ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಷ್ಯ

ವಿಕಿಸೋರ್ಸ್ದಿಂದ

ರಷ್ಯ ಪೂರ್ವಾರ್ಧಗೋಳದ ಅತ್ಯಂತ ಉತ್ತರದಲ್ಲಿರುವ ವಿಶಾಲ ಭೂಪ್ರದೇಶವನ್ನಾಕ್ರಮಿಸುವ ಒಂದು ಸ್ವತಂತ್ರ ಸಾಮ್ರಾಜ್ಯ. ಈರಷ್ಯನ ಒಕ್ಕೂಟದ (ರಷ್ಯನ್ ಫೆಡರೇಷನ್) ದಕ್ಷಿಣದಲ್ಲಿ ಚೀನ, ಮಂಗೋಲಿಯ, ಕಜûಕಸ್ತಾನ್, ಅಜûರ್ ಬೈಜಾನ್, ಜಾರ್ಜಿಯ ದೇಶಗಳೂ, ಪೂರ್ವದಲ್ಲಿ ಜಪಾನ್ ಸಮುದ್ರ, ಒಕಾಸ್ಟ್ ಸಮುದ್ರ, ಈಶಾನ್ಯದಲ್ಲಿ ಬೇರಿಂಗ್ ಸಮುದ್ರ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಅಲಾಸ್ಕ ಉತ್ತರದಲ್ಲಿ ಪೂರ್ವ ಸೈಬಿರಿಯನ್ ಸಮುದ್ರ, ಲೆಪ್ಟಿವ್ ಸಮುದ್ರ, ಕಾರ ಸಮುದ್ರ ಮತ್ತು ಬೆರೆಂಟ್ಸ್ ಸಮುದ್ರ ವಾಯವ್ಯದಲ್ಲಿ ಫಿನ್ಲೆಂಡ್ ಪಶ್ಚಿಮದಲ್ಲಿ ಕಪ್ಪು ಸಮುದ್ರ, ಎಸ್ತೋನಿಯ, ಲಾತ್ವಿಯ, ಮಿನ್ಸ್ಕ್, ಉಕ್ರೇನ್ ಆಗ್ನೇಯದಂಚಿನಲ್ಲಿ ಉತ್ತರ ಕೋರಿಯ, ಈ ಮಹಾನ್‍ದೇಶವನ್ನು ಸುತ್ತುವರೆದಿವೆ. ವಿಸ್ತೀರ್ಣದಲ್ಲಿ ಉತ್ತರ ಅಮೇರಿಕದ ಕೆನಡ ದೇಶ ಎರಡನೆಯದಾದರೆ ಪ್ರಪಂಚದಲ್ಲಿಯ ಎಲ್ಲಾ ದೇಶಗಳು ಮೀರಿ ಪ್ರಥಮ ಸ್ಥಾನದಲ್ಲಿರಷ್ಯವಿದ. ಉತ್ತರ ದಕ್ಷಿಣವಾಗಿ 4,500 ಕಿ.ಮೀ., ಪೂರ್ವಪಶ್ಚಿಮವಾಗಿ 9650 ಕಿ.ಮೀ. ವಿಸ್ತಾರವಿರುವ ಇದರ ಒಟ್ಟು ವಿಸ್ತಾರ 1,70,75,400 ಚ.ಕಿ.ಮೀ.ಗಳು. ಜನಸಂಖ್ಯೆ 14,34,20,309 (2005). ಆಡಳಿತ ಕೇಂದ್ರ ನಗರ ಮಾಸ್ಕೋ ಇದರ ವಿಸ್ತೀರ್ಣ 879 ಚ.ಕಿ.ಮೀ. ಕೇಂದ್ರ ನಗರ ಜನಸಂಖ್ಯೆ 88,01,000. ಮಹಾನಗರದ ಜನಸಂಖ್ಯೆ 89,67,000 (2001).

ಈಗಿನ ರಷ್ಯಾ ಹಿಂದಿನ ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದಲ್ಲಿ (ಯು.ಎಸ್.ಎಸ್.ಆರ್) ಸೇರಿತ್ತು. ರಾಜಕೀಯದ ಒತ್ತಡಗಳಿಗೆ ಸಿಲುಕಿ ಈ ದೇಶ ಸ್ವಹಿತಾಸಕ್ತಿಯ ರಾಜ್ಯಗಳ, ಸ್ವತಂತ್ರ ದೇಶಗಳ ಉದಯಕ್ಕೆ ಕಾರಣವಾಯಿತು. ಮಹಾನ್ ಒಕ್ಕೂಟವನ್ನು 1991 ಡಿಸೆಂಬರ್‍ನಲ್ಲಿ ವಿಸರ್ಜಿಸಲಾಯಿತು. ಇದರಿಂದ 15 ಸ್ವತಂತ್ರ ಗಣರಾಜ್ಯಗಳು ಅಸ್ಥಿತ್ವಕ್ಕೆ ಬಂದವು. 1993 ಡಿಸೆಂಬರ್ 12ರಂದು ಹೊಸ ರಾಜ್ಯಾಂಗ ಜಾರಿಗೆ ಬಂತು.

ರಷ್ಯವನ್ನು ಕುರಿತ ಈ ಲೇಖನದಲ್ಲಿ ಮುಂದೆ ಕಾಣಿಸಿರುವ ವಿಭಾಗಗಳಿವೆ. 1 ಪ್ರಾಕೃತಿಕ ಭೂಗೋಳ (1) ಭೂವಿಜ್ಞಾನ ವೃತ್ತಾಂತ (2) ಮೇಲ್ಮೈ ಲಕ್ಷಣ (3) ವಾಯುಗುಣ (4) ನದಿ, ಸರೋವರಗಳು (5) ಸಸ್ಯ ಮತ್ತು ಪ್ರಾಣಿ ವರ್ಗ 2 ಜನಜೀವನ (1) ಕೃಷಿ (2) ಆಡಳಿತ (3) ಸಾರಿಗೆ (4) ಪರಿಸರ (5) ಕೈಗಾರಿಕೋತ್ಪನ್ನಗಳು (6) ಪ್ರವಾಸಿ ತಾಣಗಳು (7) ಇತಿಹಾಸ (8) ಶಿಕ್ಷಣ

I. ಪ್ರಾಕೃತಿಕ ಭೂಗೋಳ

ಭೂವಿಜ್ಞಾನ ವೃತ್ತಾಂತ: ರಷ್ಯದ ಭೂಇತಿಹಾಸ ಹೆಚ್ಚು ವೈವಿಧ್ಯಮಯವಾದ್ದು. ಭೂವೈಜ್ಞಾನಿಕ ಕಾಲದ ಎಲ್ಲ ಯುಗಗಳ ಅಗ್ನಿಶಿಲೆ, ಜಲಜಶಿಲೆ ಹಾಗೂ ರೂಪಾಂತರ ಶಿಲೆಗಳೂ ಲೋಹ ಮತ್ತು ಅಲೋಹ ಖನಿಜಗಳೂ ವಿವಿಧ ಮಣ್ಣುಗಳೂ ಈ ಭೂಭಾಗದಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಅವುಗಳ ಸ್ಥೂಲ ವಿವರ ಮುಂದಿನಂತಿದೆ.

ಆರ್ಷೇಯಕಲ್ಪದ ಕಬ್ಬಿಣ ಮತ್ತು ಕಬ್ಬಿಣಯುಕ್ತ ಬೆಣಚುಕಲ್ಲಿನ ಮಣ್ಣು ಹಾಗೂ ಜ್ವಾಲಾಮುಖಜಶಿಲೆಗಳು ಉಕ್ರೇನ್‍ನಲ್ಲಿರುವ ಕಾನ್‍ಸ್ಕಿ-ವರ್ಕ್‍ಯಾಂತ್‍ಸ್ಕೀ ಕ್ರಿಬೆಟ್ ಪರ್ವತಶ್ರೇಣಿಗಳಲ್ಲಿ ಇರುವುದಲ್ಲದೆ ಸೈಬೀರಿಯನ್ ವೇದಿಕೆಯ ಆಲ್ಡಾನ್ ಭೂಭಾಗದಲ್ಲಿರುವ ಐಯೆಂಗ್ರ್ ಮತ್ತು ಕಾರಶಿಲಾಶ್ರೇಣಿಗಳಲ್ಲೂ ಕಾಣಸಿಗುತ್ತವೆ. ರೂಪಾಂತರಕ್ಕೆ ಒಳಗಾದ ಆರ್ಷೇಯ ಶಿಲಾಕಾಯಗಳು ಉಕ್ರೇನಿನ ಕಿರೊವಗ್ರಾಡ್-ಯಟೊಮಿರ್ ಮತ್ತು ಅಜೋವ್ ಪ್ರದೇಶಗಳಲ್ಲಿ ಗ್ರಾನೈಟ್-ನೈಸ್ ಗುಮ್ಮಟಗಳಂತೆ ಅಲ್ಲಲ್ಲಿ ಕಾಣಸಿಗುತ್ತವೆ. ಸೈಬೀರಿಯನ್ ವೇದಿಕೆಯ ಉಕ್ರೇನಿನ ಸ್ಟ್ಯಾನವಾಯ್ ಶ್ರೇಣಿಗಳಲ್ಲಿ ವಿವಿಧ ಹಂತದ ಗ್ರಾನೀಟಿಕರಣವನ್ನು ಗುರುತಿಸಲಾಗಿದೆ. ಇವಲ್ಲದೆ ಸೈಬೀರಿಯನ್ ವೇದಿಕೆಯ ಆಲ್ಡಾನ್ ಮತ್ತು ಅನಬಾರ್ ಸ್ಥಿರಭೂಭಾಗಗಳಿಗಿಂತಲೂ ಪೂರ್ವಯುರೋಪಿನ ಬಾಲ್ಟಿಕ್ ಮತ್ತು ಉಕ್ರೇನಿಯನ್ ಸ್ಥಿರಭೂಭಾಗಗಳನ್ನು ಕುರಿತಂತೆ ಹೆಚ್ಚು ಅಧ್ಯಯನ ನಡೆದಿದೆ. ಆರ್ಷೇಯ ಕಲ್ಪದ ಸ್ಥಿರಭೂಭಾಗಗಳಲ್ಲಿ ಪಟಕೀಕೃತ ಗ್ರಾನೈಟ್ ಕಣಶಿಲೆ ಹಾಗೂ ನೈಸ್ ಶಿಲೆಗಳಿವೆ. ಉದಾಹರಣೆಗೆ; ಕರೇಲಿಯ, ಕೋಲ ಪರ್ಯಾಯದ್ವೀಪಭಾಗ, ದಕ್ಷಿಣರಷ್ಯ ಮತ್ತು ಸೈಬೀರಿಯದ ಪೂರ್ವಭಾಗ ಪ್ರದೇಶಗಳು. ಕೋಲ ಪರ್ಯಾದ್ವೀಪ ಪ್ರದೇಶದಲ್ಲಿ ಭೂಮೇಲ್ಮೈಯ ಪ್ರಥಮ ಹೊದಿಕೆಯ (ಕ್ರಸ್ಟ್) ಮಂದವನ್ನು ನಿರ್ಣಯಿಸಲು ಅತ್ಯಂತ ಆಳದ (1 ಕಿಮೀ.) ಕೊಳವೆ ಬಾವಿಯನ್ನು ಕೊರೆಯಲಾಗಿದೆ.

ಆದಿ ಜೀವಕಲ್ಪದ ಅವಧಿಯಲ್ಲಿ ಸಂಚಯನಗೊಂಡ ಮರುಳುಶಿಲೆ, ಪೆಂಟೆಶಿಲೆ, ಸುಣ್ಣ ಹಾಗೂ ಜೇಡುಶಿಲೆಗಳು ಕಾಲಾನುಕ್ರಮದಲ್ಲಿ ರೂಪಾಂತರಕ್ರಿಯೆಗೆ ಒಳಗಾಗಿ ಅನುಕ್ರಮವಾಗಿ ಕ್ವಾರ್ಡ್‍ಜೈಟ್, ಫಿಲ್ಲೈಟ್, ಅಮೃತಶಿಲೆ ಮತ್ತು ಸ್ಲೇಟು ಶಿಲೆಗಳಾಗಿ ಪರಿವರ್ತನೆಗೊಂಡುವು. ಈ ಅವಧಿಯಲ್ಲಿ ಮಡಿಕೆಗೊಂಡ ಶಿಲೆಗಳು ಕೋಲ, ಕರೇಲಿಯ, ಸ್ವೆಕೋಫೇನಿಯ ಮತ್ತು ಡಾಲ್ಸ್ ಲ್ಯಾಂಡಿಯನ್ ಎಂಬ ನಾಲ್ಕು ಸ್ಥಿರಭೂಭಾಗ ಪ್ರದೇಶಗಳಾಗಿ ಮಾರ್ಪಟ್ಟವು. ಇದೇ ಜೀವಕಲ್ಪದಲ್ಲಿ ಸಂಚಯನಗೊಂಡ ಮರುಳುಶಿಲೆ, ಬೆಣಚುಶಿಲೆ, ಜೇಡುಶಿಲೆ, ಡಾಲೋಮೈಟ್ ಮತ್ತು ಜ್ವಾಲಾಮುಖಜ ಶಿಲೆಗಳಿಂದ ಆವೃತವಾಗಿರುವ ಕೆಲವು ಪ್ರದೇಶಗಳಲ್ಲಿ ಆ ಮೂಲಜಲಜಶಿಲೆಗಳು ಯಾವುದೇ ಬದಲಾವಣೆಗೂ ಒಳಗಾಗದೇ ಹಾಗೇ ಉಳಿದು ಕೊಂಡುಬಂದಿರುವಂಥದ್ದಾಗಿದೆ. ಅವೆಂದರೆ ಕಾರನದಿಯ ಇಬ್ಬದಿಗಳಲ್ಲಿರುವ ಕೊಡರೋ-ಉಡೊಕನ್ ಪ್ರದೇಶ; ಆಲ್ಡಾನ್ ಸ್ಥಿರ ಭೂಭಾಗ ಮತ್ತು ಸೈಬೀರಿಯನ್ ವೇದಿಕೆಗಳು ಹಾಗೂ ರಪಕಿವಿ ಗ್ರಾನೈಟ್‍ನಿಂದ (1650-1610 ದಶಲಕ್ಷ ವರ್ಷಗಳ ಪ್ರಾಚೀನ) ಮಾಡಿದ ಗ್ರಾನೈಟ್ ಪ್ರದೇಶ. ಈ ಪ್ರದೇಶಗಳು ಮಾತ್ರವಲ್ಲದೆ ಮರಳುಶಿಲೆ ಮತ್ತು ಕ್ಲೋರೈಟ್-ಸೆರಿಸೈಟ್ ಷಿಸ್ಟ್‍ಶಿಲೆಗಳಿಂದ ಆವೃತವಾಗಿರುವ ಕೋಲ ಪರ್ಯಾಯದ್ವೀಪ ಹಗೂ ಯಟೂಲಿಯನ್ ಶ್ರೇಣಿಗಳು ಆದಿಜೀವಕಲ್ಪದ ಪ್ರಾಚೀನ ವೇದಿಕೆಗಳೇ ಆಗಿವೆ. ಇದೇ ಕಾಲದ ಶಿಲೆಗಳನ್ನು ಕರೇಲಿಯ, ಯೂರಲ್ ಪರ್ವತಶ್ರೇಣಿ, ಮಧ್ಯರಷ್ಯ ಹಾಗೂ ಆಲ್ಡೈಪರ್ವತಗಳಲ್ಲಿ ಕಾಣಬಹುದು. 1400-1300 ದಶಲಕ್ಷ ವರ್ಷಗಳ ಅವಧಿಯಲ್ಲಿ ಬೈಲೋರಷ್ಯ ವೇದಿಕೆಯ ಅಡಿಪಾಯಶಿಲೆಗಳು ರೂಪಾಂತರಗೊಂಡು ಗ್ರಾನೀಟಿಕರಣ ಹೊಂದಿದುವು. ಸೈಬೀರಿಯ ವೇದಿಕೆಯಲ್ಲಿ ಆದಿಜೀವಕಲ್ಪದ ಆದಿ ಮತ್ತು ಮಧ್ಯಕಾಲಗಳ ಮಡಿಕೆವ್ಯೂಹ ಕಂಡುಬಂದಿಲ್ಲ. ಆದಿಜೀವಕಲ್ಪದ ಅಂತ್ಯದ ಕಾಲಾವಧಿಯನ್ನು ರಿಫಿಯೆನ್ ಕಾಲ ಎಂದು ಕರೆಯುವುದಿದೆ. ಈ ಕಾಲದ ಬೃಹತ್ ಬೋಗುಣಿಗಳಲ್ಲಿ (ಜಿಯೊಸಿಂಕ್ಲೈನ್) ಐಸೆಡೋನಿಯನ್ ಮತ್ತು ಬೈಕಲಿಯನ್ ಕಾಲಾವಧಿಗಳಿಗೆ ಸೇರಿದ ಎರಡು ಬಗೆಯ ಮಡಿಕೆಗಳನ್ನು ಗುರುತಿಸಬಹುದಾಗಿದೆ. ಮೊದಲನೆಯ ಬಗೆಯ ಖಂಡೀಯ ಮಾದರಿಯ (ಕಾಂಟಿನೆಂಟಲ್ ಟೈಪ್) ಮಡಿಕೆಗಳನ್ನು ಯೂರಲ್ ಪರ್ವತಗಳಲ್ಲಿ ಕಜಕಸ್ತಾನ್ ಹಾಗೂ ಅಲ್ಡಾಯ್‍ಸಯಾನ್ ಪ್ರದೇಶಗಳಲ್ಲಿ ಕಾಣಬಹುದು. ಎರಡನೆಯ ಬಗೆಯ ಬೈಕಲಿಯನ್ ಮಡಿಕೆಗಳನ್ನು (700-500 ದಶಲಕ್ಷ ವರ್ಷಗಳು) ಕೆಕ್ವೆಟವ್-ಉಲುಟಾವ್, ಮಯಾನ್-ಕೂಮ ಮತ್ತು ಕಿರ್ಗಿಜ್‍ಗಳಲ್ಲಿ ಅಲ್ಲದೆ ಖಿಂಗನ್-ಬುರೆಯ ಶಿಲಾಕಾಯಗಳಲ್ಲೂ ಕಾಣಬಹುದು. ಸೈಬೀರಿಯದ ಬೃಹತ್‍ಶಿಲಾ ವೇದಿಕೆಯಲ್ಲಿ ಸಾವಿರಾರು ಕಿಮೀ. ಉದ್ದ ಹಾಗೂ ನೂರಾರು ಕಿಮೀ. ಅಗಲವಿರುವ ವೇದಿಕೆಗಳು ವಿಲ್ಯೂಯಿ ಎಂಬ ಪ್ರದೇಶದಲ್ಲಿ ಪೀಠಭೂಮಿಯಂತೆ ಕಾಣಸಿಗುತ್ತವೆ. ಆದಿಜೀವಕಲ್ಪದ ಅಂತ್ಯದಲ್ಲಿ ಅಂದರೆ, ರಿಫಿಯನ್ ಮತ್ತು ವೆಂಡಿಯನ್ ಕಾಲದ ಶಿಲೆಗಳಲ್ಲಿ ನೀಲ-ಹಸುರು ಶೈವಲವರ್ಗದ ಸ್ಟ್ರೋಮಟೋಲೈಟ್ ಎಂಬ ಸಸ್ಯಾವಶೇಷಗಳು ದೊರೆತಿವೆ.

ಪ್ರಾಚೀನಜೀವಯುಗದ ಶಿಲೆಗಳಲ್ಲಿ ದೊರೆತಿರುವ ಜೀವ್ಯವಶೇಷಗಳನ್ನು ಆಧರಿಸಿ ಭೂವೈಜ್ಞಾನಿಕ ಕಾಲದ ಆರು ಯುಗಗಳನ್ನೂ ಗುರುತಿಸಿದ್ದಾರೆ. ರಷ್ಯದ ಕೇಂಬ್ರಿಯನ್ ಶಿಲೆಗಳಲ್ಲಿರುವ ಟ್ರೈಲೋಬೈಟ್ ಅವಶೇಷಗಳಿರುವ ಶಿಲಾಶ್ರೇಣಿಯನ್ನು ಟೊಮ್ಮಾಟಿಯನ್, ಆಲ್ಡೀನಿಯನ್ ಮತ್ತು ಲೆನಿಯನ್ ಎಂಬ ಮೂರು ಅವಧಿಗಳನ್ನಾಗಿ ವಿಭಾಗಿಸಲಾಗಿದೆ.

ಆರ್ಡೋವೀಸಿಯನ್ ಕಲ್ಪದ ಮಯಾಚ್‍ನಯ ಶಿಲಾವರ್ಗ ಮತ್ತು ರಿಮ್‍ನಿಟ್‍ಸ್ಕಿ ಶ್ರೇಣಿಗಳೆಂಬ ಎರಡೂ ಹಂತಗಳನ್ನು ಯೂರಲ್‍ಪರ್ವತ ಮತ್ತು ಕಜûಕ್ ಪ್ರದೇಶಗಳ ಜೇಡು ಹಾಗೂ ಮರಳುಶಿಲೆಗಳಲ್ಲಿ ಗುರುತಿಸಲಾಗಿದೆ. ಕಜûಕ್ ಪ್ರದೇಶದಲ್ಲಿ ಈ ಕಲ್ಪದ ಶಿಲೆಗಳು ಜ್ವಾಲಾಮುಖಜಶಿಲೆಗಳೀಂದ ಆರಂಭವಾಗಿ ಜೇಡು ಮತ್ತು ಮರುಳುಶಿಲೆಗಳಿಂದ ಕೊನೆಗೊಂಡಿವೆ.

ಸೈಲೂರಿಯನ್ ಕಲ್ಪದ ಜ್ವಾಲಾಮುಖಜಶಿಲೆಗಳ ಮೇಲೆ ಜೇಡು ಮತ್ತು ಸುಣ್ಣ ಶಿಲಾಸ್ತರಗಳ ಪೇರಿಕೆಯನ್ನು ಯೂರಲ್ ಪರ್ವತದ ಶಿಲಾಶ್ರೇಣಿಗಳಲ್ಲಿ ಕಾಣಬಹುದು ಗ್ರಾಪ್ಟೊಲೈಟ್ ಅವಶೇಷಗಳನ್ನು ಹೊಂದಿರುವ ಜೇಡುಶಿಲೆಗಳ ಮೇಲೆ ಹವಳಯುಕ್ತ ಸುಣ್ಣ ಶೀಲಾಸ್ತರಗಳಿರುವುದನ್ನು ಸೈಬೀರಿಯದ ವಾಯುವ್ಯ ಪ್ರದೇಶದಲ್ಲಿ ಕಾಣಬಹುದು.

ಡಿವೋನಿಯನ್ ಕಲ್ಪದ ಶಿಲಾಸ್ತರಗಳು ಬಹುತೇಕ ಜ್ವಾಲಾಮುಖಜ ಹಾಗೂ ಜಲಜಶಿಲೆಗಳಿಂದ ಕೂಡಿವೆ. ಹಾಗೆಯೇರಷ್ಯನ್ ವೇದಿಕೆಯಲ್ಲಿ ಕೆಂಪು ಮರಳು ಶಿಲೆಗಳಿಂದ ಆರಂಭಗೊಂಡು ಸೆಮಿಲುಕ್, ಎವ್ಲನೋವ್, ಎಲೆಜಿಕ್ ಮತ್ತು ಮುರೇವ್ನ ಹಾಗೂ ಮಲೇವ್ಕ್ ಹಂತಗಳ ಅಂತ್ಯದಲ್ಲಿ ಸುಣ್ಣಶಿಲೆಗಳಿಂದ ಪ್ರತಿನಿಧಿತವಾಗಿದೆ. ಸೈಬೀರಿಯದ ವಾಯುವ್ಯದಲ್ಲಿ ಹರಡಿಕೊಂಡಿರುವ ಸೆಲ್‍ಯುಡಿಮ್‍ಸ್ಕಿ ಮತ್ತು ವೆಚೆಕ್‍ನಿಸ್‍ಸ್ಕಿ, ಸುಣ್ಣಶಿಲೆಗಳು ಈ ಕಾಲಕ್ಕೆ ಸೇರಿದುವು. ಹಾಗೆಯೇ ಯೂರಲ್ ಪರ್ವತಗಳಲ್ಲಿ ಜ್ವಾಲಾಮುಖಜ ಮತ್ತು ಜಲಜಶಿಲಾ ಸಂಯೋಜನೆ ಹೊಂದಿರುವ ಗೆರ್‍ಟಿನ್‍ಸ್ಕಿ, ಕರಮಾಲಿ ಟಾಷ್ಕಿ, ಟಲಿಷ್ಟ ಮತ್ತು ವಗ್ರಾನ್‍ಸ್ಕಿ ಸುಣ್ಣಶಿಲಾಸ್ತರಗಳು ಇದೇ ಕಲ್ಪಕ್ಕೆ ಸೇರಿದಂಥವು. ಮಾಸ್ಕೋದ ಸುತ್ತಮುತ್ತಲಿರುವ ಸುಣ್ಣಶಿಲೆ ಮತ್ತು ಡಾಲೋಮೈಟ್ ಶಿಲೆಗಳಲ್ಲಿ ಜಿಪ್ಸಮ್ ಖನಿಜ ಹಾಗೂ ಜೇಡುಶಿಲೆಗಳು ಅಂತರಪದರವಾಗಿರೂಪುಗೊಂಡಿವೆ. ಈ ಶಿಲಾಶ್ರೇಣಿಯ ವಯಸ್ಸನ್ನು ಮೇಲಣ ಡವೋನಿಯನ್ ಎಂದು ನಿರ್ಧರಿಸಲಾಗಿದೆ. ಇದೇ ಕಲ್ಪಕ್ಕೆ ಸೇರಿದ ಮರಳು ಮತ್ತು ಜೇಡು ಶಿಲಾವೇದಿಕೆ ಪೂರ್ವ ಸೈಬೀರಿಯದಲ್ಲಿ ಕಾಣಸಿಗುತ್ತವೆ. ಆದರೆ ಈ ಶ್ರೇಣಿಯಲ್ಲಿ ಸ್ತರಭಂಗಗಳು ಹಾದುಹೋಗಿರುವ ಸ್ಥಳಗಳಲ್ಲಿ ಗ್ರಾನೈಟ್ ಮತ್ತು ನೈಸ್‍ಗಳಿಂದ ಅಲ್ಲಲ್ಲಿ ಅಂತಸ್ಸರಣಗೊಂಡಿದೆ.

ರಷ್ಯದ ಕಾರ್ಬಾನಿಫೆರಿಸ್ ಕಲ್ಪದ ಶಿಲೆಗಳಿಗೆ ಮಾಸ್ಕೋವಿಯನ್ ಹಂತ ಎಂದು ಹೆಸರು. ಈ ಕಾಲಕ್ಕೆ ಸೇರಿದ ಸುಣ್ಣಶಿಲೆ ಮತ್ತು ಜೇಡುಶಿಲೆಗಳು ಸ್ತರಗಳನ್ನುರಷ್ಯನ್ ವೇದಿಕೆಯಲ್ಲಿ ಗುರುತಿಸಲಾಗಿದೆ. ಯೂರಲ್‍ಪರ್ವತದ ಪೂರ್ವ ಇಳಿಜಾರಿನಲ್ಲಿ ಕಿಜೆಲ್‍ಸ್ಕಿ ಸುಣ್ಣ ಶಿಲೆ ಹಾಗೂ ಕುಗ್‍ಟ್‍ಸ್ಕಿ ಮರಳು ಶಿಲೆಗಳು ಇರುವುದು ಕಂಡುಬಂದಿದೆ. ಇದನ್ನು ಉರ್ಟಾಜಿಮ್‍ಸ್ಕಿ ಶ್ರೇಣಿಗಳೆಂದು ಕರೆಯಲಾಗಿದೆ.

ಪರ್ಮಿಯನ್ ಕಲ್ಪದ ಶಿಲೆಗಳು ಬಹುತೇಕ ಸುಣ್ಣಶಿಲೆ ಮತ್ತು ಜೇಡುಶಿಲಾಪೇರಿಕೆಗಳಂತೆ ಇದ್ದುರಷ್ಯನ್‍ವೇದಿಕೆಯ ಕಜûನಿಯನ್ ಶ್ರೇಣಿಯಲ್ಲಿ ಹಾಗೂ ಯೂರಲ್ ಪರ್ವತದ ಟಾರ್‍ಗಾಯನ್, ಕಜûನಿಯನ್ ಅರ್ಟಿನ್‍ಸ್ಕಿಯನ್ ಮತ್ತು ಸಕ್ಮಾಮರಿಯನ್ ಶ್ರೇಣಿಗಳಲ್ಲಿ ಶ್ರೇಣಿಗಳಲ್ಲಿ ಇರುವುದು ಕಂಡುಬರುತ್ತದೆ. ಇದೇ ಅವಧಿಯ ಜೇಡು ಮತ್ತು ಮರಳುಶಿಲೆಗಳು ಸೈಬೀರಿಯದ ವಾಯುವ್ಯದ ಟಿಕ್‍ಸಿನ್‍ಸ್ಕೈ, ವರ್ಕೊಯಾನ್ ಮತ್ತು ಎನ್ಡಿಬಾಲ್‍ಸ್ಕೈ ಶ್ರೇಣಿಗಳಲ್ಲಿ ಕಾಣಸಿಗುತ್ತವೆ. ಬೀಕನ್ ಮರುಳುಶಿಲೆಗಳೂ ಈ ಕಲ್ಪಕ್ಕೆ ಸೇರಿದಂಥವು.

ಮಧ್ಯಜೀವಿಯುಗದ ಮೂರು ಕಲ್ಪಗಳಿಗೂ ಸೇರಿದ ಶಿಲಾಪರಂಪರೆಯನ್ನು ರಷ್ಯದಲ್ಲಿ ಕಾಣಬಹುದು. ಮಾಸ್ಕೋ ಮತ್ತು ಸೈಬೀರಿಯದ ಉತ್ತರ ಭಾಗದ ಮಲ್ಟಾನ್‍ಸ್ಕಿ, ಖರ್‍ಜಾನ್‍ಸ್ಕಿ ಮತ್ತು ನಕಾಜಾನ್‍ಸ್ಕಿ ಎಂಬ ಮರಳು ಮತ್ತು ಜೇಡುಶಿಲಾಶ್ರೇಣಿಗಳು ಟ್ರಯಾಸಿಕ್ ಕಲ್ಪದ ಪ್ರತಿನಿಧಿಗಳೆನಿಸುತ್ತವೆ.

ಜರಾಸಿಕ್ ಕಲ್ಪಕ್ಕೆ ಸೇರಿದ ಜೇಡು ಮತ್ತು ಮರಳು ಶಿಲಾಪದರಗಳು ಮಾಸ್ಕೋ ಸುತ್ತಮುತ್ತ ವೋಲ್ಗಿಯನ್, ಕಿಮರಿಡ್ಜಿಯನ್, ಆಕ್ಸ್‍ಫರ್ಡಿಯನ್ ಮತ್ತು ಕೆಲೋವಿಯನ್ ಶ್ರೇಣಿಗಳಾಗಿ ಕಾಣಿಸಿಕೊಂಡಿವೆ. ಉತ್ತರ ಸೈಬೀರಿಯದಲ್ಲಿ ಪೂರ್ಣ ಪ್ರಮಾಣದ ಜುರಾಸಿಕ್ ಶಿಲಾಶ್ರೇಣಿಗಳು ಜ್ವಾಲಾಮುಖಜ ಶಿಲಾಯುಕ್ತ ಜಲಜಶಿಲೆಗಳಾಗಿ ಕಾಣಸಿಗುತ್ತವೆ.

ಕ್ರಿಟೇಷಸ್ ಕಲ್ಪಕ್ಕೆ ಸೇರಿದ ಶಿಲೆಗಳನ್ನು ಮಾಸ್ಕೋ ಸಮೀಪದ ಸೀಮೆಸುಣ್ಣದ (ಚಾಕ್) ನಿಕ್ಷೇಪಗಳಲ್ಲಿ ಹಾಗೂ ಉತ್ತರ ಸೈಬೀರಿಯದ ಮರಳುಶಿಲೆ ಮತ್ತು ಜೇಡು ಶಿಲಾಶ್ರೇಣಿಗಳಲ್ಲಿ ಕಾಣಬಹುದು.

ನವಜೀವಿಯುಗದ (ಕೈನೋಜೋಯಿಕ್ ಇರಾ) ಶಿಲಾಸಮುದಾಯವನ್ನು ಉತ್ತರ ಸೈಬೀರಿಯ ಪ್ರದೇಶದ ಜೇಡು, ಮರಳು ಮತ್ತು ಸುಣ್ಣಶಿಲಾಪೇರಿಕೆಗಳಲ್ಲಿ ಕಾಣಬಹುದು. ಈ ಶಿಲೆಗಳು ಬಹುತೇಕ ತೃತೀಯ (ಟರ್ಷಿಯರಿ) ಜೀವಯುಗಕ್ಕೆ ಸೇರಿದವು.

ರಷ್ಯದ ಚತುರ್ಥಜೀವಿಯುಗದಲ್ಲಿ (ಕ್ವಾರ್ಟರ್ನ್‍ರಿ) ಹಿಮಾಚ್ಛಾದಿತ ಪ್ರದೇಶಗಳೇ ಹೆಚ್ಚಾಗಿದ್ದವು. ಅಲ್ಲದೆ ಇದೇ ಕಾಲದಲ್ಲಿ ಅಲ್ಪ್ಸ್ ಪರ್ವತದ ಉಗಮವಾಯಿತು ಮಾತ್ರವಲ್ಲದೆ ರಷ್ಯದ ಕಾಕಸಸ್ ಮತ್ತು ಕ್ರಿಮಿಯ ಬೆಟ್ಟಪಂಕ್ತಿಗಳೂ ರೂಪ ತಾಳಿದವು. ರಷ್ಯದ ಹಿಮಯುಗವನ್ನು ಲಿಕ್ವಿನ್, ನೀಪರ್ ಮತ್ತು ವಾಲ್ಡೈ ಎಂಬ ಮೂರು ಅವಧಿಗಳನ್ನಾಗಿ ವಿಂಗಡಿಸಲಾಗಿದೆ. ಮೂರನೆಯ ಹಿಮಯುಗ (ವಾಲ್ಡೈ) ಸೈಬೀರಿಯದ ವಾಯುವ್ಯದವರೆಗೆ ವ್ಯಾಪಿಸಿತ್ತು.

1. ಖನಿಜನಿಕ್ಷೇಪಗಳು : ರಷ್ಯದ ಆರ್ಥಿಕ ಮುನ್ನಡೆಗೆ ಇಲ್ಲಿಯ ವಿಫುಲ ಖನಿಜಸಂಪತ್ತು ಮುಖ್ಯ ಪಾತ್ರವಹಿಸಿದ್ದು ಸ್ವಾವಲಂಬನೆಗೆ ಎಡೆಮಾಡಿಕೊಟ್ಟಿದೆ. ಇಲ್ಲಿನ ಅಡಿಪಾಯ ಶಿಲೆಗಳಲ್ಲಿ ಜ್ವಾಲಾಮುಖಜ ಅಂತಸ್ಸರಣದಿಂದಾಗಿ ಹಲವು ಖನಿಜನಿಕ್ಷೇಪಗಳುರೂಪುಗೊಂಡಿವೆ. ಇಲ್ಲಿ ದೊರೆಯುವ ಎರೆಮಣ್ಣು (ಚೆರ್‍ರ್ನೊಜೆಮ್) ಪ್ರಪಂಚದಲ್ಲೆ ಹೆಚ್ಚು ಫಲವತ್ತಾದ ಮಣ್ಣು. ಇಂಥ ಮಣ್ಣು ಉಕ್ರೇನಿನ ಪಶ್ಚಿಮದಿಂದ ಸೈಬೀರಿಯದ ಆಗ್ನೇಯ ಪ್ರಾಂತ್ಯಗಳವರೆಗೂ ಹರಡಿದೆ. ಕಾಕಸಸ್ ಬೆಟ್ಟಗಳಲ್ಲಿ ಹಳದಿ ಮತ್ತು ಕೆಂಪುಮಣ್ಣುಗಳಿವೆ. ಅಷ್ಟೇನೂ ಫಲವತ್ತಾಗಿರದ ಜೌಗು ಮಣ್ಣು ಸಮುದ್ರದ ಅಂಚಿನವರೆಗೂ ಹರಡಿಕೊಂಡಿದೆ. ಗ್ರಾನೈಟ್-ನೈಸ್‍ಶಿಲೆಗಳುರಷ್ಯದ ಹಲವಾರು ಪೀಠಭೂಮಿಗಳಲ್ಲಿ ಅಡಿಪಾಯ ಶಿಲೆಗಳಾಗಿ ವ್ಯಾಪಿಸಿಕೊಂಡಿವೆ. ಈ ದೇಶದ ಬಹುತೇಕ ಜಲವಿದ್ಯುತ್ ಯೋಜನೆಗಳೆಲ್ಲ ಇಂಥ ಸುಭದ್ರ ಅಡಿಪಾಯ ಶಿಲೆಗಳು ಇರುವ ಸ್ಥಳಗಳಲ್ಲಿ ಸ್ಥಾಪಿತವಾಗಿವೆ. ಉದಾಹರಣೆಗೆ : ಕ್ರಸ್ನೋಯಾರಸ್ಕ್, ಬುಖ್ತಾರ್ಮ್, ನೀಪರ್, ಟುಲಮ, ದಕ್ಷಿಣ ಉಕ್ರೇನ್, ಕೋಲ ಪರ್ಯಾಯದ್ವೀಪ. ಸೈಬೀರಿಯ ವೇದಿಕೆಯ ಕೋಲಿಮ ನದೀಹರವಿನ ಪಾತ್ರದಲ್ಲಿ ಸಾಮಾನ್ಯವಾಗಿ ಗ್ರಾನೈಟ್ ಶಿಲೆಗಳು ಕಾಣಬರುತ್ತವೆ. ಆರ್ಮೇನಿಯ ಮತ್ತು ಕಾಮ್‍ಚಟ್ಕಾಗಳಲ್ಲಿ ಟುಫ್ ಎಂಬ ಅಗ್ನಿಶಿಲೆಗಳಿವೆ. ಕಬ್ಬಿಣದ ಬೃಹತ್ ನಿಕ್ಷೇಪಗಳು ಕಿರ್‍ಸ್ಕ್ ಮತ್ತು ಕ್ರಿವಾಯ್‍ರಾಗ್ ಪ್ರದೇಶಗಳಲ್ಲಿ ಕಾಣಬರುತ್ತವೆ. ಬಾಲ್ಟಿಕ್‍ಸ್ಥಿರ ಭೂಭಾಗಕ್ಕೆ ಹೊಂದಿಕೊಂಡಂತೆಯೇ ತಾಮ್ರ-ನಿಕ್ಕಲ್ ನಿಕ್ಷೇಪಗಳು ಇವೆ. ಇವು ಜಲಜಶಿಲಾ ಅಡಿಪಾಯಶಿಲೆಗಳ ಕೆಳಗೆ ನಿಕ್ಷೇಪಗೊಂಡಿವೆ. ಸೈಬೀರಿಯನ್ ಬೆಸಾಲ್ಟ್‍ಗಳಲ್ಲಿ (ಟ್ರಾಪ್) ಅದರಲ್ಲೂ ಅಗ್ನಿಪರ್ವಗಳ ದ್ವಾರಗಳಲ್ಲಿರುವ ಕಿಂಬರ್‍ಲೈಟ್ ಶಿಲೆಗಳಲ್ಲಿ ವಜ್ರ,ರೂಬಿ ಮತ್ತು ಪಚ್ಚೆಗಳು ದೊರೆಯುತ್ತವೆ. ಚಿನ್ನ, ಬೆಳ್ಳಿ, ಸೀಸ, ತಾಮ್ರ, ಸತು ಮತ್ತು ಸಿನಬಾರ್ ಅದುರುಗಳು ಓರೋಟ್‍ಸ್ಕು ಹಾಗೂ ಚುಕೋಟ್‍ಗಳಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಸೈಬೀರಿಯದಲ್ಲಿ ಪೆಟ್ರೋಲಿಯಮ್ ಮತ್ತಿತರ ಖನಿಜಗಳಿವೆ. ರಷ್ಯದಲ್ಲಿ ತವರದ ನಿಕ್ಷೇಪಗಳು ಇವೆಯಾದರೂ ಅಲ್ಲಿನ ಬೇಡಿಕೆಯನ್ನು ಅಷ್ಟಾಗಿ ಪೂರೈಸಲಾಗುತ್ತಿಲ್ಲ. ಕಲ್ಲಿದ್ದಲು ಮತ್ತು ಪೆಟ್ರೋಲಿಯಮ್ ಹಾಗೂ ನೈಸರ್ಗಿಕಾನಿಲ ನಿಕ್ಷೇಪಗಳುರಷ್ಯದ ಪಶ್ಚಿಮ, ಉತ್ತರ ಹಾಗೂ ದಕ್ಷಿಣಗಳಲ್ಲಿ ಸಮೃದ್ಧವಾಗಿವೆ. ಉತ್ಕøಷ್ಟವಾದ ಕಬ್ಬಿಣದ ಅದುರು ಉಕ್ರೇನ್ ಯೂರಲ್ ಪರ್ವತ ಹಾಗೂ ಕಜûಕ್‍ಸ್ತಾನಗಳಲ್ಲಿ ದೊರೆಯುತ್ತವೆ. ಪ್ರಪಂಚದಲ್ಲೆ ಅತ್ಯಂತ ವಿಶಾಲವಾದ ಬೃಹತ್ ಮ್ಯಾಂಗನೀಸ್ ಗಣಿಗಾರಿಕೆ ಜಾರ್ಜಿಯ ಮತ್ತು ಉಕ್ರೇನ್ ಗಣರಾಜ್ಯಗಳಲ್ಲಿ ಇದೆ. ಕಜಕ್‍ಸ್ತಾನದಲ್ಲಿ ಉತ್ಕøಷ್ಟವಾದ ತಾಮ್ರ, ಸೀಸ ಮತ್ತು ಸತುವಿನ ಅದುರುಗಳಿವೆ; ಅಲ್ಯೂಮಿನಿಯಮ್ ಅದುರು (ಬಾಕ್ಸೈಟ್), ಮಾಲಬ್ಡಿನಮ್‍ಗಳೂ ದೊರೆಯುತ್ತವೆ. ಮಾಸ್ಕೋ ಸುತ್ತಮುತ್ತ ಜಿಪ್ಸಮ್ ಖನಿಜವಲ್ಲದೆ ಸೀಮೆಸುಣ್ಣದ ನಿಕ್ಷೇಪಗಳೂ ಇವೆ.

2. ಮೇಲ್ಮೈಲಕ್ಷಣ : ರಷ್ಯನ್ ಒಕ್ಕೂಟದ ಮೇಲ್ಮೈ ಲಕ್ಷಣ ವೈವಿಧ್ಯ ಮಯವಾದದ್ದು. ಯೂರಲ್ ಪರ್ವತಶ್ರೇಣಿಯ ಪಶ್ಚಿಮಕ್ಕಿರುವ ಭಾಗ ಹಾಗೂ ಪಶ್ಚಿಮ ಸೈಬೀರಿಯಗಳು ವಿಶಾಲವಾದ ಬಯಲು ಪ್ರದೇಶವಾಗಿದ್ದು ಮಧ್ಯೆ ಮಧ್ಯೆ ಬೆಟ್ಟಗುಡ್ಡಗಳು ಮತ್ತು ನದೀ ಕಣಿವೆಗಳಿಂದ ಕೂಡಿದೆ. ಪಶ್ಚಿಮದಲ್ಲಿ ಕಪ್ಪು ಸಮುದ್ರ, ದಕ್ಷಿಣದಲ್ಲಿ ಕ್ಯಾಸ್ಪಿಯನ್ ಸಮುದ್ರಗಳ ನಡುವೆ ಕಾಕಸಸ್ ಪರ್ವತಗಳ ವರೆಗಿನ ಪ್ರದೇಶ ಏರಿಳಿತಗಳಿಂದ ಕೂಡಿದೆ. ಸೈಬೀರಿಯ ಮತ್ತು ಯುರೋಪಿಯನ್‍ರಷ್ಯ ಇವೆರಡರ ಮಧ್ಯೆ ಸು 500 ಮೀ. ಎತ್ತರದ ಯೂರಲ್ ಪರ್ವತ ಶ್ರೇಣಿಗಳು ಹಾದುಹೋಗಿವೆ. ಇದರಾಚೆಗೆ ಸು 2000 ಕಿಮೀ ವರೆಗೆ ದಿಗ್ರೇಟ್‍ರಷ್ಯನ್ ಬಯಲು ಪ್ರದೇಶವಿದ್ದು ಅದರ ಅಂಚಿಗೆ ಮಂಗೋಲಿಯ ಗಡಿಯಿದೆ. ಪೂರ್ವ ಸೈಬೀರಿಯ ಮತ್ತು ದೂರಪ್ರಾಚ್ಯ ಪ್ರದೇಶಗಳು ಅನೇಕ ಪರ್ವತಶ್ರೇಣಿಗಳಿಂದ ಕೂಡಿದ್ದು ಅವುಗಳಲ್ಲಿ ಪ್ರಮುಖವಾದವು ವರ್ಕಯನ್ಸ್ಕ್, ಚೆರ್‍ಸ್ಕೀ ಮತ್ತು ಅನಡಿರ್. ಇದರಾಚೆಗೆ ದ್ವೀಪಗಳು ಹಾಗೂ ಪರ್ಯಾಯದ್ವೀಪಸ್ತೋಮಗಳಿವೆ. ಕಮ್‍ಚಾಟ್ಕ ಪ್ರಸ್ಥಭೂಮಿ ಕ್ಯುರೀಲ್ ದ್ವೀಪಗಳ ಉತ್ತರದವರೆಗೆ ಸು. 1200 ಕಿಮೀ ವಿಸ್ತೀರ್ಣವಿದ್ದು ಇದರಲ್ಲಿ ನೂರಕ್ಕೂ ಹೆಚ್ಚು ಜೀವಂತ ಜ್ವಾಲಾಮುಖಿಗಳಿವೆ. ಇವುಗಳಲ್ಲಿ ಅತ್ಯಂತ ಎತ್ತರವಾದದ್ದು 4800 ಮೀ ಎತ್ತರದ ಕ್ಲೀವು ಚೆಫ್ ಸ್ಕಾಯ ಸಾಪ್ಕ. ದೂರಪ್ರಾಚ್ಯ ಪ್ರದೇಶದಲ್ಲಿ ದಕ್ಷಿಣ ಭಾಗದಲ್ಲಿರುವ ಆಮುರ್ ಮತ್ತು ಉಸುರೀ ನದಿಗಳ ಜಲಾನಯನ ಪ್ರದೇಶಗಳಲ್ಲಿ ಜನವಸತಿಯಿದೆ. ಏಷ್ಯನ್ ಹಾಗೂ ಯೂರೋಪಿನ್ ಭಾಗದರಷ್ಯದ ಉತ್ತರಭಾಗ ನೀರ್ಗಲ್ಲು ಪ್ರದೇಶವಾಗಿದ್ದು ಮಾನವ ವಸತಿಗೆ ಯೋಗ್ಯವಾಗಿಲ್ಲ.

3. ವಾಯುಗುಣ : ರಷ್ಯದ ವಿಶಾಲವಾದ ಭೂಪ್ರದೇಶಕ್ಕೆ ತಕ್ಕಂತೆ ಅಲ್ಲಿಯ ವಾಯುಗುಣ ವೈವಿಧ್ಯಮಯವಾಗಿದೆ. ದೇಶದ ಮಧ್ಯಭಾಗದಲ್ಲಿ ಮಧ್ಯ ಮತ್ತು ಪೂರ್ವ ಯುರೋಪಿನ ಮಾದರಿಯ ಹವಾಗುಣವಿದ್ದು ಬೇಸಗೆ ಮತ್ತು ಚಳಿಗಾಲದ ಉಷ್ಣತೆಗಳಲ್ಲಿ ತೀವ್ರ ವೈಪರೀತ್ಯಗಳಿವೆ. ಮಾಸ್ಕೋ ಪ್ರದೇಶದಲ್ಲಿ ಜುಲೈ ತಿಂಗಳ ಸರಾಸರಿ ಉಷ್ಣತೆ 190ಅ (660 ಈ) ಇದ್ದು ಜನವರಿ ತಿಂಗಳ ಸರಾಸರಿ ಉಷ್ಣತೆ-90 ಅ (15 ಈ). ಇಲ್ಲಿ ಸರಾಸರಿ ವಾರ್ಷಿಕ ಹಿಮಪಾತ 575 ಮಿಮೀ. ದಕ್ಷಿಣ ಭಾಗದಲ್ಲಿ ಹಾಗೂ ಕಪ್ಪುಸಮುದ್ರದ ಕರಾವಳಿಯಲ್ಲಿ ಸಮಶೀತೋಷ್ಣ ಹವೆಯಿದೆ.ರಷ್ಯದ ಉತ್ತರ ಭಾಗ ಹಾಗೂ ಸೈಬೀರಿಯದಲ್ಲಿ ಧ್ರುವಪ್ರದೇಶದ ಚಳಿಗಾಲವೂ ಅಲ್ಪಕಾಲದ ಬೇಸಗೆಯೂ ಇರುತ್ತದೆ. ಉತ್ತರ ಸೈಬೀರಿಯದಲ್ಲಿ ಜನವರಿಯ ಸರಾಸರಿ ಉಷ್ಣತೆ-46.80 ಅ (-52.20 ಈ). ದೂರಪ್ರಾಚ್ಯ ಪ್ರದೇಶಗಳಿಗೆ ಪೆಸಿಫಿಕ್ ತೀರದಲ್ಲಿನ ಪರ್ವತಶ್ರೇಣಿಗಳರಕ್ಷಣೆಯಿರುವುದರಿಂದ ಹವೆಯ ಏರಿಳಿತದ ಪ್ರಮಾಣ ಕಡಿಮೆಯಿರುತ್ತದೆ. ದೇಶದಲ್ಲಿ ಬೇಸಗೆಯಲ್ಲೇ ಹೆಚ್ಚಾಗಿ ಮಳೆ ಬೀಳುವುದುಂಟು. ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 458 ಮಿಮೀ.

