ವಿಷಯಕ್ಕೆ ಹೋಗು

ಯಕ್ಷ ಪ್ರಭಾಕರ

ವಿಕಿಸೋರ್ಸ್ದಿಂದ

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).

ಯಕ್ಷ ಪ್ರಭಾಕರ

ಜೋಶಿ ಪ್ರಭಾಪಟಲ


ಸಂಪಾದಕರು : ಕದ್ರಿ ನವನೀತ ಶೆಟ್ಟಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ)

ಮಂಗಳೂರು

YAKSHA PRABHAKARA
A book about
Dr. M. Prabhakara Joshi
205, 'Haribhakthi'
Pintos Lane, Kadrikambala, Mangaluru - 574 004
Phone: 0824 2494955 Mobile 9448494955
e-mail :joshymp@rediffmail.com, joshymmp@gmail.com

Published by
Yakshadhruva Patla Foundation Trust (R)
Shop No. 16, Empire Mall, 2nd Floor
Mahatma Gandhi Road, Mangaluru - 575 003
Mobile: 9900371441 (President)

First Edition : 2019

Paper 80 gsm maplitho Size: Dy 1/8 wide

© : Author

Pages: 56 Price : Rs. 50

Cover Design: Kallur Nagesh
Cover photo: Satish Ira

Page Designed & Printed at
Aakrithi Prints
Light House Hill Road, Mangaluru - 1
Tel: 0824 2443002

ಯಕ್ಷ ಪ್ರಭಾಕರ

ಯಕ್ಷಗಾನ ಲೋಕದಲ್ಲಿ ನಾನು ಕಂಡಂತಹ ಅಪ್ರತಿಮ ವಿದ್ವಾಂಸರು, ವಾಗ್ಮಿ ಹಾಗೂ ವಿಮರ್ಶಕರು. ಯಾವುದೇ ವಿಚಾರವನ್ನು ಯಾರದ್ದೇ ವಿಚಾರವನ್ನು ನಿಷ್ಠುರವಾಗಿ ನಿರ್ಭೀತಿಯಿಂದ ಹೇಳುವಂತಹ ನೇರ ಸ್ವಭಾವದ ವ್ಯಕ್ತಿತ್ವ.

ತನಗಿಂತ ಸಣ್ಣ ಕಲಾವಿದರನ್ನು ಮೇಲೆತ್ತಿ ಪೋಷಿಸುವ ಸದ್ಗುಣ ಜೋಶಿಯವರದ್ದು. ಅವರ ಬಗ್ಗೆ ಹೇಳಲು ಹೋದರೆ ನನ್ನ ಆಯುಷ್ಯ ಸಾಲದೇನೋ..

ಜೋಶಿಯವರ ಬಗ್ಗೆ ಮತ್ತೊಂದು ಮಗ್ಗುಲಲ್ಲಿ ಯೋಚಿಸಿದರೆ ಯಾವುದೇ ಒಬ್ಬ ವ್ಯಕ್ತಿ ಒಳ್ಳೆಯ ಕೆಲಸ ಮಾಡುತ್ತಾನೆಂದರೆ ಅಲ್ಲಿ ಅವರಾಗಿಯೇ ಹೋಗಿ ಕೊಡುವ ಪ್ರೋತ್ಸಾಹ ಹೇಳತೀರದು. ನನ್ನ ತಂದೆ ಪಟ್ಲಗುತ್ತು ಮಹಾಬಲ ಶೆಟ್ಟರು ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತ ಯಕ್ಷಗಾನ ತಾಳಮದ್ದಳೆಯನ್ನು ಸತತ ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು. ಜೋಶಿಯವರು ಅತೀ ಎತ್ತರದ ಕಲಾವಿದ. ಆದರೂ ತಿಂಗಳಿಗೆ ಮೂರು ನಾಲ್ಕು ಬಾರಿ ಅವರಾಗಿಯೇ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿ ಅರ್ಥಗಾರಿಕೆ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಅವರ ಗುಣ ಯಾರೂ ಮೆಚ್ಚುವಂತಹದ್ದು.

ವೈಯಕ್ತಿಕವಾಗಿಯೂ ನನ್ನ ಜೀವನದಲ್ಲಿ ನನಗೆ ಎಲ್ಲಾ ರೀತಿಯಲ್ಲೂ ಬುದ್ಧಿವಾದ, ಜಾಗ್ರತೆಯನ್ನು ಪದೇ ಪದೇ ಹೇಳಿ ನನ್ನನ್ನು ತಿದ್ದುವಂತಹ ನನ್ನ ಗುರು ಸಮಾನರು. ಅವರ ಯಕ್ಷಸಾಧನೆಯ ಕಿರು ಪರಿಚಯವನ್ನು ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಅನಾವರಣಗೊಳಿಸುತ್ತಿರುವುದುದ ತುಂಬಾ ಸಂತಸವಾಗಿದೆ. ಇದಕ್ಕೆ ಕಾರಣೀಕರ್ತರಾದ ಕದ್ರಿ ನವನೀತ ಶೆಟ್ಟರಿಗೆ ಧನ್ಯವಾದಗಳನ್ನು ಅರ್ಪಿಸಿ, ಡಾ. ಎಂ. ಪ್ರಭಾಕರ ಜೋಇಯವರ ಜೀವನಾದರ್ಶ ಎಲ್ಲರಿಗೂ ಮಾದರಿಯಾಗಲಿ. ಜೋಶಿಯವರ ಯಕ್ಷಸೇವೆ ಮುಂದುವರಿಯಲಿ. ಅವರ ಕೀರ್ತಿ ಅಜರಾಮರವಾಗಿರಲಿ ಎಂದು ಕಟೀಲು ತಾಯಿ ಭ್ರಮರಾಂಬಿಕೆಯಲ್ಲಿ ನನ್ನ ಪ್ರಾರ್ಥನೆ. 2019ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಜೊತೆಗೆ ಈ ಕೃತಿಯನ್ನು ಜೋಶಿಯವರಿಗೆ ಸಮರ್ಪಿಸುತ್ತಿದ್ದೇವೆ.

ಪಟ್ಲ ಸತೀಶ್ ಶೆಟ್ಟಿ

ಪೀಠಿಕೆ

ಕದ್ರಿ ನವನೀತ ಶೆಟ್ಟಿ ಯಕ್ಷಧುವ ಪಟ್ಲ ಪ್ರಕಾಶನ
ಕದ್ರಿ ನವನೀತ ಶೆಟ್ಟಿ
ಯಕ್ಷಧುವ ಪಟ್ಲ ಪ್ರಕಾಶನ


ಪ್ರತಿಷ್ಠಿತ ಪಟ್ಲ ಪ್ರಶಸ್ತಿಯನ್ನು ಪಟ್ಲ ಸಂಭ್ರಮದ ವೇದಿಕೆಯಲ್ಲಿ ಕಳೆದ ಮೂರು ವರ್ಸಗಳಿಂದ ನೀಡಲಾಗುತ್ತಿದೆ. ಈ ಪೂರ್ವದಲ್ಲಿ ಪಟ್ಲ ಪ್ರಶಸ್ತಿ ಮಾನ್ಯರಾದವರು - ವೇಷಧಾರಿ ಶ್ರೀ ಪೆರುವಾಯಿ ನಾರಾಯಣ ಶೆಟ್ಟಿ, ಶ್ರೀ ಬಲಿಪ ನಾರಾಯಣ ಭಾಗವತ ಮತ್ತು ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರು. ಡಾ. ಮಾಳ ಪ್ರಭಾಕರ ಜೋಶಿಯವರನ್ನು 2019ರ ಸಾಲಿನ ಪಟ್ಲ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪಟ್ಲ ಭಾಗವತರ ಹಿತೈಷಿ, ಮಾರ್ಗದರ್ಶಕರಾದ ಜೋಶಿಯವರು ಪಟ್ಲ ಹವ್ಯಾಸಿ ಘಟಕದ ಹಿರಿಯ ಮಾರ್ಗದರ್ಶಕರು. ಕಲೆ ಮತ್ತು ಕಲಾವಿದರ ಬಗ್ಗೆ ವಿಶೇಷ ಕಾಳಜಿ, ಪ್ರೀತಿ, ಗೌರವ ಇರಿಸಿಕೊಂಡಿರುವ ಜೋಶಿಯವರು ಕೇವಲ ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸರಷ್ಟೇ ಅಲ್ಲ, ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿದ ಕ್ರಿಯಾಶೀಲರು. ಕೊಡದ ನೀರನ್ನು ತಂಬಿಗೆಗಳಲ್ಲಿ ತುಂಬಿಸಿ ಕೊಡುವುದು ಸುಲಭ. ತುಂಬಿಕೊಂಡಷ್ಟು ಮತ್ತೆ ತುಳುಕುವ ನೀರಿನ ಝರಿಯಂತಹ ವ್ಯಕ್ತಿತ್ವ ಜೋಶಿಯವರದ್ದು. ಜೋಶಿಯವರ ಬಗ್ಗೆ ಈಗಾಗಲೇ ನಾಲೈದು ಪರಿಚಯ ಗ್ರಂಥಗಳು ಪ್ರಕಟವಾಗಿವೆ. ಇನ್ನೂ ಹತ್ತಾರು ಅಭಿನಂದನಾ ಗ್ರಂಥಗಳಿಗಾಗುವಷ್ಟು ವಿಷಯಗಳು 'ಜೋಶಿ' ಎನ್ನುವ ಅದ್ಭುತ ವ್ಯಕ್ತಿಯಲ್ಲಿ ನಿಕ್ಷೇಪಿಸಲ್ಪಟ್ಟಿದೆ. ಯಕ್ಷಗಾನದ ಮಟ್ಟು-ತಿಟ್ಟುಗಳ ಬಗ್ಗೆ ಆಟ-ಕೂಟಗಳ ಬಗ್ಗೆ, ಹಿಮ್ಮೇಳ, ಬಣ್ಣಗಾರಿಕೆ, ವೇಷಗಾರಿಕೆ, ಚೌಕಿ, ರಂಗಸ್ಥಳ, ಪ್ರಸಂಗ ಸಾಹಿತ್ಯ, ನೃತ್ಯ, ಅಭಿನಯ, ಮಾತುಗಾರಿಕೆ, ಪ್ರೇಕ್ಷಕ, ವಿಮರ್ಶಕ, ಯಜಮಾನ ಹೀಗೆ ಎಲ್ಲ ಅಂಗಗಳ ಬಗ್ಗೆಯೂ ವಿದ್ವತ್ತೂರ್ಣವಾಗಿ ಮಾಹಿತಿ, ವಿಮರ್ಶೆ, ಸಲಹೆ ನೀಡಬಲ್ಲ ಅಗಾಧ ಪಾಂಡಿತ್ಯದ ನಿಧಿ ನಮ್ಮ ಜೋಶಿಯವರು. 'ಯಕ್ಷ ಪ್ರಭಾಕರ' ಎನ್ನುವ ಈ ಪುಟ್ಟ ಕೃತಿಯು ಪಟ್ಲ ಪ್ರಕಾಶನದಿಂದ ಪ್ರಕಾಶಿಸಲ್ಪಡುತ್ತಿದೆ. ಪ್ರಸಂಗ ಸಾಹಿತ್ಯಗಳು ಯಕ್ಷಗಾನ ಕಲಾವಿದರಿಗೆ ಅನುಕೂಲವಾಗುವಂತೆ ಈ ಕೃತಿಯು 'ಪ್ರಭಾಪಟಲ'ವಾಗಿ ಯಕ್ಷಾಂಗಣದಲ್ಲಿ ಕಂಗೊಳಿಸಲಿ. ಈ ಕೃತಿ ಪ್ರಕಾಶನದ ಪ್ರಾಯೋಜಕ ಶ್ರೀ ಸವಣೂರು ಸೀತಾರಾಮ ರೈ ಅವರಿಗೆ, ಲೇಖನಗಳನ್ನು ಒದಗಿಸಿಕೊಟ್ಟ ಎಲ್ಲ ಲೇಖಕರಿಗೆ ಮತ್ತು ಸೀಮಿತ ಅವಧಿಯಲ್ಲಿ 'ಯಕ್ಷ ಪ್ರಭಾಕರ ಕೃತಿಯನ್ನು ಸಿಂಗರಿಸಿದ ಕಲ್ಲೂರು ನಾಗೇಶರಿಗೆ ಹಾರ್ದಿಕ ನಮನಗಳು.

ಬಹುಶ್ರುತ ವಿದ್ವಾಂಸ ಡಾ. ಜೋಶಿ

ಪ್ರೊ. ಬಿ.ಎ. ವಿವೇಕ ರೈ ಮಂಗಳೂರು ಹಿರಿಯ ವಿದ್ವಾಂಸರು, ಸಂಶೋಧಕರು ವಿಶ್ರಾಂತ ಕುಲಪತಿ, ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರು ಮುಕ್ತ ವಿಶ್ವವಿದ್ಯಾಲಯ
ಪ್ರೊ. ಬಿ.ಎ. ವಿವೇಕ ರೈ
ಮಂಗಳೂರು
ಹಿರಿಯ ವಿದ್ವಾಂಸರು,
ಸಂಶೋಧಕರು
ವಿಶ್ರಾಂತ ಕುಲಪತಿ,
ಕನ್ನಡ ವಿಶ್ವವಿದ್ಯಾಲಯ ಮತ್ತು
ಮೈಸೂರು ಮುಕ್ತ ವಿಶ್ವವಿದ್ಯಾಲಯ



ಡಾ. ಎಂ. ಪ್ರಭಾಕರ ಜೋಶಿ ಅವರನ್ನು ನಾನು ಕಳೆದ ನಲುವತ್ತು ವರ್ಷಗಳಿಂದ ಚೆನ್ನಾಗಿ ಬಲ್ಲೆ. ಡಾ. ಜೋಶಿ ಅವರು ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖಿ ಸಾಧನೆ ಮಾಡಿದ್ದಾರೆ. ಯಕ್ಷಗಾನದ ಅಗ್ರಶ್ರೇಣಿಯ ಕಲಾವಿದರಾಗಿ, ಉನ್ನತ ಸಂಶೋಧನೆಯ ಸಂಶೋಧಕರಾಗಿ, ಯಕ್ಷಗಾನ ಕೋಶದ ನಿರ್ಮಾಪಕರಾಗಿ, ಸೂಕ್ಷ್ಮ ಗ್ರಹಣ ಶಕ್ತಿಯ ವಿಮರ್ಶಕರಾಗಿ, ಕಲಾವಿದರನ್ನು ಗುರುತಿಸಿ ಅವರಿಗೆ ಗೌರವ ದೊರಕಿಸಿಕೊಡುವ ಸಾಂಸ್ಕೃತಿಕ ಹಿರಿಯರಾಗಿ, ವಿಚಾರಗೋಷ್ಠಿ ಕಮ್ಮಟ ತರಬೇತಿ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ ಕಳೆದ ನಲುವತ್ತೈದು ವರ್ಷಗಳಿಂದ ಅವಿರತ ಸಾಧನೆ ಮಾಡಿಕೊಂಡು ಬಂದಿದ್ದಾರೆ.
ಡಾ. ಜೋಶಿಯವರ ಸಂಶೋಧನೆಯ ಫಲವಾಗಿ ಯಕ್ಷಗಾನದ ಪರಂಪರೆಯ ಸಂರಕ್ಷಣೆಗೆ ಹೊಸ ಆಯಾಮ ದೊರಕಿದೆ. ಅವರ 'ಯಕ್ಷಗಾನ ಪಾರಿಭಾಷಿಕ ಕೋಶ'ದ ನಿರ್ಮಾಣದಿಂದಾಗಿ ಪರಂಪರೆಯ ವೇಷ ಮತ್ತು ಸಾಮಗ್ರಿಗಳು ಮತ್ತೆ ಪುನ‌ ನಿರ್ಮಾಣವಾಗಿವೆ. ಯಕ್ಷಗಾನದ ಪರಂಪರೆ ಮತ್ತು ಪ್ರಯೋಗದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಜೋಶಿಯವರು ಕೊಟ್ಟ ಮಾರ್ಗದರ್ಶಿ ಸೂತ್ರಗಳನ್ನು ಯಕ್ಷಗಾನದ ಕಲಾವಿದರು ಮತ್ತು ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ, ಅಳವಡಿಸಿಕೊಂಡಿರುವುದು

ಯಕ್ಷ ಪ್ರಭಾಕರ / 9
ಆನ್ವಯಿಕ ಸಂಶೋಧನೆಯ ದೃಷ್ಟಿಯಿಂದ ಮಹತ್ವದ ಸಂಗತಿ. ಡಾ. ಪ್ರಭಾಕರ

ಜೋಶಿ ಅವರಂತೆ ಕಲಾವಿದ, ಸಂಶೋಧಕ, ವಿಮರ್ಶಕ ಮತ್ತು ಸಂಘಟಕ ಆಗಿ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಸಕ್ರಿಯವಾಗಿ ತೊಡಗಿಸಿಕೊಂಡ ಇನ್ನೊಬ್ಬ ಹಿರಿಯ ವಿದ್ವಾಂಸರು ಕರ್ನಾಟಕದಲ್ಲಿ ಇಂದು ನಮ್ಮ ನಡುವೆ ಇಲ್ಲ.
ಡಾ. ಜೋಶಿಯವರು ತತ್ತ್ವಶಾಸ್ತ್ರಗಳ ವಿಮರ್ಶಾತ್ಮಕ ಅಧ್ಯಯನಗಳ ಮೂಲಕ ಕನ್ನಡದ ಒಬ್ಬ ವೈಚಾರಿಕ ವಿದ್ವಾಂಸರಾಗಿಯೂ ಮುಖ್ಯ ರಾಗಿದ್ದಾರೆ. ಸಾಹಿತ್ಯ, ಕಲೆ, ಜಾನಪದ, ರಂಗಭೂಮಿ, ಮೀಮಾಂಸೆಯ ಕ್ಷೇತ್ರಗಳನ್ನು ಅಂತರ್ ಶಿಸ್ತೀಯ ನೆಲೆಯಿಂದ ಅಧ್ಯಯನ ಮಾಡಿದ ಮತ್ತು ಇಂದಿಗೂ ಈ ಕ್ಷೇತ್ರಗಳ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿ ಇರುವ ಡಾ. ಪ್ರಭಾಕರ ಜೋಶಿ ಅವರು ಕರ್ನಾಟಕದ ಬಹುಶ್ರುತ ವಿದ್ವಾಂಸರು.

ವಿದ್ವತ್ತು ಮತ್ತು ಸಹಜತೆಗಳನ್ನು ಒಗ್ಗೂಡಿಸಿದ ಜೋಶಿಯವರು

alt=ಡಾ.ಕೆ. ಚಿನ್ನಪ್ಪ ಗೌಡ ಜಾನಪದ ವಿದ್ವಾಂಸರು, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ
ಡಾ.ಕೆ. ಚಿನ್ನಪ್ಪ ಗೌಡ

ಜಾನಪದ ವಿದ್ವಾಂಸರು,
ಕುಲಪತಿಗಳು,
ಕರ್ನಾಟಕ
ಜಾನಪದ ವಿಶ್ವವಿದ್ಯಾನಿಲಯ



ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನದ ಕೆಲವೇ ವಿಮರ್ಶಕ-ಕಲಾವಿದ-ತಜ್ಞರಲ್ಲಿ ಒಬ್ಬರು. ಆ ವಿಭಾಗದ ಅಗ್ರಗಣ್ಯರು. ಡಾ. ಶಿವರಾಮ ಕಾರಂತರ ಬಳಿಕ-ಯಕ್ಷಗಾನದ ಮುಖ್ಯ ವಿಮರ್ಶಕರು. ಚಿಕ್ಕವಯಸ್ಸಿನಲ್ಲಿ ಯಕ್ಷಗಾನವನ್ನು ಪ್ರವೇಶಿಸಿ, ಕಳೆದ ನಾಲ್ಕು ದಶಕಗಳಿಗೂ ಮಿಕ್ಕಿ ಅಗ್ರಪಂಕ್ತಿಯ ಅರ್ಥಧಾರಿಯೆನಿಸಿ, ಇಂದಿನ ಅತ್ಯಂತ ಪ್ರತಿಭಾವಂತ ಅರ್ಥಧಾರಿಯೆನಿಸಿದ್ದಾರೆ. ಜೋಶಿ ಅವರ ಗ್ರಾಮೀಣ ಹಿನ್ನೆಲೆ, ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ, ಹಿಂದಿ, ಇಂಗ್ಲಿಷ್ ಭಾಷೆಗಳ ಜ್ಞಾನ, ಹಿರಿಯರ ಒಡನಾಟ, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕನಾಗಿ ಸೇವೆ, ಸಮಾಜ ಕಾರ್ಯ-ಹೀಗೆ ವಿಶಿಷ್ಟವಾದ ಅವರ ಸಂಯುಕ್ತ ವ್ಯಕ್ತಿತ್ವ ಪ್ರವೃತ್ತಿಗಳು ಅವರ ಕಲೆಗಾರಿಕೆ, ಅಭಿವ್ಯಕ್ತಿ ಮತ್ತು ಬರಹಗಳನ್ನು ರೂಪಿಸಿವೆ. ಯಕ್ಷಗಾನದ ವಸ್ತು, ಪ್ರಸಂಗ, ಭಾಷೆಗಳಲ್ಲಿ ಅವರಿಗೆ ಬಲವಾದ ಹಿಡಿತ ಇದ್ದು, ಅತ್ಯುತ್ತಮ ಸಂವಹನ ಸಾಮರ್ಥ್ಯವಿದೆ. ಭಾವ, ಪ್ರತಿಕ್ರಿಯೆ, ತಿಳಿಹಾಸ್ಯದಿಂದ ಕೂಡಿದ ವಿದ್ವತ್ತು ಮತ್ತು ಸಹಜತೆಗಳನ್ನು ಒಗ್ಗೂಡಿಸಿರುವ ಜೋಶಿಯವರ ಮಾತಿನ ರೀತಿ ಅಸಾಧಾರಣವಾದದ್ದು. ಶ್ರೀಕೃಷ್ಣ, ಶ್ರೀರಾಮ, ಧರ್ಮರಾಜ, ಶೂರ್ಪನಖಿ, ಮಂಡೋದರಿ, ದೌಪದಿ, ಕರ್ಣ, ದುರೋಧನ, ವಾಲಿ, ಭೀಷ್ಮ, ಸುಧನ್ವ, ಅರ್ಜುನ, ವಿಭೀಷಣ, ಆಂಜನೇಯ, ಉತ್ತರ, ವೀರಮಣಿ, ಭೀಮ, ರಾವಣ,

ತಾಮ್ರಧ್ವಜ, ಬಲರಾಮ, ನಾರದ, ಭರತ-ಹೀಗೆ ತೀರ ಭಿನ್ನ ರೀತಿಯ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವ

ಕಲಾವಿದ. ಈ ವಿಚಾರದಲ್ಲೂ ಅವರು ಅಗ್ರಗಣ್ಯರು.

