ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುದ್ರಣ

ವಿಕಿಸೋರ್ಸ್ದಿಂದ

ಮುದ್ರಣ

ದತ್ತವಸ್ತುವನ್ನು (ಇದು ಬಿಂಬ) ಅದರ ಪ್ರತಿಬಿಂಬವಾಗಿ ಪರಿವರ್ತಿಸಿ ಯೋಗ್ಯ ತಲಕ್ಕೆವರ್ಗಾಯಿಸುವ ಪ್ರಕ್ರಿಯೆ (ಪ್ರಿಂಟಿಂಗ್). ಚಿತ್ರ (1) ರಲ್ಲಿ ಇದರ ನಾಲ್ಕು ಮುಖ್ಯ ಹಂತಗಳನ್ನು ಸೂಚಿಸಿದೆ:

ಚಿತ್ರ-1

ಮೂಲಬಿಂಬ (ಕಾಪಿ ಅಥವಾ ಆರ್ಟ್ ವರ್ಕ್), ಮುದ್ರಣಬಿಂಬ (ಬಿಂಬವಾಹಕದ ಮೇಲಿನ ಪ್ರತಿಬಿಂಬ). ಶಾಯಿಬಿಂಬ (ಮುದ್ರಣ ಯಂತ್ರದಲ್ಲಿ), ಮುದ್ರಿತ ಬಿಂಬ (ಕಾಗದ ಅಥವಾ ಯಾವುದೇ ತಲದ ಮೇಲೆ). ಪ್ರಸಕ್ತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಲಾಗಿದೆ: I ಉಗಮ ಮತ್ತು ವಿಕಾಸ II ಭಾರತದಲ್ಲಿ ಮುದ್ರಣ ಆರಂಭ III ಆಧುನಿಕ ಮುದ್ರಣ (i) ಉಬ್ಬು ಮುದ್ರಣ (ii) ತಲಲೇಖನ ಮುದ್ರಣ (iii) ಇಳಿಕೆತ್ತನೆ ಮುದ್ರಣ (iv) ರಂಧ್ರಿತ ಸಿಲ್ಕ್ ಸ್ಕ್ರೀನ್ ಮುದ್ರಣ (v) ಸ್ಥಿತವೈದ್ಯುತ ಮುದ್ರಣ Iಗಿ ಮಾಸ್ಕಿಂಗ್ ಗಿ ಗಣಕದ ನೆರವಿನಿಂದ ಮೊಳೆಜೋಡಣೆ ಗಿI ದೂರ ಮೊಳೆಜೋಡಣೆ (ಟೆಲಿಟೈಪ್ ಸೆಟ್ಟಿಂಗ್) ಗಿII ಪರಿಸಮಾಪ್ತಿ I ಉಗಮ ಮತ್ತು ವಿಕಾಸ: ಚೀನದಲ್ಲಿ ಬೌದ್ಧಧರ್ಮ ಪ್ರಚಾರಕ್ಕಾಗಿ ಧಾರ್ಮಿಕಸಾಹಿತ್ಯ ಮತ್ತು ಚಿತ್ರಗಳ ಅಗತ್ಯವಿದ್ದ ಕಾಲದಲ್ಲಿ ಮುದ್ರಣದ ಉಗಮವಾಯಿತು. ಕ್ರಿ. ಶ. 650ರಲ್ಲಿ ಬುದ್ದನ ಚಿತ್ರಗಳನ್ನು ಮುದ್ರಿಸಲು ಪಡಿಯಚ್ಚುಗಳ ಮುದ್ರಣ ಬಳಕೆಗೆ ಬಂದಿತೆಂದು ನಂಬಲಾಗಿದೆ. ಸರ್. ಆರೆಲ್ ಸ್ಟೇನ್ ಎಂಬಾತ 868ರ ಕಾಲಕ್ಕೆ ಸೇರಿದ ಚೀನದ ಸಹಸ್ರಬುದ್ಧ ಗುಹೆಗಳಲ್ಲಿ ಹಿರಕ ಸೂತ್ರ ಎಂಬ ಪುಸ್ತಕ ಪತ್ತೆ ಹಚ್ಚಿದ (1907). ಈಗ ತಿಳಿದಿರುವ ಮಟ್ಟಿಗೆ ಇದೇ ಅತಿ ಪ್ರಾಚೀನ ಮುದ್ರಿತ ಗ್ರಂಥ. ಇದರಲ್ಲಿ 6 ಹಾಳೆಗಳಿವೆ. ಹಾಳೆಯ ಉದ್ದ ಸುಮಾರು 76 ಸೆಂ ಮೀ ಅಗಲ ಸುಮಾರು 30 ಸೆಂಮೀ. ಅತಿ ಚಿಕ್ಕ ಹಾಳೆಯೂ ಒಂದಿದೆ. ಇದಕ್ಕೆ ಮರದ ಚೌಕಟ್ಟಿನ ಆಸರೆ ಇದೆ. ಇವೆಲ್ಲ ಒಂದಕ್ಕೊಂದು ಸೇರಿ ಸುಮಾರು 488 ಸೆಂಮೀ ಉದ್ದದ ಒಂದು ಸುರುಳಿಯಾಗಿದೆ.

ಪಿಶ್ಯಾಂಗ್ ಎಂಬಾತ 1041ರಲಲಿ ಮಣ್ಣಿನಲ್ಲಿ ಅಚ್ಚಿನ ಮೊಳೆಗಳನ್ನು ತಯಾರಿಸಿ ಕಬ್ಬಿಣದ ಚೌಕಟ್ಟಿಗೆ ಅಳವಡಿಸಿದ. ಈತನೇ ತವರದ ಮೂಲೆಗಳನ್ನು ತಯಾರಿಸಿದನೆಂದು ಹೇಳಲಾಗಿದೆ. ವಾಂಗ್‍ಚಾಂಗ್ 1314ರಲ್ಲಿ ಮರದ ಮೊಳೆಗಳನ್ನು ತಯಾರಿಸಿದ್ದರ ಮೂಲಕ ಮುಂದಿನ ಕ್ರಮ ಕೈಗೊಂಡು ಕೊರಿಯದ ದೊರೆ ಜನರಲ್ ಯಿ ಎಂಬಾತ ಲೋಹದ ಮೊಳೆ ತಯಾರಿಸುವ ಕಾರ್ಖಾನೆ ಆರಂಭಿಸಿದ (1392). ಕೊರಿಯದಲ್ಲಿ ಹಿತ್ತಾಳೆ ಮೊಳೆಗಳಿಂದ ಮುಂದ್ರಿತವಾದ ಪುಸ್ತಕವೊಂದು 1409ರಲ್ಲಿ ದೊರೆತಿದೆ.

ಯೂರೋಪಿಯನ್ನರಿಗೆ ಪಡಿಯಚ್ಚುಮುದ್ರಣ 15ನೆಯ ಶತಮಾನಕ್ಕೂ ಹಿಂದೆಯೇ ತಿಳಿದಿದ್ದರೂ ಅಲ್ಲಿ ಮೊಳೆಗಳನ್ನು ಬಳಸಿ ಮುದ್ರಣ ಆರಂಭಗೊಂಡದ್ದು ಈ ಶತಮಾನದಲ್ಲಿ ಮಾತ್ರ. ಚಲಿಸುವ ಮೊಳೆಗಳನ್ನು ಯುಕ್ತ ಮಿಶ್ರಲೋಹದಿಂದ ಎರಕ ಹೊಯ್ಯವುದನ್ನು ಉಪಜ್ಞಿಸಿದ (1454) ಕೀರ್ತಿ ಜರ್ಮನಿಯ ಗುಟೆನ್‍ಬರ್ಗನಿಗೆ ಸಲ್ಲುತ್ತದೆ. ಹಾರ್ಲಿಮ್‍ನ (ಹಾಲೆಂಡ್) ಕಾಸ್ಟರ್; ಬ್ರುಗಸ್‍ನ (ಬೆಲ್ಜಿಯಮ್) ಯೊಹಾನೆಸ್ ಬ್ರಿಟೊ ಮತ್ತು ಫ್ರೆಲರ್‍ನ (ಇಟಲಿ) ಪಾಮ್‍ಫಿಲೊ ಕಾಸ್ಟೆಡ್ ಮುಂತಾದವರ ಶ್ರಮವೂ ಮೇಲಿನ ಉಪಜ್ಞೆಗೆ ಸೇರುತ್ತದೆ. ಫಸ್ಟ್ ಮತ್ತು ಷೊಫೆರ್ ಮುದ್ರಿಸಿದ (1457) ಕೃತಿಯೇ ಮುದ್ರಣ ಕಾಲ ಸೂಚಿಸುವ ಪ್ರಥಮ ಲಭ್ಯಗ್ರಂಥ. ಯೂರೋಪಿನಾದ್ಯಂತ ಮುದ್ರಣಕಲೆ ಹೀಗೆ ಹರಡಿತು: ಇಟಲಿ (1465), ಫ್ರಾನ್ಸ್ (1470), ಸ್ಟೇನ್ (1474), ಇಂಗ್ಲೆಂಡ್ (1477). ಡೆನ್ಮಾರ್ಕ್ (1482), ಸ್ವೀಡನ್ (1483) ಪೊರ್ಚುಗಲ್ (1495), ರಷ್ಯ(1553).

II ಭಾರತದಲ್ಲಿ ಮುದ್ರಣ ಆರಂಭ: ಭಾರತದಲ್ಲಿ ಮುದ್ರಣ ಮೊದಲು ಕ್ರೈಸ್ತ ಮತ್ತು ಪೋರ್ಚುಗೀಸ್ ಮಿಶನರಿಗಳಿಂದಲೂ ಮುಂದೆ ಡೇನಿಶ್ ಮಿಶನರಿಗಳಿಂದಲೂ ಆರಂಭವಾಯಿತು. ರೋಮನ್ ಕ್ಯಾತೊಲಿಕ್ ಮಿಶನ್ ಪ್ರಾಂತೀಯ ಭಾಷೆಗಳಲ್ಲಿ ಸುವಾರ್ತೆಗಳನ್ನು ಬೋಧಿಸಲು ಪ್ರಪ್ರಥಮವಾಗಿ ಪ್ರಯತ್ನಿಸಿತು. ಇದನ್ನೇ ಪ್ರೊಟೆಸ್ಟೆಂಟರು ಮುಂದುವರಿಸಿದರು.

ಭಾರತದಲ್ಲಿ ಪ್ರಾಚೀನ ಮುದ್ರಣಾಲಯಗಳ ಸ್ಥಳಗಳನ್ನು ನಕ್ಷೆಯಲ್ಲಿ ಗುರುತಿಸುವುದಾದರೆ ಅವೆಲ್ಲ ಕರಾವಳಿ ತೀರದಲ್ಲೇ ಇವೆ. ಪಶ್ಚಿಮ ಕರಾವಳಿಯ ಗೋವ, ಕೊಚ್ಚಿನ್, ಪುದ್ರಿಕೊೈಲ್, ಅಂಬಲಕಡ (ತ್ರಿಚೂರ್ ಬಳಿ)-ಇವು ಭಾರತೀಯ ಮುದ್ರಣದ ಪ್ರಾಚೀನ ಕಾಲವನ್ನು ಪ್ರತಿನಿದಿಸಿದರೆ, ಪೂರ್ವ ಕರಾವಳಿಯ ಟ್ರ್ಯಾಂಕ್‍ಚಾರ್ (ತರಂಗಂಬಾಡಿ, ಕಡ್ಡಲೂರು ಬಳಿ), ಮದ್ರಾಸ್, ಪೋರ್ಟ್ ವಿಲಿಯಮ್. ಕಲ್ಕತ್ತ ಮತ್ತು ಸೆರಾಮ್‍ಪುರಗಳು ಭಾರತೀಯ ಮುದ್ರಣ ರೂಪುಗೊಳ್ಳುತ್ತಿದ್ದ ಕಾಲವನ್ನು ಪ್ರತಿನಿಧಿಸುತ್ತವೆ.

16ನೆಯ ಶತಮಾನದಲ್ಲಿ ಜೆಸ್ಯೂಯಿಟ್ ಪಾದ್ರಿಗಳು ಭಾರತದಲ್ಲಿ ಮುದ್ರಣವನ್ನು ಪ್ರಾರಂಭಿಸಿದರು. ಇವರೇ ತಮಿಳಿನಲ್ಲಿ ಮೊತ್ತಮೊದಲು ಪುಸ್ತಕಗಳನ್ನು ಅಚ್ಚಿಸಿದವರು ಕೂಡ. ಆದರೆ 17 ಮತ್ತು 18ನೆಯ ಶತಮಾನಗಳಲ್ಲಿ ಡೇನಿಶ್ ಪಾದ್ರಿಗಳು ಇದರ ಜನಪ್ರಿಯತೆಗೆ ಕಾರಣರಾದರು.

ಸುಮಾರು 1535ರಲ್ಲಿ ಜೆಸ್ಯೂಯಿಟರು ಗೋವಕ್ಕೆ ಕಾಲಿಟ್ಟರು. ವಾಸ್ಕೋಡಗಾಮ ಭಾರತದ ಕಲ್ಲಿಕೋಟೆಗೆ ಕಾಲಿಟ್ಟ 52 ವರ್ಷಗಳ ಅನಂತರ (1550) ಜೆಸೊಯಿಟರು ಯೂರೋಪಿನಿಂದ ಗೋವಕ್ಕೆ ಎರಡು ಮುದ್ರಣಾಲಯಗಳನ್ನು ಆಮದು ಮಾಡಿಕೊಂಡರೆಂದು ಒಂದರ ಆಧಾರ ತಿಳಿಸುತ್ತದೆ. ಇದರ ಪ್ರಕಾರ, 1550ರಲ್ಲೇ ಭಾರತಕ್ಕೆ ಮೊದಲು ಮುದ್ರಣಾಲಯ ಬಂದಿದ್ದರೂ ಪುಸ್ತಕ ಅಚ್ಚಾದದ್ದು ಮಾತ್ರ 1557ರಲ್ಲಿ. ಸಂತ ಫ್ರಾನ್ಸಿಸ್ ಭಾರತದಲ್ಲಿ ಮುದ್ರಣಗೊಂಡ ಮೊತ್ತಮೊದಲ ಕೃತಿ.

ಭಾರತದಲ್ಲಿ ಮೊದಲು ಮುದ್ರಣಕ್ಕೆ ಅಣಿಯಾದ ಭಾಷೆ ಮಲಬಾರ್ ಎಂದರೆ ಮಲಯಾಲವೋ ತಮಿಳೋ ಎಂದು ಅನೇಕ ವರ್ಷಗಳ ತನಕ ಚರ್ಚೆಗಳೇ ಆದುವು. ದೊರೆತಿರುವ ಆಧಾರದ ಪ್ರಕಾರ ದೌತ್ರಿನಕ್ರಿಸ್ಟ (ತಂಬಿರಾನ ವಣಕ್ಕಮ್) ಎಂಬುದೇ ಭಾರತೀಯ ಭಾಷೆಗಳಲ್ಲಿ ಪ್ರಕಟಗೊಂಡ ಮೊತ್ತಮೊದಲ ಪುಸ್ತಕ. ಭಾರತದಲ್ಲಿ ಆಧುನಿಕ ಮುದ್ರಣ ಪ್ರಾರಂಭಗೊಂಡದ್ದು ತಮಿಳಿನಲ್ಲಿ ಎಂಬುದರಲ್ಲಿ ಸಂದೇಹವೇ ಇಲ್ಲ. ಕನ್ನಡ ಮೊಳೆಗಳನ್ನು ತಯಾರಿಸದೆ ತಮಿಳಿನಲ್ಲೇ ಕೆಲಸ ಮಾಡಲು ಪೋರ್ಚುಗೀಸರು ತೊಡಗಿದರೆಂದು ಹೇಳಲಾಗಿದೆ. ಏಕೆಂದರೆ ಗೋವದ ಸ್ಥಳೀಯ ಭಾಷಾಲಿಪಿ ಗೋಜಲಾಗಿದ್ದು ಉಚ್ಚಾರಣೆ ಕ್ರಮರಹಿತವಾಗಿದ್ದು ಸೀಮಿತಪ್ರದೇಶದಲ್ಲಿ ಮಾತ್ರ ಬಳಕೆಯಲ್ಲಿತ್ತು.

ಮುದ್ರಣಕಲೆಯ ಇತಿಹಾಸಕಾರನಾದ ಪಿಯರೆ ಡೆಸ್ ಚಾಮ್ಸ್‍ನ ಸೂಚನೆಯಂತೆ ಸಂಸ್ಕøತ ಅಥವಾ ಕನ್ನಡ ಲಿಪಿಯ ಮುದ್ರಣ ಬೆಂಗಳೂರಿನಲ್ಲಿ 1806. 1810 ಮತ್ತು 1815 ರಲ್ಲೆ ಇತ್ತು. ಆದರೆ ಇದರ ಬಗ್ಗೆ ಖಚಿತವಾಗಿ ಏನೂ ತಿಳಿಯದು. ಮೊತ್ತಮೊದಲ ಇಂಗ್ಲಿಷ್ ಭಾಷಾ ಮುದ್ರಣಾಲಯ ಬೆಂಗಳೂರಿನಲ್ಲಿ ಸ್ಥಾಪಿತವಾದ ವೆಸ್ಲಿಯನ್ ಮಿಶನ್ ಪ್ರೆಸ್. ಇದು 1840ರ ವೇಳೆಗೆ ಸ್ಥಾಪಿತವಾಯಿತೆಂದು ಖಚಿತವಾಗಿ ಹೇಳಬಹುದು.

ಮೈಸೂರು (ಕರ್ನಾಟಕ) ರಾಜ್ಯದ ಭಾಷೆ ಕನ್ನಡದ ಬಗೆಗೆ ಹೇಳಬೇಕಾದರೆ ಪ್ರೊಟೆಸ್ಟೆಂಟ್ ಮಿಶನರಿ ವಿಲಿಯಮ್ ರೀವ್ ಸಂಕಲ್ಪಿಸಿದ ಇಂಗ್ಲಿಷ್-ಕನ್ನಡ ನಿಘಂಟು ಮದ್ರಾಸಿನ ಫೋರ್ಟ್ ಮುದ್ರಣಾಲಯದಲ್ಲಿ ಮುದ್ರಿತವಾಯಿತು (1814). ಏಕೆಂದರೆ ಆಗ ಬೆಂಗಳೂರಿನಲ್ಲಿ ಆಗಲಿ ಮೈಸೂರಿನಲ್ಲಿ ಆಗಲಿ ಮುದ್ರಣಾಲಯಗಳು ಇರಲಿಲ್ಲ. ರೀವ್‍ನ ಪ್ರತಿಸ್ಪರ್ಧಿ ಜೆ. ಎಮ್. ಕರ್ರೆಲ್ ಎಂಬಾತ ಎ ಗ್ರ್ಯಾಮರ್ ಆಫ್ ದಿ ಕರ್ನಾಟಕ್ ಲಾಂಗ್ವೇಜ್ ಎಂಬ ಪುಸ್ತಕವನ್ನು ಮದ್ರಾಸಿನಲ್ಲಿ ಪ್ರಕಟಿಸಿದ (1929). (ವಿ.ಎಸ್.ಕೆಆರ್‍ಐ.)

III ಆಧುನಿಕ ಮುದ್ರಣ: ವಾಸ್ತವವಾಗಿ ಈಗ್ಗೆ ಕೇವಲ 50 ವರ್ಷಗಳ ಹಿಂದೆಯೂ-1930-40- ಮುದ್ರಣವೆಂದರೆ ಓದುವ ವಸ್ತುವನ್ನು ಲೋಹದ ಅಚ್ಚು ಮತ್ತು ಚಿತ್ರಗಳ ನೆರವಿನಿಂದ ಪುನರುತ್ಪಾದಿಸುವ ಪ್ರಕ್ರಿಯೆಯೆಂದು ಭಾವಿಸಲಾಗುತ್ತಿತ್ತು. ಲಿಥೊಗ್ರಫಿ, ಆಫ್‍ಸೆಟ್ ಮತ್ತು ಗ್ರವ್ಯೂರ್ ಮುದ್ರಣ ವಿಧಾನಗಳನ್ನು ಬೇರೆಯೆಂದೇ ಪರಿಗಣಿಸಲಾಗುತ್ತಿತ್ತು.

ಚಿತ್ರ-2

ಆದರೆ ಈಚೆಗಿನ ವರ್ಷಗಳಲ್ಲಿ ಛಾಯಾಗ್ರಹಣ ಮತ್ತು ದ್ಯುತಿಯಾಂತ್ರಿಕ (ಪೋಟೊಮೆಕ್ಯಾನಿಕ್ಸ್) ಪ್ರಕ್ರಿಯೆಗಳಲ್ಲಿ ಸಾಕಷ್ಟು ಪ್ರಗತಿಯಾದಂತೆ ಈ ತಂತ್ರಗಳನ್ನು ಮುದ್ರಣಕ್ಕೆ ಹೆಚ್ಚು ಹೆಚ್ಚು ಅಳವಡಿಸಿಕೊಳ್ಳುವುದು ಸಾಧ್ಯವಾಗಿ ಅಲೇಖಪುನರುತ್ಪಾದನ (ಗ್ರಾಫಿಕ್ ರಿಪ್ರೊಡಕ್ಷನ್) ಪದ್ಧತಿಗಳಲ್ಲಿ ಗಣನೀಯ ಬದಲಾವಣೆಗಳು ಕಂಡುಬಂದಿವೆ. ಇವೆಲ್ಲವನ್ನೂ ಇವುಗಳ ಪ್ರಕ್ರಿಯೆಯನ್ನು ಗಮನಿಸಿ ಮುದ್ರಣವೆಂದೇ ಕರೆಯಲಾಗುತ್ತಿದೆ.

ಬಿಂಬಪರಿವರ್ತನ ಪ್ರಕ್ರಿಯೆಯನ್ನು ಅನುಸರಿಸಿ ಮುದ್ರಣವನ್ನು ಸ್ಥೂಲವಾಗಿ ನಾಲ್ಕುವರ್ಗಗಳಾಗಿ ವಿಭಾಗಿಸಿದೆ (ಚಿತ್ರ 2): ಉಬ್ಬು ಮುದ್ರಣ (ರಿಲೀಫ್ ಪ್ರಿಂಟಿಂಗ್), ತಲಶೇಖನ ಮುದ್ರಣ (ಪ್ಲೆನೊಗ್ರಾಫಿಕ್ ಪ್ರಿಂಟಿಂಗ್), ಇಳಿ ಕೆತ್ತನೆ ಮುದ್ರಣ (ಇಂಟಾಗ್ಲಿಯೊ ಪ್ರಿಂಟಿಂಗ್), ರಂಧ್ರಿತ ಅಥವಾ ತೆರೆ ಮುದ್ರಣ (ಸ್ಕ್ರೀನ್ ಪ್ರಿಂಟಿಂಗ್). ಇವೇ ಅಲ್ಲದೇ ಈಚೆಗೆ ಬಳಕೆಗೆ ಬರುತ್ತಿರುವ ಸ್ಥಿತವೈದ್ಯುತ ಮುದ್ರಣವನ್ನೂ (ಎಲೆಕ್ಟ್ರೂಸ್ಟ್ಯಾಟಿಕ್ ಪ್ರಿಂಟಿಂಗ್) ಈ ಪಟ್ಟಿಗೆ ಸೇರಿಸಬಹುದು.

