ರೂಪು ಎಂದಡೆ ರುಚಿಯಾಯಿತ್ತು ರುಚಿ ಎಂದಡೆ ಸವಿಯಾಯಿತ್ತು ಸವಿ ಎಂದಡೆ ಸಂದಾಯಿತ್ತು. ರುಚಿ ಎಂದಡೆ ರೂಪೆಂದಡೆ ಭವ ಹಿಂಗದು ನೋಡಾ. ರೂಪೆನ್ನದೆ ರುಚಿಯೆನ್ನದೆ ಸವಿಯೆನ್ನದೆ ಸಂದೆನ್ನದೆ ಇದ್ದ ಪ್ರಸಾದಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