ಲಾಂಛನ ಸಹಿತ ಮನೆಗೆ ಬಂದಡೆ ತತ್ಕಾಲವನರಿದು ಪ್ರೇಮವ ಮಾಡದಿರ್ದಡೆ ನೀನಿರಿಸಿದ ಮನೆಯ ತೊತ್ತಲ್ಲ. ತತ್ಕಾಲ ಪ್ರೇಮವ ಮಾಡುವಂತೆ ಎನ್ನಮುದ್ದ ಸಲಿಸಯ್ಯಾ. ಅಲ್ಲದೊಡೆ ಒಯ್ಯಯ್ಯ ಸಿರಿಶೈಲ ಚೆನ್ನಮಲ್ಲಿಕಾರ್ಜುನಾ.