ಯಜಮಾನ - ಓಮೈನಾ ಓಮೈನಾ

ವಿಕಿಸೋರ್ಸ್ದಿಂದ

ಚಿತ್ರ: ಯಜಮಾನ
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ರಾಜೇಶ್, ಚಿತ್ರ


ಓ ಮೈನಾ ಓ ಮೈನಾ, ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ

ಓ ಮೈನಾ ಓ ಮೈನಾ, ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ

ಕಾವೇರಿ ತೀರದಲಿ ಬರೇದೆನು ನಿನ್ ಹೆಸರ
ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ

ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ
ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿಪಟವಾಗಿರುವೇ

ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ

ಓ ಮೈನಾ ಓ ಮೈನಾ, ಏನಿದು ಮಾಯೆ

ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ

ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯಾ ಬೀಸಿ

ಮೋಡ ನಗುವಾ ಮರ್ಮಾ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ

ಓ ಮೈನಾ ಓ ಮೈನಾ, ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ

ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