ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಿಶ್ರ ಇಂಧನ ಕಾರು

ವಿಕಿಸೋರ್ಸ್ದಿಂದ

ಮಿಶ್ರ ಇಂಧನ ಕಾರು - ವರ್ಷಗಳು ಕಳೆದಂತೆ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವುದು ಸಾಮಾನ್ಯವಾಗಿದೆ. ಈ ಕಾರಣದಿಂದಲೇ ಕಡಿಮೆ ಇಂಧನವನ್ನು ಬಳಸಿಕೊಂಡು ಹೆಚ್ಚು ದೂರ ಕ್ರಮಿಸಬಲ್ಲ ವಾಹನಗಳನ್ನು ಉತ್ಪಾದಿಸಲು ಮಾರುಕಟ್ಟೆಯಲ್ಲಿ ದಿನೇ ದಿನೇ ಪೈಪೋಟಿ ಹೆಚ್ಚುತ್ತಿದೆ. ಈ ಬೆಳವಣಿಗೆಯ ಜೊತೆಗೆ ವಾಯುಮಾಲಿನ್ಯದ ಸಮಸ್ಯೆ ಕೂಡ ನಮ್ಮೆಲ್ಲರನ್ನು ಕಾಡುತ್ತಿರುತ್ತದೆ. ಇತ್ತೀಚೆಗೆ, ವಾಹನ ತಯಾರಿಕಾ ಸಂಸ್ಥೆಗಳು ಅತ್ಯುನ್ನತ ಆಧುನಿಕ ತಂತ್ರe್ಞÁನವನ್ನು ಬಳಸಿಕೊಂಡು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯೋನ್ಮುಖವಾಗಿವೆ. ಇದರ ಫಲವೇ ಮಿಶ್ರ ಇಂಧನ ಕಾರಿನ ಉಗಮ. ಇಂತಹ ಕಾರುಗಳು ಈಗಾಗಲೇ ಅಮೆರಿಕದ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿವೆ. ಈಗಾಗಲೇ ಹಲವಾರು ಪ್ರಮುಖ ಕಾರು ತಯಾರಿಕಾ ಸಂಸ್ಥೆಗಳು ಈ ರೀತಿಯ ಮಿಶ್ರ ಇಂಧನ ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಆರಂಭಿಸಿವೆ. ಮಿಶ್ರ ಇಂಧನ ಕಾರು (ಹೈಬ್ರಿಡ್ ಕಾರು) ಎಂದೊಡನೆ ಇಂತಹ ಕಾರುಗಳಿಗೆ ಮಿಶ್ರ ಇಂಧನ ಕಾರುಗಳು ಎಂದು ಹೆಸರಿಸಲು ಕಾರಣವೇನು, ಅವುಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಇವು ಕಡಿಮೆ ಇಂಧನ ಬಳಸುತ್ತಿವೆಯೇ, ಪರಿಸರ ಪ್ರೇಮಿಯಾಗಿವೆಯೇ ಮತ್ತು ಅವುಗಳು ನಮಗೆ ಎಷ್ಟು ಉಪಯುಕ್ತ ಎಂಬ ವಿಷಯಗಳು ಮುಖ್ಯವಾಗುತ್ತವೆ. ಈ ದಿಸೆಯಲ್ಲಿ ಕಾರು ತಯಾರಿಕಾ ಸಂಸ್ಥೆಗಳು ಮಿಶ್ರ ಇಂಧನ ಕಾರುಗಳ ತಯಾರಿಕೆಯಲ್ಲಿ ಸಾಕಷ್ಟು ಮಟ್ಟಿಗೆ ಜಯ ಸಾಧಿಸಿವೆ ಹಾಗೂ ಈ ರೀತಿಯ ಕಾರುಗಳಿಂದ ನಮಗೆ ಅನೇಕ ವಿಧದ ಲಾಭ ಎಂಬುದು ಮುಖ್ಯವಾದ ಸಂಗತಿಗಳು. ಮಿಶ್ರ ಇಂಧನ ಕಾರು ಎಂದರೇನು ? ಯಾವುದೇ ವಾಹನವು ರಸ್ತೆಯಲ್ಲಿ ಚಲಿಸುವುದಕ್ಕಾಗಿ ಎರಡಕ್ಕಿಂತ ಹೆಚ್ಚಿನ ಶಕ್ತಿ ಮೂಲಗಳನ್ನು ಏಕಕಾಲದಲ್ಲಿ ಬಳಸಿಕೊಂಡರೆ ಆ ವಾಹನಗಳನ್ನು ಮಿಶ್ರ ಇಂಧನ ವಾಹನಗಳೆಂದು ಕರೆಯಬಹುದು. ಉದಾಹರಣೆಗೆ ಸಾಮಾನ್ಯ ಜನರು ಬಳಸುವ ಮೊಪೆಡ್‍ಅನ್ನೇ ಪರಿಶೀಲಿಸಿದರೆ ಇದೊಂದು ಮಿಶ್ರ ಇಂಧನ ದ್ವಿಚಕ್ರ ವಾಹನವೆಂದು ಕರೆಯಬಹುದು. ಇದು ಪೆಟ್ರೋಲ್ ಸಹಾಯದಿಂದ ಚಲಿಸುವುದಲ್ಲದೆ ಪೆಡಲ್ ಶಕ್ತಿಯನ್ನೂ ಹೊಂದಿರುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ಬಹಳಷ್ಟು ಮಿಶ್ರ ಇಂಧನ ವಾಹನಗಳನ್ನು ನೋಡುತ್ತಿರುತ್ತೇವೆ. ಇಂದಿನ ಕೆಲವು ಬೃಹತ್ ಗಣಿಗಾರಿಕಾ ವಾಹನಗಳು ಡೀಸಲ್ ಮತ್ತು ವಿದ್ಯುತ್ತನ್ನು ಒಟ್ಟಿಗೆ ಬಳಸಿಕೊಳ್ಳುತ್ತವೆ. ಜಲಾಂತರ್ಗಾಮಿ (ಸಬ್‍ಮೆರಿನ್) ವಾಹನಗಳು ಕೂಡ ಮಿಶ್ರ ಇಂಧನ ವಾಹನಗಳೇ. ಅದರಲ್ಲಿ ಕೆಲವು ಅಣುಶಕ್ತಿ ಮತ್ತು ವಿದ್ಯುತ್ತನ್ನು ಬಳಸಿಕೊಂಡರೆ ಇನ್ನು ಕೆಲವು ಡೀಸಲ್ ಮತ್ತು ವಿದ್ಯುತ್ತನ್ನು ಒಟ್ಟಿಗೆ ಬಳಸಿಕೊಳ್ಳುತ್ತವೆ. ಆದರೆ ಈಗಷ್ಟೇ ಕಾರು ತಯಾರಿಕಾ ಸಂಸ್ಥೆಗಳು ಇಂತಹ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಮಿಶ್ರ ಇಂಧನ ಕಾರುಗಳನ್ನು ತಯಾರಿಸಲು ಪ್ರಾರಂಭಿಸಿವೆ. ಮಿಶ್ರ ಇಂಧನ ಕಾರಿನ ವಿನ್ಯಾಸ ನಾವೆಲ್ಲರೂ ವಿದ್ಯುತ್ ಚಾಲಿತ ಕಾರುಗಳ ಬಗ್ಗೆ ಕೇಳಿದ್ದೇವೆ ಹಾಗೂ ನೋಡಿಯೂ ಇದ್ದೇವೆ. ಇಂದು ಸಾಮಾನ್ಯವಾಗಿರುವ ಪೆಟ್ರೋಲ್ ಅಥವಾ ಡೀಸಲ್‍ನಿಂದ ಚಲಿಸುವ ಕಾರು ಮತ್ತು ವಿದ್ಯುತ್ ಕಾರುಗಳ ಮಿಶ್ರಣವೇ ಈ ಮಿಶ್ರ ಇಂಧನ ಕಾರುಗಳು. ಕೆಳಗಿರುವ ಚಿತ್ರಗಳಿಂದ ಇಂತಹ ಕಾರುಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳೋಣ. ಚಿತ್ರ 1ರಲ್ಲಿ ತೋರಿಸಿರುವಂತೆ ಕಾರು ಇಂಧನದ ಸಹಾಯದಿಂದ ಶಕ್ತಿಯನ್ನು ಉತ್ಪಾದಿಸಿ ಕಾರಿನ ಚಕ್ರಗಳನ್ನು ತಿರುಗುವಂತೆ ಮಾಡುವುದರಿಂದ ಕಾರು ಚಲಿಸುತ್ತದೆ. ಅದೇ ರೀತಿ ಚಿತ್ರ 2ರಲ್ಲಿ ನೋಡುವ ಹಾಗೆ ವಿದ್ಯುತ್ತನ್ನು ಶೇಖರಿಸಿಟ್ಟಿರುವ ಬ್ಯಾಟರಿಗಳ ಸಹಾಯದಿಂದ ಮೋಟರ್ ಚಾಲನೆಗೊಂಡು ಇದರಿಂದ ಕಾರಿನ ಚಕ್ರಗಳು ತಿರುಗಿ ಕಾರು ಚಲಿಸುತ್ತದೆ. ಇವು ಕೇವಲ ಇಂಧನದಿಂದ ಅಥವಾ ವಿದ್ಯುತ್ತಿನಿಂದ ಚಲಿಸುವ ಕಾರುಗಳಾಗಿವೆ. ವಿದ್ಯುತ್ ಹಾಗೂ ಇಂಧನವನ್ನು ಒಟ್ಟಿಗೆ ಬಳಸಿಕೊಳ್ಳುವ ಮಿಶ್ರ ಇಂಧನ ಕಾರುಗಳನ್ನು ಎರಡು ರೀತಿಯನ್ನಾಗಿ ವಿಂಗಡಿಸಬಹುದು. ಸಮಾನಾಂತರ (ಠಿಚಿಡಿಚಿಟಟeಟ hಥಿbಡಿiಜ) ಮಿಶ್ರ ಇಂಧನ ಕಾರು ಸರಣಿ (seಡಿies ಊಥಿbಡಿiಜ) ಮಿಶ್ರ ಇಂಧನ ಕಾರು


1. ಸಮಾನಾಂತರ ಮಿಶ್ರ ಇಂಧನ ಕಾರು: ಈ ಕಾರಿನಲ್ಲಿ ಇಂಧನದ ತೊಟ್ಟಿಯಿಂದ ಎಂಜಿನ್ನಿಗೆ ಇಂಧನವು ಸರಬರಾಜಾಗುವುದು ಒಂದೆಡೆಯಾದರೆ ಬ್ಯಾಟರಿಗಳಲ್ಲಿರುವ ವಿದ್ಯುತ್ ಮೋಟಾರಿಗೆ ಸರಬರಾಜಾಗುತ್ತದೆ. ಇದರಲ್ಲಿ ಎಂಜಿನ್ ಮತ್ತು ಮೋಟಾರ್ ಒಟ್ಟಿಗೆ ಕಾರ್ಯನಿರ್ವಹಿಸಿ ಚಕ್ರಗಳನ್ನು ತಿರುಗುವಂತೆ ಮಾಡುತ್ತವೆ. ಚಿತ್ರ 3ರಲ್ಲಿ ಇರುವಂತೆ ಕಾರಿನ ಎಂಜಿನ್ ಇಂಧನದ ತೊಟ್ಟಿಯಿಂದ ಇಂಧನವನ್ನು ಬಳಸಿಕೊಳ್ಳುವುದರ ಮೂಲಕ ಚಾಲನೆಗೊಂಡು ಅದರಿಂದ ಕಾರಿನ ಚಕ್ರಗಳು ತಿರುಗಿದರೆ ಇನ್ನೊಂದೆಡೆ ಬ್ಯಾಟರಿಗಳಿಂದ ಶೇಖರಿಸಿದ ವಿದ್ಯುತ್ತಿನ ಸಹಾಯದಿಂದ ಮೋಟಾರ್ ಚಾಲನೆಗೊಂಡು ನಂತರ ಇದರಿಂದ ಕಾರಿನ ಚಕ್ರಗಳು ತಿರುಗುವಂತೆ ಜೋಡಿಸಲಾಗಿದೆ. ಇದರ ಪರಿಣಾಮವಾಗಿ ಇಂಧನ ಹಾಗೂ ವಿದ್ಯುತ್ ಒಟ್ಟಿಗೆ ಕಾರ್ಯನಿರ್ವಹಿಸಿ ಕಾರಿಗೆ ಚಾಲನಾ ಶಕ್ತಿಯನ್ನು ಒದಗಿಸುತ್ತವೆ. 2. ಸರಣಿ ಮಿಶ್ರ ಇಂಧನ ಕಾರು: ಈ ರೀತಿಯ ಕಾರಿನಲ್ಲಿ ಇಂಧನದ ಸಹಾಯದಿಂದ ವಿದ್ಯುದುತ್ಪಾದಕ (ಜನರೇಟರ್) ಚಲಿಸಿ ನಂತರ ಈ ವಿದ್ಯುದುತ್ಪಾದಕದಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಬ್ಯಾಟರಿಗಳಲ್ಲಿ ಶೇಖರಿಸುವುದಕ್ಕಾಗಲಿ ಅಥವಾ ವಿದ್ಯುತ್ ಮೋಟಾರನ್ನು ಚಲಿಸುವುದಕ್ಕಾಗಲಿ ಬಳಕೆಯಾಗುತ್ತದೆ. ಇದರಿಂದ ನಾವು ಗಮನಿಸಬಹುದಾದ ಅಂಶವೇನೆಂದರೆ ಇಂಧನದ ನೇರ ಸಹಾಯದಿಂದ ವಾಹನವು ಚಲಿಸದೆ ವಿದ್ಯುದುತ್ಪಾದಕ ಮತ್ತು ಬ್ಯಾಟರಿಗಳ ಮೂಲಕ ವಾಹನ ಚಲಿಸುತ್ತದೆ. ಚಿತ್ರ 4ನ್ನು ಗಮನಿಸಿದರೆ ಈ ಸರಣಿ ಮಿಶ್ರಣದಲ್ಲಿ ಮೊದಲು ಇಂಧನ ತೊಟ್ಟಿ ನಂತರ ಇನ್ನಿತರ ಭಾಗಗಳು ಒಂದರ ನಂತರ ಇನ್ನೊಂದಕ್ಕೆ ಕೂಡಿಕೊಂಡಿದ್ದು ಇವೆಲ್ಲವೂ ಸೇರಿ ಕಾರಿನ ಎಂಜಿನ್ ಚಲಿಸುವಂತೆ ಮಾಡುತ್ತದೆ. ಮಿಶ್ರ ಇಂಧನ ಕಾರಿನ ಭಾಗಗಳ ವಿವರ: ಮಿಶ್ರ ಇಂಧನ ಕಾರಿನಲ್ಲಿ ಬಳಕೆಯಾಗುವ ಕೆಲವು ಮುಖ್ಯ ಭಾಗಗಳ ಬಗ್ಗೆ ತಿಳಿದುಕೊಳ್ಳೋಣ. ಇಂಧನ ಚಾಲಿತ ಎಂಜಿನ್: ಮಿಶ್ರ ಇಂಧನ ಕಾರಿನಲ್ಲಿ ಇತರ ಸಾಮಾನ್ಯ ಕಾರುಗಳಲ್ಲಿರುವಂತೆ ಪೆಟ್ರೋಲ್ ಅಥವಾ ಡೀಸಲ್ ಚಾಲಿತ ಎಂಜಿನ್ನಿರುತ್ತದೆ. ಆದರೆ ಈ ಮಿಶ್ರ ಇಂಧನ ಕಾರಿನ ಎಂಜಿನ್ ಗಾತ್ರದಲ್ಲಿ ಚಿಕ್ಕದಾಗಿದ್ದು ಉನ್ನತ ತಂತ್ರe್ಞÁನದಿಂದ ರೂಪಿತವಾಗಿರುತ್ತದೆ. ಇದರಿಂದ ಹೊಗೆ ಸೂಸುವುದನ್ನು ತಗ್ಗಿಸಿ ಹೆಚ್ಚು ಸಾಮಥ್ರ್ಯವನ್ನು ಒದಗಿಸುವಂತೆ ರೂಪಿಸಲಾಗಿರುತ್ತದೆ. ಇಂಧನ ತೊಟ್ಟಿ: ಮಿಶ್ರ ಇಂಧನ ಕಾರಿನ ಇಂಧನ ತೊಟ್ಟಿಯು ಶಕ್ತಿಯ ಶೇಖರಣೆಯ ಒಂದು ಮುಖ್ಯ ಅಂಗವಾಗಿದೆ. ಬ್ಯಾಟರಿಗಳಿಗಿಂತ ಪೆಟ್ರೋಲ್ ಹೆಚ್ಚು ಸಾಂದ್ರತೆ (ಜeಟಿsiಣಥಿ) ಉಳ್ಳದ್ದಾಗಿದೆ. ಉದಾಹರಣೆಗೆ, ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿಯನ್ನು ಶೇಖರಿಸಲು 1000 ಪೌಂಡ್ ತೂಕದಷ್ಟು ಬ್ಯಾಟರಿಗಳು ಬೇಕಾದರೆ ಅಷ್ಟೇ ಪ್ರಮಾಣದ ಶಕ್ತಿಯನ್ನು ಒಂದು ಗ್ಯಾಲನ್ (7 ಪೌಂಡ್) ಪೆಟ್ರೋಲ್‍ನಿಂದ ಪಡೆಯಬಹುದಾಗಿದೆ. ವಿದ್ಯುತ್ ಮೋಟಾರ್: ಮಿಶ್ರ ಇಂಧನ ಕಾರಿನಲ್ಲಿ ಉಪಯೋಗಿಸುವ ಮೋಟಾರನ್ನು ಬಹಳ ಕ್ಲಿಷ್ಟವಾಗಿ ಹಾಗೂ ಸೂಕ್ಷ್ಮವಾಗಿ ವಿನ್ಯಸಿಸಲಾಗಿದೆ. ಉನ್ನತ ವಿದ್ಯುನ್ಮಾನ ತಂತ್ರe್ಞÁನದಿಂದ ಈ ಯಂತ್ರವು ಮೋಟಾರಿನಂತೆಯೂ ಹಾಗೂ ವಿದ್ಯುತ್ತನ್ನು ಉತ್ಪಾದಿಸುವ ವಿದ್ಯುದುತ್ಪಾದಕದಂತೆಯೂ ಕೆಲಸ ನಿರ್ವಹಿಸಬಲ್ಲದ್ದಾಗಿದೆ. ಉದಾಹರಣೆಗೆ, ಅಗತ್ಯವಿದ್ದಲ್ಲಿ ಈ ಮೋಟಾರು ಬ್ಯಾಟರಿಯಲ್ಲಿ ಶೇಖರಿಸಿರುವ ವಿದ್ಯುತ್ತನ್ನು ಬಳಸಿಕೊಂದು ಕಾರನ್ನು ಚಲಿಸುವಂತೆ ಮಾಡುತ್ತದೆ. ಆದರೆ ಅದೇ ಮೋಟಾರು ವಿದ್ಯುದುತ್ಪಾದಕದಂತೆ ಕೆಲಸ ನಿರ್ವಹಿಸುವಾಗ, ವೇಗವಾಗಿ ಚಲಿಸುತ್ತಿರುವ ಕಾರಿನ ವೇಗವನ್ನು ಕಡಿಮೆಮಾಡಿ ಅಲ್ಲಿ ವ್ಯಯವಾಗುವ ಚಾಲನಾ ಶಕ್ತಿಯನ್ನು (ಞiಟಿeಣiಛಿ eಟಿeಡಿgಥಿ) ಪುನಃ ಬ್ಯಾಟರಿಯಲ್ಲಿ ಶೇಖರಿಸಿಡುವ ಕೆಲಸವನ್ನೂ ನಿರ್ವಹಿಸುತ್ತದೆ. ವಿದ್ಯುದುತ್ಪಾದಕ (ಜನರೇಟರ್): ಈ ಯಂತ್ರವು ನೋಡಲು ವಿದ್ಯುತ್ ಮೋಟಾರಿನಂತಿದೆ. ಆದರೆ ವಿದ್ಯುತ್ಪಾದಕ ವಿದ್ಯುತ್ತನ್ನು ಉತ್ಪಾದಿಸಲು ಬಳಸಲಾಗುತ್ತದೆ. ಈ ವಿದ್ಯುತ್ಪಾದಕವನ್ನು ಸಾಮಾನ್ಯವಾಗಿ ಸರಣಿ ಮಿಶ್ರಿತ ವಾಹನಗಳಲ್ಲಿ ಮಾತ್ರ ಬಳಸಲಾಗುತ್ತದೆ. ಬ್ಯಾಟರಿಗಳು: ಮಿಶ್ರ ಇಂಧನ ಕಾರುಗಳಲ್ಲಿ ಬ್ಯಾಟರಿಯು ವಿದ್ಯುತ್ ಶಕ್ತಿಯನ್ನು ಶೇಖರಿಸಿ ಅದನ್ನು ಮೋಟಾರಿಗೆ ಒದಗಿಸುವಲ್ಲಿ ಸಹಾಯಮಾಡುತ್ತದೆ. ನಮ್ಮ ಸಾಮಾನ್ಯ ಕಾರುಗಳಲ್ಲಿರುವ ಇಂಧನ ತೊಟ್ಟಿಯು ಕೇವಲ ಎಂಜಿನ್ನಿನ ಚಾಲನೆಗೆ ಶಕ್ತಿಯೊದಗಿಸುವಲ್ಲಿ ಮಾತ್ರ ಕೆಲಸ ನಿರ್ವಹಿಸಬಲ್ಲದ್ದಾಗಿದೆ. ಆದರೆ ಮಿಶ್ರ ಇಂಧನ ಕಾರಿನಲ್ಲಿರುವ ವಿದ್ಯುತ್ ಮೋಟಾರ್ ಬ್ಯಾಟರಿಗಳಿಗೆ ವಿದ್ಯುತ್ ಉಣಿಸುವುದಲ್ಲದೆ ಅದರಿಂದಲೇ ವಿದ್ಯುತ್ತನ್ನು ಕೂಡ ಪಡೆದುಕೊಳ್ಳುತ್ತದೆ. ಪ್ರಸಾರಕ (ಣಡಿಚಿಟಿsmissioಟಿ): ಮಿಶ್ರ ಇಂಧನ ಕಾರಿನಲ್ಲಿರುವ ಪ್ರಸಾರಕ ಇತರ ಸಾಮಾನ್ಯ ಕಾರಿನಲ್ಲಿರುವ ಪ್ರಸಾರಕದಂತೆಯೇ ಕೆಲಸ ನಿರ್ವಹಿಸುತ್ತದೆ. ಉದಾಹರಣೆಗೆ ಹೋಂಡ ಇನ್‍ಸೈಟ್ ಎಂಬ ಮಿಶ್ರ ಇಂಧನ ಕಾರನ್ನು ಇತರ ಸಾಂಪ್ರದಾಯಕ ಕಾರಿನ ಪ್ರಸಾರಕದಂತೆಯೇ ವಿನ್ಯಸಿಸಲಾಗಿದೆ. ಆದರೆ ಟಯೋಟಾ ಪ್ರೈಯೂಸ್ (ಖಿoಥಿoಣಚಿ Pಡಿius) ಮಿಶ್ರ ಇಂಧನ ಕಾರನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇಂತಹ ಕ್ಲಿಷ್ಟವಾದ ತಂತ್ರe್ಞÁನ ಏತಕ್ಕೆ? ಎಲ್ಲರೂ ಇಂದು ಪೆಟ್ರೋಲ್ ಚಾಲಿತ ಕಾರುಗಳಿಂದ ತೃಪ್ತರಾಗಿರುವಾಗ ಇಂತಹ ಮಿಶ್ರ ಇಂಧನ ಕಾರಿನ ಅಗತ್ಯವೇನು ಎಂದು ಅನ್ನಿಸಬಹುದು. ಇದಕ್ಕೆ ಪ್ರಮುಖವಾದ ಎರಡು ಕಾರಣಗಳಿವೆ. ಒಂದು ಹೊಗೆಯುಗುಳುವುದನ್ನು ಸಾಕಷ್ಟು ತಗ್ಗಿಸಿ ಮಾಲಿನ್ಯ ತಡೆಗಟ್ಟುವುದು. ಎರಡನೆಯದು ಕಡಿಮೆ ಇಂಧನದಿಂದ ಅತಿ ಹೆಚ್ಚು ದೂರ ಕ್ರಮಿಸುವುದು. ಈ ಎರಡು ಧ್ಯೇಯಗಳು ಒಂದಕ್ಕೊಂದು ಆಂತರಿಕವಾಗಿ ಅವಲಂಬಿತವಾಗಿವೆ. ಯಾವುದೇ ಒಂದು ದೇಶದಲ್ಲಿ ಅಲ್ಲಿನ ವಾತಾವರಣಕ್ಕನುಗುಣವಾಗಿ ವಾಹನಗಳ ಹೊಗೆಯುಗುಳುವಿಕೆ ಎಷ್ಟು ಪ್ರಮಾಣದಲ್ಲಿರಬೇಕೆಂದು ನಿಗದಿಪಡಿಸಿರುತ್ತಾರೆ. ಈ ಪ್ರಮಾಣವನ್ನು ಸಾಮಾನ್ಯವಾಗಿ ಒಂದು ಮೈಲಿಗೆ ಇತಿಷ್ಟು ಗ್ರಾಂ ಎಂಬ ಲೆಕ್ಕದಲ್ಲಿ ಅಳೆಯಲಾಗುತ್ತದೆ. ಉದಾಹರಣೆಗೆ, ಕಡಿಮೆ ಹೊಗೆ ಸೂಸುವ ಒಂದು ವಾಹನದ ಕಾರ್ಬನ್ ಮೊನಾಕ್ಸೈಡ್ ಪ್ರಮಾಣವು ಪ್ರತಿ ಮೈಲಿಗೆ 3.4 ಗ್ರಾಂ ಇರುತ್ತದೆ. ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯ ಅಂಶವೇನೆಂದರೆ ಕ್ರಮಿಸುವ ದೂರ ಮತ್ತು ವಾಹನದಿಂದಾಗುವ ಮಾಲಿನ್ಯವು ಒಂದಕ್ಕೊಂದು ಅವಲಂಬಿತವಾಗದಿರುವುದು. ಆದರೆ ಕಾರು ಒಂದು ಮೈಲಿ ದೂರ ಕ್ರಮಿಸುವುದಕ್ಕೆ ದುಪ್ಪಟ್ಟು ಇಂಧನ ಸುಟ್ಟರೆ ಅದರಿಂದ ಸುಮಾರು ದ್ವಿಗುಣ ಮಾಲಿನ್ಯ ಉಂಟಾಗುತ್ತದೆ. ಕಾರಿಗೆ ಮಾಲಿನ್ಯ ನಿಯಂತ್ರಣ ಉಪಕರಣಗಳನ್ನು ಅಳವಡಿಸುವುದರಿಂದ ಆಗಬಹುದಾದ ಮಾಲಿನ್ಯವನ್ನು ತಗ್ಗಿಸಬಹುದಾಗಿದೆ. ಇದಕ್ಕೆ ಕಾರು ಬಳಸಿಕೊಳ್ಳುವ ಇಂಧನದ ಪ್ರಮಾಣವನ್ನು ಕಡಿಮೆಗೊಳಿಸಿದರೆ ಈ ಸಮಸ್ಯೆಯನ್ನು ನಿವಾರಿಸುವುದು ಖಂಡಿತವಾಗಿಯೂ ಸಾಧ್ಯ. ಮಿಶ್ರ ಇಂಧನ ಕಾರಿನ ಉಗಮ ಯಾವುದೇ ಕಾರನ್ನು ಕೊಳ್ಳುವ ಅಥವಾ ಚಾಲನೆ ಮಾಡುವ ಮುನ್ನ ನಾವೆಲ್ಲರೂ ಈ ಕೆಳಕಂಡ ಅಂಶಗಳನ್ನು ಗಮನಿಸುತ್ತೇವೆ. ಕಾರಿಗೆ ಒಮ್ಮೆ ಇಂಧನ ಭರ್ತಿ ಮಾಡಿದರೆ ಅದು ಸುಮಾರು 300 ಮೈಲಿಗಳಾದರೂ ಸತತವಾಗಿ ಓಡಬೇಕು. ಇಂಧನ ತುಂಬುವ ಕೆಲಸ ಸುಲಭ ಹಾಗೂ ಬೇಗ ಆಗಬೇಕು ರಸ್ತೆಯಲ್ಲಿ ಸಂಚರಿಸುವ ಇತರ ಬೇರೆ ವಾಹನಗಳಿಗಿಂತ ಹಿಂದುಳಿಯದೆ ಬೇಗನೆ ಚಲಿಸುವಂತಿರಬೇಕು. ಈ ಎಲ್ಲಾ ಅಂಶಗಳನ್ನೂ ನಾವು ಇಂದು ಬಳಸುತ್ತಿರುವ ಪೆಟ್ರೋಲ್ ಚಾಲಿತ ಕಾರಿನಲ್ಲಿ ಪಡೆಯಬಹುದು. ಆದರೆ ಈ ಕಾರುಗಳು ಸಾಕಷ್ಟು ವಾಯುಮಾಲಿನ್ಯಕ್ಕೆ ಕಾರಣವಾಗಿವೆ. ಇನ್ನೊಂದೆಡೆ ವಿದ್ಯುತ್ ಚಾಲಿತ ಕಾರುಗಳು ಯಾವುದೇ ಹೊಗೆ ಸೂಸದೆ ಪರಿಸರ ಪ್ರೇಮಿಯಾಗಿವೆ. ಆದರೆ ಈ ಕಾರುಗಳು ಅದರಲ್ಲಿರುವ ಬ್ಯಾಟರಿಯ ಸಹಾಯದಿಂದ ಕೇವಲ 50ರಿಂದ 100 ಮೈಲಿಗಳ ದೂರ ಕ್ರಮಿಸಬಲ್ಲವಷ್ಟೆ. ಮತ್ತೊಂದು ತೊಂದರೆ ಏನೆಂದರೆ ಅದರಲ್ಲಿರುವ ಬ್ಯಾಟರಿಗಳಲ್ಲಿ ಪುನಃ ಶಕ್ತಿ ತುಂಬಿಸಲು (ಚಾರ್ಜ್ ಮಾಡಲು) ಬಹಳ ಸಮಯ ತೆಗೆದುಕೊಳ್ಳುವುದರಿಂದ ಅದನ್ನು ಅವಲಂಭಿಸುವುದು ಕಷ್ಟವಾಗುತ್ತದೆ. ಹೆಚ್ಚು ಸಾಮಥ್ರ್ಯವುಳ್ಳ ಸಣ್ಣ ಎಂಜಿನ್‍ಗಳು ಸಾಮಾನ್ಯವಾಗಿ ನಾವುಗಳು ನೋಡುತ್ತಿರುವ ಹಾಗೆ, ಹೆಚ್ಚು ಸಾಮಥ್ರ್ಯವುಳ್ಳ ಬೇಗನೇ ಚಾಲನಾ ಶಕ್ತಿಯನ್ನು ಪಡೆಯಬಲ್ಲ ಕಾರುಗಳಿಗೆ ದೊಡ್ಡದಾದ ಎಂಜಿನ್ನುಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಚಿಕ್ಕ ಕಾರುಗಳಲ್ಲಿ ಹಗುರವಾದ ಬಿಡಿ ಭಾಗಗಳನ್ನು ಬಳಸಿ ಎಂಜಿನ್ನಿನಲ್ಲಿರುವ ಸಿಲಿಂಡರ್‍ಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಕಾರಿನ ಸಾಮಥ್ರ್ಯ ಶಕ್ತಿಯನ್ನು ಉತ್ತಮಗೊಳಿಸಬಹುದಾಗಿದೆ. ದೊಡ್ಡ ಎಂಜಿನ್ನುಗಳಿಗಿಂತ ಚಿಕ್ಕ ಎಂಜಿನ್ನುಗಳು ಹೆಚ್ಚು ಸಮರ್ಪಕವಾಗಿರುವುದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ. ಅವುಗಳಲ್ಲಿ ಕೆಲವು ಪ್ರಮುಖವಾದ ಅಂಶಗಳೆಂದರೆ ದೊಡ್ಡ ಎಂಜಿನ್ನುಗಳು ಚಿಕ್ಕ ಎಂಜಿನ್ನುಗಳಿಗಿಂತ ಭಾರವಾಗಿರುವುದರಿಂದ ಕಾರು ಪ್ರತಿ ಬಾರಿ ಚಾಲನಾಶಕ್ತಿಯನ್ನು ಗಳಿಸುವುದಕ್ಕೆ, ವೇಗವನ್ನು ಹೆಚ್ಚಿಸುವುದಕ್ಕೆ ಅಥವಾ ದಿಬ್ಬವನ್ನು ಏರುವುದಕ್ಕೆ ಹೆಚ್ಚಿನ ಬಲ ಅಥವಾ ಸಾಮಥ್ರ್ಯ ಬೇಕಾಗುತ್ತದೆ. ಎಂಜಿನ್ನಿನ ಸಿಲಿಂಡ್‍ನಲ್ಲಿರುವ ಪಿಸ್ಟನ್‍ಗಳು ಮತ್ತು ಇತರ ಅಂತರಿಕ ಭಾಗಗಳು ಹೆಚ್ಚು ಭಾರವಾಗಿರುವುದರಿಂದ ಅವುಗಳು ಪ್ರತಿ ಬಾರಿಯೂ ಚಲಿಸುವುದಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಎಂಜಿನ್ನಿನಲ್ಲಿರುವ ಸಿಲಿಂಡರ್‍ಗಳು ಹೆಚ್ಚು ಚಲಿಸುವುದರಿಂದ ಪ್ರತಿ ಸಿಲಿಂಡರ್‍ಗಳು ಹೆಚ್ಚು ಇಂಧನವನ್ನು ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ದೊಡ್ಡ ಎಂಜಿನ್‍ಗಳು ಹೆಚ್ಚು ಸಿಲಿಂಡರ್‍ಗಳನ್ನು ಹೊಂದಿರುತ್ತವೆ. ಎಂಜಿನ್ ಚಾಲನೆಯಲ್ಲಿದ್ದು, ವಾಹನವು ಚಲಿಸದಿದ್ದಾಗಲೂ ಕೂಡ ಪ್ರತಿ ಸಿಲಿಂಡರ್ ಇಂಧನವನ್ನು ವ್ಯಯಮಾಡುತ್ತದೆ. ಈ ಮೇಲಿನ ಅಂಶಗಳಿಂದ ನಾವು ತಿಳಿದುಕೊಳ್ಳುವುದೇನೆಂದರೆ, ಬೇರೆ ರೀತಿಯ ಎಂಜಿನ್ನುಗಳನ್ನು ಹೊಂದಿದ ಒಂದೇ ತರಹದ ಎರಡು ಕಾರುಗಳು ಒಂದೇ ವೇಗದಲ್ಲಿ ಚಲಿಸಿದರೂ ಅವುಗಳು ಬಳಸಿಕೊಳ್ಳುವ ಇಂಧನ ಪ್ರಮಾಣ ಮಾತ್ರ ಬೇರೆ ಬೇರೆಯಾಗಿರುತ್ತದೆ. ಚಿಕ್ಕ ಮತ್ತು ದೊಡ್ಡ ಎಂಜಿನ್ ಹೊಂದಿರುವ ಎರಡು ಕಾರುಗಳು ಸಮನಾಗಿ ಜೊತೆಯಲ್ಲಿ ಚಲಿಸಿದರೂ ತೂಕ ಕಡಿಮೆ ಇರುವ ಚಿಕ್ಕ ಎಂಜಿನ್ ಹೊಂದಿರುವ ಕಾರು ದೊಡ್ಡದ್ದಕ್ಕಿಂತ ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಮತ್ತು ಹೆಚ್ಚು ದೂರ ಕ್ರಮಿಸಬಲ್ಲದ್ದಾಗಿರುತ್ತದೆ. ಮಿಶ್ರ ಇಂಧನ ಕಾರಿನ ಕಾರ್ಯನಿರ್ವಹಣೆ ಮೊದಲೇ ಹೇಳಿರುವಂತೆ ಮಿಶ್ರ ಇಂಧನ ಕಾರುಗಳಲ್ಲಿ ಪ್ರಮುಖವಾದುದೆಂದರೆ ಇತರ ಸಾಮಾನ್ಯ ಕಾರುಗಳಲ್ಲಿರುವ ಪೆಟ್ರೋಲ್ ಎಂಜಿನ್ನಿನ ಗಾತ್ರಕ್ಕಿಂತ ಇವುಗಳ ಎಂಜಿನ್ ಗಾತ್ರಗಳು ಚಿಕ್ಕದಾಗಿರುವುದು. ಈ ಕಾರಣದಿಂದ ಎಂಜಿನ್ನಿನ ಸಾಮಥ್ರ್ಯ ಕೂಡ ಹೆಚ್ಚುತ್ತದೆ. ಆದರೆ ಚಿಕ್ಕ ಎಂಜಿನ್ ಹೊಂದಿರುವ ಕಾರು ಹೆಚ್ಚು ಸಾಮಥ್ರ್ಯವುಳ್ಳ ಎಂಜಿನ್ ಹೊಂದಿರುವ ಬೇರೆ ಕಾರುಗಳೊಂದಿಗೆ ಹೇಗೆ ಸ್ಪರ್ಧಿಸಬಲ್ಲದು ಎಂಬುದನ್ನು ತಿಳಿಯೋಣ. ನಾವು ಒಂದು ಶಕ್ತಿಶಾಲಿ ಎಂಜಿನ್ ಹೊಂದಿರುವ ಹೋಂಡ ಕಾರನ್ನು ಚಿಕ್ಕ ಎಂಜಿನ್ ಮತ್ತು ವಿದ್ಯುತ್ ಮೋಟಾರ್ ಹೊಂದಿರುವ ನಮ್ಮ ಮಿಶ್ರ ಇಂಧನ ಕಾರಿನೊಂದಿಗೆ ಹೋಲಿಸೋಣ. ಹೋಂಡ ಕಾರಿನಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಇರುವುದರಿಂದ ಅದು ಯಾವ ತರಹದ ರಸ್ತೆಯಲ್ಲಾದರೂ ಸುಲಭವಾಗಿ ಚಲಿಸುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಮಿಶ್ರ ಇಂಧನ ಕಾರಿನಲ್ಲಿರುವ ಎಂಜಿನ್ ಹೆಚ್ಚು ಕ್ಲಿಷ್ಟವಿಲ್ಲದ ಹೆದ್ದಾರಿಗಳಲ್ಲಿ ಸುಲಭವಾಗಿ ಚಲಿಸಲು ಅಗತ್ಯವಿರುವ ಶಕ್ತಿಯನ್ನು ಹೊಂದಿದೆಯಾದರೂ ಕಾರು ತನ್ನ ವೇಗವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಬೇಕಾದ ಅಗತ್ಯ ಬಂದಾಗ ಅಥವಾ ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿನ ರಸ್ತೆಗಳನ್ನು ಏರುವಾಗ ಖಂಡಿತವಾಗಿಯೂ ಅದಕ್ಕೆ ಸಹಾಯದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬರುವುದೇ ಆ ಕಾರಿನಲ್ಲಿರುವ ವಿದ್ಯುತ್ ಮೋಟಾರ್ ಮತ್ತು ಬ್ಯಾಟರಿಗಳು. ಈ ವಿದ್ಯುತ್ ಶಕ್ತಿಯ ಸಹಾಯದಿಂದ ಮಿಶ್ರ ಇಂಧನ ವಾಹನಕ್ಕೆ ಅಗತ್ಯವಿರುವ ಹೆಚ್ಚಿನ ಶಕ್ತಿಯನ್ನು ಒದಗಿಸಿ ಬೇರೆ ಸಾದಾರಣ ಕಾರುಗಳಂತೆಯೇ ಇದೂ ಕೂಡ ಕ್ಲಿಷ್ಟ ರಸ್ತೆಯನ್ನು ಸುಲಭವಾಗಿ ಕ್ರಮಿಸುವ ಸಾಮಥ್ರ್ಯ ಪಡೆದುಕೊಳ್ಳುವಂತೆ ಮಾಡಬಹುದು. ಮಿಶ್ರ ಇಂಧನ ಕಾರಿನ ಸಾಮಥ್ರ್ಯ ಚಿಕ್ಕದಾದ ಹಾಗೂ ಸಾಮಥ್ರ್ಯವುಳ್ಳ ಎಂಜಿನ್ ಹೊಂದಿರುವುದರ ಜೊತೆಗೆ ಇಂದಿನ ಮಿಶ್ರ ಇಂಧನ ವಾಹನಗಳಲ್ಲಿ ಇಂಧನವನ್ನು ಉಳಿತಾಯ ಮಾಡಬಲ್ಲ ಇನ್ನೂ ಅನೇಕ ತಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ತಂತ್ರಗಳು ಸಾಧಾರಣವಾಗಿ ಎಲ್ಲಾ ಮಾದರಿಯ ವಾಹನಗಳಿಗೆ ಅನ್ವಯವಾಗುವುದಾದರೂ ಕೆಲವೊಂದು ತಂತ್ರಗಳು ಮಿಶ್ರ ಇಂಧನ ವಾಹನಗಳಿಗೆ ಮಾತ್ರ ಉಪಯೋಗವಾಗುತ್ತವೆ. ಇಂಧನ ಉಳಿತಾಯವಾಗಬಲ್ಲ ಇಂತಹ ಕೆಲವು ತಂತ್ರಗಳು ಈ ರೀತಿಯಾಗಿವೆ: ಹೆಚ್ಚಿನ ಶಕ್ತಿಯನ್ನು ಪಡೆದು ಅದನ್ನು ಬ್ಯಾಟರಿಯಲ್ಲಿ ಸಂಗ್ರಹಿಸುವುದು: ಯಾವುದೇ ಕಾರಿನ ಬ್ರೇಕನ್ನು ಒತ್ತಿದಾಗಲೆಲ್ಲಾ ಕಾರಿನಲ್ಲಿರುವ ಶಕ್ತಿಯು ಪೋಲಾಗುತ್ತದೆ. ಕಾರು ಹೆಚ್ಚು ವೇಗ ಪಡೆದಾಗಲೆಲ್ಲಾ ಅದರಲ್ಲಿನ ಚಾಲನಾ ಶಕ್ತಿಯು (ಞiಟಿeಣiಛಿ eಟಿeಡಿgಥಿ) ಕೂಡ ಹೆಚ್ಚುತ್ತಾ ಹೋಗುತ್ತದೆ. ಕಾರಿನ ಬ್ರೇಕನ್ನು ಒತ್ತಿದಾಗ ಇಂತಹ ಚಾಲನಾಶಕ್ತಿಯು ಉಷ್ಣದ (heಚಿಣ) ರೂಪದಲ್ಲಿ ವ್ಯರ್ಥವಾಗಿಹೋಗುತ್ತದೆ. ವ್ಯರ್ಥವಾಗಿ ಹೋಗುವ ಇಂತಹ ಶಕ್ತಿಯನ್ನು ಪನರುಜ್ಜೀವನಗೊಳಿ ಸುವ (ಡಿegeಟಿeಡಿಚಿಣe) ಮೂಲಕ ಮಿಶ್ರ ಇಂಧನ ಕಾರು ತನ್ನಲ್ಲಿರುವ ಬ್ಯಾಟರಿಯಲ್ಲಿ ಶಕ್ತಿ ಸಂಗ್ರಣಮಾಡಿ ಕೊಂಡು ನಂತರ ಅಗತ್ಯವಿದ್ದಾಗ ಬಳಸಿಕೊಳ್ಳುತ್ತದೆ. ಕಾರಿನ ಬ್ರೇಕನ್ನು ಚಲಾಯಿಸಿದಾಗಲೆಲ್ಲಾ ಕಾರಿನಲ್ಲಿರುವ ವಿದ್ಯುತ್ ಮೋಟಾರ್ ಕೂಡ ಚಾಲನೆಗೊಂಡು ಕಾರು ತನ್ನ ವೇಗವನ್ನು ಕಡಿಮೆಗೊಳಿಸಲು ಅಥವಾ ನಿಲುಗಡೆಗೊಳಿಸಲು ಹೆಚ್ಚು ಸಹಾಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವಿದ್ಯುತ್ ಮೊಟಾರ್ ವಿದ್ಯುದುತ್ಪಾದಕದಂತೆ ಕೆಲಸ ನಿರ್ವಹಿಸಿ ಕಾರು ತನ್ನ ವೇಗವನ್ನು ಕಡಿಮೆಗೊಳಿಸಿದಾಗಲೆಲ್ಲಾ ಉತ್ಪಾದನೆಯಾಗುವ ವಿದ್ಯುತ್ತನ್ನು ತನ್ನ ಬ್ಯಾಟರಿಗಳಲ್ಲಿ ಶೇಖರಿಸುತ್ತದೆ. ಕೆಲವೊಮ್ಮೆ ಎಂಜಿನನ್ನು ಸ್ಥಗಿತಗೊಳಿಸುತ್ತದೆ: ಮಿಶ್ರ ಇಂಧನ ಕಾರುಗಳು ಸದಾಕಾಲ ಪೆಟ್ರೊಲ್ ಎಂಜಿನ್ನನ್ನೇ ಅವಲಂಬಿಸದೇ ತನ್ನಲ್ಲಿರುವ ಪರ್ಯಾಯ ಶಕ್ತಿಮೂಲವಾದ ವಿದ್ಯುತ್ ಮೋಟಾರ್ ಮತ್ತು ಬ್ಯಾಟರಿಗಳನ್ನು ಉಪಯೋಗಿಸಿಕೊಳ್ಳುತ್ತದೆ. ಮಿಶ್ರ ಇಂಧನ ಕಾರು ಸಂಚಾರಿ ಸಿಗ್ನಲ್‍ಗಳಲ್ಲಿ ನಿಂತಿರುವಾಗ ಕೆಲವೊಮ್ಮೆ ಪೆಟ್ರೋಲ್ ಎಂಜಿನ್ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಉನ್ನತ ವಾಯುಚಲನ ಶಾಸ್ತ್ರವನ್ನು (ಚಿeಡಿoಜಥಿಟಿಚಿmiಛಿs) ಬಳಸಿ ಹಿಂದೆಳೆತವನ್ನು (ಜಡಿಚಿg) ಕಡಿಮೆಗೊಳಿಸುವುದು: ಹೆದ್ದಾರಿಯಲ್ಲಿ ವಾಹನವನ್ನು ಚಲಾಯಿಸುತ್ತಿರುವಾಗ ಕಾರಿನ ಎಂಜಿನ್ನಿನಿಂದ ಉತ್ಪತ್ತಿಯಾಗುವ ಬಹುತೇಕ ಶಕ್ತಿಯು ಗಾಳಿಯನ್ನು ತಳ್ಳಿಕೊಂಡು ಮುನ್ನುಗ್ಗುವುದರಲ್ಲೇ ಕಳೆದುಹೋಗುತ್ತದೆ. ಈ ಶಕ್ತಿಯನ್ನು ವಾಯುಚಲನದ ಹಿಂದೆಳೆತ ಅಥವಾ ಪ್ರತಿರೋಧ (ಚಿeಡಿoಜಥಿಟಿಚಿmiಛಿ ಜಡಿಚಿg) ಎಂದು ಕರೆಯುತ್ತಾರೆ. ಇಂತಹ ಪ್ರತಿರೋಧವನ್ನು ಹಲವಾರು ವಿಧಾನಗಳಿಂದ ಕಡಿಮೆಗೊಳಿಸಬಹುದಾಗಿದೆ. ಇದರಲ್ಲಿ ಬಹಳ ಪ್ರಮುಖವಾದ ಅಂಶವೆಂದರೆ ವಾಹನದ ಮುಂಭಾಗದ ವಿನ್ಯಾಸವನ್ನು ಆದಷ್ಟು ಚಿಕ್ಕದಾಗಿ ಮಾಡುವುದು ಹಾಗೂ ಗಾಳಿಯು ವಾಹನದ ಭಾಗಗಳಿಗೆ ನೇರವಾಗಿ ಪ್ರತಿರೋಧವನ್ನು ಒಡ್ಡುವ ಬದಲು ಅವುಗಳ ಮೇಲೆ ಸುಲಭವಾಗಿ ಹಾಯ್ದುಹೋದುವಂತೆ ವಾಹನದ ಮೈಕಟ್ಟಿನ ಕೋನಗಳನ್ನು ಕೋರೆಯಾಗಿ (ಛಿuಡಿve) ವಿನ್ಯಾಸಿಸುವುದು ಅತ್ಯಂತ ಅಗತ್ಯ. ಸ್ಪರ್ಧೆಗಳಲ್ಲಿ ಬಳಸುವ ಕಾರುಗಳಿಗೆ ಹೋಲಿಸಿದರೆ ನಮ್ಮ ಬೃಹದಾಕಾರದ ಬಸ್ಸುಗಳು ಚಲಿಸುವಾಗ ಗಾಳಿಯ ಪ್ರತಿರೋಧ ಶಕ್ತಿಯನ್ನು ಭೇದಿಸಿ ಅತ್ಯಂತ ಶ್ರಮದಿಂದ ಹಾಗೂ ಅಗಾಧ ಶಕ್ತಿಯನ್ನು ಬಳಸಿಕೊಂಡು ಹೇಗೆ ಮುನ್ನುಗ್ಗುತ್ತದೆ ಎಂದು ನೀವೇ ಊಹಿಸಬಹುದು. ಕಾರಿನ ಹೊರಭಾಗದಲ್ಲಿರುವ ಭಾಗಗಳನ್ನು ಕಡಿಮೆಗೊಳಿಸಿ ಅಥವಾ ಅದನ್ನು ಹೊರತುಪಡಿಸಿ ವಿನ್ಯಸಿಸಿದರೆ ವಾಹನವು ವಾಯುಪ್ರತಿರೋಧಶಕ್ತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಅನುಕೂಲವಾಗುತ್ತದೆ. ಕಡಿಮೆ ಪ್ರತಿರೋಧದಿಂದ ತಿರುಗಬಲ್ಲ ಚಕ್ರಗಳ ಬಳಕೆ: ಬಹಳಷ್ಟು ಕಾರುಗಳಲ್ಲಿ ಬಳಸುವ ಚಕ್ರಗಳು ನಿರರ್ಗಳ ಚಲನೆ ಹೊಂದಿದ್ದು, ಅತಿ ಕಡಿಮೆ ಶಬ್ದ ಮಾಡುತ್ತವೆ ಹಾಗೂ ಎಲ್ಲಾ ಪ್ರಾಕೃತಿಕ ಸ್ಥಿತಿಗಳಲ್ಲಿ ಚಲಿಸಬಲ್ಲದ್ದಾಗಿರುತ್ತವೆ. ಆದರೆ ಅವುಗಳ ಸಾಮಥ್ರ್ಯ ಶಕ್ತಿಯು ಮಾತ್ರ ಬಹಳಷ್ಟು ಸಂದರ್ಭಗಳಲ್ಲಿ ಅತ್ಯಂತ ಕಡಿಮೆಯಾಗಿರುತ್ತದೆ. ಈ ಚಕ್ರಗಳೇ ವಾಹನದ ಚಲನೆಗೆ ಬಹಳಷ್ಟು ಹಿಂದೆಳೆತವನ್ನು ಉಂಟುಮಾಡುತ್ತವೆ. ಈ ಕಾರಣದಿಂದಾಗಿ ಮಿಶ್ರ ಇಂಧನ ಕಾರುಗಳಲ್ಲಿ ಬಳಸುವ ಚಕ್ರಗಳನ್ನು ಅತ್ಯಂತ ಸದೃಢವಾಗಿರುವಂತ ಮತ್ತು ಹೆಚ್ಚು ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇದರಿಂದ ನಮ್ಮ ಸಾಧಾರಣ ಚಕ್ರಗಳು ಒಡ್ಡುವ ಹಿಂದೆಳೆತಕ್ಕಿಂತ ಮಿಶ್ರ ಇಂಧನ ಕಾರುಗಳ ಚಕ್ರಗಳು ಹಿಂದೆಳೆತವನ್ನು ಅರ್ಧದಷ್ಟು ಕಡಿಮೆಗೊಳಿಸುತ್ತದೆ. ಹಗುರವಾದ ಪದಾರ್ಥಗಳ ಬಳಕೆ: ಕಾರಿನ ಪೂರ್ಣ ತೂಕವನ್ನು ಕಡಿಮೆಗೊಳಿಸುವುದರಿಂದ ಇಂಧನದಲ್ಲಿ ಹೆಚ್ಚಿನ ಉಳಿತಾಯವಾಗುತ್ತದೆ. ಹಗುರವಾದ ವಾಹನವು ಪ್ರತಿಬಾರಿಯೂ ವೇಗವನ್ನು ಹೆಚ್ಚಿಸುವಾಗ ಅಥವಾ ಏರು ರಸ್ತೆಗಳಲ್ಲಿ ಚಲಿಸುವಾಗ ತನ್ನಲ್ಲಿರುವ ಶಕ್ತಿಯನ್ನು ಮಿತವಾಗಿ ಬಳಸುತ್ತದೆ. ಕಾರಿನ ನಿರ್ಮಾಣಕ್ಕೆ ಭಾರವಾದ ಲೋಹವನ್ನು ಬಳಸದೆ ಸಂಯುಕ್ತ (ಛಿomಠಿosiಣe) ವಸ್ತುಗಳಾದ ಇಂಗಾಲದ ತಂತು (ಕಾರ್ಬನ್ ಫೈಬರ್) ಅಥವಾ ಇನ್ನಿತರ ಹಗುರ ವಸ್ತುಗಳಾದ ಅಲ್ಯುಮಿನಿಯಂ ಮತ್ತು ಮೆಗ್ನೀಸಿಯಂನಂತಹ ಪದಾರ್ಥಗಳನ್ನು ಬಳಸಿದರೆ ತೂಕವನ್ನು ಕಡಿಮೆಗೊಳಿಸಬಹುದು. ಇಂದು ಅಮೆರಿಕದ ಮಾರುಕಟ್ಟೆಯಲ್ಲಿ ಕೆಲವು ಸಂಸ್ಥೆಗಳು ಮಿಶ್ರ ಇಂಧನ ಕಾರುಗಳನ್ನು ಬಿಡುಗಡೆಗೊಳಿಸಿವೆ. ಅವುಗಳಲ್ಲಿ ಪ್ರಮುಖವಾದವು ಹೋಂಡಾ ಸಂಸ್ಥೆಯ `ಸಿವಿಕ್ ಮಿಶ್ರ ಇಂಧನ ಹಾಗೂ ಹಗುರವಾದ ಎರಡು ಆಸನಗಳುಳ್ಳ ಚಿಕ್ಕ ಗಾತ್ರದ `ಇನ್‍ಸೈಟ್ ಮತ್ತು ಟಯೋಟಾ ಸಂಸ್ಥೆಯ `ಪೈಯೂಸ್ ಎಂಬ ಹೆಸರಿನ ಕಾರುಗಳು. ಇನ್ನಿತರ ಪ್ರಮುಖ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಹೊರತರಲಿರುವ ಮಿಶ್ರ ಇಂಧನ ಕಾರುಗಳು ಇಂತಿವೆ: ತಯಾರಕರು ಮಾದರಿ ಬಿಡುಗಡೆಯ ವರ್ಷ

