ಲಿಂಗಮುಖದಿಂದ ಬಂದುದು ಶುದ್ಧ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗಮುಖದಿಂದ ಬಂದುದು ಶುದ್ಧ ಪ್ರಸಾದ ಜಂಗಮಮುಖದಿಂದ ಬಂದುದು ಸಿದ್ಧಪ್ರಸಾದ ಗುರುಮುಖದಿಂದ ಬಂದುದು ಪ್ರಸಿದ್ಧಪ್ರಸಾದ. ಅದೆಂತೆಂದಡೆ: ಲಿಂಗಂಚ ಇಷ್ಟರೂಪಂತು ಜಂಗಮಪ್ರಾಣಲಿಂಗಕಂ ಭಾವಲಿಂಗಂ ಗುರೋರ್ಲಿಂಗಂ ತ್ರಿವಿಧಂಚೇಕಮುಚ್ಯತೇ ಶುದ್ಧಂ ಲಿಂಗಮುಖಂ ತ್ಯಕ್ತ್ವಾ ಸಿದ್ಧಂ ಚರವಿಸರ್ಜಿತಃ ಪ್ರಸಿದ್ಧಂ ಚ ಗುರೋರ್ಭುಕ್ತಂ ಇತ್ಯೇತತ್ರಿವಿಧಂ ಸ್ಮೃತಂ ಎಂದುದಾಗಿ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದತ್ರಯದಲ್ಲಿ ಅವಧಾನಿ ಕೂಡಲಚೆನ್ನಸಂಗಾ ನಿಮ್ಮ ಶರಣ