ವಿಷಯಕ್ಕೆ ಹೋಗು

ಲಿಂಗಭಾಜನದಲ್ಲಿ ಸಹಭೋಜನವ ಮಾಡುವ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಅಜ್ಞಾನಿಗಳು ತಾವೆ ಲಿಂಗವೆಂದೆಂಬರು. ತಾವೆ ಲಿಂಗವಾದಡೆ ಜನನ ಸ್ಥಿತಿ ಮರಣ ರುಜೆ ಸಂಸಾರಬಂಧನವಿಲ್ಲದಿರಬೇಕು. ಮಹಾಜ್ಞಾನವ ಬಲ್ಲೆವೆಂದು
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪಾತಕರ ಎನಗೊಮ್ಮೆ ತೋರದಿರಾ
ಕೂಡಲಚೆನ್ನಸಂಗಮದೇವಾ