ಲಿಂಗಾರ್ಚನೆಯ ಪಾದೋದಕ ಮಾಡಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂಗಾರ್ಚನೆಯ ಮಾಡಿದ ಬಳಿಕ ಜಂಗಮಾರ್ಚನೆಯ ಮಾಡಲೇಬೇಕು. ಜಂಗಮದ ಪಾದೋದಕ ಪ್ರಸಾದವ ಕೊಳ್ಳಲೇಬೇಕು. ನಿಚ್ಚ ನಿಚ್ಚ ಲಿಂಗದರ್ಚನೆಯ ಮಾಡಿ ನಿಚ್ಚ ನಿಚ್ಚ ಜಂಗಮದರ್ಚನೆ ಪಾದೋದಕ ಪ್ರಸಾದವಿಲ್ಲದ ಬಳಿಕ ಆ ಲಿಂಗಾರ್ಚನೆ ಎಂತಾಯಿತ್ತೆಂದಡೆ
ಮೂಗಕೊಯ್ದ ಮೋರೆಯಂತೆ ನೋಡಾ ಅಖಂಡೇಶ್ವರಾ.