ರೂಪನರ್ಪಿಸಿ ನಿರೂಪಪ್ರಸಾದಿ ತನ್ನನರ್ಪಿಸಿ ತಾನಿಲ್ಲದ ಪ್ರಸಾದಿ ಇವೆಲ್ಲವನರ್ಪಿಸಿ ಬಯಲಪ್ರಸಾದಿ. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಮಹಾಪ್ರಸಾದಿಗಳು.