ಲಿಂಗದೊಳಗಣ ಬೀಜ ಜಂಗಮದಲುತ್ಪತ್ಯ. ಕಾಯಗುಣವಿಲ್ಲಾಗಿ ಸಂಸಾರ ಭಯವಿಲ್ಲ. ಅಂತರಂಗಶುದ್ಧಾತ್ಮ ನಿಸ್ಸಂಗಿ ಜಂಗಮ ಕೂಡಲಚೆನ್ನಸಂಗಮದೇವಾ.