(i) ಉಬ್ಬುಮುದ್ರಣ: ಬಿಂಬವಾಹಕದಲ್ಲಿ ಮುದ್ರಣ ಬಿಂಬಭಾಗ ಉಬ್ಬಿ ಕೊಂಡಿದ್ದು ಬಿಂಬಭಾಗ ಕೆಳಗೆ ಇರುವುದರಿಂದ ಈ ಹೆಸರು. ಅಚ್ಚುಗಳನ್ನು ಒತ್ತಿ ಮುದ್ರಿಸುವುದರಿಂದ ಲೆಟರ್‍ಪ್ರೆಸ್ ಎಂದೂ ಹೆಸರಿದೆ. ಮುದ್ರಣದ ವೇಳೆ ಶಾಯಿ ಉರುಳೆಗಳು ಉಬ್ಬುತಲದಲ್ಲಿರುವ ಬಿಂಬಭಾಗಗಳನ್ನು ಮಾತ್ರ ಸ್ಪರ್ಶಿಸಿ (ಅಬಿಂಬ ಭಾಗಗಳನ್ನು ಸ್ಪರ್ಶಿಸದೆ) ಮುದ್ರಿತ ಬಿಂಬಕ್ಕೆ ಕಾರಣವಾಗುವುದರಿಂದ ಈ ಪ್ರಕ್ರಿಯೆಗೆ ಯಾಂತ್ರಿಕ ಪ್ರಕ್ರಿಯೆ (ಮೆಕ್ಯಾನಿಕಲ್ ಪ್ರೋಸೆಸ್) ಎಂಬ ಹೆಸರು ಕೂಡ ಇದೆ.

ಉಬ್ಬುಮುದ್ರಣಯಂತ್ರಗಳಲ್ಲಿ ಮೂರು ಬಗೆ: ಪ್ಲೇಟನ್, ಸಿಲಿಂಡರ್ ಮತ್ತು ರೋಟರಿ ಲೆಟರ್‍ಪ್ರೆಸ್.

ಪ್ಲೇಟನ್ ಯಂತ್ರಗಳಲ್ಲಿ ಅಚ್ಚೊತ್ತು (ಇಂಪ್ರೆಶನ್) ಬಹುತೇಕ ಊಧ್ರ್ವಸ್ಥಾನದಿಂದ ಹಾರಿಜಸ್ಥಾನಕ್ಕೆ ಚಲಿಸುವ ಪ್ಲೇಟನ್ ಹಾಗೂ ಬೆಡ್ ಇವುಗಳ ಸಂಸ್ಪರ್ಶದಿಂದ ಆಗುತ್ತದೆ. ಈ ಮುದ್ರಣಕ್ರಿಯೆಯ ಚಕ್ರದಲ್ಲಿ (ಸೈಕಲ್) ಒಂದು ಮುದ್ರಣ ಘಾತವೂ ಒಂದು ಅಮುದ್ರಣ ಫಾತವೂ ಇರುತ್ತವೆ. ಅಮುದ್ರಣ ಘಾತದಲ್ಲಿ ಪೇಟನ್ ಹಿಂದಕ್ಕೆ ಚಲಿಸುತ್ತದೆ. ಹಾಳೆಗೆ ಶಾಯಿ ಹತ್ತಿ ಮುದ್ರಿತ ಹಾಳೆ ಬಟವಾಡೆ ಆಗುತ್ತದೆ ಹಾಗೂ ಹೊಸಹಾಳೆ ಊಡಲ್ಪಡುತ್ತದೆ.

ಪ್ಲೇಟನ್ ಯಂತ್ರದಲ್ಲಿ ಅಚ್ಚೊತ್ತು ಪಡೆಯಲು ಪ್ಲೇಟನ್ ಚಲಿಸುವ ವಿಧಾನ ಅನುಸರಿಸಿ ಅದನ್ನು ಕ್ಲಾಮ್‍ಶೆಲ್ ಅಥವಾ ಲಘು ಪ್ಲೇಟನ್ ಮತ್ತು ಸಮಾಂತರ ಮುಖಿ (ಪ್ಯಾರಲಲ್ ಅಪ್ರೋಚ್) ಅಥವಾ ಭಾರ ಪ್ಲೇಟನ್ ಎಂಬುದಾಗಿ ವಿಂಗಡಿಸಬಹುದು.

ಕ್ಲಾಮ್‍ಶೆಲ್ ಮಾದರಿಯಂತ್ರದಲ್ಲಿ ಅಚ್ಚೊತ್ತು ಆಗುವಾಗ ಪ್ಲೇಟನ್ ಭಾಗ ಬೆಡ್ಡನ್ನು ಕೋನದಲ್ಲಿ ಸೇರುತ್ತದೆ. ಪ್ಲೇಟನ್ ಹಾಗೂ ಬೆಡ್ ಎರಡೂ ಪರಸ್ಪರ ಪೂರ್ಣವಾಗಿ ಸಂಸ್ಪರ್ಶಿಸಿದಾಗ ಅಚ್ಚೊತ್ತು ದೊರೆಯುತ್ತದೆ. ಈ ಕಾರಣದಿಂದ ಅಚ್ಚೊತ್ತಿನ ಒತ್ತಡ ಲಘುವಾಗಿಯೇ ಇರಬೇಕಾಗುತ್ತದೆ. ಎಂದೇ ಇದಕ್ಕೆ ಲಘುಪ್ಲೇಟನ್ ಎಂಬ ಹೆಸರು.

ರಟ್ಟಿನ ಹಾಳೆಗಳಿಂದ ಪೆಟ್ಟಗೆಗಳನ್ನು (ಕಾರ್ಟನ್) ತಯಾರಿಸುವ ಪ್ಯಾಕೇಜಿಂಗ್ ಮುದ್ರಣದಲ್ಲಿ ಕತ್ತರಿಸುವುದನ್ನೂ ಅಂಚುಕೊಡುವುದನ್ನೂ (ಕ್ರೀಸಿಂಗ್) ಮಾಡ ಬೇಕಾಗುತ್ತದೆ. ಇದಕ್ಕೆಂದೇ ವಿಶೇಷ ಪ್ಲೇಟನ್ ಯಂತ್ರವನ್ನು ತಯಾರಿಸಲಾಗಿದೆ. ಇದರಲ್ಲಿ ಅಚ್ಚೊತ್ತು ಆಗುವುದಕ್ಕೆ ಮುನ್ನ ಪ್ಲೇಟನ್ ಮತ್ತು ಬೆಡ್ ಎರಡೂ ಸಮಾಂತರಮುಖಿಗಳಾಗಿದ್ದು ಒಮ್ಮೆಗೆ ಒಟ್ಟುಗೂಡಿ ಅಚ್ಚೊತ್ತಿ ಕೊಡುತ್ತವೆ. ಎಂದೇ ಈ ಯಂತ್ರಕ್ಕೆ ಸಮಾಂತರಮುಖಿ ಅಥವಾ ಭಾರಪ್ಲೇಟನ್ ಎಂಬ ಹೆಸರು.

ಲಘುಪ್ಲೇಟನ್ ಯಂತ್ರ ಬಹುತೇಕ ಎಲ್ಲ ಮುದ್ರಣಕಾರ್ಯಗಳನ್ನೂ ಸಮರ್ಪಕವಾಗಿ ನಿರ್ವಹಿಸುವುದರಿಂದ ಭಾರತದಲ್ಲಿ ಹೆಚ್ಚಿನ ಬಳಕೆಯಲ್ಲಿದೆ. ಆಧುನಿಕ ವಿದ್ಯುಚ್ಚಾಲಿತ ಯಂತ್ರಗಳು ಬರುವುದಕ್ಕೆ ಮೊದಲು ಇವನ್ನು ಕಾಲಿನಿಂದ ತುಳಿದು (ಟ್ರೆಡ್) ಚಾಲೂ ಮಾಡಲಾಗುತ್ತಿತ್ತು. ಆದ್ದರಿಂದ ಆಗ ಬಂದ ಟ್ರೆಡಲ್ ಎಂಬ ಹೆಸರು ಈಗಲೂ ಹಾಗೆಯೇ ಉಳಿದುಕೊಂಡಿದೆ.

ಸಿಲಿಂಡರ್ ಅಥವಾ ಪ್ಲಾಟ್‍ಬೆಡ್ ಸಿಲಿಂಡರ್ ಯಂತ್ರಗಳನ್ನು ಮುದ್ರಣಚಕ್ರದಲ್ಲಿಯ ಮುದ್ರಣ ಮತ್ತು ಅಮುದ್ರಣ ಕ್ರಿಯೆಯ ಅನುಸಾರ ಸ್ಟಾಪ್ ಸಿಲಿಂಡರ್, ದ್ವಿಆವರ್ತ ಸಿಲಿಂಡರ್ ಮತ್ತು ಏಕಾವರ್ತ ಸಿಲಿಂಡರ್ ಎಂಬ ಮೂರು ಬಗೆಯವಾಗಿ ವಿಂಗಡಿಸಲಾಗಿದೆ.

ಸ್ಟಾಪ್ ಸಿಲಿಂಡರಿನಲ್ಲಿ, ಹೆಸರೇ ಸೂಚಿಸುವಂತೆ, ಅಮುದ್ರಣ ಘಾತದಲ್ಲಿ ಯಂತ್ರ ಚಲಿಸುತ್ತಿದ್ದರೂ ಸಿಲಿಂಡರ್ ಮಾತ್ರ ಸ್ಥಗಿತವಾಗಿರುತ್ತದೆ. ಅಲ್ಲದೇ ಪ್ರತಿಸ್ಪಂದಿಸುತ್ತಿರುವ (ರೆಸಿಪ್ರೋಕೇಟ್) ಫಾರಮ್ ಬೆಡ್ಡಿಗೆ ಎದುರಾಗಿ ಸಿಲಿಂಡರಿನೊಳಗೆ ರೀಸೆಸ್ ಇರುವುದರಿಂದ ಸಂಸ್ಪರ್ಶ ಇರುವುದಿಲ್ಲ. ಇದೇ ವೇಳೆ ಈ ಮಾದರಿಯ ಹಾಗೂ ಇನ್ನುಳಿದ ಎರಡು ಮಾದರಿಯ ಸಿಲಿಂಡರ್ ಯಂತ್ರಗಳಲ್ಲಿಯೂ ಮುದ್ರಿತ ಹಾಳೆ ತೆಗೆಯುವಿಕೆ. ಹೊಸ ಹಾಳೆ ಊಡುವಿಕೆ. ಫಾರಮ್‍ಗೆ ಶಾಯಿ ಲೇಪನ_ಈ ಕ್ರಿಯೆಗಳು ಜರಗುತ್ತಿರುವವು.

ದ್ವಿಆವರ್ತ ಸಿಲಿಂಡರ್: ಈ ಯಂತ್ರದಲ್ಲಿ ಪ್ರತಿಯೊಂದು ಮುದ್ರಣಚಕ್ರದಲ್ಲಿಯೂ ಸಿಲಿಂಡರ್ ಎರಡು ಬಾರಿ ಸುತ್ತುತ್ತದೆ. ಮೊದಲ ಸುತ್ತಿನಲ್ಲಿ ಮುದ್ರಣ ಘಾತ, ಎರಡನೆಯದರಲ್ಲಿ ಅಮುದ್ರಣಘಾತ. ಇದರಲ್ಲಿ ಸಿಲಿಂಡರ್ ಸ್ವಲ್ಪ ಮೇಲಕ್ಕೆ ಎತ್ತಲ್ಪಡುತ್ತದೆ. ಹೀಗಾಗಿ ಅದು ಪ್ರತಿಸ್ಪಂದಿಸುತ್ತಿರುವ ಫಾರಮಿನೊಟ್ಟಿಗೆ ಸಂಸ್ಪರ್ಶದಲ್ಲಿರುವುದಿಲ್ಲ. ಹಾಗೂ ಮತ್ತೊಂದು ಪೂರ್ಣ ಆವರ್ತ ಮುಗಿಸುತ್ತದೆ.

ಏಕಾವರ್ತ ಸಿಲಿಂಡರ್: ಈ ಯಂತ್ರದಲ್ಲಿ ಸಿಲಿಂಡರಿನ ಗಾತ್ರ ಬಲು ದೊಡ್ಡದು_ಅಂದರೆ ಫಾರಮ್ ವಿಸ್ತಾರದ ಇಮ್ಮಡಿಗಿಂತ ಜಾಸ್ತಿ. ಮುದ್ರಣಘಾತ ಬಳಿಕ ಅಮುದ್ರಣ ಘಾತದ ವೇಳೆ ಸಿಲಿಂಡರಿನ ಆವರ್ತನೆ ಮುಂದುವರಿದಿರುತ್ತದೆ. ಅಂದರೆ ಪ್ರತಿ ಮುದ್ರಣ ಚಕ್ರಕ್ಕೆ ಒಂದೇ ಆವರ್ತ ಇರುತ್ತದೆ. ಸಿಲಿಂಡರ್ ನಿಂತು ಮತ್ತೆ ಚಾಲನೆಯಾಗುವಾಗ ಮೇಲೊಂದು ಕೆಳಗೊಂದು ಆವರ್ತ ಕೊಡುವುದರಿಂದ ಉಂಟಾಗುವ ಸಮುಸ್ಯೆಗಳು ಈ ಮಾದರಿಯಲ್ಲಿ ನಿವಾರಿಸಲ್ಪಟ್ಟಿದ್ದರೂ ಭಾರೀ ಗಾತ್ರದ ಸಿಲಿಂಡರಿನಿಂದಾಗಿ ಯಂತ್ರಕ್ಕೆ ಜಾಸ್ತಿ ಜಾಗ ಬೇಕಾಗುತ್ತದೆ.

ಸಿಲಿಂಡರ್ ಲೆಟರ್‍ಪ್ರೆಸ್ ಯಂತ್ರಗಳೆಲ್ಲ ಸಾಧಾರಣವಾಗಿ ಹಾರಿಜಯಂತ್ರಗಳು. ಅಂದರೆ ಬೆಡ್ ಹಾರಿಜವಾಗಿರುತ್ತದೆ. ಆದರೆ ವರ್ಟಿಕಲ್ ಮೀಲೆ ಎಂಬ ಯಂತ್ರದಲ್ಲಿ ಮಾತ್ರ ಮುದ್ರಣ ಫಾರಮನ್ನು ಊಧ್ರ್ವವಾಗಿ ಇಡಲಾಗುತ್ತದೆ.

ಪ್ಲಾಟ್‍ಬೆಡ್ ಸಿಲಿಂಡರುಗಳ ಏಕವರ್ಣ ಸಿಲಿಂಡರ್. ದ್ವಿವರ್ಣ ಹಾಗೂ ಬಹುವರ್ಣ ಸಿಲಿಂಡರ್ ಮತ್ತು ಪರ್ಫೆಕ್ಟಿಂಗ್ ಈ ಬಗೆಯ ಯಂತ್ರಗಳಿರುತ್ತವೆ.

ಏಕವರ್ಣ ಸಿಲಿಂಡರುಗಳು ಯಂತ್ರದ ಒಂದು ಚಲನೆಯಲ್ಲಿ ಹಾಳೆಯ ಒಂದು ಭಾಗದಲ್ಲಿ ಒಂದು ಬಣ್ಣವನ್ನು ಮಾತ್ರ ಮುದ್ರಿಸಿದರೆ ದ್ವಿವರ್ಣ ಸಿಲಿಂಡರುಗಳು ಎರಡು ಬಣ್ಣಗಳನ್ನೂ ಮುದ್ರಿಸುತ್ತವೆ. ಪರ್ಫೆಕ್ಟರುಗಳು ಒಂದು ಚಲನೆಯಲ್ಲಿ ಹಾಳೆಯ ಎರಡೂ ಭಾಗಗಳಲ್ಲಿ ಒಂದು ಬಣ್ಣವನ್ನು ಮುದ್ರಿಸುತ್ತವೆ. ಪರ್ಫೆಕ್ಟರುಗಳನ್ನು ಯುಕ್ತವಾಗಿ ಅಳವಡಿಸಿ ಎರಡೂ ಭಾಗಗಳಲ್ಲಿ ಒಂದು ಬಣ್ಣ ಮುದ್ರಿಸುವ ಬದಲು ಒಂದೇ ಭಾಗದಲ್ಲಿ ಎರಡು ಬಣ್ಣಗಳ ಮುದ್ರಣಕ್ಕೆ ವ್ಯವಸ್ಥೆ ಮಾಡಬಹುದು. ಇಂಥವಕ್ಕೆ ದ್ವಿವರ್ಣ ಪರ್ಫೆಕ್ಟರ್ ಯಂತ್ರಗಳೆಂದು ಹೆಸರು.

ರೋಟರಿ ಯಂತ್ರಗಳು: ಇವುಗಳಲ್ಲಿ ಫಾರಮ್ ಮತ್ತು ಅಚ್ಚೊತ್ತು ಘಟಕಗಳೆರಡೂ ಉರುಳೆಯಾಕಾರದವು. ಮೊದಲನೆಯದು ಫಲಕ ಸಿಲಿಂಡರ್. ಅಂದ ಮೇಲೆ ಈ ಯಂತ್ರದ ಬಿಂಬವಾಹಕ ವಕ್ರವಾಗಿರಬೇಕಾಗುತ್ತದೆ.

ವಕ್ರಲೆಟರ್‍ಪ್ರಸ್ ಫಲಕಗಳಲ್ಲಿ ಮೂಲ ಮತ್ತು ಪ್ರತಿರೂಪ ಎಂಬ ಎರಡು ಬಗಗಳಿವೆ. ಮೊದಲನೆಯ ಬಗೆಗೆ ಉದಾಹರಣೆಗಳು ಡೈಕ್ರಿಲ್ ಕೊಡ್ಯಾಕ್ ರಿಲೀಫ್ ಫೋಟೋ ಪಾಲಿಮರ್ ಮತ್ತು ರ್ಯಾಪ್‍ರೌಂಡ್; ಎರಡನೆಯ ಬಗೆಗೆ ಉದಾಹರಣೆಗಳು ಸ್ಟೀರಿಯೊ ಮತ್ತು ಎಲೆಕ್ಟ್ರೊ.

ಸಮತಲ ಸಿಲಿಂಡರ್ ಯಂತ್ರದಲ್ಲಿರುವ ಪ್ರತಿಸ್ಪಂದನಕಾರಿ ಏಕತಾನ ಚಲನೆ ರೋಟರಿ ಯಂತ್ರದಲ್ಲಿ ಇಲ್ಲವಾಗಿ ಇದು ಅಧಿಕ ದಕ್ಷವಾಗಿದೆ. ರೋಟರಿ ಸಿಲಿಂಡರುಗಳಲ್ಲಿ ಏಕದಿಶೆಯ ಅನಿರ್ಬಂಧಿತ ಅವಿಚ್ಛಿನ್ನಚಲನೆ ನಡೆಯುತ್ತದೆ.