4. ನದಿ, ಸರೋವರಗಳು : ಸೈಬೀರಿಯದ ಲೀನ ರಷ್ಯದ ಬಹುದೊಡ್ಡ ನದಿ, ಇದುರಷ್ಯದ ಒಳನಾಡಿನಲ್ಲಿ 4270 ಕಿಮೀ ದೂರ ಹರಿಯುತ್ತದೆ. ಈ ನದಿ ಬೈಕಲ್ ಸರೋವರದ ಪಶ್ಚಿಮದಲ್ಲಿ ಬೈಕಲ್ ಪರ್ವತಶ್ರೇಣಿಯ ಪಶ್ಚಿಮ ಇಳಿಜಾರಿನಲ್ಲಿ ಹುಟ್ಟಿ ಈಶಾನ್ಯಾಭಿಮುಖವಾಗಿ ಹರಿಯುತ್ತ ಸುಮಾರು ಒಂದು ಸಾವಿರ ಸಣ್ಣಪುಟ್ಟ ನದಿ ತೊರೆಗಳನ್ನು ಕೂಡಿಸಿಕೊಂಡು ಲ್ಯಾಪ್‍ಟಿವ್ ಸಮುದ್ರ ಸೇರುವುದು. ರಷ್ಯದ ಮತ್ತೊಂದು ದೊಡ್ಡ ನದಿ ವೋಲ್ಗಾ. ಯುರೋಪಿನ ಎಲ್ಲ ನದಿಗಳಿಗಿಂತಲೂ ದೊಡ್ಡದಾದ ಇದು ವಾಲ್ಡೈ ಬೆಟ್ಟಗಳಲ್ಲಿ ಸೆಲ್‍ಐಗರ್ ಸರೋವರದ ಪಶ್ಚಿಮದಲ್ಲಿ ಹುಟ್ಟಿ ಪೂರ್ವ ಮತ್ತು ಆಗ್ನೇಯದ ದಿಕ್ಕುಗಳಲ್ಲಿ ಸು. 3690 ಕಿಮೀ ದೂರ ಹರಿದು ಕ್ಯಾಸ್ಪಿಯನ್ ಸಮುದ್ರ ಸೇರುವುದು. ವರ್ಷದ ಮೂರು ತಿಂಗಳು ಚಳಿಗಾಲದಲ್ಲಿ ಈ ನದಿ ಹೆಪ್ಪುಗಟ್ಟಿರುತ್ತದೆ. ಅನೇಕ ನದಿತೊರೆಗಳು ಇದನ್ನು ಸೇರುವುವು. ಕೆಲವು ಕಡೆ ನದಿಯ ಅಗಲ 120 ಕಿಮೀ ವರೆಗೂ ಇದೆ. ದೋಣಿ ಸಂಚಾರಕ್ಕೆ, ವ್ಯವಸಾಯಕ್ಕೆ, ವಿದ್ಯುತ್ ಉತ್ಪಾದನೆಗೆ ಈ ನದಿಯನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ನೀಪರ್ ನದಿ ವಾಲ್ಡೈ ಬೆಟ್ಟಗಳ ಸೊಮಲಿನ್‍ಸ್ಕ್‍ನಲ್ಲಿ ಹುಟ್ಟಿ 2272 ಕಿಮೀ ದೂರ ಹರಿದು ರಷ್ಯದ ಎರಡನೆಯ ದೊಡ್ಡ ನದಿಯೆನಿಸಿದೆ. ಈ ನದಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲಾಗಿದೆ. ಈ ನದಿಯ ಇಕ್ಕೆಲಗಳಲ್ಲಿ ಅನೇಕ ಪಟ್ಟಣಗಳಿರುವುದರಿಂದ ದೋಣಿ ಸಂಚಾರದ ಸೌಲಭ್ಯವಿದೆ. ಅನೇಕ ಉಪನದಿಗಳನ್ನು ನೀಪರ್‍ನದಿ ಕೂಡಿಕೊಂಡು ಕೆರೆಸನ್ ಪಟ್ಟಣದ ಬಳಿ ಕಪ್ಪು ಸಮುದ್ರವನ್ನು ಸೇರುವುದು.

ಡಾನ್ ನದಿಯನ್ನು ಡೂನ್ ಎಂದೂ ಕರೆಯುವುದುಂಟು. ಈ ನದಿ ಟೂಲ ಪಟ್ಟಣದ ಆಗ್ನೇಯದಲ್ಲಿ ಹುಟ್ಟಿ 1958 ಕಿಮೀ ದೂರ ಹರಿದು ಅeóÁಫ್ ಸಮುದ್ರವನ್ನು ಸೇರುವುದು. ಸಾಲ್ಮನ್ ಮತ್ತು ಹೆರಿಂಗ್ ಮೀನುಗಳು ಹೇರಳವಾಗಿ ಈ ನದಿಯಲ್ಲಿ ಇವೆ. ನದಿಯ ಉದ್ದಕ್ಕೂ ಅನೇಕ ಮೀನುಗಾರರ ಗ್ರಾಮಗಳಿವೆ. ನದಿಯ ಮೇಲೆ ದೋಣಿಸಂಚಾರವೂ ಇದೆ. ನಿಮನ್ ನದಿ ಇಂದಿನ ಬೆಲರಸ್‍ನ ರಾಜಧಾನಿ ಮಿನ್ಸ್ಕ್‍ನ ದಕ್ಷಿಣದಲ್ಲಿ ಹುಟ್ಟಿ 931 ಕಿಮೀ ಹರಿದು ಕುರ್‍ಸ್ಕೀಜಾಲಿಫ್ ನದಿಯನ್ನು ಸೇರುವುದು. ಇದರ ಉದ್ದಕ್ಕೂ ದೋಣಿಸಂಚಾರವಿದೆ. ವಾಲ್ಡೈ ಬೆಟ್ಟಗಳ ಬಳಿ ವೋಲ್ಗಾ ಮತ್ತು ನೀಪರ್ ನದಿಗಳ ಮೂಲದ ಬಳಿಯೇ ಹುಟ್ಟುವ ಉತ್ತರ ಮತ್ತು ಪಶ್ಚಿಮದ ವೀನ ನದಿಗಳಲ್ಲಿ ಸಹ ದೋಣಿ ಸಂಚಾರಕ್ಕೆ ಅನುಕೂಲವಿದೆ. ಉತ್ತರದ ವೀನ ನದಿ 745 ಕಿಮೀ ದೂರ ಹರಿದರೆ ಪಶ್ಚಿಮದ ವೀನ ನದಿ 1014 ಕಿಮೀ ದೂರ ಹರಿದು ಲಾಟ್ವಿಯದ ರಾಜಧಾನಿಯಾದ ರೀಗ ನಗರದ ಬಳಿಯ ರೀಗ ಕೊಲ್ಲಿಯನ್ನು ಸೇರುವುದು. ಆಲ್ಟೈ ಪರ್ವತಶ್ರೇಣಿಯಲ್ಲಿ ಉತ್ತರ ಸಿಂಕಿಯಾಂಗ್ ಐಗರ್‍ನಲ್ಲಿ ಹುಟ್ಟುವ ಐರ್‍ಟಿಷ್ ನದಿ 4316 ಕಿಮೀ ದೂರ ಹರಿದು ಮುಂದೆ ಆಲ್ಟೈ ಪರ್ವತಶ್ರೇಣಿಯಲ್ಲಿ ಹುಟ್ಟುವ ಆಬ್ ನದಿಯನ್ನು ಕೂಡಿಕೊಳ್ಳುತ್ತದೆ. ಆಬ್ ನದಿ 3659 ಕಿಮೀ ದೂರ ಹರಿದು ಆಬ್‍ಖಾರಿಯನ್ನು ಸೇರುವುದು. ಈ ನದಿಯನ್ನು ಜಲವಿದ್ಯುತ್ ಉತ್ಪಾದನೆಗೆ ಮಾತ್ರವಲ್ಲದೆ ಸೈಬೀರಿಯದ ಒಂದು ಮುಖ್ಯ ಸಾಗಾಣಿಕೆಯ ಮಾರ್ಗವಾಗಿಯೂ ಬಳಸಿಕೊಳ್ಳಲಾಗಿದೆ. ಆಲ್ಡನ್ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಆಲ್ಡನ್ ನದಿ 2228 ಕಿಮೀ ದೂರ ಹರಿದು ಲೀನ ನದಿಯನ್ನು ಬಟಮೆ ಬಳಿ ಸೇರಿಕೊಳ್ಳುವುದು. ಕಬಾರಪ್‍ಸ್ಕ್‍ಕ್ರೀನ ಕಲೀಮ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಕಲೀಮ ನದಿ 1776 ಕಿಮೀ ದೂರ ಹರಿದು ಆರ್ಕ್‍ಟಿಕ್ ಸಾಗರವನ್ನು ಸೇರುವುದು. ಈ ನದಿಯ ಪಾತ್ರದುದ್ದಕ್ಕೂ ಚಿನ್ನಕ್ಕಾಗಿ ಭೂ ಅಗೆತ ಮಾಡಲಾಗಿದೆ. ಈ ನದಿಯಲ್ಲಿ ದೋಣಿ ಸಂಚಾರವಿದೆ. ರಷ್ಯದಲ್ಲಿ ಅನೇಕ ಸಣ್ಣಪುಟ್ಟ ನದಿಗಳಿದ್ದು ಇವು ಚಳಿಗಾಲದಲ್ಲಿ ಹೆಪ್ಪುಗಟ್ಟಿದರೂ ಸ್ಥಳೀಯ ಪ್ರಾಮುಖ್ಯ ಪಡೆದು ದೊಡ್ಡ ನದಿಗಳಿಗೆ ಜಲಸಂಪನ್ಮೂಲದ ಆಕರಗಳಾಗಿವೆ. ರಷ್ಯದ ಸರೋವರಗಳಲ್ಲಿ ಉಪ್ಪು ಸರೋವರವೆನಿಸಿದ ಕ್ಯಾಸ್ಪಿಯನ್ ಸಮುದ್ರವು ಸಮುದ್ರಮಟ್ಟಕ್ಕಿಂತ 28 ಮೀಟರ್‍ಗಳಷ್ಟು ಕೆಳಗಿದ್ದು 3,72.000 ಚ.ಕಿಮೀ ವಿಸ್ತಾರವಾಗಿದೆ. ಲ್ಯಾಡಗ ಸರೋವರ 17703 ಚ.ಕಿಮೀ ವಿಸ್ತಾರವಾಗಿದ್ದು ಯುರೋಪಿನಲ್ಲೇ ಅತ್ಯಂತ ದೊಡ್ಡ ಸರೋವರವೆನಿಸಿದೆ. ಸೈಬೀರಿಯದ ಬೈಕಲ್ ಸರೋವರ ಪ್ರಪಂಚದಲ್ಲೇ ಹೆಚ್ಚು ಆಳವಾದ ಸಿಹಿನೀರಿನ ಸರೋವರ. ಇದು 1741 ಮೀಟರ್ ಆಳವನ್ನು ಹೊಂದಿದೆ. ಅರಾಲ್ ಸಮುದ್ರ. ಬಾಲ್ಕನ್ ಸರೋವರಗಳಲ್ಲದೆ ಕೆಲವೊಂದು ಸಣ್ಣಪುಟ್ಟ ಸರೋವರಗಳೂ ರಷ್ಯದಲ್ಲಿವೆ.

5. ಸಸ್ಯ ಮತ್ತು ಪ್ರಾಣಿವರ್ಗ : ರಷ್ಯ ತನ್ನ ಒಟ್ಟು ವಿಸ್ತೀರ್ಣದಲ್ಲಿ ಮೂರನೆಯ ಒಂದು ಭಾಗದಷ್ಟು ಅರಣ್ಯ ಪ್ರದೇಶ ಹೊಂದಿದೆ. ಮರದ ದಿಮ್ಮಿಗಳ ಉತ್ಪಾದನೆಯಲ್ಲಿ ಐದನೆಯ ಸ್ಥಾನದಲ್ಲಿದೆ. ರಷ್ಯದ ಉತ್ತರದಲ್ಲಿ ಫಿನ್‍ಲೆಂಡಿನಿಂದ ಹಿಡಿದು ಪೆಸಿಫಿಕ್ ಸಾಗರದವರೆಗೆ (8000 ಕಿಮೀ) ಶಂಕುಪರ್ಣ ಮರದ ಕಾಡುಗಳಿವೆ. ಈ ಕಾಡಿನಲ್ಲಿ ಫರ್, ಲಾರ್ಜ್ ಮತ್ತು ಪೈನ್ ಮರಗಳು ಹೆಚ್ಚಿವೆ. ಕಾಡು ಹಾಗೂ ಕಾಡಿಲ್ಲದ ಸ್ಟೆಪ್ಪಿ ಹುಲ್ಲುಗಾವಲುಗಳೆರಡರ ಮಧ್ಯೆ ಮಿಶ್ರಕಾಡಿದ್ದು ಇದರಲ್ಲಿ ಬೀಚ್, ಎಲ್ಮ, ಲಿಂಡ್ರೆನ್ ಎಂಬ ಒಂದು ಜಾತಿಯ ನಿಂಬೆಮರ. ಮೆಫಲ್ ಮತ್ತು ಓಕ್ ಮರಗಳು ಹೆಚ್ಚಾಗಿ ಕಂಡುಬರುತ್ತವೆ. ರಷ್ಯದ ತಂಡ್ರಾ ಪ್ರದೇಶದಲ್ಲಿ ಲಿಜಿನ್ಸ್ ಎನ್ನುವ ಶಿಲಾವಲ್ಕ ಜಾತಿಯ ಸಸ್ಯಗಳೂ ಕುರುಚಲು ಗಿಡಗಳೂ ಕಂಡುಬರುತ್ತವೆ. ಜೊತೆಗೆ ಬರ್ಜ್ ಜಾತಿಯ ಕಾಡುಮರಗಳೂ ಮೆದು ತೊಗಟೆಯ ವಿಲ್ಲೊ ಜಾತಿಯ ಮರಗಳೂ ಬೆಳೆಯುತ್ತವೆ. ಉತ್ತರದ ಅರಣ್ಯ ಪ್ರದೇಶದಲ್ಲಿ ಹೆಚ್ಚು ತೇವದಿಂದ ಕೂಡಿದ ಜೌಗುಪ್ರದೇಶವಿದ್ದು ಅಲ್ಲಿ ಸಸ್ಯಂಗಾರ ಹೆಚ್ಚಾಗಿ ಇರುವುದು. ಮಿಶ್ರ ಅರಣ್ಯ ಪ್ರದೇಶಗಳಲ್ಲಿ ಹುಲ್ಲುಗಾವಲುಗಳಿವೆ. ಒಂದು ಕಾಲದಲ್ಲಿ ಹೆಚ್ಚಾಗಿ ದಟ್ಟಹುಲ್ಲುಗಾವಲಾಗಿದ್ದ ಪ್ರದೇಶವೆಲ್ಲ ಈಗ ಕೃಷಿಭೂಮಿಯಾಗಿದೆ.

ರಷ್ಯದ ಪ್ರಾಣಿವರ್ಗಗಳಲ್ಲಿ ಹಿಮಸಾರಂಗ, ಆರ್ಕ್‍ಟಿಕ್ ನರಿ, ಮುಂಗುಸಿಯಂತಿರುವ ಆರ್ಮಿನ್, ಮೊಲ ಮತ್ತು ಲೆಮಿಂಗ್ ಇವನ್ನುರಷ್ಯದ ತಂಡ್ರಾ ಪ್ರದೇಶದಲ್ಲಿ ಕಾಣಬಹುದು. ಆರ್ಕ್‍ಟಿಕ್ ಸಾಗರ ತೀರದಲ್ಲಿ ದೊಡ್ಡ ನೀರು ಹಕ್ಕಿಗಳ ಗುಂಪುಗಳು ಬೇಸಗೆಯನ್ನು ಕಳೆಯುವುವು. ಕಾಡುಗಳಲ್ಲಿ ದೊಡ್ಡ ಪ್ರಾಣಿಗಳ ಸಂಚಾರವಿದೆ-ಇವುಗಳಲ್ಲಿ ಕಂದುಬಣ್ಣದ ಕರಡಿ, ಜಿಂಕೆ, ಸಾರಂಗ, ಬೆಕ್ಕಿನ ಜಾತಿಯ ಲಿಂಕ್ಸ್ ಮತ್ತು ಹಿಮಸಾರಂಗಗಳು ಸೇರಿವೆ. ಸ್ಟಿಪ್ಪಿ ಪ್ರದೇಶದಲ್ಲಿ ಬೀವರ್, ಮೊಲ, ಅಳಿಲು ಮುಂತಾದವುಗಳಿವೆ. ಪೂರ್ವ ಹುಲ್ಲುಗಾವಲಿನ ಪ್ರದೇಶದಲ್ಲಿ ಚಿಗರೆಗಳಿವೆ. ರಷ್ಯದ ಮಧ್ಯ ಭಾಗದ ಬೆಟ್ಟ ಗುಡ್ಡಪ್ರದೇಶದಲ್ಲಿ ಹಾಗೂ ಮರಳುಗಾಡಿನಲ್ಲಿ (ಸೋವಿಯತ್ ಮಧ್ಯ ಏಷ್ಯ ಪ್ರದೇಶದಲ್ಲಿ) ಕರಡಿ, ಜಿಂಕೆ, ಕತ್ತೆಕಿರುಬ, ಚಿಗರೆ, ಚಿರತೆ, ಹುಲಿ ಇವೆ. ವಿವಿಧ ಬಗೆಯ ಮೀನುಗಳು ರಷ್ಯದ ಸರೋವರ, ನದಿಗಳಲ್ಲಿ ಸಾಕಷ್ಟಿವೆ.

II. ಜನಜೀವನ

1989ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಶೇ 82.6 ಭಾಗ ರಷ್ಯನ್ನರು ಇಲ್ಲಿದ್ದಾರೆ. ಇಲ್ಲಿರುವ ಇತರ ಪ್ರಮುಖ ಬುಡಕಟ್ಟುಗಳೆಂದರೆ ಟಾರ್ಟರರು (ಶೇ. 3.6) ಉಕ್ರೇನಿಯನ್ನರು (ಶೇ. 2.7) ಮತ್ತು ಚುವಾಷ್ (ಶೇ 1.2). ಇಲ್ಲಿರುವ ಇತರ ಬುಡಕಟ್ಟುಗಳೆಂದರೆ ಬೆಲರಷಿಯನ್ನರು, ಬಷ್ಕೀರರು, ಯಹೂದಿಗಳು, ಮಾರ್ದೋವಿಯನ್ನರು, ಮರಿಯನ್ನರು, ಚೆಚನ್ಯರು, ಕಜಕರು, ಹಾಗೂ ಉಜ್ಬೀಕರು. ಇಲ್ಲಿ ಕ್ರೈಸ್ತಧರ್ಮವೇ ಪ್ರಮುಖವಾದದ್ದು.ರಷ್ಯನ್ ಸಾಂಪ್ರದಾಯಿಕ ಚರ್ಚು ಇಲ್ಲಿನ ಅತ್ಯಂತ ದೊಡ್ಡ ಧಾರ್ಮಿಕ ಪಂಗಡ. ವೋಲ್ಗಾ ಟಾರ್ಟರರು, ಚುವಾಷ್ ಬಷ್ಕೀರ್ ಹಾಗೂ ಉತ್ತರ ಕಾಕಸಸ್ ಮತ್ತು ದಾಗಸ್ತಾನ್ ಜನರು ಇಸ್ಲಾಂ ಧರ್ಮಕ್ಕೆ ಸೇರಿದವರು. ಇವರಲ್ಲಿ ಬಹುಪಾಲು ಸುನ್ನಿಗಳು, ಬುರ್ಯತರು, ಟ್ಯೊಮೆನರು ಮತ್ತು ಕಾಲ್ಮೈಕರು ಇವರೆಲ್ಲ ಭೌದ್ಧಮತಾವಲಂಬಿಗಳು. 1917ರ ಮುಂಚೆ ಇದ್ದ ಯಹೂದಿಗಳ ದೊಡ್ಡ ಪಂಗಡ ಯುದ್ಧ ಹಾಗೂ ವಲಸೆಗಳಿಂದ ಕಡಿಮೆಯಾಗಿದೆ.

ರಷ್ಯನ್ ಒಕ್ಕೂಟದ ಅಧಿಕೃತ ಭಾಷೆರಷ್ಯನ್. ಇದರೊಡನೆ ಇತರ ಅನೇಕ ಸ್ಥಳೀಯ ಭಾಷೆಗಳು ಬಳಕೆಯಲ್ಲಿವೆ. ಒಕ್ಕೂಟದ ಬಹುಭಾಗ ಜನರು ಯುರೋಪಿಯನ್‍ರಷ್ಯದಲ್ಲಿ ವಾಸವಾಗಿದ್ದಾರೆ. ಸೈಬೀರಿಯ ಹಾಗೂ ದೂರಪ್ರಾಚ್ಯದಲ್ಲಿನ ಜನಸಂಖ್ಯೆ ಕೇವಲ 32 ಲಕ್ಷ. ಒಟ್ಟು ಜನಸಂಖ್ಯೆಯ ಶೇ 74 ಭಾಗ ನಗರವಾಸಿಗಳು.

1990ರ ಜನಗಣತಿಯಂತೆರಷ್ಯದ ಕೆಲವು ಮುಖ್ಯ ನಗರಗಳ ಜನಸಂಖ್ಯೆ ಈ ರೀತಿಯಿದೆ: ರಾಜಧಾನಿ ಮಾಸ್ಕೋವಿನ ಜನಸಂಖ್ಯೆ 8,801,000. ಎರಡನೆಯ ಅತಿ ದೊಡ್ಡ ನಗರ ಸೇಂಟ್ ಪೀಟರ್ಸ್‍ಬರ್ಗ್ 4,468,000. ನಿಜ್ನಿ ನಾವ್‍ಗರಾದ್ (ಇದರ ಹಿಂದಿನ ಹೆಸರು ಗಾರ್ಕಿ) ಜನಸಂಖ್ಯೆ 1,443,000. ಸೈಬೀರಿಯದಲ್ಲಿನ ನೋವೊಸಬಿಸ್ಕ್ 1,434,000 ಹಾಗೂ ಓಮ್ಸ್ಕ್ 1,159,000. ಯೂರಲ್‍ನಲ್ಲಿನ ಕೈಗಾರಿಕಾ ನಗರಗಳಾದ ಯಕ್‍ಟರಿನ್‍ಬರ್ಗ್ 1,367,000 ಹಾಗೂ ಚಲ್ಯಾ ಬನ್ಸ್ಕ್ 1,148,000 ದೂರಪ್ರಾಚ್ಯದಲ್ಲಿನ ಕಬಾರ್‍ಫಲ್ಸ್ಕ್ 608,000 ಮತ್ತು ವ್ಲಡಿವೊಸ್ಟಾಕ್ 643,000.

1. ಕೃಷಿ :ರಷ್ಯ ಇತರೆಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚಾದ ಕೃಷಿಭೂಮಿ ಹೊಂದಿರುವ ದೇಶ.ರಷ್ಯದ ಕಾಲುಭಾಗಕ್ಕಿಂತಲೂ ಹೆಚ್ಚಾಗಿ 5.8 ಮಿಲಿಯನ್ ಚ. ಕಿಮೀ ಕೃಷಿಭೂಮಿ ಹೊಂದಿದ್ದು ಪ್ರಪಂಚದಲ್ಲಿ ಹೆಚ್ಚಾಗಿ ಆಹಾರ ಬೆಳೆಯುವ ದೇಶವಾಗಿದೆ. ಬಾರ್ಲಿ, ರೈ, ಗೋದಿ ಮುಖ್ಯ ಬೆಳೆಗಳು. ಉಕ್ರೇನ್, ಸೈಬೀರಿಯದ ನೈರುತ್ಯ ಭಾಗ ಮತ್ತು ಕಜಕಸ್ಥಾನದ ಉತ್ತರ ಭಾಗ ಗೋದಿ ಬೆಳೆಗೆ ಪ್ರಸಿದ್ಧವಾದವು. ಅಗಸೆ, ಆಲೂಗೆಡ್ಡೆ, ಬೀಟ್‍ರೂಟ್ ಮುಂತಾದವುಗಳನ್ನೂ ಬೆಳೆಯುತ್ತಾರೆ. ಮಧ್ಯ ಏಷ್ಯಕ್ಕೆ ಸೇರಿದ ರಷ್ಯದ ನೀರಾವರಿ ಪ್ರದೇಶಗಳಲ್ಲಿ ಹತ್ತಿಯನ್ನು ಬೆಳೆಯುತ್ತಾರೆ. ಕಪ್ಪು ಸಮುದ್ರದ ತೀರದಲ್ಲಿ ಟೀ ಬೆಳೆಯಲಾಗುತ್ತದೆ. ಟೀರಷ್ಯದ ರಾಷ್ಟ್ರೀಯ ಪಾನೀಯವಾಗಿದೆ. ವಿವಿಧ ಹಣ್ಣುಗಳನ್ನೂ ತರಕಾರಿಗಳನ್ನೂ ಓಟ್ಸ್, ಹೊಗೆಸೊಪ್ಪು ಇತ್ಯಾದಿಗಳನ್ನೂ ಬೆಳೆಯುವರು. ಮಾಂಸಕ್ಕಾಗಿ ಪಶು ಹಾಗೂ ಹಂದಿ ಸಾಕಣೆಯುಂಟು. ಹುಲ್ಲುಗಾವಲುಗಳಲ್ಲಿ ಕುರಿಸಾಕಣೆ ಹೆಚ್ಚು. ಉಣ್ಣೆ ತಯಾರಿಕೆ ಒಂದು ಮುಖ್ಯ ಕಸಬಾಗಿದೆ. ಬೀರೆಂಟ್ಸ್ ಸಮುದ್ರ ಮತ್ತು ವೈಟ್ ಸಮುದ್ರದಲ್ಲಿ ಕಾಡ್, ಹ್ಯಾಡಾಕ್, ಹೆರಿಂಗ್, ಸಾಲ್ಮನ್ ಮುಂತಾದ ಮೀನುಗಳನ್ನು ಹಿಡಿಯಲಾಗುತ್ತದೆ. ಕ್ಯಾಸ್ಪಿಯನ್ ಸಮುದ್ರದಲ್ಲಿ ವೇಲ್ ಮೀನನ್ನು ಹೋಲುವ ಸ್ಟರ್ಜಿನ್ ಮೀನುಗಳನ್ನು ಬೇಟೆ ಆಡುವರು. ಅಟ್ಲಾಂಟಿಕ್ ಪೆಸಿಫಿಕ್ ಸಾಗರಗಳಲ್ಲೂ ಬಾಲ್ಟಿಕ್ ಮತ್ತು ಕಪ್ಪು ಸಮುದ್ರಗಳಲ್ಲೂ ಮೀನು ಹಿಡಿಯುತ್ತಾರೆ. ಇಲ್ಲಿ ಮತ್ಸ್ಯೋದ್ಯಮ ಒಂದು ಮುಖ್ಯ ಜೀವನಾಧಾರ ಕಸಬಾಗಿದೆ.

2. ಆಡಳಿತ : ರಷ್ಯನ್ ಒಕ್ಕೂಟದಲ್ಲಿ ಜಾರಿಯಲ್ಲಿರುವ ರಾಜಾಂ್ಯಗ 12 ಡಿಸೆಂಬರ್ 1993ರಂದು ಜಾರಿಗೆ ಬಂದಿದ್ದು ಪ್ರಜಾಸತ್ತಾತ್ಮಕ ಗಣತಂತ್ರ ಮಾದರಿಯ ಸರ್ಕಾರವನ್ನು ಹೊಂದಿದೆ. ಇದು ಧರ್ಮನಿರಪೇಕ್ಷ ರಾಜ್ಯವಾಗಿದ್ದು ಎಲ್ಲ ಧರ್ಮಗಳಿಗೂ ಸಮಾನ ಅವಕಾಶವಿದೆ.ರಷ್ಯನ್ ಇಲ್ಲಿನ ಆಡಳಿತ ಭಾಷೆಯಾಗಿದ್ದರೂ ಎಲ್ಲ ರಾಜ್ಯಗಳಿಗೂ ತಮ್ಮ ಸ್ಥಳೀಯ ಭಾಷೆಗಳನ್ನು ಬಳಸಲು ಅವಕಾಶವಿದೆ. ರಾಷ್ಟ್ರಧ್ವಜದಲ್ಲಿ ಬಿಳಿ, ನೀಲಿ ಮತ್ತು ಕೆಂಪು ಬಣ್ಣದ ಮೂರು ಸಮಾಂತರ ಪಟ್ಟಿಗಳಿವೆ.

ಒಕ್ಕೂಟದ ಅಧ್ಯಕ್ಷರು ನಾಲ್ಕು ವರ್ಷದ ಅವಧಿಗೆ ನೇರವಾಗಿ ಆಯ್ಕೆಯಾಗುತ್ತಾರೆ. ಎರಡು ಅವಧಿಗಿಂತ ಹೆಚ್ಚು ಬಾರಿ ಚುನಾಯಿತರಾಗುವಂತಿಲ್ಲ. ಫೆಡರಲ್ ಅಸೆಂಬ್ಲಿಯಲ್ಲಿ ಎರಡು ಸದನಗಳಿವೆ. ಫೆಡರೇಷನ್ ಕೌನ್ಸಿಲ್ ಮತ್ತು ಸ್ಟೇಟ್ ಡೂಮಾ, ಮೇಲ್ಮನೆಯಾದ ಫೆಡರೇಷನ್ ಕೌನ್ಸಿಲ್‍ನಲ್ಲಿ ಒಟ್ಟು 178 ಡೆಪ್ಯುಟಿಗಳಿದ್ದು 89 ಸದಸ್ಯ ರಾಜ್ಯಗಳನ್ನು ತಲಾ ಇಬ್ಬರು ಪ್ರತಿನಿಧಿಸುತ್ತಾರೆ. ಕೆಳಮನೆಯಾದ ಸ್ಟೇಟ್ ಡೂಮಾದಲ್ಲಿ ಒಟ್ಟು 450 ಡೆಪ್ಯುಟಿಗಳಿದ್ದು ನಾಲ್ಕು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ. ಫೆಡರೇಷನ್ ಅಧ್ಯಕ್ಷರಿಗೆ ಸರ್ಕಾರದ ಚೇರ್‍ಮನ್, ಡೆಪ್ಯುಟಿ ಚೇರ್‍ಮನ್‍ಗಳನ್ನು ನೇಮಿಸುವ ಮತ್ತು ಸ್ಟೇಟ್ ಡೂಮಾವನ್ನು ವಿಸರ್ಜಿಸುವ ಹಾಗೂ ಹೊಸ ಚುನಾವಣೆಗಳನ್ನು ಘೋಷಿಸುವ ಅಧಿಕಾರವಿದೆ.

ಫೆಡರೇಷನ್ನಿನ 89 ಸದಸ್ಯ ರಾಜ್ಯಗಳಲ್ಲಿ ಸ್ಥಳೀಯ ಆಡಳಿತವಿದೆ. ಇದರಲ್ಲಿ ಸ್ವಯಮಾಡಳಿತ ಗಣರಾಜ್ಯಗಳು, ಪ್ರದೇಶಗಳು, ಪ್ರಾಂತ್ಯಗಳು, ಜಿಲ್ಲೆಗಳು, ನಗರಗಳು, ಮುನಿಸಿಪಲ್ ಹಾಗೂ ಗ್ರಾಮೀಣ ಪ್ರದೇಶಗಳಿವೆ. ಫೆಡರೇಷನ್ನಿನಲ್ಲಿ ಅನೇಕ ರಾಜಕೀಯ ಪಕ್ಷಗಳಿವೆ. ಇದರಲ್ಲಿ ಪ್ರಮುಖವಾದದ್ದು ಅಗ್ರೇರಿಯನ್ ಪಕ್ಷ ಸಿವಿಕ್ ಯೂನಿಯನ್, ಆಲ್‍ರಷ್ಯನ್ ಯೂನಿಯನ್ ಫಾರ್ ರಿನ್ಯೂಯಲ್, ಡೆಮಾಕ್ರಾಟಿಕ್ ಪಾರ್ಟಿ ಆಫ್‍ರಷ್ಯ, ಕಮ್ಯೂನಿಸ್ಟ್ ಪಾರ್ಟಿ ಆಫ್‍ರಷ್ಯನ್ ಫೆಡರೇಷನ್, ಲಿಬರಲ್ ಡೆಮಾಕ್ರಾಟಿಕ್ ಪಕ್ಷ ಇತ್ಯಾದಿ.

3. ಸಾರಿಗೆ : 1993ರಲ್ಲಿ ಇಲ್ಲಿ 87.079 ಕಿಮೀ ಉದ್ದದ ರೈಲು ಮಾರ್ಗವಿದ್ದು ಅದರಲ್ಲಿ 37.365 ಕಿಮೀ ವಿದ್ಯುದೀಕರಣವಾಗಿತ್ತು. 10,000 ಕಿಮೀ ಉದ್ದವಿರುವ ಟ್ರಾನ್ಸ್ ಸೈಬೀರಿಯನ್ ರೈಲ್ವೆ ಯುರೋಪಿಯನ್‍ರಷ್ಯವನ್ನು ಸೈಬೀರಿಯ ಹಾಗೂ ದೂರಪ್ರಾಚ್ಯ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ (ಮಾಸ್ಕೋ-ವ್ಲಡಿವೊಸ್ಟಾಕ್). ಇಲ್ಲಿನ ಒಟ್ಟುರಸ್ತೆಗಳ ಉದ್ದ 8,79,100 ಕಿಮೀ, ಇದರ ಬಹುಭಾಗ ಯುರೋಪಿಯನ್ ರಷ್ಯದಲ್ಲಿದೆ. ಸೈಬೀರಿಯ ಹಾಗೂ ದೂರಪ್ರಾಚ್ಯಗಳಲ್ಲಿ ರಸ್ತೆಗಳು ಕಡಿಮೆಯಿದ್ದು ಅವು ಸಹ ಚಳಿಗಾಲದಲ್ಲಿ ಉಪಯೋಗಕ್ಕೆ ಬರುವುದಿಲ್ಲ.

ಇಲ್ಲಿನ ಕೆಲವು ಪ್ರಮುಖ ಬಂದರುಗಳೆಂದರೆ-ಪೂರ್ವದಲ್ಲಿ ವ್ಲಡಿವೊಸ್ಟಾಕ್, ನಕಾಟ್ಕ, ಮಾಗ್‍ದಾನ್ ಮತ್ತು ಪೆಟ್ರಪಾನ್‍ಲಾಫ್ಸ್ಕ್, ಪಶ್ಚಿಮದಲ್ಲಿ ಸೇಂಟ್ ಪೀಟರ್ಸ್‍ಬರ್ಗ್ ಮತ್ತು ಕಲೀನನ್‍ಗ್ರಾಡ್ ಬಂದರುಗಳು ಬಾಲ್ಟಿಕ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತವೆ. ಮುರ್‍ಮಾನ್ಸ್ಕ್ ಅಟ್ಲಾಂಟಿಕ್ ಸಾಗರಕ್ಕೂ ನಾವ್‍ರಸೀಸ್ಕ ಮತ್ತು ಸೋಜೀ ಬಂದರುಗಳು ಕಪ್ಪುಸಮುದ್ರಕ್ಕೂ ಸಂಪರ್ಕ ಕಲ್ಪಿಸುತ್ತವೆ. 1991ರ ಏರ್‍ರೂಸಿಯ ಎಂಬರಷ್ಯನ್ ಖಂಡಾಂತರ ವಿಮಾನ ಸಾರಿಗೆಯನ್ನು ಬ್ರಿಟಿಷ್ ಏರ್‍ವೇಸ್ ಮತ್ತುರಷ್ಯನ್ ಸರ್ಕಾರಗಳ ಜಂಟಿ ಒಡೆತನದಲ್ಲೂ 1992ರಲ್ಲಿ ಸರ್ಕಾರಿ ಒಡೆತನದಲ್ಲಿ 30 ಸ್ವತಂತ್ರ ವಿಮಾನ ಸಾರಿಗೆ ಸಂಸ್ಥೆಗಳನ್ನೂ ಸ್ಥಾಪಿಸಲಾಯಿತು. 1992ರಲ್ಲಿ ಪೆಟ್ರೋಲ್ ದರದ ತೀವ್ರ ಹೆಚ್ಚಳದಿಂದ ವಿಮಾನ ಪ್ರಯಾಣಿಕರ ಸಂಖ್ಯೆ ಮೂರನೆಯ ಒಂದರಷ್ಟು ಕಡಿಮೆಯಾಗಿತ್ತು.

4. ಪರಿಸರ : ರಷ್ಯದಲ್ಲಿ ಪರಿಸರ ಮಾಲಿನ್ಯ ಒಂದು ಗಂಭೀರ ಸಮಸ್ಯೆಯಾಗಿದೆ. ಕಜಕಸ್ತಾನದ ಸೆಮಿಪಾಲಾಟಿನ್‍ಸ್ಕ್‍ನಲ್ಲಿ ದೀರ್ಘಕಾಲ ನಡೆಸಿದ ಅಣುಶಕ್ತಿ ಪ್ರಯೋಗಗಳಿಂದ ಸುತ್ತಲಿನ ಪ್ರದೇಶಗಳಿಗೆ ತೀವ್ರ ಹಾನಿಯಾಗಿದೆ. 1986ರಲ್ಲಿ ಉಕ್ರೇನಿನ ಚೆರ್ನೋಬಿಲ್ ಪರಮಾಣೂಶಕ್ತಿ ಸ್ಥಾವರದಲ್ಲಿ ನಡೆದ ಆಕಸ್ಮಿಕದಿಂದಾಗಿ ವ್ಯಾಪಕ ಪ್ರದೇಶ ಪರಮಾಣು ವಿಕಿರಣದ ದುಷ್ಪರಿಣಾಮಕ್ಕೆ ತುತ್ತಾಯಿತು. ಕಳೆದ 30 ವರ್ಷಗಳಿಂದ ವಿಕಿರಣ ಶೀಲ ತಾಜ್ಯವಸ್ತುವನ್ನು ಸಮುದ್ರಕ್ಕೆ ಹಾಕುತ್ತಿದ್ದು ತೀವ್ರ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. 1991ರಲ್ಲಿ ಇದನ್ನು ನಿಲ್ಲಿಸಿದ್ದರು ಅಕ್ಟೋಬರ್ 1993 ರಿಂದ ಜಪಾನ್ ಸಮುದ್ರದಲ್ಲಿ ವಿಕಿರಣಶೀಲ ತಾಜ್ಯವಸ್ತುಗಳನ್ನು ಮತ್ತೆ ಸುರಿಯಲು ಪ್ರಾರಂಭಿಸತೊಡಗಿತು. ಇದನ್ನು ಪರಿಸರವಾದಿಗಳು ಹಾಗೂ ಅಂತಾರಾಷ್ಟ್ರೀಯ ಸಮುದಾಯ ತೀವ್ರವಾಗಿ ಪ್ರತಿಭಟಿಸಿದಾಗರಷ್ಯ ಸರ್ಕಾರ ವಿಕಿರಣಶೀಲ ತಾಜ್ಯವಸ್ತುವನ್ನು ನೆಲದ ಮೇಲೆ ದಾಸ್ತಾನು ಮಾಡಲು ಕಟ್ಟಡಗಳ ನಿರ್ಮಾಣಕ್ಕೆ ಧನಸಹಾಯ ದೊರಕಿದಲ್ಲಿ 1994 ಅಥವಾ 1995 ರಿಂದ ಸಮುದ್ರದಲ್ಲಿ ಕಸ ಸುರಿಯುವುದನ್ನು ನಿಲ್ಲಿಸುತ್ತೇವೆಂದು ತಿಳಿಸಿತು. ಇನ್ನೂ ಈ ಸಮಸ್ಯೆ ಪೂರ್ಣವಾಗಿ ಬಗೆಹರಿದಿಲ್ಲ. ಡಿಸೆಂಬರ್ 993ರ ವೇಳೆಗೆ ರಷ್ಯದ ಪ್ರದೇಶದಲ್ಲಿ ಶೇ 15ರಷ್ಟು ಭಾಗ ಅಣುವಿಕಿರಣದಿಂದ ಅಪಾಯಕಾರಿ ಪ್ರದೇಶವಾಗಿದ್ದು ದೇಶದ ಕೃಷಿಭೂಮಿಯಲ್ಲಿ ಶೇ. 50ರಷ್ಟು ಮಾತ್ರ ಕೃಷಿಯೋಗ್ಯವಾಗಿದೆಯೆನ್ನುವರು. (ಜೆ.ಎಸ್.ಎಸ್.)

5. ಕೈಗಾರಿಕೋತ್ಪನ್ನಗಳು : ರಷ್ಯ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು 1920ರ ಅನಂತರ ಕೈಗಾರಿಕೋದ್ಯಮದಲ್ಲೂ ಮುಂದುವರೆದು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಎದುರಾಳಿಯಾಗಿ ಬೆಳೆದು ಪ್ರಪಂಚದಲ್ಲಿ ಎರಡನೆಯ ಸ್ಥಾನ ಪಡೆಯಿತು. 1928ರಲ್ಲಿರಷ್ಯ ತನ್ನ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿ ಕೈಗಾರಿಕೋದ್ಯಮಗಳಿಗೆ ಪ್ರೋತ್ಸಾಹ ನೀಡಲಾರಂಭಿಸಿತು. ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಿ ರಾಸಾಯನಿಕ ವಸ್ತುಗಳನ್ನು ನಿರ್ಮಾಣ ವಸ್ತುಗಳನ್ನು ಯಂತ್ರೋಪಕರಣಗಳನ್ನೂ ಉಕ್ಕನ್ನೂ ಪ್ರಥಮದಲ್ಲಿ ಉತ್ಪಾದಿಸುವತ್ತ ಗಮನ ಹರಿಸಿತು. ಭಾರಿ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಉಕ್ಕಿನ ತಯಾರಿಕೆ ಹೆಚ್ಚು ಪ್ರಾಧಾನ್ಯ ಪಡೆಯಿತು. ಅದರೆ ಗೃಹನಿರ್ಮಾಣ, ಗ್ರಾಹಕರ ವಸ್ತುಗಳ ತಯಾರಿಕೆಯಲ್ಲಿ ಉದಾಹರಣೆಗೆ ಬಟ್ಟೆ, ಆಹಾರ ಸಾಮಗ್ರಿ ಮತ್ತು ಗೃಹೋಪಯೋಗಿ ವಸ್ತುಗಳ ತಯಾರಿಕೆ ಹಿಂದೆಬಿದ್ದಿತು. 1950ರ ಮಧ್ಯದಲ್ಲಿ ಸರ್ಕಾರ ಈ ಅಗತ್ಯಗಳ ಬಗ್ಗೆ ಗಮನಹರಿಸಿ ಇವುಗಳ ಉತ್ಪಾದನೆಯನ್ನೂ ಹೆಚ್ಚು ಮಾಡಿತು. ಉತ್ಪಾದನೆ, ಬೆಲೆ ನಿರ್ಧಾರ ಮತ್ತು ಮಾರುಕಟ್ಟೆ ಇವೆಲ್ಲ ಸರ್ಕಾರದ ಹಿಡಿತದಲ್ಲೇ ನಡೆಯುತ್ತಿತು. ಕಾರ್ಖಾನೆಯ ಒಟ್ಟು ಲಾಭದಲ್ಲಿ ಐದನೆಯ ಮೂರು ಭಾಗವನ್ನು ಸರ್ಕಾರ ತೆರಿಗೆರೂಪದಲ್ಲಿ ತೆಗೆದುಕೊಂಡು ಉಳಿದ ಭಾಗವನ್ನು ಕಾರ್ಖಾನೆಗಳಲ್ಲಿ ವಿವಿಧ ಸ್ವಯಂಚಲಿತ ಯಂತ್ರಗಳು, ಬಸ್ಸುಗಳು, ಟ್ರಕ್ಕುಗಳು, ರಾಸಯನಿಕ ವಸ್ತುಗಳು, ವಿದ್ಯುತುಪಕರಣಗಳು, ಆಹಾರ ಸಂಸ್ಕರಣೆ, ಉಕ್ಕು, ಜವಳಿ ಮುಂತಾದವುಗಳನ್ನು ಉತ್ಪಾದಿಸಲಾಗುವುದು. ಲೆನಿನ್ ಗ್ರಾಡ್‍ನಲ್ಲಿ ಹಡಗು ನಿರ್ಮಾಣ, ವಿವಿಧ ಕಾರ್ಖಾನೆಗಳಿಗೆ ಬೇಕಾದ ಯಂತ್ರಗಳನ್ನು ತಯಾರಿಸುವುದುಂಟು. ರಷ್ಯದಿಂದ ಬೇರೆಯಾಗಿರುವ ಉಕ್ರೇನ್ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕೇಂದ್ರ, ವಿವಿಧ ಬಗೆಯ ಯಂತ್ರಗಳನ್ನು ತಯಾರಿಸುವುದು. ಹಾಗೆಯೇ ವೋಲ್ಗಾ ಮತ್ತು ಯೂರಲ್ ಪ್ರದೇಶದಲ್ಲಿ ತೈಲೋತ್ಪಾದನೆಯುಂಟು. ಮರದ ದಿಮ್ಮಿಗಳ ಹಾಗೂ ಕಾಗದದ ಕಾರ್ಖಾನೆಗಳು ರಷ್ಯದಲ್ಲಿವೆ. ಸೈಬಿರಿಯದಲ್ಲಿ ದೊರಕುವ ಖನಿಜಗಳನ್ನು ಜಲವಿದ್ಯುತ್ತನ್ನು ಸದುಪಯೋಗಪಡಿಸಿಕೊಳ್ಳಲು ಅಲ್ಲಿ ಅನೇಕ ಕಾರ್ಖಾನೆಗಳನ್ನು ಪ್ರಾರಂಭಿಸಲಾಗಿದೆ.

