ಲಿಂಗಮುಖವು ಜಂಗಮವೆಂದುದಾಗಿ, ತಾನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗಮುಖವು ಜಂಗಮವೆಂದುದಾಗಿ
ತಾನು ಸತ್ಕಾಯದಿಂದ ಸಂಪಾದಿಸಿದ ಸತ್ಪದಾರ್ಥವ ಜಂಗಮಕ್ಕಿತ್ತು ತತ್‍ಪ್ರಸಾದವ ಭಕ್ತಿಯಿಂದ ಪಡೆದು ಸೇವಿಸಬಲ್ಲಡೆ ಅದು ಅಶನವೆಂಬೆ
ಈ ಕ್ರಮಕ್ಕೆ ಹೊರಗಾದುದೆ ಅನಶನವೆಂಬೆ
`ಸಾಶನಾನಶನೇ ಭಿ' ಎಂದುದಾಗಿ. ಇಂತೀ ಅಶನ ಅನಶನಗಳ ಭೇದವನರಿಯದೆ ತನುವ ದಂಡಿಸದೆ ಮನವ ಖಂಡಿಸದೆ ತನಗಾಗಿ ಜನವ ಮೋಸಂಗೈದು ತಂದು ಮನೆಯಲ್ಲಿ ಮಡಗಿದ ದ್ರವ್ಯವು ಗುರುವಿಂಗೆ ಸಲ್ಲದು
ಲಿಂಗಕ್ಕೆ ಸಲ್ಲದು
ಜಂಗಮಕ್ಕೆ ಸಲ್ಲದಾಗಿ. ಇಂತೀ ಬಿನುಗು ಮಾನವನ ನಮ್ಮ ಕೂಡಲಚೆನ್ನಸಂಗಮದೇವನು ಹೀನಯೋನಿಯಲ್ಲಿ ಬರಿಸದೆ ಮಾಣ್ಬನೆ ?