ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು. ಲಿಂಗಭಕ್ತನ ಇಂಬಾವುದೆಂದರಿಯರು. ಲಿಂಗಭಕ್ತ ಹಮ್ಮುಬಿಮ್ಮಿನವನೆ ? ಲಿಂಗಭಕ್ತ ಸೀಮೆಯಾದವನೆ ? ಪ್ರಾಣವಿಲ್ಲದ ರೂಹು ಒಡಲಿಲ್ಲದ ಜಂಗಮ ಉಳಿದುವೆಲ್ಲಾ `ಸಟೆ' ಎಂಬೆನು ಗುಹೇಶ್ವರಾ.