ರಜದ ನಿಜದ ಭುಜದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರಜದ ನಿಜದ ಭುಜದ ಗಜದ ಸದದ ಇವೆಲ್ಲವನು ಕೊಂಡು ಹೋಗಿ
ಮಡಿವಾಳನೆಂದು ಒಗೆಯ ಹಾಕಿದೆನು. ಒಗೆಯ ಹಾಕಿದಡೆ
ಗುರುಮೂರ್ತಿಯ ನಷ್ಟವ ಬಿಳಿದು ಮಾಡಿದನು. ಲಿಂಗಸಾರಾಯಸ್ವರೂಪವ ಬಿಳಿದು ಮಾಡಿದನು
ಜಂಗಮಸಾರಾಯಸ್ವರೂಪವ ಬಿಳಿದು ಮಾಡಿದನು
ಅಗ್ನಿಯಿಲ್ಲದ ಪಾಕದ ಪದಾರ್ಥವ ಲಿಂಗವಿಲ್ಲದೆ ಅರ್ಪಿಸಿದನು; ಜಂಗಮವಿಲ್ಲದೆ ನೀಡಿದನು
ಪ್ರಸಾದವಿಲ್ಲದೆ ಗ್ರಹಿಸಿದನು. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ
ಮಡಿವಾಳನೆಂಬ ಪ್ರಸಾದ ಎನಗಳವಟ್ಟಿತ್ತು.