ಯಜಮಾನ - ಶ್ರೀಗಂಧದ ಗೊಂಬೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ: ಯಜಮಾನ
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ರಾಜೇಶ್, ಚಿತ್ರ[ಹೆಣ್ಣು] ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮಾ
ಮನೆತನಕ ಬಂದಾ ಹೆಣ್ಣು
ಈ ಮನೆತನ ಬೆಳಗಲಿ..

ನಮ್ಮ ಹರಕೆಯೂ ಫಲಿಸಲಿ

[ಗಂಡು]
ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ

[ಹೆಣ್ಣು]

ಸರಿಗಮಗಳಲಿ, ಸಾಗರದಲ್ಲಿ
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
[ಗಂಡು]
ಹೋ! ಘಮಘಮಗಳಲೀ, ಗೋಪುರದಲ್ಲಿ
ನಿತ್ಯ ವಸಂತ ಇವಳ ಈ ಲಜ್ಜೆ
[ಹೆಣ್ಣು]

ಏನುಸಿರೋ ಏನುಸಿರೋ ಏನಿರಲಿ
ನನ್ನ ಕನಸೀನ ಬಾಗಿನ ನಗುತಿರಲಿ

[ಗಂಡು]
ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೇ ಬರುತಾಳಮ್ಮಾ

ನಂದಾದೀಪ, ಹುಟ್ಟಿದ ಮನೆಗೆ
ಆರದ ದೀಪ ನೀ ಮೆಟ್ಟಿದ ಮನೆಗೆ
[ಹೆಣ್ಣು]
ಬಯಸೀ ತಂದ ಈ ಅನುಬಂಧ
ಸಾವಿರ ಸಾವಿರ ಜನ್ಮ ಇರೋವರೆಗೆ
[ಗಂಡು]

ಊರೆಲ್ಲ ಹರಸಿದ ಪುಷ್ಪಾಂಜಲಿ
ಅಣ್ಣನಾ ಹರಕೆ ಭಾಷ್ಪಾಂಜಲಿ

ಶ್ರೀಗಂಧದಾ ಗೊಂಬೆ...
ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೇ
ಬೆಳ್ಳಿ ಬೆಳಕು ತರುತಾಳಮ್ಮಾ

ಮನೆತನಕ ಬಂದಾ ಹೆಣ್ಣು
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..
ಈ ಮನೆತನ ಬೆಳಗಲಿ..
ನಮ್ಮ ಹರಕೆಯೂ ಫಲಿಸಲಿ..