ಲಿಂಗವೆಂಬವಂಗೆ ಲಿಂಗವಿಲ್ಲ, ಜಂಗಮವೆಂಬವಂಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗವೆಂಬವಂಗೆ ಲಿಂಗವಿಲ್ಲ
ಜಂಗಮವೆಂಬವಂಗೆ ಜಂಗಮವಿಲ್ಲ. ಪ್ರಸಾದವೆಂಬವಂಗೆ ಪ್ರಸಾದವಿಲ್ಲ. ಲಿಂಗವೆನ್ನದವಂಗೆ ಲಿಂಗವುಂಟು
ಜಂಗಮವೆನ್ನದವಂಗೆ ಜಂಗಮವುಂಟು
ಪ್ರಸಾದವೆನ್ನವಂಗೆ ಪ್ರಸಾದವುಂಟು. ಈ ತ್ರಿವಿಧಸ್ಥಳವನರಿಯಬಲ್ಲರೆ ಕೂಡಲಚೆನ್ನಸಂಗ ತಾನೇ ಉಂಟು.