ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಸಾಯನವಿಜ್ಞಾನ

ವಿಕಿಸೋರ್ಸ್ದಿಂದ

ರಸಾಯನವಿಜ್ಞಾನ ದ್ರವ್ಯದ ರಚನೆ, ಸಂಯೋಜನೆ, ಗುಣಲಕ್ಷಣಗಳು; ದ್ರವ್ಯದ ರಚನೆ ಹಾಗೂ ಸಂಯೋಜನೆಗಳಲ್ಲಿಯ ಬದಲಾವಣೆಗಳು ಮತ್ತು ತತ್ಸಂಬಂಧಿ ಶಕ್ತಿ ಬದಲಾವಣೆಗಳು ಇವನ್ನು ಕುರಿತ ಶಾಸ್ತ್ರೀಯ ಅಧ್ಯಯನ (ಕೆಮಿಸ್ಟ್ರಿ). ಭೌತವಿಜ್ಞಾನದಂತೆಯೇ ಈ ವಿಜ್ಞಾನಶಾಖೆ ಕೂಡ, ಕ್ವಾಂಟಮ್ ಬಲವಿಜ್ಞಾನ ಮತ್ತು ಸಂಖ್ಯಾಕಲನೀಯ ಬಲವಿಜ್ಞಾನಗಳ ಉಪಜ್ಞೆಗಳಿಂದಾಗಿ, ತನ್ನ ಸಿದ್ಧಾಂತಗಳಲ್ಲಿ ವ್ಯಾಪಕ ಅಭಿವರ್ಧನೆ ಹಾಗೂ ಬಹುಮುಖ ಉಪಯೋಗಗಳನ್ನು ಕಂಡುಕೊಂಡಿದೆ. ದ್ರವ್ಯದ ಗುಣಲಕ್ಷಣ ಹಾಗೂ ವ್ಯತ್ಯಯಗಳನ್ನು ಪರಿಶೀಲಿಸುವುದು ರಸಾಯನ ವಿಜ್ಞಾನದ ಕೆಲಸವಾಗಿರುವುದರಿಂದ, ವಿಜ್ಞಾನದ ವಿವಿಧ ಶಾಖೆಗಳೊಂದಿಗೆ ಅದರಲ್ಲೂ ಪ್ರಮುಖವಾಗಿ ಭೌತವಿಜ್ಞಾನದೊಂದಿಗೆ ಇದು ನಂಟನ್ನು ಹೊಂದಿದೆ.

ಜನಜೀವನದಲ್ಲಿ ರಸಾಯನ ವಿಜ್ಞಾನ ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆಯೆಂದರೆ ಅದರ ಮಹತ್ತ್ವದ ಅರಿವೇ ಇಲ್ಲದಂತಾಗಿದೆ. ಆದರೂ ಆಗೊಮ್ಮೆ ಈಗೊಮ್ಮೆ ಇಷ್ಟೆಲ್ಲವೂ ಹೇಗೆ ಸಾಧ್ಯವಾಯಿತು? ಈ ಮಹತ್ತ್ವದ ಬದಲಾವಣೆಗಳ ಸ್ವರೂಪವೇನು? ಇವುಗಳಿಗೆ ಆಧಾರಭೂತವಾದ ಸೂತ್ರಗಳೇನು? ಎಂದು ಮುಂತಾಗಿ ಆಲೋಚಿಸಿದಾಗ ರಸಾಯನವಿಜ್ಞಾನದ ಮೂಲತತ್ತ್ವಗಳು ಯಾರನ್ನೇ ಆಗಲಿ ಆಕರ್ಷಿಸದೆ ಇರವು. ಈ ಭೌತಜಗತ್ತಿನಲ್ಲಿರುವುದು ಪ್ರಮುಖವಾಗಿ ಎರಡೇ ತತ್ತ್ವಗಳು; ದ್ರವ್ಯತ್ತ್ವ (ವಸ್ತುತತ್ತ್ವ) ಮತ್ತು ಶಕ್ತಿತತ್ತ್ವ. ಜಗತ್ತಿನಲ್ಲಿಯ ಪ್ರತಿಯೊಂದು ಇವೆರಡರ ವಿವಿಧ ರೂಪಗಳೆ. ಇವುಗಳ ಅಧ್ಯಯನವನ್ನು ಭೌತವಿಜ್ಞಾನ ಮತ್ತು ರಸಾಯನವಿಜ್ಞಾನಗಳು ಹಂಚಿಕೊಂಡಿವೆ. ಶಕ್ತಿಯ ವಿವಿಧ ರೂಪಗಳು ಸ್ವಭಾವ ಮತ್ತು ನಡವಳಿಕೆ, ಸ್ವಲ್ಪಮಟ್ಟಿಗೆ ವಸ್ತುವಿನ ನಡೆವಳಿಕೆಯ ಕೆಲವು ಅಂಶಗಳು ಭೌತವಿಜ್ಞಾನದ ವ್ಯಾಪ್ತಿಗೆ ಸೇರಿದ್ದು, ಮುಖ್ಯವಾಗಿ ವಸ್ತುಸ್ಥಿತಿ ಮತ್ತು ನಡೆವಳಿಕೆ, ಸ್ವಲ್ಪ ಮಟ್ಟಿಗೆ ಶಕ್ತಿಯ ಫಲ, ಸ್ವರೂಪಗಳ ಅಧ್ಯಯನ ರಸಾಯನವಿಜ್ಞಾನದ ಗುರಿ. ಆದ್ದರಿಂದ ವಸ್ತುವಿನಲ್ಲಿ ಉಂಟಾಗುವ ಬದಲಾವಣೆಗಳು, ತತ್ಫಲವಾಗಿ ರೂಪುಗೊಳ್ಳುವ ಹೊಸ ಪದಾರ್ಥಗಳ ಅಧ್ಯಯನವನ್ನು ರಸಾಯನವಿಜ್ಞಾನ ವಿಶೇಷವಾಗಿ ನಡೆಸುತ್ತದೆ.

ಪ್ರಸಕ್ತ ಲೇಖನವನ್ನು ಈ ಮುಂದಿನ ಉಪಶೀರ್ಷಿಕೆಗಳಲ್ಲಿ ಪ್ರಸ್ತುತಪಡಿಸಿದೆ.

ಇತಿಹಾಸ ದ್ರವ್ಯರಚನೆ ರಾಸಾಯನಿಕ ಪರಿಭಾಷೆ ಧಾತುಗಳ ವರ್ಗೀಕರಣ ರಾಸಾಯನಿಕ ನಿಯಮಗಳು ರಾಸಾಯನಿಕ ಕ್ರಿಯೆಗಳು ಉಪಕರಣಗಳು ಪ್ರಮುಖ ವಿಭಾಗಗಳು (ಎಚ್.ಜಿ.ಎಸ್.)

ಇತಿಹಾಸ

ವಿಜ್ಞಾನಪೂರ್ವ ಅವಧಿಯಲ್ಲಿ ಪ್ರಾಯೋಗಿಕ ರಸಾಯನವಿಜ್ಞಾನ: ಸುಮಾರು 16ನೆಯ ಶತಮಾನದ ತನಕವೂ ರಸಾಯನವಿಜ್ಞಾನಕ್ಕೆ ಅದರ ನೈಜದೃಷ್ಟಿಯಲ್ಲಿ ಅದೊಂದು ವಿಜ್ಞಾನ ಎಂಬ ಮನ್ನಣೆ ದೊರಕಿರಲಿಲ್ಲ. ಆದರೆ ಬಲು ಪುರಾತನ ಕಾಲದಿಂದಲೂ ಮಾನವ ಇದರ ವಸ್ತು ವಿಷಯವನ್ನು ಉರಿತು ಆಲೋಚಿಸಿದ್ದುಂಟು. ಎಲ್ಲೆಲ್ಲಿ ರಸಾಯನವಿಜ್ಞಾನದ ಸಂಬಂಧ ಉಂಟೋ ಅಂಥಲ್ಲೆಲ್ಲ ವಸ್ತುವಿನಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಗಮನಿಸಿಕೊಳ್ಳುವುದು ಅವನಿಗೆ ಅನಿವಾರ್ಯವೇ ಆಯಿತು. ತನ್ನ ಸ್ವಂತ ಲಾಭಕ್ಕಾಗಿ ನೈಸರ್ಗಿಕ ಬದಲಾವಣೆಗಳ ಪೈಕಿ ಕೆಲವನ್ನು ಬಳಸಿಕೊಳ್ಳುವುದನ್ನು ಆತ ಕಲಿತ. ಉದಾಹರಣೆಗೆ ಬೆಂಕಿಯ ಆವಿಷ್ಕಾರ ಈ ಕೆಲವೊಂದು ಬದಲಾವಣೆಗಳನ್ನು ಉದ್ದೇಶಪೂರ್ವಕವಾಗಿಯೇ ಉಂಟುಮಾಡಿಕೊಳ್ಳುವಂಥ ಸಾಧನವಾಗಿ ಪರಣಮಿಸಿತು. ಇದಲ್ಲದೇ ಬಹಳಷ್ಟು ಪ್ರಾಚೀನ ದಿವಸಗಳಲ್ಲೂ ಲೋಹಗಳ ಬಳಕೆಗೆ ಅತ್ಯಂತ ಮಹತ್ತ್ವ ಇತ್ತು. ತಾಮ್ರಯುಗ, ಕಂಚಿನಯುಗ, ಹೀಗೆ ಒಂದಾದಮೇಲೆ ಒಂದರಂತೆ ಯುಗಗಳು ಮೂಡಿ ಬಂದವು. ಪ್ರತಿಯೊಂದು ಯುಗದಲ್ಲೂ ಲೋಹತಂತ್ರವಿದ್ಯೆಯಲ್ಲಿಯ ಮುಂದುವರಿದ ಪ್ರವರ್ಧನೆಗಳನ್ನು ಕಾಣಬಹುದಿತ್ತು. ನಾಗರಿಕತೆ ಪ್ರವರ್ಧಿಸಿದಂತೆಲ್ಲ ತಂತ್ರವಿದ್ಯೆಯ ನೈಪುಣ್ಯ ವ್ಯಾಪಕವಾಗತೊಡಗಿತು. ಈಜಿಪ್ಟ್ ಮತ್ತು ಮೆಸೊಪೊಟೋಮಿಯದ ಸಂಸ್ಕøತಿಗಳಲ್ಲಿ ಪ್ರಾಯೋಗಿಕ ರಸವಿಜ್ಞಾನ ಉನ್ನತ ಮಟ್ಟವನ್ನು ತಲಪಿತ್ತು.

ರಸಾಯನವಿಜ್ಞಾನವನ್ನು ಅಭ್ಯಾಸಮಾಡಿ ವ್ಯವಹರಿಸುತ್ತಿದ್ದ ಅಂದಿನ ಜನ ತಮ್ಮ ಕಲೆಗಾರಿಕೆಯಲ್ಲಿ ರಸಾಯನಪ್ರಜ್ಞೆಯೂ ಇದೆ ಎಂಬುದನ್ನು ಅರಿತಿರಲಿಲ್ಲ.  ಅವರಲ್ಲಿ ಕೈಕಸಬುದಾರರೂ ಲೋಹ, ಬಣ್ಣಗಳು, ಸುಗಂಧದ್ರವ್ಯ ಹಾಗೂ ಔಷಧಗಳಿಗೆ ಸಂಬಂಧಿಸಿದ ಕೆಲಸಗಾರರೂ ಇದ್ದರು. ಇವರು ದೇವಾಲಯಗಳ ಸಂಪರ್ಕ ಇಟ್ಟುಕೊಂಡು ಅಲ್ಲಿಯ ಅರ್ಚಕರಿಗೂ ಗಣ್ಯವ್ಯಕ್ತಿಗಳಿಗೂ ಬೆಲೆಬಾಳುವ ಪದಾರ್ಥಗಳನ್ನೂ ಬಡಜನರಿಗೆ ಅಗ್ಗದ ಪದಾರ್ಥಗಳನ್ನೂ ಮಾಡಿಕೊಡುತ್ತಿದ್ದರು.  ಅವರ ವಿಧಾನಗಳೆಲ್ಲ ಬಹುತೇಕ ವೃತ್ತಿರಹಸ್ಯಗಳಾಗಿಯೆ ಉಳಿದುಹೋದವು.  ತಂದೆಯಿಂದ ಮಗನಿಗೆ ಮಾತ್ರ ಆ ವಿಧಾನ ತಿಳಿದು ಬರುವುದಂಥದ್ದು ಆಗಿತ್ತು. ಈ ಬಗ್ಗೆ ವಿವರ ನೀಡುವ ಸಾಕಷ್ಟು ಲಿಖಿತದಾಖಲೆಗಳು ದೊರಕಿದ್ದು ಅವನ್ನು ಈಗ ಸಂರಕ್ಷಿಸಿಡಲಾಗಿದೆ. ಚಿನ್ನ ಬೆಳ್ಳಿ ಮತ್ತಿತರ ಪ್ರಶಸ್ತಲೋಹಗಳನ್ನು ಪರೀಕ್ಷಿಸುವ ವಿಧಾನ ಗಾಜು ಹಾಗೂ ಸುಗಂಧದ್ರವ್ಯಗಳನ್ನು ತಯಾರಿಸುವ ವಿಧಾನಗಳು ಮುಂತಾದವುಗಳ ಕ್ರಿಯಾತಂತ್ರಗಳನ್ನು ಈ ದಾಖಲೆಗಳು ತಿಳಿಸುತ್ತವೆ.  ಪುರಾತತ್ತ್ವ ವಿಧಾನಗಳನ್ನು ಬಳಸಿ ನಡೆಸಿದ ಉತ್ಖ್ಪನನಗಳಿಂದ ದೊರೆತಿರುವ ಉಪಕರಣ ಭಾಗಗಳ ಅಧ್ಯಯನ ಹಾಗೂ ಭಗ್ನಾವಶೇಷಗಳಿಂದ ದೊರೆತ ಇನ್ನಿತರ ವಸ್ತುಗಳ ವಿಶ್ಲೇಷಣೆಯಿಂದ ಪ್ರಾಚೀನರು ತಾಂತ್ರಿಕಪ್ರಕ್ರಮಗಳಲ್ಲಿ ಎಷ್ಟರಮಟ್ಟಿಗೆ ಪ್ರಾವೀಣ್ಯ ಸಾಧಿಸಿದ್ದರು ಎಂಬುದು ತಿಳಿದುಬರುತ್ತದೆ. ಸಹಜೋತ್ಪನ್ನಗಳ ಆಸವನ ಪಾಚನ, ಹಾಗೂ ಉದ್ಧರಣ ವಿಧಾನಗಳು ಅನಂತರ ಬಂದ ರಸವಾದಿಗಳು ಹಾಗೂ ರಸಾಯನಶಾಸ್ತ್ರಜ್ಞರ ಆಲೋಚನೆ, ಚಿಂತನ, ವಿಧಿವಿಧಾನಗಳಿಗೆ ಅಡಿಗಲ್ಲಾಗಿ ನಿಂತವು.
ಪ್ರಾಚೀನ ನಾಗರಿಕತೆಗಳ ರಸಾಯನಪ್ರಜ್ಞೆ ಹಾಗೂ ವಿದ್ಯೆ ತಾತ್ತ್ವಿಕವಾಗಿ ಪ್ರಯೋಗಬದ್ಧವಾಗೇ ಇತ್ತು. ಆದರೆ ನೈಸರ್ಗಿಕ ವಿದ್ಯಮಾನಗಳು ಕುರಿತ ಆ ವಿದ್ಯೆಯ ಸೈದ್ಧಾಂತಿಕ ವಿವರಣೆಗಳು ಮಾತ್ರ ಪೌರಾಣಿಕ ಹಾಗೂ ಮಾಂತ್ರಿಕ ಸ್ವರೂಪದ್ದಾಗಿದ್ದುವು.  ಅಲ್ಲಿಯ ಕೆಲವೊಂದು ಪರಿಕಲ್ಪನೆಗಳು ಮುಂದಿನ ಹಾಗೂ ಅಧಿಕಸಂಖ್ಯೆಯ ಬುದ್ಧಿಜೀವಿಗಳಾದ ಚಿಂತನಶೀಲರನ್ನು ಪ್ರಭಾವಿಸಿದ್ದೂ ಉಂಟು. ಈ ಪ್ರಪಂಚವಾದರೋ ಗಂಡು-ಹೆಣ್ಣು: ಉಷ್ಣ-ಶೈತ್ಯ; ಆದ್ರ್ರ-ಶುಷ್ಕ ಇತ್ಯಾದಿ ದ್ವಂದ್ವಗಳಿಂದ ಕೂಡಿದೆ ಎಂಬುದಾಗಿ ಪರಿಭಾವಿಸಿದ್ದ ಮೆಸೊಪೋಟೇಮಿಯನ್ನರ ಅಭಿಪ್ರಾಯವನ್ನು ಗ್ರೀಕ್ ದಾರ್ಶನಿಕರು ಸ್ವೀಕರಿಸಿದರು. ಈ ಬೃಹತ್ ವಿಶ್ವದಲ್ಲಿಯೇ ಘಟನೆಗಳೆನಿಸಿರುವ ಸೂರ್ಯ ಸಂಬಂಧ ವಿಶ್ವ, ಚಂದ್ರ ನಕ್ಷತ್ರ ಮುಂತಾದವುಗಳು ಮಾನವನ ಚಿಕ್ಕ ಪ್ರಪಂಚವೆನಿಸುವ ಸೂಕ್ಷ್ಮ ವಿಶ್ವದಲ್ಲಿಯ ಘಟನೆಗಳಿಗೆ ಸರಿಸಮನಾಗಿ ನಿಲ್ಲುತ್ತವೆ ಎಂಬುದು ಮಹತ್ತ್ವದ ವಿಚಾರವಾಗಿತ್ತು. ಮೂಲತಃ ಈ ವಿಚಾರ ಖಗೋಳೀಯ ವಿದ್ಯಮಾನಕ್ಕೆ ಸಂಬಂಧಿಸಿತ್ತಾದರೂ ಅನೇಕ ಗ್ರೀಕ್ ತತ್ತ್ವ ಚಿಂತಕರ ಜೈವಿಕಮನೋಧರ್ಮದ ಚೌಕಟ್ಟಿಗೆ ಹೊಂದಿಕೊಳ್ಳುವಂತಿತ್ತು.  ಇದು ಮುಂದೆ ಅನೇಕ ರಾಸಾಯನಿಕ ಸಂಗತಿಗಳನ್ನು ಕುರಿತ ಅವರ ವಿವರಣೆಗಳಲ್ಲಿನ ಪ್ರಮುಖ ಅಂಶವಾಗಿ ಮಾರ್ಪಟ್ಟಿತು.
ಹಿಂದಿನ ನಾಗರಿಕತೆಗಳಿಂದ ಅಭಿವೃದ್ಧಿಸಿದ್ದ ಪರಿಕಲ್ಪನೆಗಳೂ ಕ್ರಿಯಾತಂತ್ರಗಳೂ ಪ್ರಾಚೀನ ಗ್ರೀಕರು ನೆಲಸಿದ್ದ ಅಯೋನಿಯದ ಮೈಲಿಟಸ್ ಪಟ್ಟಣದ ಮೂಲಕ ಗ್ರೀಕರನ್ನು ತಲುಪಿದುವು. ಅನಂತರ ಇವನ್ನು ಶಾಸ್ತ್ರೋಕ್ತವಾಗಿ ಅಯೋನಿಯದ ದಾರ್ಶನಿಕರ ಪಂಥದಲ್ಲಿ ವ್ಯವಸ್ಥೆಗೊಳಿಸಲಾಯಿತು. ಈ ಪಂಥ ಕ್ರಿ.ಪೂ. 6ನೆಯ ಶತಮಾನದಲ್ಲಿ ತೇಲ್ಸ್ ಎಂಬವನಿಂದ ಪ್ರಾರಂಭವಾಯಿತು.  ಅಯೋನಿಯನ್ ದಾರ್ಶನಿಕರೆಲ್ಲರೂ ಬ್ರಹ್ಮಾಂಡವನ್ನು ಕುರಿತ ಚಿಂತಕರೇ ಆಗಿದ್ದುದರಿಂದ ತಾವು ಕಾಣುವ ಎಲ್ಲವನ್ನು ಶುದ್ಧ ಭೌತವಿದ್ಯಮಾನಗಳ ಹಿನ್ನೆಲೆಯಿಂದಲೇ ವಿವರಿಸುತ್ತಿದ್ದರು.  ಯಾವುದೇ ಒಂದು ಮೂಲ ಪದಾರ್ಥವನ್ನು ಕಂಡುಹಿಡಿದು ಅದರಲ್ಲಿಯ ಬದಲಾವಣೆಗಳ ಮೂಲಕವೇ ಅವರ ಸುತ್ತಮುತ್ತಲಿನ ಪ್ರತಿಯೊಂದು ಏರುಪೇರುಗಳನ್ನು ಅರ್ಥ ಮಾಡಿಕೊಳ್ಳುವ ಅಭಿಲಾಷೆ ಅವರಲ್ಲಿತ್ತು. ಉಷ್ಣತೆಯಿಂದ ಉಂಟಾಗುವ ಪ್ರಾವಸ್ಥಾಬದಲಾವಣೆಯ ಬಗ್ಗೆ ಅವರು ಸಾಕಷ್ಟು ಮನವರಿಕೆ ಮಾಡಿಕೊಂಡಿದ್ದರು.    ದ್ರವರೂಪದ ನೀರನ್ನು ಘನರೂಪದ ಮಂಜುಗಡ್ಡೆಯನ್ನಾಗಿಯೂ ಅನಿಲರೂಪದ ವಾಯುವನ್ನು ಹಬೆಯನ್ನಾಗಿಯೊ ಪರಿವರ್ತಿಸಬಹುದಾಗಿತ್ತು. ಹೀಗಾಗಿ ಆದಿಮವಸ್ತುವಿಗಾಗಿ ನಡೆದ ಪ್ರಾಚೀನ ಆಯ್ಕೆಗಳೆಲ್ಲ ಅದರ ಭೌತಗುಣಲಕ್ಷಣಗಳನ್ನೇ ಆಧರಿಸಿದ್ದುವು.  ದ್ರವ್ಯ (ವಸ್ತು) ಎಂಬುದು ಘನರೂಪ, ದ್ರವರೂಪ ಇಲ್ಲವೆ ಅನಿಲರೂಪದಲ್ಲಿ ಇರಬಹುದು. ಇವನ್ನು ಪೃಥ್ವಿ, ನೀರು ಇಲ್ಲವೆ ವಾಯುವಿನೊಂದಿಗೆ ಸಮೀಕರಿಸಬಹುದು. ಈ ಬದಲಾವಣೆಗಳನ್ನೆಲ್ಲ ಉಷ್ಣದಿಂದ ಅಂದರೆ, ಅಗ್ನಿಯಿಂದ ಉಂಟುಮಾಡಬಹುದು. ಆದ್ದರಿಂದ ಆ ಆದಿಮವಸ್ತು ಎಂಬುದು ಇವುಗಳ ಪೈಕಿ ಒಂದಕ್ಕೆ ಸಂವಾದಿಯಾಗಿರಬೇಕು ಇಲ್ಲವೇ ಸರ್ವ ಸಮತ್ವವನ್ನು ಹೊಂದಿರಬೇಕು ಈ ಪ್ರಕಾರ ಅವರ ಚಿಂತನ ನಡೆದಿತ್ತು.  ಈ ವಸ್ತು ನೀರೇ ಆಗಿರಬೇಕು ಎಂಬುದಾಗಿ ತೇಲ್ಸ್ ಭಾವಿಸಿದ್ದ ಅನಾಕ್ಸಿಮೆಂಡರ್ ಎಂಬ ಮತ್ತೊಬ್ಬ ದಾರ್ಶನಿಕ ಇನ್ನಾವುದೇ ಅನಿರ್ದಿಷ್ಟ ರಾಶಿಯ ಮತ್ತೊಂದು ವಸ್ತು ಒಂದಿರಬೇಕೆಂದೂ ಅದರಿಂದ ದ್ರವ್ಯ ಉಂಟಾಗಿರಬೇಕೆಂದೂ ಪರಿಭಾವಿಸಿದ. ಮತ್ತೊಬ್ಬ ಗ್ರೀಕ್ ದಾರ್ಶನಿಕ ಅನಾಕ್ಸಿಮೇನೀಸ್ ವಾಯುವನ್ನು ಮೂಲದ್ರವ್ಯ ಎಂದು ಆಯ್ಕೆಮಾಡಿದ ಹಿರಾಕ್ಲಟಿಸ್ ಎಂಬವರ ಆಯ್ಕೆ ಅಗ್ನಿಯಾಗಿತ್ತು. ಇವುಗಳಲ್ಲಿ ಪ್ರತಿಯೊಂದನ್ನು ಯುಕ್ತನಿಬಂಧನೆಗಳ ಅಡಿಯಲ್ಲಿ ಇನ್ನಿತರ ವಸ್ತುಗಳನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಎಲ್ಲರೂ ಒಪ್ಪಿದ್ದರು. ಹಿರಾಕ್ಲಟೀಸ್ ತನ್ನ ಚಿಂತನೆಗಳ ಆಯಾಮವನ್ನು ವಿಸ್ತರಿಸಿ ಸ್ಥಿರಬದಲಾವಣೆಗಳ (ಅಂದರೆ ಒಂದು ಬಗೆಯ ಗತ್ಯಾತ್ಮಕ ಸಮತೋಲನ) ಪರಿಕಲ್ಪನೆಯನ್ನು ವಿರೋಧಗಳನ್ನು ಕುರಿತ ಪ್ರಾಚೀನ ಪರಿಕಲ್ಪನೆಗಳು ಒಂದಕ್ಕೊಂದು ಮೇಳೈಸಿ ಪ್ರಾಪಂಚಿಕ ವಸ್ತುಗಳನ್ನು ನೀಡುತ್ತವೆ ಎಂಬ ಭಾವನೆಯನ್ನು ಮುಂದಿಟ್ಟ.

ಬೃಹದ್ವಿಶ್ವದ ವರ್ತನೆಗಳ ಬಗೆಗಿನ ಭೌತವಿವರಣೆಗಳನ್ನು ತಾತ್ತ್ವಿಕ ಚಿಂತನಾ ಪರರಾದ ಭೌತಶಾಸ್ತ್ರಜ್ಞರು ಸೂಕ್ಷ್ಮವಿಶ್ವಕ್ಕೆ (ಮನುಷ್ಯ) ಅನ್ವಯಿಸಿದರು. ಜೈವಿಕ ಹಾಗೂ ಭೌತ ಊಹೆಗಳ ಮಿಲನದಿಂದಾಗಿ ಜೀವಂತಪ್ರಾಣಿಗಳಲ್ಲಿಯ ಸ್ವಭಾವಸಿದ್ಧವಾಗಿರುವ ಬೆಂಕಿಯಾದರೂ ಪ್ರಾಪಂಚಿಕ ವಸ್ತುಗಳನ್ನು ಉಂಟುಮಾಡಿರುವ ಬೆಂಕಿಯಂತೆಯೇ ಎಂಬ ಭಾವನೆ ಉಂಟಾಯಿತು. ಬೆಂಕಿ ಉಂಟುಮಾಡುವ ಈ ಬದಲಾವಣೆಗಳೇ ರಾಸಾಯನಿಕ ಬದಲಾವಣೆ ಎಂಬ ಹೆಸರು ಪಡೆದುವು. ಪ್ರಾಣಿಗಳಲ್ಲಿ ಆಗುವ ಪಚನಾಕಾರ್ಯ ಮತ್ತು ಆಹಾರವನ್ನು ಬೇಯಿಸುವಾಗ ನಡೆಯುವ ಕ್ರಿಯೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳೆಲ್ಲ ಸಾಕಷ್ಟು ಪರಿಚಯವಾದುವು. ಹೀಗಾಗಿ ಹೆಚ್ಚು ಕಡಿಮೆ ಎಲ್ಲ ಗ್ರೀಕ್ ಚಿಂತಕರೂ ಜೈವಿಕ ಹಾಗೂ ಭೌತವಿವರಣೆಗಳನ್ನು ಪರಸ್ಪರ ವಿನಿಮಯಮಾಡಿಕೊಂಡರು.

ಮುಂದಿನ ಮಹತ್ತರ ಹೆಜ್ಚೆಯನ್ನು ಇಟ್ಟವ ಮತ್ತೊಬ್ಬ ಗ್ರೀಕ್ ತತ್ತ್ವಜ್ಞಾನಿ ಆನಾಕ್ಸಗೋರಸ್ (ಕ್ರಿ.ಪೊ.ಸು.500-428) ಪ್ರಾಪಂಚಿಕ ವಸ್ತುಗಳೆಲ್ಲ ಅನಂತಸಂಖ್ಯೆಯ ಚಿಕ್ಕ ಕಣಗಳಿಂದ ಕೂಡಿವೆ ಎಂಬ ಅಭಿಪ್ರಾಯವನ್ನು ಈತ ತಾಳಿದ್ದ. ಇವನ್ನು ಬೀಜಗಳು (ಸೀಡ್ಸ್) ಎಂಬುದಾಗಿ ಕರೆದಿದ್ದ. ಸಜಾತಿಯದು ಸಜಾತಿಯವಾದದ್ದನ್ನೇ ಆಕರ್ಷಿಸುತ್ತದೆ ಎಂಬ ತತ್ತ್ವದ ರೀತ್ಯ. ಉದಾಹರಣೆಗೆ ಮಾಂಸದ ಬೀಜಗಳು ಒಟ್ಟಿಗೆ ಸೇರಿ ಮಾಂಸವನ್ನೇ ಉಂಟುಮಾಡುತ್ತವೆ ಎಂಬುದಾಗಿಯು ಹೇಳಿದ ಗ್ರೀಸಿನ ತತ್ತ್ವಚಿಂತಕ ಹಾಗೂ ರಾಜಕಾರಣೀ ಎಂಪಡೋಕ್ಲೀಸ್ (ಕ್ರಿ.ಪೂ. ಸು.490-430) ಈ ಅಭಿಪ್ರಾಯವನ್ನು ಸಾರ್ವತ್ರೀಕರಿಸಿದನಲ್ಲದೆ ಅನಂತಸಂಖ್ಯೆಯ ಬೀಜಪ್ರಭೇದಗಳನ್ನು ಕೇವಲ ನಾಲ್ಕು ಬಗೆಗಳಿಗೆ ಇಳಿಸಿದ. ಪೃಥ್ವಿ ವಾಯು, ನೀರು ಮತ್ತು ಅಗ್ನಿಯ ಪರಮಾಣುಗಳೇ ಈ ನಾಲ್ಕು ಬಗೆಯವು. ಇದು ಚತುರ್ಧಾತು ಸಿದ್ಧಾಂತವೆಂದೇ ಹೆಸರುಗಳಿಸಿ ಸುಮರು 2000 ವರ್ಷಗಳ ತನಕ ವಿಜ್ಞಾನ ಚಿಂತನಾಪ್ರಪಂಚವನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಗೊಳಿಸಿತ್ತು. ಪರಮಾಣುವಾದವನ್ನು ಅತ್ಯಂತ ಸಮಂಜಸ ರೀತಿಯಲ್ಲಿ ವ್ಯಕ್ತಪಡಿಸಿದವರು ಪ್ರಭಾವಗೊಳಿಸಿತ್ತು. ಲ್ಯೂಸಿಪಸ್ ಮತ್ತು ಅವನ ಶಿಷ್ಯ ಡಿಮಾಕ್ರಿಟಿಸ್, ನಿದ್ರ್ರವ್ಯತೆಯಲ್ಲಿ ಚಲಿಸುವ ಪರಮಾಣುಗಳ ಚಲನಾತ್ಮಕ ಸಿದ್ಧಾಂತವನ್ನು ಲ್ಯೂಸಿಪಸ್ ಮುಂದಿಟ್ಟ. ನಾಲ್ಕು ಬಗೆಯ ಪರಮಾಣುಗಳ ಗಾತ್ರ ಮತ್ತು ಆಕಾರಗಳು ಅವುಗಳ ಬಹುತೇಕ ಗುಣ ಲಕ್ಷಣಗಳನ್ನು ವಿವರಿಸಿದುವು. ಡಿಮಾಕ್ರಿಟಸನ ಸಿದ್ಧಾಂತವಾದರೋ ಪೂರ್ಣವಾಗಿ ಪ್ರಾಪಂಚಿಕದ್ದಾಗಿತ್ತು. ಈ ಸಿದ್ಧಾಂತ ಮುಂದೆ ಎಪಿಕ್ಯೂರಿಯನ್ ತತ್ತ್ವ ಪಂಥೀಯರಿಗೆ ಅಡಿಪಾಯವಾಗಿ ಪರಿಣಮಿಸಿತು. ಹೀಗಾಗಿ ಮುಂದಿನ ಪೀಳಿಗೆಯ ಉಪಯೋಗಕ್ಕೆ ಇರಲಿ ಎಂದು ಜನ ಅದನ್ನು ಉಳಿಸಿಕೊಂಡು ಬಂದರು. ಈ ಸಿದ್ಧಾಂತವನ್ನು ಅಧ್ಯಾತ್ಮಯೋಗವಾದಿಗಳು ಎನಿಸಿದ ತತ್ತ್ವಚಿಂತಕರು ವಿರೋಧಿಸಿದರು. ಈ ಪಂಥೀಯರ ಪೈಕಿ ಪ್ರಮುಖವಾದವನೆಂದರೆ ಪೈತಾಗೊರಸ್ (ಕ್ರಿ.ಪೂ. ಸು. 569-500) ತತ್ತ್ವ ಚಿಂತನೆಯ ಮಾರ್ಗದಲ್ಲಿ ಸಾಕಷ್ಟು ಪ್ರಭಾವಬೀರಿದವನೀತ. ಇವನಿಗೆ ಮಾರ್ಗದರ್ಶಕರಾಗಿದ್ದವರು ಸಾಕ್ರಟೀಸ್ ಮತ್ತು ಪ್ಲೇಟೋ.

ಪ್ಲೇಟೋನಿಗೆ ಮೂಲತಃ ಭೌತಸಿದ್ಧಾಂತದಲ್ಲಿ ಆಸಕ್ತಿ ಇರಲಿಲ್ಲ. ಅವನ ಚಿಂತನ ಊಹೆಗಳೆಲ್ಲ ಪ್ರಧಾನವಾಗಿ ಮನುಷ್ಯನ ನೈತಿಕ ಹಾಗೂ ಶಿಷ್ಟಾಚಾರಗಳನ್ನು ಕುರಿತದ್ದಾಗಿದ್ದುವು. ಅವನೊಬ್ಬ ಮಹಾನ್ ದಾರ್ಶನಿಕನಾಗಿದ್ದನಾದರೂ ಪ್ರಪಂಚದ ಸ್ವಭಾವವನ್ನು ವಿವರಿಸುವಲ್ಲಿಯೂ ಕೊಂಚ ಆಸಕ್ತಿವಹಿಸಿದ್ದ. ಸಮಸ್ತ ಲೋಕಗಳ ಒಳಿತಿಗಾಗಿಯೇ ಪ್ರತಿಯೊಂದೂ ನಿಸರ್ಗದಿಂದ ರೂಪಿತವಾಗಿದೆ ಎಂಬ ತನ್ನದೇ ಆದ ಮೂಲ ಸಂಕಲ್ಪವಾದಾತ್ಮಕ ನಿಲುವನ್ನು ತಳೆದಿದ್ದ. ಡಿಮಾಕ್ರಿಟಸ್‍ನ ಚತುರ್ಧಾತು ಸಿದ್ಧಾಂತವನ್ನು ಈತ ಸ್ವೀಕರಿಸಿದ. ಪರಮಾಣುಗಳನ್ನು ಕುರಿತ ಅವನ ವಿವರಣೆಗಳು ಜ್ಯಾಮಿತಿಯ ಆಕೃತಿಗಳನ್ನು ಹೋಲುತ್ತಿದ್ದುವು. ಆಗ್ನಿ ಎಂಬುದು ಚತುಷ್ಪಲಕದಂತೆ ಇದೆ ಎಂಬುದಾಗಿಯು ಅದರ ಮೊನಚಾದ ಶೃಂಗಗಳೂ ಅಗ್ನಿಗೆ ಒಳಹೋಗುವ ಸಾಮಥ್ರ್ಯವನ್ನು ನೀಡುತ್ತವೆಂಬುದಾಗಿ ಪರಿಗಣಿಸಿದ್ದ. ಭೂಮಿ ಎಂಬುದು ಘನ ಪರಮಾಣುಗಳಿಂದ ಉಂಟಾಗಿದೆ: ಅವು ಅತ್ಯಂತ ಸ್ಥಿರ ಎಂಬುದಾಗಿ ತಿಳಿಯಪಡಿಸಿ. ಅದು (ಭೂಮಿ) ನಾಲ್ಕು ರೂಪಗಳ ಒಂದು ಘನ ಎಂಬುದಾಗಿ ತಿಳಿಸಿದ್ದ. ನೀರು ಎಂಬುದು ವಿಶಂತಿ ಘಲಕದಂತೆಯೂ ವಾಯು ಅಪ್ಪಫಲಕದಂತೆಯೂ ಇವೆ. ಎಂಬುದು ಅವನ ಅಭಿಪ್ರಾಯವಾಗಿತ್ತು. ಈ ಫಲಕಗಳ ಸೀಮಾ ತಲಗಳನ್ನು ಪುನರ್ ವ್ಯವಸ್ಥೆಗೊಳಿಸುವುದರಿಂದ ಪರಮಾಣುಗಳ ಈ ಆಕೃತಿಗಳನ್ನು ಮತ್ತೊಂದು ಆಕೃತಿಗೆ ಪರಿವರ್ತಿಸಬಹುದು ಎಂಬುದು ತಿಳಿಯಿತು. ಪರಮಾಣುಗಳ ಈ ಅಂತರಪರಿವರ್ತನೆಯ ಪರಿಕಲ್ಪನೆಯೇ ಅನಂತರದ ರಸವಿದ್ಯೆಗೆ ತಾತ್ತ್ವಿಕ ಅಡಿಪಾಯವನ್ನು ಒದಗಿಸಿದ್ದು.

ಪ್ಲೇಟೋವಿನ ಅಮೂರ್ತ ಸಿದ್ಧಾಂತಗಳನ್ನು ಮತ್ತಷ್ಟು ಸಮೀಪದಿಂದ ಅಧ್ಯಯನ ಮಾಡಿ ಅದಕ್ಕೆ ವಾಸ್ತವಾಂಶದ ಒರೆಕೊಟ್ಟು ನೋಡಿದವ ಗ್ರೀಕ್ ದಾರ್ಶನಿಕ ಹಾಗೂ ನಿಸರ್ಗವಾದಿ ಅರಿಸ್ಟಾಟಲ್ (ಕ್ರಿ.ಪೂ 384-322). ತತ್ತ್ವಶಾಸ್ತ್ರದ ಎಲ್ಲ ವಿಭಾಗಗಳ ಬಗ್ಗೆಯೂ ಈತ ಆಸಕ್ತಿ ಒಲವುಗಳನ್ನು ಬೆಳೆಸಿಕೊಂಡಿದ್ದನಾದರೂ ಮೂಲತಃ ಇವನೊಬ್ಬ ವಿಜ್ಞಾನಿಯಾಗಿದ್ದನು. ಜೈವಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದವ. ದ್ರವ್ಯದ ಸಂರಚನೆ ಹಾಗೂ ಬದಲಾವಣೆಗಳನ್ನು ಕುರಿತ ಇವನ ವಿವರಣೆಗಳು ಹದಿನೇಳನೆಯ ಶತಮಾನದ ತನಕವೂ ವೈಜ್ಞಾನಿಕ ಆಲೋಚನೆಯ ಶಿಷ್ಟ ವಿಚಾರಗಳೆನಿಸಿದ್ದುವು.

ಅಯೋನಿಯನ್ ದಾರ್ಶನಿಕರಂತೆಯೇ ಅರಿಸ್ಟಾಟಲ್ ಕೂಡ ಆದಿಮವಸ್ತುವಿನ ಪರಿಕಲ್ಪನೆಯನ್ನು ಸ್ವೀಕರಿಸಿದ್ದ. ಈ ವಸ್ತುವಿನ ಮೇಲೆ ಅನೇಕ ಇನ್ನಿತರ ಪ್ರಭೇದಗಳು ಪ್ರಯುಕ್ತಗೊಂಡವು. ಇದರಿಂದ ಪ್ರಾಪಂಚಿಕ ವಸ್ತುಗಳಲ್ಲಿಯ ವ್ಯತ್ಯಾಸಗಳು ಉಂಟಾದವು. ಯಾವುದೇ ವಸ್ತುವನ್ನು ಮತ್ಯಾವುದೇ ವಸ್ತುವನ್ನಾಗಿ ಮಾರ್ಪಡಿಸಬಹುದು ಎಂಬುದೇ ಪ್ಲೇಟೋವಿನ ಮತವಾಗಿತ್ತು. ಈ ಬಗ್ಗೆ ಅರಿಸ್ಟಾಟಲ್ ತನ್ನ ಹಿಂದಿನವರು ತಿಳಿಸಿದುದಕ್ಕಿಂತಲೂ ಮತ್ತಷ್ಟು ಸ್ಪಷ್ಟವಾದ ಚಿತ್ರಣವನ್ನು ನೀಡಿದ. ಹಿರಾಕ್ಲಿಟಸನ ವಿರೋಧಾಭಿಪ್ರಾಯಗಳ ಬಗ್ಗೆ ಅರಿಸ್ಟಾಟಲ್ ತಿಳಿಯಪಡಿಸುತ್ತ ಉಷ್ಣ. ಶೀತ, ತೇವ ಹಾಗೂ ಆದ್ರ್ರತೆ ಈ ನಾಲ್ಕು ಗುಣಗಳೇ ಒಟ್ಟುಗೂಡಿ ಭೌತಪ್ರಪಂಚದ ಪರಮಾಣುಗಳನ್ನು ಉಂಟು ಮಾಡಿವೆ ಎಂಬ ವಿಚಾರವನ್ನು ಮುಂದಿಟ್ಟ. ಆದರೆ ವಾಸ್ತವವಾಗಿ ಉಷ್ಣ ಮತ್ತು ಶೀತ ಒಂದರೊಡನೊಂದು ಕೂಡವು; ಹಾಗಾದಲ್ಲಿ ಅವು ನಿಷ್ಕ್ರಿಯವಾಗುತ್ತವೆ. ಉಷ್ಣ ಮತ್ತು ಶುಷ್ಕತೆಗಳು ಕೂಡಿಕೊಂಡು ಅಗ್ನಿಯ ಪರಮಾಣುಗಳು ಆಗುತ್ತವೆ. ಹೀಗೆಯೇ ಉಷ್ಣ ಮತ್ತು ತೇವಗಳು ಕೂಡಿಕೊಂಡು ವಾಯು ಪರಮಾಣುಗಳಾಗುತ್ತವೆ. ಶೀತ ಮತ್ತು ತೇವಗಳು ಕೂಡಿಕೊಂಡು ನೀರನ್ನು ಉಂಟಾಗಿಸಬಹುದು. ಅಂತೆಯೇ ಶೀತ ಮತ್ತು ಶುಷ್ಕತೆಗಳು ಕೂಡಿಕೊಂಡು ಪೃಥ್ವಿಯನ್ನು ಉಂಟುಮಾಡಬಲ್ಲುವು. ನಾಲ್ಕು ಪರಮಾಣುಗಳ ಸಂಯೋಗಗಳಲ್ಲಿಯ ಬದಲಾವಣೆಗಳಾದರೂ ಶಿಲೆಗಳು, ರಕ್ತ ಇಲ್ಲವೆ ಮಾಂಸದಂಥ ದೃಗ್ಗೋಚರ ವಸ್ತುಗಳನ್ನು ನೀಡುವಂಥ ಎರಡನೆಯ ಬಗೆಯ ಬದಲಾವಣೆಯನ್ನು ಉಂಟುಮಾಡಬಲ್ಲವು. ಇದೇ ರೀತಿ ಮೂರನೆಯ ಬಗೆಯ ಬದಲಾವಣೆಯೂ ಸಾಧ್ಯವಾಗುತ್ತದೆ ಇತ್ಯಾದಿ. ಅರಿಸ್ಟಾಟಲ್ ಜೈವಿಕ ಮತ್ತು ಭೌತವಿದ್ಯಮಾನಗಳನ್ನು ಕುರಿತು ವ್ಯಾಪಕ ವಿವರಣೆಗಳನ್ನು ನೀಡಿದ್ದಾನೆ.

ರಸವಿದ್ಯೆಯ ಉಗಮ: ಅರಿಸ್ಟಾಟಲನ ಮರಣದೊಂದಿಗೆ ಗ್ರೀಕ್ ತತ್ತ್ವಶಾಸ್ತ್ರದ ಅಭಿಜಾತ ಅವಧಿಯೂ ಕೊನೆಗೊಂಡಿತು. ವಿಜ್ಞಾನಕ್ಷೇತ್ರದಲ್ಲಿನ ನಾಯಕತ್ವ ಕ್ರಮೇಣ ಆಥೆನ್ಸಿನಿಂದ ಈಜಿಪ್ಟಿನ ಅಲೆಕ್ಸಾಂಡ್ರಿಯ ಪಟ್ಟಣಕ್ಕೆ ವರ್ಗಾವಣೆಗೊಂಡಿತು. ಇಲ್ಲಿಯ ವಸ್ತುಸಂಗ್ರಹಾಲಯ ಒಂದು ರೀತಿಯಲ್ಲಿ ವಿಜ್ಞಾನ ಸಂಶೋಧನ ಸಂಸ್ಥೆಯಂತೆಯೇ ಆಗಿತ್ತು. ವಿಜ್ಞಾನಕ್ಷೇತ್ರದಲ್ಲಿ ಆದ ಮಹತ್ತರ ಸಂಶೋಧನೆಗಳ ಫಲವಾಗಿ ರಸಾಯನವಿಜ್ಞಾನದಲ್ಲೂ ಪ್ರವರ್ಧನೆಗಳು ಕಂಡುಬಂದುವು. ಅಲೆಕ್ಸಾಂಡ್ರಿಯ ಪಟ್ಟಣವಾದರೋ ನಾನಾ ಬಗೆಯ ಸಂಸ್ಕøತಿಗಳ ಸಂಗಮ ಕೇಂದ್ರವಾಯಿತು. ಆಗಾಗಲೇ ಬಹಳಷ್ಟು ಅಮೂರ್ತರೂಪ ತಾಳಿದ್ದ ಗ್ರೀಕ್ ತತ್ತ್ವಶಾಸ್ತ್ರಕ್ಕೆ ಪೌರಸ್ತ್ಯ ತಂತ್ರವಿದ್ಯೆಯ ಪ್ರಾಯೋಗಿಕ ಸಂಸ್ಕಾರ ಆಗತೊಡಗಿತು. ಅಲೆಕ್ಸಾಂಡ್ರಿಯದಲ್ಲಿ ಆಧ್ಯಾತ್ಮವಾದಿಗಳಾದಂಥವರ ಮತಧರ್ಮಗಳಲೂ ತಲೆಯೆತ್ತಿದ್ದವು. ಗ್ರೀಕ್ ತತ್ತ್ವಶಾಸ್ತ್ರ, ಪೌರಸ್ತ್ಯ ತಂತ್ರವಿದ್ಯೆ ಮತ್ತು ಪೌರಸ್ತ್ಯ ಮತಧರ್ಮೀಯ ಆಧ್ಯಾತ್ಮವಾದ ಈ ಮೂರೂ ಆಕರಗಳಿಂದ ಮೊದಲಿಗೆ ರಸವಿದ್ಯೆಯೂ ಅನಂತರ ರಸಾಯನವಿಜ್ಞಾನವೂ ಹುಟ್ಟಿಕೊಂಡವು. (ನೋಡಿ- ರಸವಿದ್ಯೆ)

ಪ್ರಾಯೋಗಿಕ ರಸಾಯನವಿಜ್ಞಾನದ ಮಹತ್ತ್ವವನ್ನು ಸ್ಥೂಲವಾಗಿ ರಸವಿದ್ಯೆಯ ಮೂಲಕ ಮನವರಿಕೆ ಮಾಡಿಕೊಂಡ ರಸವಾದಿಗಳು ಕ್ರಮೇಣ ರಸಯನವಿಜ್ಞಾನವನ್ನು ವೈಜ್ಞಾನಿಕಕ್ರಮದಲ್ಲಿ ಅಭ್ಯಾಸ ಮಾಡುವುದಕ್ಕೆ ಪ್ರಾರಂಭಿಸಿದ ಕಾಲವೇ ರಸಾಯನವಿಜ್ಞಾನದ ಪುನರುತ್ಥಾನ ಕಾಲ. ಪ್ರಾಯೋಗಿಕ ವಿಧಾನಗಳನ್ನು ನಿರೂಪಿಸುವ ಅನೇಕ ಗ್ರಂಥಗಳ ರಚನೆ ಆಯಿತು. ಆಸವನವನ್ನು ಕುರಿತು ಹೀರೋ ನಿಮಸ್ ಬ್ರನ್ಷ್‍ವಿಗ್ಕ್ ಎಂಬವ ರಚಿಸಿದ ಗ್ರಂಥ, ಗಣಿಗಾರಿಕೆ ಮತ್ತು ಲೋಹವಿದ್ಯೆಗಳನ್ನು ಕುರಿತು ವನ್ನೋಷಿಯೊ ಬಿರಿಂಗ್ಕೂಷಿಯೋ, ಜಾರ್ಜಿಯಸ್ ಅಗ್ರಿಕೊಲ ಮತ್ತು ಲಾಜರಸ್ ಎರ್ಕರ್ ಎಂಬವರು ರಚಿಸಿದ ಗ್ರಂಥಗಳಲ್ಲಿ ಪ್ರಾಯೋಗಿಕ ವಿಧಾನಗಳ ನಿರೂಪಣೆಗಳಿದ್ದುವು. ಹೊಸ ಹೊಸ ಲೋಹಗಳು ಮತ್ತು ಸಂಯುಕ್ತಗಳ ವಿಚಾರವೂ ಪ್ರಸ್ತಾವನೆಗೊಂಡಿದ್ದುವು. ಪ್ಯಾರಾಸೆಲ್ಸಸ್ ಎಂಬಾತ ವೈದ್ಯದಲ್ಲಿ ರಾಸಾಯನಿಕ ಪರಿಹಾರ ವಿಧಾನಗಳ ಅನ್ವಯದ ಬಗ್ಗೆ ವಾದ ಮಂಡಿಸಿದ್ದ. ಇವನದೇ ಆದ ಅಯಾಟೋಕೆಮಿಸ್ಟ್ರಿ ಪಂಥ ಎಂಬುದು ಜನ್ಮತಳೆದು ಅದು ಇಂದಿನ ಔಷಧವಿಜ್ಞಾನಕ್ಕೆ ನಾಂದಿ ಎನಿಸಿಕೊಂಡಿದೆ. ಯಥೇಚ್ಫವಾಗಿ ಲಭ್ಯವಾಗಿದ್ದ ನೂತನ ಮಾಹಿತಿಗಳು ಅರಿಸ್ಟಾಟಲ್ ನಿರೂಪಿಸಿದ ಸಿದ್ಧಾಂತದ ಚೌಕಟ್ಟಿನಲ್ಲಿ ಅಳವಡಲಿಲ್ಲವಾದ್ದರಿಂದ ನೂತನ ಸೈದ್ಧಾಂತಿಕ ಮಾರ್ಗವೊಂದನ್ನು ಕಂಡುಕೊಳ್ಳುವುದು ಅಗತ್ಯವಾಯಿತು.

ವಿಜ್ಞಾನವಾಗಿ ಮೈದಳೆದ ರಸಾಯನವಿದ್ಯೆ: 1597-1700ರ ಅವಧಿಯ ಅಭಿವರ್ಧನೆಗಳು. ಈ ವೇಳೆಗಾಗಲೇ ರಸಾಯನವಿದ್ಯೆಯನ್ನು ಅದೊಂದು ವಿಜ್ಞಾನ ಎಂಬುದಾಗಿ ಪರಿಗಣಿಸುವುದು ಪ್ರಾರಂಭವಾಗಿತ್ತು. ಅಂಡ್ರಿಯಾಸ್ ಲಿಬೇವಿಯಸ್ ಎಂಬವ ರಚಿಸಿದ, ರಸಾಯನವಿಜ್ಞಾನದಲ್ಲಿ ಮೊತ್ತಮೊದಲ ಪಠ್ಯ ಪುಸ್ತಕ ಎಂದು ಪರಿಗಣಿತವಾಗಿದ್ದ ಆಲ್‍ಕೆಮಿಯ (1597) ಎಂಬ ಪುಸ್ತಕದಲ್ಲಿ ರಸಾಯನವಿದ್ಯೆಯ ವಿಧಿವಿಧಾನಗಳನ್ನು ನಿರೂಪಿಸಲಾಗಿತ್ತು. ಬದಲಾವಣೆ ಉಂಟುಮಾಡುವ, ಗುಣಪಡಿಸುವ ಮುಂತಾದ ಸಾಮಥ್ರ್ಯಗಳನ್ನು ಹೊಂದಿರುವ ವಸ್ತು ವಿಶೇಷವನ್ನೂ ದ್ರಾವಣಗಳಿಂದ ವಸ್ತುಗಳನ್ನು ಪ್ರತ್ಯೇಕಿಸುವುದರ ಮೂಲಕ ಶುದ್ಧ ಸತ್ತ್ವಗಳನ್ನೂ ತಯಾರಿಸುವ ಕಲೆಯೇ ರಸವಿದ್ಯೆ ಅಥವಾ ರಸಾಯನವಿದ್ಯೆ ಎಂಬುದಾಗಿ ಲಿಬೇವಿಯಸ್ ತನ್ನ ಗ್ರಂಥದಲ್ಲಿ ಘೋಷಿಸಿದ್ದ. ಹದಿನೇಳನೆಯ ಶತಮಾನದಲ್ಲಿ ರಸಾಯನವಿಜ್ಞಾನವನ್ನು ಕುರಿತ ಅಭಿವರ್ಧನೆಗಳು ತ್ವರಿತಗತಿಯಿಂದ ಸಾಗಿದುವು. ಆಮ್ಲ, ಪ್ರತ್ಯಾಮ್ಲ ಹಾಗೂ ಲವಣಗಳನ್ನು ಕುರಿತು ವಿಶೇಷ ಅಧ್ಯಯನಗಳು ನಡೆದುವು. ರಾಸಾಯನಿಕ ಸಿದ್ಧಾಂತವೆ ಬದಲಾವಣೆ ಹೊಂದುತ್ತ ಮುನ್ನಡೆಯಿತು. ಅಯಾಟೋರಸಾಯನಶಾಸ್ತ್ರಜ್ಞರು ಹೊಸ ಹೊಸ ರಾಸಾಯನಿಕ ಪರಿಹಾರಗಳನ್ನು ಕಂಡುಕೊಳ್ಳುವುದರಲ್ಲಿ ತಮ್ಮ ಗಮನ ಹರಿಸಿದರು. ಅನೇಕರು, ಪ್ರಮುಖರಾಗಿ ಫ್ರಾನ್ಸಿನಲ್ಲಿ ಔಷಧಗಾರರಾದರು. ಇವರ ಪೈಕಿ ಕ್ರಿಸ್ಟೋಫರ್ ಗ್ಲೇಸರ್ ಮತ್ತು ನಿಕೊಲಾಸ್ ಲೆಮರಿ ಪ್ರಮುಖರು. ಇವರು ಪಠ್ಯಪುಸ್ತಕಗಳನ್ನು ಬರೆದರಲ್ಲದೆ ಕೆಲವೊಂದು ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಪದಾರ್ಥಗಳನ್ನು ಆಸವಿಸಿ ಅದರಿಂದ ಹೊರ ಬರುವ ವಸ್ತುವಿಶೇಷಗಳನ್ನು ವೃದ್ಧಿಪಡಿಸಿದರು ಕೂಡ. ಆಸವನದಿಂದ ತಾವು ವಸ್ತುಗಳನ್ನು ವಿಶ್ಲೇಷಣೆಮಾಡುತ್ತಿದ್ದೇವೆ ಎಂಬುದಾಗಿ ಅರಿತ ಅವರು ಹಿಂದೆ ತಿಳಿದಿದ್ದ ಚತುರ್ಧಾತುಗಳ ಬದಲಿಗೆ ಐದು ಧಾತುಗಳು ಇವೆ ಎಂಬ ತೀರ್ಮಾನಕ್ಕೂ ಬಂದಿದ್ದರು. ಆ ವೇಳೆಗೆ ಗಣಿತ ಹಾಗೂ ಖಗೋಳಶಾಸ್ತ್ರಗಳಲ್ಲೂ ಗಮನಾರ್ಹ ಸಂಶೋಧನೆಗಳು ನಡೆದಿದ್ದುವು. ಕೊಪರ್ನಿಕಸ್ ಮತ್ತು ಗೆಲಿಲಿಯೋ ಇವರು ಪ್ರತಿಪಾದಿಸಿದ ಖಗೋಳೀಯ ಹಾಗೂ ಭೌತಸಿದ್ಧಾಂತಗಳು ರಸಾಯನವಿಜ್ಞಾನದ ಮೇಲೆ ಪ್ರಭಾವ ಬೀರಿದುವು. ಪ್ರಾಚೀನ ಗ್ರೀಕ್‍ಸಿದ್ಧಾಂತಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪುನಶ್ವೇತನಗೊಳಿಸಲಾಯಿತು. ಐರಿಷ್ ರಸಾಯನವಿಜ್ಞಾನಿ ರಾಬರ್ಟ್ ಬಾಯ್ಲ್ (1627-91) ಈ ಅಂಶಗಳನ್ನು ತನ್ನ ಕಣಸಿದ್ಧಾಂತದಲ್ಲಿ ಅನ್ವಯ ಮಾಡಿಕೊಂಡು ರಾಸಾಯನಿಕ ಕ್ರಿಯೆಗಳನ್ನು ಶುದ್ಧಯಾಂತ್ರಿಕತೆಯ ಆಧಾರಗಳ ಮೇಲೆ ವಿವರಿಸುವ ಪ್ರಯತ್ನ ನಡೆಸಿದ್ದ. ತನ್ನ ಪ್ರಖ್ಯಾತ ಗ್ರಂಥ ದಿ ಸ್ಕೆಪ್ಟಿಕಲ್ ಕೆಮಿಸ್ಟ್‍ದಲ್ಲಿ (1661) ಬಾಯ್ಲ್ ಅರಿಸ್ಟಾಟಲನ ಚತುರ್ಧಾತು ಸಿದ್ಧಾಂತವನ್ನೂ ಪ್ಯಾರಾಸೆಲ್ಲಸನ ತ್ರಿಧಾತು ಸಿದ್ಧಾಂತವನ್ನೂ ಆಸವನದಿಂದ ದ್ರವ್ಯದ ಮೂಲಧಾತುಗಳನ್ನು ಉಂಟುಮಾಡಿಕೊಳ್ಳಬಹುದು ಎಂಬ ಅಭಿಪ್ರಾಯವನ್ನು ವಿರೋಧಿಸಿದ್ದಾನೆ. ತನ್ನ ಪ್ರಯೋಗಾಲಯದಲ್ಲಿ ಅನೇಕ ಹೊಸ ರಾಸಾಯನಿಕ ಸಂಗತಿಗಳನ್ನೂ ಪ್ರಕ್ರಮಗಳನ್ನೂ ಬಾಯ್ಲ್ ಆವಿಷ್ಕರಿಸಿ ಧಾತು ಎಂಬುದಕ್ಕೆ ನಿರ್ಣಾಯಕವಾಗಿ ಹೊಸ ವ್ಯಾಖ್ಯೆಯನ್ನೇ ನೀಡಿದ್ದ. ಬಾಯ್ಲ್ ಹೀಗೆಲ್ಲ ತನ್ನ ವಾದವನ್ನು ಮಂಡಿಸುತ್ತಿದ್ದನಾದರೂ ತನ್ನ ಪೀಳಿಗೆಯ ಸಂಶೋಧಕರ ಮನಸ್ಸಿನಲ್ಲಿ ಯಾಂತ್ರಿಕ ತತ್ತ್ವಜ್ಞಾನದ ಆಲೋಚನೆಯನ್ನು ಸ್ಥಾಪಿಸಲು ಯಶಸ್ವಿಯಾದ ಎಂದು ಮಾತ್ರ ಹೇಳಲಾಗದು. ಸ್ವತಂತ್ರ ಆಲೋಚನೆಗೈಯಲು ಅವರಿಗೆ ಅವಕಾಶವೀಯುತ್ತಿದ್ದ. ಬಾಯ್ಲ್ ತನ್ನ ಕೆಲಸವನ್ನು ಮುಂದುವರಿಸುತ್ತಿದ್ದ ಸಮಯದಲ್ಲೇ ತ್ರಿಧಾತು ಸಿದ್ಧಾಂತ ಒಂದು ಹೊಸ ಹಾಗೂ ಪ್ರಮುಖರೂಪ ತಾಳಿತು. ಜರ್ಮನಿಯ ಜೆ. ಜೆ. ಬೆಚರ್ ಎಂಬವ ಈ ಸಿದ್ಧಾಂತವನ್ನು ಗಾಜಿನ ಸ್ವಭಾವದ ಕೊಬ್ಬು ಹಾಗೂ ದ್ರವಭಸ್ಮಗಳ ಸಿದ್ಧಾಂತ ಎಂಬುದಾಗಿ ಪುನರ್ ನಾಮಕರಣಮಾಡಿದ. ಇವು ಅನುಕ್ರಮವಾಗಿ ವಸ್ತುಗಳ ಕಾಯಗುಣ, ದಹನಶೀಲತೆ ಹಾಗೂ ಸಾಂದ್ರತೆಯ ವೈಲಕ್ಷಣಗಳನ್ನು ತಿಳಿಸುವುದಿತ್ತು. ದ್ರವ್ಯದ ಒಂದು ರಚನಾ ಘಟಕವೇ ವಾಯು ಎಂಬ ಮಹತ್ತರ ವಿಚಾರ ಅಂದಿನ ರಸಾಯನಶಾಸ್ತ್ರಜ್ಞರ ಮನಸ್ಸಿನಿಂದ ಅಳಿಸಿಹೋಗಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು. ವಾಯುವನ್ನು ಅದೊಂದು ವರ್ತಿಸಲಾಗದ ಮಾಧ್ಯಮ ಎಂದೂ ಅದು ಎಲ್ಲೆಡೆಯೂ ಇದ್ದು ಭೌತಕಾರಕವಾಗಿ ಮಾತ್ರ ವರ್ತಿಸುತ್ತದೆ ಎಂದೂ ತಿಳಿಯಲಾಗಿತ್ತು. 17ನೆಯ ಶತಮಾನದ ಮಧ್ಯಭಾಗದಲ್ಲಿ ಕಾರ್ಬನ್ ಡೈಆಕ್ಸೈಡನ್ನು ಆವಿಷ್ಕರಿಸಿದ ಬೆಲ್ಜಿಯಮ್ಮಿನ ಭೌತ ಹಾಗೂ ರಸಾಯನವಿಜ್ಞಾನಿ ಜೆ.ಬಿ, ವಾನ್ ಹೆಲ್‍ಮಾಂಟ್ ಎಂಬವ ವಾಯುವಿಗೆ ಅನಿಲ ಎಂಬ ಹೆಸರನ್ನು ಇತ್ತ. ಭೌತಲಕ್ಷಣಗಳ ಹೊರತು ಮತ್ತ್ಯಾವುದೇ ಲಕ್ಷಣಗಳೂ ಈ ಅನಿಲಕ್ಕೆ ಇರುತ್ತವೆ ಎಂಬುದನ್ನು ಹಲ್‍ಮಾಂಟ್ ನಂಬಲಿಲ್ಲ. ಹೀಗಾಗಿ ದ್ರವ್ಯದ ಏಕೈಕ ರಚನಾಘಟಕವಾಗಿರುವ ಘನವಸ್ತುಗಳ ಮೇಲೆ ಬೆಚರ್ ತನ್ನ ಗಮನ ಕೇಂದ್ರೀಕರಿಸಿದ.

