದಬ್ಬಾಳಿಕೆ ನಡೆಸುತ್ತಿತ್ತು. ಅವರ ಸ್ವಾಯತ್ತಯ ಆಕಾಂಕ್ಷೆಯನ್ನು ದಮನಿಸಲಾಗಿತ್ತು.
- ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಇಲ್ಲದ್ದರಿಂದ ಖಚಿತ ನಿಲವು ತಳೆಯಲಾರದ ಇಂದಿರಾಗಾಂಧಿ 1971ರಲ್ಲಿ ಲೋಕಸಭೆಗೆ ಚುನಾವಣೆ ನಡೆಸಿದರು. ಇಂದಿರಾಗಾಂಧಿಯವರ ಆಡಳಿತ ಕಾಂಗ್ರೆಸಿಗೆ ನಿಚ್ಚಳ ಬಹುಮತ ಪ್ರಾಪ್ತವಾಯಿತು.
- ಪೂರ್ವ ಪಾಕಿಸ್ತಾನದಲ್ಲಿ ಚಳವಳಿ ಬಿರುಸಾದಾಗ, ಪಾಕಿಸ್ತಾನ ಸರ್ಕಾರದ ದಬ್ಬಾಳಿಕೆ ತೀವ್ರವಾದಾಗ ಲಕ್ಷಾಂತರ ಮಂದಿ ನಿರಾಶ್ರಿತರು ಭಾರತಕ್ಕೆ ಬರಲಾರಂಭಿಸಿದರು. ಸುಮಾರು ಒಂದು ಕೋಟಿ ಜನ ಭಾರತಕ್ಕೆ ಸಮಸ್ಯೆಯಾಯಿತು. ಕೊನೆಗೆ ಪಾಕಿಸ್ತಾನದ ವಿಮಾನಗಳು ಭಾರತ ಮೇಲೆ ದಾಳಿ ಆರಂಭಿಸಿದಾಗ ಯುದ್ಧ ಆರಂಭವಾಯಿತು. ಭಾರತ-ಸೋವಿಯತ್ ಸ್ನೇಹ ಒಪ್ಪಂದ ಇಂದಿರಾಗಾಂಧಿಯವರ ಒಂದು ಸಾಧನೆ. ಭಾರತ ಸೇನೆಗಳು ಪೂರ್ವ ಪಾಕಿಸ್ತಾನವನ್ನು ಆಕ್ರಮಿಸಿಕೊಂಡು ಅದನ್ನು ಪಾಕಿಸ್ತಾನ ಆಡಳಿತದಿಂದ ವಿಮೋಚನೆಗೊಳಿಸಿದವು. ಬಾಂಗ್ಲಾದೇಶದ ಉದಯವಾಯಿತು. ಭಾರತಕ್ಕೆ ಬಂದಿದ್ದ ನಿರಾಶ್ರಿತರನ್ನು ಹಿಂದಕ್ಕೆ ಕಳುಹಿಸುವುದು ಬಲುಮಟ್ಟಿಗೆ ಸಾಧ್ಯವಾಯಿತು.
- ಇಂದಿರಾಗಾಂಧಿಯವರ ಪ್ರಭಾವ ಬಹಳಷ್ಟು ವರ್ಧಿಸಿದರೂ ಭಾರತದ ಸಮಸ್ಯೆಗಳು ತೀವ್ರವಾದವು. 1970ರಲ್ಲಿ ನಾಲ್ಕನೆಯ ಪಂಚವಾರ್ಷಿಕ ಯೋಜನೆ ಜಾರಿಗೆ ಬಂದಿತ್ತು. ಆದರೆ ಯುದ್ಧದ ಪರಿಣಾಮವಾಗಿ ಬೆಲೆಗಳು ತೀವ್ರವಾಗಿ ಏರುತ್ತಿದ್ದುವು. ಆಹಾರದಲ್ಲಿ ಸ್ವಯಂಪೂರ್ಣತೆಯತ್ತ ಭಾರತ ನಡೆಯುತ್ತಿತ್ತಾದರೂ ಬಡತನ ನಿರುದ್ಯೋಗಗಳು ತೀವ್ರವಾಗಿ ಇದ್ದುವು. ತೈಲನಿರ್ಯಾತದಾರ ದೇಶಗಳು ತೈಲ ಬೆಲೆಗಳನ್ನು ಏರಿಸಿದ್ದರಿಂದ ಭಾರತದಲ್ಲಿ ಹಣದುಬ್ಬರಕ್ಕೆ ಇನ್ನಷ್ಟು ಚಾಲನೆ ದೊರಕಿತು. ಪ್ರತಿಭಟನೆ ಅತೃಪ್ತಿಗಳು ಬೆಳೆದುವು. ಮುರಾರ್ಜಿದೇಸಾಯಿ ಹಾಗೂ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಆರಂಭವಾದ ವ್ಯಾಪಕ ಚಳವಳಿಯಿಂದಾಗಿ ಅಸಮಾಧಾನ ಇನ್ನಷ್ಟು ತೀವ್ರವಾಯಿತು.
- ಈ ನಡುವೆ ಇಂದಿರಾಗಾಂಧಿಯವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಂದೆ ಬಂದಿತ್ತು. ಚುನಾವಣೆಯಲ್ಲಿ ಅಕ್ರಮ ನಡೆದಿದೆಯೆಂಬ ಕಾರಣದಿಂದಾಗಿ ಅವರ ಚುನಾವಣೆಯನ್ನು ನ್ಯಾಯಾಲಯ ರದ್ದುಗೊಳಿಸಿತು (1976 ಜೂನ್ 12), ಇಂದಿರಾಗಾಂಧಿ ಇದರ ಹಿಂದೇ ಭಾರೀ ಅಪಾಯವನ್ನೇ ಕಂಡರು. ತಮ್ಮನ್ನು ಅಧಿಕಾರದಿಂದ ಇಳಿಸುವ ಹಂಚಿಕೆಯಿದೆಯೆಂದು ಭಾವಿಸಿದರು. ಸರ್ವೋಚ್ಚ ನ್ಯಾಯಾಲಯ ಅಲಾಹಾಬಾದ್ ನ್ಯಾಯಾಲದ ತೀರ್ಪಿಗೆ ಅಂಶಿಕ ತಡೆ ಆಜ್ಞೆ ನೀಡಿತು (ಜೂನ್ 24). ಇಂದಿರಾಗಾಂಧಿ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳ ನಾಯಕರ ಒತ್ತಾಯ ಮಾಡಿ ದೇಶಾದ್ಯಂತ ಚಳುವಳಿ ಹೂಡುವುದಾಗಿ ಪ್ರಕಟಸಿದಾಗ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು (ಜೂನ್ 26). ವಿರೋಧಿ ನಾಯಕರು ದಸ್ತಗಿರಿಗೆ ಒಳಗಾದರು. ವ್ಯಕ್ತಿ ಸ್ವಾತಂತ್ರ ಮೊಟಕಾಯಿತು.
- 1977ರಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಸಡಿಲಗೊಳಿಸಿ, ಲೋಕಸಭೆ ವಿಸರ್ಜಿಸಿ ಚುನಾವಣೆ ಘೋಷಿಸಿತು. ಆದರೆ ತುರ್ತುಪರಿಸ್ಥಿತಿಯ ಕಾಲದ ಅತಿರೇಕಗಳಿಂದಾಗಿ ಇಂದಿರಾಗಾಂಧಿಯವರಿಗೂ ಅವರ ಪಕ್ಷಕ್ಕೂ ಭಾರಿ ಸೋಲಾಯಿತು. ಸಂಸ್ಥಾ ಕಾಂಗ್ರೆಸ್ ಲೋಕದಳ ಹಾಗೂ ಜನಸಂಘ ಒಂದುಗೂಡಿ ರಚಿಸಲಾದ ಜನತಪಕ್ಷ ಅಧಿಕಾರಕ್ಕೆ ಬಂತು. ಮುರಾರ್ಜಿ ದೇಸಾಯಿ ಪ್ರಧಾನಿಯಾದರು.
- ಆದರೆ ಜನತಾ ಸರ್ಕಾರ ಸ್ಥಿರತೆ ಸಾಧಿಸಲಾರದೇ ಹೋಯಿತು. ಜನತಾ ಪಕ್ಷದ ಮೂರು ಅಂಗಗಳ ನಡುವೆ ಸಾಮರಸ್ಯ ಏರ್ಪಡಲಿಲ್ಲ. ಚಿರಣಸಿಂಗರ ನೇತೃತ್ವದಲ್ಲಿ ಲೋಕದಳ ಪ್ರತ್ಯೇಕವಾದಾಗ ಮುರಾರ್ಜಿ ಬಹುಮತ ಕಳೆದುಕೊಂಡು ರಾಜೀನಾಮೆ ನೀಡಿದರು (15 ಜುಲೈ 1979). ಚಿರಣಸಿಂಗರು ಪ್ರಧಾನಿಯಾಗಿ ಸರ್ಕಾರ ರಚಿಸಿದರು. ಆದರೆ ಅವರಿಗೆ ಬಹುಮತ ಇಲ್ಲವೆಂಬುದು ಖಚಿತವಾಯಿತು. (ಇಂದಿರಾಗಾಂಧಿ ಬೆಂಬಲಿಸುವುದಾಗಿ ನೀಡಿದ್ದ ಭರವಸೆಯನ್ನು ಹಿಂತೆಗೆದುಕೊಂಡಿದ್ದರಿಂದ.) ಚರಣಸಿಂಗ್ ಉಸ್ತುವಾರಿ ಸರ್ಕಾರದ ಮುಖ್ಯರಾಗಿ ಮುಂದುವರಿದರು. ರಾಷ್ಟ್ರಪತಿ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ಘೋಷಿಸಿದರು.