6. ಪ್ರವಾಸಿ ತಾಣಗಳು: ಹಿಂದಿನ ಸೋವಿಯತ್ ರಷ್ಯದಿಂದ ಬೇರೆಯಾದ ಇತ್ತೀಚಿನ ಗಣರಾಜ್ಯಗಳೂ ಸೇರಿದಂತೆ ಕೆಲವು ನಗರಗಳನ್ನು ಉಲ್ಲೇಖಿಸಿದೆ. ಮಧ್ಯರಷ್ಯದ ಮುಖ್ಯ ಪ್ರವಾಸಿ ನಗರಗಳಲ್ಲಿ ಮಾಸ್ಕೋ ಬಹು ಪ್ರಸಿದ್ಧ.ರಷ್ಯದ ರಾಜಧಾನಿಯಾಗಿ, ದೊಡ್ಡ ಕೈಗಾರಿಕಾ ನಗರವಾಗಿ, ವಿಜ್ಞಾನ ಹಾಗೂ ತಾಂತ್ರಿಕ ವಿದ್ಯಾ ಕೇಂದ್ರಗಳ ಮುಖ್ಯಬಿಂದುವಾಗಿ ಸಂಸ್ಕøತ ಮತ್ತು ಕಲೆಯ ಜೀವನಾಡಿಯಾಗಿ ಈ ನಗರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಚಾರಿತ್ರಿಕವಾಗಿ ರಷ್ಯದ ರಾಜಕೀಯ ಏಳುಬೀಳುಗಳನ್ನು ಕ್ರಾಂತಿಯನ್ನೂ ಕಂಡಿರುವ ಈ ನಗರ ಸುಮಾರು 879 ಚಕಿಮೀ ವಿಸ್ತೀರ್ಣ ಹೊಂದಿದ್ದು ಎಂಟು ಮಿಲಿಯನ್‍ಗೂ (1982) ಹೆಚ್ಚು ಜನಸಂಖ್ಯೆಯಿಂದ ಕೂಡಿತ್ತು. ವ್ಲಾದಿಮಿರ್, ಸುಜ್‍ದಾಲ್, ಐವಾನ್ವ, ಯಾರ್‍ಸ್ಲಾವಲ್, ರಸ್ತೋಫ ಪರಸ್ಲಾವ್ ಜಲೆಸ್ಕೀ, ಕಲೀನನ್, ಸ್ಮೋಲೆನೆಸ್ಕ್-ಈ ನಗರಗಳುರಷ್ಯದ ಪ್ರವಾಸಿ ತಾಣಗಳಾಗಿವೆ.ರಷ್ಯದ ಉತ್ತರದಲ್ಲಿರುವ ಲೆನಿನ್‍ಗ್ರಾಡ್ ಪ್ರಸಿದ್ಧ ನಗರ 1703ರಲ್ಲಿ ಸ್ಥಾಪಿತವಾದ ಈ ನಗರದ ಮೂಲ ಹೆಸರು ಪೆಟ್ರೊಗ್ರಾಡ್. 1924ರಲ್ಲಿ ಲೆನಿನ್ ತೀರಿಕೊಂಡಾಗ ಅವನ ಗೌರವಾರ್ಥ ಈ ನಗರವನ್ನು ಲೆನಿನ್‍ಗ್ರಾಡ್ ಎಂದು ಹೆಸರಿಸಲಾಯಿತು. ಫಿನ್‍ಲೆಂಡ್‍ಖಾರಿಯ ಪೂರ್ವಕ್ಕೆ 40 ದ್ವೀಪಗಳನ್ನೂ ಒಳಗೊಂಡ ಈ ನಗರ 400 ಸೇತುವೆಗಳಿಂದ ಸಂಪರ್ಕ ಪಡೆದಿದೆ. ನಗರದ ವಿಸ್ತೀರ್ಣ 660 ಚ.ಕಿಮೀ. ಜನಸಂಖ್ಯೆ ಸುಮಾರು 4 ಮಿಲಿಯನ್‍ಗೂ ಹೆಚ್ಚಿತ್ತು (1982). ರಷ್ಯದ ಎರಡನೆಯ ಕೈಗಾರಿಕಾ ನಗರವಾಗಿರುವ ಈ ನಗರ ಉತ್ತಮ ಸಂಚಾರ ಸಂಪರ್ಕ ವ್ಯವಸ್ಥೆಯನ್ನು ಹೊಂದಿದ್ದು ಹಡಗು ನಿರ್ಮಾಣ ಕೇಂದ್ರವೂ ಆಗಿದೆ. ಈ ನಗರದಲ್ಲಿ ಲೆನಿನ್ ನೆಲೆಸಿದ್ಧ ಮತ್ತು ಸಂದರ್ಶಿಸಿದ್ದ 240 ಸ್ಥಳಗಳಿವೆ. ಯುದ್ಧ ಕಾಲದಲ್ಲಿ (1941-45) ಈ ನಗರ ತೋರಿದ ಅಪ್ರತಿಮ ಸಾಹಸಕ್ಕೆ ಮಾಸ್ಕೋ ನಗರದಂತಯೇ ಇದನ್ನೂ ಸಾಹಸಿನಗರವೆಂದು (ಹೀರೋ ಸಿಟಿ) ಕರೆಯಲಾಯಿತು. ನಾವ್‍ಗರಾದ್, ಪಸ್ಕಾಫ್, ಮುರ್‍ಮಾನ್ಸ್ಕ್, ಬರಿಗ್ಲೆಪೆಸ್ಕ ಮತ್ತು ಪೆಟ್ರಜ ವಾಟ್‍ಸ್ಕ್ ಮುಂತಾದ ಪ್ರಸಿದ್ಧ ನಗರಗಳು ತಮ್ಮದೇ ಆದ ಕೆಲವೊಂದು ವೈಶಿಷ್ಟ್ಯಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಮಧ್ಯರಷ್ಯದ ವೋಲ್ಗಾ ನದಿ ವಲಯದ ಪ್ರಸಿದ್ಧ ನಗರಗಳಲ್ಲಿ ಕಜನ್ ಒಂದು. ಇದು ಮಾಸ್ಕೋ ನಗರಕ್ಕೆ ಪೂರ್ವದಲ್ಲಿ ವೋಲ್ಗಾ ನದಿಯ ಎಡದಂಡೆಯ ಮೇಲಿದೆ. ವೋಲ್ಗಾ ನದಿಯ ಬಲದಂಡೆಯ ಮೇಲಿರುವ ಉಲ್ಸಾನಫ್‍ಸ್ಕ್ ನಗರ ಲೆನಿನ್ ಜನ್ಮಭೂಮಿಯಾಗಿ ಪ್ರಸಿದ್ಧವೆನಿಸಿದೆ. ದಕ್ಷಿಣರಷ್ಯ ಅಥವಾ ಕಾಕಸಸ್ ಪರ್ವತ ಶ್ರೇಣಿಯ ಉತ್ತರ ಭಾಗದಲ್ಲಿಯ ಕೆಲವು ಪ್ರೇಕ್ಷಣೀಯ ನಗರಗಳೆಂದರೆ ಟ್ಯೂಲ, ಓರೆಲ್‍ರಸ್ಟಾಫ್‍ಡಾನ್, ಕ್ರಸ್‍ನದಾರ್, ನೋವರಸೀಸ್ಕ್, ಪೀಯೆಟೈಗೊರ್ಸ್ಕ್ ಯಸಾನ್‍ಟೂಕೀ, ಕಿಸ್‍ಲವೊಟಸ್ಕ್, ಅರ್ಜಜಾನಕಿಡ್‍ಜ,ರಷ್ಯದ ದಕ್ಷಿಣದಲ್ಲಿ ಕ್ಯಾಸ್ಪಿಯನ್ ಸಮುದ್ರ ದಂಡೆಯಲ್ಲಿರುವ ಬಾಕು ಈಗಿನ ಅಜರ್‍ಬೈಜಾನ್ ರಾಜ್ಯದ ರಾಜಧಾನಿ ಹಾಗೂ ಪ್ರವಾಸಿಗರ ಆಕರ್ಷಕ ನಗರ. ಈ ಬಂದರು ನಗರ ಕೈಗಾರಿಕಾ ಹಾಗೂ ವಾಣಿಜ್ಯ ಕೇಂದ್ರವೂ ಆಗಿದೆ. ಆರ್ಮೇನಿಯದ ರಾಜಧಾನಿಯಾದ ಯರ್ವಾನ್ ಅರಾರತ್ ಕಣಿವೆಯಲ್ಲಿ ಸಮುದ್ರಮಟ್ಟಕ್ಕಿಂತ 900-1300 ಮೀಟರ್ ಎತ್ತರದಲ್ಲಿರುವ ನಗರ, ಪ್ರವಾಸಿ ಕೇಂದ್ರ, ಕಪ್ಪು ಸಮುದ್ರದ ಆಗ್ನೇಯದಲ್ಲಿರುವ ಬಂದರು ನಗರ ಬಾಟೂಮೀ ವಾಣಿಜ್ಯ ವ್ಯವಹಾರ ಕೇಂದ್ರವಾಗಿದೆ. ಉಕ್ರೇನಿನ ಆಡಳಿತ ಕೇಂದ್ರವಾದ ಕೀವ್ ನಗರ ನೀಪರ್ ನದಿಯ ಎರಡೂ ದಂಡೆಯ ಮೇಲೆ ಹರಡಿದೆ. ನಗರಕ್ಕೆ ವಿಮಾನ, ರೈಲು, ಮೋಟಾರು ಮುಂತಾದುವುಗಳ ಸುಗಮ ಸಂಚಾರ ಸಂಪರ್ಕವಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೈಲೋ ರµóÀ್ಯದ ಆಡಳಿತ ಕೇಂದ್ರವಾದ ಮಿನ್ಸ್ಕ್ ನಗರ ಸ್ಪಿಪ್‍ಲಾಚ್ ನದಿಯ ದಂಡೆಯ ಮೇಲಿದೆ. ನಗರದಲ್ಲಿ ಅನೇಕ ಕಾರ್ಖಾನೆಗಳೂ ಶಾಲಾಕಾಲೇಜುಗಳೂ ಇದ್ದು ಇದೊಂದು ಸಾಂಸ್ಕøತಿಕ ಹಾಗೂ ವೈಜ್ಞಾನಿಕ ಕೇಂದ್ರವೆನಿಸಿದೆ. ಬಾಲ್ಟಿಕ್ ಗಣರಾಜ್ಯಗಳಾದ ಲಾಟ್ವಿಯ, ಲಿತುವೆನಿಯ ಮತ್ತು ಎಸ್ಟೋನಿಯಗಳಲ್ಲಿ ಐತಿಹಾಸಿಕ ಪುರಾತನ ಕಟ್ಟಡಗಳನ್ನೊಳಗೊಂಡ ಪ್ರವಾಸಿ ಆಕರ್ಷಣೆಯ ನಗರಗಳಿವೆ. ಎಸ್ಟೋನಿಯದ ಉತ್ತರ ಭಾಗದಲ್ಲಿ ಬಾಲ್ಟಿಕ್ ಸಮುದ್ರದ ದಂಡೆಯಲ್ಲಿ ಫಿನ್‍ಲೆಂಡ್ ಖಾರಿಯ ಪ್ರವೇಶದ್ವಾರದಲ್ಲಿರುವ ಟಾಲಿನ್ ಪ್ರಸಿದ್ಧ ನಗರ. 1966ರಲ್ಲಿ ಎಸ್ಟೋನಿಯ ಸರ್ಕಾರ ಕಾನೂನು ಮಾಡಿ ಟಾಲಿನ್‍ನ ಸುಮಾರು 118 ಹೆಕ್ಟೇರ್ ಪ್ರದೇಶದಲ್ಲಿರುವ 1500 ಐತಿಹಾಸಿಕ ಕಟ್ಟಡಗಳನ್ನು ಕೋಟೆಗಳನ್ನು ಸುರಕ್ಷಿತ ಪ್ರದೇಶವೆಂದು ಘೋಷಿಸಿದೆ. ನಾರ್ವೆ, ಟಾರ್‍ಟೂ, ಕೌನಸ್, ವಿಲ್‍ನೀಯಸ್, ಪಾರ್‍ನೂ ಮುಂತಾದ ನಗರಗಳೂ ಆಕರ್ಷಕ ಪ್ರವಾಸಿ ತಾಣಗಳಾಗಿವೆ. ಲಾಟ್ವಿಯದ ರಾಜಧಾನಿ ರೀಗ. ಇದು ದೂಗುವ ನದಿದಡದಲ್ಲಿದ್ದು ರೀಗ ಖಾರಿಗೆ ಹತ್ತಿರದಲ್ಲಿದೆ. ಲೆನಿನ್‍ಗ್ರಾಡ್ ಪಶ್ಚಿಮಕ್ಕಿರುವ ಈ ನಗರ ಬಂದರು ವ್ಯಾಪಾರಕ್ಕೆ, ವಿವಿಧ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ. ಉಜ್ಬೆಕಿಸ್ತಾನದ ರಾಜಧಾನಿಯಾದ ತಾಷ್ಕೆಂಟ್ ರಾಜಕೀಯವಾಗಿ ಐತಿಹಾಸಿಕವಾಗಿ ಪ್ರಸಿದ್ಧ ನಗರ. ಭಾರತದ ಪ್ರಧಾನ ಮಂತ್ರಿಗಳಾಗಿದ್ದ ದಿವಂಗತ್ ಲಾಲ್ ಬಹುದ್ದೂರ್ ಶಾಸ್ತ್ರೀಯವರು ಪಾಕಿಸ್ತಾನದ ಅಯೂಬ್‍ಖಾನರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೂ ಅನಂತರ ನಿಧನರಾದದ್ದೂ ಇದೇ ನಗರದಲ್ಲಿ. ಭಾರತದ ರಾಜಕೀಯ ಇತಿಹಾಸದಲ್ಲಿ ಇದೊಂದು ಮರೆಯಲಾಗದ ಘಟನೆ. ಸಮರ್ ಖಂಡ ಉಜ್ಬೇಕಿಸ್ತಾನದ ಬಹು ಪುರಾತನ ನಗರ. ಕೈಗಾರಿಕಾ ಹಾಗೂ ಸಾಂಸ್ಕøತಿಕ ಕೇಂದ್ರವಾಗಿ ಪ್ರಸಿದ್ಧವಾಗಿದೆ. ಕೀವ್, ಮೇರಿ, ಬೋಖಾರ, ದುಷಾನ್‍ಬೆ ಮುಂತಾದವೂ ಪ್ರವಾಸಿ ಕೇಂದ್ರ ಪಟ್ಟಣಗಳೆನಿಸಿವೆ.

ರಷ್ಯದ ಸೈಬೀರಿಯದ ನಗರದಲ್ಲಿ ನೋವೊಸಿಬಿರಿಸ್ಕ್ ನಗರವನ್ನು ಪಶ್ಚಿಮ ಸೈಬೀರಿಯದ ರಾಜಧಾನಿಯೆಂದು ಕರೆಯುವುದುಂಟು. ಇಂದು ಈ ನಗರ ಸೈಬೀರಿಯದ ಬಹುದೊಡ್ಡ ಕೈಗಾರಿಕೆ, ವಿಜ್ಞಾನ ಮತ್ತು ಸಾಂಸ್ಕøತಿಕ ಕೇಂದ್ರವಾಗಿದೆ. ಆಬಕಾನ್, ಬ್ರಾಟ್‍ಸ್ಕ, ಐರ್‍ಕುಟ್‍ಸ್ಕ್ ಮತ್ತು ನಕಾಟ್ಕ ಇವೂ ಪ್ರವಾಸಿ ನಗರಗಳೆನಿಸಿವೆ.

III. ಇತಿಹಾಸ

ಏಷ್ಯ ಮತ್ತು ಯುರೋಪ್ ಖಂಡಗಳೆರಡರಲ್ಲೂ ರಷ್ಯ ವಿಸ್ತರಿಸಿಕೊಂಡಿತ್ತು. ಇದರ ವಿಸ್ತಾರಕ್ಕನುಗುಣವಾಗಿ ವೈವಿಧ್ಯಮಯ ಭೂಲಕ್ಷಣಗುಳ್ಳ ಪ್ರದೇಶಗಳಾಗಿದ್ದವು. ಹಾಗೆಯೇ ಅನೇಕ ಬುಡಕಟ್ಟು, ಭಾಷೆ ಮತ್ತು ಸಂಸ್ಕøತಿಗಳ ಜನಸಮುದಾಯಗಳಿಂದ ಕೂಡಿದ್ದು ಕೆಲವು ಶತಮಾನಗಳ ವಿಕಾಸದ ಅನಂತರ ಒಂದು ರಾಷ್ಟ್ರವೆನಿಸಿತ್ತು. ಈ ಖಂಡಾಂತರ ಲಕ್ಷಣಗಳುಳ್ಳರಷ್ಯದ ಇತಿಹಾಸ ಅಷ್ಟೇ ಅಸ್ಪಷ್ಟ ಹಿನ್ನಲೆಯಿಂದ ಕೂಡಿದೆ. ಹಿಂದಿನ ಒಕ್ಕೂಟಕ್ಕೆ ಸಂಬಂಧಿಸಿದಂತೆ ಇಲ್ಲಿ ಐತಿಹಾಸಿಕ ನೋಟವಿದೆ.

 	ಇತಿಹಾಸಪೂರ್ವದ ಮಾನವನ ಅತ್ಯಂತ ಪ್ರಾಚೀನ ವಾಸಸ್ಥಳಗಳಲ್ಲಿ ರಷ್ಯ ಒಂದು. ವೋಲ್ಗಾ, ಡಾನ್ ಮತ್ತು ಡ್ಯಾನ್‍ಫಿರ್ ನದಿ ಬಯಲುಗಳು ಹಾಗೂ ಬಾಲ್ಟಿಕ್, ಕ್ಯಾಸ್ಪಿಯನ್ ಹಾಗೂ ಕಪ್ಪು ಸಮುದ್ರದ ತೀರಗಳಲ್ಲಿ ಪ್ರಾಚೀನ ಮಾನವನ ನೆಲೆಗಳು ಕಂಡುಬಂದಿವೆ. ಆದರೆ ಪ್ರಪಂಚದ ಅತ್ಯಂತ ಹೆಚ್ಚು ವಿಸ್ತಾರವಾದ ಭೂಭಾಗವನ್ನು ಹೊಂದಿದ್ದ ರಷ್ಯ, ಸೈಬೀರಿಯದ ಶೀತಲ ಪ್ರದೇಶ, ಉತ್ತರ ಧ್ರುವ ಪ್ರದೇಶ ಹಾಗೂ ದಕ್ಷಿಣದ ಮರುಭೂಮಿ ವಲಯ ಮತ್ತು ಹುಲ್ಲುಗಾವಲುಗಳಿಂದಾಗಿ ವ್ಯವಸಾಯಕ್ಕೆ ಯೋಗ್ಯವಲ್ಲದ ಹೆಚ್ಚು ಭೂಪ್ರದೇಶವನ್ನು ಹೊಂದಿದೆ. ಇದರಿಂದಾಗಿ ಕೃಷಿ ಅವಲಂಬಿತ ಜನರ ವಸಾಹತುಕರಣ ವ್ಯವಸ್ಥಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡಲು ಸಾಧ್ಯವಾಗಲಿಲ್ಲ. ಏಷ್ಯ ಭಾಗದರಷ್ಯದಲ್ಲಿ ಹೆಚ್ಚಾಗಿ ಅಲೆಮಾರಿ ಜನಜೀವನವಿದ್ದು ಇಲ್ಲಿನ ಜನ ಸಮೂಹಗಳು ಆ ಪ್ರದೇಶದಲ್ಲಿ ದೊರೆಯುತ್ತಿದ್ದು ಜೇನು, ಮೇಣ, ಅಂಬರ್, ತುಪ್ಪಳ ಮುಂತಾದ ಸಂಗ್ರಹಣೆಯ ಮೇಲೆ ಅವಲಂಬಿತರಾಗಿದ್ದರು.

ರೋಮನ್ನರ ಕಾಲದಲ್ಲಿರೂಢಿಗೆ ಬಂದ ಪಶ್ಚಿಮ ದೇಶಗಳ ಮತ್ತು ಪೂರ್ವದ ಚೀನಗಳ ನಡುವಿನ ವಾಣಿಜ್ಯ ಸಂಪರ್ಕ ಮಧ್ಯ ಏಷ್ಯದ ಮೂಲಕ ನಡೆಯುತ್ತಿತ್ತು. ಇದರಿಂದಾಗಿ ಈಗಿನ ಆಫ್ಘಾನಿಸ್ತಾನದ ಉತ್ತರಕ್ಕಿರುವ ತಾಷ್ಕೆಂಟ್, ಕಾಪ್‍ಗರ್ ಮೊದಲಾದವು ವಾಣಿಜ್ಯ ಕೇಂದ್ರಗಳಾಗಿ ಬೆಳೆದಿದ್ದವು. ಇಲ್ಲಿ ಕುಶಾನರ ಕನಿಷ್ಕ ಚಕ್ರವರ್ತಿಯ ಕಾಲದಲ್ಲಿ (ಕ್ರಿ.ಶ.ಒಂದನೆಯ ಶತಮಾನ) ಬೌದ್ಧ ಕೇಂದ್ರಗಳು ಮತ್ತು ರಾಜಕೀಯ ವ್ಯವಸ್ಥೆ ನೆಲೆಗೊಂಡಿದ್ದು ಕಂಡುಬರುತ್ತದೆ. ಮಧ್ಯ ಪ್ರಾಚ್ಯದ ವ್ಯಾಪಾರಿಗಳು ದಕ್ಷಿಣದ ಕಡೆಯಿಂದ ರಷ್ಯ ಪ್ರದೇಶವನ್ನು ಪ್ರವೇಶಿಸಿದರು. ಪೂರ್ವ ಯುರೋಪ್ ಕಡೆಯಿಂದಲೂ ಇಲ್ಲಿನ ಅರಣ್ಯೋತ್ಪನ್ನಗಳಿಗಾಗಿ ಸಾಹಸಿಗಳು ಈ ಪ್ರದೇಶಗಳಿಗೆ ಬಂದು ಇಲ್ಲಿನ ಸ್ಲಾವ್ ಜನರೊಡನೆ ಸಂಪರ್ಕ ಸಾಧಿಸಿದರು.

 	ರಷ್ಯದ ಇತಿಹಾಸ ಕೇಂದ್ರ ಪ್ರಾರಂಭವಾದುದ್ದು ಈಗಿನ ಮಾಸ್ಕೋ ಮತ್ತು ಕೀವ್ ನಗರಗಳ ಸುತ್ತಲ ಪ್ರದೇಶದಲ್ಲಿ. ಸುಮಾರು ಎಂಟು ಮತ್ತು ಒಂಬತ್ತನೆಯ ಶತಮಾನದವರೆಗೂ ಅಸಂಘಟಿತ ಪ್ರದೇಶವಾಗಿ ಉಳಿದುಕೊಂಡಿದ್ದ ಈ ಭೂಭಾಗಕ್ಕೆ ಸ್ಕ್ಯಾಂಡಿನೇವಿಯನ್ನರು ಲಗ್ಗೆ ಹಾಕಿದರು. ಅವರು ಅರಣ್ಯೋತ್ಪನ್ನವಸ್ತುಗಳ ಜೊತೆಗೆ ನಾಟಾವನ್ನು ಅರಸಿಕೊಂಡು ಹೊರಟವರು. ಸ್ಥಳೀಯರು ಸರಳಜೀವನ ನಡೆಸುತ್ತಿದ್ದುದರಿಂದ ಮತ್ತು ಮುಗ್ಧರಾಗಿದ್ದುದರಿಂದ ಸುಧಾರಿತ ಆಯುಧಗಳೊಂದಿಗೆ ಹೊರಟ ಈ ಜನರಿಗೆ ಗೆಲವು ಸುಲಭವಾಯಿತು. ಉತ್ತರ ಇರಾನ್ ಮತ್ತು ಉತ್ತರ ಆಫ್ರಿಕದಲ್ಲಿ ನೆಲೆಗೊಂಡಿದ್ದ ವರ್ತಕ ಸಂಸ್ಥೆಗಳು ಗುಲಾಮರನ್ನು ಆರಸಿಕೊಂಡು ಬಂದದ್ದರಿಂದ ಕೆಳಗಿನ ವೋಲ್ಗಾ,ಡಾನ್, ಮತ್ತು ಡ್ಯಾನ್‍ಫಿರ್ ನದಿ ಕಣಿವೆಗಳಲ್ಲಿ ಮಾನವ ಚಟುವಟಿಕೆಗಳು ಹೆಚ್ಚಿದವು. ಖಜರ್ ರಾಜ್ಯ ಇಂತಹ ಜನರಿಂದಲೇ ಊರ್ಜಿತಕ್ಕೆ ಬಂತು.

ಸ್ಕ್ಯಾಂಡಿನೇವಿಯ ರಾಜಕೀಯ ವ್ಯವಸ್ಥೆ : ಸುಮಾರು ಎಂಟನೆಯ ಶತಮಾನದಿಂದ ಹನ್ನೊಂದನೆಯ ಶತಮಾನದ ಮಧ್ಯ ಭಾಗದವರÉಗೂ ವಲಸೆಬಂದ ಸ್ಕ್ಯಾಂಡಿನೇವಿಯನ್ನರುರೂಢಿಸಿದ ಸಾಮಾಜಿಕ ವ್ಯವಸ್ಥೆ ರಷ್ಯದ ನಾಗರಿಕತೆಯ ವಿಕಾಸಕ್ಕೆ ಬುನದಿಯಾಯಿತು. ರಷ್ಯದ ಪೂರ್ವಭಾಗದಲ್ಲಿ ಇಂದಿನ ನಾರ್ವೆ, ಡೆನ್‍ಮಾರ್ಕ್, ಸವೀಡನ್, ಫಿನ್‍ಲೆಂಡ್ ಮತ್ತು ಐಸ್‍ಲೆಂಡ್‍ಗಳು ಸೇರಿದಂತೆ ಈ ರಾಜಕೀಯ ಸಂಘಟನೆ ಹುಟ್ಟಿತು. ಈ ಜನರಿಗೆ ನೌಕೆಗಳನ್ನು ನಿರ್ಮಿಸುವುದು ಮತ್ತು ನದಿಗಳ ಮೂಲಕ ದೋಣಿಗಳಲ್ಲಿ ವ್ಯಾಪಾರ ನಡೆಸುವುದು ಮುಖ್ಯ ಕಸಬಾಗಿತ್ತು. ಮೆಡಿಟರೇನಿಯನ್ ದೇಶಗಳು, ಪಶ್ಚಿಮ ಯುರೋಪ್ ಮತ್ತು ಏಷ್ಯ ದೇಶಗಳ ನಡುವೆ ನಡೆಯುತ್ತಿದ್ದ ವಾಣಿಜ್ಯ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ಈ ರಾಜಕೀಯ ಶಕ್ತಿ ಪ್ರಯತ್ನಿಸಿ ಅದಕ್ಕಾಗಿ ಇಂಗ್ಲೆಂಡಿನ ಹೆಚ್ಚು ಭಾಗವನ್ನು ತನ್ನ ಅಧೀನಪಡಿಸಿಕೊಂಡಿತು. ವೀಕಿಂಗರೆಂದು ಹೆಸರಾದ ಇವರು ಹನ್ನೊಂದನೆಯ ಶತಮಾನದವೆರಗೂ ಆಳಿದರು. ಇವರು ಬಿಜಾóನ್‍ಟೀಯನ್ ಮತ್ತು ಬಾಗ್ದಾದ್ ವ್ಯಾಪಾರ ಮಾರ್ಗವನ್ನು ವಶಪಡಿಸಿಕೊಳ್ಳಲು ಯುದ್ಧಮಾಡಿದರು.ರಷ್ಯದ ನದಿಗಳಮೂಲಕ ಪೂರ್ವಾಭಿಮುಖವಾಗಿ ಸಾಗಿ ಹಿಂದಿನ ಸಂಚಾರ ಮಾರ್ಗಗಳೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದರು. ಡ್ಯಾನ್‍ಫಿರ್ ನದಿಯ ಮೂಲಕ ಕಪ್ಪು ಸಮುದ್ರ ತಲುಪಿ ಕಾನ್‍ಸ್ಟಾಂಟಿನೋಪಲ್‍ವರೆಗೆ ಬಂದರು. ವೋಲ್ಗಾ ನದಿಯಮೂಲಕ ಕ್ಯಾಸ್ಪಿಯನ್ ಸಮುದ್ರ ಮತ್ತು ಬಾಗ್ದಾದ್ ತಲುಪಿದರು. ಈ ಕಾಲದಲ್ಲೇ ಕೀವ್ ಮತ್ತು ನಾವ್‍ಗರಾದ್ ರಾಜ್ಯಗಳು ಹುಟ್ಟಿದವು. ಸ್ಥಳೀಯ ಸ್ಲಾವ್ ಮತ್ತು ಫಿನ್ ಜನರು ಸುಲಭವಾಗಿ ಸ್ಕ್ಯಾಂಡಿನೇನಿಯನ್ನರ ಅಧೀನರಾದರು. ಪೂರ್ವದೇಶಗಳಿಂದ ಲೋಹ ಮತ್ತು ಸಂಬಾರ ವಸ್ತುಗಳನ್ನು ಆಮದು ಮಾಡಿಕೊಂಡರು. ಇದು ಸ್ವೀಡನ್ನಿನ ಸಂಪತ್ತನ್ನು ಹೆಚ್ಚಿಸಿತು. ಲೇಕ್ ಮಲಾರ್ಗ ಪ್ರದೇಶದಲ್ಲಿ ಬಿರ್ಕ ಪಟ್ಟ ಉಚ್ಚ್ರಾಯ ಸ್ಥಿತಿಗೆ ಬಂತು. ಅವರು ದಕ್ಷಿಣ ಜೂಟ್‍ಲೆಂಡ್‍ನ ಹೆಡ್ ಬೈ ಪಟ್ಟಣವನ್ನು ಹಿಡಿದು ಉತ್ತರದ ವಾಣಿಜ್ಯ ಮಾರ್ಗದ ಮೇಲೆ ಹಿಡಿತ ಸಾಧಿಸಲು ಮುಂದಾದರು. ಸು. 1050ರ ಹೊತ್ತಿಗೆ ಸ್ಕ್ಯಾಂಡಿನೇವಿಯ ಸಾಮ್ರಾಜ್ಯ ವ್ಯವಸ್ಥೆ ಕುಸಿದು ಸ್ವೀಡನ್ ಮತ್ತುರಷ್ಯದ ನಡುವೆ ರಾಜಕೀಯ ಸಂಪರ್ಕ ಕಡಿದುಹೋಯಿತು.

ಸ್ಕ್ಯಾಂಡಿನೇವಿಯಬ್ ರಾಜಕೀಯ ಸಂಘಟನೆ ಇದ್ದ ಕಾಲದ ಸಾಹಸಿ ಸಮುದಾಯಗಳಲ್ಲಿ ವರಂಜಿಯನ್ನರೆಂಬುವರು ಮುಖ್ಯರು. ಇವರು ವಿವಿಧ ಮೂಲಗಳಿಗೆ ಸೇರಿದ ಜನರಾಗಿದ್ದು ಯುದ್ಧಪ್ರಿಯ ಕುಲಗಳ ನಾಯಕರುಗಳ ನೇತೃತ್ವದಲ್ಲಿ ಗುಂಪು ಗೂಡುತ್ತಿದ್ದರು. ಇವರನ್ನೆಲ್ಲ ಸೇರಿಸಿ `ರಕ್ಷ್ ಜನರೆಂದು ಕರೆಯಲಾಯಿತು. ಹತ್ತನೆಯ ಶತಮಾನದ ಪ್ರಾರಂಭದಲ್ಲಿ ಕಾನ್‍ಸ್ಟಾಂಟಿನೋಪಲ್ ಮೇಲೆ ಮತ್ತು ಉತ್ತರ ಕಾಕಸಸ್ ಮೇಲೆ ಇವರು ದಾಳಿ ಮಾಡಿದ ಬಗ್ಗೆ ಪುರಾವೆಗಳಿವೆ. ಈ ಅವಧಿಯಲ್ಲಿ ಬಾಲ್ಟಿಕನ್‍ನಿಂದ ಕಪ್ಪುಸಮುದ್ರದವರೆಗೂ ವಾಣಿಜ್ಯ ಮಾರ್ಗ ಅಭಿವೃದ್ದಿಗೊಂಡಿತು. ಮುಂದೆ ಇದು ಕೀವಿಯನ್ನರ ರಾಜ್ಯ ಸ್ಥಾಪನೆಗೆ ನಾಂದಿಯಾಯಿತು. ಆದರೆ ಈ ವರಂಜಿಯನ್‍ರಷ್ಯನರು ಕೀವಿಯನ್ ರಾಜ್ಯ ಸ್ಥಾಪಕರೇ ಅಲ್ಲವೇ ಎಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಕಜಾóರರು :ರಷ್ಯ ಪೂರ್ವದ ಮತ್ತು ಉತ್ತರ ಭಾಗದಲ್ಲಿ ರಾಜಕೀಯ ವ್ಯವಸ್ಥೆ ನೆಲೆಗೊಳ್ಳುತ್ತಿದ್ದ ಕಾಲದಲ್ಲಿ ಅದರ ದಕ್ಷಿಣ ಭಾಗದಲ್ಲಿ ತುರ್ಕಿ ಮತ್ತು ಇರಾನಿ ಅಲೆಮಾರಿಗಳು ಉತ್ತರ ಕಾಕಸಸ್‍ನಲ್ಲಿ ಕಜಾóರ್ ಪಂಗಡಗಳ ಒಕ್ಕೂಟ ರಾಜ್ಯವನ್ನು ಸ್ಥಾಪಿಸಿದರು. ಯಹೂದಿ ವರ್ತಕರೂ ಇದರಲ್ಲಿ ಸೇರಿದ್ದರು. ತಮ್ಮದೇ ಆದ ಅಶ್ವದಳವನ್ನು ಹೊಂದಿದ್ದ ಇವರು ಅಲ್ಲಿ ನೆಲೆಗೊಂಡಿದ್ದ ಹೂಣರ ಸಂಬಂಧವಾದ ಬುಲ್ಗಾರ್‍ರನ್ನು ಚದುರಿಸಿದರು. ದಕ್ಷಿಣದಲ್ಲಿ ಬಿಜಾಂಟೀನ್ ಮತ್ತು ಅರಬ್ ಆಕ್ರಮಣಗಳನ್ನು ಎದುರಿಸಿದರು. ಕಜಾóರ್ ಮತ್ತು ಕಾನ್‍ಸ್ಟಾಂಟಿನೋಪಲ್‍ಗಳನಡುವಿನ ಸಂಪರ್ಕ ನಿಕಟವಾಯಿತು. ಆದರೆ ಇವರು 737ರಲ್ಲಿ ಅರಬ್ಬರಿಗೆ ಸೋತರು. ಇದರಿಂದ ತಮ್ಮ ರಾಜಧಾನಿಯನ್ನು ಉತ್ತರಕ್ಕೆ ಕೆಳಗಿನ ವೋಲ್ಗಾ ದಂಡೆಯ ಇಟಲ್‍ಗೆ ಸ್ಥಳಾಂತರಿಸಿದರು. ಅಲ್ಲಿರಸ್ ಮತ್ತು ಹಂಗೇರಿಯನ್ನರ ಒತ್ತಡದ ನಡುವೆಯೂ ಹತ್ತನೆಯ ಶತಮಾನದವರೆಗೂ ಪ್ರಬಲರಾಗಿದ್ದರು.

ಕೀವ್ ರಾಜ್ಯ : ವರಂಜಿಯನ್‍ರಲ್ಲಿ ಸಮರ್ಥನಾದ ರಾಜಕುಮಾರ ಸ್ವಯಾತೊ ಸ್ಲಾವ್ ಒಂಬತ್ತನೆಯ ಶತಮಾನದಲ್ಲಿ ಕೀವ್ ರಾಜ್ಯ ಸ್ಥಾಪಿಸಿದ. ಈ ರಾಜ್ಯಕ್ಕೆ ಈಗಿನ ಉಕ್ರೇನಿಯನ್ ಪ್ರದೇಶದಲ್ಲಿ ನೀಪರ್ ನದಿಯ ದಂಡೆಯ ಮೇಲಿರುವ ಕೀವ್ ನಗರ ರಾಜಧಾನಿಯಾಯಿತು. ಇವನ ಉತ್ತರಾಧಿಕಾರಿಗಳು ಹತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಕೀವ್ ರಾಜ್ಯವನ್ನು ಪ್ರಬಲ ಸ್ಥಿತಿಗೆ ತಂದರು. ವ್ಲಾದಿಮಿರ್ (ಸು. 980-1015)ಕೀವ್ ರಾಜ್ಯವನ್ನು ಅತ್ಯಂತ ವೈಭವ ಸ್ಥಿತಿಗೆ ತಂದ ಪ್ರಸಿದ್ಧ ರಾಜ. ನೀಪರ್ ನದಿಯ ಮೂಲಕ ಕಪ್ಪುಸಮುದ್ರದ ತೀರ ಪ್ರದೇಶಗಳಿಗೆ ವಾಣಿಜ್ಯ ಸಂಪರ್ಕ ಹೆಚ್ಚಿತು. ಸ್ಕ್ಯಾಂಡಿನೇವಿಯ ಮತ್ತು ಕಾನ್‍ಸ್ಟ್ಯಾಂಟಿನೋಪಲ್ ನಡುವಿನ ವಾಣಿಜ್ಯ ಮಾರ್ಗ ಉಚ್ಚ್ರಾಯಸ್ಥಿತಿಗೆ ಬಂದಿತು. ಕೀವ್ ನಗರ ಹನ್ನೆರಡನೆಯ ಶತಮಾನದವರೆಗೂ ಪ್ರಸಿದ್ಧ ಪ್ರಾಚೀನ ನಗರವಾಗಿ ಮೆರೆಯಿತು. ರಾಜ ನೆರೆಹೊರೆಯ ಐರೋಪ್ಯ ರಾಜ್ಯಗಳೊಂದಿಗೆ ರಾಜ ತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ. 988ರಲ್ಲಿ ಕಾನ್‍ಸ್ಟಾಂಟಿನೋಪಲ್ ಧರ್ಮಗುರುಗಳನ್ನು ಆಹ್ವಾನಿಸಿ ರಷ್ಯದಲ್ಲಿ ಸಂಪ್ರದಾಯವಾದಿ ಚರ್ಚ ಸ್ಥಾಪನೆಯಾಗಲು ಕಾರಣನಾದ. ತಂದೆಯಿಂದ ಮಗನಿಗೆ ಬರುವಂತ ಉತ್ತರಾಧಿಕಾರ ನ್ಯಾಯ ವ್ಯವಸ್ಥೆಯನ್ನು ರಷ್ಯದಲ್ಲಿ ಅಂಗೀಕರಿಸಲಾಯಿತು. ಇದರಿಂದ ಸಮಕಾಲೀನ ಕ್ರೈಸ್ತಧರ್ಮದ ಕಲೆ, ತತ್ತ್ವಶಾಸ್ತ್ರ ಮತ್ತು ಸಾಹಿತ್ಯಗಳು ಈ ಪ್ರದೇಶದ ಜನರಿಗೆ ಪರಿಚಯವಾದವು. ಹೀಗೆ ರಷ್ಯದ ಪೂರ್ವ ಆಗ್ನೇಯ ಭಾಗದಲ್ಲಿ ಒಂದು ದೃಢವಾದ ಸಂಸ್ಕøತಿ ಬೆಳೆಯಲು ಕೀವ್ ರಾಜ್ಯ ಅಪಾರ ಕಾಣಿಕೆ ಸಲ್ಲಿಸಿತು.

ವ್ಲಾದಿಮಿರ್‍ನ ಮರಣಾಂತರ (1018) ಇವನ ಹನ್ನೆರಡು ಜನ ಗಂಡು ಮಕ್ಕಳು ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ಹಕ್ಕು ಸ್ಥಾಪಿಸಿಕೊಂಡು ಆಳತೊಡಗಿದರು. ರಾಜ್ಯದಲ್ಲಿ ಸೈನ್ಯ ಒದಗಿಸಿದ್ಧಕ್ಕೆ ಜಹಗೀರು ಪಡೆಯುವ ಊಳಿಗಮಾನ್ಯ ಪದ್ಧತಿ ನೆಲೆಯೂರಿತು. ಹನ್ನೊಂದನೆಯ ಶತಮಾನದ ಅಂತ್ಯದಲ್ಲಿ ನಡೆದ ಧರ್ಮಯುದ್ಧಗಳ ಕಾರಣವಾಗಿ ಮೆಡಿಟರೇನಿಯನ್ ಪ್ರದೇಶದ ಮೂಲಕ ಪೂರ್ವ ಪಶ್ಚಿಮ ದೇಶಗಳ ನಡುವೆ ನಡೆಯುತ್ತಿದ್ದ ವ್ಯಾಪಾರ ವಾಣಿಜ್ಯ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಯಿತು. ಇದು ಕೀವ್ ರಾಜ್ಯದ ಆದಾಯಕ್ಕೆ ಧಕ್ಕೆ ತಂದಿತು. ಸ್ಥಳೀಯ ರಾಜರುಗಳು ಹೊರದೇಶಗಳೊಂದಿಗೆ ಸ್ವತಂತ್ರ ವ್ಯಾಪಾರ ಸಂಬಂಧಗಳನ್ನು ಹೊಂದಲು ಹವಣಿಸಿದ್ದು ರಾಜಕೀಯ ದುರ್ಬಲತೆಗೆ ಕಾರಣವಾಯಿತು. 1169ರಲ್ಲಿ ಸುಜ್‍ದಾಲ್‍ನ ಆಂಡ್ರ್ಯೂ ಎಂಬ ದೊರೆ ಕೀವ್ ನಗರದ ಮೇಲೆ ದಾಳಿಯಿಟ್ಟು ಅದನ್ನು ಹಾಳುಗೆಡವಿದ. ಹನ್ನೆರಡನೆಯ ಶತಮಾನದಲ್ಲಿ ಅಂತ್ಯ ಭಾಗದ ಹೊತ್ತಿಗೆ ಶಿಥಿಲವಾಗಿದ್ದ ಕೀವ್ ವ್ಯವಸ್ಥೆ 1240ರಲ್ಲಿ ನಡೆದ ಮಂಗೋಲರ ಧಾಳಿಯಿಂದ ಸಂಪೂರ್ಣವಾಗಿ ನಿರ್ನಾಮವಾಯಿತು.

ನಾವ್‍ಗರಾದ್ ರಾಜ್ಯ : ಕೀವ್ ರಾಜ್ಯದ ಕಾಲದಲ್ಲಿ ಫಿನ್‍ಲೆಂಡ್ ಕೊಲ್ಲಿ ಮತ್ತು ಪೈಪಸ್ ಸರೋವರಗಳ ಆಸುಪಾಸಿನಿಂದ ಯೂರಲ್ ಬೆಟ್ಟಗಳವೆರೆಗೆ ವಾಯುವ್ಯರಷ್ಯದಲ್ಲಿ ಸ್ಥಾಪಿತವಾದ ಸಣ್ಣ ರಾಜ್ಯ. ನಾವ್‍ಗರಾದ್ ಪಟ್ಟನ ರೋರಿಕ್‍ರ ಮೊದಲ ನೆಲೆಯಾಯಿತು. ಕೀವ್ ರಾಜ್ಯ ಕ್ಷೀಣಿಸಿದಾಗ ಇಲ್ಲಿನ ಅರಸ 1136ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ. ಈ ರಾಜ್ಯ ಮುಂಗೋಲ್ ಟಾರ್ಟರರ ಧಾಳಿಗೆ ಮಣಿಯಲಿಲ್ಲ. ಜರ್ಮನಿ ಮತ್ತು ಸ್ವೀಡನ್ನಿನ ಮೇಲೆ ಯಶಸ್ವಿಯಾಗಿ ಯುದ್ಧಮಾಡಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು ; ಮಾಸ್ಕೋ ರಾಜ್ಯದ ಪ್ರತಿಸ್ಪರ್ಧಿಯಾಗಿದ್ದಿತು. ನಾವ್‍ಗರಾದ್ ಬೋಯರ್ ವ್ಯಾಪಾರಿ ಕುಟುಂಬಗಳ ಬಹುಜನರ ಆಳ್ವಿಕೆಗೆ ಒಳಪಟ್ಟಿತು. ದಂಡನಾಯಕ, ಮೇಯರ್ ಮತ್ತು ಹಿರಿಯರ ಸಭೆಗಳು ನಗರಾಡಳಿತವನ್ನು ನೋಡಿಕೊಳ್ಳುತ್ತಿದ್ದವು. ಆರ್ಚ್ ಬಿಷಪ್ ರಾಜ್ಯದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಅಲ್ಲಿನ ಅನೇಕ ಚರ್ಚಗಳು, ಕ್ಯಾಥಡ್ರಲ್‍ಗಳು, ಕ್ರೈಸ್ತ ಮಠಗಳು ಉಳಿದುಬಂದಿವೆ. 1478ರಲ್ಲಿ ಈ ರಾಜ್ಯ ಮಾಸ್ಕೋ ರಾಜ್ಯಕ್ಕೆ ಸೇರಿಹೋದರೂ ಅದರ ಆರ್ಥಿಕ ಮತ್ತು ಸಾಂಸ್ಕøತಿಕ ವೈಶಿಷ್ಯ ಉಳಿದುಕೊಂಡು ಬಂತು.

ವಾಯುವ್ಯ ಪ್ರಾಂತ್ಯದಲ್ಲಿ ಮಧ್ಯಯುಗದಲ್ಲಿ ಪಿಮೊಲಾನ್ಸ್ಕ್ ಪಾಲಾಟ್ಸ್ಕ್ ಟರ್‍ನಾವೊ, ಪಿಸ್ಸ್ಕ್ ಹಾಗೂ ವೊಲ್ಲೀನ ರಾಜ್ಯಗಳು ಲಿಥುವೇನಿಯದಿಂದ ನಿಯಂತ್ರಿಸಲ್ಪಡುತ್ತಿದ್ದವು. ಬೈಲೋರಷ್ಯನ್ನರು ಮತ್ತು ಉಕ್ರೇನಿಯನ್ನರು ಇಲ್ಲಿನ ಪ್ರಧಾನ ಜನಸಮೂಹವಾಗಿದ್ದು ಇದೊಂದು ಅಂತಾರಾಷ್ಟ್ರೀಯ ಸಂಘಟನೆಯಂತೆ ಇದ್ದಿತು. ಹದಿನೈದನೆಯ ಶತಮಾನದ ಹೊತ್ತಿಗೆ ಇಲ್ಲಿನ ರಾಜರು ಸ್ಲಾವಿಕ್ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದ್ದರು. ಹಳೆಯ ಕೀವ್ ರಾಜ್ಯದ ಬಹುಭಾಗವನ್ನು ಒಳಗೊಂಡು ಈ ರಾಜ್ಯ ವಿಟೌಟಾಸ್‍ನ (1392-1430) ಕಾಲದಲ್ಲಿ ಹೆಚ್ಚು ಪ್ರಾಬಲ್ಯಕ್ಕೆ ಬಂತು. 1385ರಲ್ಲಿ ಈ ರಾಜ್ಯ ಪೋಲೆಂಡ್ ರಾಜ್ಯಕ್ಕೆ ಸೇರಿಹೋಯಿತು.

ಈಶಾನ್ಯ ಪ್ರಾಂತ್ಯದಲ್ಲಿ ಓಕಾ ಮತ್ತು ವೋಲ್ಗಾ ನದಿಗಳ ನಡುವನ ಪ್ರದೇಶ ಮಾಸ್ಕೋ ರಾಜ್ಯದ ಪ್ರಧಾನ ಭಾಗವಾಗಿತ್ತು. ವ್ಲಾದಿಮಿರ್‍ನ ವಂಶಸ್ಥರು ಇಲ್ಲಿ ಆಳುತ್ತಿದ್ದು ಡ್ಯಾನಿಯನ್ನನ ಮಗ ಇವಾನ್‍ನ ಕಾಲದಲ್ಲಿ (1328-41) ಈ ರಾಜ್ಯ ಬಹು ವಿಸ್ತಾರಗೊಂಡು ಸಂಪದ್ಭರಿತವಾಯಿತು.

ನೈಋತ್ಯ ಪ್ರಾಂತ್ಯದ ಭಾಗ ಮುಖ್ಯವಾಗಿ ಗ್ಲೇಷಿಯ ಮತ್ತು ವೋಲ್ಯೀನ್ ರಾಜ್ಯಗಳನ್ನು ಒಳಗೊಂಡಿತ್ತು. ಕೀವ್ ಪ್ರಭಾವ ವಲಯದಿಂದ ಹೊರತಾದ ಈ ಭಾಗ ಫಲವತ್ತಾದ ಪ್ರದೇಶವಾಗಿತ್ತು. 1240ರಲ್ಲಿ ಮಂಗೋಲರ ಧಾಳಿಯಿಂದ ಪತನವಾಯಿತು. ಅಂತಿಮವಾಗಿ ಈ ರಾಜ್ಯಗಳು ಲಿಥುವೇನಿಯ ಮತ್ತು ಪೋಲೆಂಡ್‍ಗಳ ಅಧೀನವಾದವು.