  • ಮುಂದೆ ಬೆಚರನ ಶಿಷ್ಯ ಜಾರ್ಜ್ ಅನ್ರ್ಸ್ಟ ಸ್ಟಾಹ್ಲ್ ಎಂಬವ ಕೊಬ್ಬಿನ ಅಂಶ ಇರುವ ಪದಾರ್ಥಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ. ಇಂಥ ಪದಾರ್ಥಗಳಿಗೆ ಆತ ಜ್ವಲಧಾತುಗಳು (ಪೂಜಿಸ್ಟನ್ಸ್) ಎಂದು ಹೆಸರಿಟ್ಟ. ಜ್ವಲನಧಾತುಗಳ ವಿಚಾರ ಆತನಿಗೆ ಅಗ್ನಿತತ್ತ್ವವೇ ಆಗಿತ್ತು. ವಸ್ತುವೊಂದು ಉರಿದಾಗ, ಜ್ವಲನಧಾತು ನಷ್ಟವಾಗುತ್ತದೆ. ಬೆಂಕಿಯಲ್ಲಿ ವಸ್ತುಗಳು ಉರಿಯುವಾಗ ಸ್ಥಿರಪಡುತ್ತಿದ್ದ ಈ ಅಭಿಪ್ರಾಯವನ್ನು ಆಗಿನ ಜನ ಮನಗಂಡರು. ಸಾವಯವ ಪದಾರ್ಥವೊಂದು ಉರಿಯುವಾಗ ಅದು ಸಂಪೂರ್ಣವಾಗಿ ಉರಿದು ಹೋಗಿ ಕೊಂಚಮಾತ್ರದ ಶೇಷ ಅಥವಾ ಕರಿ ಉಳಿಯುತ್ತಿದ್ದುದೇ ಜನರಿಗಾದ ಮನವರಿಕೆಗೆ ಸಾಕ್ಷಿಯಾಗಿತ್ತು. ಲೋಹವೊಂದನ್ನು ಅದರ ಭಸ್ಮವನ್ನಾಗಿ (ಅಕ್ಸೈಡ್) ಮಾರ್ಪಡಿಸಿದಾಗ ಲೋಹದ ಜ್ವಲನಧಾತು ನಾಶವಾಗುತ್ತದೆ. ಆದ್ದರಿಂದ ಭಸ್ಮವೇ ಸರಳವಿತ್ತು. ಲೋಹವೇ ಸಂಯಕ್ತ. ಅದರಲ್ಲಿ ಭಸ್ಮ ಮತ್ತು ಜ್ವಲನಧಾತುಗಳು ಕೂಡಿಕೊಂಡಿರುತ್ತವೆ. ಜ್ವಲನಧಾತುವನ್ನು ಹೊರ ಹಾಕುವುದರಲ್ಲಿ ಮಾತ್ರ ವಾಯುವಿನ ಪಾತ್ರ ಇರುತ್ತದೆ. ಎಂಬುದು ಆಗಿನ ಜನರ ನಂಬಿಕೆಯಾಗಿತ್ತು. ಜ್ವಲನಧಾತುಗಳ ಈ ಸಿದ್ಧಾಂತ ರಸಾಯನವಿಜ್ಞಾನದಲ್ಲಿಯ ಉತ್ಕರ್ಷಣ ಮತ್ತು ಅಪಕರ್ಷಣ ಕ್ರಿಯಗಳನ್ನು ಸ್ಥೂಲವಾಗಿ ತಿಳಿಸುವ ಸಿದ್ಧಾಂತವಾಗಿದ್ದರೂ ಇದರ ಕ್ರಿಯಾತಂತ್ರಗಳು ಮಾತ್ರ ಈಗಿನ ಅಂಗೀಕೃತ ಸಿದ್ಧಾಂತಗಳ ವಿಲೋಮತಂತ್ರಗಳು ಆಗಿದ್ದುವು. ಈ ತತ್ತ್ವದ ಬಗ್ಗೆಯೂ ವಿರೋಧಗಳೇರ್ಪಟ್ಟಿದ್ದುವು. ಈ ರಸಾಯನವಿಜ್ಞಾನದಲ್ಲಿ ಸಂಶೋಧನೆಗಳು ಪ್ರಯೋಗಗಳು ಮುಂದುವರಿದಂತೆಲ್ಲ ವಿಜ್ಞಾನಿಗಳೂ ಅನ್ವಿತ ಪರಿಮಾಣಾತ್ಮಕ ವಿಧಾನಗಳನ್ನು ಬಳಸಿಕೊಳ್ಳ ತೊಡಗಿದರು. ಮುಂದಿನ ವಿಜ್ಞಾನಿಗಳಿಗೆ ಈ ಸಿದ್ಧಾಂತದ ನಿಜಸ್ವರೂಪದ ಅರಿವುಂಟಾಯಿತು. ಹೈಡ್ರೋಜನ್ ಅನಿಲವನ್ನು ಆವಿಷ್ಕರಿದಾಗ ಕೆಲವೊಂದು ವಿಜ್ಞಾನಿಗಳು ಅದನ್ನು ಶುದ್ಧ ಜ್ವಲನಧಾತುವೆಂದೇ ಬಗೆದಿದ್ದರು.

ಹದಿನೆಂಟನೆಯ ಶತಮಾನದಲ್ಲಿ ದಹನವನ್ನು ಕುರಿತಂತೆ ಆವಿಷ್ಕಾರಗಳ ಸರಣಿಯೇ ಹೊರಹೊಮ್ಮಿತು. ಸ್ಟೀಫನ್ ಹೇಲ್ಸ್. ಹರ್ಮನ್ ಬೋಯರ್‍ಹೇವ್ ಜೋಸೆಫ್ ಬ್ಲ್ಯಾಕ್ ಮುಂತಾದವರ ಪ್ರಯೋಗಗಳ ಫಲವಾಗಿ ಅನಿಲಗಳ ಬಗ್ಗೆ ವಿಶೇಷ ಮಾಹಿತಿ ಒದಗಿತು. ಸ್ವೀಡನ್ನಿನ ಕಾರ್ಲ್ ಪೀಲೆ (1742-86) ಮತ್ತು ಇಂಗ್ಲೆಂಡಿನ ಜೋಸೆಫ್ ಫ್ರೀಸ್‍ಟ್ಲೀ (1733-1804) ಇವರು ಹೆಚ್ಚು ಕಡಿಮೆ ಏಕಕಾಲಕ್ಕೆ ಆಕ್ಸಿಜನ್ನನ್ನು ಆವಿಷ್ಕರಿಸಿದರು (1772-74). ಹೀಗಾಗಿ ದಹನದ ನಿಜಸ್ವರೂಪ ಬೆಳಕಿಗೆ ಬಂದು ಜ್ವಲನಧಾತು ಸಿದ್ಧಾಂತವನ್ನು ಕೈಬಿಡಲಾಯಿತು. ಫ್ರಾನ್ಸಿನ ರಸಾಯನವಿಜ್ಞಾನಿ ಅಂಟ್ಲೌನ್ ಲೋರಾನ್ ಲ್ಯಾವ್ಯಾಜ್ಯಾ (1743-94) ಎಂಬವ ಆಧುನಿಕ ರಸಾಯನವಿಜ್ಞಾನದ ಪಿತ ಎಂಬ ಹೆಸರು ಪಡೆದ.

ಸೀಸ, ಸತುವು, ಫಾಸ್ಫರಸ್ ಮತ್ತು ಗಂಧಕಗಳು ಉತ್ಕರ್ಷಣ ಅಥವಾ ಅಪಕರ್ಷಣ ಕ್ರಿಯೆಗಳಿಗೆ ಒಳಗಾದಾಗ ಅವುಗಳ ತೂಕಗಳಲ್ಲಿ ಆಗುವ ವೃದ್ಧಿ ಅಥವಾ ನಷ್ಟಗಳನ್ನು ಕುರಿತು ಪರಿಮಾಣಾತ್ಮಕ ಅಧ್ಯಯನಗಳನ್ನು ಲ್ಯಾವ್ಯಾಜ್ಯಾ ನಡೆಸಿದ. ಪ್ರತಿಯೊಂದು ಕ್ರಿಯೆಯಲ್ಲೂ ಅಕ್ಸಿಜನ್ ಪಾಲ್ಗೊಂಡಿರುವುದು ಕಂಡುಬಂತು. ಹೀಗಾಗಿ ಕ್ರಿಯೆಗಳ ಸಂಯೋಜನೆಗಳು. ಅವುಗಳ ಆಕ್ಸೈಡುಗಳ ವಿಚಾರವಾಗಿ ವಿವರಣೆಗಳನ್ನು ನಿರೂಪಿಸಿದ. ಈ ವಿವರಣೆಗಳಿಗೆ 1960ರ ಆರಂಭದ ದಶಕಗಳಲ್ಲಿ ಮನ್ನಣೆ ಇತ್ತು. ಗಂಧಕ ಪಾದರಸಗಳನ್ನು ಕುರಿತ ಎಲ್ಲ ಸಿದ್ಧಾಂತಗಳನ್ನು ಅಂತಿಮವಾಗಿ ತ್ಯಜಿಸಲಾಯಿತು. ಧಾತುಗಳಿಗೆ ಲ್ಯಾವ್ಯಾಜ್ಯಾ ನೀಡಿದ ವಾಖ್ಯೆಯೇ ವಾಸ್ತವವಾಗಿ ಆಧುನಿಕ ಎನಿಸಿಕೊಂಡು, ಧಾತುಸಂಖ್ಯೆಗಳ ವಿಚಾರದಲ್ಲಿ ಹಿಂದಿನ ವಿಜ್ಞಾನಿಗಳ ಮನಸ್ಸಿನಲ್ಲಿದ್ದ ಗೊಂದಲವನ್ನು ತಳ್ಳಿಹಾಕಿತು.
ಲ್ಯಾವ್ಯಾಜ್ಯಾ ಮತ್ತೊಬ್ಬ  ರಸಾಯನವಿಜ್ಞಾನಿ ಗೈಟನ್, ಡಿ ಮಾರ್ವೆ ಎಂಬವನೊಡಗೂಡಿ ರಾಸಾಯನಿಕ ನಾಮಕರಣಗಳ ವಿಚಾರದಲ್ಲಿ ಆಧುನಿಕ ವಿಧಾನ ಒಂದನ್ನು ರೂಪಿಸುವುದರಲ್ಲಿ ಸಾಕಷ್ಟು ಶ್ರಮವಹಿಸಿದ. ಪ್ರಾಣಿಗಳಲ್ಲಿಯ ಶ್ವಾಸೋಚ್ಛ್ವಾಸಕ್ರಿಯೆ ಉತ್ಕರ್ಷಣದ ವಿಶೇಷರೂಪವೆಂಬುದನ್ನು ಪ್ರಯೋಗದಿಂದ ನಿರೂಪಿಸಿದ. ಶ್ವಾಸೋಚ್ಛ್ವಾಸದ ಬಗ್ಗೆ ನಿಜ ಜೀವ ರಸಾಯನಿಕ ಪ್ರಯೋಗಗಳನ್ನು ನಡೆಸಿದ. 1800ರ ವೇಳೆಗೆ ಲ್ಯಾವ್ಯಾಜ್ಯಾನ ಅಕ್ಸಿಜನ್ ಸಿದ್ಧಾಂತದ ಯಥಾರ್ಥತೆಗೆ ಎಲ್ಲೆಡೆಯಿಂದಲೂ ಮನ್ನಣೆ ದೊರೆಯಿತು.

ಹದಿನೆಂಟನೆಯ ಶತಮಾನದಲ್ಲಿ ಪರಿಮಾಣಾತ್ಮಕ ವಿಧಾನಗಳು ಸಾರ್ವತ್ರಿಕ ಬಳಕೆಗೆ ಬಂದು ಅನೇಕ ಖನಿಜಗಳೂ ಹೊಸ ಹೊಸ ಧಾತುಗಳೂ ಆವಿಷ್ಕಾರಗೊಂಡವು. ರಾಸಾಯನಿಕ ಸಂಲಗ್ನತೆಯನ್ನು ಕುರಿತಂತೆ ಬಹಳಷ್ಟು ಗಮನವೀಯಲಾಯಿತು. ಟೋರ್‍ಬನ್ ಬರ್ಗ್‍ಮನ್ ಎಂಬವ ಸಾಪೇಕ್ಷ ಸಂಲಗ್ನತೆಗಳ ಬಗ್ಗೆ ವ್ಯಾಪಕ ಕೋಷ್ಟಕವನ್ನು ರಚಿಸಿದ್ದನಾದರೂ ಈ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಲಗಳ ಸ್ವರೂಪದ ಬಗ್ಗೆ ಸಮಂಜಸ ವಿವರಣೆ ಮಾತ್ರ ನೀಡಿರಲಿಲ್ಲ. 1808ರ ವೇಳೆಗೆ ರಾಸಾಯನಿಕ ಸಂಯಕ್ತಗಳು ನಿರ್ದಿಷ್ಟ ಸಂಯೋಜನೆಗಳನ್ನು ಹೊಂದಿರುತ್ತವೆ ಎಂಬ ವಿಚಾರ ಅಂಗೀಕಾರ ಪಡೆಯಿತು. ಇಂಗ್ಲೆಂಡಿನ ರಸಾಯನವಿಜ್ಞಾನಿ ಜಾನ್ ಡಾಲ್ಟನ್ (1766-1844) ಈ ವಿಚಾರವಾಗಿ ತನ್ನ ಪರಮಾಣು ಸಿದ್ಧಾಂತವನ್ನು ಮುಂದಿಟ್ಟ. ಸಂಯುಕ್ತಗಳ ಸ್ಥಿರ ಸಂಯೋಜನೆ ಅವುಗಳಲ್ಲಿಯ ಒಂದು ಸ್ಥಿರಸಂಖ್ಯೆಯ ಪರಮಾಣುಗಳ ಸಂಯೋಜನೆಯಿಂದ ಅದುದು ಎಂಬುದಾಗಿ ಡಾಲ್ಟನ್ ಭಾವಿಸಿದ. ಆತ ಅನೇಕ ದೃಢ ಆಧಾರಭಾವನೆಗಳನ್ನು ನಿರೂಪಿಸಿದ. ಆದರೆ ಅವು ಆತನ ಸಿದ್ಧಾಂತದ ಸಾರ್ವತ್ರೀಕರಣಕ್ಕೆ ಪರಿಮಿತಿಗಳನ್ನು ತಂದೊಡ್ಡಿದುವು.

ಅನಿಲಗಳು ಒಂದರೊಡನೊಂದು ಕೂಡುವಲ್ಲಿಯ ಸಂಯೋಗನಿಷ್ಟತ್ತಿಯ ವಿಚಾರವಾಗಿ ಮುಂದೆ ಫ್ರೆಂಚ್‍ರಸಾಯನವಿಜ್ಞಾನಿ ಗೇ ಲ್ಯೂಸಾಕ್ (1778-1850) ಎಂಬವ ನಡೆಸಿದ ಪರೀಕ್ಷೆಗಳಿಂದ ಈ ಪರಿಮಿತಿಗಳು ತೆಗೆಯಲ್ಪಟ್ಟವು.  ಬೇರೆ ಬೇರೆ ಧಾತುಗಳ ತುಲನಾಂಕ ಪರಿಮಾಣಗಳು ಒಂದಕ್ಕೊಂದು ಸಂಯೋಗ ಹೊಂದಬಹುದೆಂಬುದನ್ನು ಗೇ ಲ್ಯೂಸಾಕ್ ಪ್ರಯೋಗಮಾಡಿ ನಿರೂಪಿಸದನಾದರೂ ಅಣುಗಳಿಗೂ ಪರಮಾಣುಗಳಿಗೂ ನಡುವಿನ ಭೇದಭಾವವನ್ನು ಎತ್ತಿತೋರಿಸಲಿಲ್ಲ. ಇಟಲಿಯ ಅಮೀಡೋ ಆವೊಗ್ಯಾಡ್ರೋ (1776-1856) ಎಂಬ ರಸಾಯನವಿಜ್ಞಾನಿ ಸಮಗಾತ್ರದ ಅನಿಲಗಳು ಒಂದೇ ಉಷ್ಣತೆ ಮತ್ತು ಒತ್ತಡಗಳಲ್ಲಿ ಸಮಸಂಖ್ಯೆಯ ಅಣುಗಳನ್ನು ಹೊಂದಿರುತ್ತವೆ ಎಂಬುದನ್ನು ಶೃತಪಡಿಸಿದ (1811). ಇದರಿಂದಾಗಿ ಅಣುಗಳಿಗೂ ಪರಮಾಣುಗಳಿಗೂ ಇರುವ ಭೇದಭಾವವನ್ನು ತಿಳಿಯುವುದು ಸಾಧ್ಯವಾಯಿತು.  ಇಷ್ಟಾದರೂ ಆವೋಗ್ಯಾಡ್ರೋವಿನ ಕೆಲಸಕ್ಕೆ 50 ವರ್ಷಗಳ ತನಕ ಮಾನ್ಯತೆ ದೊರಕಲೇ ಇಲ್ಲ. 

ಏತನ್ಮಧ್ಯೆ ಸ್ವೀಡನ್ನಿನ ರಸಾಯನವಿಜ್ಞಾನಿ ಜೆ.ಜೆ. ಬಜಿರ್ûಲಿಯಸ್ (1779-1848) ಖನಿಜಗಳನ್ನು ಕುರಿತು ವಿಶೇಷ ಅಧ್ಯಯನಗಳನ್ನು ನಡೆಸಿದ್ದ. ಆಗ ತಿಳಿದಿದ್ದ ಡ್ಯೂಲಾನ್ ಪೆಟೀ ನಿಯಮಗಳನ್ನು ಆಧರಿಸಿ ಪರಮಾಣು ತೂಕಗಳ ಒಂದು ಕೋಷ್ಟಕ ರಚಿಸಿದ್ದ. ಆಗಿನ ಕಾಲಕ್ಕೆ ಇದು ಬಹಳಷ್ಟು ನಿಖರವಾಗೇ ಇತ್ತು. ಆದರೂ ಬಹುಮಂದಿ ರಸಾಯನವಿಜ್ಞಾನಿಗಳು ಇವನ ಫಲಿತಾಂಶಗಳನ್ನು ಒಪ್ಪಿಕೊಳ್ಳಲೇ ಇಲ್ಲ ಸಮಾನಾಂಕ ತೂಕಗಳು ಬಹಳಷ್ಟು ಸಾಪೇಕ್ಷವಾಗಿದ್ದು ಬೇರೆ ಬೇರೆ ಸಂಯುಕ್ತಗಳ ಸಂದರ್ಭದಲ್ಲಿ ಲೆಕ್ಕ ಹಾಕಿದಾಗ ಒಂದಕ್ಕೊಂದು ವ್ಯತ್ಯಾಸ ತೋರಿಸುತ್ತಿದ್ದರೂ ಪ್ರಯೋಗಾಲಯದಲ್ಲಿ ನಿರ್ಧರಿಸಿದ ಸಮಾನಾಂಕ ತೂಕಗಳನ್ನೇ ಇವರು ಪರಿಗ್ರಹಿಸಿದ್ದರು. ಬರ್ಜೀಲಿಯಸ್ ರಾಸಾಯನಿಕ ಸಿದ್ಧಾಂತಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದ. ಹೆಸರಿಡುವುದು ರಾಸಾಯನಿಕ ಸಂಕೇತಗಳನ್ನು ಇಡುವುದಕ್ಕೆ ಆಧುನಿಕ ಏರ್ಪಾಡಿನ ಅವಿಷ್ಕಾರ ಇತ್ಯಾದಿ. ಈತನ ಪ್ರಮುಖ ಸೈದ್ಧಾಂತಿಕ ಕೊಡುಗೆ ಎಂದರೆ ಪರಮಾಣ್ವಿಕ ಸಂಯೋಜನೆಗಳ ವಿದ್ಯುದ್ರಾಸಾಯನಿಕ ಸಿದ್ಧಾಂತ ಅಥವಾ ದ್ವೈತಸಿದ್ಧಾಂತ ವಿದ್ಯುದ್ವಿಶ್ಲೇಷಣೆ ಪ್ರಕ್ರಮದ ನೂತನವಿಧಾನ ಮತ್ತು ವೋಲ್ಪೇಕ್ ಕೋಶಗಳ ಧ್ರುವಗಳಲ್ಲಿ ಅನಿಲ ಹಾಗೂ ಲೋಹಗಳು ಬೇರ್ಪಡುವುದು ಇತ್ಯಾದಿಗಳ ಬಗ್ಗೆ ಇವನ ಮೆಚ್ಚುಗೆ ಇತ್ತು. ಎಲ್ಲ ಪರಮಾಣುಗಳೂ ವಿದ್ಯುದಾವಿಷ್ಟ ಆಗಿದ್ದು ಕೆಲವದರಲ್ಲಿ ಧನಾವೇಶವು ಕೆಲವದರಲ್ಲಿ ಋಣಾವೇಶವೂ ಪ್ರಬಲವಾಗಿರುತ್ತವೆ. ಎಂದು ನಂಬಿದ್ದ. ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಸಾವಯವ ರಸಾಯನವಿಜ್ಞಾನವನ್ನು ಕುರಿತು ನಡೆದ ತೀವ್ರ ಅಧ್ಯಯನದ ಫಲವಾಗಿ ಕಾರ್ಬನ್ನಿನ ಸಂಯುಕ್ತಗಳು ಯಥೇಚ್ಚವಾಗಿ ತಯಾರಾದವು ಇದರಿಂದಾಗಿ ದ್ವೈತ ಸಿದ್ಧಾಂತದಲ್ಲಿಯ ಕೊರತೆಗಳು ಎದ್ದುಕಾಣುವಂತಾದವು. ಮುಖ್ಯವಾಗಿ ಸಾವಯವ ಸಂಯುಕ್ತಗಳಲ್ಲಿ ಹೈಡ್ರೊಜನ್ನಿನ ಬದಲಿಗೆ ಕ್ಲೋರಿನ್ನಿನಂಥ ಧಾತುಗಳನ್ನು ಪುನ ಸ್ಥಾಪಿಸುವುದರ ವಿಚಾರವನ್ನು ಬರ್ಜೀಲಿಯನ್ ವಿವರಿಸುವುದು ಸಾಧ್ಯವಾಗಲಿಲ್ಲ. ಇಲ್ಲಿಯ ಪರಮಾಣುಗಳು ವಿಮುಖ ವಿದ್ಯುದಾವೇಶಗಳನ್ನು ಹೊಂದಲೇಬೇಕಾಗಿದ್ದು ಸಂಯುಕ್ತವೊಂದರಲ್ಲಿ ಸ್ಥಿರವಿದ್ಯುದ್ಬಲಗಳಿಂದ ಒಟ್ಟಿಗೆ ಹಿಡದಿಟ್ಟಿರುವಂಥ ಒಂದೇ ಸ್ಥಾನಗಳನ್ನು ಈ ಪರಮಾಣುಗಳು ಆಕ್ರಮಿಸಿಕೊಳ್ಳಲಾಗದಿದ್ದುದೇ ಇದರ ಕಾರಣವಾಗಿತ್ತು. ಹೀಗಾಗಿ ರಾಸಾಯನಿಕ ಕ್ರಿಯೆಗಳಲ್ಲಿ ಒಂದು ಘಟಕವಾಗಿ ವರ್ತಿಸುವ ಪರಮಾಣುಗಳ ಒಂದು ಗುಂಪನ್ನು ಅಂದರೆ ರ್ಯಾಡಿಕಲ್ಲುಗಳನ್ನು ಕುರಿತು ಸಾವಯವ ರಸಾಯನವಿಜ್ಞಾನಿಗಳು ಆಲೋಚಿಸಬೇಕಾಯಿತು. ರ್ಯಾಡಿಕಲ್ಲ್ಲುಗಳ ವಿಚಾರವನ್ನು ಇಟ್ಟುಕೊಂಡು ಎಲ್ಲ ಸಾವಯವ ಸಂಯಕ್ತಗಳನ್ನೂ ಕೆಲವೊಂದು ದೃಢಪ್ರರೂಪಗಳಲ್ಲಿ ಮಾತ್ರ ಪೊರ್ದಿಸುವಲ್ಲಿಯ ಪ್ರಯತ್ನಗಳು ಕಷ್ಟಕರವಾದವು. ಹೊಸ ಹೊಸ ಪ್ರರೂಪಗಳ ಪ್ರಸ್ತಾವನೆ ನಡೆಯುತ್ತಲೆ ಇತ್ತು. ಸೂತ್ರಗಳನ್ನು ಬರೆಯುವಲ್ಲಿ ಅಣು ಇಲ್ಲವೆ ಪರಮಾಣು ತೂಕಗಳನ್ನು ಇಲ್ಲವೆ ಇನ್ನಿತರ ಪರ್ಯಾಯಗಳನ್ನು ಬಳಸಿಕೊಳ್ಳುವುದನ್ನು ಒಪ್ಪಿಕೊಳ್ಳುವುದರಲ್ಲಿಯ ವಿಫಲತೆಯಿಂದಾಗಿ ಮತ್ತಷ್ಟು ಗೊಂದಲವುಂಟಾಯಿತು. ಒಮ್ಮೆ ಅಸೆಟಿಕ್ ಆಮ್ಲವನ್ನು ನಿರೂಪಿಸಲು ಬೇರೆ ಬೇರೆ ವಿಜ್ಞಾನಿಗಳು 19 ವಿವಿಧ ಸೂತ್ರಗಳನ್ನು ತಿಳಿಸಿಯೂ ಇದ್ದರು. ನೀರು ಅಮೋನಿಯ ಪ್ರರೂಪದ ಸಿದ್ಧಾಂತ ಹಾಗೂ ಎಸ್ವರ್ಡ್ ಫ್ರ್ಯಾಂಕ್‍ಲೆಂಡ್ ಎಂಬವ, 1850ರ ದಶಕಗಳಲ್ಲಿಯ ಲೋಹಸಾವಯವ ಸಂಯುಕ್ತಗಳನ್ನು ಕುರಿತ ಅಧ್ಯಯನ ಈ ಅಭಿಪ್ರಾಯಕ್ಕೆ ಪುಷ್ಟಿಕೊಟ್ಟಿತು. ಸಂಲಗ್ಪ್ನತೆಯ ಫಟಕಗಳು ಎಂಬ ಪರಿಕಲ್ಪನೆ ಕಾಲಕ್ರಮದಲ್ಲಿ ವೇಲೆನ್ಸಿ ಎಂಬ ಆಧುನಿಕ ಪರಿಕಲ್ಪನೆಯಾಗಿ ಮಾರ್ಪಾಡಾಯಿತು. ಸಾವಯವ ಸಂಯುಕ್ತಗಳ ಸ್ವರೂಪವನ್ನು ವಿಶದೀಕರಿಸುವಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಯಿತು.

ಜರ್ಮನಿಯ ರಸಾಯನವಿಜ್ಞಾನಿ ಫ್ರೀಡ್ರಿಕ್ ಫಾನ್ ಕೆಕೂಲೆ ಮತ್ತು ಇಂಗ್ಲಿಷ್ ರಸಾಯನವಿಜ್ಞಾನಿ ಆರ್ಚಿಬಾಲ್ಡ್ ಸ್ಕಾಟ್ ಕೂಪರ್ ಎಂಬವರು ಕಾರ್ಬನ್ನಿನ ಚತುರ್ವೇಲೆನ್ಸಿಯ ಹಾಗೂ ಅದು ಇನ್ನಿತರ ಕಾರ್ಬನ್ ಪರಮಾಣುಗಳೊಂದಿಗೆ ಕೂಡಿಕೊಂಡು ಉದ್ದನೆಯ ಸರಣಿಗಳನ್ನು ರೂಪಿಸುವ ವಿಚಾರಗಳನ್ನು ಪ್ರತ್ಯೇಕವಾಗಿ ಮುಂದಿಟ್ಟರು (1858). ಇದರಿಂದಾಗಿ ಸಾವಯವ ಸಂಯಕ್ತಗಳನ್ನು ಕುರಿತ ರಾಚನಿಕ ಸಿದ್ಧಾಂತದ ಅಭಿವರ್ಧನೆಗೆ ದಾರಿಯಾಯಿತು. ಎ.ಎಂ. ಬಟ್ಟರೋವ್ ಎಂಬವ ಈ ದಿಶೆಯಲ್ಲಿ 1860ರ ದಶಕಗಳಲ್ಲಿ ಬಹಳಷ್ಟು ಕೆಲಸಮಾಡಿದ. ಉಂಗುರ ರಚನೆಗಳುಳ್ಳ ಆರೋಮ್ಯಾಟಿಕ್ ಸಂಯುಕ್ತಗಳ ಸ್ವರೂಪದ ಬಗ್ಗೆ ವಿವರಣೆಗಳನ್ನು ಕೆಕೂಲೆ 1865ರಲ್ಲಿ ನೀಡಿದ. (ನೋಡಿ- ಆರೋಮ್ಯಾಟಿಕ್-ಸಂಯುಕ್ತಗಳು)

ಸಾವಯವ ಸಂಯುಕ್ತಗಳ ಸ್ವರೂಪದ ಬಗ್ಗೆ ಯಾವಾಗ ತಿಳಿವು ಮೂಡಿತೋ ಆಗ, ಮೊದಲಿಗೆ ಸರಳರೂಪದಲ್ಲಿ ಬರೆಯುತ್ತಿದ್ದ ಸೂತ್ರಗಳನ್ನು ಮೂರು ಆಯಾಮದ ಚಿತ್ರಣಗಳನ್ನಾಗಿ ಮೂಡಿಸುವುದು ತರ್ಕಬದ್ಧವೆಂಬುದು ಕಂಡುಬಂತು. ಜೆಕೋಬಸ್ ಹೆಂಡ್ರಿಕಸ್ ವಾಂಟ್ ಹಾಫ್ ಮತ್ತು ಜೆ. ಎ. ಲೆಬೆಲ್ ಎಂಬವರು 1874ರಲ್ಲಿ ಚತುಷ್ಫಲಕ ಪ್ರರೂಪದ ಕಾರ್ಬನ್ ಪರಮಾಣುವಿನ ರಚನೆಯನ್ನು ಮುಂದಿಟ್ಟರು. ಹೀಗಾಗಿ ಸ್ಟೀರಿಯೋರಸಾಯನ ವಿಜ್ಞಾನದ ಉಗಮವಾಯಿತು. ಈ ಪರಿಕಲ್ಪನೆಗಳಿಂದಾಗಿ ಸಾವಯವ ಸಂಯುಕ್ತಗಳ ಒಗಟು ಸ್ವರೂಪದ ಬಹುತೇಕ ಗುಣಲಕ್ಷಣಗಳನ್ನು ವಿವರಿಸುವುದು ಸಾಧ್ಯವಾಯಿತು. ಮುಂದಿನ ಮೂವತ್ತು ವರ್ಷಗಳ ಅವಧಿಯಲ್ಲಿ ಅನೇಕ ಸಂಶೋಧಕರು ಈ ಕಲ್ಪನೆಯನ್ನು ಪ್ರವರ್ಧಿಸಿದರು. ಹತ್ತೊಂತ್ತನೆಯ ಶತಮಾನದ ಕೊನೆಯಲ್ಲಿ ಸ್ವಿಸ್ ರಸಾಯನವಿಜ್ಞಾನಿ ಆಲ್ಫ್ರೆಡ್ ವರ್ನರ್ (1866 - 1919) ಪ್ಲಾಟಿನಮ್ ಮತ್ತು ಆ ತೆರೆನ ಇನ್ನಿತರ ಲೋಹಗಳ ನಿರವಯವ ಸಂಯುಕ್ತಗಳಿಗೆ ಸ್ಟೀರಿಯೋರಾಸಾಯನಿಕ ವಿಧಿವಿಧಾನಗಳನ್ನು ಅನ್ವಯ ಮಾಡಿ ಆ ಮೊದಲು ತಪ್ಪಾಗಿ ಗ್ರಹಿಸಿದ್ದ ಬಹಳಷ್ಟು ಸಂಯುಕ್ತಕಗಳ ಸ್ವರೂಪದ ಬಗ್ಗೆ ವಿವರಣೆ ನೀಡಿದ.

ಪ್ರಥಮ ಅಂತಾರಾಷ್ಟ್ರೀಯ ರಾಸಾಯನಿಕ ಕಾಂಗ್ರೆಸ್ ಜರ್ಮನಿಯ ಕಾರ್ಲ್ ಷ್ರೂಹೆ ಎಂಬಲ್ಲಿ ಸಮಾವೇಶಗೊಂಡಿತ್ತು (1860). ರಾಸಾಯನಿಕ ಸಿದ್ಧಾಂತದಲ್ಲಿಯ ಅದರಲ್ಲೂ ಮುಖ್ಯವಾಗಿ ಪರಮಾಣುತೂಕಗಳ ವಿಚಾರದಲ್ಲಿ ಇದ್ದಂಥ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿತ್ತು. ಈ ಸಮ್ಮೇಳನದಲ್ಲಿ ಇಟಲಿಯ ರಸಾಯನವಿಜ್ಞಾನಿ ಸ್ಟ್ಯಾನಿಸ್‍ಲೋವ ಕ್ಯಾನಿಜಾರೋ ಎಂಬವ ಅವೊಗ್ಯಾಡ್ರೋ ಆಧಾರಭಾವನೆಯನ್ನು ಪುನಶ್ಚೇತನಗೊಳಿಸಿ ಅಣುಪರಮಾಣುಗಳನ್ನು ಅವು ಬೇರೆ ಬೇರೆಯವು ಎಂಬುದನ್ನು ತೋರಿಸಿಕೊಟ್ಟ. ಈ ಪರಿಕಲ್ಪನೆ ಬಲುಬೇಗ ಸ್ವೀಕೃತವಾಯಿತು. ಇದರಿಂದ ನಿಜ ಪರಮಾಣು ತೂಕ ಹಾಗೂ ಅಣುತೂಕಗಳು ಮನ್ನಣೆ ಪಡೆದವು. ಧಾತುಗಳ ಪರಮಾಣುತೂಕಗಳನ್ನು ಆಧರಿಸಿ ಅವುಗಳ ಗುಣಲಕ್ಷಣಗಳನ್ನು ವರ್ಗೀಕರಿಸುವುದರಲ್ಲಿಯ ಆ ತನಕದ ತಾತ್ಪೂರ್ತಿಕ ಅಧ್ಯಯನಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಯಿತು. 1869 ಮತ್ತು 1871ರ ಅವಧಿಯಲ್ಲಿ ಡಿ. ಐ. ಮೆಂಡಲೀಫ್ ಮತ್ತು ಲೋಥಲ್ ಮೇಯರ್ ಎಂಬವರು ಆವರ್ತ ಕೋಷ್ಟಕದ ಬಗ್ಗೆ ತಮ್ಮದೇ ಆದ ಚಿತ್ರಣಗಳನ್ನು ಮುಂದಿಟ್ಟರು. ಮೆಂಡಲೀಫ್ ತನ್ನ ಕೋಷ್ಟಕದ ಆಧಾರದ ಮೇಲೆ ಅಜ್ಞಾತವಾಗಿದ್ದ ಮೂರು ಹೊಸ ಧಾತುಗಳ ಇರವು ಮತ್ತು ಗುಣಲಕ್ಷಣಗಳನ್ನು ಮುನ್ನುಡಿದ. ಈ ಧಾತುಗಳ (1875ರಲ್ಲಿ ಗ್ಯಾಲಿಯಮ್, 1879ರಲ್ಲಿ ಸ್ಕ್ಯಾಂಡಿಯಮ್ ಮತ್ತು 1866 ರಲ್ಲಿ ಜರ್ಮೇನಿಯಮ್) ಆವಿಷ್ಕಾರವಾಗಿ, ಅವುಗಳ ಗುಣ ಲಕ್ಷಣಗಳು ಮೆಂಡಲೀಫನ ಮುನ್ನುಡಿಗೆ ಅನುಗುಣವಾಗಿದ್ದುದು ಕಂಡುಬಂದವು. ಇದರಿಂದ ಈತ ರೂಪಿಸಿದ ಆವರ್ತಕೋಷ್ಟಕವನ್ನು ಸ್ವೀಕರಿಸಲಾಯಿತು. ನಿರವಯವ ರಸಾಯನ ವಿಜ್ಞಾನಿಗಳಿಗೆ ಇದರಿಂದ ಒಂದು ವ್ಯವಸ್ಥಿತ ಸಾರ್ವತ್ರೀಕರಣ ವಿಧಾನ ಲಭ್ಯವಾಗಿ ತಮ್ಮ ಮುಂದಿನ ವಿಜ್ಞಾನವನ್ನು ಬೆಳೆಸಿಕೊಳ್ಳುವುದು ಸಾಧ್ಯವಾಯಿತು. ಭೌತರಸಾಯನ ವಿಜ್ಞಾನದ ಉಗಮ: ಹತ್ತೊಂಬತ್ತನೆಯ ಶತಮಾನದ ಮೊದಲ ಮೂರು ಪಾದಗಳ ಅವಧಿಯಲ್ಲಿ ರಸಾಯನವಿಜ್ಞಾನ ಭಾಗಗಳಾದ ನಿರವಯವ ಹಾಗೂ ಸಾವಯವ ರಸಾಯನವಿಜ್ಞಾನಗಳಲ್ಲಿ ಪ್ರಮುಖ ಅಭಿವರ್ಧನೆಗಳು ನಡೆದವು. ಒಂದೆಡೆ ಭೌತವಿಜ್ಞಾನವೂ ಪ್ರಗತಿ ಹೊಂದುತ್ತಿತ್ತು. ಎರಡೂ ವಿಜ್ಞಾನ ವಿಭಾಗಗಳಲ್ಲಿಯ ಪರಿಣತರ ನಡುವೆ ಕೆಲವೊಮ್ಮೆ ವಿರೋಧಗಳೂ ಏರ್ಪಡುತ್ತಿದ್ದವು. ಶಕ್ತಿಯನ್ನು ಕುರಿತಂತೆ ನಡೆದ ಶೀಘ್ರ ಅಭಿವರ್ಧನೆಯ ಸಲುವಾಗಿ ಸಂಲಗ್ನತ್ವ ಮತ್ತು ಕ್ರಿಯಾ ದರಗಳನ್ನು ಕುರಿತಂತೆ ಕೆಲಸ ನಡೆಸುತ್ತಿದ್ದ ಕೆಲವೊಂದು ರಸಾಯನವಿಜ್ಞಾನಿಗಳ ಗಮನ ಭೌತವಿಜ್ಞಾನದೆಡೆಗೂ ಹರಿಯುವಂತಾಯಿತು. ಜರ್ಮನಿಯ ಲಡ್ವಿಗ್ ವಿಲ್‍ಹೆಲ್ಮ್ ಎಂಬವ ನಡೆಸಿದ, ಕಬ್ಬುಸಕ್ಕರೆ ಸಂಬಂಧದ ಜಲವಿಶ್ಲೇಷಣೆ, ನಾರ್ವೇಜಿಯನ್ ರಸಾಯನವಿಜ್ಞಾನಿಗಳಾದ ಸಿ. ಎಂ. ಗುಲ್ಡ್‍ಬರ್ಗ್ ಮತ್ತು ಪೀಟರ್‍ವಾಗ್ ಎಂಬವರು ರೂಪಿಸಿದ ರಾಶಿಕ್ರಿಯಾನಿಯಮ ಮುಂತಾದವುಗಳ ಬಗ್ಗೆ ಹೆಚ್ಚಿನ ಪ್ರಯೋಗಗಳು ಸಂಶೋಧನೆಗಳೂ ನಡೆದವು. ಕಾಲಕ್ರಮೇಣ ರಸಾಯನವಿಜ್ಞಾನಿಗಳು ಪರಮಾಣುವಿನ ಚಲನ ಗುಣ ಧರ್ಮಗಳನ್ನು ಕುರಿತಂತೆ ಆಲೋಚನೆ ಮಾಡತೊಡಗಿ ಈ ದೃಷ್ಟಿಯಿಂದ ರಾಸಾಯನಿಕ ಕ್ರಿಯೆಗಳ ಕ್ರಿಯಾತಂತ್ರವನ್ನು ವಿವರಿಸಲು ಪ್ರಾರಂಭಿಸಿದರು.

ರಷ್ಯದ ರಸಾಯನವಿಜ್ಞಾನಿ ಜಿ. ಎಚ್. ರಸ್, ಫ್ರಾನ್ಸಿನ ಪಿಯರ್ ಯೂಜಿನ್ ಬರ್ತೆಲೂ ಮತ್ತು ಡೆನ್ಮಾರ್ಕಿನ ಜೂಲಿಯಸ್ ತಾಮ್‍ಸೆನ್ (1850ರ ಸುಮಾರಿಗೆ) ರಾಸಾಯನಿಕ ಕ್ರಿಯೆಗಳಲ್ಲಿ ಉದ್ಭವವಾಗುವ ಉಷ್ಣವನ್ನು ಕುರಿತಂತೆ ಅಧ್ಯಯನ ನಡೆಸಿದ್ದರು. ಎ. ಎಫ್. ಹಾಸ್ರ್ಟ್‍ಮನ್ ಎಂಬವ ಎಂಟ್ರೊಪಿ ತತ್ತ್ವವನ್ನು ಮೊದಲ ಬಾರಿಗೆ (1869) ರಸಾಯನವಿಜ್ಞಾನದಲ್ಲಿ ಬಳಸಿಕೊಂಡ. ಅಮೆರಿಕದ ಜೋಸೈಯ ವಿಲ್ಲಾರ್ಡ್ ಗಿಬ್ಸ್ ಎಂಬವ 1876 - 78ರಲ್ಲಿ ಪ್ರಾವಸ್ಥಾ ನಿಯಮದ ವ್ಯುತ್ಪತ್ತಿಕ್ರಮ ಹಾಗೂ ವಿಷಮಾಂಗೀಯ ಸಮತೋಲನಗಳನ್ನು ಕುರಿತ ಅಧ್ಯಯನಗಳಿಗೆ ಗಣಿತೀಯ ಆಧಾರವನ್ನು ಒದಗಿಸಿದ. ಇಷ್ಟಾದರೂ ಶುದ್ಧ ಹಾಗೂ ಅನ್ವಿತ ರಸಾಯನ ವಿಜ್ಞಾನಗಳಿಗಾಗಿ ಈತ ನಡೆಸಿದ ಕೆಲಸದ ಮಹತ್ತ್ವಕ್ಕೆ ಸುಮಾರು 20 ವರ್ಷಗಳ ತನಕವೂ ಬೆಲೆ ಸಿಗಲೇ ಇಲ್ಲ.

1800ರಲ್ಲಿ ವೋಲ್ಟೈಕ್ ವಿದ್ಯುತ್ಕೋಶ ಆವಿಷ್ಕಾರಗೊಂಡುದರ ಸಲುವಾಗಿ ವೈದ್ಯುತರಸಾಯನವಿಜ್ಞಾನಕ್ಕೆ ಮಹತ್ತ್ವ ಒದಗಿತು. ಈ ವಿಜ್ಞಾನ ವಿಭಾಗ ದ್ವೈತ ಸಿದ್ಧಾಂತ ಸ್ಥಾಪನೆ ಮತ್ತು ವಿದ್ಯುದ್ವಿಶ್ಲೇಷಣ ವಿಧಾನದಿಂದ ಬಹು ಸಂಖ್ಯೆಯ ಲೋಹಗಳನ್ನು ಪ್ರತ್ಯೇಕಿಸುವುದು ಈ ವಿಚಾರಗಳಲ್ಲಿ ಮಹತ್ತರ ಪಾತ್ರ ವಹಿಸಿತು. ದ್ರಾವಣಗಳಲ್ಲಿನ ವಹನತೆ ಕುರಿತು ಅಧ್ಯಯನ ಸಂಶೋಧನೆಗಳು ನಡೆದವು. ಜರ್ಮನಿಯ ಭೌತವಿಜ್ಞಾನಿ ಎಫ್. ಕ್ಹೋಲ್‍ರಾಷ್, ಜಿ. ಡಬ್ಲ್ಯು ಹಿಟ್ಟಾರ್ಫ್, ಅರೇನಿಯಸ್ ಮೊದಲಾದವರು ದ್ರಾವಣಗಳನ್ನು ಕುರಿತ ವಿವಿಧ ಪ್ರಯೋಗಗಳನ್ನು ನಡೆಸಿದರು. ವಿದ್ಯುತ್‍ಕ್ಷೇತ್ರ ಇಲ್ಲದಿದ್ದಾಗಲೂ ದ್ರಾವಣಗಳಲ್ಲಿ ಅಯಾನುಗಳು ಇರುವುದು ಸ್ಥಿರಪಟ್ಟಿತು. ಹೀಗಾಗಿ ದ್ರಾವಣಗಳನ್ನು ಕುರಿತ ಸಿದ್ಧಾಂತದಲ್ಲಿ ಮಹತ್ತರ ಬದಲಾವಣೆಗಳು ಉಂಟಾದವು. ರಾಸಾಯನಿಕ ಸಂಯುಕ್ತಗಳ ಭೌತಗುಣಧರ್ಮಗಳು ಹಾಗೂ ವರ್ತನೆಗಳಲ್ಲಿ ಆಸಕ್ತಿಯನ್ನು ಈ ಅಧ್ಯಯನಗಳು ಉಂಟುಮಾಡಿದವಾದರೂ ಜರ್ಮನಿಯ ರಸಾಯನ ವಿಜ್ಞಾನಿ ವಿಲ್‍ಹೆಲ್ಮ್ ಓಸ್ವಾಲ್ಡ್ (1853 - 1932) ಎಂಬವ ಭೌತರಸಾಯನ ವಿಜ್ಞಾನವನ್ನು ಕುರಿತು ಒಂದು ಸಾಮಾನ್ಯ ಪಠ್ಯಪುಸ್ತಕವನ್ನು ರಚಿಸುವ ತನಕವೂ (1855 - 88) ಈ ಅಧ್ಯಯನಗಳೆಲ್ಲವನ್ನೂ ಆಗಿನ ವಿಜ್ಞಾನಿಗಳು ರಸಾಯನವಿಜ್ಞಾನದ ವ್ಯವಸ್ಥಿತ ಭಾಗವಾಗಿ ಇರುವಂತೆ ನೋಡಿಕೊಳ್ಳಲಿಲ್ಲ. ಓಸ್ವಾಲ್ಡ್ ತನ್ನ ಮಿತ್ರರಾಗಿದ್ದ ವಾಂಟ್ ಹಾಫ್ ಮತ್ತು ಅರೀನಿಯಸರೊಡಗೂಡಿ ಈ ವಿಭಾಗದಲ್ಲಿ ಒಂದು ವಿಶಿಷ್ಟ ಪ್ರಬುದ್ಧ ಪತ್ರಿಕೆಯನ್ನು ಸ್ಥಾಪಿಸಿದ (1887). ಇಲ್ಲಿಂದ ಮುಂದೆ ಭೌತರಸಾಯನವಿಜ್ಞಾನ ನಿರವಯವ ಹಾಗೂ ಸಾವಯವ ರಸಾಯನವಿಜ್ಞಾನಗಳೊಂದಿಗೆ ಹೆಗಲೆಣೆಯಾಗಿ ನಿಂತು ರಸಾಯನ ವಿಜ್ಞಾನದ ವಿಶಿಷ್ಟ ಹಾಗೂ ಪರಿಪೂರ್ಣಶಾಖೆಯಾಗಿ ಬೆಳೆಯಿತು.

ರಾಚನಿಕ ಪರಿಕಲ್ಪನೆಗಳಲ್ಲಿಯ ಬದಲಾವಣೆಗಳು: ರಸಾಯನ ವಿಜ್ಞಾನದ ಎಲ್ಲ ಶಾಖೆಗಳಲ್ಲಿಯ ಅಧ್ಯಯನಗಳಿಂದಾಗಿ ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ರಾಸಾಯನಿಕ ಧಾತುಗಳು ಹಾಗೂ ಸಂಯುಕ್ತಗಳ ವರ್ತನೆಗಳೆಲ್ಲವನ್ನೂ ಪ್ರತ್ಯೇಕ ಪರಮಾಣುಗಳ ಗುಣಲಕ್ಷಣಗಳನ್ನು ಆಧರಿಸಿ ವಿವರಿಸುವುದು ಸಾಧ್ಯವಾಯಿತು. ಜರ್ಮನಿಯ ವಿಲ್‍ಹೆಲ್ಮ್ ರೆಂಟ್‍ಜೆನ್ (1845 - 1923) ಆವಿಷ್ಕರಿಸಿದ (1895) ಎಕ್ಸ್‍ಕಿರಣಗಳು, ಕ್ಯಾತೋಡ್ ಕಿರಣಗಳ ವ್ಯಾಪಕ ಅಧ್ಯಯನ, ಜೆ. ಜೆ. ತಾಮ್ಸನ್ನನಿಂದ ಎಲೆಕ್ಟ್ರಾನಿಕ್ ಕಣಗಳ ಆವಿಷ್ಕಾರ (1897), ಆರ್. ಎ. ಮಿಲಿಕನ್ ಮುಂತಾದವರಿಂದ ಎಲೆಕ್ಟ್ರಾನ್ ಕಣಗಳ ಆವೇಶ ಹಾಗೂ ರಾಶಿ ನಿರ್ಧರಣೆ, ಬೆಕರೆಲ್ ಎಂಬವನಿಂದ ವಿಕಿರಣಪಟುತ್ವದ ಆವಿಷ್ಕಾರ (1896), ಮೇರಿ ಮತ್ತು ಪಿಯರ್ ಕ್ಯೂರಿ ಎಂಬವರಿಂದ ಯುರೇನಿಯಮ್ ಅದುರುಗಳನ್ನು ಕುರಿತ ಅಧ್ಯಯನ, ಪೊಲೋನಿಯಮ್ ಮತ್ತು ರೇಡಿಯಮ್ ಧಾತುಗಳ ಆವಿಷ್ಕಾರ ಮುಂತಾದವೆಲ್ಲ ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಯಲ್ಲಿ ಆದ ಮಹತ್ತರ ಭೌತ ಹಾಗೂ ರಾಸಾಯನಿಕ ಯುಗಪ್ರವರ್ತಕ ಸಾಧನೆಗಳು. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಅರ್ನ್‍ಷ್ಟ್ ರುದರ್‍ಫರ್ಡ್ (1871 - 1937) ಮತ್ತು ಅವನ ಶಿಷ್ಯರಿಂದ ಆದ ಹೊಸ ಧಾತುಗಳ ಆವಿಷ್ಕಾರ, ಐಸೋಟೋಪುಗಳನ್ನು (ಸಮಸ್ಥಾನಿಗಳು) ಕುರಿತ ವ್ಯಾಪಕ ಅಧ್ಯಯನ ಹಾಗೂ ಸಂಶೋಧನೆಗಳು ಮೊದಲಾದವುಗಳೆಲ್ಲ ರಾಸಾಯನಿಕ ಧಾತುಗಳ ರಾಸಾಯನಿಕ ಹಾಗೂ ಭೌತಲಕ್ಷಣಗಳನ್ನು ವಿಷದಪಡಿಸುವಲ್ಲಿ ಬಲು ನೆರವಾದವು. ಇಂಗ್ಲಿಷ್ ಭೌತವಿಜ್ಞಾನಿ ಎಚ್. ಜಿ. ಜೆ. ಮೋಸ್ಲೆ (1887 - 1915) ಎಕ್ಸ್‍ಕಿರಣ ರೋಹಿತಲೇಖ ವಿಜ್ಞಾನದ ಆಧಾರದ ಮೇಲೆ ಪ್ರತಿಯೊಂದು ಧಾತುವೂ ವೈಲಕ್ಷಣ್ಯ ಪರಮಾಣು ಸಂಖ್ಯೆಯನ್ನು ಪಡೆದಿರುತ್ತದೆಂಬುದನ್ನೂ ಈ ಸಂಖ್ಯೆ ಆ ಧಾತುವಿನ ಕೇಂದ್ರ ನ್ಯೂಕ್ಲಿಯಸ್ಸಿನ ಮೇಲಿನ ಧನಾವೇಶವನ್ನು ಸೂಚಿಸುತ್ತದೆ ಎಂಬುದನ್ನೂ ಕಂಡುಕೊಂಡ. ಅವರ್ತ ಕೋಷ್ಟಕದಲ್ಲಿಯ ಧಾತುಗಳ ಸ್ಥಾನಗಳಿಗೆ ಅನುಗುಣವಾಗಿ ಈ ಸಂಖ್ಯೆಗಳಿರುವುದು ವೇದ್ಯವಾಯಿತು. ಇಪ್ಪತ್ತನೆಯ ಶತಮಾನದ ಮೊದಲ ಹದಿನೈದು ವರ್ಷಗಳಲ್ಲಿ ತೀವ್ರಗತಿಯಿಂದ ನಡೆದು ಬಂದ ಈ ಎಲ್ಲ ಆವಿಷ್ಕಾರಗಳೂ ರಸಾಯನ ವಿಜ್ಞಾನಗಳ ಆಲೋಚನೆಗಳನ್ನು ಸಂಪೂರ್ಣವಾಗಿ ಪುನರ್ ವ್ಯವಸ್ಥೆಗೊಳಿಸಿದವು. ಜಿ. ಎನ್. ಲೂಯಿಸ್, ಡಬ್ಲ್ಯು. ಕೋಸಲ್ ಮತ್ತು ಇರ್ವಿಂಗ್ ಲ್ಯಾಂಗ್‍ಮೂರ್ 1916 - 20ರ ಅವಧಿಯಲ್ಲಿ ರಾಸಾಯನಿಕ ಸಂಯೋಜನೆಯ ಸ್ವಭಾವವನ್ನು ವಿವರಿಸುವಲ್ಲಿ ಈ ಹೊಸ ಹೊಸ ಆಲೋಚನೆಗಳನ್ನು ಬಳಸಿಕೊಂಡರು. ಸೌರವ್ಯೂಹ ಸದೃಶವಾಗಿರುವ ಪರಮಾಣುವಿನ ಚಿತ್ರಣವನ್ನು ಅವರು ರೂಪಿಸಿಕೊಳ್ಳುವಂತಾಯಿತು. ಡೇನಿಷ್ ಭೌತವಿಜ್ಞಾನಿ ನೀಲ್ಸ್ ಬೋರ್ (1885 - 1962) ಪರಮಾಣುವಿನ ಈ ಹೊಸ ಚಿತ್ರಣವನ್ನು ಮುಂದಿಟ್ಟ (1913-14). ಎಲೆಕ್ಟ್ರಾನ್ ರಚನೆಯ ಆಧಾರದ ಮೇಲೆ ರಾಸಾಯನಿಕ ಕ್ರಿಯಾತಂತ್ರವನ್ನು ವಿವರಿಸಲು ರಸಾಯನ ವಿಜ್ಞಾನಿಗಳು ಪ್ರಯತ್ನಿಸಿದರು. ಬಂಧನಶಕ್ತಿಗಳನ್ನು ಕುರಿತಂತೆ ಗಣಿತೀಯವಾಗಿ ಚರ್ಚಿಸುವಲ್ಲಿ ಕ್ವಾಂಟಮ್ ಸಿದ್ಧಾಂತವನ್ನೂ ಅನ್ವಯಿಸಲಾಯಿತು. ಅಮೆರಿಕದ ಜೀವಭೌತವಿಜ್ಞಾನಿ ಲಿನಸ್ ಕಾರ್ಲ್ ಪೌಲಿಂಗನ ಅಧ್ಯಯನ, ಸಂಶೋಧನೆಗಳು ರಾಸಾಯನಿಕ ಬಂಧಗಳ ಸ್ವರೂಪವನ್ನು ವಿವರಿಸುವಲ್ಲಿ ಮಹತ್ತರ ಪಾತ್ರವಹಿಸಿದವು.

