ರವಿಯ ಮಂಡಲದಲ್ಲಿ ಶಶಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರವಿಯ ಮಂಡಲದಲ್ಲಿ ಶಶಿಯ ಮೇಘದ ಸೋನೆ ಸುರಿವುತ್ತಿದೆ. ಅಗ್ನಿವರ್ಣದ ಬೀಜದಲ್ಲಿ ಐದುವರ್ಣದ ವೃಕ್ಷ ಹುಟ್ಟಿತ್ತು ನೋಡಿರೇ. ಆ ವೃಕ್ಷ ನಾನಾರೂಪಿನ ಫಲ ಪ್ರಜ್ವಲಿಸುತ್ತಿದೆ ನೋಡಾ. ನಾನಾರೂಪಿನ ಪ್ರಜ್ವಲಾಕಾರ ಏನು ಏನೂ ಇಲ್ಲದ ಠಾವಿನಲ್ಲಿ ವಿಶ್ರಾಂತಿಯನೆಯ್ದಿರೆ. ನಾನು ಸ್ವಯಂಭುವಾದೆನು ಕಾಣಾ. ಏನು ಏನೂ ಇಲ್ಲದ ನಿರಾಳ ನೀನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.