ತತ್ತ್ವಶಾಸ್ತ್ರದ ಅವರ ಪಾಂಡಿತ್ಯವು ಅದರ ಅರ್ಥಗಾರಿಕೆಗೆ ಆಳವನ್ನು ನೀಡಿದೆ. ತಾಳಮದ್ದಳೆ ಕ್ಷೇತ್ರಕ್ಕೆ ಹೊಸ ಹುರುಪು, ಆಯಾಮಗಳನ್ನು ಶಿಸ್ತನ್ನು ತರುವಲ್ಲಿ ಜೋಶಿಯವರ ಕೊಡುಗೆ ಅದ್ವಿತೀಯ.

ವಿಮರ್ಶಕನಾಗಿ ಅವರಿಗೆ-ಕಲೆಯ ಪ್ರಾಯೋಗಿಕ ಜ್ಞಾನ, ತಾತ್ವಿಕ ಅರಿವು, ಕಲಾ ವಿಮರ್ಶೆಯ ಭದ್ರಬುನಾದಿಗಳಿರುವುದರಿಂದ ಯಕ್ಷಗಾನ ವಿಮರ್ಶೆಗೆ ಅಕಾಡೆಮಿಕ್ ರೂಪವನ್ನು ನೀಡುವಲ್ಲಿ ಅವರ ಪರಿಶ್ರಮವು ವಿಶಿಷ್ಟ ಸಾಧನೆ ಎನಿಸಿದೆ. ಯಕ್ಷಗಾನ ವಿಮರ್ಶೆಯನ್ನು ಒಂದು ವ್ರತವಾಗಿ ಸ್ವೀಕರಿಸಿ ದಶಕಗಳ ಕಾಲ ಅದನ್ನು ಮಾಡುತ್ತ, ಕಲಾವಿದರಲ್ಲೂ ಸಮಾಜ ದಲ್ಲೂ ಜಾಗೃತಿ ಉಂಟು ಮಾಡಿದ್ದಾರೆ.

ಜೋಶಿ ಅವರ ಯಕ್ಷಗಾನ ವಿಮರ್ಶಾ ಗ್ರಂಥಗಳು ಅವರ ಯಕ್ಷಗಾನ ಪದಕೋಶ ಮತ್ತು ಪಿಎಚ್.ಡಿ. ಮಹಾಪ್ರಬಂಧಗಳು ಕನ್ನಡದ ವಿಶಿಷ್ಟ ಸಂಶೋಧನಾ ರಚನೆಗಳಾಗಿವೆ.

ಕಲಾವಿದರಿಗೆ, ಮೇಳ ಕಲಾ ಸಂಘಟನೆಗಳಿಗೆ, ಅಧ್ಯಯನ ಸಂಸ್ಥೆಗಳಿಗೆ ನಿಕಟವರ್ತಿಯಾಗಿರುವ ಜೋಶಿಯವರು ಪ್ರಭಾವಿ ಆತ್ಮೀಯ ಮಾರ್ಗದರ್ಶಕರಾಗಿ ಕಲಾ ಕ್ಷೇತ್ರದಲ್ಲಿ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಕಲಾವಿದರಿಗೆ ನೆರವು ಮಾರ್ಗದರ್ಶನ ಆಪತ್ಸಹಾಯ ನೀಡಿದ್ದಾರೆ.

ಕಲಾವಿದನಾಗಿ ಅಲ್ಲದೆ-ಕಾರಕರ್ತ, ಸಂಘಟಕ, ನೇತಾರನಾಗಿ ಅವರು ಪ್ರಸಿದ್ದರು. ಜೋಶಿಯವರ ಉಪನ್ಯಾಸಗಳು, ಪ್ರಬಂಧ ಮಂಡನೆಗಳು, ಆಶಯ ಭಾಷಣಗಳು ಉನ್ನತ ಮೌಲ್ಯದ ಚಿಂತನೆಗಳಾಗಿವೆ.

ಜೋಶಿಯವರ ಪ್ರವಚನಗಳು ವಿಶಿಷ್ಟ ತಾತ್ವಿಕ ಚಿಂತನೆಗಳಿಂದ ಜನಪ್ರಿಯವಾಗಿವೆ. ಅಧ್ಯಾಪಕ, ಆಡಳಿತಗಾರರಾಗಿ ಜೋಶಿಯವರ ಪ್ರತಿಭೆ, ಸಾಮರ್ಥ್ಯಗಳು ತುಂಬ ಶ್ಲಾಘನೆಗೆ ಒಳಗಾಗಿವೆ. ಅವರ ಲೇಖನ, ಅಂಕಣಗಳು, ಪತ್ರಗಳು ಕೂಡ - ಚುರುಕಾದ, ಅಡಕವಾದ ವಿಚಾರ ಸೂತ್ರಗಳಂತಿರುತ್ತವೆ.

ಸಾಂಸ್ಕೃತಿಕ ಸಂಘಟನೆ, ಮಾಧ್ಯಮ, ಸಂವಹನ, ವಿಚಾರಗಳಲ್ಲಿ ಮಾರ್ಗದರ್ಶಕರಾಗಿ ವಿಶಿಷ್ಟ ಸಾಧನೆಗೈದಿದ್ದಾರೆ.

Man of Many Parts Dr. M. Prabhakara Joshi

alt=Prof. Dr. B. Surendra Rao Historian Former Dean, Mangalore University Assaigoli, Mangalore
Prof. Dr. B. Surendra Rao

Historian
Former Dean,
Mangalore University
Assaigoli, Mangalore

In the cultural map of Dakshina Kannada Dr Prabhakara Joshi has a dazzling presence, and deservingly so.A professor of commerce and a teacher par excellence, Prabhakara Joshi's activities and fame happily spilled out of class-rooms to reach larger audience. His chosen area of interest and cultivation is Yakshagana, a unique

form of dance-drama that offers a package of poetry, music, percussion, dance, histrionics, and theatrical expositions of puranic or quasi-puranic themes. It is a very popular and cultivated theatre form in the coastal Karnataka, drawing both discerning and enthusiastic audience of young and old alike. It offers great visual effect even as it draws from our perennial reservoir of puranic stories, offering immense scope for dazzling enactments and creative interpretations. Summoning the gods and demons, heroes and anti-heroes, villains and clowns, extraordinary men and women to our midst, Yakshagana conjures up a world in which the real and the unreal, ideals and their defiance meet and get negotiated. Dr Joshi is a veritable treasure-house of its knowledge, both as theory and practice, and is acknowledged as one of its most

ಯಕ್ಷ ಪ್ರಭಾಕರ / 13

eloquent spokesmen and finest critics since Dr Shivarama Karanth.
Dr. Joshi has associated himself with many programmes and projects designed to promote this unique art form. When the Regional Resources Centre at Udupi took up a project to document Balipa Bhagavatha's singing style on Ramayana and other assorted themes, Joshi was in the forefront. He was also the guiding spirit behind its documentation of costumes and make-up of the southern variant of Yakshagana (Tenku-thittu). His expertise was sought by Mangalore University whenever it organised a conference on any aspect of this art form or when it set up a Yakshagana Centre there. He had a decisive hand in hammering out its goals and programmes, directions of work and so on, and his advice and has always been very valuable to those who functioned at the centre as its Director or Coordinator.
Dr Joshi has not confined himself to the southern variant of this art form. He has daringly moved out of its picket fences toward its equally wonderful northern version. He has been associated with 'Shambhu Hegde Rashtriya Nrithyotsava' at Gunavanthe in North Kanara for the last nine years. His counsel is sought at the Brahmari Yakshagana Festival which the temple at Kateel has been organising regularly. Dr Joshi has also led Yakshagana troupes to Dubai and Bahrain to ladle out their rich fare to the audience there. Though not a professional Yakshagana artiste, he is looked upon as an embodiment of its manifold richness, possibilities and as a sort of philosopher-guide for that immensely creative and complex theatre art form. That is why in any seminar or symposium on Yakshagana the wise egg-head of Dr Joshi should invariably figure.
There is another edition of Yakshagana, sans its dance, make-up and theatrical presentation calledTaala- maddale, which presents puranic episodes as extempore explanations in dialogic forms to poetic, lyrical

presentations. In Taala-maddale the person who represents and delineates a character in any chosen episode does so by explaining and interpreting the stanza sung by the Bhagavatha singer. The stanza provides the framework for explanation and exposition, which can be a real test of knowledge, interpretative acumen, gift of the gab and indeed an ability to conjure up a verbal world of reality. The character delineations which it provides for through dialogues can indeed make up for the absence of visual theatricality which Yakshagana offers. Dr. Prabhakara Joshi is today considered as one of the finest exponents of this intensely cerebral art-form. He is a star performer in Taala-maddale, - spoken of in the same breath as the great masters of the past like, Sheni, Samaga, Deraje, Polali and the like, - and his virtuoso presentations and interpretations of such varied characters as Raama, Vaali, Raavana, Shurpanakhi, Bharatha, Krishna, Bhishma, Kaurava, Uttara Kumara, Shalya, Dharmaraja and others are hailed as both original and thought-provoking. His extensive knowledge of the puranas and his critical understanding of its contours, characters, meanings and imports are amply borne out in his performances. He is able to relive the puranic characters and yet relate them to the world we live in. His knowledge of Sanskrit and eloquence in presentation as well as his penchant for turn of phrases and his sense of humour have been his unfailing allies. Dr Joshi is an acknowledged star in this field and his name itself is a huge advertisement to the programme announced as having his participation. His fame as the Taala-maddale has reached lands across the seas, and he has performed in countries like the U.S. and Canada to regale the audience there.
As an interpreter and critic of Yakshagana and Taala-maddale, Dr Joshi has fiercely stood for certain values. Rooted in tradition and yet open to change, there is an in-built tension in these art forms between what is hailed as tradition and what is demanded as change.

This tension is necessary and it constitutes the idiom of its vitality. No tradition can defy change unless it prefers to remain embalmed like a mummy. When we say we should preserve a tradition, what we mean is that we do not want preserve it as a fossil in a museum but keep it alive. To be alive is to change, and acknowledge that change. But change should not lose sight of the tradition, what was bequeathed to us. Surely, if that tradition is a living tradition, what we bequeath to prosperity will not be what we have inherited. This creative tension is in any living art form, and Dr Joshi is acutely aware of this when he critiques Yakshagana and its cousin, Taalamaddale. He is sure that change in them should not be at the expense of the aesthetics inherent in them. While it is imperative that they make certain compromises with modernity such as technology and with the shifting demands of the audience which modernity brings in, he is convinced that we are not at liberty to take the soul out of the art. In his writings and speeches Dr Joshi has not only tried to interpret Yakshagana and Taala-maddale to people but also acted as their conscience-keeper, telling them what is good and what is not in what they see. The job of a good art critic is not just to criticise the art and artists but instil among the audience certain values by which they evaluate art. The enjoyment of art is not by defying or spurning these values. His job is to educate the audience so that the art they support and patronise is not judged wrongly. Dr Joshi has been an indefatigable educator of both the practitioners and patrons of this rich art form in coastal Karnataka.
Dr Joshi has not only been an outstanding critic and spokesman of Yakshagana and Taala-maddale, but also an activist in that field. He is tirelessly into projects of supporting artists in the field whose abilities did not quite yield them financial dividends in life. He has been involved in getting awards and financial support for these artists, to make their retired life less sombre and less of a grim phase of regret. He wants the society which once

applauded these artists to support them now. He has taken lead in many cases. He has also been a popular speaker in any function to felicitate these artists, reminding the audience of their qualities and uniqueness. Very often some of the finest artists in the field may not know their own value and merit or some of them may be too shy and self-effacing. Society, if it is civilised enough, needs to tell them that they do remember them and with gratitude. Dr Joshi has been in the forefront in reminding our society the virtues of gratitude.
The academic world which Dr Joshi inhabited and his relentless pursuit of scholarship also have made him a writer of repute. He has not only written extensively on Yakshagana but also secured a doctorate on it from Mangalore University. He has edited volumes relating to his chosen subject, the most important being "Polali Shastry Smaraka Grantha", a tome of 840 pages, containing rich material to savour and also to sustain research for generations. But his writings transcend the

area of his artistic pursuit. He is a tireless reader and interpreter of Indian philosophy. He has explored and written on many of its facets, about the great sages and mentors of the past. His knowledge of Sanskrit and passion for literature have made these works both interesting and instructive. And his ability to relate these philosophies to the world we live in makes them all the more fascinating. Besides, these interests have nudged him to write poetry and many of his poems have been published and read with interest.
A man of many parts, Dr Joshi has also known the pleasure of being honoured for his accomplishments. Some the major awards that glitter in his cupboard are, Yakshagana Janapada Academy Lifetime Achievement Award, Parthisubba Award, Yakshagana Kalaranga, Udupi Decennial Award, Sheni Gopalakrishna Bhat Award at Sampaje Yakshotsava, Sheni Suhrith Award, and so on. These and many awards redound to his many- sided genius and to the society which has the will and

ability to honour those who deserve the honour.

Perhaps there is one more side to Dr Prabhakara Joshi's personality. His liveliness belies his years. He moves around, visits places and friends and does not allow fatigue to come in the way of his conversations and perorations which are invariably lively. He has his political views, but he does not consider it a sin to dialogue with those who hold different views. He is always willing to see the lighter side of apparently serious things and serious side of what are routinely dismissed as trite and unimportant things. There is in him a joy of life which ensures that he stays young, defying his chronological age. Talking to him also makes people young, for there is never a dull moment with him. That is perhaps what art, learning and affirmation of life can do to a person.
ಡಾ. ಪುರುಷೋತ್ತಮ ಬಿಳಿಮಲೆ ಮುಖ್ಯಸ್ಥರು, ಕನ್ನಡ ವಿಭಾಗ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ನವದೆಹಲಿ
ಡಾ. ಪುರುಷೋತ್ತಮ ಬಿಳಿಮಲೆ
ಮುಖ್ಯಸ್ಥರು, ಕನ್ನಡ ವಿಭಾಗ
ಜವಾಹರಲಾಲ್ ನೆಹರೂ
ವಿಶ್ವವಿದ್ಯಾಲಯ, ನವದೆಹಲಿ

ಕನ್ನಡದ ಬಹುರೂಪೀ ಪ್ರತಿಭೆ ಡಾ. ಎಂ. ಪ್ರಭಾಕರ ಜೋಶಿ


ಕಳೆದ ಸುಮಾರು ನಲವತ್ತು ವರ್ಷಗಳಿಂದ ಡಾ. ಎಂ. ಪ್ರಭಾಕರ ಜೋಶಿ (ಜನನ 1946)ಯವರನ್ನು ನಾನು ಹತ್ತಿರದಿಂದ, ದೂರದಿಂದ ನೋಡುತ್ತಲೇ ಬಂದಿದ್ದೇನೆ. ಅವರ ಚುರುಕಿನ ಅರ್ಥಗಾರಿಕೆ ಮತ್ತು ಆಕರ್ಷಕ ಭಾಷಣಗಳಿಗೆ ಕಿವಿಗೊಟ್ಟಿದ್ದೇನೆ. ಪತ್ರಿಕೆಗಳಲ್ಲಿ ಅವರು ಬರೆಯುವ ಸಂಕ್ಷಿಪ್ತ ಲೇಖನಗಳಲ್ಲಿ ಹುದುಗಿರುವ ಅಪಾರ ಅರ್ಥಗಳನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ಅವರು ಬರೆದ ಹಲವು ಪುಸ್ತಕಗಳನ್ನು ಮತ್ತೆ ಮತ್ತೆ ಪರಾಮರ್ಶಿಸುತ್ತಲೇ ಬಂದಿದ್ದೇನೆ. ನಾವಿಬ್ಬರೂ ಭಿನ್ನ ಭಿನ್ನ ನೆಲೆಗಳಿಂದ ನಮ್ಮಚರಿತ್ರೆ, ವರ್ತಮಾನ, ಸಂಸ್ಕೃತಿ, ಭಾಷೆ, ಕಲೆ ಇತ್ಯಾದಿಗಳನ್ನು ನೋಡುತ್ತಲೇ ಬಂದವರು. ಈ ತಾತ್ವಿಕ ಭಿನ್ನತೆಯುಅವರ ಬಗೆಗಣ ನನ್ನ ಗೌರವವನ್ನು ಸದಾ ಹೆಚ್ಚು ಮಾಡುತ್ತಲೇ ಬಂದಿದೆಯಲ್ಲದೆ, ಒಂದಿನಿತೂ ಕಡಿಮೆ ಮಾಡಿಲ್ಲ. ಅವರು ವಾಲ್ಮೀಕಿ, ಶಂಕರಾಚಾರ, ವರಾಹಮಿಹಿರ, ಕುಮಾರಿಲ, ಮಧ್ವಾಚಾರ ಮೊದಲಾದವರ ಬಗ್ಗೆ ಅಸ್ಥಲಿತವಾಗಿ ಮಾತಾಡುವಾಗ ನಾನು ಮೈನಿಮಿರಿಸಿ ಕೇಳುತ್ತೇನೆ. ಹಾಗೆಯೇ ನಾನು ಕಲ್ಕುಡ, ಕಲ್ಲುರ್ಟಿ, ದಲಿತರು, ಪಂಪ ಮೊದಲಾದವರ ಬಗ್ಗೆ ಹೇಳಿದರೆ ಡಾ. ಜೋಶಿಯವರು ಮನದುಂಬಿ ಆಲಿಸುತ್ತಾರೆ. ಕನ್ನಡದ ಮಹಾಪ್ರತಿಭೆ ಡಾ. ಶಿವರಾಮ ಕಾರಂತರು ತಮ್ಮ 'ಅಳಿದ ಮೇಲೆ' ಕಾದಂಬರಿಯಲ್ಲಿ ಹೇಳಿದ- “ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ ನಾವು ಸಲ್ಲಿಸಬೇಕಾದ ಋಣವೆಂದರೆ ಇದೇ ಖಂಡಿತ, ಅದೇ ಖಂಡಿತ ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ ಅವರ ವಾಣಿಯನ್ನು ನಿರ್ಬಂಧಿಸದಿರುವುದು” ಎಂಬ ಮಾತು ನಮ್ಮಿಬ್ಬರ ಮಟ್ಟಿಗೆ ಸದಾ ನಿಜವಾಗುತ್ತಲೇ ಬಂದಿದೆ.

