ಮೊಟ್ಟೆ ಒಟ್ಟಿ ಮೊಟ್ಟೆ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಮೊಟ್ಟೆ ಮೊಟ್ಟೆ ಪತ್ರಿ ಪುಷ್ಪವ ತಂದು ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು
ತನುಮನದ ಕೆಟ್ಟತನವ ಹಿಂಗದನ್ನಕ್ಕರ ? ಹುಸಿ ಕಳವು ಪರದಾರ ವ್ಯವಹಾರದಲ್ಲಿ ಹರಿದಾಡುವ ದುರುಳಬುದ್ಧಿಯ ದುರಾಚಾರಿಗಳಿಗೆ ದೂರನಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನು.