ರುದ್ರಾಕ್ಷಿಯೆಂದೊಡೆ ಸಾಕ್ಷಾತ್ ಪರಶಿವನು ತಾನೇ ನೋಡಾ. ಅಗ್ರಜನಾಗಲಿ ಅಂತ್ಯಜನಾಗಲಿ
ಮೂರ್ಖನಾಗಲಿ ಪಂಡಿತನಾಗಲಿ
ಸುಗುಣಿಯಾಗಲಿ ದುರ್ಗುಣಿಯಾಗಲಿ ಆವನಾದಡೇನು ? ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೆ ಆತ ಇಹಲೋಕದಲ್ಲಿಯೂ ರುದ್ರನೆನಿಸುವನು ; ಪರಲೋಕದಲ್ಲಿಯೂ ರುದ್ರನೆನಿಸುವನು. ಅದೆಂತೆಂದೊಡೆ :ಶಿವಧರ್ಮೇ- ``ರುದ್ರಾಕ್ಷಾಣಿ ಸ್ವಯಂ ರುದ್ರೋ ಭವೇತ್ ರುದ್ರಾಕ್ಷಧಾರಕಂ