ವಿಷಯಕ್ಕೆ ಹೋಗು

ಲಿಂಗಾಂಗಿಗಳಲ್ಲಿ ಹೊಲೆಸೂತಕವ ಕಲ್ಪಿಸುವನ್ನಕ್ಕ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಲಿಂಗಾಂಗಿಗಳಲ್ಲಿ ಹೊಲೆಸೂತಕವ ಕಲ್ಪಿಸುವನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ. ಜಂಗಮದಲ್ಲಿ ಕುಲಸೂತಕವ ಹಿಡಿವನ್ನಕ್ಕ ಶಿವಚಾರಯುಕ್ತನಾದ ಭಕ್ತಾನುಭಾವಿಯಲ್ಲ. ಪ್ರಸಾದದಲ್ಲಿ ಎಂಜಲಸೂತಕವ ಭಾವಿಸುವನ್ನಕ್ಕ
ಪ್ರಸಾದಿಯಲ್ಲ
ಭಕ್ತನಲ್ಲ
ಶರಣನಲ್ಲ
ಲಿಂಗೈಕ್ಯನಲ್ಲ
ಅವಂಗೆ ಲಿಂಗವಿಲ್ಲ ಕಾಣಾ ಕೂಡಲಚೆನ್ನಸಂಗಯ್ಯಾ.