ಮಂಗೋಲರ ಆಕ್ರಮಣ ಮತ್ತು ಪರಿಣಾಮಗಳು : ಹದಿಮೂರನೆಯ ಶತಮಾನದ ಮೊದಲ ಭಾಗದಲ್ಲಿ ರಷ್ಯದ ಬಹುಭಾಗ ಮಂಗೋಲರ ಆಕ್ರಮಣಕ್ಕೆ ತುತ್ತಾಯಿತು. ಧರ್ಮಯುದ್ಧಗಳಿಂದಾಗಿ ಮಧ್ಯ ಏಷ್ಯಾದ ಮೂಲಕ ಚೀನ ಮತ್ತು ಪೆಸಿಫಿಕ್ ತೀರವನ್ನು ಸಂಪರ್ಕಿಸುತ್ತಿದ್ದ ವ್ಯಾಪಾರ ಮಾರ್ಗಗಳು ಬದಲಾದವು. ಇದರಿಂದ ಮಂಗೋಲರಿಗೆ ಅನೇಕ ತೊಂದರೆಗಳುಂಟಾದವು. ಆಗ ಅವರು ಚಂಗೀಸ್ ಖಾನನ (1167-1227) ನೇತೃತ್ವದಲ್ಲಿ ಪಶ್ಚಿಮಾಭಿಮುಖವಾಗಿ ಚಲಿಸತೊಡಗಿದರು. ಚಂಗೀಸ್‍ಖಾನನ ಅಲೆಮಾರಿ ತುರ್ಕಿ ಸಮುದಾಯಗಳನ್ನು ಮತ್ತು ಮುಸ್ಲಿಂ ವರ್ತಕರನ್ನು ಒಗ್ಗೂಡಿಸಿ ಒಂದು ಬೃಹತ್ ಸೈನ್ಯ ಕಟ್ಟಿದ. 1223ರಲ್ಲಿ ಹಿಂದಿನ ಕೀವ್ ಸಾಮ್ರಾಜ್ಯದ ಪ್ರದೇಶದೊಳಗೆ ನುಗ್ಗಿದ ಮಂಗೋಲ ಸೈನ್ಯ ವೊಲ್ಯೀನ, ಗ್ಲೇಷಿಯ ಮತ್ತು ಪೊಲೋಟಸ್ ರಾಜ್ಯಗಳ ಸಂಯುಕ್ತ ಸೈನ್ಯವನ್ನು ಕಲ್ಕ ನದಿ ದಂಡೆಯ ಮೇಲೆ ನಡೆದ ಯುದ್ಧದಲ್ಲಿ ಸೋಲಿಸಿತು. ಇತರ ಸಣ್ಣಪುಟ್ಟ ರಾಜ್ಯಗಳು ಸುಲಭವಾಗಿ ಮಂಗೋಲರ ವಶವಾದವು. ಚಂಗೀಸ್‍ಖಾನನು ಯೂರಲ್ ಪರ್ವತ ಪ್ರದೇಶದವರೆಗೆ ರಷ್ಯವನ್ನು ತನ್ನ ಅಧೀನಕ್ಕೆ ತೆಗೆದುಕೊಂಡ. ಅದರಲ್ಲಿ ನಾವ್ ಗರಾದ್‍ನ ಉತ್ತರ ಭಾಗ ಮಾತ್ರ ಮಂಗೋಲರ ಹಿಡಿತದಿಂದ ಹೊರಗುಳಿದಿತ್ತು.

ಪೆಸಿಫಿಕ್ ಸಾಗರ ತೀರದಿಂದ ಮೆಡಿಟರೇನಿಯನ್ ತೀರದವರೆಗೆ ತಮ್ಮ ದಿಗ್ವಿಜಯ ಸಾಧಿಸಿದ ಮಂಗೋಲರು ಈ ವಿಸ್ತಾರ ಭೂಭಾಗವನ್ನೆಲ್ಲ ಆಳುವ ಹಂಬಲ ಹೊಂದಿದ್ದರು. ಚಂಗೀನಸ್‍ಖಾನನ ಮಗ ಕುಬ್ಲಾಯ್‍ಖಾನನೂ ಅಷ್ಟೇ ಮಹಾದ್ವಾಕಾಂಕ್ಷೆಯುಳ್ಳವನಾಗಿದ್ದ. ಇದರಿಂದಾಗಿ ಮಂಗೋಲರು ಚೀನ, ಪರ್ಷಿಯ ಮತ್ತುರಷ್ಯಗಳಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದರು. ತಮ್ಮ ವಾಣಿಜ್ಯ ಸಾಮ್ರಾಜ್ಯಕ್ಕೆ ರಷ್ಯದ ಇಟಲ್ ಎಂಬಲ್ಲಿ ಹೊಸ ರಾಜಧಾನಿಯನ್ನು ಸ್ಥಾಪಿಸಿ 1260ರಲ್ಲಿ ರಾಜಧಾನಿಯನ್ನು ವಾಲ್ಗ ಗ್ರಾದ್‍ನ ಬಳಿಯ ಪಾರೈಗೆ ಸ್ಥಳಾಂತರಿಸಲಾಯಿತು. ಇಲ್ಲಿನ ಪಟ್ಟಣಗಳು ವಾಣಿಜ್ಯ ವ್ಯವಹಾರಗಳಿಂದ ಕೂಡಿದ್ದು ಗೋಲ್ಡ್‍ನ್ ಹೋರ್ಡ್ ಸಾಮ್ರಾಜ್ಯವೆಂದು ಪ್ರಸಿದ್ಧವಾಯಿತು.

ಮಂಗೋಲರ ಆಳ್ವಿಕೆಯನ್ನು ಟಾರ್ಟರರ ಆಳ್ವಿಕೆ ಎಂದೂ ಕರೆಯುವುದಕ್ಕೆ ಕಾರಣ ಈ ಟಾರ್ಟರರು ಸ್ಥಳೀಯ ರಾಜರುಗಳ ಮೂಲಕವೇ ಆ ಪ್ರದೇಶಗಳನ್ನು ಆಳಿದ್ದು. ಇದರಿಂದಾಗಿ ಅವರು ಆ ಪ್ರದೇಶಗಳ ಮೂಲಭೂತ ಸಂಸ್ಕøತಿಯಲ್ಲಿ ಬದಲಾವಣೆ ತರಲಿಲ್ಲ. ವಾಣಿಜ್ಯ ಮತ್ತು ಕಂದಾಯ ವಸೂಲಿಯಲ್ಲಿ ಹೆಚ್ಚಾಗಿ ತುರ್ಕರು ಮತ್ತು ಮುಸ್ಲಿಂ ವರ್ತಕರು ನಿಯುಕ್ತರಾಗಿದ್ದರು. ಕ್ರಮೇಣ ಸ್ಥಳೀಯ ಪಂಗಡಗಳ ನಾಯಕರುಗಳು ಮಂಗೋಲರಿಗೆ ಪ್ರತಿಭಟನೆ ತೋರತೊಡಗಿದರು. ಒಜ್óಬೆಗ್ (1314-41) ಇವರ ಪ್ರತಿಭಟನೆಯನ್ನು ಹತ್ತಿಕ್ಕಿ ನಿಯಂತ್ರಣ ಸಾಧಿಸಿದ.

ಈ ಮಧ್ಯೆ ತುರ್ಕರ ದಿಗ್ವಿಜಯಗಳು, ತೈಮೂರನ ಅಲ್ಪಕಾಲದ ಶೀಘ್ರ ಯಶಸ್ಸು ಇವು ಮಂಗೋಲ್ ಸಾಮ್ರಾಜ್ಯ ವ್ಯವಸ್ಥೆಯನ್ನು ಅಲುಗಿಸಿದವು. 1357ರ ಅನಂತರ ಸಮಸ್ಯೆಗಳು ತಲೆದೋರಿದವು. ಸಾರೈನಿಂದ ಆಳುತ್ತಿದ್ದ ಖಾನನಿಗೆ ಪ್ರದೇಶವನ್ನು ಟಾರ್ಟರ್ ನಾಯಕನೊಬ್ಬ ಪ್ರತ್ಯೇಕಗೊಳಿಸಿದ. ಪೂರ್ವ ಭಾಗಗಳು ತೈಮೂರನ ಅಧೀನಕ್ಕೆ, ಬಂದವು. ಇರಾನ್, ಕಾಕಸಸ್, ಮತ್ತು ಪೂರ್ವ ಭಾಗಗಳು ಅನಟೋಲಿಯಗಳ ಮೇಲೆ ಸ್ವಾಮಿತ್ವ ಸ್ಥಾಪಿಸಿದ ತೈಮೂರ್‍ರಷ್ಯದ ಟಾರ್ಟರ್ ಪ್ರದೇಶಗಳ ಮೇಲೆ ದಂಡಯಾತ್ರೆ ಕೈಗೊಂಡ. ಅವನು ಕೆಳಗಿನ ವೋಲ್ಗಾ ಮೂಲಕ ಉತ್ತರ ರಷ್ಯ ಮೂಲದ ರಾಜ್ಯಗಳ ಎಲ್ಲೆಯನ್ನು ತಲುಪಿ ಟಾಟರ್ ಸಾಮ್ರಾಜ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸಿದ. ಮುಂದೆ ಮಂಗೋಲರ ಆಳ್ವಿಕೆ ಪುನಶ್ಚೇತನಗೊಳ್ಳಲಿಲ್ಲ. ಅಂತರ ಯುದ್ಧಗಳು ಹೆಚ್ಚಿದವು. ಹದಿನೈದನೆಯ ಶತಮಾನದ ಅಂತ್ಯದ ಹೊತ್ತಿಗೆ ಟಾರ್ಟರ್ ಸಾಮ್ರಜ್ಯ ಅಳಿಯಿತು. ಮಾಸ್ಕೋ ರಾಜ್ಯ ಅಭಿವೃದ್ಧಿಯಾಗತೊಡಗಿತು.

ಮಾಸ್ಕೋ ರಾಜ್ಯವನ್ನು ಅಲೆಕ್ಸಾಂಡರ್ ನೆವ್‍ಸ್ಕಿಯ ಮಗ ಡ್ಯಾನಿಯನ್ ಎಂಬಾತ 1295ರಲ್ಲಿ ಸ್ಥಾಪಿಸಿದ. ಇದು ಹದಿನಾಲ್ಕನೆಯ ಶತಮಾನದ ಕೊನೆಯ ಹೊತ್ತಿಗೆ ಪ್ರಮುಖ ಸ್ಥಳೀಯ ರಾಜ್ಯವಾಗಿರಷ್ಯದ ಪ್ರಾತಿನಿಧಿಕ ರಾಷ್ಟ್ರೀಯ ರಾಜ್ಯವಾಯಿತು.

ಎರಡನೆಯ ವ್ಯಾಸಿಲಿಯ ಮಗ ಮೂರನೆಯ ಐವಾನ್ (1462-1505) ಬೈಲೊರಷ್ಯ ಮತ್ತು ಉಕ್ರೇನ್ ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. 1478ರಲ್ಲಿ ನಾವ್‍ಗರಾದ್ ರಾಜ್ಯವನ್ನು ಸ್ವಾಧೀನಕ್ಕೆ ತೆಗೆದುಕೊಂಡದ್ದು ಇವನ ಮಹಾಸಾಧನೆಗಳಲ್ಲೊಂದು. ಇವನು ಬಿಜಾóನ್‍ಟೀಯನ್ ಕೊನೆಯ ಚಕ್ರವರ್ತಿಯ ಸೋದರ ಸೊಸೆ ಸೋಫಿಯಾಳನ್ನು ಮದುವೆಯಾಗಿರಷ್ಯದ ರಾಜಮನೆತನದ ಪ್ರತಿಷ್ಠೆಯನ್ನು ಹೆಚ್ಚಿಸಿದ. 1503ರಲ್ಲಿ ಲಿಥುವೇನಿಯದೊಂದಿಗೆ ಒಪ್ಪಂದ ಮಾಡಿಕೊಂಡು ರಷ್ಯದ ಅಜೇಯ ರಾಜನೆನಿಸಿದ; ಇವನ ಉತ್ತರಾಧಿಕಾರಿಯಾಗಿ ಬಂದ ಇವನ ಮಗ ಮೂರನೆಯ ವ್ಯಾಸಿಲಿಯು ರಾಜ್ಯವನ್ನು ಇನ್ನೂ ವಿಸ್ತರಿಸಿದ.

ಮೊದಲ ಬಾರಿಗೆ `ಜಾóರ್ ಬಿರುದು ಧರಿಸಿದ ನಾಲ್ಕನೆಯ ಐವಾನನು 1547ರಲ್ಲಿ ಪಟ್ಟಕ್ಕೆ ಬಂದ. ಇವನು ಒರಟನೂ ನಿಷ್ಕರುಣಿಯೂ ದರ್ಪಿಷ್ಟನೂ ದಕ್ಷನೂ ಆಗಿದ್ದ. ಇವನಿಗೆ ಭೀಕರ ಐವಾನ್ ಎಂಬ ಹೆಸರೂ ಬಂದಿದ್ದತು. ಐವಾನ್ ಮಾಸ್ಕೋ ರಾಜ್ಯದ ಗಡಿಗಳನ್ನು ಪೂರ್ವದಲ್ಲಿ ಸೈಬೀರಿಯದವರೆಗೂ ವಿಸ್ತರಿಸಿ ಅದಕ್ಕೆ ರಷ್ಯನ್ ಸಾಮ್ರಾಜ್ಯದರೂಪುಕೊಟ್ಟ. ಆದರೆ ಪ್ರಜೆಗಳು ಮತ್ತು ಸಾಮಂತರು ಹಾಗೂ ಭೂಮಾಲೀಕರನ್ನು ಅನುಮಾನದಿಂದ ನೋಡುತ್ತ ಅವರನ್ನು ಪೀಡಿಸುತಿದ್ದ. 1584 ವರೆಗೂ ಇವನು ಆಳಿದ.

ನಾಲ್ಕನೆಯ ಐವಾನನ ಅನಂತರರಷ್ಯದಲ್ಲಿ ಹೇಳಿಕೊಳ್ಳುವಂತಹ ಮಹತ್ವದ ಘಟನೆಗಳು ಜರುಗಲಿಲ್ಲ. ಒಂದನೆಯ ಪೀಟರ್ ಸಿಂಹಾಸನಕ್ಕೆ ಬಂದು 1689 ರಿಂದ ಸ್ವತಂತ್ರವಾಗಿ ಆಳತೊಡಗಿದ. ಈತ ಮಾಸ್ಕೋ ರಾಜ್ಯದ ಜಾರ್ ಪದವಿಯನ್ನು ಉನ್ನತಿಗೇರಿಸಿ ರಷ್ಯದ ಚಕ್ರವರ್ತಿಯೆಂದು ಘೋಷಿಸಿಕೊಂಡ. ಆಡಳಿತದಲ್ಲಿ ಸಲಹೆ ಪಡೆಯಲು ಸೆನೆಟ್ ಎಂಬ ರಾಜಕೀಯ ಸಭೆಯನ್ನು ಸ್ಥಾಪಿಸಿ ಮುಂದಿನವರಿಗೆ ದಾರಿಯಾದ. ಆಟೋಮನ್ ಸಾಮ್ರಾಜ್ಯದ ಬೆಂಬಲದಿಂದ ಆಗಾಗ ದಾಳಿಯನ್ನು ನಡೆಸುತ್ತಿದ್ದ. ಆಟೋಮನ್ ಸಾಮ್ರಾಜ್ಯದ ಬೆಂಬಲದಿಂದ ಆಗಾಗ ದಾಳಿಯನ್ನು ನಡೆಸುತ್ತಿದ್ದ. ಕ್ರಿಮಿಯಾದ ಟಾರ್ಟರರನ್ನು ನಿಯಂತ್ರಿಸಿ ಆಜೋವ್ ಪಟ್ಟಣವನ್ನು ವಶಪಡಿಸಿಕೊಂಡ. 1696-97ರಲ್ಲಿ ಹಾಲೆಂಡ್ ಮತ್ತು ಇಂಗ್ಲೆಂಡ್ ಸೇರಿದಂತೆ ಯುರೋಪಿನ ಪ್ರವಾಸ ಕೈಗೊಂಡು ಅಲ್ಲಿನ ಪ್ರಗತಿಯನ್ನು ಗಮನಿಸಿದ. ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದವರನ್ನು ಅಲ್ಲಿಂದ ಕರೆಸಿ ರಷ್ಯದ ಕೈಗಾರಿಕೆಗಳ ಅಭಿವೃದ್ಧಿಯ ಜವಾಬ್ದಾರಿ ವಹಿಸಿದ. ತುರ್ಕಿಯ ವಿರುದ್ಧ ಪಾಶ್ಚಾತ್ಯ ದೇಶಗಳೊಡನೆ ರಾಜಕೀಯ ಸಂಧಾನ ನಡೆಸಿದ. 1700 ರಿಂದ 1721ರ ವರೆಗೂ ಸ್ವೀಡನ್ನಿನ್ನೊಡನೆ ಹಗೆತನ ಸಾಧಿಸಿ ಕೊನೆಗೆ ಶಾಂತಿ ಒಪ್ಪಂದ ಮಾಡಿಕೊಂಡ. ಇವನ ಕಾಲದಲ್ಲಿರಷ್ಯಕ್ಕೆ ಲಿವೋನಿಯ, ಎಸ್ಟೋನಿಯ, ಇಂಗರ್ಮನ್‍ಲೆಂಡ್ ಮತ್ತು ಕರೇಲಿಯದ ಭಾಗ ಸೇರಿಕೊಂಡವು. ಈತ 172ರಲ್ಲಿ ಕ್ಯಾಥರೀನ್ ಎಂಬುವಳನ್ನು ವಿವಾಹವಾದ.

ಒಂದನೆಯ ಪೀಟರ್‍ನ ಆಳ್ವಿಕೆರಷ್ಯದಲ್ಲಿ ಹುಟ್ಟು ಹಾಕಿದ ಸಾಮಾಜಿಕ, ಸಾಂಸ್ಥಿಕ ಮತ್ತು ಬೌದ್ಧಿಕ ಪ್ರವೃತ್ತಿಗಳು ಮುಂದಿನ ಎರಡು ಶತಮಾನಗಳ ಕಾಲರಷ್ಯದಲ್ಲಿ ಅತ್ಯಂತ ಪ್ರಭಾವ ಬೀರಿದವು. ಈತ ಅಧಿಕಾರಿಗಳ ನೇಮಕ ಮತ್ತು ಬಡ್ತಿಯಲ್ಲಿ ದಕ್ಷತೆಗೆ ಆದ್ಯತೆ ನೀಡಿದ. ಸರ್ಕಾರಿ ಕಚೇರಿಗಳಲ್ಲಿ ಸಮಯಪಾಲನೆ ಹಾಗೂ ದಾಖಲೆಗಳ ರಕ್ಷಣೆಯನ್ನು ಜಾರಿಗೆ ತಂದ. ತಪ್ಪುಮಾಡಿದ ತನ್ನ ಮಗನನ್ನೇ ಕಟುವಾಗಿ ಶಿಕ್ಷಿಸಿದ. ಇವನು ಜೈಲಿನಲ್ಲಿ ಅಸುನೀಗಿದ. ಪ್ರತಿಯೊಬ್ಬ ರಾಜ ತನ್ನ ಉತ್ತರಾಧಿಕಾರಿಯನ್ನು ಆಯ್ಕೆಮಾಡಬೇಕು, ಅದು ಆನುವಂಶಿಕವಾಗಿ ಬರಕೂಡದೆಂದು 1722ರಲ್ಲಿ ಆಜ್ಞೆಹೊರಡಿಸಿದ. ನೋಬಲ್ಲರು, ಜಮೀನ್ದಾರರು, ವರ್ತಕರು, ಪುರೋಹಿತರು-ಇವರೆಲ್ಲ ನಡೆಸಿಕೊಂಡು ಬರುತ್ತಿದ್ದ ಅನುವಂಶಿಕ ವೃತ್ತಿಗಳಿಂದ ಸೃಷ್ಟಿಯಾಗಿದ್ದ ಜಾತಿ ಪದ್ಧತಿಯನ್ನು ಬದಲಾಯಿಸಿದ. ಎಲ್ಲ ವರ್ಗದವರೂ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಿದ್ದ. ಚರ್ಚ್‍ನ ಜಗದ್ಗುರು 1700ರಲ್ಲಿ ಕಣ್ಮರೆಯಾದಾಗ ಆ ಸ್ಥಾನದಲ್ಲಿ ಯಾರನ್ನೂ ನೇಮಿಸಿದೆ ಅದನ್ನು ಒಂದು ಅಧಿಕಾರಿ ವ್ಯವಸ್ಥೆಯನ್ನಾಗಿ ಪರಿವರ್ತಿಸಿದ. ಇವನು ಜಾರಿಗೆ ತಂದ ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ 1917ರ ವರೆಗೂ ಮುಂದುವರೆಯಿತು. ಇವನ ಕಾಲದಲ್ಲಿ ಕಬ್ಬಿಣದ ಕೈಗಾರಿಕೆ, ಗಣಿಗಾರಿಕೆ, ನೌಕಾ ನಿರ್ಮಣಗಳು ಹೆಚ್ಚು ಪ್ರೋತ್ಸಾಹ ಪಡೆದವು. ಇವನ ಸಾಮ್ರಾಜ್ಯ ಕಪ್ಪು ಸಮುದ್ರ, ಬಾಲ್ಟಿಕ್ ಸಮುದ್ರ, ಮತ್ತು ಕ್ಯಾಸ್ಟಿಯನ್ ಸಮುದ್ರಗಳ ತೀರದವರೆಗೂ ವಿಸ್ತರಿಸಿತು. ಪೀಟರ್ ರಷ್ಯವನ್ನು ದೊಡ್ಡ ಶಕ್ತಿಯನ್ನಾಗಿ ಪರಿವರ್ತಿಸಿದ. 1703ರಲ್ಲಿ ಸೇಂಟ್ ಪೀಟರ್ಸ್ ಬರ್ಗ್ ಎಂಬ ಹೆಸರಿನ ಹೊಸ ರಾಜಧಾನಿಯನ್ನು ಸ್ಥಾಪಿಸಿದ. ವಿಜ್ಞಾನ ಮತ್ತು ನೌಕಾ ಅಕಾಡಮಿಗಳ ಸ್ಥಾಪನೆಗೆ ಕ್ರಮಕೈಗೊಂಡ. ಜನರು ಪಾಶ್ಚಾತ್ಯ ಮಾದರಿಯ ವೇಷ ಭೂಷಣಗಳನ್ನು ತೊಡಲು ಪ್ರೋತ್ಸಾಹಿಸಿದ. ಈ ಬಗೆಯ ಅನೇಕ ಕಾರಣಗಳಿಂದ ಪೀಟರ್ ಮಹಾಶಯನ ಆಳ್ವಿಕೆ ಕ್ರಾಂತಿಕಾರವಾಗಿದ್ದು ಅದು ಮುಂದಿನ ಎರಡು ಶತಮಾನಗಳವರೆಗೆ ರಷ್ಯದ ಮೇಲೆ ತನ್ನ ಪ್ರಭಾವ ಬೀರಿತು.

ಪೀಟರ್ ತನ್ನ 52ನೆಯ ವಯಸ್ಸಿನಲ್ಲಿ ಹಠಾತ್ತನೆ ನಿಧನನಾದ (1725). ಈತ ನಿಧನನಾಗುವ ವೇಳೆಗೆ ಕೆಲವು ಸಮಸ್ಯೆಗಳು ಪರಿಹಾರವಾಗದೆ ಹಾಗೆಯೇ ಉಳಿದಿದ್ದವು. ತನ್ನ ಉತ್ತರಾಧಿಕಾರಿಯ ಬಗ್ಗೆ ಇವನು ಯಾವುದೇ ನಿರ್ಧಾರ ಮಾಡದಿದ್ದುದು ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿತ್ತು. ಇದರಿಂದ ಉಂಟಾದ ಗೊಂದಲದಲ್ಲಿ ಐದನೆಯ ಐವಾನನ ಮಗಳು ಅನ್ನಾ 1730ರಲ್ಲಿ ಸಿಂಹಸನವೇರಿದಳು. ಈಕೆ ದುರ್ಬಲ ಆಡಳಿತಗಾರಳಾಗಿದ್ದು ಅಧಿಕಾರಿಗಳ ಪ್ರಭಾವ ಹೆಚ್ಚಿತು. ಅನಂತರ ಪೀಟರನ ಮಗಳು ಎಲಿಜûಬೆತ್ ಪೆಟ್ಟೊವ್ನ್ 1741 ರಿಂದ 1762ರ ವರೆಗೂ ಆಳಿದಳು. ಈಕೆರದ್ದಾಗಿದ್ದ ತನ್ನ ತಂದೆಯ ಕಾಲದ ಸೆನೆಟನ್ನು ಮರು ಸ್ಥಾಪಿಸಿದಳು. ಪೀಟರ್‍ನ ಅನೇಕ ಸುಧಾರಣೆಗಳು ಈ ಕಾಲದಲ್ಲಿ ಮರುಜೀವ ಪಡೆದವು. ಈಕೆ 1755ರಲ್ಲಿ ಮಾಸ್ಕೋ ವಿಶ್ವವಿದ್ಯಾಲಯ ಸ್ಥಾಪಿಸಿದಳು. ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಲಲಿತಕಲಾ ಅಕಾಡೆಮಿ ಸ್ಥಾಪಿಸಿದಳು. ಇವಳ ಕಾಲದಲ್ಲಿ ರಷ್ಯದ ವಾಣಿಜ್ಯ ವ್ಯವಹಾರ ಅಭಿವೃದ್ಧಿಯಾಯಿತು.

ಎರಡನೆಯ ಕ್ಯಾಥರಿನ್ (1762-96)ರಷ್ಯ ಕಂಡ ಪ್ರಸಿದ್ಧ ಚಕ್ರವರ್ತಿನಿ. ಈಕೆ ಜರ್ಮನ್ ರಾಜಮನೆತನದ ಮಗಳು. ರಷ್ಯದ ಮೂರನೆಯ ಪೀಟರ್‍ನನ್ನು ವಿವಾಹವಾಗಿದ್ದ ಈಕೆ ಸೆರೆಮನೆಯಲ್ಲಿ ಆತ ಕೊಲೆಯಾದ ಅನಂತರ 1762ರಲ್ಲಿ ಸಿಂಹಾಸನವೇರಿದಾಗ ಈಕೆಗೆ ಮೂವತ್ತ ಮೂರು ವರ್ಷಗಳು.

ಈಕೆ ವಿಸ್ತರಣಾವಾದಿಯಾಗಿದ್ದಳು. ಲಿಥುವೇನಿಯದ ಗ್ರಾಂಡ್ ಡಚಿಯು ರಷ್ಯದ ಆಳ್ವಿಕೆಗೆ ಒಳಪಟ್ಟಿತು. 1774ರ ಒಪ್ಪಂದದ ಮೇರೆಗೆ ಕಪ್ಪು ಸಮುದ್ರದ ಉತ್ತರ ತೀರ, 1783ರಲ್ಲಿ ಕ್ರಿಮಿಯ ಇವು ರಷ್ಯ ಸಾಮ್ರಾಜ್ಯಕ್ಕೆ ಸೇರಿದವು. ಯೂರಲ್ ಪರ್ವತಗಳಾಚೆಗೆ ಸ್ಟೆಪ್ಪಿ ಮೈದಾನಗಳಿಗೆ ರಷ್ಯದ ಸಾಮ್ರಾಜ್ಯ ವಿಸ್ತರಿಸಿತು. ಆಟೊಮನ್ ಸಾಮ್ರಜ್ಯದೊಂದಿಗೆ ಬಾಲ್ಕನ್ ರಾಜ್ಯಗಳ ವಿಷಯದಲ್ಲಿ ರಷ್ಯ ಸತತವಾಗಿ ಹೋರಾಡಿತು. ರಾಣೀಯ ಆಪ್ತ ವ್ಯಕ್ತಿಯಾಗಿದ್ದ ಜಿ.ಎ. ಪೊಟೊಂಕಿನ್ ಆಗಿನ ಸಾಮ್ರಾಜ್ಯದ ನೀತಿಯನ್ನುರೂಪಿಸುವಲ್ಲಿ ಪ್ರಮುಖನಾಗಿದ್ದನೆಂದು ತಿಳಿದುಬರುತ್ತದೆ. ಸೆನೆಟ್‍ಗೆ ಆಡಳಿತದ ಮೇಲುಸ್ತುವಾರಿಯನ್ನು ವಹಿಸಲಾಯಿತು. ಅದು ಮೇಲ್ಮನವಿಯ ಉಚ್ಚನ್ಯಾಯಲವೂ ಆಗಿತ್ತು.

ಎರಡನೆಯ ಕ್ಯಾಥರಿನ್ ಅಸಾಧಾರಣ ಭೌದ್ಧಿಕ ಮತ್ತು ದೈಹಿಕ ಸಾಮರ್ಥದ ವ್ಯಕ್ತಿಯಾಗಿದ್ದಳು. ಈಕೆ ಪೀಟರ್ ಮಹಾಶಯನಂತೆ ಆಡಳಿತದ ವಿವರಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಳು. ಜಮೀನುಗಳ ಹಿಡುವಳಿಗಳನ್ನು ಅಳತೆ ಮಾಡಿಸಿ ಸರಹದ್ದುಗಳನ್ನು ಗುರುತಿಸಲು ಏರ್ಪಾಡು ಮಾಡಿದಳು. ಊಳಿಗಮಾನ್ಯ ಜಮೀನ್ದಾರರಿಗೆ ತಮ್ಮ ಜಮೀನಿನ ಹಕ್ಕುಗಳ ಬಗ್ಗೆ ಪೂರ್ಣ ಒಡೆತನವನ್ನು ಕೊಟ್ಟಳು. ಸ್ಥಳೀಯ ಸಂಸ್ಥೆಗಳಿಗೆ 1785ರಲ್ಲಿ ಒಂದು ರಾಜಾಜ್ಞೆ ಹೊರಡಿಸುವ ಮೂಲಕ ಅಧಿಕಾರ ಕೊಟ್ಟಳು. ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಮೇಲೆದ್ದವು. ನಗರೀಕರಣಕ್ಕೆ ಪ್ರೋತ್ಸಾಹ ಒದಗಿತು.

ಕ್ಯಾಥರಿನ್ ರೈತಾಪಿಗಳ ಜೀತ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಕೆಲವೊಮ್ಮೆ ಜಮೀನ್ದಾರರು ತಮ್ಮ ಜಮೀನುಗಳೊಂದಿಗೆ ಜೀತದಾಳುಗಳನ್ನು ಮಾರುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ವ್ಯವಸಾಯದ ಅಭಿವೃದ್ಧಿ ಕುಂಠಿತವಾಗಿದ್ದುದಲ್ಲದೆ ರೈತ ಗುಲಾಮರ ಸಮಸ್ಯೆ ದೇಶವನ್ನೇ ಕಾಡುತ್ತಿತ್ತು. ಅಸಂತೃಪ್ತರಾದ ರೈತರು ಪೂರ್ವಯುರೋಪಿನಲ್ಲಿ 1773-74ರಲ್ಲಿ ದಂಗೆಯೆದ್ದರು. ಅವರನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು. ಈ ಸಮಸ್ಯೆ ರಷ್ಯದ ಕ್ರಾಂತಿಯ ವರೆಗೂ ಮುಂದುವರಿದಿದ್ದು ಅಲ್ಲಿನ ಚಕ್ರವರ್ತಿಗಳಿಗೆ ತಮ್ಮ ಪ್ರಾದೇಶಿಕ ವಿಸ್ತರಣೆಯ ಯುದ್ಧಗಳಿಗಾಗಿ ಹಣ ಮತ್ತು ಸಂಪನ್ಮೂಲ ಬೇಕಾಗಿತ್ತು. ವ್ಯವಸಾಯ ಪ್ರಧಾನ ದೇಶವಾಗಿದ್ದ ರಷ್ಯಕ್ಕೆ ಅದು ಒದಗುತ್ತಿದ್ದುದ್ದು ಹೆಚ್ಚಾಗಿ ಭೂಮಾಲೀಕರಿಂದ. ಆ ಕಾರಣವಾಗಿ ಅವರು ಜೀತದಾಳುಗಳ ಕಡೆಗೆ ಗಮನ ಕೊಟ್ಟು ಭೂಮಾಲೀಕರನ್ನು ಎದುರುಹಾಕಿಕೊಳ್ಳಲು ಮನಸ್ಸುಮಾಡಲಿಲ್ಲ.

ಕ್ಯಾಥರಿನ್ ಸ್ವತಃ ಲೇಖಕಿ, ಅನೇಕ ಕಥೆಗಳನ್ನು ನಾಟಕಗಳನ್ನೂ ಬರೆದಿದ್ದಾಳೆ. ಈಕೆಯ ಕಾಲದಲ್ಲಿ ಆಧುನಿಕ ರಷ್ಯನ್ ಸಾಹಿತ್ಯ ಬೆಳೆಯಿತು. ಆದರೆ ಈಕೆ ಸಾಹಿತಿಗಳ ಸ್ವಾತಂತ್ರ್ಯವನ್ನು ಸಹಿಸುತ್ತಿರಲಿಲ್ಲ. ಅಲೆಕ್ಸಾಂಡರ್ ರ್ಯಾಡಿಷ್ಜೇವ್ ಎಂಬ ಲೇಖಕ ಸೇಂಟ್‍ಪೀಟರ್ಸ್ ಬರ್ಗ್‍ನಿಂದ ಮಾಸ್ಕೋಗೆ ಪ್ರಯಾಣ ಎಂಬ ಕೃತಿಯನ್ನು ಬರೆದು 1790ರಲ್ಲಿ ಪ್ರಕಟಿಸಿದ. ಅದರಲ್ಲಿ ಜೀತದಾಳುಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದುದ್ದು ಮತ್ತು ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರದ ಬಗ್ಗೆ ಚಿತ್ರಣಗಳಿದ್ದವು. ಈ ಕೃತಿಯನ್ನು ಸಹಿಸದ ಚಕ್ರವರ್ತಿನಿ ಲೇಖಕನನ್ನು ಸೈಬೀರಿಯಾಕ್ಕೆ ಗಡೀಪಾರು ಮಾಡಿದಳು. ಆತರಷ್ಯದ ಬುದ್ದಿಜೀವಿಗಳ ಹುತಾತ್ಮನಾದ ಮೊದಲ ವ್ಯಕ್ತಿ. ಕ್ಯಾಥರಿನ್ ಸು. 1796ರಲ್ಲಿ ನಿಧನಳಾದಾಗ ಈಕೆಯ ಮಗ ಒಂದನೆಯ ಪಾಲ್ (1796-1801) ಸಿಂಹಾಸನಕ್ಕೆ ಬಂದರೂ ಅರಮನೆಯ ಒಳಸಂಚಿಗೆ ಬಲಿಯಾಗಿ ಕೊಲೆಗೀಡಾದ.

ಹತ್ತೊಂಬತ್ತನೆಯ ಶತಮಾನ (1801-1971) ಹಾಗೂ 20ನೆಯ ಶತಮಾನದ ಎರಡು ದಶಕಗಳು ರಷ್ಯದ ಪಾಲಿಗೆ ಅತ್ಯಂತ ಸ್ಥಿತ್ಯಂತರದ ಕಾಲವಾಗಿ ಪರಿಣಮಿಸಿತು. ಇದು ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳಲ್ಲಾಗುತ್ತಿದ್ದ ಕ್ಷಿಪ್ರ ಬೆಳವಣಿಗೆಗಳು ಆಧುನಿಕ ಅಭಿವೃದ್ಧಿಯ ಒತ್ತಡ ಹಾಗೂ ಆಂತರಿಕ ವರ್ಗ ಕ್ಷೋಭೆ ಇವುಗಳಿಗೆ ರಷ್ಯದ ಚಕ್ರವರ್ತಿಗಳು ತೋರಿಸಿದ ಪ್ರತಿಕ್ರಿಯೆ ಇತ್ಯಾದಿಗಳಿಂದ ಕೂಡಿದೆ.

1801 ರಿಂದ 1825ರ ವರೆಗೂ ಆಳಿದ ಒಂದನೆಯ ಅಲೆಕ್ಸಾಂಡರನು ನೆಪೋಲಿಯನ್ನನ ಆಕ್ರಮಣಗಳನ್ನು ಎದುರಿಸಬೇಕಾಯಿತು. ನೆಪೋಲಿಯನ್ನನು ರಷ್ಯದ ಪ್ರದೇಶಗಳನ್ನು ಗೆಲ್ಲುತ್ತಾ ಕೊನೆಗೆ ಮಾಸ್ಕೊನಗರವನ್ನು ವಶಪಡಿಸಿಕೊಂಡ. ಆದರೆ ರಷ್ಯದ ವಿಸ್ತಾರ ಭೂಭಾಗದಲ್ಲಿ ತನ್ನ ಹತೋಟಿ ಸಾಧಿಸುವುದಾಗಲಿ ಅಲ್ಲಿನ ಚಳಿಯನ್ನು ಅವನ ಸೈನ್ಯ ತಡೆಯುವುದಾಗಲಿ ಸಾಧ್ಯವಾಗದೆ ಹಿಂದಿರುಗಲು ನಿಶ್ಚಯಿಸಿದ. ಅಷ್ಟರಲ್ಲಿ ಸನ್ನದ್ಧವಾಗಿದ್ದರಷ್ಯದ ಸೈನ್ಯ ಫ್ರೆಂಚರ್ ಸೈನ್ಯವನ್ನು ಬೆನ್ನಟ್ಟಿ ಅಪಾರ ಹಾನಿಯುಂಟುಮಾಡಿತು. ಈ ಯುದ್ಧದಲ್ಲಿ ರಷ್ಯ ಸೈನಿಕ ವೆಚ್ಚ ಮಿತಿಮೀರಿಏರಿತು. ಅದರ ಆರ್ಥಿಕ ಸ್ಥಿರತೆಗೆ ಧಕ್ಕೆಯಾಯಿತು. ರಷ್ಯದ 1830ರ ವರೆಗೂ ತುರ್ಕಿಯೂ ಸೇರಿದಂತೆ ಪೂರ್ವ ಯುರೋಪಿನ ದೇಶಗಳೊಡನೆ ಸಣ್ಣಪುಟ್ಟ ಯುದ್ಧಗಳಲ್ಲಿ ಪಾಲ್ಗೊಳ್ಳಬೇಕಾಯಿತು. ಅಲೆಕ್ಸಾಂಡರ್ ಅನೇಕ ಸುಧಾರಣೆಗಳನ್ನು ತರುವ ಮನಸ್ಸುಳ್ಳವನಾಗಿದ್ದರೂ ಎಡಬಿಡದೆ ಯುದ್ಧಗಳು ದೇಶದ ಬಡತನ ಮತ್ತು ದೇಶದ ವಿಸ್ತಾರದಿಂದಾಗಿ ಸುಧಾರಣೆಗೆ ಅವಕಾಶವಾಗಲಿಲ್ಲ. ಅಲೆಕ್ಸಾಂಡರ್‍ನ ಅನಂತರ 1825ರಲ್ಲಿ ಅಧಿಕಾರಕ್ಕೆ ಬಂದ ಒಂದನೆಯ ನಿಕೋಲಸ್ ಅತ್ಯಂತ ನಿರ್ದಯಿ ಮತ್ತು ಯುದ್ಧಪ್ರಿಯ ಚಕ್ರವರ್ತಿಯಾಗಿದ್ದ. 1855ರ ವರೆಗೂ ಮೂರು ದಶಕಗಳಷ್ಟು ದೀರ್ಘಕಾಲ ಆಳಿದ ಇವನು ರಷ್ಯವನ್ನು ಮೂರು ಮುಖ್ಯ ಯುದ್ಧಗಳಲ್ಲಿ ತೊಡಗಿಸಿದ. ಅದಕ್ಕೂ ಮೊದಲು ತಾನು ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಅಂದರೆ 1825ರ ಡಿಸೆಂಬರ್‍ನಲ್ಲಿ ಸೇಂಟ್ ಪೀಟರ್ಸ್ ಬರ್ಗ್ ಸೈನಿಕರ ದಂಗೆಯನ್ನು ಎದುರಿಸಿ ಅಡಗಿಸಿದ್ದ ಈ ದಂಗೆಯನ್ನು ಹುಟ್ಟುಹಾಕಿದವರು ಮುಂದೆ ಡಿಸೆಂಬರಿಷ್ಟ್ ಎಂಬ ಹೆಸರಿನಿಂದ ಪರಿಚಿತರಾದರು. ಆಗಿನಿಂದ ನಿಷ್ಠುರನಾಗಿ ನಡೆದುಕೊಳ್ಳಲು ಪ್ರಾರಂಭಿಸಿದ ನಿಕೋಲಾಸ್ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಿದ. ಶಂಕಿತರ ಚಲನವಲನಗಳ ಬಗ್ಗೆ ನಿಗಾ ಇಡಲು ಗುಪ್ತಚಾರರನ್ನು ನೇಮಿಸಿದ. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ.

ಕಡಿಮೆ ವೇತನವನ್ನು ಪಡೆಯುತ್ತಿದ್ದ ಮತ್ತು ಸಾಕಷ್ಟು ಶಿಕ್ಷಣ ಪಡೆಯದ ಸರ್ಕಾರಿ ಸಿಬ್ಬಂದಿ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗತೊಡಗಿತು. ನಿಕೋಲಾಸ್ ಆಡಳಿತವನ್ನು ಕೇಂದ್ರೀಕೃತಗೊಳಿಸಿದಂತೆಲ್ಲ ಅದಕ್ಷತೆ ಮತ್ತು ನಿಧಾನ ದ್ರೋಹ ಹೆಚ್ಚಿತು. ಮಂತ್ರಿಮಂಡಲವನ್ನು ನಿರ್ಲಕ್ಷಿಸಿ ಅಧಿಕಾರವನ್ನೆಲ್ಲ ತನ್ನ ಕೈಗೆ ತೆಗೆದುಕೊಂಡು ರಾಜ ಪ್ರಜೆಗಳ ಕುಂದುಕೊರತೆಗಳ ಬಗ್ಗೆ ಕುರುಡಾದ ಕೈಗಾರಿಕೆಯಲ್ಲಿ ಗಣಿಗಾರಿಕೆಯೊಂದನ್ನುಳಿದು ಇತರರಂಗಗಳು ಹಿಂದೆಬಿದ್ದವು. ಬಟ್ಟೆ ಗಿರಣಿ ಉದ್ಯಮ ಸ್ವಲ್ಪ ಮಟ್ಟಿನ ಪ್ರಗತಿ ಸಾಧಿಸಿತು. 1851ರಲ್ಲಿ ಮೊದಲ ರೈಲುಮಾರ್ಗ ಸೇಂಟ್ ಪೀಟರ್ಸ್‍ಬರ್ಗ್ ಮತ್ತು ಮಾಸ್ಕೊಗಳ ನಡುವೆ ಪ್ರಾರಂಭವಾಯಿತು.

ಅಲೆಕ್ಸಾಂಡರ್ ಪುಷ್ಕಿನ್‍ನಂತಹ ಲೇಖಕರ ಬರಹೆಗಳನ್ನು ಅಧಿಕಾರಿಶಾಹಿ ಸಂಶಯದಿಂದ ನೊಡತೊಡಗಿತು. ಪೈಯಾಟರ್ ಎಂಬ ಲೇಖಕನ ಒಂದು ಪತ್ರದ ಕೆಲವು ಸಲುಗಳು ಕೆಳಕಂಡಂತಿವೆ `ರಷ್ಯ ಪಶ್ಚಿಮಕ್ಕೂ ಸೇರಿಲ್ಲ ಪೂರ್ವಕ್ಕೂ ಸೇರಿಲ್ಲ, ಪ್ರಪಂಚದಲ್ಲಿ ಏಕಾಂಗಿಯಾಗುಳಿದು ನಾವು ಪ್ರಪಂಚಕ್ಕೇನೂ ಕೊಡಲಿಲ್ಲ, ಇಮದು ನಾವು ಬೌದ್ಧಿಕ ಪ್ರಪಂಚದಲ್ಲಿ ಒಂದು ಶೂನ್ಯವಾಗಿ ಉಳಿದಿದ್ದೇವೆ. ಇದು ಅಂದಿನ ರಷ್ಯದ ವಾಸ್ತವ ಸ್ಥಿತಿಯಾಗಿದ್ದರೂ ಹೀಗೆ ಬರೆದವನನ್ನು ಚಕ್ರವರ್ತಿ ಹುಚ್ಚನೆಂದು ಕರೆದ. ಜನರ ಆಶೋತ್ತರಗಳನ್ನು ಪ್ರತಿನಿದಿಸುವ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಸಲಹಾ ಸಭೆಯನ್ನು ಪುನರ್‍ರಚಿಸುವ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಸಲಹಾ ಸಭೆಯನ್ನು ಪುನರ್ರಚಿಸಲು ಬುದ್ಧಿಜೀವಿಗಳು ಚಕ್ರವರ್ತಿಯನ್ನು ಕೋರಿದರು. ಆದರೆ ಈ ಕೋರಿಕೆಯನ್ನು ರಾಜ ತಿರಸ್ಕರಿಸಿದ.

ರಷ್ಯ ತನ್ನ ಸಾಮಥ್ರ್ಯವನ್ನು ಮೀರಿ ವಿಸ್ತರಿಸಿಕೊಳ್ಳುತ್ತಲೇ ಇತ್ತು. 1801ರಲ್ಲಿ ಕಾಕಸಸ್‍ನ ಜಾರ್ಜಿಯಾವನ್ನು 1840ರಲ್ಲಿ ಕಜûಕ್‍ಸ್ತಾನವನ್ನು ಮತ್ತು 1849ರಲ್ಲಿ ಅಲಾಸ್ಕ ಜಲಸಂಧಿಯವರೆಗಿನ ಪ್ರದೇಶವನ್ನು ಸೇರ್ಪಡೆ ಮಾಡಿಕೊಂಡಿತು. 1813ರಲ್ಲಿ ಪರ್ಷಿಯನ್ ಬಾಕು ಪರ್ಯಾಯ ದ್ವೀಪ ಸೇರಿದಂತೆ ಆಜರ್‍ಬೈಜಾನ್ ಪ್ರದೇಶವನ್ನು ರಷ್ಯಕ್ಕೆ ಒಪ್ಪಿಸಿತು. ನಿಕೋಲಸನು ಪ್ರಷ್ಯದ ರಾಜಕುಮಾರಿಯನ್ನು ವಿವಾಹವಾದುದರಿಂದ ಅದು ಮಹತ್ವದ ರಾಜಕೀಯ ಪರಿಣಾಮವನ್ನು ಉಂಟುಮಾಡಿತು. 1828ರಲ್ಲಿ ತುರ್ಕಿಯ ಮೇಲೆ ಆಕ್ರಮಣ ನಡೆಸಿ ಅದರ ರಾಜಧಾನಿಯವರೆಗೂ ಮುನ್ನುಗ್ಗಿ ಸುಲ್ತಾನನಿಂದ ಬಲಾತ್ಕಾರಕ್ಕೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಯಿತು. ತುರ್ಕಿ ಸಾಮ್ರಾಜ್ಯದ ಕೆಲವು ಪ್ರದೇಶಗಳ ಮೇಲೆ ರಷ್ಯದ ಪಾಲಕತ್ವವನ್ನು ಹೇರಲಾಯಿತು. ಗ್ರೀಸ್‍ಗೆ ಸ್ವಾತಂತ್ರ್ಯ ಕೊಡಲು ತುರ್ಕಿ ಒಪ್ಪಿತು. 1836ರಲ್ಲಿ ಪೋಲೆಂಡಿನ ದಂಗೆಯನ್ನು ಅಡಗಿಸಲಾಯಿತು. 1849ರಲ್ಲಿ ಆಸ್ಟ್ರೀಯದ ವಿರುದ್ಧ ಹಂಗೇರಿಯನ್ನರು ನಡೆಸಿದ ದಂಗೆಯನ್ನು ಹತ್ತಿಕ್ಕಲುರಷ್ಯ ಅವರಿಗೆ ನೆರವಾಯಿತು.