ಶ್ರೀ ಪ್ರಭಾಕರ ಜೋಶಿಯವರ ಪ್ರತಿಭೆಗೆ ಹಲವು ಮುಖಗಳಿವೆ. ಅವರು ಶೇಣಿ, ಸಾಮಗ, ಪೆರ್ಲ ಪರಂಪರೆಗೆ ಸೇರಿದ ತಾಳಮದ್ದಳೆಯ ಸಮರ್ಥ ಅರ್ಥಧಾರಿ. ತಕ್ಕ ಇದಿರಾಳಿ, ಸರಿಯಾದ ಸಮಯ, ಸಂದರ್ಭ ಮತ್ತು ಪ್ರೇಕ್ಷಕರು ದೊರೆತಾಗ ಜೋಶಿಯವರ ಮಾತುಗಳು ಹೊಸ ಹೊಳಪು ಪಡೆದು, ಗಂಭೀರವಾದ ಕಡಲಿನ ಹಾಗೆ ಮೊರೆಯುವುದನ್ನು ನಾನು ಕಂಡಿದ್ದೇನೆ. ಪುರಾಣದ ಚೌಕಟ್ಟನ್ನು ಬೇಧಿಸದೆ, ಪಾತ್ರಗಳಿಗೆ ನವೀನ ಆಯಾಮ ನೀಡುವಲ್ಲಿ ಜೋಶಿಯವರು ಸಿದ್ಧಹಸ್ತರು. ಇಂಥದ್ದೇ ಕೆಲಸ ಮಾಡಿದ ಗಿರೀಶ ಕಾರ್ನಾಡರು ಇವತ್ತು ಅಂತಾರಾಷ್ಟ್ರೀಯ ಮಟ್ಟದ ಲೇಖಕ, ಆದರೆ ಜೋಶಿಯವರಿಗೆ ಅಂಥ ವಿಸ್ತಾರ ದೊರೆಯಲಿಲ್ಲ. ಅದಕ್ಕೆ ಅವರು ಕಾರಣರಲ್ಲ. ನೈಜ ಮತ್ತು ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಲಾಗದ ನಾವು ಕಾರಣ.
ಒಬ್ಬ ಶ್ರೇಷ್ಠ ಕಲಾವಿದನು ಅತ್ಯುತ್ತಮ ಲೇಖಕನೂ ಆಗಿರುವ ಉದಾಹರಣೆ ಬಹು ವಿರಳ. ಜೋಶಿಯವರು ಕಲಾವಿದನಾಗಿ ಯಕ್ಷಗಾನದ ಒಳ ಹೊರಗನ್ನು ಚೆನ್ನಾಗಿ ಬಲ್ಲವರು. ರಂಗದ ಮೇಲೆ, ಮತ್ತು ರಂಗದ ಹೊರಗೆ ಕಲಾವಿದರೊಡನೆ ಹಾಗೂ ಅಭಿಮಾನಿ ಗಳೊಡನೆ ಸರಸ ಸಂಭಾಷಣೆಯಲ್ಲಿ ತೊಡಗಬಲ್ಲವರು. ಉತ್ತರಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಅವರನ್ನು ಗೊತ್ತಿಲ್ಲದವರಿಲ್ಲ. ಸಣ್ಣ ದೊಡ್ಡ ಹೋಟೆಲುಗಳಲ್ಲಿ ಕೆಲಸ ಮಾಡುವವರೂ ಕೂಡಾ ಜೋಶಿಯವರನ್ನು ಕಂಡಾಗ ಸಂಭ್ರಮಿಸಿ,

ಸ್ವಾಗತಿಸಿ, ತಿಂಡಿ ತಿನ್ನಿಸಿ ಬೀಳ್ಕೊಳ್ಳುವುದುಂಟು.
ಸಾಮಾನ್ಯ ಜನರೊಡನೆ ಇಂಥ ಅಪೂರ್ವ ಸಂಬಂಧ ಸಾಧಿಸಿ ಕೊಂಡ ಡಾ. ಜೋಶಿಯವರೂ ವಿದ್ವತ್ ಲೋಕದಲ್ಲಿಯೂ ಪ್ರಸಿದ್ಧರು. ಅವರು ಬರೆದ ಕೃಷ್ಣ ಸಂಧಾನ, ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ವಾಗರ್ಥ, ಮುಡಿ, ಭಾರತೀಯ ತತ್ವಶಾಸ್ತ್ರ, ತತ್ವಮನನ ಮೊದಲಾದ ಕೃತಿಗಳು ಯಕ್ಷಗಾನ ಅಧ್ಯಯನಗಳಿಗೆ ಪ್ರೌಢತೆಯನ್ನೂ ಗಾಂಭೀರವನ್ನೂ ತಂದುಕೊಟ್ಟಿವೆ.
ಡಾ. ಪ್ರಭಾಕರ ಜೋಶಿಯವರು ಇತ್ತೀಚೆಗೆ 'ಕುಮಾರವ್ಯಾಸ ಭಾರತ ಮತ್ತು ಯಕ್ಷಗಾನ' ಎಂಬ ಒಂದು ಅತ್ಯಂತ ಮಹತ್ವದ ಸುದೀರ್ಘ ಲೇಖನವನ್ನು ಬರೆದಿದ್ದಾರೆ. ಈ ಲೇಖನದಲ್ಲಿ ಅವರು ಮಧ್ಯಕಾಲೀನ ಕನ್ನಡ ಕಾವ್ಯಗಳಾದ ನರಹರಿಯ ತೊರವೆ ರಾಮಾಯಣ, ಕುಮಾರ ವ್ಯಾಸನ ಕರ್ನಾಟಕ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ, ನಿತ್ಯಾತ್ಮ ಶುಕಯೋಗಿಯು ಕನ್ನಡ ಭಾಗವತ ಮೊದಲಾದುವು ಯಕ್ಷಗಾನ ಪ್ರಸಂಗಗಳ ಮೇಲೆ ಬೀರಿದ ಪರಿಣಾಮಗಳನ್ನು ಸಾಧಾರವಾಗಿ ಚರ್ಚಿಸುತ್ತದೆ. ಡಾ. ಜೋಶಿಯವರು ನಡುಗನ್ನಡ ಪಠ್ಯಗಳು ಹಾಗೂ ಯಕ್ಷಗಾನಗಳ ನಡುವಣ ಸಂಬಂಧಗಳ ಕುರಿತು ಈ ಮುಂದಿನಂತೆ ಹೇಳುತ್ತಾರೆ- 'ತಮಗೆ ಲಭ್ಯವಿದ್ದ ಒಂದೋ ಹಲವೋ ಮೂಲದಿಂದ ಕತೆಯನ್ನು ತೆಗೆದುಕೊಂಡು ಆ ಮೂಲದ ಆಶಯದೊಂದಿಗೆ ಪದ್ಯ ರೂಪದಲ್ಲಿ ಕತೆ ಹೇಳುವುದು ಹೆಚ್ಚಿನ ಪ್ರಸಂಗಗಳ ಕ್ರಮವಾಗಿದೆ. ಹಾಗಾಗಿ

ಅಲ್ಲಿ ವೈಶಿಷ್ಟ್ಯವೇನಿದ್ದರೂ ಬಂಧಗಳ ಪದ ಪ್ರಯೋಗಗಳ ಮತ್ತು ರಂಗ ಅನ್ವಯದ ವಿಷಯಗಳಲ್ಲಿ. ಹೀಗಾಗಿ ಪಾರ್ತಿಸುಬ್ಬನ ರಚನೆಗಳಿಂದ ತೊಡಗಿ, ಜತ್ತಿ ಈಶ್ವರ ಭಾಗವತರ ರಚನೆಗಳ ವರೆಗೂ ಹಿಂದಿನ ಕಾವ್ಯವನ್ನೇ ಹೆಚ್ಚು ಕಡಿಮೆ ತದ್ವತ್ತಾಗಿ ಅನುಸರಿಸಿ, ಕತೆಯನ್ನು ಹಾಡುಗಳಾಗಿ ಪ್ರಸಂಗರೂಪದಲ್ಲಿ ಬರೆದುದು ಕಾಣುತ್ತದೆ. ಪಾರ್ತಿಸುಬ್ಬನಿಗೆ ತೊರವೆ ರಾಮಾಯಣ ಮತ್ತು ಕಥಕ್ಕಳಿ ರಾಮಾಯಣಗಳು ಆಕರಗಳು. ರಾಮಾಯಣ ಪ್ರಸಂಗಗಳನ್ನು ಬರೆದ ಹೆಚ್ಚಿನ ಯಕ್ಷಗಾನದ ಕವಿಗಳಿಗಳು ತೊರವೆಯನ್ನು ಅನುಸರಿಸಿದ್ದಾರೆ. ಅದೇ ರೀತಿ ಯಕ್ಷಗಾನ ಮಹಾಭಾರತ ಪ್ರಸಂಗಗಳಲ್ಲಿ ಹಲವಕ್ಕೆ ಕುಮಾರವ್ಯಾಸ ಭಾರತವು ಆಕರ. ಪಾಂಡವಾಶ್ವಮೇಧ ಪ್ರಸಂಗಗಳಿಗೆ ಲಕ್ಷ್ಮೀಶನ ಜೈಮಿನಿ ಭಾರತವು ನೇರ ಆಧಾರ, ಆಕರ. ಇದೇ ಪರಂಪರೆಯಲ್ಲಿರುವ ಕೃಷ್ಣ ಸಂಧಾನವು ಮುಖ್ಯವಾಗಿ ಕುಮಾರವ್ಯಾಸ ಭಾರತದ ಸಂಗ್ರಹಾನುವಾದದಂತಿದೆ'.
ಜೋಶಿಯವರ ಈ ಮಾತುಗಳನ್ನು ಆಧರಿಸಿ ಇಡೀ ಕನ್ನಡ ಸಾಹಿತ್ಯಚರಿತ್ರೆಯನ್ನೇ ಹೊಸದಾಗಿ ಬರೆಯಲು ಸಾಧ್ಯವುಂಟು. ಹಳಗನ್ನಡ (ರನ್ನನ ಗದಾಯುದ್ಧಂ), ನಡುಗನ್ನಡ (ಗದುಗಿನ ಭಾರತ) ಮತ್ತಿತರ ಪಠ್ಯಗಳನ್ನು ಯಕ್ಷಗಾನ ಪ್ರಸಂಗಗಳಾಗಿ ಮಾರ್ಪಡಿಸಿದಾಗ ಕಲಾವಿದರಿಗೆ ಪುರಾಣ ಪಾತ್ರಗಳನ್ನು ರಂಗದ ಮೇಲೆ ಅಭಿನಯಿಸುವ ಅವಕಾಶ ಲಭಿಸಿತು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಕರ್ನಾಟ ಭಾರತ ಕಥಾಮಂಜರಿ, ತೊರವೆ ರಾಮಾಯಣ ಮೊದಲಾದ ಕಾವ್ಯಗಳ ಪಾತ್ರಗಳು

ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ರಂಗಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು. ಜಾತಿ ಮತಗಳ ಬೇಧವಿಲ್ಲದೆ ಅವುಗಳನ್ನು ಲಕ್ಷಾಂತರ ಜನ ನೋಡುವಂತಾಯಿತು. ಯಕ್ಷಗಾನದ ಇನ್ನೊಂದು ಪ್ರಕಾರವಾದ ತಾಳಮದ್ದಳೆಯಲ್ಲಿ ಕಲಾವಿದರು ಭಾಗವತರ ಹಾಡಿಗೆ ಕುಳಿತು ಅರ್ಥ ಹೇಳುತ್ತಾರೆ. ಯಕ್ಷಗಾನ ಕಲಾವಿದರನೇಕರು ತೊರವೆ ರಾಮಾಯಣದ ಪದ್ಯಗಳನ್ನೋ, ಕುಮಾರವ್ಯಾಸ ಭಾರತದ ಪದ್ಯಗಳನ್ನೋ ಎಲ್ಲೆಂದರಲ್ಲಿ ಗುನುಗುನುಸಿಕೊಂಡು ಓಡಾಡುತ್ತಿರುವುದನ್ನು ಯಾರಾದರೂ ಗಮನಿಸಬಹುದು. ಯಕ್ಷಗಾನ ಪ್ರಸಂಗಗಳ ಮೂಲಕ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳು ಸಾಮಾನ್ಯ ಜನರಿಗೆ ತಲುಪಿದ ರೀತಿ ಮಾತ್ರ ಅಸಾಮಾನ್ಯವಾದುದು. ಜೋಶಿಯವರು ಹಾಕಿಕೊಟ್ಟ ಹಾದಿಯಲ್ಲಿ ಹೊರಟು ಯಕ್ಷಗಾನ ಪ್ರಸಂಗಗಳಲ್ಲಿ ಮರು ಸೃಷ್ಟಿಗೊಂಡ ಕನ್ನಡ ಕಾವ್ಯಗಳ ಬಗೆಗೆ ಇನ್ನಷ್ಟು ಸೂಕ್ಷ್ಮವಾದ ಅಧ್ಯಯನ ನಡೆಯಬೇಕಾಗಿದೆ.
ಹೀಗೆ ಹಿರಿಯರಾದ ಡಾ. ಪ್ರಭಾಕರ ಜೋಶಿಯವರು ಕನ್ನಡ ಸಂಸ್ಕೃತಿಯ ಬಹರೂಪೀ ನೆಲೆಗಳನ್ನು ಗುರುತಿಸಿದ ದೊಡ್ಡ ವಿದ್ವಾಂಸ, ಅವರಿಗೆ ನಾವೆಲ್ಲಾ ಸದಾ ಋಣಿಗಳಾಗಿರುತ್ತವೆ. ಅವರ ಕಲೆಗಾರಿಕೆ, ವಿದ್ವತ್ತು, ಸ್ನೇಹಶೀಲತೆ ನಮಗೊಂದು ಆದರ್ಶ.

ಯಕ್ಷ ಪ್ರಭಾಕರ / 21
ಡಾ. ಕೆ.ಎಂ. ರಾಘವ ನಂಬಿಯಾರ್ ಪತ್ರಕರ್ತ, ಸಂಶೋಧಕ, ಕಲಾಸಂಘಟಕ 'ಪಂಚಮೂಲ', ಇಂದ್ರಾಳಿ, ಉಡುಪಿ – 576 102
ಡಾ. ಕೆ.ಎಂ. ರಾಘವ ನಂಬಿಯಾರ್
ಪತ್ರಕರ್ತ, ಸಂಶೋಧಕ,
ಕಲಾಸಂಘಟಕ
'ಪಂಚಮೂಲ', ಇಂದ್ರಾಳಿ,
ಉಡುಪಿ – 576 102

ತಿಳಿವು - ಸಾಧನೆಗೆ ಅರ್ಹ ಮನ್ನಣೆ!


ಒಂದು ಹೊಳೆಯಿಂದ ಪಶ್ಚಿಮ ಘಟ್ಟದ ಗುಡ್ಡಗಾಡಿನಿಂದ ಪ್ರತ್ಯೇಕಿತವಾಗಿರುವ, ಕಾರ್ಕಳ ತಾಲೂಕಿನ ಪೂರ್ವ ಭಾಗದ ಕೊನೆಯ ಗ್ರಾಮಗಳಲ್ಲಿ ಒಂದಾಗಿರುವ ಮಾಳ ಎಂಬ ದುರ್ಗಮ ಸ್ಥಳದಲ್ಲಿ ಜನಿಸಿ (ಜ. 1946) ಎಳವೆಯಲ್ಲಿ ದುಷ್ಕರವಾದ ಪ್ರಯಾಣದ ಬನ್ನವನ್ನುಣ್ಣುತ್ತ, ಕರಾವಳಿ ಜಿಲ್ಲೆಗಳ ಎಲ್ಲೆಡೆ ಪಯಣಿಸಿ, ಯಕ್ಷಗಾನ ತಾಳಮದ್ದಳೆ - ಆಟಗಳ ಪ್ರೇಕ್ಷಕನಾಗಿ, ತಾಲೂಕು ಕೇಂದ್ರವಾದ ಕಾರ್ಕಳದಲ್ಲಿ ತಂಗಿಕೊಂಡು ಪಡೆದ ಹೈಸ್ಕೂಲು, ಕಾಲೇಜು ವಿದ್ಯಾಭ್ಯಾಸವನ್ನು ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಗೆ ತಲಪಿಸಿ, ಹಿಂದಿಯಲ್ಲಿ 'ಸಾಹಿತ್ಯರತ್ನ' ಪದವಿ ಪಡೆದು ಕಾಲೇಜಿನ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕೆಲಸಮಾಡಿದ ಡಾ. ಮಾಳ ಪ್ರಭಾಕರ ಜೋಶಿ ಅವರು ಬಾಲ್ಯದಲ್ಲಿ ಹಿಡಿದ ಯಕ್ಷಗಾನ ಅರ್ಥಗಾರಿಕೆಯ ಸಾಧನೆಯನ್ನು ಯಾವ ಸಂದರ್ಭದಲ್ಲೂ ಬಿಟ್ಟುಕೊಡದೆ, ಇವತ್ತಿನ ವರೆಗೂ ನಡೆಸಿಕೊಂಡು ಬಂದು, ಅಗ್ರಪಂಕ್ತಿಯ ಅರ್ಥಧಾರಿ (ಅವರ ಪರಿಭಾಷೆ ಅರ್ಥದಾರಿ)ಗಳಲ್ಲಿ ಅಗ್ರಿಮನಾಗಿ ಇಂದು ನೆಲೆಸಿರುವುದು, ಬಾಲ್ಯದಲ್ಲಿ ತಾಳಮದ್ದಳೆ ವೇದಿಕೆಯನ್ನು ಅಷ್ಟೇ ಛಲ ಸಾಹಸಗಳಿಂದ ಅವರೊಂದಿಗೆ ಹಂಚಿಕೊಂಡ ನನಗೆ ಈಗ ಹೆಮ್ಮೆಯ ಸ್ಮೃತಿಯಾಗಿದೆ.
ಮನೆಮಾತು ಚಿತ್ಪಾವನಿ(ಮರಾಠಿಯ ಒಂದು ಶೈಲಿಯಾದರೂ ಆ ಸಮುದಾಯದ ಇತರ ಅನೇಕ ಮೇಧಾವಿಗಳನ್ನೂ ಬಿಡದ ಆ ಭಾಷಾನಾದಗತಿಗೆ ಭಿನ್ನವಾಗಿ ಕನ್ನಡಿಗ, ತುಳುವ ಜನರಂತೆ ಅಚ್ಚಕನ್ನಡ ನುಡಿಯುವ ಅಚ್ಚರಿಯನ್ನು ಜೋಶಿ ಅವರಂತೆ ಕೆಲವರಲ್ಲಿ ಮಾತ್ರ ಕಾಣಬಲ್ಲೆವು.

