ರೂಪಾಗಿ ಬಂದುದ ಕಾಯದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರೂಪಾಗಿ ಬಂದುದ ಕಾಯದ ಕೈಯಲ್ಲಿ ಕೊಡುವುದು
ರುಚಿಯಾಗಿ ಬಂದುದ ಮನದ ಕೈಯಲ್ಲಿ ಕೊಡುವುದು
ತೃಪ್ತಿಯಾಗಿ ಬಂದುದ ಭಾವದ ಕೈಯಲ್ಲಿ ಕೊಡುವುದು
ಅರ್ಪಿಸುವ ತೆರನಿದು ಪ್ರಸಾದಿಗಯ್ಯಾ. ``ಇಷ್ಟಲಿಂಗಾರ್ಪಿತಂ ರೂಪಂ ರುಚಿಃ ಪ್ರಾಣಸಮರ್ಪಿತಾ ತೃಪ್ತಿರ್ಭಾವಸಮಾಯುಕ್ತಾ ಅರ್ಪಿತಂ ತ್ರಿವಿಧಾತ್ಮಕಂ _ಎಂದುದಾಗಿ
ರೂಪು ರುಚಿ ತೃಪ್ತಿಯ ಕೊಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಮಹಾಪ್ರಸಾದಿಯಯ್ಯಾ