ವಿಷಯಕ್ಕೆ ಹೋಗು

ಲಿಂಗಾಂಗ ಸಂಗ ಸಮರಸ

ವಿಕಿಸೋರ್ಸ್ದಿಂದ


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಲಿಂಗಾಂಗ ಸಂಗ ಸಮರಸ ಸುಖದಲ್ಲಿ ಮನ ವೇದ್ಯವಾಯಿತ್ತು. ನಿಮ್ಮ ಶರಣರ ಅನುಭಾವ ಸಂಗದಿಂದ ಎನ್ನ ತನು ಮನ ಪ್ರಾಣ ಪದಾರ್ಥವ ಗುರುಲಿಂಗಜಂಗಮಕ್ಕಿತ್ತು
ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದೆನು. ಆ ಮಹಾಪ್ರಸಾದದ ರೂಪು ರುಚಿ ತೃಪ್ತಿಯ ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ ಮಹಾಘನಪ್ರಸಾದಿಯಾದೆನು. ಇಂತೀ ಸರ್ವಾಚಾರಸಂಪತ್ತು ಎನ್ನ ತನುಮನ ವೇದ್ಯವಾಯಿತ್ತು. ಇನ್ನೆಲ್ಲಿಯಯ್ಯಾ
ಎನಗೆ ನಿಮ್ಮಲ್ಲಿ ನಿರವಯವು ? ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು ? ಪರಮಸುಖದ ಪರಿಣಾಮ ಮನಮೇರೆದಪ್ಪಿ ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ ಪ್ರಭುವೆ ?