ಪೊಲ್ಯ ದೇಜಪ್ಪ ಶೆಟ್ಟರು, ಮಲ್ಪೆ ಶಂಕರನಾರಾಯಣ ಸಾಮಗರು, ಶೇಣಿ ಗೋಪಾಲಕೃಷ್ಣ ಭಟ್ಟರು,

ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್ಟರು, ಮಲ್ಪೆ ರಾಮದಾಸ ಸಾಮಗರು ಇವರ ಅರ್ಥಗಾರಿಕೆಯ ಸೆಳೆತಕ್ಕೊಳಗಾಗಿ, ಅವರಾರನ್ನೂ ನೇರವಾಗಿ ಅನುಕರಿಸದೆ, ಸ್ವಚ್ಛಕನ್ನಡ ಮಾತುಗಾರಿಕೆಯನ್ನು ರಂಗದಲ್ಲಿ ರೂಢಿಸಿದ ಜೋಶಿ ಅವರು ಸುಪ್ರೀಂ ಕೋರ್ಟಿನ ಲಾಯರ್ ಆಗಿಯೋ, ಕೇಂದ್ರ ಸರಕಾರದ ಅರ್ಥಸಚಿವರಾಗಿಯೊ ಮಾರ್ಪಡದೆ ಉಳಿದುದು ಯಕ್ಷಗಾನ ತಾಳಮದ್ದಳೆ ರಂಗವನ್ನು ನೆಚ್ಚಿದವರ ಭಾಗ್ಯ ಎನ್ನಬೇಕು.
ಜೋಶಿ ಅವರ ಸಂಪರ್ಕವಲಯ, ವಿಷಯಗಳ ಅವಗಾಹನವ್ಯಾಪ್ತಿ ಎಷ್ಟು ವಿಶಾಲ; ಪ್ರತಿಕರಿಸುವ ನೆಲೆಯ ತಲ ಎಷ್ಟು ಎತ್ತರದ್ದು ಸರಸ್ವತೀಪುತ್ರ ನಾದುದರಿಂದಲೆ ಅವರ ಭಾಷಣ ಶ್ರೇಷ್ಠವೋ, ಅರ್ಥಗಾರಿಕೆ ಶ್ರೇಷ್ಠವೋ ಎಂಬ ಕುರಿತ ಚರ್ಚೆಗೆ ನಿಲುಗಡೆ ಇಲ್ಲವಾಗುವುದು. ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಭಾರತೀಯ ದರ್ಶನಶಾಸ್ತ್ರ, ಕ್ರಿಕೆಟ್ ಆಟಗಾರಿಕೆ ಪರಿಣತಿಗಳೊಂದಿಗೆ ಒಬ್ಬ ಹರಿತ ಬರವಣಿಗೆಯ ಕಾದಂಬರಿಕಾರನಲ್ಲಿರ ಬೇಕಾದ ವಸ್ತುವೀಕ್ಷಣೆ, ಪೃಥಕ್ಕರಣ ಮತ್ತು ಔಚಿತ್ಯಪ್ರಜ್ಞೆ ಇವುಗಳ ನೆಲೆಯಿಂದ ವಸ್ತುಗಳನ್ನು ಪರಿಶೀಲಿಸಿ ತನ್ನ ನಿಲುಮೆ ಹೇಳಬಲ್ಲ ಜೋಶಿ ಅವರದು ಪ್ರಜಾತಂತ್ರದ ರಾಜಕಾರಣದಲ್ಲಿ ಅತ್ಯಂತ ಸ್ಟಹಣೀಯ ವ್ಯಕ್ತಿತ್ವ, ಆದರೆ ಅವರೆಲ್ಲಾದರೂ ರಾಜಕಾರಣಕ್ಕೆ ಕಾಲಿಟ್ಟರೆ ಅಲ್ಲಿ ತಮ್ಮ ಪಾಡೇನಾದೀತೆಂಬ ಭಯದಲ್ಲೇ ಬಹುಶಃ ಬಲಪಂಥೀಯ ರಾಜಕಾರಣಿಗಳು ಇವರನ್ನು ಯಕ್ಷಗಾನದ ಮನ್ನಣೆಯ ಮಣೆಯಲ್ಲಿ ಕೂರಿಸಿಬಿಟ್ಟಿರಬಹುದು. ಬೌದ್ಧಿಕದಲ್ಲಿ ಇವರ ಎತ್ತರ ಸಿಗದ ಹಲವರು ಇವತ್ತು ಎಂಪಿಗಳಾಗಿದ್ದಾರೆ. ಅರ್ಥಗಾರಿಕೆಯಲ್ಲಿ ಕಲಾತ್ಮಕವಾಗಿ ಆಧುನಿಕ ಕನ್ನಡದ ಸ್ವಚ್ಛ ಬಳಕೆ ಮಾಡುವವರಿಬ್ಬರು. ಒಬ್ಬರು ದಿವಂಗತ ಪಂಡಿತ ಪೆರ್ಲ ಕೃಷ್ಣ ಭಟ್ಟರು. ಇನ್ನೊಬ್ಬರು ಪ್ರಭಾಕರ ಜೋಶಿ, ವಾಗಿತೆ ಮತ್ತು ಕಲಾತತ್ತ್ವದ ವಿಷಯವಾಗಿ ಬಹಳಷ್ಟು ತಾದಾತ್ಮವನ್ನು ಇವರೊಳಗೆ ಕಾಣಬಹುದಿತ್ತು. ಅರ್ಥಗಾರಿಕೆ ಯಲ್ಲಿ ನವುರಾದ ತಿಳಿಹಾಸ್ಯ ಇಬ್ಬರಿಗೂ ಕರಗತ, ಅರ್ಥಶಾಸ್ತ್ರ, ದರ್ಶನಶಾಸ್ತ್ರಗಳ ಬೆಂಬಲದ ಬೆಲೆ ಜೋಶಿಯವರ ಅರ್ಥಕ್ಕಿದೆ. ತಾನು ಆರಾಧಿಸಿದ ಈ ರಂಗದ ಪ್ರಚಂಡರೊಂದಿಗೆಲ್ಲ ಇದಿರು ಅರ್ಥಹೇಳಿ ಕಾಣಸಿಕೊಂಡುದು ಜೋಶಿ ಹೆಗ್ಗಳಿಕೆ.
1970ರ ದಶಕದಲ್ಲಿ ಆರಂಭವಾದ ಆಧುನಿಕ ರೀತಿಯ ಕಲಾಕಾರರ ಅಭಿನಂದನ ಪರಂಪರೆಗೆ ಅಸ್ತಿವಾರ ಹಾಕಿದ ಮಂಗಳೂರಿನ ಸಕ್ರಿಯರಲ್ಲಿ ಜೋಶಿ ಅವರೂ ಒಬ್ಬರೆನ್ನುವುದು ಇತಿಹಾಸ. ಈ ಸಂದರ್ಭಗಳಲ್ಲೆಲ್ಲ ಕಲಾವಿದರ ಪತ್ರಿಕಾ ಪರಿಚಯಲೇಖನ, ಅಭಿನಂದನಪತ್ರ ಬರವಣಿಗೆ, ಅಭಿನಂದನಭಾಷಣ, ಕಾರ್ಯಕ್ರಮದ ರೂಪಣ, ಆಟ, ಕೂಟಗಳ ಏರ್ಪಾಟು ಇತ್ಯಾದಿ ಎಲ್ಲದರಲ್ಲೂ ಜೋಶಿ ಅವರದು ಅವಿಸ್ಮರಣೀಯ ಕಾಯಕ. ಇದರಲ್ಲೆಲ್ಲ ಅವರ ನೆರವು ಬೇಡದ ಸಂಘಟಕರೆ ಇಲ್ಲವೆಂದರೆ ತಪ್ಪಾಗದು. ಗ್ರಂಥಸಂಪಾದನ, ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ನಾಗುವುದು, ಕಲಾತತ್ತ್ವನಿರೂಪಣೆ ಇವುಗಳಲ್ಲೆಲ್ಲ ಮಹಾನ್ ವಾಗ್ನಿ ಪ್ರೊ. ಕು.ಶಿ. ಹರಿದಾಸ ಭಟ್ಟರಂಥವರಿಂದಲೂ ಪ್ರಶಂಸೆ ಪಡೆದವರು.
ಯಕ್ಷಗಾನ ಅರ್ಥಗಾರಿಕೆಯಲ್ಲಿ ಶ್ರೇಷ್ಠತೆ ಹೊಂದಿದ್ದದು ಮಾತ್ರವಲ್ಲ

'ಪ್ರಸಂಗ ಪಠ್ಯ ಮತ್ತು ಪ್ರದರ್ಶನ' ಎಂಬ ವಿಷಯವಾಗಿ ನಡೆಸಿದ ಸಂಶೋಧನೆಯಿಂದ ಈ ರಂಗದ ತಿಳಿವಳಿಕೆಯಲ್ಲಿ ತನ್ನ ಎತ್ತರವನ್ನು ವಿಶ್ವವಿದ್ಯಾಲಯಗಳ ವಿದ್ವಾಂಸರಿಗೆ ಶ್ರುತಪಡಿಸಿದ್ದಾರೆ. ಅವರನ್ನು 'ಡಾಕ್ಟರ್' ಎಂದು ಸಂಬೋಧಿಸುವದು ಇದಕ್ಕೇ.
'ಪದದ ಅರ್ಥ ಹೇಳುವದೆಂದರೆ ಪದವನ್ನು ಅರ್ಥ ಮಾಡಿಕೊಳ್ಳು ವುದು' ಎಂಬ ಅಡ್ಡೆ ವಾಸು ಶೆಟ್ಟರ ಮಾತಿಗೆ ಜೋಶಿ ಅವರ ನಿರ್ವಹಣೆ ಒಂದು ನಿದರ್ಶನವಾಗಬಲ್ಲುದು. ಪ್ರಸಂಗದ ಆಮೂಲಾಗ್ರ ಪರಿಶೀಲನ, ಮನನ, ಸಂದರ್ಭ ಬೇಡುವ ಉಚಿತ, ಪೋಷಕ ಅನ್ಯ ವಸ್ತುಗಳ ಪ್ರಯೋಗ, ಅರ್ಥಗಾರಿಕೆ ಎಂಬುದು ಪ್ರತಿಕಾವ್ಯದ ಸೃಷ್ಟಿಯೇ ಎಂಬುದಕ್ಕೆಲ್ಲ ಪ್ರಾತ್ಯಕ್ಷಿಕೆಯಾಗಬಲ್ಲುದು ಅವರ ಅರ್ಥ.
ಈ ಬಾರಿ (ಜೂನ್ 2, 2019) ಯಕ್ಷಧ್ರುವ ಪಟ್ಲ ಫೌಂಡೇಶನ್ ತನ್ನ ವಾರ್ಷಿಕ ಪರಮೋನ್ನತ ಪ್ರಶಸ್ತಿಯನ್ನು ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ನೀಡುತ್ತಿದೆ ಎಂದರೆ ಗುಣವನ್ನು ಕಾಣುವ ಕಣ್ಣುಗಳು ಪರಿಸರದಲ್ಲಿ ಇವೆ ಎಂದು ಅರ್ಥ. ಸಂಮಾನಿತರಾಗುತ್ತಿರುವ ಡಾ. ಜೋಶಿ ಮತ್ತು ಸಂಮಾನಿಸುತ್ತಿರುವ ಭಾಗವತ ಪಟ್ಲ ಸತೀಶ ಶೆಟ್ಟಿ ಇಬ್ಬರಿಗೂ

ಅಭಿನಂದನೆಗಳು.
ಲಕ್ಷ್ಮೀಶ ತೋಳ್ವಾಡಿ ಆಧ್ಯಾತ್ಮಿಕ ಚಿಂತಕರು
ಲಕ್ಷ್ಮೀಶ ತೋಳ್ವಾಡಿ
ಆಧ್ಯಾತ್ಮಿಕ ಚಿಂತಕರು

ಜೋಶಿ-ಮಿಶ್ರಮಂಡನೆ!


ಕಲೆಯನ್ನು ಪ್ರೀತಿಸುವುದೆಂದರೇನು ಎಂದು ಯಾರಾದರೂ ಕೇಳಿದರೆ, ನೀವು ಮಿತ್ರ ಪ್ರಭಾಕರ ಜೋಶಿಯವರನ್ನು ನೋಡಿ, ಅವರಲ್ಲೊಂದು ಮಾದರಿ ಸಿಗುತ್ತದೆ ಎಂದು ಉತ್ತರಿಸುವೆ. ಯಕ್ಷಗಾನವನ್ನು ಈ ಮಟ್ಟಿಗೆ ತಮ್ಮ ವ್ಯಕ್ತಿತ್ವದ ಭಾಗವಾಗಿ ಮಾಡಿಕೊಂಡವರುಂಟೇ ಎಂದು ಆಶ್ಚರ್ಯವಾಗುತ್ತದೆ. ಈ ತೆರದ ಪ್ರೀತಿ-ಆಸಕ್ತಿ-ತೊಡಗುವಿಕೆಗಳ ಕಾರಣದಿಂದಲೇ ತಮ್ಮ ಒಳಗಿನಶಕ್ತಿಗಳು ಪ್ರಕಟಗೊಳ್ಳುವುದಕ್ಕೆ ಜೋಶಿಯವರಿಗೆ ಯಕ್ಷಗಾನವೂ ಒಂದು ಪ್ರತೀಕದಂತೆ ಒದಗಿಬಂದಿದೆ!

ಯಕ್ಷಗಾನ ಸಂಘಗಳ ಕೂಟಗಳಲ್ಲಿ ಅರ್ಥಹೇಳುತ್ತ ಬೆಳೆದವರು ಅವರು. ಸಂಘಟನೆಯ ಕಷ್ಟ-ಸುಖಗಳನ್ನು ಸ್ವಾನುಭವದಲ್ಲಿ ಬಲ್ಲವರು. ಯಾವ ಕೆಲಸವನ್ನೂ ಚಿಕ್ಕದೆಂದುಕೊಂಡವರೇ ಅಲ್ಲ. ಕಲಾವಿದರ ಗುಣ-ವಿಗುಣ, ವಿಕ್ಷಿಪ್ತತೆ, ಪ್ರತಿಭಾವಿಲಾಸ, ಶ್ರೇಷ್ಠತೆ ಮತ್ತು ಅದು ಪ್ರಕಟಗೊಳ್ಳುವ ವಿಶಿಷ್ಟ ಪರಿಸ್ಥಿತಿ-ಪರಿಸರಗಳ ಆಯಕಟ್ಟಿನ ಗುರುತು-ಇವೆಲ್ಲವನ್ನೂ ವೇದಿಕೆಯ ಮೇಲಿನ ಮತ್ತು ಹೊರಗಿನ ನಿಕಟ ಒಡನಾಟದಿಂದಲೇ ಬಲ್ಲವರು, ಈ ಎಲ್ಲವನ್ನೂ ಕಲೆಯ ಆವರಣವೊಂದರ ಅಂಗವಾಗಿಯೇ ನೋಡಿದವರು. ಈ ನೋಟ ವಿಶೇಷ. ಹಿಮ್ಮೇಳದ ಕಲಾಪಗಳನ್ನು ತಾಂತ್ರಿಕವಾಗಿ ಬಲ್ಲವರು. ಪ್ರಸಂಗ ಪದ್ಯಗಳ “ನಡೆ”, ಕಲಾವಿದರ “ನಡೆ”, ಮೂಲಆಕರಗಳ “ಆಶಯಗಳನ್ನು ಅಭಿನಿವೇಶಗಳಿಗೆ ಅಷ್ಟಾಗಿ ಒಳಗಾಗದೆ ಉದಾರವಾಗಿ ಸಮನ್ವಯ ಮಾಡಬಲ್ಲವರು. ತಾಳಮದ್ದಳೆಯ ಕ್ಷೇತ್ರದಲ್ಲಿ ಸ್ವಯಂ ಮುಂಚೂಣಿಯ ಕಲಾವಿದರು. ಅದಕ್ಕಿಂತಲೂ ತುಸು ಹೆಚ್ಚೇ ಎನ್ನುವಂತೆ ಈ ಎಲ್ಲವನ್ನೂ ವಿಮರ್ಶಾತ್ಮಕವಾಗಿ ನೋಡಬಲ್ಲವರು. ವಿಮರ್ಶೆಯ ಸೂತ್ರಗಳನ್ನು

ಕಲೆಯ ಒಟ್ಟು ವ್ಯವಹಾರದ ಒಳಗಿನಿಂದಲೇ ಎತ್ತಿಕೊಂಡವರು. ಈ ನಿಟ್ಟಿನಲ್ಲಿ ಹದವೂ, ಹೃದ್ಯವೂ ಆದ ವಿಮರ್ಶಾತ್ಮಕ ಗ್ರಂಥಗಳನ್ನು ಪ್ರಕಟಿಸಿದವರು. “ಸಾಹಿತ್ಯ” ಮತ್ತು “ದರ್ಶನಗಳ ಓದಿನಿಂದ ಪಡೆದುದನ್ನು ಉಚಿತವಾಗಿ ತಮ್ಮ ಪಾತ್ರಗಳಲ್ಲಿ ಬಳಸಬಲ್ಲವರು. ಬಹುಶ್ರುತರು. ಬಹುಶ್ರುತರಾಗಿಯೂ ಅಥವಾ ಆದುದರಿಂದಲೇ ತಮ್ಮ ಕಲಾವ್ಯವಹಾರದಲ್ಲಿ ಔಚಿತ್ಯಪ್ರಜ್ಞೆಗೆ ಗಾಸಿಯಾಗದಂತೆ ನೋಡಿಕೊಳ್ಳುವ ವಿವೇಕ ಇರುವವರು. ಆದುದರಿಂದಲೇ ಅವರ ವಿಮರ್ಶೆಯ ಮಾತುಗಳೂ ಒಂದು ಕಲಾವ್ಯವಹಾರದಂತೆಯೇ ಭಾಸವಾಗುವುದು.
ಕಲಾವಿದರನ್ನು ನಿಜವಾಗಿ ಪ್ರೀತಿಸುವವರು. ಅವರ ಕಲೆಯನ್ನು ಗುರುತಿಸಬಲ್ಲವರು. ಅದನ್ನು ಲೋಕಕ್ಕೆ ತಿಳಿಸಬಲ್ಲವರು. ಕಲಾವಿದರಿಗೆ ಅಭಿನಂದನೆಯ ಮಾತುಗಳನ್ನಾಡುವುದು ಒಂದು ಕಲಾ-ಕರ್ತವ್ಯವೆಂಬಂತೆ ಅದನ್ನು ಮಾಡಿದವರು. ತಮ್ಮ ಡಾಕ್ಟರೆಟ್ ಪ್ರಬಂಧಕ್ಕೆ ಯಕ್ಷಗಾನ ಪ್ರಸಂಗವನ್ನೇ ಆಯ್ದುಕೊಂಡವರು-ಇದು ಒಟ್ಟಂದದಲ್ಲಿ ಕರಾವಳಿಯ ಯಕ್ಷಗಾನವು ಕಡೆದ ಪ್ರಭಾಕರ ಜೋಶಿ ಎಂಬ ವ್ಯಕ್ತಿ ವಿಗ್ರಹ!
ಜೋಶಿಯವರು 'ಶೇಣಿ'ಯವರ ಆರಾಧಕರು. ಶೇಣಿಯವರಿಗೆ ಜೋಶಿ ಮಾಡಿದ ಸೇವೆ ಬಲು ದೊಡ್ಡದು. ಅಪೂರ್ವವಾದದ್ದು. ಬೇಂದ್ರೆಯವರಿಗೆ ಕುರ್ತಕೋಟಿಯವರಂತೆ, ಗೋಪಾಲಕೃಷ್ಣ ಅಡಿಗರಿಗೆ ಅನಂತಮೂರ್ತಿಯವರಂತೆ, ಶಿವರಾಮ ಕಾರಂತರಿಗೆ ಕು.ಶಿ.ಯವರಂತೆ- ಶೇಣಿಯವರಿಗೆ ಜೋಶಿ ಮಾಡಿದ ಸೇವೆ ಯಕ್ಷಗಾನ ಇತಿಹಾಸದ ಒಂದು

ಆರ್ದವಾದ ಭಾಗ. ಆದರೂ ವಿರಸದ ಕ್ಷಣಗಳು ಬಂದಿವೆ. ಸ್ವಾಭಿಮಾನಕ್ಕೆ ಗಾಸಿಯಾದಾಗ ಜೋಶಿ ಧೀರವಾಗಿ ವರ್ತಿಸಿದರು. ಈ ಧೈರ್ಯವನ್ನು ತೋರಿಸಿದ ಒಬ್ಬನೇ ಕಲಾವಿದ-ನನಗೆ ತಿಳಿದಿರುವಂತೆ-ಜೋಶಿಯವರು. ಆದರೂ ವೈಯಕ್ತಿಕವಾಗಿ ಶೇಣಿಯವರೊಡನೆ ಒಡನಾಟವನ್ನು ಜೋಶಿ ಬಿಡಲಿಲ್ಲ! ಕಲೆಯ ಮೇಲಿನ ಜೋಶಿಯವರ ಪ್ರೀತಿ ಅ-ವೈಯಕ್ತಿಕವಾದ್ದು. ಇದು ಅವರ ವಿಮರ್ಶೆಯ ವಿವೇಕದ ಉನ್ನತ ಫಲ. ಅನಂತಮೂರ್ತಿ- ಅಡಿಗರ ನಡುವೆಯೂ ಭಿನ್ನಾಭಿಪ್ರಾಯಗಳು ಬಂದಿದ್ದವು. ನನಗೆ ತಿಳಿದಿರುವಂತೆ, ಆಗಲೂ, ಶಿಷ್ಯನ ನಡೆನುಡಿಗಳೇ ಗುರುವಿಗಂತಲೂ ಉನ್ನತವಾಗಿದ್ದವು. ಕಾರಂತ-ಕು.ಶಿ.ನಡುವೆ ಹೇಳುವುದೇ ಬೇಡ. ತಾವು ಗಾಸಿಗೊಂಡರೂ, ಮೌನವಾಗಿದ್ದೇ, ಶಿಷ್ಯನು ಗುರುವನ್ನು ಒಂದು ಹಂತಕ್ಕಿಂತ ಕೆಳಗಿಳಿಯದಂತೆ ನೋಡಿಕೊಂಡರು. ಜೋಶಿಯವರೂ ಶೇಣಿಯವರ ಕೀರ್ತಿಧ್ವಜ ಕೆಳಗಿಳಿಯದಂತೆ ನೋಡಿಕೊಂಡರು. ಮೇಲ್ನೋಟಕ್ಕೆ ವೈಚಾರಿಕತೆ ವಿಮರ್ಶೆಗಳೇ ಪ್ರಧಾನವಾಗಿ ಕಾಣುವ ಅವರ ವ್ಯಕ್ತಿತ್ವದಲ್ಲಿ ಪರಮ ಭಾವುಕತೆ ಇದೆ. ಇದು ಜೋಶಿ!
ಇನ್ನೊಂದು ಅಂಶವನ್ನು ಕಾಣಿಸಿ ಈ ಲೇಖನ ಮುಗಿಸುವೆ. ಹೆಸರಾಂತ ವಿಮರ್ಶಕರಾದ ಕುರ್ತಕೋಟಿಯವರು, ತಮ್ಮೊಂದು ಲೇಖನದಲ್ಲಿ ಧಾರವಾಡದಲ್ಲಿ ತಾವು ಕೇಳಿದ ತಾಳಮದ್ದಳೆಯ ಕುರಿತು ಬರೆದರು. ಕುಮಾರವ್ಯಾಸನ ಭಕ್ತರಾದ ಕುರ್ತಕೋಟಿ, ಸಂಧಾನದ ಕೌರವನಾಗಿ ಶೇಣಿಯವರ ಅಪೂರ್ವವಾದ ವಾಗ್-ವಿನ್ಯಾಸವನ್ನು ಕೇಳಿ

ತಾವು ಬೆರಗಾಗಿಹೋದುದನ್ನು ದಾಖಲಿಸಿದರು! ಸಾಹಿತ್ಯ ವಿಮರ್ಶಕ ರೊಬ್ಬರು ಮೌಖಿಕ ಪರಂಪರೆಯ ಕಲಾವಿದರೊಬ್ಬರ ಪ್ರತಿಭೆಯನ್ನು ಕೇಳಿ ವಿಸ್ಮಯಗೊಂಡ ದಾಖಲೆ ಅದು. ಈಚೆಗೆ, ಶಂಕರಾಚಾರ್ಯರ ಕುರಿತು ತಾವು ಬರೆದ ಪುಸ್ತಕದಲ್ಲಿ, ಬಲಿಯೊಡನೆ ವಾದಿಸುವ ಶುಕ್ರಾಚಾರ್ಯನ ಪಾತ್ರದಲ್ಲಿ, ತಾಳಮದ್ದಲೆಯೊಂದಲ್ಲಿ, ಪ್ರಭಾಕರ ಜೋಶಿಯವರು ಆಡಿದ ಮಾತುಗಳನ್ನು ತಾಳಮದ್ದಳೆಯ ಮಾತುಗಾರಿಕೆಯ ಚೌಕಟ್ಟನ್ನೇ ವಿಸ್ತರಿಸಬಲ್ಲ ಮಾತುಗಳನ್ನು ದಾಖಲಿಸಿ- ಇದನ್ನು ಯಾವತ್ತೂ ಮರೆಯಲಾರೆನೆಂದಿದ್ದಾರೆ!-ಶ್ರೀ. ಕೆ.ವಿ. ಅಕ್ಷರ ಅವರು.
ಗುರುವಿನ ಮಾತುಗಳಂತೇ ಶಿಷ್ಯನ ಮಾತುಗಳೂ ಸಾಹಿತ್ಯ ವಿಮರ್ಶಕರಿಗೆ ನೆನಪಾಗತೊಡಗಿವೆ. ಇದು ತುಂಬ ಸಂತೋಷದ ಸಂಗತಿ. ಶಂಕರ ವಿಜಯದ ಶಂಕರಾಚಾರ್ಯರ ಪಾತ್ರದಲ್ಲಿ ಪ್ರಸಿದ್ಧರಾದ ಶೇಣಿಯವರು ಮಂಡನಮಿಶ್ರನ ಪಾತ್ರದಲ್ಲಿ ಜೋಶಿಯವರನ್ನೇ ಬಯಸುತ್ತಿದ್ದರಂತೆ. ಇನ್ನೇನು ಬೇಕು? ಜೋಶಿಯೇ ಸೂಕ್ತ - ಅವನು ದಾರ್ಶನಿಕ ಚರ್ಚೆಯ ವಿಷಯಗಳನ್ನು ಎತ್ತಿ ಹಾಕುತ್ತಾನೆ.(ಅವಂ ವಿಷಯಗಳ ಚರ್ಚೆಗೆ ಇಡುತ್ತಂ...)

ಮಿತ್ರ ಜೋಶಿಯವರ ಈ ಮಿಶ್ರಮಂಡನೆಯ ವೈಖರಿಗಳನ್ನು ನೆನಪುಮಾಡಿಕೊಳ್ಳುವುದು ಸಂತಸದ ಸಂಗತಿ, ಅಭಿನಂದನೆಗಳು,
ಜಬ್ಬಾರ್ ಸಮೋ ಸಂಪಾಜೆ ಯಕ್ಷಗಾನ ಅರ್ಥಧಾರಿ
ಜಬ್ಬಾರ್ ಸಮೋ ಸಂಪಾಜೆ
ಯಕ್ಷಗಾನ ಅರ್ಥಧಾರಿ

ಬದುಕೆಂಬ ರಂಗಭೂಮಿಯ 'ಬಹು ಕುತೂಹಲಿ'

ಸಾಂಸ್ಕೃತಿಕ ವಲಯದ ಬಹುಮುಖೀ ಚಿಂತಕ ಪ್ರತಿಭೆ; ಅಧ್ಯಯನ-ಅಧ್ಯಾಪನ-ಒರಹ-ಬರೆಹಗಳ ಸದೃಢ ಸಹಚರ್ಯೆಯಿಂದ ಮುಪ್ಪುರಿಗೊಂಡ ಅಪರೂಪದ ವ್ಯಕ್ತಿತ್ವ: ಬಹು ವಿಷಯಗಳ ತಿಳುವಳಿಕೆಯಿಂದ ಪರಿಪಾಕಿತಗೊಂಡು ವಿದ್ವಾಂಸ ವಲಯದಲ್ಲಿ ಬಹುಮಾನಿತ ಮಾಹಿತಿ-ಮೂಲ; ಹೀರಿಕೆ ಮತ್ತು ಹಟವಾದಿ ಸ್ವಭಾವವನ್ನು ಹಿಂದಿಕ್ಕಿ ಮೆರೆಯುವ ವಿನಿಮಯ ಮನೋಧರ್ಮ; ಯಕ್ಷಗಾನದ ಸಾಹಿತ್ಯ ಮತ್ತು ರಂಗಭೂಮಿ ಸ್ವರೂಪಗಳೆರಡರ ಸ್ಪಷ್ಟ ಅರಿವಿರುವ, ಸಂಪನ್ಮೂಲ; ಹಳೆ-ನಡು-ಆಧುನಿಕ ಅರ್ಥಧಾರಿಗಳ ಜೊತೆಗೆ ಅರ್ಥಹೇಳಿ, ಅನುಭವ ಹರಡಿ, ಇಂದಿಗೂ ಪ್ರಸ್ತುತರಾದ ಮೂರು ಕಾಲಘಟ್ಟಗಳ ವಿಭಿನ್ನ ಮನೋಧರ್ಮಗಳ ನಡುವ ಸಂಧಿ ಸರಪಣಿಯ ಗಟ್ಟಿ ಗೊಣಸು; ಸುಪ್ರಸಿದ್ಧ ಯಕ್ಷಗಾನ ಪ್ರಸಂಗ 'ಶ್ರೀ ಕೃಷ್ಣ ಸಂಧಾನ'ದ ಪ್ರಬುದ್ಧ ಅಧ್ಯಯನದಿಂದ, ಹೊಸ ವಿವೇಚನಾ ಕ್ರಮದಿಂದ ಸುಪುಷ್ಟ ಹೊಳಹುಗಳನ್ನು ಗ್ರಹಿಸಿ, ಸಂಕಲಿಸಿ, ಕೃತಿ ರೂಪದಿಂದ ಪ್ರಕಾಶಿಸಿ 'ಡಾಕ್ಟರೇಟ್ ಪದವಿ' ಪಡೆದು ಸಮಗ್ರ ಯಕ್ಷಗಾನ ರಂಗಭೂಮಿಗೆ ಕೀರ್ತಿ ತಂದಿರುವ ಮಹಾನುಭಾವ; ತಾವೇ ಆನಂದಿಸಿ, ಒಪ್ಪಿ, ಘೋಷಿಸಿಕೊಂಡಂತೆ ಹೊರೆ-ಹೊರಳು- ಹೋರಾಟಗಳಾಗಿ ವಿಸ್ತರಿಸಿಕೊಂಡಿರುವ ಬದುಕೆಂಬ ರಂಗಭೂಮಿಯ 'ಬಹು ಕುತೂಹಲಿ' ಎನಿಸಿ ಕೊಂಡಿರುವ ಡಾ. ಎಂ. ಪ್ರಭಾಕರ ಜೋಶಿ ನನ್ನ ಮಟ್ಟಿಗೆ ಈಗ ಏನೆಲ್ಲ-ಏನಲ್ಲ'! ಯಕ್ಷಗಾನ ಕಲಾ ಪ್ರಪಂಚದ ಕಾರ್ಪಣ್ಯಗಳನ್ನು ಸ್ವಯಂ ಅರಿವಿನಿಂದ ಗ್ರಹಿಸಿ, ಸಂಕಟಗ್ರಸ್ತ ಕಲಾವಿದರ ನೊಂದ ಬಾಳಿಗೆ ಭರವಸೆ-ಉತ್ಸಾಹ- ಆಸರೆಗಳ ವಿಶ್ವಾಸದುಸಿರು ತುಂಬುವ ಶ್ರೀ ಪಟ್ಲ ಸತೀಶ ಶೆಟ್ಟಿಯವರ ನಿಡುಗಾಲದ ಕನಸು ಈಡೇರಿ ಸಾರ್ಥಕಗೊಂಡು ರೂಪದಳೆದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಸಂಸ್ಥೆಯ 2019ರ ಸಾಲಿನ ಪ್ರತಿಷ್ಠಿತ 'ಪಟ್ಲ ಪ್ರಶಸ್ತಿಗೆ ಡಾ. ಎಂ. ಪ್ರಭಾಕರ ಜೋಶಿಯವರು ಸರ್ವಮಾನ್ಯ

ಸಾರ್ಥಕ ಆಯ್ಕೆ.
ಕೃಷ್ಣಪ್ರಕಾಶ ಉಳಿತ್ತಾಯ 'ಈಶಾವಾಸ್ಯ', ಸದಾಶಿವ ದೇವಸ್ಥಾನದ ಬಳಿ, ಪೆರ್ಮಂಕಿ, ಮಂಗಳೂರು
ಕೃಷ್ಣಪ್ರಕಾಶ ಉಳಿತ್ತಾಯ
'ಈಶಾವಾಸ್ಯ',
ಸದಾಶಿವ ದೇವಸ್ಥಾನದ ಬಳಿ,
ಪೆರ್ಮಂಕಿ, ಮಂಗಳೂರು

ಯಕ್ಷಗಾನದ ಅಭಿಮಾನ 'ತದ್ದೂರೇ ತದಂತಿಕೇ' ಎಂಬ
ಡಾ. ಎಂ. ಪ್ರಭಾಕರ ಜೋಶಿಯವರಿಗೆ ಪಟ್ಲ ಪ್ರಶಸ್ತಿ

ಯಕ್ಷಗಾನ ಎಂಬ ತೋರಿಕೆಗೆ ಸೀಮಿತ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದ ಅಪ್ಪಟ ದೇಸಿಕಲೆಯ ಸೀಮೆ, ಭಾರತೀಯ ದರ್ಶನ ಶಾಸ್ತ್ರಗಳು, ಸಂಗೀತ, ಜಾನಪದೀಯ ಮೌಲ್ಯ, ಪೌರಾಣಿಕ ಹಿನ್ನೆಲೆ ಇವನ್ನೆಲ್ಲಾ ಏಕಕಾಲದಲ್ಲಿ ತನ್ನ ಒಡಲಲ್ಲಿ ಇಟ್ಟು ಅವನ್ನು ವಾಚಿಕ, ಅಭಿನಯ, ನಾಟ್ಯ, ಸಂಗೀತ, ವಿಜೃಂಭಕ ಆಹಾರ್ಯಗಳಿಂದೆಲ್ಲಾ ಅಭಿವ್ಯಕ್ತಿಸುವ ಶ್ರೀಮಂತಿಕೆಯಿಂದ ಕೂಡಿದೆ. ಇದನ್ನೆಲ್ಲಾ ಗಮನದಲ್ಲಿರಿಸಿ ಡಾ.ಎಂ.ಪ್ರಭಾಕರ ಜೋಶಿಯವರ ನೆಲೆಯನ್ನು ಅರ್ಥವಿಸಿಕೊಳ್ಳಬೇಕು. ಡಾ. ಎಂ. ಪ್ರಭಾಕರ ಜೋಶಿಯವರು ತಾಳಮದ್ದಳೆಯ ಅರ್ಥಧಾರಿ, ವಿಮರ್ಶಕ ಮತ್ತು ಬರಹಗಾರರು ಹೀಗೆಲ್ಲ ಮಾತ್ರವೇ ಕಂಡರೆ ಅವರ ಕುರಿತಾಗಿ ಒಟ್ಟು ರೂಪ-ನಿರೂಪಣೆ ಮಾಡಿದಂತಾಗದು. ಹಾಗಾಗಿ ತಾತ್ವಿಕವಾಗಿ ಅವರನ್ನು ಗಮನಿಸ ಬೇಕಾಗುತ್ತದೆ. ಹಾಗಾದಾಗ ನಾವು ಯಕ್ಷಗಾನವನ್ನೂ ಅರ್ಥೈಸಿಕೊಂಡಂತಾಗುತ್ತದೆ. ಡಾ. ಜೋಶಿಯವರನ್ನು ಅರ್ಥಮಾಡಿಕೊಳ್ಳುವುದೂ ಒಂದೇ ಮತ್ತು ಯಕ್ಷಗಾನವನ್ನು ಅರ್ಥಮಾಡಿಕೊಳ್ಳುವುದೂ ಒಂದೇ. ಈ ಬರಹ ಡಾ.ಜೋಶಿಯವರ ಕುರಿತು ಎಲ್ಲವನ್ನು ಹೇಳಿದಂತೆ ಆಗುದಿಲ್ಲವೆಂಬ ಎಂಬ ಜಾಗ್ರತೆಯೂ ಇದೆ. ಡಾ. ಪ್ರಭಾಕರ ಜೋಶಿಯವರು ಯಕ್ಷಗಾನವನ್ನು ಯಾವತ್ತೂ obsessive ಆಗಿ ಕಂಡವರಲ್ಲ. ಅವರೇ ಹೇಳುವಂತೆ ತದ್ದೂರೇ ತದಂತಿಕೆ' ಎಂಬ ನಿಷ್ಠೆಯಿಂದ ಬರೆದವರಿವರು. ಎಂದೂ ಸಹೃದಯತೆಯನ್ನು

ಬಿಡದ ಬರಹ ಮತ್ತು ಚಿಂತನೆಗಳು ಯಕ್ಷಗಾನ ಕ್ಷೇತ್ರದ ಒಳಗಿದ್ದೂ ಹೊರಗಿನವರಂತೆ ಆರೋಗ್ಯಪೂರ್ಣ

ಅಂತರವಿರಿಸಿ ಗಮನಿಸುವವರು. ಭಾರತೀಯ ದರ್ಶನ ಶಾಸ್ತ್ರ, ಪೌರಾಣಿಕ ಕತೆಗಳ ಮೌಲ್ಯ ಕಲೌಚಿತ್ಯ, ಕಲಾ ಸೌಂದರ್ಯ ಮತ್ತು ಇವೆಲ್ಲದರ 'ಜತೆ ಜತೆಗೇ ಸಾಗುವ ಭಾರತೀಯ ಸಂವೇದನೆ ಇದರ ಒಟ್ಟು ಪರಿಪಾಕ ವಾಗಿ ಡಾ. ಪ್ರಭಾಕರ ಜೋಶಿಯವರ ಚಿಂತನೆಗಳು ತಮ್ಮ ಮೊದಲ ಕೃತಿ ಜಾಗರದಿಂದಲೇ ತೊಡಗಿದೆ. ಅವರ ಈಚಿನ ಕೃತಿಯಲ್ಲಿವರೆಗೂ ಈ ಚಿಂತನೆಗಳಲ್ಲಿ ಸಡಿಲತೆ ಕಂಡುಬಂದಿಲ್ಲ.
ಹಾಗೆಂದು ಡಾ.ಜೋಶಿಯವರ ನಿಲುವುಗಳಲ್ಲಿ ಕಠೋರ ಸಂಪ್ರದಾಯ ಶರಣತೆಯೂ ಇಲ್ಲ. ಕಾಲ-ದೇಶ ಬದ್ಧವಾಗಿ ಜೀವನದ ಚಲನೆ ಸಾಗಬೇಕಾದ ಅನಿವಾರ್ಯತೆಯ ಸತ್ಯ ಇವರಿಗೆ ಗೊತ್ತಿದೆ. ಹಾಗೆಂದು ತಮ್ಮ ಚಿಂತನೆಯಲ್ಲಿ ಯಕ್ಷಗಾನ ವಿಷಯಕವಾದ ಸಂವೇದನೆ ಗಳು ಮೂಲ ಪ್ರಮೇಯವನ್ನು ಎಂದೂ ಭಂಗಿಸಲಿಲ್ಲ.
ಕೇವಲ ತಾಳಮದ್ದಳೆ- ಯಕ್ಷಗಾನ ಕ್ಷೇತ್ರಕ್ಕೆ ಡಾ.ಜೋಶಿಯವರನ್ನು ಸೀಮಿತಗೊಳಿಸಿದರೆ ಅದು ನಮ್ಮ ಅಪ್ರಬುದ್ಧತೆಯಾಗುತ್ತದೆ. ನಿಜವೇ, ಯಕ್ಷಗಾನ-ತಾಳಮದ್ದಳೆಯ ಮಯಾವಿಲಾಸದ ಕದಂಬ ಬಾಹುಗಳ ನಡುವಿಂದ ಹೊರಬಂದಿದ್ದರೆ ಡಾ. ಪ್ರಭಾಕರ ಜೋಶಿಯವರು ಇಂದು ವಿಶ್ವಮಾನ್ಯ ಚಿಂತಕರ ಸಾಲಲ್ಲಿರುತ್ತಾ ಇದ್ದರು.
ಡಾ. ಪ್ರಭಾಕರ ಜೋಶಿ ಯಕ್ಷಗಾನ ಕ್ಷೇತ್ರದ ಪ್ರಮುಖ 'ಧ್ವನಿ'. ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ ಎಂಬುದು ಸರ್ವವಿದಿತ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು

ರೀತಿಯ ತೀವ್ರಾಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ ಉಮೇದು ಡಾ.ಜೋಶಿಯವರದ್ದು. ಇದು ನನ್ನ ವೈಯಕ್ತಿಕ ಅನುಭವ. ಅವರ ಮಾತು ಚುಟುಕು. ವಿಷಯದ ಆಳ ಅಗಾಧ, ಮದ್ದಿನ ಗುಳಿಗೆಗಳಂತಹಾ ಮಾತು. ಅದೇ ತರಹವೇ ಅವರ ಬರಹವೂ. ಸೂತ್ರರೂಪದಂತೆ. ಎಷ್ಟು ಬೇಕೋ ಅಷ್ಟು. No nonsense.
'ಡಾ.ಪ್ರಭಾಕರ ಜೋಶಿಯವರು ಯಕ್ಷಗಾನ ಕಂಡ ಅತ್ಯುತ್ಕೃಷ್ಟ ದರ್ಜೆಯ ಕಲಾವಿಮರ್ಶಕರು. ಅವರು ವಿಮರ್ಶೆಯ ಕುರಿತು ಹೇಳುತ್ತಾ: ವಿಮರ್ಶೆಯು ಕಲಾ ರಸಿಕನಿಗೂ ಕಥೆಗೂ ಹೊಸ ಪ್ರಚೋದನೆ ನೀಡಬೇಕು... ನಿಲುಮೆಗಳನ್ನು ತಳೆಯುವ ಅಥವಾ ನಿರಾಕರಿಸುವ, ಭಿನ್ನಾಭಿಪ್ರಾಯಗಳನ್ನು, ಚರ್ಚೆಯನ್ನು ಪ್ರಚೋದಿಸುವುದೂ ವಿಮರ್ಶೆಯ ಒಂದು ಕೆಲಸವೇ ಆಗಿದೆ.'
ಒಬ್ಬ ಅರ್ಥಧಾರಿಯಾಗಿಯೂ ಸೂಕ್ಷ್ಮ ವಿಮರ್ಶಕನಾಗಿಯೂ ಇರುವ ಜೋಶಿಯವರ ಇಲ್ಲಿ ಉಲ್ಲೇಖಿಸಬೇಕಾದ ಜೋಶಿಯವರ ಮಾತು ಈ ಕ್ಷೇತ್ರದ ವಿಮರ್ಶೆಯ ತಾತ್ವಿಕ ವಿವೇಚನೆ ಸಾಕಷ್ಟು ಆಗಿಲ್ಲ. ಹಾಗಾಗಿ ಯಕ್ಷಗಾನ ವಿಮರ್ಶಾ ಶಾಸ್ತ್ರ ಬೆಳೆದಿಲ್ಲ. ಅದು ಬೆಳೆದಿದ್ದರೆ ಯಕ್ಷಗಾನ ಇಂದು ಇರುವಂತೆ ಇರುತ್ತಿರಲಿಲ್ಲ. ಎಷ್ಟೋ ಉತ್ತಮ ವಾಗಿರುತ್ತಿತ್ತು. ಯಕ್ಷಗಾನ ರಂಗಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಲು ವಿಮರ್ಶಕರು ವಿಫಲರಾಗಿದ್ದಾರೆ. ಈ ಸೋಲನ್ನು ನಾವು ಒಪ್ಪಿಕೊಳ್ಳಬೇಕು.

