ರೂಪಿಲ್ಲದ ರೂಪು, ನಿರ್ಣಯವಿಲ್ಲದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ರೂಪಿಲ್ಲದ ರೂಪು
ನಿರ್ಣಯವಿಲ್ಲದ ನಿಷ್ಪತ್ತಿ ಸೀಮೆಯ ಮೀರಿದ ನಿಸ್ಸೀಮ
ಗಮನವಿಲ್ಲದ ಗಮ್ಯ
ನುಡಿಯುಡಿಗಿದ ನಿಃಶಬ್ದ
ಪರವನರಿಯದ ಪರಿಣಾಮಿ ಕೂಡಲಚೆನ್ನಸಂಗನ ಶರಣ ಪ್ರಭುದೇವರಿಗೆ ನಮೋ ನಮೋ ಎನುತಿರ್ದೆನು