ವಿಷಯಕ್ಕೆ ಹೋಗು

ಲಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ.

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಲಂಬಿಕಾಯೋಗಿಗಳ ಡೊಂಬರಿಗೆ ಸರಿಯೆಂಬೆ. ಹಟಯೋಗಿಗಳ ಅಟಮಟಗಾರರೆಂದೆಂಬೆ. ಅಷ್ಟಾಂಗಯೋಗಿಗಳ ಕಷ್ಟ ಕರ್ಮಿಗಳೆಂದೆಂಬೆ. ಪವನಯೋಗಿಗಳ ಪ್ರಪಂಚಿಗಳೆಂದೆಂಬೆ. ಲಯಯೋಗಿಗಳ ನಾಯಿಗಿಂದ ಕಡೆ ಎಂಬೆ. ಅದೇನು ಕಾರಣವೆಂದರೆ; ಲಯಯೋಗವೆಂಬುವದು ನಾನಾ ದರುಶನದಲ್ಲಿ ವರ್ತಿಸುವುದಾಗಿ ಆದ ಶಿವಯೋಗಿಗಳು ಒಲ್ಲರು. ಮಂತ್ರಯೋಗವೆಂಬುವದು ಸರ್ವಸಂದೇಹಕ್ಕಿಕ್ಕಿ ಕೊಲುತಿಪ್ಪುದು. ಅದೇನು ಕಾರಣವೆಂದಡೆ: ಮಂತ್ರವೇ ಲಿಂಗ
ಲಿಂಗವೇ ಮಂತ್ರವೆಂದರಿದು ಲಿಂಗನೆನಹ ಸಂಬಂಧಿಸಿಕೊಳ್ಳಲರಿಯದೆ ಲಿಂಗ ವಿರಹಿತವಾಗಿ ಮಾಡುತಿಪ್ಪರಾಗಿ. ಅದು ಅಂಗ ಲಿಂಗ ಸಂಬಂಧಿಗಳು ಮಚ್ಚರು ನೋಡ. ಅದೇನು ಕಾರಣವೆಂದರೆ: ಕೆಲವು ಶೈವರುಗಳು ಮಾಡುವರಾಗಿ ರಾಜಯೋಗವೆಂಬುವದು ಗಾಜು ಗೋಜು ನೋಡ. ಅದನು ಲಿಂಗವಿರಹಿತವಾಗಿ ಜ್ಞಾತೃ ಜ್ಞಾನ
ಜ್ಞೇಯ ಒಂದಾದಲ್ಲಿಯೆ ಯೋಗವೆನುತಿಪ್ಪರಾಗಿ. ಇವು ಒಂದೂ ಲಿಂಗಾಗಯೋಗದ ಹಜ್ಜೆಯಲ್ಲ ನೋಡ. ಅದು ಕಾರಣ
ಲಿಂಗನಿಷ*ರು ಮಚ್ಚರು. ಅದೇನು ಕಾರಣವೆಂದಡೆ: ಲಿಂಗವ ತೆಗೆದಡೆ ಲಿಂಗದೊಡನೆ ಪ್ರಾಣ ಹೋಗದಾಗಿ
ಅದೆಲ್ಲಿಯ ಯೋಗವಯ್ಯ ಭ್ರಾಂತು ಯೋಗ. ಇದು ಕಾರಣ
ನಿಮ್ಮ ಶರಣರು ಲಿಂಗಪ್ರಾಣಿಗಳು; ಪ್ರಾಣಲಿಂಗಸಂಬಂಧಿಗಳು; ಪ್ರಸಾದಮುಕ್ತರು ಈ ಮೂರು ಪ್ರಕಾರದಲ್ಲಿ ಕೂಡುತ್ತಿಪ್ಪರು ಶಿವಯೋಗಿಗಳು. ಇದು ಕಾರಣ ನಿಮ್ಮ ಶರಣರು ಸ್ವಾನುಭಾವಜ್ಞಾನ ಶುದ್ಧಶಿವಯೋಗದಲ್ಲಿ ಸ್ವರೂಪಜ್ಞಾನಿಗಳು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.