ಪರಮಾಣು ರಚನೆಯನ್ನು ಕುರಿತ ಅಧ್ಯಯನಗಳಿಗಾಗಿ ಭೌತವಿಜ್ಞಾನಿಗಳು ಸೈಕ್ಲೊಟ್ರಾನಿನಂಥ ಸಾಮಥ್ರ್ಯಯುತ ಉಪಕರಣಗಳನ್ನು ಪ್ರವರ್ಧಿಸಿದರು. ಇಂಥ ಉಪಕರಣಗಳಾದರೊ ಆವರ್ತ ಕೋಷ್ಟಕದಲ್ಲಿಯ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಹೊಸ ಹೊಸ ಧಾತುಗಳನ್ನು ರಸಾಯನ ವಿಜ್ಞಾನಿಗಳಿಗೆ ಒದಗಿಸಲು ನೆರವಾದವು. ಯುರೇನಿಯಮ್ ಆಚೆಯಧಾತುಗಳು ಸೃಷ್ಟಿಯಾದವು. 1930ರ ಕೊನೆಯ ದಶಕಗಳಲ್ಲಿ ಪರಮಾಣು ವಿದಳನ ಕ್ರಿಯೆಯ ಆವಿಷ್ಕಾರ ಆಗಿ ಹೊಸ ಧಾತುಗಳ ಹಾಗೂ ವಿಕರಣಪಟು ಸಮಸ್ಥಾನಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸ್ಥಿರ ಎಂದೆನಿಸುವ ಧಾತುಗಳ ಸಮಸ್ಥಾನಿಗಳ ಪತ್ತೆಯೂ ಆಗಿದೆ. ಎರಡನೆಯ ಮಹಾಯುದ್ಧದ ಅನಂತರ ಈ ಹೊಸ ವಸ್ತುಗಳು ಲಭ್ಯವಾಗುವುದು ಸಾಮಾನ್ಯ ಕ್ರಿಯೆಯಾಗಿ ಪರಿಣಮಿಸಿ, ವಿಕಿರಣಪಟು ಸಮಸ್ಥಾನಿಗಳು ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳ ಗತಿಯನ್ನು ಪರಿವೀಕ್ಷಿಸುವಲ್ಲಿಯ ರೇಖಣಸಾಧನಗಳಾಗಿ ಮಾರ್ಪಟ್ಟಿವೆ. ಹೊಸ ಧಾತುಗಳ ಹಾಗೂ ರೇಖಣಸಾಧನಗಳ ಸಲುವಾಗಿ ರಾಸಾಯನಿಕ ಕ್ರಿಯಾ ತಂತ್ರದ ಕ್ಷೇತ್ರದಲ್ಲಿ ಹತ್ತಾರು ಆವಿಷ್ಕಾರಗಳು ನಡೆದಿವೆ (ನೋಡಿ- ಜೀವಭೌತವಿಜ್ಞಾನ)

(ನೋಡಿ- ಜೀವರಸಾಯನವಿಜ್ಞಾನ)

ದ್ರವ್ಯದ ರಚನೆ

ಶತಮಾನಗಳಿಂದ ದ್ರವ್ಯದ (ವಸ್ತು) ರಚನೆಯನ್ನು ಕುರಿತ ಚಿಂತನ ಮಂಥನ ಎಡಬಿಡದೆ ಸಾಗಿತ್ತು. ಅರಿಸ್ಟಾಟಲ್ ಮೊದಲಾದ ಗ್ರೀಕ್ ತಾತ್ತ್ವ್ವಿಕರು ದ್ರವ್ಯ ಅವಿಚ್ಛಿನ್ನವೆಂದು ತೀರ್ಮಾನಿಸಿದ್ದರು. ಲ್ಯೂಸಿಪಸ್, ಡೆಮಾಕ್ರಟೀಸ್, ಎಪಿಕ್ಯೂರಸ್ ಮುಂತಾದವರಿಗೆ ಇದು ಸರಿದೋರಲಿಲ್ಲ. ಒಂದು ಧಾತುವನ್ನು ವಿಭಾಗಿಸುತ್ತ ಹೋದರೆ ಅದಕ್ಕೆ ಕೊನೆಯೇ ಇಲ್ಲವೆಂಬ ವಾದ ಅವರಿಗೆ ಹಿಡಿಸಲಿಲ್ಲ. ಈ ವಿಭಜನಾಕ್ರಿಯೆಯನ್ನು ಮುಂದುವರಿಸುತ್ತ ಹೋದರೆ ಆ ವಸ್ತುವಿನ ಅತಿ ಚಿಕ್ಕಕಣ ದೊರೆಯಲೇಬೇಕು. ಮತ್ತೆ ಅದನ್ನು ಭಾಗ ಮಾಡಲು ಸಾಧ್ಯವಿಲ್ಲವೆಂದು ಅವರು ಬೋಧಿಸಿದರು. ಡೆಮಾಕ್ರಟೀಸ್ ಅಂಥ ಸೂಕ್ಷ್ಮಕಣಕ್ಕೆ ಆಟಮ್ ಎಂದು ಹೆಸರಿಟ್ಟ. ಅಭೇದ್ಯವಾದುದು ಎಂಬುದು ಇದರರ್ಥ. ಭಾರತೀಯ ದಾರ್ಶನಿಕರಲ್ಲಿ ಹೀಗೆ ಅಭಿಪ್ರಾಯಪಟ್ಟವರಲ್ಲಿ ಕಣಾದರು ಮೊದಲಿಗರು. ಅಂಥ ಚಿಕ್ಕಕಣಗಳನ್ನು ಅವರು ಪರಮಾಣುಗಳು ಎಂದು ಕರೆದರು. ಕಣಾದರು ಹಿಂದೂದರ್ಶನಶಾಸ್ತ್ರದ ವೈಶೇಷಿಕಪಂಥಕ್ಕೆ ಸೇರಿದವರು. ಅವರ ಪ್ರಕಾರ ವಸ್ತುಪ್ರಪಂಚ ಪರಮಾಣುಗಳಿಂದ ರಚಿತವಾಗಿದೆ. ಪರಮಾಣುಗಳು ಅಭೇದ್ಯವಾದವು ಹಾಗೂ ಸೃಷ್ಟಿ ಮತ್ತು ಲಯಗಳಿಗೆ ಹೊರತಾದವು.

ಕ್ರಿ. ಪೂ. ಒಂದನೆಯ ಶತಮಾನದಲ್ಲಿ ಲ್ಯೂಕ್ರೇಷಿಯಸ್ ಎಂಬ ಲ್ಯಾಟಿನ ಕವಿ ರಚಿಸಿದ ಆe ಖeಡಿum ಓಚಿಣuಡಿಚಿ ಎಂಬ ಗ್ರಂಥದಲ್ಲಿ ಗ್ರೀಕರ ಪರಮಾಣು ವಾದವನ್ನು ಕುರಿತಂತೆ ವಿವರಗಳಿವೆ; ``ವಸ್ತು ನಿತ್ಯವಾದುದು; ಆದರೆ ಅದನ್ನು ಸೃಷ್ಟಿಸಲಾಗದು. ನಾಶಪಡಿಸಲೂ ಸಾಧ್ಯವಿಲ್ಲ. ವಸ್ತು ಅವಿಚ್ಛಿನ್ನವಾಗಿಲ್ಲ. ಪರಮಾಣುಗಳೆಂಬ ಚಿಕ್ಕಕಣಗಳಿಂದ ಆಗಿದೆ. ಆದ್ದರಿಂದ ಪರಮಾಣೂಗಳೂ ನಿತ್ಯವಾಗಿರಲೇಬೇಕು. ಅವು ಬರೀ ಕಣ್ಣಿಗೆ ಕಾಣಿಸದಷ್ಟು ಚಿಕ್ಕವು. ಅಭೇದ್ಯವಾದವು; ಒಂದು ವಸ್ತುವಿನ ಪರಮಾಣುವಿಗೂ ಇನ್ನೊಂದು ವಸ್ತುವಿನ ಪರಮಾಣುವಿಗೂ ತೂಕ, ಗಾತ್ರ ಮತ್ತು ಆಕಾರಗಳಲ್ಲಿ ವ್ಯತ್ಯಾಸವಿದೆ. ವಸ್ತು ಗರ್ಭದಲ್ಲಿ ಪರಮಾಣುಗಳ ನಡುವೆ ಶೂನ್ಯಪ್ರದೇಶವಿದೆ. ಪರಮಾಣುಗಳು ಸದಾ ಚಲಿಸುತ್ತಿರುತ್ತವೆ. ಗ್ರೀಕರ ಈ ಪರಮಾಣು ವಾದಕ್ಕೂ ಪ್ರಚಲಿತ ಸಿದ್ಧಾಂತಕ್ಕೂ ಬಲು ಹೋಲಿಕೆಯಿರುವುದು ಗಮನಾರ್ಹ.

ಆಧುನಿಕ ಪರಮಾಣು ವಾದವನ್ನು ಪ್ರಯೋಗದತ್ತವಾದ ಪುರಾವೆಗಳಿಂದ ನಿರೂಪಿಸಿದವ ಇಂಗ್ಲಿಷ್ ರಸಾಯನ ವಿಜ್ಞಾನಿ ಜಾನ್ ಡಾಲ್ಟನ್ (1766 - 1844) ಅವನಿಗೆ ಪರಮಾಣು ವಾದದಲ್ಲಿ ಆಸಕ್ತಿ ಮೂಡಲು ಮುಖ್ಯಕಾರಣ ರಾಸಾಯನಿಕ ಸಂಯೋಜನೆ. ರಾಸಾಯನಿಕ ಸಂಯೋಜನೆಗಳು ಕೆಲವು ಸ್ಪಷ್ಟ ನಿಯಮಗಳ ಮಿತಿಯಲ್ಲಿ ನಡೆಯುತ್ತವೆಯಷ್ಟೆ. ಅದರಲ್ಲಿ ಭಾಗಿಗಳಾಗುವ ಧಾತುಗಳೂ ಈ ಪರಿಮಿತಿಗಳಿಗೆ ಒಳಗಾಗಿವೆ. ವಸ್ತುಗಳ ಈ ನಿಯಮಬದ್ಧ ವರ್ತನೆಗೆ ಅವುಗಳ ರಚನೆಯಲ್ಲಿರುವ ಕ್ರಮಬದ್ಧತೆಯ ಕಾರಣವೆಂದು ತರ್ಕಿಸುವುದು ಸಹಜ. ಇದೇ ಡಾಲ್ಟನ್‍ನ ವಿಚಾರಧಾರೆ. ಅವನು ಪ್ರಕಟಿಸಿದ ಎ ನ್ಯೂ ಸಿಸ್ಟಮ್ ಆಫ್ ಕೆಮಿಕಲ್ ಫಿಲಾಸಫಿ ಎಂಬ ಗ್ರಂಥದಲ್ಲಿ ತನ್ನ ಪರಮಾಣು ವಾದದ ಬಗ್ಗೆ ವಿವರ ನೀಡಿದ್ದಾನೆ :

``ವಸ್ತು ಅವಿಚ್ಛಿನ್ನವಾಗಿಲ್ಲ. ಪರಮಾಣುಗಳೆಂಬ ಅವಿಭಾಜ್ಯವಾದ, ಅತ್ಯಂತ ಚಿಕ್ಕ ಕಣಗಳಿಂದ ಆಗಿದೆ. ಪರಮಾಣುಗಳು ಅವಿನಾಶ. ಅಂದರೆ ರಾಸಾಯನಿಕ ಕ್ರಿಯೆಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ಒಂದು ಧಾತುವಿನ ಎಲ್ಲ ಪರಮಾಣುಗಳೂ ಆಕಾರ ಗಾತ್ರ ಮತ್ತು ತೂಕಗಳಲ್ಲಿ ಒಂದೇ ತೆರನಾಗಿರುತ್ತವೆ; ಮತ್ತು ಬೇರೆ ಬೇರೆ ಧಾತುಗಳ ಪರಮಾಣುಗಳಿಗಿಂತಲೂ ಭಿನ್ನವಾಗಿರುತ್ತವೆ. ಒಂದು ಪರಮಾಣುವಿಗಿಂತ ಕಡಿಮೆಯಾಗಿ ಯಾವ ಧಾತುವೂ ರಾಸಾಯನಿಕ ಸಂಯೋಜನೆಯಲ್ಲಿ ಪಾತ್ರವಹಿಸುವುದು ಸಾಧ್ಯವಿಲ್ಲ. ನಿಯತ ಸರಳಸಂಖ್ಯಾ ಪ್ರಮಾಣದಲ್ಲಿ ಪರಮಾಣುಗಳು ಉತ್ಪತ್ತಿಯಾಗುತ್ತವೆ.

ಡಾಲ್ಟನ್ನನ ಪರಮಾಣುವಾದ ರಾಸಾಯನಿಕ ಸಂಯೋಜನೆಯ ನಿಯಮಗಳನ್ನು ತರ್ಕಬದ್ಧವಾಗಿ ವಿವರಿಸಿದರೂ ಆಧುನಿಕ ಸಂಶೋಧನೆಗಳ ಫಲವಾಗಿ ಪರಮಾಣುವಿನ ಅವಿಭಾಜ್ಯತೆಯನ್ನು ಪ್ರಶ್ನಿಸುವಂತಾಗಿದೆ. ಪರಮಾಣುಗಳಿಗೂ ರಚನೆಯಿದೆ. ಅವು ಇನ್ನೂ ಚಿಕ್ಕಕಣಗಳಾದ ಪ್ರೋಟಾನ್ (ಧನ ವಿದ್ಯುದಾವೇಶವುಳ್ಳವು ಎಲೆಕ್ಟ್ರಾನ್ (ಋಣ ವಿದ್ಯುದಾವೇಶವುಳ್ಳವು) ಮತ್ತು ನ್ಯೂಟ್ರಾನ್‍ಗಳಿಂದ (ವಿದ್ಯುದಾವೇಶರಹಿತವಾದ) ಆಗಿವೆ. ಯುಕ್ತ ಸಾಧನಗಳಿಂದ ಪರಮಾಣುಗಳನ್ನು ಛೇದಿಸಬಹುದು. 235 ರಾಶಿಯುಳ್ಳ ಯುರೇನಿಯಮ್ ಪರಮಾಣುವನ್ನು ನ್ಯೂಟ್ರಾನ್‍ಗಳ ಸಹಾಯದಿಂದ ಒಡೆದರೆ, ಆ ಕ್ರಿಯೆಯಲ್ಲಿ ಸ್ವಲ್ಪಭಾಗ ವಸ್ತು ಲಯವಾಗಿ, ರಾಶಿವ್ಯತ್ಯಾಸ ಉಂಟಾಗಿ, ಅದಕ್ಕೆ ಅನುಗುಣವಾಗಿ ಅಗಾಧ ಪ್ರಮಾಣದಲ್ಲಿ ಶಕ್ತಿ ಹೊರಹೊಮ್ಮುತ್ತದೆ. ಪರಮಾಣುಬೀಜದಲ್ಲಿ ಅಡಗಿರುವ ನ್ಯೂಟ್ರಾನುಗಳ ಸಂಖ್ಯೆಯಲ್ಲಿ ಮಾತ್ರ ವ್ಯತ್ಯಾಸವಿದ್ದು, ಪ್ರೋಟಾನ್‍ಗಳ ಸಂಖ್ಯೆ ಒಂದೇ ಆಗಿದ್ದರೆ, ಆಗ ಅಂಥ ಪರಮಾಣು ಬೀಜಗಳ ಮೇಲಿನ ಧನ ವಿದ್ಯುದಾವೇಶ ಸಮನಾಗುತ್ತದೆ. ಆದರೆ ರಾಸಾಯನಿಕ ಗುಣಗಳಲ್ಲಿ ಏಕರೂಪತೆ ಇರುತ್ತದೆ. ಹೀಗಾದಾಗ ಒಂದೇ ಧಾತುವಿನ ಸಮಸ್ಥಾನಿಗಳು (ಐಸೊಟೋಪ್‍ಗಳು) ದೊರೆಯುವುವು. ಪರಿಣಾಮವಾಗಿ ಒಂದೇ ಧಾತುವಿನ ಪರಮಾಣುಗಳಿಗೆ ಬೇರೆ ಬೇರೆ ತೂಕಗಳಿರಬಹುದು. ಈ ಹಿನ್ನೆಲೆಯಲ್ಲಿ ಡಾಲ್ಟನ್‍ನ ಪರಮಾಣುವಾದದ ಎರಡು ಮುಖ್ಯಾಂಶಗಳನ್ನು ಕೈಬಿಡಲಾಗಿದೆ. ಪರಮಾಣು ಮತ್ತು ಅಣುತೂಕ: ಅಣುಗಳೂ ಪರಮಾಣುಗಳೂ ಅತ್ಯಂತ ಸೂಕ್ಷ್ಮ ಕಣಗಳು. ಆದ್ದರಿಂದ ಅವನ್ನು ನೇರವಾಗಿ ತೂಗಿ ನೋಡಲು ಸಾಧ್ಯವಿಲ್ಲ. ಆದರೆ ಇಷ್ಟು ಮಾತ್ರ ಸಾಧ್ಯ. ಪರಮಾಣುಗಳ ಪೈಕಿ ಅತ್ಯಂತ ಹಗುರವಾದುದು ಹೈಡ್ರೋಜನ್. ಅದರೊಂದಿಗೆ ಹೋಲಿಸಿ ಧಾತುವಿನ ಒಂದು ಪರಮಾಣು ಅಥವಾ ವಸ್ತುವಿನ ಒಂದು ಅಣು ಹೈಡ್ರೋಜನ್ ಪರಮಾಣುವಿಗಿಂತ ಎಷ್ಟು ಭಾರವಾಗಿದೆ ಎಂದು ಲೆಕ್ಕ ಹಾಕಬಹುದು. ಸಾಮಾನ್ಯ ರಾಸಾಯಾನಿಕ ಲೆಕ್ಕಾಚಾರಗಳಿಗೆ ಈ ತುಲನಾತ್ಮಕ ತೂಕವೇ ಸಾಕು. ಇಂದಿನ ಅಂತರಾಷ್ಟ್ರೀಯ ಪರಮಾಣು ತೂಕಗಳೆಲ್ಲ. 12ಅ ಪ್ರಮಾಣಕವನ್ನು ಅವಲಂಬಿಸಿರುವ ತೂಕಗಳು. ಸಾಮಾನ್ಯ ತೂಕದಂತೆ ಪರಮಾಣು ತೂಕವು ಒಂದು ಸಂಖ್ಯೆ ಈ ಸಂಖ್ಯೆಯಷ್ಟು ಗ್ರಾಮ ಧಾತುವಿನ ತೂಕವೇ ಅದರ ಗ್ರಾಮ್ ಪರಮಾಣುತೂಕ, ಹೀಗೆಯೆ ಅಣುತೂಕ ಎಂಬುದು ಅಣುವಿನ ನೈಜತೂಕವಲ್ಲ. ಪರಮಾಣು ತೂಕದಂತೆ ಇದು ಸಹ ಸಾಪೇಕ್ಷತೂಕ. 12ಅ ಐಸೊಟೋಪ್‍ನ ತೂಕದ 1/12 ಭಾಗಕ್ಕಿಂತ ವಸ್ತುವಿನ ಒಂದು ಅಣು ಎಷ್ಟು ಭಾರವಾಗಿದೆ ಎಂದು ತಿಳಿಸುವ ಒಂದು ಸಂಖ್ಯೆ ಮಾತ್ರ. ಈ ಸಂಖ್ಯೆ ಎಷ್ಟೂ ಅಷ್ಟು ಗ್ರಾಮ್ ವಸ್ತುವಿಗೆ 'ಗ್ರಾಮ್ ಅಣು ಅಥವಾ ಮೋಲ್ ಎಂದು ಅದರ ತೂಕಕ್ಕೆ ಗ್ರಾಮ್ ಅಣುತೂಕ ಎಂದೂ ಹೆಸರು. ಅಣುತೂಕ ಮತ್ತು ಪರಮಾಣುತದೂಕಗಳ ಕರಾರುವಾಕ್ಕಾದ ವಿವರಣೆ ಹೀಗಿದ್ದರೂ ವ್ಯಾವಹಾರಿಕ ಉಪಯೋಗಕ್ಕೆ ಹೈಡ್ರೋಜನ್ ಪ್ರಮಾಣಕ ಸಾಕು.

ರಾಸಾಯನಿಕ ಪರಿಭಾಷೆ

1 ಪ್ರತೀಕ : ಧಾತುವಿನ ಒಂದು ಪರಮಾಣುವನ್ನು ಸಂಕ್ಷಿಪ್ತವಾಗಿ ಸೂಚಿಸುವ ವೈಜ್ಞಾನಿಕ ವಿಧಾನವಿದು. ಇದಕ್ಕಾಗಿ ಧಾತುವಿನ ಹೆಸರಿನ ಮೊದಲನೆಯ ಅಕ್ಷರವನ್ನು ಬಳಸುವುದು ವಾಡಿಕೆ. ಹೀಗೆ ಮೊದಲು (1811) ಸಲಹೆಮಾಡಿದವ ಸ್ವೀಡನ್ನಿನ ಬರ್ಜಿಲಿಯಸ್ (1779-1848) ಎಂಬ ರಸಾಯನವಿಜ್ಞಾನಿ. ಉದಾಹರಣೆಗೆ ಊ,ಔ, ಓ, ಅ,S, ಃ, ಈ, ಂ ಇತ್ಯಾದಿ ಇವು ಅನುಕ್ರಮವಾಗಿ ಹೈಡ್ರೋಜನ್ ಆಕ್ಸಿಜನ್, ನೈಟ್ರೊಜನ್, ಕಾರ್ಬನ್, ಸಲ್ಫರ್ (ಗಂಧಕ) ಬೋರಾನ್ ಫ್ಲೋರಿನ್, ಅರ್ಗಾನ್ ಧಾತುಗಳನ್ನು ಸೂಚಿಸುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಧಾತುಗಳ ಹೆಸರುಗಳು ಒಂದೇ ಅಕ್ಷರದಿಂದ ಪ್ರಾರಂಭವಾಗುವುದುಂಟು. ಉದಾಹರಣೆ ಕಾರ್ಬನ್ ಕ್ಲೋರೀನ್. ಕ್ಯಾಲ್ಸಿಯಮ್, ಕ್ಯಾಡ್ಮಿಯಮ್, ಕ್ರೋಮಿಯಮ್, ಕೋಬಾಲ್ಟ್ ಮತ್ತು ತಾಮ್ರ ಈ ಇಕ್ಕಟಿನಿಂದ ಪಾರಾಗಲು ಅವುಗಳ ಪೈಕಿ ಒಂದಕ್ಕೆ (ಕಾರ್ಬನ್ನಿಗೆ) ಮೊದಲ ಅಕ್ಷರವನ್ನು (ಅ) ಮೀಸಲಾಗಿಡಲಾಗಿದೆ. ಉಳಿದವಕ್ಕೆ ಹೆಸರಿನ ಮೊದಲ ಎರಡು ಅಕ್ಷರಗಳನ್ನಾಗಲಿ ಅಥವಾ ಮೊದಲನೆಯ ಮತ್ತು ಇನ್ನೊಂದು ಎದ್ದುಗಿಣುವ ಅಕ್ಷರವನ್ನಾಗಲಿ ಜೋಡಿಸಿ ಪ್ರತೀಕಗಳನ್ನು ಕಲ್ಪಿಸಿಲಾಗಿದೆ. ಇದರ ಪ್ರಕಾರ ಅಟ, ಅಚಿ, ಅಜ, ಅo, ಅಡಿ ಎಂಬವನ್ನು ಅನುಕ್ರಮವಾಗಿ ಕ್ಲೋರಿನ್ ಕ್ಯಾಲ್ಸಿಯಮ್, ಕ್ಯಾಡ್ಮಿಯಮ್, ಕೋಬಾಲ್ಟ್, ಮತ್ತು ಕ್ರೋಮಿಯಮ್ ಧಾತುಗಳ ಸಂಕೇತಗಳನ್ನಾಗಿ ಇಟ್ಟುಕೊಳ್ಳಲಾಗಿದೆ. ಕೆಲವು ವೇಳೆ ಧಾತುವಿನ ಲ್ಯಾಟಿನ್ ಹೆಸರಿನಿಂದ ಇದೇ ರೀತಿ ಅಕ್ಷರಗಳನ್ನು ಅರಿಸಲಾಗಿದೆ. ಉದಾಹರಣೆಗೆ :

       	ಸೋಡಿಯಮ್ 	ಓಚಿ(ಓಚಿಣಡಿium)

ಪೊಟ್ಯಾಸಿಯಮ್ ಏ (ಏಚಿಟium) ತಾಮ್ರ ಅu (ಏಚಿಠಿಡಿum) ಕಬ್ಬಿಣ ಈe (ಈeಡಿಡಿum) ತವರ Sಟಿ (Sಣಚಿಟಿಟಿum) ಪಾದರಸ ಊg (ಊಥಿಜಡಿಚಿಡಿgಥಿಡಿum) ಬೆಳ್ಳಿ ಂg (ಂಡಿgeಟಿಣum) ಸೀಸ Pb (Pಟumbum) ಚಿನ್ನ ಂu (ಂuಡಿum) ಟಿಂಗ್‍ಸ್ಟನ್ W (Woಟಜಿಡಿಚಿm)

ಧಾತುವಿನ ಸಂಕೇತ ಎರಡು ಅಕ್ಷರಗಳನ್ನು ಒಳಗೊಂಡಿದ್ದರೆ ಮೊದಲನೆಯದನ್ನು ದೊಡ್ಡ ಅಕ್ಷರದಲ್ಲಿಯೂ ಎರಡನೆಯದನ್ನು ಚಿಕ್ಕ ಅಕ್ಷರದಲ್ಲಿಯೂ ಬರೆಯಬೇಕೆಂಬ ನಿಯಮ ಇದೆ. ಮುಂದಿನ ಉದಾಹರಣೆಗಳಿಂದ ಇದು ವೇದ್ಯವಾಗುತ್ತದೆ.


ಸತುವು Zಟಿ ಬ್ರೋಮೀನ್ ಃಡಿ ನಿಕ್ಕಲ್ ಓi ಬೆರಿಲಿಯಮ್ ಃe ಪ್ಲ್ಯಾಟಿನಮ್ Pಣ ಮೆಗ್ನೀಸಿಯಮ್ ಒg ಬೇರಿಯಮ್` ಃಚಿ ಮ್ಯಾಂಗನೀಸ್ ಒಟಿ ಅಲ್ಯೂಮಿನಿಯಮ್ ಂಟ ಬಿಸ್ಮತ್ ಃi

ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪ್ರತೀಕಗಳು ಆಯಾ ಧಾತುಗಳ ಪರಮಾಣೂ ತೂಕಗಳನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ 50 ಅಂದರೆ 5x16 ತೂಕ ಭಾಗ ಆಕ್ಸಿಜನ್ ಎಂದು ಅರ್ಥ.

 2  ಸೂತ್ರ (ಫಾರ್ಮುಲ) : ಇದು ವಸ್ತುನಿನ ಒಂದು ಅಣುವನ್ನೂ ಮತ್ತು ಒಂದು ಅಣುತೂಕವನ್ನು ಸೂಚಿಸುತ್ತದೆ.  ವಸ್ತುವಿನ ಒಂದು ಅಣುವಿನಲ್ಲಿರುವ ಪರಮಾಣುಗಳ ಪ್ರತೀಕಗಳನ್ನು ಒಂದರ ಪಕ್ಕದಲ್ಲಿ ಒಂದು ಬರುವಂತೆ ಬರೆದು ಆಯಾ ಸಂಕೇತಗಳ ಬಲಭಾಗದ ಕೆಳಗೆ ಪರಮಾಣುಗಳ ಸಂಖ್ಯೆಯನ್ನು ಬರೆದರೆ ವಸ್ತುವಿನ ಸೂತ್ರ ಮೂಡುತ್ತದೆ. ಉದಾಹರಣೆಗೆ
 ಊ2Sಔ4   ಸಲ್ಫ್ಯೂರಿಕ್ ಆಮ್ಲ (ಇದರ ಅಣುವಿನಲ್ಲಿ ಎರಡು ಹೈಡ್ರೋಜನ್, ಒಂದು ಸಲ್ಫರ್ ಮತ್ತು ನಾಲ್ಕು ಆಕ್ಸಿಜನ್ ಪರಮಾಣುಗಳಿವೆ)
 ಏ2 ಅಡಿ4 ಔ7  ಪೊಟ್ಯಾಸಿಯಮ್ (ಇದರ ಒಂದು ಅಣುವಿನಲ್ಲಿ ಪೊಟ್ಯಾಸಿಯಮ್ ಡೈಕ್ರೋಮೇಟ್ ಮತ್ತು ಕ್ರೋಮಿಯಮ್ ಧಾತುಗಳ ತಲಾ ಎರಡು ಪರಮಾಣುಗಳೂ ಏಳು ಅಕ್ಸಿಜನ್ ಪರಮಾಣುಗಳೂ ಇವೆ)

ಧಾತುಗಳ ಅಣುಸೂತ್ರ ಬರೆಯಬೇಕಾದರೆ ಅವುಗಸಲ 'ಪರಮಾಣ್ವಕತೆ (ಅಟಾಮಿಸಿಸಟಿ) ಗೊತ್ತಿರಬೇಕು. ಹ್ಯಡ್ರೋಜನ್, ಆಕ್ಸಿಜನ್, ನೈಟ್ರೋಜನ್ ಕ್ಲೋರಿನ್ ಮೊದಲಾದ ಅನಿಲಧಾತುಗಳ ಅಣುಗಳಲ್ಲಿ ಎರಡು ಪರಮಾಣುಗಳು ಮಾತ್ರ ಇರುವುದರಿಂದ ಅವುಗಳ ಅಣುಗಳನ್ನು ಊ2, ಔ2 , ಓ2 , ಅಟ2 ಎಂದು ಸೂಚಿಸಲಾಗುವುದು. ಹಾಗೆಯೇ ಓಜೋನ್ ಅನಿಲದ ಒಂದು ಅಣುವಿನಲ್ಲಿ ಮೂರು ಆಕ್ಸಿಜನ್ ಪರಮಾಣುಗಳಿವೆ. ಆದ್ದರಿಂದ ಅದರ ಸೂತ್ರ ಔ3 . ಅದೇ 30 ಎಂದು ಬರೆದರೆ ಮೂರು ಆಕ್ಸಿಜನ್ ಅಣುಗಳು ಎಂದೂ ಅರ್ಥ ಒಂದು ಅಣುವಿನಲ್ಲಿರುವ ಪರಮಾಣುಗಳ ತೂಕಗಳನ್ನು ಕೂಡಿದಾಗ ಅದರ ಅಣುತೂಕ ತಿಳಿಯುತ್ತದೆ. ಅಣುಸೂತ್ರದ ಸಹಾಯದಿಂದ ಅದರಲ್ಲಿರುವ ಧಾತುಗಳ ಶೇಕಡಾ ತೂಕವನ್ನು ಲೆಕ್ಕಹಾಕಬಹುದು. ವಿಷರ್ಯಯವಾಗಿ, ಧಾತುಗಳು ಶೇಕಡಾಂಶ ತೂಕಗಳಿಂದ ಸಂಯುಕ್ತದ ಅಣುಸೂತ್ರವನ್ನು ನಿರ್ಣಯಿಸಬಹುದು

 3   ವೇಲೆನ್ಸಿ : ನೀರಿನ ಅಣುವನ್ನು ಊ2ಔ , ಅಮೋನಿಯ ಅಣುವನ್ನು ಓಊ3, ಫಾಸ್ಫರಸ್ ಪೆಂಟಾಕ್ಸೈಡನ್ನು P2ಔ5 ಎಂಬ ಸೂತ್ರಗಳಿಂದ ಸೂಚಿಸುವುದಿದೆ. ಹೀಗೆ ಬರೆಯಲು ಕಾರಣವಿದೆ. ಒಂದು ಆಕ್ಸಿಜನ್ ಪರಮಾಣು 2 ಹೈಡ್ರೋಜನ್ ಪರಮಾಣುಗಳೊಡನೆ ಒಂದು ನೈಟ್ರೋಜನ್ ಪರಮಾಣು 3 ಹೈಡ್ರೊಜನ್ ಪರಮಾಣುಗಳೊಡನೆ ಮಾತ್ರ ಸಂಯೋಜಿಸಬಲ್ಲದು. ಎರಡು ರಂಜಕದ ಪರಮಾಣುಗಳು 5 ಆಕ್ಸಿಜನ್ ಅಥವಾ ತತ್ಸಮವಾದ 10 ಹೈಡ್ರೋಜನ್ ಪರಮಾಣುವಿನೊಂದಿಗೆ ಸಂಯೋಜಿಸುವ ಸಾಮಥ್ರ್ಯ ಪಡೆದಿದೆ. ಅಂದರೆ ಒಂದು ಫಾಸ್ಫರಸ್ ಪರಮಾಣು 5 ಹೈಡ್ರೋಜನ್ ಪರಮಾಣುಗಳೊಂದಿಗೆ ಕೂಡಬಲ್ಲದು. ಹಿಗೇಯೇ ಸೋಡಿಯಮ್ ಧಾತುವಿನ ಒಂದು ಪರಮಾಣು ಕ್ಲೋರಿನ್‍ನ ಒಂದು ಪರಮಾಣುವಿನೊಂದಿಗೆ ಸಂಯೋಜಿಸಿ ಸೋಡಿಯಮ್ ಕ್ಲೋರೈಡ್‍ನ (ಓಚಿಅಟ) ಅಣುವಾಗುತ್ತದೆ. ಹೈಡ್ರೋಜನ್ ಮತ್ತು ಕ್ಲೋರಿನ್ ತಲಾ ಒಂದು ಪರಮಾಣುಗಳ ಸಂಯೋಗದಿಂದ ಹೈಡ್ರೋಜನ್ ಕ್ಲೋರೈಡ್‍ನ  ಒಂದು ಅಣು (ಊಅಟ)  ಉಂಟಾಗುವುದು. ಆದ್ದರಿಂದ ಧಾತುಗಳ ಸಂಯೋಗ ಸಾಮಥ್ರ್ಯವನ್ನು ಅಳೆಯಲು ಹೈಡ್ರೋಜನ್ ಪರಮಾಣುವನ್ನೇ ಮಾನದಂಡನಾಗಿ ಆರಿಸಿದ ಪಕ್ಷದಲ್ಲಿ ಕ್ಲೋರಿನ್, ಆಕ್ಸಿಜನ್ ನೈಟ್ರೋಜನ್ ಮತ್ತು ರಂಜಕಗಳ ಸಂಯೋಗಸಾಮಥ್ರ್ಯ ಅನುಕ್ರಮವಾಗಿ 1, 2, 3  ಮತ್ತು 5 ಎಂದಾಗುವುದು. ಸೋಡಿಯಮ್ಮಿನ ಒಂದು ಪರಮಾಣು ಒಂದು ಹೈಡ್ರೋಜನ್ ಪರಮಾಣುವಿಗೆ ಸಮನಾದ ಒಂದು ಕ್ಲೋರಿನ್ ಪರಮಾಣುವಿನೊಡನೆ ಸಂಯೋಜಿಸುವುದರಿಂದ ಸೋಡಿಯಮ್ಮಿನ ಸಂಯೋಗಸಾಮಥ್ರ್ಯವೂ 1 ಎಂದು ಭಾವಿಸಬಹುದು. ಈ ಸಂಖ್ಯೆಗಳನ್ನೇ ಆಯಾ ಧಾತುಗಳ ವೇಲೆನ್ಸಿ ಎಂದು ಕರೆಯುವುದು. ಆದ್ದರಿಂದ ಧಾತುವಿನ ಒಂದು ಪರಮಾಣುವಿನೊಡನೆ ಸಂಯೋಜಿಸುವ ಹೈಡ್ರೋಜನ್ ಅಥವಾ ಕ್ಲೋರಿನ್ ಪರಮಾಣುಗಳ ಸಂಖ್ಯೆಯ ಎರಡರಷ್ಟು ಅದರ ವೇಲೆನ್ಸಿ ಎಂದೆನಿಸಿಕೊಳ್ಳುತ್ತದೆ. ವೇಲೆನ್ಸಿ ಎಂಬ ಪದಕ್ಕೆ ಇನ್ನೂ ವಿಸ್ತೈತ ಅರ್ಥವಿದೆ. ಮೇಲಿನ ವ್ಯಾಖ್ಯೆಯ ಪ್ರಕಾರ, ಮೀಥೇನ್‍ನಲ್ಲಿ (ಅಊ4) ಕಾರ್ಬನ್ ವೇಲೆನ್ಸಿ 4 ಸಲ್ಫರ್ ಟ್ರಯಾಕ್ಸೈಡ್‍ನಲ್ಲಿ (Sಔ3) ಸಲ್ಫರಿನ ವೇಲೆನ್ಸಿ 6 ಮ್ಯಾಂಗನೀಸ್ ಹೆಪ್ಟಾಕ್ಸೈಡ್‍ನಲ್ಲಿ (ಹೆಪ್ಟಾಕ್ಸೈಡ್‍ನಲ್ಲಿ (ಒಟಿ2ಔ7)  ಮ್ಯಾಂಗನೀಸ್ ಧಾತುವಿನ ವೇಲೆನ್ಸಿ 7 ಮತ್ತು ಆಸ್ಮಿಯಮ್ ಟೆಟ್ರಾಕ್ಸೈಡನಲ್ಲಿ (ಔsಔ4) ಆಸ್ಮಿಯಮ್ ಲೋಹದ ವೇಲೆನ್ಸಿ 8  ಎಂದಾಗುತ್ತದೆ. ಈ ಸಂಖ್ಯೆಗಳನ್ನು ಅವಲೋಕಿಸಿದರೆ ಧಾತುವಿನ ವೇಲೆನ್ಸಿ 1ರಿಂದ 8ರವರೆಗಿನ ಒಂದು ಪೂರ್ಣಾಂಕ ಎಂಬುದು ಸ್ಪಷ್ಟ.

ರಾಸಾಯನಿಕ ಕ್ರಿಯೆಗಳಲ್ಲಿ ಒಟ್ಟಾಗಿ ವರ್ತಿಸುವ ಪರಮಾಣುಗಳ ಗುಂಪುಗಳಿವೆ. ಸಲ್ಫ್ಯೂರಿಕ್ ಆಮ್ಲದಲ್ಲಿರುವ (Sಔ4) ಮತ್ತು ನೈಟ್ರಿಕ್ ಆಮ್ಲದಲ್ಲಿರುವ (ಓಔ3) ಪುಂಜಗಳು ಇಂಥ ಪರಮಾಣು ಪುಂಜಗಳು. ಸಲ್ಫ್ಯೂರಿಕ್ ಆಮ್ಲಕ್ಕೆ ಸತುವನ್ನು (ಜಿಂಕ್) ಸೇರಿಸಿದಾಗ ಉಂಟಾಗುವ ಜಿಂಕ್ ಸಲ್ಫೇಟ್‍ನಲ್ಲಿ (ZಟಿSಔ4), (Sಔ4) ಗುಂಪು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇದೇ ರೀತಿ ನೈಟ್ರಿಕ್ ಆಮ್ಲಕ್ಕೆ ಕಾಸ್ಟಿಕ್ ಸೋಡ (ಓಚಿಔಊ) ದ್ರಾವಣವನ್ನು ಸೇರಿಸಿದಾಗ ಉಂಟಾಗುವ ಸೋಡಿಯಮ್ ನೈಟ್ರೇಟಿನಲ್ಲಿ (ಓಚಿಓಔ3), (ಓಔ3) ಗುಂಪು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ರಾಸಾಯನಿಕ ಕ್ರಿಯೆಗಳಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡು ಬರುವ ಪರಮಾಣುಗಳ ಗುಂಪಿಗೆ ರ್ಯಾಡಿಕಲ್ ಎಂದು ಹೆಸರು. ಸಲ್ಫೇಟ್ (Sಔ4) ಮತ್ತು ನೈಟ್ರೇಟ್ (ಓಔ3) ಇಂಥ ರ್ಯಾಡಿಕಲ್‍ಗಳು. ಇತರ ಪರಿಚಿತ ರ್ಯಾಡಿಕಲ್ಲುಗಳು ಎಂದರೆ ಹೈಡ್ರಾಕ್ಸಿಲ್ (ಔಊ), ಬೈಕಾರ್ಬೋನೇಟ್ (ಊಅಔ3), ಕ್ಲೋರೇಟ್ (ಅIಔ3), ಕಾರ್ಬೋನೇಟ್ (ಅಔ3), ಡೈಕ್ರೊಮೇಟ್ (ಅಡಿ2ಔ7), ಪರ್‍ಮ್ಯಾಂಗನೇಟ್ (ಒಟಿಔ4), ಅಮೋನಿಯಮ್ (ಓಊ4), ಆರ್ಥೋಫಾಸ್ಫೇಟ್ (Pಔ4). ರಾಸಾಯನಿಕ ಕ್ರಿಯೆಗಳಲ್ಲಿ ರ್ಯಾಡಿಕಲ್‍ಗಳು ಒಂದೇ ಕಣದಂತೆ ವರ್ತಿಸುವುದರಿಂದ ಅವುಗಳ ವೇಲೆನ್ಸಿಯನ್ನು ಲೆಕ್ಕಹಾಕಲು ಹೈಡ್ರೋಜನ್ ಅಥವಾ ಕ್ಲೋರಿನ್ ಪರಮಾಣುಗಳ ಮಾನದಂಡವನ್ನು ಬಳಸುವುದಿದೆ. ಉದಾಹರಣೆ : ರ್ಯಾಡಿಕಲ್ಲಿನ ಹೆಸರು ರ್ಯಾಡಿಕಲ್ಲಿನ ಸೂತ್ರ ರ್ಯಾಡಿಕಲ್ಲಿನ ವೇಲೆನ್ಸಿ ಹೈಡ್ರೋಜನ್ ಅಥವಾ ಕ್ಲೋರಿನ್

                                             ಅಥವಾ ತತ್ಸಮಾನ ಧಾತುವಿನೊಡನೆ
                                             ರ್ಯಾಡಿಕಲ್ ಉಂಟುಮಾಡುವ
                                             ಸಂಯುಕ್ತದ ಹೆಸರು ಮತ್ತು ಸೂತ್ರ

ಹೈಡ್ರಾಕ್ಸಿಲ್ ಔಊ 1 ನೀರು (ಊ.ಔಊ)

ನೈಟ್ರೇಟ್ ಓಔ3 1 ನೈಟ್ರಿಕ್ ಆಮ್ಲ (ಊ. ಓಔ3)

ನೈಟ್ರೈಟ್ ಓಔ2 1 ನೈಟ್ರಸ್ ಆಮ್ಲ (ಊ. ಓಔ2)

ಬೈಕಾರ್ಬೋನೇಟ್ ಊಅಔ3 1 ಸೋಡಿಯಮ್

                                                  ಬೈಕಾರ್ಬೋನೇಟ್ (ಓಚಿ. ಊಅo3)

ಅಮೋನಿಯಮ್ ಓಊ4 1 ಅಮೋನಿಯಮ್

                                                  ಕ್ಲೋರೈಡ್ (ಓಊ4. ಅI)

ಕ್ಲೋರೇಟ್ ಅIಔ3 1 ಕ್ಲೋರಿಕ್ ಆಮ್ಲ (ಊ. ಅIಔ3)

ಪರ್‍ಮ್ಯಾಂಗ್‍ನೇಟ್ ಒಟಿಔ4 1 ಪೊಟ್ಯಾಸಿಯಮ್

                                                   ಪರ್‍ಮ್ಯಾಂಗನೇಟ್ (ಏ.ಒಟಿಔ4)

ಕಾರ್ಬೋನೇಟ್ ಅಔ3 2 ಕಾರ್ಬಾನಿಕ್ ಆಮ್ಲ (ಊ2. ಅo3)

ಸಲ್ಫೇಟ್ Sಔ4 2 ಸಲ್ಫ್ಯೂರಿಕ್ ಆಮ್ಲ (ಊ2. Sಔ4)

ಡೈಕ್ರೊಮೇಟ್ ಅಡಿ2ಔ7 2 ಪೊಟ್ಯಾಸಿಯಮ್

                                                    ಡೈಕ್ರೊಮೇಟ್ (ಏ2. ಅಡಿ2ಔ7)

ಆರ್ಥೋಫಾಸ್ಫೇಟ್ Pಔ4 3 ಆರ್ಥೋಫಾಸ್ಫೆರಿಕ್ ಆಮ್ಲ (ಊ3. Pಔ=4)

ಒಂದೇ ಧಾತುವಿನ ವೇಲೆನ್ಸಿ ಬೇರೆ ಬೇರೆಯಾಗಿರಬಹುದು. ಅಂಥ ಕೆಲವು ಧಾತುಗಳನ್ನೂ ಅವುಗಳು ಪ್ರದರ್ಶಿಸುವ ವೇಲೆನ್ಸಿ ವೈವಿಧ್ಯವನ್ನೂ ಮುಂದೆ ಕೊಟ್ಟಿದೆ : ತಾಮ್ರ ಮತ್ತು ಪಾದರಸ

1, 2

(ಅu2ಅI2. ಊgಅI2) ಮತ್ತು (ಅUಅI2, ಊuಅI2 ಊgಅI2)

ತವರ ಮತ್ತು ಸೀಸ 2,4 (SಟಿಅI2, PbಅI2) ಮತ್ತು (SಟಿಅI4, PbಅI4)

ಕಬ್ಬಿಣ 2,3 (ಈeಅI2, ಈeಅI3)

ನೈಟ್ರೋಜನ್ ಮತ್ತು ಫಾಸ್ಫರಸ್ 3,5 (ಓಊ3,Pಊ3) ಮತ್ತು (ಓ2ಔ5, P2ಔ5)

ಸಲ್ಫರ್ 2,4,6 (ಊ2S, Sಔ2, Sಔ3)


4 ಅಣುಸೂತ್ರಗಳನ್ನು ಬರೆಯುವ ಕ್ರಮ : ಧಾತುವಿನ ವೇಲೆನ್ಸಿ ಅದರ ಸಂಯೋಗ ಸಾಮಥ್ರ್ಯದ ಸೂಚ್ಯಂಕವಷ್ಟೆ. ಆದ್ದರಿಂದ ಪರಮಾಣುಗಳಾಗಲಿ ರ್ಯಾಡಿಕಲ್ಲುಗಳಾಗಲಿ ಕೂಡಿ ಸಂಯುಕ್ತಗಳಾದಾಗ ತಮ್ಮ ವೇಲೆನ್ಸಿಗಳು ತೃಪ್ತಿಯಾಗುವ ರೀತಿಯಲ್ಲಿ ಸಂಯೋಗಹೊಂದುತ್ತವೆ. ಉದಾಹರಣೆ : ವಾಯುವಿನಲ್ಲಿ ಮೆಗ್ನೀಸಿಯಮ್ ತಂತಿಯನ್ನು ಉರಿಸಿದಾಗ ಉಂಟಾಗುವ ಬೂದಿಯಲ್ಲಿ ಮೇಗ್ನೀಸಿಯಮ್ ಆಕ್ಸೈಡಿನೊಂದಿಗೆ ಮೆಗ್ನೀಸಿಯಮ್ ನೈಟ್ರೈಡ್ ಸಹ ಇರುತ್ತದೆ. ಮೆಗ್ನೀಸಿಯಮ್ ನೈಟ್ರೈಡ್‍ನ ಒಂದು ಅಣುವಿನಲ್ಲಿ ಮೆಗ್ನೀಸಿಯಮ್ ಮತ್ತು ನೈಟ್ರೋಜನ್ ಪರಮಾಣುಗಳಿವೆ. ಮೆಗ್ನೀಸಿಯಮ್ಮಿನ ವೇಲೆನ್ಸಿ 2 ; ನೈಟ್ರೋಜನ್ನಿನ ವೇಲೆನ್ಸಿ 3. ಈ ವೇಲೆನ್ಸಿಗಳು ಪರಸ್ಪರ ತೃಪ್ತಿಯಾಗಬೇಕಿದ್ದಲ್ಲಿ ಅವುಗಳ ಪರಮಾಣುಗಳು 3:2 ಅನುಪಾತದಲ್ಲಿ ಸಂಯೋಜನೆಗೊಂಡಿರಬೇಕು. ಅಂದರೆ ಮೆಗ್ನೀಸಿಯಮ್ ನೈಟ್ರೈಡಿನ ಸೂತ್ರ ಒg3ಓ2. ಹೀಗೆ ಪ್ರತಿಯೊಂದು ಸಲವೂ ವಿವರವಾಗಿ ತರ್ಕಿಸಿ ಬರೆಯುವುದರ ಬದಲು ಇನ್ನೊಂದು ಸುಲಭ ವಿಧಾನ ಇದೆ. ಸಂಯುಕ್ತದಲ್ಲಿರುವ ಧಾತುಗಳ ಮತ್ತು ರ್ಯಾಡಿಕಲ್‍ಗಳನ್ನು ಅಕ್ಕಪಕ್ಕದಲ್ಲಿ ಬರೆದು ಅವುಗಳ ವೇಲೆನ್ಸಿ ಸಂಖ್ಯೆಯನ್ನು ಅದಲು ಬದಲು ಮಾಡಿ ಸೂಚಿಸಿ ಎಂಬುದು ವ್ಯಾವಹಾರಿಕ ಸಲಹೆ. ಉದಾಹರಣೆ :

  ಸಂಯುಕ್ತದ ಹೆಸರು

ವೇಲೆನ್ಸಿ ಸಂಖ್ಯೆಯನ್ನು ಪರಮಾಣುವಿನ ಸಂಕೇತ ಅಥವಾ ರ್ಯಾಡಿಕಲ್‍ನ ಸೂತ್ರದ ತಲೆಯ ಮೇಲೆ ಬಲಗಡೆ ರೋಮನ್ ಅಂಕಿಗಳಲ್ಲಿ ಸೂಚಿಸಲಾಗಿದೆ ಸಂಯುಕ್ತದ ಅಣುಸೂತ್ರ ಸಂಯುಕ್ತದ ಸೂತ್ರವನ್ನು ಉಚ್ಚರಿಸುವ ಬಗೆ

ಅಲ್ಯೂಮಿನಿಯಮ್ ಸಲ್ಫೇಟ್ ಂIiiiSಔ4ii ಂI2(Sಔ4)3 ಂI ಟೂ Sಔ4 ತ್ರೈಸ್

ಅಲ್ಯೂಮಿನಿಯಮ್ ಕಾರ್ಬೈಡ್ ಂIiiiಅiv ಂI4ಅ3

ಂI ಫೋರ್ ಅ ತ್ರೀ
 ಕ್ಯಾಲ್ಸಿಯಮ್    ಆರ್ಥೋಫಾಸ್ಫೇಟ್

ಅಚಿii Pಔ4iii ಅಚಿ3 (Pಔ4)2 ಅಚಿ ತ್ರೀ Pಔ4 ಟ್ವೆಸ್


ಕೆಲವು ಸಂಯುಕ್ತಗಳಿಗೆ ಮೂಲಸೂತ್ರ (ಎಂಪಿರಿಕಲ್ ಫಾರ್ಮುಲ) ಎಂಬುದು ಉಂಟು. ಅದು ಸಂಯುಕ್ತದ ಒಂದು ಅಣುವಿನಲ್ಲಿರುವ ಪರಮಾಣುಗಳ ಸಂಖ್ಯೆಯ ಅತ್ಯಂತ ಸರಳಾನುಪಾತವನ್ನು ಸೂಚಿಸುವುದು. ಆದರೆ ಅಣುಸೂತ್ರ (ಮಾಲಿಕ್ಯುಲರ್ ಫಾರ್ಮುಲ) ಸಂಯುಕ್ತದ ಒಂದು ಅಣುವಿನಲ್ಲಿರುವ ಪರಮಾಣುಗಳ ನಿಜಸಂಖ್ಯೆಯನ್ನು ತಿಳಿಸುತ್ತದೆ. ಅಣುಸೂತ್ರ ಮೂಲಸೂತ್ರದ ಒಂದರಷ್ಟೊ ಎರಡಷ್ಟೊ ಅಥವಾ ಇನ್ಯಾವುದೊ ಒಂದು ಪೂರ್ಣಾಂಕದಷ್ಟೊ ಇರಬಹುದು. ಅಂದರೆ, (ಮೂಲಸೂತ್ರ) ಟಿ = ಅಣುಸೂತ್ರ. ಇಲ್ಲಿ `ಟಿ, ಪೂರ್ಣಾಂಕ. ಇದರಿಂದ ಟಿ = ಅಣುಸೂತ್ರ ತೂಕ ಮೂಲಸೂತ್ರ ತೂಕ ಎಂದು ಬರೆಯಬಹುದು. ಮೂಲಸೂತ್ರ ಮತ್ತು ಅಣುಸೂತ್ರ ಎಂಬ ಪದಗಳ ಅರ್ಥ ವಿವರಣೆಗಾಗಿ ಕೆಲವು ಉದಾಹರಣೆಗಳು : ಸಂಯುಕ್ತ ಮೂಲಸೂತ್ರ ಮೂಲಸೂತ್ರದ ಪ್ರಕಾರ ತೂಕ ಅಣುತೂಕ

 ಅಣುತೂಕ

ಮೂಲಸೂತ್ರ ತೂಕ ಅಣುಸೂತ್ರ

ಹೈಡ್ರೋಜನ್ ಊಔ 17 34

 34
 ( =2
 17

ಊ202

ಗ್ಲೂಕೋಸ್ ಅಊ2ಔ 30 180

 180
  ( =6
  30

ಅ6ಊ12ಔ6

ಬೆನ್‍ಜೀನ್ ಅಊ 13 78

 78
 ( =6
 13

ಅ6ಊ6

ಈಥೇನ್ ಅಊ3 15 30

 30
 ( =2
 15

ಅ2ಊ6

ಮಕ್ರ್ಯೂರಸ್ ಕ್ಲೋರೈಡ್ ಊgಅI 236 472

 472
 ( = 2
 236

ಊg2ಅI2


5 ರಾಚನಿಕ ಸೂತ್ರ (ಸ್ಟ್ರಕ್ಚರಲ್ ಫಾರ್ಮುಲ) : ಸಂಯುಕ್ತದ ಅಣುವಿನಲ್ಲಿರುವ ಪರಮಾಣುಗಳು ಪರಸ್ಪರ ಬಂಧಿಸಲ್ಪಟ್ಟಿರುವ ಸ್ಪಷ್ಟ ಚಿತ್ರೀಕರಣಕ್ಕೆ ಆ ಸಂಯುಕ್ತ ರಾಚನಿಕ ಸೂತ್ರ ಎಂದು ಹೆಸರು. ಊ2Sಔ4 ಎಂಬ ಸೂತ್ರವಿರುವ ಸಂಯುಕ್ತ ಸಲ್ಫ್ಯೂರಿಕ್ ಆಮ್ಲ ಮಾತ್ರ. ನಿರವಯವ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ರಚನಾ ಸೂತ್ರದ ಅಗತ್ಯ ಅಷ್ಟಾಗಿಲ್ಲ. ಆದರೆ ಸಾವಯವ ರಸಾಯನ ವಿಜ್ಞಾನಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಸಂಯುಕ್ತಗಳಿಗೆ ಒಂದೇ ಅಣುಸೂತ್ರವಿರುವುದುಂಟು. ಉದಾಹರಣೆ : ಎಥೆನಾಲ್ ಮತ್ತು ಡೈಮೀಥೈಲ್ ಈಥರ್ ಎಂಬ ಎರಡು ಸಂಯುಕ್ತಗಳ ಅಣುಸೂತ್ರವೂ ಅ2ಊ6ಔ. ಇವುಗಳ ರಚನಾಸೂತ್ರಗಳನ್ನು ಬರೆದ ಹೊರತು ಅವನ್ನು ಗುರುತಿಸಲಾಗದು.