1854 ರಿಂದ 1856ರ ವರೆಗೂ ನಡೆಸಿದ ಕ್ರಿಮಿಯ ಯುದ್ಧರಷ್ಯ ಸಾಮ್ರಜ್ಯದ ಬಂಡವಾಳವನ್ನು ಬಯಲು ಮಾಡಿತು.ರಷ್ಯದ ಒತ್ತಡ ಮತ್ತು ಆಕ್ರಮಣ ನೀತಿಯನ್ನು ಸಹಿಸದ ತುರ್ಕಿ 1853ರಲ್ಲಿ ಅದರ ಮೇಲೆ ಯುದ್ಧ ಸರಿತು. ರಷ್ಯದ ಪ್ರಾದೇಶಿಕ ದಾಹವನ್ನು ತಡೆಯಲು 1854ರಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್‍ಗಳು 1855ರಲ್ಲಿ ಸಾರ್ಡೀನಿಯವೂ ರಷ್ಯದ ವಿರುದ್ಧ ತುರ್ಕಿಯ ಪರವಾಗಿ ಯುದ್ಧರಂಗ ಪ್ರವೇಶಿಸಿತು. ಕ್ರಿಮಿಯ ಪರ್ಯಾಯ ದ್ವೀಪದಲ್ಲಿ ನಡೆದ ಈ ಯುದ್ಧದಲ್ಲಿ ಸೋತ ರಷ್ಯ 1856ರಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿಹಾಕಿ ಆಕ್ರಮಿಸಿಕೊಂಡಿದ್ದ ಟರ್ಕಿಯ ಭೂಭಾಗವನ್ನು ತೆರವು ಮಾಡಬೇಕಾಯಿತು. ಕ್ರಿಮಿಯ ಯುದ್ಧದ ಅನಂತರ 1917ರವರೆಗೆ ರಷ್ಯವನ್ನು ಮೂವರು ಚಕ್ರವರ್ತಿಗಳು ಆಳಿದರು. ಎರಡನೆಯ ಅಲೆಕ್ಸಾಂಡರ್ (1855-18) ಮೂರನೆಯ ಅಲೆಕ್ಸಾಂಡರ್ (1881-94) ಮತ್ತು ಎರಡನೆಯ ನಿಕೋಲಾಸ (1894-1917)-ಇವರುಗಳ ಕಾಲದಲ್ಲಿರಷ್ಯ ಸಾಮಾಜಿಕವಾಗಿ ಅತೃಪ್ತಿ, ಹತಾಶೆ ಮತ್ತು ರೋಷಗಳ ಆಗರವಾಗಿದ್ದಿತು. ಆದರೆ ಸಾಮ್ರಾಜ್ಯವಾದಿಗಳೂ ವಿಸ್ತರಣಾದಾಹಿಗಳೂ ಮತ್ತು ನಿರಂಕುಶರೂ ಆಗಿದ್ದ ಈ ಚಕ್ರವರ್ತಿಗಳು ರಷ್ಯವನ್ನು ಯುದ್ಧದಿಂದ ಯುದ್ಧಕ್ಕೆ ಬಿಕ್ಕಟ್ಟಿನಿಂದ ಬಿಕ್ಕಟ್ಟಿಗೆ ದೂಡಿದರು. ದುರ್ಬಲವಾಗಿದ್ದ ಚೀನವನ್ನು ತನ್ನ ಅಧಿಕಾರದ ಕಕ್ಷೆಯಲ್ಲಿ ಸೇರಿಸಿಕೊಳ್ಳಬೇಕೆಂಬ ಮಹಾದಾಸೆಯಿಂದ ರಷ್ಯ ಹತ್ತೊಂಬತ್ತನೆಯ ಶತಮಾನದಲ್ಲಿ ನಿರಂತರವಾಗಿ ಪೆಸಿಫಿಕ್ ಸಾಗರದ ಕಡೆಗೆ ಅತಿಕ್ರಮಣ ಮಾಡತೊಡಗಿತು. ಇದರ ಪರಿಣಾಮವಾಗಿ ಮಂಚೂರಿಯದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿತು. 1860ರಲ್ಲಿ ಚೀನ ಮತ್ತು ರಷ್ಯಗಳ ನಡುವೆ ಒಪ್ಪಂದ ಏರ್ಪಟ್ಟು ಚೀನಕ್ಕೆ ರಷ್ಯ ಅಮೂರ್ ನದಿಯ ಉತ್ತರಭಾಗ ಮತ್ತು ಉಸುರೀ ನದಿಯ ಪೂರ್ವಭಾಗ ಬಿಟ್ಟು ಕೊಟ್ಟಿತು. 1864ರ ಹೊತ್ತಿಗೆ ಕಕೇಷಿಯನ್ನರನ್ನು ನಿಗ್ರಹಿಸಲಾಯಿತು. ರಷ್ಯ ಮತ್ತು ಅಮೆರಿಕಗಳು ಅಲಾಸ್ಕ ದ್ವೀಪಗಳ ಮೇಲೆ ಒಡೆತನ ಹೊಂದಿದವು. 1877ರಲ್ಲಿ ರಷ್ಯ ತುರ್ಕಿಯ ಮೇಲೆ ಯುದ್ಧ ಸಾರಿತು. ಕದನದ ತರುವಾಯ ತುರ್ಕಿಯ ಬಲ್ಗೇರಿಯ ರಾಜ್ಯವನ್ನುರಚಿಸಿ ಸ್ವತಂತ್ರಗೊಳಿಸಲು ಒಪ್ಪಿಕೊಂಡಿತು.

1890ರ ದಶಕದಲ್ಲಿ ಸರ್ಕಾರರಷ್ಯೀಕರಣ ನೀತಿಯನ್ನು ಅನುಸರಿಸಿತು. ರಷ್ಯ ವಶಪಡಿಸಿಕೊಂಡಿದ್ದ ವಿಸ್ತಾರ ಭೂಭಾಗಗಳ ಜನಸಮುದಾಯಗಳು ಜಾರ್ ಚಕ್ರವರ್ತಿಗೆ ನಿಷ್ಠೆ ತೋರಿಸಿದರಷ್ಟೇ ಸಾಲದು ಅವುರಷ್ಯೀಕರಣಗೊಳ್ಳಬೇಕೆಂಬುದು ಪ್ರಭುತ್ವದ ಇಚ್ಚೆಯಾಗಿತ್ತು. ಜರ್ಮನ್ ಮೂಲದ ಜನರು ಮತ್ತು ಬಾಲ್ಟಿಕ್ ಪ್ರದೇಶದ ಜನರಿಗೆ ಕಲಿಸುತ್ತಿದ್ದ ಪ್ರೌಢಶಾಲೆಗಳಲ್ಲಿ ರಷ್ಯನ್ ಭಾಷೆಯನ್ನು ಕಡ್ಡಾಯಗೊಳಿಸಲಾಯಿತು. ಈ ರಷ್ಯಿಕರನ ನೀತಿಯಿಂದ ರೊಚ್ಚಿಗೆದ್ದ ಫಿನ್‍ಲ್ಯಾಂಡಿನ ಭಯೋತ್ಪಾದಕರು ರಷ್ಯದ ಗವರ್ನರ್ ಜನರಲ್‍ನನ್ನು ಕೊಲೆ ಮಾಡಿದರು. ಆರ್ಮೇನಿಯನ್ನರು ತಮ್ಮ ಚರ್ಚ್ ಮತ್ತು ಶಾಲೆಗಳ ವ್ಯವಸ್ಥೆಯಲ್ಲಿ ರಷ್ಯ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸಿದರು. ಹಾಗೇ ಕ್ರೈಸ್ತ ಮತ್ತು ಮುಸ್ಲಿಂ ಗುರುಗಳು ತಮ್ಮ ತಮ್ಮ ಮತಕ್ಕೆ ಇತರೇ ಗುಂಪುಗಳನ್ನು ಸೆಳೆಯಲಾರಂಭಿಸಿದರು. ಯಹೂದಿಗಳಿಗೆ ವಿವಿಧ ರೀತಿಯಲ್ಲಿ ತೊಂದರೆಯಾಗುವಂತಹ ಕಾನೂನುಗಳನ್ನು ರಚಿಸಲಾಯಿತು.

ಜಪಾನ್‍ನೊಂದಿಗೆ ಯುದ್ಧ (1904-05) : 1896ರಲ್ಲಿ ಚೀನದೇಶ ರಷ್ಯಕ್ಕೆ ಪೆಸಿಫಿಕ್ ಬಂದರಾದ ವ್ಲಾಡಿವೋಸ್ಟಾಕ್‍ಗೆ ರೈಲುದಾರಿ ನಿರ್ಮಿಸಲು ಅನುಮತಿ ನೀಡಿತು. ಎರಡು ವರ್ಷಗಳ ತರುವಾಯ ರಷ್ಯ ಲಿಯೆಡುನ್ ಪರ್ಯಾಯ ದ್ವೀಪದಲ್ಲಿ ಡೈರನ್ ಮತ್ತು ಅರ್ಥರ್ ಎಂಬಲ್ಲಿ ಬಂದರುಗಳನ್ನು ನಿರ್ಮಿಸಿತು. ಮಂಚೂರಿಯ ಮತ್ತು ಕೊರಿಯಗಳಲ್ಲಿ ತನ್ನ ಹಿತಾಸಕ್ತಿಗಳನ್ನು ಬೆಳೆಸಿಕೊಂಡಿದ್ದ ಜಪಾನ್ 1894-95ರಲ್ಲಿ ಚೀನವನ್ನು ಸೋಲಿಸಿ ಅದರಿಂದ ಹೆಚ್ಚಿನ ಸವಲತ್ತುಗಳನ್ನು ಪಡೆದಿತ್ತು. ಅದು ಈ ವಲಯದಲ್ಲಿ ರಷ್ಯಕ್ಕೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಲು ಅದರ ಮೇಲೆ ಯುದ್ಧ ಸಾರಿತು. 1904-05ರಲ್ಲಿ ನಡೆದ ಯುದ್ಧದಲ್ಲಿ ರಷ್ಯ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಪೋಟ್ರ್ಸ್‍ಮೌತ್ ಕೌಲಿನ (1905) ಪ್ರಕಾರ ರಷ್ಯ ಕೊರಿಯದ ಮೇಲಿನ ತನ್ನ ವಶದಲ್ಲಿ ಮಂಚೂರಿಯ ರೈಲು ಮಾರ್ಗದ ಮೇಲಿನ ಅಧಿಕಾರಿಗಳನ್ನು ಜಪಾನಿಗೆ ಬಿಟ್ಟುಕೊಟ್ಟಿತು. ಸಾಕಲೀನ್ ದ್ವೀಪದ ದಕ್ಷಿಣ ಭಾಗಗಳು ಜಪಾನಿನ ವಶವಾದವು.

1860ರ ದಶಕದಲ್ಲಿ ರಷ್ಯದಲ್ಲಿ ಕ್ರಾಂತಿಕಾರಿ ಗುಂಪುಗಳು ಕಂಡುಬಂದವು. ಕಾರಣ ವ್ಯವಸಾಯದಲ್ಲಿ ಜೀತ ಪದ್ಧತಿಯ ಮುಂದುವರಿಕೆ, ವಿದ್ಯಾವಂತರಿಗೆ ಉದ್ಯೋಗಾವಕಾಶಗಳಕೊರತೆ, ನಿರಂಕುಶ ಪ್ರಭುತ್ವದಿಂದಾಗಿ ಬುದ್ಧಿಜೀವಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ, ವಿವಿಧ ಭಾಷೆ ಮತ್ತು ಸಂಸ್ಕøತಿಯನ್ನು ಮತ್ತು ಸಮುದಾಯಗಳ ಮೇಲೆ ಒತ್ತಾಯವಾಗಿ ರಷ್ಯನ್ ಸಂಸ್ಕøತಿಯನ್ನು ಮತ್ತು ಅಧಿಕಾರವನ್ನು ಹೇರುತ್ತಿದ್ದದ್ದು, ಶತಮಾನಗಳ ಕಾಲದಿಂದಲೂ ಆಳರಸರು ವ್ಯವಸಾಯ ಭೂಮಿಯನ್ನು ಶ್ರೀಮಂತ ಜಮೀನ್ದಾರನ ಕೈಗೊಪ್ಪಿಸಿ ದುಡಿಯುವ ಮಾರ್ಗವನ್ನು ಶೋಷಿಸಲು ಅವಕಾಶ ಕೊಟ್ಟಿದ್ದು, ವ್ಯವಸಾಯದ ಹಿಂದುಳಿದಿರುವಿಕೆಗೆ ಮತ್ತು ದೇಶದಲ್ಲಿನ ಜನರ ಬಡತನಕ್ಕೆ ಬಹಳಷ್ಟು ಕಾರಣವಾಗಿತ್ತು.

ಕ್ರಿಮಿಯ ಯುದ್ಧದಲ್ಲಿ ರಷ್ಯ ಸೋತ ಮೇಲೆ ಈ ದೋಷಗಳ ನಗ್ಗೆ ಗಮನ ಹರಿಸಿದ ಎರಡನೆಯ ಅಲೆಕ್ಸಾಂಡರ್ ಕೆಲವೊಂದು ಸುಧಾರಣೆಗಳನ್ನು ಕೈಗೊಳ್ಳಲು ಮುಂದಾಗಿ 1861ರಲ್ಲಿ ವ್ಯವಸಾಯ ಜೀತಪದ್ಧತಿಯನ್ನುರದ್ದುಪಡಿಸಲು ಒಂದು ಕಾರ್ಯಕ್ರಮ ಪ್ರಕಟಿಸಿದ. ಅದರಂತೆ ಜೀತದಾಳುಗಳನ್ನು ಗುಲಾಮ ಸ್ಥಾನದಿಂದ ಮುಕ್ತಗೊಳಿಸಲಾಯಿತು. ಆದರೆ ಅವರು ಭೂಮಾಲಿಕರಿಗೆ ಹೆಚ್ಚಿನ ಬೆಲೆ ನೀಡಿ ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಬೇಕಾಗಿತ್ತು. ರೈತರ ಫಲವತ್ತಾದ ಜಮೀನಿನ ಬದಲು ಅವರಿಗೆ ತುಂಡು ಜಮೀನುಗಳು ಮಾತ್ರ ದೊರಕಿದವು. ಒಟ್ಟಿನಲ್ಲಿ ಬಡರೈತದ ಜೀವನಮಟ್ಟ ಉತ್ತಮವಾಗಲಿಲ್ಲ.

ಬುದ್ಧಿಜೀವಿ ವರ್ಗಗಳು ಸಂವಿಧಾನ ಸಭೆ ರಚಿಸಲು ಒತ್ತಾಯಿಸಿದವು. 1866ರಲ್ಲಿ ಜಾóರ್ ಚಕ್ರವರ್ತಿಯ ಹತ್ಯೆಗಾಗಿ ಪ್ರಯತ್ನ ನಡೆಯಿತು. ಸರ್ಕಾರ ಸ್ವಲ್ಪ ಮಟ್ಟಿಗೆ ಎಚ್ಚೆತ್ತಿಕೊಂಡಿತ್ತು. 1870ರಲ್ಲಿ ಪ್ರಮುಖ ನಗರಗಳಲ್ಲಿ ಸೀಮಿತ ಚುನಾವಣೆಗಳಿಂದ ಆಯ್ಕೆಯಾಗುವ ಪುರಸಭೆಯನ್ನು ರಚಿಸಿತು. 1874ರಲ್ಲಿ ಸೈನ್ಯದಲ್ಲೂ ಸುಧಾರಣೆ ತರಲಾಯಿತು. ಗ್ರಾಮಗಳಲ್ಲಿ ಜೆಮ್‍ಸ್ಟೊಮ್ ಎಂಬ ಸಮಿತಿಯನ್ನು ರಚಿಸಿ ಜನರ ಕುಂದುಕೊರತೆಯನ್ನು ಕೇಳಲು ನಾಗರಿಕ ಸೌಕರ್ಯಗಳನ್ನು ಒದಗಿಸಲು ಒಂದು ವೇದಿಕೆ ಕಲ್ಪಿಸಲಾಯಿತು. ಆದರೆ ಪಾಶ್ಚಿಮಾತ್ಯ ಸಮಾಜವಾದಿ ವಿಚಾರಗಳಿಂದ ಪ್ರಭಾವಿತರಾಗಿದ್ದ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿದ್ದ ಯುವಕರು ಇದರಿಂದ ತೃಪ್ತರಾಗಲಿಲ್ಲ. 1873-74ರ ಹೊತ್ತಿಗೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತಂಡಗಳನ್ನು ಕಟ್ಟಿಕೊಂಡು ಸಂಘಟಿತರಾದರು. ಈ ತಂಡಗಳಲ್ಲಿ ಮಹಿಳೆಯರೂ ಇದ್ದರು. ಅವರು ಹಳ್ಳಿಗಳಿಗೆ ಹೋಗಿ ಜನರನ್ನು ಎಚ್ಚರಿಸತೊಡಗಿದರು. ಪ್ರಗತಿಪರ ಯುವಕರನ್ನು ಪೋಲಿಸರು ಬಂಧಿಸಿದರು. 13 ಮಾರ್ಚ್ 1881ರಂದು ಎರಡನೆಯ ಅಲೆಕ್ಸಾಂಡರ್ ಚಕ್ರವರ್ತಿಯ ಕೊಲೆಯಾಯಿತು. ಈ ಕೃತ್ಯಕ್ಕಾಗಿ ಐವರನ್ನು ಗಲ್ಲಿಗೇರಿಸಲಾಯಿತು.

ಮೂರನೆಯ ಅಲೆಕ್ಸಾಂಡರ್‍ನ ಒಳಾಡಳಿತ ಮಂತ್ರಿ ಡಿಮಿಟ್ರಿಟಾಲ್‍ಸ್ಟಾಯ್ ಪ್ರತಿಗಾಮಿ ಕ್ರಮಗಳನ್ನು ಕೈಗೊಂಡ. ಗ್ರಾಮಾಂತರ ಪ್ರದೇಶಗಳಲ್ಲಿ ರಚಿಸಿದ್ದ ಜೆಮ್‍ಸ್ಟೊಮ್ ಎಂಬ ಸಮಿತಿಗಳ ಅಧಿಕಾರಿಗಳನ್ನು ಇವನು ಕುಂಠಿತಗೊಳಿಸಿದ. 1889ರಲ್ಲಿ ಗ್ರಾಮಗಳ ವ್ಯವಹಾರಗಳನ್ನು ನಿರ್ವಹಿಸಲು ಸ್ಥಳೀಯ ಅಧಿಕಾರಿಗಳನ್ನು ನೇಮಿಸಲಾಯಿತು. ನ್ಯಾಯಾಧೀಶ ಹುದ್ದೆಗೆ ಇದ್ದ ಚುನಾವಣಾ ಪದ್ಧತಿಯನ್ನು ಕೈಬಿಡಲಾಯಿತು. ಸರ್ಕಾರಿ ನೌಕರರು ಬಡಜನರ ಬಗ್ಗೆ ಕೀಳು ಭಾವನೆ ಬೆಳೆಸಿಕೊಂಡರು. ಡಿಮಿಟ್ರಿಯ ದಮನಕಾರಿ ನೀತಿಯಿಂದಾಗಿ ಜನಸಾಮಾನ್ಯರು ಉರಿದೆದ್ದರು. ಎರಡನೆಯ ನಿಕೋಲಸ್ (1894-1917) ಅಧಿಕಾರಕ್ಕೆ ಬಂದ ಮೇಲೆ ಉಗ್ರಗಾಮಿ ಚಟುವಟಿಕೆಗಳು ತೀವ್ರರೂಪ ತಾಳಿದವು. ಸಲಹಾ ಸಮಿತಿರಚಿಸುವುದೂ ಸೇರಿದಂತೆ ಎಲ್ಲ ಸುಧಾರಣೆಗಳಿಗೂ ನಿಕೋಲಸ್ ತಣ್ಣೀರೆರಚಿದ. 1877ರಿಂದ 1905ರ ಅವಧಿಯಲ್ಲಿ ನಾಲ್ಕು ಕೋಟಿ ಹೆಕ್ಟೇರ್ ಭೂಮಿ ಭೂಒಡೆಯರಾದ ಗೇಣಿದಾರರಿಗೆ ಹಸ್ತಾಂತರವಾದರೂ ಅದರಲ್ಲಿ ಹೆಚ್ಚಿನದು ಗೇಣಿದಾರರು ಖರೀದಿಸಿದ್ದಾಗಿತ್ತು. ವ್ಯವಸಾಯ ಪದ್ಧತಿ ಮತ್ತು ಉತ್ಪಾದನೆಗಳೆರಡೂ ಹಿಂದೆ ಬಿದ್ದಿದ್ದವು. ಜನಸಂಖ್ಯೆ ಹೆಚ್ಚಳ; ಕಾರ್ಮಿಕರ ಅಧಿಕ ಲಭ್ಯತೆ ಉಂಟಾಗಿತ್ತು. ಇದು ಭೂಮಿಯ ಮರು ಹಂಚಿಕೆಗೆ ಬೇಡಿಕೆ ಮುಂದಿಡಲು ವಿವಿಧ ಕ್ರಾಂತಿಕಾರಿ ಸಂಘಟನೆಗಳಿಗೆ ಪ್ರೇರಣೆಯಾಯಿತು. ಕೈಗಾರಿಕಾ ಕ್ಷೇತ್ರದಲ್ಲಿ ಕಬ್ಬಿಣ ಮತ್ತು ಯುದ್ಧ ಸಾಮಾಗ್ರಿಗಳ ತಯಾರಿಕಾ ಘಟಕಗಳು ಅಭಿವೃದ್ಧಿಗೊಂಡರೂ ಕಾರ್ಮಿಕರು ಕನಿಷ್ಠ ಸಂಬಳದಲ್ಲಿ ಕೆಲಸ ಮಾಡಬೇಕಾಗಿತ್ತು. ಸರ್ಕಾರದ ಸುಂಕ ನೀತಿಯಿಂದಾಗಿ ಮತ್ತು ಲೋಹ ವಸ್ತುಗಳನ್ನು ಹೆಚ್ಚಿನ ಬೆಲೆಕೊಟ್ಟು ಸರ್ಕಾರ ಖರೀದಿಸುತ್ತಿದ್ದುದರಿಂದ ವರ್ತಕ ಸಮುದಾಯ ಶೀಘ್ರವಾಗಿ ಅನುಕೂಲ ಸ್ಥಿತಿಗೆ ಬಂದಿತು. ವರ್ತಕರು ಮತ್ತು ಕೈಗಾರಿಕೋದ್ಯಮಿಗಳು ನಿರಂಕುಶ ಪ್ರವೃತ್ತಿಯನ್ನು ಬೆಳೆಸಿಕೊಂಡರು. ಇದು ಜನಸಾಮಾನ್ಯರಲ್ಲಿ ನಗರಗಳ ಶ್ರೀಮಂತ ವರ್ಗದ ಬಗ್ಗೆ ಜಿಗುಪ್ಸೆ ಹುಟ್ಟಲು ಕಾರಣವಾಯಿತು.

ಹತ್ತೊಂಬತ್ತನೆಯ ಶತಮಾನದ ರಷ್ಯನ್ ಸಾಹಿತ್ಯ ಸಾಮ್ರಾಜ್ಯಶಾಹಿ ವಿರೋಧಿ ಭಾವನೆ ಜನರಲ್ಲಿ ಮನೆಮಾಡಲು ನೆರವು ನೀಡಿತು. ಟಾಲ್‍ಸ್ಟಾಯ್‍ದಾಸ್ತಾಯೆವ್‍ಸ್ಕಿ, ಅಲೆಕ್ಸಾಂಡರ್ ಬ್ಲಾಕ್ ಮತ್ತಿತರ ಆ ಕಾಲದ ಪ್ರಮುಖ ಸಾಹಿತಿಗಳು ತಮ್ಮ ಕೃತಿಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಬರೆದರು. ಜೀವನದ ಸಂಕಷ್ಟಗಳನ್ನು ಚಿತ್ರಿಸಿದರು. ಬುದ್ಧಿಜೀವಿಗಳ ವರ್ಗದಿಂದ ಅಸಂಖ್ಯಾತ ವೃತ್ತಿಪರ ಕ್ರಾಂತಿಕಾರರು ಉದಯಿಸಿದರು. ನಾಗರಿಕ ಹಕ್ಕುಗಳನ್ನು ನಿರ್ಬಂಧಿಸಿದ್ದರಿಂದ ಮತ್ತು ರಾಜಕೀಯ ಪಕ್ಷಗಳನ್ನು ನಿಷೇಧಿಸಿದ್ದರಿಂದ ಸಮಾಜವಾದಿಗಳು ಅನ್ಯ ಮಾರ್ಗಗಳ ಮೂಲಕ ಸಂಘಟಿತರಾಗುವುದು ಅಗತ್ಯವಾಯಿತು.

ಹತ್ತೊಂಬತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ಕಾರ್ಲ್‍ಮಾಕ್ರ್ಸ್ ಸಮಾಜವಾದಕ್ಕೆ ಒಂದು ತೀವ್ರ ಸ್ವರೂಪದ ಸಿದ್ಧಾಂತ ಸೇರಿಸಿ ಬಂಡವಾಳಶಾಹಿ ವ್ಯವಸ್ಥೆ ಕಿತ್ತುಹಾಕಿ ಕಾರ್ಮಿಕ ವರ್ಗದ ಪ್ರಭುತ್ವ ಸ್ಥಾಪಿಸುವುದರಿಂದ ಸರ್ವಜನರ ಕಲ್ಯಾಣ ಸಾಧ್ಯವೆಂದು ಪ್ರತಿಪಾದಿಸಿದ. ಮಿಗೆಲ್ಸ್ ಕೂಡ ತಮ್ಮದು ಮಾತ್ರ ವಾಸ್ತವ ಸಮಜವಾದವೆಂದು ಉಳಿದವರದು ಕಾಲ್ಪನಿಕ ಸಮಾಜವಾದವೆಂದು ಮಾಕ್ರ್ಸ್‍ನ ಸಮಜವಾದವನ್ನು ಪ್ರಚಾರಪಡಿಸಿದ. ಇವರ ಈ ಸಮತಾವಾದದ ಸಿದ್ಧಾಂತ ಶೋಷಿತ ವರ್ಗದ ನಾಯಕತ್ವ ಹೊಂದಿದ್ದ ಬುದ್ಧಿಜೀವಿಗಳಿಗೆ ಹೊಸ ಆಶಾಕಿರಣವಾಯಿತು.

ರಷ್ಯ ಇಂತಹ ಕ್ರಾಂತಿಗೆ ಹೇಳಿಮಾಡಿಸಿದಂತಹ ವೇದಿಕೆ ಒದಗಿಸಿತು ಅಲ್ಲಿನ ಪ್ರಭುತ್ವ ಜನಸಾಮಾನ್ಯರಿಂದ ದೂರವುಳಿದು ಅವರ ದ್ವೇಷಕ್ಕೆ ಪಕ್ಕಾಗಿತ್ತು. ವರ್ತಕರು, ಭೂ ಒಡೆಯರು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. 1902ರಿಂದ ಲೆನಿನ್ ಎಂದು ಹೆಸರಾದ ವ್ಲಾಡಿಮಿರ್ ಈಲಿಚ್ ಊಲ್ಯನೊವ್ ಮತ್ತು ಇತರರ ನೇತೃತ್ವದಲ್ಲಿ ಕ್ರಾಂತಿಕಾರಿ ಸಂಘಗಳು 1902ರಿಂದ ಹುಟ್ಟಿಕೊಂಡವು. 1901ರಲ್ಲಿ ಹುಟ್ಟಿದ ಸಮಾಜವಾದಿಕ್ರಾಂತಿ ಕಾರಿಗಳ ಸಂಸ್ಥೆಯ ಸದಸ್ಯರು ಗ್ರಾಮಮಟ್ಟದಲ್ಲಿ ಗುಪ್ತವಾಗಿ ಕಮ್ಯೂನಿಸಂ ಅಂದರೆ ಕಾರ್ಮಿಕರ ಭೂ ಒಡೆತನದ ಬಗ್ಗೆ ಪ್ರಚುರಪಡಿಸಿದರು. 1898ರಲ್ಲಿ ಸ್ಥಾಪಿತವಾಗಿದ್ದ ಸಮಾಜವಾದಿ ಪ್ರಜಾಪ್ರಭುತ್ವವಾದಿಗಳಲ್ಲಿ ಎರಡು ಗುಂಪು ಹುಟ್ಟಿಕೊಂಡಿತು. ಲೆನಿನ್ನನ ಗುಂಪಿನವರು ಬೊಲ್ಷೆವಿಕ್ ಪಕ್ಷದವರೆಂದೂ ಉಳಿದವರು ಮೆನ್ಷೆವಿಕ್ ಪಕ್ಷವೆಂದೂ ಕರೆದುಕೊಂಡರು. ಲೆನಿನ್ ರೈತರನ್ನು ಸಂಘಟಿಸುವಲ್ಲಿ ಮತ್ತು ಪಕ್ಷದಲ್ಲಿ ಶಿಸ್ತು ಸಂಯಮಗಳನ್ನು ಮೂಡಿಸುವಲ್ಲಿ ಕಾರ್ಯಶೀಲಾನಾದ.

ರಷ್ಯದ ಸೈನ್ಯಗಳು ಜಪಾನಿನ ಕೈಯಲ್ಲಿ ದಯನೀಯವಾಗಿ ಸೋತದ್ದು ಮತ್ತು ಬಾಲ್ಟಿಕ್ ಪ್ರದೇಶದಲ್ಲಿ ಅದರ ನೌಕಾದಳ ನಾಶವಾದದ್ದು ಸಾರ್ವಜನಿಕರು ಸರ್ಕಾರವನ್ನು ಹೀನಾಯವಾಗಿ ಕಾಣಲು ಅವಕಾಶ ಕಲ್ಪಿಸಿತು. ಜನರಲ್ಲಿ ಹುಟ್ಟಿದ ಅಸಮಾಧಾನ ಪ್ರತಿಭಟನಾರೂಪದಲ್ಲಿ ಸ್ಫೋಟಗೊಂಡಿತು. ಸರ್ಕಾರ ಘೋಷಿಸಿದ್ದ ಕಾರ್ಮಿಕ ಸಂಘಗಳ ಸಕ್ರಿಯ ಸದಸ್ಯನಾಗಿದ್ದ ಜಾರ್ಜಿ ಗಪಾನನ ನೇತೃತ್ವದಲ್ಲಿ 22 ಜನವರಿ 1905ರಂದು ಹೊರಟ ಒಂದು ದೊಡ್ಡ ಗುಂಪು ಚಳಿಗಾಲದ ಅರಮನೆಯ ಮುಂದಿನ ವೃತ್ತದತ್ತ ನಡೆಯಿತು. ಆಗ ನಡೆದ ಗೋಲಿಬಾರ್‍ನಲ್ಲಿ ನೂರಾರು ಜನ ಸತ್ತರು ಮತ್ತು ಗಾಯಗೊಂಡರು. ಮುಂದೆ ಮುಷ್ಕರಗಳು, ಪ್ರತಿಭಟನೆಗಳು, ಬೀದಿ ಹೋರಾಟಗಳು, ರೈತ ದಂಗೆಗಳು, ಸೈನ್ಯ ಮತ್ತು ನೌಕಾಪಡೆಗಳಲ್ಲಿ ದಂಗೆಗಳು ನಡೆಯತೊಡಗಿದವು. ವಿಶೇಷವಾಗಿರಷ್ಯನ್ನರು ಕಡಿಮೆ ಇರುವ ಪೋಲೆಂಡ್, ಲಾಟ್ವಿಯ, ಜಾರ್ಜಿಯ, ಉಕ್ರೇನ್ ಮತ್ತು ಆಜರ್‍ಬೈಜಾನ್‍ಗಳಲ್ಲಿ ಈ ಚಳವಳಿಗಳು ನಡೆದವು. ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಕಾರ್ಮಿಕರ ಸೋವಿಯತ್‍ರಚಿತವಾಯಿತು.

ಈ ಗಲಭೆಗಳಿಗೆ ಅಂಜಿದ ಚಕ್ರವರ್ತಿ `ಡೂಮಾ ಎಂಬ ರಾಷ್ಟ್ರೀಯ ಸಂಸತ್ತನ್ನುರಚಿಸಿದ. ಇದಕ್ಕೆ 1906ರಲ್ಲಿ ಚುನಾವಣೆ ನಡೆದು ಅದರಲ್ಲಿ ಎಡಪಂಥೀಯರು ಹೆಚ್ಚಾಗಿ ಚುನಾಯಿತರಾದರು. ಸಮಾಜವಾದಿ ಕ್ರಾಂತಿಕಾರಿಗಳು ಈ ಚುನಾವಣೆಯನ್ನು ಬಹಿಷ್ಕರಿಸಿದರು. ಡೂಮಾ ಶಿಫಾರಸು ಮಾಡಿದ ಭೂ ಸುಧಾರಣೆ ಕೈಗೊಳ್ಳಲು ಮತ್ತು ನಾಗರಿಕ ಹಕ್ಕುಗಳನ್ನು ಕೊಡಲು ಸರ್ಕಾರ ನಿರಾಕರಿಸಿತು. ಜಾರನು ಡೂಮಾವನ್ನು ವಿಸರ್ಜಿಸಿದ. 1907ರಲ್ಲಿ ಎರಡನೆಯ ಬಾರಿಗೆ ಡೂಮಾಕ್ಕೆ ಚುನಾವಣೆ ನಡೆಸಿದರೂ ಅನತಿ ಕಾಲದಲ್ಲೇ ಅದನ್ನೂ ವಿಸರ್ಜಿಸಲಾಯಿತು. ಮುಷ್ಕರಗಳನ್ನು ನಿಷೇಧಿಸಲಾಯಿತು. ಬುದ್ಧಿಜೀವಿಗಳು ಸರ್ಕಾರದಿಂದ ದೂರ ಸರಿದರು. ರಾಜನು ಹೊಗಳುಭಟ್ಟರಿಂದ ಸುತ್ತುವರಿದನು. ಗ್ರಿಗರಿ ರಾಸ್‍ಪುಟಿನ್ ಎಂಬಾತ ರಾಣಿಯ ಬೆಂಬಲದಿಂದ ಅತ್ಯಂತ ಪ್ರಭಾವಶಾಲಿಯಾದ.

ಒಂದನೆಯ ಮಹಾಯುದ್ಧ ಮತ್ತು 1917ರ ಮಹಾಕ್ರಾಂತಿ: ರಷ್ಯ ಜಪಾನಿಗೆ ಸೋತಮೇಲೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿತ್ತು. ತುರ್ಕಿ ಮತ್ತು ಜರ್ಮನ್ ರಾಷ್ಟ್ರಗಳನ್ನುಳಿದು ಇತರ ಐರೋಪ್ಯ ರಾಷ್ಟ್ರಗಳೊಂದಿಗೆ ಹೊಂದಾಣಿಕೆಯ ನೀತಿ ಅನುಸರಿಸುತ್ತಿತ್ತು. 1914ರಲ್ಲಿ ಪ್ರಾರಂಭವಾದ ಒಂದನೆಯ ಮಹಾಯುದ್ಧದಲ್ಲಿ ಮರ್ಜನಿ, ಆಸ್ಟ್ರಿಯ, ಹಂಗರಿ ಮತ್ತು ತುರ್ಕಿಗಳು ಶತ್ರುಪಕ್ಷದಲ್ಲೂ ಬ್ರಿಟನ್, ಫ್ರಾನ್ಸ್ ತರುವಾಯ ಅಮೆರಿಕ, ರಷ್ಯಗಳು ಸೇರಿದಂತೆ ಜಪಾನ್ ಇಟಲಿ ಆದಿಯಾಗಿ ಹಲವಾರು ರಾಷ್ಟ್ರಗಳು ಮಿತ್ರ ಪಕ್ಷದಲ್ಲೂ ನಿಂತು ಯುದ್ಧ ಮಾಡಿದವು. ರಷ್ಯ ಜರ್ಮನಿಯ ಆಕ್ರಮಣವನ್ನು ಎದುರಿಸಿ ಹೋರಾಡಬೇಕಾಯಿತು. ಈ ಯುದ್ಧದಲ್ಲಿ ರಷ್ಯ 1915ರ ಹೊತ್ತಿಗೆ ಹತ್ತುಲಕ್ಷ ಜನವನ್ನು ಕಳೆದುಕೊಳ್ಳಬೇಕಾಯಿತು.

ರಷ್ಯದ ಆರ್ಥಿಕ ಸ್ಥಿತಿ ದಿನೇ ದಿನೇ ಕುಸಿಯಿತು. ಆಹಾರ ವಸ್ತುಗಳಿಗೆ, ಸರಕುಸಾಮಗ್ರಿಗಳಿಗೆ ತೀವ್ರ ಅಭಾವವುಂಟಾಯಿತು. 1916ರ ಡಿಸೆಂಬರ್‍ನಲ್ಲಿ ರಾಸ್‍ಪುಟಿನ್ ಕೊಲೆಯಾದ. ಇದರಿಂದ ಚಕ್ರವರ್ತಿ ಅಧೀರಗೊಂಡ. 1917ರ ಜನವರಿಯಲ್ಲಿ ರಾಜಧಾನಿಯಲ್ಲಿ ಆಹಾರ ವಸ್ತುಗಳ ಸರಬರಾಜು ಬಹುತೇಕ ನಿಂತುಹೋಗಿ ಸೈನಿಕ ಶಿಬಿರಗಳಲ್ಲಿ ದಂಗೆಗಳಾದವು. ಸೈನಿಕರು ದಂಗೆಕೋರರ ಗುಂಪುಗಳನ್ನು ನಿಯಂತ್ರಿಸಲು ಹಿಂದೇಟು ಹಾಕಿದರು. ಚಕ್ರವರ್ತಿ ಮೂರನೆಯ ನಿಕೋಲಸ್ ಸೈನಿಕ ಶಿಬಿರದಿಂದ ಪೆಟ್ರೊಗ್ರಾಡ್‍ಗೆ ಹಿಂದಿರುಗುತ್ತಿದ್ದಾಗ ಅವನನ್ನು ತಡೆದು ಅವನಿಂದ ಪದತ್ಯಾಗ ಪತ್ರಪಡೆಯಲಾಯಿತು. ಸಾವಿರ ವರ್ಷಗಳ ರಷ್ಯದ ರಾಜಮನೆತನ ಹೀಗೆ ಕೊನೆಗೊಂಡಿತು. ರಾಜಕುಮಾರ ಗಾರ್ಗಿಯ ಪ್ರಧಾನ ಮಂತ್ರಿತ್ವದಲ್ಲಿ ಡೂಮಾ ಹಂಗಾಮಿ ಸರ್ಕಾರವನ್ನುರಚಿಸಿತು.

ಕ್ರಾಂತಿಕಾರಿಗಳಿಗೆ ಒಂದನೆಯ ಮಹಾಯುದ್ಧ ವರದಾನವಾಗಿ ಪರಿಣಮಿಸಿತು. ರಾಷ್ಟ್ರಾದ್ಯಂತ ಕಾರ್ಮಿಕ ಸಂಘಗಳುರಚಿತವಾದವು. ಲೆನಿನ್ 16 ಏಪ್ರಿಲ್ 1917ರಂದು ಸ್ವಿಟ್ಜರ್‍ಲೆಂಡಿನಿಂದ ಪೆಟ್ರೋಗ್ರಾಡ್‍ಗೆ ಬಂದ. ಇವನು ಹಂಗಾಮಿ ಸರ್ಕಾರವನ್ನು ಕಿತ್ತೊಗೆದು ಕಾರ್ಮಿಕ ಸಂಘಗಳ ಅಧಿಕಾರವನ್ನು ಕೈಗೆ ತೆಗೆದುಕೊಳ್ಳಬೇಕೆಂದು ಕರೆಕೊಟ್ಟ. ಇವನಿಗೆ ಮೆನ್ಷೆಮಿಕ್ ನಾಯಕ ಟ್ರಾಟ್‍ಸ್ಕಿ ಬೆಂಬಲಕೊಟ್ಟ. ಬೋಲ್ಷೆವಿಕ್ ಪಕ್ಷದ ಸದಸ್ಯರ ಸಂಖ್ಯೆ ಎರಡು ಲಕ್ಷಕ್ಕೆ ಏರಿತು.

ಜುಲೈನಲ್ಲಿ ನಡೆದ ಪ್ರದರ್ಶನಗಳಿಂದಾಗಿ ಟ್ರಾಟ್‍ಸ್ಕಿ ಬಂಧನಕ್ಕೊಳಗಾದರೆ ಲೆನಿನ್ ಫಿನ್‍ಲೆಂಡಿಗೆ ಬಂದು `ರಾಜ್ಯ ಮತ್ತು ಕ್ರಾಂತಿ' ಎಂಬ ಪುಸ್ತಕವನ್ನು ಬರೆದ. ಟ್ರಾಟ್‍ಸ್ಕಿಯನ್ನು ತರುವಾಯ ಬಿಡುಗಡೆ ಮಾಡಿದರೆ ಲೆನಿನ್ ಗುಟ್ಟಾಗಿ ಪೆಟ್ರೊಗ್ರಾಡಿಗೇ ಬಂದ. ಅಕ್ಟೋಬರ್ 23ರಂದು ಬೋಲ್ಷೆವಿಕ್ ಪಕ್ಷ ಸಶಸ್ತ್ರ ದಂಗೆ ನಡೆಸಲು ಕರೆಕೊಡುವ ನಿರ್ಣಯವನ್ನು ಅಂಗೀಕರಿಸಿತು. ನವೆಂಬರ್ 6ರಂದು ಬೋಲ್ಷೆವಿಕರು ಮುಖ್ಯ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡರು. ಸೈನ್ಯ ಹಂಗಾಮಿ ಸರ್ಕಾರದ ಆದೇಶಗಳನ್ನು ಪಾಲಿಸಲು ನಿರಾಕರಿಸಿತು. ನವೆಂಬರ್ 7ರಂದು ಬೋಲ್ಷೆವಿಕರು ಹಂಗಾಮಿ ಸರ್ಕಾರವನ್ನು ಪದಚ್ಯುತಗೊಳಿಸಿರುವುದಾಗಿ ಘೋಷಿಸಿದರು. ಕ್ರಾಂತಿರಕ್ತರಹಿತವಾಗಿ ನಡೆದು ಸಚಿವರುಗಳನ್ನೆಲ್ಲ ಬಂಧಿಸಲಾಯಿತು. ಜನತಾ ಸರ್ಕಾರಕ್ಕೆ ಲೆನಿನ್ ಅಧ್ಯಕ್ಷನಾಗಿ (ಪ್ರಧಾನಮಂತ್ರಿ) ನಿಯೋಜಿತನಾದ.

ಕಮ್ಯೂನಿಸ್ಟ್ ಸರ್ಕಾರ ಪ್ರಪಂಚದಲ್ಲೇ ಮೊದಲ ಬಾರಿಗೆರಷ್ಯದಲ್ಲಿ ಅಧಿಕಾರಕ್ಕೆ ಬಂದು ದಾಖಲೆ ಸ್ಥಾಪಿಸಿತು. ಅದು ಖಾಸಗಿ ಆಸ್ತಿಯನ್ನು ರದ್ದುಪಡಿಸಿತು. ಕೈಗಾರಿಕೆಗಳನ್ನು ಕಾರ್ಮಿಕರ ನಿಯಂತ್ರಣಕ್ಕೆ ನೀಡಿತು; ರಾಜ್ಯ ಮತ್ತು ಧರ್ಮಗಳನ್ನು ಬೇರ್ಪಡಿಸಿತು. ಸ್ತ್ರೀಪುರುಷರಿಗೆ ಸಮಾನ ಕಾನೂನುಬದ್ಧ ಸ್ಥಾನಮಾನಗಳನ್ನು ನೀಡಿತು. 1918ರ ಫೆಬ್ರವರಿಯಿಂದರಷ್ಯದ ಕಾಲಗಣನೆ ಹೋಗಿ ಪಾಶ್ಚಿಮಾತ್ಯ ಕ್ಯಾಲೆಂಡರ್ ಪದ್ಧತಿ ಜರಿಗೆ ಬಂದಿತು. ಹೀಗೆ 1917ರ ಮಹಾ ಕ್ರಾಂತಿಯಿಂದ ರಷ್ಯ ಹೊಸ ಜೀವನ ವಿಧಾನಕ್ಕೆ ಅಡಿಯಿಟ್ಟಿತು.

ಲೆನಿನ್ ಸರ್ಕಾರ ಒಂದನೆಯ ಮಹಾಯುದ್ಧದಿಂದ ಹಿಂದಕ್ಕೆ ಸರಿದು ಜರ್ಮನಿಯೊಂದಿಗೆ 3 ಮಾರ್ಚ್ 1918ರಂದು ಬ್ರೆಸ್ಟ್‍ಲಟಾಫ್ಸ್ಯೆನಲ್ಲಿ ಒಪ್ಪಂದವನ್ನು ಮಾಡಿಕೊಂಡಿತು. ಇದರಿಂದರಷ್ಯ ಪೂರ್ವ ಯೂರೋಪಿನ ಅನೇಕ ಪ್ರಾಂತ್ಯಗಳನ್ನು ಜರ್ಮನಿಗೆ ಬಿಟ್ಟುಕೊಡಬೇಕಾಯಿತು. ಆದರೆ ಅದಕ್ಕೆ ಕ್ರಾಂತಿಯನ್ನು ಭದ್ರಗೊಳಿಸಲು ಕಾಲಾವಕಾಶ ದೊರೆಯಿತು. ಮುಂದೆ ಯುದ್ಧದಲ್ಲಿ ಜರ್ಮನಿ ಸೋತಾಗ ಹೆಚ್ಚಿನ ಪ್ರದೇಶಗಳು ಹಿಂದಕ್ಕೆ ಬಂದವಾದರೂ ಪೋಲೆಂಡ್ ಸ್ವತಂತ್ರವಾಯಿತು.

ರಷ್ಯದಲ್ಲಿ ಕಮ್ಯುನಿಸ್ಟರು ಅಧಿಕಾರ ಹಿಡಿದ ಅನಂತರ ಕಮ್ಯೂನಿಸ್ಟ್ ತತ್ತ್ವಗಳನ್ನು ವಾಸ್ತವವಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಅವರ ಮೇಲೆ ಬಿತ್ತು. ಈ ಸಂಬಂಧವಾಗಿ ಕಮ್ಯೂನಿಷ್ಟರಲ್ಲೇ ತೀವ್ರವಾದಿಗಳು, ಮಧ್ಯಮವಾದಿಗಳು ಎಂಬ ಎರಡು ಗುಂಪುಗಳಿದ್ದವು. ಕೆಲವು ಪ್ರತಿ ಚಳವಳಿಗಳೂ ನಡೆದವು. ಇದನ್ನೆಲ್ಲ 1920ರ ಹೊತ್ತಿಗೆ ತಹಬದಿಗೆ ತರಲಾಯಿತು. ಬೋಲ್ಷೆವಿಕ್ ಪಕ್ಷ ಮೇಲುಗೈ ಪಡೆಯಿತು. ಪ್ರೋಲಿಟೇರಿಯನ್ ಅಥವಾ ಶ್ರಮಿಕರ ಸರ್ವಾಧಿಕಾರ ಬಿಟ್ಟು ಇನ್ನೇನೂ ಇರಕೂಡದೆಂಬ ನಿರ್ಧಾರಕ್ಕೆ ಬರಲಾಯಿತು. ಈ ಘರ್ಷಣೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಅಸುನೀಗಿದರೆ ಕಮ್ಯೂನಿಷ್ಟ್ ಆಡಳಿತದಿಂದ ದೂರವಿರಲು ಲಕ್ಷಾಂತರ ಜನ ವಲಸೆ ಹೋದರು.

ಲೆನಿನ್ 1922ರಲ್ಲಿ ಜೋಸೆಫ್ ಸ್ಟಾಲಿನ್‍ನನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ. ಈ ಹುದ್ದೆ ಕಮ್ಯೂನಿಸ್ಟ್ ಆಳ್ವಿಕೆಯುದ್ಧಕ್ಕೂ ಅತ್ಯಂತ ಪ್ರಭಾವಶಾಲಿ ಹುದ್ದೆಯಾಗಿದ್ದಿತು. ಪಾಲಿಟ್‍ಬ್ಯೂರೊ ಎಂಬ ನೀತಿನಿರೂಪಕ ಸಮಿತಿ ಮತ್ತು ರಾಜಕೀಯ ಸಂಘಟನಾ ಸಮಿತಿಗಳುರಚಿತವಾದವು. ಪಕ್ಷದಲ್ಲಿ ಕ್ರಮೇಣ ಪ್ರಜಾತಂತ್ರ ಲಕ್ಷಣಗಳು ಹೋಗಿ ವ್ಯಕ್ತಿಪ್ರಧಾನ ಆಡಳಿತ ಕಾರ್ಯರೂಪಕ್ಕೆ ಬಂದಿತು. ಲೆನಿನ್ ತನ್ನ ಕೊನೆಗಾಲದಲ್ಲಿ ಸ್ಟಾಲಿನ್‍ನನ್ನು ವಿರೋಧಿಸಿ ಟ್ರಾಟ್‍ಸ್ಕಿ ಮತ್ತು ಜಿನೊವೀವ್‍ರನ್ನು ಬೆಂಬಲಿಸಿದ. ಆದರೆ ಅಷ್ಟೊತ್ತಿಗೆ ಸ್ಟಾಲಿನ್ ಪ್ರಬಲನಗಿದ್ದ. ಲೆನಿನ್ 1924ರ ಜನವರಿಯಲ್ಲಿ ತೀರಿಕೊಂಡಾಗ ಸ್ಟಾಲಿನ್ ಕೈ ಮೇಲಾಯಿತು. ಟ್ರಾಟ್‍ಸ್ಕಿ ಮತ್ತು ಅವನ ಬೆಂಬಲಿಗರನ್ನು ಸ್ಟಾಲಿನ್ ಗಡೀಪಾರು ಮಾಡಿದ. 1929ರಲ್ಲಿ ಟ್ರಾಟ್‍ಸ್ಕಿ ದೇಶವನ್ನೇ ಬಿಡಬೇಕಾಯಿತು. 1940ರಲ್ಲಿ ಮೆಕ್ಸಿಕೊದಲ್ಲಿ ಟ್ರಾಟ್‍ಸ್ಕಿ ಕೊಲೆಗೀಡಾದ.

