ವಿಷಯಕ್ಕೆ ಹೋಗು

ರಾಜಯೋಗದಲ್ಲಿ ಅರೆಮುಗಿದ ನಿಶ್ಚಿಂತನಾದ

ವಿಕಿಸೋರ್ಸ್ದಿಂದ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ರಾಜಯೋಗದಲ್ಲಿ ನಿಶ್ಚಿಂತನಾದ ಯೋಗೀಶ್ವರನ ಸಹಜವರ್ತನಧರ್ಮವೆಂತೆನೆ : ಅರ್ಧಾವಲೋಚನವೆನಿಸುವ ಅರೆಮುಗಿದ ನೇತ್ರವುಳ್ಳಾತನಾಗಿ
ಸಕಲ ಸಂಶಯಂಗಳ ಬಿಟ್ಟ ಮನವುಳ್ಳಾತನಾಗಿ
ಮತ್ತಾ ಮನವು ಸುಷುಪ್ತಿಯಲ್ಲಿ ಮರೆಯದಂತೆ ಜಾಗ್ರದಲ್ಲಿ ಕೆದರದಂತೆ ನಿಶ್ಚಲಮಂ ಮಾಡಿ
ಭ್ರೂಮಧ್ಯಲಕ್ಷ್ಯದಲ್ಲಿರಲದೇ ಉನ್ಮನಿಯ ಸ್ವರೂಪವು. ಅದೇ ಪರಮಪದವು; ಅದೇ ಜ್ಞಾನವು; ಅದೇ ಮೋಕ್ಷವು; ಅದೇ ಪರಮರಹಸ್ಯಮಾದ ಶಿವಯೋಗವು. ಅದರಿಂದೆ ಅನ್ಯಮಾದ ಅರ್ಥಮಂ ಪೇಳ್ವ ಗ್ರಂಥವಿಸ್ತಾರವೆಲ್ಲವು ವ್ಯರ್ಥಮಪ್ಪುದಾಗಿ ಈ ಉನ್ಮನಿಯ ಸಾಧಿಸುವಾತನೆ ಜೀವನ್ಮುಕ್ತ ನೋಡಾ ಅಖಂಡೇಶ್ವರಾ.