                                              ಊ   ಊ				ಊ   ಊ
                                               |    |				|     |
 ಊ—ಅ—ಅ—ಔ--ಊ		      ಊ—ಅ—ಔ—ಅ—ಊ
                                              |	 |				|     |
                                             ಊ	ಊ				ಊ   ಊ

ಎಥೆನಾಲ್ ಡೈಮೀಥೈಲ್ ಈಥರ್ ರಚನಾಸೂತ್ರ ಬರೆಯುವಾಗ ಧಾತುಗಳ ಸ್ವಾಭಾವಿಕ ವೇಲೆನ್ಸಿಯನ್ನು ಅತಿಕ್ರಮಿಸಲಾಗದು. ರಚನಾಸೂತ್ರದಲ್ಲಿಯ ಪ್ರತಿಯೊಂದು ಗೆರೆಗೂ ಒಂದು ವೇಲೆನ್ಸಿಬಂಧ ಎಂದು ಹೆಸರು. ಕಾರ್ಬನ್, ಆಕ್ಸಿಜನ್ ಮತ್ತು ಹೈಡ್ರೋಜನ್‍ಗಳಿಗೆ ಅನುಕ್ರಮವಾಗಿ 4,2 ಮತ್ತು 1 ವೇಲೆನ್ಸಿ ಬಂಧಗಳಿರುವುದು ಸಮಂಜಸವಾಗಿದೆ. 6 ಸಮೀಕರಣಗಳು : ಸಂಕೇತ ಪರಮಾಣುವನ್ನೂ ಸೂತ್ರ ಅಣುವನ್ನೂ ಸೂಚಿಸುವಂತೆಯೇ ರಾಸಾಯನಿಕ ಸಮೀಕರಣ ಅನುಭವಸಿದ್ಧವಾದ ರಾಸಾಯನಿಕ ಕ್ರಿಯೆಯನ್ನು ಸೂಚಿಸುತ್ತದೆ. ಅಮೃತಶಿಲೆಯೊಡನೆ ಸಾರರಿಕ್ತ ಹೈಡ್ರೊಕ್ಲೋರಿಕ್ ಆಮ್ಲ ವರ್ತಿಸಿದಾಗ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುವುದಷ್ಟೆ. ಈ ರಾಸಾಯನಿಕ ಕ್ರಿಯೆಯನ್ನು ಸಂಕ್ಷೇಪವಾಗಿ ಸೂಚಿಸಲು ಅಚಿಅಔ3 + ಊಅI (ಅಚಿಅI2 + ಊ2ಔ + ಅಔ2 ( ಎಂದು ಬರೆಯುವುದಿದೆ. ಕಾರ್ಬನ್ ಡೈಆಕ್ಸೈಡಿನ ಜೊತೆಗೆ ಕ್ಯಾಲ್ಸಿಯಮ್ ಕ್ಲೋರೈಡ್ ಮತ್ತು ನೀರೂ ಉಂಟಾಗುವುದರಿಂದ ಅವನ್ನೂ ಸಮೀಕರಣದಲ್ಲಿ ಸೇರಿಸಿದೆ. ಅಂದರೆ ಪರಿವರ್ತಕಗಳ ಸೂತ್ರಗಳನ್ನೂ ಎಡಗಡೆಯೂ ಉತ್ಪನ್ನಗಳ ಸೂತ್ರಗಳನ್ನೂ ಬಲಗಡೆಯೂ ಬರೆದು, ಅವೆರಡರ ನಡುವೆ ಬಾಣದ ಗುರುತನ್ನು ಹಾಕಿದೆ. ಬಾಣದ ಗುರುತಿನ ತಲೆಭಾಗ ಉತ್ಪನ್ನಗಳ ಕಡೆಗಿರುತ್ತದೆ. ಉತ್ಪನ್ನಗಳ ಪೈಕಿ ಕಾರ್ಬನ್ ಡೈಆಕ್ಸೈಡ್ ಅನಿಲರೂಪದಲ್ಲಿ ಬಿಡುಗಡೆಯಾಗುವುದರಿಂದ ಅದರ ಸೂತ್ರದ ಪಕ್ಕದಲ್ಲಿ ಮೇಲ್ಮುಖನಾದ ಬಾಣದ ಗುರುತಿದೆ. ಹಾಗೆಯೇ ಯಾವುದಾದರೂ ಉತ್ಪನ್ನ ಒತ್ತರಿಸುವುದಾದರೆ ಅದರ ಪಕ್ಕದಲ್ಲಿ ಕೆಳಮುಖನಾದ ಬಾಣದ ಗುರುತನ್ನು ಹಾಕುವುದು ಉಂಟು. ಇಷ್ಟನ್ನು ಬರೆದರೆ ದೊರೆಯುವುದು ಸ್ಥೂಲ ಸಮೀಕರಣ (ಸ್ಕೆಲಿಟನ್ ಈಕ್ವೇಷನ್). ಇಂಥ ಸಮೀಕರಣದ ನಡುವೆ ಇರುವ ಬಾಣದ ಗುರುತಿನ ಇಕ್ಕೆಲಗಳಲ್ಲಿರುವ ಪರಮಾಣುಗಳ ಸಂಖ್ಯೆ ಸಮನಾಗಿರುವುದಿಲ್ಲ. ಅದನ್ನು ಸರಿಸಮನಾಗಿಸಲೇಬೇಕು. ಇಲ್ಲದಿದ್ದರೆ ರಾಶಿನಿತ್ಯತ್ವ ನಿಯಮದ ಉಲ್ಲಂಘನೆಯಾಗುತ್ತದೆ. ಅದನ್ನು ಸರಿದೂಗಿಸಲು ಎಡಗಡೆ ಹೈಡ್ರೊಕ್ಲೋರಿಕ್ ಆಮ್ಲದ ಎರಡು ಅಣುಗಳನ್ನು ಬರೆಯಬೇಕಾಗುತ್ತದೆ. ಅಚಿಅಔ3 + 2ಊಅI ( ಅಚಿಅI2 + ಊ2ಔ + ಅಔ2 ( ಈಗ ಇದು ಸಮತೋಲಿತ ರಾಸಾಯನಿಕ ಸಮೀಕರಣ (ಬ್ಯಾಲೆನ್ಸ್ ಕೆಮಿಕಲ್ ಈಕ್ವೇಷನ್) ಎನಿಸಿಕೊಳ್ಳುತ್ತದೆ. ಮತ್ತೊಂದು ರಾಸಾಯನಿಕ ಕ್ರಿಯೆಯನ್ನು ಪರಿಶೀಲಿಸೋಣ. ಪೊಟ್ಯಾಸಿಯಮ್ ಕ್ಲೋರೇಟನ್ನು ಕಾಸಿದಾಗ ಅದು ವಿಭಜಿಸಿ ಪೊಟ್ಯಾಸಿಯಮ್ ಕ್ಲೋರೈಡ್ ಮತ್ತು ಆಕ್ಸಿಜನ್‍ಗಳನ್ನು ಕೊಡುತ್ತದೆ. ಸಮೀಕರಣ ರೂಪದಲ್ಲಿ ಈ ಕ್ರಿಯೆಯನ್ನು ಹೀಗೆ ನಿರೂಪಿಸುವುದಿದೆ. ಏಅIಔ3 ( ಏಅI + 3ಔ2 ( ಈ ಸ್ಥೂಲ ಸಮೀಕರಣದ ಎರಡೂ ಕಡೆ ಇರುವ ಪರಮಾಣುಗಳ ಸಂಖ್ಯೆ ಸಮನಾಗಿದೆ. ಆದರೆ ಇದು ರಾಸಾಯನಿಕ ಕ್ರಿಯೆಯ ನೈಜ ಚಿತ್ರಣವಾಗಲಿಲ್ಲ. ಏಕೆಂದರೆ ಬಿಡುಗಡೆಯಾದ ಆಕ್ಸಿಜನ್‍ನಲ್ಲಿ ಇರುವುದು ಅಣುಗಳ ಹೊರತು ಪರಮಾಣುಗಳಲ್ಲ. ಈ ಲೋಹದ ನಿವಾರಣೆಗೆ ಇಡೀ ಸಮೀಕರಣವನ್ನು ಎರಡರಿಂದ ಗುಣಿಸಿ ಮುಂದೆ ಕಾಣಿಸಿರುವಂತೆ ಬರೆಯಲಾಗಿದೆ. 2ಏಅIಔ3 ( 2ಏಅI + 302 ( ಆದ್ದರಿಂದ ರಾಸಾಯನಿಕ ಸಮೀಕರಣ ಮುಂದಿನ ನಿಬಂಧನೆಗಳಿಗೆ ಒಳಪಡುತ್ತದೆ. 1 ಅದು ಪ್ರತಿನಿಧಿಸುವ ರಾಸಾಯನಿಕ ಕ್ರಿಯೆ ಊಹಾಚಿತ್ರವಾಗಿರಬಾರದು. ವಾಸ್ತವವಾಗಿ ನಡೆಯುವ ಕ್ರಿಯೆಯಾಗಿರಬೇಕು ; 2 ಸಮೀಕರಣ ಸಮತೋಲನಗೊಂಡಿರಬೇಕು ; 3 ಅದು ಅಣು ಸಮೀಕರಣವಾಗಿರುವುದು ಅಗತ್ಯ. ಅಂದರೆ ಕ್ರಿಯಾಭಾಗಿಗಳಾದ ವಸ್ತುಗಳು ಅಣುಸ್ಥಿತಿಯಲ್ಲಿ ಸೂಚಿತವಾಗಿರತಕ್ಕದ್ದು ; 4 ರಾಸಾಯನಿಕ ಸಂಯೋಜನೆಯ ನಿಯಮಗಳಿಗೆ ಬದ್ಧವಾಗಿರಬೇಕು. ಸಮೀಕರಣದ ಅಂತರಾರ್ಥ : ಉದಾಹರಣೆಗೆ ಅಚಿಅಔ3 + 2ಊಅI(ಅಚಿಅI2 + ಊ2ಔ + ಅಔ2 ( ಎಂಬ ಸಮೀಕರಣವನ್ನೆ ತೆಗೆದುಕೊಳ್ಳೋಣ. ಈ ಸಮೀಕರಣ ತಿಳಿಸುವುದೆನೆಂದರೆ 1. ಕ್ಯಾಲ್ಸಿಯಮ್ ಕಾರ್ಬೋನೇಟ್ ಹೈಡ್ರೊಕ್ಲೋರಿಕ್ ಆಮ್ಲದೊಡನೆ ವರ್ತಿಸಿದಾಗ ಕ್ಯಾಲ್ಸಿಯಮ್ ಕ್ಲೋರೈಡ್, ಕಾರ್ಬನ್ ಡೈಆಕ್ಸೈಡ್ ಮತ್ತು ನೀರು - ಇವು ಉತ್ಪನ್ನಗಳು. ಇವುಗಳ ಪೈ ಕಾರ್ಬನ್ ಡೈಆಕ್ಸೈಡ್ ಮಾತ್ರ ಅನಿಲ ರೂಪದಲ್ಲಿ ಹೊರಬೀಳುತ್ತದೆ; 2, ಕ್ಯಾಲ್ಸಿಯಮ್ ಕಾರ್ಬೋನೇಟ್‍ನ 1 ಅಣು ಹೈಡ್ರೊಕ್ಲೋರಿಕ್ ಆಮ್ಲದ 2 ಅಣುಗಳೊಂದಿಗೆ ವರ್ತಿಸಿ ಕ್ಯಾಲ್ಸಿಯಮ್ ಕ್ಲೋರೈಡ್, ನೀರು ಮತ್ತು ಕಾರ್ಬನ್ ಡೈಆಕ್ಸೈಡ್‍ಗಳ ತಲಾ 1 ಅಣುವನ್ನು ಕೊಡುತ್ತದೆ ; 3. ತೂಕ ರೀತ್ಯಾ 100 ಗ್ರಾಮ್ ಕ್ಯಾಲ್ಸಿಯಮ್ ಕಾರ್ಬೋನೇಟ್ 75 ಗ್ರಾಮ್ ಹೈಡ್ರಕ್ಲೋರಿಕ್ ಆಮ್ಲದೊಡನೆ ವರ್ತಿಸಿದಾಗ 111 ಗ್ರಾಮ್ ಕ್ಯಾಲ್ಸಿಯಮ್‍ಕ್ಲೋರೈಡ್, 18 ಗ್ರಾಮ್ ನೀರು ಮತ್ತು 44 ಗ್ರಾಮ್ ಕಾರ್ಬನ್ ಡೈಆಕ್ಸೈಡ್‍ಗಳ (ಅಥವಾ ಎನ್. ಟಿ. ಪಿ ಯಲ್ಲಿ ಅಂದರೆ 2730 ಏ ಉಷ್ಣತೆ ಮತ್ತು 1 (105 ನ್ಯೂ ಚಮೀ-2 ಒತ್ತಡದಲ್ಲಿ 22.4 ಡೆಮೀ-3) ದೊರೆಯುತ್ತವೆ ; 4 ಪರಿವರ್ತಕಗಳ ಒಟ್ಟು ತೂಕ [(173 ಗ್ರಾಮ್) ಉತ್ಪನ್ನಗಳ ಒಟ್ಟು ತೂಕಕ್ಕೆ] (173 ಗ್ರಾಮ್) ಸಮವಾಗಿದೆ. ಈ ಫಲಿತಾಂಶ ರಾಶಿ ನಿತ್ಯತ್ವ ನಿಯಮಕ್ಕೆ ಅನುಗುಣವಾಗಿದೆ. ಸಮೀಕರಣದ ಇತಿಮಿತಿಗಳು: ರಾಸಾಯನಿಕ ಸಮೀಕರಣ 1. ಪರಿವರ್ತಕಗಳ ಮತ್ತು ಉತ್ಪನ್ನಗಳ ಭೌತಸ್ಥಿತಿ; 2. ಕ್ರಿಯಾರಂಭದಲ್ಲಿ ಪರಿವರ್ತಕಗಳ ಮತ್ತು ಕ್ರಿಯಾಂತ್ಯದಲ್ಲಿ ಉತ್ಪನ್ನಗಳ ಸಾರತೆಗಳು (ಕಾನ್ಸಂಟ್ರೇಷನ್ಸ್); 3 ಕ್ರಿಯೆ ಅನುಕೂಲವಾದ ಪ್ರಯೋಗ ಪರಿಸ್ಥಿತಿ ಅಂದರೆ ಕ್ರಿಯಾವರ್ಧಕ ಉಷ್ಣತೆ ಮತ್ತು ಒತ್ತಡಗಳ ಅವಶ್ಯಕತೆ; 4. ಕ್ರಿಯಾವೇಗ ಮತ್ತು ಕ್ರಿಯೆ ಪೂರ್ತಿಯಾಗಲು ಹಿಡಿಯುವ ಅವಧಿ; 5. ಕ್ರಿಯಾವಧಿಯಲ್ಲಿ ಉಂಟಾಗುವ ಉಷ್ಣ - ವ್ಯತ್ಯಾಸ (ಉಷ್ಣ ಹೀರಲ್ಪಡುವುದೇ ಅಥವಾ ಬಿಡುಗಡೆಯಾಗುವುದೇ) ಈ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದಿಲ್ಲ. ಸಮೀಕರಣದ ಸಮತೋಲನ: 1. ಊಹಾಪ್ರಯತ್ನ ವಿಧಾನ. ಕೆಂಗಾವಿನಲ್ಲಿರುವ ಕಬ್ಬಿಣದ ಮೇಲೆ ನೀರಿನ ಹಬೆಯನ್ನು ಹಾಯಿಸಿದಾಗ ಕಬ್ಬಿಣದ ಮ್ಯಾಗ್ನೆಟಿಕ್ ಆಕ್ಸೈಡ್ ಮತ್ತು ಹೈಡ್ರೋಜನ್ ಉತ್ಪನ್ನಗಳು ಬರುತ್ತವೆ. ಆದ್ದರಿಂದ ಸ್ಥೂಲ ಸಮೀಕರಣ : ಈe + ಊ2ಔ ( ಈe3ಔ4 + ಊ2 ಎಡಗಡೆ ಕಬ್ಬಿಣದ ಪರಮಾಣುಗಳ ಸಂಖ್ಯೆಯನ್ನು ಸಮಗೊಳಿಸಲು ಈe ಪ್ರತೀಕ ಹಿಂಬದಿಯಲ್ಲಿ 3ನ್ನು ಬರೆಯಬೇಕಾಗುತ್ತದೆ. ಆಕ್ಸಿಜನ್ ಪರಮಾಣುಗಳ ಸಂಖ್ಯೆಯನ್ನು ಸಮಮಾಡಲು ಊ2ಔ ಸೂತ್ರದ ಹಿಂದೆ 4 ನ್ನು ಬರೆಯಬೇಕಾಗುತ್ತದೆ. ಹೀಗಾದಾಗ ಎಡಗಡೆ ಹೈಡ್ರೋಜನ್ ಪರಮಾಣುಗಳ ಸಂಖ್ಯೆ 8 ಕ್ಕೆ ಏರುತ್ತದೆ. ಇದನ್ನು ಸಮಗೊಳಿಸಲು ಊ2 ಸೂತ್ರದ ಹಿಂದೆ 4 ಎಂದು ಕಾಣಿಸಬೇಕಾಗುತ್ತದೆ. ಇದರಿಮದ ಸಮತೋಲಿತ ರಾಸಾಯನಿಕ ಸಮೀಕರಣ ಲಭಿಸುವುದು. 3ಈe + 4ಊ2ಔ ಈe3ಔ4 + 4ಊ2 ( ಇದೊಂದು ಪರಾವರ್ತ (ರಿವರ್ಸಿಬಲ್) ಕ್ರಿಯೆ. ಅಂದರೆ ಉತ್ಪನ್ನಗಳು ಸಂಯೋಜನೆಗೊಂಡು ರಿವರ್ತಕಗಳನ್ನು ಕೊಡುವ ವಿಶೇಷ ಸಂದರ್ಭ. ಈ ವೈಶಿಷ್ಟ್ಯ ಸೂಚಕವಾಗಿಯೆ ಎರಡು ಬಾಣದ ಗುರುತುಗಳನ್ನು ವಿರುದ್ದ ದಿಕ್ಕುಗಳಲ್ಲಿ ಬರೆದಿರುವುದು. ಸರಳ ರಾಸಾಯನಿಕ ಕ್ರಿಯೆಗಳಿಗೆ ಈ ವಿಧಾನ ಅನ್ವಯಿಸುತ್ತದೆ. 2. ಆಂಶಿಕ ಸಮೀಕರಣ ವಿಧಾನ. ಜಟಿಲ ರಾಸಾಯನಿಕ ಕ್ರಿಯೆಗಳಿಗೆ ಸಂಬಂಧಿಸಿದ ಸಮೀಕರಣಗಳನ್ನು ಈ ಮೊದಲು ಹೇಳಿದಷ್ಟು ಸರಾಗವಾಗಿ ಸಮತೋಲಿಸುವುದು ಸಾಧ್ಯವಿಲ್ಲ. ಅಂಥ ಸಂದರ್ಭಗಳಲ್ಲಿ ಅನುಸರಿಸುವ ಕ್ರಮ ಇದು : (1) ಪ್ರಧಾನ ರಾಸಾಯನಿಕ ಕ್ರಿಯೆ ಹಂತ ಹಂತವಾಗಿ ನಡೆಯುವುದೆಂದು ಭಾವಿಸಲಾಗುವುದು; (2) ಮೊದಲನೆಯ ವಿಧಾನದಿಂದ ಪ್ರತಿಯೊಂದು ಹಂತಕ್ಕೂ ಸರಳ ಸಮೀಕರಣಗಳನ್ನು ಬರೆಯಬೇಕಾಗುವುದು; (3) ಅಗತ್ಯವಿದ್ದರೆ ಈ ಸರಳ ಸಮೀಕರಣಗಳನ್ನು ಯುಕ್ತ ಪೂರ್ಣಾಂಕಗಳಿಂದ ಗುಣಿಸಬೇಕು. ಹೀಗೆ ಮಾಡುವುದರಿಂದ ಅಂತಿಮ ಸಮೀಕರಣದಲ್ಲಿ ಇರಬಾರದ ವಸ್ತುಗಳನ್ನು ಎರಡೂ ಕಡೆ ಹೊಡೆದುಹಾಕಬಹುದು. (4) ಅನಂತರ ಆಂಶಿಕ ಸಮೀಕರಣಗಳನ್ನೆಲ್ಲ ಕೂಡಿಸಬೇಕು. ಉದಾಹರಣೆ : ಪೊಟ್ಯಸಿಯಮ್ ಪರ್‍ಮ್ಯಾಂಗನೇಟ್ ಹರಳುಗಳ ಮೇಲೆ ಸಾರಹೈಡ್ರೊಕ್ಲೋರಿಕ್ ಆಮ್ಲವನ್ನು ಸುರಿದಗ ಸಾಮಾನ್ಯ ಉಷ್ಣತೆಯಲ್ಲಿ ಕ್ಲೋರೀನ್ ಬಿಡುಗಡೆಯಾಗುತ್ತದೆ. ಪೊಟ್ಯಾಸಿಯಮ್ ಕ್ಲೋರೈಡ್, ಮ್ಯಾಂಗನೀಸ್ ಕ್ಲೋರೈಡ್ ಮತ್ತು ನೀರು ಇತರ ಉತ್ಪನ್ನಗಳು. ಈ ಪ್ರಧಾನ ಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯುವುದೆಂದು ಭಾವಿಸಬಹುದು. 2ಏಒಟಿಔ4 ( ಏ2ಔ + 2ಒಟಿಔ+ 5[0] ಏ2ಔ + 2ಊಅI ( ಊ2ಔ+ 2ಏಅI [ಒಟಿಔ+ 2ಊಅI ( ಊ2ಔ+ ಒಟಿಅI2] ( 2 [ [0] + 2ಊಅI ( ಊ2ಔ + ಅI2 ] ( 5 2ಏಒಟಿ04 + 16ಊಅI ( 8ಊ2ಔ + 2ಏಅI + 2ಒಟಿಅI2 + 5ಅI2 ( ರಾಸಾಯನಿಕ ಗಣಿತದಲ್ಲಿ ಸಮೀಕರಣಗಳ ಪಾತ್ರ ಹಿರಿದು. ಧಾತುಗಳ ವರ್ಗೀಕರಣ ಅನೇಕ ಧಾತುಗಳು ಆವಿಷ್ಕಾರಗೊಂಡು ಅವುಗಳ ಪರಮಾಣು ತೂಕಗಳನ್ನು ಕರಾರುವಾಕ್ಕಾಗಿ ಲೆಕ್ಕಹಾಕಿದ ಅನಂತರ, ಅದನ್ನೆ ಆಧಾರವಾಗಿಟ್ಟುಕೊಂಡು ಧಾತುಗಳನ್ನು ವರ್ಗೀಕರಿಸಿ ರಸಾಯನ ವಿಜ್ಞಾನದ ಅಭ್ಯಾಸವನ್ನು ಏಕೆ ಸರಳಗೊಳಿಸಬಾರದು ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಬಾಧಿಸುತ್ತಲೆ ಇತ್ತು. ಈ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವ (1869) ರಷ್ಯದ ರಸಾಯನ ವಿಜ್ಞಾನಿ ಮೆಂಡಲೀಫ್ (1834 - 1907). ಆಗ ಪರಿಚಿತವಾಗಿದ್ದ ಧಾತುಗಳನ್ನು ಅವುಗಳ ಪರಮಾಣು ತೂಕಗಳ ಆರೋಹಣಕ್ರಮದಲ್ಲಿ ಬರೆದರೆ, ನಿರ್ದಿಷ್ಟ ಅಂತರದಲ್ಲಿ ರಾಸಾಯನಿಕ ಗುಣಸಾಮ್ಯವಿರುವ ಧಾತುಗಳು ಪುನರಾವರ್ತಿಸುತ್ತಿದ್ದವು. ಇದನ್ನೆ ಮೆಂಡಲೀಫ್ ನಿಯಮ ರೂಪದಲ್ಲಿ ಪ್ರತಿಪಾದಿಸಿದ. ``ಧಾತುಗಳ ಪರಮಾಣು ತೂಕಕ್ರಮದಲ್ಲಿ ರಾಸಾಯನಿಕ ಗುಣಲಕ್ಷಣಗಳು ಆವರ್ತೀಯವಾಗಿ ಕಾಣಿಸಿಕೊಳ್ಳುತ್ತವೆ. ಮೆಂಡಲೀಫನ ಆವರ್ತಕ ನಿಯಮ (ಪೀರಿಯಾಡಿಕ್ ಲಾ) ಎಂದೇ ಈ ಹೇಳಿಕೆ ಪ್ರಸಿದ್ಧವಾಗಿದೆ. ಮೆಂಡಲೀಫ್ ತಾನು ರೂಪಿಸಿದ ನಿಯಮವನ್ನು ಆಧಾರವಾಗಿಟ್ಟುಕೊಂಡು ಧಾತುಗಳ ವರ್ಗೀಕೃತ ಕೋಷ್ಟವೊಂದನ್ನು ತಯಾರಿಸಿದ. ಕೋಷ್ಟಕದ ನೀಟಸಾಲುಗಳನ್ನು (ವರ್ಟಿಕಲ್ ಕಾಲಮ್ಸ್) ಗುಂಪುಗಳೆಂದೂ ಅಡ್ಡಸಾಲುಗಲನ್ನು (ಹಾರಿಜಾಂಟಲ್ ರೋಸ್) ಆವರ್ತಗಳೆಂದೂ ಕರೆಯಲಾಗಿದೆ. ಗುಣಸಾಮ್ಯವಿರುವ ಧಾತುಗಳು ಒಂದೇ ಗುಂಪಿನಲ್ಲಿವೆ. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಪರಮಾಣು ರಚನೆ ಬಗ್ಗೆ ಅರಿವು ಮೂಡಿದಂತೆ, ಧಾತುಗಳ ವರ್ಗೀಕರಣಕ್ಕೆ ಪರಮಾಣು ತೂಕಕ್ಕಿಂತ ಮೂಲಭೂತವಾದುದು ಧಾತುಗಳ ಪರಮಾಣು ಸಂಖ್ಯೆ ಎನ್ನುವುದು ಖಚಿತವಾಯಿತು. ಯಾವುದೇ ಧಾತುವಿನ ರಾಸಾಯನಿಕ ಸ್ವಭಾವವನ್ನು ನಿರ್ಧರಿಸುವುದು ಅದರ ಪರಮಾಣು ಸಂಖ್ಯೆ ; ಅಂದರೆ ಪರಮಾಣು ಬೀಜದ ಮೇಲಿರುವ ಧನ ವಿದ್ಯುದಾವೇಶ. ಆದ್ದರಿಂದ ಆವರ್ತ ಕೋಷ್ಟಕದಲ್ಲಿ ಧಾತುಗಳಿರಬೇಕಾದುದು ಪರಮಾಣು ಸಂಖ್ಯೆಗಳ ಆರೋಹಣಾ ಕ್ರಮದಲ್ಲಿ ವಿನಾ ಪರಮಾಣು ತೂಕಗಳ ಕ್ರಮದಲ್ಲಲ್ಲ. ಹೀಗೆ ಮಾಡಿದಾಗ ನವೀನ ಮಾದರಿಯ ವಿಸ್ತøತಕೋಷ್ಟಕ ಮೈದಳೆಯುತ್ತದೆ. ಇದರಲ್ಲಿ ಮೆಂಡಲೀಫನ ಕೋಷ್ಟಕದಲ್ಲಿದ್ದ ಲೋಪಗಳು ನಿವಾರಣೆಯಾಗಿವೆ. ಪರಮಾಣುಗಳ ಎಲೆಕ್ಟ್ರಾನ್ ವಿನ್ಯಾಸದಲ್ಲಿ ಕ್ರಮೇಣ ಆಗುವ ಬದಲಾವಣೆಗಳಿಗೆ ಅನುಸಾರವಾಗಿ ಧಾತುಗಳ ಲಕ್ಷಣಗಳು ಹೇಗೆ ಬದಲಾಯಿಸುವುವು ಎಂಬುದನ್ನು ಈ ಕೋಷ್ಟಕ ತಿಳಿಸುತ್ತದೆ. ಧಾತುಗಳ ವರ್ಗೀಕರಣದ ಫಲವಾಗಿ ನೂರಕ್ಕೂ ಹೆಚ್ಚು ಧಾತುಗಳು ಮತ್ತು ಅವುಗಳ ಸಹಸ್ರಾರು ಸಂಯುಕ್ತಗಳ ವಿವರಪೂರ್ಣ ಅಧ್ಯಯನವನ್ನು ಕೇವಲ ಒಂಬತ್ತು ಗುಂಪುಗಳ ಗುಣ ಲಕ್ಷಣಗಳ ಅಧ್ಯಯನಕ್ಕೆ ಸೀಮಿತಗೊಳಿಸಿದಂತಾಗಿದೆ. (ನೋಡಿ- ಆವರ್ತಕೋಷ್ಟಕ) (ಎಚ್.ಜಿ.ಎಸ್.) ರಾಸಾಯನಿಕ ನಿಯಮಗಳು ಪದಾರ್ಥಗಳ ರಚನೆ, ಅವುಗಳಲ್ಲಿ ಆಗುವ ಬದಲಾವಣೆಗಳು ಮುಂತಾದವನ್ನು ನಿಗದಿಪಡಿಸಿ ಸಾರ್ವತ್ರೀಕರಿಸುವ ಕೆಲವು ಮೂಲಭೂತ ರಾಸಾಯನಿಕ ನಿಯಮಗಳು ಇವೆ. ಇವಾವುದೆಂದರೆ ರಾಶಿ - ಶಕ್ತಿ ಸಂರಕ್ಷಣಾ ನಿಯಮ (ಲಾ ಆಫ್ ಕನ್ಸರ್ವೇಷನ್ ಆಫ್ ಮಾಸ್ - ಎನರ್ಜಿ), ನಿಯತಾನುಪಾತ ನಿಯಮ (ಲಾ ಆಫ್ ಡೆಫನೆಟ್ ಪ್ರಪೋರ್ಷನ್ಸ್), ಅಪವತ್ರ್ಯಾನುಪಾತ ನಿಯಮ(ಲಾ ಆಫ್ ಮಲ್ಟಿಪಲ್ ಪ್ರಪೋರ್ಷನ್ಸ್) ಮತ್ತು ವ್ಯುತ್ಕ್ರಮಾನುಪಾತ ನಿಯಮ ( ಲಾ ಆಫ್ ರೆಸಿಪ್ರೋಕಲ್ ಪ್ರಪೋರ್ಷನ್ಸ್), ಸಮಾನ ತೂಕನಿಯಮ, ಸಂಯೋಜಕ ಗಾತ್ರ ನಿಯಮ. ರಾಶಿ ಶಕ್ತಿ ಸಂರಕ್ಷಣಾ ನಿಯಮ : ರಾಸಾಯನಿಕ ಕ್ರಿಯೆ ಜರುಗುತ್ತಿದ್ದಂತೆಯೇ ಅಲ್ಲಿ ಪಾತ್ರವಹಿಸುವ ವಸ್ತುವಿನಲ್ಲಿ ಕೆಲವು ವ್ಯತ್ಯಾಸಗಳು ಕಾಣುತ್ತವೆ. ಈ ವ್ಯತ್ಯಾಸಗಳಲ್ಲಿ ರಾಶಿ ಮತ್ತು ಶಕ್ತಿಗಳಿಗೆ ಸಂಬಂಧಿಸಿದ ವ್ಯತ್ಯಾಸಗಳು ಮುಖ್ಯ. ಕ್ರಿಯೆಯಲ್ಲಿ ಭಾಗವಹಿಸಿದ ರಾಶಿಯ ರೂಪಾಂತರ ಆಗಬಹುದು. ಆದರೆ ರಾಶಿ ಪ್ರಮಾಣದಲ್ಲಿ ವ್ಯತ್ಯಯವಾಗಲಾರದು. ಮುಚ್ಚಿದ ಪಾತ್ರೆಯಲ್ಲಿ ಎಚ್ಚರಿಕೆಯಿಂದ ರಾಸಾಯನಿಕ ಕ್ರಿಯೆಯನ್ನು ಜರುಗಿಸಿದಾಗ ರಾಶಿಯ ತೂಕದಲ್ಲಿ ವ್ಯತ್ಯಸ್ತವಾಗುವುದಿಲ್ಲ ಎಂದು ಪ್ರಯೋಗಗಳು ತೋರಿಸಿಕೊಟ್ಟಿವೆ. ಪ್ರಕ್ಷೇಪಣೆ (ಪ್ರೆಸಿಪಿಟೇಷನ್), ದಹನ (ಕಂಬಷ್ಚನ್) ಮುಂತಾದ ವಿಧಾನದಿಂದ ಹೊಸ ಸಂಯುಕ್ತಗಳನ್ನು ಪಡೆದು ರಾಶಿ ಸಂರಕ್ಷಣೆಯನ್ನು ಸ್ಥಿರಪಡಿಸಲಾಗಿದೆ. ಕ್ರಿಯೆಯೊಂದಿಗೆ ಶಕ್ತಿ ಕೂಡ ರೂಪಾಂತರವಾಗುವುದು ಉಂಟು. ಉದಾಹರಣೆಗೆ ಡೇನಿಯಲ್, ಲೆಕ್ಲಾಂಷೆ ಮುಂತಾದ ವಿದ್ಯುಕ್ಕೋಶಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ತು ಉಂಟಾಗುತ್ತದೆ. ರಾಸಾಯನಿಕ ಶಕ್ತಿವಿದ್ಯುತ್ತಾಗಿ ಮಾರ್ಪಾಟಾಗುತ್ತದೆ. ಹೀಗೆಯೇ ಜಲಶಕ್ತಿ ವಿದ್ಯುತ್ತಾಗಬಹುದು ಇಲ್ಲವೆ ವಿದ್ಯುತ್ತು ಯಾಂತ್ರಿಕಶಕ್ತಿಯಾಗಿ ಮಾರ್ಪಡಬಹುದು. ಶಕ್ತಿಯ ರೂಪಾಂತರವಾಗಬಹುದೇ ವಿನಾ ಅದರ ಮೊತ್ತ ವ್ಯತ್ಯಾಸ ಸಾಧ್ಯವಿಲ್ಲ. ರಾಶಿಯಂತೆ ಶಕ್ತಿಯನ್ನು ಕೂಡ ಸೃಜಿಸಲಾಗುವುದಾಗಲಿ ನಾಶಪಡಿಸುವುದಾಗಲಿ ಸಾಧ್ಯ ಇಲ್ಲ. ರಾಶಿಶಕ್ತಿಗಳ ನಡುವೆ ವಿಶಿಷ್ಟ ಸಂಬಂಧವಿದ್ದು ಇವೆರಡೂ ಕೂಡಿಯೇ ಸಂರಕ್ಷಿತಗೊಳ್ಳುತ್ತವೆಂಬುದನ್ನು ಈಚೆಗೆ ಅರಿಯಲಾಗಿದೆ. ಸಾಮಾನ್ಯವಾಗಿ ನಡೆಯುವ ರಾಸಾಯನಿಕ ಕ್ರಿಯೆಗಳಲ್ಲಿ ಸ್ವಲ್ಪ ಮಾತ್ರವೇ ಶಕ್ತಿ ಹೊರಬೀಳಬಹುದು. ಆದರೆ ನ್ಯೂಕ್ಲಿಯಸ್ಸಿಗೆ ಸಂಬಂಧಿಸಿದ ಕ್ರಿಯೆಗಳಲ್ಲಿ (ಉದಾಹರಣೆಗೆ ಒಂದು ಮೂಲವಸ್ತುವೇ ವಿಘಟಿತವಾದಾಗ) ಅತ್ಯಂತ ದೊಡ್ಡ ಮೊತ್ತದ ಶಕ್ತಿ ಹೊರಬೀಳುತ್ತದೆ. ಪರಮಾಣು ಬಾಂಬಿನಲ್ಲಿ ಆಗುವ ಸ್ಫೋಟ ಈ ತೆರನಾದ ಕ್ರಿಯೆಗೆ ಉದಾಹರಣೆ. ಹೀಗೆ ಹೊರಬೀಳುವ ಶಕ್ತಿಯ ಜೊತೆಯಲ್ಲಿಯೇ ಅಲ್ಪ ಮೊತ್ತದಲ್ಲಿ ರಾಶಿಯೂ ಕಾಣದಾಗುತ್ತದೆ. ಕಾಣದಾದ ರಾಶಿ ಮತ್ತು ಹೊರಬಿದ್ದ ಶಕ್ತಿಗಳು ಎಂಬ ಸಮೀಕರಣಕ್ಕೆ ಅನುಗುಣವಾಗಿರುತ್ತದೆ. ಶಕ್ತಿ ಮತ್ತು ರಾಶಿಗಳು ಒಂದರಿಂದ ಇನ್ನೊಂದಕ್ಕೆ ಪರಿವರ್ತಿತಗೊಳ್ಳೂವಂಥವು ಮತ್ತು ವಸ್ತುವಿನ ಬೇರೆ ಬೇರೆ ಸ್ವರೂಪಗಳಾಗಿವೆ ಎಂಬುದು ಈಗ ತಿಳಿದುಬಂದಿದೆ. ಆದ್ದರಿಂದ ರಾಶಿ ಸಂರಕ್ಷಣೆ ಮತ್ತು ಶಕ್ತಿ ಸಂರಕ್ಷಣೆ ನಿಯಮಗಳೆರಡನ್ನೂ ಕೂಡಿಸಿ ರಾಶಿ - ಶಕ್ತಿ ಸಂರಕ್ಷಣಾ ನಿಯಮ ಎಂಬ ಸರ್ವಸಾಮಾನ್ಯ ನಿಯಮ ನಿರೂಪಿತವಾಗಿದೆ. ರಾಶಿ ಮತ್ತು ಶಕ್ತಿಗಳು ಒಂದರಿಂದ ಮತ್ತೊಂದಕ್ಕೆ ಪರಿವರ್ತಿತಗೊಳ್ಳಲು ಇಲ್ಲವೆ ರೂಪ ವ್ಯತ್ಯಾಸ ಹೊಂದಲು ಸಾಧ್ಯವಾದರೂ ರಾಶಿ ಶಕ್ತಿಯಲ್ಲಿ (ನಷ್ಟ ಅಥವಾ ಹೆಚ್ಚಳ ಸಾಧ್ಯವಿಲ್ಲ. ಅಂದರೆ ರಾಶಿ ಶಕ್ತಿಯನ್ನು) ಸೃಜಿಸುವುದಾಗಲಿ, ನಾಶಪಡಿಸುವುದಾಗಲಿ ಸಾಧ್ಯವಿಲ್ಲ. ನಿಯತಾನುಪಾತ ನಿಯಮ : ಯಾವುದೇ ಒಂದು ಶುದ್ಧ ಸಂಯುಕ್ತದಲ್ಲಿ ಧಾತುಗಳ ತೂಕಗಳ ಅನುಪಾತ ಯಾವಾಗಲೂ ಒಂದೇ ಆಗಿರುತ್ತದೆ. ಈ ನಿಯಮದ ರೀತ್ಯ ಸಂಯುಕ್ತದ ಬೇರೆ ಬೇರೆ ರೀತಿಯಿಂದ ತಯಾರಿಸಲ್ಪಟ್ಟ, ಶುದ್ಧ ಪ್ರತಿಚಯಗಳೆಲ್ಲ ಒಂದೇ ರಚನೆಯನ್ನು ಹೊಂದಿರುತ್ತವೆ. ಉದಾಹರಣೆಗೆ ಶುದ್ಧ ಅಡುಗೆಉಪ್ಪು (ಸೋಡಿಯಮ್ ಕ್ಲೋರೈಡ್) 39. 34% ಸೋಡಿಯಮ್ (ಓಚಿ) ಲೋಹವನ್ನು ಮತ್ತು 60.66% ಕ್ಲೋರೀನ್ (ಅI) ಧಾತುವನ್ನೂ ಒಳಗೊಂಡಿರುತ್ತದೆ. ಈ ರಚನೆಯ ಅನ್ವಯ ಎಲ್ಲ ಶುದ್ಧ ಉಪ್ಪಿನ ಮಾದರಿಗಳೆಲ್ಲ ಇದೇ ಬಗೆಯ ಸೋಡಿಯಮ್ ಮತ್ತು ಕ್ಲೋರೀನ್ ಧಾತುಗಳನ್ನು ಹೊಂದಿರುತ್ತವೆಂದು ಸ್ಪಷ್ಟಗೊಂಡಿದೆ. ಈ ನಿಯಮವನ್ನು ಫ್ರೆಂಚ್ ರಸಾಯನ ವಿಜ್ಞಾನಿ ಜೋಸೆಫ್ ಲೂಯಿಪ್ರೌಸ್ಟ್ ನಿರೂಪಿಸಿದ (1799). ಅಪವತ್ರ್ಯಾನುಪಾತ ನಿಯಮ : ಎರಡು ಧಾತುಗಳು ಸಂಯೋಗಗೊಂಡು ಎರಡು ಇಲ್ಲವೆ ಹೆಚ್ಚು ಸಂಯುಕ್ತಗಳು ಉಂಟಾದಾಗ, ಈ ಎರಡರಲ್ಲೊಂದು ಧಾತುವಿನ ನಿಯತತೂಕದೊಡನೆ ಸಂಯೋಗಗೊಳ್ಳುವ ಇನ್ನೊಂದು ಧಾತುವಿನೊಡನೆ ವಿವಿಧ ತೂಕಗಳು ಸರಳ ಅನುಪಾತದಲ್ಲಿರುತ್ತವೆ. ಅಪವತ್ರ್ಯಾನುಪಾತ ಎಂದು ಕರೆಯುವ ಈ ನಿಯಮದ ರೀತ್ಯ ಧಾತುವೊಂದು ಇನ್ನೊಂದು ಧಾತುವಿನೊಡನೆ ಸಂಯೋಗಗೊಂಡು ಒಂದಕ್ಕಿಂತ ಹೆಚ್ಚು ಸಂಯುಕ್ತಗಳನ್ನು ನೀಡಬಹುದು. ಆ ಸಂದರ್ಭದಲ್ಲಿ ಮೊದಲನೆಯ ಧಾತುವಿನ ನಿಯತತೂಕದೊಡನೆ ಸಂಯೋಜಿಸಿದ ಎರಡನೆಯ ಧಾತುವಿನ ತೂಕಗಳೆಲ್ಲ ಒಂದಕ್ಕೊಂದು ಸಣ್ಣ ಪೂರ್ಣಾಂಕಗಳ ಪ್ರಮಾಣದಲ್ಲಿರುತ್ತವೆ. ಉದಾಹರಣೆಗೆ, ಹೈಡ್ರೋಜನ್ ಮತ್ತು ಆಕ್ಸಿಜನ್‍ಗಳು ರಾಸಾಯನಿಕ ಕ್ರಿಯೆಗೆ ಈಡಾಗಿ ನೀರನ್ನು ಉಂಟುಮಾಡುತ್ತವೆ; ಶಕ್ತಿಯುತ ವಿದ್ಯುತ್ ವಿಸರ್ಜನೆಯಿಂದ ಈ ಎರಡು ಧಾತುಗಳು ಹೈಡ್ರೋಜನ್ ಪೆರಾಕ್ಸೈಡನ್ನು ಉಂಟುಮಾಡುತ್ತವೆ. ನೀರು ಮತ್ತು ಹೈಡ್ರೋಜನ್ ಪೆರಾಕ್ಸೈಡುಗಳಲ್ಲಿ ಒಂದೇ ತೂಕದ ಹೈಡ್ರೋಜನ್ನಿನೊಡನೆ ಸಂಯೋಜಿಸುವ ಆಕ್ಸಿಜನ್ನಿನ ತೂಕಗಳ ಅನುಪಾತ 1:2. ಇದು ಸರಳ ಅನುಪಾತ. ವ್ಯುತ್ಕ್ರಮಾನುಪಾತ ನಿಯಮ : ಒಂದು ಧಾತುವಿನೊಡನೆ ಯಾವುದಾದರೂ ಎರಡು ಧಾತುಗಳು ಪ್ರತ್ಯೇಕವಾಗಿ ಸಂಯೋಜಿಸುವುದಾದ ಪಕ್ಷಕ್ಕೆ, ಮೊದಲನೆಯ ಧಾತುವಿನ ನಿಯತತೂಕದೊಡನೆ ಪ್ರತ್ಯೇಕವಾಗಿ ಸಂಯೋಜಿಸುವ ಉಳಿದೆರಡರ ತೂಕಗಳ ಪ್ರಮಾಣಕ್ಕೆ ಕೊನೆಯ ಎರಡು ಧಾತುಗಳು ತಾವೇ ಸಂಯೋಜಿಸುವ ತೂಕಗಳ ಪ್ರಮಾಣವಾದರೂ ಸರಳಸಂಬಂಧವನ್ನು ಹೊಂದಿರುತ್ತದೆ. ಈ ನಿಯಮ ಯಾವುದೇ ಒಂದು ಧಾತು ಇನ್ನೊಂದು ಧಾತುವಿನೊಡನೆ ಸಂಯೋಜಿಸುವ ಪ್ರಮಾಣವನ್ನು ತಿಳಿಯುವ ಸೂತ್ರವನ್ನು ನೀಡುತ್ತದೆ. ಕಾರ್ಬನ್‍ಧಾತು ಹೈಡ್ರೋಜನ್ನಿನೊಡನೆ ಸಂಯೋಜಿಸಿ ಮೀಥೇನನ್ನು ಆಕ್ಸಿಜನ್ನಿನೊಡನೆ ಸಂಯೋಜಿಸಿ ಕಾರ್ಬನ್ ಡೈಆಕ್ಸೈಡನ್ನೂ ಕೊಡುತ್ತದೆ. ಈ ಎರಡು ಸಂಯುಕ್ತಗಳಲ್ಲಿ ನಿಯತತೂಕದ ಕಾರ್ಬನ್ನಿನೊಡನೆ ಸಂಯೋಜಿಸುವ ಹೈಡ್ರೋಜನ್ ಮತ್ತು ಆಕ್ಸಿಜನ್‍ಗಳ ತೂಕಗಳ ಪ್ರಮಾಣ 1:8. ಹೈಡ್ರೋಜನ್ ಮತ್ತು ಆಕ್ಸಿಜನ್ನುಗಳು ತಮಗೆ ತಾವೇ ಸಂಯೋಜನೆಗೊಂಡಾಗ ವ್ಯುತ್ಕ್ರಮಾನುಪಾತ ನಿಯಮದಂತೆ, ಈ ಪ್ರಮಾಣದಲ್ಲಿ ಇಲ್ಲವೆ ಇದಕ್ಕೆ ಸರಳಸಂಬಂಧ ಇರುವ ಪ್ರಮಾಣದಲ್ಲಿ ಸಂಯೋಜನೆಗೊಳ್ಳಬೇಕು. ಈ ಎರಡು ಧಾತುಗಳು ನೀರಿನಲ್ಲಿ 1:8 ಪ್ರಮಾಣದಲ್ಲಿ ಸಂಯೋಜನೆಗೊಂಡು ಇರುವುದರಿಂದ ಈ ಕ್ರಿಯೆ ಇಲ್ಲಿಯ ನಿಯಮವನ್ನು ಪಾಲಿಸಿದಂತೆಯೇ ಆಯಿತು. (ಜೆ.ಆರ್.ಆರ್.) ಸಮಾನ ತೂಕ ನಿಯಮ : ವ್ಯುತ್ಕ್ರಮಾನುಪಾತ ನಿಯಮವನ್ನು ಎಲ್ಲ ಧಾತುಗಳಿಗೂ ಅನ್ವಯಿಸುವಂತೆ ಸಾಮಾನ್ಯೀಕರಿಸಿ ನಿರೂಪಿಸಿದ ನಿಯಮ ಇದು. ಇದರ ಪ್ರಕಾರ ಪ್ರಮಾಣಕವಾಗಿ ತೆಗೆದುಕೊಂಡ ಧಾತುವಿನ ನಿಯತತೂಕದೊಡನೆ ತಾವು ಪ್ರತ್ಯೇಕವಾಗಿ ಸಂಯೋಜಿಸುವ ತೂಕಗಳ ಅನುಪಾತದಲ್ಲಿ ಅಥವಾ ಆ ಅನುಪಾತಕ್ಕೆ ಸರಳ ಸಂಬಂಧವಿರುವ ಇನ್ನಾವುದೇ ಅನುಪಾತದಲ್ಲಿ ಧಾತುಗಳು ಪರಸ್ಪರ ಸಂಯೋಜಿಸುವುವು. ಧಾತುಗಳ ಸಾರ್ವತ್ರಿಕ ಸಂಯೋಜನೆಗೆ 8 ಗ್ರಾಮ್ ಆಕ್ಸಿಜನ್ನನ್ನು ಪ್ರಮಾಣಕವಾಗಿ ಇಟ್ಟುಕೊಳ್ಳುವುದು ವಾಡಿಕೆ. ಇದರೊಡನೆ 23 ಗ್ರಾಮ್ ಸೋಡಿಯಮ್, 12 ಗ್ರಾಮ್ ಮೆಗ್ನೀಸಿಯಮ್, 35. 5 ಗ್ರಾಮ್ ಕ್ಲೋರೀನ್ ಮತ್ತು 1.00 ಗ್ರಾಮ್ ಹೈಡ್ರೋಜನ್ ಸಂಯೋಜಿಸುತ್ತವೆ. ಈ ಧಾತುಗಳು ಪರಸ್ಪರ ಸಂಯೋಜಿಸುವುದಾದರೆ 35. 5 ಗ್ರಾಮ್ ಕ್ಲೋರೀನಿನೊಡನೆ ಸಂಯೋಜಿಸಲು 1.008 ಗ್ರಾಮ್ ಹೈಡ್ರೋಜನ್, 23 ಗ್ರಾಮ್ ಸೋಡಿಯಮ್ ಮತ್ತು 12 ಗ್ರಾಮ್ ಮೆಗ್ನೀಸಿಯಮ್ ಅಗತ್ಯ ಎಂದಾಗುತ್ತದೆ. ಇದು ಅನುಭವವೇದ್ಯ ಕೂಡ. ಹೈಡ್ರೋಜನ್ ಕ್ಲೋರೈಡ್ (ಊಅI), ಸೋಡಿಯಮ್ ಕ್ಲೋರೈಡ್ (ಓಚಿಅI) ಮತ್ತು ಮೆಗ್ನೀಸಿಯಮ್ ಕ್ಲೋರೈಡುಗಳಲ್ಲಿ (ಒgಅI2) ಈ ಅನುಪಾತಗಳನ್ನು ನೋಡುತ್ತೇವೆ. ಆದ್ದರಿಂದ 23, 35.5, 1,008 ಮತ್ತು 12 ಸಂಖ್ಯೆಗಳಿಗೆ ಅನುಕ್ರಮವಾಗಿ ಸೋಡಿಯಮ್, ಕ್ಲೋರೀನ್, ಹೈಡ್ರೋಜನ್ ಮತ್ತು ಮೆಗ್ನೀಸಿಯಮ್ ಧಾತುಗಳ ಸಮಾನತೂಕಗಳು ಎಂದು ಹೆಸರು. ಸಂಯೋಜಕ ಗಾತ್ರ ನಿಯಮ : ಈ ನಿಯಮವನ್ನು ನಿರೂಪಿಸಿದವ (1808) ಫ್ರಾನ್ಸಿನ ಗೇ ಲೂಸ್ಯಾಕ್ ಎಂಬ ರಸಾಯನವಿಜ್ಞಾನಿ. ಇದರ ಪ್ರಕಾರ ಪರಸ್ಪರ ಸಂಯೋಜಿಸುವ ಅನಿಲಗಳ ಗಾತ್ರವೂ ಉತ್ಪನ್ನಗಳು ಅನಿಲಗಳಾಇದ್ದರೆ ಅವುಗಳ ಗಾತ್ರವೂ ಸರಳಾನುಪಾತದಲ್ಲಿರುತ್ತವೆ. ಆದರೆ ಕ್ರಿಯಾಭಾಗಿಗಳಾದ ಎಲ್ಲ ಅನಿಲಗಳ ಗಾತ್ರಗಳನ್ನೂ ಸಮಾನ ಉಷ್ಣತೆ ಮತ್ತು ಸಮಾನ ಒತ್ತಡಗಳಲ್ಲಿ ಅಳೆದಿದ್ದರೆ ಮಾತ್ರ ಈ ನಿಯಮ ಸಿಂಧು. (ಎಚ್.ಜಿ.ಎಸ್.) ರಾಸಾಯನಿಕ ಕ್ರಿಯೆ ರಾಸಾಯನಿಕ ಬದಲಾವಣೆಯನ್ನು ಉಂಟುಮಾಡುವ ವಿದ್ಯಮಾನ (ಕೆಮಿಕಲ್ ಆಕ್ಷನ್). ಈ ಕ್ರಿಯೆ ಜರುಗಿದಾಗ ಮೊದಲು ಉಪಯೋಗಿಸಿದ ವಸ್ತುಗಳು ಬದಲಾವಣೆಗೊಂಡು ಹೊಸ ವಸ್ತುಗಳು ಉತ್ಪನ್ನವಾಗುತ್ತವೆ. ಪರಿವರ್ತಿಸುವ ವಸ್ತುಗಳಲ್ಲಿಯ ಪರಮಾಣುಗಳ ನಡುವೆ ಇದ್ದ ಬಂಧಗಳು ಒಡೆದು, ಹೊಸ ಬಂಧಗಳು ಏರ್ಪಡುವುವು. ರಾಸಾಯನಿಕಕ್ರಿಯೆಗಳ ವೇಗದ ಮೌಲ್ಯ, ಅವು ಜರುಗುವ ಪಥ ಮತ್ತು ವೇಗವನ್ನು ನಿರ್ಧರಿಸುವ ಅಂಶಗಳು ಇತ್ಯಾದಿಗಳ ಸಮಗ್ರ ಅಧ್ಯಯನ ಪ್ರತಿಕ್ರಿಯಾ ಬಲಗತಿವಿಜ್ಞಾನ (ರೀಆಕ್ಷನ್ ಕೈನೆಟಿಕ್ಸ್). ರಾಸಾಯನಿಕ ಕ್ರಿಯೆಗಳು ನಡೆಯಲು ಕಾಲಾವಕಾಶಬೇಕು. ಕೆಲವು ಕ್ರಿಯೆಗಳು ಅತಿ ಹೆಚ್ಚಿನ ವೇಗದಿಂದ ಜರುಗಿದರೆ ಕೆಲವೊಂದು ನಿಧಾನವಾಗಿ ಜರುಗುತ್ತವೆ. ಕಬ್ಬಿಣ ತುಕ್ಕು ಹಿಡಿಯುವುದು, ಸಕ್ಕರೆಯ ಹುದುಗುವಿಕೆ, ಬಣ್ಣ ಒಣಗುವುದು, ಸಸ್ಯದ ಬೆಳವಣಿಗೆ, ಭೂವೈಜ್ಞಾನಿಕ ಬದಲಾವಣೆಗಳು ಇವೆಲ್ಲ ನಿಧಾನ ಕ್ರಿಯೆಗಳು. ವಿದ್ಯುದಾವಿಷ್ಟ ಅಯಾನುಗಳ ನಡುವೆ ಕ್ರಿಯೆ ಸಾಮಾನ್ಯವಾಗಿ ಹೆಚ್ಚಿನ ವೇಗದಿಂದ ನಡೆಯುತ್ತದೆ. ಇಂಥ ಕ್ರಿಯೆಗಳಿಗೆ ಕ್ಷಣಿಕ ಕ್ರಿಯೆಗಳು ಎಂದು ಹೆಸರು. ಆಮ್ಲ ಪ್ರತ್ಯಾಮ್ಲಗಳ ಪರಸ್ಪರ ತಟಸ್ಥಕ್ರಿಯೆ ಇದಕ್ಕೆ ಒಂದು ನಿದರ್ಶನ. ಸಮರೂಪಕ್ರಿಯೆ ಮತ್ತು ಭಿನ್ನರೂಪಕ್ರಿಯೆಗಳು : ಪರಿವರ್ತಕಗಳು ಮತ್ತು ಫಲಿತವಸ್ತುಗಳು ಒಂದೇ ಭೌತಸ್ಥಿತಿಯಲ್ಲಿದ್ದರೆ ಆ ಕ್ರಿಯೆಗಳಿಗೆ ಸಮರೂಪ ಕ್ರಿಯೆಗಳೆಂದು ಹೆಸರು. ಉದಾಹರಣೆಗೆ ನೈಟ್ರೋಜನ್ ಮತ್ತು ಆಕ್ಸಿಜನ್ನಿನ ಸಂಯೋಜನೆ ವಿದ್ಯುತ್ಕಿಡಿಯ ಸಂಪರ್ಕದಲ್ಲಿ ನಡೆದು ನೈಟ್ರಿಕ್ ಆಕ್ಸೈಡ್ ಉತ್ಪನ್ನವಾಗುತ್ತದೆ. ಇಲ್ಲಿ ಪರಿವರ್ತಕ ಮತ್ತು ಫಲಿತವಸ್ತುಗಳೆರಡೂ ಅನಿಲರೂಪದಲ್ಲಿರುತ್ತವೆ. ಕ್ರಿಯೆಗಳಲ್ಲಿ ಭಾಗವಹಿಸುವ ವಸ್ತುಗಳ ಭೌತರೂಪ ಭಿನ್ನವಾಗಿರುವ ಕ್ರಿಯೆಗಳಿಗೆ ಭಿನ್ನರೂಪ ಕ್ರಿಯೆಗಳು ಎಂದು ಹೆಸರು. ಉದಾಹರಣೆಗೆ ಸುಣ್ಣಕಲ್ಲನ್ನು ಗೂಡುಗಳಲ್ಲಿ ಕಾಸಿದಾಗ ಸುಟ್ಟ ಸುಣ್ಣ ಮತ್ತು ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿಯಾಗುತ್ತವೆ. ಉತ್ಕರ್ಷಣ ಮತ್ತು ಅಪಕರ್ಷಣ ಕ್ರಿಯೆಗಳು : ಈ ಬಗೆಯ ಕ್ರಿಯೆಗಳಲ್ಲಿ ಎಲೆಕ್ಟ್ರಾನುಗಳು ಭಾಗಶಃ ಆಗಲಿ ಪೂರ್ಣವಾಗಿ ಆಗಲಿ ಒಂದು ಪರಮಾಣುವಿನಿಂದ ಮತ್ತೊಂದು ಪರಮಾಣುವಿಗೆ ವರ್ಗಾವಣೆ ಹೊಂದುತ್ತವೆ. ಬಹುತೇಕ ಮುಖ್ಯ ರಾಸಾಯನಿಕ ಕ್ರಿಯೆಗಳು ಈ ಪಂಗಡಕ್ಕೆ ಸೇರಿವೆ. ಕ್ಲೋರೀನ್ ತುಂಬಿರುವ ಜಾಡಿಯಲ್ಲಿ, ಕರಗಿಸಿ ಸೋಡಿಯಮ್ ಲೋಹವನ್ನಿಟ್ಟರೆ, ಕೂಡಲೇ ಉರಿಯುವ ಜ್ವಾಲೆಯಿಂದ ಒಡಗೂಡಿದ ಕ್ರಿಯೆ ನಡೆದು, ಜಾಡಿಯ ಒಳ ಮೈಯಲ್ಲಿ ಬಿಳಿಯ ಉಪ್ಪು ಶೇಖರವಾಗುತ್ತದೆ. ಇಲ್ಲಿ ಎಲೆಕ್ಟ್ರಾನುಗಳು ಸೋಡಿಯಮ್ ಲೋಹದಿಂದ ಕ್ಲೋರೀನಿಗೆ ವರ್ಗಾವಣೆಯಾಗುತ್ತವೆ. ಹೈಡ್ರೋಜನ್ ಮತ್ತು ಆಕ್ಸಿಜನ್ನುಗಳ ಸಂಯೋಜನೆ ಮತ್ತೊಂದು ಮುಖ್ಯ ಉತ್ಕರ್ಷಣೆ - ಅಪಕರ್ಷಣ ಕ್ರಿಯೆ. ಈ ಕ್ರಿಯೆಯಲ್ಲಿ ಆಕ್ಸಿಜನ್ನಿನ ಎಲೆಕ್ಟ್ರಾನ್ ಆಕರ್ಷಣ ಬಲ ಹೆಚ್ಚಾಗಿರುವುದರಿಂದ ಹಂಚಿಕೊಂಡಿರುವ ಎಲೆಕ್ಟ್ರಾನ್ ಜೋಡಿ ಆಕ್ಸಿಜನ್ನಿನ ಸಮೀಪ ಇರುವಂತೆ ಭಾವಿಸಬಹುದು. ಇದರಿಂದ ಎಲೆಕ್ಟ್ರಾನುಗಳ ಭಾಗಶಃ ವರ್ಗಾವಣೆಯಾಗಿದೆಯೆಂದು ಹೇಳಬಹುದು. ಎಲೆಕ್ಟ್ರಾನುಗಳನ್ನು ಕಳೆದುಕೊಳ್ಳುವ ಪರಮಾಣುಗಳು ಉತ್ಕರ್ಷಣೆ ಹೊಂದಿವೆಯೆಂದೂ ಎಲೆಕ್ಟ್ರಾನುಗಳನ್ನು ಪಡೆಯುವ ಪರಮಾಣುಗಳು ಅಪಕರ್ಷಣೆ ಹೊಂದಿವೆಯೆಂದೂ ಪರಿಗಣಿಸುವುದಿದೆ. ನಾರ್ವೇಯ ರಸಾಯನ ವಿಜ್ಞಾನಿ ಸಿ. ಎಮ್. ಗುಲ್ಬಿರ್ಗ್ ಮತ್ತು ಪಿ. ವಾಗೆ ಎಂಬವರು ರಾಸಾಯನಿಕ ಕ್ರಿಯೆಯ ವೇಗಕ್ಕೂ ಸಾರತೆಗೂ ಇರುವ ಸರಳ ಸಂಬಂಧವನ್ನು ಹೊರಗೆಡಹಿದರು (1863). ಇದಕ್ಕೆ ರಾಶಿಕ್ರಿಯೆ (ಮಾಸ್ ಆಕ್ಷನ್) ನಿಯಮ ಎಂದು ಹೆಸರು. ಈ ನಿಯಮದ ಅನುಸಾರ ಸಮರೂಪ ಕ್ರಿಯೆಗಳಲ್ಲಿ ವೇಗ ಪರಿವರ್ತಕಗಳ ಸಾರತೆಗೆ ಅನುಲೋಮವಾಗಿರುತ್ತದೆ. ಪರಿವರ್ತಕಗಳು ದ್ರಾವಣ ಇಲ್ಲವೆ ಅನಿಲರೂಪದಲ್ಲಿದ್ದರೆ ಪ್ರಬಲತೆಯನ್ನು ಮೋಲಾರ್ ಸಾರತೆಯಲ್ಲಿ ವ್ಯಕ್ತಪಡಿಸುವುದಿದೆ. ವಸ್ತುವಿನ ಮೋಲುಗಳ ಸಂಖ್ಯೆ ಮೋಲಾರ್ ಸಾರತೆ= ಮೋಲುಗಳು / ಲೀಟರ್ ಗಾತ್ರ (ಲೀಟರುಗಳಲ್ಲಿ)

					ವಸ್ತುವಿನ ಗ್ರಾಮ್ ತೂಕ

ಇಲ್ಲಿ ಮೋಲುಗಳ ಸಂಖ್ಯೆ = ಗ್ರಾಮ್ ಅಣುತೂಕ ರಾಸಾಯನಿಕ ಕ್ರಿಯೆಗಳ ವೇಗ ಈ ಮುಂದಿನ ಅಂಶಗಳನ್ನು ಅವಲಂಬಿಸಿರುತ್ತದೆ. 1 ವರ್ತಿಸುವ ವಸ್ತ್ತುಗಳ ಸಾರತೆ, 2 ವಸ್ತುಗಳ ಭೌತಸ್ಥಿತಿ, 3 ಉಷ್ಣತೆ ಮತ್ತು ಒತ್ತಡ, 4 ಬೆಳಕಿನ ಕಿರಣಗಳು, 5 ವೇಗವರ್ಧಕಗಳು. ಈ ಅಂಶಗಳ ಪ್ರಭಾವವನ್ನು ಪ್ರತಿಕ್ರಿಯಾ ಬಲಗತಿ ವಿಜ್ಞಾನ ಅರ್ಥಪೂರ್ಣವಾಗಿ ವಿವರಿಸುತ್ತದೆ. ಉಷ್ಣತೆ ಮತ್ತು ಕ್ರಿಯಾವೇಗ : ಸಾಮಾನ್ಯವಾಗಿ ಉಷ್ಣತೆಯನ್ನು ಹೆಚ್ಚಿಸಿದಂತೆಲ್ಲ ಕ್ರಿಯಾವೇಗವೂ ವರ್ಧಿಸುವುದು. ರಾಸಾಯನಿಕ ಕೈಗಾರಿಕೆಗಳಲ್ಲಿ ಹೆಚ್ಚಿನ ಉಷ್ಣತೆಯನ್ನು ಉಪಯೋಗಿಸುವ ಉದ್ದೇಶವೂ ಇದೇ ಆಗಿರುತ್ತದೆ. ನಿಯತ ಉಷ್ಣತೆಯಲ್ಲಿ ವೇಗ ( ಸಾರತೆ ವೇಗ = ಞ ಸಾರತೆ. ಇಲ್ಲಿ ಞ = ವೇಗಸ್ಥಿರಾಂಕ ವೇಗದಂತೆಯೇ ವೇಗಸ್ಥಿರಾಂಕವೂ ಉಷ್ಣತೆಯೊಂದಿಗೆ ವರ್ಧಿಸುತ್ತದೆ. ಉಷ್ಣತೆಯನ್ನು ಸುಮಾರು 100ಅ ಹೆಚ್ಚು ಮಾಡಿದರೆ, ಅನೇಕ ರಾಸಾಯನಿಕ ಕ್ರಿಯೆಗಳ ವೇಗ ಸ್ಥಿರಾಂಕ ಹೆಚ್ಚು ಕಡಿಮೆ ಇಮ್ಮಡಿಯಾಗುವುದು ಪ್ರಯೋಗಗಳಿಂದ ತಿಳಿದುಬಂದಿದೆ. 100ಅ ನಷ್ಟು ಅಂತರವಿರುವ ಉಷ್ಣತೆಗಳಲ್ಲಿ ನಿರ್ಧರಿಸಿದ ವೇಗ ಸ್ಥಿರಾಂಕಗಳ ಅನುಪಾತಕ್ಕೆ ಉಷ್ಣತೆಯ ಗುಣಾಂಕ (ಟೆಂಪರೆಚರ್ ಕೋಎಫಿಷೆಂಟ್) ಎಂದು ಹೆಸರು. ರಾಸಾಯನಿಕ ಕ್ರಿಯೆಗಳು ನಡೆಯುವಲ್ಲಿ ಅಣುಗಳ ಪಾತ್ರ, ವೇಗ ಮತ್ತು ಉಷ್ಣತೆಯೊಂದಿಗೆ ವೇಗ ವೃದ್ಧಿಯ ಅರ್ಥಪೂರ್ಣ ವಿವರಣೆ ಇತ್ಯಾದಿ ವಿವರಗಳಿಗೆ.

