ಲಿಂಗದಿಂದ ಉದಯಿಸಿ ಅಂಗವಿಡಿದವರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗದಿಂದ ಉದಯಿಸಿ ಅಂಗವಿಡಿದವರ ಇಂಗಿತವನೇನೆಂಬೆನಯ್ಯಾ ? ಅವರ ನಡೆಯೆ ಆಗಮ
ಅವರ ನುಡಿಯೆ ಪರಮಾಮೃತ ಅವರ ಲೋಕದ ಮಾನವರೆನಬಹುದೆ ಅಯ್ಯಾ ? ವೃಕ್ಷಾದ್ಭವತಿ ಬೀಜಂ ಹಿ ತದ್ ವೃಕ್ಷೇ ಲೀಯತೇ ಪುನಃ ರುದ್ರಲೋಕಂ ಪರಿತ್ಯಜ್ಯ ಶಿವಲೋಕಂ ಪ್ರವಿಶ್ಯತಿ ಅಂಕೋಲೆಯ ಬೀಜ ತರುವನಪ್ಪುವಂತೆ ಅಪ್ಪುವರಯ್ಯಾ ಕೂಡಲಚೆನ್ನಸಂಗಾ ನಿಮ್ಮ ಶರಣರು