ಸ್ಟಾಲಿನ್ ಯುಗ: ಆದರ್ಶಯುತವಾಗಿ ಕಟ್ಟಿದ ಕಮ್ಯುನಿಸ್ಟ್ ಪಕ್ಷ ಅದರ ಆಳ್ವಿಕೆಯ ಪ್ರಾರಂಭದಲ್ಲೇ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿತು. ಅದಕ್ಕೆ ಕಾರಣ ಕ್ರಾಂತಿಯಲ್ಲಿ ಹೋರಾಡಿದ, ದುಡಿದ ನಾಯಕರು ಹಾಗೂ ಕಾರ್ಯಕರ್ತರಿಗೆ ಸಮಾನ ಪ್ರತಫಲ ದೊರಕಲಿಲ್ಲ. ಪಕ್ಷದ ಪ್ರಮುಖ ಹುದ್ದೆಯನ್ನು ಹಿಡಿದ ಸ್ಟಾಲಿನ್ ಎಲ್ಲರನ್ನೂ ಸಂಶಯದಿಂದ ನೋಡತೊಡಗಿದ. ಅನುಮಾನ ಬಂದ ಕೂಡಲೇ ಅವನು ಎಷ್ಟೇ ತ್ಯಾಗಮಯಿಯಾಗಿರಲಿ, ಜನಪ್ರಿಯನಾಗಿರಲಿ ಅಂತಹ ನಾಯಕನನ್ನು ನಿರ್ನಾಮ ಮಾಡತೊಡಗಿದ. ಇದರಿಂದ ಸರ್ಕಾರ ಮತ್ತು ಸಮಾಜದಲ್ಲಿ ಸದಾಬಿಗುವಿನ, ರಹಸ್ಯದ ಮತ್ತು ಕುಟಿಲತೆಯ ವಾತವರಣ ತಾಂಡವವಾಡತೊಡಗಿತು.

ಸರ್ಕಾರ 1921ರಲ್ಲಿ ಯೋಜನಾ ಆಯೋಗವನ್ನುರಚಿಸಿತು. 1927ರಲ್ಲಿ ಸೇರಿದ್ದ ಪಕ್ಷದ 15ನೆಯ ಅಧಿವೇಶನದಲ್ಲಿ ಪಂಚವಾರ್ಷಿಕ ಯೋಜನೆಯನ್ನುರೂಪಿಸಲು ನಿರ್ಣಯ ಕೈಗೊಳ್ಳಲಾಯಿತು. 1932ರವರೆಗೂ ನಡೆದ ಐದನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಬೃಹತ್ ಕೈಗಾರಿಕೆಗಳು ವ್ಯವಸಾಯದ ಉತ್ಪಾದನೆ ಮತ್ತು ಗ್ರಾಹಕರ ವಸ್ತುಗಳ ತಯಾರಿಕೆಗೆ ಅಭಿವೃದ್ಧಿಗೊಂಡರೂ ಸಮುದಾಯ ಬೇಸಾಯ ಪದ್ಧತಿಯಿಂದಾಗಿ ವ್ಯವಸಾಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಲಿಲ್ಲ. ಹೊಸ ಅಂಕಿಅಂಶಗಳನ್ನು ಅಧಿಕಾರಿಗಳು ಸಿದ್ಧಪಡಿಸತೊಡಗಿದರು. 1933ರಿಂದ ಪ್ರಾರಂಭವಾದ ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರಿಕೆ ಮತ್ತು ತಾಂತರಿಕ ಪ್ರಗತಿ ಗಮನಾರ್ಹವಾಗಿ ಮುನ್ನಡೆಯಿತು. ಆದರೆ ಕಮಯುನಿಸಂನ ಆಡಳಿತದ ಉದ್ದಕ್ಕೂ ಸವಾಲಾಗಿಯೇ ನಿಂತ ಸಮುದಾಯ ಬೇಸಾಯ ಪದ್ಧತಿಯ ಪ್ರಗತಿಯಲ್ಲಿ ಸಮಸ್ಯೆಗಳು ತಲೆದೋರಿದವು. ಸ್ಟಾಲಿನ್ ರೈತರಿಂದ ಒತ್ತಾಯಪೂರ್ವಕ ಅಗತ್ಯ ಪ್ರಮಾಣದ ದವಸಧಾನ್ಯಗಳನ್ನು ಸಂಗ್ರಹಿಸಲು ಆದೇಶಿಸಿದಾಗ ಇದನ್ನು ಪ್ರತಿಭಟಿಸಿದ ಲಕ್ಷಾಂತರ ರೈತರನ್ನು ಸೈಬೀರಿಯಕ್ಕೆ ಕಳುಹಿಸಲಾಯಿತು. ಉಳಿದ ರೈತರಲ್ಲಿ ಬೇಸಾಯದ ಬಗ್ಗೆ ಉತ್ಸಾಹ ಮತ್ತು ಶ್ರದ್ಧೆಗಳು ಕಡಿಮೆಯಾದವು.

1934ರಿಂದ 1941ರ ಅವಧಿಯಲ್ಲಿ ಲೇಖಕರು, ಅಧಿಕಾರಿಗಳು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಸ್ಟಾಲಿನ್ ಹತ್ತಿಕ್ಕಿದ ರೀತಿ ಸರ್ವಾಧಿಕಾರಿ ಇತಿಹಾಸದಲ್ಲಿ ಅಪರೂಪದ್ದು. ಅನೇಕರನ್ನು ಪಕ್ಷದ್ರೋಹ ಮತ್ತು ದೇಶದ್ರೋಹದಂತಹ ಆರೋಪ ಹೊರಿಸಿ ಗಡಿಪಾರು ಮಾಡಿದ. ಜಿನೊವಿವ್‍ನನ್ನು ಗಲ್ಲಿಗೇರಿಸಿದ. ಪಕ್ಷದ ಪಾಲಿಟ್‍ಬ್ಯೂರೊ ಸದಸ್ಯರನ್ನೂ ಶಿಕ್ಷಿಸದೆ ಬಿಡಲಿಲ್ಲ. ಈ ಹುಚ್ಚು ಆಡಳಿತದಿಂದ ಇಡೀ ಪ್ರಜಾಸಮುದಾಯ ನಿಸ್ತೇಜವಾಯಿತು. ತನ್ನದೇ ಆದ ಸಂವಿಧಾನವನ್ನು 1936ರಲ್ಲಿ ಜಾರಿಗೆ ತಂದು ಅದಕ್ಕೆ ಪ್ರಜಾಸತ್ತಾತ್ಮಕ ಸ್ವರೂಪ ಕೊಟ್ಟಿರುವುದಾಗಿ ಘೋಷಿಸಿದ. ವಂಶವಾಹಿ ತತ್ತ್ವವನ್ನು ಬೋಧಿಸಲು ತೊಂದರೆ ಒಡ್ಡಲಾಯಿತು. ನಿಕೋಲಾಸ್ ಎಂಬ ವಂಶವಿಜ್ಞಾನದ ವಿಜ್ಞಾನಿಯನ್ನು ಸೆರೆಗೆ ತಳ್ಳಲಾಯಿತು.

ಎರಡನೆಯ ಮಹಾಯುದ್ಧ ರಷ್ಯಕ್ಕೆ ಅತ್ಯಂತ ದುಬಾರಿಯಾಗಿ ಪರಿಣಮಿಸಿತು. ಪ್ರಾರಂಭದಲ್ಲಿ ಜರ್ಮನಿಯ ಹಿಟ್ಲರ್‍ನೊಡನೆ ಸಂಧಾನದಲ್ಲಿ ತೊಡಗಿದ ಅದು ಬಾಲ್ಟಿಕ್ ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನ ಸರಹದ್ದುಗಳನ್ನು ವಿಸ್ತರಿಸುವ ಉದ್ದೇಶ ಹೊಂದಿತ್ತು. ಜರ್ಮನಿಯೊಂದಿಗೆ 1939ರಲ್ಲಿ ಪರಸ್ಪರ ಅನಾಕ್ರಮಣ ಒಪ್ಪಂದವೊಂದನ್ನು ಮಾಡಿಕೊಂಡಿತು. ಆದರೆ 1941ರಲ್ಲಿ ಹಿಟ್ಲರ್ ರಷ್ಯದ ಗಡಿಗಳನ್ನು ಅತಿಕ್ರಮಿಸಿ ಒಳನುಗ್ಗಿದ. ಜರ್ಮನ್ ಸೈನ್ಯ ಹೆಚ್ಚಿನ ಪ್ರತಿರೋಧವಿಲ್ಲದೆ ರಾಜಧಾನಿ ಮಾಸ್ಕೋ ಮತ್ತು ಲೆನಿನ್‍ಗ್ರಾಡ್‍ಗಳ ಬಾಗಿಲಿಗೆ ಬಂದು ನಿಂತಿತು.ರಷ್ಯನ್ನರು ತಮ್ಮೆಲ್ಲ ಶಕ್ತಿ ಸಾಮಥ್ರ್ಯಗಳಿಂದ ಜರ್ಮನ್ನರನ್ನು ಎದುರಿಸಿದರು. ಆಗ ಚಳಿಗಾಲ ತೀವ್ರವಾಗಿದ್ದುದು ಜರ್ಮನರಿಗೆ ಪ್ರತಿಕೂಲವಾಯಿತು. 1944ರ ವರೆಗೂ ಹೋರಾಡಿ ಜರ್ಮನರನ್ನು ರಷ್ಯದ ನೆಲದಿಂದ ಹೊರದೂಡಿದರು. ಕೊನೆಗೆ ಹಿಟ್ಲರ್ ಸೋಲತೊಡಗಿದಾಗ ರಷ್ಯದ ಸೈನ್ಯ ಬರ್ಲಿನ್ ಪ್ರವೇಶಿಸಿತು.

ರಷ್ಯ ಈ ಯುದ್ಧದಲ್ಲಿ ಎಪ್ಪತ್ತೈದು ಲಕ್ಷ ಜನರನ್ನು ಕಳೆದುಕೊಂಡಿತು. ಲಕ್ಷಾಂತರ ಕೋಟಿರೂಬೆಲ್‍ಗಳ ಸ್ಥಿರಚರಾಸ್ತಿಗಳ ನಷ್ಟ ಸಂಭವಿಸಿತು. ಪಶ್ಚಿಮದಲ್ಲಿ ಜರ್ಮನಿ, ಪ್ರಷ್ಯ ಮತ್ತು ಬಲ್ಗೇರಿಯಗಳು ಸೋತದ್ದು ಮತ್ತು ಪೂರ್ವದಲ್ಲಿ ಜಪಾನ್ ಸೋತದ್ದು ರಷ್ಯ ತನ್ನ ಸರಹದ್ದುಗಳರಕ್ಷಣೆಗೆ ಅನುಕೂಲಕರವಾದ ಷರತ್ತುಗಳನ್ನು ವಿಧಿಸಲು ಸಾಧ್ಯವಾಯಿತು. ಜೀನ ಸಹ ದುರ್ಬಲವಾಗಿದ್ದರಿಂದ ಮಧ್ಯ ಏಷ್ಯ ಮತ್ತು ಮುಂಗೋಲಿಯಗಳಲ್ಲೂ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಂಡಿತು. ಪೂರ್ವಜರ್ಮನಿ, ಪೋಲೆಂಡ್, ಜೆಕೊಸ್ಲೊವಾಕೀಯ, ಆಲ್ಬೀನಿಯ, ರೊಮೇನಿಯ, ಯೂಗೋಸ್ಲಾವಿಯ, ಕೊರಿಯ ಮೊದಲಾದ ಕಡೆಗಳಲ್ಲಿ ಕಮ್ಯುನಿಸ್ಟ್ ಪ್ರಭುತ್ವ ಅಧಿಕಾರಕ್ಕೆ ಬರಲು ರಷ್ಯ ನೆರವು ನೀಡಿತು. ನೆರೆಯ ಬೃಹತ್ ರಾಷ್ಟ್ರ ಚೀನದಲ್ಲಿ ಕಮ್ಯುನಿಷ್ಟ್ ಕ್ರಾಂತಿಯಾಗಲು ಇದರ ಪಾತ್ರವೂ ಇದ್ದಿತು. ಎರಡನೆಯ ಮಹಾಯುದ್ಧದ ಅನಂತರದ ನಾಲ್ಕೈದು ವರ್ಷಗಳಲ್ಲಿ ಜಗತ್ತಿನ ರಾಜಕೀಯ ಭೂಪಟ ಬದಲಾಗಿ ಕಮ್ಯುನಿಷ್ಟ್ ಬಣ ಎಂಬ ದೊಡ್ಡ ರಾಷ್ಟ್ರಗಳ ಒಂದು ಸಮುದಾಯವೇ ರೂಪುಗೊಂಡಿತು. ಈ ಬಣಕ್ಕೆ ರಷ್ಯ, ಇನ್ನೊಂದು ಕಡೆ ಪ್ರಜಾಪ್ರಭುತ್ವ ಬಣಕ್ಕೆ ಅಮೆರಿಕ ನಾಯಕ ರಾಷ್ಟ್ರಗಳಾದವು. ರಷ್ಯ, ಅಮೆರಿಕ, ಚೀನ, ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್‍ಗಳು ವಿಶ್ವಸಂಸ್ಥೆಯ ಭದ್ರತಾ ಮಂಡಲಿಯಲ್ಲಿ ಸ್ಥಾನ ಪಡೆದವು.

1950ರಲ್ಲಿ ರಷ್ಯ ಮತ್ತು ಚೀನಗಳ ನಡುವೆ ಒಪ್ಪಂದ ಏರ್ಪಟ್ಟಿತು. ಸ್ಟಾಲಿನ್ 1952ರಲ್ಲಿ ನಿಧನನಾಗುವ ಹೊತ್ತಿಗೆ ರಷ್ಯ ಬೃಹತ್ ಕೈಗಾರಿಕೆ ಮತ್ತು ಸೈನಿಕ ಶಕ್ತಿಯಲ್ಲಿ ಅಮೆರಿಕಕ್ಕೆ ಹೆಗಲೆಣೆಯಾಗಿ ನಿಂತಿತು. ಯಥಾಪ್ರಕಾರ ಸರ್ಕಾರಕ್ಕೆ ರೈತ ಮತ್ತು ವ್ಯವಸಾಯ ಕೂಲಿಕಾರರ ಜೀವನಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಾಗಲಿಲ್ಲ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಗಳ ಅನುಪಸ್ಥಿತಿಯಲ್ಲಿ ಜನರು ಸದಾ ಬಂಧನಕ್ಕೊಳಗಾಗುವ ಅಥವಾ ಕೇಂದ್ರೀಕೃತ ಶಿಬಿರಗಳಿಗೆರವಾನೆಯಾಗುವ ಆತಂಕದಿಂದ ಕಾಲ ಕಳೆಯಬೇಕಾಯಿತು. ಬುದ್ಧಿಜೀವಿಗಳುರಚನಾತ್ಮಕ ಮತ್ತು ಮುಕ್ತ ಕೃತಿಗಳನ್ನುರಚಿಸುವ ಸ್ಥಿತಿ ಇರಲಿಲ್ಲ.

ಕ್ರುಶ್ಚೇವ್ ಯುಗ (1953-64): 1953ರ ಸೆಪ್ಟೆಂಬರ್‍ನಲ್ಲಿ ನಡೆದ ಕೇಂದ್ರ ಸಮಿತಿಯ ಅಧಿವೇಶನದಲ್ಲಿ ಸೆರ್ಗೆವಿಚ್ ಕ್ರುಶ್ಚೇವ್ ಪಕ್ಷದ ಪ್ರಥಮ ಕಾರ್ಯದರ್ಶಿಯಾಗಿ ಚುನಾಯಿತರಾದರು. ಇವರು ಸ್ಟಾಲಿನ್ನನ ಕಾಲದಲ್ಲಿ ಜನರು ಅನುಭವಿಸಿದ ಬಿಗಿ ವಾತಾವರಣವನ್ನು ಸ್ವಲ್ಪ ಸಡಿಲಗೊಳಿಸಿದರು. ವ್ಯವಸಾಯದ ಬಗ್ಗೆ ಇವರಿಗೆ ಆಳವಾದ ತಿಳುವಳಿಕೆಯಿದ್ದು ಅದರ ಪ್ರಗತಿಗೆ ಶ್ರಮಿಸಿದರು. ಸೈಬೀರಿಯ ಮತ್ತು ಕಜಾಕ್‍ಸ್ತಾನಗಳಲ್ಲಿ ವ್ಯವಸಾಯವನ್ನು ವಿಸ್ತರಿಸಲಾಯಿತು. ಅಧ್ಯಕ್ಷರಾಗಿದ್ದ ಮಾಲ್ಯೆನ್‍ಕಾಫೆರಿಗೆ ಕ್ರುಶ್ಚೇವ್ ಜೊತೆ ಭಿನ್ನಾಭಿಪ್ರಾಯವಿದ್ದುದರಿಂದ 1955ರಲ್ಲಿ ಕ್ರುಶ್ಚೇವ್ ಮತ್ತು ಅಮೆರಿಕದ ಅಧ್ಯಕ್ಷರು ಜಿನೀವದಲ್ಲಿ ಸೇರಿ ವಿಶ್ವಶಾಂತಿಗಾಗಿ ಮಾತುಕತೆ ನಡೆಸಿದರು. ಕ್ರುಶ್ಚೇವ್ ಮತ್ತು ಬುಲ್ಗಾನಿನ್ ಇಬ್ಬರೂ 1955ರಲ್ಲಿ ಭಾರತಕ್ಕೆ ಭೇಟಿ ನೀಡಿದರು. ಭಾರತರಷ್ಯದ ಆಪ್ತ ರಾಷ್ಟ್ರವಾಯಿತು. ಮಧ್ಯಪ್ರಾಚ್ಯದ ಅರಬ್‍ರಾಷ್ಟ್ರಗಳೊಂದಿಗೂರಷ್ಯ ಒಳ್ಳೆಯ ಸಂಬಂಧಗಳನ್ನಿಟ್ಟುಕೊಂಡಿತು. ಬಂಡವಾಳಶಾಹಿ ರಾಷ್ಟ್ರಗಳೊಂದಿಗೆ ಶಾಂತಿಯ ಸಹಬಾಳ್ವೆಗೆ ಒತ್ತು ನೀಡಿದರು.

1956ರಲ್ಲಿ ಪಕ್ಷದ 20ನೆಯ ಅಧಿವೇಶನವನ್ನು ಕರೆದು ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತರುವುದಾಗಿ ಭರವಸೆ ಕೊಟ್ಟರು. 1958ರ ಮಾರ್ಚ್ ತಿಂಗಳಲ್ಲಿ ಪ್ರಧಾನ ಕಾರ್ಯದರ್ಶಿ ಜತೆಗೆ ಕ್ರುಶ್ಚೇವ್ ರಾಷ್ಟ್ರದ ಪ್ರಧಾನಿಯೂ ಆದರು. 1957ರಲ್ಲಿರಷ್ಯ ಯಶಸ್ವಿಯಾಗಿ ಖಂಡಾಂತರ (ಬ್ಯಾಲಸ್ಟಿಕ್) ಕ್ಷಿಪಣಿಗಳನ್ನು ಉಡಾಯಿಸಿತು. ಅದೇ ವರ್ಷ ಉಪಗ್ರಹ ಸ್ಫುಟ್ನಿಕ್ 1 ಮತ್ತು ಸ್ಫುಟ್ನಿಕ್ 11 ಅನ್ನು ಅಂತರಿಕ್ಷಕ್ಕೆ ಹಾರಿಸಿತು. ರಷ್ಯದ ಪ್ರಭಾವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಿತು. 1959ರಲ್ಲಿ ಕ್ರುಶ್ಚೇವ್ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ನೀಡಿದರು. 1961ರಲ್ಲಿ ಬರ್ಲಿನ್ ಗೋಡೆ ನಿರ್ಮಿಸಲಾಯಿತು. 1962ರಲ್ಲಿ ಉಂಟಾದ ಕ್ಯೂಬ ಬಿಕ್ಕಟ್ಟಿನಿಂದಾಗಿ ಅಮೆರಿಕ ಮತ್ತು ರಷ್ಯಗಳ ನಡುವಿನ ಸಂಬಂಧಗಳು ಸೂಕ್ಷ್ಮವಾದವು. 1962ರಲ್ಲಿ ಚೀನ ಭಾರತದ ಗಡಿಗಳನ್ನು ಅತಿಕ್ರಮಿಸಿದಾಗ ರಷ್ಯ ಚೀನಕ್ಕೆ ಬೆಂಬಲ ನೀಡಲಿಲ್ಲ. ಚೀನಕ್ಕೆ ಅಣುಶಕ್ತಿ ತಂತ್ರಜ್ಞಾನವನ್ನು ಕೊಡಲು ನಿರಾಕರಿಸಿತು. 1963ರಲ್ಲಿ ಅಮೆರಿಕ ಮತ್ತು ಇಂಗ್ಲೆಂಡಿನೊಂದಿಗೆ ಅಣ್ವಸ್ತ್ರಗಳ ಪರೀಕ್ಷೆ ನಿರ್ಬಂಧ ಒಪ್ಪಂದ ಮಾಡಿಕೊಳ್ಳಲಾಯಿತು. ಪಕ್ಷದೊಳಗಿನ ಒತ್ತಡ ಹೆಚ್ಚಾಗಿ 1964ರಲ್ಲಿ ನಿವೃತ್ತಿಯನ್ನು ಘೋಷಿಸಿ ಅಧಿಕಾರದಿಂದ ನಿರ್ಗಮಿಸಿದರು. ಸ್ಟಾಲಿನ್ನನ ಉಕ್ಕಿನ ಕವಚದಿಂದ ರಷ್ಯವನ್ನು ಹೊರತಂದು ಅದು ಜಗತ್ತಿನೊಂದಿಗೆ ಬೆರೆಯುವಂತೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡುವಂತೆ ಮಾಡಿದ ಕೀರ್ತಿ ಕ್ರುಶ್ಚೇವ್‍ಗೆ ಸಲ್ಲುತ್ತದೆ.

ಬ್ರೆeóÉ್ನೀವ್ ಕಾಲ (1964-82): ಕ್ರುಶ್ನೇವ್‍ರ ಅನಂತರ ಲಿಯೊನಿಡ್ ಬ್ರೆeóÉ್ನೀವ್ ಪ್ರಥಮ ಕಾರ್ಯದರ್ಶಿಯಾಗಿ ಚುನಾಯಿತರಾದರು. ಅಲೆಕ್ಸಿಕೊಸಿಗಿನ್‍ರನ್ನು ಸಾಮೂಹಿಕ ನಾಯಕತ್ವಕ್ಕೆ ಒತ್ತು ಬಂದಿತು. ಕಮ್ಯುನಿಸ್ಟ್ ಪಕ್ಷವನ್ನು ಪ್ರೋಲಿಟೇರಿಯಟ್ ಪಕ್ಷ ಅನ್ನುವ ಬದಲು ಸಮಗ್ರ ಜನತಾ ಪಕ್ಷವೆಂದು ಪರಿಗಣಿಸಲಾಯಿತು. ಆದರೆ ಬ್ರೆeóÉ್ನೀವ್ ಬಹುಬೇಗ ಪ್ರಭಾವೀ ವ್ಯಕ್ತಿಯಾದರು. ಪಾಡ್ಗಾರ್ನಿಯವರನ್ನು ಸುಪ್ರೀಂ ಸೋವಿಯತ್‍ನ ಅಧ್ಯಕ್ಷರನ್ನಾಗಿ ಮಾಡಲಾಯಿತು. ಪ್ರಥಮ ಕಾರ್ಯದರ್ಶಿಯ ಹುದ್ದೆಯನ್ನು ಪ್ರಧಾನ ಕಾರ್ಯದರ್ಶಿಯೆಂದು ಬದಲಾಯಿಸಲಾಯಿತು.

ಕೈಗಾರಿಕಾ ವಲಯದಲ್ಲಿ ಯುದ್ಧ ಶಸ್ತ್ರಾಸ್ತ್ರಗಳು ಮತ್ತು ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಗಳು ಅಭಿವೃದ್ಧಿಗೆ ಬಂದರೆ ಗ್ರಾಹಕರ ಸರಕುಗಳ ಉತ್ಪಾದನೆಯಲ್ಲಿ ಅಷ್ಟು ಪ್ರಗತಿಯಾಗಲಿಲ್ಲ. ವ್ಯವಸಾಯದ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಂಡರೂ ನಿರೀಕ್ಷಿತ ಗುರಿ ಸಾಧಿಸಲಾಗಲಿಲ್ಲ. ಕ್ರುಶ್ಚೇವ್ ಕಾಲದಲ್ಲಿ ತಂದಿದ್ದ ಸುಧಾರಣೆಗಳನ್ನು ಬಹುಮಟ್ಟಿಗೆ ಕೈಬಿಡಲಾಯಿತು. ಅಧಿಕಾರಶಾಹಿ ಯಾವುದೇ ಮೂಲಭೂತ ಬದಲಾವಣೆಗಳಿಗೆ ಮುಂದಾಗುತ್ತಿರಲಿಲ್ಲ. ಒಟ್ಟಿನಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದಾಗರಷ್ಯದ ಆರ್ಥಿಕ ಪ್ರಗತಿ ಹಿಂದೆಬಿದ್ದಿತು. ಪಂಚವಾರ್ಷಿಕ ಯೋಜನೆಗಳ ಮೂಲಕ ಕ್ರುಶ್ಚೇವ್ 1970ರ ಹೊತ್ತಿಗೆ ಸಾಧಿಸಬೇಕೆಂದು ಹಾಕಿಕೊಂಡಿದ್ದ ಗುರಿಯನ್ನು ಸಾಧಿಸಲಾಗಲಿಲ್ಲ.

ಸಾಹಿತ್ಯ, ಕಲೆ, ಶಿಲ್ಪ-ಇಂಥ ಸೃಜನಶೀಲತೆಯ ಮೇಲೆ ಸರ್ಕಾರದ ಒತ್ತಡ ಮುಂದುವರಿಯಿತು. ಇವೆಲ್ಲ ಮುಖ್ಯವಾಗಿ ದೇಶದ ಸಾಮಾಜಿಕ ಸಂದೇಶವನ್ನು ಸಾರಬೇಕೆಂದು ಸರ್ಕಾರದ ನಿಲುವಾಗಿತ್ತು. ಕ್ರುಶ್ಚೇವ್ ಕೇಂದ್ರೀಕೃತ ಶಿಬಿರದ ತೀವ್ರ ಅನುಭವಗಳನ್ನು ಸಾಹಿತ್ಯದಲ್ಲಿ ಚಿತ್ರಿಸಲು ಅವಕಾಶ ಕೊಟ್ಟಿದ್ದರೆ ಅವನ ಉತ್ತರಾಧಿಕಾರಿಗಳು ಅದನ್ನು ನಿರಾಕರಿಸಿದರು. ಹೊರದೇಶಗಳಲ್ಲಿ ಬೇರೆ ಹೆಸರಿನಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದ ಲೇಖಕರನ್ನು ಬಂಧಿಸಿದರು. ಕೆಲವರನ್ನು ಶ್ರಮಿಕ ಶಿಬಿರಗಳಿಗೆ ಒತ್ತಾಯದಿಂದ ಸೇರಿಸಲಾಯಿತು. ನೊಬೆಲ್ ಪ್ರಶಸ್ತಿ ವಿಜೇತ ಸೋಲ್ಜೆನಿಟ್ಸನ್‍ನನ್ನು ಪೀಡಿಸಿ ಅವನ ಕೃತಿಗಳನ್ನು ನಿಷೇಧಿಸಿದರು. 1970ರಲ್ಲಿ ಬಂಧನದಲ್ಲಿಟ್ಟಿದ್ದ ಲೇಖಕರನ್ನು ಬಿಡುಗಡೆ ಮಾಡುವಂತೆ 63 ಮಂದಿ ಜನಪ್ರಿಯ ಲೇಖಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸ್ಟಾಲಿನ್ ಕಾಲದಲ್ಲಿ ಸಕ್ರಿಯರಾಗಿದ್ದು ಕ್ರುಶ್ಚೇವ್ ಕಾಲದಲ್ಲಿ ಹಿನ್ನೆಲೆಗೆ ಸರಿದಿದ್ದವರಿಗೆ ಮತ್ತೆ ಸ್ಥಾನಮಾನಗಳನ್ನು ಕೊಡುವುದರ ವಿರುದ್ಧ ಪ್ರತಿಭಟಿಸಿ ಸಾರ್ವಜನಿಕ ಜೀವನದ 25 ಜನ ಗೌರವಾನ್ವಿತರು ಬ್ರೆeóÉ್ನೀವ್‍ಗೆ ಪತ್ರ ಬರೆದರು. ನಾಗರಿಕ ಹಕ್ಕುಗಳನ್ನು ಸ್ಥಾಪಿಸುವುದು, ಹೆಚ್ಚಿನ ಬೌದ್ಧಿಕ ಸ್ವಾತಂತ್ರ್ಯ ನೀಡುವುದು ಮತ್ತು ಸಂಘ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕಗೊಳಿಸಲು ವಿಚಾರವಂತರು ಬೇಡಿಕೆ ಸಲ್ಲಿಸುತ್ತಿದ್ದರು. ಒಟ್ಟಿನಲ್ಲಿ ಕಮ್ಯುನಿಸ್ಟ್ ಕ್ರಾಂತಿ ನಡೆದು ಐವತ್ತು ವರ್ಷಗಳು ಕಳೆದರೂ ರಷ್ಯ ಈ ವ್ಯವಸ್ಥೆಗೆ ಮನಃಪೂರ್ವಕವಾಗಿ ತೆರೆದುಕೊಳ್ಳಲಿಲ್ಲ.

ಬ್ರೆeóÉ್ನೀವ್ ಮತ್ತು ಕೊಸಿಗಿನ್‍ರ ಕಾಲದಲ್ಲಿ ಚೀನ ಮತ್ತು ರಷ್ಯಗಳ ನಡುವೆ ಅನೇಕ ಕಾರಣಗಳಿಂದಾಗಿ ವಿರಸ ಹೆಚ್ಚಿತು. ಸರಹದ್ದಿನ ವಿವಾದದಿಂದಾಗಿ 1969ರ ಮಾರ್ಚ್‍ನಲ್ಲಿ ಉಸ್ಸುರೀ ನದಿ ದಂಡೆಯ ಉದ್ದಕ್ಕೂ ರಕ್ತಪಾತದ ಘರ್ಷಣೆಗಳಾದವು. ಆಗಸ್ಟ್‍ನಲ್ಲಿ ಸಿಂಕಿಯಾಂಗ್ ಪ್ರದೇಶದಲ್ಲೂ ಘರ್ಷಣೆಗಳಾದವು. ಚೀನದ ಪ್ರಭಾವವನ್ನು ಉತ್ತರ ಕೊರಿಯದಲ್ಲಿ ತಗ್ಗಿಸಲು ಆ ದೇಶಕ್ಕೆರಷ್ಯ ನೆರವು ನೀಡತೊಡಗಿತು. ಇದರಿಂದ ಸಮಗ್ರ ಕಮ್ಯುನಿಸ್ಟ್ ಪ್ರಪಂಚ ಏಕಶಿಲೆಯಂತೆ ಉಳಿಯದೆ ಅದರಲ್ಲಿ ಬಿರುಕು ಕಾಣಿಸಿಕೊಂಡಿತು. ರೊಮೇನಿಯ ಗಣರಾಜ್ಯ ಸ್ವತಂತ್ರ ನಿಲುವು ತಳೆಯಲು ತೊಡಗಿದಾಗ ಮತ್ತು ಚೀನದೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸಿದಾಗ ರಷ್ಯ ಅದನ್ನು ಹತ್ತಿಕ್ಕಲು ಪ್ರಯತ್ನಿಸಿತು. ಚೆಕೊಸ್ಲೊವಾಕೀಯದಲ್ಲಿ ತನ್ನ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ ಎಂದು ಭಾವಿಸಿದ ರಷ್ಯ 1968ರಲ್ಲಿ ಅದರ ಮೇಲೆ ಸೈನಿಕ ಕಾರ್ಯಾಚರಣೆ ನಡೆಸಿತು. ತೃತೀಯ ಜಗತ್ತಿಗೆ ಸೇರಿದ ಭಾರತ ಪಾಕಿಸ್ತಾನ ಮತ್ತು ಅರಬ್ ರಾಷ್ಟ್ರಗಳೊಂದಿಗೆ ರಷ್ಯದ ಸಂಬಂಧಗಳು ಸೌಹಾರ್ದಯುತವಾಗಿದ್ದವು. 1962ರಲ್ಲಿ ನಡೆದ ಭಾರತ -ಪಾಕಿಸ್ತಾನದ ಯುದ್ಧವನ್ನು ಕೊನೆಗೊಳಿಸಿ ಶಾಂತಿ ಸ್ಥಾಪಿಸುವಲ್ಲಿರಷ್ಯ ಆಸಕ್ತಿ ವಹಿಸಿತು. ಇದರ ಪರಿಣಾಮವಾಗಿ ತಾಷ್ಕೆಂಟ್ ಒಪ್ಪಂದ ಏರ್ಪಟ್ಟಿತು. 1966ರಲ್ಲಿ ಮಾಸ್ಕೋ ಮತ್ತು ನ್ಯೂಯಾರ್ಕ್‍ಗಳ ನಡುವೆ ವಾಣಿಜ್ಯ ವಿಮಾನ ಸಂಚಾರ ಪ್ರಾರಂಭವಾದವು. ಆದರೆ 1979ರಲ್ಲಿ ರಷ್ಯ ಆಫ್ಘನಿಸ್ತಾನದ ಮೇಲೆ ಆಕ್ರಮಣ ನಡೆಸಿದಾಗ ಅಮೆರಿಕದೊಂದಿಗಿನ ಸಂಬಂಧಗಳು ಬಿಗಿಗೊಂಡವು.

1971ರಲ್ಲಿ ಬ್ರೆeóÉ್ನೀವ್ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತೆ ಚುನಾಯಿತರಾದರು. 1976ರಲ್ಲಿ ಇವರನ್ನು ಸೋವಿಯತ್ ಒಕ್ಕೂಟದ ಮಾರ್ಷಲ್ ಆಗಿ ಮಾಡಲಾಯಿತು. ಸ್ಟಾಲಿನ್ ಮಾತ್ರ ಈ ಸ್ಥಾನವನ್ನು ಪಡೆದಿದ್ದ. ಬ್ರೆeóÉ್ನೀವ್ 1977ರಲ್ಲಿ ಪ್ರಿಸೋಡಿಯಂನ ಅಧ್ಯಕ್ಷರಾಗಿದ್ದ ಪಾಡ್ಗಾರ್ನಿ ಅವರನ್ನು ಆ ಹುದ್ದೆಯಿಂದ ವಜಾ ಮಾಡಿದಾಗ ಸಾಮೂಹಿಕ ನಾಯಕತ್ವ ವ್ಯವಸ್ಥೆ ಕೊನೆಗೊಂಡಿತು. ಆ ಸ್ಥಾನಕ್ಕೆ ಅದೇ ವರ್ಷ ಜೂನ್ 16ರಂದು ಬ್ರೆeóÉ್ನೀವ್ ಅವಿರೋಧವಾಗಿ ಚುನಾಯಿತರಾದರು. ಈ ಎರಡೂ ಹುದ್ದೆಗಳನ್ನು ಏಕಕಾಲದಲ್ಲಿ ಪಡೆದವರಲ್ಲಿ ಬ್ರೆeóÉ್ನೀವ್ ಮೊದಲಿಗರಾಗಿದ್ದು ಈ ಎರಡೂ ಹುದ್ದೆಗಳನ್ನು ಇವರು ತಮ್ಮ ನಿಧನದವರೆಗೂ (10 ನವೆಂಬರ್ 1982) ಉಳಿಸಿಕೊಂಡಿದ್ದರು.

ಬ್ರೆeóÉ್ನೀವ್ ಒಂದು ರೀತಿಯಲ್ಲಿ ಸ್ಟಾಲಿನ್‍ನಂತೆ ದೀರ್ಘಕಾಲ ಆಳಿ ಅವನ ಕೆಲವು ಆದರ್ಶಗಳನ್ನು ನಂಬಿದ್ದ ವ್ಯಕ್ತಿ. ಆದರೆ ಆಡಳಿತದಲ್ಲಿ ಭ್ರಷ್ಟಾಚಾರವನ್ನು ಮತ್ತು ಅದಕ್ಷತೆಯನ್ನು ಗಣನೀಯವಾಗಿ ನಿವಾರಿಸಲಾಗಲಿಲ್ಲ. ಕೆಲವು ಬಂಡವಾಳಶಾಹಿ ದೇಶಗಳು ಸಾಧಿಸಿದ ಪ್ರಗತಿಯ ಅಳತೆಗೋಳಲ್ಲಿ ನೋಡಿದಾಗರಷ್ಯ ತೀರ ಹಿಂದೆ ಬಿದ್ದಿತು. ರಷ್ಯ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕೈಹಾಕುತ್ತಿದ್ದುದರಿಂದ ಮತ್ತು ಸೈನ್ಯ ವ್ಯವಸ್ಥೆಗೆ ಭಾರಿ ವೆಚ್ಚ ಮಾಡುತ್ತಿದ್ದುರಿಂದ ಖಜಾನೆಯ ಮೇಲೆ ಭಾರಿ ಹೊರೆಬಿತ್ತು. ಆದ್ದರಿಂದ ಬ್ರೆeóÉ್ನೀವ್‍ರ ವಿಫಲತೆ ಇಡೀ ಕಮ್ಯುನಿಷ್ಟ್ ವ್ಯವಸ್ಥೆಯ ವಿಫಲತೆಯಾಗಿ ಪರಿಣಮಿಸಿತು.

ಬ್ರೆeóÉ್ನೀವ್ ಅನಂತರ ಅಧಿಕಾರಕ್ಕೆ ಬಂದ ಯೂರಿ ಆಂಡ್ರೊಪೊವ್ (1982-84) ಸ್ವಲ್ಪಕಾಲ ಮಾತ್ರ ಅಧಿಕಾರದಲ್ಲಿದ್ದುದರಿಂದ ಹೆಚ್ಚಿನ ಬದಲಾವಣೆಗಳನ್ನು ತರಲಾಗಲಿಲ್ಲ. ಅವರ ಉತ್ತರಾಧಿಕರಿ ಕಾನ್‍ಸ್ಟಾಂಟಿನ್ ಚೆರೆಂಕ ಬಹುಬೇಗ ಅಂದರೆ 1985ರಲ್ಲಿ ನಿಧನರಾದರು. ಅವರ ಅನಂತರ ಪ್ರಧಾನ ಕಾರ್ಯದರ್ಶಿಯಾದ ಮೈಕೇಲ್ ಗೊರ್ಬಚೇವ್‍ರ ಆಡಳಿತ ಕಾಲ ಮಹತ್ತ್ವದ ಘಟನಾವಳಿಗಳಿಂದ ಕೂಡಿದ್ದಿತು. ಗೊರ್ಬಚೇವ್ ಆರ್ಥಿಕರಂಗದಲ್ಲಿ ರಷ್ಯ ಅನುಭವಿಸಿದ್ದ ವಿಫಲತೆಯನ್ನು ಸರಿದೂಗಿಸಲು ವಾಸ್ತವ ಸಂಗತಿಗಳ ಬೆಳಕಿನಲ್ಲಿ ಮುನ್ನಡೆಯತೊಡಗಿದರು. ಕಮ್ಯೂಸ್ಟ್ ಸಿದ್ಧಾಂತ ಪರಮ ಸತ್ಯವೆಂದು ಸಾರುವುದಕ್ಕಿಂತ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಆದ್ಯತೆ ಕೊಟ್ಟರು. ಇದರಿಂದ ಇವರು ಅನೇಕ ಹೊಂದಾಣಿಕೆ ಕ್ರಮಗಳನ್ನು ಕೈಗೊಂಡು ಟೀಕೆಗೂ ಗುರಿಯಾದರು. ಇವರು ಗ್ಲಾಸ್‍ನೊಸ್ಟ್ ಅಥವಾ ಉದಾರೀಕರಣ ಎಂಬ ನೀತಿಯನ್ನು ಪ್ರತಿಪಾದಿಸಿದರು. 1941ರಿಂದ ಈಚೆಗೆ ಮೊದಲಬಾರಿಗೆ 1988ರ ಜೂನ್‍ನಲ್ಲಿ ಪಕ್ಷದ ವಿಶೇಷ ಅಧಿವೇಶನವನ್ನು ಕರೆದು ಪೆರಿಸ್ಟ್ರೊಯ್‍ಕ ಎಂಬ ಸಮಗ್ರ ರಾಜಕೀಯ ಸೂತ್ರವನ್ನುಮಂಡಿಸಿದರು. 1989ರ ಮಾರ್ಚ್‍ನಲ್ಲಿ ಜನಪ್ರತಿನಿಧಿಗಳ ಸಭೆಗೆ ಬೊರಿಸ್ ಎಲ್ಸಿನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸುಧಾರಣಾವಾದಿಗಳು ಚುನಾಯಿತರಾದರು. ಮೇನಲ್ಲಿ ಗೊರ್ಬಚೇವ್ ಹೊಸದಾಗಿ ಸೃಷ್ಟಿಸಿದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ಸೋವಿಯತ್‍ನ ವಿವಿಧ ಕುಲಸಂಬಂಧವಾದ ಗಣ್ಯ ಪ್ರತಿನಿಧಿಗಳು ಹೆಚ್ಚಾಗಿ ಆಯ್ಕೆಗೊಂಡರು. 199ರಲ್ಲಿ ಮುಕ್ತ ಚುನಾವಣೆ ನಡೆಯಿತು. ಬೊರಿಸ್‍ಎಲ್ಸಿನರು ಸುಪ್ರೀಂ ಸೋವಿಯತ್‍ನ ಅಧ್ಯಕ್ಷರಾಗಿ ಚುನಾಯಿತರಾದರು.

ಈ ಹೊತ್ತಿಗೆ ರಷ್ಯ ಏಕಕಾಲದಲ್ಲಿ ತುರ್ತಾಗಿ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಮೊದಲನೆಯದು, ಆರ್ಥಿಕ ಉದಾರೀಕರಣವನ್ನು ಹೇಗೆ ಮಾಡುವುದೆಂಬುದು, ಎರಡನೆಯದು ವಿವಿಧ ಭಾಷಿಕ ಮತ್ತು ಕುಲಸಂಬಂಧಿ ಸಮುದಾಯಗಳಿಗೆ ಹೆಚ್ಚಿನದ ಅಧಿಕಾರ ನೀಡುವುದು. ಎರಡನೆಯ ಪ್ರಶ್ನೆಗೆ ತುರ್ತಾಗಿ ಆದ್ಯತೆ ಕೊಡದಿದ್ದರೆ ಸೋವಿಯತ್ ರಷ್ಯ ಚೂರುಚೂರಾಗಿ ಒಡೆದು ಹೋಗುವ ಅಪಾಯವಿದ್ದಿತು. ಶತಮಾನಗಳ ಕಾಲದಿಂದ ರಷ್ಯದ ಸಾಮ್ರಾಟರೆಲ್ಲರೂ ಪೂರ್ವ ಯೂರೋಪಿನಲ್ಲಿ ಹಾಗೂ ಈಗಿನ ಇರಾನ್ ಮತ್ತು ಆಫ್ಘಾನಿಸ್ತಾನಗಳ ಸರಹದ್ದಿನ ಮಧ್ಯಏಷ್ಯದಲ್ಲಿ ಅವಿರತವಾಗಿ ರಷ್ಯನ್ನರಲ್ಲದ ಮತ್ತು ವಿಶೇಷವಾಗಿ ಮಧ್ಯ ಏಷ್ಯದಲ್ಲಿ ಕ್ರೈಸ್ತರಲ್ಲದ ಸಮುದಾಯಗಳು ಹೆಚ್ಚಾಗಿರುವ ಪ್ರದೇಶಗಳನ್ನು ರಷ್ಯದ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುತ್ತಲೇ ಬಂದಿದ್ದರು. ಅವು ಸ್ವತಂತ್ರಗೊಂಡಾಗ ಅಥವಾ ಇತರ ರಾಷ್ಟ್ರಗಳ ಅಧೀನವಾದಾಗಲೂ ಬಿಡದೆ ಮತ್ತೆ ಮತ್ತೆ ತಮಗೆ ಅನುಕೂಲವಾದ ಸಂದರ್ಭಗಳಲ್ಲೆಲ್ಲ ರಷ್ಯದ ಅಧಿಕಾರ ವಲಯದೊಳಗೆ ಸೇರಿಸಿಕೊಂಡರು. ಈಗ ಈ ರಷ್ಯೀಕರಣದಿಂದ ಬೇಸತ್ತು ಮೆದುವಾಗಿ ಪ್ರತಿಭಟಿಸುತ್ತಿದ್ದವರು ಸಂಘಟಿತರಾಗಿ ದೃಢವಾಗಿ ಪ್ರತಿಭಟಿಸತೊಡಗಿದರು. ಸಾಧ್ಯವಾದರೆ ಸಶಸ್ತ್ರ ಸಂಘರ್ಷವನ್ನು ನಡೆಸಲು ಸಿದ್ಧರಾದರು. ಆಗರಷ್ಯನ್ನರು ಅಲ್ಪಸಂಖ್ಯಾತರಾಗಿದ್ದ ಈ ಪ್ರದೇಶಗಳಲ್ಲಿ ಗಲಭೆಗಳಿಗೆ, ಅವಕಾಶ ಕೊಟ್ಟರೆ ವಿದೇಶಿಹಸ್ತಕ್ಷೇಪಕ್ಕೆ ಅವಕಾಶವಾಗುವುದಲ್ಲದೆ ಕೇಂದ್ರ ಸರ್ಕಾರದ ಅಧಿಕಾರಕ್ಕೆ ಧಕ್ಕೆಬರುತ್ತದೆಂದು ಯೋಚಿಸಿದ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿತು.

1991ರ ಡಿಸೆಂಬರ್‍ನಲ್ಲಿ ಒಂದು ಘೋಷಣೆ ಹೊರಡಿಸಿ ಹಿಂದಿನ ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟವನ್ನು (ಯು.ಎಸ್.ಎಸ್.ಆರ್.) ವಿಸರ್ಜಿಸಲಾಯಿತು. ಅದರ ಸ್ಥಾನದಲ್ಲಿ ರಷ್ಯದ ಸಮಾಜವಾದಿ ಮಹಾಒಕ್ಕೂಟವನ್ನು (ಫೆಡರೇಷನ್ ಆಫ್ ಸೋಷಿಯಲಿಷ್ಟ್ ರಿಪಬ್ಲಿಕ್ ಆಫ್‍ರಷ್ಯ)ರಚಿಸಲಾಯಿತು. ಇದರಂತೆ 20 ಗಣರಾಜ್ಯಗಳು (ಇದರಲ್ಲಿ ಹಿಂದಿನ ವ್ಯವಸ್ಥೆಯಂತೆ 16 ರಾಜ್ಯಗಳು ಸ್ವಾಯತ್ತವಾಗಿದ್ದವು). 49 ಆಡಳಿತಾತ್ಮಕ ಘಟಕಗಳು 6 ಕರೈಗಳು ಅಥವಾ ಪ್ರಾಂತ್ಯಗಳು ಅಸ್ತಿತ್ವಕ್ಕೆ ಬಂದವು. ಮಾಸ್ಕೋ ಮತ್ತು ಪೀಟರ್ಸ್‍ಬರ್ಗ್‍ಗಳಿಗೆ ವಿಶೇಷ ಆಡಳಿತ ಸ್ಥಾನಮಾನ ನೀಡಲಾಯಿತು. ಜೊತೆಗೆ ಸ್ವತಂತ್ರ ರಾಜ್ಯಗಳ ಕಾಮನ್‍ವೆಲ್ತ್ (ಕಾಮನ್‍ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್) ಎಂಬ ಒಂದು ವೇದಿಕೆಯನ್ನು ರಚಿಸಿ ಎಲ್ಲ ರಾಜ್ಯಗಳು ಅದರ ಅಡಿರಕ್ಷಣೆ ಮತ್ತು ವಿದೇಶಾಂಗ ನೀತಿಯನ್ನು ಹೊರತುಪಡಿಸಿ ಉಳಿದಂತೆ ವಿದೇಶಿ ವ್ಯಾಪಾರವೂ ಸೇರಿದಂತೆ ಎಲ್ಲ ವಿಷಯಗಳಲ್ಲೂ ಸ್ವತಂತ್ರ ಸ್ಥಾನಮಾನ ಪಡೆಯಲು ಅನುವು ಮಾಡಿಕೊಡಲಾಯಿತು. ಹೀಗೆರಚಿತವಾದ ರಾಜ್ಯಗಳು ಈ ಮುಂದಿನಂತಿವೆ.

