ರುದ್ರ ಮುಖದಲ್ಲಿ ವಿಷ್ಣು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ರುದ್ರ ಮುಖದಲ್ಲಿ ವಿಷ್ಣು ಭುಜದಲ್ಲಿ
ಜಂಘೆಯಲ್ಲಿ ಅಜ ಜನನವೊ. ಇಂದ್ರ ಪಾದದಲ್ಲಿ ಚಂದ್ರ ಮನದಲ್ಲಿ
ಚಕ್ಷುವಿನಲ್ಲಿ ಸೂರ್ಯ ಜನನವೊ. ಮುಖದಲ್ಲಿ ಅಗ್ನಿಯು ಪ್ರಾಣದಲ್ಲಿ ವಾಯು ನಾಭಿಯಲ್ಲಿ ಅಂತರಿಕ್ಷವೊ. ಸಿರದಲುದಯ ತೆತ್ತೀಸಕೋಟಿ ದೇವತೆಗಳು ಪಾದತಳದಲ್ಲಿ ಭೂಮಿ ಜನನವೊ. ಶ್ರೋತ್ರದಲ್ಲಿ ದಶದಿಕ್ಕುವೊ. ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ
ಅಕ್ಷಯನಗಣಿತನು. ಸಾಸಿರ ತಲೆ
ಸಾಸಿರ ಕಣ್ಣು
ಸಾಸಿರ ಕೈ
ಸಾಸಿರ ಪಾದ. ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ.