ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುರಿಗಾ ಗುರುಸಿದ್ಧ ದೇಶಿಕೇಂದ್ರ

ವಿಕಿಸೋರ್ಸ್ದಿಂದ

ಮುರಿಗಾ ಗುರುಸಿದ್ಧ ದೇಶಿಕೇಂದ್ರ - 18ನೆಯ ಶತಮಾನದ ಆದಿಯಲ್ಲಿ ಬದುಕಿದ್ದ ತತ್ತ್ವಜ್ಞಾನಿ ಷಟ್ಸ್ಥಲ ವಿಶಾರದ, ಕವಿ, ಯೋಗಿ ಮುರಿಗಾ ಶಾಂತವೀರ ದೇಶಿಕೇಂದ್ರದ ಅನಂತರ ಪೀಠಾಧೀಶರಾಗಿ ಬಾಳಿದಂತೆ ತಿಳಿದುಬುರತ್ತದೆ. ಮುರಿಗಾಶಾಂತವೀರರು ಪ್ರಪ್ರಥಮ ಮುರಿಗೆ ದೇಶಿಕಾರಾದರೆ ಅವರ ಅನುಗ್ರಹಕ್ಕೆ ಪಾತ್ರರಾಗಿ ಗದ್ದುಗೆ ಏರಿದ ಇವರಿಗೂ ಸಂಪ್ರದಾಯದಂತೆ ಮುರಿಗಾ ವಿಶೇಷಣ ಪ್ರಾಪ್ತವಾಗಿ ಇಮ್ಮಡಿ ಮುರಿಗಾ ಗುರುಸಿದ್ಧ ದೇಶಕೇಂದ್ರರೆನಿಸಿ ಖ್ಯಾತರಾದರು.

ಸಂಸ್ಕøತದಲ್ಲಿ ಪ್ರಭುಲೀಲಾ ಕನ್ನಡದಲ್ಲಿ ಹಾಲಾಸ್ಯಲೀಲಾ ಕಥರೂಪ, ಹಾಲಾಸ್ಯ (ಸೌಂದರ) ವಸ್ತುಕ ಪುರಾಣಗಳನ್ನು ವಿದ್ವನ್ಮಾನ್ಯವಾಗುವಂತೆ ರಚಿಸಿ ಲೀಲಾಖ್ಯದ ಮುರಿಗಾಸ್ವಾಮಿಗಳೆಂಬ ವಿಶಿಷ್ಟ ಹೆಸರುಗಳಿಸಿದ್ದಾರೆ.

ಇವರನ್ನು ಗುರುತಿಸಿದ್ಧ, ಗುರುಸಿದ್ದೇಶ್ವರಸ್ವಾಮಿ, ಗುರುಸಿದ್ಧಯೋಗೀಂದ್ರ, ಗುರುಸಿದ್ಧಶಿವಯೋಗಿ, ಗುರುಸಿದ್ಧ ದೇಶಿಕೇಂದ್ರ, ಇಮ್ಮಡಿಮುರಿಗಾ ಗುರುಸಿದ್ಧ ದೇಶಿಕೇಂದ್ರ, ದ್ವಿತೀಯ ಮುರಿಗಾಖ್ಯ ಗುರುಸಿದ್ಧಶಿವಯೋಗಿ ಮತ್ತು ಲೀಲಾಖ್ಯದ ಮುರಿಗಾಖ್ಯ ಶಿವಯೋಗಿ ಎಂದು ಅನೇಕರು ಹೆಸರಿಸಿರುವರು.

ಉನ್ನತದೇಶಿಕೇಂದ್ರರಾದ ಇವರು ಲೋಕ ಸುಧಾರಣೆಗೆ ನಿಂತು ಲೋಕವನ್ನು ತಿದ್ದಲು ಸರಳಿ ಜನಪದ ಸಾಹಿತ್ಯದಿಂದಾರಂಭಿಸಿ ಪ್ರೌಢ ವಿದ್ವನ್ಮಾನ್ಯ ಕಾವ್ಯ ಮಟ್ಟದವರೆಗೂ ಅನೇಕ ಕೃತಿಗಳನ್ನು ಸ್ವತಂತ್ರವಾಗಿ, ಅನುವಾದರೂಪವಾಗಿ ವಿವರಣಾತ್ಮಕವಾಗಿ, ಸಂಗ್ರಹರೂಪವಾಗಿ, ಹಾಡುಗಬ್ಬರೂಪವಾಗಿ ಮತ್ತು ವಚನಗಳ ರೂಪವಾಗಿ ರಚಿಸಿರುವರು. ಶಿವಲಿಂಗ ಅಥವಾ ಶಿವಲಿಂಗೇಶ್ವರ ಇವರ ಅಂಕಿತ. ತಮ್ಮ ಕೆಲಕೃತಿಗಳ ಆದ್ಯಂತಗಳಲ್ಲಿ ಶಿವ-ದೇವಿಯರ ಸ್ತುತಿ ಮಾಡಿದ್ದಾರೆ.

