ವಿಷಯಕ್ಕೆ ಹೋಗು

ರವಿಕಾಂತಿಯ ಪ್ರಭೆ ಪಾಷಾಣವ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ರವಿಕಾಂತಿಯ
ಪ್ರಭೆ
ಪಾಷಾಣವ
ಕೂಡಿ
ರತ್ನವೆನಿಸಿಕೊಂಬಂತೆ
ಅರಿವ
ಜ್ಞಾನ
ಮಾಡುವ
ಸತ್ಕ್ರೀಯಿಂದಲ್ಲದೆ

ಸಾಕಾರದ
ಪಟಲವು
ಹರಿಯದು.

ರವಿಕಾಂತಿಯ
ಪ್ರಭೆಯಿಲ್ಲದಿದ್ದಡೆ

ಪಾಷಾಣಕ್ಕೆ
ರತ್ನವೆಂಬ
ಕುಲ
ಮುನ್ನವೇ
ಇಲ್ಲ.
ರವಿಕಾಂತಿಯ
ಪ್ರಭೆಯಡಗೂದಕ್ಕೆ
ಪಾಷಾಣ
ಹೇಂಗೆ
ಅರಿವಡಗೂದಕ್ಕೆ
ಕುರುಹೆಂಬ
ನಾಮ
ಹಾಂಗೆ.

ಉಭಯವಡಗಿ
ಕುರುಹಿಲ್ಲದಿದ್ದಡೆ
ಮತ್ತೆ
ನಮ್ಮ
ಗುಹೇಶ್ವರನೆಂಬ
ಮಾತಿನ
ಕುರುಹಿಲ್ಲದಿರಬೇಕು.
ಕಾಣಾ
ಎಲೆ
ಅಂಬಿಗರ
Zõ್ಞಡಯ್ಯ.