ಇದರಿಂದಾಗಿ ವಿಮರ್ಶೆಗೆ ಮುಕ್ತವಾಗಿ ಒಡ್ಡಿಕೊಳ್ಳಲು ಯಕ್ಷಗಾನ ರಂಗ ಇನ್ನೂ ಸಿದ್ಧವಾಗಿಲ್ಲ. ವಿಮರ್ಶೆ ಗೋಷ್ಟಿ ಅಂದರೆ ಅದೇನೋ ತಮ್ಮನ್ನು ಟೀಕಿಸುವಂತಹ ಉದ್ದೇಶ ಎಂದೇ ಕಲಾವಿದರು ತಿಳಿದಿರುವಂತೆ ಕಾಣುತ್ತದೆ. ಈ ಸಂದೇಹವನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು.
ಡಾ. ಜೋಶಿಯವರೆನ್ನುವಂತೆ ವಿಮರ್ಶೆಗೂ ಮರು ವಿಮರ್ಶೆ ಬೇಕು. ಅದು ಆಚಾರ್ಯ ಪೀಠವಾಗಿರಬಾರದು. ಯಕ್ಷಗಾನ ಸಂಶೋಧನೆಗೆ ವಿಮರ್ಶೆಯ ಬಲವಾದ ಅಡಿಪಾಯ ಬೇಕು. ಪ್ರೀತಿ ಬೇಕು. ನಿರ್ಭೀತಿ ಬೇಕು. ಮಾಧ್ಯಮದ ಎಚ್ಚರವಿಲ್ಲದೆ ಮಾಡುವ ವಿಮರ್ಶೆ 'ಒಟ್ಟಾರೆ ವಿಮರ್ಶೆ'ಯಾಗುತ್ತದೆ. ಅದರಿಂದ ರಂಗಕ್ಕೆ ಪ್ರಯೋಜನವಿಲ್ಲ. ಇನ್ನೊಂದು ಮುಖ್ಯ ಮಾತು ಇಲ್ಲಿ ಬರುತ್ತದೆ ವಿಮರ್ಶೆಯನ್ನು ಯಾರು ಒಳಗಿದ್ದುಕೊಂಡೇ ಮಾಡುತ್ತಾನೋ, ಅವನ ಬಗ್ಗೆ ಬಹಳಷ್ಟು ವಿಶ್ವಾಸ ನಂಬುಗೆಗಳು ಬರುತ್ತವೆ.
ಹೀಗೆ ಡಾ.ಪ್ರಭಾಕರ ಜೋಶಿಯವರು ತಾಳಮದ್ದಳೆ ಅರ್ಥಧಾರಿ ಯಾಗಿ, ವೇಷಧಾರಿಯಾಗಿ, ಮದ್ದಳೆವಾದಕನಾಗಿ, ಯಕ್ಷಗಾನ-

ತಾಲಮದ್ದಳೆ ವಿಮರ್ಶಕನಾಗಿ ಸಂಸ್ಕೃತಿಗಳ ಚಿಂತಕನಾಗಿ, ಕೋಶಕಾರನಾಗಿ ತನ್ನ ಚಿತ್ತದ ಸಾಮರ್ಥ್ಯವನ್ನು ಭವ್ಯವಾಗಿ ಅಭಿವ್ಯಕ್ತಿಗೊಳಿಸಿದ ನಿಜಾರ್ಥದ ಅಭಿಜ್ಞ, ಇಂತಹ ಯಕ್ಷಗಾನದ ಅಭಿಮಾನಕ್ಕೆ 2019 ನೇ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿಯು ಜೂನ್ 2ರಂದು ಮಂಗಳೂರಿನ ಸಮೀಪದ ಅಡ್ಯಾರ್‌ನ ಅಡ್ಯಾರ್ ಗಾರ್ಡನ್ ಇಲ್ಲಿ ಪ್ರದಾನಿಸಲ್ಪಡುತ್ತದೆ. ತೆಂಕುತಿಟ್ಟು ಕಂಡ ನಕ್ಷತ್ರ ಸದೃಶ ಭಾಗವತರಾದ ಶ್ರೀ ಪಟ್ಲ ಸತೀಶ ಶೆಟ್ಟರ ವಿದ್ವತೀತಿ ಇಲ್ಲಿ ಕಾಣಬಹುದು. ಮಂಗಳೂರಿನ ಬೀದಿ ಬೀದಿಯಲ್ಲಿ ರಾರಾಜಿಸುವ ಪಟ್ಲ ಸಂಭ್ರಮದ ಪ್ಲೆಕ್ಸ್‌ಗಳಲ್ಲಿ ಡಾ.ಪ್ರಭಾಕರ ಜೋಶಿಯವರ ದೊಡ್ಡದಾದ ಚಿತ್ರಗಳನ್ನು ಕಾಣುವಾಗ ವಿದ್ಯೆ, ವಿದ್ವತ್ತಿಗೆ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಇವರು ಕೊಡುವ ಮಾನ್ಯತೆಯ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ಪಟ್ಲ ಸತೀಶ ಶೆಟ್ಟರು ಅಭಿನಂದನಾರ್ಹರೇ ಸರಿ. ಇಂತಹಾ ವಿದ್ಯಾಪಕ್ಷಪಾತಿತ್ವ, ವಿದ್ವತ್ ಸಮ್ಮಾನ ಮತ್ತಷ್ಟೂ ಅವರಿಂದ ನಡೆಸಲ್ಪಡಲಿ. ಮತ್ತೊಮ್ಮೆ ಡಾ. ಪ್ರಭಾಕರ ಜೋಶಿಯವರಿಗೆ ಅಭಿನಂದನೆಗಳು.

ಡಾ. ಗಣೇಶ ಅಮೀನ್ ಸಂಕಮಾ‌ರ್ ಜಾನಪದ ತಜ್ಞ, ಸಂಶೋಧಕ
ಡಾ. ಗಣೇಶ ಅಮೀನ್ ಸಂಕಮಾ‌ರ್
ಜಾನಪದ ತಜ್ಞ, ಸಂಶೋಧಕ

ಯಕ್ಷ ಸಾಗರದೊಳಗೊಂದು ಜಾಗರ


ಯಕ್ಷ ಪ್ರಭಾಕರನಿಗೊಂದು ಕಿರಣ ಸೇರಿಸುವ ಕೆಲಸಕ್ಕೆ ಮಿತ್ರ ನವನೀತ ಶೆಟ್ಟಿ ವೀಳ್ಯ ಕೊಟ್ಟಾಗ ಒಂದೇ ಮಾತಿಗೆ ಹೂಂಗುಟ್ಟಿದ್ದೆ. ಆಕೃತಿಯ ನಾಗೇಶರ ಅಚ್ಚಿನಿಂದ ರೂಪ ತಳೆದ ನಾ. ಕಾರಂತ ಪೆರಾಜೆಯವರ ಸಂಪಾದಕತ್ವದ 'ಜಾಗರದ ಜೋಶಿ', ಗ.ನಾ. ಭಟ್ಟ ಅವರ 'ವಾಗರ್ಥ ಗೌರವ', ಡಾ. ಸುಂದರ ಕೇನಾಜೆಯವರ 'ಜೋಶಿ ಆಳ-ಮನದಾಳ' ಅದರೊಂದಿಗೆ ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ'ದ ಕುಸುಮ ಕೃತಿ 'ಪ್ರಗಲ್ಲ ಚಿಂತಕ ಅರ್ಥ ವಿಹಾರಿ ಡಾ. ಎಂ. ಪ್ರಭಾಕರ ಜೋಶಿ' ಈ ನಾಲ್ಕು ಕೃತಿಗಳು ನನ್ನ ಮುಂದಿವೆ. ಪ್ರಜಾವಾಣಿಯ 'ಗೇನದ ನಡೆ'ಗೆ ಒಂದು ಗಂಟೆಯ ಅವಧಿಯಲ್ಲಿ ಲೇಖನ ಗೀಚಿ ಎಸೆಯುತ್ತಿದ್ದ ನನ್ನ ಧೈರ್ಯ ಜೋಶಿ ಎಂಬ ಯಕ್ಷಸಾಗರದ ಅಲೆಯ ಅಬ್ಬರಕ್ಕೆ ಒಮ್ಮೆಲೆ ಸ್ತಬ್ಧವಾಗಿ ಹೋಯಿತು. ನಾಲ್ಕು ಕೃತಿಗಳನ್ನು ಓದಿ ವಿಮರ್ಶೆಯೊಂದಿಗೆ ಜೋಶಿ ಎಂಬ ಯಕ್ಷ ಸಾಗರವನ್ನು ಈಜಬೇಕು. ಯಕ್ಷಧ್ರುವಕ್ಕೆ ಕಾಣಿಕೆ ಅರ್ಪಿಸಬೇಕು. ಪ್ರೊ. ಅಮೃತ ಸೋಮೇಶ್ವರ ರಂತಹ ಹಿರಿಯರು ಮಾಡಬೇಕಾದ, ಅವರಿಂದ ಮಾತ್ರ ಸಾಧ್ಯವಾಗುವಂತಹ ಈ ಕೆಲಸವನ್ನು ಇನ್ನೂ ಯಕ್ಷಲೋಕದ ಪ್ರಥಮ ಹೆಜ್ಜೆಯನ್ನೂ ಕಾಣದ ನಾನು ಹೇಗೆ ಮಾಡಲಿ? ಜೋಶಿಯವರಂತಹ ಮೇರು ಪ್ರತಿಭೆಗೆ ಹೇಗೆ ನ್ಯಾಯ ಒದಗಿಸಲಿ ಎಂದು ಯೋಚಿಸುತ್ತಿರು

ವಾಗ ನನಗನಿಸಿದ್ದು ಇದು ಒಂದು ಸೌಭಾಗ್ಯ. ಯಕ್ಷಧ್ರುವದೊಳಗೆ ಇಣುಕುವ ಅವಕಾಶ

ದೊರೆಯಿತಲ್ಲ ಎಂಬ ಹುಂಬ ಜಂಬದೊಳಗಿರುವಾಗ ನೆನಪಾದುದು ನಡುಗನ್ನಡದ ಕುಮಾರವ್ಯಾಸನ ಮಾತುಗಳು, ವ್ಯಾಸ ಭಾರತದ ಕತೆಯನ್ನು ಬರೆಯುವಾಗ 'ವ್ಯಾಸ ಮಹರ್ಷಿಗಳು ಈಜಿದ ವಚನಾಮೃತ ಸಾಗರವನ್ನು ನಾನು ಈಜುತ್ತಿದ್ದೇನೆ.' ಆದರೆ ಕವಿ ವ್ಯಾಸ ಎಂಬ ಗರ್ವ ನನಗಿಲ್ಲ ಎಂಬಂತೆ ಸಂಭ್ರಮದಿಂದ ಬರೆಯತೊಡಗಿದೆ.
ಡಾ. ಎಂ. ಪ್ರಭಾಕರ ಜೋಶಿ ನನ್ನ ಆತ್ಮೀಯ ಮಿತ್ರರು. ಕಳೆದ ನಲ್ವತ್ತು ವರ್ಷಗಳಿಂದ ಅವರ ಸಾಮೀಪ್ಯ ನನಗೆ ಸಿಕ್ಕಿದೆ. ಶೇಣಿ, ಕುಂಬಳೆ, ಸಾಮಗರಂತಹ ಹಿರಿಯರೊಂದಿಗೆ ತಾಳಮದ್ದಳೆಯ ಕೂಟಗಳಲ್ಲಿ ಜೋಶಿಯವರ ಅಬ್ಬರದ ಮಾತುಗಳನ್ನು, ತರ್ಕಬದ್ಧವಾದ ಅರ್ಥವೈಖರಿ ಯನ್ನು ಕಂಡು ಬೆರಗಾಗಿದ್ದೇನೆ. ಸಾಹಿತ್ಯ ಸಮ್ಮೇಳನಗಳಲ್ಲಿ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಯಕ್ಷಗಾನದ ಬಗ್ಗೆ ಅವರ ವಿಮರ್ಶಾತ್ಮಕ ಭಾಷಣಗಳನ್ನು ಕೇಳಿದ್ದೇನೆ. ಈ ಹಿನ್ನೆಲೆಯಿಂದ ಓರ್ವ ಸಾಮಾನ್ಯ ಪ್ರೇಕ್ಷಕನಾಗಿ ನನಗನಿಸಿದ್ದು ಒಂದು ಶತಮಾನದ ಯಕ್ಷಲೋಕದ ಅವಲೋಕನವನ್ನು ಮಾಡಿದರೆ ಅದೆಷ್ಟೋ ಜನ ಹಿರಿಯರು ಈ ಕ್ಷೇತ್ರವನ್ನು ಬೆಳೆಸಿಕೊಂಡು ಉಳಿಸಿಕೊಂಡು ಬಂದಿದ್ದಾರೆ. ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬಂದವರಿದ್ದಾರೆ. ಆದರೆ ಪುರಾಣ, ಜಾನಪದ, ಇತಿಹಾಸ ಮತ್ತು ಸಾಮಾಜಿಕ ಆಯಾಮದೊಳಗಡೆ ಸೃಜನಶೀಲ ಕಲೆಯಾಗಿ ಚಿಂತನೆ ಮತ್ತು ಮನರಂಜನೆಯನ್ನು ನೀಡುವ ಯಕ್ಷಗಾನ ಮತ್ತು ತಾಳಮದ್ದಳೆಗಳ ಹಿಮ್ಮೇಳ, ಮುಮ್ಮೇಳ, ಕುಣಿತ, ವೇಷಭೂಷಣ ಮುಂತಾದವುಗಳ ಬಗ್ಗೆ

ಅರ್ಥಗಾರಿಕೆಯ ವಿವಿಧ ಆಯಾಮಗಳ ಬಗ್ಗೆ, ಇತಿಮಿತಿಗಳ ಬಗ್ಗೆ ವಿಮರ್ಶೆ ಯನ್ನು ಮಾಡಿದವರು, ಹೊಸ ಎಚ್ಚರವನ್ನು ಹುಟ್ಟಿಸಿದವರು, ಬದಲಾವಣೆಯನ್ನು ಹೊಸ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟವರು ಡಾ. ಎಂ. ಪ್ರಭಾಕರ ಜೋಶಿಯವರು.
ಜೋಶಿಯವರ ಮಾತು, ಕೃತಿ ಮತ್ತು ಆಕೃತಿ ಅವರ ಮುಂದೆ ನಿಂತವರಿಗೆ ಒಂದು ರೀತಿಯ ವಿಸ್ಮಯ. ವೇದಿಕೆಗಳಲ್ಲಿ ತಾಳಮದ್ದಳೆಯ ಕೂಟಗಳಲ್ಲಿ ಕೂತಲ್ಲಿಂದಲೇ ಪ್ರೇಕ್ಷಕರನ್ನು ಸೆಳೆಯಬಲ್ಲ ಆಂಗಿಕ ಅಭಿನಯ ಅವರಲ್ಲಿದೆ. ವಿಮರ್ಶೆ, ಚಿಂತನೆ, ಗಂಭೀರತೆಗಳೊಂದಿಗೆ ಹಾಸ್ಯಭರಿತ ಮಾತುಗಳ ಮೂಲಕ ಯಕ್ಷಕೂಟಕ್ಕೆ ಜೀವಂತಿಕೆಯನ್ನು ತುಂಬಿದವರು ಜೋಶಿಯವರು. ಅವರ ಅಬ್ಬರದ ವ್ಯಕ್ತಿತ್ವವನ್ನು ಮೆಚ್ಚಿಕೊಂಡ ನಾನು ಒಂದು ಸಲ ಕಾಲೇಜಿನಲ್ಲಿ ಅವರ ಪರಿಚಯವನ್ನು ಮಾಡುವ ಸಂದರ್ಭ ಸ್ವಾರಸ್ಯಕ್ಕಾಗಿ ಹೇಳಿದ್ದು ನೆನಪು. ಜೋಶಿಯವರು ನಿಷ್ಠುರವಾಗಿ, ಇದ್ದದ್ದನ್ನು ಇದ್ದಂತೆ ಹೇಳುವವರು. ಕಲೆ, ಸಂಸ್ಕೃತಿಯ ಬಗ್ಗೆ ಪೆದ್ದುತನ ತೋರಿಸು ವವರಿಗೆ ಜನ ಸ್ವಲ್ಪ 'ಪೆದಂಬು. ಆದರೆ ಅದರಲ್ಲಿ ಒಂದು 'ದಂಬು ಇದೆ ಎಂದು.
ಡಾ. ಎಂ. ಪ್ರಭಾಕರ ಜೋಶಿಯವರ ಬಗೆಗಿನ ನಾಲ್ಕು ಕೃತಿಗಳನ್ನು ಓದಿದ ಮೇಲೆ ನನಗನಿಸಿದ್ದು ನಾನು ಆವತ್ತು ಹೇಳಿದ ಮಾತು ನಿಜವಾಗಿ ಸತ್ಯ. ಜೋಶಿಯವರ ವಿಶೇಷತೆಯೇ ಅವರಲ್ಲಿನ 'ದಂಬು', ಇದೇ ಅವರನ್ನು ಅಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಯಾವುದನ್ನು ನಾವು ಕಸುವು,

ಸತ್ವ, ತಿರುಳು ಎನ್ನುತ್ತೇವೆಯೋ ಅವೆಲ್ಲವೂ ಅವರ ವ್ಯಕ್ತಿತ್ವದಲ್ಲಿವೆ. ಅವರ ಪೂರ್ತಿ ಕೃತಿಗಳಲ್ಲಿವೆ.
'ಜಾಗರದ ಜೋಶಿ' ಕೃತಿ ಜೋಶಿಯವರ ಬಗೆಗಿನ ವಿಶಿಷ್ಟ ಕೃತಿ. ಅವರ ವ್ಯಕ್ತಿತ್ವದ ವಿಸ್ತಾರ, ಆಳ, ಅಗಲ, ಎತ್ತರಗಳನ್ನು ವಿವರವಾಗಿ ಬಿತ್ತರಿಸಿದೆ. ಸಾಮಾನ್ಯವಾಗಿ ಅಭಿನಂದನ ಕೃತಿಗಳು, ವ್ಯಕ್ತಿಗಳ ಕುರಿತಾದ ಬರಹಗಳು ವಿಮರ್ಶೆಗಿಂತ ಹೆಚ್ಚು ವೈಭವೀಕರಣದಿಂದ ಕೂಡಿರುತ್ತದೆ. ಆದರೆ ಇಲ್ಲಿ ಹಾಗಿಲ್ಲ. ಜೋಶಿಯವರ ಭಾವ, ಪ್ರಭಾವ, ವೃತ್ತಿ, ಪ್ರವೃತ್ತಿ, ಬಾಲ್ಯ, ಬದುಕು, ಬಂಧ ಸಂಬಂಧಗಳ ಬಗ್ಗೆ ಇಲ್ಲಿಯ 14 ಲೇಖನಗಳ ಮೂಲಕ ಕಟ್ಟಿಕೊಡಲಾಗಿದೆ. ಅದರೊಂದಿಗೆ ಸ್ಥಿರೀಕರಣ, ಪರಿಷ್ಕರಣ, ವಿಸ್ತರಣ ಎಂಬ ಜೋಶಿಯವರ ಚಿಂತನೆಯ ಲೇಖನ, ಇನ್ನೂ ವಿಶೇಷ ವೇನೆಂದರೆ ಪ್ರೊ. ಬಿ.ಎ. ವಿವೇಕ ರೈ, ಪ್ರೊ. ಅಮೃತ ಸೋಮೇಶ್ವರ, ಕು.ಶಿ. ಹರಿದಾಸ ಭಟ್ ಮುಂತಾದ ಶತಮಾನದ ಚಿಂತಕರನ್ನೊಳಗೊಂಡ ಹತ್ತು ಮುನ್ನುಡಿಯ ನುಡಿಗಳು ಯಕ್ಷಲೋಕಕ್ಕೆ ಮಾತ್ರವಲ್ಲ ಸಾಹಿತ್ಯ ಲೋಕದ ಜಾಗರದ ನುಡಿಗಳಾಗಿವೆ. ಪ್ರೊ. ಬಿ.ಎ. ವಿವೇಕ ರೈಗಳು ಹೇಳಿದ ಮುನ್ನುಡಿಯ ಮಾತನ್ನು ಇಲ್ಲಿ ಉಲ್ಲೇಖಿಸುವುದು ಅಗತ್ಯ - “ಡಾ. ಜೋಶಿಯವರು ತತ್ತ್ವಶಾಸ್ತ್ರಗಳ ವಿಮರ್ಶಾತ್ಮಕ ಅಧ್ಯಯನದ ಮೂಲಕ ಕನ್ನಡದ ಒಬ್ಬ ವೈಚಾರಿಕ ವಿದ್ವಾಂಸರಾಗಿಯೂ ಮುಖ್ಯರಾಗಿ ದ್ದಾರೆ. ಸಾಹಿತ್ಯ, ಕಲೆ, ಜಾನಪದ, ರಂಗಭೂಮಿ, ಮೀಮಾಂಸೆಯ ಕ್ಷೇತ್ರಗಳನ್ನು ಅಂತರ ಶಿಸ್ತೀಯ ನೆಲೆಯಿಂದ ಅಧ್ಯಯನ ಮಾಡಿದ ಮತ್ತು