- 1980ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಬಹುಮತಗಳಿಸಿತು. ಇಂದಿರಾಗಾಂಧಿ ಮತ್ತೆ ಪ್ರಧಾನಿಯಾದರು. ಇವರ ನೂತನ ಸರ್ಕಾರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅಸ್ಸಾಮಿಗೆ ಬಾಂಗ್ಲಾ ದೇಶೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆಂದೂ ಇದರಿಂದ ಅಸ್ಸಾಮಿಗಳ ಅಸ್ತಿತ್ವಕ್ಕೆ ಚ್ಯುತಿ ಉಂಟಾಗಿದೆಯೆಂದೂ ವಿದೇಶೀಯರನ್ನು ಹಿಂದಕ್ಕೆ ಕಳಿಸಬೇಕೆಂದೂ ಚಳವಳಿ ಪ್ರಬಲವಾಯಿತು. ಪಂಜಾಬಿನಲ್ಲಿ ಅಕಾಲಿಗಳು ಪ್ರತ್ಯೇಕ ಸ್ಥಾನಮಾನಗಳಿಗಾಗಿ ಚಳವಳಿ ಆರಂಭಿಸಿದರು. ಅಕಾಲಿಗಳು ಹಿಂಸಾಚಾರದಲ್ಲಿ ತೊಡಗಿದಾಗ ಇಂದಿರಾಗಾಂಧಿ ಸೇನಾ ಕಾರ್ಯಚರಣೆ ನಡೆಸಬೇಕಾಯಿತು (1984 ಜೂನ್). ಅಮೃತಸರದಲ್ಲಿ ಸಿಕ್ಖರ ಪವಿತ್ರ ಮಂದಿರಕ್ಕೆ ಸೇನೆ ಪ್ರವೇಶಿಸಬೇಕಾಯಿತು. ಆದರೆ ಸೇನಾಕಾರ್ಯಾಚರಣೆಯಿಂದ ಸಮಸ್ಯೆ ಪರಿಹಾರವಾಗಲಿಲ್ಲ. ಇಂದಿರಾಗಾಂಧಿಯವರ ಕೊಲೆಗೆ ಸಂಚು ನಡೆದಿತ್ತು. 1984 ಅಕ್ಟೋಬರ್ 31ರಂದು ಅವರ ನಿವಾಸದಲ್ಲೇ ಅವರ ಅಂಗರಕ್ಷಕರಲ್ಲಿಬ್ಬರು ಅವರ ಕೊಲೆಮಾಡಿದರು.
- ಇಂದಿರಾ ಹತ್ಯೆಯಿಂದ ಇಡೀ ದೇಶವೇ ದಿಗ್ಬ್ರಮೆಗೊಂಡಿತು. ಪ್ರತ್ಯೇಕ ಖಲಿಸ್ತಾನ (ಸಿಕ್ಖರ ಸ್ವತಂತ್ರದೇಶ) ಬೇಕೆಂಬುವರ ಕೃತ್ಯವಿದು ಎನ್ನಲಾಗಿದೆ. ಇಂದಿರಾಗಾಂಧಿಯವರ ಕೊಲೆಯ ಅನಂತರ ದೆಹಲಿಯಲ್ಲೂ ಇತರ ಕಡೆಗಳಲ್ಲಿಯೂ ಸಿಕ್ಖರ ವಿರುದ್ಧ ವ್ಯಾಪಕ ಹಿಂಸಾಚಾರ ನಡೆಯಿತು. ಇದರಿಂದ ಪರಿಸ್ಥಿತಿ ಇನ್ನಷ್ಟು ತೀವ್ರವಾಯಿತು.
- ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಹೊಂದಿ ಭಾರತದ ಪ್ರಾಧಾನಿಯಾಗಿ ಅಧಿಕಾರ ವಹಿಸಿಕೊಂಡ ರಾಜೀವ್ ಗಾಂಧಿಯವರು (ಇಂದಿರಾ ಗಾಂಧಿಯವರ ಪುತ್ರ) ಲೋಕಸಭೆಗೆ ಕೂಡಲೇ ಚುನಾವಣೆ ನಡೆಸಿದಾಗ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರಕಿತು. ರಾಜೀವ್ ಗಾಂಧಿಯವರು ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು.
- (ಎಚ್.ಎಸ್.ಕೆ.)
- 7 ಬೃಹತ್ ಭಾರತ
- ಸಾಂಸ್ಕøತಿಕವಾಗಿ ಮತ್ತು ರಾಜಕೀಯವಾಗಿ ಪ್ರಪಂಚದ ಕೆಲವು ಪ್ರದೇಶಗಳು ಅದರಲ್ಲೂ ಹೆಚ್ಚಾಗಿ ಆಗ್ನೇಯ ಏಷ್ಯಾ ಮತ್ತು ಪೂರ್ವದೇಶಗಳು ಭಾರತದ ಪ್ರಭಾವಕ್ಕೆ ಅನೇಕ ವರ್ಷ ಪರ್ಯಂತ ಒಳಪಟ್ಟಿದ್ದುವು. ಬೃಹದ್ ಭಾರತದ ಅರ್ಥ ವ್ಯಾಪ್ತಿ ಇಲ್ಲಿ ಭೌಗೋಳಿಕಕ್ಕಿಂತ ಹೆಚ್ಚಾಗಿ ಸಾಂಸ್ಕøತಿಕ ವ್ಯಾಪ್ತಿಗೆ ಸೇರಿದ್ದು. ಏಕೆಂದರೆ ಭಾರತೀಯರು ನೌಕಾಯಾನದಲ್ಲಿ ಸಾಕಷ್ಟು ಪರಿಣಿತರಾಗಿದ್ದರೂ ಸುತ್ತಲಿನ ದೇಶಗಳನ್ನು ಆಕ್ರಮಿಸಿ ಶೋಷಿಸುವ ಗುಣ ಅವರಲ್ಲಿರಲಿಲ್ಲ. ಕ್ರಿ.ಪೂ. 14ನೆಯ ಶತಮಾನದಲ್ಲಿ ಕಪ್ಪಡೋಶಿಯಾದ ಯುದ್ಧೋನ್ಮಖಿಗಳಾದ ಹಿಟಾಯಿಟ್ ಮತ್ತು ವಿಟಾನ್ನಿ ಜನರು ವೈದಿಕ ದೇವತೆಗಳಾದ ಮಿತ್ರ, ವರುಣ ಹಾಗೂ ಇಂದ್ರರನ್ನು ಪ್ರಾರ್ಥಿಸಿ. ಅವರನ್ನು ಸಾಕ್ಷಿಯಾಗಿರಿಸಿಕೊಂಡು ಯುದ್ಧ ಒಪ್ಪಂದ ಮಾಡಿಕೊಂಡರೆಂದು ಬೊಘಾಝಕ್ಯೂಯಿ ಎಂಬಲ್ಲಿ ದೊರೆತಿರುವ ಶಿಲಾಶಾಸನದಲ್ಲಿ ಹೇಳಿದೆ. ಹಿಂದೂದೇವತೆಗಳು ಕ್ರಿ.