(ನೋಡಿ- ಅಣುಚಲನವಾದ,-ವಸ್ತುವಿನ)
(ನೋಡಿ- ಪ್ರತಿಕ್ರಿಯಾ-ಬಲಗತಿವಿಜ್ಞಾನ)
(ನೋಡಿ- ವೇಗವರ್ಧಕ)

ರಾಸಾಯನಿಕ ಕ್ರಿಯೆ ಮತ್ತು ಸಮತೋಲಸ್ಥಿತಿ : ರಾಸಾಯನಿಕ ಕ್ರಿಯೆಗಳಲ್ಲಿ ಪರಿವರ್ತಕದ ಪರಿಮಾಣ ಕಡಿಮೆಯಾದಂತೆ ಫಲಿತಗಳ ಪರಿಮಾಣ ವರ್ಧಿಸುತ್ತ ಹೋಗುತ್ತದೆ. ಸ್ವಲ್ಪ ಕಾಲಾನಂತರ ಪರಿವರ್ತಕ ಮತ್ತು ಫಲಿತಗಳ ಪರಸ್ಪರ ಪರಿಮಾಣ ಬದಲಾವಣಿಯಿಲ್ಲದೆ ನಿಯತವಾಗುತ್ತದೆ. ಹೀಗಾದಾಗ ಕ್ರಿಯೆ ನಿಂತು ಹೋಗಿದೆಯೆ ಎಂಬ ಅನುಮಾನ ತೋರುವುದು ಸಹಜ. ವ್ಯತ್ಯಾಸ ಕಾಣದಿರಲು ಮುಂದುವರಿಯುವ ಕ್ರಿಯೆ ಮತ್ತು ಹಿಮ್ಮರಳುವ ಕ್ರಿಯೆಗಳ ವೇಗ ಸಮವಾಗುವುದೇ ಕಾರಣ. ಕ್ರಿಯೆಯ ಈ ಹಂತಕ್ಕೆ ರಾಸಾಯನಿಕ ಸಮತೋಲಸ್ಥಿತಿ ಎಂದು ಹೆಸರು. ಯಾವುದೇ ಕ್ರಿಯೆಯ ಸಮತೋಲಸ್ಥಿತಿಯ ಸ್ಥಿರಾಂಕ ಞ ಯ ಮೌಲ್ಯ 1 ಕ್ಕಿಂತಲೂ ಹೆಚ್ಚಾಗಿದ್ದರೆ ಆ ಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂಬುದು ಅರ್ಥ. ಇಂಥಲ್ಲಿ ರಾಸಾಯನಿಕ ಕ್ರಿಯೆ ಎಡದಿಂದ ಬಲಕ್ಕೆ ಮುಂದುರಿಯುವುದು ಹೆಚ್ಚು ಸಂಭವನೀಯ. ರಾಸಾಯನಿಕ ಕ್ರಿಯೆಗಳಲ್ಲಿ ಉಷ್ಣ ಉದ್ಭವಿಸುವುದೂ ಉಂಟು. ಹೀರಿಕೆಯಾಗುವುದೂ ಉಂಟು. ಉಷ್ಣ ಉದ್ಭವಿಸಿದಾಗ, ಫಲಿತವಸ್ತುಗಳ ಶಕ್ತಿ ಪರಿವರ್ತಕಗಳ ಶಕ್ತಿಗಿಂತಲೂ ಕಡಿಮೆ ಎನ್ನುವುದು ಶಕ್ತಿ ಸಂರಕ್ಷಣಾ ನಿಯಮದಿಂದ ವೇದ್ಯ. ಹೀಗೆಯೇ, ಕ್ರಿಯೆಯಲ್ಲಿ ಉಷ್ಣ ಹೀರಲ್ಪಟ್ಟಾಗ ಫಲಿತಗಳ ಶಕ್ತಿ ಪರಿವರ್ತಕಗಳ ಶಕ್ತಿಗಿಂತಲೂ ಮಿಗಿಲಾಗಿರುತ್ತದೆ. ಶಕ್ತಿಯ ಬಿಡುಗಡೆ ಇಲ್ಲವೆ ಹೀರಿಕೆಯ ಆಧಾರದ ಮೇಲೆ ಮಾತ್ರ ಕ್ರಿಯೆಗಳ ಆಗು ಹೋಗುಗಳನ್ನು ಅರ್ಥಪೂರ್ಣವಾಗಿ ವಿವರಿಸುವುದು ಕಷ್ಟ. ಕ್ರಿಯೆ ನಡೆಯುವುದನ್ನು ಖಚಿತವಾಗಿ ಊಹಿಸಲು ಶಕ್ತಿ ಬದಲಾವಣೆಯೊಂದೇ ಸಾಲದು. ಕ್ರಿಯೆಯಲ್ಲಿ ಆಗುವ ಎಂಟ್ರೊಪಿ ಬದಲಾವಣೆಯ ಮೌಲ್ಯವೂ ತಿಳಿದಿರಬೇಕು. ಸಾಮಾನ್ಯವಾಗಿ ಕ್ರಿಯೆಗಳು ಕನಿಷ್ಠಶಕ್ತಿಯ ದಿಶೆಯಲ್ಲೇ ನಡೆಯುತ್ತವೆ. ಇದಲ್ಲದೇ ಭೌತ ಮತ್ತು ರಾಸಾಯನಿಕ ಬದಲಾವಣೆಗಳಲ್ಲಿ ಫಲಿತಗಳು ಪರಿವರ್ತಕಗಳಿಗಿಂತಲೂ ಅಧಿಕವಾಗಿ ಅವ್ಯವಸ್ಥೆಯಲ್ಲಿರುತ್ತವೆ. ಕ್ರಿಯೆಗಳ ಸಂಭಾವ್ಯತೆಯನ್ನು ಎರಡು ಗಣನೀಯ ಅಂಶಗಳು ನಿರ್ಧರಿಸುತ್ತದೆ; 1 ಕನಿಷ್ಠ ಶಕ್ತಿಗೆ ಒದಗುವ ಪ್ರವೃತ್ತಿ, 2 ಅಧಿಕ ಎಂಟ್ರೊಪಿಯನ್ನು ಹೊಂದುವ ಪ್ರವೃತ್ತಿ. ಕ್ರಿಯೆಯನ್ನೂ ಪ್ರೇರಿಸುವ ಶಕ್ತಿ ಈ ಎರಡು ಪ್ರವೃತ್ತಿಗಳ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ. ಶಕ್ತಿವ್ಯತ್ಯಾಸ ಮತ್ತು ಎಂಟ್ರೊಪಿಯ ಬದಲಾವಣೆಗಳ ನಿವ್ವಳ ವ್ಯತ್ಯಾಸವೇ ಕ್ರಿಯೆಯನ್ನು ಪ್ರೇರಿಸುವ ಶಕ್ತಿ. ಈ ವ್ಯತ್ಯಾಸಕ್ಕೆ ಮುಕ್ತ ಶಕ್ತಿ ಬದಲಾವಣೆ (ಫ್ರೀ ಎನರ್ಜಿ ಛೇಂಜ್) ಎಂದು ಹೆಸರು. ಸ್ವಯಂಪ್ರೇರಿತ ಕ್ರಿಯೆಗಳಿಗೆ ಮುಖ್ತಶಕ್ತಿ ವ್ಯತ್ಯಾಸ ಋಣಾತ್ಮಕವಾಗಿರುತ್ತದೆ. ವಸ್ತುವಿನ ಸ್ಥಿತಿಗಳಲ್ಲಿ ಅನಿಲಸ್ಥಿತಿ ಹೆಚ್ಚು ಸಂಭವನೀಯ. ಅನಂತರ ಅನುಕ್ರಮವಾಗಿ ದ್ರವಸ್ಥಿತಿ ಮತ್ತು ಘನಸ್ಥಿತಿಗಳು ಬರುತ್ತವೆ. ಅಂದರೆ, ಅನಿಲಗಳಿಗೆ ಗರಿಷ್ಠ ಎಂಟ್ರೊಪಿಯೂ ಘನಗಳಿಗೆ ಕನಿಷ್ಠ ಎಂಟ್ರೊಪಿಯೂ ಇರುತ್ತವೆ. ರಾಸಾಯನಿಕ ಕ್ರಿಯೆಯಲ್ಲಿ ಉತ್ಪನ್ನವಾದ ಫಲಿತಗಳಲ್ಲಿ ಅನಿಲವಿದ್ದು ಪರಿವರ್ತಕಗಳಲ್ಲಿ ಇಲ್ಲದಿದ್ದರೆ, ಫಲಿತಗಳ ಎಂಟ್ರೊಪಿ ಪರಿವರ್ತಕಗಳ ಎಂಟ್ರೊಪಿಗಿಂತಲೂ ಅಧಿಕವಾಗಿರುವ ಸಾಧ್ಯತೆ ಉಂಟು. ಎಂಟ್ರೊಪಿಯ ಬದಲಾವಣೆ ಅಂಥ ಕ್ರಿಯೆಗಳಿಗೆ ಉತ್ತೇಜನ ಕೊಡುತ್ತದೆ. (ಎಂ.ಎ.ಎಸ್.ಆರ್.; ಎಚ್.ಜಿ.ಎಸ್.) ಉಪಕರಣಗಳು ರಸಾಯನವಿಜ್ಞಾನ ವಿವಿಧ ವಸ್ತುಗಳ ಗುಣ, ರಚನೆ ವಿಶ್ಲೇಷಣೆ, ಸಂಶ್ಲೇಷಣೆ ಇವುಗಳ ಅಧ್ಯಯನವಾಗಿರುವುದರಿಂದ ಅವುಗಳ ಪರಿಶೀಲನೆಗೆ ವಿಶಿಷ್ಟ ರೀತಿಯ ಉಪಕರಣಗಳು ಆವಶ್ಯಕ. ವಸ್ತುಗಳನ್ನು ಕಾಸುವುದು, ಶೈತ್ಯಗೊಳಿಸುವುದು, ವಿಲೀನಗೊಳಿಸುವುದು, ಶೋಧಿಸುವುದು, ಬಟ್ಟಿ ಇಳಿಸುವುದು, ಒತ್ತರಿಸುವುದು, ಉತ್ಪಾದಿಸುವುದು, ಪರಸ್ಪರ ವರ್ತನೆಗೆ ಈಡುಮಾಡುವುದು, ಮಿಶ್ರಣದಿಂದ ಅಂಗ ವಸ್ತುಗಳನ್ನು ಬೇರ್ಪಡಿಸುವುದು, ಸಂಶ್ಲೇಷಿಸುವುದು ಮತ್ತು ವಿಶ್ಲೇಷಿಸುವುದು ಮುಂತಾದವೆಲ್ಲ ರಾಸಾಯನಿಕ ಪ್ರಯೋಗಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳು. ಬಹುತೇಕ ರಾಸಾಯನಿಕ ವಸ್ತುಗಳು ಸಾಮಾನ್ಯ ಲೋಹಗಳ ಮೇಲೆ ವರ್ತಿಸುವುವು. ಅಲ್ಲದೆ ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುವಾಗಲೇ ಆ ಕ್ರಿಯೆಯ ವೀಕ್ಷಣೆ ಅನೇಕ ವೇಳೆ ಅಗತ್ಯವೆನಿಸುವುದು ಕೂಡ. ಈ ಕಾರಣಗಳಿಗಾಗಿ ರಾಸಾಯನಿಕ ವಸ್ತುಗಳನ್ನು ಶೇಖರಿಸಲು ಮತ್ತು ಪ್ರಯೋಗಗಳಿಗಾಗಿ ಬಳಸಲು ಸಾಮಾನ್ಯವಾಗಿ ಗಾಜಿನ ಉಪಕರಣಗಳನ್ನೇ ವಿಶೇಷವಾಗಿ ಬಳಸುವುದಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಅಧಿಕ ಉಷ್ಣತೆಗೆ ವಸ್ತುಗಳನ್ನು ಕಾಸಬೇಕಾದಾಗ ಪಿಂಗಾಣಿ, ನಿಕ್ಕಲ್, ಬೆಳ್ಳಿ, ಪ್ಲಾಟಿನಮ್ ಮುಂತಾದ ವಸ್ತುಗಳಿಂದ ತಯಾರಿಸಿದ ಉಪಕರಣಗಳು ಯೋಗ್ಯವೆನಿಸುತ್ತವೆ. ಅಲಿಕೆ, ಕ್ಷಾಳಕ, ಸೀಸೆಗಳು ಮುಂತಾದ ಗಾಜಿನ ಉಪಕರಣಗಳಿಗೆ ಬದಲಾಗಿ ಪಾರಕ ಪ್ಲಾಸ್ಟಿಕ್‍ನಿಂದ ತಯಾರಾದ ಅಂಥ ಉಪಕರಣಗಳನ್ನು ಬಳಸುವುದು ಉಂಟು. ಉಪಕರಣಗಳನ್ನು ಇಡಲು ವಿವಿಧ ನಿಲುವುಗಳು, ರಾಸಾಯನಿಕವಸ್ತುಗಳನ್ನು ಕಾಸಲು ವಿವಿಧ ರೀತಿಯ ಜ್ವಾಲಕಗಳು, ವಸ್ತುಗಳನ್ನು ಅರೆಯಲು ಇಲ್ಲವೆ ಪುಡಿ ಮಾಡಲು ಕಲ್ಬತ್ತುಗಳು, ಅಲ್ಪಪ್ರಮಾಣದ , ಪುಡಿರೂಪದ ರಾಸಾಯನಿಕ ವಸ್ತುಗಳನ್ನು ತೆಗೆಯುವುದಕ್ಕೆ ಬಳಸುವ ಚಮಚ, ಸ್ಪ್ಯಾಚುಲ ಇತ್ಯಾದಿಗಳು, ಪಿಂಚ್ - ಕಾಕ್‍ಗಳು, ರಬ್ಬರ್ ಮತ್ತು ಕಾರ್ಕ್‍ಬಿರಡೆಗಳ ರಂಧ್ರಕಾರಕಗಳು ಮುಂತಾದವುಗಳಲ್ಲಿ ಕೆಲವನ್ನು ಕಬ್ಬಿಣದಿಂದಲೂ ಕೆಲವನ್ನು ಮರದಿಂದಲೂ ಕೆಲವನ್ನು ಪಿಂಗಾಣಿಯಿಂದಲೂ ಇನ್ನು ಕೆಲವನ್ನು ನಿಕ್ಕಲ್ ಇತ್ಯಾದಿಗಳಿಂದಲೂ ತಯಾರಿಸಿರುತ್ತಾರೆ. ಇವನ್ನು ರಸಾಯನ ವಿಜ್ಞಾನದ ಯಾಂತ್ರಿಕಾಂಶ (ಹಾರ್ಡ್‍ವೇರ್) ಎನ್ನುತ್ತಾರೆ. ಅನೇಕ ವೇಳೆ ಗಾಜಿನ ಬೇರೆ ಬೇರೆ ಉಪಕರಣಗಳನ್ನು ಒಂದರೊಡನೊಂದನ್ನು ಜೋಡಿಸಬೇಕಾಗುವುದು. ಇಂಥ ಸಂದರ್ಭಗಳಲ್ಲಿ, ಕಾರ್ಕಿನ ಇಲ್ಲವೆ ರಬ್ಬರಿನ ಬಿರಡೆಗಳನ್ನು (ಕೆಲವೊಮ್ಮೆ ಕಲ್ನಾರಿನ ಬಿರಡೆಯನ್ನು), ರಬ್ಬರ್ ಅಥವಾ ಪ್ಲಾಸ್ಟಿಕ್ಕಿನ ನಾಳಗಳನ್ನು ಬಳಸುವರು. ಬೇರೆ ಬೇರೆ ಗಾಜಿನ ಉಪಕರಣಗಳನ್ನು, ರಬ್ಬರ್ ಕಾರ್ಕ್ ಮತ್ತು ರಬ್ಬರ್ ನಾಳಗಳಿಂದ ಒಂದುಗೂಡಿಸುವ ಬದಲಿಗೆ ಜೊತೆಗೂಡಿಸಬೇಕಾದ ಬೇರೆ ಬೇರೆ ಉಪಕರಣದ ಭಾಗಗಳು. ಒಂದರೊಡನೊಂದು ಅನ್ಯೋನ್ಯವಾಗಿ ಜೋಡಿಸುವ ಕೂಡುಜಾಗಗಳುಳ್ಳ (ಜಾಯಿಂಟ್ಸ್) ಉಪಕರಣಗಳು ಮುಂತಾದವುಗಳ ತಯಾರಿ ಕೂಡ ನಡೆದಿದೆ. ಈ ಉಪಕರಣಗಳು ಮುಖ್ಯವಾಗಿ ವಸ್ತುಗಳ ಗುಣಾತ್ಮಕ ಪರಿಶೀಲನೆಗೆ ಸಂಬಂಧಿಸಿದವು ; ವಸ್ತುಗಳು ಪರಸ್ಪರ ವರ್ತಿಸುವ ಪ್ರಮಾಣ, ಅವುಗಳ ರಚನೆಯ ನಿರ್ಣಯ, ಪರಿಮಾಣಾತ್ಮಕವಾಗಿ ಅವುಗಳ ಗುಣಗಳ ನಿರ್ಧಾರ ಮುಂತಾದ ಪರಿಮಾಣಾತ್ಮಕ ವ್ಯಾಸಂಗಗಳಲ್ಲಿ ವಿಶಿಷ್ಟ ರೀತಿಯ ಉಪಕರಣಗಳು ಅವಶ್ಯ. ಈ ಉಪಕರಣಗಳ ಸ್ವರೂಪವನ್ನು ಪ್ರಯೋಗಕರ್ತ ನಿರ್ಣಯಿಸಬೇಕಾಗಿರುವ ಪರಿಮಾಣದ ಸ್ವಭಾವವನ್ನು ಅವಲಂಬಿಸಿರುವುದು. ಉದಾಹರಣೆಗೆ ವಸ್ತುವಿನ ತೂಕವನ್ನು ನಿಖರತೆಯಿಂದ ನಿರ್ಣಯಿಸಲು, ಸೂಕ್ಷ್ಮತಕ್ಕಡಿ ಅವಶ್ಯ. ಗಾತ್ರ ನಿರ್ಣಯಕ್ಕೆ ಬ್ಯುರೆಟ್, ಪಿಪೆಟ್, ಅಳತೆಯ ಜಾಡಿ, ಅಳತೆಯ ಫ್ಲಾಸ್ಕ್ ಇತ್ಯಾದಿಗಳು ಉಪಯೋಗಕ್ಕೆ ಬರುತ್ತವೆ. ಉಷ್ಣತೆಯನ್ನು ಅಳೆಯಲು ಯುಕ್ತ ಪರಿಮಿತಿ ಮತ್ತು ಅಧಿಕ ಸೂಕ್ಷ್ಮತೆಯುಳ್ಳ ಉಷ್ನತಾಮಾಪಕ ಬಳಕೆಯಲ್ಲಿ ಉಂಟು. ಅನಿಲಗಳ ಒತ್ತಡ ನಿರ್ಣಯಕ್ಕೆ ಭಾರಮಾಪಕ (ಮಾನೊಮೀಟರ್) ಬಳಕೆಯಾಗುತ್ತದೆ. ವಿವಿಧ ಬಗೆಯ ವಿದ್ಯುದ್ವಿಧಾನಗಳು ಮತ್ತು ದ್ಯುತಿ (ಆಪ್ಟಿಕಲ್) ವಿಧಾನಗಳು ರಾಸಾಯನಿಕ ಪರಿಮಾಣಾತ್ಮಕ ಪ್ರಯೋಗಗಳಲ್ಲಿ ಪ್ರಮುಖ ಪಾತ್ರ ಹೊಂದಿವೆ. ದ್ರವವಸ್ತುಗಳ ಆಮ್ಲೀಯತೆ (Pಊ) ನಿರ್ಣಯ, ವಿದ್ಯುದ್ವಿಷ್ಲೇಷ್ಯಗಳ ವಿದ್ಯುದ್ವಾಹಕತ್ವ, ಸೂಚಕಗಳನ್ನು (ಇಂಡಿಕೇಟರ್ಸ್) ಉಪಯೋಗಿಸಿ ಅನುಮಾಪಿಸುವುದು (ಟೈಟ್ರೇಷನ್) ಇತ್ಯಾದಿಗಳು ಅಸಾಧ್ಯವಾದಾಗ ವಾಹಕತ್ವ ಅಥವಾ ಪೊಟೆನ್ಷಿಯಾಮೆಟ್ರಿಕ್ ವಿಧಾನಗಳಿಂದ ಅನುಮಾಪನ, ವಸ್ತುಗಳ ವಿಶ್ಲೇಷಣದಲ್ಲಿ ಪೊಲೊರೊಗ್ರಫಿ ಇತ್ಯಾದಿಗಳ ಬಳಕೆ ರಾಸಾಯನಿಕ ಪ್ರಯೋಗಶಾಲೆಗಳಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ದ್ಯುತಿವಿಧಾನಗಳ ಪೈಕಿ ರೋಹಿತಮಾಪನೆಯ (ಸ್ಪೆಕ್ಟ್ರೋಮೆಟ್ರಿ) ವಿಧಾನದಿಂದ ಅಂದರೆ ವಸ್ತುಗಳ ಉತ್ಸರ್ಜನೆ ಅಥವಾ ಅವಶೋಷಣೆಗೆ ಸಂಬಂಧಿಸಿದ ರೋಹಿತಮಾಪನಾಧ್ಯಯನದಿಂದ ವಸ್ತುಗಳ ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಶ್ಲೇಷಣೆಗಳು ನಡೆಯುತ್ತವೆ. ಇದಲ್ಲದೆ ವಸ್ತುಗಳ ರಿಫ್ರೇಕ್ಷಣಾಂಕ ನಿರ್ಣಯ ವಸ್ತುಗಳು ಉಂಟುಮಾಡುವ ಧ್ರುವೀಕರಣ ಪ್ರಮಾಣಗಳು ವಸ್ತುಗಳ ಸ್ವರೂಪವನ್ನು ತಿಳಿಯಲು ಸಹಾಯಮಾಡುವ ಇನ್ನೆರಡು ದ್ಯುತಿ ವಿಧಾನಗಳು, ಸ್ನಿಗ್ಧತೆಯ ಅಂಕ, ಮೇಲ್ಮೈಕರ್ಷಣದ ಪ್ರಮಾಣ, ಮೋಲಾರ್-ಗಾತ್ರ ನಿರ್ಣಯ ಮುಂತಾದವುಗಳು ವಸ್ತುಗಳ ರಚನ ವೈಶಿಷ್ಟ್ಯವನ್ನು ನಿರ್ಣಯಿಸಲು ಯಕ್ತವೆನಿಸುತ್ತವೆ. ಇವಲ್ಲದೆ ನ್ಯೂಕ್ಲಿಯರ್ ರಸಾಯನವಿಜ್ಞಾನದಲ್ಲಿ ವಿವಿಧ ಬಗೆಯ ವಿಶೇಷಸಾಧನಗಳ ಬಳಕೆ ಇದೆ. ಇವುಗಳ ಪೈಕಿ ಗೋಲ್ಡ್ ಲೀಫ್ ಇಲೆಕ್ಟೋ ಸ್ಕೋಫ್, ಗೈಗರ್ ಮುಲ್ಲರ್ ಗುಣಕ, ಸಿಂತಾರಿಸ್ಕೋಫ್ ಫೋಟೋಗ್ರಾಫಿಕ್ ವಿಧಾನಗಳು, ಮಾಸ್ ಸ್ರೆಕ್ಟೋಗ್ರಾಫ್‍ಗಳು, ಸೈಕ್ಲೋಟ್ರೌನ್, ಸಿಂಕ್ರೋಟ್ರಾನ್ ಮುಂತಾದ ಲಘು ಅಯಾನುಗಳ ವೇಗೋತ್ಕರ್ಷಕ ಸಾಧನಗಳು ಪ್ರಮುಖವಾಗಿವೆ.

ಆರ್ಗ್ಯಾನಿಕ್ ರಸಾಯನವಿಜ್ಞಾನದ ಪ್ರಯೋಗಗಳಲ್ಲಿ ಕೆಲವೊಂದು ವಿಶಿಷ್ಟರೀತಿಯ ಸಾಧನಗಳೂ ಬಳಕೆಯಗುತ್ತವೆ. ಅರ್ಗ್ಯಾನಿಕ್ ಸಂಯುಕ್ತಗಳ ರಚನೆಯ ನಿರ್ಣಯದಲ್ಲಿ ದಹನಗಳಿಕೆ ಅತ್ಯಾಜ್ಯ ಉಪಕರಣ, ಸ್ವಾಭಾವಿಕವಸ್ತುಗಳಿಂದ ಆರ್ಗ್ಯಾನಿಕ್ ಸಂಯುಕ್ತಗಳನ್ನು ಯುಕ್ತ ದ್ರಾವಕದಲ್ಲಿ ವಿಲೀನಗೊಳಿಸಿ ಸಾರೀಕರಿಸಲು ಸಾರೀಕರಣ ಉಪಕರಣಗಳನ್ನು ಬಟ್ಟಿ ಇಳಿಸುವುದು ಅವಶ್ಯ. ಇದಕ್ಕಾಗಿ ವಿಶೇಷ ರೀತಿಯ ಉಪಕರಣ ಇದೆ.

ಅನಿಲಗಳ ಪರಿಮಾಣಾತ್ಮಕ ವಿಶ್ಲೇಷಣ ವಿಧಾನಗಳಲ್ಲಿ ಅನೇಕ ಹೊಸ ವಿಧಾನಗಳು ಆಚರಣೆಗೆ ಬಂದಿವೆ. ಉದಾಹರಣೆಗೆ ಉಷ್ಣಮಾಪನ (ಕೆಲರೊಮೆಟ್ರಿ) ಮತ್ತು ಕ್ರೊಮಟೊಗ್ರಫಿಗಳು ಇಂಥ ಎರಡು ವಿಧಾನಗಳು ಕೆಲರೊಮೆಟ್ರಿಯನ್ನು ಬಣ್ಣವುಳ್ಳ ವಸ್ತುಗಳ ಪರಮಾಣಾತ್ಮಕ ವಿಶ್ಲೇಷಣೆಗಳಲ್ಲಿ ಬಳಸುವರು ಅವಿದಿತಪ್ರಮಾಣ ವಸ್ತು ವಿಲೀನವಾಗಿರುವ ದ್ರಾವಣದ ಬಣ್ಣವನ್ನು ಅವೇ ವಸ್ತು ವಿದಿತಪ್ರಮಾಣಗಳಲ್ಲಿ ವಿಲೀನವಾಗಿರುವ ಬೇರೆ ಬೇರೆ ಪ್ರಬಲತೆಯ ದ್ರಾವಣಗಳ ಬಣ್ಣಗಳೊಡನೆ ಹೋಲಿಸಿ ಬಣ್ಣದ ಲೀನತೆಯ ಪ್ರಮಾಣ ನಿರ್ಣಯಮಾಡುವರು. ಕ್ರೊಮೊಟೋಗ್ರಫಿಯನ್ನು ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಶ್ಲೇಷಣಗಳೆರಡಕ್ಕೂ ಬಳಸುವುದಿದೆ. ವಸ್ತುಗಳಲ್ಲಿ ವಿಲೀನವಾಗಿರುವ ದ್ರಾವಣದಿಂದ ಅಂಗವಸ್ತುಗಳನ್ನು ಒಂದು ಆಯ್ಕೆಯ ಕ್ರಮದಲ್ಲಿ ಅವಶೋಷಿಸುವುವು. ಈ ವಿಧಾನವನ್ನು ಅನಿಲಗಳ ವಿಶ್ಲೇಷಣದಲ್ಲಿ ಬಳಸುತ್ತಾರೆ. ಇಂಥಲ್ಲೆಲ್ಲ ವಿಶೇಷ ರೀತಿಯ ಸಾಧನ ಸಲಕರಣೆಗಳು ಅವಶ್ಯ.

   ಕಬ್ಬಿಣ, ಮರ, ಪಂಗಾಣಿ, ಇತ್ಯಾದಿಗಳಿಂದ ಮಾಡಿದ ಉಪಕರಣಗಳು:

1 ಸ್ಟ್ಯಾಚುಲ ಮತ್ತು ಚಮಚಗಳು : ಅಲ್ಪಪ್ರಮಾಣ ರಾಸಾಯನಿಕ ವಸ್ತುಗಳನ್ನು ಕೈಯಲ್ಲಿ ಮುಟ್ಟದೆ ತೆಗೆಯಲು ಇವನ್ನು ಉಪಯೋಗಿಸುವರು. ಇವನ್ನು ಪಿಂಗಾಣಿ, ತುಕ್ಕು ಹಿಡಿಯದ ಉಕ್ಕು, ನಿಕ್ಕಲ್ ಅಥವಾ ರಾಸಾಯನಿಕ ವರ್ತನೆಯನ್ನು ವಿರೊಧಿಸುವ ಬೇರೊಂದು ವಸ್ತುವಿನಿಂದ ಮಾಡಿರುವರು. 2 ಒತ್ತು ಮುಚ್ಚೆ (ಪಿಂಚ್ ಕಾಕ್) : ಇವುಗಳಲ್ಲಿ ಎರಡು ವಿಧಗಳಿವೆ. ಮೋಹರ್ ಮಾದರಿಯದು. ಇದು ಸ್ಪ್ರಿಂಗ್ ಸಹಾದಿಂದ ಕೆಲಸ ಮಾಡುವುದು : ಹಾಫ್ ಮನ್ ಮಾದರಿಯದು. ಇದು ಸ್ಕ್ರೂ ಮೂಲಕ ಕೆಲಸ ಮಾಡುತ್ತದೆ. 3 ಜ್ವಾಲಕಗಳು (ಬರ್ನರ್ಸ್) (ಎ) ಬುನ್‍ಸನ್ ಜ್ವಾಲಕ. ಇದರಲ್ಲಿ ದಹ್ಯಾನಿಲದ ಮತ್ತು ವಾಯುವಿನ ಪ್ರವಾಹವನ್ನು ನಿಯಂತ್ರಿಸುವ ಅನುಕೂಲವಿದೆ. (ಬಿ) ಮೆಕರ್ ಜ್ವಾಲಕ್ ಇದು ಉಜ್ಜ್ವಲಜ್ವಾಲೆಯನ್ನು ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಉಂಟುಮಾಡುವುದು (ಸಿ) ಮತ್ಸ್ಯಪುಚ್ಚಜ್ವಾಲಕ. ಇದರಲ್ಲಿ ಉಂಟಾಗುವ ಜ್ವಾಲೆ ಮೀನಿನ ರೆಕ್ಕೆಯಂತೆ ಇರುತ್ತದೆ. ಗಾಜಿನ ನಾಳಗಳನ್ನು ಹೆಚ್ಚು ಉದ್ದಕ್ಕೆ ಕಾಸಿ ಬಗ್ಗಿಸಲು ಇದು ಕೆಲಸಕ್ಕೆ ಬರುತ್ತದೆ. (ಡಿ) ಊದುದೀಪ (ಬ್ಲೋಪೈಪ್). ಇವರಲ್ಲಿ ಕೊಳವೆಯ ಮೂಲಕ ದಹ್ಯಾನಿಲವನ್ನು ಇನ್ನೊಂದರ ಮೂಲಕ ಅಕ್ಸಿಜನ್ನನ್ನೂ ಹಾಯಿಸಿ ನಿಯಂತ್ರಿಸುವ ಏರ್ಪಾಟು ಇರುತ್ತದೆ. (ಇ) ಬಾಯಿ ಊದುಗೊಳವೆ-ಇದು ನಿಕ್ಕಲ್ ಅಥವಾ ತುಕ್ಕು ಹಿಡಯದ ಉಕ್ಕಿನಿಂದ ರಚಿತವಾಗಿದೆ. ಇದರ ಸಹಾಯದಿಂದ ಜ್ವಾಲೆಯ ಒಂದು ಭಾಗವನ್ನು ಊದಿ ಅದು ಅಪೇಕ್ಷಿತ ವಸ್ತುವಿನ ಮೇಲೆ ಬೀಳುವಂತೆ ಮಾಡಬಹುದು. 4 ಜಲಶಾಖ ಪಾತ್ರೆ : ಇದು ಬಟ್ಟಿಲಿನಾಕಾರದ ಒಂದು ಪಾತ್ರೆ ಇದರ ಮೇಲ್ಭಾಗ ಕಿರಿದಾಗುತ್ತ ಹೋಗುವ ಚಪ್ಪಟ್ಟೆಯಾದ, ಒಂದರ ಮೇಲೊಂದು ಕೂರುವ ತಾಮ್ರದ ಉಂಗುರಗಳಿಂದ ಮುಚ್ಚಲ್ಪಟ್ಟರುವುದು. ಅವಶ್ಯಕವಾದಷ್ಟು ಉಂಗುರವನ್ನು ತೆಗೆದು ಇದರ ಮೇಲೆ ಬೇರೆ ಬೇರೆ ಗಾತ್ರದ ಬಟ್ಟಲುಗಳು ಫ್ಲಾಸ್ಕುಗಳು ಇತ್ಯಾದಿಗಳನ್ನು ಇಡಬಹದು. ಪಾತ್ರೆಗೆ ನೀರು ಹಾಕಿ ಕಾಸಿದರೆ, ಬಟ್ಟಲಿನಲ್ಲಿ ಇಟ್ಟಿರುವ ದ್ರವ ನಿಧಾನವಾಗಿ ಇಂಗುವುದು. ಅನೇಕ ವೇಳೆ ಪಾತ್ರೆಯಲ್ಲಿ ನೀರಿನಮಟ್ಟ ಒಂದೇ ಸಮನಾಗಿರುವಂತೆ ಮಡುವ ಸಾಧನವೊಂದು ಈ ಪಾತ್ರೆಗೆ ಜೋಡಣೆಗೊಂಡಿರುತ್ತದೆ. 5 ನಿಲುವುಗಳು : ಇವುಗಳಲ್ಲಿ ಅನೇಕ ವಿಧಗಳಿವೆ. ರಿಟಾರ್ಟ್ ನಿಲುವು ಅಯಾತಾಕಾರದ ದಪ್ಪನೆಯ ಕಬ್ಬಿಣದ ತಳಕ್ಕೆ ಸ್ಕ್ರೂ ಮಾಡಬಹುದು. ಬಾಸ್‍ಹೆಡ್‍ನ ಮೂಲಕ ಕ್ಲಾಂಪುಗಳನ್ನು ಜೋಡಿಸಬಹುದು. ಈ ಕ್ಲಾಂಪುಗಳ ಸಹಾಯದಿಂದ ಪ್ರನಾಳಗಳು, ಗಾಜಿನ ನಾಳಗಳು, ರಿಟಾರ್ಟ್‍ನ ಕತ್ತು ಮುಂತಾದುವನ್ನು ಭದ್ರವಾಗಿ ಜೋಡಿಸಬಹುದು. ಇದಲ್ಲದೆ ಕಬ್ಬಿಣದ ಮೂರುಕಾಲಿನ ನಿಲುವುಗಳನ್ನು ಬೀಕರ್ ಫ್ಲಾಸ್ಕ್ ಪಿಂಗಾಣಿ ಬಟ್ಟಲು ಮುಂತಾದವನ್ನು ಇಟ್ಟು ಕಾಸಲು ಬಳಸುತ್ತಾರೆ. ಅನುಮಾಪನ ಮಾಡುವಾಗ ಬ್ಯುರೆಟ್‍ಗಳನ್ನು ಲಂಬವಾಗಿ ಅಲುಗಾಡದಂತೆ ಜೋಡಿಸಲು ಮರದಿಂದ ಮಾಡಿದ ಬ್ಯುರೆಟ್‍ನಿಲುವುಗಳನ್ನು ಉಪಯೋಗಿಸುವರು. ಇವು ಕೂಡ ಕಬ್ಬಿಣದ ರಿಟಾರ್ಟಿಗೆ ಸದೃಶವಾಗಿದ್ದು ಮರದ ಕ್ಲಾಂಪಿನಿಂದ ಸಜ್ಜಿತವಾಗಿರುವುವು.

6 ಪ್ರನಾಳಗಳ ಮತ್ತು ಆಲಿಕೆಗಳ ನಿಲುವುಗಳು : 5-6  ಪ್ರನಾಳಗಳನ್ನು ನೆಟ್ಟಗೆ ಇಡಲು ಮತ್ತು 5-6 ಪ್ರನಾಳಗಳನ್ನು ಬೋರಲಾಗಿಡಲು ಸುಸಜ್ಜಿತವಾದ ಮರದ ನಿಲುವು ಬಳಕೆಯಲ್ಲಿ ಇದೆ. ಆಲಿಕೆಗಳ ನಿಲುವುಗಳಲ್ಲಿ. ಆಲಿಕೆಗಳನ್ನಿಡಲು ತಕ್ಕುದಾದ ಒಂದು ಮರದ ಉಂಗುರವಿದ್ದು ಮರದ ಮೇಲಿನ ಇದರ ಎತ್ತರವನ್ನು ಮರದ ಸ್ಕ್ರೂ ಸಹಾಯದಿಂದ ವ್ಯತ್ಯಾಸಮಾಡಿ ಜೊಡಿಸಬಹುದು. ಪಿಪೆಟ್ ನಿಲುವು ಪಿಪೆಟ್ಟುಗಳನ್ನು ಇಡಲು ಇವು ಅನುಕೂಲವಾಗಿರುವುವು.