ಇಂದಿಗೂ ಈ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಯಾಗಿ ಇರುವ ಡಾ. ಎಂ. ಪ್ರಭಾಕರ ಜೋಶಿಯವರು ಕರ್ನಾಟಕದದ ಬಹುಶ್ರುತ ವಿದ್ವಾಂಸರು.”
'ವಾಗರ್ಥ ಗೌರವ' ಡಾ. ಎಂ. ಪ್ರಭಾಕರ ಜೋಶಿಯವರ 70ರ ಅಭಿನಂದನ ಗ್ರಂಥ. ಇಲ್ಲಿ ಅಂದಿನ ಕಾರ್ಯಕ್ರಮದ ಉದ್ಘಾಟನಾ ಭಾಷಣದಿಂದ ತೊಡಗಿ ಸಂದೇಶ ಸ್ಪಂದನದ ವರೆಗೆ ವಿವಿಧ ವಿದ್ವಾಂಸರು ಮಂಡಿಸಿದ ಜೋಶಿಯವರ ಬಗೆಗಿನ ವ್ಯಕ್ತಿ ವಿಮರ್ಶೆಗಳಿವೆ. ಅಂದಿನ ಅಧ್ಯಕ್ಷ ಭಾಷಣದಲ್ಲಿ ಡಾ. ಕೆ.ಎಂ. ರಾಘವ ನಂಬಿಯಾರ್ ಜೋಶಿಯವರ ಕೊಡುಗೆ ಏನು ಎಂದು ಕೇಳಿದರೆ “ಈ ರಂಗಕ್ಕೆ ಅರ್ಥಶಾಸ್ತ್ರ, ತತ್ತ್ವಶಾಸ್ತ್ರ ಸಹಿತ ಜ್ಞಾನದ ಹಲವು ಶಾಖೆಗಳ ಪರಿಜ್ಞಾನವನ್ನು ಆವರಣ ಭಂಗವಿಲ್ಲದೆ ನೀಡಿದ ಸಾಧನೆ ಎನ್ನಬಹುದು. ಅದು ಶೈಕ್ಷಣಿಕಬಾಗಿ ಅವಲಂಬನೀಯ ಜ್ಞಾನದಾನ. ಬರಿಯ ಗಾಳಿ ಮಾತು ಯಕ್ಷಗಾನಕ್ಕೆ ಪರಿಷ್ಕಾರಯುತ ಭಾಷೆಯನ್ನು ನೀಡಿದವರಾಗಿಯೂ ಅವರನ್ನು ಪರಿಗಣಿಸಬೇಕು. ಎಲ್ಲಕ್ಕಿಂತ ಸದ್ಯ ರಂಗದಲ್ಲಿರುವ ಕಲಾವಿದರಲ್ಲಿ ತಾಂತ್ರಿಕವಾಗಿ ಅತ್ಯಂತ ಪರಿಪೂರ್ಣತೆ ಗಳಿಸಿರುವ ಅರ್ಥಧಾರಿ ಜೋಶಿಯವರು.”
ಎಲ್ಲಕ್ಕಿಂತ ಹೆಚ್ಚಾಗಿ ಡಾ. ಎಂ. ಪ್ರಭಾಕರ ಜೋಶಿಯವರ ಬಗ್ಗೆ, ಅವರ ಯೋಚನೆ ಯೋಜನೆ, ಅಪೂರ್ವ ಕೃತಿ ಡಾ. ಸುಂದರ ಕೇನಾಜೆ ಯವರ 'ಜೋಶಿ ಆಳ-ಮನದಾಳ ಇಲ್ಲಿ ಆಕೃತಿಯ ಕಲ್ಲೂರು ನಾಗೇಶರು ಹೇಳುವ ಮಾತುಗಳು ಇಡೀ ಕೃತಿಯ ಆಕೃತಿ. “ಜಗತ್ತು ಜಾಗತೀಕರಣದ ಎಷ್ಟೇ ಆಕರ್ಷಣೆಗೆ ಒಡ್ಡಿಕೊಂಡರೂ, ಕಲೆ ಮತ್ತು ಕಲಾವಿದರು ಪ್ರಬುದ್ಧ

ರಾಗಿದ್ದಾಗ ಅದು ಉಳಿದು ಬೆಳೆದೀತು ಎಂಬುದಕ್ಕೆ 'ಯಕ್ಷಗಾನ ಕಲೆಗಿರುವ ಜನಪ್ರಿಯತೆಯೇ ಸಾಕ್ಷಿ. ಕಲೆಯನ್ನು ಕಾಲದೊಂದಿಗೆ ವಿಸ್ತರಿಸುವ ಕಲಾವಿದನ ಪ್ರಬುದ್ಧತೆ ನಿರಂತರವಾಗಿ ವಿಕಾಸವಾಗುತ್ತಾ ಸಾಗಿದರೆ ಕಲೆ ಅರಳುತ್ತ ಮಾಗುತ್ತದೆ. ಇಲ್ಲವಾದರೆ ಅದು ಸೊರಗುತ್ತದೆ, ಮಾತ್ರವಲ್ಲ ಒಂದೆಡೆ ನಿಂತು ಅಳಿದೂ ಹೋದೀತು. ಸಾಹಿತ್ಯ ಸಾಂಸ್ಕೃತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಪ್ರತಿಭೆಯುಳ್ಳ ಜೋಶಿಯಂತಹವರ ಯಕ್ಷಗಾನ ಸ್ಪರ್ಶ ಆ ಕಲೆಯನ್ನು ಜನಸಂವೇದಿಯಾಗುವಂತೆ ಮಾಡಿದೆ.”
ಆಳ ಮನದಾಳದ ಒಳಗೇನಿದೆ ಎಂದು ನೋಡಿದರೆ ಅದು ಪ್ರಭಾಕರ ನಿಂದ (ಸೂರ್ಯನಿಂದ) ಆಕರ್ಷಿತವಾಗಿ ಬೆಳೆಯುವ, ತುಡಿಯುವ, ಅಬ್ಬರಿಸುವ, ಉಬ್ಬರಿಸುವ ಯಕ್ಷ ಸಾಗರ, ಆಳಕ್ಕೆ ಇಳಿಯುವ ಮುನ್ನ ಕಣಿಪುರ ಪತ್ರಿಕೆಯ ಚಂಬಲ್ತಿಮಾರ್ ಹೇಳುವ ಮಾತುಗಳು ವೈಭವೀಕರಣ ವಲ್ಲ, ಸತ್ಯ.
“ಡಾ. ಪ್ರಭಾಕರ ಜೋಶಿ ನಮ್ಮ ನಡುವಿನ ಬೆರಗು. ಬಹು ಆಸಕ್ತಿಗಳ ಜೀವ ವೃಕ್ಷದಂತೆ ದಾರ್ಶನಿಕ ಚಿಂತನೆಯಿಂದ ತೊಡಗಿ, ಮಿಸಳಬಾಜಿಯ ತನಕ ನಿರಂತರ ಮಾತನಾಡುವ ಮತ್ತು ಯಾವುದೇ ವಿಷಯದಲ್ಲೂ ಆಪ್ತರು ಸಿಕ್ಕರೆ ಮಾತನಾಡುತ್ತಲೇ ಹೊಸ ಒಳನೋಟ ಬೀರುವ ಡಾ. ಜೋಶಿ ಕನ್ನಡದ ಪಂಡಿತ ಪರಂಪರೆಯ ಪ್ರಗಲ್ಯ ಚಿಂತಕ, ವಾಗ್ನಿ, ಅರ್ಥಧಾರಿ ಮತ್ತು ಸಾಂಸ್ಕೃತಿಕ ರಂಗಭೂಮಿಯ ಸಂಶೋಧಕ.

ಭಾರತೀಯ ರಂಗಭೂಮಿಯನ್ನು ಗಂಭೀರವಾಗಿ ಅರ್ಥೈಸಿ ಸುಮಾರು ಮೂರು ದಶಕಗಳ ಯಕ್ಷಗಾನ ಚರಿತ್ರೆಯನ್ನು ಅನ್ವೇಷಿಸಿ, ಅವಲೋಕಿಸಿ ಯಕ್ಷಗಾನ ರಂಗಭೂಮಿಗೆ ಎಂದೂ ಮರೆಯಲಾಗದ ಶ್ರೇಷ್ಠ ಕೊಡುಗೆ ನೀಡಿದ ದಾರ್ಶನಿಕ ಚಿಂತಕ ಡಾ. ಜೋಶಿ ಕರಾವಳಿಯ ನಿಜಾರ್ಥದ ಸೊತ್ತು” ಎಂದಿದ್ದಾರೆ.
ಆಳ ಮನದಾಳಕ್ಕೆ ಬೆನ್ನುಡಿಯಾದ ಶತಮಾನ ಕಂಡ ಚಿಂತಕ ಪ್ರಸಂಗಕರ್ತ ಪ್ರೊ, ಅಮೃತ ಸೋಮೇಶ್ವರರು ಕೃತಿಕಾರ ಕೇನಾಜೆಯವರ ಬಗ್ಗೆ ಮತ್ತು ಜೋಶಿಯವರ ಬಗ್ಗೆ ಹೇಳಿರುವ ಪ್ರಶಂಸೆಯ ಮಾತುಗಳು ಕೃತಿಯ ಶ್ರೇಷ್ಠತೆಯನ್ನು ಹೇಳುತ್ತದೆ. ಸಂದರ್ಶನದ ಮೂಲಕ ಜೋಶಿ ಯವರನ್ನು ಮಾಳದಿಂದ ಮಹತ್ತ್ವದೆಡೆಗೆ ಸಾಗಿದ ಅವರ ಪಯಣದ ನಡೆಯನ್ನು ಬಿಡೆಯಿಲ್ಲದೆ ದಾಖಲಿಸಿದ್ದಾರೆ. ಭಾಗ 1ರಲ್ಲಿ ಜೋಶಿ ಎಂಬ ತ್ರಿಕಾಲ ಪಾತ್ರದಿಂದ ತೊಡಗಿ 'ಮಾನವ ಪ್ರೀತಿ', 'ಜೀವನ ಪ್ರೀತಿ', ಹಳ್ಳಿಯ ಬ್ರಾಹ್ಮಣ ಪೇಟೆಯ ದಲಿತ', 'ಪರಿಶ್ರಮದೊಳಗಿನ ಪ್ರತಿಭೆ', 'ನಾನು ಆರೋಗ್ಯದಲ್ಲಿ ಲಕ್ಕಿ', 'ಅಶಿಸ್ತಿನೊಳಗೊಂದು ಶಿಸ್ತು', `ನನಗೆ ನನ್ನ ಕೆಲಸ ಮುಖ್ಯ', 'ಕುಟುಂಬದೊಳಗೂ ಒಂದು. ಈ ಪರಿಕಲ್ಪನೆಗಳ ಮೂಲಕ ಬಾಲ್ಯ, ಬದುಕು, ಸಾಂಸಾರಿಕ ಜೀವನ, ಕುಟುಂಬ ಜೀವನ, ವ್ಯಕ್ತಿ ವ್ಯಕ್ತಗಳ ಸಮಗ್ರ ಚಿತ್ರಣವಿದೆ. ಭಾಗ 2ರಲ್ಲಿ ಯಕ್ಷಗಾನದ ಶ್ರೇಷ್ಠತೆ, ಸಮಗ್ರತೆ, ವಾಸ್ತವ, ಉತ್ಕರ್ಷ – ಅಪಕರ್ಷ, ಜಾನಪದ ಮತ್ತು ಶಾಸ್ತ್ರೀಯ ಮುಖ,

ಅರ್ಥಗಾರಿಕೆಯ ವ್ಯಾಪ್ತಿ ವಿಸ್ತಾರ, ಯಕ್ಷಗಾನದ ಸಂವಾದಿ ಕಲೆಗಳು, ತಾಳಮದ್ದಳೆಯ ಬೌದ್ಧಿಕತೆ, ಅರ್ಥಗಾರಿಕೆಯಲ್ಲಿ ತನ್ನ ಆಯಾಮ, ಸಂಘಟನೆ ದಾಖಲಾತಿ, ಜಾಗತಿಕ ಪ್ರಸರಣ ಮುಂತಾದ ವಿಸ್ತ್ರತ ಚರ್ಚೆಯಿದೆ. ಈ ಕೃತಿಯನ್ನು ಓದಿದವರಿಗೆ ಜೋಶಿಯವರ ವ್ಯಕ್ತಿತ್ವದೊಂದಿಗೆ ಯಕ್ಷಗಾನದ ಕಲಾ ಶ್ರೇಷ್ಠತೆಯ ಅರಿವಾಗುತ್ತದೆ. ಈ ಕಾರಣಕ್ಕಾಗಿ ಪ್ರಕಾಶಕ ಕಲ್ಲೂರು ನಾಗೇಶರನ್ನು ಮತ್ತು ಡಾ. ಸುಂದರ ಕೇನಾಜೆಯವರನ್ನು ನಾನು ಅಭಿನಂದಿಸುತ್ತೇನೆ.
ಲೇಖನದ ಕೊನೆಯಲ್ಲಿ ನಾನು ಹೇಳಬೇಕಾದುದು ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಗ್ರಂಥ ಮಾಲೆಯ ಮೂಲಕ ಹೊರಬಂದ 'ಪ್ರಗಲ್ಯ ಚಿಂತಕ ಅರ್ಥವಿಹಾರಿ ಡಾ. ಎಂ. ಪ್ರಭಾಕರ ಜೋಶಿ' ಕೃತಿಯ ಬಗ್ಗೆ ಲೇಖಕ ಚಂದ್ರಶೇಖರ ಮಂಡೆಕೋಲು ಜೋಶಿಯವರ ಜೀವನ ಸಾಧನೆಗಳನ್ನು ದಾಖಲಿಸಿಕೊಟ್ಟಿದ್ದಾರೆ. ಜೋಶಿಯವರು ಹುಟ್ಟಿದ ಕಾರ್ಕಳ ತಾಲೂಕಿನ ಮಾಳದ ಪರಿಸರ, ಬಾಲ್ಯ, ತಂದೆ ತಾಯಿ, ಕುಟುಂಬ ಜೀವನಗಳ ಬಗ್ಗೆ ಹೇಳುವ ಮೂಲಕ ಯಕ್ಷಗಾನ ಕಲೆ, ಸಾಹಿತ್ಯ, ಸಾಧನೆ ಜೋಶಿಯವರಿಗೆ ವಂಶ ಪಾರಂಪರ್ಯವಾಗಿ ಬಂದಿದೆ. ಸಂಸ್ಕೃತಿ ಪಾಂಡಿತ್ಯ, ಸಾಧನೆ ಅವರ ಹುಟ್ಟು ಗುಣ ಎನ್ನುತ್ತ “ಜೋಶಿ ಎಂದರೆ ಜ್ಯೋತಿಷಿ. ಜೋಶಿಯವರಿಗೆ ಯಕ್ಷಗಾನದ ಮಟ್ಟಿಗೆ ದೊಡ್ಡ ಹಿನ್ನೆಲೆ ಯಂತಿದ್ದವರು ಅಜ್ಜ (ಮಾತಾಮಹ) ಅನಿರುದ್ಧ ಭಟ್ಟರು” ಎನ್ನುತ್ತ

ಕುಟುಂಬ ಹಿನ್ನೆಲೆ, ಮಾಳದ ಯಕ್ಷಗಾನ, ಜೋಶಿಯವರ ಶಿಕ್ಷಣ, ತಾಳಮದ್ದಳೆಯ ಆರಂಭದ ಹಂತಗಳನ್ನು ವಿವರಿಸುತ್ತ ಮಾಳದಲ್ಲಿ ಹುಟ್ಟಿದ ತೊರೆ ತೆರೆಯಾಗಿ ಸಮುದ್ರವಾದ ಕತೆಯನ್ನು ಸುಂದರವಾಗಿ ನೀಡಿದ್ದಾರೆ. ಮಂಡೆಕೋಲು ಇವರ ಈ ಕೃತಿ ಜೋಶಿಯವರ ಸಾಧನೆಯ ನಡೆಯ ಪೀಠಿಕೆಯ ಚಂಡೆಕೋಲು.
ಇಷ್ಟೆಲ್ಲಾ ಜೋಶಿಯವರ ಬಗ್ಗೆ ಓದಿದರೂ ಕೂಡಾ ಅವರು ಯಾರ ಅಳತೆಗೂ ಅರ್ಥವಾಗದ ಅರ್ಥಧಾರಿ ಎನ್ನುವುದು ಸತ್ಯ ಅನಿಸಿಕೆ. ಯಾವಾಗ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದೇ ಯೋಚಿಸಲಾಗದ ವ್ಯಕ್ತಿತ್ವ, ಪುರಾಣ ಲೋಕವನ್ನು ತುಳುನಾಡಿಗೆ ತರುವ ತುಳುನಾಡನ್ನು ಪುರಾಣಕ್ಕೊಯ್ಯುವ ಸಾಮರ್ಥ್ಯ ಅವರಲ್ಲಿದೆ. ಏಳು ಭಾಷೆಗಳ ಪಂಡಿತರಾಗಿ, ಪ್ರಾಂಶುಪಾಲರಾಗಿ, ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಮಿಂಚಿದ ಜೋಶಿ ಯಾವ ವಿಷಯದ ಬಗ್ಗೆಯೂ ಮಾತನಾಡಬಲ್ಲ ವಾಗಿ, ಕೃಷ್ಣನ ಚಾಣಾಕ್ಷತನ, ಭೀಮನ ಗಂಡುತನ, ಧರ್ಮರಾಯನ ಸಮಾಧಾನವನ್ನು ಮೈಗೂಡಿಸಿಕೊಂಡ ಮಾಳದ ಪ್ರಭಾಕರ ಜೋಶಿಯವರು ಶತಾಯುಷಿಯಾಗಿ ಬಾಳಬೇಕು. ಅವರ ಬೌದ್ಧಿಕ ಚಿಂತನೆಗಳು ಸಮಾಜಕ್ಕೆ ಪರಿಷ್ಕಾರದ ಪಾಠವಾಗಬೇಕು ಎನ್ನುತ್ತಾ ನನಗೆ 'ಯಕ್ಷ ಪ್ರಭಾಕರ'ದ ಬಗ್ಗೆ ಬರೆಯಲು ಅವಕಾಶ ಕೊಟ್ಟ ಯಕ್ಷಮಿತ್ರ ಕದ್ರಿ ನವನೀತ ಶೆಟ್ಟಿಯವರಿಗೆ, ಪಟ್ಲ ಫೌಂಡೇಶನಿನ ಪಟ್ಲ

ಸತೀಶ್‌ ಶೆಟ್ಟಿಯವರಿಗೆ ಮತ್ತು ಅಕ್ಷರಮಿತ್ರ ಕಲ್ಲೂರು ನಾಗೇಶರಿಗೆ
ವಂದಿಸುತ್ತಾ, ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಕಿರಣ ನನ್ನ
ಮೇಲೆ ಬೀಳಲಿ ಎಂಬ ಆಶಯದೊಂದಿಗೆ ಯಕ್ಷಸಾಗರದೊಂದಿಗೆ
ಜಾಗರವಾಗುತ್ತೇನೆ.