ಪೂ. ಹದಿನಾಲ್ಕನೆಯ ಶತಮಾನದಲ್ಲಿ ಶಾಂತಿ ದೂತರ ಪಾತ್ರದಲ್ಲಿ ಕಾಣುವುದು ಇದೇ ಮೊದಲನೆಯ ಸಲ. ಶಾಂತಿ ಹಾಗೂ ಆಧ್ಯಾತ್ಮಿಕ ಐಕ್ಯದ ಮೂಲಕ ಭಾರತ ಅಂತರಾಷ್ಟ್ರೀಯ ಸೌಹಾರ್ದವನ್ನು ಬೆಳೆಸಿತೆನ್ನುವುದಕ್ಕೆ ಮೇಲಿನ ಶಿಲಾಶಾಸನ ಒಂದು ದೃಷ್ಟಾಂತ. ಬ್ಯಾಬಿಲೋನಿಯ ದೇಶದ ಬರೆಹಗಳಲ್ಲಿ ಮತ್ತು ಶತಪಥ ಬ್ರಾಹ್ಮಣದಲ್ಲಿ ಒಂದೇ ವೇಳೆಗೆ ಬರುವ ಮಹಾಪ್ರಳಯದ ಉಲ್ಲೇಖವನ್ನು ನೆನೆದರೆ ಮೆಸಪೊಟೇಮಿಯಾದ ಸಂಸ್ಕøತಿಯೊಡನೆ ಭಾರತದ ಸಂಪರ್ಕವಿತ್ತೆಂಬುದು ವ್ಯಕ್ತವಾಗುತ್ತಿದೆ. ಸುಮೇರಿಯನ್ ಸಂಸ್ಕøತಿಯ ಮೂಲವನ್ನು ಭಾರತೀಯ ಸಂಸ್ಕøತಿಯಲ್ಲಿ ಕಾಣದಿದ್ದರೂ ದಕ್ಷಿಣ ಭಾರತೀಯರಂತೆಯೇ ಅವರ ದೈಹಿಕ ಲಕ್ಷಣಗಳೂ ಇದ್ದುವೆಂದು ಅಲ್ಲಿ ದೊರೆತ ಅವಶೇಷಗಳಿಂದ ತಿಳಿಯುತ್ತದೆ. ಅಂದಿನ ಅಂತಾರಾಷ್ಟ್ರೀಯ ವಿಚಾರವಿನಿಮಯ ಮತ್ತು ಸಂಪರ್ಕ ಕೇಂದ್ರಗಳೆಂದೆಣಿಸಿದ್ದ ಪರ್ಷಿಯ, ಏಷ್ಯಾಮೈನರ್ ಮತ್ತು ಅಲೆಗ್ಸಾಂಡ್ರಿಯಾಗಳೊಡನೆ ಭಾರತ ಸಂಪರ್ಕವಿಟ್ಟುಕೊಂಡಿತ್ತೆಂದೂ ಭಾರತೀಯ ಬ್ರಾಹ್ಮಣರು ಅಲ್ಲಿ ನೆಲಸಿದ್ದರೆಂದೂ ಗ್ರೀಕ್-ಪರ್ಷಿಯನ್ನರ ಪರಂಪರಾಗತ ವಿಷಯಗಳಿಂದ ತಿಳಿಯುತ್ತದೆ. ಪೈತಾಗೊರಸನ ಸಿದ್ಧಾಂತ ಹಾಗೂ ಭಾರತೀಯ ಸಾಂಖ್ಯಸಿದ್ಧಾಂತಗಳಲ್ಲಿ ನಿಕಟವಾದ ಸಾಮ್ಯವಿದೆಯೆಂದು ವಿಲಿಯಮ್ ಜೋನ್ಸ್ ಹೇಳಿದ್ದಾರೆ. ಸಾಕ್ರೆಟೀಸನ ಕಾಲದಲ್ಲಿ ಭಾರತೀಯ ಬ್ರಾಹ್ಮಣರು ಗ್ರೀಸ್‍ದೇಶಕ್ಕೆ ಬರುತ್ತಿದ್ದರೆಂದು ಮ್ಯಾಕ್ಸ್‍ಮುಲರ್ ಅವರ ಅಭಿಪ್ರಾಯ. ಗ್ರೀಕ್ ತತ್ತ್ವಜ್ಞಾನಿ ಪ್ಲೇಟೂ ಭಾರತೀಯ ಸಿದ್ಧಾಂತಗಳಿಂದಲೂ ತತ್ತ್ವಗಳಿಂದಲೂ ಪ್ರಭಾವಿತನಾಗಿದ್ದ. ಆತ್ಮೋದ್ಧಾರ ಹಾಗೂ ಪುನರ್ಜನ್ಮದ ಬಗ್ಗೆ ಅವನ ವಿಚಾರಗಳು ಭಾರತೀಯ ಸಂಖ್ಯಾತತ್ತ್ವದ ಪಡಿನೆರಳೆಂಬಂತಿವೆ. ಆತನ ರಿಪಬ್ಲಿಕ್ ಗ್ರಂಥದಲ್ಲಿ ಪ್ರಸ್ತಾವಿಸಲಾದ ವಿಚಾರಗಳು ಭಾರತೀಯ ವಿಚಾರಗಳ ಪುನರುಚ್ಚಾರಣೆ ಆಗಿವೆಯೆಂದು ಉರ್‍ನಿಕ್ ಎಂಬ ವಿದ್ವಾಂಸನ ಅಭಿಪ್ರಾಯ, ಗ್ರೀಕ್ ರಾಜನೊಬ್ಬ ವೈಷ್ಣದ ಧರ್ಮ ಸ್ವೀಕರಿಸಿದನೆಂದು ಬೆಸನಗರದ ಸ್ತಂಭ ಲೇಖನದಿಂದ (ಕ್ರಿ. ಪೂ. 150) ತಿಳಿಯುತ್ತದೆ.
- ಭಾರತೀಯ ಸಂಸ್ಕøತಿ ಪ್ರಸಾರ ಕಾಲದಲ್ಲಿ ಬೌದ್ಧಧರ್ಮ ಒಂದು ವಿಶೇಷ ಶಕ್ತಿಯಾಗಿತ್ತು. ಸಿರಿಯ, ಪ್ಯಾಲೇಸ್ತೀನ್ ಮತ್ತು ಈಜಿಪ್ಟುಗಳಲ್ಲಿ ಬೌದ್ಧಮತೀಯರು ನೆಲಸಿದ್ದರೆಂದು ಪ್ಲಿನಿ ತನ್ನ ಗ್ರಂಥದಲ್ಲಿ ಹೇಳಿದ್ದಾನೆ. ಕ್ರಿ.ಪೂ. ಐದನೆಯ ಶತಮಾನದಲ್ಲಿಯೇ ಈಜಿಪ್ಟಿನಲ್ಲಿ ಭಾರತೀಯ ವಸಾಹತು ಇದ್ದಿತೆಂದು ಸರ್ ಪ್ಲಿಂಡರ್ಸ್ ಪಿಂಟ್ರಿಯವರ ಮತವಾಗಿದೆ. ಭಾರತದಲ್ಲಿರುವಂತೆ ಅಲ್ಲಿಯೂ ಚಾತುರ್ವರ್ಣ ಅಸ್ತಿತ್ವದಲ್ಲಿದ್ದಿತೆಂದು ತಿಳಿಯುತ್ತದೆ. ಈಜಿಪ್ಟಿನ ಸಮಾಜ. ಸಂಸ್ಥೆ, ಕಾನೂನು, ಕಲೆ ಹಾಗೂ ಶಾಸ್ತ್ರಗಳ ಮೇಲೆ ಭಾರತೀಯ ಪ್ರಭಾವದ ಮುದ್ರೆಯನ್ನು ಕಾಣಬಹುದು. ಬೌದ್ಧ ಧರ್ಮದಲ್ಲಿ ಅಡಕವಾದ ವಿಶ್ವಬಂಧುತ್ವದ ಉದಾತ್ತ ತತ್ತ್ವದಿಂದ ಸ್ಫೂರ್ತಿಗೊಂಡ ಅಶೋಕ ಚಕ್ರವರ್ತಿ ತನ್ನ ಸದ್ಭಾವ ರಾಯಭಾರಿಗಳನ್ನು ಸಿರಿಯಾ, ಈಜಿಪ್ಟ್, ಮೆಸೆಡೋನಿಯ ಮತ್ತು ಎಪಿರಸ್ ದೇಶಗಳಿಗೆ ಕಳುಹಿಸಿಕೊಟ್ಟ. ಆನೇಕ ಧರ್ಮಪ್ರಸಾರಕರು ಆಯಾ ದೇಶಗಳಲ್ಲಿಯೇ ಉಳಿದು ಆಲ್ಲಿಯೇ ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡರು. ಸಮಸ್ತ ಮಾನವ ಜಾತಿಯ ಆಧ್ಯಾತ್ಮಿಕ ಉತ್ಕರ್ಷೆಗಾಗಿ ಚಿಂತನೆ ಮಾಡುತ್ತಿದ್ದ ಅಶೋಕ ಹೊರನಾಡುಗಳಲ್ಲಿ ಆಧ್ಯಾತ್ಮಿಕ ಉತ್ಕರ್ಷೆಗಾಗಿ ಚಿಂತನೆ ಮಾಡುತ್ತಿದ್ದ ಅಶೋಕ ಹೊರನಾಡುಗಳಲ್ಲಿ ಭಾರತೀಯ ಸಾಂಸ್ಕøತಿಕ ಸಾಮ್ರಾಜ್ಯವನ್ನು ಕಟ್ಟಿದವರಲ್ಲಿ ಪ್ರಖ್ಯಾತನಾಗಿದ್ದಾನೆ. ಗ್ರೀಕ್-ಬೌದ್ಧ ಸಮಾಗಮ ಕಲಾಕ್ಷೇತ್ರದಲ್ಲಿ ಒಂದು ಹೊಸ ಪ್ರಣಾಲಿಯನ್ನೇ ಪ್ರಾರಂಭಿಸಿತು.