7 ಕಲ್ಬತು ಮತ್ತು ಕುಟ್ಟಣೆ : ಇವು ಕಬ್ಬಿಣ ಪಿಂಗಾಣಿ ಗಾಜು ಅಥವಾ ಅಗೇಟ್ ಶಿಲೆಯಿಂದ ರಚಿತವಾಗಿರುವುದು ಕಬ್ಬಿಣದ್ದನ್ನು ದಪ್ಪಚೂರುಗಳಾಗಿ ಮಾಡಲೂ ಪಿಂಗಾಣಿಯದನ್ನು ಸಣ್ಣಗೆ ಹುಡಿಮಾಡಲೂ ಅಗೇಟಿನದನ್ನು ಸೂಕ್ಷ್ಮವಾಗಿ ಹುಡಿಮಾಡಲು ಉಪಯೋಗಿಸುವುದಿದೆ. 8 ಇಕ್ಕಳ : ಇದನ್ನು ಮೂಸೆ, ಬಟ್ಟಲು, ಇತ್ಯಾದಿ ಉಪಕರಣಗಳನ್ನು ಎತ್ತಿ ಹಿಡಿದು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಲು ಉಪಯೋಗಿಸುವರು. 9 ಮಣ್ಣಿನ ಕೊಳವಿಯ ತ್ರಿಭುಜಗಳು : ಮೂರುಕಾಲಿನ ನಿಲುವು ಅಥವಾ ಕಬ್ಬಿಣದ ಉಂಗುರದ ಮೇಲೆ ಮೂಸೆಗಳನ್ನಿಡಲು ಆಧಾರವಾಗಿ ಇದರ ಬಳಕೆ ಇದೆ. 10 ಕಲ್ನಾರು ಹಲಗೆ ಮತ್ತು ಕಲ್ನಾರಿನ ತಂತಿಬಲೆ : ಮೂರುಕಾಲಿನ ನಿಲುವುಗಳ ಮೇಲೆ ಅಥವಾ ಕಬ್ಬಿಣದ ಉಂಗುರಗಳ ಮೇಲೆ, ಫ್ಲಾಸ್ಕ್, ಬೀಕರ್ ಇತ್ಯಾದಿಗಳನ್ನಿಟ್ಟು ಕಾಸಬೇಕಾದಾಗ ಕಲ್ನಾರು ಹಲಗೆ ಅಥವಾ ತಂತಿಬಲೆಯನ್ನು ಆಧಾರವಾಗಿ ಉಪಯೊಗಿಸುವರು. 11 ಹಬೆ ಮತ್ತು ವಾಯುಒಲೆಗಳು : ಇವು ತಾಮ್ರದ ತಗಡಿನಿಂದ ಮಾಡಿದ ಆಯಾಕಾರದ ಪೆಟ್ಟಿಗೆಗಳು, ಹಬೆ ಒಲೆಯ ಪಾಶ್ರ್ವಗಳು ಎರಡು ತಗಡುಗಳಿಂದ ರಚಿತವಾಗಿರುತ್ತವೆ. ಇವುಗಳ ನಡುವಿನ ಅವಕಾಶದಲ್ಲಿ ನೀರನ್ನು ಹಾಕಿ ತಗಡುಗಳಿಂದ ಈ ಪೆಟ್ಟಿಗೆಯೊಳಗಿನ ಅರೆಗಳ ಮೇಲೆ ಇಡುವರು. ಇದರ ಉಷ್ಣತೆಯು ಹಬೆಯ ಉಷ್ಣತೆಗಿಂತಲೂ ಹೆಚ್ಚಾಗುವುದಿಲ್ಲ. ವಾಯುಒಲೆ ಒಂದೇ ತಗಡಿನಿಂದ ರಚಿತವಾಗಿದ್ದು, ಇದನ್ನು 1000ಅ ಗಿಂತಲೂ ಹೆಚ್ಚಿನ ಉಷ್ಣತೆಗೆ ಕಾಸಲು ಉಪಯೋಗಿಸುವರು. ಇದು ಕೂಡ ಹಬ್ಬೆಲೆಯ ಮಾದರಿಯಲ್ಲಿ ಇದೆ. 12 ಮೂಸೆಗಳು, ಬಟ್ಟಲುಗಳು, ಬುಕ್‍ನರ್ ಆಲಿಕೆಗಳು, ಶೋಧಕಫಲಕಗಳು, ಇತ್ಯಾದಿ: ಇವು ಸಾಮಾನ್ಯವಾಗಿ ಪಿಂಗಾಣಿಯಿಂದ ಆಗಿರುವಂಥವು ಕೆಲವು ವೇಳೆ ಕಬ್ಬಿಣ ನಿಕ್ಕಲ್ ಪ್ಲಾಟಿನಮ್, ಬೆಳ್ಳಿ ಉಷ್ಣನಿರೋಧಕ ಮಣ್ಣು ಇವುಗಳಿಂದಲೂ ಮೂಸೆಯನ್ನು ರಚಿಸುವುದುಂಟು. ಪ್ಲಾಟಿನಮ್ ಬಟ್ಟಲುಗಳ ಉಪಯೋಗ ಕೂಡ ಅನೇಕ ವೇಳೆ ಆಗುವುದು. ಪಿಂಗಾಣಿ ಮೂಸೆ, ಬಟ್ಟಲು ಬುಕ್‍ನರ್ ಆಲಿಕೆ ಇವುಗಳಿಗೆ ಎರಡು ಪಾಶ್ರ್ವಗಳಲ್ಲಿಯೂ ಹೊಳಪುಕೊಟ್ಟಿರುವರು. ಶೋಧಕಫಲಕಗಳಿಗೆ ಹೊಳಪು ಇರುವುದಿಲ್ಲ. ಕೆಲವೊಮ್ಮೆ ಪಿಂಗಾಣಿ ಬಟ್ಟಲುಗಳ ಒಳಮಯ್ಯಿಗೂ ಹೊಳಪು ಇರುವುದಿಲ್ಲ. 13 ತಕ್ಕಡಿಗಳು : ಪ್ರಯೋಗಶಾಲೆಯಲ್ಲಿ ವಿವಿಧ ಸೂಕ್ಷ್ಮತೆಯ ತಕ್ಕಡಿಗಳು ಅವಶ್ಯ. ಅಧಿಕಪ್ರಮಾಣದಲ್ಲಿ ತೂಗಲು ಸ್ಥೂಲತಕ್ಕಡಿಗಳನ್ನು ಇವನ್ನು ಉಪಯೋಗಿಸುವರು. ಇದಕ್ಕಿಂತ ಹೆಚ್ಚಿನ ನಿಖರತೆ ಅವಶ್ಯವಾದಾಗ, ಮೂರು ತೂಗು ದಂಡಗಳ ತಕ್ಕಡಿಯನ್ನು (ಟ್ರಪ್ಲ್ ಬೀಮ್ ಬ್ಯಾಲೆನ್ಸ್) ಉಪಯೋಗಿಸುವುದುಂಟು. ಸಾಮನ್ಯ ಪರಿಮಾಣಾತ್ಮಕ ಪ್ರಯೋಗಗಳಲ್ಲಿ ಅತ್ಯಂತ ನಿಖರತೆ ಅವಶ್ಯವಾದಾಗ ಮೈಕೊ ತಕ್ಕಡಿಯನ್ನು ಉಪಯೋಗಿಸುವರು. 14 ಗಾಜಿನ ಉಪಕರಣಗಳೂ : ಇವುಗಳಲ್ಲಿ ಪ್ರನಾಳ, ಅಲಿಕೆ , ಕ್ಷಾಳಕ ಸೀಸೆ, ಶುಷ್ಕೀಕರಣ ಪಾತ್ರೆ, ಆಸ್ಪಿರೇಟರ್ ಪಾತ್ರೆ ಕಿಪ್ಪನ ಸಲಕರಣೆ, ಉಷ್ಣತಾಮಾಪಕ, ವಾಚ್‍ಗ್ಲಾಸ್ ಮತ್ತು ಕ್ಲಾಕ್‍ಗ್ಲಾಸು ನಲ್ಲಿನಾಳ, ಶುಷ್ಕಕಾರಕ ನಾಳ ಹಾಗೂ ಸ್ತಂಭ ಆಸವನ ಪಾತ್ರೆ, ಹುಂಡಿಕ್ಕುವ ಸೀಸೆ, ಗಾತ್ರನಿರ್ಧರಣೆಯ ಸೀಸೆ, ಬ್ಯುರೆಟ್, ಪಿಪೆಟ್, ಅಳತೆಯ ಜಾಡಿ, ಫ್ಲಾಸ್ಕ್ ಮುಂತಾದವೆಲ್ಲ ಸೆರುತ್ತವೆ. ಅಗತ್ಯಕ್ಕೆ ತಕ್ಕಂತೆ ಈ ಉಪಕರಣಗಳ ಗಾತ್ರಗಳಲ್ಲೂ ವ್ಯತ್ಯಾಸಗಳುಂಟು. ರಾಸಾಯನಿಕ ವಿಜ್ಷಾನಕ್ಷೇತ್ರದ ಅಧ್ಯಯನ, ಸಂಶೋಧನೆಗಳಲ್ಲಿ ಕಂಡುಬರುವ ಅಗತ್ಯಗಳಿಗೆ ಅನುಗುಣವಾಗಿ ಬೇರೆ ಬೇರೆ ನಮೂನೆಯ ಉಪಕರಣಗಳೂ ತಯಾರಾಗುತ್ತಿವೆ. ಅಲ್ಪಗಾತ್ರದ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ರಾಸಾಯನಿಕ ವಿಶ್ಲೇಷಣೆ ಮಾಡುವ ಪದ್ದತಿ ವ್ಯಾಪಕವಾಗಿ ಬಳಕೆಗೆ ಬರುತ್ತಿದೆ. ಇವುಗಳನ್ನು ಸೂಕ್ಷ್ಮವಿಧಾನಗಳೂ (ಮೈಕ್ರೋಮೆಥಡ್ಸ್) ಮತ್ತು ಅರ್ಧಸೂಕ್ಷ್ಮ ವಿಧಾನಗಳು (ಸೆಮಿಮೈಕ್ರೋಮೆಥಡ್ಸ್) ಎಂದು ವಿಂಗಡಿಸಲಾಗಿದೆ. ಇವುಗಳಲ್ಲಿ ತೀರಾ ಚಿಕ್ಕ ಉಪಕರಣಗಳನ್ನು ಉಪಯೊಗಿಸುವುದೊಂದೇ ಮಾತ್ರವಲ್ಲದೆ ಅನುಸರಿಸುವ ಮಾರ್ಗಗಳಲ್ಲಿಯೂ ಅನೇಕ ಮಾರ್ಪಾಟುಗಳೂ ಆಗಿವೆ. ಉದಾಹರಣೆಗೆ ದ್ರವ-ಘನ ಮಿಶ್ರಣದಿಂದ ಇವನ್ನು ಬೇರೆ ಮಾಡಲು ಸ್ಥೂಲವಿಧಾನಗಳಲ್ಲಿ (ಮ್ಯಾಕ್ರೋಮೆಥಡ್ಸ್) ಶೋಧಿಸುವ ವಿಧಾನವನ್ನು ಬಳಸುವುದಿದೆ. ಸೂಕ್ಷ್ಮ ವಿಧಾನಗಳಲ್ಲಿ ಶೋಧಿಸುವ ಬದಲಿಗೆ ಸೆಂಟ್ರಿಫ್ಯೂಜ್ ಎಂಬ ಸಾಧನ ಬಳಕೆಯಿದೆ. (ಕೆ,ಎಸ್,ಬಿ.) ಪ್ರಮುಖ ವಿಭಾಗಗಳು ಸಾಮಾನ್ಯವಾಗಿ ರಸಾಯನವಿಜ್ಞಾನವನ್ನು ನಿರವಯವ (ಇನಾಗ್ರ್ಯಾನಿಕ್) ರಸಾಯನವಿಜ್ಞಾನ, ಸಾವಯವ (ಅಗ್ರ್ಯಾನಿಕ್) ರಸಾಯನವಿಜ್ಞಾನ. ಭೌತರಸಾಯನವಿಜ್ಞಾನ (ಫಿಜಿಕಲ್ ಕೆಮಿಸ್ಟ್ರಿ), ಮತ್ತು ಕೈಗಾರಿಕಾ ರಸಾಯನವಿಜ್ಞಾನ (ಇಂಡಸ್ಟ್ರಿಯಲ್ ಕೆಮಿಸ್ಟ್ರಿ) ಎಂದು ಆರು ಶಾಖೆಗಳಾಗಿ ವಿಂಗಡಿಸುವುದು ಉಂಟು. ಸಾವಿರಾರು ಬಗೆಯ ವಸ್ತು ರೂಪಗಳ ಗುಣಲಕ್ಷಣಗಳು, ಅವುಗಳ ನೈಸರ್ಗಿಕ ಆಕರಗಳು ಮತ್ತು ತಯಾರಿಕಾ ಕ್ರಮಗಳ ಅಧ್ಯಯನ ನಿರವಯವ ರಸಾಯನವಿಜ್ಞಾನದ ಗುರಿ. ಅಂದರೆ ಕಾರ್ಬನ್ ಧಾತುವೊಂದನ್ನು ಬಿಟ್ಟು ಉಳಿದ ಎಲ್ಲ ಧಾತುಗಳ ಮತ್ತು ಸಂಯುಕ್ತಗಳ ಅಧ್ಯಯನ ಇದರ ವ್ಯಾಪ್ತಿಗೆ ಸೇರಿದೆ. ಕಾರ್ಬನ್ ಮತ್ತು ಅದರ ಸಂಯುಕ್ತಗಳಿಗೆ ಮಾತ್ರ ಸೀಮಿತವಾದ ಶಾಖೆ ಸಾವಯವ ರಸಾಯನವಿಜ್ಞಾನ. ಇದರ ಬಗ್ಗೆ ಮುಂದೆ ವಿವೇಚಿಸಲಾಗಿದೆ. ವಿಶ್ಲೇಷಕ ರಸಾಯನವಿಜ್ಞಾನದಲ್ಲಿ ಪದಾರ್ಥಗಳನ್ನು ಅದರ ಅಂಗಾಂಶಗಳಿಗೆ ಪ್ರತ್ಯೇಕಿಸಿ ಗುರುತಿಸಲಾಗುವುದು. ಅಂಗಾಂಶಗಳನ್ನು ಮಾತ್ರ ಗುರುತಿಸಿದರೆ ಅದನ್ನು ಗುಣಾತ್ಮಕ ವಿಶ್ಲೇಷಣೆ ಎಂದೂ ಹಾಗಲ್ಲದೆ ಅವುಗಳ ಪರಿಮಾಣಗಳನ್ನು ನಿರ್ಣಯಿಸಿದರೆ ಪರಿಮಾಣಾತ್ಮಕ ವಿಶ್ಲೇಷಣೆ ಎಂದೂ ಕರೆಯುವುದಿದೆ. ರಾಸಾಯನಿಕ ಬದಲಾವಣೆಗಳು, ಬದ್ಧವಾಗಿರುವ ನಿಯಮಗಳು ಮತ್ತು ಅವುಗಳನ್ನು ಸಕಾರಣವಾಗಿ ವಿವರಿಸುವ ಸಿದ್ಧಾಂತಗಳು ಭೌತರಸಾಯನವಿಜ್ಞಾನದ ವ್ಯಾಪ್ತಿಗೆ ಸೇರುತ್ತವೆ. ಒಂದು ರೀತಿಯಲ್ಲಿ ಈ ಶಾಖೆ ಭೌತವಿಜ್ಞಾನ ಮತ್ತು ರಸಾಯನವಿಜ್ಞಾನಗಳ ಸಮನ್ವಯ. ಅವೆರಡರ ನಡುವಣ ಸೀಮಾವಲಯ. ಜೈವಿಕಕ್ರಿಯೆಗಳಲ್ಲಿ ರಸಾಯನ ವಿಜ್ಞಾನದ ಪಾತ್ರವನ್ನು ವಿವರಿಸುವ ಭಾಗಕ್ಕೆ ಜೀವರಸಾಯನ ವಿಜ್ಞಾನ ಎಂದು ಹೆಸರು. ಭೌತರಸಾಯನವಿಜ್ಞಾನದಂತೆ ಈ ಶಾಖೆಯೂ ಜೀವವಿಜ್ಞಾನ ಮತ್ತು ರಸಾಯನವಿಜ್ಞಾನಗಳ ಸಮನ್ವಯ. ಇದರಲ್ಲಿ ಶಾರೀರಿಕ ರಸಾಯನವಿಜ್ಞಾನ ಎಂಬ ಉಪಶಾಖೆಯುಂಟು. ಇದು ಮಾನವದೇಹದಲ್ಲಿ ಜರುಗುವ ರಾಸಾಯನಿಕ ಕ್ರಿಯೆಗಳಿಗೆ ಸೀಮಿತವಾದ್ದು. ಇದರ ಪಾತ್ರ ಇರುವುದು ವೈದ್ಯಕೀಯದಲ್ಲಿ. ರಸಾಯನವಿಜ್ಞಾನದ ಆರನೆಯ ಮುಖ್ಯಶಾಖೆ ಕೈಗಾರಿಕಾ ರಸಾಯನ ವಿಜ್ಞಾನ (ನೋಡಿ- ಕೈಗಾರಿಕಾ-ರಸಾಯನ-ಶಾಸ್ತ್ರ). ನಿತ್ಯ ಬಳಕೆಯ ಅನೇಕಾನೇಕ ಪದಾರ್ಥಗಳನ್ನು ಬೃಹದ್ ಪ್ರಮಾಣದಲ್ಲಿ ತಯಾರಿಸುವುದು ಮುಂತಾದ ವಿಚಾರಗಳನ್ನು ಇದು ಪ್ರಸ್ತಾವಿಸುತ್ತದೆ. ನಿರವಯವ ರಸಾಯನವಿಜ್ಞಾನ : ಆವರ್ತ ಕೋಷ್ಟಕದಲ್ಲಿನ ಎಲ್ಲ ಧಾತುಗಳ ಹಾಗೂ ಅವುಗಳ ಸಂಯುಕ್ತಗಳ ರಾಸಾಯನಿಕ ಗುಣಲಕ್ಷಣಗಳನ್ನೂ ಕ್ರಿಯೆಗಳನ್ನೂ ಕುರಿತ ಅಧ್ಯಯನ (ಇನಾಗ್ರ್ಯಾನಿಕ್ ಕೆಮಿಸ್ಟ್ರಿ). ಇಲ್ಲಿ ಹೈಡ್ರೊಕಾರ್ಬನ್ನುಗಳನ್ನು ಮಾತ್ರ ಹೊರತು ಪಡಿಸಿದೆ. ಸಾಮಾನ್ಯವಾಗಿ ಕಾರ್ಬೈಡುಗಳು, ಕಾರ್ಬನ್ನಿನ ಆಕ್ಸೈಡುಗಳು, ಲೋಹ ಕಾರ್ಬೋನೇಟುಗಳು, ಕಾರ್ಬನ್ - ಸಲ್ಫರ್ ಸಂಯುಕ್ತಗಳು ಮತ್ತು ಕಾರ್ಬನ್ ನೈಟ್ರೋಜನ್ ಸಂಯುಕ್ತಗಳ ವಿಚಾರವನ್ನೂ ಇದು ಒಳಗೊಂಡಿದೆ. ನಿರವಯವರಸಾಯನವಿಜ್ಞಾನ ಬಹುತೇಕ ಧಾತುಗಳ ರಾಸಾಯನಿಕ ಲಕ್ಷಣಗಳನ್ನು ವಿಶದಪಡಿಸುವುದರಿಂದ ಅದರ ಕ್ಷೇತ್ರ ವಿಶಾಲವ್ಯಾಪ್ತಿಯದ್ದಾಗಿದೆ. ಸಾಮಾನ್ಯವಾಗಿ ಈ ವಿಜ್ಞಾನಭಾಗವನ್ನು ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಿದೆ : (1) ಸಂಶ್ಲೇಷಣ ನಿರವಯವ ರಸಾಯನವಿಜ್ಞಾನ (ಸಿಂತೆಟಿಕ್ ಇನಾಗ್ರ್ಯಾನಿಕ್ ಕೆಮಿಸ್ಟ್ರಿ); (2) ಸೈಧ್ದಾಂತಿಕ ನಿರವಯವರಸಾಯನವಿಜ್ಞಾನ (ತಿಯೊರೆಟಿಕಲ್ ಇನಾಗ್ರ್ಯಾನಿಕ್ ಕೆಮಿಸ್ಟ್ರೆರ್) ಮತ್ತು (3) ಅನ್ವಿತ ನಿರವಯವ ರಸಾಯನವಿಜ್ಞಾನ (ಅಪ್ಲೈಡ್ ಇನಾಗ್ರ್ಯಾನಿಕ್ ಕೆಮಿಸ್ಟ್ರಿ). ಈ ಮೂರು ವಿಭಾಗಗಳ ಸ್ಥೂಲ ಪರಿಚಯ ಇಲ್ಲಿದೆ. (1) ಸಂಶ್ಲೇಷಣ ನಿರವಯವ ರಸಾಯನವಿಜ್ಞಾನ : ಆವರ್ತಕೋಷ್ಟಕದಲ್ಲಿನ ಧಾತುಗಳ ಅಭಿಕ್ರಿಯಾಶೀಲತೆಯಲ್ಲಿ (ರೀಆಕ್ಟಿವಿಟಿ) ಅನೇಕ ರೀತಿಯ ವೈವಿಧ್ಯ ಕಂಡುಬರುತ್ತದೆ. ಇವುಗಳ ಗುಣಲಕ್ಷಣಗಳನ್ನು ಪರಿಶೀಲಿಸುವಾಗ ರಸಾಯನವಿಜ್ಞಾನಿ ಭಿನ್ನಭಿನ್ನವಾದ ಮತ್ತು ಬಗೆಬಗೆಯ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ. ಇವುಗಳಿಗೆ ಬೇಕಾಗುವ ಕ್ರಿಯಾತಂತ್ರ ಮತ್ತು ಉಪಕರಣಗಳನ್ನು ನಿರ್ಮಿಸಿಕೊಳ್ಳುವುದೂ ಅಗತ್ಯವೆನಿಸುವುದು. ಒಂದು ಕಡೆ ಋಜುಸ್ವಭಾವದ ವಿರಳ ಅನಿಲಗಳಿದ್ದರೆ ಇನ್ನೊಂದೆಡೆ ಅತಿತೀಕ್ಷ್ಣಕಾರಿಗಳೆನಿಸುವ ಕ್ಷಾರಧಾತುಗಳೂ ಲವಣೋತ್ಪಾದಕ ಧಾತುಗಳೂ ಇವೆ. ಅತ್ಯಂತ ತೀಕ್ಷ್ಣಕಾರಿ ಧಾತು ಎಂದರೆ ಫ್ಲೂರೀನ್ ಅನಿಲ. ಇದಕ್ಕಿರುವಷ್ಟು ಅಭಿಕ್ರಿಯಾಶೀಲತೆ ಮತ್ತಾವುದೇ ಧಾತುವಿಗೂ ಇಲ್ಲ. ಈ ಅನಿಲ ಇತರ ಪ್ರತಿಯೊಂದು ಧಾತುವಿನೊಂದಿಗೆ ಸಂಯೋಗಗೊಂಡು ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ವಿರಳಾನಿಲಗಳೊಡನೆಯೂ ಇದು ಸಂಯೋಗ ಹೊಂದುವುದು ಸಾಧ್ಯ. ಹಲವಾರು ದಶಕಗಳಿಂದಲೂ ಫ್ಲೂರೀನ್ ಮತ್ತು ಅದರ ಸಂಯುಕ್ತಗಳ ವಿಷಯದಲ್ಲಿ ವಿಶೇಷ ಸಂಶೋಧನೆ ನಡೆದಿದೆ. ಇವುಗಳ ಪ್ರಾಮುಖ್ಯ ದಿನೇ ದಿನೇ ಹೆಚ್ಚುತ್ತಿದೆ. ನ್ಯೂಕ್ಲಿಯರ್ ಶಕ್ತ್ಯೋತ್ಪಾದನೆಗೆ ಬೇಕಾಗುವ ಸಾಮಗ್ರಿಗಳನ್ನು ತಯಾರಿಸಲು ಫ್ಲೂರೀನ್ ಅತ್ಯಗತ್ಯ. ಫ್ಲೂರೀನ್ ವಸ್ತುಗಳನ್ನು ಪ್ರಶೀತದ್ರವ್ಯಗಳನ್ನಾಗಿ (ರೆಫ್ರಿಜಿರೆಂಟ್ಸ್) ಬಳಸುವುದಿದೆ. ಅವು ಅಧಿಕ ಸಾಮಥ್ರ್ಯದ ಅರಿವಳಿಕೆಗಳೂ ಹೌದು. ಆಧುನಿಕ ಯುದ್ಧಸಾಮಗ್ರಿಗಳ ಪೈಕಿ ಫ್ಲೂರೀನ್ ವಸ್ತುಗಳು ವಿಶೇಷ ಸ್ಥಾನ ಪಡೆದಿವೆ. ಪ್ಲಾಸ್ಟಿಕ್ ಕ್ಷೇತ್ರದಲ್ಲಂತೂ ಅವು ಕ್ರಾಂತಿಯನ್ನೇ ಉಂಟುಮಾಡಿವೆ. ರಾಕೆಟ್ಟುಗಳನ್ನು ಉಡಾಯಿಸಲು ಬೇಕಾಗುವ ಇಂಧನಗಳ ಸಾಲಿನಲ್ಲಿ ಫ್ಲೂರೀನ್ ಮತ್ತು ಅದರ ವಸ್ತುಗಳಿಗೆ ಅಗ್ರಸ್ಥಾನ ಇದೆ. ಇಂಥ ಪ್ರಾಮುಖ್ಯ ಪಡೆದಿರುವ ವಸ್ತುಗಳನ್ನು ಪರಿಶೀಲಿಸಲು ವಿಶೇಷ ರೀತಿಯ ಸಲಕರಣೆಗಳೂ ಲೋಹ ಮತ್ತು ಪ್ಲಾಸ್ಟಿಕ್ ಪಾತ್ರೆಗಳೂ ಅಗತ್ಯವಾಗುತ್ತದೆ. ಎರಡನೆಯ ಮಹಾಯುದ್ಧದ ಅನಂತರ ಪ್ರಾಮುಖ್ಯಕ್ಕೆ ಬಂದಿರುವ ಧಾತುಗಳ ಪೈಕಿ ಬೋರಾನ್, ಸಿಲಿಕಾನ್ ಮತ್ತು ಜರ್ಮೇನಿಯಮ್‍ಗಳು ವಿಶೇಷ ಸ್ಥಾನ ಹೊಂದಿವೆ. ಅತ್ಯಂತ ಪರಿಶುದ್ಧರೂಪದ ಈ ಧಾತುಗಳನ್ನು ಅವುಗಳ ಸಂಯುಕ್ತ ತಯಾರಿಸಲು ನಡೆದಿರುವ ಪ್ರಯೋಗಗಳು ಮಹತ್ತ್ವದವಾಗಿವೆ. ಇವುಗಳ ಸಂಶ್ಲೇಷಣಾ ವಿಧಾನಗಳು ನವೀನ ಅಭಿಕ್ರಿಯೆಗಳಿಗೆ ಅಣಿಮಾಡಿಕೊಟ್ಟಿವೆ. ನಿದ್ರ್ರ್ಯವ್ಯತಾ ತಂತ್ರಗಳೂ ಸಾಮಾನ್ಯ ಬಳಕೆಗೆ ಬಂದಿವೆ. ಸಾವಯವ ಲೋಹ ಸಂಯುಕ್ತಗಳು : ಕಾರ್ಬನ್ನಿನ ಮತ್ತು ಲೋಹದ ಪರಮಾಣುಗಳ ನಡುವೆ ನೇರ ರಾಸಾಯನಿಕ ಬಂಧವಿರುವ ಲೋಹಸಂಯುಕ್ತಗಳ ಗುಣಲಕ್ಷಣಗಳ ಪರಿಚಯ ಕಳೆದ ಎರಡು ದಶಕಗಳ ಹಿಂದಿನಿಂದಲೂ ಇತ್ತು. ಕೆಲವೇ ಧಾತುಗಳಿಂದ ಮಾತ್ರ ಇಂಥ ವಸ್ತುಗಳನ್ನು ತಯಾರಿಸಬಹುದಿತ್ತು. ಆವರ್ತ ಕೋಷ್ಟಕದಲ್ಲಿಯ ಉಪವರ್ಗ ಲೋಹಸಂಯುಕ್ತಗಳನ್ನು ತಯಾರಿಸಲು ಎಷ್ಟು ಪ್ರಯತ್ನಪಟ್ಟಿದ್ದರೂ ಅದು ಸಾಧ್ಯವಾಗಿರಲಿಲ್ಲ. 1950 ರಿಂದ ಈಚೆಗೆ ಇಂಥ ಹಲವು ಬಗೆಯ ಲೋಹಸಂಯುಕ್ತಗಳನ್ನು ಪಡೆಯುವುದು ಸಾಧ್ಯವಾಗಿದೆ. ಸೈಕ್ಲೊಪೆಂಟಿಡೈಯೀನ್ ಮತ್ತು ಬೆನ್‍ಜೀನ್ ಮುಂತಾದ ಆರೋಮ್ಯಾಟಿಕ್ ಹೈಡೊಕಾರ್ಬನ್ ಸಂಯುಕ್ತಗಳು - ಲೋಹಗಳೊಡನೆ ಅಭಿಕ್ರಿಯೆಗೆ ಒಳಗಾಗುತ್ತವೆ. ರಕ್ತದಲ್ಲಿರುವ ಕಬ್ಬಿಣ, ವೈಟಮಿನ್‍ನಲ್ಲಿರುವ ಕೊಬಾಲ್ಟ್, ಎಲೆ ಹಸುರಿನಲ್ಲಿರುವ ಮೆಗ್ನೀಸಿಯಮ್ ಮುಂತಾದ ಲೋಹಗಳ ಪಾತ್ರ ಬಲು ಮಹತ್ತ್ವದಾಗಿದೆ. (ನೋಡಿ- ಸಾವಯವ-ಲೋಹೀಯ-ಸಂಯುಕ್ತಗಳು) ಘನಸ್ಥಿತಿ ರಸಾಯನವಿಜ್ಞಾನ : ನಿರವಯವ ರಸಾಯನ ವಿಜ್ಞಾನ ಅಳವಡಿಸಿರುವ ಆವರಣದಲ್ಲಿ ಧಾತುಗಳೂ ಸಂಯುಕ್ತಗಳೂ ಅವುಗಳ ಬಗೆಬಗೆಯ ಭೌತಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಅತ್ಯಂತ ಕಡಿಮೆ ದ್ರವನಬಿಂದು ಮತ್ತು ಕುದಿಬಿಂದು ಉಳ್ಳ ಹೀಲಿಯಮ್ ಅನಿಲ ಒಂದು ಕಡೆ ಇದೆ. ಇನ್ನೊಂದೆಡೆ ಅಧಿಕ ದ್ರವನ ಬಿಂದು ಹಾಗೂ ಊಷ್ಮಸಹವಸ್ತುಗಳಾದ (ರಿಫ್ರ್ಯಾಕ್ಟೊರೀಸ್) ಧಾತುಗಳ ಆಕ್ಸೈಡ್‍ಗಳೂ ಕಾರ್ಬೈಡ್‍ಗಳೂ ನೈಟ್ರೈಡ್‍ಗಳೂ ಇವೆ. ಘನಸ್ಥಿತಿಯಲ್ಲಿ ಜರುಗುವ ಅಭಿಕ್ರಿಯೆಗಳ ಪರಿಶೀಲನೆ ಹೆಚ್ಚು ಪ್ರಾಮುಖ್ಯವನ್ನೂ ಪ್ರಾಶಸ್ತ್ಯವನ್ನೂ ಪಡೆಯುತ್ತಿದೆ. ವಸ್ತುಗಳ ಘನಸ್ಥಿತಿಯಲ್ಲಿ ರಾಸಾಯನಿಕ ಬಂಧಗಳು, ಸ್ಫಟಿಕ ವಸ್ತುಗಳ ಬೆಳೆವಣಿಗೆ, ಅವುಗಳ ಶುದ್ಧೀಕರಣ ಮತ್ತು ಘಟನಾತ್ಮಕ ಅಧ್ಯಯನ, ರಾಸಾಯನಿಕ ಕ್ರಿಯೆಗಳು. ಮೇಲ್ಮೈರಸಾಯನ ವಿಜ್ಞಾನ ಮುಂತಾದವುಗಳ ವಿಶೇಷ ಅಧ್ಯಯನ ಇಲ್ಲಿ ನಡೆಯುವುದಿದೆ. (ನೋಡಿ- ಘನಸ್ಥಿತಿ-ರಸಾಯನವಿಜ್ಞಾನ) ಭೂರಾಸಾಯನಿಕ ಅಂಶಗಳು : ಅಧಿಕ ಸಂಮರ್ದ ಮತ್ತು ಉಷ್ಣತೆಗಳಲ್ಲಿ ಜರುಗುವ ಸಂಶ್ಲೇಷಣಾ ಕ್ರಿಯೆಗಳಿಗೆ ಭೂರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಮುಖ್ಯ ಪಾತ್ರ ಉಂಟು. ಖನಿಜಸಂಶ್ಲೇಷಣೆ ಅಂದರೆ, ಪ್ರಕೃತಿಯಲ್ಲಿ ದೊರೆಯುವ ವಸ್ತುಗಳನ್ನು ಹೋಲುವ ಸಂಯುಕ್ತಗಳ ತಯಾರಿಕೆ ನಿರವಯವ ರಸಾಯನವಿಜ್ಞಾನಿಗಳ ಗಮನವನ್ನು ಸೆಳೆದಿದೆ. ಇಲ್ಲಿಯ ಸಂಶೋಧನೆಗಳಿಂದ ನಿಸರ್ಗದಲ್ಲಿ ಖನಿಜಗಳು ಉತ್ಪತ್ತಿ ಆಗುವಾಗ ಜರುಗುವ ರಾಸಾಯನಿಕ ಕ್ರಿಯೆಗಳ ಸ್ವರೂಪವನ್ನು ಅರಿತುಕೊಳ್ಳುವುದು ಸಾಧ್ಯವಾಗಿದೆ. ಇದರಿಂದ ಕೈಗಾರಿಕೋದ್ಯಮಗಳಿಗೆ ಅಗತ್ಯವಿರುವ ರಾಸಾಯನಿಕ ವಸ್ತುಗಳನ್ನು ತಯಾರಿಸಿಕೊಳ್ಳುವುದೂ ಸಾಧ್ಯವಾಗಿದೆ. ವಜ್ರ, ಮಾಣಿಕ್ಯ, ಕೆಂಪು, ನೀಲ, ಸ್ಫಟಿಕ, ಕುರಂದಮಣಿ ಮತ್ತು ಇತರ ಪ್ರಶಸ್ತ ಮಣಿಗಳನ್ನು ಯಥೇಚ್ಛ ಪ್ರಮಾಣದಲ್ಲಿ ತಯಾರಿಸುವುದು ಕೂಡ ಸಾಧ್ಯವಾಗಿದೆ. ಜಲೋಷ್ಣೀಯ ಹಾಗೂ ಅಧಿಕ ಉಷ್ಣತೆಯ ಕ್ರಿಯೆಗಳ ಮೇಲೆ ಹೆಚ್ಚು ಗಮನ ಹರಿದಿದೆ. ಇಂಥ ವಿಧಾನಗಳಿಂದ ಭೂಗರ್ಭದಲ್ಲಿ ಜರುಗುವ ಕ್ರಿಯೆಗಳನ್ನು ಅನುಕರಣೆ ಮಾಡುವುದು ಸಾಧ್ಯವಾಗಿದೆ. ಈ ಸಂಶೋಧನೆಗಳು ಭೂರಾಸಾಯನಿಕ ತತ್ತ್ವಗಳನ್ನು ಪ್ರತಿಪಾದಿಸಲು ನೇರವಾಗುತ್ತವೆ. ನ್ಯೂಕ್ಲಿಯರ್ ತಂತ್ರವಿದ್ಯೆ : ಕಳೆದ ಮೂರು ದಶಕಗಳಿಂದಲೂ ಹಿಂದಿನಿಂದ ಅಭಿವೃದ್ಧಿ ಹೊಂದುತ್ತಿರುವ ನ್ಯೂಕ್ಲಿಯರ್ ತಂತ್ರವಿದ್ಯೆ ಆಧುನಿಕ ರಸಾಯನ ವಿಜ್ಞಾನ ಕ್ಷೇತ್ರಕ್ಕೆ ಅಧಿಕ ಪ್ರೋತ್ಸಾಹ ನೀಡಿದೆ. ನ್ಯೂಕ್ಲಿಯರ್ ಶಕ್ತಿಯ ಬಳಕೆ ಆದಂತೆಲ್ಲ ರಸಾಯನವಿಜ್ಞಾನಿಯ ಪಾತ್ರ ಹೆಚ್ಚಾಗುತ್ತಲಿದೆ. ಯುರೇನಿಯಮ್ ಅನಂತರ ಇರುವ ಧಾತುಗಳ ಸಂಶೋಧನೆ ರಸಾಯನವಿಜ್ಞಾನ ಕ್ಷೇತ್ರದಲ್ಲಿ ಜರುಗಿದ ಅತ್ಯಂತ ಆಶ್ಚರ್ಯ ಘಟನೆಯೇ ಸರಿ. ಈ ಧಾತುಗಳಿಗೆ ಆಕ್ಟಿನೈಡ್ ಧಾತುಗಳೆಂದು ಹೆಸರು. ಇವನ್ನು ಬೇರ್ಪಡಿಸಲು ಲೀನಕಾರಿ ಉದ್ಧರಣ (ಸಾಲ್ವೆಂಟ್ ಎಕ್ಸ್‍ಟ್ರಾಕ್ಷನ್) ಬಲು ನೆರವಿಗೆ ಬಂತು. ಈ ವಿಧಾನವನ್ನು ಅಳವಡಿಸಿಕೊಂಡು ಅತಿ ಸುಲಭ ಹಾಗೂ ಅತಿ ಶೀಘ್ರವಾಗಿ ವಿರಳಭಸ್ಮಧಾತುಗಳನ್ನು ಮತ್ತು ಹಾಘ್ನಿಯಮ್ - ಜಿರ್‍ಕೋನಿಯಮ್ ಧಾತುಗಳನ್ನು ಪ್ರತ್ಯೇಕಿಸಬಹುದು. ಇಂಥ ವಸ್ತುಗಳ ಬೆಲೆ ಕಡಿಮೆ ಹಾಗೂ ದೊರೆಯುವ ಮೊತ್ತ ಅಧಿಕ. (2) ಸೈದ್ಧಾಂತಿಕ ನಿರವಯವ ರಸಾಯನವಿಜ್ಞಾನ : ಕಳೆದ ಎರಡು ಶತಮಾನಗಳ ಹಿಂದೆಯೇ ಬೆಳೆದುಬಂದ ನಿರವಯವ ರಸಾಯನವಿಜ್ಞಾನ ಕ್ಷೇತ್ರದಲ್ಲಿ ಹೊಸ ವಸ್ತುಗಳ ತಯಾರಿಕೆ ಮತ್ತು ಅವುಗಳ ಗುಣಲಕ್ಷಣಗಳ ವರ್ಣನೆಗಳೇ ಹೆಚ್ಚು ಪ್ರಾಧಾನ್ಯ ನೀಡಲಾಗಿತ್ತು. ಪರಮಾಣುಗಳ ಪರಸ್ಪರ ಅಂತರ ಮತ್ತು ಇತರ ಜ್ಯಾಮಿತಿಯ ದತ್ತಸಾಮಗ್ರಿಗಳ ಸಹಾಯದಿಂದ ವಸ್ತುವಿನ ರಾಸಾಯನಿಕ ಲಕ್ಷಣ ಹಾಗೂ ಸ್ವರೂಪವನ್ನು ಗೊತ್ತುಮಾಡಬಹುದು. ಅಲ್ಲದೆ ಸಂಯುಕ್ತವಸ್ತುವಿನಲ್ಲಿರುವ ಅಣುಗಳ ರಾಸಾಯನಿಕ ಬಂಧದ ಮತ್ತು ಸಂರಚನೆಯ ಸ್ವರೂಪವನ್ನು ಅರಿಯಬಹುದು. ಇದಕ್ಕಾಗಿ ಅಣುಸಂರಚನೆಯನ್ನು ಕಂಡುಕೊಳ್ಳುವ ಆಧುನಿಕ ಸಾಧನೆಗಳನ್ನು ಬಳಸಿಕೊಳ್ಳುವುದಿದೆ. ಇವುಗಳ ಜೊತೆಗೆ ಎಲೆಕ್ಟ್ರಾನ್ ನಮನ, ಎಕ್ಸ್‍ಕಿರಣ ಮತ್ತು ನ್ಯೂಟ್ರಾನ್ ನಮನ, ಅತಿರಕ್ತ ಮತ್ತು ಅತೀನೆರಿಳೆ ಅವಶೋಷಣರೋಹಿತ, ಕಾಂತೀಯ ಗ್ರಹಣಶೀಲತೆ, ನ್ಯೂಕ್ಲಿಯರ್ ಹಾಗೂ ಎಲೆಕ್ಟ್ರಾನ್ ಕಾಂತೀಯ ಅನುರಣನ ಮುಂತಾದ ವಿಧಾನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿದೆ. ಗಿಬ್ಸ್‍ನ ಪ್ರಾವಸ್ಥಾನಿಯಮ, ಎಕ್ಸ್‍ಕಿರಣಸ್ಫಟಿಕ ರಚನೆ ಮತ್ತು ವಿವಿಧ ಬಗೆಯ ವಿದ್ಯುನ್ಮಾಪಕಗಳು ಅಣುರಚನೆಯ ಸಂಶೋಧನೆಗೆ ನೆರವು ನೀಡಿವೆ. ರಾಸಾಯನಿಕ ಸಂರಚನೆಯ ಪರಿಶೋಧನೆ ಅನೇಕ ಹೊಸ ರಹಸ್ಯಗಳನ್ನು ಪತ್ತೆಹಚ್ಚುವಲ್ಲಿ ನೆರವಾಗಿದೆ. ಬಂಧನ : ಒಂದು ಸಂಯುಕ್ತದ ಸಂರಚನೆಗೂ ಅದರ ಪರಮಾಣುಗಳಿಗಿರುವ ಬಂಧನಕ್ಕೂ ಅನ್ಯೋನ್ಯ ಸಂಬಂಧ ಉಂಟು. ಅಣುವಿನ ಜ್ಯಾಮಿತಿಯ ವೃತ್ತಾಂತ ಅದರಲ್ಲಿ ಅಡಗಿರುವ ಬಂಧನದ ಸ್ವಭಾವವನ್ನು ತಿಳಿಯಲು ನೆರವಾಗುತ್ತದೆ. ಅಂತೆಯೇ ಬಂಧನದ ತಿಳಿವಳಿಕೆ ಅಣುವಿನ ಜ್ಯಾಮಿತಿಯನ್ನು ರೂಪಿಸಲು ಕೂಡ ಸಹಾಯವಾಗುತ್ತದೆ. ಕೇವಲ ಅಭಿಜಾತ ವೇಲೆನ್ಸಿಯ ಆಧಾರದ ಮೇಲೆ ಎಲ್ಲ ಬಗೆಯ ಬಂಧನಗಳನ್ನು ವಿವರಿಸುವುದು ಅಸಾಧ್ಯ. ಆಧುನಿಕ ಸೈದ್ಧಾಂತಿಕ ನಿರವಯವ ರಸಾಯನ ವಿಜ್ಞಾನ ಕ್ರಿಸ್ಟಲ್‍ಫೀಲ್ಡ್ ಮತ್ತು ಲೀಗ್ಯಾಂಡ್ ಫೀಲ್ಡ್ ತತ್ತ್ವಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಸ್ಥಿರವಿದ್ಯುತ್ ಬಲಗಳ ವಿಸ್ತಾರಕ್ಷೇತ್ರದಲ್ಲಿ ಬಂಧನವನ್ನು ಅಳವಡಿಸಬಹುದು. ಅಣುಕಕ್ಷಕ (ಮಾಲಿಕ್ಯುಲರ್ ಆರ್ಬಿಟಲ್) ತತ್ತ್ವಗಳನ್ನು ಹಾಗೂ ಲೀಗ್ಯಾಂಡ್ ಫೀಲ್ಡ್ ತತ್ತ್ವಗಳನ್ನು ಉಪಯೋಗಿಸಿಕೊಂಡು ನಾನಾ ಬಗೆಯ ಸಂಯುಕ್ತಗಳಲ್ಲಿರುವ ಬಂಧನದ ಸ್ವರೂಪವನ್ನು ತಿಳಿಯಲು ಸಾಧ್ಯವಾಗಿದೆ. ಈ ತತ್ತ್ವಗಳ ನೆರವಿನಿಂದ ಸಂಕೀರ್ಣಸಂಯುಕ್ತಗಳು ಪ್ರದರ್ಶಿಸುವ ಕಾಂತೀಯ ಲಕ್ಷಣಗಳನ್ನು ಮತ್ತು ಅವಶೋಷಣ ರೋಹಿತಗಳನ್ನು ವಿವರಿಸಬಹುದು. ಸಂಕೀರ್ಣಧಾತುಗಳನ್ನು ಕುರಿತ ಸ್ಟಿರಿಯೋ ರಸಾಯನವಿಜ್ಞಾನ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಇದರಿಂದ ಇನ್ನಿತರ ಕ್ಷೇತ್ರಗಳೂ ಸಹಾಯ ಪಡೆದಿವೆ. ಅವುಗಳ ಪೈಕಿ ದ್ಯುತಿಸಂಶ್ಲೇಷಣ (ಫೋಟೋಸಿಂತೆಸಿಸ್), ಎನ್‍ಜೈಮ್ ಕ್ರಿಯೆ, ಕಿಮೋಥೆರಪಿ ಹಾಗೂ ಇನ್ನಿತರ ಜೈವಿಕವಿದ್ಯಮಾನಗಳು ಮುಖ್ಯವಾದವು. ಪ್ರತಿಕ್ರಿಯಾ ಬಲಗತಿವಿಜ್ಞಾನ : ನಿರವಯವ ರಸಾಯನವಿಜ್ಞಾನ ಕ್ಷೇತ್ರದಲ್ಲಿ ಪ್ರತಿಕ್ರಿಯೆಗಳ ಪ್ರಕ್ರಮಗಳನ್ನು ಆಳವಾಗಿ ಅಭ್ಯಾಸ ಮಾಡುವುದರಲ್ಲಿಯ ಕೊರತೆಯನ್ನು ನೀಗಿಸಲು ನಡೆಸಿದ ಪ್ರಯತ್ನದ ಫಲವಾಗಿ ಈ ವಿಜ್ಞಾನವಿಭಾಗ ಏರ್ಪಟ್ಟಿದೆ. ಸಾವಯವ ಕ್ರಿಯೆಗಳಲ್ಲಿ ಅಣು ತನ್ನ ರಚನೆಯನ್ನೆ ಉಳಿಸಿಕೊಂಡಿರುತ್ತದೆ. ನಿರವಯವ ರಸಾಯನವಿಜ್ಞಾನ ಕ್ಷೇತ್ರದಲ್ಲಿ ಅಣುಗಳ ರಚನೆ ಛಿದ್ರಗೊಂಡು ಪುನಃ ನಿರ್ಮಾಣವಾಗಿ ಹೊಸ ಸಂಯುಕ್ತ ಉತ್ಪತ್ತಿಯಾಗುತ್ತದೆ. ಅದರಲ್ಲೂ ಅನಿಲಾವಸ್ಥೆಯಲ್ಲಿರುವಾಗ ಇಂಥ ಪುನರ್‍ನಿರ್ಮಾಣ ಆಗುವುದೆಂದು ಪ್ರದರ್ಶಿಸಬಹುದು ಕೂಡ. ಈ ಪ್ರತಿಕ್ರಿಯೆಗಳನ್ನು ಅರಿತುಕೊಳ್ಳುವುದು ತುಂಬಾ ದುಸ್ತರ. ಅನೇಕ ಉಪಾಪಚಯನ, ಪ್ರತಿಕ್ರಿಯೆಗಳ ವಿಷಯದಲ್ಲಿ ವಿಶೇಷ ಸಂಶೋಧನೆಗಳು ನಡೆಯುತ್ತಲೇ ಇವೆ. ಎಲೆಕ್ಟ್ರಾನ್ ಯಾವ ರೀತಿ ವರ್ಗಾವಣೆ ಹೊಂದುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಎಲೆಕ್ಟ್ರಾನಿನ ವರ್ಗಾವಣೆಯಲ್ಲಿ ವಿಲೀನಕಾರಿಯ ಪಾತ್ರ ಬಲು ಮುಖ್ಯ. ಘನಾವಸ್ಥೆಯ ಪ್ರತಿಕ್ರಿಯೆಗಳಿಗೆ ಹೆಚ್ಚಿನ ಪ್ರಾಮುಖ್ಯ ಬರುತ್ತಿದೆ. ದ್ರಾವಣದಲ್ಲಿರುವ ಅಯಾನುಗಳ ಸ್ವರೂಪ ಅರಿತರೆ ವಿದ್ಯುದ್ದ್ವಿಶ್ಲೇಷ್ಯಗಳ (ಎಲೆಕ್ಟ್ರೊಲೈಟ್ಸ್) ಸ್ವಭಾವ ತಿಳಿಯುತ್ತದೆ. ಈ ಅಭಿಕ್ರಿಯೆಗಳ ಬಲಗತಿ ವಿಜ್ಞಾನ ವೃತ್ತಾಂತಗಳನ್ನು ಅರಿಯುವುದೂ ಸಾಧ್ಯ. ಲೋಹ ಅಯಾನುಗಳ ಹಾಗೂ ದ್ರಾವಣಗಳ ನಡುವೆ ಪ್ರತಿಕ್ರಿಯೆಗಳ ರೀತಿಯನ್ನು ತಿಳಿದರೆ ಸಂಯುಕ್ತಗಳು ಉತ್ಪತ್ತಿಯಾಗುವ ಕ್ರಮವನ್ನು ನಿರೂಪಿಸಬಹುದು. ಅಯಾನುಗಳ ಗುಣಲಕ್ಷಣಗಳನ್ನು ಗೊತ್ತುಪಡಿಸಿದರೆ ಪ್ರತಿಕ್ರಿಯೆಗಳು ಜರುಗುವ ವೇಗವನ್ನು ಲೆಕ್ಕ ಹಾಕಬಹುದು. (3) ಅನ್ವಿತ ನಿರವಯವ ರಸಾಯನವಿಜ್ಞಾನ : ನಿರವಯವ ಸಂಯುಕ್ತಗಳಾದರೂ ಅನೇಕ ರಾಸಾಯನಿಕ ಉದ್ಯಮಗಳಿಗೆ ಬೇಕಾಗುವ, ಅತ್ಯಂತ ಅವಶ್ಯಕವಾಗಿರುವ ಆಧಾರವಸ್ತುಗಳು, ಸಲ್ಫ್ಯೂರಿಕ್ ಆಮ್ಲ, ಅಮೋನಿಯ, ಕ್ಲೋರೀನ್, ಸೋಡ, ಫಾಸ್ಫರಸ್ ಮುಂತಾದವನ್ನು ಭಾರಿರಾಸಾಯನಿಕ ವಸ್ತುಗಳೆಂದು ಪರಗಣಿಸಲಾಗಿದೆ. ಇವನ್ನು ಅತ್ಯಧಿಕ ಮೊತ್ತದಲ್ಲಿ ತಯಾರಿಸಲಾಗುತ್ತಿದೆ ಕೂಡ. ಇಂಥ ವಸ್ತುಗಳನ್ನು ಬಳಸಿಕೊಂಡು ಬೇರೆ ಬೇರೆ ಕೈಗಾರಿಕೆಗಳು ಬೆಳೆಯುತ್ತಿವೆ. ಗಾಜು, ಪಿಂಗಾಣಿ, ಸಿಮೆಂಟ್, ರಾಸಾಯನಿಕ ಗೊಬ್ಬರ, ಲೋಹಪರಿಷ್ಕರಣ ಮುಂತಾದ ಕೈಗಾರಿಕಾ ಕ್ಷೇತ್ರಗಳಲ್ಲಿ ನಿರವಯವ ರಾಸಾಯನಿಕ ಪ್ರತಿಕ್ರಿಯೆಗಳನ್ನು ಭಾರಿ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ. (ಎ.ಆರ್.ವಿ.) ಭೌತರಸಾಯನವಿಜ್ಞಾನ : ರಸಾಯನವಿಜ್ಞಾನದ ಒಂದು ಶಾಖೆ. ಪರಮಾಣು ವ್ಯಾಸಂಗದಿಂದ ಇದರ ಆರಂಭ. ವೇಲೆನ್ಸಿಯ ಎಲೆಕ್ಟ್ರಾನಿಕ್‍ವಾದ ಈಚಿನ ವರ್ಷಗಳ ಭೌತರಸಾಯನವಿಜ್ಞಾನದಲ್ಲಿ ಆಗಿರುವ ಪ್ರಗತಿಗಳಲ್ಲಿ ಪ್ರಮುಖವಾದದ್ದು. ಭೌತರಸಾಯನವಿಜ್ಞಾನ ರಾಸಾಯನಿಕ ಸಂಯೋಜನೆಯ ನಿಯಮಗಳು. ಪರಮಾಣು ರಚನೆ, ವೇಲೆನ್ಸಿ, ಉಷ್ಣಗತಿವಿಜ್ಞಾನ, ಅನಿಲಗಳು ಮತ್ತು ಅವುಗಳ ಗುಣಗಳು, ಘನಸ್ಥಿತಿಯ ಮತ್ತು ದ್ರವಸ್ಥಿತಿಯ ಗುಣಗಳು, ದುರ್ಬಲ ದ್ರಾವಣಗಳು, ಲೋಹಗಳು ಮತ್ತು ದ್ರಾವಣಗಳಲ್ಲಿ ವಿದ್ಯುದ್ವಹನ, ರಾಸಾಯನಿಕ ಗತಿವಿಜ್ಞಾನ, ಕಲಿಲ ಮತ್ತು ಮೇಲ್ಮೈ ಘಟನೆಗಳು, ವೇಗವರ್ಧನೆ, ದ್ಯುತಿರಸಾಯನವಿಜ್ಞಾನ, ಅಣುಗಳ ರಚನೆ ಇನ್ನೂ ಮುಂತಾದ ವಿಷಯಗಳನ್ನು ಒಳಗೊಂಡಿದೆ. ರಾಸಾಯನಿಕ ಸಂಯೋಜನೆಯ ನಿಯಮಗಳು : ವಿಶ್ವದಲ್ಲಿರುವ ವಸ್ತುಗಳಲ್ಲಿ ಏನೇ ಬದಲಾವಣೆಯಾದರೂ ಒಟ್ಟು ವಸ್ತುವಿನ ಪ್ರಮಾಣದಲ್ಲಿ ಯಾವ ವ್ಯತ್ಯಾಸವೂ ಉಂಟಾಗುವುದಿಲ್ಲ. ಹೊಸದಾಗಿ ಏನನ್ನೂ ಸೃಷ್ಟಿಸಲಾಗುವುದಿಲ್ಲ. ಪ್ರತಿಯೊಂದು ಬದಲಾವಣೆಯಲ್ಲಿಯೂ ಪರಿವರ್ತನೆಗೆ ಮೊದಲು ಇದ್ದಷ್ಟೇ ವಸ್ತು ಪರಿವರ್ತನೆಯಾದ ಬಳಿಕವೂ ಇರುತ್ತದೆ. ಆದರೆ ವಸ್ತುವಿನ ರೂಪದಲ್ಲಿ ಮಾತ್ರ ಬದಲಾವಣೆ ಅಗಿರುತ್ತದೆ. ಇದಕ್ಕೆ ವಸ್ತುನಿತ್ಯತ್ವ ನಿಯಮ ಎಂದೂ ಹೆಸರು. ಧಾತುಗಳನ್ನು ಸಂಯೋಜಿಸಿದಾಗ ಅವುಗಳ ತೂಕಗಳು ನಿರ್ದಿಷ್ಟ ಅನುಪಾತದಲ್ಲಿ ಇರುವುವು. ಆದ್ದರಿಂದ ಶುದ್ಧ ಸಂಯುಕ್ತವೊಂದರ ರಚನೆಯ ಮೇಲೆ ಅದನ್ನು ತಯಾರಿಸಿದ ವಿಧಾನ ಪರಿಣಾಮ ಉಂಟುಮಾಡುವುದಿಲ್ಲ ಎಂಬ ನಿಯಮವನ್ನು ಪ್ರೌಸ್ಟ್ ನಿರೂಪಿಸದ. ಇದಕ್ಕೆ ನಿಯತಾನುಪಾತ ನಿಯಮವೆಂದು ಹೆಸರು. ಡಾಲ್ಟನ್ ಗುಣಿತಾನುಪಾತ ನಿಯಮವನ್ನು ಪ್ರತಿಪಾದಿಸಿದ. ಂ ಮತ್ತು ಃ ಧಾತುಗಳು ಸಂಯೋಜನೆಗೊಂಡು ಒಂದಕ್ಕಿಂತ ಹೆಚ್ಚು ಸಂಯುಕ್ತಗಳು ಉತ್ಪನ್ನವಾದಾಗ, ಃಯ ನಿರ್ದಿಷ್ಟತೂಕದೊಡನೆ ಬೇರೆ ಬೇರೆ ಸಂಯುಕ್ತಗಳಲ್ಲಿ ಸಂಯೋಜಿಸಿರುವ ಂ ಯ ತೂಕಗಳು ಚಿಕ್ಕ ಪೂರ್ಣಾಂಕಗಳ ಅನುಪಾತವಾಗಿರುವುವು. ವಸ್ತುಗಳ ನಡುವೆ ಉಂಟಾಗುವ ಸಂಯೋಜನೆಯಲ್ಲಿ ಅವು ನಿರ್ದಿಷ್ಟ ತೂಕದಲ್ಲಿ ಸಂಯೋಜನೆಗೊಳ್ಳುವುವು. ಸಮಾನ ತೂಕಗಳ ಪರಸ್ಪರ ಸಂಬಂಧವನ್ನು ರಿಕ್ಟರ್ ಎಂಬಾತ ಗಮನಿಸಿ ಅನ್ಯೋನಾನುಪಾತನಿಯಮವನ್ನು ಪ್ರತಿಪಾದಿಸಿದ; ಗೊತ್ತಾದ ಒಂದು ನಿರ್ದಿಷ್ಟ ತೂಕದೊಡನೆ ಸಂಯೋಜಿಸುವ ಎರಡು ಅಥವಾ ಹೆಚ್ಚು ಧಾತುಗಳ ತೂಕಗಳು ಅಥವಾ ಅವುಗಳ ಗುಣಿತಗಳು ಅವು ಪರಸ್ಪರ ಸಂಯೋಜಿಸುವ ತೂಕಗಳಾಗಿರುವುವು. ಅನಿಲಗಳು ಸಂಯೋಜಿಸಿದಾಗ ಅವುಗಳ ಗಾತ್ರಗಳು ಮತ್ತು ಫಲಿತವಸ್ತುಗಳಲ್ಲಿ ಇರಬಹುದಾದ ಗಾತ್ರಗಳು ಪರಸ್ಪರ ಸರಳಾನುಪಾತದಲ್ಲಿರುವುವು ಎಂಬ ನಿಯಮವನ್ನು ಗೇ ಲ್ಯೂಸಾಕ್ ನಿರೂಪಿಸಿದ. ಪರಮಾಣುವಾದ : ವಸ್ತುವನ್ನು ಕೊನೆಯಿಲ್ಲದೆ ವಿಭಜಿಸಲು ಸಾಧ್ಯವಿಲ್ಲ ಅದು ಅತ್ಯಂತ ಸೂಕ್ಷ್ಮ ಮತ್ತು ಅವಿಭಾಜ್ಯ ಕಣಗಳಿಂದಾಗಿದೆ. ಪರಮಾಣುಗಳು ಬೇರೆ ಬೇರೆ ಆಕೃತಿಗಳನ್ನು ಹೊಂದಿರುವುವು. ಆದರೆ ಆಕರಗಳ ಸಂಖ್ಯೆ ಪರಿಮಿತವಾಗಿರುವುದು. ಇಂದ್ರಿಯ ಗೋಚರವಾದ ಯಾವುದೂ ಒಂದು ತರಹದ ಪರಮಾಣುವಿನಿಂದಾಗಿಲ್ಲ. ಪರಮಾಣುಗಳು ಹೆಚ್ಚು ವೇಗವಾಗಿ ಚಲಿಸುತ್ತವೆ. ಸಾಮಾನ್ಯವಾದ ರಾಸಾಯನಿಕ ವಿಧಾನಗಳಿಂದ ಯಾವ ವಸ್ತುವನ್ನು ಇನ್ನಷ್ಟು ಸರಳವಸ್ತುಗಳಾಗಿ ವಿಭಜಿಸಲಾಗುವುದಿಲ್ಲವೋ ಆ ವಸ್ತುವನ್ನು ಧಾತು ಎನ್ನಬಹುದು. ಎಕ್ಸ್‍ಕಿರಣ ರೋಹಿತದ ಸಹಾಯದಿಂದ ಒಂದು ವಸ್ತು ಧಾತುವೇ ಅಲ್ಲವೇ ಎಂದು ನಿಷ್ಕøಷ್ಟವಾಗಿ ಹೇಳಬಹುದು. ಧಾತುವಿನ ಆಧುನಿಕ ವಿವರಣೆ ಈ ರೀತಿ ಇದೆ ; ನ್ಯೂಕ್ಲಿಯಸ್ಸಿನಲ್ಲಿ ಸಮವಿದ್ಯುದಾವೇಶ ಹೊಂದಿರುವ ಪರಮಾಣುಗಳಿಂದ ಪೂರ್ತಿಯಾಗಿ ರಚಿತವಾಗಿರುವ ವಸ್ತುವೇ ಧಾತು. ಪರಮಾಣು ವಾದವನ್ನು ಪ್ರತಿಪಾದಿಸಿದವ ಡಾಲ್ಟನ್. ಒಂದು ವಸ್ತು ಧಾತುವಾಗಿರಲಿ ಸಂಯುಕ್ತವಾಗಿರಲಿ ಅದರ ಅತ್ಯಂತ ಚಿಕ್ಕ ಕಣವೇ ಪರಮಾಣು ಎಂಬುದು ಡಾಲ್ಟನ್ನನ ಭಾವನೆ. ಯಾವುದೇ ಸಂಯುಕ್ತದ ಅತ್ಯಂತ ಚಿಕ್ಕ ಕಣವನ್ನು ಪರಮಾಣುಗಳಾಗಿ ವಿಭಜಿಸಲು ಸಾಧ್ಯವೆಂದು ಅವೊಗ್ಯಾಡ್ರೊ ತೋರಿಸಿ ಆ ಸಂಯುಕ್ತದ ರಾಸಾಯನಿಕ ಗುಣಗಳನ್ನು ಹೊಂದಿರುವ ಅತ್ಯಂತ ಚಿಕ್ಕಕಣವನ್ನು ಸೂಚಿಸಲು ಅಣು (ಮಾಲಿಕ್ಯೂಲ್) ಎಂಬ ಪದವನ್ನು ಉಪಯೋಗಿಸಿದ. ಅವೊಗ್ಯಾಡ್ರೊ ನಿರೂಪಣೆ ಈ ರೀತಿ ಇದೆ ; ಸಮಸಂಮರ್ದ ಮತ್ತು ಉಷ್ಣತೆಗಳಲ್ಲಿ ಸಮಗಾತ್ರದ ಅನಿಲಗಳಲ್ಲಿ ಸಮಸಂಖ್ಯೆಯ ಅಣುಗಳು ಇರುತ್ತವೆ. ಯಾವುದೇ ಧಾತುವಿನ ಪರಮಾಣುವಿನ ತೂಕ ಹೈಡ್ರೋಜನ್ ಪರಮಾಣುವಿನ ತೂಕದ ಎಷ್ಟು ಪಟ್ಟು ಇದೆ ಎಂದು ಸೂಚಿಸುವ ಸಂಖ್ಯೆಗೆ ಪರಮಾಣು ತೂಕ ಎಂದು ಹೆಸರು. ಪರಮಾಣು ತೂಕ ನಿರ್ಧರಿಸಲು ಆಕ್ಸಿಜನ್ ಅಥವಾ ಕಾರ್ಬನ್ ಧಾತುಗಳನ್ನು ಕೂಡ ಪರಿಗಣಿಸುವುದುಂಟು. ಪರಮಾಣುರಚನೆ : ನಿಕಲ್ಸನ್ ಮತ್ತು ಕಾರ್ಲೆಲ್ ಎಂಬವರು ನೀರಿನ ಮೂಲಕ ವಿದ್ಯುತ್ತನ್ನು ಹಾಯಿಸಿ ಅದನ್ನು ವಿಭಜಿಸಿದರು. ಡೇವಿ ಕ್ಷಾರ ಲೋಹಗಳ ಆದ್ರ್ರ ಹೈಡ್ರಾಕ್ಸೈಡುಗಳ ಸಾರ ದ್ರಾವಣವನ್ನು ವಿದ್ಯುದ್ವಿಶ್ಲೇಷಿಸಿ ಕ್ಷಾರಲೋಹಗಳನ್ನು ಶೋಧಿಸಿದ. ಫ್ಯಾರಡೇ ಪರಿಮಾಣಾತ್ಮಕ ಸಂಬಂಧಗಳನ್ನು ಪ್ರತಿಪಾದಿಸಿದವರಲ್ಲಿ ಮೊದಲಿಗ. ಈಗ ಎರಡು ಪರಿಮಾಣಾತ್ಮಕ ಸಂಬಂಧಗಳನ್ನು ಪ್ರಚುರಪಡಿಸಿದ್ದಾನೆ. 1. ವಿದ್ಯುದ್ವಿಶ್ಲೇಷಣೆಯಿಂದ ಉಂಟಾಗುವ ವಿಭಜನೆ ಪ್ರವಹಿಸಿದ ವಿದ್ಯುತ್ತಿನ ಮೊತ್ತಕ್ಕೆ ಅನುಗುಣವಾಗಿರುತ್ತದೆ. 2. ಸಮಪ್ರಮಾಣ ವಿದ್ಯುತ್ತು ಬೇರೆ ಬೇರೆ ದ್ರಾವಣಗಳ ಮೂಲಕ ಪ್ರವಹಿಸಿದಾಗ ಉಂಟಾಗುವ ವಸ್ತುಗಳ ಪ್ರಮಾಣ ವಿಶ್ಲೇಷಣದಿಂದ ಉತ್ಪನ್ನವಾಗುವ ಧಾತುವಿನ ಅಥವಾ ರ್ಯಾಡಿಕಲಿನ ಸಮಾನತೂಕಕ್ಕೆ ಅನುಗುಣವಾಗಿರುತ್ತದೆ. ಇವೆರಡು ಪರಿಮಾಣಾತ್ಮಕ ಸಂಬಂಧಗಳ್ನು ಈ ರೀತಿಯಲ್ಲಿಯೂ ಹೇಳಬಹುದು :

1. ಒಂದು ನಿರ್ದಿಷ್ಟ ತರಹದ ಅಯಾನಿನೊಡನೆ ಸಂಗತವಾಗಿರುವ ವಿದ್ಯುತ್ತಿನ ಪ್ರಮಾಣ ನಿಯತವಾಗಿರುವುದು.
2. ಪರಸ್ಪರ ಸಮಾನವಾಗಿರುವ ಬೇರೆ ಬೇರೆ ತರಹದ ಅಯಾನುಗಳು ಒಂದೇ ಪ್ರಮಾಣದ ವಿದ್ಯುತ್ತಿನೊಡನೆ ಸಂಗತವಾಗಿರುವುವು.  ಧಾತುಗಳು ಹೇಗೆ ಪರಮಾಣುಗಳಿಂದ ರೂಪಿತವಾಗಿವೆಯೋ ಹಾಗೆಯೇ ವಿದ್ಯುತ್ತು ಕೂಡ ಅದರ ಪರಮಾಣುಗಳಂತೆ ವರ್ತಿಸುವ ನಿರ್ದಿಷ್ಟ ಪ್ರಮಾಣದ ಚಿಕ್ಕ ಚಿಕ್ಕ ಧನ ಮತ್ತು ಋಣ ಘಟಕಗಳಿಂದಾಗಿದೆ.  ಈ ರೀತಿಯಲ್ಲಿ ಎಲೆಕ್ಟ್ರಾನ್ ಜನ್ಮ ತಾಳಿತು.

ಅನಿಲಗಳ ಮೂಲಕ ವಿದ್ಯುತ್ತನ್ನು ಹಾಯಿಸಿದ ಪರಿಣಾಮವಾಗಿ ಕ್ಯಾಥೋಡ್ ಕಿರಣಗಳನ್ನು ಆವಿಷ್ಕರಿಸಲಾಯಿತು. ಇವು ಋಣ ವಿದ್ಯುತ್ಪ್ರವಾಹವನ್ನು ಉಂಟುಮಾಡುತ್ತವೆ. ಕ್ಯಾಥೋಡ್ ಕಿರಣಗಳು ಎಲ್ಲ ಪರಮಾಣುಗಳ ಅಂಶಗಳು. ತಾಮ್ಸನ್ನನ ಪ್ರಯೋಗಗಳು ಈ ಕಿರಣಗಳು ಎಲೆಕ್ಟ್ರಾನುಗಳೆಂಬುದನ್ನು ಸಾಬೀತುಪಡಿಸಿದವು. ಇವು ಋಣಾವೇಶಯುಕ್ತವಾಗಿರುವುದರಿಂದ ಕಾಂತ ಮತ್ತು ವಿದ್ಯುತ್ ಕ್ಷೇತ್ರಗಳಿಂದ ಅಪಸರಿಸಲ್ಪಡುತ್ತವೆ. ಈ ವರ್ತನೆಯಿಮದ ಆದೇಶ - ದ್ರವ್ಯ ಪರಿಮಾಣದ ಅನುಪಾತವನ್ನು ಪಡೆಯಲು ಅನುಕೂಲವಾಯಿತು. ಎಲೆಕ್ಟ್ರಾನುಗಳು ಋಣಾವಿಷ್ಟವಾಗಿರುವುದರಿಂದ ಇವು ಕ್ಯಾಥೋಡಿನಿಂದ ದೂರಕ್ಕೆ ಚದರಿಸಲ್ಪಡುವುವು. ಇದಕ್ಕೆ ವಿರುದ್ಧವಾಗಿ ಆನೋಡಿನಿಂದ ಕ್ಯಾಥೋಡಿನ ಕಡೆಗೆ ಚದರಿಸಲ್ಪಡುವ ಕಣಗಳೂ ಇವೆ. ಇವುಗಳಿಗೆ ಧನಕಿರಣಗಳೆಂದು ಹೆಸರು. ಇವು ಧನಾವಿಷ್ಟವಾಗಿರುವುವು. ಕ್ಯಾಥೋಡ್ ಕಿರಣಗಳು ವಸ್ತುವಿನ ಮೇಲೆ ಬಿದ್ದಾಗ ಹೊಸತೊಂದು ಕಿರಣ ಹೊರಸೂಸುವುದು. ಇದೇ ಎಕ್ಸ್‍ಕಿರಣ. ಸ್ಫಟಿಕಗಳ ರಚನೆ ಕುರಿತ ಸಂಶೋಧನೆಗಳಿಗೆ ಈ ಕಿರಣಗಳನ್ನು ವಿಶೇಷವಾಗಿ ಬಳಸುತ್ತಾರೆ. ಎಕ್ಸ್‍ಕಿರಣಗಳು ವಸ್ತುಗಳ ಮೇಲೆ ಬಿದ್ದಾಗ ಅವುಗಳಿಂದ ಇತರ ಎಕ್ಸ್‍ಕಿರಣಗಳು ಉತ್ಪತ್ತಿಯಾಗುತ್ತವೆ. ಇವಕ್ಕೆ ದ್ವಿತೀಯಕ ಕಿರಣಗಳೆಂದು ಹೆಸರು. ಎಕ್ಸ್‍ಕಿರಣಗಳಲ್ಲಿ ಏ - ಶ್ರೇಣಿ ಮತ್ತು ಐ - ಶ್ರೇಣಿ ಎಂಬ ಎರಡು ಗುಂಪುಗಳಿವೆ. ವಿಕಿರಣಪಟುತ್ವ : ಈ ವಿದ್ಯಮಾನವನ್ನು ಮೊತ್ತಮೊದಲಿಗೆ ಗಮನಿಸಿದಾತ ಬ್ವೆಕೆರಲ್. ತೋರಿಯಮ್, ಪೊಲೋನಿಯಮ್, ರೇಡಿಯಮ್ ಮುಂತಾದವು ವಿಕಿರಣಪಟುಧಾತುಗಳು. ಇಂಥ ಧಾತುಗಳು ಮೂರು ಬಗೆಯ ಕಿರಣಗಳನ್ನು ಬೀರುತ್ತವೆ : (.(, (. ಸ್ವಭಾವತಃ ಇವುಗಳ ನಡುವೆ ಬಹಳ ವ್ಯತ್ಯಾಸವಿದೆ. ಈ ಕಿರಣಗಳ ಮೇಲೆ ಕಾಂತ ಮತ್ತು ವಿದ್ಯುತ್‍ಕ್ಷೇತ್ರಗಳು ಬೀರುವ ಪರಿಣಾಮಗಳಿಂದ ಇವುಗಳ ಸ್ವಭಾವ ನಿರ್ಣೀತವಾಗಿದೆ. ( - ಕಿರಣಗಳು ಧನಾವಿಷ್ಟವಾಗಿವೆ. ಇವುಗಳ ಭೇದನಸಾಮಥ್ರ್ಯ ಅತ್ಯಂತ ಕಿರಿದು. ಚಲನವ್ಯಾಪ್ತಿ ಸುಮಾರು 7 ಸೆಂಮೀ. ಘನಪದಾರ್ಥ ಈ ಚಲನೆಯನ್ನು ತಡೆದು ನಿಲ್ಲಿಸುತ್ತದೆ. ( - ಕಿರಣಗಳಿಗೆ ಅಧಿಕ ಭೇದನಸಾಮಥ್ರ್ಯವಿದೆ. ಲೋಹಗಳ ತೆಳುಹಾಳೆಯನ್ನು ಭೇದಿಸಿಹೋಗಬಲ್ಲವು. ಇವು ಋಣಾವಿಷ್ಟವಾಗಿವೆ. ( - ಕಿರಣಗಳಿಗೆ ಅತ್ಯಧಿಕ ಭೇದನಸಾಮಥ್ರ್ಯವಿದೆ. ನ್ಯೂಕ್ಲಿಯಸ್ ಒಳಗಡೆ ಪ್ರೋಟಾನ್ ಮತ್ತು ನ್ಯೂಟ್ರಾನ್ ಎಂಬ ಕಣಗಳಿವೆ. ಎಲೆಕ್ಟ್ರಾನುಗಳು ನ್ಯೂಕ್ಲಿಯಸ್ ಹೊರಗಿನ ಪಥದಲ್ಲಿ ಚಲಿಸುತ್ತಿರುತ್ತವೆ. ವಸ್ತುವಿನಲ್ಲಿ ಈ ಮೂರು ಕಣಗಳಲ್ಲದೇ ಇನ್ನೂ ಅನೇಕ ಕಣಗಳಿವೆ ; ಬೋಸಾನ್, ಲೆಪ್ಟಾನ್, ಮೆಸಾನ್ ಮತ್ತು ಬೇರಿಯಾನ್‍ಗಳು. ಇವೆಲ್ಲವುಗಳಿಗೆ ಒಟ್ಟಾಗಿ ಪ್ರಾಥಮಿಕಕಣಗಳು (ಮೂಲಕಣಗಳು) ಎಂದು ಹೆಸರು. ಬೇರೆ ಬೇರೆ ಪರಮಾಣು ತೂಕವುಳ್ಳ ಆದರೆ ಒಂದೇ ಪರಮಾಣುಸಂಖ್ಯೆಯನ್ನು ಹೊಂದಿರುವ ಧಾತುಗಳೂ ಇವೆ. ಇವುಗಳಿಗೆ ಸಮಸ್ಥಾನಿಗಳೆಂದು (ಐಸೊಟೋಪ್ಸ್) ಹೆಸರು. ಧಾತುಗಳಲ್ಲಿ ಹೆಚ್ಚಿನವುಗಳಿಗೆ ಸಮಸ್ಥಾನಿಗಳಿರುತ್ತವೆ. ಒಂದೇ ಪರಮಾಣು ತೂಕವಿದ್ದು ಬೇರೆ ಬೇರೆ ಪರಮಾಣು ಸಂಖ್ಯೆಗಳಿರುವ ಧಾತುಗಳಿಗೆ ಸಮಭಾರಿಕಗಳೆಂದು (ಐಸೊಬಾರ್ಸ್) ಹೆಸರು. ವಿಕಿರಣಪಟುಧಾತುಗಳು ಅಪ್ರಚೋದಿತವಾಗಿ ವಿಕಿರಣ ಸೂಸುತ್ತವೆ. ವೇಗಾಧಿಕ್ಯದಿಂದ ಚಲಿಸುವ ವಿದ್ಯುದಾವಿಷ್ಟ ಕಣಗಳು ಅನಿಲಾಣುಗಳನ್ನು ಅಯಾನೀಕರಿಸಬಲ್ಲವು. ಯುರೇನಿಯಮ್ ಪರಮಾಣುವನ್ನು ನ್ಯೂಟ್ರಾನುಗಳು ಸಂಘಟ್ಟಿಸಿದಾಗ ನ್ಯೂಟ್ರಾನ್ ಗ್ರಹಣ ಮತ್ತು ನ್ಯೂಕ್ಲಿಯರ್ ವಿದಳನ ಎಂಬ ಎರಡು ಬದಲಾವಣೆಗಳಾಗುತ್ತವೆ. ನ್ಯೂಕ್ಲಿಯರ್ ವಿದಳನದಿಂದ ನ್ಯೂಕ್ಲಿಯಸ್ ಎರಡು ಭಾಗಗಳಾಗಿ ಒಡೆದು ಎರಡು ಮೂರು ನ್ಯೂಟ್ರಾನುಗಳು ಉತ್ಪತ್ತಿಯಾಗುವುವು. ಪ್ರತಿಯೊಂದು ವಿದಳನದಲ್ಲಿಯೂ ಸಾಕಷ್ಟು ಶಕ್ತಿ ಬಿಡುಗಡೆ ಆಗುತ್ತದೆ. ಈ ಕ್ರಿಯೆಯಿಂದ ಉಂಟಾಗುವ ಪರಿವರ್ತನಾ ಪರಂಪರೆಯನ್ನು ಪರಮಾಣು ಬಾಂಬಿನಲ್ಲಿ ಉಪಯೋಗಿಸುವರು. ವಿದಳನವನ್ನು ದಮನಿಸಿ ನ್ಯೂಕ್ಲಿಯರ್ ರಿಯಾಕ್ಟರಿನಲ್ಲಿ ಬಳಸುವರು. ಅನೇಕ ಭೌತಘಟನೆಗಳಲ್ಲಿ ಅಲೆಚಲನೆ ಪಾತ್ರವಹಿಸುವುದು. ಅಲೆಚಲನೆಯ ವೈಶಿಷ್ಟ್ಯವನ್ನು ಮೂರು ಪ್ರಮಾಣಗಳಿಂದ ನಿರ್ದೇಶಿಸಬಹುದು. ಅಲೆವೇಗ (ಛಿ), ಅಲೆಯುದ್ದ (() ಮತ್ತು ಆವರ್ತಾಂಕ (v). ಇಲ್ಲಿ ಛಿ = ( v. ದೃಗ್ಗೋಚರಬೆಳಕಿನ ಅಲೆಯುದ್ದ ನೇರಿಳೆಯಿಂದ ಕೆಂಪಿನೆಡೆಗೆ (ರೋಹಿತದಲ್ಲಿ) ಹೆಚ್ಚಾಗುತ್ತ ಹೋಗುತ್ತದೆ. ನೇರಿಳೆಬಣ್ಣದ ತುದಿಯಲ್ಲಿ 3600 Å ಏಕಮಾನಗಳೂ ಕೆಂಪುಬಣ್ಣದ ತುದಿಯಲ್ಲಿ 7200 Å ಏಕಮಾನಗಳೂ ದೃಗ್ಗೋಚರ ಬೆಳಕಿನ ಪರಿಮಿತಿಗಳು. ಕೆಳಮಿತಿಗಿಂತ ಕಡಿಮೆ ಅಲೆಯುದ್ದವಿರುವುವು ಅತಿನೇರಿಳೆ ಕಿರಣಗಳು, ಮೇಲುಮಿತಿಗಿಂತ ಜಾಸ್ತಿ ಇರುವುವು ಅತಿರಕ್ತಕಿರಣಗಳು. ಪ್ಲ್ಯಾಂಕ್ 1900 ರಲ್ಲಿ ಶಕಲಸಿದ್ಧಾಂತವನ್ನು (ಕ್ವಾಂಟಮ್ ಥಿಯರಿ) ಮಂಡಿಸಿದ. ವಸ್ತುವಿನಿಂದ ಶಕ್ತಿ ಹೊರಬಂದಾಗ ಅಥವಾ ವಸ್ತು ಶಕ್ತಿಯನ್ನು ಗ್ರಹಿಸಿದಾಗ. ಹೀಗೆ ಹೊರಸೂಸುವ ಅಥವಾ ಗ್ರಹಿಸುವ ಶಕ್ತಿಯ ನಿರ್ದಿಷ್ಟ ಮೊತ್ತಕ್ಕೆ ಶಕಲ ಎಂದು ಹೆಸರು. ಒಂದು ಶಕಲದಲ್ಲಿರುವ ಶಕ್ತಿಯ ಮೊತ್ತ ∆ ಇ ಆಗಿದ್ದರೆ ∆ಇ = h(

ಇಲ್ಲಿ ( ಆವರ್ತಾಂಕ.  h ಒಂದು ನಿಯತಾಂಕ.  ಶಕಲಸಿದ್ಧಾಂತದ ಮೂಲಕ ಪ್ಲ್ಯಾಂಕ್ ಕೃಷ್ಣಕಾಯ ವಿಕಿರಣವನ್ನು ಸಮರ್ಪಕವಾಗಿ ವಿವರಿಸಿದ್ದಾನೆ.