ಯಕ್ಷ ಪ್ರಭಾಕರ / 37

ಡಾ. ಎಂ. ಪ್ರಭಾಕರ ಜೋಶಿ

◆ಸಂಶೋಧಕ ◆ಕಲಾವಿದ ◆ಸಂಘಟಕ ◆ಸಲಹೆಗಾರ

205 ಹರಿಭಕ್ತಿ, ಪಿಂಟೋಸ್ ಲೇನ್
ಕದ್ರಿಕಂಬಳ, ಮಂಗಳೂರು-575 004, ದ.ಕ.
ದೂರವಾಣಿ : 0824 2494955, ಮೊಬೈಲ್ +91 9448494955
e-mail joshymp@rediffmail.com, joshymmp@gmail.com

1. ಹುಟ್ಟೂರು
ಕಾರ್ಕಳ ತಾಲೂಕಿನ ಮಾಳ, 1946.
ಕಲೆ, ಸಾಹಿತ್ಯದ ಹಿನ್ನೆಲೆ ಇರುವ ಕುಟುಂಬ.
ತಂದೆ: ನಾರಾಯಣ ಜೋಶಿ, ವಿದ್ವಾಂಸ, ವಾಗ್ನಿ, ತಾಯಿ: ಲಕ್ಷ್ಮೀಬಾಯಿ.
ಮಾತಾಮಹ ಅನಿರುದ್ಧ ಭಟ್ಟರು ಯಕ್ಷಗಾನ ಗುರು.

2. ಶಿಕ್ಷಣ
ಉಜಿರೆ, ಮಾಳ, ಕಾರ್ಕಳ, ಮುಲ್ಕಿ, ಧಾರವಾಡ,
ಎಂ.ಕಾಂ., ಹಿಂದಿ ಸಾಹಿತ್ಯ ರತ್ನ, ಪಿಎಚ್.ಡಿ. (ಯಕ್ಷಗಾನ)

38 / ಯಕ್ಷ ಪ್ರಭಾಕರ

3. ಆಸಕ್ತಿಗಳು
• ವಿದ್ಯಾರ್ಥಿ ದೆಸೆಯಲ್ಲಿ ಅನೇಕ ಬಹುಮಾನಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯ ಚಾಂಪಿಯನ್ ಶಿಪ್.
• ಕನ್ನಡ, ಮರಾಠಿ, ತುಳು, ಕೊಂಕಣಿ, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ತಿಳಿವು.
• ಬೆಸೆಂಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ಮೂರು ದಶಕಗಳ ಕಾಲ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ, ಎರಡು
ವರ್ಷ ಪ್ರಾಂಶುಪಾಲರಾಗಿ ನಿವೃತ್ತಿ. ಅಧ್ಯಾಪನ, ಆಡಳಿತಗಳಲ್ಲಿ ಯಶಸ್ವಿ, ಬೆಸೆಂಟ್ ವಿದ್ಯಾಕೇಂದ್ರ, ಬಲ್ಮಠ ಇನ್‌ಸ್ಟಿಟ್ಯೂಟ್‌ಗಳಲ್ಲೂ
ಗೌರವ ಸೇವೆ.
• ಯಕ್ಷಗಾನ, ಸಾಹಿತ್ಯ, ಸಂಸ್ಕೃತಿ, ತತ್ತ್ವಶಾಸ್ತ್ರ, ಶಿಕ್ಷಣ, ಸಮಾಜ ಕಾರ, ಕ್ರೀಡೆ, ಸಂಘಟನೆ. ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟಗಾರ.
• ಯಕ್ಷಗಾನ ತಾಳಮದ್ದಳೆ ರಂಗದ ಓರ್ವ ಪ್ರಮುಖ ಅರ್ಥದಾರಿ, ಎಲ್ಲ ಬಗೆಯ ಪಾತ್ರಗಳ ನಿರ್ವಹಣೆ, ಚಿಂತನಶೀಲ, ಸಂವಾದ
ಪ್ರಧಾನ ಮೊನಚಾದ, ಭಾವ-ವಿಚಾರಯುಕ್ತ ಅರ್ಥಗಾರಿಕೆ. ಎಲ್ಲ ಕಲಾವಿದರೊಂದಿಗೆ ಹೊಂದಾಣಿಕೆ, ಅರ್ಥಗಾರಿಕೆಯಲ್ಲಿ ಸಾಂಸ್ಕೃತಿಕ
ಸಾಹಿತ್ಯ ಚಿಂತನ, ಚುರುಕುತನ, ಒಟ್ಟಂದ, ಸಮಯಪಾಲನೆಗಳಲ್ಲಿ ವಿಶೇಷ ಶ್ರಮ.
• ಶಿಕ್ಷಣ, ಕಲೆ, ತತ್ತ್ವಶಾಸ್ತ್ರ, ಸಾಂಸ್ಕೃತಿಕ ವಿಚಾರಗಳಲ್ಲಿ ಪ್ರಮುಖ ಉಪನ್ಯಾಸಕಾರ, ಪ್ರಾದೇಶಿಕ, ರಾಷ್ಟ್ರೀಯ ಗೋಷ್ಠಿ ಕಮ್ಮಟಗಳಲ್ಲಿ
ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಉಪನ್ಯಾಸಗಳು ಮತ್ತು ಸಮನ್ವಯಕಾರ
• ಯಕ್ಷಗಾನ ಕಾಠ್ಯಕ್ರಮ, ಗೋಷ್ಠಿ, ಆಟ ಕೂಟಗಳ ಸಂಘಟಕ, ನಿರ್ದೇಶಕ,
• 100ಕ್ಕೂ ಮಿಕ್ಕಿ ಧ್ವನಿಸುರುಳಿಗಳಲ್ಲಿ ಪಾತ್ರ, ನಿರ್ದೇಶನ, ಯಕ್ಷಗಾನದ ಪ್ರಪ್ರಥಮ ಆಡಿಯೋ ಸಿ.ಡಿ., ನಿರ್ದೇಶನ.
• ಪ್ರಮುಖ ಯಕ್ಷಗಾನ ವಿಮರ್ಶಕ, ಸಂಶೋಧಕ, ಸಂಘಟಕ, ಸಂಪನ್ಮೂಲ ವ್ಯಕ್ತಿ.

ಯಕ್ಷ ಪ್ರಭಾಕರ / 39

4. ಕೃತಿಗಳು
• ಜಾಗರ
• ಕೇದಗೆ
• ಮಾರುಮಾಲೆ
• ಪ್ರಸ್ತುತ
• ಯಕ್ಷಗಾನ ಪದಕೋಶ
• ಭಾರತೀಯ ತತ್ತ್ವಶಾಸ್ತ್ರ
• ತಾಳಮದ್ದಲೆ
• ವಾಗರ್ಥ
• ಕೃಷ್ಣ ಸಂಧಾನ : ಪ್ರಸಂಗ ಮತ್ತು ಪ್ರಯೋಗ
• ಮುಡಿ
• ಮಂದಾರ ಕೇಶವ ಬಟ್ (ಪರಿಚಯ-ತುಳು)
• ಗುರ್ತ (ತುಳು ಕವಿತೆಗಳು)
• ಪಂಡಿತ ಪೆರ್ಲ ಕೃಷ್ಣಭಟ್ಟ
• ಯಕ್ಷಗಾನ ಸ್ಥಿತಿ-ಗತಿ
• ಕೊರಳಾರ
• ತತ್ತ್ವಮನನ

• ಕವಿತೆಗಳು, ಅನುವಾದಗಳು, ಹಲವು ನೃತ್ಯ ನಾಟಕಗಳು
• ಸಂಸ್ಕೃತಿ, ರಾಜಕೀಯ, ಅರ್ಥಶಾಸ್ತ್ರ, ಕ್ರೀಡೆ, ಪ್ರಚಲಿತ ವಿದ್ಯಮಾನ ಮೊದಲಾದ ವಿವಿಧ ವಿಚಾರಗಳಲ್ಲಿ ನೂರಾರು ಬಿಡಿ ಬರಹಗಳು,
ಅಂಕಣ ಲೇಖನಗಳು.


ಇತರರೊಂದಿಗೆ
• ಮಣೇಲ್ ಶ್ರೀನಿವಾಸ ನಾಯಕರು : ಜೀವನ ಪರಿಚಯ - ಎನ್. ಮಾಧವಾಚಾರ
• ಭಾರತೀಯ ತತ್ತ್ವಶಾಸ್ತ್ರ ಪರಿಚಯ, ಭಾರತೀಯ ತತ್ತ್ವಶಾಸ್ತ್ರ ಪ್ರವೇಶ - ಪ್ರೊ. ಎಂ.ಎ. ಹೆಗಡೆ
• ಕುಮಾರಿಲ ಭಟ್ಟ - ಪ್ರೊ. ಎಂ.ಎ. ಹೆಗಡೆ ಅವರೊಂದಿಗೆ.
• ದಕ್ಷಿಣ ಕನ್ನಡ - ಗುರುರಾಜ ಮಾರ್ಪಳ್ಳಿ
• ಹಾಜಿ ಅಬ್ದುಲ್ಲಾ (ಕಾರ್ಪೋರೇಶನ್ ಬ್ಯಾಂಕ್ ಸ್ಥಾಪಕ, ಮಹಾದಾನಿ) ಇಂಗ್ಲಿಷ್ ಅನುವಾದ. ಮೂಲ:ಪ್ರೊ. ಮುರಳೀಧರ
ಉಪಾಧ್ಯ

ಸಂಪಾದಿತ
• ಅರ್ಥಗಾರಿಕೆ : ಸ್ವರೂಪ ಸಮೀಕ್ಷೆ
• ಯಕ್ಷಗಾನ ಚಿಂತನ
• ಕುಕ್ಕಿಲ ಸಂಪುಟ

ಸಂಪಾದಿತ : ಇತರರೊಂದಿಗೆ
• ಯಕ್ಷಗಾನ ಮಕರಂದ (ಪೊಳಲಿ ಶಾಸ್ತ್ರಿ ಸಂಸ್ಮರಣಾ ಗ್ರಂಥ)
• ಯಕ್ಷಕರ್ದಮ (ಪದವೀಧರ ಯಕ್ಷಗಾನ ಸಮಿತಿ, ಮುಂಬೈ, ಸಮ್ಮೇಳನ ಸಂಕಲನ)
• ಗಾನಕೋಗಿಲೆ (ಭಾಗವತ ದಾಮೋದರ್ ಮಂಡೆಚ್ಚ ಸಂಸ್ಮರಣ ಗ್ರಂಥ)
• ಸ್ವರ್ಣ ರೇಖೆ, Vision 21st Century (ಕರ್ನಾಟಕ ರಾಜ್ಯ ಸ್ವರ್ಣ ಮಹೋತ್ಸವ ನೆನಪಿನ ಲೇಖನ ಸಂಕಲನಗಳು)
• ಮೊಲಿ (ಕೆನರಾ ಜಿಲ್ಲೆ ಶತಮಾನ- ಸಂಪುಟ)
• ಕುಬಣೂರು ಸ್ಮೃತಿ (ಕುಬಣೂರು ಬಾಲಕೃಷ್ಣ ರಾವ್ ಸ್ಮೃತಿ ಗ್ರಂಥ)
• ರಂಗವೆಂಕಟ (ಪಣಂಬೂರು ವೆಂಕಟರಾಯ, ಐಕಳ ಸಂಸ್ಮರಣ ಗ್ರಂಥ)
• ದೀವಾಣ ಸಂಪದ (ದೀವಾಣ ಭೀಮ ಭಟ್ಟ-ಸ್ಮರಣ ಗ್ರಂಥ)
• ಮೂಡಂಬೈಲು ಶಾಸ್ತ್ರಿ-75 (ಅಭಿನಂದನ ಗ್ರಂಥ)
• ಶೇಣಿ ಪ್ರಸಂಗ
• ವಾಚಿಕ (ಅರ್ಥಗಾರಿಕೆ ಕುರಿತ ಲೇಖನ ಸಂಪುಟ)
• ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ-75. ಸಂಪುಟ)
• ಶ್ರೀಮಯ ಅಮೃತ ಮಂಥನ (ಶ್ರೀ ಇಡಗುಂಜಿ ಮೇಳ-80, ಸಂಪುಟ)

ಅಂಕಣಕಾರ

• ಸ್ಪಂದನ - ಹೊಸದಿಗಂತ ದೈನಿಕ
• ಮಿನಿ ಕಾಲಂ (ನೂತನ ಕಲ್ಪನೆಯ ಅಂಕಣ) – ಜನವಾಹಿನಿ ಪತ್ರಿಕೆ
• ಸಂಸ್ಕೃತಿ ಸ್ಪಂದನ - ಕರಾವಳಿ ಅಲೆ ದೈನಿಕ
• ಸಂಸ್ಕೃತಿ ಸಮ್ಮುಖ - ಉದಯವಾಣಿ ದೈನಿಕ
• ಜಿಜ್ಞಾಸೆ : ಸಾಂಸ್ಕೃತಿ ವಿಚಾರ ಪ್ರಶ್ನೆಗಳಿಗೆ ಉತ್ತರ ಅಂಕಣ - ಉದಯವಾಣಿ ದೈನಿಕ
• ಯಕ್ಷಪ್ರಶ್ನೆ : ಸಾಂಸ್ಕೃತಿಕ ಪ್ರಶ್ನೆಗಳಿಗೆ ಉತ್ತರ – ಬಲ್ಲಿರೇನಯ್ಯ ಪತ್ರಿಕೆ.

ಸಂಘಟಕ

• ಸ್ಥಾಪಕ ಕಾರ್ಯದರ್ಶಿ, ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಮಂಗಳೂರು.
• ಮಾಜಿ ಕಾರ್ಯದರ್ಶಿ, ಕನ್ನಡ ಸಂಘ, ಮಂಗಳೂರು.
• ಜಿಲ್ಲಾ ಪದವಿಪೂರ್ವ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ.
• ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ಅಧ್ಯಯನ ಕೇಂದ್ರದ ಸಲಹೆಗಾರ.
• ಹಲವು ಸಂಘ ಸಂಸ್ಥೆಗಳ ಪದಾಧಿಕಾರಿ, ಸಲಹೆಗಾರ
• ಕಲಾವಿದರಿಗೆ, ಸಂಸ್ಥೆಗಳಿಗೆ ನೆರವು, ಮಾರ್ಗದರ್ಶನ, ಸಂಘಟನ ಸಹಾಯ.
• ಅಧ್ಯಾಪಕ ಸಂಘಟನೆಯಲ್ಲಿ ಸಕ್ರಿಯ.
• ಯಕ್ಷಗಾನದ ಪ್ರಥಮ ವೆಬ್‌ಸೈಟ್ ಸ್ಥಾಪಕ. www.yakshagana.com ಸಂಪಾದಕ.
• ಬಲಿಪ ಭಾಗವತ 75 – ಬಲಿಪ ಅಮೃತ ಭವನ ಸಮಿತಿ-ಯೋಜನೆ ಸಮಗ್ರ ಸಂಘಟನಾ ಕಾರ 2013-15
• ಹಲವು ಕಲಾಗೋಷ್ಠಿ, ಉತ್ಸವ, ಅಭಿನಂದನೆಗಳ ಸಂಘಟಕ

5. ಗೌರವಗಳು
ಸಂಸ್ಥೆ/ಕೇಂದ್ರ/ಪುರಸ್ಕಾರ
• ಸುಮನಸಾ ವಿಚಾರ ವೇದಿಕೆ, ಚೊಕ್ಕಾಡಿ 1984
• ಗಣೇಶೋತ್ಸವ ದಶಮಾನ ಸಂಮಾನ, ಸುರತ್ಕಲ್ - 1984
• ಕರ್ನಾಟಕ ಯಕ್ಷಗಾನ-ಜಾನಪದ ಅಕಾಡೆಮಿ ಗ್ರಂಥ ಪುರಸ್ಕಾರ 1984-1994.
• ಆರ್.ಆರ್.ಸಿ., ಎಂ.ಜಿ.ಎ‌. ಕಾಲೇಜು ಉಡುಪಿ-ಅಧ್ಯಯನ ಕೇಂದ್ರದ ಸಂಶೋಧನಾ ಫೆಲೋಶಿಪ್ 1990-93
• ಕರ್ನಾಟಕ ಸಂಘ, ಬಹರೈನ್ - 1991
• UAE ತುಳುಕೂಟ, ದುಬ್ಯಾ - 1991
• ಆರ್.ಆರ್.ಸಿ.-ಜಾನಪದ ಅಧ್ಯಯನ ಕೇಂದ್ರದ ಸನ್ಮಾನ-1995
• ಎನ್.ಎಂ.ಪಿ.ಟಿ. ಯಕ್ಷಗಾನ ಕಲಾಮಂಡಳಿ, ಪಣಂಬೂರು – 1996
• ಯಕ್ಷಗಾನ ಕಲಾಮಂಡಳಿ ಪಣಂಬೂರು-1996
• ಕುಬೆವೂರು ಪುಟ್ಟಣ್ಣ ಶೆಟ್ಟಿ ಪ್ರಶಸ್ತಿ - 1997
• ಸಂದೇಶ ಪ್ರತಿಷ್ಠಾನ ಪ್ರಶಸ್ತಿ - 1998
• ಶ್ರೀ ಧರ್ಮಸ್ಥಳ ಗ್ರಾಮವಿಕಾಸ ಸಮ್ಮೇಳನ, ಮಾಳ - 1999
• ಪ್ರೊ. ಗುಂಡಿ ಚಂದ್ರಶೇಖರ ಐತಾಳ ಪ್ರಶಸ್ತಿ – 1999
• ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ತಾಲೂಕು ಸಾಹಿತ್ಯ ಸಮ್ಮೇಳನ ಕಾರ್ಕಳ-1999
• ಮರಾಠಿ ಮಂಡಲ, ಮಂಗಳೂರು 1999

44 / ಯಕ್ಷ ಪ್ರಭಾಕರ

• ಅಗರಿ ಯಕ್ಷಬ್ರಹ್ಮ ವೇದಿಕೆ, ಬೆಳ್ತಂಗಡಿ -1998, 2001
• ಹುಟ್ಟೂರ ಸನ್ಮಾನ ಸಮಿತಿ : ಮಾಳ, ಕಾರ್ಕಳ - 2000
• ಆರ್.ಕೆ. ಸಂಜೀವ ರಾವ್ ಕಂಬದಕೋಣೆ ಪುರಸ್ಕಾರ - 2000
• ಸಾಹಿತ್ಯ ಸಂಘ, ಕಾರ್ಕಳ - 2000
• ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾಳ - 2001
• ಶ್ರೀ ಪರಶುರಾಮ ದೇವಸ್ಥಾನ, ಮಾಳ - 2002
• ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು - 2002
• ಜೀವಮಾನ ಸಾಧನೆಗಾಗಿ - ಜಾನಪದ ಅಕಾಡೆಮಿ ತಜ್ಞ ಪ್ರಶಸ್ತಿ-2003
• ಪ್ರೊ. ಕು.ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, 2009
• ಯಕ್ಷಗಾನ ಸಮ್ಮೇಳನ, ಮಂಗಳೂರು ವಿಶ್ವವಿದ್ಯಾನಿಯ - 2003
• ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆ-ಬೆಸೆಂಟ್ ವಿದ್ಯಾ ಸಂಸ್ಥೆಗಳ ಸಮೂಹದ ವಿಶೇಷ ಪುರಸ್ಕಾರ - 2003
• ದ.ಕ.ಜಿಲ್ಲಾ ಪದವಿಪೂರ್ವ ಶಿಕ್ಷಕ ಶಿಕ್ಷಕೇತರ ಸಂಘ-ಸಂಮಾನ 2003-04
• ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಕರ ಸಂಘ-2003
• ಯಕ್ಷಗಾನ ಕೇಂದ್ರ, ಎಂ.ಜಿ.ಎಂ. ಕಾಲೇಜು ಉಡುಪಿ-2004
• ಯಕ್ಷಗಾನ ಕಲಾರಂಗ, ಉಡುಪಿ - 1997
• ಮಟ್ಟಿ ಮುರಳೀಧರ ರಾವ್ ದಶಮಾನ ವಿಶೇಷ ಪ್ರಶಸ್ತಿ - 2009
• ಶ್ರೀ ಪೇಜಾವರ ವಿಶ್ವೇಶತೀರ್ಥ ಪ್ರಶಸ್ತಿ, ಉಡುಪಿ - 2004
• ವೇದ ವಿದ್ಯಾ ಅಧ್ಯಯನ ಕೇಂದ್ರ, ನೆಲೆಮಾವು ಮಠ, ಉತ್ತರಕನ್ನಡ – 2004

ಯಕ್ಷ ಪ್ರಭಾಕರ / 45