ಲಿಂಗದೊಡನೆ ! ಸಹಭೋಜನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗದೊಡನೆ
ಸಹಭೋಜನ
ಮಾಡುವ
ಲಿಂಗವಂತರೆಲ್ಲ
ನೀವು
ಕೇಳಿರೊ
!
ನಿಮ್ಮ
ತನು
ಸಂಸಾರವಿಷಯಪ್ರಪಂಚಿನಲ್ಲಿ
ಮುಳುಗಿರ್ಪುದು.
ನಿಮ್ಮ
ಮನ
ಮಾಯಾ
ಮಲತ್ರಯಂಗಳಲ್ಲಿ
ಸುತ್ತಿರ್ಪುದು.
ನಿಮ್ಮ
ಜೀವ
ಭವಭವದಲ್ಲಿ
ತೊಳಲುತಿರ್ಪುದು.
ನೀವಿಂತು
ಮಲಮಾಯಾಸ್ವರೂಪರಾಗಿರ್ದು
ಭಯವಿಲ್ಲದೆ
ಅಮಲಲಿಂಗದೊಡನೆ
ಸಹಭೋಜನವ
ಮಾಡಿದಡೆ
ಅಘೋರ
ನರಕದಲ್ಲಿಕ್ಕದೆ
ಮಾಣ್ಬನೆ
ನಮ್ಮ
ಅಖಂಡೇಶ್ವರನು
?