ವಿಷಯಕ್ಕೆ ಹೋಗು

ಲಯ ಗಮನ ಶೂನ್ಯವಾಗಿರ್ಪುದು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಲಯ ಗಮನ ಶೂನ್ಯವಾಗಿರ್ಪುದು ಶಿವಲಿಂಗ ತಾನೆ ನೋಡಾ ! ಕೇವಲ ನಿಷ್ಕಲರೂಪವಾಗಿರ್ಪುದು ಪರತರ ಪರಬ್ರಹ್ಮ ತಾನೆ ನೋಡಾ ! ಭಕ್ತನ ಕರಕಂಜದಲ್ಲಿ ಖಂಡಿತಾಕಾರದಿಂದ ರೂಪುಗೊಂಡಿರ್ದು ಅನಿಷ್ಟವ ಕಳೆದು ಇಷ್ಟಾರ್ಥವನೀವುದು ಪರವಸ್ತು ನೋಡಾ ಕೂಡಲಚೆನ್ನಸಂಗಮದೇವಾ
ನಿಮ್ಮ ಒಲವು.