ಬೆಳಕಿನ ಕಿರಣವನ್ನು ಅಶ್ರಗದ ಮೂಲಕ ಹಾಯಿಸಿದಾಗ ಅದು ವಿಭಜಿಸಲ್ಪಟ್ಟು ಬೆಳಕಿನ ರೋಹಿತ (ಕಾಮನಬಿಲ್ಲು) ದೊರೆಯುತ್ತದೆ. ಇದರಲ್ಲಿ ಎರಡು ಬಗೆ : ಉತ್ಸರ್ಜನ (ಎಮಿಷನ್) ರೋಹಿತ ಮತ್ತು ಅವಶೋಷಣ (ಅಬ್ಸಾರ್ರ್ಷನ್) ರೋಹಿತ. ಪರಮಾಣುಗಳನ್ನು ಪರಿಶೀಲಿಸುವಾಗ ಸಾಮಾನ್ಯವಾಗಿ ಉತ್ಸರ್ಜನ ಬಗೆಯನ್ನೂ ಅಣುಗಳನ್ನು ಪರಿಶೀಲಿಸುವಾಗ ಅವಶೋಷಣಾ ಬಗೆಯನ್ನೂ ಬಳಸುತ್ತಾರೆ. ಪರಮಾಣು ರೋಹಿತಗಳಲ್ಲಿ ಕೆಲವೇ ಕೆಲವು ನಿಶಿತರೇಖೆಗಳು ಮಾತ್ರ ಇರುವುವು. ಇವುಗಳಿಗೆ ರೇಖಾರೋಹಿತವೆಂದೂ ಅಣುಗಳಿಗೆ ಸಂಬಂಧಿಸಿದ ರೋಹಿತಕ್ಕೆ ಪಟ್ಟಿರೋಹಿತವೆಂದೂ ಹೆಸರು. ರಸಾಯನವಿಜ್ಞಾನದ ಬಹುಭಾಗದ ವಿವರಣೆಗೆ ಅಲೆಬಲವಿಜ್ಞಾನ ಮಾರ್ಗದರ್ಶನ ನೀಡುತ್ತದೆ. ಇದನ್ನು 1920 ರಲ್ಲಿ ಷ್ರೋಡಿಂಗರ್ ಅಭಿವೃದ್ಧಿಗೊಳಿಸಿದ. ಈತ ಮಂಡಿಸಿದ ಒಂದು ಸಮೀಕರಣದ ಆಧಾರದಿಂದ ಎಲೆಕ್ಟ್ರಾನ್, ಪ್ರೋಟಾನ್ ಇನ್ನೂ ಮುಂತಾದ ಕಣಗಳ ಗುಣಗಳನ್ನು ತರ್ಕಬದ್ಧವಾಗಿ ಲೆಕ್ಕಹಾಕಬಹುದು. ಯಾವುದೇ ಧಾತುವಿನ ಭೂಸ್ಥಿತಿಯಲ್ಲಿರುವ ಪರಮಾಣುವಿನಿಂದ ಒಂದು ಎಲೆಕ್ಟ್ರಾನನ್ನು ಕಳಚಲು ಅವಶ್ಯವಾದ ಶಕ್ತಿಗೆ ಅಯಾನೀಕರಣ ಶಕ್ತಿ ಎಂದು ಹೆಸರು. ಹೀಗೆ ಕಳಚಿ ಹೋಗುವ ಎಲೆಕ್ಟ್ರಾನ್ ಪರಮಾಣುವಿನ ಬಾಹ್ಯತಮ ಚಿಪ್ಪಿನಲ್ಲಿದ್ದು ಅತ್ಯಂತ ಅಳ್ಳಕವಾಗಿ ಬಂಧಿತವಾಗಿರುವುದು. ಇದಾದ ಬಳಿಕ ಇನ್ನೊಂದು ಎಲೆಕ್ಟ್ರಾನನ್ನು ಅದರಿಂದ ಕಳಚಲು ಬೇಕಾಗುವ ಶಕ್ತಿಗೆ ದ್ವಿತೀಯ ಅಯಾನೀಕರಣ ಶಕ್ತಿ ಎಂದು ಹೆಸರು. ರೋಹಿತ ವಿಧಾನಗಳನ್ನು ಉಪಯೋಗಿಸಿ ಪ್ರಾಯೋಗಿಕವಾಗಿ ಇವನ್ನು ನಿರ್ಣಯಿಸುವರು. ವೇಲೆನ್ಸಿ : ಪರಮಾಣು ತತ್ತ್ವವನ್ನು ರಾಸಾಯನಿಕ ಪರಿವರ್ತನೆಗಳಿಗೆ ಅನ್ವಯಿಸುವುದರ ಮೂಲಕ ವೇಲೆನ್ಸಿವಾದ ಉದ್ಭವಿಸಿತು. ಪ್ರತಿಯೊಂದು ಧಾತುವಿಗೂ ಇತರ ಎಲ್ಲ ಧಾತುಗಳೊಡನೆ ಸಂಯೋಜಿಸುವ ಸಾಮಥ್ರ್ಯ ಇರುವುದು. ಆದರೆ ಈ ರೀತಿಯಾಗಿ ಸಂಯೋಜನೆ ಹೊಂದುವುದಕ್ಕೆ ಒಂದು ಮಿತಿ ಇರುವುದು. ಯಾವುದೇ ಒಂದು ಧಾತುವಿನ ಒಂದು ಪರಮಾಣು ಸಂಯೋಜಿಸುವ ಹೈಡ್ರೋಜನ್ನಿನ ಪರಮಾಣುಗಳ ಸಂಖ್ಯೆಗೆ ವೇಲೆನ್ಸಿ (ಸಂಯೋಜನಸಾಮಥ್ರ್ಯ) ಎಂದು ಹೆಸರು. ಉದಾಹರಣೆಗೆ ಆಕ್ಸಿಜನ್ನಿನ ವೇಲೆನ್ಸಿ 2. ನೈಟ್ರೊಜನ್ನಿನದು 3. ಇತ್ಯಾದಿ. ರಾಸಾಯನಿಕ ಆಕರ್ಷಣೆ ಮತ್ತು ವೇಲೆನ್ಸಿ ಪರಸ್ಪರ ಸಂಬಂಧಿತವಾಗಿ ಇರುವುದರಿಂದ ಅನೇಕ ಸಂಶೋಧಕರು ಈ ಕುರಿತು ಸಂಶೋಧನೆ ನಡೆಸಿದರು. ವೇಲೆನ್ಸಿಯನ್ನು ನಿರ್ದೇಶಿಸುವ ಬಲವಿರುವುದೆಂಬ ಅಭಿಪ್ರಾಯ ಅಳಿಸಿಹೋಯಿತು. ಲಾತರ್ ಮೇಯರ್ ವಿವರಿಸಿದ ಪ್ರಕಾರ ವೇಲೆನ್ಸಿ ಎಂಬುದು ಪರಮಾಣು ತೂಕದ ಮತ್ತು ಸಮಾನ ತೂಕಗಳ ಅನುಪಾತ. ಇದೊಂದು ಸಂಖ್ಯೆ ಮಾತ್ರ. ಪರಮಾಣವಿಕಬಲಗಳನ್ನು ಎಲೆಕ್ಟ್ರೋವೇಲೆನ್ಸಿ ಮತ್ತು ಕೋವೇಲೆನ್ಸಿಗಳಿಂದ ವಿವರಿಸಬಹುದು. ಉಷ್ಣಗತಿವಿಜ್ಞಾನ : ಇದು ಶಕ್ತಿವ್ಯತ್ಯಾಸಗಳ ಅಧ್ಯಯನಗೈಯುವ ವಿಭಾಗ, ಭೌತರಸಾಯನ ವಿಜ್ಞಾನಿಗಳಿಗೆ ರಾಸಾಯನಿಕ ಬದಲಾವಣೆಗಳಲ್ಲಾಗುವ ಶಕ್ತಿ ವ್ಯತ್ಯಾಸಗಳ ವ್ಯಾಸಂಗ ಬಲುಮುಖ್ಯ. ಮೂರು ಅನುಭವಜನ್ಯ ನಿಯಮಗಳು ಉಷ್ಣಗತಿವಿಜ್ಞಾನದ ತಳಹದಿ ಎನ್ನಬಹುದು. ಶಕ್ತಿಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಪರಿವರ್ತಿಸಬಹುದಾದರೂ ಅದನ್ನು ಸೃಜಿಸುವುದಾಗಲಿ ನಾಶಮಾಡುವುದಾಗಲೀ ಸಾಧ್ಯವಿಲ್ಲ ಎಂಬುದು ಮೊದಲನೆಯ ನಿಯಮ. ಕಾರ್ಯಶೀಲವಾದ ಒಂದು ವ್ಯವಸ್ಥೆ ಕಾರ್ಯವನ್ನು ತನ್ನ ಆಂತರಿಕಶಕ್ತಿಯ ವ್ಯಯದಿಂದ ಮಾಡುತ್ತದೆ. ಆ ವ್ಯವಸ್ಥೆಗೆ ಉಷ್ಣವನ್ನು ಊಡಿದರೆ ಅದರ ಆಂತರಿಕಶಕ್ತಿ ಹೆಚ್ಚುತ್ತದೆ. ಹೀಗೆ ಕಾರ್ಯವನ್ನು ಉಷ್ಣವಾಗಿ ಪರಿವರ್ತಿಸುವ ವಿಷಯದ ಬಗ್ಗೆ ಪರಿಮಾಣಾತ್ಮಕವಾಗಿ ಸಂಶೋಧನೆ ನಡೆಸಿದವರಲ್ಲಿ ಜೌಲ್ ಮೊದಲಿಗ. ಪ್ರತಿಯೊಂದು ರಾಸಾಯನಿಕ ಪರಿರ್ತನೆಯಲ್ಲಿಯೂ ಉಷ್ಣ ಅವಶೋಷಿಸಲ್ಪಡುವುದು ಅಥವಾ ವಿಸರ್ಜಿಸಲ್ಪಡುವುದು. ರಾಸಾಯನಿಕ ಸಂಯುಕ್ತಗಳು ಬೇರೆ ಬೇರೆ ಪ್ರಮಾಣದ ಶಕ್ತಿಯೊಡನೆ ಸಂಗತವಾಗಿರುವುವು. ಪರಿವರ್ತನೆಯ ಫಲಿತ ವಸ್ತುಗಳ ಶಕ್ತಿಪ್ರಮಾಣ ಪರಿವರ್ತಕಗಳ ಶಕ್ತಿ ಪ್ರಮಾಣಕ್ಕೆ ಸಮನಾಗಿರುವ ಸಂಭವ ಕಡಿಮೆಯಾದ್ದರಿಂದ ಪರಿವರ್ತನೆಯಾದಾಗ ಶಕ್ತಿ ವಿಸರ್ಜನೆ ಅಥವಾ ಅವಶೋಷಣೆ ಅನಿವಾರ್ಯ. ರಾಸಾಯನಿಕ ಬದಲಾವಣೆಗಳ ರೀತಿ ಅನುಸರಿಸಿ ಪರಿವರ್ತನೆಯ ಉಷ್ಣವನ್ನು ದಹನೋಷ್ಣ, ಉತ್ಪಾದನೋಷ್ಣ, ತಟಸ್ಥೀಕರಣೋಷ್ಣ, ದ್ರಾವಣ ದುರ್ಬಲೀಕರಣೋಷ್ಣ, ವಿಭಜನೋಷ್ಣ, ಸಂಮರ್ದೋಷ್ಣ ಇತ್ಯಾದಿಯಾಗಿ ವಿಭಾಗಿಸಬಹುದು. ಬದಲಾವಣೆ ಅಪ್ರಚೋದಿತವಾಗಿ ನಡೆಯುವುದೇ ಅಥವಾ ಇಲ್ಲವೇ ಎನ್ನುವುದನ್ನು ಮೊದಲನೆಯ ನಿಯಮ ತಿಳಿಸುವುದಿಲ್ಲ. ಅಪ್ರಚೋದಿತವಾಗಿ ರಾಸಾಯನಿಕ ಬದಲಾವಣೆ ಯಾವ ದಿಕ್ಕಿನಲ್ಲಿ ನಡೆಯುತ್ತದೆ ಎನ್ನುವುದನ್ನು ಎರಡನೆಯ ನಿಯಮದಿಂದ ತಿಳಿಯಲು ಸಾಧ್ಯ. ಈ ನಿಯಮವನ್ನು ಅನೇಕ ವಿಧವಾಗಿ ನಿರೂಪಿಸಬಹುದು. ಬೇರೊಂದು ಕಡೆ ವ್ಯತ್ಯಾಸ ಉಂಟುಮಾಡದೆ ಉಷ್ಣವನ್ನು ಸಂಪೂರ್ಣವಾಗಿ ಅದಕ್ಕೆ ಸಮಾನ ಕಾರ್ಯವಾಗಿ ಪರಿವರ್ತಿಸುವ ಆವೃತ್ತ ರೀತಿಯಲ್ಲಿ ಕೆಲಸ ಮಾಡುವ ಯಂತ್ರದ ರಚನೆ ಸಾಧ್ಯವಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬಹುದು : ಬಾಹ್ಯ ಕಾರಕವೊಂದರ ಕೈವಾಡವಿಲ್ಲದೆ ಉಷ್ಣ ತಾನಾಗಿಯೇ ತಣ್ಣನೆಯ ವಸ್ತುವಿನಿಂದ ಬಿಸಿಯಾದ ವಸ್ತುವಿಗೆ ಹರಿಯುವುದು ಅಸಾಧ್ಯ. ಎಂಟ್ರೋಪಿ ಅಳೆಯಲು ಈ ನಿಯಮ ಉಪಕಾರಿ ಆಗಿದೆ. ಮೂರನೆಯ ನಿಯಮವನ್ನು ಪ್ಲ್ಯಾಂಕ್ ನಿರೂಪಿಸಿದ. ಶೂನ್ಯ ಡಿಗ್ರಿ ಕೆಲ್ವಿನ್ನಿನಲ್ಲಿ ಇತರ ಎಲ್ಲ ವಸ್ತುಗಳೂ ಎಂಟ್ರೋಪಿ ಹೊಂದಿದ್ದರೆ ಆದರ್ಶಸ್ಫಟಿಕ ಮಾತ್ರ 0 ಎಂಟ್ರೋಪಿ ಹೊಂದಿರುತ್ತದೆ. ಈ ನಿಯಮವನ್ನು ವಸ್ತುಗಳ ನಿರಪೇಕ್ಷ ಎಂಟ್ರೋಪಿಯ ಶೋಧನೆಗೆ ಉಪಯೋಗಿಸುವರು. ಅನಿಲಗಳು : ಒತ್ತಡವನ್ನು ನಿಯತ ಉಷ್ಣತೆಯಲ್ಲಿ ಅವಿಚ್ಛಿನ್ನವಾಗಿ ಕಡಿಮೆಮಾಡಿದಾಗ ಏಕರೂಪತೆ ಅಳಿಯದೆ ಮತ್ತು ಗಾತ್ರ ಯಾವುದೇ ಮಿತಿಯಿಲ್ಲದೆ ಹೆಚ್ಚುವ ವಸ್ತುವನ್ನು ಅನಿಲವೆಂದು ಹೇಳಬಹುದು. ಅನಿಲಗಳ ವರ್ತನೆಯನ್ನು ವಿವರಿಸುವುದರಲ್ಲಿ ಮತ್ತು ಅವುಗಳ ವರ್ತನೆಯ ಪರಿಮಾಣಾತ್ಮಕ ನಿರೂಪಣೆಗಳನ್ನು ಕೊಡುವುದರಲ್ಲಿ ಅನಿಲಗಳ ಚಲನವಾದ ಅತ್ಯಂತ ಉಪಯುಕ್ತವಾಗಿದೆ. ಚಲನವಾದದ ಪ್ರಕಾರ ಅನಿಲ ಎಂಬುದು ಅಣು ಅಥವಾ ಕಣಗಳಿಂದ ಮಾಡಲ್ಪಟ್ಟಿವೆ. ಈ ಅಣುಗಳು ಯಾದೃಚ್ಛಿಕವಾಗಿ ಚಲಿಸುತ್ತಿರುತ್ತವೆ. ಇವುಗಳ ವೇಗಗಳಲ್ಲಿ ವಿಶಾಲ ತಾರತಮ್ಯ ಉಂಟು. ಅನಿಲಗಳ ವರ್ತನೆಯನ್ನು ನಿಯಂತ್ರಿಸುವ ಅನೇಕ ನಿಯಮಗಳಿವೆ. ದತ್ತ ಉಷ್ಣತೆಯಲ್ಲಿ ಒತ್ತಡ ಮತ್ತು ಗಾತ್ರದ ಗುಣಲಬ್ಧ ನಿಯತಾಂಕ ಎಂಬುದು ಬಾಯಿಲನ ನಿಯಮ. ಚಾಲ್ರ್ಸ್‍ನ ನಿಯಮ ಹೀಗಿದೆ : ಒತ್ತಡ ನಿಯತವಾಗಿದದ್ದಲ್ಲಿ ಉಷ್ಣತೆಯ ವ್ಯತ್ಯಾಸದಿಂದ ಆಗುವ ಗಾತ್ರ ವ್ಯತ್ಯಾಸದ ವೇಗ ನಿಯತವಾಗಿರುವುದು. ಅವೊಗ್ಯಾಡ್ರೊ ವಾದವನ್ನು ಈ ರೀತಿ ನಿರೂಪಿಸಬಹುದು : ಅನಿಲಗಳ ಸಮ ಗಾತ್ರಗಳು ಸಮ ಉಷ್ಣತಾಸ್ಥಿತಿಯಲ್ಲಿ ಮತ್ತು ಸಮಸಂಮರ್ದದಲ್ಲಿ ಸಮಸಂಖ್ಯೆಯ ಅಣುಗಳನ್ನು ಹೊಂದಿರುವುವು. ಬಾಯಿಲನ ಮತ್ತು ಚಾಲ್ರ್ಸ್‍ನ ನಿಯಮಗಳನ್ನು ಒಂದುಗೂಡಿಸಿದರೆ ಸರ್ವಸಮನ್ವಯ ಅನಿಲ ನಿಯಮ ಬರುತ್ತದೆ. 1 ಗ್ರಾಮ್ ವಸ್ತುವಿನ ಉಷ್ಣತೆಯನ್ನು 10ಛಿ ಏರಿಸಲು ಅವಶ್ಯವಾದ ಉಷ್ಣ ಮತ್ತು 1 ಗ್ರಾಮ್ ನೀರಿನ ಉಷ್ಣವನ್ನು ಇದೇ ಉಷ್ಣತಾಮಿತಿಯ ಮೂಲಕ ಏರಿಸಲು ಅವಶ್ಯವಾದ ಉಷ್ಣ ಇವುಗಳ ಅನುಪಾತಕ್ಕೆ ಸಾಪೇಕ್ಷ ಉಷ್ಣವೆಂದು ಹೆಸರು. ಇದನ್ನು ನಿಯತ ಒತ್ತಡದಲ್ಲಿ ಮತ್ತು ನಿಯತ ಗಾತ್ರದಲ್ಲಿ ಕಂಡುಹಿಡಿಯಬಹುದು. ಒಂದು ಅಣು ಇನ್ನೊಂದು ಅಣುವಿನೊಡನೆ ಸಂಘಟ್ಟಿಸದೆ ಚಲಿಸುವ ದೂರಕ್ಕೆ ಅಣುವಿನ ಮುಕ್ತಮಾರ್ಗದ ಸರಾಸರಿ ಎನ್ನುವರು. ಎಲ್ಲ ಅನಿಲಗಳೂ ಸರ್ವ ಸಮನ್ವಯ ಅನಿಲ ನಿಯಮವನ್ನು ಪಾಲಿಸುವುದಿಲ್ಲ. ಆದ್ದರಿಂದ ವ್ಯಾಂಡರ್‍ವಾಲ್, ಬರ್ತ್‍ಲಾಟ್, ಡಯಟ್ರಸಿ ಮತ್ತು ಕ್ಲಾಸಿಯಸ್ ಅವರುಗಳು ಸರ್ವಸಮನ್ವಯ ಅನಿಲ ನಿಯಮವನ್ನು ತಕ್ಕಮಟ್ಟಿಗೆ ಮಾರ್ಪಡಿಸಿ ತಮ್ಮದೇ ಆದ ಸಮೀಕರಣಗಳನ್ನು ಅಸ್ತಿತ್ವಕ್ಕೆ ತಂದರು. ಘನಸ್ಥಿತಿ : ಘನವಸ್ತುಗಳು ಸ್ಫಟಿಕ ಅಥವಾ ಅಸ್ಫಟಿಕ ವಸ್ತುಗಳು. ಪ್ರತಿಯೊಂದು ಸ್ಫಟಿಕಾಕಾರದ ವಸ್ತುವೂ ಒಂದೇ ತರಹದ ರೇಖಾಕೃತಿಯುಳ್ಳ ಅನೇಕ ಚಿಕ್ಕ ಚಿಕ್ಕ ಘಟಕಗಳ ಸಮುದಾಯ. ಸ್ಫಟಿಕ ಏಕರೂಪತೆಯನ್ನು ಹೊಂದಿದ್ದರೂ ಬೇರೆ ಬೇರೆ ದಿಕ್ಕುಗಳಲ್ಲಿ ಬೇರೆ ಬೇರೆ ಗುಣಗಳನ್ನು ಪ್ರದರ್ಶಿಸುವುದು. ಅಸ್ಫಟಿಕಘನಗಳಾಗಿ ತೋರುವ ಅನೇಕ ವಸ್ತುಗಳು ವಾಸ್ತವಿಕವಾಗಿ ಅತಿ ಶೈತ್ಯಗೊಂಡು ದ್ರವಗಳಾಗಿ ಇರುವುವು. ಸ್ಫಟಕದ ಅಂತರದಲ್ಲಿ ಅಣುಗಳು ಮತ್ತು ಪರಮಾಣುಗಳು ಯಾವ ರೀತಿಯ ಸಂವಿಧಾನ ಹೊಂದಿರುವುವು ಎನ್ನುವುದು ಸ್ಫಟಿಕದ ಆಕೃತಿಯನ್ನು ನಿರ್ಣಯಿಸುವುದು. ಒಂದೇ ವಿಧವಾದ ಘಟಕಗಳ ಸುವ್ಯವಸ್ಥಿತ ಒಂದುಗೂಡಿಕೆಯಿಂದ ಸ್ಫಟಿಕ ರಚಿತವಾಗುವುದು. ಈ ಪ್ರತಿಯೊಂದು ಘಟಕದಲ್ಲಿಯೂ ಒಂದು ನಿರ್ದಿಷ್ಟ ಬಿಂದುವನ್ನು ತೆಗೆದುಕೊಂಡರೆ ಇಂಥ ಬಿಂದುಗಳನ್ನು ಸೇರಿಸುವ ರೇಖೆಗಳು ಮತ್ತು ಸಮತಳಗಳು ಸ್ಫಟಿಕ ಆಕ್ರಮಿಸಿರುವ ಪ್ರದೇಶವನ್ನು ಸಮಾಂತರಮುಖಗಳುಳ್ಳ ಕೋಶಗಳ ತಂಡಗಳಾಗಿ ವಿಭಾಗಿಸುವುವು. ಈ ಕೋಶಗಳಿಗೆ ಘಟಕಕೋಶಗಳೆಂದು ಬಿಂದುಗಳ ಸಂವಿಧಾನಕ್ಕೆ ಆಕಾಶಜಾಲಕ (ಸ್ಪೇಸ್ ಲ್ಯಾಟಿಸ್) ಎಂದು ಹೆಸರು. ಸ್ಫಟಿಕಗಳ ರಚನೆಯಲ್ಲಿ ಬ್ರಾಗ್ ವಿಧಾನ, ಫೌಡರ್ ವಿಧಾನ, ತಿರುಗುವ ಸ್ಫಟಿಕದ ವಿಧಾನ ಮುಂತಾದವು ಬಲು ಮುಖ್ಯ ಪಾತ್ರ ವಹಿಸಿದೆ. ದ್ರವಗಳು : ಒತ್ತಡವನ್ನು ಯುಕ್ತ ಪ್ರಮಾಣಕ್ಕೆ ಏರಿಸಿ ಉಷ್ಣತೆಯನ್ನು ತಕ್ಕಷ್ಟು ಕಡಿಮೆಮಾಡಿ ಎಲ್ಲ ಅನಿಲಗಳನ್ನೂ ದ್ರವಿಕರಬಹುದು. ದ್ರವಗಳು ಮೇಲ್ಮೈ ಕರ್ಷಣ, ಸ್ನಿಗ್ಧತೆ, ದ್ಯುತಿಕ್ರಿಯಾಶಕ್ತಿ, ಕಾಂತತ್ವವ್ಯಾವರ್ತನ, ವಕ್ರೀಭವನತ್ವ, ಬೆಳಕಿನ ಅವಶೋಷಣ ಇನ್ನೂ ಮುಂತಾದ ಗುಣಗಳನ್ನು ಪಡೆದಿವೆ. ಇವು ದ್ರವಗಳ ರಚನೆ ನಿರ್ಧರಿಸುವುದರಲ್ಲಿ ಮಹತ್ತ್ವದ ಪಾತ್ರ ವಹಿಸುತ್ತವೆ. ದುರ್ಬಲ ದ್ರಾವಣಗಳು : ದ್ರಾವಣ ಸಂಪೂರ್ಣ ಏಕರೂಪದ ಮಿಶ್ರಣ. ಎಲ್ಲ ಬಗೆಯ ದ್ರಾವಣಗಳೂ ಸಾಧ್ಯ. ಅನಿಲಗಳಲ್ಲಿ ಅನಿಲಗಳ ದ್ರಾವಣ. ದ್ರವಗಳಲ್ಲಿ ಅನಿಲಗಳ ದ್ರಾವಣ, ದ್ರವಗಳಲ್ಲಿ ದ್ರವಗಳ ದ್ರಾವಣ. ದ್ರವಗಳಲ್ಲಿ ಘನಗಳ ದ್ರಾವಣ ಮತ್ತು ಘನಗಳಲ್ಲಿ ಘನಗಳ ದ್ರಾವಣಗಳನ್ನು ತಯಾರಿಸಬಹುದು. ಈ ಪ್ರತಿಯೊಂದು ಬಗೆಯೂ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಒಳಗೊಂಡಿರುತ್ತದೆ. ಎಲ್ಲ ದ್ರಾವಣಗಳೂ ಹೊಂದಿರುವ ದ್ರಾವಣದ ಸಮಾನಗುಣಗಳು ಮತ್ತು ದ್ರಾವಣದ ರಚನೆಯಲ್ಲಿ ಇರುವ ವ್ಯತ್ಯಾಸ ಸಾರರಿಕ್ತ ದ್ರಾವಣಗಳ ಮೇಲೆ ಪರಿಣಾಮ ಉಂಟುಮಾಡುತ್ತವೆ. ಇಂಥ ಗುಣಗಳನ್ನು ಸಂಕಲಿತಗುಣಗಳೆನ್ನುವರು. ದ್ರಾವಣದ ಸಾರರಿಕ್ತತೆ ಹೆಚ್ಚಾದಷ್ಟೂ ಇವುಗಳ ವರ್ತನೆ ಆದರ್ಶವರ್ತನೆಯನ್ನು ಸಮೀಪಿಸುವುದು. ದ್ರಾವಣದ ಒಂದು ಅಂಗವಸ್ತು ಕುರಿತಂತೆ ಗಿಬ್ಸನ ಅಬಂಧಿತ ಶಕ್ತಿ ಒಂದು ಮೋಲಿಗೆ ಎಷ್ಟು ವ್ಯತ್ಯಾಸವಾಗುವುದು ಮತ್ತು ಈ ವ್ಯತ್ಯಾಸ ದ್ರಾವಣದ ರಚನೆಯೊಡನೆ ಹೇಗೆ ಸಂಬಂಧಿಸಿರುವುದು ಎನ್ನುವುದನ್ನು ಉಷ್ಣಗತಿ ವಿಜ್ಞಾನ ವಿಧಾನದ ರೀತ್ಯ ಪರಿಶೀಲಿಸಿ, ಇದರಿಂದ ತಾಲ್ಟ್‍ನಿಯಮ, ಹೆನ್ರಿನಿಯಮ ಮತ್ತು ಅಸ್ಮಾಟಿಕ್ ಒತ್ತಡದ ವ್ಯಾಂಟ್‍ಹಾಪ್ ನಿರೂಪಣೆಗಳನ್ನು ಪಡೆಯಬಹುದು. ಅಸ್ಮಾಟಿಕ್ ಒತ್ತಡವನ್ನು ಅನೇಕ ವಿಧಾನಗಳಿಂದ ಅಳೆಯಬಹುದು. ಇದರ ನಿರ್ಣಯದಿಂದ ದ್ರಾವಣದಲ್ಲಿರುವ ವಸ್ತುಗಳ ಅಣುತೂಕಗಳನ್ನು ನಿರ್ಧರಿಸಬಹುದು. ಲೋಹಗಳು ಮತ್ತು ದ್ರಾವಣಗಳಲ್ಲಿ ವಿದ್ಯುದ್ವಹನ : ಘನವಸ್ತುಗಳನ್ನು ವಾಹಕ ಮತ್ತು ಅವಾಹಕಗಳೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ವೋಲ್ಟ ಎಂಬವನ ಹೆಸರಿನಿಂದ ಪ್ರಸಿದ್ಧವಾಗಿರುವ ಕೋಶವನ್ನು ರಚಿಸಿದ ಬಳಿಕ ದ್ರವಗಳಲ್ಲಿಯ ವಿದ್ಯುದ್ವಹನವಿವರ ಸಂಶೋಧಿಸಲ್ಪಟ್ಟಿತು. ವಿದ್ಯುತ್ಪ್ರವಾಹವನ್ನು ನೀರಿನ ಮೂಲಕ ಹಾಯಿಸಿದಾಗ ಉಂಟಾದ ಉತ್ಪನ್ನಗಳನ್ನು ಸಂಶೋಧಿಸುತ್ತಿದ್ದರು. ದ್ರಾವಣಗಳ ಮೂಲಕ ವಿದ್ಯುತ್ಪ್ರವಾಹವನ್ನು ಹಾಯಿಸಿದಾಗ ಅವು ವಿದ್ಯುದ್ವಿಭಜನೆ ಹೊಂದುತ್ತವೆ. ಫ್ಯಾರಡೇ ಈ ದ್ರಾವಣಗಳನ್ನು ಎಲೆಕ್ಟ್ರೊಲೈಟುಗಳೆಂದು ಹೆಸರಿಸಿದ. ಎಲೆಕ್ಟ್ರೊವೇಲೆಂಟ್ ಸಂಯುಕ್ತಗಳು ಈ ರೀತಿ ವಿಭಜನೆ ಹೊಂದುತ್ತವೆ, ಕೋವೇಲೆಂಟ್ಸಂಯುಕ್ತಗಳು ಸಾಮಾನ್ಯವಾಗಿ ಅವಾಹಕಗಳು. ವಿದ್ಯುತ್ಪ್ರವಾಹದಿಂದ ಎಲೆಕ್ಟ್ರೊಲೈಟುಗಳ ವಿಭಜನೆಗೆ ಸಂಬಂಧಿಸಿದಂತೆ ಪರಿಮಾಣಾತ್ಮಕ ನಿಯಮಗಳನ್ನು ಫ್ಯಾರಡೇ ಆವಿಷ್ಕರಿಸಿದ. ಯಾವುದೇ ವಿದ್ಯುದ್ವಲಯದ ರೋಧಕತೆ ವಾಹಕದ ತುದಿಗಳ ನಡುವೆ ಪ್ರಯೋಗಿಸಿರುವ ವೋಲ್ಟೇಜ್ ಮತ್ತು ಅದರ ಮೂಲಕ ಹರಿಯುವ ವಿದ್ಯುತ್ತಿನ ತೀವ್ರತೆಗಳ ಅನುಪಾತವಾಗಿರುವುದೆಂದು ಓಮ್ ತಿಳಿಸಿದ. ವಸ್ತುಗಳ ರೋಧಕತೆಯನ್ನು ಗಣಿಸಲು ಕಂಡಕ್ಟಿವಿಟಿ ಬ್ರಿಡ್ಜನ್ನೂ ಎಲೆಕ್ಟ್ರೊಮೋಟಿವ್ ಬಲ ಅಳೆಯಲು ಪೊಟೆನ್ಷಿಯಾ ಮೀಟರನ್ನೂ ಉಪಯೋಗಿಸುವರು. ಅಮಿತ ಸಾರಗುಂದಕೆಗಳಲ್ಲಿ (ಡೈಲ್ಯೂಶನ್)ಸಮಾನ ವಾಹಕತೆ (ಈಕ್ವಿವಲೆಂಟ್ ಕಂಡ್ಟಿವಿಟಿ) ಎರಡು ಭಾಗಗಳಿಂದ ಆಗಿದೆ. ಒಂದು ಭಾಗ ಅನಯಾನುಗಳಿಂದಲೂ ಮತ್ತೊಂದು ಭಾಗ ಕ್ಯಾಟಯಾನುಗಳಿಂದಲೂ ಆಗಿರುವುದು. ಈ ಭಾಗಗಳಿಗೆ ಅಯಾನುಗಳ ಮೊಬಿಲಿಟಿಗಳು ಎಂದು ಹೆಸರು. ಯಾವುದೇ ಅಯಾನಿನ ಮೊಬಿಲಿಟಿ ಗೊತ್ತಾದರೆ ಇತರೆ ಅಯಾನುಗಳ ಮೊಬಿಲಿಟಿಗಳನ್ನು ಪ್ರಾಯೋಗಿಕವಾಗಿ ಶೋಧಿಸಬಹುದು. ಲೋಹಗಳಲ್ಲಿ ಯಾವ ರಾಸಾಯನಿಕ ಬದಲಾವಣೆಯನ್ನೂ ಉಂಟುಮಾಡದೆ ವಾಹಕದ ಮೂಲಕ ವಿದ್ಯುತ್ತು ಹರಿಯುತ್ತದೆ, ಲೋಹದ ಮೂಲಕ ಎಲೆಕ್ಟ್ರಾನುಗಳು ಪ್ರವಹಿಸುವುದನ್ನೇ ವಿದ್ಯುತ್ಪ್ರವಾಹ ಎನ್ನುವುದು. ಯಾವ ಲೋಹ ಒಳ್ಳೆಯ ವಿದ್ಯುದ್ವಾಹಕವೊ ಅದು ಒಳ್ಳೆಯ ಉಷ್ಣವಾಹಕವೂ ಆಗಿರುತ್ತದೆ. ಅಯಾನಿಕ್ ಸಮಸ್ಥಿತಿಗಳ ಪರಿಶೀಲನೆಗೆ ರಾಶಿ ಕ್ರಿಯಾನಿಯಮವನ್ನು ಉಪಯೋಗಿಸಬಹುದು. ಎಲೆಕ್ಟ್ರೊಲೈಟುಗಳನ್ನು ಎರಡು ವಿಧವಾಗಿ ವರ್ಗೀಕರಿಸಬಹುದು. ಸಾರ ಮತ್ತು ಸಾರರಿಕ್ತ. ಸಾರ ಎಲೆಕ್ಟ್ರೊಲೈಟುಗಳು ಸಂಪೂರ್ಣವಾಗಿ ಅಯಾನೀಕರಿಸಿದರೆ ಸಾರರಿಕ್ತ ಎಲೆಕ್ಟ್ರೊಲೈಟುಗಳು ಅಲ್ಪವಾಗಿ ಅಯಾನೀಕರಿಸುತ್ತವೆ. ಅಯಾನುಗಳ ನಡುವಣ ಆಕರ್ಷಣದ ಪರಿಣಾಮಗಳ ಉಪಯುಕ್ತವಾದ ಒಂದು ಸೂಚಿ ಅಯಾನಿಕ್ ಪ್ರಬಲತೆ ಎಂಬ ಪ್ರಮಾಣ. ಎಲೆಕ್ಟ್ರೊಲೈಟುಗಳ ಆಕ್ಟಿವಿಟಿ ನಿಯತಾಂಕಗಳನ್ನು ನಿರ್ಣಯಿಸಲು ವಿವಿಧ ವಿಧಾನಗಳನ್ನು ಉಪಯೋಗಿಸುವರು. ನೀರು ಕೂಡ ಅಲ್ಪಪ್ರಮಾಣದಲ್ಲಿ ಅಯಾನೀಕರಿಸುತ್ತದೆ. ಹೈಡ್ರೋಜನ್ ಮತ್ತು ಹೈಡ್ರಾಕ್ಸಿಲ್ ಅಯಾನುಗಳ ಆಕ್ಟಿವಿಟಿಗಳ ಗುಣಲಬ್ಧಕ್ಕೆ ಅಯಾನಿನ ಗುಣಲಬ್ಧವೆಂದು ಹೆಸರು. ಇದರ ಬೆಲೆ 250ಅ ಯಲ್ಲಿ 10-14. ಆಮ್ಲೀಯ ದ್ರಾವಣಗಳು ಹೈಡ್ರೊಜನ್ನಿನ ಅಯಾನುಗಳನ್ನೂ ಕ್ಷಾರೀಯದ್ರಾವಣಗಳು ಹೈಡ್ರಾಕ್ಸಿಲ್ ಅಯಾನುಗಳನ್ನೂ ಕೊಡುತ್ತವೆ. [ಊ+] ಮತ್ತು [ಔಊ-] ಗಳ ದ್ರಾವಣದ ಆಮ್ಲತೆ ಅಥವಾ ಕ್ಷಾರತ್ವಗಳ ಅಳತೆಗಳಾಗಿವೆ. ಒಂದು ಕಡಿಮೆಯಾದಂತೆ ಮತ್ತೊಂದು ಹೆಚ್ಚಾಗುತ್ತದೆ. ಏಕೆಂದರೆ ಇವುಗಳ ಗುಣಲಬ್ಧ ನಿಯತಾಂಕವಾಗಿರುವುದು. [ಊ+] ಮತ್ತು [ಔಊ-] ಸಮವಾಗಿದ್ದರೆ ದ್ರಾವಣ ತಟಸ್ಥವಾಗಿರುವುದು. ಹೈಡ್ರೋಜನ್ ಅಯಾನಿನ ಸಾರತೆಯ (ಕಾನ್ಸಂಟ್ರೇಷನ್) ಅನುಕೂಲ ಅಳತೆಯಾದ ಠಿಊ ಮಾನವನ್ನು ಸಾರೆನ್ಸನ್ ಎಂಬವ ಜಾರಿಗೆ ತಂದ. ಸಾರರಿಕ್ತ ಆಮ್ಲಗಳ ಪರಸ್ಪರ ಪ್ರಬಲತೆಯನ್ನು ಹೋಲಿಸಲು ಅಯಾನೀಕರಣ ನಿಯತಾಂಕ ಉತ್ತಮ ಅಳತೆ. ರಕ್ತ ಮೊದಲಾದಂಥ ಅನೇಕ ಜೈವಿಕ ವ್ಯವಸ್ಥೆಗಳಲ್ಲಿ ಠಿಊ ಬೆಲೆಯನ್ನು ಹೆಚ್ಚು ವ್ಯತ್ಯಾಸ ಹೊಂದಲು ಬಿಡಕೂಡದು. ಅದರ ಠಿಊ ವ್ಯತ್ಯಾಸವನ್ನು ನಿರೋಧಿಸತಕ್ಕ ದ್ರಾವಣ ನಮಗೆ ಅವಶ್ಯ. ಇಂಥ ದ್ರಾವಣ ಬಫರ್ ದ್ರಾವಣವೆಂದು ಹೆಸರು. ವೋಲ್ಟಾಯಿಕ್ ಕೋಶದಲ್ಲಿ ರಾಸಾಯನಿಕ ಶಕ್ತಿ ವಿದ್ಯುಚ್ಛಕ್ತಿಯಾಗಿ ರೂಪಾಂತರಗೊಳ್ಳುವುದು. ವಿದ್ಯುತ್ಪ್ರವಾಹದ ತೀವ್ರತೆ ಕೋಶದ ಎರಡು ಎಲೆಕ್ಟ್ರೋಡುಗಳ ನಡುವಣ ವಿಭವ ವ್ಯತ್ಯಾಸವನ್ನು ಅವಲಂಬಿಸಿರುವುದು. ಇದರ ನಿರ್ಣಯ ಪ್ರಾಯೋಗಿಕವಾಗಿ ಸಾಧ್ಯ. ಅಯಾನಿಕ್ ವಿಧಾನಗಳಲ್ಲಿ ಉತ್ಕರ್ಷಣೆ ಎಂದರೆ ಧನಾವೇಶಗಳ ಆಧಿಕ್ಯ. ಅಪಕರ್ಷಣೆ ಇದಕ್ಕೆ ಪ್ರತಿಮುಖವಾಗಿರುವುದು. ಎಲೆಕ್ಟ್ರೊಮೋಟಿವ್ ಬಲಗಳ ಅಳತೆಯಿಂದ ಈ ಮುಂದಿನ ಅಂಶಗಳನ್ನು ನಿರ್ಣಯಿಸಬಹುದು : 1 ಒಂದು ಪರಿವರ್ತನೆಯಲ್ಲಿ ಆಗುವ ಅಬಂಧಿತ ಶಕ್ತಿವ್ಯತ್ಯಾಸ 2 ಅಲ್ಪದ್ರಾವ್ಯ ಲವಣಗಳ ದ್ರಾವಣತೆ ಮತ್ತು ಗುಣಲಬ್ಧಗಳ ನಿರ್ಣಯ 3 ವೇಲೆನ್ಸಿಯ ನಿರ್ಣಯ 4 ಹೈಡ್ರೋಜನ್ ಅಯಾನ್ ಸಾರತೆ ನಿರ್ಣಯ 5 ಟ್ರಾನ್ಸ್‍ಪೋರ್ಟ್ ಸಂಖ್ಯೆಗಳ ನಿರ್ಣಯ 6 ಅಲಾಟ್ರೊಪಿಯ ಪರಿಶೀಲನೆ 7 ಕಾಂಪ್ಲೆಕ್ಸ್ ಅಯಾನುಗಳ ಪರಿಶೀಲನೆ 8 ಪೊಟೆನ್ಷಿಯೊಮೆಟ್ರಿಕ್ ಟೈಟ್ರೇಷನ್ ಇತ್ಯಾದಿ ರಾಸಾಯನಿಕ ಗತಿವಿಜ್ಞಾನ : ಯಾವುದೇ ಪರಿವರ್ತನೆ ನಡೆಯಲು ಎಷ್ಟು ಕಾಲ ಬೇಕು ಎಂಬ ಪ್ರಶ್ನೆಯನ್ನು ಉಷ್ಣಗತಿವಿಜ್ಞಾನ ಉತ್ತರಿಸುವುದಿಲ್ಲ. ಕೆಲವು ಪರಿವರ್ತನೆಗಳನ್ನು ವೇಗವರ್ಧಕ ಅಥವಾ ವಿದ್ಯುತ್ಕಿಡಿಗಳನ್ನು ಬಳಸಿ ಪ್ರಚೋದಿಸದಿದ್ದಲ್ಲಿ ಪರಿವರ್ತನೆ ಗಣನೀಯ ವೇಗದಲ್ಲಿನಡೆಯುವುದಿಲ್ಲ. ಪರಿವರ್ತನೆಯ ವೇಗವನ್ನು ಅಳೆಯುವುದು ಮತ್ತು ಈ ಅಳತೆಯನ್ನು ಹೇಗೆ ನಿರೂಪಿಸುವುದು ಎಂಬ ನಿರ್ಣಯಕ್ಕೆಬರುವುದೇ ಗತಿವಿಜ್ಞಾನದ ವ್ಯಾಸಂಗ ವಿಷಯ. ಪರಿವರ್ತನೆ ನಡೆಯುವ ರೀತಿ ಮತ್ತೊಂದು ಸಮಸ್ಯೆ. ಪರಿವರ್ತನೆ ಆಗುವ ಕಾಲದ ಮಿತಿ ಕೆಲವು ಮಿನಿಟುಗಳಿಂದ ಹಿಡಿದು ಕೆಲವು ಗಂಟೆಗಳ ಒಳಗೆ ಅಳೆಯಲು ಸಾಧ್ಯವಾಗಿರಬೇಕು. ರಾಸಾಯನಿಕ ವಿಶ್ಲೇಷಣ ವಿಧಾನದಿಂದ ಪರಿವರ್ತನೆಯ ಪ್ರಗತಿಯನ್ನು ತಿಳಿಯಬಹುದು. ಪರಿವರ್ತನೆಯ ವೇಗ ಪರಿವರ್ತಕಗಳ ಪಟುರಾಶಿಗಳ ಗುಣಲಬ್ಧಕ್ಕೆ ಅನುಗುಣವಾಗಿರುತ್ತದೆ. ಪರಿವರ್ತನೆಯ ರಾಶಿಕ್ರಿಯಾ ಸಮೀಕರಣದ ಸಾರತೆ ಪದಗಳ ಘಾತಗಳ ಮೊತ್ತಕ್ಕೆ ಪರಿವರ್ತನೆ ವರ್ಗ ಎಂದೂ ಪರಿವರ್ತನೆಯ ರಾಸಾಯನಿಕ ಸಮೀಕರಣದ ಎಡಭಾಗದಲ್ಲಿ ಕಂಡುಬರುವ ಅಣುಗಳ ಒಟ್ಟು ಸಂಖ್ಯೆಗೆ ಅಣವಿಕತೆ (ಮಾಲಿಕ್ಯುಲಾರಿಟಿ) ಎಂದೂ ಹೆಸರು. ಪರಿವರ್ತನೆಯ ರಾಸಾಯನಿಕ ಸಮೀಕರಣದ ಎಡಭಾಗದಲ್ಲಿ ಕಂಡುಬರುವ ಅಣುಗಳ ಸಂಖ್ಯೆಗಳಿಗೆ ಅನುಗುಣವಾಗಿ ಏಕಾಣವಿಕ, ದ್ವಯಾಣವಿಕ ಮತ್ತು ತ್ರಯಾಣವಿಕ ಎಂದು ವಿಭಾಗಿಸುವರು. ಇದೇ ರೀತಿಯಲ್ಲಿ ಪರಿವರ್ತನೆಯ ವರ್ಗವನ್ನು ಮೊದಲನೆಯ ವರ್ಗದ ಗತಿವಿಧಾನ, ಎರಡನೆಯವರ್ಗದ ಗತಿವಿಧಾನ ಮತ್ತು ಮೂರನೆಯ ವರ್ಗದ ಗತಿವಿಧಾನ ಎಂದು ವಿಂಗಡಿಸಬಹುದು. ಸಮಾನ ಕಾಲಗಳಲ್ಲಿ ಸಾರತೆಯ ಬೆಲೆ ಅರ್ಧಕ್ಕೆ ಇಳಿದರೆ ಅದಕ್ಕೆ ಅರ್ಧಜೀವಿತ ಕಾಲವೆನ್ನುವರು. ಉಷ್ಣತೆಯ ಏರಿಕೆಯಿಂದ ಪರಿವರ್ತನೆಯ ವೇಗ ಹೆಚ್ಚುವುದು. ಅರೇನಿಯಸ್ ಎಂಬಾತ ಈ ಪರಿಣಾಮವನ್ನು ಪರಿಮಾಣಾತ್ಮಕವಾಗಿ ನಿರೂಪಿಸಿದ. ಪರಿವರ್ತನೆ ನಡೆಯುವ ರೀತಿಯ ವಿಮರ್ಶೆಯನ್ನು ಢಿಕ್ಕಿಸಿದ್ಧಾಂತ (ಕೊಲಿಷನ್ ಥಿಯರ್) ಮತ್ತು ಆಕ್ಟಿವೇಬೆಡ್ ಕಾಂಪ್ಲೆಕ್ಸ್ ಸಿದ್ಧಾಂತಗಳಿಂದ ಮಾಡಬಹುದು. ಪರಿವರ್ತನೆಯಲ್ಲಿ ಪಾತ್ರ ವಹಿಸದಿರುವ ಲವಣಗಳನ್ನು ದ್ರಾವಣಕ್ಕೆ ಹಾಕುವುದರಿಂದ ಪರಿವರ್ತನೆಯ ವೇಗ ಬದಲಾಗುವುದು. ಕ್ಲೋರೀನ್ ಮತ್ತು ಹೈಡ್ರೋಜನ್ ನಡುವೆ ದ್ಯುತಿರಾಸಾಯನಿಕ ಕ್ರಿಯೆ ನಡೆದು ಹೈಡ್ರೋಜನ್ ಉತ್ಪತ್ತಿಯಾಗುತ್ತದೆ. ಈ ಪರಿವರ್ತನೆ ಆರಂಭವಾಗಲು ಬೆಳಕು ಅವಶೋಷಿಸಲ್ಪಡಬೇಕು. ಆದರೆ ಅವಶೋಷಿಸಲ್ಪಟ್ಟ ಪ್ರತಿಯೊಂದು ಶಕಲ ಬೆಳಕೂ ಅತ್ಯಧಿಕ ಸಂಖ್ಯೆಯ ಅಣುಗಳು ಪರಿವರ್ತಿಸುವಂತೆ ಮಾಡುವುದು. ಇದನ್ನು ವಿವರಿಸಲು ನನ್ಸ್ರ್ಟ್ ಎಂಬಾತ ಪರಿವರ್ತನಾ ಪರಂಪರೆಯ ಭಾವನೆಯನ್ನು ಸಲಹೆ ಮಾಡಿದ. ಕೈಗಾರಿಕಾ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಒಂದು ಗುಂಪಿಗೆ ಸೇರಿದ ಪರಿವರ್ತನೆಗಳು ಪರಿವರ್ತನಾ ಪರಂಪರೆಗಳನ್ನೇ ಒಳಗೊಂಡಿವೆ. ಪಾಲಿಥೀನ್ ಮತ್ತು ನೈಲಾನುಗಳನ್ನು ಸರಳ ಅಣುಗಳ ಸಂಯೋಜನೆಯಿಂದ ತಯಾರಿಸುವರು. ಇವು ಒಂದಾದ ಮೇಲೊಂದು ಸೇರುತ್ತ ಬಂದು ಕೊನೆಗೆ ಸಾವಿರಾರು ಮಾನೋಮರ್ ಘಟಕಗಳನ್ನು ಹೊಂದಿರುವ ಮಹಾಣುಗಳಾಗುವುವು. ಇವುಗಳಿಂದ ತಯಾರಿಸಲ್ಪಟ್ಟ ಹಲವಾರು ವಸ್ತುಗಳು ನಮ್ಮ ನಿತ್ಯಜೀವನದಲ್ಲಿ ಬಳಕೆಯಲ್ಲಿವೆ. ಕಲಿಲಗಳು ಮತ್ತು ಮೇಲ್ಮೈಘಟನೆಗಳು: ಕಲಿಲವಿe್ಞÁನದ ಸ್ಥಾಪಕ ಗ್ರಹ್ಯಾಮ್. ಕಲಿಲದ್ರಾವಣದಲ್ಲಿ ದ್ರಾವ್ಯವಸ್ತು ದೊಡ್ಡದಾಗಿರುವುದು. ಕಲಿಲ ದ್ರಾವಣಗಳು ಎರಡು ಪ್ರಾವಸ್ಥೆಯ ವ್ಯವಸ್ಥೆಗಳು. ದ್ರವಕಲಿಲಗಳು ಕಲಿಲ ಪದರಗಳ ಮೂಲಕ ವ್ಯಾಪಿಸಲು ಅಸಮರ್ಥವಾಗಿರುವುವು. ಕಲಿಲವಸ್ತುವನ್ನು ಶುದ್ಧಮಾಡುವ ವಿಧಾನಕ್ಕೆ ಡಯಾಲಿಸಿಸ್ ಎಂದು ಹೆಸರು. ಲವಣವನ್ನು ಕಲಿಲದ್ರಾವಣಗಳಿಗೆ ಹಾಕಿದರೆ ಇವು ಗರಣೆಯ ರೂಪದಲ್ಲಿ ಒತ್ತರಿಸುವುವು. ಒತ್ತರಿಸುವಿಕೆಯಿಂದ ಉಂಟಾದ ಗರಣೆಯನ್ನು ಜೆಲ್ ಎಂದು ಕರೆಯುವರು. ಕಲಿಲದ್ರಾವಣಗಳಿಗೆ ಸಾಮಾನ್ಯವಾಗಿ ಸಾಲ್ ಎಂದು ಹೆಸರಿದೆ. ಪ್ರಸಾರಕವನ್ನು ನೀರಾಗಿದ್ದರೆ ಅದನ್ನು ಹೈಡ್ರೋಸಾಲ್ ಎನ್ನುವರು. ಸಾಲ್‍ಗಳನ್ನು ಲಯೊಫೋಬಿಕ್ (ದ್ರಾವಕದ್ವೇಷಿಗಳು) ಮತ್ತು ಲಯೋಫಿಕ್ (ದ್ರಾವಕ ಅನುರಕ್ತಿಗಳು) ಎಂಬ ಎರಡು ಪಂಗಡಗಳಾಗಿವೆ ವಿಭಾಗಿಸಿದರೆ. ಕಲಿಲದ್ರಾವಣಗಳನ್ನು ಸಾಂದ್ರೀಕರಣ ವಿಧಾನ ಮತ್ತು ಪ್ರಸರಣಕಾರಕ ವಿಧಾನಗಳಿಂದ ತಯಾರಿಸುತ್ತಾರೆ. ಕಲಿಲ ಅಣುತೂಕಗಳನ್ನು ಅವಸಾದನ (ಸೆಡಿಮೆಂಟೇಷನ್) ವಿಧಾನಗಳಿಂದ ಶೋಧಿಸುವರು. ಕಲಿಲದ್ರಾವಣಗಳ ಪರಿಶೀಲನೆ ಅತಿಸೂಕ್ಷ್ಮದರ್ಶಕದ ಸಹಾಯದಿಂದ ಮಾಡುತ್ತಾರೆ. ಕಲಿಲಕಣಗಳನ್ನು ಅತಿಸೂಕ್ಷ್ಮದರ್ಶಕದ ನೆರವಿನಿಂದ ವೀಕ್ಷಿಸಿದಾಗ ಈ ಕಣಗಳು ಯಾವ ನಿರ್ದಿಷ್ಟ ಪಥವನ್ನೂ ಅನುಸರಿಸದೆ ದೃಷ್ಟಿಪಥದೊಳಗಿನ ಕ್ಷೇತ್ರದಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವುದನ್ನು ಗೋಚರವಾಗುವುದು. ಈ ಚಲನೆಯನ್ನು ಬ್ರೌನ್ ಪತ್ತೆ ಹಚ್ಚಿದ. ಕಲಿಲದ್ರಾವಣಗಳ ಮೂಲಕ ವಿದ್ಯುತ್ತನ್ನು ಹರಿಸಿದಾಗ ಅವು ವಿಭಜನೆ ಹೊಂದುತ್ತವೆ. ಅಧಿಶೋಷಣೆ (ಅಡ್ಸಾಪ್ರ್ಷನ್) ಮೇಲ್ಮೈಯಲ್ಲಿ ಮಾತ್ರ ನಡೆಯುವ ಘಟನೆ. ಇದರಲ್ಲಿ ಪ್ರೊಂಡ್‍ಲಿಹ್ ಮತ್ತು ಲ್ಯಾಂಗ್‍ಮೂರ್ ಎಂಬ ಎರಡು ಐಸೋಥರ್ಮುಗಳಿವೆ. ಅಧಿಶೋಷಣೆಯಲ್ಲಿ ಭೌತಧಿಶೋಷಣೆ ಮತ್ತು ಕೆಮಿಸಾಪ್ರ್ಸನ್ ಎಂಬ ಎರಡು ವಿಧಗಳಿವೆ. ಕ್ರೊಮಟೋಗ್ರಫಿಕ್ ವಿಶ್ಲೇಷಣೆ ಅತ್ಯಮೂಲ್ಯ ವಿಶ್ಲೇಷಣ ವಿಧಾನ. ಅತಿ ಜಟಿಲ ಮಿಶ್ರಣಗಳನ್ನು ಪ್ರತ್ಯೇಕಿಸಲು, ವಸ್ತುಗಳನ್ನು ಶುದ್ಧೀಕರಿಸಲು, ಅಪದ್ರವಗಳನ್ನು ಪತ್ತೆಹಚ್ಚಲು ಮತ್ತು ಇತರ ಅನೇಕ ಉದ್ದೇಶಗಳಲ್ಲಿ ಬಳಸಲು ಇದರ ಉಪಯೋಗವಿದೆ. ವೇಗವರ್ಧನೆ: ಅಲ್ಪಪ್ರಮಾಣದಲ್ಲಿ ಇತರ ವಸ್ತುಗಳನ್ನು ಪರಿವರ್ತಿಸುವ ವ್ಯವಸ್ಥೆಗೆ ರಾಸಾಯನಿಕವೊಂದನ್ನು ಸೇರಿಸಿ ಪರಿವರ್ತನೆಯ ವೇಗವನ್ನು ಹೆಚ್ಚಿಸುವ ಅಥವಾ ತಗ್ಗಿಸುವ ವಿದ್ಯಮಾನವೇ ವೇಗವರ್ಧನೆ (ಕೆಟಾಲಿಲಿಸ್). ರಸಾಯನವಿe್ಞÁನದ ಎಲ್ಲ ವಿಭಾಗಗಳಲ್ಲಿ ವಿಶೇಷವಾಗಿ ಕೈಗಾರಿಕೆಗಳಲ್ಲಿ ವೇಗವರ್ಧಕಗಳು ಪ್ರಮುಖ ಪಾತ್ರವಹಿಸುತ್ತವೆ. ವೇಗವರ್ಧನೆಯನ್ನು ಎರಡು ಬಗೆಗಳಾಗಿ ವಿಂಗಡಿಸಬಹುದು: (1) ಸಮಾಂಗ ವೇಗವರ್ಧನೆ: ಇದರಲ್ಲಿ ಪರಿವರ್ತಕಗಳು ಮತ್ತು ವೇಗವರ್ಧಕ ಒಂದೇ ಪ್ರಾವಸ್ಥೆಯಲ್ಲಿರುವುವು. (2) ವಿಷಮಾಂಗ ವೇಗವರ್ಧನೆ: ಇದರಲ್ಲಿ ಪರಿವರ್ತಕಗಳು ಮತ್ತು ವೇಗವರ್ಧಕ ಬೇರೆ ಬೇರೆ ಪ್ರಾವಸ್ಥೆಗಳಲ್ಲಿರುವುವು. ಅಸ್ಟವಾಲ್ಡ್ ಎಂಬಾದ ಕೆಟಾಲಿಸಿಸ್ ಘಟನೆಯ ಕೆಲವು ವೈಶಿಷ್ಟ್ಯಗಳನ್ನು ನಿರೂಪಿಸಿದ್ದಾನೆ. ವೇಗವರ್ಧನೆ ಅಗುವ ರೀತಿಯನ್ನು ಮಧ್ಯವರ್ತಿ ಸಂಯುಕ್ತಗಳ ವಾದ ಮತ್ತು ಅಧಿಶೋಷಣೆವಾದಗಳಿಂದ ಸ್ಪಷ್ಟೀಕರಿಸಬಹುದು. ಯಾವುದೇ ವೇಗವರ್ಧಕದ ಕ್ರಿಯಾಪಟುತ್ವ ಅದರೊಡನೆ ಬೇರೊಂದು ವಸ್ತುವನ್ನು ಮಿಶ್ರ ಮಾಡುವುದರಿಂದ ಹೆಚ್ಚುವುದು. ಈ ವರ್ತನೆಗೆ ಉತ್ತೇಜನ ಎಂದು ಹೆಸರು. ಅನೇಕ ವೇಳೆ ಪರಿವರ್ತಕಗಳಲ್ಲಿರುವ ಅಲ್ಪಪ್ರಮಾಣದ ಅಪದ್ರವ್ಯಗಳು ವೇಗ ವರ್ಧಕವನ್ನು ನಿರುಪಯುಕ್ತಗೊಳಿಸುವುವು. ಇವುಗಳಿಗೆ ವೇಗವರ್ಧಕಹಾರಿಗಳೆಂದು ಹೆಸರು. ದ್ಯುತಿರಸಾಯನವಿe್ಞÁನ: ದ್ಯುತಿರಸಾಯನವಿe್ಞÁನ ಬೆಳಕಿನ ಅವಶೋಷಣೆಯನ್ನೂ ಪರಿವರ್ತನೆಗಳ ವಿಷಯವನ್ನೂ ಒಳಗೊಂಡಿದೆ. ಯಾವುದೇ ವಸ್ತುವಿನ ಮೇಲೆ ಬೆಳಕು ಬಿದ್ದಾಗ ಅದರ ಒಂದು ಭಾಗ ಪ್ರತಿಫಲಿತವಾಗಬಹುದು, ಇನ್ನೊಂದುಭಾಗ ಹೀರಲ್ಪಡಬಹುದು, ಮತ್ತೊಂದು ಬಾಗ ಅದರ ಮೂಲಕ ಹಾದು ಹೋಗಬಹುದು. ರಾಸಾಯನಿಕ ಕ್ರಿಯೆಗೆ ಅವಶೋಷಿತ ಬೆಳಕು ಮಾತ್ರ ಪರಿಣಾಮಕಾರಿ. ಫ್ರೆನೆಲ್ಲನ ಪ್ರತಿಫಲನ ನಿಯಮ, ಲ್ಯಾಂಬರ್ಟ್ ಮತ್ತು ಬೀರ್ ಎಂಬವರ ನಿಯಮಗಳು ಇಲ್ಲಿ ಮುಖ್ಯವಾದುವು. ದ್ಯುತಿರಸಾಯನವಿe್ಞÁನದಲ್ಲಿ ಶಕಲಸಿದ್ಧಾಂತವನ್ನು ಅನ್ವಯಿಸುತ್ತಾರೆ. ಯಾವುದೇ ವ್ಯವಸ್ಥೆ ಬೆಳಕನ್ನು ಹೀರಿದಾಗ ಅದರಲ್ಲಿ ಅನೇಕ ಪರಿಣಾಮವುಂಟಾಗುತ್ತವೆ. ವ್ಯವಸ್ಥೆಯ ಉಷ್ಣರೂಪದ ಶಕ್ತಿಯ ಹೆಚ್ಚಳವಾಗಬಹುದು. ಅಥವಾ ಪರಮಾಣು ಅಥವಾ ಅಣುಗಳಲ್ಲಿಯ ಎಲೆಕ್ಟ್ರಾನುಗಳನ್ನು ಮೇಲಿನ ಶಕ್ತಿಮಟ್ಟಕ್ಕೆ ಏರಿಸಬಹುದು. ದ್ಯುತಿವಿಧಾನಗಳನ್ನು ದ್ಯುತಿವಿಧಾನಗಳು ಮತ್ತು ದ್ಯುತಿರಾಸಾಯನಿಕ ವಿಧಾನಗಳೆಂದು ವಿಭಾಗಿಸಬಹುದು. ಪರಮಾಣು ಮತ್ತು ಬೆಳಕಿನ ರೂಪದ ಶಕ್ತಿಗಳು ಒಟ್ಟುಗೂಡಿದಾಗ ಈ ಕೆಳಗಿನ ಪರಿಣಾಮಗಳನ್ನು ಕಾಣಬಹುದು: 1. ಮೇಲಿನ ಶಕ್ತಿ ಮಟ್ಟಕ್ಕೆ ಎಲೆಕ್ಟ್ರಾನುಗಳ ಉತ್ತಾರಣೆ. 2. ಅಯಾನೀಕರಣಗೊಂಡ ಪರಮಾಣು ಮತ್ತು ಎಲೆಕ್ಟ್ರಾನ್ (ದ್ಯುತಿವೈದ್ಯುತ ಪರಿಣಾಮ). 3. ಎಲೆಕ್ಟ್ರಾನುಗಳು ತತ್‍ಕ್ಷಣ ಮೊದಲಿನ ಸ್ಥಿತಿಗೆ ಹಿಂದಿರುಗುವುದು (ಫ್ಲೂರೆಸೆನ್ಸ್). 4. ಸ್ವಲ್ಪಕಾಲದ ಬಳಿಕ ಎಲೆಕ್ಟ್ರಾನುಗಳು ಮೊದಲಿನ ಸ್ಥಿತಿಗೆ ಹಿಂತಿರುಗುವುದು (ಫಾಸ್ಫಾರೆಸೆನ್ಸ್). 5. ರಾಸಾಯನಿಕ ಪರಿವರ್ತನೆಯಲ್ಲಿ ಭಾಗವಹಿಸಿ ಮೊದಲ ಸ್ಥಿತಿಗೆ ಹಿಂತಿರುಗುವುದು (ದ್ಯುತಿರಾಸಾಯನಿಕ ಪರಿಣಾಮ). ಅಣುಗಳ ರಚನೆ: ಅಣುವಿನ ವಾಸ್ತವಿಕ ಗಾತ್ರ ಮತ್ತು ಅಣುಗಳಲ್ಲಿ ಇರುವ ಪರಮಾಣುಗಳ ವಿನ್ಯಾಸಗಳನ್ನು ತಿಳಿಯಬೇಕು. ಅಣುವಿನಲ್ಲಿರುವ ಪರಮಾಣುಗಳು ಸಂತತವಾಗಿ ಕಂಪಿಸುತ್ತಿರುವುದರಿಂದ ಪರಿಣಾಮಕಾರಿತ್ರಿಜ್ಯ ಅನಿರ್ದಿಷ್ಟವಾಗಿರುವುವು. ರೋಹಿತವಿಧಾನಗಳಿಂದ ಬಂಧಗಳ ಉದ್ದದ ಬಗ್ಗೆ ತಿಳಿವಳಿಕೆ ಪಡೆಯಬಹುದು. ಶುದ್ಧ ಭ್ರಮಣರೋಹಿತಗಳು ದ್ವಿಧ್ರುವ ಭಮಣಾಂಕ ಶೂನ್ಯ ಇರದ ಅಣುಗಳಿಗೆ ಮಾತ್ರ ಸೀಮಿತವಾಗಿರುವುದು. ಭ್ರಮಣ - ಕಂಪನ ರೋಹಿತಗಳು ಸಮೀಪದ ಅತಿರಕ್ತ ಪ್ರದೇಶಗಳಲ್ಲಿರುವುವು. ಕಂಪನರೋಹಿತಗಳ ಪರಿಶೀಲನೆಯಿಂದ ಅಣುಗಳ ಕಂಪನವೈಶಿಷ್ಟ್ಯಗಳನ್ನು ಪರಿಶೀಲಿಸಬಹುದು. ರಾಮನ್‍ರೋಹಿತವನ್ನು ಈ ಕೆಲಸಕ್ಕೆ ಉಪಯೋಗಿಸುವರು. ಸ್ಫಟಿಕಗಳ ವಿಷಯವನ್ನು ವಿಮರ್ಶೆಮಾಡುವಾಗ ಎಕ್ಸ್ ಕಿರಣ ಮತ್ತು ಎಲೆಕ್ಟ್ರಾನ್ ಕಿರಣಗಳ ಜಾಲವನ್ನು ಉಪಯೋಗಿಸುವರು. ಅಣುಗಳ ರಚನೆಯ ಬಗ್ಗೆ ದ್ವಿವೈದ್ಯುತ ನಿಯತಾಂಕ ಈ ಬಗ್ಗೆ ಇರುವ ಜÁ್ಞನವನ್ನು ವಿಶೇಷವಾಗಿ ಹೆಚ್ಚಿಸಿದೆ. ಒಂದು ಅನಿಲ ಅಥವಾ ಅವಿಯನ್ನು ವಿದ್ಯುತ್ಕ್ಷೇತ್ರದಲ್ಲಿಟ್ಟಾಗ ಮೊದಲನೆಯದಾಗಿ ಅಣುಗಳು ದ್ವಿದ್ರುವ ಭ್ರಮಣಾಂಕ ಹೊಂದಿದ್ದರೆ ಅದು ಈ ಅಣುಗಳು ವಿದ್ಯುತ್ಕ್ಷೇತ್ರ ಪ್ರಯೋಗಿಸಿದ ವಿದ್ಯುತ್ಕ್ಷೇತ್ರಕ್ಕೆ ವಿರುದ್ಧವಾಗಿ ವರ್ತಿಸುವ ದಿಕ್ಕಿನಲ್ಲಿ ತಮ್ಮ ಸ್ಥಾನಗಳನ್ನು ಕಲ್ಪಿಸಿಕೊಳ್ಳುವುವು. ಅಣುಗಳು ದ್ವಿಧ್ರುವ ಭ್ರಮಣಾಂಕ ಹೊಂದಿರಲಿ ಹೊಂದದಿರಲಿ, ಎಲೆಕ್ಟ್ರಾನುಗಳು ತಮ್ಮ ರೂಢಿಯಾದ ಪಥಗಳಿಂದ ಕ್ಷೇತ್ರದ ಧನಧ್ರುವದ ಕಡೆಗೆ ಅಕರ್ಷಿತವಾಗಿ ಅವುಗಳ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯಾಗುವುದು. ದ್ವಿಧ್ರುವ ಭಮಣಾಂಕವನ್ನು ಅನೇಕ ವಿಧಾನಗಳಿಂದ ಕಂಡುಹಿಡಿಯಬಹುದು. ಈ ನಿರ್ಣಯದ ಫಲಿತಾಂಶದಿಂದ ಬಂಧಗಳ ಭ್ರಮಣಾಂಕ, ಬಂಧಗಳ ನಡುವಣ ಕೋನ. ಸ್ಟೀರಿಯೋಐಸೋಮೆರಿಸಮ್ ಇನ್ನೂ ಮುಂತಾದ ಪ್ರಶ್ನೆಗಳನ್ನು ನಿರ್ಣಯಿಸಬಹುದು. (ಆರ್.ಎ.ಎನ್.) ಸಾವಯವ ರಸಾಯನವಿe್ಞÁನ: ಕಾರ್ಬನ್ ಸರಪಳಿ ಇಲ್ಲವೆ ಕಾರ್ಬನ್ - ಉಂಗುರ ಸಂಯುಕ್ತಗಳ ಅಥವಾ ತತ್ಸಬಂಧಿ ಮಿಶ್ರಣಗಳ ಸಂಯೋಜನೆ, ಕ್ರಿಯೆ ಮತು ಗುಣಲಕ್ಷಣಗಳನ್ನು ಕುರಿತ ಶಾಸ್ತ್ರೀಯ ಅಧ್ಯಯನ (ಅಗ್ರ್ಯಾನಿಕ್ ಕೆಮಿಸ್ಟ್ರಿ). ಈ ಲೇಖನ ಭಾಗವನ್ನು ಮುಂದೆ ಉಪಶೀರ್ಷಿಕೆಗಳಲ್ಲಿ ಪ್ರಸ್ತುತಪಡಿಸಿದೆ: ಬೆಳೆವಣಿಗೆ ಮತ್ತು ವ್ಯಾಪ್ತಿ: ಹತ್ತೊಂಬತ್ತನೆಯ ಶತಮಾನದ ಅದಿ ಭಾಗದತನಕ ಸಸ್ಯ ಮತ್ತು ಪ್ರಾಣಿಮೂಲಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಡೆದ ಎಣ್ಣೆಗಳು; ಅಕ್ಕಿ. ಬೇಳೆ, ಸಕ್ಕರೆ, ಹಾಲು, ಜೇನುತುಪ್ಪ ಮೊದಲಾದವನ್ನು ಸಾವಯವ ಅಗ್ರ್ಯಾನಿಕ್) ವಸ್ತುಗಳೆಂದು ಉಪ್ಪು, ಸುಣ್ಣ, ಗಾಜಿ, ಲೋಹಗಳು, ಇತ್ಯಾದಿ ಖನಿಜ ಉತ್ಪನ್ನಗಳನ್ನು ನಿರವಯವ (ಇನಾಗ್ರ್ಯಾನಿಕ್) ವಸ್ತುಗಳೆಂದೂ ವಿಂಗಡಿಸಿವುದು ವಾಡಿಕೆಯಾಗಿತ್ತು. ಸಾವಯವವಸ್ತುಗಳ ಜಟಿಲರಚನೆ ಅಂದಿನ ರಸಯನವಿe್ಞÁನಿಗಳಿಗೆ ಒಗಟಾಗಿತ್ತು. ಈ ವಸ್ತುಗಳನ್ನು ಪ್ರಯೋಗಶಾಲೆಯಲ್ಲಿ ಸಂಶ್ಲೇಷಿಸಲು ವಿಫಲರಾದ ಅವರು, ಜೀವಿಗಳಲ್ಲಿ ಮಾತ್ರ ಇರುವ ಯಾವುದೋ ಅವ್ಯಕ್ತ ಜೈವಿಕ ಶಕ್ತಿ (ವೈಟಲ್ ಫೋರ್ಸ್) ಸಾವಯವ ವಸ್ತುಗಳನ್ನು ಮೈದಳೆಯಲು ಕಾರಣವೆಂದು ತರ್ಕಿಸಿದರು. ಜರ್ಮನಿಯ ರಸಾಯನವಿe್ಞÁನಿ ವೂಲರ್ (1800 - 82) ಎಂಬವ ಶುದ್ಧ ನಿರವಯವದ ಪದಾರ್ಥ ಅಮೊನಿಯಮ್ ಸಯನೇಟನ್ನು ಕಾಸಿ ಅಪ್ಪಟ ಸಾವಯವ ಪದಾರ್ಥವೆನಿಸಿದ್ದ ಯೂರಿಯ ತಯಾರಿಸಿದ (1828). ಅಲ್ಲಿಯತನಕ ಈ ಸಾವಯವವಸ್ತುವನ್ನು ಪ್ರಾಣಿಗಳ ಮೂತ್ರಪಿಂಡಗಳು ಮಾತ್ರ ಉತ್ಪಾದಿಸಬಲ್ಲವು; ಅವುಗಳ ಮೂತ್ರದಲ್ಲಿ ವಿಸರ್ಜಿಸಲ್ಪಟ್ಟ ಅಂಶವನ್ನು ಮಾತ್ರ ಪ್ರತ್ಯೇಕಿಸಬಹುದು ಎಂಬ ಭಾವನೆಗಳಿದ್ದವು. ಈ ಅವಿಷ್ಕಾರದಿಂದ ಜೈವಿಕಸಿದ್ಧಾಂತಕ್ಕೆ ಬಲವಾದ ಪೆಟ್ಟು ಬಿತ್ತು. ಮತ್ತೊಬ್ಬ ಜರ್ಮನ್ ರಸಾಯನವಿe್ಞÁನಿ ಅಡಾಲ್ಫ ಕೋಲ್ಬೆ (1818 - 84) ಎಂಬವ ಕಾರ್ಬನ್, ಹೈಡ್ರೋಜನ್ ಮತ್ತು ಅಕ್ಸಿಜನ್‍ಗಳಿಂದ ಅಸಿಟಿಕ್ ಅಮ್ಲವನ್ನೂ (1844) ಫ್ರೆಂಚ್ ರಸಾಯನವಿe್ಞÁನಿ ಕ್ಲಾಡೆ ಲೂಯಿ ಬರ್ತೊಲೊ (1748 - 1822) ಅಂಗಧಾತುಗಳಿಂದ ಈಥೇನನ್ನು ಸಂಶ್ಲೇಷಿಸಿದುದು (1856) ಜೈವಿಕಸಿದ್ಧಾಂತದ ಅವಸಾನಕ್ಕೆ ಕಾರಣವಾದವು. ಈ ಸಂಶೋಧನೆಗಳಿಂದ ಸಾವಯವ ಮತ್ತು ನಿರವಯವ ವಸ್ತು ಪ್ರಪಂಚಗಳನ್ನು ನಿರ್ದೇಶಿಸುವ ಶಕ್ತಿಗಳು ಏಕರೀತಿಯವು; ನಿರವಯವ ವಸ್ತುಗಳ ಸಂಶ್ಲೇಷಣೆಗೆ ಅನ್ವಯಿಸುವ ನಿಯಮಗಳಿಗೆ ಬದ್ಧವಾಗಿ ಸಾವಯವ ವಸ್ತುಗಳೂ ಸಂಶ್ಲೇಷಿಸಲ್ಪಡುತ್ತವೆ ಮತ್ತು ರಸಾಯನವಿe್ಞÁನದ ಈ ಎರಡು ಮುಖ್ಯ ಶಾಖೆಗಳನ್ನು ಬೇರ್ಪಡಿಸುವ ಯಾವ ನಿಚ್ಚಳವಾದ ಗೆರಯೂ ಇಲ್ಲವೆಂದು ಸಾರ್ವತ್ರಿಕವಾಗಿ ಒಪ್ಪಲಾಯಿತು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಸಾವಯವ ರಸಾಯನವಿe್ಞÁನದ ಗಮನ ವಿಶ್ಲೇಷಣಾ ಪ್ರಯೋಗಗಳಲ್ಲಿ ಕೇಂದ್ರೀಕೃತವಾಗಿತ್ತು. ಹೊಸ ಹೊಸ ಸಾವಯವ ವಸ್ತುಗಳನ್ನು ಅವಿಷ್ಕರಿಸಲಾಯಿತು. ಅವುಗಳ ಸಂಖ್ಯೆ ಬೆಳೆದಂತೆಲ್ಲ ಅವನ್ನು ವರ್ಗೀಕರಿಸುವ ಪ್ರಯತ್ನವೂ ನಡೆಯಿತು. ಪರಿಣಾಮವಾಗಿ ಅಣುರಚನಾ ವಿನ್ಯಾಸವನ್ನು ಕುರಿತ ಸಿದ್ಧಾಂತಗಳು ಹುಟ್ಟಿಕೊಂಡವು. 1860ರ ಸುಮಾರಿಗೆ ಬೆನ್‍ಜೀóನ್ ಅಣುರಚನೆಗೆ ಸಂಬಂಧಿಸಿದ ಕೆಕ್ಯುಲೆಸಿದ್ಧಾಂತದಿಂದ ಪ್ರೇರಿತರಾದ ರಸಾಯನವಿಜ್ಞಾನಿಗಳ ಇತರ ಸಾವಯವ ವಸ್ತುಗಳ ಆಂತರಿಕ ರಚನೆಯ ಬಗ್ಗೆ ವಿಚಾರಿಸತೊಡಗಿದರು. ಆ ಶತಮಾನದ ಅಂತ್ಯದ ವೇಳೆಗೆ ವಿವಿಧ ಸಾವಯವ ವಸ್ತುಗಳನ್ನು ಯಶಸ್ವಿಯಾಗಿ ಸಂಶ್ಲೇಷಿಸುವ ಘಟ್ಟವನ್ನು ರಸಾಯನವಿe್ಞÁನ ಮುಟ್ಟಿತು. ಅಲ್ಲಿಂದೀಚೆಗೆ ಸಾವಯವ ರಸಾಯನವಿe್ಞÁನ ಮುನ್ನಡೆದು ಅಗಾಧ ಪ್ರಗತಿ ಸಾಧಿಸಿದೆ. ಸಾವಯವ ರಸಾಯನವಿe್ಞÁನ ವಾಸ್ತವವಾಗಿ ಕಾರ್ಬನ್ ಸಂಯುಕ್ತಗಳಿಗೆ ಸೀಮಿತವಾದುದು. ಅದನ್ನು ಕಾರ್ಬನಿಕ್ ರಸಾಯನವಿe್ಞÁನ ಎಂದೂ ಕರೆಯುವುದಿದೆ ವ್ಯಾವಹಾರಿಕ ಅನುಕೂಲಕ್ಕಾಗಿ ಮಾತ್ರ ಸಾವಯವ ಮತ್ತು ನಿರವಯವ ಎಂಬ ಭೇದವನ್ನು ಉಳಿಸಿಕೊಂಡು ಬಂದಿದೆ. ಈಗ ತಿಳಿದಿರುವ ಸುಮಾರು 105 ಧಾತುಗಳ ಪೈಕಿ ಒಂದಾದ ಕಾರ್ಬನ್ನಿನ ಸಂಯುಕ್ತಗಳಿಗಾಗಿಯೇ ರಸಾಯನವಿe್ಞÁನದ ಒಂದು ಶಾಖೆ ಮೀಸಲಾಗಿರುವುದರ ಔಚಿತ್ಯಕ್ಕೆ ಈ ಮುಂದಿನ ಕಾರಣಗಳು ಪುಷ್ಟಿ ನೀಡುತ್ತವೆ. 1 ಈ ತನಕ ಪತ್ತೆಯಾಗಿ ಸಂಶ್ಲೇಷಿಸಲ್ಪಟ್ಟಿರುವ ಸಾವಯವ ಸಂಯುಕ್ತಗಳ ಸಂಖ್ಯೆ 10 ಲಕ್ಷಕ್ಕೂ ಮೀರಿದೆ. ಅದರೆ ಉಳಿದ ಎಲ್ಲ ಧಾತುಗಳ ಎಲ್ಲ ಸಂಯುಕ್ತಗಳ ಒಟ್ಟು ಸಂಖ್ಯೆ 1 ಲಕ್ಷಕ್ಕಿಂತಲೂ ಹೆಚ್ಚಿಲ್ಲ 2 ಸಾವಯವ ಸಂಯುಕ್ತಗಳಲ್ಲಿ ಕಂಡುಬರುವ ಗುಣ ಸಾದೃಶ್ಯ ನಿರಯವ ಸಂಯುಕ್ತಗಳಲ್ಲಿ ಅಷ್ಟಾಗಿಲ್ಲ. ಉದಾಹರಣೆಗೆ ಎಲ್ಲ ಅಲ್ಕೋಹಾಲ್‍ಗಳೂ ಹೆಚ್ಚು ಕಡಿಮೆ ಒಂದೇ ರೀತಿಯ ಕ್ರಿಯಾಲಕ್ಷಣಗಳನ್ನು ಪ್ರದರ್ಶಿಸುವುವು. 3 ಸಾಮಾನ್ಯವಾಗಿ ಸಾವಯವ ಸಂಯುಕ್ತಗಳು ಉನ್ನತ ಉಷ್ಣತೆಯಲ್ಲಿ ವಿಭಜಿಸುತ್ತವೆ; ಅದರೆ ಬಹುತೇಕ ನಿರವಯವ ಸಂಯುಕ್ತಗಳು ಸ್ಥಿರವಾಗಿರುವುವು. ಸಾವಯವ ಸಂಯುಕ್ತಗಳು ಎಥೆನಾಲ್, ಬೆನ್‍ಜೀóನ್ ಮುಂತಾದ ಸಾವಯವದ್ರಾವಕಗಳಲ್ಲಿ ದ್ರಾವ್ಯವಾದರೆ ನಿರವಯವ ಸಂಯುಕ್ತಗಳು ಇವುಗಳಲ್ಲಿ ವಿಲೀನವಾಗುವುದಿಲ್ಲ. 4 ಅನೇಕ ಸಂಯುಕ್ತಗಳ ಅಣುರಚನೆ ಸಂಕೀರ್ಣದ್ದು. ದ್ರಾವ್ಯಪಿಷ್ಟದ (ಸಾಲ್ಯುಬಲ್ ಸ್ಟಾರ್ಚ್) ಅಣುಸೂತ್ರ (ಅ6ಊ10ಔ5)200 ಮತ್ತು ಹತ್ತಿಯಿಂದ ಪಡೆದ ಸೆಲ್ಯುಲೋಸಿನ ಅಣುತೂಕ ಸುಮಾರು 5 ಲಕ್ಷ ಎಂಬುದು ಒಂದು ಅಂದಾಜು. ಬೃಹತ್ ಅಣುಗಳನ್ನು ಹೊಂದಿರುವ ಪ್ರೋಟೀನುಗಳ ರಚನಾವಿನ್ಯಾಸದ ಬಗ್ಗೆ ಈಗೀಗ ಹಚ್ಚಿನ ಅರಿವು ಮೂಡುತ್ತದೆ. 5 ತಮ್ಮ ಗುಣಲಕ್ಷಣಗಳಲ್ಲಿ ಸ್ವಲ್ಪವೂ ಸಾಮ್ಯವಿರದ ಅನೇಕ ಸಾವಯವ ಸಂಯುಕ್ತಗಳಿಗೆ ಒಂದೇ ಅಣುಸೂತ್ರವಿರುವುದುಂಟು. ಉದಾಹರಣೆಗೆ ಅ20ಊ12 ಎಂಬ ಅಣುಸೂತ್ರ 3,66,319 ಸಂಯುಕ್ತಗಳನ್ನು ಪ್ರತಿನಿಧಿಸುವ ಸಾಧ್ಯತೆಯಿದೆ. ಈ ವೈವಿಧ್ಯ ನಿರವಯವ ಕ್ಷೇತ್ರದಲ್ಲಿ ಕಾಣಬರುವುದಿಲ್ಲ. 6 ತನ್ನ ವೈಶಿಷ್ಟ್ಯ ಪೂರ್ಣ ಪರಮಾಣುರಚನೆಯ ದೆಸೆಯಿಂದ ಕಾರ್ಬನ್ನಿನ ನೂರಾರು ಪರಮಾಣುಗಳು ಸರಪಳಿಯಂತೆ ಜೋಡಣೆಯಾಗಬಲ್ಲವು. ನಿರವಯವ ಸಯುಕ್ರತಗಳಲ್ಲಿ ಒಂದೇ ಧಾತುವಿನ ಪರಮಾಣುಗಳು ಒಂದಕ್ಕೊಂದು ಬಂಧಿತವಾಗುರುವುದು ಅಪೂರ್ವ. 7 ಕಾರ್ಬನ್ನಿನ ಸಂಯುಕ್ತಗಳಲ್ಲಿ ವಿಶೇಷವಾಗಿರುವುದು ಹೈಡ್ರೋಜನ್ ಮತ್ತು ಅಕ್ಸಿಜನ್‍ಗಳು. ನೈಟ್ರೋಜನ್, ರಂಜಕ ಮತ್ತು ಗಂಧಕಗಳು ಇರುವುದು ಅಪೂರ್ವ, ಉಳಿದ ಧಾತುಗಳು ಇರುವುದು ಅತಿ ವಿರಳವೇ ಸರಿ. ಕೇವಲ ನಾಲ್ಕಾರು ಧಾತುಗಳ ಪರಮಾಣುಗಳು ಬೇರೆ ಬೇರೆ ರೀತಿಯಲ್ಲಿ ಕೂಡಿ ಲಕ್ಷಣಾಂತ ಸಂಯುಕ್ತಗಳಾಗಿರುವುದು ಗಮನಾರ್ಹ. 8 ನಿರವಯವ ಕ್ರಿಯೆಗಳಲ್ಲಿ ಪಾತ್ರವಹಿಸುವುದು ಅಯಾನುಗಳಾದ್ದರಿಂದ ಅ ಕ್ರಿಯೆಗಳು ತತ್‍ಕ್ಷಣ ಜರುಗುತ್ತವೆ. ಒಟ್ಟಿನಲ್ಲಿ ಸಾವಯವ ಸಂಯುಕ್ತಗಳು ನಿರವಯವ ಸಂಯುಕ್ತಗಳಿಗೆ ತದ್ವಿರುದ್ಧವಾಗಿ ಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಹೀಗೆಂದ ಮಾತ್ರಕ್ಕೆ ಈ ಲಕ್ಷಣಗಳನ್ನು ಎಲ್ಲ ಸಾವಯವ ಮತ್ತು ನಿರವಯವ ಸಂಯುಕ್ತಗಳು ಹೊಂದಿರಲೇಬೇಕೆಂದು ನಿರೀಕ್ಷಿಸಬೇಕಾದ್ದಿಲ್ಲ. ಇವಕ್ಕೆ ಅಪವಾದಗಳೂ ಉಂಟು. ಜೈವಿಕ ಕ್ರಿಯೆಗಳ ರಾಸಾಯನಿಕ ಸ್ವರೂಪದ ಅರಿವು ಮೂಡಿದಂತೆ ಸಾವಯವ ರಸಾಯನವಿe್ಞÁನದ ವ್ಯಾಪ್ತಿ, ಸ್ಟ್ರೆಪ್ಟೋಮೈಸಿನ್, ಕ್ಲೋರೋಮೈಸಿಟಿನ್ ಮೊದಲಾದ ಪ್ರತಿಜೈವಿಕಗಳ ಪತ್ತೆ ಹಾಗೂ ಸಂಶ್ಲೇಷಣೆ ಔಷಧಿವಿe್ಞÁನಕ್ಕೆ ಮಹತ್ತ್ವದ ಕೊಡುಗೆಗಳಾಗಿವೆ. ಸಾವಯವ ರಸಾಯನವಿe್ಞÁನದ ಅನ್ವಯದಿಂದ ಆಗುತ್ತಿರುವ ಪ್ರಯೋಜನ ಮತ್ತು ಒದಗುತ್ತಿರುವ ಸೌಕರ್ಯಗಳನ್ನು ಇಷ್ಟೇ ಎಂದು ಪಟ್ಟಿ ಮಾಡಲಾಗದು. ಮನೋಹರ ಬಣ್ಣಗಳು, ಅಂಗರಾಗಗಳು, ಸಾಬೂನುಗಳು, ಕೃತಕ ನೂಲುಗಳು, ಸಂಶ್ಲೇಷಿತ ರಬ್ಬರು ಪ್ಲಾಸ್ಟಿಕುಗಳು, ಸುಂಗಧದ್ರವ್ಯಗಳು ಮುಂತಾದುವೆಲ್ಲ ಸಾವಯವ ಪ್ರಯೋಗಶಾಲೆಯ ಉತ್ಪನ್ನಗಳೇ. 2. ಕಾರ್ಬನ್ ಪರಮಾಣು ಸಂಯೋಜನಾಪ್ರವೃತ್ತಿ: ಕಾರ್ಬನ್ ಚತುರ್ವೇಲೆನ್ಸೀಯ ಧಾತು. ಅಂದರೆ ಒಂದು ಕಾರ್ಬನ್ ಪರಮಾಣುವಿನೊಡನೆ ನಾಲ್ಕು ಏಕ ವೆಲೆನ್ಸೀಯ ಪರಮಾಣುಗಳಾಗಲಿ ರ್ಯಾಡಿಕಲ್ಲುಗಳಾಗಲಿ ಕೂಡಿಕೊಳ್ಳಬಹುದು. ಬಂಧಿತ ಪರಮಾಣುಗಳ ನಡುವೆ ಒಂದು ಗೆರೆಯನ್ನು ಎಳೆದು ಈ ವೇಲೆನ್ಸೀಯಬಂಧಗಳನ್ನು ಸೂಚಿಸುವುದಿದೆ.

