ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಷುವದ್ವೃತ್ತ
ವಿಷುವದ್ವøತ್ತ ಖಗೋಳವನ್ನು ಸಮದ್ವಿಭಾಗಿಸುವ ಕಾಲ್ಪನಿಕ ವೃತ್ತ, ವೀಕ್ಷಕನ ನೆಲೆಯೇ ಇದರ ಕೇಂದ್ರ (ಸೆಲೆಸ್ಟಿಯಲ್ ಇಕ್ವೇಟರ್). ವೀಕ್ಷಕನನ್ನು (ವಾಸ್ತವವಾಗಿ ಸಾಕ್ಷಾತ್ ಭೂಮಿಯನ್ನೇ) ಧ್ರುವನಕ್ಷತ್ರಕ್ಕೆ ಸೇರಿಸುವ ರೇಖೆಗೆ ಖಗೋಳದ ಅಕ್ಷವೆಂದು ಹೆಸರು. ಖಗೋಳ ಇದರ ಸುತ್ತ ಏಕವೇಗದಿಂದ ಪೂರ್ವ-ಪಶ್ಚಿಮ ದಿಶೆಯಲ್ಲಿ ಆವರ್ತಿಸುತ್ತಿ ರುವಂತೆ ನಮಗೆ ಭಾಸವಾಗುತ್ತದೆ. ಅಕ್ಷಕ್ಕೆ ವೀಕ್ಷಕನ (ಭೂಮಿಯ) ಮೂಲಕ ಲಂಬವಾಗಿ ರಚಿಸಿದ ಕಾಲ್ಪನಿಕ ಸಮತಲ ಖಗೋಳವನ್ನು ವಿಷುವದ್ವøತ್ತದ ನೇರ ಛೇದಿಸುತ್ತದೆ. ಇದು ಖಗೋಳವನ್ನು ಎರಡು ಸಮಭಾಗಗಳಾಗಿ ವಿಭಾಗಿಸುವುದು: ಧ್ರುವನಕ್ಷತ್ರವಿರುವ ಭಾಗ ಉತ್ತರ ಗೋಳಾರ್ಧ, ಇರದ ಭಾಗ ದಕ್ಷಿಣ ಗೋಳಾರ್ಧ.
ಚಿತ್ರ-1
ಪ್ರತಿ ವರ್ಷ ಮಾರ್ಚ್ 21/22 ಮತ್ತು ಸೆಪ್ಟೆಂಬರ್ 22/23 ದಿನಾಂಕಗಳಂದು ಸೂರ್ಯನ ದೈನಂದಿನ ಪಥ ವಿಷುವದ್ವøತ್ತ. ಇದು ಆಕಾಶಕಾಯಗಳ ಸ್ಥಾನ ಮತ್ತು ಚಲನೆಗಳನ್ನು ಗಣಿತೀಯವಾಗಿ ಸೂಚಿಸಲು ಪ್ರಮುಖ ಆಧಾರತಲ. ಇದರ ಮೇಲೆ ಮತ್ತು ಆಸುಪಾಸಿನಲ್ಲಿ ಗೋಚರಿಸುವ ನಕ್ಷತ್ರಗಳ ನೆರವಿನಿಂದ ವಿಷುವದ್ವøತ್ತದ ಸ್ಥೂಲನೆಲೆಯನ್ನು ಅರಿಯಬಹುದು.
*
*