ಲಿಂಗವೆ ಅಂಗ ಅಂಗವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ. ಲಿಂಗವೆ ಪ್ರಾಣ ಪ್ರಾಣವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ. ಉಂಟೆಂದು ತೋರಲಿಲ್ಲ ಇಲ್ಲವೆಂದು ಅರಸಲಿಲ್ಲ ಕೂಡಲಸಂಗಮದೇವಾ ಲಿಂಗ ನಿರಂತರವಲ್ಲಿಯೇ.