ಯೋಗಿಯಲ್ಲ; ಜೋಗಿಯಲ್ಲ; ಶ್ರವಣನಲ್ಲ;

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಯೋಗಿಯಲ್ಲ; ಜೋಗಿಯಲ್ಲ; ಶ್ರವಣನಲ್ಲ; ಸನ್ಯಾಸಿಯಲ್ಲ; ಕಾಳಾಮುಖಿಯಲ್ಲ; ಪಾಶುಪತಿಯಲ್ಲ; ಈ ಷಡುದರುಶನಂಗಳಾಚರಣೆಯಲ್ಲ. ಶರಣನಾಚರಣೆ ಬೇರೆ. ಆದಿಶೈವ
ಮಹಾಶೈವ
ಅನುಶೈವ
ಅಂತರಶೈವ
ಪ್ರವರಶೈವ
ಅಂತ್ಯಶೈವವೆಂಬ ಈ ಆರುಶೈವದ ನೀತಿಯಲ್ಲ. ಇಂತಿವೆಲ್ಲರ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತ. ಶುದ್ಧ
ವಿಶೇಷ
ನಿರ್ವಾಣವೆಂದು ವೀರಶೈವ ಮೂರುತೆರನಾಗಿಪ್ಪುದು. ಆ ಮೂರು ತಾನೆ ಆರುತೆರನಾಗಿ ತೋರಿತ್ತದೆಂತೆಂದೊಡೆ: ಭಕ್ತ
ಮಹೇಶ್ವರ
ಪ್ರಸಾದಿ
ಪ್ರಾಣಲಿಂಗಿ
ಶರಣ
ಐಕ್ಯ ಎಂದು. ಇಂತೀ ಆರುಪ್ರಕಾರದಲ್ಲಿ ವರ್ತಿಸುತ್ತಿಹುದು ವೀರಶೈವ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.