ಲಿಂಗವೆ ಜಂಗಮ, ಜಂಗಮವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗವೆ ಜಂಗಮ
ಜಂಗಮವೆ ಲಿಂಗವೆಂದು ನಂಬಿದಲ್ಲಿ ಹೊರೆ ಹುಟ್ಟಿದ ಬಳಿಕ
ಹಾಲ ಹರವಿಯೊಳಗೆ ಹುಳಿ ಹೊಕ್ಕಂತೆ ನೋಡಯ್ಯಾ ! ಅಂಗದ ಮೇಲೆ ಲಿಂಗವುಳ್ಳುದೆಲ್ಲ ಸಂಗಮನಾಥದೇವರೆಂದು ನಂಬಿದ ನಂಬುಗೆಯು ಬಂದ ಶರಣರ ನಿಲವನರಿಯದಿದ್ದಲ್ಲಿ ತಪ್ಪಿತ್ತು ನೋಡಾ ಗುರುವೆ. ಸಂಗಮನಾಥ ಅಂಗವಿಡಿದು ಮನೆಗೆ ನಡೆದು ಬಂದಡೆ ದಿಮ್ಮನೆ ಇದಿರೆದ್ದು ವಂದಿಸಬೇಕು ನೋಡಯ್ಯಾ. ಕೂಡಲಚೆನ್ನಸಂಗನ ಶರಣ ಪ್ರಭುದೇವರು
ಸಿದ್ಧರಾಮಯ್ಯದೇವರು ಬಂದು ಬಾಗಿಲೊಳಗಿರಲು ಕಣ್ಣರಿಯದಿದ್ದರೂ ಕರುಳರಿಯಬೇಡವೆ ಸಂಗನಬಸವಣ್ಣಾ ?