ಎಸ್ಟೋನಿಯ, ಉಕ್ರೇನ್, ಬೈಲೊರಷ್ಯ, ಆರ್ಮೇನಿಯ, ಆಜರ್‍ಬೈಜಾನ್, ಜಾರ್ಜಿಯ, ಮಾಲ್ಡೇವಿಯ, ಲಾಟ್ವಿಯ, ಲಿಥುವೇನಿಯ, ಚೆಚಾನಿಯ, ತಜಾಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಜ್‍ಸ್ತಾನ್, ಕಜಾóಕ್‍ಸ್ತಾನ್, ತುರ್ಕ್‍ಮೇನಿಸ್ತಾನ್, ಇಂಗುಸ್ತಿಯ.

ಸೋವಿಯತ್ ಸರ್ಕಾರ ಈ ವ್ಯವಸ್ಥೆಯನ್ನು ಮಾಡಿ ಎಲ್ಲ ಗಣರಾಜ್ಯಗಳನ್ನು ತೃಪ್ತಿಪಡಿಸಲು ಸಾಧ್ಯವಾಗಿಲ್ಲ. ಅವುಗಳಲ್ಲಿ ಹೆಚ್ಚಿನವು ಸಂಪೂರ್ಣ ಸಾರ್ವಭೌಮತೆ ಕೇಳುತ್ತಿವೆ. ಕೆಲವು ಸಾರ್ವಭೌಮ ರಾಷ್ಟ್ರಗಳೆಂದೇ ಘೋಷಿಸಿಕೊಂಡಿವೆ. ವಿಶೇಷವಾಗಿ ಮಧ್ಯ ಏಷ್ಯದ ರಾಜ್ಯಗಳಲ್ಲಿ ಇದು ಕಂಡುಬಂದಿದೆ. ಚೆಚಾನಿಯ ರಾಜ್ಯದ ಸ್ವಾತಂತ್ರ್ಯ ಕೋರಿಕೆಯನ್ನು ಹತ್ತಿಕ್ಕಲು ರಷ್ಯ ಸೈನಿಕ ಕಾರ್ಯಾಚರಣೆ ನಡೆಸಿತು. ಇದರಿಂದ ಪಾಶ್ಚಾತ್ಯ ದೇಶಗಳ ಟೀಕೆಗೆ ಒಳಗಾಯಿತು. 1992ರಲ್ಲಿ ಉತ್ತರ ಅಸೀಸಿಯದಲ್ಲಿರಕ್ತಪಾತವಾಗಿ ಸಾವಿರಾರು ಜನರು ವಲಸೆಹೋದರು. ಈ ರಾಜ್ಯಗಳ ವಿವಾದ ಪೂರ್ಣವಾಗಿ ಬಗೆಹರಿದಿಲ್ಲ. ಒಟ್ಟಿನಲ್ಲಿರಷ್ಯ ಇತರ ಅಲ್ಪ ಸಂಖ್ಯಾತ ಸಮುದಾಯಗಳನ್ನು ತನ್ನಲ್ಲಿ ಐಕ್ಯ ಮಾಡಿಕೊಳ್ಳುವಲ್ಲಿ ಸಫಲವಾಗದಿರುವುದು ಕಂಡುಬಂದಿದೆ. ರಷ್ಯನ್ ಭಾಷೆಯನ್ನು ಎಲ್ಲ ಪ್ರಾಂತ್ಯಗಳಲ್ಲೂ ಒತ್ತಾಯವಾಗಿ ಹೇರಹೊರಟಿದ್ದು ಈ ಸ್ಫೋಟಕ್ಕೆ ಎಡೆಯಾದ ಕಾರಣಗಳಲ್ಲೊಂದು.

ಸರ್ಕಾರ : 1993ರ ಡಿಸೆಂಬರ್‍ನಲ್ಲಿ ರಷ್ಯದ ಮಹಾ ಒಕ್ಕೂಟ ಒಂದು ಸಂವಿಧಾನವನ್ನು ಅಳವಡಿಸಿಕೊಂಡಿತು. ಇದರ ಮೇರೆಗೆ ರಾಷ್ಟ್ರದ ಅಧಿಕಾರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಹಂಚಿಕೆಯಾಗಿದೆ. ಪ್ರತಿಯೊಂದು ಇನ್ನೊಂದರಿಂದ ಸ್ವತಂತ್ರವಾದ ಅಂಗಗಳಾಗಿವೆ. ರಷ್ಯ ಫೆಡರೇಷನ್ನಿನ ಅಧ್ಯಕ್ಷರೇ ರಾಷ್ಟ್ರದ ಮುಖ್ಯರು ಮತ್ತು ಸಮಗ್ರ ಸಶಸ್ತ್ರ ಪಡೆಗಳ ಮಹಾದಂಡನಾಯಕರು. ಅಧ್ಯಕ್ಷರ ಅವಧಿ ನಾಲ್ಕು ವರ್ಷಗಳು. ಅಧ್ಯಕ್ಷರನ್ನು ನೇರವಾಗಿ ಜನರು ಚುನಾಯಿಸುತ್ತಾರೆ. ಅಧ್ಯಕ್ಷರು ಸರ್ಕಾರದ ಮುಖ್ಯರನ್ನು ಅಥವಾ ಪ್ರಧಾನ ಮಂತ್ರಿಯನ್ನು ನೇಮಿಸಬಹುದು. ಕೇಂದ್ರ ಶಾಸಕಾಂಗ ದ್ವಿಸದನ ಸ್ವರೂಪದ್ದಾಗಿರುತ್ತದೆ. ಅದರ ಅವಧಿಯೂ 4 ವರ್ಷಗಳು. ಮೇಲ್ಮನೆಯಲ್ಲಿ 178 ಸದಸ್ಯರಿದ್ದರೆ ಕೆಳಮನೆಯಲ್ಲಿ 450 ಸದಸ್ಯರಿರುತ್ತಾರೆ.ರಷ್ಯ ಇಂದು ಬಹುತೇಕವಾಗಿ ಪ್ರಜಾತಂತ್ರಾತ್ಮಕ ರಾಷ್ಟ್ರದಂತೆ ಕಾರ್ಯನಿರ್ವಹಿಸುವ ಸಂವಿಧಾನವನ್ನು ಅಂಗೀಕರಿಸಿದೆ. ಇದರಿಂದಾಗಿ ಒಂದು ಕ್ರಾಂತಿಯ ಮೂಲಕ ಬದಲಾಯಿಸಬೇಕಾಗಿದ್ದ ವ್ಯವಸ್ಥೆ ಸೌಮ್ಯವಾಗಿ ಬದಲಾದಂತಾಗಿದೆ. ಆದರೆ ಬದಲಾದ ವ್ಯವಸ್ಥೆಯ ಅನುಷ್ಠಾನದ ಮೇಲೆ ಅದರ ಭವಿಷ್ಯ ನಿಂತಿದೆ. ಬೋರಿಸ್ ಎಲ್ಸಿನ್ ಎರಡನೆಯ ಬಾರಿಗೆ ಅಧ್ಯಕ್ಷರಾಗಿ 9 ಆಗಸ್ಟ್ 1996ರಂದು ಅಧಿಕಾರ ವಹಿಸಿಕೊಂಡರು. ವಿಕ್ಟರ್ ಚರ್ನೊಮಿರ್‍ದಿನ್ ಪ್ರಧಾನ ಮಂತ್ರಿಯಾಗಿದ್ದಾರೆ.

ಆರ್ಥಿಕವಾಗಿ ರಷ್ಯ ಹೊಸ ಹಾದಿ ತುಳಿದಿದೆ. ಖಾಸಗಿ ಸಾಹಸಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ಕ್ರಮೇಣ ವ್ಯವಸಾಯವನ್ನು ಖಾಸಗೀಕರಿಸುವ ಹಾದಿಯಲ್ಲಿದೆ. ಮಾರುಕಟ್ಟೆ ಆರ್ಥಿಕತೆ ನಿರ್ಮಿಸುವತ್ತ ಸಾಗುತ್ತಿದೆ.ರಷ್ಯ ಅಮೆರಿಕದೊಂದಿಗೆ 1993ರಲ್ಲಿ ಅಣ್ವಸ್ತ್ರಗಳನ್ನು ಹಂತಹಂತವಾಗಿ ತೆಗೆದುಹಾಕುವ ಒಪ್ಪಂದಕ್ಕೆ ಸಹಿಹಾಕಿ ವಿಶ್ವ ಶಾಂತಿಯ ಬಗ್ಗೆ ಆಶಾಭಾವನೆ ಮೂಡಿಸಿದೆ. (ಡಿ.ಎಸ್.ಜೆ.)

Iಗಿ. ಶಿಕ್ಷಣ 1922ರಲ್ಲಿ ಸ್ಥಾಪಿತಗೊಂಡ ಸಂಯುಕ್ತ ಸೋವಿಯೆತ್ ಸಮಾಜವಾದಿ ಗಣರಾಜ್ಯದಲ್ಲಿದ್ದ (ಯೂನಿಯನ್ ಆಫ್ ಸೋವಿಯತ್ ಸೋಷಿಯೆಲಿಸ್ಟ್ ರಿಪಬ್ಲಿಕ್ಸ್-ಯು.ಎಸ್.ಎಸ್.ಆರ್.) ಹದಿನೈದು ರಾಷ್ಟ್ರೀಯ ಗಣರಾಜ್ಯಗಳ ಪೈಕಿ ರಷ್ಯ ಒಂದಾಗಿತ್ತು. 1991 ಡಿಸೆಂಬರ್ 8ರಂದು ಈ ಸಂಯುಕ್ತ ಗಣರಾಜ್ಯ ವಿಭಜನೆಗೊಂಡು ಪ್ರತ್ಯೇಕ ಗಣರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿದೆ. ಇದು ಅಧಿಕ ಜನಸಂಖ್ಯೆಯುಳ್ಳ ರಾಷ್ಟ್ರವಾಗಿದ್ದು, ಜನಸಂಖ್ಯೆಯ ಮೂರನೆಯ ಒಂದು ಭಾಗ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾತ್ರವಹಿಸುತ್ತಿತ್ತು. ವಿಭಜನೆಗೆ ಮೊದಲು ಈ ಕಾರ್ಯದಲ್ಲಿ 31 ಲಕ್ಷ ಮಂದಿ ಅಧ್ಯಾಪಕರಿದ್ದರು. 1991ರಲ್ಲಿ ಸೋವಿಯೆತ್ ಒಕ್ಕೂಟದ ಸ್ಥಾನವನ್ನು ಪಡೆದು ಸಿ. ಐ. ಎಸ್. ಅನ್ನು (ಕಾಮನ್‍ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್) ಸ್ಥಾಪಿಸಿರುವರಷ್ಯಕ್ಕೆ `ರಷ್ಯನ್ ಫೆಡರೇಷನ್ ಎಂಬ ಹೆಸರು ಬಂದಿದೆ. ಹೊಸ ವಿಧಿವಿಧಾನಗಳನ್ನು ಅಳವಡಿಸಿಕೊಂಡು ಪ್ರಯೋಗಮಾಡಬೇಕೆಂದು ಆಕಾಂಕ್ಷೆ ಇದ್ದರೂ ಡೋಲಾಯಮಾನ ಸ್ಥಿತಿಯಲ್ಲಿದೆ. ಆದಕಾರಣ ಸರಿಸುಮಾರಿಗೆ ಸೋವಿಯೆತ್ ಒಕ್ಕೂಟದಲ್ಲಿದ್ದ ಶಿಕ್ಷಣ ಪದ್ದತಿಯನ್ನೇರಷ್ಯವೂ ಅನುಸರಿಸುತ್ತಿದೆ. ರಷ್ಯದ ಶಿಕ್ಷಣ ಪದ್ಧತಿ ಕುರಿತ ಈ ಲೇಖನವನ್ನು ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಪ್ರಸ್ತುತ ಪಡಿಸಿದೆ :

(1) ಐತಿಹಾಸಿಕ ಹಿನ್ನೆಲೆ (2) ಪ್ರಾಥಮಿಕ ಪೂರ್ವಶಿಕ್ಷಣ (3) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ (4) ವಿಶೇಷ ಶಿಕ್ಷಣ (5) ವೃತ್ತಿ ಶಿಕ್ಷಣ (6) ಟೆಕ್ನಿಕಮ್‍ಗಳು (7) ಉನ್ನತ ಶಿಕ್ಷಣ (8) ಸಂಶೋಧನೆ ಮತ್ತು ಪದವಿಗಳು (9) ಅಂಚೆ ಶಿಕ್ಷಣ (10) ಆಡಳಿತ (11) ಉಪ ಸಂಹಾರ

(1) ಐತಿಹಾಸಿಕ ಹಿನ್ನೆಲೆ : 1917ಕ್ಕೆ ಹಿಂದೆ ರಷ್ಯದಲ್ಲಿ ವಿವಿಧ ಬಗೆಯ ಪ್ರೌಢಶಾಲೆಗಳಿದ್ದವು. ಪ್ರತಿಯೊಂದರಲ್ಲೂ ಪಠ್ಯಕ್ರಮ, ಪಠ್ಯಪುಸ್ತಕ ಹಾಗೂ ಕಲಿಸುವ ವಿಷಯಗಳು ಬೇರೆಬೇರೆಯಾಗಿದ್ದವು. ಆದಕಾರಣ ಪ್ರತಿಯೊಂದು ಶಾಲೆಯೂ ತನ್ನದೇ ಆದ ಶೈಲಿಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಕೆಳಹಂತದ ಶಿಕ್ಷಣ ಪಡೆದ ವಿದ್ಯಾರ್ಥಿ ಯಾವ ವಿಧವಾದ ಶಾಲೆಗಾದರೂ ಸೇರಿಕೊಳ್ಳಬಹುದಿತ್ತು. ಆದರೆ 1917ರ ಕ್ರಾಂತಿ ಹಳೆಯ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದರ ಜೊತೆಗೆ ಬಹುವಿಧ ಪ್ರೌಢಶಾಲೆಗಳನ್ನುರದ್ದುಪಡಿಸಿ 1918ರ ಶಾಸನದ ಪ್ರಕಾರ ರಾಷ್ಟ್ರದಲ್ಲಿ ಏಕರೂಪದ ಕಾರ್ಮಿಕ ಶಾಲೆಗಳನ್ನು (ಲೇಬರ್ ಸ್ಕೂಲ್ಸ್) ಸ್ಥಾಪಿಸಿತು. ಈ ಶಾಲೆಗಳು ಏಕರೀತಿಯ ಕಾರ್ಯಕ್ರಮಗಳನ್ನು ಅನುಸರಿಸುತ್ತಿದ್ದುವು. ತರಗತಿಯ ಪಠ್ಯಕ್ರಮದಲ್ಲೂ ಏಕರೂಪತೆಗೆ ಅವಕಾಶವಾಯಿತು. ಯಾವ ಒಂದು ಧರ್ಮಕ್ಕೂ ಹೆಚ್ಚಿನ ಪ್ರಾಮುಖ್ಯ ನೀಡದೆ ಲೌಕಿಕ ಶಿಕ್ಷಣವನ್ನು ಆಚರಣೆಗೆ ತರಲಾಯಿತು. ಈ ಶಾಲೆಗಳು `ಕಾಂಪ್ಲೆಕ್ಸ್ ಸಿಸ್ಟಮ್ಸ್ ಎಂಬ ಹೆಸರಿನಿಂದ ಜನಪ್ರಿಯವಾಗಿದ್ದುವು. ಇಲ್ಲಿನ ಕಾರ್ಯಕ್ರಮ ವಿವಿಧ ಕ್ಷೇತ್ರಗಳನ್ನು-ಉದಾ : ಭೌತವಿಜ್ಞಾನ, ಜೀವವಿಜ್ಞಾನ, ರಸಾಯನವಿಜ್ಞಾನ ಮುಂತಾದವು-ಒಳಗೊಂಡಿದ್ದು ಅನೇಕ ಮೌಲಿಕ ಪ್ರಯೋಗಗಳಿಗೆ ಎಡೆ ಮಾಡಿಕೊಟ್ಟಿತು. ವಿವಿಧ ಪಾಶ್ಚಾತ್ಯ ಶಿಕ್ಷಣತಜ್ಞರಾದ ಜಾನ್ ಡ್ಯೂಯಿ, ಡೆಕ್ರೌಲಿ, ಪಾರ್ಕ್ ಹಸ್ರ್ಟ್, ಮಾಂಟಿಸೋರಿ ಮುಂತಾದವರ ತಾತ್ತ್ವಿಕ ದೃಷ್ಟಿಗಳನ್ನು ಕುರಿತು ಪ್ರಯೋಗಗಳೂ ನಡೆದಿದ್ದುವು. ಕೆಲವು ಶಿಕ್ಷಣ ತಜ್ಞರು ಔಪಚಾರಿಕ ಶಾಲೆಗಳಿಗೆ ಬದಲು ಸೇನಾ ಶಾಲೆಗಳನ್ನು ಸೂಚಿಸಿದ್ದರು. ಇದರ ಪ್ರಕಾರ ಸಮಾಜ ಇಲ್ಲವೆ ಸಮುದಾಯದಲ್ಲಿ ವಿದ್ಯಾರ್ಥಿಗಳು ವಿವಿಧ ಕೆಲಸಗಳನ್ನು ಮಾಡಲು ಹಾಗೂ ಅವುಗಳಿಗೆ ಸಂಬಂಧಪಟ್ಟ ತತ್ತ್ವ, ನಿಯಮ, ಉಪಯೋಗ ಮುಂತಾದವುಗಳನ್ನು ಕಲಿಸಬೇಕಾಗಿತ್ತು. ಉದಾ :ರಸ್ತೆಯನ್ನು ನಿರ್ಮಿಸುವಾಗ ಭೌತವಿಜ್ಞಾನದ ತತ್ತ್ವಗಳು ಮತ್ತು ನಿಯಮಗಳು, ಕಲಿವಿನ ಕಾರ್ಯವನ್ನು ತಂಡವೊಂದಕ್ಕೆ ಹಂಚುವಾಗ ಗಣಿತದ ಮೂಲ ತತ್ತ್ವಗಳು, ತಂಡವೊಂದನ್ನು ಸಮೂಹ ಗಾಯನಕ್ಕೆ ಸಿದ್ಧಗೊಳಿಸುವಾಗ ಪದ್ಯರಚನೆ, ಪ್ರಾಸಾನುಪ್ರಾಸ ಮುಂತಾದವು. ಇಲ್ಲಿ ಸಾಮೂಹಿಕ ಕಲಿಕೆ ಮತ್ತು ಸಾಮೂಹಿಕ ಪರೀಕ್ಷೆಗಳಿಗೆ ಅವಕಾಶವಿತ್ತು. ಆದರೆ ಇಲ್ಲಿ ಸಾಂಪ್ರದಾಯಿಕ ಅರಿವಿಗಿಂತ ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳೇ ಹೆಚ್ಚಾಗಿ ನಡೆಯುತ್ತಿದ್ದುವು. ಇದರ ಜೊತೆಗೆ ಪಠ್ಯಪುಸ್ತಕ ಹಾಗೂ ಅಧ್ಯಾಪಕರುಗಳಿಗೆ ಸ್ಥಾನವಿಲ್ಲವಾಯಿತು. ಅರ್ಥಾತ್ 1930ರ ತನಕವೂ ರಷ್ಯದಲ್ಲಿ ಪ್ರಾಥಮಿಕ-ಮಾಧ್ಯಮಿಕ-ಪ್ರೌಢಶಿಕ್ಷಣ 4-3-2ರ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿತ್ತು. 1931ರ ತನಕ ನಡೆದ ಪ್ರಯೋಗಗಳ ಫಲವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಉಂಟಾಗಿ ರಾಷ್ಟ್ರದಲ್ಲಿ ಉದ್ಯೋಗಾವಕಾಶಗಳು ಬೆಳೆಯಬೇಕಾದ ಅಗತ್ಯ ಕಂಡುಬಂದಿತು. ಇದಕ್ಕೆ ತಾಂತ್ರಿಕ ಶಿಕ್ಷಣ ಪಡೆದವರ ಅಗತ್ಯವೂ ಇತ್ತು. ಈ ಪರಿಸ್ಥಿತಿಯನ್ನು ಮನಗಂಡ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿ ಹಾಗೂ ಸರ್ಕಾರಗಳು ಶಿಕ್ಷಣವನ್ನು ಆ ಕಾರ್ಯಕ್ಕೆ ಸಿದ್ಧಪಡಿಸಲು ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿಕೊಂಡವು. ತಾಂತ್ರಿಕ ಶಿಕ್ಷಣಸಂಸ್ಥೆಗಳನ್ನು ಮತ್ತೆ ಸಜ್ಜುಮಾಡಿ ಭೌತವಿಜ್ಞಾನ, ರಸಾಯನವಿಜ್ಞಾನ, ಜೀವವಿಜ್ಞಾನ, ಭಾಷೆ ಮುಂತಾದ ವಿವಿಧ ಮೂಲವಿಷಯಗಳನ್ನು ಕಲಿಸಲು ತಜ್ಞರಾದ ಅಧ್ಯಾಪಕರನ್ನು ನೇಮಿಸಲಾಗಿತ್ತು. ಮಾಕ್ರ್ಸ್ ಮತ್ತು ಲೆನಿನ್ನರ ತತ್ತ್ವಜ್ಞಾನ ಮತ್ತು ಅನುಷ್ಠಾನಗಳೆಂಬ ಮೂಲಮಂತ್ರಕ್ಕೆ ಹೊಸ ಅರ್ಥವನ್ನು ನೀಡಲಾಯಿತು.

1931ರ ತರುವಾಯ 10 ವರ್ಷಗಳ ಅವಧಿಯ ಶಾಲಾಶಿಕ್ಷಣ ಆಚರಣೆಗೆ ಬಂತು. ಪ್ರತಿಯೊಂದು ತರಗತಿಗೂ ಎಲ್ಲ ವಿಷಯಗಳಲ್ಲೂ ವಿವರವಾದ ಅಭ್ಯಾಸ ಪತ್ರಿಕೆಗಳನ್ನು ಗೊತ್ತುಪಡಿಸಿ ಶಿಸ್ತಿನ ಬೋಧನೆಯನ್ನು ಆರಂಭಿಸಲಾಯಿತು. ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಿ ಪ್ರತಿಯೊಂದು ತರಗತಿಯಿಂದ ತೇರ್ಗಡೆಯಾಗಲು ಎಲ್ಲ ವಿಷಯಗಳಲ್ಲೂ ನಿಗದಿಪಡಿಸಿದ ಅಂಕಗಳನ್ನು ಗಳಿಸುವುದು ವಿದ್ಯಾರ್ಥಿಗೆ ಅಗತ್ಯವಾಯಿತು. ಸುಮಾರು 25 ವರ್ಷಗಳ ತನಕ ಈ ಪರಿಸ್ಥಿತಿ ಇತ್ತು. ಹೀಗಾಗಿ ಪಾಂಡಿತ್ಯಕ್ಕೂ ನಿಷ್ಠಾಪೂರ್ಣ ಅನುಷ್ಠಾನ ವಿಧಾನಗಳಿಗೂ ಸ್ಥಾನ ದೊರೆತು ಜ್ಞಾನಾರ್ಜನೆಯ ಮಟ್ಟ ಉತ್ತಮಗೊಂಡಿತು.

ಇಪ್ಪತ್ತನೆಯ ಶತಮಾನದ ಮಧ್ಯದ ವೇಳೆಗೆ ಪಾಶ್ಚಾತ್ಯ ರಾಷ್ಟ್ರಗಳು ತಾಂತ್ರಿಕ ಜನಬಲ ನಿರ್ಮಾಣದಲಿ ್ಲರಷ್ಯದೊಡನೆ ಸ್ಪರ್ಧೆಗೆ ಪ್ರಯತ್ನಿಸಿದುವು.ರಷ್ಯದ ನಾಯಕರು ಪ್ರೌಢಶಾಲಾವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣಕ್ಕೆ ತಯಾರುಮಾಡುತ್ತ ವಿವಿಧ ಪ್ರಾಯೋಗಿಕ ಕ್ಷೇತ್ರಗಳಲ್ಲಿ ಕಾರ್ಯನಿರತರಾಗುವ ನೈಪುಣ್ಯವನ್ನು ಬೆಳೆಸಬಲ್ಲ ಶಿಕ್ಷಣವನ್ನು ಅವರಿಗೆ ನೀಡಬೇಕೆಂದು ಸೂಚಿಸಿದರು. 1958ರಲ್ಲಿ ಕ್ರುಶ್ಚೇವರ ಸುಧಾರಣೆ ಜಾರಿಗೆ ಬಂದು ಈ ಸೂಚನೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯಿತು. ಇದರ ಪ್ರಕಾರ ತರಗತಿಯಲ್ಲಿ ಲಭ್ಯವಾಗುವ ಸೈದ್ಧಾಂತಿಕ ಜ್ಞಾನವನ್ನು ಕಲಿಯುವುದರ ಜೊತೆಗೆ ಕಾರ್ಖಾನೆ, ಕೃಷಿ, ಮತ್ತು ಕಾರ್ಯಾಲಯಗಳಲ್ಲಿ ಕೆಲಸ ಮಾಡುವ ವಿಧಾನವನ್ನು ವಿದ್ಯಾರ್ಥಿಗಳು ಕಲಿಯಬೇಕಾಯಿತು. ಅಂದರೆ, 4+4+3 ಯೋಜನೆಯ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಈ ಸುಧಾರಣೆ 1964ರ ವರೆಗೆ ಮಾತ್ರ ಇತ್ತು. ಈ ವ್ಯವಸ್ಥೆಯಿಂದ ಶಿಕ್ಷಣ ಉತ್ತಮಗೊಳ್ಳುವುದಾಗಲೀ ವಿದ್ಯಾರ್ಥಿಗಳು ಅಗತ್ಯ ವೃತ್ತಿಕೌಶಲಗಳನ್ನು ಬಳಿಸಿಕೊಳ್ಳುವುದಕ್ಕಾಗಲಿ ಆಗದಿದ್ದುದರಿಂದ ಮತ್ತೆ 1964ರಿಂದ 10ವರ್ಷಗಳ ಅವಧಿಯ ಶಾಲಾ ಶಿಕ್ಷಣಕ್ಕೆ ಗಮನಕೊಡಲಾಯಿತು. ವಿದ್ಯಾರ್ಥಿಗಳು ಎದುರಿಸುತ್ತಿದ್ದ ತೊಂದರೆಗಳು, ಸಮಸ್ಯೆಗಳು, ಆಗುಹೋಗುಗಳು, ಶಿಕ್ಷಣದ ಬಗೆಗಿನ ನೋಟಗಳನ್ನು ವಿಶ್ಲೇಷಿಸಿ ವಿಶೇಷ ಶಿಕ್ಷಣಕ್ಕಿಂತ 10 ವರ್ಷ ಅವಧಿಯ ಸಾಮಾನ್ಯ ಶಿಕ್ಷಣವನ್ನೇ ಮೂಲತತ್ತ್ವವಾಗಿ ಇಟ್ಟುಕೊಳ್ಳುವುದು ಒಳಿತು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಆದಕಾರಣ 7ರಿಂದ 17 ವರ್ಷಗಳ ತನಕ ನೀಡುತ್ತಿದ್ದ 10 ವರ್ಷ ಅವಧಿಯ ಶಿಕ್ಷಣವನ್ನು ಎಲ್ಲ ಮಕ್ಕಳಿಗೂ ಕಡ್ಡಾಯ ಮಾಡಲಾಯಿತು. 1988-89ರಲ್ಲಿ ಶೇ 98.2ರಷ್ಟು ವಿದ್ಯಾರ್ಥಿಗಳು ಹಗಲು ವೇಳೆಯ ಶಾಲೆಗಳಲ್ಲಿ ರಷ್ಯನ್ ಭಾಷೆಯಲ್ಲಿ ಸಾಮಾನ್ಯ ಶಿಕ್ಷಣವನ್ನು ಪಡೆಯುತ್ತಿದ್ದರು. ಇತರ ಭಾಷೆಗಳಲ್ಲೂ ಪ್ರೌಢಶಿಕ್ಷಣವನ್ನು ಇಲ್ಲಿ ನೀಡುತ್ತಿದ್ದರು. ಉದಾ : ಟಾಟರ್ 0.5%; ಯಾಕುತ್ 0.30%; ಚುವಷ್ 0.2%. 1990ರ ಪ್ರಾರಂಭದಲ್ಲೇ ಶೈಕ್ಷಣಿಕ ವ್ಯವಸ್ಥೆಯ ಎಲ್ಲ ಭಾಗಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಿದ್ದುವು. ಸುಮಾರು ಏಳು-ದಶಕಗಳ ಕಾಲ ತಮ್ಮನ್ನು ಅದುಮಿಟ್ಟಿದ್ದ `ಭಯಾನಕತೆ (ಟೆರರ್) ಎಂಬ ರಾಜ್ಯ ನಿಯಮದಿಂದ ರಷ್ಯದ ಜನತೆ ತಲ್ಲಣಗೊಂಡಿತ್ತು. ಇದಲ್ಲದೆ ವಿವಿಧ ರೀತಿಯ ಚಳವಳಿಗಳು, ಪ್ರಪಂಚಯುದ್ಧಗಳು, ಒತ್ತಡಗಳಿಂದಾಗಿ ಅನೇಕ ಬಗೆಯ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಹುಟ್ಟಿಕೊಂಡವು. ವಿವಿಧ ನಾಯಕರು ಮಾಡಿದ ಪ್ರಯತ್ನಗಳು ವಿಫಲವಾದವು. ಆದರೂ ಹಿಂಜರಿಯದ ಜನತೆಗೆ ಸ್ಫೂರ್ತಿನೀಡಬೇಕೆಂಬ ಸದುದ್ದೇಶದಿಂದ ಸೋವಿಯೆತ್ ಒಕ್ಕೂಟದ ಹಿಂದಿನ ನಾಯಕ ಮೈಖೇಲ್ ಗೊರ್ಬಚೇವ್ ಪೆರೆಸ್ತ್ರೂಯಿಕ ಮತ್ತು ಗ್ಲಾಸ್‍ನಾಸ್ಟ್ (ಮುಕ್ತತೆ) ಎಂಬ ಎರಡು ನಿಯಮಗಳನ್ನುರೂಪಿಸಿ ಜನತೆಯಲ್ಲಿ ಅರಿವನ್ನು ಬೆಳೆಸಲು ಅವುಗಳ ಬಗ್ಗೆ ಪ್ರಚಾರಗಳನ್ನು ಮಾಡಲಾಯಿತು. ಹೆದರಿಕೆಯಿಂದ ಬೇರೆಡೆಗಳಿಗೆ ಓಡಿಹೋಗಿ ವಿವಿಧ ಸ್ಥಳಗಳಲ್ಲಿ ಚದರಿಹೋಗಿದ್ದರಷ್ಯನ್ನರಿಗೆ ಇದು ಸಂಜೀವಿನಿಯಾಯಿತು. ಇದಲ್ಲದೆ `ಗ್ಲಾಸ್‍ನಾಸ್ಟ್ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ಅವಕಾಶಗಳಿಂದಾಗಿ ಪ್ರೇರಣೆ ಪಡೆದ ಸಾಮಾನ್ಯ ಜನತೆಯೂ ರಷ್ಯನ್ ಆಳ್ವಿಕೆ ಹಾಗೂ ಸೋವಿಯೆತ್ ಶಕ್ತಿಗಳಿಂದ ವಿಮುಕ್ತಿ ಹೊಂದಬೇಕೆಂದು ಬಯಸಿದರು. ಬೋರಿಸ್ ಎಲ್ಟ್‍ಸಿನ್ ಎಂಬ ವ್ಯಕ್ತಿಯ ನೇರ ವ್ಯವಹಾರಗಳು ಹಾಗೂ ಕೆಲಸ ಮಾಡುವ ಪರಿಗಳಿಂದ ಆಕರ್ಷಿತರಾದ ರಷ್ಯನ್ನರು ಈತನನ್ನೇ ತಮ್ಮ ನಾಯಕನನ್ನಾಗಿ ಆಯ್ಕೆಮಾಡಿದರು.

ಹದಗೆಟ್ಟ ಪರಿಸ್ಥಿತಿಯ ಸುಧಾರಣೆಗಾಗಿ ಒಟ್ಟಿಗೆ ಸೇರಿ `ಶಾಂತಿಸ್ಥಾಪನಾಬಲಗಳನ್ನು ನೆಲೆಗೊಳಿಸುವ ಉದ್ದೇಶದಿಂದ ರಷ್ಯ ಉಕ್ರೇನ್ ಮತ್ತು ಬೆಲಾರಸ್‍ಗಳ ಅಧ್ಯಕ್ಷರು ಒಪ್ಪಂದವೊಂದಕ್ಕೆ ಸಹಿಹಾಕಿದ್ದರ ಸಲುವಾಗಿ ಯು. ಎಸ್. ಆರ್.ನಿಂದರಷ್ಯ ಬೇರೆಯಾಯಿತು. ಈ ಕಾರಣದ ಸಲುವಾಗಿ ರಷ್ಯಕ್ಕೆ ರಷ್ಯನ್ ಫೆಡರೇಷನ್ ಎಂಬ ಹೆಸರು ಲಭ್ಯವಾಯಿತು. ರಷ್ಯನ್ ಫೆಡರೇಷನ್ನಲ್ಲಿಯೂ 7ರಿಂದ 17 ವರ್ಷ ವಯಸ್ಸಿನವರಿಗೆ ಶಿಕ್ಷಣ ಕಡ್ಡಾಯವಾಗಿರುವುದರಿಂದಲೂ ಶಿಕ್ಷಣಕ್ಕೆ ಶುಲ್ಕವಿಲ್ಲದ್ದರಿಂದಲೂ 1997ರಲ್ಲಿ ಸಾಕ್ಷರತೆ ಮಟ್ಟ ಶೇ. 98ರಷ್ಟು ಇದೆ ಎಂಬುದು ತಿಳಿದುಬಂದಿದೆ. ಪ್ರಾಥಮಿಕ ಶಿಕ್ಷಣ 7 ವರ್ಷಗಳಿಗೆ ಆರಂಭವಾಗಿ ಮೂರು ವರ್ಷಗಳವರೆಗೆ ಸಾಗುತ್ತದೆ. ಕೆಲವರು ಆರು ವರ್ಷಗಳಿಗೇ ಶಾಲೆಗೆ ಸೇರಿಕೊಳ್ಳುವುದರಿಂದ ಅವರಿಗೆ ನಾಲ್ಕುವರ್ಷಗಳ ಶಿಕ್ಷಣ ಲಭ್ಯವಾಗುವುದು. 10 ವರ್ಷಗಳಿಗೆ ಪ್ರೌಢಶಿಕ್ಷಣ ಆರಂಭವಾಗಿ ಏಳುವರ್ಷಗಳಕಾಲ ಮುಂದುವರೆಯುತ್ತದೆ. ಹೀಗಾಗಿ ವಿವಿಧ ಬದಲಾವಣೆ, ಚಳವಳಿ, ಪ್ರಯೋಗ ಹಾಗೂ ಒತ್ತಡಗಳಿಗೆ ಈಡಾಗಿರುವ ಶೈಕ್ಷಣಿಕ ನೀತಿಯ ಆಧಾರದ ಮೇಲೆ 3+5+2 (ಪ್ರಾಥಮಿಕ+ಪ್ರೌಢ ಮೊದಲನೆಯ ಹಂತ+ಪ್ರೌಢ ಎರಡನೆಯ ಹಂತ) ಯೋಜನೆಯನ್ನು ಅನುಸರಿಸಲಾಗುತ್ತಿದೆ. 1993ರಲ್ಲಿ ಮಾಡಿರುವ ದಾಖಲಾತಿಯಲ್ಲಿ ಪ್ರಾಥಮಿಕ ಹಂತಕ್ಕೆ ಶೇ.91ರಷ್ಟು ಹುಡುಗರೂ ಶೇ. 96ರಷ್ಟು ಹುಡುಗಿಯರೂ ಇದ್ದರೆ ಪ್ರೌಢಹಂತಕ್ಕೆ ಶೇ. 84ರಷ್ಟು ಹುಡುಗರೂ ಶೇ. 91ರಷ್ಟು ಹುಡುಗಿಯರೂ ಇದ್ದರು. 1994ರಲ್ಲಿ ಪ್ರಾಥಮಿಕ ಹಂತದ ಎರಡೂ ಸಮೂಹಗಳಲ್ಲಿ ಶೇ. 94ರಷ್ಟು ಮಂದಿ ಇದ್ದರು. ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ರಾಜ್ಯದಿಂದ ಅಲ್ಪ ಪ್ರಮಾಣದ ವಿದ್ಯಾರ್ಥಿವೇತನ ಲಭ್ಯವಾಗುತ್ತಿತ್ತು.

(2) ಪ್ರಾಥಮಿಕ ಪೂರ್ವಶಿಕ್ಷಣ : ಪುರುಷರೊಡನೆ ಸರಿಸಮಾನವಾಗಿ ಮಹಿಳೆಯರೂ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ತೊಡಗಿಕೊಂಡುದರಿಂದ ಅವರ ಮಕ್ಕಳಿಗೆರಕ್ಷಣಾಲಯಗಳೂ ಶಿಶುವಿಹಾರಗಳೂ ದೇಶಾದ್ಯಂತ ಕಂಡು ಬಂದಿದ್ದುವು. ಆರುತಿಂಗಳಿಂದ ಮೂರುವರ್ಷದ ಮಕ್ಕಳಿಗೂ ಮೂರು ವರ್ಷದಿಂದ ಏಳುವರ್ಷದ ಮಕ್ಕಳಿಗೂ ಇಲ್ಲಿ ಸೇರಲು ಅವಕಾಶವಿತ್ತು. ಇವುಗಳಲ್ಲಿ ಕೆಲವು ಮಕ್ಕಳಿಗೆ ಊಟ-ವಸತಿಗಳನ್ನು ಏರ್ಪಡಿಸಿ ವಾರಪೂರ್ತಿ ನೋಡಿಕೊಳ್ಳುತ್ತಿದ್ದವು. ಕೆಲವು ಶಾಲೆಗಳು ದಿನವಿಡೀ ಕೆಲಸಮಾಡಿದರೆ ಇನ್ನು ಕೆಲವು ಅರ್ಧದಿನ ಕೆಲಸ ಮಾಡುತ್ತಿದ್ದುವು. ಕೆಲವು ಶಾಲೆಗಳು ವರ್ಷವಿಡೀ ತೆರೆದಿರುತ್ತಿದ್ದರೆ ಗ್ರಾಮಾಂತರ ಶಾಲೆಗಳು ಕೆಲವು ತಿಂಗಳು ಮಾತ್ರ ಕೆಲಸ ಮಾಡುತ್ತಿದ್ದುವು.

ಟ್ರೇಡ್ ಯೂನಿಯನ್ ಹಾಗೂ ಇತರ ಉದ್ಯಮಕೇಂದ್ರಗಳು ಪೋಷಕರಿಂದ ಶುಲ್ಕಸಂಗ್ರಹಿಸಿ ಶಾಲೆಗಳನ್ನು ನಡೆಸುತ್ತಿದ್ದುವು. ವಿವಿಧ ಆರ್ಥಿಕ ಮೂಲಗಳಿಂದ ಸಹಾಯಪಡೆಯುತ್ತಿದ್ದ ಈ ಸಂಸ್ಥೆಗಳ ವ್ಯವಸ್ಥೆಯಲ್ಲಿ ವ್ಯತ್ಯಾಸಗಳು ಸಹಜವಾಗಿ ಇದ್ದುವು.

1984ರ ಶಿಕ್ಷಣ ಸುಧಾರಣಾ ಕಾರ್ಯಕ್ರಮವು ಆರನೆಯ ವಯಸ್ಸಿನಿಂದಲೇ ಮಕ್ಕಳಿಗೆ ಶಿಕ್ಷಣ ನೀಡುವ ವೃತ್ತಿಶಿಕ್ಷಣ ಮತ್ತು ವ್ಯಾಸಂಗದ ಕಾರ್ಯಕ್ರಮಗಳನ್ನು ಸುಧಾರಿಸುವ ಕಂಪ್ಯೂಟರುಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಒದಗಿಸಿತು. ಈ ವಯೋಮಾನದ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವಿದು : ಕಡಿಮೆ ಅವಧಿಯ ಪಾಠಗಳು, ಪಾಠಗಳ ನಡುವೆ ಹೆಚ್ಚುಬಿಡುವು, ಮಧ್ಯಾಹ್ನದ ವಿಶ್ರಾಂತಿ ಇತ್ಯಾದಿ. ಅಂದರೆ, ಆಟದ ಮೈದಾನಗಳು, ಆಟಿಕೆಗಳು, ಅಧಿಕ ಸಂಖ್ಯೆಯ ಕೋಣೆಗಳು, ಪೀಠೋಪಕರಣಗಳು, ಅಧಿಕ ಸಂಖ್ಯೆಯ ಶಿಕ್ಷಕರು ಮುಂತಾದವುಗಳ ಅಗತ್ಯವನ್ನು ಕಂಡುಕೊಂಡು ಅವನ್ನು ಪೂರೈಸುವುದು. ಓದುವುದು, ಬರೆವಣಿಗೆ, ಲೆಕ್ಕಮಾಡುವುದನ್ನು ಕಲಿಸುವುದರ ಜೊತೆಗೆ ಆಟಪಾಟಗಳು, ಸಂಗೀತ, ಕಲೆ ಮುಂತಾದವುಗಳಿಗೂ ಗಮನಕೊಡುತ್ತಿದ್ದರು. 1993-94ರ ವರದಿಯಂತೆ ಪೂರ್ವಪ್ರಾಥಮಿಕ ಹಂತದಲ್ಲಿ 78,333 ಶಾಲೆಗಳಲ್ಲಿ 5,696,000 ವಿದ್ಯಾರ್ಥಿಗಳಿಗೆ 6,46,000 ಮಂದಿ ಶಿಕ್ಷಕರು ಶಿಕ್ಷಣ ನೀಡುತ್ತಿದ್ದರು : (3) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ : ಮಕ್ಕಳು ತಮ್ಮ ಏಳನೆಯ ವಯಸ್ಸಿನಲ್ಲಿ ಶಾಲೆಗೆ ಸೇರುತ್ತಿದ್ದರು. ನಾಲ್ಕು ವರ್ಷ ಅವಧಿಯ ಪ್ರಾಥಮಿಕ ಶಾಲೆಗಳೂ ನಾಲ್ಕುವರ್ಷ ಅವಧಿಯ ಕಿರಿಯ ಪ್ರೌಢಶಾಲೆಗಳೂ ಬೇರೆ ಬೇರೆಯಾಗಿ ಇದ್ದರೂ ಇವೆರಡನ್ನೂ ಒಳಗೊಂಡಿರುವ ಎಂಟು ವರ್ಷ ಅವಧಿಯ ಶಾಲೆಗಳೂ ಇದ್ದುವು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕೆಂಬ ಉದ್ದೇಶದಿಂದ ಈ ಶಾಲೆಗಳನ್ನು ತೆರೆಯಲಾಗಿತ್ತು.

ಸಮಾಜವಾದಿ ಕ್ರಾಂತಿಗೆ ಮೊದಲು ಸ್ಥಾಪನೆಗೊಂಡ ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆಗಳು ಬಹಳ ಸೀಮಿತವಾಗಿದ್ದು ಯಾವುದೇ ಬದಲಾವಣೆ ಇಲ್ಲದೆ ವಿಕಾಸಕ್ಕೂ ಒಳಗಾಗಿರಲಿಲ್ಲ. eóÁರ್ ದೊರೆಗಳ ಆಡಳಿತ ಇದ್ದರಷ್ಯದಲ್ಲಿ ಒಟ್ಟು ಅನಕ್ಷರತೆ ಶೇ. 76. ಆದರೆ ಮಹಿಳೆಯರಲ್ಲಿ ಅದು ಶೇ. 87ರಷ್ಟು ಇತ್ತು. ರಷ್ಯದ ಜನಸಂಖ್ಯೆಯ 4/5ರಷ್ಟು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ ಮತ್ತು ಶಾಲೆಗೆ ಹೋದವರ ಪೈಕಿ ಕೇವಲ ಕೆಲವು ಮಕ್ಕಳಿಗೆ ಮಾತ್ರ ಪ್ರಾಥಮಿಕ ಹಂತದ ಬಳಿಕವೂ ವಿದ್ಯಾಭ್ಯಾಸ ಮುಂದುವರೆಸುವ ಅವಕಾಶಗಳು ಲಭ್ಯವಿದ್ದುವು. ಅಂದರೆ, ಪ್ರತಿಯೊಂದು ಸಾವಿರಕ್ಕೆ 11 ಮಂದಿ ಮಾತ್ರ ಪ್ರಾಥಮಿಕ ಮಟ್ಟಕ್ಕಿಂತ ಹೆಚ್ಚಿನ ಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದರು ಎಂಬುದು ತಿಳಿದುಬಂದಿದೆ. ಆದರೆ ಅಕ್ಟೋಬರ್ 1917ರ ಸಮಾಜವಾದಿ ಮಹಾಕ್ರಾಂತಿ ರಷ್ಯದ ಇಡೀ ಸಾಮಾಜಿಕ ಸ್ಥಿತಿಯನ್ನೇ ಬದಲಾಯಿಸಿತು. ಶಿಕ್ಷಣಕ್ಕೆ ಸಂಬಂಧಿಸಿದ ಸೂತ್ರಗಳಲ್ಲೂ ಬದಲಾವಣೆಗಳು ಕಂಡುಬಂದುವು. ಆದ್ದರಿಂದ ಎಲ್ಲ ಗಣರಾಜ್ಯಗಳ ಜನತೆಯ ಒಗ್ಗೂಡಿದ ಪ್ರಯತ್ನದ ಸಲುವಾಗಿ ನಿರಕ್ಷರತೆಯನ್ನು ಕೇವಲ 20 ವರ್ಷಗಳಲ್ಲಿ ನಿವಾರಿಸಲಾಯಿತು. 1930ರ ದಶಕದ ಕೊನೆಯಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನೂ 1950ರ ದಶಕದ ಕೊನೆಯಲ್ಲಿ ಸಾರ್ವತ್ರಿಕ 8 ವರ್ಷದ ಅವಧಿಯ ಶಿಕ್ಷಣವನ್ನೂ ಜಾರಿಗೆ ತರಲಾಯಿತು. 1970ರ ದಶಕದಲ್ಲಿ ದೇಶದಲ್ಲಿ ಸಾರ್ವತ್ರಿಕ ಸೆಕೆಂಡರಿ ಅಥವಾ 10 ವರ್ಷ ಅವಧಿಯ ಶಿಕ್ಷಣವನ್ನು ಜಾರಿಗೊಳಿಸಲಾಗಿತ್ತು. ಇದು ಎಲ್ಲರಿಗೂ ಕಡ್ಡಾಯ ಮತ್ತು ಉಚಿತವಾಗಿತ್ತು. ಅಂದರೆ 7 ರಿಂದ 15 ವರ್ಷದವರಿಗಾಗಿ ಎಂಟು ವರ್ಷ ಅವಧಿಯ ಸಾಮಾನ್ಯ ಶಾಲಾವ್ಯವಸ್ಥೆ ಇದ್ದರೆ 7 ರಿಂದ 17 ವರ್ಷದವರಿಗಾಗಿ ಹತ್ತುವರ್ಷ ಅವಧಿಯ ಶಾಲೆಗಳಿದ್ದುವು. ಯು. ಎಸ್. ಎಸ್. ಆರ್.ನಲ್ಲಿ 8 ವರ್ಷದ ಶಾಲಾ ಶಿಕ್ಷಣ ಕಡ್ಡಾಯವಾಗಿತ್ತು. ಅನಂತರ ಅದು ಹತ್ತು ವರ್ಷ ಅವಧಿಯ ಶಿಕ್ಷಣವಾಯಿತು. ಮೊದಲನೆಯ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಪೈಕಿ ಶೇ. 90ರಷ್ಟು ಮಂದಿ ಸಾಮಾನ್ಯ ಪ್ರೌಢಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದರು. ಎಲ್ಲ ಪ್ರೌಢಶಾಲೆಗಳು ಒಂದೇ ತೆರನಾದ ಶಿಕ್ಷಣವನ್ನು ನೀಡುತ್ತಿದ್ದವು. 30 ಗಂಟೆಗಳು ಕಡ್ಡಾಯದ ವಿಷಯಗಳನ್ನು ಕಲಿಯುವುದರ ಜೊತೆಗೆ ವಾರಕ್ಕೆ 2 ರಿಂದ 6 ಗಂಟೆಗಳಕಾಲ ಐಚ್ಛಿಕ ವಿಷಯಗಳನ್ನೂ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಅನಂತರ ವಿಶೇಷ ಪ್ರೌಢಶಾಲೆಗಳು ಹಾಗೂ ತರಗತಿಗಳು ಅತ್ತಿತ್ವಕ್ಕೆ ಬಂದುವು. ವ್ಯವಸ್ಥಿತ ವಿಷಯಗಳ ಜೊತೆಗೆ ಭಾಷೆ, ಗಣಿತವಿಜ್ಞಾನ, ಭೌತವಿಜ್ಞಾನ,ರಸಾಯನವಿಜ್ಞಾನ, ಇಲ್ಲವೆ ಜೀವವಿಜ್ಞಾನ-ಇವುಗಳ ಪೈಕಿ ಯಾವುದಾದರು ಒಂದು ವಿಷಯಕ್ಕೆ ಇಲ್ಲಿ ಪ್ರಾಮುಖ್ಯ ಕೊಡಲಾಗಿತ್ತು. ನಿರ್ದಿಷ್ಟ ವಿಷಯವೊಂದರಲ್ಲಿ ವಿಶೇಷ ಅಭಿಸಾಮರ್ಥ್ಯವನ್ನು ಪಡೆದಿರುವ ಮಕ್ಕಳಿಗಾಗಿಯೇ ಈ ಶಾಲೆಗಳನ್ನುರೂಪಿಸಲಾಗಿತ್ತು, ಬುದ್ಧಿಮಾಂದ್ಯರು ಮತ್ತು ಅಂಗವಿಕಲರಿಗಾಗಿ ಪ್ರತ್ಯೇಕ ಪ್ರೌಢಶಾಲೆಗಳಿದ್ದುವು. ಇತರ ಪ್ರೌಢಶಾಲೆಗಳಿಗಿಂತ ಈ ಶಾಲೆಗಳ ಕಾರ್ಯಕ್ರಮಗಳು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದುವು. ಪ್ರೌಢಹಂತದ ಕಡೆಯಲ್ಲಿ ಐಚ್ಛಿಕ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ ಓದು-ಬರೆಹಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದರಲ್ಲಿ ಉತ್ತೀರ್ಣರಾದವರಿಗೆ ಪ್ರೌಢಶಾಲಾ ಡಿಪ್ಲೊಮ ಲಭ್ಯವಾಗುತ್ತಿತ್ತು. ಉದ್ಯೋಗದಲ್ಲಿರುವವರು ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಮಾಡಬೇಕಾಗಿದ್ದಲ್ಲಿ ಸಂಜೆ ಶಾಲೆಗಳಿಗೆ ಹೋಗುತ್ತಿದ್ದರು. ಇದು ಸೋವಿಯೆತ್ ಒಕ್ಕೂಟದಲ್ಲಿನ ಪರಿಸ್ಥಿತಿಯಾಗಿತ್ತು. ಇಂದಿನ ರಷ್ಯದಲ್ಲಿ ವಿವಿಧ ರೀತಿಯ ಪ್ರೌಢಶಾಲೆಗಳಿಗೆ ಅಧಿಕ ಪ್ರಾಮುಖ್ಯ ನೀಡಲಾಗಿದೆ. 1990-91 ಜನಗಣತಿಯ ವರದಿಯಂತೆ ರಷ್ಯನ್ ಫೆಡರೇಷನ್ನಲ್ಲಿ 69,600 ಪ್ರೌಢಶಾಲೆಗಳಿದ್ದು ಅವುಗಳಲ್ಲಿ 20,900,000 ಮಂದಿ ವಿದ್ಯಾರ್ಥಿಗಳಿದ್ದು ಶಿಕ್ಷಣ ಪಡೆಯಲು ಶುಲ್ಕ ತೆರಬೇಕಾಗಿರಲಿಲ್ಲ. 1991ರ ಅನಂತರ ಶೈಕ್ಷಣಿಕ ವ್ಯವಸ್ಥೆಯರಚನೆ ಹಾಗೂ ಸಾಮಾಜಿಕ ಪರಿಸರಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ಈ ಹಂತದ ಪಠ್ಯಕ್ರಮದಲ್ಲಿಯೂ ಯುಕ್ತ ಬದಲಾವಣೆಗಳು ಆಗಿವೆ. ಉದಾ : ಹಿಂದೆರದ್ದುಗೊಳಿಸಿರುವ ವಿಷಯಗಳನ್ನು ಪುನ: ಸೇರಿಸಿಕೊಂಡಿರುವುದು, ರಾಜಕೀಯದಿಂದ ಸ್ಫೂರ್ತಿಪಡೆಯುವ ವಿಷಯಗಳಿಗೆ ಪೂರ್ಣವಿರಾಮ ಹಾಕುವುದು ಇತ್ಯಾದಿ. ಈ ಸಂದರ್ಭದಲ್ಲಿ ಅನೇಕ ಖಾಸಗಿ ಶಾಲೆಗಳು ಅಸ್ತಿತ್ವವನ್ನು ಪಡೆದುಕೊಂಡುವು. 1992ರಲ್ಲಿ 300 ನಾನ್‍ಸ್ಟೇಟ್ ಶಾಲೆಗಳು ಸ್ಥಾಪಿತವಾದುವು. ಇವುಗಳಲ್ಲಿ 20,000 ವಿದ್ಯಾರ್ಥಿಗಳಿದ್ದರು. 1993-94ರ ಜನಗಣತಿಯ ಪ್ರಕಾರ ರಷ್ಯನ್ ಫೆಡರೇಷನ್ನಲ್ಲಿ 66,235 ಪ್ರಾಥಮಿಕ ಶಾಲೆಗಳಿದ್ದು ಅವುಗಳಲ್ಲಿ 7,783,000 ವಿದ್ಯಾರ್ಥಿಗಳೂ 395,000 ಶಿಕ್ಷಕರೂ ಸಾಮಾನ್ಯ ಪ್ರೌಢಶಾಲೆಗಳಲ್ಲಿ 12,424,000 ವಿದ್ಯಾರ್ಥಿಗಳೂ ಮತ್ತು 1,070,000 ಶಿಕ್ಷಕರು ತಂತಮ್ಮ ಪಾತ್ರಗಳನ್ನು ಯುಕ್ತ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ಜನಸಂಖ್ಯೆಯ ಹೆಚ್ಚಳದಿಂದಾಗಿ 94-95ರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 7,849,000 ವಿದ್ಯಾರ್ಥಿಗಳಿದ್ದರೆಂದು ತಿಳಿದು ಬಂದಿದೆ.

