ಲಿಂಗವ ಹಿಡಿದ ಹಸ್ತವೆ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಲಿಂಗವ
ಹಿಡಿದ
ಹಸ್ತವೆ
ಲಿಂಗಕ್ಕೆ
ಪೀಠ
ಕಾಣಿರೊ.
ಲಿಂಗವ
ಪೂಜಿಸುವ
ಹಸ್ತವೆ
ಶಿವಹಸ್ತ
ಕಾಣಿರೊ.
ಲಿಂಗವ
ಧರಿಸಿಪ್ಪ
ಅಂಗವೆ
ಲಿಂಗದಂಗ
ತಾನೆ
ನೋಡಾ.
ಲಿಂಗಪ್ರಸಾದವ
ಕೊಂಬ
ಪ್ರಾಣಲಿಂಗ
ತಾನೆ
ನೋಡಾ.
ಒಳಹೊರಗೆ
ಲಿಂಗಭರಿತವಾಗಿಪ್ಪ
ಲಿಂಗದೇಹಿ
ಲಿಂಗಪ್ರಾಣಿಗೆ
ಕರ್ಮವ
ಕಲ್ಪಿಸಿ
ನುಡಿವ
ಅಬದ್ಧರನೇನೆಂಬೆನಯ್ಯಾ.
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.