     ಊ			     ಊ	ಊ
      |			      |      |

ಊ—ಅ—ಊ ಊ—ಅ—ಅ—ಊ

     |			      |	|
    ಊ			     ಊ	ಊ

ಮೀಥೇನ್ ಈಥೇನ್ ಈಥೇನಿನಲ್ಲಿ ಕಾರ್ಬನ್ನಿನ ಪರಮಾಣುಗಳ ಏಕಬಂಧ (ಸಿಂಗಲ್ ಬಾಂಡ್) ಹೊಂದಿವೆ. ಹೀಗೆ ಕಾರ್ಬನ್ನಿನಲ್ಲಿ ಚತುರ್ವೇಲೆನ್ಸಿ ಸ್ವಾಭಾವಿಕವಾಗಿ ಏಕಬಂಧಗಳಿಂದ ತೃಪ್ತಿಯಾಗಿದ್ದರೆ ಅಂಥವು ಪರ್ಯಾಪ್ತ (ಸ್ಯಾಚುರೇಠೆಡ್) ಸಂಯುಕ್ತಗಳೆನಿಸುತ್ತವೆ. ಕೆಲವು ಸಾವಯವಸಂಯುಕ್ತಗಳ ಅಣುಗಳಲ್ಲಿ ಕಾರ್ಬನ್ನಿನ ಚುತರ್ವೇಲೆನ್ಸಿಯನ್ನು ಏಕಬಂಧಗಳಿಂದ ತೃಪ್ತಿಪಡಿಸಲು ಸಾಕಾಗುವಷ್ಟು ಇತರ ಪರಮಾಣುಗಳಿಗೆ ಇರುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ ಕಾರ್ಬನ್ನಿನ ಪರಮಾಣುಗಳ ತಮ್ಮ ನಡುವೆ ದ್ವಿಬಂಧವನ್ನೊ (ಡಬ್ಬಲ್ ಬಾಂಡ್) ಅಥವಾ ತ್ರಿಬಂಧವನ್ನೋ (ಟ್ರಿಪಲ್ ಬಾಂಡ್) ಸ್ಥಾಪಿಸಿಕೊಂಡು ತಮ್ಮ ಚತುರ್ವೇಲೆನ್ಸಿಯನ್ನು ತಾತ್ಕಾಲಿಕವಾಗಿ ತೃಪ್ತಿಪಡಿಸಿಕೊಂಡಿರುತ್ತವೆ. ಇದಕ್ಕೆ ಅನುಕ್ರಮವಾಗಿ ಎಥೀಲೀನ್ ಮತ್ತು ಅಸಿಟಲೀನ್ ನಿದರ್ಶನಗಳು.

ಚಿತ್ರ-1

ತಮ್ಮ ಒಂದು ಅಣುವಿನಲ್ಲಿ ಎರಡು ಅಥವಾ ಹೆಚ್ಚುಕಾರ್ಬನ್ ಪರಮಾಣುಗ¼ ನಡುವೆ ದ್ವಿಬಂಧ ಅಥವಾ ತ್ರಿಬಂಧವುಳ್ಳ ಸಂಯುಕ್ತಗಳು ಅಪರ್ಯಾಪ್ತ (ಅನ್‍ಸ್ಯಾಚುರೇಟೆಡ್) ಸಂಯುಕ್ತಗಳೆನಿಸುತ್ತದೆ. 3 ಸಾವಯವ ಸಂಯುಕ್ತಗಳ ವರ್ಗೀಕರಣ: ಸಾವಯವ ಸಂಯುಕ್ತಗಳನ್ನು ಅಲಿಫ್ಯಾಟಿಕ್ ಮತ್ತು ಅರೋಮಾಟ್ಯಿಕ್ ಎಂದು ಎರಡು ಸ್ಥೂಲಗುಂಪುಗಳಾಗಿ ವಿಂಗಡಿಸುವುದು ವಾಡಿಕೆ. ಅಲಿಪ್ಯಾಟಿಕ್ ಸಂಯುಕ್ತಗಳಲ್ಲಿ ಕಾರ್ಬನ್ ಪರಮಾಣುಗಳು ಒಂದಕ್ಕೊಂದು ಲಗತ್ತಾಗಿ ವಿವೃತಸರಣಿಯಲ್ಲಿ (ಓಪನ್ ಚೇನ್) ಇರುತ್ತವೆ. ಅರೋಮ್ಯಾಟಿಕ್ ಸಂಯುಕ್ತಗಳಲ್ಲಿ ಕಾರ್ಬನ್ ಪರಮಾಣುಗಳು ಸಮಷಟ್ಕೋನಾಕೃತಿಯಲ್ಲಿ ಪೋಣಿಸಲ್ಪಟ್ಟಿರುತ್ತವೆ. ಇಲ್ಲಿ ಕಾರ್ಬನ್ ಸರಣಿ ತೆರೆದಿರುವುದಿಲ್ಲ. ಅಲ್ಲದೆ ಷಟ್ಕೋನದಲ್ಲಿ ಒಂದು ಬಿಟ್ಟು ಒಂದರಂತೆ ದ್ವಿಬಂಧಗಳಿರುವುವು. ಉದಾಹರಣೆಗೆ:

ಚಿತ್ರ-2

ಇಂಥ ಸಂವೃತಸರಣಿ ರಚನೆಯುಳ್ಳ ಬೆನ್‍ಜೀóನನ್ನು ಅರೋಮ್ಯಾಟಿಕ್ ಸಂಯುಕ್ತಗಳ ಜನಕ ಎಂದು ಭಾವಿಸಲಾಗುತ್ತದೆ. 4 ಸಾವಯವ ಸಮಯುಕ್ತಗಳಲ್ಲಿನ ಮುಖ್ಯ ಪ್ರಭೇದಗಳು: ಕಾರ್ಬನ್ ಮತ್ತು ಹೈಡ್ರೋಜನ್ನುಗಳು ಮಾತ್ರ ಇರುವಂಥ ಸಂಯುಕ್ತಗಳೇ ಹೈಡ್ರೋಕಾರ್ಬನ್ನುಗಳು. ಇವು ಪರ್ಯಾಪ್ತ ಇಲ್ಲವೆ ಅಪರ್ಯಾಪ್ತವಾಗಿರಬಹುದು; ಅಥವಾ ಅಲಿಫ್ಯಾಟಿಕ್ ಇಲ್ಲವೆ ಅರೋಮ್ಯಾಟಿಕ್ ವರ್ಗಕ್ಕೆ ಸೇರಿರಬಹುದು. ಉದಾಹರಣೆಗೆ ಮೀಥೇನ್ ಮತ್ತು ಈಥೆನ್‍ಗಳು ಪರ್ಯಾಪ್ತ ಅಲಿಫ್ಯಾಟಿಕ್ ಹೈಡ್ರೊಕಾರ್ಬನ್ನುಗಳು. ಎಥಿಲೀನ್ ಮತ್ತು ಅಸಿಟಲೀನ್‍ಗಳು ಅಪರ್ಯಾಪ್ತ ಆಲಿಸ್ಯಾಟಿಕ್ ಹೈಡ್ರೊಕಾರ್ಬನ್‍ಗಳು. ಬೆನ್‍ಜೀóನ್ ಮತ್ತು ನ್ಯಾಫ್ತಲೀನುಗಳು ಅರೋಮ್ಯಾಟಿಕ್ ಹೈಡ್ರೋಕಾರ್ಬನ್‍ಗಳ ಪ್ರತಿನಿಧಿಗಳು. ಸಾವಯವ ಸಂಯುಕ್ತಗಳಲ್ಲಿ ಹೈಡ್ರೊಕಾರ್ಬನ್‍ಗಳು ಒಂದು ಮುಖ್ಯ ಉಪನ್ಯಾಸ. ಇದರ ಸಂಯುಕ್ತಗಳೆಲ್ಲ ಹೈಡ್ರೋಕಾರ್ಬನ್ನುಗಳ ಜನ್ಯಗಳೆಂದು ಪರಿಗಣಿಸಿದೆ. ಹೈಡ್ರೋಕಾರ್ಬನ್ ಅಣುವಿನಲ್ಲಿರುವ ಒಂದು ಹೈಡ್ರೋಜನ್ ಪರಮಾಣುವಿನ ಸ್ಥಾನವನ್ನು ಒಂದು - ಔಊ , - ಅಊಔ ಅಥವಾ _ಅಔಔಊ ಪರಮಾಣುಗುಚ್ಛ ಅಕ್ರಮಿಸಿರಬಹುದು. ಇವು ಜನ್ಯದ ಗುಣಲಕ್ಷಣಗಳನ್ನು ನಿರ್ಧರಿಸುವ ಗುಚ್ಛಗಳು. ಅದ್ದರಿಂದ ಇವಕ್ಕೆ ಗುಣನಿರ್ಣಾಯಕ ಗುಚ್ಛಗಳು ಎಂದು ಹೆಸರು. ಇವುಗಳ ಅಧಾರದ ಮಲೆ ಸಾವಯವ ಸಂಯುಕ್ತಗಳನ್ನು ವರ್ಗೀಕರಿಸುವುದು ಪದ್ಧತಿ. ಉದಾಹರಣೆಗೆ - ಔಊ ಗುಚ್ಛವಿರುವ ಸಂಯುಕ್ತಗಳು ಅಲ್ಕೋಹಾಲ್‍ಗಳು. ಅಲ್ಡಿ ಹೈಡುಗಳಲ್ಲಿ - ಅಊಔ ಗುಚ್ಛವಿರುತ್ತದೆ. ಅಮ್ಲಗಳು ಎನಿಸಿಕೊಳ್ಳಲು - ಅಔಔಊ ಗುಚ್ಛವಿರಬೇಕು. ಈ ಗುಣನಿರ್ಣಾಯಕ ಗುಚ್ಛಗಳನ್ನು ಸ್ಥೂಲವಾಗಿ - ಔಊ, _ ಅಊಔ, _ ಅಔಔಊ ಎಂದು ಬರೆಯುವುದಿದೆ. ಅದರೂ ಅವುಗಳಲ್ಲಿರುವ ಪರಮಾಣುಗಳು ಇದೇ ಕ್ರಮದಲ್ಲಿ ಜೋಡಣೆಯಾಗಿರಬೇಕಾದ್ದಿಲ್ಲ. ಇವುಗಳ ವಾಸ್ತವ ರಚನೆ ಹೀಗಿದೆ.

                            ಊ                  ಔ—ಊ
                             |		|

--ಔ—ಊ --ಅ=ಔ --ಅ=ಔ ಆದ್ದರಿಂದ ಮೀಥೈಲ್ ಶಲ್ಕೋಹಾಲ್, ಅಸಿಡಾಲ್ಡಿಹೈಡ್ ಮತ್ತು ಅಸಿಟಿಕ್ ಅಮ್ಲಗಳನ್ನು ಅನುಕ್ರಮವಾಗಿ ಅಊ3. ಔಊ, ಅಊ3.ಅಊಔ ಮತ್ತು ಅಊ3.ಅಔಔಊ ಎಂದು ಬರೆಯುವುದು ಸಾಮಾನ್ಯವಾದರೂ ಅವುಗಳ ಪೂರ್ಣ ಅಣುರಚನೆಯ ವಿನ್ಯಾಸ ಮುಂದಿನಂತಿದೆ:

ಚಿತ್ರ-ಉದಾಹರಣೆ-1


ಕಾರ್ಬನ್ ಸರಣಿಯಲ್ಲಿ ಎಲ್ಲಾದರೂ ಒಂದು ಕಾರ್ಬನ್ ಪರಮಾಣುವಿನ ಬದಲು ಅಕ್ಸಿಜನ್ ಪರಮಾಣು ಸೇರಿರಬಹುದು. ಇವೇ ಈಥರ್‍ಗಳು.

ಚಿತ್ರ-ಉದಾಹರಣೆ-2

ಹೀಗಾದರೆ ಸರಣಿಯಲ್ಲಿರುವ ಒಂದು ಕಾರ್ಬನ್ ಪರಮಾಣುವಿಗೆ ಮಾತ್ರ ಒಂದು ಅಕ್ಸಿಜನ್ ಪರಮಾಣು ಲಗತ್ತಾಗಿದ್ದರೆ ಅಂಥ ಸಂಯುಕ್ತಗಳಿಗೆ ಕೀಟೋನುಗಳು ಎಂದು ಹೆಸರು.

ಚಿತ್ರ-ಉದಾಹರಣೆ-3

ಆಲ್ಕೋಹಾಲ್, ಆಲ್ಡಿಹೈಡ್ ಮತ್ತು ಕಾರ್ಬಾಕ್ಸಿಲ್ ಗುಚ್ಛಗಳು ಕಾರ್ಬನ್ ಸರಣಿಯ ತುದಿಯಲ್ಲಿರುತ್ತವೆ. ಈಥರ್ ಮತ್ತು ಕೀಟೋನು ಗುಚ್ಛಗಳು ಕಾರ್ಬನ್ ಸರಣಿಯ ಒಳಗಿರುವುವು. ಪರ್ಯಾಪ್ತ ಆಲಿಫ್ಯಾಟಿಕ್ ಹೈಡ್ರೂಕಾರ್ಬನ್‍ಗಳು: ಇವನ್ನು ಆಲ್ಕೇನುಗಳು ಅಥವಾ ಪ್ಯಾರಫಿನುಗಳು (ಗ್ರೀಕ್ ಭಾಷೆಯಲ್ಲಿ ಪ್ಯಾರಮ್ ಎಂದರೆ ಅಲ್ಪ, ಅಫೆನಿಸ್ ಎಂದರೆ ಒಲವು ಎಂಬ ಅರ್ಥ ಇದೆ) ಎಂದೂ ಕರೆಯುವುದಿದೆ. ಇವು ರಾಸಾಯನಿಕವಾಗಿ ಜಡಪದಾರ್ಥಗಳಾದ್ದರಿಂದ ಪ್ಯಾರಫಿನ್‍ಗಳು ಎಂದು ಹೆಸರು ಪಡೆದಿವೆ. ಇವುಗಳ ಸಾರ್ವತ್ರಿಕ ಸೂತ್ರ ಅಟಿಊ2ಟಿ+2. ಈ ಗುಂಪಿನ ಅನುಕ್ರಮದ ಸದಸ್ಯಸಂಯುಕ್ತಗಳ ಸೂತ್ರಗಳಲ್ಲಿ -ಅಊ2 ವ್ಯತ್ಯಾಸವಿರುವುದನ್ನು ಮುಂದಿನ ಪಟ್ಟಿಯಲ್ಲಿ ಕಾಣಬಹುದು.

ಮೀಥೇನ್ ಅಊ4 ಹೆಕ್ಸೇನ್ ಅ6ಊ14 ಈಥೇನ್ ಅ2ಊ6 ಹೆಪ್ಟೇನ್ ಅ2ಊ16 ಪ್ರೋಪೇನ್ ಅ3ಊ8 ಆಕ್ಟೇನ್ ಅ8ಊ18 ಬ್ಯೂಟೇನ್ ಅ4ಊ10 ನಾನೇನ್ ಅ2ಊ20 ಪೆಂಟೇನ್ ಅ5ಊ12 ಡೆಕೇನ್ ಅ10ಊ22 ಈ ಶ್ರೇಣಿಯ ಮೊದಲ ನಾಲ್ಕು ಹೈಡ್ರೊಕಾರ್ಬನ್‍ಗಳು ಅನಿಲಗಳು, ಇತ್ಯಾದಿ. ಮುಂದಿನ ಆರು ಸಂಯುಕ್ತಗಳು ದ್ರವಗಳು, ಉಳಿದವು ಘನರೂಪದವು. ಇವುಗಳ ಕುದಿಬಿಂದು, ದ್ರವನಬಿಂದು ಸಾಂದ್ರತೆ ಮೊದಲಾದ ಭೌತಲಕ್ಷಣಗಳು ಕ್ರಮೇಣ ಹೆಚ್ಚುತ್ತ ಹೋಗುವುವು. ರಾಸಾನಿಕಗುಣಗಳು ಮತ್ತು ರಚನೆಯಲ್ಲಿ ಇವು ಒಂದೇ ತೆರನಾಗಿರುತ್ತದೆ. ಇವನ್ನು ಸದೃಶವಿಧಾನಗಳಿಂದ ತಯಾರಿಸಬಹುದು. ಹೀಗೆ ನಿಕಟ ಸಂಬಂಧವಿರುವ ಸಾವಯವ ಸಂಯುಕ್ತಗಳ ಕುಟುಂಬಕ್ಕೆ ಅನುರೂಪ ಶ್ರೇಣಿ (ಹೊಮೊಲಾಗಸ್ ಸೀರೀಸ್) ಎಂದು ಹೆಸರು. ವಾಸ್ತವವಾಗಿ ಸಾವಯವ ರಸಾಯನವಿe್ಞÁನವಾದರೂ ಇಂಥ ಅನೇಕ ಅನುರೂಪಶ್ರೇಣಿಗಳ ಕ್ರಮವರಿತ ಅಭ್ಯಾಸವಾಗಿದೆ. ಅತಿಸೂಕ್ಷ್ಮ ರಸಾಯನವಿe್ಞÁನ: ಅತಿಸೂಕ್ಷ್ಮ ಮೊತ್ತದಲ್ಲಿ ಇರುವ ವಸ್ತುಗಳ ವಿಶ್ಲೇಷಣೆ ಮತ್ತು ಸ್ವರೂಪ ನಿರ್ಧರಿಸಲು ಬಳಸುವ ವಿಧಾನಗಳನ್ನು ಒಳಗೊಂಡ ರಸಾಯನವಿe್ಞÁನ ವಿಭಾಗ (ಅಲ್ಟ್ರಮೈಕ್ರೊ ಕೆಮಿಸ್ಟ್ರಿ) . ರಾಸಾಯನಿಕ ವಿಶ್ಲೇಷಣೆಯಲ್ಲಿ ಬಳಸುವ ವಿಧಾನಗಳನ್ನು ವಿಶ್ಲೇಷಣೆಗೆ ಗುರಿಪಡಿಸುವ ವಸ್ತುಗಳ ಮೊತ್ತದ ಆಧಾರದ ಮೇಲೆ ವಿಂಗಡಿಸಲಾಗಿದೆ: ಸ್ಥೂಲಮೊತ್ತದ (ಮ್ಯಾಕ್ರೊ) ವಿಶ್ಲೇಷಣ ವಿಧಾನಗಳು: ಅರ್ಧಸೂಕ್ಷ್ಮ (ಸೆಮಿಮೈಕ್ರೊ) ವಿಧಾನಗಳು; ಸೂಕ್ಷ್ಮ (ಮೈಕ್ರೊ) ವಿಧಾನಗಳು, ಅತಿಸೂಕ್ಷ (ಅಲ್ಟ್ರ ಮೈಕ್ರೊ) ವಿಧಾನಗಳು.

 ಅತಿಸೂಕ್ಷ್ಮ ರಾಸಾಯನಿಕ ವಿಶ್ಲೇಷಣ ವಿಧಾನಗಳನ್ನು ಸಹಸ್ರಾಂಶಗ್ರಾಮಿನ ಕೆಲವೇ ಸಹಸ್ರಾಂಶ (ಅಂದರೆ ಕೆಲವೇ ದಶಲಕ್ಷಾಂಶ ಗ್ರಾಮ್) ತೂಕವುಳ್ಳ ವಸ್ತುಗಳ ಸ್ವರೂಪ ಮತ್ತು ಮೊತ್ತಗಳನ್ನು ಗೊತ್ತುಮಾಡಲು ಬಳಸುವುದರಿಂದ ಇವನು ಒಟ್ಟಾಗಿ ದಶಲಕ್ಷಾಂಶ ಗ್ರಾಮ್ ವಿಶ್ಲೇಷಣೆ (ಮೈಕ್ರೊಗ್ರಾಮ್ ಅನಾಲಿಸಿಸ್) ಎಂದು ಕರೆಯಲಾಗಿದೆ.  (1 ದಶಲಕ್ಷಾಂಶ ಗ್ರಾಮ್ = 10-6 ಗ್ರಾಮ್ = 0.001 ( 10-6 ಲೀಟರ್)  ಎಂಬವು ಈ ಕ್ಷೇತ್ರದಲ್ಲಿ ಬಳಸುವ ತೂಕ ಮತ್ತು ಅಳತೆಗಳ ಮಾನಗಳು , ಇವನ್ನು ಅನುಕ್ರಮವಾಗಿ ( (ಗ್ರಾಮ) ಮತ್ತು  ( (ಲ್ಯಾಮ್ಡ್) ಎಂಬ ಪ್ರತೀಕಗಳಿಂದ ಸೂಚಿಸಿದೆ.

ಜೀವರಸಾಯನವಿe್ಞÁನ (ಬಯೊಕೆಮಿಸ್ಟ್ರಿ) ಜೀವವಿe್ಞÁನ (ಬಯೋಲಜಿ). ಶರೀರ ಕ್ರಿಯಾ ವಿe್ಞÁನ (ಫಿಸಿಯೊಲಜಿ) ಮತ್ತು ಜೀವಕಣವಿe್ಞÁನಗಳಿಗೆ (ಸೈಟಾಲಜಿ) ಸಂಬಂಧಿಸಿದ ಸಂಶೋಧನೆಗಳಲ್ಲಿ ದೊರೆಯುವ ಅಲ್ಪ ಮೊತ್ತದ ವಸ್ತುಗಳ ವಿಶ್ಲೇಷಣೆಗೆ ಅತಿಸೂಕ್ಷ್ಮ ರಾಸಾಯನಿಕ ವಿಧಾನಗಳು ಬಲು ಸಹಕರಿಯಾಗಿವೆ. ಈ ವಿಧಾನಗಳನ್ನು ವೈದ್ಯ ಚಿಕಿತ್ಸಾ ಪ್ರಯೋಗಶಾಲೆಯಲ್ಲೂ (ಕ್ಲಿನಿಕಲ್ ಲ್ಯಾಬೊರೇಟರಿ) ಬಳಸಿಕೊಳ್ಳುವುದಿದೆ. ಒಂದು ತೊಟ್ಟು ರಕ್ತದಲ್ಲಿರುವ ಪ್ರಮುಖ ವಸ್ತುಗಳ ಮೊತ್ತಗಳನ್ನು ಈ ವಿಶ್ಲೇಷಣ ವಿಧಾನಗಳಿಂದ ನಿರ್ಧರಿಸಬಹುದು. ಪ್ರಾಣಿ ಮತ್ತು ಸಸ್ಯಜೀವಕಣಗಳಲ್ಲಿರುವ ದ್ರವ ಅಲ್ಪ ಮೊತ್ತದ್ದಾದರೂ ಅದರಲ್ಲಿರುವ ನ್ಯೂಕ್ಲಿಯಿಕ್ ಅಮ್ಲಗಳು, ಮುಂತಾದುವುಗಳ ಬಗ್ಗೆ ಈ ವಿಧಾನದಿಂದ ಹೆಚ್ಚಿನ ಮಹಿತಿಯನ್ನು ಪಡೆಯಬಹುದು. ಅತಿಸೂಕ್ಷ್ಮ ರಸಾಯನವಿe್ಞÁನದ ವಿಧಾನಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಮಾತ್ರವಲ್ಲದೆ ತೀರ ಅಲ್ಪಮೊತ್ತದಲ್ಲಿ ದೊರೆಯುವ ಕೃತಕ ವಿಕಿರಣಪಟು ಧಾತುಗಳ ಗುಣಗಳನ್ನು ನಿರ್ಧರಿಸಲು ಕೂಡ ಬಳಸಿಕೊಳ್ಳುವುದಿದೆ. ಪ್ಲೂಟೋನಿಯಮ್ ಧಾತುವನ್ನು ಅಧಿಕ ಪ್ರಮಾಣದಲ್ಲಿ ತಯಾರಿಸಲು ಆ ಪೂರ್ವವಲ್ಲಿ ದೊರೆತಿದ್ದ ಕೆಲವೇ ಸಹಸ್ರಾಂಶಗ್ರಾಮಿನಷ್ಟು ವಸ್ತುವನ್ನು ಅತಿಸೂಕ್ಷ್ಮ ರಾಸಾಯನಿಕ ವಿಧಾನಗಳಿಂದ ವಿಶ್ಲೇಷಿಸಿ ಅದರ ಎಲ್ಲ ಮುಖ್ಯ ಗುಣಗಳನ್ನು ಕಂಡು ಕೊಳ್ಳಲಾಗಿತ್ತು. ಗುಣ ವಿಶ್ಲೇಷಣೆಗಾಗಿ ಅಲ್ಪಮೊತ್ತದಲ್ಲಿರುವ ವಸ್ತುಗಳ ಮೇಲೆ ನಡೆಸುವ ಕ್ರಿಯೆಗಳನ್ನು ವೀಕ್ಷಿಸಲು ಸೂಕ್ಷ್ಮದರ್ಶಕ ಬಲು ಸಹಕಾರಿ. ವಸ್ತುಗಳ ಗುಣಗಳನ್ನು ನಿರ್ಧರಿಸುವ ಕ್ರಿಯೆಗಳನ್ನು ಅನೇಕ ವೇಳೆ ಸೋಸುಕಾಗದದ ಚೂರು ಅಥವಾ ದಾರಗಳ ಮೇಲೆ ನಡೆಸಲಾಗುತ್ತದೆ. ಸಾಮಾನ್ಯವಾಗಿ ಸಾಂಪ್ರದಾಯಿಕ ಪ್ರಮಾಣ ವಿಶ್ಲೇಷಣೆಯಲ್ಲಿ ಬಳಸುವ ತೂಕ ಮಾನ, ಘನಮಾನ, ಅನಿಲಮಾಪನ ಮುಂತಾದ ವಿಧಾನಗಳು ಅತಿಸೂಕ್ಷ್ಮ ರಾಸಾಯನಿಕ ವಿಶ್ಲೇಷಣದಲ್ಲೂ ಬಳಕೆಯಲ್ಲಿವೆ. ಭೌತರಾಸಾಯನಿಕ ವಿಧಾನಗಳು ಅದರಲ್ಲೂ ವರ್ಣ ತೀವ್ರತಾಮಾಪನದ (ಕೆಲೊರಿಮೆಟ್ರೆಕ್) ಮತ್ತು ರೋಹಿತ ದ್ಯುತಿಮಾಪನದ (ಸ್ಪೆಕ್ಟ್ರೋಪೋಟೊಮೆಟ್ರೆಕ್) ವಿಧಾನಗಳು ಹೆಚ್ಚು ಬಳಕೆಯಲ್ಲಿವೆ. ಅತಿಸೂಕ್ಷ್ಮ ರಾಸಾಯನಿಕ ವಿಶ್ಲೇಷಣದಲ್ಲಿ ಸಣ್ಣ ಗಾತ್ರದ ನೂರಾರು ಸಲಕರಣೆಗಳು, ತಿರುಪು ಸಾಧನಗಳು ಮತ್ತು ಇತರ ವಿಧಾನಗಳನ್ನು ಬಳಸುತ್ತಾರೆ. ಘನ ಮಾನದಲ್ಲಿ ಬಳಸುವ ಕೆಲವು ಸಾಮಾನ್ಯ ಉಪಕರಣಗಳ ಮತ್ತು ವಿಧಾನಗಳಿಂದ ಈ ಕ್ಷೇತ್ರದ ವಿಶೇಷ ಲಕ್ಷಣಗಳನ್ನು ತಿಳಿಯಬಹುದು. ಪಿಪೆಟ್ಟನ್ನು ದಪ್ಪಗಾಜಿನ ಲೋಮನಾಳದಿಂದ ತಯಾರಿಸಿ ಅದನ್ನು ತುಂಬಲು ಮತ್ತು ಖಾಲಿಮಾಡಲು ಪಿಚಕಾರಿಯನ್ನು ಉಪಯೋಗಿಸುತ್ತಾರೆ. ಬ್ಯುರೆಟ್ ಎಂಬ ಇನ್ನೊಂದು ದ್ರವ ಮಾಪನನಳಿಕೆ 0.5 ಮಿಲಿಮೀಟರ್ ಒಳವ್ಯಾಸವುಳ್ಳ ಗಾಜಿನ ನಾಳದಿಂದ ತಯಾರಾಗಿರುವಂಥದು, ಕೇವಲ 1ರಿಂದ 2 ಸೆಂಟಿಮೇಟರ್ ವ್ಯಾಸವುಳ್ಳ ಪಿಂಗಾಣಿ ತಟ್ಟೆ, ಪ್ರಮಾಣ ಪಾತ್ರೆ, 1ರಿಂದ 2 ಸೆಂಟಿಮೀಟರ್ ಗಾತ್ರದ ಘನಮಾನದ ಸೀಸೆ -ಇವೆಲ್ಲದರ ಬಳಕೆ ಇದೆ. ಪ್ರಮಾಣಮಾಪನದಲ್ಲಿ ರಾಸಾಯನಿಕ್ರಿಯೆ ಪೂರೈಸಿದಾಗ ಉಂಟಾಗುವ ಬಣ್ಣ ವ್ಯತ್ಯಾಸವನ್ನು ಕಡಿಮೆ ಆಳದಲ್ಲಿರುವ ದ್ರಾವಣದಲ್ಲಿ ಗುರುತಿಸಲು ಕಾರ್ಯಸೂಚಿಯನ್ನು ಅಧಿಕ ಪ್ರಮಾಣದಲಿ ಬಳಸಬೇಕು. ಪ್ರಮಾಣ ಪಾತ್ರೆಯನ್ನು ಎತ್ತರ ಹೆಚ್ಚು ಕಡಿಮೆ ಮಾಡಲವಕಾಶವಿರುವಂಥ ಪೀಠದ ಮೇಲೆ ಇಟ್ಟು ವಿದ್ಯುತ್ ದೀಪದ ಹೆಚ್ಚಿನ ಬೆಳಕಿನ ಪ್ರಮಾಣಮಾಪನ ನಡೆಯುತ್ತದೆ. ತೂಕಮಾನ ವಿಧಾನಗಳಲ್ಲಿ 200ರಿಂದ 300 ಗ್ರಾಮ್‍ನಷ್ಟು (1μ ಗ್ರಾಮ್ = 10 -6 ಗ್ರಾಮ್ = I() ಭಾರವಿದ್ದಾಗ 0.03ಷ್ಟು ಗ್ರಾಮ್ ತೂಕದಷ್ಟು ವ್ಯತ್ಯಾಸವನ್ನು ತೋರಸಬಲ್ಲ ಅತಿಸೂಕ್ಷ್ಮ ತ್ರಾಸನ್ನು ಬಳಸುವುದಿದೆ. ಸ್ಫಟಿಕಶಿಲೆಯ ಎಳೆ ಇಲ್ಲವೆ ಲೋಹದ ತಂತಿಗಳಿದ ಮಾಡಿದ ದಂಡಿಗೆ ಇರುವ ವ್ಯಾವರ್ತನ (ಟಾರ್ಷನ್) ತತ್ತ್ವದ ಮೇಲೆ ಕಾರ್ಯವೆಸಗುವ, ಸ್ಪಿಂಗ್ ಎಳೆತದಿಂದ ಕೆಲಸಮಾಡುವ ತ್ರಾಸುಗಳು ಬಳಕೆಯಲ್ಲಿವೆ. ಈ ವಿಧಾನಗಳು ಮಾತ್ರವಲ್ಲದೆ ಈ ವರ್ಗದ ಮೊತ್ತಕ್ಕಿಂತಲೂ ಬಲು ಕಡಿಮೆ ಮೊತ್ತದಲ್ಲಿರುವ ವಸ್ತುಗಳ ವಿಶ್ಲೇಷಣೆಗಾಗಿ ಸೂಪರ್ ಮೈಕ್ರೊ ಅನಾಲಿಸಿಸ್ ಎಂಬ ಹೆಸರಿನಲ್ಲಿ ಮತ್ತಷ್ಟು ಸೂಕ್ಷ್ಮವೂ ನಾಜೂಕಿನವೂ ಆದ ವಿಧಾನಗಳೂ ಬಂದಿದೆ. (ಜಿ.ಎನ್.ಎ.)