ವಿಷಯಕ್ಕೆ ಹೋಗು

ಲಿಂಗವನು ಭವಿಯೆಂಬೆ, ಜಂಗಮನು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಲಿಂಗವನು ಭವಿಯೆಂಬೆ
ಜಂಗಮನು ಭವಿಯೆಂಬೆ
ಪ್ರಸಾದವನು ಭವಿಯೆಂಬೆ
ಅದೇನು ಕಾರಣ ಭವಿಯೆಂಬೆ? ಈ ತ್ರಿವಿಧಕ್ಕೆ ಹಸ್ತಮಸ್ತಕ ಸಂಯೋಗವಿಲ್ಲದ ಕಾರಣ ಭವಿಯೆಂಬೆ. ಇದು ಕಾರಣ ಈ ತ್ರಿವಿಧವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.