ರೋಟರಿ ಲೆಟರ್‍ಪ್ರೆಸ್ ಯಂತ್ರಗಳಲ್ಲಿ ಶೀಟ್‍ಫೆಡ್ ಮತ್ತು ವೆಬ್‍ಫೆಡ್ ಎಂಬ ಎರಡು ಬಗೆಗಳಿವೆ. ಅತಿ ಹೆಚ್ಚಿನ ಉತ್ಪಾದನೆ ಅವಶ್ಯವಿಲ್ಲದ ಪುಸ್ತಕ (ಜಾಬ್) ಮುದ್ರಣ ಅಥವಾ ವಾಣಿಜ್ಯಾತ್ಮಕ ಮುದ್ರಣದಲ್ಲಿ ಮೊದಲನೆಯದರ ಉಪಯೋಗವಿದ್ದರೆ ಕ್ಷಿಪ್ರವೇಳೆಯಲ್ಲಿ ಅಧಿಕ ಉತ್ಪಾದನೆ ಅವಶ್ಯವಾದ ವೃತ್ತಪತ್ರಿಕೆಗಳ ಮುದ್ರಣದಲ್ಲಿ ಎರಡನೆಯದರ ಉಪಯೋಗವಿದೆ. ಇವನ್ನು ರಾಚನಿಕ ತತ್ತ್ವಾನುಸಾರ ಎರಡು ವಿಧಗಳಾಗಿ ವಿಂಗಡಿಸಬಹುದು. ಶೀಟ್‍ಫೆಡ್ ಬಗೆಯದಕ್ಕೆ ಯೂನಿಟ್‍ಟೈಪ್ ಎಂದು ಹೆಸರು. ಪ್ರತ್ಯೇಕ ಮುದ್ರಣ ಘಟಕಗಳಿರುವ ಈ ಯಂತ್ರದಲ್ಲಿ ಪ್ರತಿಯೊಂದು ಘಟಕದಲ್ಲೂ ಬೇರೆ ಬೇರೆ ಫಲಕ ಸಿಲಿಂಡರ್ ಮತ್ತು ಅಚ್ಚೊತ್ತು ಸಿಲಿಂಡರ್ ಇರುತ್ತವೆ. ಇವನ್ನು ಒಂದರಪಕ್ಕದಲ್ಲೊಂದು ಒಟ್ಟುಗೂಡಿಸಿ ವರ್ಣಮುದ್ರಣ ಯಂತ್ರಗಳಾಗಿ ರೂಪಿಸಬಹುದು. ವೆಬ್‍ಫೆಡ್ ಬಗೆಯದಕ್ಕೆ ಸಮಾನ ಅಚ್ಚೊತ್ತು ಸಿಲಿಂಡರ್ ಎರಡನೆಯ ಮಾದರಿ ಎಂದು ಹೆಸರು. ಇದರಲ್ಲಿ ಒಂದಕ್ಕಿಂತ ಜಾಸ್ತಿ ಫಲಕಸಿಲಿಂಡರುಗಳಿದ್ದರೂ ಅಚ್ಚೊತ್ತು ಸಿಲಿಂಡರ್ ಮಾತ್ರ ಒಂದೇ ಇರುತ್ತದೆ. ವೃತ್ತಪತ್ತಿಕಾ ರೋಟರಿ ಲೆಟರ್‍ಪ್ರೆಸ್ ಯಂತ್ರಗಳು: ವಿಶಿಷ್ಟ ಮಾದರಿ ರೋಟರಿಯಂತ್ರಗಳಾದ ಇವನ್ನು ವೃತ್ತಪತ್ರಿಕಾ ಮುದ್ರಣಕ್ಕಾಗಿಯೇ ರೂಪಿಸಲಾಗಿದೆ. ಪತ್ರಿಕೆಯ ಗಾತ್ರ, ಪುಟಸಂಖ್ಯೆ, ಪ್ರತಿಗಳ ಸಂಖ್ಯೆ ಮುದ್ರಣ ಕಾಲಾವಕಾಶ ಈ ಆವಶ್ಯಕತೆಗಳನ್ನು ಅವಲಂಬಿಸಿ ರೀಲ್‍ಫೀಡರುಗಳು ಮತ್ತು ಪೋಲ್ಡರುಗಳು ಇವನ್ನು ಒಳಗೊಂಡು ಒಂದು ಅಥವಾ ಹೆಚ್ಚು ಘಟಕಗಳನ್ನು ಯೋಜಿಸಿ ಈ ಯಂತ್ರವನ್ನು ರಚಿಸಲಾಗುತ್ತದೆ. ಈ ಮಾದರಿಯಂತ್ರಗಳಲ್ಲಿ ಮುಖ್ಯವಾಗಿ ಆರು ವಿಧಗಳಿವೆ: (i) ಟ್ಯೂಬ್ಯುಲರ್ ಅಥವಾ ಸಿಲಿಂಡ್ರಿಕಲ್ ಯಂತ್ರಗಳು. ಇವುಗಳ ಸಿಲಿಂಡರುಗಳಲ್ಲಿ ಸೀಳುಗಳಿದ್ದು ಇವುಗಳಿಗೆ ಅಡಕವಾಗಿ ಹೊಂದುವ ವಕ್ರಫಲಕಗಳನ್ನು ಅಳವಡಿಸಿ ಮುದ್ರಣ ಮಾಡಲಾಗುತ್ತದೆ. (ii) ಅರ್ಧಸಿಲಿಂಡ್ರಿಕಲ್ ಯಂತ್ರಗಳು. ಇವುಗಳಲ್ಲಿ ಫಲಕ ಸಿಲಿಂಡರಿನ ಸುಮಾರು ಅರ್ಧಭಾಗ ಮುಚ್ಚುವ ವಕ್ರಫಲಕಗಳನ್ನು ಅಳವಡಿಸಿ ಮುದ್ರಣ ಮಾಡಲಾಗುತ್ತದೆ. (iii) ಡೆಕ್ ಮಾದರಿ ಯಂತ್ರಗಳು. ಇವುಗಳಲ್ಲಿ ಫಲಕ ಸಿಲಿಂಡರ್ ಕೆಳಗೂ ಅಚ್ಚೊತ್ತು ಸಿಲಿಂಡರ್ ಮೇಲೂ ಇರುವವು. (iv) ಯೂನಿಟ್ ಮಾದರಿ ಯಂತ್ರಗಳು. ಇವು ಕೂಡ ಮೇಲಿನ ರೀತಿಯವೇ. ಆದರೆ ಮುದ್ರಣ ಜೋಡಿಗಳು ಒಂದರ ಪಕ್ಕದಲ್ಲಿ ಒಂದರಂತೆ ನೆಲದ ಮೇಲೆ ಹಾರಿಜವಾಗಿ ಇರುವುವು. (v) ಸಿಂಗಲ್ ವಿಡ್ತ್ ಯಂತ್ರಗಳು: ಇವು ಎರಡು ಸ್ಟ್ಯಾಂಡರ್ಡ್ ವೃತ್ತಪತ್ರಿಕೆ ಅಗಲದ ವೆಬ್‍ಗಳನ್ನು ಮುದ್ರಿಸುತ್ತವೆ. (vi) ಡಬಲ್ ವಿಡ್ತ್ ಯಂತ್ರಗಳು. ಇವು ನಾಲ್ಕು ಸ್ಟ್ಯಾಂಡರ್ಡ್ ವೃತ್ತಪತ್ರಿಕೆ ಅಗಲದ ವೆಬ್‍ಗಳನ್ನು ಮುದ್ರಿಸುತ್ತವೆ. ಬಿಡಿ ಪುಟಕ್ಕಿಂತ ಚಿಕ್ಕದಾಗಿಯೂ ಮುದ್ರಿಸುವುದು ಸಾಧ್ಯ. ಇವಲ್ಲದೆ ಸಮತಲ ವೃತ್ತಪತ್ರಿಕಾ ಲೆಟರ್‍ಪ್ರೆಸ್ ಯಂತ್ರಗಳೂ ಇವೆ. ಇವು ಸಮತಲ ಫಾರಮ್ ಉಪಯೋಗಿಸಿ ಹಾಳೆಯ ಎರಡೂ ಕಡೆ ಮುದ್ರಿಸುತ್ತವೆ. ಶಾಖಾಲೇಖನ (ಥಮ್ರ್ರೊಗ್ರಫಿ): ಇದು ಉಬ್ಬುಮುದ್ರಣ ಪ್ರಕ್ರಿಯೆಯ ಒಂದು ಅನ್ವಯ ವಿಶೇಷ ರೀತಿಯ ಶಾಯಿಗಳನ್ನು ಇಲ್ಲಿ ಬಸಳಲಾಗುತ್ತದೆ. ಶಾಯಿಗೆ ಸೇರಿಸಿರುವ ಅಥವಾ ಮುದ್ರಣಾನಂತರ ಮುದ್ರಿತ ಬಿಂಬದ ಮೇಲೆ ಸವರುವ ಒಂದು ರಾಳಕ್ಕೆ ಶಾಖವನ್ನು ಪ್ರಯೋಗಿಸಲಾಗುತ್ತದೆ. ಆಗ ರಾಳದಲ್ಲಿ ಥರ್ಮೊ ಪ್ಲಾಸ್ಟಿಕ್ ಬದಲಾದಣೆಗಳುಂಟಾಗಿ ಅದು ಉಬ್ಬುತ್ತದೆ. ತಣ್ಣಗಾದೊಡನೆ ಶಾಯಿ ಅಳವಡಿಕೆಗೊಂಡು ಉಬ್ಬಿವಂತೆ (ಎಂಬಾಸ್) ಕಾಣುತ್ತದೆ. ಪತ್ರಶಿರಗಳು. ಪರಿಚಯಪತ್ರಗಳು ಮುಂತಾದವುಗಳಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತದೆ. ಫ್ಲೆಕ್ಸೊಗ್ರಫಿ: ಇದು ಸಹ ಉಬ್ಬು ಮುದ್ರಣ ಪ್ರಕ್ರಿಯೆಯ ಒಂದು ವಿಶೇಷ. ಇದರಲ್ಲಿ ಬಳುಕುವ ರಬ್ಬರ್ ದ್ವಿಪ್ರತೀಕರಣ ಫಲಕಗಳ ಉಪಯೋಗವಾಗುತ್ತದೆ. ಮುದ್ರಣಕ್ಕೆ ಆಲ್ಕೊಹಾಲ್ ಆಧಾರಿತ ದ್ರವಶಾಯಿಗಳನ್ನು ಬಳಸಲಾಗುತ್ತದೆ. ಇದರ ಉಪಯೋಗ ಬಹುತೇಕ ಪ್ಯಾಕೇಜಿಂಗ್ ಮತ್ತು ವೆಬ್‍ಫೆಡ್ ಯಂತ್ರಗಳಲ್ಲಿದೆ. ಮೂರುಬಗೆಯ ಫ್ಲೆಕ್ಸೊ ಮುದ್ರಣಯಂತ್ರಗಳಿವೆ: 1. ಸ್ಟ್ಯಾಕ್ ಬಗೆ: ಇದರಲ್ಲಿ ಎರಡು ಅಥವಾ ಹೆಚ್ಚು ಮುದ್ರಣ ಮತ್ತು ಶಾಯಿಹಾಕುವ ಘಟಕಗಳನ್ನು ಒಂದರಮೇಲೊಂದರಂತೆ ಒಂದು ಅಥವಾ ಎರಡೂ ಕಡೆಗಳಲ್ಲಿ ಅಳವಡಿಸಲಾಗುತ್ತದೆ. ಈ ಯಂತ್ರಗಳನ್ನು ವೆಬ್‍ಗಳ ಅರ್ಧ ಅಗಲವನ್ನು ಎರಡೂ ಕಡೆ ಮುದ್ರಿಸಲು ಉಪಯೋಗಿಸಬಹುದು (ಪರ್ಫೆಕ್ಟಿಂಗ್_ಡೆರ್‍ಟೈಪ್ ವೃತ್ತ ಪತ್ರಿಕಾ ಲೆಟರ್‍ಪ್ರೆಸ್ ಯಂತ್ರಗಳ ಮಾದರಿ). 2 ಸಮಾನ ಅಚ್ಚೊತ್ತು ಬಗೆ: ಎರಡಕ್ಕೂ ಹೆಚ್ಚು ಫಲಕಸಿಲಿಂಡರುಗಳಿದ್ದರೂ ಒಂದೇ ಅಚ್ಚೊತ್ತುಸಿಲಿಂಡರ್ ಇರುವುದು (ಇದಕ್ಕೆ ಡ್ರಮ್ ಎಂದು ಹೆಸರು). 3 ಸಮಾನ ಅಚ್ಚೊತ್ತು ಬಗೆ: ಇದು ಯೂನಿಟ್ ಮಾದರಿಯದು. ಪ್ರತಿಯೊಂದು ಯೂನಿಟ್ಟಿನಲ್ಲಿಯೂ ಒಂದೊಂದು ಫಲಕ ಮತ್ತು ಅಚ್ಚೊತ್ತು ಸಿಲಿಂಡರುಗಳಿರುತ್ತವೆ. ಘಟಕಗಳನ್ನು ಪಕ್ಕಪಕ್ಕದಲ್ಲಿ ಅಳವಡಿಸಲಾಗಿರುತ್ತದೆ. ಫ್ಲೇಕ್ಸೊಗ್ರಫಿ ಮುದ್ರಣದಲ್ಲಿ ಗ್ಲಾಸಿಕ್ ಕಾಗದವೂ (ಪಾರದರ್ಶಕ ಕಾಗದ) ಸೇರಿದಂತೆ ಅನೇಕ ರೀತಿಯ ಕಾಗದಗಳು. ಪ್ಲಾಸ್ಟಿಕ್ ಫಿಲಮ್ ಪೇಪರ್‍ಬೋರ್ಡ್ ಫಾಯಿಲ್ ಇವುಗಳ ಮೇಲೆ ಮುದ್ರಣ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಶಾಯಿ ಒಣಗುವುದು ನಿಧಾನ ಆದ್ದರಿಂದ ಕಾವು ಬಳಸಿ ಒಣಗಿಸಬೇಕಾಗುತ್ತದೆ. ಹಾಗೂ ಹಲವೊಮ್ಮೆ ಶಾಖ ನಿವಾರಿಸಲು ಶೈೀತ್ಯೀಕರಿಸ ಬೇಕಾಗುತ್ತದೆ (ಚಿಲ್ಲಿಂಗ್). ಇತರ ಪ್ರಕ್ರಿಯೆ ಮುದ್ರಣಯಂತ್ರಗಳಲ್ಲಿ ಕಾಣಲಾಗದ ಸ್ವಿಂಗ್ ಔಟ್ ಎಂಬ ವಿಶಿಷ್ಟ ಪ್ರಕ್ರಿಯೆ ಫ್ಲೆಕ್ಸೊಯಂತ್ರಗಳಲ್ಲಿದೆ. ಇದರಲ್ಲಿ ಫಲಕಸಿಲಿಂಡರ್ ಎರಡು ಘಟಕಗಳಾಗಿ ವಿಂಗಡಣೆಯಾಗಿರುತ್ತದೆ. ಪ್ರತಿಯೊಂದೂ ಸಿಲಿಂಡರಿನ ಅರ್ಧಭಾಗ ದಷ್ಟಿರುತ್ತದೆ. ಹೀಗೆಯೇ ಘೌಂಟನ್ (ಶಾಯಿ ಊಡುವ ಭಾಗ) ಹಾಗೂ ಮಧ್ಯವರ್ತಿ ಶಾಯಿರೋಲರುಗಳೂ ವಿಭಾಗಿಸಲ್ಪಟ್ಟಿರುತ್ತವೆ. ಈ ವ್ಯವಸ್ಥೆಯಿಂದ ಯಂತ್ರದ ಒಂದು ಘಟಕವನ್ನು ಮಾತ್ರ ಉಪಯೋಗಿಸಿ ಚಾಲೂ ಆಗಿಡುವುದೂ ಇನ್ನೊಂದನ್ನು ಅದೇ ವೇಳೆ ಸಹಯೋಗಿಯಾಗಿಡುವುದೂ ಸಾಧ್ಯವಿದೆ. ಅಲ್ಲದೆ ಇದನ್ನು ಯಂತ್ರ ಚಾಲೂ ಆಗಿರುವಾಗಲೇ ಇನ್ನೊಂದು ಸೆಟ್ ಫಲಕಮುದ್ರಣಕ್ಕೆ ತಯಾರುಮಾಡಬಹುದು (ಉದಾಹರಣೆಗೆ ಹಾಲಿನ ಕಾರ್ಟನ್ನುಗಳು). ಪರೋಕ್ಷ ಉಬ್ಬುಮುದ್ರಣ (ಇಂಡೈರೆಕ್ಟ್ ರಿಲೀಫ್): ಇದಕ್ಕೆ ಶುಷ್ಕ ಪರಿಣಾಮ (ಡ್ರೈ ಆಫ್‍ಸೆಟ್ ಅಥವಾ ಲೆಟರ್‍ಸೆಟ್ ಮುದ್ರಣವೆಂದು ಹೆಸರು. ಈ ಪ್ರಕ್ರಿಯೆ ಉಬ್ಬು ಮುದ್ರಣ ಹಾಗೂ ಆಫ್‍ಸೆಟ್ ಪ್ರಕ್ರಿಯೆಗಳ ಜೋಡಣೆ. ಬಿಂಬವಾಹಕಗಳು ಉಬ್ಬುಮುದ್ರಣಕ್ಕಾಗಿ ಉಪಯೋಗಿಸುವ ರಿಲೀಫ್‍ಫಲಕಗಳು. ಆದರೆ ಪ್ರತಿಬಿಂಬ ವರ್ಗಾವಣೆ ಮಾತ್ರ ಮಧ್ಯವರ್ತಿ ರಬ್ಬರ್ ಬ್ಲ್ಯಾಂಕೆಟಿಗೆ ವರ್ಗಾವಣೆಗೊಂಡು ಮುದ್ರಿಸಲ್ಪಡುತ್ತದೆ. ಆದ್ದರಿಂದ ಆಫ್‍ಸೆಟ್ ಯಂತ್ರಗಳಲ್ಲಿ ಮುದ್ರಣ ಬರೀ ಶಾಯಿಘಟಕವನ್ನು ಚಾಲೂನಲ್ಲಿಟ್ಟು ತೇವಗೊಳಿಸುವ ಘಟಕವನ್ನು ತೆಗೆದು ಮುದ್ರಿಸಲಾಗುತ್ತದೆ. (ii) ತಲಲೇಖನ ಮುದ್ರಣ: ಇದರಲ್ಲಿ ಮುದ್ರಣ ಪ್ರದೇಶಗಳೂ ಅಮುದ್ರಣ ಪ್ರದೇಶಗಳೂ ಬಿಂಬವಾಹಕದ ಒಂದೇ ತಲದಲ್ಲಿರುತ್ತವೆ. ಇದನ್ನು ರಾಸಾಯನಿಕ ಮುದ್ರಣ ಪ್ರಕ್ರಿಯೆ ಎಂದೂ ಕರೆಯಬಹುದು. ಇದರಲ್ಲಿ ಹಲವಾರು ಸಂವೇದೀಕೃತ ಕಲಿಲಗಳು (ಸೆನ್ಸಿಟೈಸ್ಡ್ ಕಲ್ಲಾಯ್ಡ್ಸ್) ಬೆಳಕಿನ ಪ್ರಭಾವದಿಂದ ದ್ಯುತಿ ಯಾಂತ್ರಿಕ (ಫೋಟೊ ಮೆಕ್ಯಾನಿಕಲ್) ಬದಲಾವಣೆಗೆ ಒಳಗಾಗುತ್ತವೆ. ಅಲ್ಲದೇ ಹಲವು ಲೋಹತಲಗಳು ಗ್ರೀಸ್ ಅಥವಾ ನೀರು ಕುರಿತಂತೆ ಸಹಜ ಒಲವು ಪ್ರದರ್ಶಿಸುತ್ತವೆ. ಗ್ರೀಸ್ ಮತ್ತು ನೀರು ಪರಸ್ಪರ ವಿಕರ್ಷಿಸುತ್ತವೆ. ಈ ಗುಣಗಳನ್ನು ಉಪಯೋಗಿಸಿ ಲೋಹಫಲಕಗಳ ಹಾಗೂ ವಿಶಿಷ್ಟ ಬಗೆಯ ಲಿಥೋ ಕಲ್ಲಿನ ಮೇಲೆ ಮುದ್ರಣ ಬಿಂಬವಾಹಕಗಳನ್ನು ತಯಾರಿಸಲಾಗುತ್ತದೆ. ಆದ್ದರಿಂದ ತಲಲೇಖನ ಮುದ್ರಣಯಂತ್ರಗಳಲ್ಲಿ ಒಂದು ಕಡೆ ಶಾಯಿ ಸರಬರಾಜು ಮಾಡುವ ಏರ್ಪಾಡೂ ಇನ್ನೊಂದು ಕಡೆ ನೀರು ಸರಬರಾಜು ಮಾಡುವ ಏರ್ಪಾಡೂ ಇರುತ್ತವೆ. ಶಾಯಿರೋಲರುಗಳು ಫಲಕದ ಬಿಂಬ ಪ್ರದೇಶಗಳಿಗೆ ಶಾಯಿ ಸವರುತ್ತಿದ್ದರೆ ಅಬಿಂಬ ಪ್ರದೇಶಗಳಿಗೆ ಪ್ರತಿಯೊಂದು ಮುದ್ರಣಚಕ್ರದಲ್ಲಿಯೂ ನೀರು, ಯುಕ್ತ ರಾಸಾಯನಿಕ ಮಿಶ್ರಣ ಅಥವಾ ಆಲ್ಕೊಹಾಲ್-ನೀರಿನ ಮಿಶ್ರಣ ಪುನರ್ಭರಣವಾಗುತ್ತಲೇ ಇರುವುದು. ಆದರೆ ಕಾಲೊಟೈಪ್ ಎಂಬ ಸಮತಲ ಮುದ್ರಣ ಪ್ರಕ್ರಿಯೆ ಇದಕ್ಕೆ ಅಪವಾದ. ಸಮತಲಪ್ರಕ್ರಿಯೆಯಲ್ಲಿ ನಾಲ್ಕು ಬಗೆಗಳಿವೆ: ಕಲ್ಲಚ್ಚು ನೇರ ಸಮತಲ, ಆಫ್‍ಸೆಟ್, ಕಾಲೊಟೈಪ್. ಕಲ್ಲಚ್ಚು: ಇದು ಸಮತಲಪ್ರಕ್ರಿಯೆಯ ಮೂಲ ವಿಶಿಷ್ಟ ಬಗೆಯ ಕೆಲವು ಕಲ್ಲುಗಳ ಮೇಲೆ_ಇವೇ ಲಿಥೊಕಲ್ಲುಗಳು_ಬಿಂಬಗಳನ್ನು ನೇರ ಬರೆದು ದ್ಯುತಿ ಯಾಂತ್ರಿಕವರ್ಗಾವಣೆಯಿಂದ ಅವನ್ನು ವರ್ಗಾಯಿಸಲಾಗುತ್ತದೆ. ಒಮ್ಮೆ ನೀರು ಸವರಿ ಕೂಡಲೆ ಶಾಯಿಲೇಪಿಸಿ ಮುದ್ರಣ ಮಾಡುತ್ತಾರೆ. ಇದು ಕೇವಲ ನಾಜೂಕಿನ ಲಿಥೊಗ್ರಫಿಯಾಗಿ ಉಪಯೋಗದಲ್ಲಿದೆ ಅಷ್ಟೆ (ಚಿತ್ರ 3). ನೇರಸಮತಲ: ಇದರಲ್ಲಿ ಲಿಥೋಕಲ್ಲಿನ ಬದಲಿಗೆ ಫಲಕಗಳು ಬಿಂಬಧಾರಕಗಳಾಗಿರುತ್ತವೆ. ಪ್ರೂಫಿಂಗ್ ಪ್ರೆಸ್‍ಗಳ ರೀತಿಯ ಯಂತ್ರಗಳಲ್ಲಿ ಶಾಯಿ ಹಾಕುವ ಹಾಗೂ ತೇವಗೊಳಿಸುವ ಏರ್ಪಾಡು ಮಾಡಿ ಮುದ್ರಣ ಮಾಡಬಹುದು. ಇದನ್ನು ವಿಶೇಷವಾಗಿ ಪ್ರೂಫಿಂಗಿನಲ್ಲಿಯೂ ಅಲ್ಪ ಪ್ರಮಾಣದಲ್ಲಿ ಮ್ಯಾಪ್ ಮುದ್ರಣದಲ್ಲೂ ಬಳಸುವರು.