(4) ವಿಶೇಷ ಶಿಕ್ಷಣ : ನರ್ಸರಿ ಶಾಲೆಗಳು ಮತ್ತು ಶಿಶುವಿಹಾರಗಳು ಮಕ್ಕಳಿಗೆ ವಾಕ್ ದೋಷಗಳ ವಿರುದ್ಧ ವಿಶೇಷ ಚಿಕಿತ್ಸೆಗಳನ್ನು ನೀಡುತ್ತಿದ್ದುವು. ಇಲ್ಲಿ ಡಾಕ್ಟರುಗಳು, ನರ್ಸ್‍ಗಳು, ವಾಕ್‍ಚಿಕಿತ್ಸಕರು (ಸ್ಪೀಚ್ ತೆರಪಿಸ್ಟ್ಸ್) ಮತ್ತು ವಿಶೇಷವಾಗಿ ತರಬೇತಿ ಪಡೆದ ಅಧ್ಯಾಪಕರು ಮುಂತಾದವರು ಇರುತ್ತಾರೆ. ವಿಶೇಷ ತಜ್ಞರಿಂದ ಪೂರ್ವ ಪರೀಕ್ಷೆಗೆ ಒಳಗಾಗಿ ಶಾಲೆಗೆ ಕಳುಹಿಸಲಾಗುವ ಮಕ್ಕಳು ಈ ಶಾಲೆಗಳಲ್ಲಿ 3 ಇಲ್ಲವೆ 4 ತಿಂಗಳು ಇರುತ್ತಾರೆ. ಮಕ್ಕಳ ವಿಕಾಸಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ಸಂಘಟಿಸಲಾಗಿರುತ್ತದೆ. 5 ಇಲ್ಲವೆ 10 ಮಿನಿಟುಗಳು ಹಿಂದಿನ ಪಾಠದ ಬಗ್ಗೆ ಪುನರಾವರ್ತನೆ ಮಾಡಿ ಅನಂತರ ಹೊಸ ಪಾಠಕ್ಕೆ ಗಮನ ನೀಡುವುದಿದೆ. ಆದ್ದರಿಂದ ಪಾಠಕ್ಕೆ ಲಭ್ಯವಾಗುತ್ತಿದ್ದ ಸಮಯ ಕೇವಲ ಅರ್ಧಗಂಟೆ ಮಾತ್ರ. ಹೊಸವಿವರಣೆಗಳು ಮತ್ತು ಕಲಿತದ್ದು ಎಷ್ಟರಮಟ್ಟಿಗೆ ಅರ್ಥವಾಗಿದೆ ಎಂದು ತಿಳಿಯಲು ಉಳಿದ ಸಮಯವನ್ನು ಬಳಸಿಕೊಳ್ಳುವುದಿದೆ. ವ್ಯಕ್ತಿಗೆ ಪ್ರಾಮುಖ್ಯಕೊಟ್ಟು ಆತನ ಸಾಮಾಜಿಕ ಮತ್ತು ಜೀವಂತ ಸ್ಥಿತಿಗತಿಗಳು ಹಾಗೂ ವಾಕ್‍ದೋಷದ ಮಟ್ಟ ಮುಂತಾದವನ್ನೆಲ್ಲ ಗಮನಿಸಲಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನನುಭವಿಗಳಿಗೆ ಅನುಭವಿಗಳಿಂದ ಅವಕಾಶಗಳು ಒದಗುತ್ತವೆ. ಇತರ ಶಾಲೆಗಳಲ್ಲಿದ್ದಂತೆ ಇಲ್ಲಿಯೂ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳು-ಅಂದರೆ ಗ್ರಂಥಾಲಯ, ಆಟಿಕೆಗಳು, ನರ್ಸುಗಳು, ಆಯಾಗಳು ಮೊದಲಾದವು ಲಭ್ಯವಾಗುತ್ತವೆ. 1990-91ರ ಜನಗಣತಿಯ ವರದಿಯಲ್ಲಿ ತಿಳಿಸಿರುವಂತೆ ಪ್ರೌಢಹಂತದಲ್ಲಿಯ ವಿಶೇಷ ಶಾಲೆಗಳ ಬಗ್ಗೆಯೂ ಗಮನ ನೀಡಲಾಗಿದೆ. ಇಲ್ಲಿನ 2,603 ಸಂಸ್ಥೆಗಳಲ್ಲಿ 2,270,000 ವಿದ್ಯಾರ್ಥಿಗಳಿದ್ದರು. ಇತರ ದೇಶಗಳಲ್ಲಿ ಇರುವಂತೆಯೇ ಈ ಹಂತದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅವರವರ ಆವಶ್ಯಕತೆಗಳಿಗೆ ಅನುಗುಣವಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಇಲ್ಲವೆ ಉದ್ಯೋಗಗಳಿಗೆ ಹೋಗಲು ಅವಕಾಶವಿದೆ.

(5) ವೃತ್ತಿ ಶಿಕ್ಷಣ : ಏಳು ಅಥವಾ ಎಂಟು ವರ್ಷಗಳ ಅವಧಿಯ ಶಾಲಾಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವಿದೆ. ಇಲ್ಲಿ 1ರಿಂದ 4 ವರ್ಷಗಳಕಾಲ ಶಿಕ್ಷಣ ನೀಡಲಾಗುವುದು. 1973ರಲ್ಲಿ ಇದ್ದ 5700 ವೃತ್ತಿಶಾಲೆಗಳ ಪೈಕಿ 1300 ಪ್ರೌಢಶಾಲೆಗಳು ವೃತ್ತಿಶಾಲೆಗಳಾಗಿದ್ದು ಮೂರರಿಂದ ನಾಲ್ಕು ವರ್ಷಗಳು ಬೋಧನೆ ನೀಡುವಂತವಾಗಿದ್ದುವು. ಇಲ್ಲಿ ಶುಲ್ಕದ ಗೊಡವೆ ಇಲ್ಲ. ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಠಡಿ, ಬೋರ್ಡು ಮತ್ತು ಸಮವಸ್ತ್ರಗಳು ಹಾಗೂ ಭತ್ಯೆಗಳನ್ನು ಕೊಡಲಾಗುತ್ತಿತ್ತು. ಇಲ್ಲಿಂದ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳಿಗೆ ಅವರವರ ಕ್ಷೇತ್ರಗಳಲ್ಲಿಯೇ ಉದ್ಯೋಗಗಳನ್ನು ನೀಡಲಾಗುತ್ತಿತ್ತು. ಒಂದು ಹಂತದ ತನಕ ವಿದ್ಯಾರ್ಥಿಗಳು ಶಿಕ್ಷಣಪಡೆದಿರಲಿ ಇಲ್ಲದಿರಲಿ ಈ ಶಾಲೆಗಳಿಗೆ ಸೇರಿ ಶಿಕ್ಷಣಪಡೆಯಲು ಅವಕಾಶವಿದೆ. ಈ ಸಂಸ್ಥೆಗಳಲ್ಲಿನ ಕಾರ್ಯಕ್ರಮಗಳ ಸಂಘಟನೆ, ನಿರ್ವಹಣೆಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಿದ್ದು ಅಧಿಕಸಂಖ್ಯೆಯ ವಿದ್ಯಾರ್ಥಿಗಳಿಗೆ (93-94ರ ವರದಿಯಲ್ಲಿ ಹೇಳಿರುವಂತೆ 1,007,000) ತರಬೇತಿ ನೀಡಲಾಗುತ್ತಿತ್ತು.

(6) ಟಿಕ್ನಿಕಮ್‍ಗಳು : ವೈದ್ಯಕೀಯ, ಶೈಕ್ಷಣಿಕ, ಸಂಗೀತ, ಕಲೆ ಮತ್ತು ಇತರ ಶಾಲೆಗಳನ್ನು ಹಾಗೂ ವಿಶೇಷ ಶಿಕ್ಷಣ ನೀಡುತ್ತಿರುವ ಪ್ರೌಢಶಾಲೆಗಳನ್ನು ಟಿಕ್ನಿಕಮ್ ಎಂಬುದು ಒಳಗೊಂಡಿದೆ. ಸಾಮಾನ್ಯ ಶಿಕ್ಷಣ ನೀಡುವ ಶಾಲೆಯಲ್ಲಿ 8 ವರ್ಷ ಇಲ್ಲವೆ 10 ವರ್ಷ ಅವಧಿಯ ಶಿಕ್ಷಣ ಪಡೆದ 14 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಇಲ್ಲಿ ಪ್ರವೇಶ ಇದೆ. ಆದರೆ ಪ್ರವೇಶಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನು ಮಾತ್ರ ಈ ಸಂಸ್ಥೆಗಳು ಸೇರಿಸಿಕೊಳ್ಳುತ್ತವೆ. ಎರಡರಿಂದ ಮೂರು ವರ್ಷಗಳು ಪ್ರೌಢೋತ್ತರ ಶಿಕ್ಷಣ ಪಡೆದವರನ್ನು (2.1/2 ವರ್ಷಗಳ ಅವಧಿ) ಅರ್ಧಭಾಗದಷ್ಟು ಟಿಕ್ನಿಕಮ್‍ಗಳು ಸಮ್ಮತಿಸಿವೆ. ತಂತ್ರವಿದರು, ಯಂತ್ರವಿದರು, ಕಿರಿಯ ಕೃಷಿಪರಿಣತರು (ಜೂನಿಯರ್ ಅಗ್ರಾನಮಿಸ್ಟ್), ಸರಕು ಮಾರಾಟದ ಪರಿಣತರು, ಪ್ಯಾರಾಮೆಡಿಕ್ಸ್, ಶಿಶುವಿಹಾರ ಮತ್ತು ಪ್ರಾಥಮಿಕ ಶಾಲಾಶಿಕ್ಷಕರು, ಔಷಧವಿತರಕರು (ಫಾರ್ಮಸಿಸ್ಟ್ಸ್), ದಂತವೈದ್ಯರು ಹಾಗೂ ನರ್ಸುಗಳಿಗೆ ಈ ಸಂಸ್ಥೆಗಳು ತರಬೇತಿ ನೀಡುತ್ತವೆ. ಇವನ್ನು ಅಮೆರಿಕದ ಜೂನಿಯರ್ ಕಾಲೇಜುಗಳಿಗೆ ಹೋಲಿಸಬಹುದು. 1974-75ರಲ್ಲಿ 4,478,000 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿದ್ದ 4280 ಟಿಕ್ನಿಕಮ್‍ಗಳಿದ್ದುವು. 1993-94ರ ಜನಗಣತಿಯಲ್ಲಿ ವರದಿಮಾಡಿರುವಂತೆ 301,000 ವಿದ್ಯಾರ್ಥಿಗಳು ಪ್ರಶಿಕ್ಷಣವನ್ನು ಪಡೆದಿದ್ದಾರೆ. ಇಲ್ಲಿಯ ಶಿಕ್ಷಣ ಪೂರೈಸಿದ ಅನಂತರ ಆಸಕ್ತರು ಉನ್ನತ ಶಿಕ್ಷಣಕ್ಕೆ ಹೋಗುವುದಕ್ಕೆ ಅವಕಾಶಗಳಿವೆ.

(7) ಉನ್ನತ ಶಿಕ್ಷಣ : ಅಕ್ಟೋಬರ್ 1917ರ ಸಮಾಜವಾದಿ ಮಹಾಕ್ರಾಂತಿಗೆ ಮೊದಲು ಉನ್ನತ ಶಿಕ್ಷಣ ಸಂಸ್ಥೆಗಳು ಅಷ್ಟಾಗಿರಲಿಲ್ಲ. ಅಂದರೆ, ಈ ಕ್ರಾಂತಿಯ ಬಳಿಕ ಉನ್ನತ ಶಿಕ್ಷಣದ ವಿಸ್ತರಣೆ ಹಾಗೂ ಗುಣವರ್ಧನೆಗಳಿಗೆ ರಷ್ಯ ಹೆಚ್ಚು ಗಮನ ನೀಡಿರುವುದು ಕಂಡುಬಂದಿದೆ. ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳನ್ನು ಇಲ್ಲಿ ವೈ. ಯು. ಜೀ (ವೈಶೀ ಉಚ್ಚಿಬೋನೆ ಜûವಿಡೇನೀ) ಎಂದು ಕರೆಯುವರು. ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳಿಗೆ ವಿಶ್ವವಿದ್ಯಾಲಯಗಳು ಮಾತ್ರವಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳೂ ಸೌಲಭ್ಯಗಳನ್ನು ಒದಗಿಸುತ್ತಿದ್ದುವು. ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವುದಕ್ಕೆ ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅವಕಾಶವೊದಗಿಸುತ್ತವೆ. ಉದಾ : ಸಿವಿಲ್, ಲೋಹವಿಜ್ಞಾನ ಮುಂತಾದ ಎಂಜಿನಿಯರಿಂಗ್ ಕ್ಷೇತ್ರಗಳು; ವೈದ್ಯ, ಶಿಕ್ಷಣ, ಆರ್ಥಶಾಸ್ತ್ರ ಇತ್ಯಾದಿ. ಶಿಕ್ಷಣದ ಅವಧಿ 4.1/2 ವರ್ಷಗಳಿಂದ 6.1/2 ವರ್ಷಗಳು. ಇಲ್ಲಿನ ಶಿಕ್ಷಣಕ್ಷೇತ್ರ 20 ಬಗೆಯ ವಿದ್ಯಾರಂಗಗಳು ಮತ್ತು 350 ಬಗೆಯ ವಿಶಿಷ್ಟ ಕ್ಷೇತ್ರಗಳಿಗೂ ಸಂಬಂಧಿಸಿದೆ. ಉನ್ನತಶಿಕ್ಷಣದ ಪ್ರವೇಶಕ್ಕೆ ತೀವ್ರಸ್ಪರ್ಧೆ ಇರುವುದರಿಂದ ಶೇ. 20ರಷ್ಟು ಮಂದಿಗೆ ಮಾತ್ರ ಅವಕಾಶ ಲಭ್ಯ ಇತ್ತು. ಹಿರಿಯ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ಎಲ್ಲರೂ ಉನ್ನತಶಿಕ್ಷಣಕ್ಕೆ ಬರಲು ಪ್ರಯತ್ನಿಸುತ್ತಿರಲಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ.

1943ರಲ್ಲಿ ಮಾಸ್ಕೋದಲ್ಲಿ ಸ್ಥಾಪಿತವಾಗಿದ್ದರಷ್ಯನ್ ಅಕೆಡಮಿ ಆಫ್ ಎಜುಕೇಷನ್ನಿನಲ್ಲಿ 22 ಸಂಶೋಧನ ಸಂಸ್ಥೆಗಳು ಮತ್ತು 14 ಪ್ರಯೋಗಶಾಲೆಗಳ ಜೊತೆಗೆ ಐದು ವಿಭಾಗಗಳು ಇದ್ದವು. ವ್ಯಕ್ತಿತ್ವವಿಕಾಸ, ಶರೀರವಿಜ್ಞಾನ, ಶಾಲಾಪೂರ್ವ ಶಿಕ್ಷಣ, ಪ್ರೌಢಶಿಕ್ಷಣ, ಪರಿಹಾರಾತ್ಮಕ ಶಿಕ್ಷಣ, ಶೈಕ್ಷಣಿಕ ಸುಧಾರಣೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಅಂಶಗಳಿಗೆ ಈ ಸಂಶೋಧನೆ ಸಂಸ್ಥೆಗಳು ಗಮನ ಹರಿಸುತ್ತಿದುದರಿಂದ ಅಲ್ಲಿನ ಜನತೆಗೆ ಅದರಲ್ಲೂ ಮುಖ್ಯವಾಗಿ ಯುವಪೀಳಿಗೆಗಾಗಿ ಇವು ಹೆಚ್ಚು ಉಪಯುಕ್ತ ಕೆಲಸಗಳನ್ನು ಮಾಡಿವೆ.

1973ರಲ್ಲಿ 700,000 ಪದವೀಧರರಿದ್ದು ಇದರಲ್ಲಿ ಶೇ. 45ರಷ್ಟು ಮಂದಿಯನ್ನು ವಿಶ್ವವಿದ್ಯಾಲಯ, ಭೋಧನೆ, ಕಲೆ ಮತ್ತು ಲಿಬರಲ್ ವೃತ್ತಿಗಳಿಗೆ ಪ್ರವೇಶಿಸಲು ಆಯ್ಕೆ ಮಾಡಿಕೊಂಡಿರುವುದಾಗಿ ಮಾಹಿತಿ ದೊರೆತಿದೆ. ಶೇ. 40ರಷ್ಟು ಎಂಜಿನಿಯರಿಂಗ್, ಶೇ. 7ರಷ್ಟು ವ್ಯವಸಾಯ, ಶೇ. 8ರಷ್ಟು ಮೆಡಿಸಿನ್ ಮತ್ತು ಫಿಸಿಕಲ್ ಕಲ್ಚರ್-ಇವುಗಳಿಗೆ ಸಂಬಂಧಿಸಿದ ವೃತ್ತಿಗಳಿಗೆ ಹೋಗಿರುವುದು ತಿಳಿದು ಬಂದಿದೆ. 1975ರ ವರೆಗಿನ ಅವಧಿಯಲ್ಲಿ ಈ ಪರಿಸ್ಥಿತಿ ಇತ್ತಾದರೆ 10-12 ವರ್ಷಗಳ ಅನಂತರದ ಪರಿಸ್ಥಿತಿಯೇ ಬೇರೆ. ತಾಷ್ಕೆಂಟ್ ವಿಶ್ವವಿದ್ಯಾಲಯದಲ್ಲಿ 55 ದೇಶಗಳ 600 ವಿದೇಶಿ ವಿದ್ಯಾರ್ಥಿಗಳೂ ಸೇರಿದಂತೆ 20,000 ವಿದ್ಯಾರ್ಥಿಗಳು ಇದ್ದರು. ಇಲ್ಲಿ 15 ವಿಭಾಗಗಳು, 141 ಪೀಠಗಳು ಮತ್ತು 15 ಸಂಶೋಧನ ಪ್ರಯೋಗಾಲಯಗಳು ಇದ್ದುವು. ರಷ್ಯನ್ ಹಾಗೂ ಉಜ್ಬೆಕ್ ಭಾಷೆಗಳಲ್ಲಿ 25 ವಿಶೇಷ ವಿಷಯಗಳನ್ನು ಬೋಧಿಸಲಾಗುತ್ತಿತ್ತು. ಈ ವಿಶ್ವವಿದ್ಯಾಲಯದಲ್ಲಿ 3,000,000 ಪುಸ್ತಕಗಳಿರುವ ಗ್ರಾಂಥಾಲಯ ಮತ್ತು ಉನ್ನತಮಟ್ಟದ ಕಂಪ್ಯೂಟರ್ ಕೇಂದ್ರಗಳು ಇದ್ದುವು. ಶೇ. 70 ಕ್ಕಿಂತ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿವೇತನವನ್ನು ನೀಡುತ್ತಿತ್ತು. ವಿಶ್ವವಿದ್ಯಾಲಯ 4000 ವಿದ್ಯಾರ್ಥಿಗಳಿಗಾಗಿ ಡಾರ್ಮಿಟರಿಗಳು, ಒಂದು ಆರೋಗ್ಯಧಾಮ, ಆರೋಗ್ಯ ವರ್ಧ ಕೇಂದ್ರ ಹಾಗೂ ಕ್ರೀಡಾಶಿಬಿರಗಳು ಇದ್ದವು. ಪ್ರತಿವರ್ಷವೂ ಸು. 3,70,000 ವಿದ್ಯಾರ್ಥಿಗಳು ಇಲ್ಲಿನ ಕಾಲೇಜುಗಳಿಂದ ಎಂಜಿನಿಯರ್ ಪದವಿಗಳನ್ನು ಪಡೆಯುತ್ತಿದ್ದರು. ವೈದ್ಯರು, ಕೃಷಿಶಾಸ್ತ್ರಜ್ಞರುಗಳಲ್ಲದೆ ಶಿಕ್ಷಕರುಗಳಿಗಿಂತ ಎಂಜಿನಿಯರುಗಳೇ ಅಧಿಕ ಸಂಖ್ಯೆಯಲ್ಲಿದ್ದರು.

ಸಮಾಜವಾದಿ ಮಹಾಕ್ರಾಂತಿಗೆ ಮೊದಲು ಉನ್ನತಶಿಕ್ಷಣಸಂಸ್ಥೆಗಳೇ ಇಲ್ಲದಿದ್ದ ಕಜಾಕ್‍ಸ್ತಾನದ ವಿಶ್ವವಿದ್ಯಾಲಯದಲ್ಲಿ ಭಾರತವನ್ನೂ ಒಳಗೊಂಡಂತೆ 20 ದೇಶಗಳ 13000 ವಿದ್ಯಾರ್ಥಿಗಳು ಪ್ರತಿವರ್ಷ ಉನ್ನತಶಿಕ್ಷಣ ಮತ್ತು ತರಬೇತಿಗಳನ್ನು ಪಡೆಯುತ್ತಿದ್ದರು.

ಸೋವಿಯತ್ ಒಕ್ಕೂಟದ 900 ಕ್ಕಿಂತ ಹೆಚ್ಚಿನ ಸಂಖ್ಯೆಯ ಉನ್ನತ ಶಿಕ್ಷಣದ ವ್ಯವಸ್ಥೆಗಳಲ್ಲಿ ಐದು ದಶಲಕ್ಷಗಳಿಗಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದರೆಂಬ ಮಾಹಿತಿ ದೊರೆತಿದೆ. ಇಲ್ಲಿನ ವಿದ್ಯಾರ್ತಿಗಳು ಕಲಿತದ್ದನ್ನು ಐದು ಪಾಯಿಂಟುಗಳ ಅಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತಿತ್ತು. 4 ಮತ್ತು 5 ಪಾಯಿಂಟುಗಳನ್ನು ಪಡೆದ ವಿದ್ಯಾರ್ಥಿಗಳು ಶೇ. 70ರಷ್ಟು ಮಂದಿ ಇದ್ದರೆಂದು ಇವರು ಪ್ರತಿವರ್ಷ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರೆಂದು ತಿಳಿದುಬಂದಿದೆ. ಉಚಿತ ಶಿಕ್ಷಣ, ಸಾಧನೋಪಕರಣ, ವೈಜ್ಞಾನಿಕೋಪಕರಣ, ಕ್ರೀಡಾಸಲಕರಣೆ ಮುಂತಾದವುಗಳೂ ಇಂಥ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದ್ದವು. 1987-88ರಲ್ಲಿ, 140 ಅಭಿವೃದ್ಧಿ ಶೀಲ ದೇಶಗಳಿಂದ ಬಂದಿದ್ದ 100,000 ವಿದ್ಯಾರ್ಥಿಗಳು ಸೋವಿಯತ್ ಒಕ್ಕೂಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದರು. ಮಾಸ್ಕೋದ ಪ್ಯಾಟ್ರಿಸ್ ಲುಮುಂಬ ಜನತಾಮೈತ್ರಿ ವಿಶ್ವವಿದ್ಯಾಲಯವನ್ನು ವಿದೇಶಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿಯೇ ಸ್ಥಾಪಿಸಲಾಗಿತ್ತು ಕಳೆದ 25 ವರ್ಷಗಳಲ್ಲಿ ಸು. 125,000 ವಿದೇಶಿ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ.

1991ರಲ್ಲಿ ಪ್ರತಿ 10,000 ಜನಸಂಖ್ಯೆಯಿಂದ 27 ಮಂದಿ ಪದವೀಧರರು ಹೊರ ಬರುತ್ತಿದ್ದರು ಎಂಬ ವಿಚಾರರಷ್ಯನ್ ಫೆಡರೇಷನ್ ನೀಡಲಾಗುತ್ತಿದ್ದ ಶಿಕ್ಷಣದ ಮಟ್ಟ ಎಷ್ಟರ ಮಟ್ಟಿಗೆ ಉನ್ನತ ಮಟ್ಟದಲ್ಲಿತ್ತು ಎಂಬುದನ್ನು ಸೂಚಿಸುತ್ತದೆ. ಇಲ್ಲಿ 2.6 ದಶಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸೇರಿದ್ದರು. 42 ವಿಶ್ವವಿದ್ಯಾಲಯಗಳೂ ಸೇರಿದಂತೆ ಒಟ್ಟು 514 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 24,500 ಮಂದಿ ವಿದ್ಯಾರ್ಥಿಗಳಿದ್ದರು ಎಂಬ ವಿಚಾರ 1990-91ರ ಜನಗಣತಿಯಿಂದ ತಿಳಿದುಬಂದಿದೆ.

1994-95ರ ಜನಗಣತಿಯ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 382,897 ಅಧ್ಯಾಪಕರಿದ್ದು, 4,458,363 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅಂದರೆ, ಹೊಸದಾಗಿ ಅಸ್ತಿತ್ವವನ್ನು ಪಡೆದಿದ್ದರೂ ಉನ್ನತ ಶಿಕ್ಷಣಕ್ಕೆ ಇರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ಈ ರಾಷ್ಟ್ರ ಒದಗಿಸಿದೆ ಎಂಬುದು ಗಮನಾರ್ಹ.

ಪ್ರೌಢಶಿಕ್ಷಣವನ್ನು ಪೂರೈಸಿ, ಉತ್ತೀರ್ಣರಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ತಮ್ಮ ಅರ್ಹತೆಗೆ ತಕ್ಕ ಸ್ಥಾನವನ್ನು ಪಡೆದ ಹಾಗೂ ಮಹಿಳೆಯರು ಇಲ್ಲಿನ ಉನ್ನತ ಕಲಿಕಾಸಂಸ್ಥೆಗಳಿಗೆ ಸೇರುತ್ತಿದ್ದರು. ವಿದ್ಯಾರ್ಥಿಗಳಿಗಾಗಿ ಪೂರ್ಣಾವಧಿ ಕಾಲೇಜುಗಳು, ಉದ್ಯೋಗಸ್ಥರಿಗಾಗಿ ಸಂಜೆಕಾಲೇಜುಗಳು ಮತ್ತು ಇತರರಿಗಾಗಿ ಅಂಚೆ ಶಿಕ್ಷಣ ಕಾಲೇಜುಗಳೂ ಇವೆ. ಪೂರ್ವಭಾವಿ ಯೋಜನೆಗಳಿಗೆ ಅನುಗುಣವಾಗಿ ಉನ್ನತಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ಅಷ್ಟಾಗಿ ಇಲ್ಲವಾಗಿದೆ. ಮೊದಲನೆಯ ಹಂತ ಐದು ವರ್ಷಗಳ ಅವಧಿಯದ್ದು, ಇದಕ್ಕೆ `ಪದವಿ ನೀಡುವ ಬದಲು `ಡಿಪ್ಲೊಮ ನೀಡುತ್ತಾರೆ. ಎರಡನೆಯ ಹಂತ `ಸ್ನಾತಕ್ಕೋತ್ತರ ಪದವಿ ; ಇದರ ಅವಧಿ ಎರಡು ವರ್ಷಗಳು. ಪ್ರತಿಭಾವಂತರು ಹಾಗೂ ಹೆಚ್ಚಿನ ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಹಾಯಧನ, ಅನುದಾನ, ಸ್ಟೈಫಂಡ್ ಮುಂತಾದವು ಲಭ್ಯವಿದೆ. ಇದಲ್ಲದೆ ಇವರು ಇಲ್ಲಿ ಶುಲ್ಕ ತೆರಬೇಕಾದ ಅಗತ್ಯವಿಲ್ಲ. ಇಲ್ಲಿ ಸಂಶೋಧಕರಿಗೆ ಹೆಚ್ಚಿನ ಮಾನ್ಯತೆ ಇದೆ. ರಷ್ಯದಲ್ಲಿ ಇನ್ನೂ ಕೆಲವು ವಿಶಿಷ್ಟ ರೀತಿಯ ಸಂಸ್ಥೆಗಳೂ ಇದ್ದುವು- ಕಮ್ಯೂನಿಸ್ಟ್ ಪಕ್ಷದ ವಿದ್ಯಾಲಯ, ಉನ್ನತಕಾರ್ಯ ನಿರ್ವಹಣಾ ವಿದ್ಯಾಲಯಗಳು ಈ ಪೈಕಿ ಕೆಲವು. ಇವುಗಳಿಗೆ ಸ್ಪರ್ಧಾಪರೀಕ್ಷೆಗಳ ಮೂಲಕ ಪ್ರವೇಶವಿತ್ತು. ಇಲ್ಲಿ ಶಿಕ್ಷಣ ಪಡೆದವರನ್ನು ಆಯಾಯಾ ಸಚಿವಾಲಯ ಉನ್ನತ ಹುದ್ದೆಗಳಿಗೆ ನೇಮಿಸಿಕೊಳ್ಳುತ್ತಿತ್ತು.

(8) ಸಂಶೋಧನೆ ಮತ್ತು ಪದವಿಗಳು : ಉನ್ನತ ಶಿಕ್ಷಣ ಸಂಸ್ಥೆಗಳು ಈ ಸೌಲಭ್ಯಗಳನ್ನು ಒದಗಿಸಿವೆ. ಉನ್ನತ ಶಿಕ್ಷಣದ ಡಿಪ್ಲೊಮ ಪಡೆದವರು ಅಲ್ಲಿ ಮೂರುವರ್ಷ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಸಲ್ಲಿಸಿದ ಬಳಿಕ ಅದಕ್ಕೆ ನಿಗದಿಪಡಿಸಿದ ಪರೀಕ್ಷೆಗಳಿಗೆ ಕುಳಿತು ತೇರ್ಗಡೆಯಾಗುವುದಲ್ಲದೆ ಸಾರ್ವಜನಿಕರ ಎದುರು ಪ್ರಸ್ತುತೀಕರಣಗೊಳಿಸಿದ ಬಳಿಕ `ಆಸ್ಟಿರಂಚುರ ಎಂಬ ಪದವಿಯನ್ನು ಪಡೆಯುತ್ತಿದ್ದರು. ಇದಕ್ಕೆ ಕ್ಯಾಂಡಿಡೇಟ್ ಎಂಬ ಹೆಸರು ಇತ್ತು. ಈ ಪದವಿ ಪಡೆದವರು ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಸಂಶೋಧನ ಸಂಸ್ಥೆಗಳಿಗೂ ಕೆಲಸ ಮಾಡಲು ಅರ್ಹತೆ ಪಡೆಯುತ್ತಾರೆ. ವರ್ಷಂಪ್ರತಿ ಸುಮಾರು ಒಂದು ಲಕ್ಷ ಮಂದಿ ಈ ಪದವಿ ಶಿಕ್ಷಣಕ್ಕೆ ಸೇರುತ್ತಾರೆ. ಅದರಲ್ಲಿ ಐದನೆಯ ಒಂದು ಭಾಗದಷ್ಟು ಮಂದಿಗೆ ಮಾತ್ರ ಆ ಪದವಿ ಲಭ್ಯವಾಗುತ್ತದೆ. ಆಸ್ಟಿರಂಚುರ ಪದವಿ ಪಡೆದವರು ಸಂಶೋಧನೆ ಮತ್ತು ಪ್ರಕಟಣೆಗಳ ಮೂಲಕ ದ್ವಿತೀಯ ಉನ್ನತ ಪದವಿಯಾದ ಡಾಕ್ಟೊರೇಟ್ ಪಡೆಯಬಹುದು. ಹಿಂದೆ ಈ ಕಾರ್ಯಕ್ರಮಗಳನ್ನು ಸುಪ್ರಿಂ ಅಟೆಸ್ಟೇಷನ್ ಕಮಿಷನ್ ಎಂಬ ರಾಷ್ಟ್ರೀಯ ಆಯೋಗ ನೋಡಿಕೊಳ್ಳುತ್ತಿತು.

(9) ಅಂಚೆ ಶಿಕ್ಷಣ : ಉನ್ನತ ಶಿಕ್ಷಣಕ್ಕೆ ದಾಖಲಾತಿ ಮಾಡಿಕೊಂಡವರ ಪೈಕಿ ಶೇ. 50ರಷ್ಟು ಮಂದಿ ಸಂಜೆಕಾಲೇಜುಗಳು ಹಾಗೂ ಅಂಚೆ ಶಿಕ್ಷಣಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಇದು ವ್ಯವಸ್ಥಿತ ಕಾರ್ಯಕ್ರಮಕ್ಕಿಂತಲೂ ಒಂದು ವರ್ಷದಷ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಡಿಪ್ಲೊಮಾ, ಪದವಿ ಮುಂತಾದವುಗಳನ್ನು ಇಲ್ಲಿಯೂ ನೀಡಲಾಗುವುದು. ಪೂರ್ಣಾವಧಿಯ ಉನ್ನತ ಕಲಿಕಾ ಸಂಸ್ಥೆಗಳು ನಿರ್ದೇಶಿಸುತ್ತಿದ್ದ 21 ಸ್ವತಂತ್ರ ಅಂಚೆ ಶಿಕ್ಷಣಶಾಲೆಗಳು ಮತ್ತು ಸಂಜೆಸಂಸ್ಥೆಗಳು ಮಾತ್ರವಲ್ಲದೆ ಅಂಚೆ ಶಿಕ್ಷಣ ಮತ್ತು ಸಂಜೆವೇಳೆಯ ಶಿಕ್ಷಣ ನೀಡುವಂಥ ಸಂಸ್ಥೆಗಳು (ಈವ್‍ನಿಂಗ್ ಅಫಿಲಿಯೇಷನ್ಸ್) ಒಂದು ಕಾಲದಲ್ಲಿ ಯು.ಎಸ್.ಎಸ್.ಅರ್. ನಲ್ಲಿ ಇದ್ದವು. 1974ರಲ್ಲಿ 75,632,000 ಮಂದಿ ಸಂಜೆ ಶಿಕ್ಷಣಕ್ಕಾಗಿಯೂ 1,581,000 ಮಂದಿ ಅಂಚೆ ಶಿಕ್ಷಣಕ್ಕಾಗಿಯೂ ದಾಖಲಾಗಿದ್ದರು. ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಹಂಬಲ, ಅಗತ್ಯಗಳು ಜನರಲ್ಲಿ ಹೆಚ್ಚಾಗುತ್ತಿರುವುದರಿಂದ ವಿವಿಧ ಒತ್ತಡಗಳು ಮತ್ತು ಕಾರಣಗಳ ಸಲುವಾಗಿ ಪೂರ್ಣಾವಧಿಯ ಅಧ್ಯಯನಕ್ಕೆ ಅರ್ಜಿಸಲ್ಲಿಸಿದ ಎಲ್ಲರಿಗೂ ಅವಕಾಶಗಳು ಲಭ್ಯವಿಲ್ಲದಿದ್ದರಿಂದಲೂ ಔಪಚಾರಿಕ ಶಿಕ್ಷಣಸಂಸ್ಥೆಗಳಿಗಿಂತ ರಷ್ಯದಲ್ಲಿ ವ್ಯಾಸಂಗಕ್ಕೆ ಹೆಚ್ಚಿನ ಕಲಿಕಾಸಾಮಗ್ರಿ ಲಭ್ಯವಿದೆ ಎಂದು ತಿಳಿದು ಹೆಚ್ಚುಮಂದಿ ಈ ಬಗೆಯ ಶಿಕ್ಷಣಕ್ಕೇ ಪ್ರಶಸ್ತ್ಯ ಕೊಡಲಾರಂಭಿಸಿದ್ದಾರೆ.

(10) ಆಡಳಿತ : ರಷ್ಯದ ಶಿಕ್ಷಣಕ್ಷೇತ್ರದಲ್ಲಿ ಆದ ಬದಲಾವಣೆಗಳ ಸಲುವಾಗಿ ಆಡಳಿತ ವ್ಯವಸ್ಥೆಯಲ್ಲೂ ವಿವಿಧ ರೀತಿಯ ಪರಿವರ್ತನೆಗಳಾಗುತ್ತಿವೆ. ಪಕ್ಷದ ಕೇಂದ್ರಸಮಿತಿ ಶಿಕ್ಷಣಕ್ಕೆ ಅಗತ್ಯವಾದ ನೀತಿಯನ್ನುರೂಪಿಸಿದರೆ ರಾಷ್ಟ್ರೀಯ ಸರ್ಕಾರ ಅದನ್ನು ಜಾರಿಗೆ ತರುತ್ತದೆ. ಉನ್ನತ ಮತ್ತು ವಿಶಿಷ್ಟ ಪ್ರೌಢಶಿಕ್ಷನ ಮಂತ್ರಾಲಯ ಉನ್ನತ ಶಿಕ್ಷಣಕಾರ್ಯಗಳನ್ನು ನಿಯಂತ್ರಿಸುತ್ತವೆ. ಇತರ ಮಂತ್ರಾಲಯಗಳು ಇದಕ್ಕೆ ಸಹಕಾರ ನೀಡುತ್ತಿವೆ. ರಾಷ್ಟ್ರೀಯ ಮತ್ತು ಪ್ರಾಂತಿಯ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಪೂರ್ವಭಾವಿಯೋಜನೆಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತಿದೆ. ಇತ್ತಿಚೆಗೆ ಶಿಕ್ಷಣದ ರೀತಿ ನೀತಿಗಳಲ್ಲಾದ ಬದಲಾವಣೆಗಳ ಆಧಾರದ ಮೇಲೆ ಆಧುನೀಕರಣ [ಕೈಗಾರಿಕೀಕರಣ], ಪಾಶ್ಚಾತ್ಯಕರಣ, ಔದ್ಯಮೀಕರಣ ಮುಂತಾದವುಗಳ ಪ್ರಭಾವದಿಂದಾಗಿ ಆಡಳಿತ ವ್ಯವಸ್ಥೆಯಲ್ಲೂ ಬದಲಾವಣೆಗಳು ಆಗಿವೆ. ತತ್ತ್ವನಿಷ್ಠ ಮನೋಭಾವ, ವರ್ತನೆ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದಕ್ಕೆ ಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸಿಕೊಳ್ಳುವ ಪ್ರಯತ್ನಸಾಗಿದೆ. ಶಾಸನ, ಆಡಳಿತ ನಿಯಮಗಳು, ಶಿಕ್ಷಣದ ಸಂಘಟನೆ, ಅಧ್ಯಾಪಕರ ನೇಮಕ, ಬೋಧನ ವಿಷಯಗಳು ಮುಂತಾದವುಗಳಿಗೆ ಸಂಬಂಧಿಸಿದಂತೆ ಮೂಲಭೂತ ನೀತಿನಿಯಮಗಳನ್ನು ಅದುರೂಪಿಸಿಕೊಳ್ಳುವತ್ತ ಅದು ಗಮನ ಹರಿಸಿದೆ. ಆಡಳಿತಗಾರರು, ಅಧ್ಯಾಪಕರು, ಸಮಾಜದ ಹಿತೈಷಿಗಳು, ವಿವಿಧಕ್ಷೇತ್ರಗಳಲ್ಲಿನ ತಜ್ಞರು ಮುಂತಾದವರು ಒಟ್ಟಿಗೆ ಸೇರಿ ಶೈಕ್ಷಣಿಕ ಪರಿಸ್ಥಿತಿ ಸಾಮಾಜಿಕ ಪರಿಸರ ಹಾಗೂ ಜನರ ಅವಶ್ಯಕತೆ ಮತ್ತು ಸಮಸ್ಯೆಗಳ ಅವಲೋಕನ, ಅಧ್ಯಯನ ವಿಶ್ಲೇಷಣೆ ಮತ್ತು ಮೌಲ್ಯಮಾಪನಗಳ ಅನಂತರ ಪ್ರಯೋಗಕ್ಕೆ ಬರುವಂಥ ಯುಕ್ತ ಯೋಜನೆಗಳನ್ನು ಮಾಡಿಕೊಳ್ಳುವ ಹಾದಿಯಲ್ಲಿ ರಷ್ಯ ಸಾಗುತ್ತಿದೆ. ವ್ಯವಸ್ಥಾವಿಶ್ಲೇಷಣ ವಿಧಾನವನ್ನು ಅಳವಡಿಸಿಕೊಂಡು ಮುಂದುವರೆದು ಉತ್ತಮ ಫಲಿತಾಂಶಗಳನ್ನು ಹೊಂದುವ ಆಶಯರಷ್ಯದ್ದು.

(11) ಉಪಸಂಹಾರ : ಪರಿಸ್ಥಿತಿ ಬದಲಾದಂತೆ, ಜನಸಂಖ್ಯೆ ಹೆಚ್ಚಾದಂತೆ ರಷ್ಯದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಿಂದೆ ಶಿಕ್ಷಣದ ಸೌಲಭ್ಯಗಳು ಎಲ್ಲರಿಗೂ ಲಭ್ಯವಿಲ್ಲದ್ದರಿಂದಲೋ ಪ್ರವೇಶಕ್ಕೆ ತೀವ್ರ ಸ್ಪರ್ಧೆ ಇದ್ದುದರಿಂದಲೋ `ಸಿರಿವಂತರಿಗೆ ಮಾತ್ರ ಶಿಕ್ಷಣ' ಎಂಬ ನೀತಿಯನ್ನು ಪೋಷಿಸಿಕೊಂಡು ಬಂದದ್ದರಿಂದಲೋ ಶೈಕ್ಷಣಿಕ ಸಂಸ್ಥೆಗಳಿಗೆ ಹೈಡ್ರೊಜನ್ ಬಾಂಬುಗಳು ಮತ್ತು ಗುರಿನಿರ್ದೇಶಿತ ಕ್ಷಿಪಣಿಗಳಿಗಿಂತ ಹೆಚ್ಚು ಭಯಾನಕ ಎಂಬ ಭಾವನೆಯನ್ನು ಜನರಲ್ಲಿ ಬೆಳೆಸಿದ್ದರಿಂದಲೋ ಅಧ್ಯಾಪಕರ ಸಂಖ್ಯೆ ಸೀಮಿತವಾಗಿದ್ದುದರಿಂದಲೋ ಒಂದು ಕಾಲಕ್ಕೆ ಶಿಕ್ಷಣ ಪಡೆಯಲು ಹೆಚ್ಚು ಮಂದಿ ಹಿಂಜರಿದಿದ್ದರಬಹುದು. ಆದರೆ ಹೊಸಪ್ರಪಂಚಕ್ಕೆ ಪ್ರವೇಶಿಸಿರುವ, ತನ್ನದೇ ಆದ ಸಾಮಥ್ರ್ಯದಿಂದ ಪ್ರಗತಿ ಸಾಧಿಸಬೇಕೆಂದು ಪ್ರಯತ್ನಿಸುತ್ತಿರುವ ರಷ್ಯದಲ್ಲಿ ಹೆಚ್ಚಿನ ಸಂಖ್ಯೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಗುತ್ತಿರುವ ಬದಲಾವಣೆಗಳು, ಸುಧಾರಣೆಗಳು, ಪ್ರಯೋಗಗಳು ಮುಂತಾದವೆಲ್ಲ ಉತ್ತಮ ಭವಿಷ್ಯದ ಸೂಚನೆಗಳಾಗಿವೆ. (ಎ.ಎಸ್.ಆರ್.ಕೆ.)