- ಕ್ರೈಸ್ತಧರ್ಮದ ಬೆಳೆವಣಿಗೆಯ ಮೇಲೆ ಬೌದ್ಧಧರ್ಮ ಪ್ರಭಾವ ಬೀರಿದೆ ಎಂಬುದಕ್ಕೆ ಆಧಾರಗಳುಂಟು. ಜಾತಕಗಳಲ್ಲಿಯ ಕತೆ ಹೇಳುವ ಶೈಲಿಗೂ ಬೈಬಲ್ಲಿನ ಶೈಲಿಗೂ ವಿಶೇಷ ಸಾಮ್ಯವಿದೆ. ಅರ್ಮೆನಿಯದಲ್ಲಿ ಹಿಂದೂದೇವತೆ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದರೆಂದು ತಿಳಿಯುತ್ತದೆ. ಕೃಷ್ಣನಿಗೆ ಮೀಸಲಾದ ಗುಡಿಗಳು ಸಹ ಅಲ್ಲಿ ಇದ್ದುವೆಂದು ಸಿರಿಯದ ಬರಹಗಾರ ಝೆನಾಬ ಹೇಳಿದ್ದಾನೆ. ಪಂಚತಂತ್ರ ಮತ್ತು ಹಿತೂ ಪ್ರದೇಶಗಳ ಪ್ರಭಾವವನ್ನು ಯೂರೋಪಿಯನ್ ಸಾಹಿತ್ಯದಲ್ಲಿ ಕಾಣಬಹುದು. ಈಸೊಪನ ಕತೆಗಳ ತಳಹದಿಯನ್ನು ಅವುಗಳಲ್ಲಿ ಕಾಣುತ್ತೇವೆ. ಸಾಹಿತ್ಯ ಕ್ಷೇತ್ರದಲ್ಲಿರುವಂತೆಯೇ ಇತರ ಯೂರೊಪಿಯನ್ ಸಾಹಿತ್ಯದಲ್ಲಿ ಕಾಣಬಹುದು. ಈಸೊಪನ ಕತೆಗಳ ತಳಹದಿಯನ್ನು ಅವುಗಳಲ್ಲಿ ಕಾಣುತ್ತೇವೆ. ಸಾಹಿತ್ಯ ಕ್ಷೇತ್ರದಲ್ಲಿರುವಂತೆಯೇ ಇತರ ಯೂರೊಪಿಯನ್ ಶಾಸ್ತ್ರಗಳಲ್ಲಿಯೂ ಭಾರತೀಯ ವರ್ಚಸ್ಸನ್ನು ಕಾಣಬಹುದು. "ಭಾರತ ನಮ್ಮ ವಂಶದ ಮಾತೃಭೂಮಿ ; ಸಂಸ್ಕøತ ಯೂರೊಪಿನ ಭಾಷೆಗಳ ತಾಯಿ ಎನ್ನುವ ವಿಲ್‍ಡ್ಯೂರಾಂಟರ್ ಮಾತಿನಲ್ಲಿ ಯೂರೊಪ್ ಭಾರತಕ್ಕೆ ಅದೆಷ್ಟು ಋಣಿಯಾಗಿದೆಯೆಂಬುದು ವ್ಯಕ್ತವಾಗುತ್ತದೆ. ಭಾರತದಲ್ಲಿ ಪ್ರಚಲಿತವಿದ್ದ ಅಶ್ವಮೇಧ ಯಜ್ಞಗಳು ಉತ್ತರ ಯೂರೋಪಿನಲ್ಲಿಯೂ ನಡೆಯುತ್ತಿದ್ದವು. ಲಿಥುವೇನಿಯದಲ್ಲಿ ಇಂದಿಗೂ ಭಾರತೀಯ ಸಂಸ್ಕಾರಗಳ ಅನುಷ್ಠಾನ ಪದ್ಧತಿಗಳನ್ನು ಕಾಣಬಹುದು. ಅಲ್ಲಿಯ ಸ್ಥಾನಿಕ ಆದಿವಾಸಿಗಳ ಕುಲಗೋತ್ರಗಳ ಹೆಸರುಗಳಾದ ಕರು, ಪುರು, ಯಾದವ ಮೊದಲಾದವು ಸ್ಪಷ್ಟವಾಗಿ ಭಾರತೀಯ ಹೆಸರುಗಳು. ಅದರಂತೆಯೇ ಅವರ ದೇವತೆಗಳಾದ ಇಂದ್ರ, ವರುಣ, ಪುರಕನ್ಯಾ ಮುಂತಾದವು ಕೂಡ ಭಾರತೀಯ ಹೆಸರುಗಳೇ ಆಗಿವೆ.
- ಭಾರತೀಯ ಸಂಸ್ಕøತಿಯ ಕುರುಹುಗಳು ರಷ್ಯ, ನೈಜೀರಿಯಗಳಲ್ಲಿಯೂ ದೊರೆತಿವೆ. ಇಲ್ಲಿಯ ದೇವತೆ ಗಣೇಶನನ್ನು ಪೂಜಿಸುತ್ತಿದ್ದರು. ಮಾಯಾಜನರ ಸಂಸ್ಕøತಿ ಹಾಗೂ ಅವರ ದೇವಾಲಯಗಳನ್ನು ನೋಡಿದರೆ ಅವು ದಕ್ಷಿಣ ಭಾರತದ ದೇವಾಯಗಳೆನ್ನುವಂತೆ ಕಾಣುತ್ತವೆ. ದಕ್ಷಿಣ ಅಮೆರಿಕದ ಪೆರು ಜನರ ಪೂರ್ವಜರು ರಾಮ ಸೀತಾ ಉತ್ಸವವನ್ನು ಆಚರಿಸುತ್ತಿದ್ದರೆಂದೂ ರಾಮಾಯಣದ ಕತೆ ಅಲ್ಲಿ ಪ್ರಚಲಿವಿತ್ತೆಂದೂ ತಿಳಿದುಬರುತ್ತದೆ.
- ಏಷ್ಯ ಮನೋಭೂಮಿ ಭಾರತೀಯ ಧರ್ಮ ಹಾಗೂ ಸಂಸ್ಕøತಿಗಳ ಪ್ರವಾಹದಿಂದ ಪುನೀತವಾಗಿದೆ. ಅದರ ಧಾರ್ಮಿಕ ವಿಚಾರ, ಕಲೆ ಹಾಗೂ ಸಾಹಿತ್ಯ ಏಷ್ಯದ ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಮಧ್ಯೆ ಏಷ್ಯದ ವ್ಯಾಪಾರ ಮಾರ್ಗದಲ್ಲಿದ್ದ ಪಟ್ಟಣಗಳೆಲ್ಲ ಭಾರತೀಯ ಸಂಸ್ಕøತಿಯ ಪ್ರಭಾವಕ್ಕೊಳಗಾಗಿದ್ದುವು. ಶಿವ, ಗಣೇಶ ಮತ್ತು ಬುದ್ಧನ ಮೂರ್ತಿಗಳನ್ನು ಅಲ್ಲಿಯ ಜನರು ಪೂಜಿಸುತ್ತಿದ್ದರು. ಹನ್ನೊಂದನೆಯ ಶತಮಾನದ ತನಕ ಅಲ್ಲಿ ಬುದ್ಧವಿಹಾರಗಳಿದ್ದುವೆಂದು ತಿಳಿಯುತ್ತದೆ. ಕ್ರಿಸ್ತಶಕ ಪ್ರಾರಂಭವಾಗುವುದಕ್ಕಿಂತ ಮೊದಲು ಭಾರತೀಯ ಸಾಂಸ್ಕøತಿಕ ಪ್ರಭಾವ ಮಧ್ಯೆ ಮತ್ತು ಆಗ್ನೇಯ ಏಷ್ಯಗಳಲ್ಲಿಯೂ ಪೆಸಿಫಿಕ್ ದ್ವೀಪಗಳಲ್ಲಿಯೂ ಪ್ರಸಾರಗೊಂಡದ್ದು ಆಗಿನ ಕಾಲದ ಮಹತ್ತ್ವಪೂರ್ಣ ಘಟನೆ.
- ಭಾರತ ಗಡಿ ಪ್ರದೇಶಗಳಲ್ಲಿ ಹಬ್ಬಿದ ಬೌದ್ಧಮತದ ಪ್ರಭಾವ ಎಷ್ಟಿತ್ತೆಂಬುದು ಮಿಲಿಂದ ಪನ್ಹೊ ಗ್ರಂಥದಿಂದ ಗೊತ್ತಾಗುತ್ತದೆ. ಕುಶಾಣ ಚಕ್ರವರ್ತಿ ಕನಿಷ್ಕಗಾಂಧಾರ ಕಲೆಯ ಪೋಷಕನಾಗಿದ್ದ. ತಕ್ಷಶಿಲೆ ಕಲೆ ಹಾಗೂ ವೈಜ್ಞಾನಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಕನಿಷ್ಕ, ಹುವಿಷ್ಕ ಹಾಗೂ ವಾಸುದೇವರ ಕಾಲದಲ್ಲಿ ಭಾರತೀಯ ವಿಚಾರ ಪ್ರಣಾಲಿ ಮಧ್ಯ ಏಷ್ಯದಲ್ಲೆಲ್ಲ ಪ್ರಚಲಿತವಾಯಿತು. ಕನಿಷ್ಕ ಚಕ್ರವರ್ತಿ ಮಹಾಯಾನ ಬೌದ್ಧಧರ್ಮದ ಆಶ್ರಯದಾತನಾಗಿದ್ದನಲ್ಲದೆ ಭಾರತದ ಹೊರಗಿನ ತನ್ನ ರಾಜ್ಯದಲ್ಲಿಯೂ ಬೌದ್ಧಧರ್ಮದ ಪ್ರಸಾರದ ಚಟುವಟಿಕೆಗಳಿಗೆ ಉತ್ತೇಜನ ಕೊಟ್ಟಿದ್ದ. ಆಗ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಭಾರತೀಯರಾದ ಮಾತಂಗ ಕಾಶ್ಯಪ ಮತ್ತು ಧರ್ಮ ರತ್ನರೆನ್ನುವವರನ್ನು ಚೀನೀ ರಾಯಭಾರಿಗಳು ಕ್ರಿ.ಶ. ಸುಮಾರು 68ರಲ್ಲಿ ಭೇಟಿಯಾಗಿದ್ದರೆಂಬುದು ಐತಿಹಾಸಿಕ ಸಂಗತಿ.
- ಕಾಶ್ಮೀರ ಮತ್ತು ಪಂಜಾಬ್‍ಗಳಿಂದ ಬಂದ ಅನೇಕ ಭಾರತೀಯರು ಲೌರಿಮ್ ಕೊಳ್ಳದಲ್ಲಿ ನೆಲಸಿ ಪಟ್ಟಣಗಳನ್ನು ಕಟ್ಟಿ ಬೌದ್ಧದರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದರು. ಖೋತಾನದಲ್ಲಿ ಬೌದ್ಧಸ್ತೂಪ ಮತ್ತು ವಿಹಾರಗಳ ಅವಶೇಷಗಳು ಸಿಕ್ಕಿವೆ. ಕಾಶ್ಮೀರದ ಸುತನಾದ ವಿರೋಚನನಿಂದ ಅಲ್ಲಿ ಬೌದ್ಧಧರ್ಮ ಪ್ರಾರಂಭವಾಯಿತು. ಮಹಾಯಾನ ಬೌದ್ಧಧರ್ಮದ ಅಧ್ಯಯನ ಕೇಂದ್ರ ದೇಶಗಳಿಂದ ಪಂಡಿತರು ಬರುತ್ತಿದ್ದರು. ಆ ವಿಶ್ವವಿದ್ಯಾಲಯದ ಕುಲಪತಿಯಾದ ಬುದ್ಧಸೇನ ಭಾರತೀಯನಾಗಿದ್ದ. ಸಂಸ್ಕøತ ಹಾಗೂ ಪ್ರಾಕೃತಿಗಳು ಅಲ್ಲಿಯ ಅಧ್ಯಯನದ ಮಾಧ್ಯಮಗಳಾಗಿದ್ದುವು.