ಚಿತ್ರ-3

ಆಫ್‍ಸೆಟ್ ಲಿಥೊಗ್ರಫಿ: ಉಬ್ಬು ಮುದ್ರಣದಂತೆ ಇದು ಕೂಡ ಒಂದು ಪ್ರಚಲಿತ ಮುದ್ರಣ ಪದ್ಧತಿ. ಛಾಯಾಗ್ರಹಣ ಮತ್ತು ಆಲೇಖಪುನರುತ್ಪಾದನೆಗಳ ಅಭಿವೃದ್ಧಿ ಜೊತೆಯಲ್ಲಿ ಈ ಪದ್ಧತಿಯೂ ಬೆಳೆದಿದೆ. ಇದರ ಯಶಸ್ಸು ಬಿಂಬ ಧಾರಕವನ್ನು ಆಧರಿಸಿದೆ. ಆದ್ದರಿಂದ ಈ ಪ್ರಕ್ರಿಯೆಯನ್ನು ಅನುಸರಿಸುವ ಹಲವು ಬಗೆಯ ಬಿಂಬಧಾರಕಗಳನ್ನು ಅಧ್ಯಯನ ಮಾಡಿ ತರುವಾಯ ಮುದ್ರಣಯಂತ್ರಗಳನ್ನು ಅಭ್ಯಸಿಸುವುದು ಯುಕ್ತ (ಚಿತ್ರ 4). ಸಮತಲಬಿಂಬಧಾರಕಗಳು ಏಳು ಬಗೆಯವು: 1 ಆಲ್ಬ್ಯುಮಿನ್ ಅಥವಾ ತಲಫಲಕ, 2 ಪೂರ್ವ ಸಂವೇದೀಕೃತ ಫಲಕ, 3 ಒರೆಸಿ ತೆಗೆವ ಫಲಕ, 4 ಆಳಕೆತ್ತನೆ ಫಲಕ, 5 ದ್ವಿಲೋಹ ಬಹುಲೋಹ ಫಲಕ, 6 ನೇರ ಪ್ರತಿಬಿಂಬ ಫಲಕ, 7 ಸ್ಥಿತ ವೈದ್ಯುತ ಫಲಕ. 1 ಆಲ್ಬ್ಯುಮಿನ್ ಅಥವಾ ತಲಫಲಕ: ಮೊಟ್ಟೆಯ ಬಿಳುಪೇ ಆಲ್ಬ್ಯುಮಿನ್. ಈ ಸಾವಯವ ಕಲಿಲವನ್ನು ಉಪಯೋಗಿಸಿ ತಲಫಲಕವನ್ನು ತಯಾರಿಸಲಾಗುವುದು. ಇದರ ತಲದ ಮೇಲೆ ಬಿಂಬಧಾರಕವಿರುವುದರಿಂದ ಇದಕ್ಕೆ ತಲಫಲಕವೆಂಬ ಹೆಸರಿದೆ. 2 ಪೂರ್ವಸಂವೇದೀಕೃತ ಫಲಕ: ದ್ಯುತಿಸಂವೇದನಶೀಲ ವಸ್ತುವಿನಿಂದ ಲೇಪಿತವಾದ ಫಲಕವಿದು. ಸಾಮಾನ್ಯವಾಗಿ ಡೈಅeóÉೂೀಸಂಯುಕ್ತಗಳಿಂದ ಮಾಡಲ್ಪಟ್ಟಿರುತ್ತದೆ. ಬೈಕ್ರೊಮೇಟ್ ಸಂವೇದನಕಾರಿಗಳಿಂದ ಸಂವೇದೀಕರಿಸ ಬೇಕಾಗಿರುವ ತಲಫಲಕ ಸಹ ಬಳಕೆಯಲ್ಲಿದೆ. ನೆಗೆಟಿವ್‍ಗಳನ್ನೂ ಪಾಸಿಟಿವ್‍ಗಳನ್ನೂ ಉಪಯೋಗಿಸಿ ಫಲಕವನ್ನು ತಯಾರಿಸಬಹುದು. 3 ಒರಸಿ ತೆಗೆವ (ವೈಪ್‍ಅನ್) ಫಲಕ: ಇದು ಕೂಡ ಪೂರ್ವಸಂವೇದೀಕೃತ ಫಲಕದಂತೆಯೇ ಇದೆ. ಆದರೆ ಇದರಲ್ಲಿ ದ್ಯುತಿಸಂವೇದನಶೀಲಲೇಪನ ಮಾತ್ರ ಇರುವುದಿಲ್ಲ. ಕೋಟಿಂಗ್ ದ್ರಾವಣವನ್ನು ಸ್ವತಃ ಕೈಯಿಂದ ಹಚ್ಚುವುದರ ಮೂಲಕ ತಯಾರಿಸಬೇಕಾಗುತ್ತದೆ.

ಚಿತ್ರ-4

4 ಆಳಕತ್ತನೆ ಫಲಕ: ಇದರಲ್ಲಿ ಬಿಂಬಧಾರಕ ಫಲಕದ ಮೇಲಿರದೆ ಅದರಲ್ಲಿ ಕೆತ್ತಲ್ಪಟ್ಟಿರುತ್ತದೆ ಮುದ್ರಣಬಿಂಬ ಈ ರೀತಿ ಇರುವುದರಿಂದ ಈ ಫಲಕ ಹೆಚ್ಚು ಬಾಳಿಕೆ ಬರುವುದು. ಒಳ್ಳೆಯ ಗುಣಮಟ್ಟದ ಮುದ್ರಣಕ್ಕೆ ಇದು ಉಪಯುಕ್ತ (ಚಿತ್ರ 5). 5 ದ್ವಿಲೋಹಫಲಕ ಮತ್ತು ತ್ರಿಲೋಹ ಫಲಕ (ಬೈಮೆಟಲ್, ಟ್ರೈಮೆಟಲ್): ಲೋಹಗಳಿಗೆ ಶಾಯಿಯನ್ನು ಕುರಿತಂತೆ ಇರುವ ಸಹಜ ಒಲವು (ಅಥವಾ ತಿರಸ್ಕಾರ ಎಂಬ ಗುಣವನ್ನು ಉಪಯೋಗಿಸಿ ಇದನ್ನು ತಯಾರಿಸಿದೆ.

ಚಿತ್ರ-5

ತಾಮ್ರಕ್ಕೆ ಅತಿ ಹೆಚ್ಚು ಶಾಯಿಗ್ರಾಹಕ ಗುಣವಿದೆ. ಎಂದೇ ಫಲಕ ತಯಾರಿಕೆಯಲ್ಲಿ ಈ ಲೋಹಕ್ಕೆ ಮೊದಲ ಸ್ಥಾನ ತಾಮ್ರ ಕ್ರೋಮಿಯಮ್ ಫಲಕ, ಸತುವು ಅಥವಾ ಉಕ್ಕು ಆಧಾರದ ಮೇಲೆ ತಾಮ್ರ ಲೇಪನ ಮಾಡಿ ಬಳಿಕ ಕ್ರೋಮಿಯಮ್ ಲೇಪನ ಮಾಡಿರುವ ಫಲಕ (ಇದನ್ನು ತ್ರಿಲೋಹ ಫಲಕವೆಂದು ಹೇಳುವುದುಂಟು). ಸ್ಟೇನ್‍ಲೆಸ್ ಉಕ್ಕು-ತಾಮ್ರಫಲಕ, ಅಲ್ಯೂಮಿನಿಯಮ್-ತಾಮ್ರಫಲಕ ಇವೆಲ್ಲ ದ್ವಿಲೋಹಫಲಕಗಳಿಗೆ ಉದಾಹರಣೆಗಳು (ಚಿತ್ರ 6_ಪುಟ 340) 6 ನೇರ ಪ್ರತಿಬಿಂಬ ಫಲಕ: ಇದನ್ನು ನೇರವಾಗಿ ಬೆರಳಚ್ಚು ಮಾಡುವುದರ ಮೂಲಕ ತಯಾರಿಸಬಹುದು. ಕಾಗದದ ಪಟ್ಟಿ (ಪೇಪರ್ ರಿಬ್ಬನ್) ಲಿಥೋ ಕ್ರೆಯಾನ್ ಅಥವಾ ವಿಶೇಷ ಶಾಯಿ ಉಪಯೋಗಿಸಿ ಉಬ್ಬು ಮುದ್ರಣಬಿಂಬ ಕಂಡು ತೆಗೆಯಲಾಗುವುದು. ಇದರಲ್ಲಿ ಸಾಧಾರಣವಾಗಿ ಕಾಗದ ಅಥವಾ ರಟ್ಟು ಕಾಗದವೇ ಬಿಂಬವಾಹಕ ಕಚೇರಿಗಳಲ್ಲಿ ಬಳಸುವ ದ್ವಿಪ್ರತೀಕರಣ ಯಂತ್ರಗಳಲ್ಲಿ ಇದರ ಬಳಕೆ ಇದೆ. 7 ಸ್ಥಿತವೈದ್ಯುತಫಲಕ: ಇದು ಸಹ ಕಚೇರಿ ದ್ವಿಪ್ರತೀಕರಣ ಯಂತ್ರದಲ್ಲಿ ಉಪಯೋಗದಲ್ಲಿದೆ. ಛಾಯಾಗ್ರಹಣ ಪದ್ಧತಿ ಉಪಯೋಗಿಸಿ ತಯಾರಿಸುವುದರಿಂದ ಇದನ್ನು ಎಲೆಕ್ಟ್ರೊಫಾಕ್ಸ್ ಎಂದೂ ಕ್ಸೆರೊಗ್ರಫಿ ತತ್ತ್ವ ಉಪಯೋಗಿಸಿ ತಯಾರಿಸುವುದರಿಂದ ಕ್ಸೆರಾಕ್ಸ್‍ಫಲಕ ಎಂದೂ ಕರೆಯುವುದುಂಟು. ಮುದ್ರಣ ಬಿಂಬವನ್ನು ಬಿಂಬವಾಹಕಕ್ಕೆ ಇದರ ಮೇಲೆ ರಾಳದ ಬಲು ತೆಳುಪುಡಿಯನ್ನು ಸ್ಥಿತವೈದ್ಯುತಪದ್ಧತಿಯಲ್ಲಿ ಸವರಿ ಶಾಖ ಅಥವಾ ದ್ರಾವಕ ಉಪಯೋಗಿಸಿ ಬೆಸೆಯಲಾಗುವುದು. ಬಿಂಬವಾಹಕ ಸಾಧಾರಣವಾಗಿ ಕಾಗದದ ಫಲಕ. ಕಾಲೊಟೈಪ್ ಮುದ್ರಣ ಪ್ರಕ್ರಿಯೆ : ಅವಿಚ್ಛನ್ನ ಟೋನ್ ನೆಗೆಟಿವ್‍ನಲ್ಲಿ ಛಾಯಾಸಾಂದ್ರತೆ ಮಾರ್ಪಡುತ್ತದೆ (ಚಿತ್ರ 7). ಫಿಲ್ಮನ್ನು ಬೆಳಕಿಗೆ ಒಡ್ಡಿದಾಗ ಸಾಂದ್ರತೆಯ ಪ್ರದೇಶಗಳ ಮೂಲಕ ಜಾಸ್ತಿ ಬೆಳಕು ಅಧಿಕ ಸಾಂದ್ರತೆಯ ಪ್ರದೇಶಗಳ ಮೂಲಕ ಕಡಿಮೆ ಬೆಳಕೂ ಅಡ್ಡ ಹಾಯ್ದು ಕಾಲೊಟೈಪ್, ಲೇಪನ ಮೊದಲನೆಯ ಪ್ರದೇಶಗಳಲ್ಲಿ ಹೆಚ್ಚಾಗಿಯೂ ಎರಡನೆಯ ಪ್ರದೇಶಗಳಲ್ಲಿ ಕಡಿಮೆಯಾಗಿಯೂ ಗಟ್ಟಿಕಟ್ಟುತ್ತದೆ.

ಚಿತ್ರ-6

ಈ ಪ್ರಕ್ರಿಯೆಗೆ ಜಾಲಿಕಾರೂಪಣೆ (ರೆಟಿಕ್ಯುಲೇಷನ್) ಎಂದು ಹೆಸರು. ಜಾಸ್ತಿ ಗಟ್ಟಿಕಟ್ಟಿರುವ ಪ್ರದೇಶಗಳು ಕಡಿಮೆ ತೇವ ತೆಗೆದುಕೊಳ್ಳುತ್ತವೆ ಮತ್ತು ಕಡಿಮೆ ಗಟ್ಟಿಕಟ್ಟಿದ ಭಾಗಗಳಿಗಿಂತ ಕಡಿಮೆ ಉಬ್ಬುತ್ತವೆ. ಜಾಸ್ತಿ ಗಟ್ಟಿಕಟ್ಟಿದ ಭಾಗಗಳು ಜಾಸ್ತಿ ಮಸಿ ತೆಗೆದುಕೊಳ್ಳುತ್ತವೆ. ಕಡಿಮೆ ಸಂಖ್ಯೆಯ ಪ್ರತಿಗಳು ಬೇಕಾಗುವ ಉತ್ತಮ ಗುಣಮಟ್ಟದ ಚಿತ್ರಮುದ್ರಣದಲ್ಲಿ ಈ ಪ್ರಕ್ರಿಯೆ ಬಳಕೆಯಲ್ಲಿದೆ.

ತಲಲೇಖನ ಮುದ್ರಣಯಂತ್ರಗಳು: ಲಿಥೋಮುದ್ರಣ ಯಂತ್ರಗಳು ಪ್ರೂಫಿಂಗ್ ಯಂತ್ರಗಳಂತೆ ಸರಳವಾಗಿವೆ. ಆಫ್‍ಸೆಟ್ ಯಂತ್ರಗಳಾದರೋ ಸಾಕಷ್ಟು ಸಂಕೀರ್ಣವಾಗಿವೆ. ಈ ಯಂತ್ರಗಳಲ್ಲಿ ಮೂರು ಮುಖ್ಯ ಸದಸ್ಯ ಮುದ್ರಣ ಘಟಕಗಳಿವೆ: 1. ಫಲಕ ಸಿಲಿಂಡರ್_ಇದಕ್ಕೆ ಬಿಂಬವಾಹಕ ಪ್ಲೇಟನ್ನು ಅಳವಡಿಸಲಾಗುವುದು. 2. ಬ್ಲ್ಯಾಂಕೆಟ್ ಸಿಲಿಂಡರ್-ಇದಕ್ಕೆ ಪ್ಲೇಟಿನಿಂದ ಮುದ್ರಣ ಬಿಂಬವನ್ನು ಸೆಟ್‍ಆಪ್ ಮಾಡಲು ರಬ್ಬರ್ ಬ್ಲ್ಯಾಂಕೆಟನ್ನು ಅಳವಡಿಸಲಾಗುವುದು. 3. ಅಚ್ಚೊತ್ತು ಸಿಲಿಂಡರ್-ಇದರ ಮೇಲಿರುವ ಮುದ್ರಣ ಬಿಂಬ ಕಾಗದ ಅಥವಾ ಯಾವುದೇ ತಲದ ಮೇಲೆ ಮುದ್ರಣವಾಗುವುದು.

ಚಿತ್ರ-7

ಈ ಭಾಗಗಳ ಜೊತೆಗೆ ಹಲವಾರು ರೋಲರುಗಳಿರುವ ಶಾಯಿ ಊಡುವ ಘಟಕ ಮತ್ತು ಘಟಕಕ್ಕೆ ಶಾಯಿ ಅಲ್ಲದೇ ನೀರು ಅಥವಾ ಫೌಂಟನ್ ದ್ರಾವಣ ಸರಬರಾಜು ಮಾಡಲು ಆದ್ರ್ರತಾಘಟಕ (ಡ್ಯಾಂಪಿಂಣ್ ಯೂನಿಟ್) ಸಹ ಇರುವುದು. ತೇವಗೊಳಿಸುವ ರೋಲರುಗಳ ಮೇಲೆ ಬಟ್ಟೆಯ ಅಥವಾ ಕಾಗದದ ಸ್ಲೀವ್‍ಗಳಿರುವವು.

ಆಫ್‍ಸೆಟ್ ಮುದ್ರಣಯಂತ್ರಗಳನ್ನು ಶೀಟ್‍ಫೆಡ್ ಹಾಗೂ ವೆಬ್‍ಫೆಡ್ ಯಂತ್ರಗಳಾಗಿ ವಿಂಗಡಿಸಬಹುದು. ಶೀಟ್‍ಫೆಡ್ ಯಂತ್ರಗಳಲ್ಲಿ ಏಕವರ್ಣ. ಬಹುವರ್ಣ ಹಾಗೂ ಪರ್ಫೆಕ್ಟಿಂಗ್ ಯಂತ್ರಗಳಿರುವುವು. ಬಹುವರ್ಣ ಯಂತ್ರಗಳು ಬೆನ್ಸಾಲು (ಟ್ಯಾಂಡೆಮ್), ಕೋಶ (ಮಾಡ್ಯೂಲ್) ಅಥವಾ ಘಟಕ (ಯೂನಿಟ್) ಮಾದರಿಗಳವು. ಬೆನ್ಸಾಲು ಯಂತ್ರಗಳಲ್ಲಿ ಎರಡು ಏಕವರ್ಣಯಂತ್ರ ಮತ್ತು ಎರಡು ಘಟಕಗಳನ್ನು ಒಂದರಮೇಲೊಂದು ನೇರಗೆರೆ ಮೇಲಿರುವಂತೆ ಅಳವಡಿಸಲಾಗಿರುವುದು. ಮುದ್ರಿತಹಾಳೆ ಮೊದಲಿನ ಘಟಕದಿಂದ ಎರಡನೆಯದಕ್ಕೆ ಹಾಯ್ದು ಅನಂತರ ಬಟವಾಡೆ ಕೊನೆಗೆ ತಲಪುವುದು. ಕೋಶಬಗೆ ಯಂತ್ರಗಳನ್ನು ಸರ್ವಸಮ ಅಚ್ಚೊತ್ತು ಸಿಲಿಂಡರಿರುವ ದ್ವಿವರ್ಣ ಯಂತ್ರಗಳಾಗಿ ಕಟ್ಟಲಾಗಿರುತ್ತದೆ. ಇವನ್ನು ಬೆನ್eóÁಲಿನಲ್ಲಿ ಅಳವಡಿಸಿ 4 ಅಥವಾ 6 ವರ್ಣಯಂತ್ರಗಳಾಗಿ ಮಾರ್ಪಡಿಸಬಹುದು. ವೆಬ್‍ಫೆಡ್ ಆಫ್‍ಸೆಟ್ ಯಂತ್ರಗಳನ್ನು ಅವುಗಳ ಉಪಯೋಗದ ಮೇರೆಗೆ ಜಾಬ್, ಪ್ರಕಟಣಾ. ವೃತ್ತಪತ್ರಿಕಾ ಹಾಗೂ ಪರಮಾಯಿಷಿ ಮುದ್ರಣಯಂತ್ರಗಳೆಂಬ ನಾಲ್ಕು ಬಗೆಗಳಾಗಿ ಅಲ್ಲದೆ ಪರ್ಫೆಕ್ಟಿಂಗ್ ಮತ್ತು ನಾನ್‍ಪರ್ಫೆಕ್ಟಿಂಗ್ ಎಂದು ಸಹ ವಿಂಗಡಿಸಬಹುದು. ಸಾಧಾರಣವಾಗಿ ನಿಶ್ಚಿತ ಉದ್ದೇಶಗಳಿಗಾಗಿಯೇ ರೂಪಿಸಲ್ಪಟ್ಟಿರುವ ಯಂತ್ರಗಳಿವು. ಈ ಮುಂದಿನ ಪೂರಕ ಘಟಕಗಳ ಸಹಿತ ಇವನ್ನು ಸರಬರಾಜು ಮಾಡಲಾಗುತ್ತದೆ.

ಚಿತ್ರ-8

1 ಉರುಳೆ: ಊಡು ಉಪಕರಣ (ರೀಲ್ ಫೀಡರ್). ಇದು ಸರಳ ರೀತಿಯ ಉರುಳೆ. ಸ್ತಂಭವಾಗಿರಬಹುದು ಅಥವಾ ಪೂರ್ಣ ಸ್ವಯಂ ಚಾಲಿತವಾದ ಯಂತ್ರವನ್ನು ನಿಲ್ಲಿಸದೆ ಒಂದು ಉರುಳೆಯಿಂದ ಮತ್ತೊಂದು ಜೋಡಿಸುವಂಥದಿರಬಹುದು. 2 ಒಣಗಿಸುವ ಯಂತ್ರಸಾಧನ: ಉತ್ತಮ ಮಟ್ಟದ ಮುದ್ರಣದಲ್ಲಿ ಅವಶ್ಯವಿರುತ್ತದೆ. 3 ಬಟವಾಡೆ ಸಾಧನೆ: ಅಂತಿಮ ಉತ್ಪನ್ನ ಅವಲಂಬಿಸಿ, ಫೋಲ್ಡರ್. ಫೀಡರ್ ರೀವೈಂಡರ್, ರಟ್ಟಿನ ಪೆಟ್ಟಗೆ ತಯಾರಿಕೆಗೆ ಅಚ್ಚು ಕತ್ತರಿಸಲು ಸಾಲು ಬಟವಾಡೆ ಸಾಧನ ಇತ್ಯಾದಿ ಘಟಕಗಳಿರುತ್ತವೆ. 4 ಸುರುಳಿ: ನಿಯಂತ್ರಣ ಸಾಧನ. ಚಲಿಸುತ್ತಿರುವ ಸುರುಳಿಯ ಅವಿಚ್ಛಿನ್ನ ಹಾಗೂ ಸ್ವಯಂಚಲಿ ಹೊಂದಾಣಿಕೆ ಮತ್ತು ಮಸಿ ಊಡುವಿಕೆ. ವರ್ಣಮುದ್ರಣ ಸಾಮಂಜಸ್ಯ, ವೇಗ ಇವುಗಳ ನಿಯಂತ್ರಣಗಳಿಗೆ ಸ್ವಯಂಚಾಲಿತ ವ್ಯವಸ್ಥೆ. 5 ತೇವಗೊಳಿಸುವ ವ್ಯವಸ್ಥೆ: ಫಲಕವನ್ನು ತೇವವಾಗಿಡುವ ಏರ್ಪಾಡಿದು. ಆಫ್‍ಸೆಟ್ ಮುದ್ರಣಯಂತ್ರಗಳಿಗೆ ಬಲು ಮುಖ್ಯ. ಏಕೆಂದರೆ ಮುದ್ರಣದ ಗುಣಮಟ್ಟ ಮತ್ತು ಫಲಕಗಳ ಬಾಳಿಕೆ ಈ ಏರ್ಪಾಡನ್ನು ಅವಲಂಬಿಸಿರುವುದು. ಹಲವು ವಿಧಗಳ ತೇವಗೊಳಿಸುವ ವ್ಯವಸ್ಥೆಗಳನ್ನು ಚಿತ್ರ (8) ಮತ್ತು ಚಿತ್ರ (9 ಪುಟ 340)ರಲ್ಲಿ ಕಾಣಬಹುದು 6 ಒಣಗಿಸುವ ವ್ಯವಸ್ಥೆ: ಒಣಗಿಸುವ ವ್ಯವಸ್ಥೆಯೂ ಹಲವು ವೆಬ್ ಆಫ್‍ಸೆಟ್ ಮುದ್ರಣ ಯಂತ್ರಗಳಿಗೆ ಅತ್ಯಗತ್ಯ. ಮುದ್ರಣಾನಂತರ ಹಾಳೆಯನ್ನು ಒಣಗಿಸುವ ವ್ಯವಸ್ಥೆ ಇರುವ ಕೋಷ್ಠಗಳ ಮೂಲಕ ಹಾಯಿಸಿದಾಗ ಶಾಯಿ ಚಿತ್ತು ಆಗುವುದು ತಪ್ಪುತ್ತದೆ. ಮುದ್ರಣದ ಗುಣಮಟ್ಟ ವರ್ಧಿಸುತ್ತದೆ. ಆಫ್‍ಸೆಟ್ ವಿಧಾನವನ್ನು ಅಳವಡಿಸಿ ಕಾಗದದ ಹಾಳೆಗಳ ಬದಲು ಲೋಹದ ಹಾಳೆಗಳನ್ನು ಮುದ್ರಿಸುವ ಯಂತ್ರಗಳಿರುತ್ತವೆ. ಇವುಗಳಿಗೆ ಮೆಟಲ್ ಡೆಕೊರೇಷನ್ ಎಂದು ಹೆಸರು. ಇವುಗಳಲ್ಲಿ ವಿಶೇಷವಾಗಿ ಒಣಗಿಸುವ ಘಟಕವನ್ನು (ಡ್ರೈಯಿಂಗ್ ಯೂನಿಟ್) ಸಹ ಅಳವಡಿಸಿರುತ್ತಾರೆ. (iii) ಇಳಿಕೆತ್ತನೆ ಮುದ್ರಣ: ಇದು ಉಬ್ಬುಮುದ್ರಣಕ್ಕೆ ವಿರುದ್ಧವಾದ ಪ್ರಕ್ರಿಯೆ. ಬಿಂಬಭಾಗಗಳು ಬಿಂಬವಾಹಕದಲ್ಲಿ ಕೆಳಮಟ್ಟದಲ್ಲಿರುತ್ತವೆ ಅಥವಾ ಕೆತ್ತಲ್ಪಟ್ಟಿರುತ್ತವೆ. ಅಲ್ಲದೇ ಬಿಂಬವಾಹಕದ ಮೇಲ್ಮೈ ಅಬಿಂಬಭಾಗವಾಗಿರುತ್ತದೆ. ಈ ಕಾರಣದಿಂದ ಶಾಯಿ ಸವರುವಾಗ ಇದರ ಮೇಲಿರುವ ಶಾಯಿಯನ್ನು ಡಾಕ್ಟರ್ ಬ್ಲೇಡ್ ಎಂಬ ಉಪಕರಣದ ನೆರವಿನಿಂದ ಒರೆಸಿ ಮುದ್ರಿಸಲಾಗತ್ತದೆ (ಚಿತ್ರ 10, ಪುಟ 341). ಇಳಿಕೆತ್ತನೆ ಪ್ರಕ್ರಿಯೆ ಬಿಂಬವಾಹಕದ ತಯಾರಿಕೆಯಲ್ಲಿ ಬಿಂಬಗಳನ್ನು ಗ್ರಂಥಪಾಠವಾಗಿರಲಿ, ರೇಖಾಚಿತ್ರವೇ ಆಗಿರಲಿ ಸಣ್ಣಕೋಶಗಳಾಗಿ (ಬಿಂಬ ಭಾಗ) ಹಾಗೂ ಮೇಲ್ಮೈಗಳಾಗಿ (ಅಬಿಂಬ ಭಾಗ) ಪರಿವರ್ತಿಸಲಾಗುತ್ತದೆ. ಇದನ್ನು ಕೆತ್ತಿ ಅಥವಾ ಕೊರೆದು ತಯಾರಿಸಬಹುದು. ಎಂದೇ ಇದಕ್ಕೆ ಇಳಿಕೆತ್ತನೆ ಹಾಗೂ ಗ್ರವ್ಯೂರ್ ಎಂದು ಹೆಸರು. 1 ನಾಜೂಕು ಇಳಿಕೆತ್ತನೆ: ನಾಜೂಕಾದ ಕೈಕೆತ್ತನೆ ಮೂಲಕ ನುರಿತ ಕಲಾವಿದರು ತಾಮ್ರ, ಸತುವು ಮುಂತಾದ ಲೋಹದ ಫಲಕಗಳ ಮೇಲೆ ಬಿಂಬಗಳನ್ನು ಕೆತ್ತುತ್ತಾರೆ. ಇವಕ್ಕೆ ಗಟ್ಟಿಶಾಯಿ ಲೇಪಿಸಿ ಕೈಒತ್ತು. ಮಾದರಿಯಂತ್ರಗಳಲ್ಲಿ ಎಚ್ಚರಿಕೆಯಿಂದ ಮುದ್ರಣ ಮಾಡುತ್ತಾರೆ. ಈ ಕೆಲಸ ಕರಕುಶಲ ವರ್ಗಕ್ಕೆ ಸೇರುತ್ತದೆ. ಕೆತ್ತನೆಯನ್ನು ಗೆರೆಕೆತ್ತನೆ ಮಾಡುವುದು (ಲೈನ್ ಎನ್‍ಗ್ರೇವಿಂಣ್). ಶುಷ್ಕಬಿಂದು ಮತ್ತು ಮೆಝೊಟಿಂಟ್ ಎಂಬ ಮೂರು ವಿಧಾನಗಳಿಂದ ಮಾಡಬಹುದು. ಕೈಕೆತ್ತನೆಯಲ್ಲಿ ಚಿತ್ರವನ್ನು ನೇರವಾಗಿ ಫಲಕದ ಮೇಲೆ ಸಾಧಾರಣ ಪೆನ್ಸಿಲ್‍ನಿಂದ ಬರೆದು ಅಥವಾ ರೇಖಿಸಿ ಬೇರೆ ಬೇರೆ ರೀತಿಯ ಸ್ಕ್ರೇಪರುಗಳ ಮೂಲಕ ತರಕಲ ಏಣು (ಬರ್) ತಯಾರಿಸಿ ಚಿತ್ರ ಮೂಡಿಸುತ್ತಾರೆ (ಚಿತ್ರ 11 ಪುಟ 342). ಶುಷ್ಕಬಿಂದು ವಿಧಾನದಲ್ಲಿ ಫಲಕವನ್ನು ಕೆರದು ತರಕಲ ಏಣುವನ್ನು ಸೃಷ್ಟಿಸಲಾಗುತ್ತದೆ. ಈ ಏಣುಗಳ ಹಿಂದೆ ಲೇಪಿಸಿ ಶೇಖರಿಸಲ್ಪಟ್ಟ ಶಾಯಿ ಚಿತ್ರವನ್ನು ರೂಪಿಸಿ ಮುದ್ರಿಸುತ್ತದೆ. ಮೆಝೊಟಿಂಟ್ ವಿಧಾನದಲ್ಲಿ ಓಲಾಡುವ ಆಂದೋಲಕ ಸಾಧನವನ್ನು ಉಪಯೋಗಿಸಿ ಕೋಶಗಳನ್ನು ಸೃಷ್ಟಿಸಲಾಗುತ್ತದೆ.

ಚಿತ್ರ-9

ಇದರಲ್ಲಿ ಗಡಸು ಉಕ್ಕಿನ ಹಲ್ಲುಗಳುಳ್ಳ ಕೈಕೆತ್ತನೆ ಸಾಧನ ಉಪಯೋಗಿಸಿ ಏಣುಗಳ ಚಿತ್ರ ತಯಾರಾಗುತ್ತದೆ. ಏಣುಗಳು ಜಾಸ್ತಿ ಇರುವಲ್ಲಿ ಹೆಚ್ಚು ಕಡಿಮೆಯಾದ ಹಾಗೆಲ್ಲ ತದನುಗುಣವಾಗಿ ಶಾಯಿ ಲೇಪನಗೊಂಡು ಶೇಖರಿಸಲ್ಪಡುತ್ತದೆ ಹಾಗೂ ವಿವಿಧ ಛಾಯೆಗಳು ಮೂಡುತ್ತವೆ.

ಚಿತ್ರ-10

ಈ ರೀತಿ ಏಣುಗಳನ್ನು ಮೂಡಿಸಿದ ಬಳಿಕ ಕೊನೆಯಲ್ಲಿ ರೂಲೆಟ್ ಎಂಬ ಸಾಧನ ಉಪಯೋಗಿಸಿ ಏಣುಗಳನ್ನು ಒರಟುಮಾಡಿ ಪ್ಲೇಟನ್ನು ಸಂಸ್ಕರಿಸಲಾಗುತ್ತದೆ. ಇವೇ ಅಲ್ಲದೆ ದ್ರಾವಣಗಳನ್ನು ಉಪಯೋಗಿಸಿ ಕೊರೆಯುವುದರ ಮೂಲಕ ಕೂಡ ಫಲಕವನ್ನು ತಯಾರಿಸಬಹುದು. 2 ಉಕ್ಕಿನ ಛಾಪು ಕೆತ್ತನೆ ಮತ್ತು ಬ್ಯಾಂಕ್ ನೋಟ್ ಮುದ್ರಣ: ಇಳಿ ಕೆತ್ತನೆ ಹಾಗೂ ಉಬ್ಬಚ್ಚು ಕೆತ್ತನೆ (ಎಂಬಾಸಿಂಗ್) ವಿಧಾನಗಳ ಮಿಶ್ರಣವಿದು. ಇಲ್ಲಿ ಮುದ್ರಣದ ಜೊತೆಯಲ್ಲಿಯೇ ನಿರ್ದೇಶಿತ ಮುದ್ರಿತ ಭಾಗಗಳು ಉಬ್ಬಚ್ಚು ಕೆತ್ತನೆಗೂ ಒಳಪಡುತ್ತವೆ. ಬ್ಯಾಂಕ್ ನೋಟ್ ಮುದ್ರಣದಲ್ಲಿ ಕೇವಲ ವಕ್ರವಾಹಕಗಳನ್ನು ಉಪಯೋಗಿಸಿ ರೋಟರಿ ವಿಧಾನದಲ್ಲಿ ಮುದ್ರಣಮಾಡಲಾಗುವುದು. 3 ಶೀಟ್‍ಫೆಡ್ ಗ್ರವ್ಯೂರ್ ಮತ್ತು ರೋಟರಿ ಗ್ರವ್ಯೂರ್ ಮುದ್ರಣ: ಇವು ಛಾಯಾಚಿತ್ರಣ ತಂತ್ರಗಳನ್ನು ಉಪಯೋಗಿಸುವ ಪ್ರಕ್ರಿಯೆಗಳು. ಶೋಟ್‍ಫೆಡ್ ಗ್ರವ್ಯೂರನ್ನು ಸಾಧಾರಣವಾಗಿ ಫೊಟೋ ಗ್ರವ್ಯೂರ್ ಎಂದೂ ರೋಟರಿ ಯಂತ್ರದ ಉಪಯೋಗದಲ್ಲಿ ಅದನ್ನು ರೋಟೋ ಗ್ರವ್ಯೂರ್ ಎಂದೂ ಹೇಳುವರು. ಇಳಿ ಕೆತ್ತನೆ ಬಿಂಬವಾಹಕ ತಯಾರಿಕೆಯಲ್ಲಿ ಉಪಯೋಗಿಸುವ ಛಾಯಾಗ್ರಹಣ ಇತರ ವಿಧಾನಗಳಂತೆಯೇ ಇದ್ದರೂ ಹಾಫ್ಟೋನ್ ನೆಗೆಟಿವ್‍ಗಳ ಬದಲಿಗೆ ಅಖಂಡ ಛಾಯಾ ನೆಗೆಟಿವ್ ಉಪಯೋಗವಾಗುತ್ತದೆ. ಇಳಿಕೆತ್ತನೆ ಮುದ್ರಣ ಪದ್ಧತಿಯಲ್ಲಿ ಚಿತ್ರಗಳ ಸಂಪೂರ್ಣ ಛಾಯೆಗಳ ಮೂಡುವಿಕೆಯನ್ನು ಎರಡು ಬಗೆಗಳಲ್ಲಿ ಸಾಧಿಸಬಹುದು. ಯಂತ್ರ (11)ರ ಬಲಪಾಶ್ರ್ವದಲ್ಲಿ ಸಾಂಪ್ರದಾಯಿಕ ವಿಧಾನವನ್ನು ಚಿತ್ರಿಸಿದೆ. ತೆಟ್ಟೆಕೋನಗಳು ಆಳಕೋನಗಳಿಗಿಂತ ಕಡಿಮೆ ಶಾಯಿಯನ್ನು ಸ್ಥಳಾಂತರಿಸುತ್ತವೆ. ಹೀಗೆ ಸ್ಥಳಾಂತರಿಸಲ್ಪಟ್ಟ ಶಾಯಿಯ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿಬಿಂಬದ ಛಾಯೆಗಳು ಮೂಡುತ್ತವೆ. ಚಿತ್ರ (11)ರಲ್ಲಿ ಎಡಪಾಶ್ರ್ವದಲ್ಲಿ ಡಾಲ್ಟ್‍ಜನ್ ವಿಧಾನ ಕಾಣಬಹುದು. ಇದರಲ್ಲಿ ಕೋಶಗಳ ಆಳ ಹಾಗೂ ವಿಸ್ತಾರ ಕಪ್ಪು, ಮಧ್ಯಾಂತರ ಹಾಗೂ ಅತ್ಯುಜ್ಜ್ವಲ ಛಾಯೆಗಳನ್ನು ಮೂಡಿಸುತ್ತವೆ. ಇಳಿಕೆತ್ತನೆ ಮುದ್ರಣಯಂತ್ರಗಳ ಪೈಕಿ ಉಕ್ಕಿನ ಛಾಪು ಕೆತ್ತನೆ ಯಂತ್ರಗಳ ಪ್ಲೇಟನ್ ಮಾದರಿ ಯಂತ್ರಗಳು. ಇವು ಶಕ್ತಿಯುತ ಪ್ಲೇಟನ್‍ಗಳು. ಇವುಗಳು ಬಿಂಬವಾಹಕ ಹಾಗೂ ಅಚ್ಚೊತ್ತು ಘಟಕಗಳು ಸಮತಲೀಯವಾಗಿರುವುವು. ಮುದ್ರಣದಲ್ಲಿ ಮೂರನೆಯ ಆಯಾಮ (ಉಬ್ಬು) ಮೂಡಿಸಲು ಕೌಂಟರ್ ಎಂಬ ರಬ್ಬರ್ ಲೇಪಿಸಿದ ಬಟ್ಟೆ ಪ್ಯಾಡನ್ನು ಯಂತ್ರಕ್ಕೆ ಅಳವಡಿಸಿ ಉಪಯೋಗಿಸಲಾಗುತ್ತದೆ. ಬ್ಯಾಂಕ್ ನೋಟ್ ಮುದ್ರಣಯಂತ್ರಗಳು ಇದೇ ರೀತಿಯವು. ಆದರೆ ಇವು ರೋಟರಿ ವಿಧಾನದಲ್ಲಿ ರೂಪಿಸಲ್ಪಟ್ಟಿವೆ. (iv) ರಂಧ್ರಿತ ಸಿಲ್ಕ್ ಸ್ಕ್ರೀನ್ ಮುದ್ರಣ: ಈ ಪ್ರಕ್ರಿಯೆಯಲ್ಲಿ ಬಿಂಬವಾಹಕ ರಂಧ್ರಗಳಿಂದ ಕೂಡಿರುವುದು. ವಿವಿಧ ಭಾಗಗಳ ಸಚ್ಚಿದ್ರತೆಯ ನಿಯಂತ್ರಣದಿಂದ ಬಿಂಬಗಳನ್ನು ಮುದ್ರಿಸಲಾಗುವುದು. ಸೆಲಿಗ್ರಫಿ, ಸ್ಟೆನ್ಸಿಲಿಂಗ್, ಮಿಮಿಯೊಗ್ರಫಿ ವಿಧಾನಗಳೂ ಈ ಪ್ರಕ್ರಿಯೆಯವೇ.

ಚಿತ್ರ-11

ಸಿಲ್ಕ್‍ಸ್ಕ್ರೀನ್ ಬಿಂಬವಾಹಕಗಳನ್ನು ಕೈಕೆತ್ತನೆ, ಸ್ಟೆನ್ಸಿಲ್ ಹಾಗೂ ಫೋಟೊ ಸ್ಟೆನ್ಸಿಲ್ ವಿಧಾನಗಳಿಂದ ತಯಾರಿಸಬಹುದು. ಕೈಕೆತ್ತನೆಯಲ್ಲಿ ಎರಡು ಪದರಗಳುಳ್ಳ ವಿವಿಧ ಬಗೆಯ ಸ್ಟೆನ್ಸಿಲ್ ಫಿಲಮುಗಳ ಮೇಲೆ ಕರಕುಶಲ ವಿನ್ಯಾಸವನ್ನು ಕತ್ತರಿಸುತ್ತಾರೆ. ಬಳಿಕ ಮೇಲಿನ ಹಂಗಾಮಿ ವರ್ಣಪದರವನ್ನು ಸುಲಿದು ಕಿತ್ತೆಸೆಯುತ್ತಾರೆ. ವಿನ್ಯಾಸವುಳ್ಳ ಕೆಳಗಿನ ಪದರವನ್ನು ಬಿಂಬವಾಹಕ ಸ್ಕ್ರೀನಿನ ಮೇಲೆ ಐರನ್ ಮಾಡಿ ಅಥವಾ ಜೈವಿಕದ್ರಾವಕ ಉಪಯೋಗಿಸಿ ವಿನ್ಯಾಸವನ್ನು ಬೆಸೆಯುತ್ತಾರೆ. ಅನಂತರ ಹಂಗಾಮಿ ಆಧಾರವನ್ನು ಕಿತ್ತೊಗೆಯಲಾಗುತ್ತದೆ. ಫೋಟೊಸ್ಟೆನ್ಸಿಲ್ ತಯಾರಿಕೆಯಲ್ಲಿ ಛಾಯಾಯಾಂತ್ರಿಕಗಳ ನಿರೋಧಕಗಳನ್ನು ಉಪಯೋಗಿಸಲಾಗುತ್ತದೆ. ಇವು ಬೆಳಕಿನ ಕ್ರಿಯೆಗೆ ಸೂಕ್ಷ್ಮಗೊಳಿಸುವ ದ್ರಾವಣಗಳಿಂದ ಲೇಪಿತವಾದ ವಿವಿಧ ಸ್ಕ್ರೀನ್‍ಗಳು; ಕಾರ್ಬನ್ ಟಿಷ್ಯೂ ಹಾಗೂ ಪೂರ್ವ ಸಂವೇದಿ (ಫ್ರೀಸೆನ್ಸಿಟೈಸ್ಡ್) ಫಿಲಮುಗಳು.

ಚಿತ್ರ-12

ಸಿಲ್ಕ್ ಸ್ಕ್ರೀನ್ ಮುದ್ರಣಗಳು: ಸಿಲ್ಕ್ ಸ್ಕ್ರೀನ್ ಮುದ್ರಣದಲ್ಲಿಯೂ ಹಸ್ತಚಾಲಿತ. ಸಮತಲ ಹಾಗೂ ಸಿಲಿಂಡರ್ ಎಂಬ ಮೂರು ಬಗೆಯ ಯಂತ್ರಗಳಿವೆ (ಚಿತ್ರ 12). ಇವೇ ಅಲ್ಲದೆ ಏಕವ್ಯಕ್ತಿ ಸ್ಕ್ರೀನ್ ಮುದ್ರಣದಲ್ಲಿ ಸ್ಕ್ವೀಜೀ ಎಂಬ ಸಲಕರಣೆಯ ಆವಶ್ಯಕತೆ ಉಂಟು. ಬಲಪ್ರಯೋಗಿಸಿ ಇದನ್ನು ತಳ್ಳುವುದರಿಂದ ರಂಧ್ರಗಳ ಮೂಲಕ ಶಾಯಿ ರವಾನೆಯಾಗಿ ಮುದ್ರಿತಚಿತ್ರ ಮೂಡುತ್ತದೆ (ಚಿತ್ರ 13). ಇವೇ ಅಲ್ಲದೆ ಏಕವ್ಯಕ್ತಿ ಸ್ಕ್ವೀಜೀ ಸಹಾಯಕಯಂತ್ರಗಳು ದೊಡ್ಡ ಗಾತ್ರದ ಮುದ್ರಣದಲ್ಲಿ ಉಪಯೋಗಿಸಲ್ಪಡುತ್ತವೆ. ವರ್ಣಮುದ್ರಣ ಕುರಿತ ವೇಗಚಾಲಿತ ಯಂತ್ರಗಳಲ್ಲಿ ಸಂಕುಚಿತ ವಾಯುವಿಕ ನಿದ್ರ್ರವ್ಯಚೌಕಟ್ಟಿನ (ವ್ಯಾಕ್ಯೂಮ್ ಫ್ರೇಮ್) ಉಂಟು. ಸ್ವಯಂಚಾಲಿತ ಯಂತ್ರಗಳು ವಾಯುವಿಕ ಚಾಲಕ ವ್ಯವಸ್ಥೆಯುಳ್ಳವಾಗಿದ್ದು ಗಂಟೆಗೆ 2000ಕ್ಕೂ ಮಿಕ್ಕಿದ ವೇಗದಲ್ಲಿ ಮುದ್ರಿಸುತ್ತವೆ. ಇವುಗಳ ಅಮುದ್ರಣಘಾತದ ನಿಲುಗಡೆ ವೇಳೆಯಲ್ಲಿ ಮುದ್ರಿತ ಹಾಳೆ ತೆಗೆಯಲ್ಪಟ್ಟು ಹೊಸ ಹಾಳೆ ಊಡಲ್ಪಡುತ್ತದೆ. ಉತ್ತಮ ಸ್ವಯಂಚಾಲಿತ ಯಂತ್ರಗಳಲ್ಲಿ ಪ್ರತಿಯೊಂದು ಮುದ್ರಣ ಘಾತದಲ್ಲಿಯೂ ನಿಶ್ಚಿತ ಮೊತ್ತದ ಶಾಯಿಯನ್ನು ನಿಕ್ಷೇಪಿಸುವ ವ್ಯವಸ್ಥೆ ಸಹ ಇದೆ. ಸ್ಕ್ರೀನ್ ಮುದ್ರಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಾಯಿ ಸರಬರಾಜಾಗುವುದರಿಂದ ಒಣಗಿಸಲು ಏರ್ಪಾಡು ಮಾಡಬೇಕಾಗುತ್ತದೆ. ಇದಕ್ಕೆಂದು ವಿಶಿಷ್ಟವಾಗಿ ರೂಪಿಸಿರುವ ಲೋಹದ ಕಂಬಿಗಳ ಚೌಕಟ್ಟನ್ನು (ರ್ಯಾಕ್) ಉಪಯೋಗಿಸುತ್ತಾರೆ. ಐವತ್ತು ತಂತಿ ಬಲೆ ತಟ್ಟೆಗಳುಳ್ಳ ಈ ಚೌಕಟ್ಟುಗಳು ಚಕ್ರವುಳ್ಳವಾಗಿದ್ದು ಸ್ಟ್ರಿಂಗ್ ಕ್ರಿಯೆಯಿಂದ ಸುಲಭವಾಗಿ ಮೇಲೆ ಕೆಳಗೆ ಚಲಿಸುತ್ತವೆ. ಇವುಗಳ ಮೇಲೆ ಮುದ್ರಿತ ಪ್ರತಿಗಳನ್ನು ಒಣಗಲು ಇಡಲಾಗುತ್ತದೆ. ಸ್ವಯಂಚಾಲಿತ ಸ್ಕ್ರೀನ್ ಮುದ್ರಣಗಳಲ್ಲಿ ಸಾಗುಪಟ್ಟಿ ಒಣಗು ವ್ಯವಸ್ಥೆ ಉಂಟು (ಚಿತ್ರ 14 ಪುಟ 343).

