ಯಜಮಾನ - ಮೈಸೂರು ಮಲ್ಲಿಗೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ: ಯಜಮಾನ

ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ರಾಜೇಶ್, ಚಿತ್ರಜಿಲಕ್ ಜಿಲಕ್ ಜಿಲಕ್ ಜಿಲಕ್..
ಧಿಂತನಕ್ಕಿಟ ಧಿಂತನಕ್ಕಿಟ
ಧಿಂದನಿಕ ತಕ್ಕಿಟತ

ಏಯ್....
ಮೈಸೂರು ಮಲ್ಲಿಗೆ, ಮೈಯೆಲ್ಲಾ ಹೋಳಿಗೆ
ಅಂಗಾಂಗ ಅರಳಿಸಿ, ಪಂಚಾಂಗ ಓದಿಸಿ
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದೂ ಬಿಡುವೆ ||ಪ||

||ಮೈಸೂರು ಮಲ್ಲಿಗೆ||

ಚುಮ್ಕು ಚಕ
ಚುಮ್ಕು ಚಕ
ಚುಮ್ಕು ಚಕ ಚುಮುಕು ತಾ
ಬಕ್‍ಬಕ್‍ತಕಿಟತ

ಲಜ್ಜೆ ಬಿಟ್ಟು ಗೆಜ್ಜೆ ಕಟ್ಟು
ಹೆಜ್ಜೆ ಬಿಟ್ಟು ಬಾಜಿ ಕಟ್ಟು
ರಾಜಿಯಾಗಿ ಸೂಜಿಮಲ್ಲೆ ಮುಡಿಸಿಬಿಡುವೆ
ಸುವ್ವಿ ಸುವ್ವಿ ನಿನ್ನ ಕಣ್ಣುಗಳೆ ನನ್ನೆದೆಯಾ ಮುಂಬಾಗಿಲೋ
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೆ ನನ್ನುಸಿರ ಬೆಂಗಾವಲು

ಕೈ ಹಿಡಿಯೋ ಕಾರಣವೇ

ಕೈ ಬಳೆಯ ಝುಲಕು ಝುಲಕು
ಅದೇ ಗುಂಡಿಗೆಯ ಮಿಣುಕು ಮಿಣುಕು
ಆ ಶ್ರೀರಂಗಾಪಟ್ಣಾ ಬಳಸೀ
ಪ್ರೀತಿ ಕಾಲ್ಗೆಜ್ಜೆ ಘಲ್ ಘಲ್ ಘಲುಕು

||ಮೈಸೂರು ಮಲ್ಲಿಗೆ||

ಮುಟ್ಟಿದರೇ ತಕಿಟ ತಕಿಟ
ಮುಟ್ಟದಿದ್ರು ತಕಿಟ ತಕಿಟ
ಒತ್ತಿದರೇ ತಕಿಟ ತಕಿಟ
ಅಪ್ಪಿದರೇ ಚುಪ್
ಮಳ್ಳಿ ಮಳ್ಳೀ.. ನಿನ್ನ ಮಾತುಗಳೇ ಮನಸುಗಳಾ ಓಟ ಕಣೆ
ಮಳ್ಳ ಮಳ್ಳಾ... ನಿನ್ನ ತುಂಟತನ ಯವ್ವನಕೆ ಪಾಠ ಕಣೋ

ಮುತ್ತುಗಳ ಪಲ್ಲಕಿಯಾ
ಹತ್ತಿದರೇ ಸೈ ಸೈ ಸೈ
ಜೋಡಿ ಜೀವಗಳ ಥೈ ಥೈ ಥಕ ಥೈ ಥೈ ಥೈ ಥೈ
ಚಾಮುಂಡಿ ಬೆಟ್ಟ ಬಳಸೋ
ಪ್ರೀತಿ ಬಾವುಟಕ್ಕೆ ಜೈ ಜೈ ಜೈ!!!

[ಗಂಡು] ||ಮೈಸೂರು ಮಲ್ಲಿಗೆ||

[ಹೆಣ್ಣು] ||ಮೈಸೂರು ಮಲ್ಲಿಗೆ||