- ಅನೇಕ ರಾಜಕೀಯ ಬದಲಾವಣೆಯಾಗುತ್ತಿದ್ದರೂ ಭಾರತ ತನ್ನ ಧಾರ್ಮಿಕ, ನೈತಿಕ ಮತ್ತು ಸಾಂಸ್ಕøತಿಕ ಪ್ರಗತಿಯಲ್ಲಿ ಹಿಂದೆ ಬೀಳಲಿಲ್ಲ. ಭಾರತ ಅಂತಾರಾಷ್ಟ್ರೀಯ ಸೌಹಾರ್ದದ ದೀವಟಿಗೆ ಹಿಡಿದು ಮುನ್ನಡೆಯಿತೆಂದು ಹೇಳಬಹುದು. ಆಗ್ನೇಯ ಏಷ್ಯ ಮತ್ತು ಇಂಡೋನೇಷ್ಯಗಳನ್ನೊಳಗೊಂಡ ಪ್ರದೇಶಗಳು ಭರತ ವರ್ಷದ ಒಂಬತ್ತು ದ್ವೀಪಗಳೆಂದು ಪುರಾಣಗಳಲ್ಲಿ ಹೇಳಲಾಗಿದೆ. ಇಡೀ ಏಷ್ಯ ಖಂಡಕ್ಕೆ ಐಕ್ಯವನ್ನು ತಂದು ಕೊಟ್ಟದ್ದು ಭಾರತೀಯ ಸಂಸ್ಕøತಿ ಎನ್ನಲಾಗಿದೆ. ಚೀನ ದೇಶದೊಂದಿಗಿನ ಭಾರತೀಯ ಸಂಸ್ಕøತಿ ಸಂಪರ್ಕ ಏಷ್ಯದ ಸಾಂಸ್ಕøತಿಕ ಇತಿಹಾಸದಲ್ಲಿ ಮಹತ್ತ್ವದ ಘಟನೆ ಚೀನದ ಟಾವೋ ಧರ್ಮಪಂಥದಲ್ಲಿ ಬರುವ ಜಗದಂಬೆಯ ವಿಚಾರ ಭಾರತೀಯ ತಾಂತ್ರಿಕ ಸಂಸ್ಕøತಿಯ ಪ್ರತಿಧ್ವನಿ. ಚೀನಾದೊಡನೆ ಭಾರತೀಯ ಸಂಪರ್ಕದ ಉಲ್ಲೇಖಗಳು ಮಾತ್ರ ನಮಗೆ ಕ್ರಿ.ಶ. ಸುಮಾರು 60ರಿಂದ ಸಿಗುತ್ತದೆ. ಅದೇ ವೇಳೆಗೆ ಬೌದ್ಧಧರ್ಮ ಚೀನಾದಲ್ಲಿ ಪ್ರಸಾರವಾಗುತ್ತಿತ್ತು. ಕುಮಾರ ವಿಜಯ ಮತ್ತು ಗುಣವರ್ಮ ಮೊದಲಾದ ಪಂಡಿತರು ಬೌದ್ಧಧರ್ಮವನ್ನು ಉಪದೇಶಿಸಲು ಚೀನದೇಶಕ್ಕೆ ಹೋದರು. ಕುಮಾರ ಜೀವನ ಸದ್ಧರ್ಮ ಪುಂಡರೀಕ ಇಂದಿಗೂ ಚೀನೀಬೌದ್ಧಧರ್ಮದ ಪವಿತ್ರ ಗ್ರಂಥ. ಬುದ್ಧಧರ್ಮನೆಂಬ ಇನ್ನೊಬ್ಬ ಧರ್ಮಪ್ರಸಾರಕ ಚೀನೀ ತತ್ತ್ವಜ್ಞಾನ ಮತ್ತು ಸಾಹಿತ್ಯಗಳಲ್ಲಿ ಧ್ಯಾನಮಾರ್ಗದ ತಳಹದಿ ಹಾಕಿದ. ಅಶ್ವಘೋಷ, ನಾಗಾರ್ಜುನ ಮತ್ತು ವಸುಬಂಧು ಮುಂತಾದವರು ಕೃತಿಗಳು ಚೀನೀಭಾಷೆಗೆ ಭಾಷಾಂತರಿಸಲ್ಪಟ್ಟಿವು. ಭಾರತೀಯ ಆಧ್ಯಾತ್ಮ ದರ್ಶನಕ್ಕಾಗಿ ಚೀನೀಯಾತ್ರಿಕರಾದ ಫಾಹಿಮಾನ್, ಚಿಹ್‍ಮಾಂಗ್ ಮೊದಲಾದವರು ಭಾರತಕ್ಕೆ ಬಂದರು.
- ಚೀನದಿಂದ ಬೌದ್ಧಧರ್ಮ ಕೊರಿಯಾದಲ್ಲಿ ಪ್ರಸಾರಗೊಂಡು ಅಲ್ಲಿಯ ರಾಷ್ಟ್ರ ಧರ್ಮವಾಯಿತು. ಕೊರಿಯದಿಂದ ಜಪಾನಿನಲ್ಲಿ ಬೌದ್ಧಧರ್ಮ ಹರಡಿ ಅಲ್ಲಿಯ ಜನಜೀವನದಲ್ಲಿ ನವಚೇತನ ಉಂಟುಮಾಡಿತು. ಬಂಗಾಲದ ಸುಪ್ರಸಿದ್ಧ ಬೌದ್ಧ ಪಂಡಿತನೂ ಮಹಾತ್ಮನೂ ವಿಕ್ರಮಶಿಲಾ ವಿಶ್ವವಿದ್ಯಾಲಯದ ಕುಲಪತಿಯೂ ಅದ ಶ್ರೀ ಜ್ಞಾನ ದೀಪಂಕರ ಟಿಬೆಟ್ಟಿನ ರಾಜನ ಆಮಂತ್ರಣದ ಮೇರೆಗೆ ಅಲ್ಲಿಗೆ ತೆರಳಿ ಬೌದ್ಧಮತದ ತಾಂತ್ರಿಕ ಸಂಸ್ಥೆಯೊಂದನ್ನು ಸ್ಥಾಪಿಸಿದ. ಇಂದಿಗೂ ಅಲ್ಲಿಯ ಬೌದ್ಧಮಠಗಳಲ್ಲಿ ದೀಪಂಕರನನ್ನು ಬುದ್ಧನಂತೆಯೇ ಪೂಜಿಸಲಾಗುತ್ತಿದೆ.
- ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ವಿಜಯ ಸಿಂಘನೆಂಬ ಬಂಗಾಲದ ಒಬ್ಬ ಸಾಹಸಿ ರಾಜಪುತ್ರ ಸಿಲೋನಿನಲ್ಲಿ ವಸಾಹತು ಸ್ಥಾಪಿಸಿದ. ಸಿಲೋನಿನ ಮೊದಲಿನ ಹೆಸರಾದ ಸಿಂಘ ಅವನಿಂದಲೇ ಬಂದಿತು. ಇಂದಿಗೂ ಸಿಲೋನ್ ಬೌದ್ಧಧರ್ಮದ ಹಾಗೂ ಅದರ ಅಧ್ಯಯನ ಕೇಂದ್ರವಾಗಿದೆ. ಅಶೋಕ ಚಕ್ರವರ್ತಿಯ ತಮ್ಮ ಮಹೇಂದ್ರ ಸಿಲೋನಿಗೆ ತೆರಳಿ ಅಲ್ಲಿ ಬೌದ್ಧಧರ್ಮ ಪ್ರಸಾರ ಮಾಡಿದ. ಬುದ್ಧ ಘೋಷನೆಂಬ ಸುಪ್ರಸಿದ್ಧ ಧರ್ಮೋಪದೇಶಕ ಐದನೆಯ ಶತಮಾನದಲ್ಲಿ ಸಿಲೋನಿಗೆ (ಶ್ರೀಲಂಕಾ) ತೆರಳಿ ಹೀನಯಾನ ಗ್ರಂಥಗಳನ್ನೆಲ್ಲ ಸಿದ್ಧಪಡಿಸಿದ. ನೆಗೀರಿಯ ಅನುರಾಧಾಪುರ ಹಾಗೂ ಪೊಲನ್ನುರುಗಳಲ್ಲಿರುವ ಬುದ್ಧನ ಮೂರ್ತಿಗಳನ್ನು ನೋಡಿದರೆ ಭಾರತೀಯ ಪ್ರಭಾವವೆಷ್ಟಿತ್ತೆಂಬುದರ ಕಲ್ಪನೆ ಬಾರದಿರದು.
- ಕ್ರಿ.ಶ. ಮೊದಲನೆಯ ಶತಮಾನದ ವೇಳೆಗೆ ಬರ್ಮದಲ್ಲಿ ಭಾರತೀಯ ವಸಾಹತುಗಳಿದ್ದುವೆಂದು ತಿಳಿಯುತ್ತದೆ. ಪ್ರೋಮ್, ಪೆಗೂ, ಥಾಟನ್ ಮೊದಲಾದ ಸ್ಥಳಗಳಲ್ಲಿ ದೊರೆತ ಅವಶೇಷಗಳ ಮೇಲಿಂದ ಬರ್ಮದಲ್ಲಿ ಮೂರನೆಯ ಶತಮಾನದಿಂದ ಹತ್ತನೆಯ ಶತಮಾನದವರೆಗಿನ ಅವಧಿಯಲ್ಲಿ ಸಂಸ್ಕøತಿ ಹಾಗೂ ಪಾಲಿ ಭಾಷೆ-ಸಾಹಿತ್ಯಗಳು, ಬ್ರಾಹ್ಮಣ ಹಾಗೂ ಬೌದ್ಧ ಧರ್ಮದ ಪಂಥಗಳು ಪ್ರಚಲಿತವಿದ್ದುವೆಂಬುದು ಸ್ಪಷ್ಟವಿದೆ. ಬರ್ಮದ ವಾಸ್ತು ಶಿಲ್ಪ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಪ್ರಭಾವ ಎದ್ದುಕಾಣುತ್ತದೆ. ಪಗೂದಲ್ಲಿಯ ಆನಂದಮಂದಿರ ಭಾರತೀಯರಿಂದಲೇ ಕಟ್ಟಲ್ಪಟ್ಟಿರಬೇಕೆಂದು ಹೇಳಲಾಗಿದೆ. ಮಲಯ ದ್ವೀಪಕಲ್ಪ ಭಾರತೀಯ ಸಂಸ್ಕøತಿಯ ಇನ್ನೊಂದು ಠಾಣೆಯಾಗಿತ್ತು. ಎರಡು ಮೂರನೆಯ ಶತಮಾನದಲ್ಲಿ ಕಲಿಂಗರೂ ಆಂಧ್ರರೂ ಅಲ್ಲಿಗೆ ಹೋಗಿ ನೆಲಸಿದರು. ಬೋರ್ನಿಯೋ ಬ್ರಾಹ್ಮಣರ ವಸಾಹತಾಗಿತ್ತು. ಅಲ್ಲಿಯ ರಾಜನ ಅರಮನೆಯಲ್ಲಿ ಬ್ರಾಹ್ಮಣ ಧರ್ಮದ ವಿಧಿನಿಯಮಗಳನ್ನೂ ಶಿಷ್ಟಾಚಾರಗಳನ್ನೂ ಪಾಲಿಸಲಾಗುತ್ತಿತ್ತು. ಅದರಂತೆಯೇ ಫಿಲಿಪೀನ್ಸ್ ನಾಗರಿಕತೆಯ ಬೆಳೆವಣಿಗೆಯಲ್ಲೂ ಭಾರತದ ಪ್ರಭಾವ ಕಂಡುಬರುತ್ತದೆ. ಫಿಲಿಫೀನ್ಸ್ ಮತ್ತು ಮಲೇಶಿಯ ದೇಶಗಳ ಭಾಷೆಗಳಲ್ಲಿ ಸಂಸ್ಕøತ ಶಬ್ದಗಳನ್ನು ಕಾಣಬಹುದು. ಅವರ ಮಂದಿರಗಳಲ್ಲಿ ಹಿಂದೂದೇವತೆಗಳು ಅಧಿಷ್ಠಾನಗೊಂಡಿವೆ. ಹಿಂದೂ ವಿಶ್ವೋತ್ಪತ್ತಿಯ ಸಿದ್ಧಾಂತಗಳೇ ಅವರ ಸಿದ್ಧಾಂತಗಳಾಗಿವೆ.
- ಕ್ರಿ.ಶ. 2ನೆಯ ಶತಮಾನದಲ್ಲಿ ಯೂಫ್ರೆಟೀಸ್ ನದಿಯ ಮೇಲುಕಣಿವೆಯಲ್ಲಿ ಭಾರತೀಯ ಜನಾಂಗ ನೆಲಸಿದ್ದು ಅಲ್ಲಿ ಅವರದೇ ಒಂದು ದೇವಾಲಯವೂ ಇದ್ದಿತೆಂದು ತಿಳಿದು ಬಂದಿದೆ. ರಾಮಾಯಣದಲ್ಲಿ ಜಾವ ನಡುಗಡ್ಡೆಯ ಉಲ್ಲೇಖವನ್ನು ಕಾಣಬಹುದು. ಕಾಶ್ಮೀರದ ರಾಜಪುತ್ರ ಗುಣವರ್ಮ ಅಲ್ಲಿ ಮೊತ್ತ ಮೊದಲನೆಯದಾದ ಬೌದ್ಧವಿಹಾರವೊಂದನ್ನು ಕಟ್ಟಿಸಿ ಅಲ್ಲಿಯ ರಾಜನಿಗೆ ಬೌದ್ಧಧರ್ಮೋಪದೇಶ ಮಾಡಿದ. ಜಾವದ ಕಾವ್ಯ, ನಾಟಕ, ಸಂಗೀತ ಮತ್ತು ನೃತ್ಯಗಳಲ್ಲಿ ಭಾರತೀಯ ಸ್ಫೂರ್ತಿಗಳನ್ನು ಕಾಣಬಹುದು. ಶಿವ ಅಲ್ಲಿಯ ಲೋಕಪ್ರಿಯ ದೇವತೆ, ಗಣೇಶ ಹಾಗೂ ಕಾರ್ತಿಕೇಯನ ಮೂರ್ತಿಗಳು ಅಲ್ಲಿ ದೊರೆತಿವೆ. ಅಲ್ಲಿಯ ವಾಸ್ತುಶಿಲ್ಪಗಳಲ್ಲಿ ವಿಷ್ಣು ಮತ್ತು ಅವನ ದಶಾವತಾರದ ಚಿತ್ರಗಳನ್ನು ಕಾಣಬಹುದು. ಎಂಟನೆಯ ಶತಮಾನದಲ್ಲಿ ಮಹಾಯಾನ ಬೌದ್ಧಮತ ಅಲ್ಲಿ ಪ್ರಚಾರಗೊಂಡಿತು. ಶೈಲೇಂದ್ರ ರಾಜರ ಕಾಲದಲ್ಲಿ ಬಂಗಾಲದಿಂದ ಬಂದ ಬೌದ್ಧ ಧರ್ಮೋಪದೇಶಕರು ಪ್ರಬಲರಾಗಿದ್ದರು. ಪೂರ್ವ ಭಾರತದಲ್ಲಿ ಪ್ರಸಾರಗೊಂಡ ಅಧ್ಯಾತ್ಮ ಹಾಗೂ ಸೌಂದರ್ಯಶಾಸ್ತ್ರಗಳಿಂದ ಪ್ರಭಾವಿತವಾದ ಜಾವ ದೇಶದಲ್ಲಿ ಅತ್ಯದ್ಭುತವಾದ ಬೋರಬದೂರಿನ ಸ್ತೂಪದ ನಿರ್ಮಾಣವಾಯಿತು. ಸುಪ್ರಸಿದ್ಧ ಚೀನೀಪ್ರವಾಸಿ ಫಾಹಿಮಾನ್ ಭಾರತದಿಂದ ಹಿಂತಿರುಗಿ ಹೋಗುವಾಗ ಜಾವದಲ್ಲಿ ಕೆಲವು ತಿಂಗಳು ಇದ್ದುಹೋದ. ಆಗ ಜಾವದಲ್ಲಿ ಊರ್ಜಿತಾವಸ್ಥೆಯಲ್ಲಿದ್ದ ಬ್ರಾಹ್ಮಣದ ಬಗ್ಗೆ ಅವನು ವರ್ಣಿಸಿದ್ದಾನೆ.
- ಭಾರತದ ವಿದ್ಯಾಸಂಸ್ಥೆಗಳಲ್ಲಿ ಕಲಿಸಲಾಗುತ್ತಿದ್ದ ವಿಷಯಗಳನ್ನೇ ಸುಮಾತ್ರದಲ್ಲಿದ್ದ ಬಾಹ್ಮಣರೂ ಕಲಿಯುತ್ತಿದ್ದರು. ನಳಂದಾ ವಿಶ್ವವಿದ್ಯಾಲಯದ ಸುಪ್ರಸಿದ್ಧ ಶಿಕ್ಷಕ ಧರ್ಮಪಾಲ ಸುಮಾತ್ರಕ್ಕೆ ಭೇಟಿ ಕೊಟ್ಟನೆಂದು ತಿಳಿದುಬಂದಿದೆ. ಬಾಲಿದ್ವೀಪ ಭಾರತೀಯ ಸಾಂಸ್ಕøತಿಕ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಹಿಂದೂ ಧರ್ಮದ ಪ್ರಭಾವ ಬಾಲೀ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ.