ಚಿತ್ರ-13

v ಸ್ಥಿತವೈದ್ಯುತ ಮುದ್ರಣ: ಸದೃಶ ವಿದ್ಯುದಾವೇಶಗಳು ಪರಸ್ಪರ ವಿಕರ್ಷಿಸುತ್ತವೆ. ವಿದೃಶ ವಿದ್ಯುದಾವೇಶಗಳು ಪರಸ್ಪರ ಆಕರ್ಷಿಸುತ್ತವೆ ಎಂಬ ವಿದ್ಯುತ್ತಿನ ಮೂಲಭೂತ ಗುಣವನ್ನು ಆಧರಿಸಿ ಈ ಪ್ರಕ್ರಿಯೆಯನ್ನು ರೂಪಿಸಲಾಗಿದೆ. ದ್ಯುತಿವೈದ್ಯುತ ವಸ್ತುಗಳ ವಿದ್ಯುದ್ವಾಹಕ ಗುಣ ಬೆಳಕಿನ ಪ್ರಭಾವದಿಂದ ಬದಲಾಗುತ್ತದೆ ಎಂಬ ಗುಣವನ್ನು ಉಪಯೋಗಿಸಿ ಮಾಡುವಮುದ್ರಣಕ್ಕೆ ಕ್ಸೆರೊಗ್ರಫಿ ಎಂದು ಹೆಸರು. ಕ್ಸೆರೊಗ್ರಫಿಕ್ ತಲವನ್ನು ವಿದ್ಯುದಾವೇಶಕ್ಕೆ ಒಳಪಡಿಸಿ ತರುವಾಯ ಬೆಳಕಿಗೆ ಒಡ್ಡಿದಾಗ ಬೆಳಕು ಹಾಯ್ದ ಭಾಗಗಳು ತಮ್ಮ ಆವೇಶಗಳನ್ನು ಕಳೆದುಕೊಳುತ್ತವೆ: ಹಾಯ್ದ ಭಾಗಗಳು ಅವನ್ನು ಉಳಿಸಿಕೊಂಡಿರುತ್ತವೆ. ಈ ತೆರನಾದ ಒಡ್ಡಿಕೆಯಿಂದ ಸುಪ್ತ ದ್ಯುತಿವೈದ್ಯುತ ಪ್ರತಿಬಿಂಬ ಮೂಡುತ್ತದೆ. ಇದಕ್ಕೆ ದ್ಯುತಿವೈದ್ಯುತ ಪರಿಗ್ರಾಹಿ ಎಂದು ಹೆಸರು. ಇದು ಋಣಾವಿಷ್ಟವಾಗಿರುತ್ತದೆ. ಹೀಗೆ ಒಡ್ಡಲ್ಪಟ್ಟಿರುವ ಕ್ಸೆರೊಗ್ರಾಫಿಕ್ ತಲವನ್ನು ಕೆಲವು ಧನಾವಿಷ್ಟ ಮಾಧ್ಯಮಗಳಿಂದ ಸಂಸ್ಕರಣೆಗೆ ಒಳಪಡಿಸಿದಾಗ ಅವ್ಯಕ್ತಬಿಂಬ ವ್ಯಕ್ತವಾಗುತ್ತದೆ. ಕ್ಸೆರಾಕ್ಸ್ ಛಾಯಾನಕಲು ಯಂತ್ರಗಳಲ್ಲಿ, ವಾಹಕತ್ವವುಳ್ಳ ಫಲಕದ ಅಥವಾ ವರ್ತುಲ ನಾಳಿಯ ಮೇಲೆ ಸೆಲೆನಿಯಮಿನ ಸೂಕ್ಷ್ಮ ಪದರವನ್ನು ಸವರಿರುತ್ತದೆ ಬೆಳಕಿಗೆ ಒಡ್ಡಿ. ಅವ್ಯಕ್ತಬಿಂಬ ಮೂಡಿದ ಅನಂತರ ಕಾರ್ಬನ್ ಬ್ಲಾಕ್‍ನಂಥ ಬಣ್ಣದ ಲೇಪ ಮಾಡಿದ ಸಿಲಿಕ ಪುಡಿಯನ್ನು ಸಿಂಪಡಿಸಿ ಬಿಂಬವನ್ನು ಸ್ಪುಟೀಕರಿಸಲಾಗುವುದು. ಸೆಲೆನಿಯಮ್ ಡ್ರಮ್ಮಿನ ಮೇಲೆ ಸುತ್ತುವ ಕಾಗದದ ಮೇಲೆ ಪುಡಿಯ ಕಣಗಳು ಸ್ಥಾನಾಂತರಗೊಳ್ಳುವುವು. ಹೀಗೆ ಸ್ಥಾನಾಂತರಗೊಂಡ ಬಿಂಬವನ್ನು ಶಾಖಾ ಅಥವಾ ಅನಿಲ ರೂಪದ ದ್ರಾವಕ ಸಂಸ್ಕರಣದಿಂದ ಬೆಸೆಯಲಾಗುತ್ತದೆ. ಎಲೆಕ್ಟ್ರೊಫಾಕ್ ರೀತಿಯ ಸ್ಥಿತವೈದ್ಯುತ ವಿಧಾನದಲ್ಲಿ ವರ್ಣಸಂವೇದ ಛಾಯಾ ನಿರ್ವಾಹಕ ಹಾಗೂ ರಾಳ ಬಂಧಕಗಳ ಪುಡಿಮಾಡಿದ ಮಿಶ್ರಣ. ಈ ಮಿಶ್ರಣವನ್ನು ಕಾಗದ. ಪ್ಲಾಸ್ಟಿಕ್ ಲೋಹದ ಫಲಕ ಈ ರೀತಿಯ ಯಾವುದೇ ಆಸರೆಯ ಮೇಲೆ ಸವರಬಹುದು. ಈ ವಿಧದ ಲೇಪ ವೈದ್ಯುತವಾಗಿ ಪರಿಪೂರಣ ಮಾಡುವವರೆಗೆ ಬೆಳಕಿಗೆ ಪರಿಣಾಮವಿಲ್ಲದಿದ್ದರೂ ಸ್ಥಿತವೈದ್ಯುತವನ್ನು ಸಂಪೂರ್ಣಕ್ರಿಯೆಗೆ ಒಳಪಡಿಸಿದೊಡನೆ ಅದು ಛಾಯಾಗುಣಗಳನ್ನು ಪಡೆಯುತ್ತದೆ. ಆದ್ದರಿಂದ ಈ ವಿಧಾನದಲ್ಲಿ ಮೂರು ಹಂತಗಳಿರುತ್ತವೆ. ಮೊದಲನೆಯದು ಸ್ಥಿತವೈದ್ಯುತ ಪರಿಪೂರಣ. ಎರಡನೆಯದು ಬೆಳಕಿಗೆ ಒಡ್ಡುವುದು. ಮೂರನೆಯದು ಛಾಯಾಚಿತ್ರ ಸ್ಪುಟೀಕರಣ. ಇದನ್ನು ಕಾಂತತೊಡಪ ವಿಧಾನದಿಂದ ಅಥವಾ ದ್ರಾವಣ ವಿಧಾನದಿಂದ ಮಾಡಬಹುದು (ಚಿತ್ರ 15).

ಚಿತ್ರ-15

ಬ್ರಷಿಗೆ ಕೂದಲು ಅಂಟಿಕೊಂಡಿರುವಂತೆ ಕಾಂತಗುಣವಿರುವ ಕಣಗಳು ಕಾಂತಕ್ಕೆ ಅಂಟಿಕೊಂಡಿರುತ್ತವೆ. ಈ ಕಾಂತತೊಡಪವನ್ನು ಮೇಲೆ ಹಾಯಿಸಿದಾಗ ಧನಾವೇಶವಿರುವ ಲಾಳಕಣಗಳು ಋಣಾವೇಶವಿರುವ ಬೆಳಕಿನಿಂದ ಪ್ರಭಾವಿತವಾದ ಬಿಂಬ ಭಾಗಗಳತ್ತ ಸೆಳೆಯಲ್ಪಡುತ್ತವೆ. ಹೀಗೆ ಬಿಂಬ ಮೂಡುತ್ತದೆ. ಇದನ್ನು ಶಾಖಸಂಸ್ಕರಣದಿಂದ ಕಾಗದದ ಮೇಲೆ ಬೆಸೆಯಲಾಗುತ್ತದೆ. ದ್ರಾವಣಸಂಸ್ಕರಣ ವಿಧಾನದಲ್ಲಿ ಅವಶ್ಯವಾದ ಗುಣಗಳಿರುವ ಜೈವಿಕದ್ರಾವಣ. ಉಪಯೋಗಿಸಿ ಬಿಂಬವನ್ನು ಬೆಸೆಯಲಾಗುತ್ತದೆ. ಇದರಲ್ಲಿಯೇ ಕಾಂತ ಸಂಸ್ಕರಣ. ವಿದ್ಯುತ್ ನಿಯಂತ್ರಣ ಹಾಗೂ ಸ್ಥಿರೀಕರಣಕಾರಕ ಗುಣ ಇರುತ್ತವೆ. (ಆರ್.ಎಸ್.ಎಸ್.ಎಸ್.) Iಗಿ. ಮಾಸ್ಕಿಂಗ್: ವರ್ಣಮುದ್ರಣದಲ್ಲಿಯ ಒಂದು ತಂತ್ರ. ಶ್ವೇತವರ್ಣ ಪ್ರಾಥಮಿಕಗಳನ್ನು (ಎಂದರೆ ಕೆಂಪು, ಹಸುರು ಮತ್ತು ನೀಲಿ) ಪ್ರಾಥಮಿಕ ವರ್ಣ ರೇಚಕ ಶಾಯಿಗಳ (ಎಂದರೆ ಸೈಯಾನ್, ಮಜಂಟ ಮತ್ತು ಹಳದಿ ವರ್ಣಗಳು.) ಸಹಾಯದಿಂದ ನಿಯಂತ್ರಿತ ರೀತಿಯಲ್ಲಿ ಹೋಗಲಾಡಿಸುವುದು ಇಲ್ಲಿಯ ಕ್ರಮ. ಮುದ್ರಣದ ವೇಳೆ ಕಾಗದದ ಮೇಲೆ ಮೊದಲೇ ಪ್ರತಿಫಲನವಾದ ಬೆಳಕನ್ನು ವಿವರ್ಣಗೊಳಿಸುವ ಚಮತ್ಕಾರಯುತ ತಂತ್ರವೂ ಇದರಲ್ಲಿ ಅಡಕವಾಗಿದೆ. ಪ್ರತಿಯೊಂದು ಬಣ್ಣದ ಶಾಯಿ ಉಳಿದ ಎರಡು ಬಣ್ಣಗಳ ಶಾಯಿಗಳ ವರ್ಣಗಳನ್ನು ಸ್ವಲ್ಪಮಟ್ಟಿಗೆ ಹೊಂದಿರುತ್ತದೆ. ಮಾತ್ರವಲ್ಲದೆ ಆ ಎರಡು ಪ್ರಾಥಮಿಕ ಶಾಯಿಗಳ ವರ್ಣಗಳನ್ನು ಮುದ್ರಿತ ಹಾಳೆಯ ಮೇಲೆ ಕೆಡಿಸುತ್ತದೆ ಕೂಡ. ಉದಾಹರಣೆಗೆ ಸೈಯಾನ್ ಮತ್ತು ಮಂಜಟಾಶಾಯಿಗಳನ್ನು ಒಂದರ ಮೇಲೊಂದು ಲೇಪಿಸುವುದರ ಮೂಲಕ ನೀಲಿ ವರ್ಣವನ್ನು ಉಂಟುಮಾಡುವಾಗ ಸೈಯಾನ್ ಶಾಯಿ ಕಾಗದದ ಮೇಲಿಂದ ಹೊರಬರುವ ಶ್ವೇತವರ್ಣದಲ್ಲಿಯ ನೀಲಿ ಮತ್ತು ಹಸುರು ವರ್ಣಗಳನ್ನು ಸ್ವಲ್ಪಮಟ್ಟಿಗೆ ಹೋಗಲಾಡಿಸುತ್ತದೆ. ವರ್ಣಪರಿಷ್ಕರಣ ಪದ್ಧತಿಯನ್ನು ಅನುಸರಿಸಿದಲ್ಲಿ ಈ ಶಾಯಿಗಳು ಹೆಚ್ಚು ಮಾಸಲಾದ ಹಾಗೂ ನಿಸ್ತೇಜವಾದ ನೀಲಿವರ್ಣವನ್ನು ಕಾಗದದ ಮೇಲೆ ಉಂಟುಮಾಡುವುದು ಸಾಧ್ಯ. ವರ್ಣಪರಿಷ್ಕರಣ ಪದ್ಧತಿಯ ಮುಖ್ಯ ಕೆಲಸ ಎಂದರೆ ಮಜಂಟ ಶಾಯಿಯಲ್ಲಿರುವ ಸೈಯಾನ್ ವರ್ಣದ ಪ್ರಮಾಣಾನುಸಾರ, ಸೈಯಾನ್ ಶಾಯಿಯಿಂದ ಮುದ್ರಿತವಾಗುವ ಚಿತ್ರಫಲಕದ ಸಾಂದ್ರತೆಯನ್ನು ದುರ್ಬಲಗೊಳಿಸುವುದು ಮತ್ತು ಸೈಯಾನ್ ಶಾಯಿಯಲ್ಲಿರುವ ಮಜಂಟಾ ವರ್ಣದ ಪ್ರಮಾಣಾನುಸಾರ ಮಜಂಟಾಶಾಯಿಯಿಂದ ಮುದ್ರಿತವಾಗುವ ಚಿತ್ರಫಲಕದ ಸಾಂದ್ರತೆಯನ್ನು ದುರ್ಬಲಗೊಳಿಸುವುದು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಕಡಿಮೆ ಸಾಂದ್ರತೆಯುಳ್ಳ ಸೈಯಾನ್ ಮತ್ತು ಮಜಂಟಾ ಶಾಯಿಗಳನ್ನು ಕಾಗದದ ಮೇಲೆ ಅಚ್ಚುಮಾಡುವುದರ ಮೂಲಕ ಬೇಕಾದ ಎಡೆಗಳಲ್ಲಿ ಮಾತ್ರ ಆ ಶಾಯಿಗಳ ದುರ್ಬಲಚಿತ್ರ ಪಡೆಯಲು ಸಾಧ್ಯವಿಲ್ಲದಿರುವುದು. ಏಕೆಂದರೆ ಹಾಗೆ ಮಾಡಿದಲ್ಲಿ ಆ ಶಾಯಿಗಳ ಅತ್ಯಧಿಕ ಸಾಂದ್ರತೆ ಬೇಕಾದ ಚಿತ್ರದ ಭಾಗಗಳಲ್ಲಿ ಮುದ್ರಿತವಾದ ವರ್ಣಗಳು ಸಾಕಷ್ಟು ಪರ್ಯಾಪ್ತವಾಗಿರುವುದಿಲ್ಲ. ಈ ತೆರನಾದ ಪ್ರಮಾಣಾನುಸಾರ ಬಣ್ಣಗಳನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ಫೋಟೋಗ್ರಫಿಕ್ ಮಾಸ್ಕ್‍ಗಳು ಬಲು ಉಪಯುಕ್ತ. ಅಂಥ ಮಾಸ್ಕ್‍ಗಳನ್ನು ತಯಾರಿಸಲು ಆಲ್ಬರ್ಟ್ ಎಂಬಾತ ಪ್ರಥಮ ಏಕಸ್ವ ಪಡೆದ (1897). ಅಂದಿನಿಂದ ಇಲ್ಲಿಯತನಕ ಮುದ್ರಣದಲ್ಲಿಯ ವರ್ಣಪರಿಷ್ಕರಣೆಗಾಗಿ ಅಂಥ ಅನೇಕ ವಿಧಾನಗಳು ರೂಪಿತವಾಗಿವೆ. ಈ ಪೈಕಿ ಮುಖ್ಯವಾದವು ಏಳು: 1 ಹೈಲೈಟ್ ಮಾಸ್ಕ್: ಹೈಲೈಟ್ ಪ್ರೀಮಾಸ್ಕ್ ಮತ್ತು ಹೈಲೈಟ್ ಪೋಸ್ಟ್‍ಮಾಸ್ಕ್ ಎಂದು ಎರಡು ಬಗೆಗಳಿವೆ. ಇವನ್ನು ಫೋಟೋಗ್ರಫಿಕ್ ಪುನರುತ್ಪಾದನೆಯಲ್ಲಿ (ರೀಪ್ರೊಡಕ್ಷನ್) ಹೈಲೈಟ್ ವೈದೃಶ್ಯ (ಕಾಂಟ್ರಾಸ್ಟ್) ಹೆಚ್ಚಿಸಲು ಮತ್ತು ಬಿಂಬದ ವಿವರಗಳು ಚೆನ್ನಾಗಿ ಕಾಣುವಹಾಗೆ ಮಾಡಲು ಉಪಯೋಗಿಸುತ್ತಾರೆ. ಪ್ರಿನ್ಸಿಪಲ್ ಮಾಸ್ಕ್‍ಗಳನ್ನು ತಯಾರಿಸುವಲ್ಲಿ ಈ ಮಾಸ್ಕ್‍ಗಳು ಹೈಲೈಟ್ ಪ್ರದೇಶಗಳನ್ನು ರಕ್ಷಿಸುತ್ತವೆ ಮತ್ತು ವೈದೃಶ್ಯವನ್ನು ವೃದ್ಧಿಪಡಿಸುತ್ತವೆ. ಅನಂತರ ಅವನ್ನು ತ್ಯಜಿಸಲಾಗುವುದು. ಇದಕ್ಕೆ ವರ್ಣಸಾಂದ್ರತೆ ತಿದ್ದುಪಡಿ (ಟೋನ್ ಕರೆಕ್ಷನ್) ಎಂಬ ಹೆಸರೂ ಇದೆ. 2 ಶ್ಯಾಡೊ ಮಾಸ್ಕ್: ಇದು ಅತ್ಯಂತ ಹೆಚ್ಚು ಛಾಯಾಬಿಂಬದ ವಿವರಗಳನ್ನು ಕಾಪಾಡುವುದರಿಂದ ವರ್ಣಸಾಂದ್ರತಾ ತಿದ್ದುಪಡಿ ಮಾಡುವ ಇನ್ನೊಂದು ಸಾಧನ ಎನಿಸಿದೆ. ನಸುತೆರೆದ ನಿರಂತರ ವರ್ಣರಶ್ಮಿ ಪಾಸಿಟಿವ್ ಇದು. ಇವನ್ನು ವರ್ಣಪರಿಷ್ಕøತ ವಿಭಜನ ನೆಗೆಟಿವ್‍ಗಳಿಂದ (ಸೆಪರೇಷನ್ ನೆಗೆಟಿವ್) ತಯಾರಿಸಿ ಅದೇ ನೆಗೆಟಿವ್‍ನಿಂದ ತಯಾರಿಸಲಾದ ಪೂರ್ಣವರ್ಣ ನಿರಂತರ ವರ್ಣರಶ್ಮಿ ಪಾಸಿಟಿವ್ ಜೊತೆ ಸರಿಯಾದ ಹೊಂದಾಣಿಕೆಯಲ್ಲಿ (ರಿಜಿಸ್ಟರ್) ಇರಿಸಿ ಉಪಯೋಗಿಸಬೇಕು. ಛಾಯಾಭಾಗದ ಸಾಂದ್ರತೆಯನ್ನು ಹೆಚ್ಚಿಸಿ ನೆರಳಿನ ವೈದೃಶ್ಯವನ್ನು (ಶ್ಯಾಡೊ ಕಾಂಟ್ರಾಸ್ಟ್) ಪ್ರಬಲಗೊಳಿಸಲು ಇವು ಉಪಯುಕ್ತವಾಗಿವೆ. ಅವಗುಣದ ಮೂಲ ಪ್ರತಿಯಿಂದ ಪುನರುತ್ಪಾದನೆಯನ್ನು ಪಡೆಯಲು ಈ ವಿಧಾನ ಬಲು ಸಹಾಯಕಾರಿ. 3 ಅಂಡರ್‍ಕಲರ್ ರಿಮೂವಲ್ ಮಾಸ್ಕ್: ಇದನ್ನು ಪರಿಷ್ಕøತ ಕಪ್ಪು ಬಣ್ಣದ ಪ್ರಿಂಟರ್ ನೆಗೆಟಿವ್‍ನಿಂದ ಕಡಿಮೆ ವೈದೃಶ್ಯದ ಮಾಸ್ಕ್ ಆಗಿ ರೂಪಿಸಲಾಗುವುದು. ಪ್ರತಿಯೊಂದು ಬಣ್ಣದ ಪರಿಷ್ಕøತ ವಿಭಜನ ನೆಗೆಟಿವ್‍ನೊಡನೆಯೂ ಸ್ಕ್ರೀನಿಂಗ್ ಮಾಡುವಾಗ ಛಾಯಾಗ್ರಾಹಕ ಸಾಧನದಲ್ಲೂ ಇದನ್ನು ಸಂಯೋಜಿಸಲಾಗುವುದು. ಇದರಿಂದ ವರ್ಣಚಿತ್ರದಲ್ಲಿ ಎಲ್ಲೆಲ್ಲಿ ಕಪ್ಪುಬಣ್ಣ ಮುದ್ರಿತವಾಗಬೇಕೋ ಅಲ್ಲೆಲ್ಲ ಇತರ ಮೂರುವರ್ಣಗಳ ಸಾಂದ್ರತೆಯನ್ನು ಬಲುಮಟ್ಟಿಗೆ ಕುಗ್ಗಿಸುವುದು ಸಾಧ್ಯವಾಗಿ ಆ ಜಾಗದಲ್ಲೆಲ್ಲ ಸ್ವಚ್ಛಕಪ್ಪು ಶಾಯಿಯಿಂದ ಮುದ್ರಣವಾಗುವಂತೆ ಮಾಡುವುದು ಸುಲಭವಾಗುತ್ತದೆ. ಈ ಪದ್ಧತಿಯನ್ನು ಅನುಸರಿಸುವುದರಿಂದ ಅಧಿಕ ಬೆಲೆಯ ಬಣ್ಣದ ಶಾಯಿಗೆ ಬದಲಿಗೆ ಸಾಧಾರಣ ಬೆಲೆಯ ಕಪ್ಪು ಶಾಯಿಯನ್ನು ಬಳಸುವುದು ಸಾಧ್ಯವಾಗುತ್ತದೆ. ಮುದ್ರಣಾಲಯಗಳಲ್ಲಿ ಈ ಮೂರು ಬಣ್ಣಗಳ ಹತೋಟಿಯ ಹೊಣೆಗಾರಿಕೆಯನ್ನು ಇದರಿಂದ ತಗ್ಗಿಸಬಹುದು. ಈ ವಿಧಾನದಿಂದ ಮೂರೇ ವರ್ಣಗಳಿಂದ ಉತ್ಪಾದಿಸಬಹುದಾದ ವರ್ಣಚಿತ್ರದ ಕಪ್ಪು ಭಾಗಗಳಿಗಿಂತಲೂ ಅಧಿಕ ಸ್ವಚ್ಛ ಹಾಗೂ ಸಾಂದ್ರವಾದ ಕಪ್ಪುಛಾಯೆಯನ್ನು ಪಡೆಯಬಹುದು ಮಾತ್ರವಲ್ಲದೆ ತೇವದ ಮೇಲೆ ತೇವ ಮುದ್ರಣದಲ್ಲಿ (ವೆಟ್-ಆನ್-ವೆಟ್ ಪ್ರಿಂಟಿಂಗ್) ಟ್ರ್ಯಾಪಿಂಗ್ ಸಮಸ್ಯೆಗಳನ್ನು ಬಲುಮಟ್ಟಿಗೆ ನಿವಾರಿಸಲೂಬಹುದು. 4 ಪ್ರಿನ್ಸಿಪಲ್ ಮಾಸ್ಕ್: ಇದು ಮುಖ್ಯ ವರ್ಣಪರೀಕ್ಷಾರಕ ಮಾಸ್ಕ್. ಸಿಲ್ವರ್ ಅಥವಾ ಡೈನೆಗೆಟಿವ್ ಮಾಸ್ಕ್ ಇಲ್ಲವೇ ಸಿಲ್ವರ್ ಪಾಸಿಟಿವ್ ಮಾಸ್ಕ್ ಆಗಿರುತ್ತದೆ. ನೆಗೆಟಿವ್ ಮಾಸ್ಕ್‍ಗಳನ್ನು ಪ್ರೀಮಾಸ್ಕಿಂಗ್ ಪದ್ಧತಿಯಲ್ಲೂ ಪಾಸಿಟಿವ್ ಮಾಸ್ಕ್‍ಗಳನ್ನು ಪೋಸ್ಟ್‍ಮಾಸ್ಕಿಂಗ್ ಪದ್ಧತಿಯಲ್ಲೂ ಬಳಸಿಕೊಳ್ಳಲಾಗುತ್ತದೆ. 5 ಕೊಡಕ್ ಆಲ್ಫಬೆಟ್ ಪದ್ಧತಿ: ನೆಗೆಟಿವ್ ಸಿಲ್ವರ್ ಮಾಸ್ಕ್‍ಗಳನ್ನು ಬಳಸುವ ಪದ್ಧತಿ ಇದು. ಬಲು ಬೇಗ ಬಳಕೆಗೆ ಬಂದಿರುವಂಥದು. ಇಲ್ಲಿ ಮಸುಕಾದ ಮೂರು ಮಾಸ್ಕ್‍ಗಳನ್ನು ಸುಮಾರು 50 ಮಾಸ್ಕ್ ಬಲದೊಡನೆ ಉಂಟುಮಾಡಲಾಗುವುದು. ಸಂಸ್ಕರಣದ ಅನಂತರ ವಿಭಜನ ನೆಗೆಟಿವ್‍ಗಳನ್ನು ತಯಾರಿಸಲು ವರ್ಣಪಾರದರ್ಶಿಕೆಯ (ಟ್ರಾನ್ಸ್‍ಫರೆನ್ಸಿ) ಹಿಂಭಾಗದಲ್ಲಿ ಇವನ್ನು ಹೊಂದಿಸಲಾಗುವುದು. 6 ಕ್ಯಾಮರಾ ಬ್ಯಾಕ್ ಮಾಸ್ಕಿಂಗ್: ಇದು ಪ್ರತಿಫಲಿಸುವ ಪ್ರತಿಯಿಂದ ವಿಭಜನ ನೆಗೆಟಿವ್‍ಗಳನ್ನು ಪಡೆಯಬೇಕಾದಾಗ ಬಳಸುವ ಪದ್ಧತಿ. ಆಲ್ಫಬೆಟ್ ಪದ್ಧತಿಯಲ್ಲಿದ್ದಂತೆ ಇಲ್ಲಿಯೂ ನೆಗೆಟಿವ್ ಸಿಲ್ವರ್ ಮಾಸ್ಕ್‍ಗಳನ್ನು ಉಪಯೋಗಿಸಲಾಗುವುದು. ಕೆಲವೊಂದು ನ್ಯೂನತೆಗಳ ಸಲುವಾಗಿ ಈ ಪದ್ಧತಿ ಹೆಚ್ಚು ಬಳಕೆಯಲ್ಲಿಲ್ಲ. 7 ಪಾಸಿಟಿವ್ ಮಾಸ್ಕಿಂಗ್: ಪ್ರತಿಫಲಿಸುವ ಪ್ರತಿಯೊಡನೆ ಬಲು ಯಶಸ್ವಿಯಾಗಿ ಬಳಸಲು ಸಾಧ್ಯವಾಗುವ ಡಬಲ್ ಓವರ್‍ಲೇ ಎಂಬ ಸೌಲಭ್ಯದಿಂದ ಕೂಡಿದ ಮಲ್ಟಿಪಲ್ ಸಿಲ್ವರ್ ಮಾಸ್ಕ್ ಪದ್ಧತಿ. ಇದನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಸ್ಕಿಂಗ್ ಪದ್ಧತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕೆಂಪು, ಹಸುರು ಮತ್ತು ನೀಲಿ ಫಿಲ್ಟರ್ ವಿಭಜನ ನೆಗೆಟಿವ್‍ಗಳಿಂದ ತೆಗೆದ ಸಮಾನಸಾಂದ್ರತೆಯಿಂದ ಒಡಗೂಡಿದ ಪಾಸಿಟಿವ್ ಪ್ರೀಮಾಸ್ಕ್‍ಗಳ ಸಂತುಲಿತ (ಬ್ಯಾಲೆನ್ಸ್ಡ್) ಜೋಡಿಗಳನ್ನು ಉಪಯೋಗಿಸುವ ಎರಡು ಹಂತಗಳ ಮಾಸ್ಕಿಂಗ್ ಪದ್ಧತಿಯೇ ಡಬಲ್ ಓವರ್‍ಲೇ ಪದ್ಧತಿ. ಇನ್ನಿತರ ಮಾಸ್ಕಿಂಗ್‍ಗಳು ಇವು: ಮಲ್ಟಿ ಮಾಸ್ಕ್: ಅಧಿಕ ಸಂಖ್ಯೆಯಲ್ಲಿ ಮಾಸ್ಕ್‍ಗಳನ್ನು ಬೆಳಕಿಗೆ ಒಡ್ಡುವುದರಲ್ಲಿ ಹಾಗೂ ಹದ ಗೊಳಿಸುವುದರಲ್ಲಿ ಅಧಿಕ ವೇಳೆ ವ್ಯಯವಾಗುತ್ತದಲ್ಲದೆ ಅಂತಿಮ ಪರಿಣಾಮದಲ್ಲಿ ಮಿಸ್‍ರಿಜಿಸ್ಟರ್ ಆಗುವ ತೊಂದರೆಯೂ ಉಂಟು. ಇದರಲ್ಲಿ ಮಾಸ್ಕಿಂಗ್‍ನಿಂದ ಪರಿಹರಿಸಲು ಯೋಜಿಸಲಾದ, ಆ ಮಾಸ್ಕ್‍ಗಳ ಮಧ್ಯೆ ಇರಬೇಕಾದ ಸಮತೆ ತಪ್ಪಿ ಇರುವ ನ್ಯೂನತೆಯನ್ನು ಹೋಗಲಾಡಿಸುವ ಬದಲಿಗೆ ಮತ್ತಷ್ಟು ಗುರುತರವಾದ ನ್ಯೂನತೆಗಳನ್ನು ತಂದುಕೊಳ್ಳುವ ಅಪಾಯವು ಉಂಟು. ಕೆಲವಾರು ಪದರಗಳಿರುವ ಒಂದೇ ಹಾಳೆಯ ಮಾಸ್ಕ್ ಸಾಧನಗಳು ಇತ್ತೀಚೆಗೆ ಹೆಚ್ಚಾಗಿ ಬಳಕೆಗೆ ಬರುತ್ತಿವೆ. ಅವು ತಿದ್ದುಪಡಿಯ (ಕರೆಕ್ಷನ್) ಮಟ್ಟದಲ್ಲಿ ಅಧಿಕವ್ಯಾಪಕತೆಯನ್ನು ಕಲ್ಪಿಸಲು ನೆರವಾಗುತ್ತದೆ. ಆಗ್ಫಾ-ಗೇವರ್ಟ್ ಕಂಪನಿಯ ಮಲ್ಟಿಮಾಸ್ಕ್ ಸಾಧನಗಳು ಡೈಗಳನ್ನು ಬಳಸುವ ಇಂಥ ಒಂದು ಮಾಸ್ಕ್ ಪದ್ಧತಿ. ಈ ಮಾಸ್ಕ್‍ನ ಹಾಳೆಯಲ್ಲಿ ಮೂರು ಎಮಲ್ಷನ್ ಪದರಗಳಿದ್ದು ಇವು ಒಂದೊಂದೂ ವರ್ಣಸಂವೇದನಶೀಲತೆಯ (ಕಲರ್ ಸೆನ್ಸಿಟಿವಿಟಿ) ವಿಸ್ತಾರದಲ್ಲಿ ಬೇರೆಬೇರೆಯಾಗಿರುತ್ತವೆ. ಮೇಲಿನ ಪದರ ಮಜಂಟಡೈಯನ್ನು ಒಳಗೊಂಡಿದ್ದು ಕೆಂಪು ಮತ್ತು ನೀಲಿ ಬೆಳಕಿಗೆ ಸಂವೇದನಶೀಲವಾಗಿರುತ್ತದೆ. ಮಧ್ಯೆ ಇರುವ ಪದರ ಸೈಯಾನ್ ಡೈಯನ್ನು ಹೊಂದಿದ್ದು ನೀಲಿ, ಹಸುರು ಮತ್ತು ಕೆಂಪು ಬೆಳಕಿಗೆ (ಪ್ಯಾನ್‍ಕ್ರೊಮ್ಯಾಟಿಕ್) ಸಂವೇದನಶೀಲವಾಗಿರುತ್ತದೆ. ಮೂರನೆಯ ಪದರ ಹಳದಿಡೈಯನ್ನು ಪಡೆದಿದ್ದು ಮೇಲಿನ ಪದರದಿಂದ ಹಾದುಬರುವ ನೀಲಿಬೆಳಕನ್ನು ತಡೆದು ಹಸುರು ಬೆಳಕಿಗೆ ಮಾತ್ರ ಸಂವೇದನಶೀಲವಾಗಿರುವಂತೆ ವರ್ತಿಸುತ್ತದೆ. ಇಲ್ಲಿ ಪ್ರತಿಯೊಂದು ಪದರವೂ ಅದರ ಪೂರಕ (ಕಾಂಪ್ಲಿಮೆಂಟರಿ) ವರ್ಣದ ಬೆಳಕನ್ನು ಬಳಸಿದಾಗ ಮಾತ್ರ ಪರಿಣಾಮಕಾರಿಯೆನಿಸುವುದು. ಮುದ್ರಣದಲ್ಲಿ ಬಳಸುವ ಡೈಗಳಿಗೆ ಬಳಸುವ ಬಣ್ಣಗಳಲ್ಲೂ ಮುದ್ರಣಶಾಯಿಗಳಲ್ಲಿ ಇರುವಂಥ ದೋಷಗಳು ಇರುತ್ತವಾದ್ದರಿಂದ ನೂರಕ್ಕೆ ನೂರುಪಾಲು ಪರಿಷ್ಕರಣ ಈ ವಿಧಾನದಿಂದಲೂ ಸಾಧ್ಯವಾಗಿಲ್ಲ.

ಟ್ರೈಮಾಸ್ಕ್: ಕೊಡಕ್ ಕಂಪನಿ ತಯಾರಿಸಿರುವ ಮಲ್ಟಿಮಾಸ್ಕ್ ಸಾಧನ ಇದು. ಆಗ್ಫ-ಗೇವರ್ಟ್ ಕಂಪನಿಯ ಮಲ್ಟಿಮಾಸ್ಕ್‍ನ ಮೂಲತತ್ತ್ವವನ್ನೇ ಒಳಗೊಂಡಿದೆ. ಇದರಲ್ಲಿಯ ಪ್ರತಿಯೊಂದು ದ್ಯುತಿಸಂವೇದನಶೀಲ ಪದರವೂ ಬಿಳಿಯ ಬೆಳಕಿನ ಯಾವುದಾದರೂ ಒಂದು ಪ್ರಾಥಮಿಕ ವರ್ಣಕ್ಕೆ ಮಾತ್ರ ಪ್ರತಿಕ್ರಿಯೆ ತೋರುತ್ತದೆ. ಈ ಸಾಧನದಲ್ಲಿ ಐದು ದ್ಯುತಿಸಂವೇದನಶೀಲ ಪದರಗಳನ್ನು ಅಳವಡಿಸಿದ್ದು ಮೇಲಿನ ಎರಡು ಪದರಗಳನ್ನು ಬೇರ್ಪಡಿಸಲು ಹಳದಿಯ ಹೊದಿಕೆಯನ್ನು ಬಳಸಿದೆ.

ವರ್ಣಮುದ್ರಣದಲ್ಲಿ ಮಾಸ್ಕಿಂಗಿನ ಅತ್ಯಧಿಕಪರಿಣಾಮವನ್ನು ಪಡೆಯಬೇಕಾದರೆ ಮಲ್ಟಿಮಾಸ್ಕ್ ಮತ್ತು ಟ್ರೈಮಾಸ್ಕ್ ಸಾಧನಗಳೆರಡನ್ನೂ ಬಲು ಜಾಗರೂಕವಾಗಿ ನಿಯಂತ್ರಿತ ಪರಿಸ್ಥಿತಿಯಲ್ಲಿ ಸಂಗ್ರಹಿಸುವುದು. ಬೆಳಕಿಗೆ ಒಡ್ಡುವುದು ಹಾಗೂ ಪ್ರಕ್ರಮಗೊಳಿಸಿದ ಅನಂತರ ಒಣಗಿಸಬೇಕಾದ್ದು ಇವೆಲ್ಲ ಅಗತ್ಯ. ಉನ್ನತಮಟ್ಟದ ಪರಿಷ್ಕರಣ ಬೇಕಾಗದಂಥ ಕೆಲಸಗಳಿಗೆ ಈ ಎರಡು ಪ್ರಭೇದಗಳಿಗಿಂತಲೂ ಕಡಿಮೆ ಖರ್ಚಿನದಾದ ಹಾಗು ಬಲು ಸರಳರೀತಿಯಲ್ಲೇ ಸಾಕಷ್ಟು ವರ್ಣತಿದ್ದುಪಡಿ ಒದಗುವಂಥ ಬೇರೆ ಬೇರೆ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತವೆ. ಇವು ಸಾಂಪ್ರದಾಯಿಕವಾದ ಬೆಳ್ಳಿಯ ಹೊದಿಕೆಯನ್ನು ಅವಲಂಬಿಸಿರುವಂಥ ಸಿಂಗಲ್ ಮಾಸ್ಕ್ ಪದ್ಧತಿಗಳಾಗಿವೆ. ಇವುಗಳ ಪೈಕಿ ಆಗ್ಫಾಗೇವರ್ಟ್ ವೆರಿಮಾಸ್ಕ್. ಡುಪಾಂಡ್‍ಸಿವೋಮಾಸ್ಕ್ ಮತ್ತು ಅಶಾಂತಿ ಕಂಪನಿಗಳ ಮಿಕ್‍ಮಾಸ್ಕ್ ಮೊದಲಾದವು ಬಳಕೆಯಲ್ಲಿವೆ. ಕೇವಲ ಒಂದು ಬೆಳ್ಳಿಯ ಹೊದಿಕೆಯನ್ನು ಒಳಗೊಂಡಿರುವ ಈ ಎಲ್ಲ ಅಗ್ಗದ ಬೆಲೆಯ ಸಿಂಗಲ್‍ಮಾಸ್ಕ್ ಪದ್ಧತಿಗಳೂ ವರ್ಣಪರಿಷ್ಕರಣ ಮಾಸ್ಕ್‍ಗಳಂತೆ ಮಾತ್ರ ಕೆಲಸಮಾಡಬಲ್ಲವು. ಆದ್ದರಿಂದ ಇವುಗಳಲ್ಲಿ ವಿವಿಧ ಬಗೆಯ ಮಾಸ್ಕ್ ವೈದೃಶ್ಯಗಳನ್ನು ಪಡೆಯುವುದು ಸಾಧ್ಯವಿಲ್ಲ. ಗಿ. ಗಣಕದ ನೆರವಿನಿಂದ ಮೊಳೆ ಜೋಡಣೆ: ಈಚೆಗೆ ಗಣಕಗಳನ್ನು ಎಲ್ಲ ರೀತಿಯ ಎಂದರೆ ಸರಳವಾಗಿ ಜೋಡಿಸಬಹುದಾದ ವಿಷಯ ಜಟಿಲ ಕೋಷ್ಟಕ (ಪಟ್ಟಿ) ಮತ್ತು ಗಣಿತದ ವಿಷಯ ಈ ಎಲ್ಲವನ್ನೂ ಅತಿವೇಗದಲ್ಲಿ ಅಚ್ಚುಮೊಳೆ ಜೋಡಿಸಲು ಹೆಚ್ಚು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇವು ಅಚ್ಚು ಮೊಳೆಸಾಲುಗಳ ಅಗಲ ಮತ್ತು ಪಂಕ್ತಿಗಳ ಜಸ್ಟಿಫಿಕೇಷನ್ ಲೆಕ್ಕಾಚಾರಗಳನ್ನು ಅತಿ ಸುಲಭವಾಗಿ ಮಾಡಬಲ್ಲವು. ಯುಕ್ತವಾದೆಡೆ ಪದವಿಭಾಗ ಮಾಡಲು ಯಂತ್ರಕ್ಕೆ ಸಂದೇಶ ಕೊಟ್ಟು ಆ ಸಂದೇಶದಂತೆ ಪಂಕ್ತಿಯ ಕೊನೆಯಲ್ಲಿ ಆಯಾ ಪದ ಬಂದಾಗ ಯಂತ್ರವೇ ಅದನ್ನು ವಿಭಜನೆ ಮಾಡುವಂತೆ ಮಾಡಬಹುದು. ಎಂದೇ ಪಠ್ಯವಿಷಯ ಸರಳ ಹಾಗೂ ದೀರ್ಘವಾಗಿರುವ ಎಡೆಯಲ್ಲಿ ಗಣಕಾಧಾರಿತ ಮೊಳೆಜೋಡಣೆ ಅತ್ಯಂತ ಆಕರ್ಷಕವಾಗಿದೆ. ಹಾಗಿದ್ದಾಗ್ಯೂ ಗಣಕ ಅದಕ್ಕೆ ಊಡಿದ ಮಾಹಿತಿಯನ್ನು ಆಧರಿಸಿ ಮಾತ್ರ ಪ್ರತಿಕ್ರಿಯೆ ಕೊಡಬಲ್ಲದು. ಎಲ್ಲ ಗಣಕಗಳಿಗೂ ಯಾವಯಾವ ಸಂದರ್ಭದಲ್ಲಿ ಹೇಗೆ ಹೇಗೆ ವರ್ತಿಸಬೇಕೆಂಬ ಕ್ರಮವಿಧಾಯ (ಪ್ರೋಗ್ರಾಮ್) ಹಾಕಿಕೊಡಬೇಕು. ಯಾಂತ್ರಿಕವಾಗಿ ಪಂಕ್ತಿಗಳನ್ನು ಎರಕಹೊಯ್ಯುವ ಯಂತ್ರಗಳು ಗಣಕಗಳಿಂದ ನೆರವು ಪಡೆದಾಗ ಕೀಲಿಮಣೆಯೊಂದಿಗೆ ಕೊಡಬಲ್ಲುದಕ್ಕಿಂತ ಹೆಚ್ಚು ವೇಗದಲ್ಲಿ ಉತ್ಪಾದನೆಯನ್ನು ಕೊಡಬಲ್ಲವು. ಆದರೂ ದ್ಯುತಿ ಮೊಳೆಜೋಡಣೆ (ಫೋಟೊ ಕಂಪೊಸಿಷನ್) ಪದ್ಧತಿಗಳು ಗಣಕಗಳ ಸಾಮಥ್ರ್ಯವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ ಅವುಗಳಲ್ಲಿಯ ದ್ಯುತಿ ಘಟಕಗಳ ಅತ್ಯಧಿಕ ವೇಗ ಸಾಮಥ್ರ್ಯಗಳನ್ನು ಬೇರ್ಪಡಿಸಿ ದ್ಯುತಿಘಟಕಕ್ಕೆ ಇಲ್ಲಿಯೂ ಗರಿಷ್ಠ ಉತ್ಪಾದನೆ ಪಡೆಯಲು ಕೀಲಿಮಣೆ ಮತ್ತು ದ್ಯುತಿಘಟಕಕ್ಕೆ ನಿರಂತರವಾಗಿ ಕೆಲಸ ಒದಗಿಸಲು ಕೀಲಿಮಣೆಗಳ ಸಂಖ್ಯೆಯನ್ನು ಹೆಚ್ಚಿಸಿ ಅವು ಉತ್ಪಾದಿಸಿದ ರಂಧ್ರಿತಪಟ್ಟಿಯನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಬೇಕು. ರಂಧ್ರಿತ ನಾನ್‍ಜಸ್ಟಿಫೈಡ್ ಪಟ್ಟಿಯನ್ನು ಗಣಕದ ಮುಖಾಂತರ ಹಾಯಿಸಿ ಪಂಕ್ತಿಯ ಉದ್ದವನ್ನು ನಿಗದಿಮಾಡುವುದು, ಅದನ್ನು ಜಸ್ಟಿಫೈ ಮಾಡುವುದು, ಕೊನೆಯ ಪದ ವಿಭಜನೆಯಾಗಬೇಕಾದಲ್ಲಿ ಅದನ್ನು ಯುಕ್ತವಾದೆಡೆ ವಿಭಜಿಸುವುದು ಇತ್ಯಾದಿ ಎಲ್ಲ ಸಂಸ್ಕಾರಗಳನ್ನೂ ಅದಕ್ಕೆ ಮಾಡಿ ಅನಂತರ ದ್ಯುತಿಘಟಕಕ್ಕೆ ಆ ಸಂಸ್ಕರಿಸಲ್ಪಟ್ಟ ಪಟ್ಟಿಯನ್ನು ಅತಿ ಹೆಚ್ಚು ವೇಗದಲ್ಲಿ ಒದಗಿಸಿ ಆ ಮೂಲಕ ದ್ಯುತಿ ಮೊಳೆ ಜೋಡಣೆ ಆದ ಪದಾರ್ಥವನ್ನು ಅತ್ಯಂತ ವೇಗದಲ್ಲಿ ಪಡೆಯಬಹುದು. ಕೆಲವು ದ್ಯುತಿಮೊಳೆ ಜೋಡಣೆ ವ್ಯವಸ್ಥೆಗಳು ಗಣಕದ ಸಹಾಯದಿಂದ ಸೆಕೆಂಡಿಗೆ ಸುಮಾರು 10,000 ಅಕ್ಷರಗಳನ್ನು ಉತ್ಪಾದಿಸಬಲ್ಲವು. ಅಲ್ಲದೆ ಅಕ್ಷರ ಜೋಡಣೆಯೊಂದಿಗೆ ಚಿತ್ರಗಳನ್ನೂ ಉತ್ಪಾದಿಸಬಲ್ಲವು. ಕೆಲವು ಪದ್ಧತಿಗಳಲ್ಲಿ ಯಾವುದೇ ಒಂದು ಪುಸ್ತಕ ಅಥವಾ ಮ್ಯಾಗಜೀನ್‍ನ ಪ್ರತಿಯೊಂದು ಪುಟವನ್ನೂ ಒಮ್ಮೆಗೇ ಅಕ್ಷರ ಜೋಡಣೆಯಿಂದ ತೊಡಗಿ ಚಿತ್ರಗಳನ್ನು ಅಳವಡಿಸುವುದು, ಪುಟ ಮೇಕ್‍ಅಪ್ ಮಾಡುವುದು, ಎಲ್ಲವನ್ನೂ ನಾಜೂಕಾಗಿ ಮಾಡಿ ಕೆಲವು ಸೆಕೆಂಡುಗಳಲ್ಲಿ ಫಿಲ್ಮ್ ಅಥವಾ ಪೇಪರ್ ನೆಗೆಟಿವ್ ಅಥವಾ ಪಾಸಿಟಿವ್ ರೀತಿಯಲ್ಲಿ ಒದಗಿಸುವುದು ಸಾಧ್ಯವಿದೆ.