ಡೈಮ್ಲರ್-ಕ್ರಿಸ್ಲರ್ ಡೊಂಜ್ ರ್ಯಾಮ್ 2005


ಮರ್ಸಿಡಿಸ್ ಎಸ್-ಕ್ಲಾಸ್ 2006

¥sóÉೂೀರ್ಡ್ ಎಸ್ಕೇಪ್ 2005

ಜೆನರಲ್ ಮೋಟಾರ್ಸ್ ಚೆವಿ ಈಕ್ವಿನೊಕ್ಸ್ 2006


ಚೆವಿ ಸಿಲ್ವರೆಡೊ 2005


ಜಿಎಮ್‍ಸಿ-ಸಿರ್ರಾ 2005


ಸ್ಯಾಟ್ರನ್-ವಿಯುಇ 2005

ಟಯೋಟಾ ಲೆಕ್ಸಸ್ ಆರ್‍ಎಕ್ಸ್ 400ಹೆಚ್ 2005


ಹೈಲ್ಯಾಂಡರ್ 2005


ಎಫ್‍ಸಿಹೆಚ್‍ವಿ 2006


ಮಿಶ್ರ ಇಂಧನ ಕಾರುಗಳು ಇತರ ಸಾಮಾನ್ಯ ಕಾರುಗಳಂತೆಯೇ ಕಂಡರೂ ಇವು ವಿಭಿನ್ನ ಮಾದರಿಯ ಕಾರುಗಳೆಂದೇ ಹೇಳಬಹುದು. ಮಿಶ್ರ ಇಂಧನ ಕಾರುಗಳಲ್ಲಿ ಶಕ್ತಿಯು ಕೇವಲ ಬ್ಯಾಟರಿಯಲ್ಲಿ ಶೇಖರವಾಗಿರುವ ವಿದ್ಯುತನ್ನು ಬಳಸಿಕೊಂಡು ಚಲಿಸುವುದು ಮಾತ್ರವಲ್ಲದೇ ಇಂಧನದ ಸಹಾಯದಿಂದ ಕಾರ್ಯನಿರ್ವಹಿಸುವ ಎಂಜಿನ್, ಕಾರನ್ನು ಮುಂದೆ ಚಲಿಸುವಂತೆ ಮಾಡುವುದರ ಜೊತೆಗೆ ವಿದ್ಯುದುತ್ಪಾದಕವನ್ನು ಚಾಲನೆಗೊಳಿಸಿ ವಿದ್ಯುತ್ತನ್ನು ಉತ್ಪಾದಿಸುತ್ತದೆ. ಮಿಶ್ರ ಇಂಧನ ಕಾರಿನ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳು: ಅನುಕೂಲಗಳು :- ಮಿಶ್ರ ಇಂಧನ ವಾಹನವು ಹಗುರವಾಗಿರುವುದರ ಜೊತೆಗೆ ವಿದ್ಯುತ್ತಿನಿಂದ ಚಲಿಸುವ ಕಾರುಗಳಿಗಿಂತ ಕಡಿಮೆ ತೂಕ ಹಾಗೂ ಕಡಿಮೆ ಗಾತ್ರದ ಬ್ಯಾಟರಿಗಳನ್ನು ಹೊಂದಿರುತ್ತದೆ. ಕಡಿಮೆ ಶಕ್ತಿಯನ್ನು ಕೊಡಬಲ್ಲ ಚಿಕ್ಕ ಹಾಗೂ ಹಗುರ ಎಂಜಿನ್ನನ್ನು ಹೊಂದಿರುತ್ತದೆ. ಅಗತ್ಯವಿರುವ ಹೆಚ್ಚಿನ ಶಕ್ತಿಯನ್ನು ಬ್ಯಾಟರಿಯು ಒದಗಿಸುತ್ತದೆ. ಕಾರಿನ ಬ್ಯಾಟರಿಯು ಹೆಚ್ಚಿನ ಮುನ್ನುಗ್ಗುವ ವೇಗವನ್ನು ಒದಗಿಸುವುದರಿಂದ ಹಾಗೂ ಎಂಜಿನ್ ಸ್ಥಿರವಾಗಿ ಚಲಿಸುವುದರಿಂದ ಸಾಕಷ್ಟು ಇಂಧನ ಉಳಿತಾಯವಾಗುತ್ತದೆ. ಕಾರಿನ ಬ್ರೇಕನ್ನು ಒತ್ತಿದಾಗ ಉಂಟಾಗುವ ಚಾಲನಾಶಕ್ತಿಯನ್ನು ಬಳಸಿಕೊಂಡು ಬ್ಯಾಟರಿಗಳಲ್ಲಿ ಶಕ್ತಿಯನ್ನು (ಚಾರ್ಜ್) ಶೇಖರಿಸಲಾಗುತ್ತದೆ. ಹೊಗೆಯುಗುಳುವುದು ಅತ್ಯಂತ ಕಡಿಮೆ ಇರುವುದರಿಂದ ಪರಿಸರ ಮಾಲಿನ್ಯಗೊಳ್ಳುವುದಿಲ್ಲ. ಇಂಧನದ ಮೇಲಿನ ಅವಲಂಬನೆ ಸಾಕಷ್ಟು ಕಡಿಮೆಯಾಗುತ್ತದೆ. ಚಾಲನಾ ವೆಚ್ಚದಲ್ಲಿ ಗಣನೀಯ ಉಳಿತಾಯ ಆಗಿಂದಾಗ್ಗೆ ಪೆಟ್ರೋಲ್ ಬಂಕ್‍ಗೆ ಭೇಟಿ ಕೊಡದೆ ಅಮೂಲ್ಯ ಸಮಯದ ಉಳಿತಾಯ. ಅನಾನುಕೂಲಗಳು :- ವಾಹನದ ಬೆಲೆ ಅತ್ಯಂತ ದುಬಾರಿ ಬ್ಯಾಟರಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಉಪಕರಣಗಳು ಇರುವುದರಿಂದ ಕಾರಿನ ಒಳಗೆ ಸ್ಥಳಾವಕಾಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಇತರ ಸಾಧಾರಣ ಕಾರುಗಳಿಗಿಂತ ಅನುಕೂಲಗಳು ಹೆಚ್ಚಾಗಿರುವುದರಿಂದ ಅದಕ್ಕೆ ಸ್ವಲ್ಪ ಅಧಿಕ ಬೆಲೆಯನ್ನು ಕೊಟ್ಟು ಖರೀದಿಸುವುದು ಲಾಭದಾಯಕವಾಗಿರುತ್ತದೆ. ಇನ್ನೇಕೆ ತಡ, ಹೆಚ್ಚು ಇಂಧನ ಹೀರದ ಮಾಲಿನ್ಯ ರಹಿತವಾದ ಈ ನೂತನ ಮಿಶ್ರ ಇಂಧನ ಕಾರುಗಳು ನಮ್ಮ ಭಾರತದಲ್ಲೂ ಪಾದಾರ್ಪಣೆ ಮಾಡುತ್ತಿದ್ದಂತೆ ಅದನ್ನು ಕೊಳ್ಳಲು ಈಗಿನಿಂದಲೇ ಸಿದ್ಧತೆ ನಡೆಸಬಹುದಲ್ಲಾ ! (ವಿ.ಎಸ್.ಎನ್)