ಲಾಂಛನಧಾರಿಗಳ ಜಂಗಮವೆಂತೆಂಬೆನಯ್ಯಾ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಾಂಛನಧಾರಿಗಳ ಜಂಗಮವೆಂತೆಂಬೆನಯ್ಯಾ ? ವೇಷಧಾರಿಗಳ ಜಂಗಮವೆಂತೆಂಬೆನಯ್ಯಾ ? ಮುದ್ರಾಧಾರಿಗಳ ಜಂಗಮವೆಂತೆಂಬೆನಯ್ಯಾ ? ಮತ್ತಿನ್ನಾವುದು ಜಂಗಮವಯ್ಯಾ ? ಎಂದಡೆ
ಹೇಳಿಹೆನು ಕೇಳಿ ಬೆಸಗೊಳ್ಳಿರಯ್ಯಾ: ನಿಸ್ಸೀಮನೆ ಜಂಗಮ
ನಿರಾಶ್ರಯನೆ ಜಂಗಮ
ನಿರ್ದೇಹಿಯೆ ಜಂಗಮ
ನಿರ್ದೋಷಿಯೆ ಜಂಗಮ
ನಿರುಪಾಧಿಕನೆ ಜಂಗಮ ನಿರಾಸಕ್ತನೆ ಜಂಗಮ
ನಿರಾಭಾರಿಯೆ ಜಂಗಮ
ನಿಃಪುರುಷನೆ ಜಂಗಮ. ಇಂತಪ್ಪ ಜಂಗಮದಿಂದ ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