Library-logo-blue-outline.png
View-refresh.svg
Transclusion_Status_Detection_Tool

ಯಾಂತ್ರಿಕನ ಯಂತ್ರಮಂತ್ರ ಸಂಬಂಧದಿಂದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಯಾಂತ್ರಿಕನ ಯಂತ್ರಮಂತ್ರ ಸಂಬಂಧದಿಂದ ಪಿಶಾಚಗ್ರಸ್ತನ ಪಿಶಾಚಿಯು ಫಲಾಯನವಪ್ಪ ತೆರನಂತೆ
ಶ್ರೀಗುರುವಿನ ಶಿವಮಂತ್ರ ಶಿವಲಿಂಗ ಸಂಬಂಧದಿಂದ ಮನುಜನ ಮಾಯಾಗ್ರಹವು ತೊಲಗುವುದಯ್ಯಾ. ಗಿಡಮರಬಳ್ಳಿಗಳ ನಾರುಬೇರುಗಳ ಶರೀರದೊಂಡೆಯಲ್ಲಿ ಧರಿಸಿದಡೆ ರೋಗಿಯ ಹಲವು ರೋಗಗಳು ನಷ್ಟವಪ್ಪ ಪರಿಯಂತೆ ಇಷ್ಟಲಿಂಗವನಂಗದಲ್ಲಿ ಸಂಗಗೊಳಿಸುವುದರಿಂದ
ಭವಿಯ ಭವ ಕೆಟ್ಟು
ಕೂಡಲಚೆನ್ನಸಂಗಯ್ಯನ ಕಾರುಣ್ಯಕ್ಕೆ ಪಕ್ಕಾಗುವನಯ್ಯಾ