ಲೈನೊಟೈಪ್‍ರವರ ಎಲೆಕ್ಟ್ರಾನ್ ಮತ್ತು ಹ್ಯಾರಿಸ್ ಇಂಟರ್‍ಟೈಪ್‍ರವರ ಮಾನಾರ್ಕ್ ಎಂಬ ಅಚ್ಚುಮೊಳೆಪಂಕ್ತಿಗಳನ್ನು ಎರಕ ಹೊಯ್ಯುವ ಯಂತ್ರಗಳು ಗಣಕದಿಂದ ಸಂಸ್ಕರಿಸಲ್ಪಟ್ಟ ರಂಧ್ರ ಕೊರೆದ ಪಟ್ಟಿಯ ಉಪಯೋಗದಿಂದ ಅತಿ ವೇಗವಾಗಿ ಅಚ್ಚಕ್ಷರ ಜೋಡಿಸುವ ಅನುಕೂಲತೆ ಹೊಂದಿವೆ.

ಒಂದು ಸಲ ಕೀಲಿಮಣೆಯಲ್ಲಿ ಉತ್ಪಾದಿಸಿದ ನಾನ್ ಜಸ್ಟಿಫೈಡ್ ಪಟ್ಟಿಯಿಂದ ಗಣಕದಲ್ಲಿ ಬೇಕಾದ ಯಾವುದೇ ಟೈಪ್‍ಫೇಸ್ ಸಾಲಿನ ಅಳತೆ ಹಾಗೂ ಪಾಯಿಂಟ್ ಸೈಜ್‍ಗಳಲ್ಲಿ ಅಳವಡಿಸಲಾದ ಅನೇಕ ರೀತಿಯ ಜಸ್ಟಿಫೈಡ್ ಪಟ್ಟಿಗಳ ಉತ್ಪಾದನೆ ಸಾಧ್ಯ. ಈ ವ್ಯವಸ್ಥೆಯಿಂದಾಗಿ ಬೇಕಾದಲ್ಲಿ ಒಂದು ವಾರ್ತಾಪತ್ರಿಕೆಯಲ್ಲಿ ಒಂದು ಕಾದಂಬರಿಯನ್ನು 9 ಪಾಯಿಂಟ್ ಟೈಪ್‍ನಲ್ಲಿ 15 ಎಮ್‍ಗಳ ಅಳತೆಯಲ್ಲಿ ನಿರ್ದಿಷ್ಟ ಟೈಪ್‍ಫೇಸ್‍ನಲ್ಲಿ ಮುದ್ರಿಸಲೂಬಹುದು. ಅಂತೆಯೇ ಅದೇ ನಾನ್‍ಜಸ್ಟಿಫೈಡ್ ಪಟ್ಟಿಯಿಂದ ಮತ್ತೆ ಗಣಕ ಉಪಯೋಗಿಸಿ ಪುಸ್ತಕದ ರೂಪದಲ್ಲಿ 10 ಅಥವಾ 12 ಪಾಯಿಂಟ್‍ಟೈಪ್‍ನಲ್ಲಿ 22 ಎಮ್‍ಗಳ ಅಳತೆಯಲ್ಲಿ ಬೇರೆಯಾದ ಟೈಪ್‍ಫೇಸ್‍ನಲ್ಲಿ ಮತ್ತೊಂದು ಜಸ್ಟಿಫೈಡ್ ಪಟ್ಟಿಯನ್ನು ಉತ್ಪಾದಿಸಿ ಅಚ್ಚು ಮಾಡಲೂಬಹುದು. ಗಣಕ ಒಂದು ಪಟ್ಟಿಯ ಮೂಲಪ್ರತಿಯನ್ನೂ ತಿದ್ದುಪಡಿ ಪಟ್ಟಿಯನ್ನೂ ಒಟ್ಟಿಗೆ ಅಳವಡಿಸಿ ಬೇರೊಂದು ತಪ್ಪಿಲ್ಲದ ಸ್ಪಷ್ಟವಾದ ಪಟ್ಟಿಯನ್ನು ಉತ್ಪಾದಿಸಿ ಕೊಡಬಲ್ಲದು.

ಗಣಕವನ್ನು ಅಚ್ಚಕ್ಷರ ಜೋಡಣೆಗೆ ಮಾತ್ರ ಉಪಯೋಗಿಸಬೇಕಾದಲ್ಲಿ ಅಂದರೆ ಪಂಕ್ತಿಯಲ್ಲಿ ಅಕ್ಷರಗಳು ಹೊಂದಿಕೊಂಡಿರುವಂತೆ ಸರಿಪಡಿಸುವುದು (ಜಸ್ಟಿಫಕೇಷನ್) ಪದಗಳನ್ನು ಯುಕ್ತವಾದೆಡೆ ವಿಭಜಿಸುವುದು. ಪುಸ್ತಕದ ಆಕಾರಕ್ಕೆ ತಕ್ಕಂತೆ ಅಚ್ಚು ಮೊಳೆಯ ಸಂಯೋಗವನ್ನು ಹವಣಿಸುವುದು ಇವಿಷ್ಟಕ್ಕೆ ಆದಲ್ಲಿ ವಿಶೇಷ ಉದ್ದೇಶದ ಗಣಕಗಳು ಸಾಕಾಗುವುವು. ಇವುಗಳ ಬೆಲೆಯೂ ಕಡಿಮೆ. ಇಂಥ ಒಂದು ಗಣಕ ಸುಮಾರು 12 ಎಲೆಕ್ಟ್ರಾನ್ ಅಥವಾ ಮಾನಾರ್ಕ್ ಲೈನ್ ಮೊಳೆಜೋಡಣೆ ಯಂತ್ರಗಳನ್ನು ಒಟ್ಟಿಗೆ ನಡೆಸಬಲ್ಲದು. ಪ್ರತಿಯಾಗಿ ಹೆಚ್ಚಿನ ಸೌಲಭ್ಯಗಳಾದ ಒದಗಿಸಿದ ವಿಷಯಗಳನ್ನು ವರ್ಗೀಕರಣ ಮಾಡುವುದು, ಪರಿಷ್ಕರಿಸಿ ಮುದ್ರಣಕ್ಕೆ ಸಿದ್ಧಪಡಿಸುವುದು. ಮಾಹಿತಿಯನ್ನು ಪುನಃ ಸರಿಪಡಿಸುವುದು ಮುಂತಾದವು ಲಭ್ಯವಾಗಬೇಕಾದಲ್ಲಿ, ಸಾಮಾನ್ಯ ಉದ್ದೇಶದ ಗಣಕ ಸಹಜವಾಗಿಯೇ ಬೇಕಾಗುತ್ತದೆ. ಇದರ ಬೆಲೆ ಬಲು ದುಬಾರಿ.

ಕೆಲವು ಗಣಕ ವ್ಯವಸ್ಥೆಗಳಲ್ಲಿ ಈಗ ಕೀಲಿಮಣೆ ಶೀಘ್ರಲಿಪಿಯ ಕಾರ್ಯಕ್ರಮವನ್ನು ಅಳವಡಿಸಲಾಗಿದೆ. ಇದು ಕೀಲಿಮಣೆ ಚಾಲಕ ಮಾಡಬೇಕಾದ ಕೀಲಿಘಾತಗಳನ್ನೆ ಕಡಿಮೆಗೊಳಿಸುತ್ತದೆ. ಹೀಗಾಗಿ ಚಾಲಕನ ಅಕ್ಷರ ಸಂಯೋಜನೆಯ ವೇಗ ಅಧಿಕವಾಗುತ್ತದೆ. ಆಂಗ್ಲಭಾಷೆಯಲ್ಲಿ ಪ್ರಧಾನವಾಗಿ ಬಳಸಲ್ಪಡುವ ಪದಗಳಾದ ದಿ. ಅಂಡ್, ಆಪ್, ಟು, ಇನ್ ಮುಂತಾದ ಅಕ್ಷರಗಳನ್ನು ಒಂದೇ ಬಾರಿಗೆ ಜೋಡಣೆ ಮಾಡಲು ಸಾಧ್ಯ. ಅಲ್ಲದೆ, ಪ್ರತಿಯೊಂದು ಕಂಡಿಕೆಯ ಅಧ್ಯಕ್ಷರವನ್ನು ಸ್ವಯಂ ದೊಡ್ಡ ಅಕ್ಷರವಾಗಿ (ಕ್ಯಾಪಿಟಲ್ ಲೆಟರ್) ಮಾಡುವ ವ್ಯವಸ್ಥೆಯೂ ಇದೆ.

ಗಿI ದೂರ ಮೊಳೆ ಜೋಡಣೆ: ಇದು ಕಾದ ಲೋಹದಿಂದ ಪಂಕ್ತಿಯನ್ನು ಅಚ್ಚಕ್ಷರವಾಗಿ ಜೋಡಿಸುವ ಯಂತ್ರವನ್ನು ಪಟ್ಟಿಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ಒಂದು ವಿಧಾನ (ಟೆಲಿಟೈಪ್ ಸೆಟ್ಟಂಗ್). ಟಿ ಟಿ ಎಸ್ ಇದರ ಹ್ರಸ್ವರೂಪ. ಒಂದು ವಿಶೇಷ ಕೀಲಿಮಣೆ ಉಪಯೋಗಿಸಿ ಕಾರ್ಯಪ್ರವರ್ತಿಸಿದಾಗ ನಕಲು ಪ್ರತಿಯಲ್ಲಿಯ ವಿಷಯ ಪ್ರತೀಕಗಳಿರುವ ಸಾಲು ರಂಧ್ರಕೊರೆದ ಪಟ್ಟಿ ಆಗಿ ಪರಿವರ್ತನೆಗೊಂಡು (ಟ್ರಾನ್ಸ್‍ಕ್ರೈಬ್) ಆ ಸಾಲು ರಂಧ್ರಗಳ ಪ್ರತೀಕಗಳು ದೂರ ಲೇಖದ ಮೂಲಕ (ಟೆಲಿಗ್ರಾಫಿ) ದೂರದಲ್ಲಿರುವ ಯಾವುದೇ ಇನ್ನೊಂದು ಅಥವಾ ಅನೇಕ ಕಾರ್ಯಾಲಯಗಳಿಗೆ ರವಾನೆ ಮಾಡಲ್ಪಡುವುವು; ಮತ್ತು ಆ ಪಟ್ಟಿಯ ಯಥಾಪ್ರತಿ ಅಲ್ಲಿ ಪುನಃ ಪರಿವರ್ತಿಸಲ್ಪಡುವುದು. ಮೊತ್ತಮೊದಲಿನ ಪಟ್ಟಿ ಅಥವಾ ಅದರ ಯಥಾಪ್ರತಿಯನ್ನು ಉಪಯೋಗಿಸಿ ವಿಶೇಷವಾಗಿ ಅಳವಡಿಸಲ್ಪಟ್ಟ ರೇಖಾಮೊಳೆ ಜೋಡಣೆಯಂತ್ರದ ಕೀಲಿಮಣೆಯನ್ನು ಅಚ್ಚಕ್ಷರದ ಪಂಕ್ತಿಗಳ ಸ್ವಯಂ ಉತ್ಪಾದನೆಗೆ ಬಳಸಬಹುದು. ಅದೇ ಯಂತ್ರದಲ್ಲಿ ಸಾಂಪ್ರದಾಯಿಕವಾಗಿ ಕೈಯಿಂದ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚು ಪ್ರಯೋಜನವನ್ನು ಈ.ಟಿ.ಟಿ.ಎಸ್ ಬಳಕೆಯಿಂದ ಪಡೆಯಬಹುದು. ಯಾವುದೇ ಕೆಲಸ ಮತ್ತೊಮ್ಮೆ ಮುದ್ರಣವಾಗಬೇಕಾದಲ್ಲಿ ಒಂದು ಸಲ ಉತ್ಪಾದಿಸಿದ ರಂಧ್ರಕೊರೆದ ಪಟ್ಟಿಯನ್ನೇ ಶೇಖರಿಸಿಟ್ಟಿದ್ದು ಅದರಿಂದ ಬೇಕಾದಾಗ ಹೊಸಸ್ಲಗ್ಗುಗಳನ್ನು ಎರಕಮಾಡಿ ಉಪಯೋಗಿಸಬಹುದು. ಒಂದು ಸಲ ಮುದ್ರಣ ಮಾಡಿದ ಸ್ಲಗ್ಗುಗಳನ್ನು ಶೇಖರಿಸಿಡಬೇಕಾಗಿಲ್ಲ. ಇದರ ಮತ್ತೊಂದು ಉಪಯೋಗವೆಂದರೆ ಎರಕಹೊಯ್ಯುವ ಹಾಗೂ ಮಾತೃಕೆಗಳನ್ನು ಪುನಃ ಅವುಗಳ ಜಾಗಕ್ಕೆ ಸೇರಿಸುವ ಯಂತ್ರಕಾರ್ಯಗಳ ಗೋಜಿಲ್ಲದೆ ಕೀಲಿಮಣೆಯನ್ನು ಪ್ರತ್ಯೇಕವಾದೆಡೆ ವೇಗವಾಗಿ ಚಾಲನೆಮಾಡಬಹುದು.

ಈ ವ್ಯವಸ್ಥೆಯಲ್ಲಿ ಆರುರಂಧ್ರದ ಪಟ್ಟಿಯಲ್ಲಿ ಸಾಲುರಂಧ್ರ ಕೊರೆಯಲು ವಿಶೇಷ ಕೀಲಿಮಣೆಯನ್ನು ಉಪಯೋಗಿಸಲಾಗುವುದು. ಉತ್ತಮ ದರ್ಜೆಯ ಬೆರಳಚ್ಚು ಯಂತ್ರದ ವಿನ್ಯಾಸದಿಂದ ಕೂಡಿದ ಈ ಕೀಲಿಮಣೆಯನ್ನು ಅನಾಯಾಸವಾಗಿ ಬೆರಳುಗಳಿಂದ ಒತ್ತಿ ಕಾರ್ಯನಿರ್ವಹಿಸಬಹುದು. ಕೆಲವಾರು ಕೀಲಿಮಣೆಗಳಿಂದ ಸಾಲು ರಂಧ್ರ ಕೊರೆಯಲ್ಪಟ್ಟ ಪಟ್ಟಿಯನ್ನು ರೇಖಾ ಮೊಳೆಜೋಡಣೆ ಯಂತ್ರದಲ್ಲಿ ಬಳಸಿ ಹೆಚ್ಚಿನ ಉತ್ಪಾದನೆ ಪಡೆಯಬಹುದು. ಎರಡನೆಯದಾಗಿ ಒಂದು ಪಟ್ಟಿಯ ಮೇಲೆ ಕೀಲಿಮಣೆಯಿಂದ ಪ್ರತೀಕರೂಪದಲ್ಲಿ ಸಾಲುರಂಧ್ರಗಳನ್ನು ಕೊರೆಯಲಾದುದನ್ನು ಏಕಕಾಲದಲ್ಲಿ ಅನೇಕ ಪಟ್ಟಿಗಳ ಮೇಲೆ ಅನೇಕ ಸ್ಥಳಗಳಲ್ಲಿ ಪಡೆಯಬಹುದು. ಇದನ್ನು ಸಾಧಿಸಲು ಒಂದು ಟ್ರಾನ್ಸಿಸ್ಟರ್ ಡಿಸ್ಟ್ರಿಬ್ಯೂಟರಿಗೆ ಮೂಲಪಟ್ಟಿಯನ್ನು ಸಾಗಿಸಲಾಗುವುದು. ಅದು ಸ್ವತಂತ್ರವಾಗಿ ಆ ಪಟ್ಟಿಯ ರಂಧ್ರಗಳಲ್ಲಿಯ ಪ್ರತೀಕಗಳನ್ನು ವಿದ್ಯುತ್ ಸ್ಪಂದಗಳಾಗಿ ಪರಿವರ್ತಿಸುತ್ತದೆ. ಅನಂತರ ತಂತಿಯ ಮೂಲಕ ಅಥವಾ ರೇಡಿಯೊ ಮೂಲಕ ಆ ಸ್ಪಂದಗಳನ್ನು ಬೇಕಾದೆಡೆಗೆ ಪ್ರಸಾರ ಮಾಡಲಾಗುತ್ತದೆ. ಈ ರೀತಿ ನೂರಾರು ಕಿಲೊಮೀಟರ್ ದೂರದಲ್ಲಿರುವ ಕಾರ್ಯಾಲಯಗಳಿಗೆ ಒಂದೇ ಸಮಾಚಾರವನ್ನು ಏಕಕಾಲದಲ್ಲಿ ಒದಗಿಸಲು ಸಾಧ್ಯವಿರುವುದರಿಂದ ವೃತ್ತಪತ್ರಿಕೆಗಳ ಕೆಲಸ ಬಲು ಸುಲಭವಾಗಿದೆ.

ಪಟ್ಟಿಯ ಮೇಲೆ ಸಾಲುರಂಧ್ರ ಕೊರೆಯುವ ಅನೇಕ ಸಲಕರಣೆಗಳು ಈಗ ವಾಡಿಕೆಯಲ್ಲಿವೆ. ಟಿಟಿಎಸ್‍ನ್ನು ಉಪಯೋಗಿಸಿ ಅಚ್ಚಕ್ಷರ ಸಂಯೋಜನೆ ಮಾಡಲು ವಿಶೇಷವಾಗಿ ರಚಿಸಲಾದ ಯಂತ್ರಗಳಲ್ಲಿ ಇಂಟರ್‍ಟೈಪ್ ಮಾನಾರ್ಕ್ ಮತ್ತು ಲೈನೊಟೈಪ್ ಎಲೆಕ್ಟ್ರಾನ್ ಯಂತ್ರಗಳು ಮುಖ್ಯವಾದವು. ಮಾನಾರ್ಕ್ ಯಂತ್ರದಲ್ಲಿ ಕೈಯಿಂದ ಕಾರ್ಯನಿರ್ವಹಿಸಲು ಕೀಲಿಮಣೆಯನ್ನು ಹೊಂದಿಸಿರುವುದಿಲ್ಲ. ಆದರೆ ಅದು ಅವಶ್ಯವೆನಿಸಿದಲ್ಲಿ ಅದನ್ನು ಒಂದು ಅಧಿಕ ಜೋಡಣೆಯಾಗಿ ಪಡೆಯಬಹುದು. ಈ ಯಂತ್ರಗಳು ಟಿಟಿಎಸ್ ವ್ಯವಸ್ಥೆಯ ಸಹಾಯದಿಂದ ಸಮಾಚಾರ ಪತ್ರಿಕೆಗಳ ನೀಟ ಸಾಲುಗಳ ಅಳತೆಯ ಸುಮಾರು 12ರಿಂದ 15ಸ್ಲಗ್‍ಗಳನ್ನು ಮಿನಿಟ್ ಒಂದಕ್ಕೆ ಒದಗಿಸುವ ಸಾಮಥ್ರ್ಯ ಪಡೆದಿವೆ. (ಡಿ.ಎನ್.)

ಗಿII ಪರಿಸಮಾಪ್ತಿ: ಮುದ್ರಣ ಪ್ರಕ್ರಿಯೆ ಮಾನವನ ಅದಮ್ಯ ಹಾಗೂ ಸೃಷ್ಟಿಶೀಲ ಚಿಂತನೆಗೆ ಎದುರಾಗಿರುವ ನಿರಂತರ ಸವಾಲು. ನಿರಂತರ ಏಕೆಂದರೆ ಮಾಹಿತಿ ವಿತರಣೆಯೇ ನಾಗರಿಕತೆಯ ಜೀವಾಳ. ಮಾಹಿತಿ ವಿತರಣೆಯ ಒಂದು ಪ್ರಮುಖ ಮಾಧ್ಯಮ ಮುದ್ರಣ. ಇದರಲ್ಲಿ ಕಾಲದಿಂದ ಕಾಲಕ್ಕೆ ಬರುವ ಸುಧಾರಣೆಗಳು ಎಷ್ಟೇ ಕ್ರಾಂತಿಕಾರಕವಾಗಿರಲಿ ನಾಜೂಕಾಗಿರಲಿ ಇದರ ಮೂಲಭೂತ ಸೂತ್ರ ಮಾತ್ರ ಅದೇ: ದತ್ತವಸ್ತುವನ್ನು (ಬಿಂಬ) ಯುಕ್ತಪ್ರತಿಬಿಂಬವಾಗಿ (ಮುದ್ರಣ ಫಲಕ) ಪರಿವರ್ತಿಸಿ ಯೋಗ್ಯ ಸಮತಲಕ್ಕೆ (ಗ್ರಾಹಕವಸ್ತು) ಭೂರಿಸಂಖ್ಯೆಯಲ್ಲಿ ಕ್ಷಿಪ್ರವೇಳೆಯಲ್ಲಿ ವರ್ಗಾಯಿಸುವುದು. *