ವಿಷಯಕ್ಕೆ ಹೋಗು

ರಚನೆ ರಂಜಕವ ನುಡಿವಾತ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ರಚನೆ ರಂಜಕವ ನುಡಿವಾತ ಜಂಗಮವಲ್ಲ. ನರರ ಹೊಗಳಿ ಹಾಡಿ ಬೇಡುವಾತ ಜಂಗಮವಲ್ಲ. ನರರ ಕೈವಾರಿಸುವಾತ ಜಂಗಮವಲ್ಲ. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೇ ಜಂಗಮ
ಬಸವಣ್ಣನೇ ಭಕ್ತ.