ಕೃತಿಗಳು: ಹೋಳೀಪದ (ಜನಪದ ಸಾಹಿತ್ಯ): ಬಿಜ್ಜಮಹಾದೇವಿ (ಅಮ್ಮವ್ವೆ): ಚಾರಿತ್ರ (ಯಕ್ಷಗಾನ 1717): ಕೈವಲ್ಯ ಸೋಪಾನ ನಾಮೈಕೋತ್ತರ ಶತಸ್ಥಲ (ಸೂತ್ರ ಪದಗಳಿರುವ ಹಾಡುಗಬ್ಬ): ಶೂನ್ಯ ಮಂತ್ರಗೋಪ್ಯ (ಶಿವಲಿಂಗೇಶ್ವರಾಂಕಿತ ವಚನಗ್ರಂಥ): ಶಿವಲಿಂಗ ಮಹಿಮಾ ಷಟ್ಟದಿ: ಮಿಶ್ರಾರ್ಪಣ ವಾರ್ಧಿಕ: ಶಿವಲಿಂಗನಾಂದ್ಯ ಯೋಗಕಲಾಪಸಾರ (ಶಿವ-ಗಿರಿಜಾ ಸಂವಾದ): ಸ್ಕಂದ ಕಲ್ಯಾಣ ಕನ್ನಡಪದ್ಯ: ಕನ್ನಡ ಹಾಡುಗಬ್ಬ: ನಂದೀಶ್ವರಜಯದಂಡಕಂ (ಸಂಸ್ಕøತ): ಪ್ರಭುಲೀಲಾ (ಸಂಸ್ಕøತ) 8 ಸರ್ಗದ ಮಹಾಕಾವ್ಯ): ವಿರೂಪಾಕ್ಷ ಪಂಚಾಶಿಕಾಗಮ (ಕನ್ನಡಪದ್ಯ): ಹಾಲಸ್ (ಸೌಂದರ) ವಸ್ತುಕ ಪುರಾಣ (ಕನ್ನಡ ಮಹಾಪ್ರಬಂಧ 1720) ಇವೆಲ್ಲದೆ ಇನ್ನೂ ಕೆಲವು ಗ್ರಂಥಗಳನ್ನು ಇವರು ಬರೆದಿದ್ದಾರೆ.

ಕೃತಿಗಳಿಂದ ದೊರೆಯುವ ಇವರ ಪರಿಚಯ ಹೀಗಿದೆ. ಧನುಃಪುರಿಯ (ದನಗೂರು) ಶ್ರೀಮನ್ನಿ ರಂಜನ ಪೀಠಾಧೀಶರಾಗಿದ್ಧ ಉದ್ದಾನಯತಿ ವಂಶಜರು ದೀಕ್ಷಾಗುರು ಸೋಮಶೇಖರುರಗುಗಳು. ಶಿಕ್ಷಾಗುರು ಬಸವಲಿಂಗಸ್ವಾಮಿ. ಕುಂಭ ಪಲ್ಲಿಯ ಮಹಾಯೋಗಿ ಚಿದ್ಬಸವೇಶರಿಂದ ಬಂಧರಾದರು. ಮುರಿಗಾ ಶಾಂತವೀರ ದೇಶಕೇಂದ್ರರ ಮಹದನುಗ್ರಹಕ್ಕೆ ಪಾತ್ರರಾಗಿ ಅವರಿಂದ ಜ್ಞಾನೋಪದೇಶ ಹೊಂದಿ ಅವರ ನಾಮ-ರೂಪಾದಿಗಳಾಂತು ಷಟ್ಸ್ಥಲ ಮಾರ್ಗಜ್ಞಾರಾಗಿ ಶ್ರೀಗುರುರೂಪರಾದರು. ಯತಿರಾಜ ಹರೀಶ. ಚನ್ನವೀರಶ್ವರ, ಮಹಾಜ್ಞಾನಿ ಆರಾಧ್ಯಕಾರಿ ಬಸವೇಶ ಮತ್ತು ಸಂಗೀತ ವಿದ್ಯಾಬ್ಧಿಚಂದ್ರ ಮುಚ್ಚನ್ನಬಸವೇಶ್ವರರ ಕೋರಿಕೆಯಂತೆ, ಸೋದೆಯ ದೊರೆ ಸದಾಶಿವನೃಪಾಲ ವರ್ಣಕವಾಗಿ ಬರೆದಿದ್ದ ಹಾಲಾಸ್ಯ ವಸ್ತುಕ ಪುರಾಣಗಳಲ್ಲಿ ತಿಳಿಸಿರುತ್ತಾರೆ.

ಇವರ ಶಿವಲಿಂಗ ಮಹಿಮಾಪಟ್ಟದಿ ಹಂಚಿನಪ್ಪರದ ರೇವಣಸಿದ್ಧನಿಗೆ ನಿರೂಪಿತವಾಗಿರುವುದಾಗಿ ತಿಳಿದುಬರುತ್ತದೆ.

ಇವರನ್ನು ಶಿವಸೂತ್ರ ಟೀಕಾಕಾರನಾದ ಕಾಶೀಗುರುಲಿಂಗಶಿವಯೋಗಿಶ್ವರನೂ ದೇವಿಸ್ತ್ರೋತ್ರಾದಿಗಳನ್ನು ಬರೆದಿರುವ ಮಹಿಳೇಶನೂ ಹಾನಗಲ್ಲ ವಿರಕ್ತ ಮಠಾಧೀಶನಾಗಿದ್ದು ಭಿಕ್ಷುಕ ಮಹೇಶವಿಲಾಸ ಕಾವ್ಯ ಬರೆದಿರುವ ಕುಮಾರವಿಭವೂ ಭಕ್ತಿಯಿಂದ ತಮ್ಮ ತಮ್ಮ ಕೃತಿಗಳಲ್ಲಿ ಸ್ತುತಿಸಿದ್ದಾರೆ. (ಎಂ.ಎಸ್.ಬಿ.ಆರ್.)