- ಪ್ರಾರಂಭದಲ್ಲಿ ಭಾರತದ ಪ್ರಭಾವ ಕೇವಲ ಸಾಂಸ್ಕøತಿಕ ಹಾಗೂ ಧಾರ್ಮಿಕವಾಗಿದ್ದು ಕ್ರಮೇಣ ರಾಜಕೀಯ ಸ್ವರೂಪ ತಳೆಯಿತು. ಮೊದಲಿನ ಇಂಡೋಚೀನ ರಾಜ್ಯದ ಕಾಂಬೋಡಿಯ, ಅನ್ನಾಮ್, ಕೊಚ್ಚಿನ್, ಚೀನ ಭಾರತೀಯ ವಸಾಹತುಗಾರರು ಮಲಯದವರೆಗೆ ಭೂಮಾರ್ಗವಾಗಿಯೂ ಅನಂತರ ಸಿಂಗಪುರದಿಂದ ಜಲಮಾರ್ಗವಾಗಿಯೂ ಪ್ರಮಾನ ಮಾಡಿರಬಹುದೆನ್ನುವರು. ಇಂಡೊನೇಷ್ಯ ಹಾಗೂ ಜಪಾನ್‍ಗಳಲ್ಲಿ ಇಂದಿಗೂ ಪೂಜಿಸಲ್ಪಡುತ್ತಿರುವ ಅಗಸ್ತ್ಯಋಷಿಯ ಬಗ್ಗೆ ಇರುವ ದಂತಕತೆ ಭಾರತೀಯ ಸಾಗರೋತ್ತರ ಸಾಹಸದ ಮುನ್ನುಡಿಯಾಗಿದೆ. ಭಾರತೀಯ ಪ್ರಭಾವಕ್ಕೊಳಗಾದ ಮೊತ್ತ ಮೊದಲಿನ ದೇಶವೆಂದರೆ ಕಾಂಬೋಡಿಯ. ಅಲ್ಲಿ ಫುನಾನ್ ಎನ್ನುವ ಹಿಂದೂರಾಜ್ಯ ಕಟ್ಟಿದವನು ಪಲ್ಲವರ ರಾಜಧಾನಿ ಕಂಚಿಯಿಂದ ಬಂದ ಕೌಂಡಿಣ್ಯನೆಂಬ ಸಾಹಸಿ. ಅವನು ಜಲಮಾರ್ಗವಾಗಿ ಬಂದು ಅಲ್ಲಿಯ ರಾಣಿಯನ್ನು ಸೋಲಿಸಿ ಅವಳನ್ನು ಮದುವೆಯಾದ. ಕೌಂಡಿಣ್ಯನ ವಂಶಜರು ವರ್ಮನ್ ಎನ್ನುವ ಹೆಸರನ್ನು ಬಳಸುತ್ತಿದ್ದರು. ಭಾರತದಿಂದ ವಲಸೆ ಹೋದವರೆಲ್ಲ ಅಲ್ಲಿಯೇ ಉಳಿದು, ಮದುವೆಯಾಗಿ ಸ್ಥಾನಿಕ ಜನರೊಡನೆ ಬೆರೆತುಕೊಂಡರು. ಹಿಂದೂಧರ್ಮವೇ ಅಲ್ಲಿಯ ಜನಸಾಮಾನ್ಯರ ಧರ್ಮವಾಗಿತ್ತು. ಭಾರತೀಯ ಚಾತುರ್ವರ್ಣ ವ್ಯವಸ್ಥೆ ಅಲ್ಲಿಯ ಸಮಾಜ ರಚನೆಯ ತಳಹದಿಯಾಗಿತ್ತು. ಶಿವ-ವಿಷ್ಣುದ್ವಯರ ಆರಾಧನೆ ಅಲ್ಲಿಯ ಧಾರ್ಮಿಕ ಆಚರಣೆಗಳಲ್ಲಿ ವೈಶಿಷ್ಟ್ಯಪೂರ್ಣವಾಗಿತ್ತು. ಭಾರತೀಯರಂತೆಯೇ ಅಲ್ಲಿಯ ಜನರು ಆಧ್ಯಾತ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಕಾಂಬೋಡಿಯದ ಕಲೆ ಹಾಗೂ ವಾಸ್ತುಶಿಲ್ಪಗಳಲ್ಲಿ ಭಾರತೀಯ ವರ್ಚಸ್ಸನ್ನು ಕಾಣಬಹುದು. ಅತ್ಯದ್ಭುತವಾದ ಅಂಗ ಕೋರವತ್ ದೇವಾಲಯ ಅದರ ದೃಷ್ಟಾಂತ. ಫುನಾನದಂತೆ ಈಗಿನ ಅನ್ನಾಮ್ ಪ್ರಾಂತ್ಯವೆನಿಸುವ ಚಂಪಾ ಇನ್ನೊಂದು ಭಾರತೀಯ ವಸಾಹತು ಆಗಿತ್ತು. ಎರಡನೆಯ ಶತಮಾನದ ವೇಳೆಗೆ ಭಾರತೀಯ ವಿಚಾರಗಳು ಅಲ್ಲಿ ಪ್ರಚಲಿತವಾಗಿದ್ದುವು. ಸತಿ ಹೋಗುವ ಪದ್ಧತಿ ಅಲ್ಲಿ ರೂಢಿಯಲ್ಲಿತ್ತು. ರಾಮಾಯಣ, ಮಹಾಭಾರತ, ಪುರಾಣ ಹಾಗೂ ಮಹಾಯಾನ ಬೌದ್ಧ ಧರ್ಮಗ್ರಂಥಗಳ ಅಭ್ಯಾಸ ಚಂಪಾದಲ್ಲಿ ನಡೆಯುತ್ತಿತ್ತು. ಭದ್ರೇಶ್ವರನೆಂದು ಕರೆಯಲ್ಪಡುತ್ತಿದ್ದ ಶಿವ ಅಲ್ಲಿಯ ರಾಷ್ಟ್ರದೇವತೆ.
- ಕ್ರಿಸ್ತಶಕದಿಂದ ಪ್ರಾರಂಭವಾಗಿ ಸುಮಾರು ನಾನೂರು ವರ್ಷಗಳ ತನಕ ಇಂಡೋನೇಷ್ಯ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ಸಣ್ಣ ಸಣ್ಣ ಹಿಂದೂ ರಾಜ್ಯಗಳು ಸ್ಥಾಪಿಸಲ್ಪಟ್ಟವು ; ಮಲಯದಲ್ಲಿಯ ತಕ್ಕೋಲ ಭಾರತ ಮತ್ತು ಅದರ ವಸಾಹತುಗಳ ನಡುವಿನ ಕೇಂದ್ರವಾಗಿತ್ತು. ಥೈಲ್ಯಾಂಡಿನಲ್ಲಿ ಭಾರತೀಯ ಸಂಸ್ಕøತಿ, ಆಚಾರ-ವಿಚಾರಗಳನ್ನು ಇಂದಿಗೂ ಕಾಣಬಹುದು. ಅಲ್ಲಿಯ ಬ್ರಾಹ್ಮಣ ಹಾಗೂ ಬೌದ್ಧ ದೇವಾಲಯಗಳು ಗುಪ್ತರ ಕಾಲದ ಶೈಲಿಯಲ್ಲಿವೆ, ಉತ್ತರ ಹಾಗೂ ದಕ್ಷಿಣ ಭಾರತದ ಸಮಾಗಮವಾದ ಶಿಖರ ಶೈಲಿಯನ್ನೂ ಕಾಣಬಹುದು.
- ಆಗ್ನೇಯ ಏಷ್ಯದ ಪ್ರತಿಯೊಂದು ದೇಶದಲ್ಲಿಯೂ ಭಾರತೀಯ ಪ್ರಭಾವವನ್ನು ಕಾಣಬಹುದು. ಭಾರತೀಯ ಸಾಂಸ್ಕøತಿಕ ಪ್ರವಾಹ ನಿಯಮಿತವಾಗಿ ಇಡೀ ಏಷ್ಯದಲ್ಲಿ ಹರಿದಿದೆ ಏಷ್ಯಖಂಡಕ್ಕೆ ಒಂದು ಏಕರೂಪತೆಯನ್ನು ತಂದುಕೊಟ್ಟದ್ದು ಭಾರತೀಯ ಸಂಸ್ಕøತಿಯೆಂದು ಹೇಳಬಹುದು. ಬೌದ್ಧಧರ್ಮ ತಾರೀಮ್‍ಕೊಳ್ಳವನ್ನು ದಾಟಿ ಏಷ್ಯವನ್ನು ಪ್ರವೇಶಿಸಿದ್ದು ಏಷ್ಯದ ಐಕ್ಯದ ಮೊದಲ ಘಟ್ಟ. ಗುಪ್ತರ ಸುವರ್ಣ ಯುಗದಲ್ಲಿ ಮಹಾಯಾನ ಬೌದ್ಧಮತ ಮಧ್ಯ ಏಷ್ಯದಲ್ಲಿ ಹಬ್ಬಿದುದು ಏಷ್ಯದ ಐಕ್ಯದ ಎರಡನೆಯ ಘಟ್ಟ. ಈ ಕಾಲದಲ್ಲಿಯೇ ಭಾರತೀಯ ಸಾಂಸ್ಕøತಿಕ ಪ್ರತಿನಿಧಿಗಳು ಚೀನ, ಇಂಡೊನೇಷ್ಯ ಮುಂತಾದ ದೇಶಗಳಿಗೆ ಹೋದರು. ಏಷ್ಯದ ಬೇರೆ ಬೇರೆ ದೇಶಗಳಲ್ಲಿ ಸಂಸ್ಕøತಿ ಗ್ರಂಥಗಳ ಭಾಷಾಂತರಗಳಾದುವು. ದ್ವೀಪಾಂತರ ಭಾರತದಲ್ಲಿ ಭಾರತೀಯ ವಸಾಹತುಗಳು ಸ್ಥಾಪಿಸಲ್ಪಟ್ಟುವು. ಪೂರ್ವಭಾಗದಲ್ಲಿ ಉರ್ಜಿತಾವಸ್ಥೆಗೆ ಬಂದ ಪಾಲಚಕ್ರವರ್ತಿಗಳ ಕಾಲದಲ್ಲಿ ಕಲೆ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಉಂಟಾದ ತಾಂತ್ರಿಕ ಪುನರುಜ್ಜೀವನ ಹಾಗೂ ಸಾಗರೋತ್ತರ ಧರ್ಮಪ್ರಸಾರದ ಚಟುವಟಿಕೆಗಳು ಏಷ್ಯದ ಐಕ್ಯದ ಮೂರನೆಯ ಘಟ್ಟ. ಓದಂತಪುರಿ, ಜಗದ್ದಲ, ವಿಕ್ರಮಪುರಿ ಪುಲೇರಾ ಮತ್ತು ದೇವಿಕೋಟ ವಿಶ್ವವಿದ್ಯಾಲಯಗಳು ಈ ಪುನರುಜ್ಜೀವನದ ಆಂದೋಲನದ ಕೇಂದ್ರಗಳಾಗಿದ್ದುವು. ಮಹಾಯಾನ, ವಜ್ರಾಯನ, ಸಹಜಾಯಕ, ವೈಷ್ಣವಕ ಮತ್ತು ತಾಂತ್ರಿಕ ಪಂಥಗಳು ಏಷ್ಯದಲ್ಲಿ ಹಬ್ಬಿದುವು. ನೇಪಾಳ, ಟಿಬೆಟ್, ಇಂಡೊನೇಷ್ಯ, ಮಲಯ, ಥೈಲ್ಯಾಂಡ್, ಕಾಂಬೋಡಿಯ ಮೊದಲಾದೇಶಗಳ ಸಾಂಸ್ಕøತಿಕ ಬೆಳೆವಣಿಗೆಗೆ ಭಾರತ ಮಾದರಿಯಾಯಿತು. ಈ ಪಂಥಗಳ ಸಂಯೋಗದಿಂದ ಆಗ್ನೇಯ ಏಷ್ಯದಲ್ಲಿ ಒಂದು ಹೊಸ ಕಲಾಭಿವ್ಯಕ್ತಿ ರೂಪುಗೊಂಡಿತು. ಭವ್ಯ ಹಾಗೂ ಆತಿಮಾನುಷವಾದ ಬೌದ್ಧ ಹಾಗೂ ವೈಷ್ಣವ ಮಂದಿರಗಳಾದ ಬೋರ ಬದೂರ್, ಪ್ರಾಂಬನನ್, ಅಂಗಕೋರ, ಥೋಮ (ನಾಗರಧಾಮ) ಮತ್ತು ಪೇಗನ್‍ಗಳಲ್ಲಿ (ಅರಿಮರ್ದನಪುರ) ಭಾರತೀಯ ಕಲೆ ಹಾಗೂ ವಾಸ್ತು ಶಿಲ್ಪಗಳು ತಮ್ಮ ವೈಭವದ ಶಿಖರ ಮುಟ್ಟಿದುವು.
- ಆಗ್ನೇಯ ಏಷ್ಯದಲ್ಲಿ ಬೃಹದ್-ಭಾರತವನ್ನು ಕಟ್ಟಿದ ಇತಿಹಾಸ ಸುಮಾರು ಎರಡು ಸಾವಿರ ವರ್ಷ ಕಾಲಾವಧಿಯುಳ್ಳದ್ದು. ಬ್ರಾಹ್ಮಣ, ಬೌದ್ಧ ಹಾಗೂ ತಾಂತ್ರಿಕ ಕಲೆಗಳ ಸಹಾಯದಿಂದಲೇ ಭಾರತ ಆಗ್ನೇಯ ಏಷ್ಯದಲ್ಲಿ ತನ್ನ ಮಹತ್ಕಾರ್ಯ ಸಿದ್ಧಿಯನ್ನು ಪಡೆಯಿತು, ಯೂ
- ರೋಪಿನ ಒಕ್ಕೂಟಕ್ಕೆ ಕ್ರೈಸ್ತಧರ್ಮ ಕಾರಣವಾಗಿದ್ದರೆ ಆಗ್ನೇಯ ಏಷ್ಯದ ಏಕೀಕರಣಕ್ಕೆ ಭಾರತ ಕಾರಣವಾಯಿತೆಂದು ಹೇಳಬಹುದು. ಆದರೆ ಹದಿನಾಲ್ಕನೆಯ ಶತಮಾನದಲ್ಲಿ ಇಸ್ಲಾಮ್ ಧರ್ಮದ ಧಾಳಿಯಿಂದ ಏಷ್ಯ ಭಿನ್ನ ಭಿನ್ನವಾಯಿತು. ಇಸ್ಲಾಮಿನ ಸಂಸ್ಕøತಿ, ಭಾಷೆ, ಧರ್ಮ ಜನರ ಮೇಲೆ ಹೇರಲ್ಪಟ್ಟವು.
- ಆಗ್ನೇಯ ಏಷ್ಯದೊಡನೆ ನಿಕಟವಾಗಿದ್ದ ಭಾರತದ ಸಂಪರ್ಕಕ್ಕೆ ತಡೆಯುಂಟಾಯಿತು. ಹದಿನಾರನೆಯ ಶತಮಾನದ ಪ್ರಾರಂಭದಲ್ಲಿ ಪೋರ್ಚುಗೀಸರು ಮಲಾಕ್ಕಾವನ್ನು ಗೆದ್ದರು. ಅಂದಿನಿಂದ ನೂತನ ಏಷ್ಯದ ಇತಿಹಾಸದಲ್ಲಿ ಯೂರೊಪಿನ ಪ್ರಕರಣ ಪ್ರಾರಂಭವಾಯಿತು. ಇಂಗ್ಲಿಷರು, ಫ್ರೆಂಚರು ಹಾಗೂ ಡಚ್ಚರು ಏಷ್ಯದಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಭಾರತ ಇಂಗ್ಲಿಷರ ವಸಾಹತು ಆಯಿತು. ಬೃಹದ್ ಭಾರತದ ಇತಿಹಾಸ ಅಲ್ಲಿಗೆ ನಿಂತಿತು. ಮೊದಲಿನ ವಿಜ್ಞಾನ ಮತ್ತು ತಂತ್ರವಿದ್ಯೆ, ವ್ಯಾಪಾರ ಮತ್ತು ಸಂಸ್ಕøತಿ, ಕಲೆ ಮತ್ತು ಸಾಹಿತ್ಯ, ಧರ್ಮ ಮತ್ತು ತತ್ತ್ವ ಜ್ಞಾನದ ಕ್ಷೇತ್ರಗಳಲ್ಲಿ ಭಾರತದ ಕೊಡುಗೆ ಎಷ್ಟಿತ್ತೆಂಬುದನ್ನು ಕೂಲಂಕಷವಾಗಿ ಇನ್ನೂ ಅಭ್ಯಸಿಸಬೇಕಾಗಿದೆ. ಎರಡನೆಯ ಮಹಾಯುದ್ಧದ ಅನಂತರ ಯೂರೋಪಿನರ ಏಷ್ಯದ ವಸಾಹತುಗಳೆಲ್ಲ ಸ್ವತಂತ್ರವಾದ ಮೇಲೆ ಸ್ವತಂತ್ರ್ಯ ಏಷ್ಯದ ಇತಿಹಾಸ ಪ್ರಾರಂಭವಾಯಿತು. ಭಾರತ ಇಂದು ಬೃಹದ್ ಭಾರತದಲ್ಲದಿದ್ದರೂ ಆಗ್ನೇಯ ಏಷ್ಯದ ಆಗುಹೋಗುಗಳಲ್ಲಿ ಬಲುಮುಖ್ಯ ಪಾತ್ರವಹಿಸುತ್ತಿದೆ.
- ಫುನಾನ್ (ದಕ್ಷಿಣ ಸಯಾಮ್), ಹರಿಪುಂಜಯ (ಉತ್ತರ ಸಯಾಮ್), ದ್ವಾರಾವತಿ (ಮಧ್ಯ ಸಯಾಮ್, ಶ್ರೀವಿಜಯ (ಸುಮಾತ್ರ), ಪಾನ್ ಪಾನ್ (ಬ್ಯಾಂಡನ್ ಆಖಾತ), ಲಂಕುಶಕ (ಕೇಡಾಹ್ ಮತ್ತು ಪೆರಾಕ್), ತಾಮ್ರಲಿಂಗ (ಪೂರ್ವಮಲಯ) ಮತ್ತು ರಮಣದೇಶಗಳು (ಕೆಳಗಿನ ಬರ್ಮ) ಹಿಂದೂ ಹಾಗೂ ಬೌದ್ಧ ಸಂಸ್ಕøತಿ ಮತ್ತು ಅಧ್ಯಯನದ ಕೇಂದ್ರಗಳಾಗಿದ್ದುವು. ಆಗ್ನೇಯ ಏಷ್ಯದ ಜನರು ಭಾರತೀಯ ಸಂಸ್ಕøತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಲ್ಲಿಯಭಾಷೆ, ಸಾಹಿತ್ಯ, ಸಾಮಾಜಿಕ ರೀತಿ ನೀತಿಗಳನ್ನು ತಮ್ಮವನ್ನಾಗಿಮಾಡಿಕೊಂಡರು. ಪ್ರಪಂಚದ ಕೆಲವು ಧರ್ಮಗಳು ರಕ್ತಪಾತದಿಂದ ಕೂಡಿದ್ದು ಬಲಾತ್ಕಾರವಾಗಿ ಹೇರಿದವುಗಳಾದರೆ ಬೃಹದ್-ಭಾರತದ ಸ್ಥಾಪನೆ ಶಾಂತಿಮಯವಾಗಿತ್ತೆಂಬುದು ಅತ್ಯಂತ ಮಹತ್ತ್ವದ ವಿಷಯ.
(ಡಿ.ಎಚ್.ಕೆ.)